ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.61/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ: 28/04/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ಪಾಪಣ್ಣ  ಆದ ನಾನು  ಸಿಬ್ಬಂದಿ ಹೆಚ್.ಸಿ – 36 ವಿಜಯಕುಮಾರ್  ರವರೊಂದಿಗೆ  ಬೆಳಿಗ್ಗೆ 10-30 ಗಂಟೆಯಲ್ಲಿ ಜುಂಜುನಹಳ್ಳಿ   ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ  ಜುಂಜನಹಳ್ಳಿ  ಗ್ರಾಮದ  ವಾಸಿ  ಪಿ. ಸಿ. ನಾರಾಯಣರೆಡ್ಡಿ  ಲೇಟ್ ವೆಂಕಟರಾಮಪ್ಪ  ರವರು  ಮತ್ತು ಅದೇ ಗ್ರಾಮದ ವಾಸಿ ನರಸಪ್ಪ ಮತ್ತು ಲೇಟ್ ಮುನಿವೆಂಕಟಪ್ಪ ರವರುಗಳು ಅವರ ಬಾಬತ್ತು  ಚಿಲ್ಲರೆ ಅಂಗಡಿಯ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಜುಂಜುನಹಳ್ಳಿ  ಗ್ರಾಮದಲ್ಲಿ ಪಂಚರನ್ನು ಕರೆದುಕೊಂಡು 10-45 ಗಂಟೆಗೆ ಜುಂಜನಹಳ್ಳಿ  ಗ್ರಾಮದ  ವಾಸಿ  ಪಿ. ಸಿ. ನಾರಾಯಣರೆಡ್ಡಿ  ಲೇಟ್ ವೆಂಕಟರಾಮಪ್ಪ ರವರ ಅಂಗಡಿಯ  ಬಳಿಗೆ ಹೋಗಿ ನೋಡಲಾಗಿ ಅಂಗಡಿಯ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಪಿ. ಸಿ.  ನಾರಾಯಣರೆಡ್ಡಿ ಬಿನ್ ಲೇಟ್ ವೆಂಕಟರಾಮಪ್ಪ  57 ವರ್ಷ. ವಕ್ಕಲಿಗರು.  ಚಿಲ್ಲರೆ ಅಂಗಡಿ ವ್ಯಾಪಾರ.   ವಾಸ: ಜುಂಜುನಹಳ್ಳಿ  ಗ್ರಾಮ, ಚಿಂತಾಮಣಿ ತಾಲ್ಲೂಕು. ಮೊ ನಂ:8277730324. ಎಂದು ತಿಳಿಸಿದ್ದು, ಈತನು  ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾನೇಯೇ ಎಂಬುದರ  ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾನೆ.  ನಂತರ ಪಂಚರ ಸಮಕ್ಷಮ ಬೆಳಿಗ್ಗೆ 10-45  ಗಂಟೆಯಿಂದ ಬೆಳಿಗ್ಗೆ 11-30 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 990 ಎಂ.ಎಲ್ ನ 386.43 ರೂಗಳ ಬೆಲೆ ಬಾಳುವ ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 11 ಟೆಟ್ರಾ ಪ್ಯಾಕೇಟ್ ಗಳು,( 1 ಪಾಕೆಟ್ ಬೆಲೆ 35.13 ರೂಗಳು) ಮತ್ತು ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 2 ಖಾಲಿ ಟೆಟ್ರಾ ಪಾಕೇಟ್ ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೋಂಡು ಠಾಣೆಗೆ  ಮಧ್ಯಾಹ್ನ 12-45 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:61/20201ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.62/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ: 28/04/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ಪಾಪಣ್ಣ  ಆದ ನಾನು  ಸಿಬ್ಬಂದಿ ಹೆಚ್.ಸಿ – 36 ವಿಜಯಕುಮಾರ್  ರವರೊಂದಿಗೆ  ಬೆಳಿಗ್ಗೆ 10-30 ಗಂಟೆಯಲ್ಲಿ ಜುಂಜುನಹಳ್ಳಿ   ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ  ಜುಂಜನಹಳ್ಳಿ  ಗ್ರಾಮದ  ವಾಸಿ  ಪಿ. ಸಿ. ನಾರಾಯಣರೆಡ್ಡಿ  ಲೇಟ್ ವೆಂಕಟರಾಮಪ್ಪ  ರವರು  ಮತ್ತು ಅದೇ ಗ್ರಾಮದ ವಾಸಿ ನರಸಪ್ಪ ಮತ್ತು ಲೇಟ್ ಮುನಿವೆಂಕಟಪ್ಪ ರವರುಗಳು ಅವರ ಬಾಬತ್ತು  ಚಿಲ್ಲರೆ ಅಂಗಡಿಯ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಜುಂಜುನಹಳ್ಳಿ  ಗ್ರಾಮದಲ್ಲಿ ಪಂಚರನ್ನು ಕರೆದುಕೊಂಡು 11-45 ಗಂಟೆಗೆ ಜುಂಜನಹಳ್ಳಿ  ಗ್ರಾಮದ  ವಾಸಿ  ನರಸಿಂಹಪ್ಪ ಮತ್ತು ಲೇಟ್ ಮುನಿವೆಂಕಟಪ್ಪ ಅಂಗಡಿಯ  ಬಳಿಗೆ ಹೋಗಿ ನೋಡಲಾಗಿ ಅಂಗಡಿಯ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ನರಸಪ್ಪ ಮತ್ತು ಲೇಟ್ ಮುನಿವೆಂಕಟಪ್ಪ, 55 ವರ್ಷ. ನಾಯಕರು  ಚಿಲ್ಲರೆ ಅಂಗಡಿ ವ್ಯಾಪಾರ.   