Feedback / Suggestions

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ .78/2021 ಕಲಂ. 87 ಕೆ.ಪಿ ಆಕ್ಟ್ & 188,269,271 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರಿ ಟಿ.ಎನ್ ಪಾಪಣ್ಣ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ, ನಾನು ಈ ದಿನ ದಿನಾಂಕ:27/05/2021 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ನಾನು ಠಾಣಾ ವ್ಯಾಪ್ತಿ ಎಸ್.ರಾಗುಟ್ಟಹಳ್ಳಿ ಗ್ರಾಮದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಠಾಣಾ ವ್ಯಾಪ್ತಿಯ ಇರಗಂಪಲ್ಲಿ ಗ್ರಾಮದ ಕೆರೆಯ ಅಂಗಳದಲ್ಲಿ ಜಾಲಿ ಮರಗಳ ಮರೆಯಲ್ಲಿ ಯಾರೋ ಆಸಾಮಿಗಳು ಸರ್ಕಾರದ ಕರೋನ ಸಾಂಕ್ರಾಮಿಕ ಖಾಯಿಲೆಯ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ನಾನು ಠಾಣಾ ಸಿಬ್ಬಂದಿಯವರಾದ ಹೆಚ್ ಸಿ -139 ಶ್ರೀನಾಥ, ಹೆಚ್.ಸಿ 176 ಮುನಿರಾಜು, ಸಿಪಿಸಿ – 262 ಅಂಬರೀಶ್, ಪಿ.ಸಿ 561 ರಮೇಶ್ ಕಂಪ್ಲಿ, ಪಿ.ಸಿ 388 ಗದ್ದೆಪ್ಪ ಶಿವಪುರ, ಪಿ.ಸಿ 387 ಅನೀಲ್ ಕುಮಾರ್ ರವರನ್ನು ಇರಗಂಪಲ್ಲಿ ಗ್ರಾಮಕ್ಕೆ ಬರಮಾಡಿಕೊಂಡು ಜೀಪ್ ನಲ್ಲಿ ಇರಗಂಪಲ್ಲಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚರನ್ನು ಕರೆದುಕೊಂಡು ಇರಗಂಪಲ್ಲಿ ಗ್ರಾಮದ ಕೆರೆಯ ಅಂಗಳಕ್ಕೆ ಮಧ್ಯಾಹ್ನ 3-15 ಗಂಟೆಗೆ ಹೋಗಿ ದೂರದಲ್ಲಿ ಜೀಪ್ ನಿಲ್ಲಿಸಿ ಜಾಲಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಪ್ರಾಣ ಹಾನಿಉಂಟುಮಾಡುವಂತಹ ಕರೋನಾ ಸಾಂಕ್ರಾಮಿಕ ಖಾಯಿಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರೋನ ಸಾಂಕ್ರಾಮಿಕ ಖಾಯಿಲೆ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಗುಂಪು ಸೇರದಂತೆ, ಸಾರ್ವಜನಿಕವಾಗಿ ಅನಗತ್ಯವಾಗಿ ಸಂಚರಿಸದಂತೆ ಹಾಗೂ ಪೇಸ್ ಮಾಸ್ಕ್ ಧರಿಸುವಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಸರ್ಕಾರ ಲಾಕ್ ಡೌನ್ ಆದೇಶಿದ್ದರೂ ಸಹ ಯಾರೋ ಆಸಾಮಿಗಳು ಕೆರೆಯ ಅಂಗಳದಲ್ಲಿ ಇರುವ ಜಾಲಿ ಮರದ ಕೆಳಗಡೆ ಗುಂಪಾಗಿ ಒಬ್ಬರ ಪಕ್ಕ ಒಬ್ಬರಂತೆ ವೃತ್ತಾಕಾರವಾಗಿ ಕುಳಿತು ಕರೋನ ಸಾಂಕ್ರಾಮಿಕ ಖಾಯಿಲೆಯ ಸರ್ಕಾರದ ಲಾಕಡೌನ್ ಆದೇಶವನ್ನು ಉಲ್ಲಂಘಿಸಿ  ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸದರಿಯವರನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಎಲ್ಲಿಯೂ ಹೋಗದಂತೆ ಸೂಚಿಸಿದಾಗ  ಅಲ್ಲಿದ್ದ ಆಸಾಮಿಗಳು ಓಡಿ ಹೋಗಲು ಯತ್ನಿಸಿದ್ದು ಸದರಿಯವರನ್ನು ಸಿಬ್ಬಂದಿಯ ಸಹಾಯದಿಂದ ವಶಕ್ಕೆ ಪಡೆದು ಅವರುಗಳ  ಹೆಸರು ಮತ್ತು ವಿಳಾಸ ಕೇಳಲಾಗಿ 1) ಶ್ರೀನಿವಾಸ ಬಿನ್ ಲೇಟ್ ಆದಿನಾರಾಯಣಪ್ಪ, 33ವರ್ಷ, ಬೋವಿ ಜನಾಂಗ, ಡ್ರೈವರ್ ಕೆಲಸ, ಗುಂದಿಗೆರೆ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ.ನಂ 9901934338, 2) ವೆಂಕಟರವಣಾರೆಡ್ಡಿ ಬಿನ್ ಲೇಟ್ ವೆಂಕಟರಾಯಪ್ಪ, 51ವರ್ಷ, ಒಕ್ಕಲಿಗರು, ಜಿರಾಯ್ತಿ, ಗುಂಟಿಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು, 3) ವೆಂಕಟರವಣಪ್ಪ ಬಿನ್ ಲೇಟ್ ಗಂಗಪ್ಪ, 52ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ಗುಂಟಿಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು, 4) ಚಾಂದ್ ಪಾಷ ಬಿನ್ ಲೇಟ್ ಮೊಹಮದ್ ಫೀರ್ ಸಾಬ್, 55ವರ್ಷ, ಮುಸ್ಲಿಂ ಜನಾಂಗ, ವ್ಯಾಪಾರ, ಇರಗಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು, ಮೊ.ನಂ 9900995971 5) ಪಾತುಲಪ್ಪ ಬಿನ್ ಲೇಟ್ ವೆಂಕಟರಾಯಪ್ಪ, 45ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ಇರಗಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು , ಮೊ.ನಂ 9731144484 6)ನಾರಾಯಣಸ್ವಾಮಿ ಬಿನ್ ಲೇಟ್ ವೆಂಕಟರೆಡ್ಡಿ, 45ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ ನಲ್ಲಗುಟ್ಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು 7)ಲಕ್ಷ್ಮಿನಾರಾಯಣ ಬಿನ್ ಲೇಟ್ ಕೋನಪ್ಪ, 55ವರ್ಷ, ಬಲಜಿಗರು, ಜಿರಾಯ್ತಿ, ಇರಗಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಬಿಳಿ ಗೋಣಿಚೀಲ ನೆಲದಲ್ಲಿ ಹಾಸಿದ್ದು, ಸದರಿ ಗೋಣಿಚೀಲದ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆ ಇದ್ದು, ಇವುಗಳನ್ನು ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 5500/-  ರೂಗಳಿರುತ್ತೆ. ಪಕ್ಕದಲ್ಲಿಯೇ ಮೂರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದು ಸದರಿಯವುಗಳನ್ನು ಪರಿಶೀಲಿಸಲಾಗಿ 1) ನಂ ಕೆಎ 05 ಇವೈ 5500 ಹೀರೋ ಹೋಂಡಾ ಸ್ಪ್ಲೆಂಡರ್ ದ್ವಿಚಕ್ರ ವಾಹನ, 2) ನಂ ಕೆಎ 08 ಜೆ 6438 ಹೀರೋ ಹೋಂಡಾ ಸ್ಪ್ಲೆಂಡರ್ ದ್ವಿಚಕ್ರ ವಾಹನ, 3) ಕೆಎ 05 ಹೆಚ್ 1582 ಹೀರೋ ಹೋಂಡಾ ಸಿಡಿ 100 ದ್ವಿಚಕ್ರ ವಾಹನವಾಗಿರುತ್ತೆ.   ಇಸ್ಪೀಟ್ ಜೂಜಾಟ ಆಡುತ್ತಿದ್ದ 7ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, ಅವರು ಇಸ್ಪೀಟ್ ಜೂಜಾಟಕ್ಕೆ ಪಣವಾಗಿಟ್ಟಿದ್ದ, 5500/- ರೂಗಳ ನಗದು ಹಣವನ್ನು, 3 ದ್ವಿಚಕ್ರ ವಾಹನಗಳನ್ನು, ಒಂದು ಗೋಣಿಚೀಲ ಹಾಗೂ 52 ಇಸ್ಟೀಟ್ ಎಲೆಗಳನ್ನು ಈ ಕೇಸಿನ ಮುಂದಿನ ಕ್ರಮಕ್ಕಾಗಿ ಮಧ್ಯಾಹ್ನ 3-30 ಗಂಟೆಯಿಂದ 4-30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಠಾಣೆಗೆ ಸಂಜೆ 5-00 ಗಂಟೆಗೆ ಹಾಜರಾಗಿ ಸ್ವತಃ ಠಾಣೆಯ ಎನ್ ಸಿ ಆರ್ ನಂ: 80/2021 ರಂತೆ ದಾಖಲಿಸಿಕೊಂಡು ಆರೋಪಿಗಳ ಮತ್ತು ಮಾಲಿನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ವಾಟ್ಸ್ ಹ್ಯಾಪ್ ಮುಖಾಂತರ ಸಂಜೆ 7-45 ಗಂಟೆಗೆ ಪಡೆದು ಠಾಣೆಯ ಮೊ ಸಂಖ್ಯೆ: 78/2021 ಕಲಂ: 87 ಕೆ ಪಿ ಆಕ್ಟ್ ಮತ್ತು ಕಲಂ: 188.269.271 ಐಪಿಸಿ ಮತ್ತು ಕಲಂ: 5(1) ಕರ್ನಾಟಕ ಸಾಂಕ್ರಾಮಿಕ ರೋಗಗಳ ಆದ್ಯಾದೇಶ 2020, ಕಲಂ 51(ಬಿ)  Disaster management act 2005 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

2. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ .76/2021 ಕಲಂ. 279,337 ಐ.ಪಿ.ಸಿ :-

          ದಿ:27/05/2021 ರಂದು  ಸಂಜೆ 7-30 ಗಂಟೆಯ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ.ನಾಗರಾಜು ಬಿನ್ ಚಿಕ್ಕಪ್ಪಯ್ಯ, 45 ವರ್ಷ, ನಾಯಕರು, ಪೋಟೋಗ್ರಾಫರ್ ಕೆಲಸ, ವಾಸ 14 ನೇ ವಾರ್ಡ್, ವಿ.ವಿ.ಪುರಂ, ಗೌರಿಬಿದನೂರು ನಗರ  ರವರು ಗೌರಿಬಿದನೂರು ನಗರ ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂದರೆ  ತಾನು ಈ ವಿಳಾಸದಲ್ಲಿ ವಾಸವಾಗಿದ್ದು, ದಿ:24/05/2021 ರಂದು ರಾತ್ರಿ ಸಮಯ 9-30 ಗಂಟೆಗೆ  ತನ್ನ  ಸ್ವಂತ ಕೆಲಸದ  ಮೇಲೆ  ಹೋಗಲು ಕೆ.ಎ.40.ಯು.8665 ಫ್ಯಾಷನ್ ಎಕ್ಸ್ ಪ್ರೋ ಗಾಡಿಯಲ್ಲಿ ತಾನು ಚಾಲನೆ ಮಾಡಿಕೊಂಡು  ಹೋಗುತ್ತಿದ್ದೆ.  ಗೌರಿಬಿದನೂರಿನಿಂದ  ಹೋಗುತ್ತಿದ್ದಾಗ ಹನುಮಂತಪುರ ನಗರ ಗೇಟ್ ಬಳಿ ರಾಜ್ಯ ಹೆದ್ದಾರಿ-09 ನೇ ರಸ್ತೆಯಲ್ಲಿ ಹೋಗುತ್ತಿದ್ದೆ. ಹಿಂಬದಿಯಿಂದ  ಬರುವ ದ್ವಿಚಕ್ರ ವಾಹನ ಅತಿವೇಗದಿಂದ ಬಂದು ತನ್ನ ಗಾಡಿಗೆ  ಹೊಡೆದಾಗ ತಾನು ಕೆಳಗೆ ಬಿದ್ದು ಆಗ ಅಕ್ಕಪಕ್ಕದ ಜನರು ನೋಡಿ ತನಗೆ ಮತ್ತು ತನಗೆ ಗುದ್ದಿರುವವನಿಗೆ  ರಕ್ಷಿಸಿದ್ದು, ಆಗ ತನಗೆ ತಲೆಗೆ ರಕ್ತಗಾಯವಾಗಿದ್ದು ಹಾಗೂ ಬಲಗಾಲಿಗೆ ಪಾದದ ಮುಂಬಾಗ ಗಾಯವಾಗಿದ್ದು ಮತ್ತು ಬಲಗಾಲು ಮೊಣಕಾಲಿಗೆ  ಗಾಯವಾಗಿದೆ ಮತ್ತು ಬೆನ್ನಿಗೆ ಬಲವಾದ ಏಟು  ಬಿದ್ದಿರುತ್ತದೆ. ಹಾಗೂ ಬಲಕೈಗೆ ಪರಿಚಿದ ಗಾಯಗಳಾಗಿವೆ. ಮತ್ತು ದೇಹದಲ್ಲಿ ರಕ್ತದ ಗಾಯಗಳಾಗಿವೆ.  ಹೊಡೆದಿರುವಾಗ ಯಾರೆಂದು ಪರಿಶೀಲಿಸಿದಾಗ ಅದು 180 ಫಲ್ಸರ್ ಗಾಡಿ ನಂಬರ್ ಕೆ.ಎ.40.ಯು.9681 ಆಗಿದ್ದು, ಈಗಾಡಿ ಓನರ್ ರಾಜೇಶ್ ಬಿನ್ ಗಂಗಾಧರಪ್ಪ, ಹೆಚ್.ನಾಗಸಂದ್ರ ಇದ್ದು, ಈ ವ್ಯಕ್ತಿಗೆ  ಸಂಬಂಧಿಸಿದ ದ್ವಿಚಕ್ರವಾಹನವಾಗಿದೆ. ತನ್ನ ಗಾಡಿ ಜಖಂ ಆಗಿರುತ್ತದೆ. ಹಿಂದೆ  ಬಲಗಡೆ ಪೂರ್ತಿ ಗಾಡಿ ಜಖಂ ಆಗಿದೆ.  ಮತ್ತೆ ತಾನು ಪೋನ್ ಮಾಡಿ ತಮ್ಮ ಸ್ನೇಹಿತರನ್ನು  ಕರೆದು  ಹರೀಶ್ ಬಿನ್ ಅಪ್ಪಯ್ಯಣ್ಣ ಮತ್ತು ಮಂಜುನಾಥ ಬಿನ್ ಗೋವಿಂದಪ್ಪ ಇವರು ಬಂದು ಯಾವುದೋ ಆಟೋ ಕರೆದು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ದಾಖಲು ಮಾಡಿದರು. ಆಗ ಡಾಕ್ಟರ್ ಚಿಕಿತ್ಸೆಯನ್ನು ನೀಡಿದರು. ಆದ್ದರಿಂದ ಈದಿನ ದಿ:27/05/2021 ರಂದು ತಡವಾಗಿ ದೂರು ನೀಡುತ್ತಿದ್ದೇನೆ. ಆದ್ದರಿಂದ ತನಗೆ ತೊಂದರೆಯಾಗಿದೆ, ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಬೇಕೆಂದು ಕೋರುತ್ತಿದ್ದೇನೆ ಅಂತ ನೀಡಿದ ದೂರಾಗಿದ್ದು, ಸದರಿ ದೂರಿನ  ಮೇರೆಗೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿರುತ್ತೆ.