ವಾಸ: ಜುಂಜುನಹಳ್ಳಿ  ಗ್ರಾಮ, ಚಿಂತಾಮಣಿ ತಾಲ್ಲೂಕು. ಮೊ ನಂ: 9632366799. ಎಂದು ತಿಳಿಸಿದ್ದು, ಈತನು  ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾನೇಯೇ ಎಂಬುದರ  ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾನೆ.  ನಂತರ ಪಂಚರ ಸಮಕ್ಷಮ ಬೆಳಿಗ್ಗೆ 11- 45  ಗಂಟೆಯಿಂದ ಮದ್ಯಾಹ್ನ 12-30 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 810 ಎಂ.ಎಲ್ ನ 316.17 ರೂಗಳ ಬೆಲೆ ಬಾಳುವ ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 9 ಟೆಟ್ರಾ ಪ್ಯಾಕೇಟ್ ಗಳು,( 1 ಪಾಕೆಟ್ ಬೆಲೆ 35.13 ರೂಗಳು) ಮತ್ತು ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 2 ಖಾಲಿ ಟೆಟ್ರಾ ಪಾಕೇಟ್ ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೋಂಡು ಠಾಣೆಗೆ  ಮಧ್ಯಾಹ್ನ 13-00 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:62/20201ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.63/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ: 28/04/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ಪಾಪಣ್ಣ  ಆದ ನಾನು  ಸಿಬ್ಬಂದಿ ಹೆಚ್.ಸಿ – 36 ವಿಜಯಕುಮಾರ್  ರವರೊಂದಿಗೆ  ಮದ್ಯಾಹ್ನ  14-15 ಗಂಟೆಯಲ್ಲಿ ನಿಮ್ಮಕಾಯಲಹಳ್ಳಿ   ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ  ನಿಮ್ಮಕಾಯಲಹಳ್ಳಿ    ಗ್ರಾಮದ  ವಾಸಿ  ಹರೀಶ್ ಬಿನ್  ನಾರಾಯಣಸ್ವಾಮಿ  ರವರು  ಆತನ ಬಾಬತ್ತು ವಾಸದ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ಪಂಚರನ್ನು ಕರೆದುಕೊಂಡು 14-30 ಗಂಟೆಗೆ ನಿಮ್ಮಕಾಯಲಹಳ್ಳಿ ಗ್ರಾಮದ  ವಾಸಿ  ಹರೀಶ್ ಬಿನ್  ನಾರಾಯಣಸ್ವಾಮಿ ರವರ ಮನೆಯ  ಬಳಿಗೆ ಹೋಗಿ ನೋಡಲಾಗಿ ಮನೆಯ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ವಾಸಿ  ಹರೀಶ್ ಬಿನ್  ನಾರಾಯಣಸ್ವಾಮಿ, 34 ವರ್ಷ. ಆದಿ ಕರ್ನಾಟಕ , ಬಾರ್ ಬೈಂಡಿಂಗ್ ಕೆಲಸ,   ವಾಸ: ನಿಮ್ಮಕಾಯಲಹಳ್ಳಿ  ಗ್ರಾಮ, ಚಿಂತಾಮಣಿ ತಾಲ್ಲೂಕು. ಮೊ ನಂ: 6362086480. ಎಂದು ತಿಳಿಸಿದ್ದು, ಈತನು  ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾನೇಯೇ ಎಂಬುದರ  ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾನೆ.  ನಂತರ ಪಂಚರ ಸಮಕ್ಷಮ ಮದ್ಯಾಹ್ನ 14-30  ಗಂಟೆಯಿಂದ ಮದ್ಯಾಹ್ನ 15-00  ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 810 ಎಂ.ಎಲ್ ನ 316.17 ರೂಗಳ ಬೆಲೆ ಬಾಳುವ ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 9 ಟೆಟ್ರಾ ಪ್ಯಾಕೇಟ್ ಗಳು,( 1 ಪಾಕೆಟ್ ಬೆಲೆ 35.13 ರೂಗಳು) ಮತ್ತು ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 2 ಖಾಲಿ ಟೆಟ್ರಾ ಪಾಕೇಟ್ ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೋಂಡು ಠಾಣೆಗೆ  ಮಧ್ಯಾಹ್ನ 15-30 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:63/20201ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

4. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.36/2021 ಕಲಂ. 32,34  ಕೆ.ಇ ಆಕ್ಟ್ :-

     ದಿನಾಂಕ:27/04/2021 ರಂದು ಚೇಳೂರು ಪೊಲೀಸ್ ಠಾಣೆಯ ಹೆಚ್ ಸಿ 129 ರವಣಪ್ಪ ಮತ್ತು ಪಿಸಿ 468 ಆಂಜಿನಪ್ಪ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ರವಣಪ್ಪ ಸಿ.ಹೆಚ್.ಸಿ-129 ಚೇಳೂರು ಪೊಲೀಸ್ ಠಾಣೆ ಆದ ನಾನು ತಮ್ಮಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ದಿನಾಂಕ:27-04-2021 ರಂದು ನಾನು ಮದ್ಯಾಹ್ನ 12-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಚೇಳೂರು ಪೊಲೀಸ್ ಠಾಣೆಯ ಲೇಖಕರಾದ ಹಾಗೂ 2ನೇ ಗ್ರಾಮಗಸ್ತಿನ ಸಿಬ್ಬಂದಿಯಾದ ಅಂಜಿನಪ್ಪ ಟಿ.ಎಲ್ ಸಿಪಿಸಿ-468 ರವರು ನನಗೆ ಕರೆದು 2ನೇ ಗ್ರಾಮ ಗಸ್ತುನಲ್ಲಿ ಬರುವ ದಬ್ಬರವಾರಪಲ್ಲಿ ಗ್ರಾಮದಿಂದ ಬಂದ ಖಚಿತ ಮಾಹಿತಿಯ ಏನೆಂದರೆ ದಬ್ಬರವಾರಿಪಲ್ಲಿ ಗ್ರಾಮವು ಆಂದ್ರಪ್ರದೇಶದ ಅಂಚಿನಲ್ಲಿದ್ದು, ಸದರಿ ಗ್ರಾಮದಲ್ಲಿ ಅಂಧ್ರಪ್ರದೇಶದಿಂದ ಬರುವ ಸಾರ್ವಜನಿಕರಿಗೆ ಆಕ್ರಮ ಮಧ್ಯಮಾರಾಟ ಮಾಡುವ ಸಲುವಾಗಿ ಮಧ್ಯವನ್ನು ಶ್ರೀರಂಗಂ ಬಿನ್ ವೆಂಕಟಸುಬ್ಬಯ್ಯ ರವರ ಮನೆಯಲ್ಲಿ ದಾಸ್ತಾನು ಮಾಡಿರುವುದಾಗಿ ಮಾಹಿತಿ ಬಂದಿರುತ್ತದೆ.  ಅದ್ದರಿಂದ ದಾಳಿ ಮಾಡುವ ಸಲುವಾಗಿ ನನ್ನ ಜೊತೆ ಬರಲು ಕರೆದಿದ್ದರ ಮೇರೆಗೆ ನಾನು ಮತ್ತು ಸಿಪಿಸಿ-468 ಅಂಜಿನಪ್ಪ ರವರು ಠಾಣಾ ಎಸ್.ಹೆಚ್.ಓ ಆದ ಶ್ರೀ.ನಾಗರಾಜ್ ಡಿ.ಜಿ ಎ.ಎಸ್.ಐ ರವರಿಗೆ ಮಾಹಿತಿಯನ್ನು ನೀಡಿದ್ದು, ಸದರಿ ಎಸ್.ಹೆಚ್.ಓ ರವರು ಸದರಿ ದಬ್ಬರವಾರಿಪಲ್ಲಿ ಗ್ರಾಮಕ್ಕೆ ಹೋಗಿ ದಾಳಿ ಮಾಡಿ ವರದಿ ಮಾಡಲು ಸೂಚಿಸಿದ್ದು, ಅದರಂತೆ ನಾವು ಇದೇ ದಿನ ಮದ್ಯಾಹ್ನ 12-30 ಗಂಟೆಗೆ ಹೋಗಿ ಪಂಚರನ್ನು ಬರಮಾಡಿಕೊಂಡು ಶ್ರೀರಂಗಂ ರವರು ಹೊಸದಾಗಿ ನಿರ್ಮಿಸುತ್ತಿರುವ ಮನೆಯ ಬಳಿ ಹೋಗಿ ನೋಡಲಾಗಿ ಸದರಿ ಮನೆಯಲ್ಲಿ ಶ್ರೀರಂಗಂ ಬಿನ್ ವೆಂಕಟಸುಬ್ಬಯ್ಯ ರವರು ಇದ್ದು ಸದರಿಯವರನ್ನು ಮದ್ಯವನ್ನು ದಾಸ್ತಾನು ಮಾಡಿರುವ ಬಗ್ಗೆ ಕೇಳಲಾಗಿ ನನಗೆ ಗೊತ್ತಿರುವುದಿಲ್ಲ. ಎಂಬುದಾಗಿ ತಿಳಿಸಿದ್ದರ ಮೇರೆಗೆ  ಪಂಚರ ಸಮಕ್ಷಮ ಶ್ರೀರಂಗಂ ರವರು ಹೊಸದಾಗಿ ನಿರ್ಮಾಣ ಮಾಡುತ್ತಿರುವ ಮನೆಯ ಮೇಲೆ ಹೋಗಲು ನಿರ್ಮಿಸಲು ಮೆಟ್ಟಲು ಕೆಳಗಿನ ಬಾತ್ ರೂಂನಲ್ಲಿ   ನೋಡಲಾಗಿ ಒಂದು ರಟ್ಟಿನ ಬಾಕ್ಸನಲ್ಲಿ  90 ಎಂ.ಎಲ್ ನ HAYWARDS CHEERS WHISKY ಯ 96 ಟೆಟ್ರಾ ಪ್ಯಾಕೇಟುಗಳಿದ್ದು, ಪ್ರತಿ ಟೆಟ್ರಾ ಪ್ಯಾಕೆಟ್ನ ಮೇಲೆ 35.13ರೂ ಬೆಲೆ ಇದ್ದು,  ಇವುಗಳು ಒಟ್ಟು 8640 ಎಮ್ ಎಲ್ ಯಿದ್ದು ಇವುಗಳ ಬೆಲೆ 3,372.48/- ರೂ ಗಳಾಗಿರುತ್ತೆ. ಅದರ ಪಕ್ಕದಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲದಲ್ಲಿ ನೋಡಲಾಗಿ 180 ML ನ OLD TAVERAN WHISKY ಯ 13 ಟೆಟ್ರಾ ಪಾಕೆಟುಗಳು ಇದ್ದು ಇವು 2340 ಎಮ್ ಎಲ್ ಯಿದ್ದು,  ಪ್ರತಿ ಟೆಟ್ರಾ ಪ್ಯಾಕೆಟ್  ಮೇಲೆ 86.75/-ರೂ ಬೆಲೆಯಿದ್ದು ಇವುಗಳು ಒಟ್ಟುಬೆಲೆ  1,127.75 /- ಆಗಿರುತ್ತದೆ. ಹಾಗೂ ಅದೇ ಚೀಲದಲ್ಲಿ  180 ಎಂ.ಎಲ್ ನ OLD ADMIRAL VSOP BRANDY ಯ 12 ಟೆಟ್ರಾ ಪಾಕೆಟುಗಳು ಇದ್ದು ಪ್ರತಿ ಟೆಟ್ರಾ ಪ್ಯಾಕೆಟ್ ನ ಮೇಲೆ 86.75/-ರೂ ಬೆಲೆಯಿದ್ದು ಇವುಗಳು ಒಟ್ಟು 2160 ಎಮ್ ಎಲ್ ಯಿದ್ದು ಇವುಗಳ  ಒಟ್ಟು ಬೆಲೆ 1,041/- ರೂಗಳಾಗಿದ್ದು ಅದೇ ಚೀಲದಲ್ಲಿ 180 ಎಂ.ಎಲ್ ನ BAGPIPER DELUXE WHISKY ಯ 8 ಟೆಟ್ರಾ ಪ್ಯಾಕೆಟ್ಗಳು ಇದ್ದು ಪ್ರತಿ ಟೆಟ್ರಾ ಪ್ಯಾಕೆಟ್ ನ  ಮೇಲೆ 106.23/- ರೂ ಬೆಲೆಯಿದ್ದು ಇವುಗಳು ಒಟ್ಟು 1440 ಎಮ್ ಎಲ್ ಆಗಿದ್ದು ಇವುಗಳ  ಒಟ್ಟು ಬೆಲೆ 849.84 /- ರೂ ಆಗಿರುತ್ತದೆ. ಮೇಲ್ಕಂಡ ಎಲ್ಲಾ ಮದ್ಯದ ವಸ್ತುಗಳ ಒಟ್ಟು 14580 ಎಮ್ ಎಲ್ ಆಗಿದ್ದು ಇವುಗಳ ಒಟ್ಟು ಬೆಲೆ 6391. 07/- ರೂಗಳಾಗಿರುತ್ತೆ. ಎಫ್.ಎಸ್.ಎಲ್ ಪರೀಕ್ಷೆಗೆ ಕಳುಹಿಸಿಕೊಡುವ ಸಲುವಾಗಿ ಮೇಲ್ಕಂಡ  ಎಲ್ಲಾ ಮಧ್ಯದ ಟೆಟ್ರಾ ಪಾಕೆಟುಗಳ ಪೈಕಿ ತಲಾ ಒಂದೊಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಣ್ಣದ ಬಟ್ಟೆಯ ಚೀಲದಲ್ಲಿ ಇಟ್ಟು ಮೂತಿಯನ್ನು ದಾರದಿಂದ ಕಟ್ಟಿ “D” ಎಂಬ ಆಂಗ್ಲಭಾಷೆಯ ಅಕ್ಷರದಿಂದ ಸೀಲ್ ಮಾಡಿರುತ್ತದೆ.  ಮೇಲ್ಕಂಡ ಎಲ್ಲಾ ಮದ್ಯದ ವಸ್ತುಗಳನ್ನು ಹಾಗೂ ಮಾದರಿ ವಸ್ತುಗಳನ್ನು ಮದ್ಯಾಹ್ನ 12-45 ಗಂಟೆಯಿಂದ 14-15 ಗಂಟೆಯವರೆಗೂ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತದೆ. ಮನೆಯ ಬಳಿ ಇದ್ದ ಸಾರ್ವಜನಿಕರನ್ನು ಸದರಿ ಮದ್ಯವನ್ನು ಮಾರಾಟ ಮಾಡಲು ದಾಸ್ತಾನು ಮಾಡಿರುವವರ ಹೆಸರು & ವಿಳಾಸ ಕೇಳಲಾಗಿ ಅರುಣಾ ಡಿ.