 

3. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ .104/2021 ಕಲಂ. 143,147,323,324,149 ಐ.ಪಿ.ಸಿ :-

          ದಿನಾಂಕ: 27/05/2021 ರಂದು ಸಾಯಾಂಕಾಲ 4.00 ಗಂಟೆಯಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ ಗಾಯಾಳು ಶ್ರೀಮತಿ ಆದಿಲಕ್ಷ್ಮಮ್ಮ ಕೋಂ ನರಸಿಂಹಪ್ಪ ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ:ಕೋರೇನಹಳ್ಳಿ ಗ್ರಾಮದ ಸರ್ವೆ ನಂ-2/12 ಜಮೀನಿನ ವಿಚಾರವಾಗಿ  ತಮಗೂ ಹಾಗು ತಮ್ಮ ಗ್ರಾಮದ ವಾಸಿಗಾಳಾದ ತಮ್ಮ ಜನಾಂಗದ ರಾಮಲಿಂಗಪ್ಪ ಬಿನ್ ಲೇಟ್ ಆದಿನಾರಾಯಣಪ್ಪ ರವರಿಗೆ  ಸುಮಾರು 10 ವರ್ಷಗಳಿಂದ  ತಂಟೆ ತಕರಾರುಗಳು ಇದ್ದು  ಇಗಿರುವಲ್ಲಿ ದಿನಾಂಕ:27/05/2021 ಮದ್ಯಾಹ್ನ ಸುಮಾರು 1-00ಗಂಟೆಯ ಸಮಯದಲ್ಲಿ ತಮ್ಮ  ಜಮೀನಿನಲ್ಲಿ ಗುಡಿಸಲುಗಳನ್ನು ನಿರ್ಮಿಸುತ್ತಿದ್ದಾಗ ತಾನು ಸ್ಥಳಕ್ಕೆ ಹೋಗಿ ಯಾಕೇ ನೀವು ತಮ್ಮ ಜಮಿನಿನಲ್ಲಿ ಗುಡಿಸಲುಗಳನ್ನು ನಿರ್ಮಿಸುತ್ತಿದ್ದೀರಾ  ಎಂದು ಕೇಳಿದ್ದಕ್ಕೆ  ನರಸಿಂಹಪ್ಪ ಬಿನ್ ಆದ್ದೆಪ್ಪ , ಅಂಜಿನಮ್ಮ ಕೋಂ ನರಸಿಂಹಪ್ಪ ಮೇಘನಾ,ರವರು ದೊಣ್ಣೆಯಿಂದ ತನ್ನ  ಎಡ ಕೈಗೆ ,ಎಡ ಕಾಲಿಗೆ ಹೊಡೆದು ತನ್ನನ್ನು ಪಕ್ಕಕ್ಕೆ ತಳ್ಳಿದರು. ಆಗ ಜಗಳವನ್ನು ಬಿಡಿಸಲು ಬಂದ ತನ್ನ ಸೊಸೆಯಾದ  ಈಶ್ವರಮ್ಮ ಕೋಂ ಬಾಲರಾಜು ರವರಿಗೆ ನಂದಿನಿ @ ನಂದು,  ಲಕ್ಷ್ಮಿದೇವಮ್ಮ, ನರಸಿಂಹಪ್ಪ ಬಿನ್ ಗುಡಿಸಪ್ಪ, ಶ್ರೀಹರ್ಷ ಬಿನ್ ನರಸಿಂಹಪ್ಪ, ಆದಿಮೂರ್ತಿ ಬಿನ್ ಗುಡಿಸಪ್ಪ, ಶಶಿಕಿರಣ್ ಬಿನ್ ನರಸಿಂಹಪ್ಪ ರವರುಗಳು ಕೈಗಳಿಂದ ಹೊಡೆದು ತಳ್ಳಿದ್ದು. ತನ್ನ ಮಗನಾದ ಆದಿನಾರಾಯಣಪ್ಪ ರವರಿಗೆ ರಮೇಶ ಬಿನ್ ಲೇಟ್ ಗಂಗಪ್ಪ ರವರು ,ಗಂಗಾದರಪ್ಪ ಬಿನ್ ನರಸಿಂಹಪ್ಪ ,ಮಂಜುನಾಥ ಬಿನ್ ಆದಿನಾರಾಯಣಪ್ಪ, ರವರುಗಲು ಹಾಗೂ ಚಿಕ್ಕನಾರಾಯಣಪ್ಪ ಬಿನ್ ಗುಡಿಸಪ್ಪರವರು ತನ್ನ ಮಗನನ್ನು ಪಕ್ಕಕ್ಕೆ ತಳ್ಳಿದರು. ಆಗ ತಮ್ಮಗೆ ತರಚಿದ ಗಾಯಗಳಾಗಿದ್ದು ತಮಗೆ ಹೊಡೆದು ತರಚಿದ ಗಾಯಾಗಳನ್ನು ಮಾಡಿದಂತಹ ಮೇಲ್ಕಂಡವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ  ಹೇಳಿಕೆಯು ದೂರಾಗಿರುತ್ತೆ.