ವಿ ಕೊಂ ಶ್ರೀರಂಗಂ, 40 ವರ್ಷ, ಭೋವಿ ಜನಾಂಗ, ಮನೆಗೆಲಸ, ವಾಸ ದಬ್ಬರವಾರಿಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲುಕು. ಎಂದು ತಿಳಿಸಿರುತ್ತಾರೆ. ಸದರಿ ಅರುಣಾ ಡಿ.ವಿ ರವರು ಮನೆಯಲ್ಲಿ ಇಲ್ಲದೆ ಎಲ್ಲಿಗೋ ಹೊರಟುಹೋಗಿದ್ದು, ಅವರು ಸಾರ್ವಜನಿಕರಿಗೆ ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ಮನೆಯಲ್ಲಿ ಮದ್ಯವನ್ನು ದಾಸ್ತಾನು ಮಾಡಿರುವುದಾಗಿ ತಿಳಿಸಿರುತ್ತಾರೆ.  ಅಕ್ರಮವಾಗಿ ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿದ ಅರುಣಾ ಡಿ.ವಿ ಕೊಂ ಶ್ರೀರಂಗಂ ರವರ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಬಂದು ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯ ಮೇರೆಗೆ ಠಾಣಾ ಮೊಸಂ:36/2021 ಕಲಂ 32, 34 ಕೆ ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

5. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.37/2021 ಕಲಂ. 32,34  ಕೆ.ಇ ಆಕ್ಟ್ :-

     ದಿನಾಂಕ:27/04/2021 ರಂದು ಚೇಳೂರು ಪೊಲೀಸ್ ಠಾಣೆಯ ಪಿಎಸ್ ಐ ರವರಾದ ಪ್ರತಾಪ್ ಕೆಆರ್ ರವರು ಸಂಜೆ 6:15 ಗಂಟೆಗೆ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ   ಚೇಳೂರು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಪ್ರತಾಪ್ ಕೆಆರ್ ಆದ ನಾನು ಮತ್ತು ಸಿಬ್ಬಂದಿಯವರಾದ ಹೆಚ್ ಸಿ 129 ರವಣಪ್ಪ ಬಿವಿ, ಪಿಸಿ 07 ವಿಧ್ಯಾಧರ್  ಹಾಗೂ ಜೀಪ್ ಚಾಲಕನಾದ ಎಪಿಸಿ 87 ಮೋಹನ್  ರವರೊಂದಿಗೆ  ಈ ದಿನ ದಿನಾಂಕ:27/04/2021 ರಂದು ಸಂಜೆ 4:00 ಗಂಟೆಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-42-ಜಿ-0061 ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ರಾಶ್ಚೆರುವು ಗ್ರಾಮದ  ಕಡೆ ಗಸ್ತು ಮಾಡಿಕೊಂಡು ಮಂಜುನಾಥಪುರ ಗ್ರಾಮಕ್ಕೆ ಬಂದು ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಇದೇ ಗ್ರಾಮದ ವಾಸಿಯಾದ ಸೋಮಶೇಖರ್ ಬಿನ್ ಚಂದ್ರಪ್ಪ, ಎಂಬುವರು ತನ್ನ ಚಿಲ್ಲರೆ ಅಂಗಡಿಯಲ್ಲಿ ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಸಂಗ್ರಹಣೆ ಮಾಡಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರ ಸಮಕ್ಷಮ ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ಥಳದಲ್ಲಿದ್ದ 1) ಮದ್ಯ ತುಂಬಿರುವ 180 ಎಮ್ ಎಲ್ ನ OLD ADMIRAL VSOP BRANDY ಯ 48 ಟೆಟ್ರಾ ಪ್ಯಾಕೆಟ್ ಗಳು  2) ಮಧ್ಯ ತುಂಬಿದ್ದ 180 ಎಂ.ಎಲ್ ಸಾಮರ್ಥ್ಯದ 31   8 PM ಟೆಟ್ರಾ ಪಾಕೆಟ್ 3) ಮಧ್ಯ ತುಂಬಿದ್ದ 180 ಎಂ.ಎಲ್ ಸಾಮರ್ಥ್ಯದ OLD TAVERN WHISKY 18 ಟೆಟ್ರಾ ಪಾಕೆಟ್ ಗಳು 4) ಮಧ್ಯ ತುಂಬಿದ್ದ 90 ಎಂ.ಎಲ್ ಸಾಮರ್ಥ್ಯದ 11 HAYWARDS CHEERS WHISKY ಯ ಮಧ್ಯ ತುಂಬಿದ ಟೆಟ್ರಾ ಪಾಕೆಟ್ ಗಳಿದ್ದು, ಇವುಗಳ  ಒಟ್ಟು ಸಾಮರ್ಥ್ಯ 18 ಲೀಟರ್ 440 ಎಂ.ಎಲ್ ಆಗಿದ್ದು, ಇವುಗಳ ಒಟ್ಟು ಬೆಲೆ 8,801.18/- ರೂಗಳಾಗಿರುತ್ತೆ. ಸದರಿ ಆಸಾಮಿಗೆ ಮಧ್ಯವನ್ನು ಮಾರಾಟ ಮಾಡಲು ಯಾವುದಾದರೂ ಪರವಾನಗಿ ಇದೇಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು. ಸದರಿ ಆಸಾಮಿ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಸೋಮಶೇಖರ್ ಬಿನ್ ಚಂದ್ರಪ್ಪ, 50 ವರ್ಷ, ಈಡಿಗ ಜನಾಂಗ, ಮಂಜುನಾಥಪುರ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಫೋ ನಂ:6301459092 ಎಂದು ತಿಳಿಸಿದ್ದು  ನಂತರ ಸದರಿ ಮಾಲುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಎಲ್ಲಾ ಮಾಲುಗಳ ಪೈಕಿ ಒಂದೊಂದನ್ನು  ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು D ಎಂಬ ಅಕ್ಷರದಿಂದ ಸೀಲು ಮಾಡುತ್ತಿದ್ದಾಗ ಸದರಿ ಆಸಾಮಿ ಸೋಮಶೇಖರ್  ಸ್ಥಳದಿಂದ ಓಡಿ  ಪರಾರಿಯಾದನು.  ನಂತರ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿದ  ಸೋಮಶೇಖರ್ ಬಿನ್ ಚಂದ್ರಪ್ಪ  ರವರ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊಸಂ:37/2021 ಕಲಂ 32, 34 ಕೆ ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.167/2021 ಕಲಂ. 323,324,504,506,427,34 ಐ.ಪಿ.ಸಿ:-

     ದಿನಾಂಕ:27/04/2021 ರಂದು ಚಿಂತಾಮಣಿ ಸರ್ಕಾರಿ ಅಸ್ಪತ್ರೆಯಲ್ಲಿ ಗಾಯಾಳು ವೀರಪ್ಪರೆಡ್ಡಿ ಬಿನ್ ಶ್ರೀನಿವಾಸರೆಡ್ಡಿ, 32 ವರ್ಷ, ವಕ್ಕಲಿಗರು, ಇಂಜಿನಿಯರ್, ಹಿರಣ್ಯಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 1.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಜಮೀನುಗಳು ಹಾಗೂ ತಮ್ಮ ಗ್ರಾಮದ ಮಂಜುನಾಥರೆಡ್ಡಿ ರವರ ಜಮೀನುಗಳು ಅಕ್ಕ ಪಕ್ಕದಲ್ಲಿರುತ್ತೆ. ಅವರು ತಮ್ಮ ಜಮೀನಿಗೆ ಹೋಗಬೇಕಾದರೆ ತಮ್ಮ ಜಮೀನಿನ ಮುಖಾಂತರ ಹೋಗಬೇಕಾಗಿದ್ದು, ದಾರಿಯ ವಿಚಾರದಲ್ಲಿ ಈಗ್ಗೆ ಸುಮಾರು ಒಂದು ವರ್ಷದಿಂದ ತಮಗೂ ಹಾಗೂ ಅವರಿಗೂ ತಕರಾರುಗಳಿರುತ್ತೆ. ಈ ದಿನ ದಿನಾಂಕ: 27/04/2021 ರಂದು ಬೆಳಿಗ್ಗೆ 10.45 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಮಂಜುನಾಥರೆಡ್ಡಿ ಬಿನ್ ಮುನಿರೆಡ್ಡಿ, ವೆಂಕಟರೆಡ್ಡಿ ಬಿನ್ ಮುನಿರೆಡ್ಡಿ ಮತ್ತು ಶಿವಾರೆಡ್ಡಿ ಬಿನ್ ಮುನಿರೆಡ್ಡಿ ರವರು ತಮ್ಮ ಮನೆಯ ಕಾಂಪೌಂಡ್ ನಲ್ಲಿರುವ ಜಮ್ಮು ನೇರಳೆ ಗಿಡ ಮತ್ತು ರೇಷ್ಮೇ ಗಿಡಗಳನ್ನು ಕತ್ತರಿಸುತ್ತಿದ್ದಾಗ ತಾನು, ತನ್ನ ಚಿಕ್ಕಪ್ಪನ ಮಗನಾದ ಆಂಜನೇಯರೆಡ್ಡಿ, ತನ್ನ ತಂದೆಯಾದ ಶ್ರೀನಿವಾಸರೆಡ್ಡಿ, ತಾಯಿಯಾದ ಮುನಿಲಕ್ಷ್ಮಮ್ಮ ರವರು ಹೋಗಿ ಅವರನ್ನು ಕುರಿತು ಏಕೆ ಗಿಡಗಳನ್ನು ಕತ್ತರಿಸುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಆ ಪೈಕಿ ವೆಂಕಟರೆಡ್ಡಿ ತನ್ನ ಕೈಯಲ್ಲಿದ್ದ ಮಚ್ಚಿನಿಂದ ತನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಮಂಜುನಾಥರೆಡ್ಡಿ ರವರು ದೊಣ್ಣೆಯಿಂದ ತನ್ನ ಎಡಕೈ, ಎಡಭುಜ ಮತ್ತು ತುಟಿಯ ಮೇಲೆ ಹೊಡೆದು ಗಾಯಪಡಿಸಿರುತ್ತಾನೆ. ಶಿವಾರೆಡ್ಡಿ ದೊಣ್ಣೆಯಿಂದ ತನ್ನ ಅಣ್ಣ ಆಂಜನೇಯರೆಡ್ಡಿ ರವರ ಎಡಕಣ್ಣಿನ ಬಳಿ ಹೊಡೆದು ಊತ ಗಾಯಪಡಿಸಿರುತ್ತಾನೆ. ನಂತರ ಮೂರು ಜನ ಸೇರಿ ಕೈಗಳಿಂದ ತನ್ನ ತಂದೆ ಮತ್ತು ತಾಯಿಯ ಮೈ ಕೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿ, ತಮ್ಮನ್ನು ಕುರಿತು “ಬೇವರ್ಸಿ ನನ್ನ ಮಕ್ಕಳೇ ನಿಮ್ಮನ್ನು ಮುಗಿಸುವವರೆಗೂ ಬಿಡುವುದಿಲ್ಲ” ಎಂದು ಕೆಟ್ಟ ಮಾತುಗಳಿಂದ ಬೈದು ಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.168/2021 ಕಲಂ. 143,147,148,323,324,447,506,149  ಐ.ಪಿ.ಸಿ:-

     ದಿನಾಂಕ:27/04/2021 ರಂದು ಚಿಂತಾಮಣಿ ಸರ್ಕಾರಿ ಅಸ್ಪತ್ರೆಯಲ್ಲಿ ಗಾಯಾಳು ಮಂಜುನಾಥ.ಹೆಚ್.