 

4. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ .105/2021 ಕಲಂ. 143,147,148,323,324,504,149 ಐ.ಪಿ.ಸಿ :-

          ದಿ:27.05.2021 ರಂದು ಸಂಜೆ ಪಿರ್ಯಾದಿದಾರರು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಮಗೂ ಮತ್ತು ನಮ್ಮ ಗ್ರಾಮದ ವಾಸಿಯಾದ ಆಧಿನಾರಾಯಣಪ್ಪನವರಿಗೆ ಸ.ನಂ: 11 ರಲ್ಲಿರುವ 38 ಗುಂಟೆ ಜಮೀನು ವಿಚಾರದಲ್ಲಿ ಆಗಾಗ ಗಲಾಟೆಯಾಗುತ್ತಿದ್ದು ಇದೇ ಜಮೀನು ವಿಚಾರದಲ್ಲಿ ದಿ:27.05.2021 ರಂದು ಸುಮಾರು 1-30 ಗಂಟೆ ಸಮಯದಲ್ಲಿ ನಾನು ಮತ್ತು ನಮ್ಮ ಯಜಮಾನರಾದ ರಾಮಲಿಂಗಪ್ಪ ನಮ್ಮ ಅಣ್ಣನಾದ ನರಸಿಂಹಪ್ಪನವರು ನಾವು ಹಳೇ ಬಾವಿಯ ಹತ್ತಿರ ಕೆಲಸವನ್ನು ಮಾಡುತ್ತಿದ್ದಾಗ,  ನಮ್ಮ ಗ್ರಾಮದ ವಾಸಿಯಾದ ಆದಿನಾರಾಯಣಪ್ಪ ಬಿನ್ ಕಡಪಲ್ಲಿ ನರಸಿಂಹಪ್ಪನು ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು. ನಂತರ ಆತನ ತಮ್ಮನಾದ ಬಾಲಪ್ಪ ಹಾಗೂ ಕೃಷ್ಣಪ್ಪ ಇಬ್ಬರೂ ಬಂದರು. ಅವರಲ್ಲಿ ಬಾಲಪ್ಪನು ಕಟ್ಟಿಯಿಂದ ಹೊಡೆಯಲು ಬಂಧನು. ನಾನು ತಪ್ಪಿಸಿಕೊಂಡಿರುತ್ತೇನೆ. ಆದಿನಾರಾಯಣಪ್ಪನು ತಂದಿದ್ದ ಗಡಾರಿಯಿಂದ ನರಸಿಂಹಪ್ಪನವರ ಎಡಕಾಲಿನ ತೊಡಗೆ ಹೊಡೆದು ಮೂಗೇಟ ಉಂಟು ಮಾಡಿದನು. ಆಗ ನಾನು ಜಗಳನ್ನು ಬಿಡಿಸಲು ಹೋದಾಗ ಅವರ ಸಂಬಂಧಿಕರಾದ ಅಶೋಕ ಬಿನ್ ಗಂಗಾಧರ ಮತ್ತು ನರಸಿಂಹಮೂರ್ತಿ ಬಿನ್ ಗಂಗಾಧರ ರವರು ಬಂದು ನನ್ನನ್ನು ಹೊಡೆದರು,  ಆಗ ಜಗಳವನ್ನು ಬಿಡಿಸಲು ಬಂದ ನಮ್ಮವರಾದ ಸರಸ್ವತಮ್ಮ, ಅಂಜಿನಮ್ಮ, ಮತ್ತು ಲಕ್ಷ್ಮಮ್ಮನವರಿಗೆ ಕೈಗಳಿಂದು ಹೊಡೆದು ಕಾಲುಗಳಿಂದ ಒದ್ದಿರುತ್ತಾರೆ. ಸದರಿ ಗಲಾಟೆಯನ್ನು ನನ್ನ ಗಂಡನಾಧ ರಾಮಲಿಂಗಪ್ಪನು ಬಂದು ಬಿಡಿಸಿದರು ನಂತರ ನಾವು ಗುಡಿಬಂಢೆಯ ಸರ್ಕಾರಿ ಆಸ್ಪತ್ರೆಗೆ ಬಂದು ಇಲಾಜುಪಡಿಸಿಕೊಳ್ಳುತ್ತಿದ್ದು, ನಮ್ಮನ್ನು ಹೊಡೆದವರ ಮೇಲೆ ಕಾನೂನು ಕ್ರಮ ಜರುಗಸಲು ಕೋರಿದೆ ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

5. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ .46/2021 ಕಲಂ. 188,269,270 ಐ.ಪಿ.ಸಿ & 51(b) THE DISASTER MANAGEMENT ACT, 2005 :-

          ದಿನಾಂಕ:27-05-2021 ರಂದು ರಾತ್ರಿ 10-30 ಗಂಟೆಗೆ ಪಿ.ಎಸ್.ಐ, ಶ್ರೀ ಎನ್.ರತ್ನಯ್ಯರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಕೋವಿಡ್-19 ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾನ್ಯ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ದಿನಾಂಕ:27-05-2021 ರಿಂದ ದಿ:30-05-2021 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಆದೇಶ ಹೊರಡಿಸಿರುತ್ತಾರೆ. ಈ ದಿನ ದಿನಾಂಕ:27-05-2021 ರಂದು ನಾನು ಸಿಬ್ಬಂದಿಯಾದ ಸಿಪಿಸಿ-148 ಧನಂಜಯ ಮತ್ತು ಎ.ಹೆಚ್.ಸಿ-21 ಸತ್ಯಾನಾಯಕ್ ರವರೊಂದಿಗೆ ಠಾಣೆಯ ಸರ್ಕಾರಿ  ಜೀಪ್ ಸಂಖ್ಯೆ ಕೆಎ-40 ಜಿ-59 ರಲ್ಲಿ ಠಾಣಾ ಸರಹದ್ದಿನಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಗಸ್ತು ಕರ್ತವ್ಯ ನಿರ್ವಹಿಸಿಕೊಂಡು ಸಾರ್ವಜನಿಕರಿಗೆ ಕೋವಿಡ್-19 ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಸರ್ಕಾರ  ಹೊರಡಿಸಿರುವ ಆದೇಶಗಳನ್ನು ಪಾಲಿಸಲು ಹಾಗೂ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಹಾಗೂ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರವನ್ನು ಪಾಲಿಸುವಂತೆ ಸೂಚಿಸುತ್ತಿರುವಾಗ ರಾತ್ರಿ 10-00 ಗಂಟೆಯ ಸಮಯದಲ್ಲಿ ವಡಿಗೆರೆ ಗ್ರಾಮದಲ್ಲಿ ಒಂದು ಚಿಲ್ಲರೆ ಅಂಗಡಿಯ ಬಳಿ ಜನರು ಗುಂಪಾಗಿ ಸೇರಿದ್ದರು. ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಚಿಲ್ಲರೆ ಅಂಗಡಿಯ ಮಾಲೀಕ ಅಂಗಡಿಯನ್ನು ತೆರೆದಿದ್ದು, ಅಂಗಡಿಯನ್ನು ತೆಗೆಯಬಾರದೆಂದು ಸರ್ಕಾರ ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಸಹಾ ಸದರಿ ಆಸಾಮಿಯು ನಿರ್ಲಕ್ಷ್ಯತನದಿಂದ ಅಂಗಡಿಯನ್ನು ತೆರೆದು ಜನರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು, ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತನ ತೋರ್ಪಡಿಸಿರುವುದು ಕಂಡುಬಂದಿರುತ್ತದೆ. ಸದರಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕನ ಹೆಸರು & ವಿಳಾಸ ಕೇಳಲಾಗಿ ರಾಮಚಂದ್ರರೆಡ್ಡಿ ಬಿನ್ ನರಸರೆಡ್ಡಿ, 40 ವರ್ಷ, ವಕ್ಕಲಿಗರು, ವ್ಯಾಪಾರ, ವಾಸ:ವಡಿಗೆರೆ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ಸರ್ಕಾರ  ಹೊರಡಿಸಿರುವ ಆದೇಶಗಳನ್ನು ಉಲ್ಲಂಘನೆ ಮಾಡಿದ್ದ ಅಂಗಡಿಯ ಮಾಲೀಕ ರಾಮಚಂದ್ರರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

6. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ .47/2021 ಕಲಂ. 324,504,506 ಐ.ಪಿ.ಸಿ :-

          ದಿನಾಂಕ:28-05-2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಈಶ್ವರಮ್ಮ ಕೋಂ ಮುತ್ತಿರೆಡ್ಡಿ, 35ವರ್ಷ, ವಕ್ಕಲಿಗರು, ಚೀಮನ್ನಗಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ:27-05-2021 ರಂದು ಸಂಜೆ 6-30 ಗಂಟೆಯ ಸಮಯದಲ್ಲಿ ನಕ್ಕಲಪಲ್ಲಿ ಗ್ರಾಮದ ವಾಸಿ ಸುಬ್ಬಿರೆಡ್ಡಿ ಬಿನ್ ಲೇಟ್ ಮಟುಕು ಮಾರಪರೆಡ್ಡಿರವರು ನಮ್ಮ ಭಾಗದ ಜಮೀನನ್ನು ಉಳುಮೆ ಮಾಡುತ್ತಿದ್ದ. ನಾನು ನನ್ನ ಅಕ್ಕನ ಮಗ ಸದಾಶಿವರೆಡ್ಡಿ ಬಿನ್ ಕರಿಪಿರೆಡ್ಡಿರವರೊಂದಿಗೆ ಅಲ್ಲಿಗೆ ಹೋಗಿ ಸದರಿ ಜಮೀನು ನಮಗೆ ಸೇರಿದ್ದೆಂದು, ಈ ಸ್ವತ್ತನ್ನು ನೀವು ಉಳುಮೆ ಮಾಡಬೇಡಿ ಎಂದು ಹೇಳಿದಾಗ ಸುಬ್ಬಿರೆಡ್ಡಿ ನಮ್ಮ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ನಿಮಗೆ ಒಂದು ಗತಿ ಕಾಣಿಸುತ್ತೇವೆಂದು ಹೇಳಿದ, ಆಗ ನಾವು ಫೀಜ್ ಗಳನ್ನು ಕಿತ್ತುಕೊಂಡು ಈ ಸ್ವತ್ತು ಇತ್ಯರ್ಥವಾಗುವವರೆಗೂ ಯಾರೂ ಉಳುಮೆ ಮಾಡೋದು ಬೇಡವೆಂದು ಹೇಳಿ ನಮ್ಮ ಮನೆಗೆ ಬಂದೆವು. ನಂತರ ನನ್ನ ಅಕ್ಕನ ಮಗನು  ಚಿನ್ನಮಾರಪರೆಡ್ಡಿರವರ ಕೈಯಲ್ಲಿ ಫೀಜ್ ಗಳನ್ನು ಕಳುಹಿಸಿದನು. ಆದರೂ ಸಹಾ ಸುಬ್ಬಿರೆಡ್ಡಿರವರು ಫಿಜ್ ಗಳನ್ನು ಕಿತ್ತಿದವನೇ ಬಂದು ಹಾಕಬೇಕೆಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ.  ಸದರಿ ಸುಬ್ಬಿರೆಡ್ಡಿರವರು ಕೈಯಲ್ಲಿ ಮಚ್ಚನ್ನು ಹಿಡಿದುಕೊಂಡು ನಮ್ಮ ಮನೆಯ ಬಳಿ ಬಂದು ಸದಾಶಿವಾರೆಡ್ಡಿರವರಿಗೆ ಮಚ್ಚಿನಿಂದ ಬೀಸಿದ್ದು, ನಾನು ಸದಾಶಿವರೆಡ್ಡಿರವರನ್ನು ಪಕ್ಕಕ್ಕೆ ತಳ್ಳಿದಾಗ ಸುಬ್ಬಿರೆಡ್ಡಿರವರು ಬೀಸಿದ ಮಚ್ಚು ಸದಾಶಿವರೆಡ್ಡಿರವರಿಗೆ ಬೀಳದೇ ನನ್ನ ಬಲಗೈನ ಮಧ್ಯದ ಬೆರಳಿಗೆ ತಗುಲಿ ರಕ್ತಗಾಯವಾಗಿರುತ್ತದೆ. ಆಗ ಸುಬ್ಬಿರೆಡ್ಡಿರವರ  ಮಾವ ಉತ್ತಿರೆಡ್ಡಿರವರು ಬಂದು ಸುಬ್ಬಿರೆಡ್ಡಿರವರಿಂದ ಮಚ್ಚನ್ನು ಕಿತ್ತುಕೊಂಡಿರುತ್ತಾನೆ. ಆಗ ಸುಬ್ಬಿರೆಡ್ಡಿರವರು ನಮ್ಮನ್ನು ಕುರಿತು ನಿಮ್ಮ ಕುಟುಂಬದವರನ್ನು ಮುಗಿಸಿ ಬಿಡುತ್ತೇವೆಂದು ಪ್ರಾಣಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಈ ಜಮೀನಿನ ಬಗ್ಗೆ ಸುಬ್ಬಿರೆಡ್ಡಿರವರು ಬಾಗೇಪಲ್ಲಿ ಘನ ನ್ಯಾಯಾಲಯದಲ್ಲಿ ಸಿವಿಲ್ ಕೇಸ್ ಹಾಕಿರುತ್ತಾನೆ. ಸದರಿ ಸುಬ್ಬಿರೆಡ್ಡಿರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

7. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ .59/2021 ಕಲಂ. 78 (A)(vi),87 ಕೆ.ಪಿ. ಆಕ್ಟ್:-

          ದಿನಾಂಕ.27-05-2021 ರಂದು ಮದ್ಯಾಹ್ನ 12.45 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ,  ತಾನು ಈ ದಿನ ಬೆಳಿಗ್ಗೆ ಸುಮಾರು 11.00 ಗಂಟೆಯಲ್ಲಿ ಕೋವಿಡ್-19 ಪ್ರಯುಕ್ತ ಶಿಡ್ಲಘಟ್ಟ ನಗರ ಗಸ್ತಿನಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ರಾಘವೇಂದ್ರ ಮಠದ ರಸ್ತೆಯಲ್ಲಿ ಮಸೀದಿ ಅಂಗಡಿಗಳ ಮುಂದೆ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಚೌಕಾಬಾರ ಎಂಬ ಅದೃಷ್ಠದ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ.97 ಸುಬ್ರಮಣಿ, ಪಿ.ಸಿ.320 ಮಸೂದ್ ವಲಿಸಾಬ್ ಜೀಪು ಚಾಲಕ ಮಂಜುನಾಥ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 11-30 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಮರದ ಹಲಗೆ ಮೇಲೆ ಚೌಕಾಬಾರ ಎಂಬ ಅದೃಷ್ಠದ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಸೈಪುವುಲ್ಲಾ ಬಿನ್ ಲೇಟ್ ರಹಮತ್ತುಲ್ಲಾ, ಕೋಟೆ ವೃತ್ತ, ಶಿಡ್ಲಘಟ್ಟ ಟೌನ್ 2] ಸೈಯದ್ ದಸ್ತಗಿರಿ ಬಿನ್ ಬಿ.ಎಸ್. ಷಫೀವುಲ್ಲಾ, ದರ್ಗಾ ಮೊಹಲ್ಲಾ, ಶಿಡ್ಲಘಟ್ಟ ನಗರ 3] ಶಬ್ಬೀರ್ ಪಾಷ ಬಿನ್ ಲೇಟ್ ಹುಸೇನ್ ಸಾಬ್, ದರ್ಗಾಮೊಹಲ್ಲಾ, ಶಿಡ್ಲಘಟ್ಟ ನಗರ 4] ಸರ್ದಾರ್ ಖಾನ್ ಬಿನ್ ಲೇಟ್ ಶೌಕತ್ ಅಲಿಖಾನ್, ಬಾಳೆ ಹಣ್ಣು ವ್ಯಾಪಾರ, 1ನೇ ಟಿ.ಎಂ.ಸಿ ಲೇಔಟ್, ಎಲ್ಲರೂ ಶಿಡ್ಲಘಟ್ಟ ನಗರ ಎಂದು ತಿಳಿಸಿದ್ದು. ಇವರುಗಳು ಚೌಕಾಬಾರ ಅದೃಷ್ಠದ ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 2500/- ರೂ ನಗದು ಹಣ ಮತ್ತು 4 ಹುಣಸೇ ಬೀಜಗಳು ಮತ್ತು ಮರದ ಹಲಗೆ ಸಿಕ್ಕಿದ್ದು, ಇವುಗಳನ್ನು ಬೆಳಿಗ್ಗೆ 11-40 ಗಂಟೆಯಿಂದ 12-15 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 04 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

Last Updated: 28-05-2021 05:16 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080