ಎಂ ಬಿನ್ ಮುನಿರೆಡ್ಡಿ, 41 ವರ್ಷ, ವಕ್ಕಲಿಗರು, ಮಾಜಿ ಸೈನಿಕರು, ಹಿರಣ್ಯಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, ಹಾಲಿ ವಾಸ: ಕರಿಯಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 1.40 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಾನು ತಮ್ಮ ಗ್ರಾಮದಲ್ಲಿ ಈಗ್ಗೆ 15 ವರ್ಷದ ಹಿಂದೆ ವೆಂಕಟರೆಡ್ಡಿ ಹಾಗೂ ಅವರ ಕುಟುಂಬದವರಿಂದ 65*70 ಅಡಿ ವಿಸ್ತೀರ್ಣ ದ ಸೈಟನ್ನು ಖರೀದಿಸಿದ್ದು, ಸದರಿ ಸೈಟ್ ತನ್ನ ಹೆಸರಿನಲ್ಲಿರುತ್ತೆ. ತಮ್ಮ ಸೈಟಿನ ಪೂರ್ವಕ್ಕೆ ಸತೀಶ್ ರೆಡ್ಡಿ ರವರ ಹೆಸರಿನಲ್ಲಿ ಖಾಲಿ ನಿವೇಶನ ಇರುತ್ತೆ. ತಮ್ಮಗಳ ಮದ್ಯೆ ಓಡಾಡಲು ರಸ್ತೆಯ ವಿಚಾರವಾಗಿ ಈಗ್ಗೆ ಎರಡು ವರ್ಷಗಳಿಂದ ತಕರಾರು ಇರುತ್ತೆ. ಹೀಗಿರುವಾಗ ಈ ದಿನ ದಿನಾಂಕ: 27/04/2021 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಅಣ್ಣ ವೆಂಕಟರೆಡ್ಡಿ ರವರು ಮೇಲ್ಕಂಡ ತಮ್ಮ ನಿವೇಶನದಲ್ಲಿ ಬೆಳೆದಿದ್ದ ಕಸ, ಕಡ್ಡಿ, ಮುಳ್ಳಿನ ಗಿಡಗಳನ್ನು ಕಿತ್ತು ಸ್ವಚ್ಚ ಮಾಡುತ್ತಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ಶ್ರೀನಿವಾಸರೆಡ್ಡಿ ಬಿನ್ ಲೇಟ್ ಚಿಕ್ಕ ಮುನಿರೆಡ್ಡಿ, ವೀರಪ್ಪರೆಡ್ಡಿ ಬಿನ್ ಶ್ರೀನಿವಾಸರೆಡ್ಡಿ, ಆಂಜನೇಯರೆಡ್ಡಿ ಬಿನ್ ಗೋಪಾಲರೆಡ್ಡಿ, ಮುನಿಲಕ್ಷ್ಮಮ್ಮ ಕೋಂ ಶ್ರೀನಿವಾಸರೆಡ್ಡಿ, ಸತೀಶ್ ರೆಡ್ಡಿ ಬಿನ್ ಶ್ರೀನಿವಾಸರೆಡ್ಡಿ, ಸತ್ಯನಾರಾಯಣರೆಡ್ಡಿ ಬಿನ್ ಗೋವಿಂದರೆಡ್ಡಿ, ಮಂಜಮ್ಮ ಕೋಂ ಸತ್ಯನಾರಾಯಣರೆಡ್ಡಿ ಹಾಗೂ ಮತ್ತಿತರರು ತಮ್ಮ ಸೈಟಿನೊಳಗೆ ಅಕ್ರಮವಾಗಿ ಬಂದು ಈ ಸೈಟು ನಮಗೆ ಸೇರಿದ್ದೆಂದು ಗಲಾಟೆ ತೆಗೆದು, ಆ ಪೈಕಿ ಶ್ರೀನಿವಾಸರೆಡ್ಡಿ ರವರು ಕಲ್ಲಿನಿಂದ ತನ್ನ ಅಣ್ಣನ ತಲೆ ಹಿಂಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದನು. ಆಂಜನೇಯರೆಡ್ಡಿ ರವರು ದೊಣ್ಣೆಯಿಂದ ತನ್ನ ಅಣ್ಣನ ತಲೆಗೆ ಹೊಡೆದು ರಕ್ತಗಾಯಪಡಿಸಿದರು. ವೀರಪ್ಪರೆಡ್ಡಿ ರವರು ಮಚ್ಚಿನಿಂದ ಹೊಡೆಯಲು ಬಂದಿದ್ದು ತಾನು ತಪ್ಪಿಸಿಕೊಂಡು ಎಡಕೈ ಅಡ್ಡ ಇಟ್ಟಿದ್ದು ಮಚ್ಚಿನ ಕೊನೆ ತನ್ನ ಎಡಗೈ ಮುಂಗೈ ಬಳಿ ತಗಲಿ ರಕ್ತಗಾಯವಾಗಿರುತ್ತೆ. ಇದೇ ಸಮಯಕ್ಕೆ ಜಗಳ ಬಿಡಿಸಲು ಬಂದ ತನ್ನ ಮತ್ತೊಬ್ಬ ಅಣ್ಣನಾದ ಶಿವಣ್ಣ ರವರಿಗೆ ಹಾಗೂ ತಮಗಿಬ್ಬರಿಗೂ ಉಳಿದವರು ಕೈಗಳಿಂದ ಹೊಡೆದು, ಕಾಲುಗಳಿಂದ ಒದ್ದು ಸೈಟಿನಲ್ಲಿ ಓರಳಾಡಿಸಿ ಇನ್ನೊಂದು ಸಾರಿ ಈ ಜಾಗದೊಳಗೆ ಬಂದರೆ ನಿಮ್ಮನ್ನು ಸಾಯಿಸದೆ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.169/2021 ಕಲಂ. 15(A) ಕೆ.ಇ ಆಕ್ಟ್:-

     ದಿನಾಂಕ 27-04-2021 ರಂದು ರಾತ್ರಿ 9-15 ಗಂಟೆಗೆ ಠಾಣೆಯ ಸಿ.ಹೆಚ್.ಸಿ 41 ಜಗದೀಶ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 27/04/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ನಾನು ಹಾಗೂ ಸಿ.ಪಿ.ಸಿ-544 ವೆಂಕಟರವಣ ರವರು ಠಾಣಾ ಸರಹದ್ದಿನ ಕೈವಾರ ಕ್ರಾಸ್, ಚಿನ್ನಸಂದ್ರ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ರಾತ್ರಿ 8-00 ಗಂಟೆಯ ಸಮಯದಲ್ಲಿ ಕನ್ನಂಪಲ್ಲಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ  ಯಾರೋ ಒಬ್ಬ ಆಸಾಮಿಯು ಕನ್ನಂಪಲ್ಲಿ ಹಾಲಿನ ಡೈರಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಗೆ  ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಕನ್ನಂಪಲ್ಲಿ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ರಸ್ತೆಯಲ್ಲಿ ನೋಡಲಾಗಿ 1)90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, 2)ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 3)ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಓಪನ್ ಆಗಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ನಾಗೇಂದ್ರ ಬಾಬು ಬಿನ್ ಪಾರ್ವತಚಾರ್, 33 ವರ್ಷ, ಆಚಾರಿ ಜನಾಂಗ, ಬಾರ್ ನಲ್ಲಿ ಕೆಲಸ, ಯಗವಕೋಟೆ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ರಾತ್ರಿ  8-10 ರಿಂದ 8-50 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ನಾಗೇಂದ್ರ ಬಾಬು ಬಿನ್ ಪಾರ್ವತಚಾರ್  ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.170/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

     ದಿನಾಂಕ: 28/04/2021 ರಂದು ಬೆಳಿಗ್ಗೆ 11.45 ಗಂಟೆಗೆ ಚಿಂತಾಮಣಿ ಗ್ರಾಮಾಂತರ ವೃತ್ತದ ಮಾನ್ಯ ಸಿ.ಪಿ.ಐ ಶ್ರೀ.ಶ್ರೀನಿವಾಸಪ್ಪ.ಕೆ.ಎಂ ರವರು ಆರೋಪಿ ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 28/04/2021 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಇದ್ದು, ಗಸ್ತು ಮಾಡುತ್ತಿದ್ದ ಸಮಯದಲ್ಲಿ  ತಾನು ಮತ್ತು ತನ್ನ ಸಿಬ್ಬಂದಿಯವರಾದ ಸಿಹೆಚ್.ಸಿ-190 ವೀರಭದ್ರಸ್ವಾಮಿ ರವರು ಜೀಪ್ ಚಾಲಕ ವೇಣುಗೋಪಾಲ್ ರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-3339 ಜೀಪ್ ನಲ್ಲಿ ವೃತ್ತದ ಸರಹದ್ದಿನ ಕೈವಾರ ಕಡೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೆಳಿಗ್ಗೆ 10.30 ಸಮಯದಲ್ಲಿ ಕೈವಾರ ಕ್ರಾಸ್ ಎಂ.ಡಿ ಪ್ಯಾಷನ್ ಬಟ್ಟೆ ಅಂಗಡಿಯ ಮಾಲೀಕ ಮುಕ್ತಿಯಾರ್ ರವರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ವ್ಯಾಪಾರಕ್ಕಾಗಿ ಅಂಗಡಿಯನ್ನು ತೆಗೆದು ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ ಮುಕ್ತಿಯಾರ್ ಪಾಷ ಬಿನ್ ಪೀರ್ ಸಾಬ್, 40 ವರ್ಷ, ಎಂ.ಡಿ ಪ್ಯಾಷನ್ ಬಟ್ಟೆ ಅಂಗಡಿ ವ್ಯಾಪಾರ, ತಳಗವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಕೋವಿಡ್-19 ರ ಲಾಕ್ ಡೌನ್ ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಬಟ್ಟೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 

10. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.67/2021 ಕಲಂ. 32,34 ಕೆ.ಇ ಆಕ್ಟ್:-

          ಪಿರ್ಯಾದಿದಾರರಾದ ನಾರಾಯಣಸ್ವಾಮಿ.ಆರ್ ಪಿ.ಎಸ್.ಐ-1 (ಕಾ & ಸು) ಚಿಂತಾಮಣಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:27/04/2021 ರಂದು ಸಂಜೆ 6-00 ಗಂಟೆಯ ಸಮಯಯಲ್ಲಿ  ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-138 ವಾಹನದಲ್ಲಿ ಚಿಂತಾಮಣಿ ನಗರದಲ್ಲಿ ನಾನು ಮತ್ತು ನನ್ನೊಂದಿಗೆ ಠಾಣೆಯ ಶ್ರೀ. ಸೋಮಶೇಖರಾಚಾರಿ, ಸಿ.ಹೆಚ್.ಸಿ-245,.ಸರ್ವೇಶ್ ಸಿಪಿಸಿ-426, ಪವನ್ ಕುಮಾರ್ ಪಿಸಿ 194 ಹಾಗೂ ಚೌಡಪ್ಪ ಎಪಿಸಿ-64 ರವರು ನಗರದ ಬೆಂಗಳೂರು ವೃತ್ತ,  ಬಂಬೂ ಬಜಾರ್ ಚೇಳೂರು ರಸ್ತೆ, ಮುಂತಾದ ಕಡೆ ಗಸ್ತು ಮಾಡುತ್ತಿದ್ದಾಗ ನಗರದ  ಎಪಿ.ಎಂ.ಸಿ ಮಾರುಕಟ್ಟೆಯ ಬಳಿ ಯ ಊಲವಾಡಿ ರಸ್ತೆ ಯಲ್ಲಿ ಎ.ಪಿ 39 ವಿ-9680 ಬುಲೇರೋ ವಾಹನದಲ್ಲಿ ಯಾವುದೇ  ಪರವಾನಗಿಯಿಲ್ಲದೇ ಅಕ್ರಮವಾಗಿ ಮದ್ಯವನ್ನುಸಾಗಣಿಕೆ ಮಾಡಿಕೊಂಡು ಹೋಗುತ್ತಿರುವುದಾಗಿ ಬಂದ ಖಚಿತ ಮಾಹಿತಿ ಬಂದಿದ್ದುಅದರಂತೆ ದಾಳಿ ಮಾಡಲು ಚೇಳೂರು ವೃತ್ತದಿಂದ ಪಂಚರನ್ನು ಬರಮಾಡಿಕೊಂಡು ಈ ಮೇಲ್ಕಂಡ ಸ್ಥಳಕ್ಕೆ ಹೋಗಿ ಎ.ಪಿ-39 ವಿ-9680 ವಾಹನವನ್ನು ನಿಲ್ಲಿಸಲಾಗಿ  ಸದರಿ ಚಾಲಕ ಓಡಿ ಹೋಗಿದ್ದು, ನಂತರ ನಾವು ಪಂಚರ ಸಮಕ್ಷಮ ವಾಹನವನ್ನು ಪರಿಶೀಲಿಸಲಾಗಿ ಸದರಿ ವಾಹನದಲ್ಲಿ ನಾಲ್ಕು ಪ್ಲಾಸ್ಟಿಕ್ ಚೀಲಗಳಿದ್ದು ಪ್ಯಾಕ್ ಮಾಡಿದ್ದು ಬಿಚ್ಚಿ ನೋಡಲಾಗಿ ಎಲ್ಲಾ ಪ್ಲಾಸ್ಟಿಕ್ ಚೀಲಗಳಲ್ಲಿ   180 ML ನ  HAYWARDS CHEERS WHISKEY ನ 05  ರಟ್ಟಿನ ಬಾಕ್ಸ್ ಗಳಿದ್ದು  ತಲಾ 01 ರೆಟ್ಟಿನ ಬಾಕ್ಸನಲ್ಲಿ 48 ಟೆಟ್ರಾ ಪ್ಯಾಕೇಟ್ ಗಳಂತೆ 05 ರೆಟ್ಟಿನ ಬಾಕ್ಸ್  ಗಳಲ್ಲಿ ಒಟ್ಟು 240 ಟೆಟ್ರಾ ಪ್ಯಾಕೆಟ್ ಗಳು ಇರುತ್ತವೆ. ಹಾಗೂ 90 ML ನ  HAYWARDS  CHEERS WHISKEY ನ  10  ರಟ್ಟಿನ ಬಾಕ್ಸ್ ಗಳಿದ್ದು ಒಂದು ರೆಟ್ಟಿನ ಬಾಕ್ಸ್ ಗಳಲ್ಲಿ ತಲಾ 96  ಟೆಟ್ರಾ ಪ್ಯಾಕೇಟ್ ಗಳಂತೆ 10 ರೆಟ್ಟಿನ ಬಾಕ್ಸ್ ಗಳಲ್ಲಿ ಒಟ್ಟು 960 ಟೆಟ್ರಾ ಪ್ಯಾಕೆಟ್ ಗಳಿದ್ದು ಎಲ್ಲಾ ಟೆಟ್ರಾ ಪಾಕೇಟ್ ಗಳಲ್ಲಿ   ಒಟ್ಟು 129 ಲೀಟರ್ 600 ಎಂ.ಎಲ್ ಮಧ್ಯವಿದ್ದು ಇವುಗಳ ಒಟ್ಟು ಬೆಲೆ 50,587.2 /- ರೂ ಗಳಾಗಿರುತ್ತೆ. ಓಡಿ ಹೋದ ಅಸಾಮಿಯ ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ. ನಂತರ ಸಂಜೆ 6-15 ಗಂಟೆಯಿಂದ 7-00 ಗಂಟೆವರೆಗೆ ಪಂಚರ ಸಮಕ್ಷಮ  ಪಂಚನಾಮೆಯನ್ನು ಜರುಗಿಸಿ ಸದರಿ ಮದ್ಯದ  ಟೆಟ್ರಾ ಪ್ಯಾಕೆಟ್ ಗಳನ್ನು  ಹಾಗೂ ಎ.ಪಿ-39 ವಿ-9680  ಬುಲೇರೋ ವಾಹನವನ್ನು ಅಮಾನತ್ತು ಪಡಿಸಿಕೊಂಡು ಎಫ್.ಎಸ್.ಎಲ್ ತಜ್ಞರ ಪರೀಕ್ಷೆಗೆ ಕಳುಹಿಸುವ ಸಲುವಾಗಿ ಮೇಲ್ಕಂಡ ಟೆಟ್ರಾ  ಮಧ್ಯದ ಪಾಕೇಟಗಳ ಪೈಕಿ 180 ML ನ  HAYWARDS  CHEERS WHISKEY ನ ಒಂದು ಟೆಟ್ರಾ ಪ್ಯಾಕೆಟ್ ನ್ನು ಹಾಗೂ 90 ML ನ  HAYWARDS  CHEERS WHISKEY ಒಂದು ಟೆಟ್ರಾ ಪ್ಯಾಕೇಟ್ ನ್ನು ಮಾದರಿಗಾಗಿ ತೆಗೆದಿರುತ್ತೆ. ನಂತರ ಅಮಾನತ್ತುಪಡಿಸಿಕೊಂಡ ಮಾಲು,ವಾಹನ ಮತ್ತು ಪಂಚನಾಮೆಯೊಂದಿಗೆ  ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.98/2021 ಕಲಂ. 4,5 (1),5(4) THE KARNATAKA EPIDEMIC DISEASES ACT, 2020 & 87   ಕೆ.ಪಿ ಆಕ್ಟ್:-

          ದಿನಾಂಕ 27/04/2021  ರಂದು 16-45 ಗಂಟೆಗೆ  ಮಾನ್ಯ ಪಿ.ಎಸ್.ಐ , ಶ್ರೀ. ಮೋಹನ್ , ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ  ಮಾಲು, ಆರೋಪಿಗಳು, ಪಂಚನಾಮೆಯೊಂದಿಗೆ  ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿದಾರರು ಮತ್ತು ಸಿಬ್ಬಂದಿಯಾದ ಪಿಸಿ-520, ಶ್ರೀನಾಥ, ಪಿಸಿ-518, ಆನಂದ, ಪಿಸಿ-208, ತಿಪ್ಪೇಸ್ವಾಮಿ, ಪಿಸಿ-246, ಸಿಕಂದರ್ ಮುಲ್ಲಾ,ರವರುಗಳು  ಇಲಾಖೆ ಜೀಪ್ ಸಂಖ್ಯೆ ಕೆಎ-40-ಜಿ-538 ರಲ್ಲಿ ಜೀಪ್ ಚಾಲಕ ಎಪಿಸಿ-143, ಮಹೇಶರವರೊಂದಿಗೆ ಕರೋನಾ ಪ್ರಯುಕ್ತ ಜಾರಿ ಮಾಡಿರುವ ನಿಯಮಗಳ ಪಾಲನೆ ಬಗ್ಗೆ ಗಸ್ತಿನಲ್ಲಿದ್ದಾಗ ಮದ್ಯಾನ್ಹ ಸುಮಾರು  2-30 ಗಂಟೆಯಲ್ಲಿ ರಮಾಪುರ- ಬಳಿ ಬಂದಾಗ  ಕುದುರೆಬ್ಯಾಲ್ಯ ಗ್ರಾಮದ ಕೆರೆಯ ಅಂಗಳದಲ್ಲಿ ಕರೋನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಜಾರಿಮಾಡಿರುವ ನಿಯಮಗಳನ್ನು ಉಲ್ಲಂಘನೆ ಮಾಡಿ, ಸುಮಾರು 4-6 ಜನರು ಅಂಧರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಾತ್ಮೀದಾರರಿಂದ ಬಂದ ಮಾಹಿತಿಯಂತೆ ಕುದುರೆಬ್ಯಾಲ್ಯಗ್ರಾಮದಲ್ಲಿ ಇದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು, ಅವರಿಗೆ  ಮಾಹಿತಿ ತಿಳಿಸಿ, ನಂತರ ಪಿರ್ಯಾದಿದಾರರು, ಸಿಬ್ಬಂದಿಯವರು ಮತ್ತು ಪಂಚಾಯ್ತಿದಾರರು ಕುದುರೆಬ್ಯಾಲ್ಯಗ್ರಾಮಕ್ಕೆ ಹೋಗಿ,  ಅಲ್ಲಿ ಹೊರ ವಲಯದಲ್ಲಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿ, ಬಂದ ಬಾತ್ಮೀಯಂತೆ  ಕುದುರೆಬ್ಯಾಲ್ಯ ಗ್ರಾಮದ ಕೆರೆಯ  ಅಂಗಳದ ಬಳಿ ನಿಂತು ನೋಡಲಾಗಿ, ಸರ್ಕಾರವು ಕರೋನಾ ಸೋಕು ಹರಡುವುದನ್ನು ನಿಯಂತ್ರಿಸಲು ನಿಯಮಾವಳಿಗಳನ್ನು ಜಾರಿ ಮಾಡಿದ್ದರು, ಸದರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ, ಸೊಂಕು ಹರಡುವುದಕ್ಕೆ ಅವಕಾಶ ಮಾಡಿಕೊಟ್ಟು, ಎಲ್ಲರೂ  ಕೆರೆಯ ಅಂಗಳದಲ್ಲಿ ವೃತ್ತಾಕಾರದಲ್ಲಿ ಕುಳಿತುಕೊಂಡು ಹಣವನ್ನು  ಪಣಕ್ಕೆ ಹಾಕಿ ಅಂಧರ್-ಬಾಹರ್ ಇಸ್ಫೀಟ್ ಜೂಜಾಟ  ಆಡುತ್ತಿದ್ದವರ ಮೇಲೆ  ಧಾಳಿ ಮಾಡಿದ್ದು, ಸ್ಥಳದಲ್ಲಿ ಇಬ್ಬರು ಆಸಾಮಿಗಳು ಪರಾರಿಯಾಗಿದ್ದು, 4 ಜನ ಆಸಾಮಿಗಳು ಸಿಕ್ಕಿದ್ದು, ಪರಾರಿಯಾದವರ ಹೆಸರು ವಿಳಾಸವನ್ನು ಸಿಕ್ಕಿದ್ದವರಲ್ಲಿ ವಿಚಾರ ಮಾಡಲಾಗಿ1) ರಾಜಶೇಖರ, ಕುದುರೆಬ್ಯಾಲ್ಯ  ಗ್ರಾಮ, ಗೌರಿಬಿದನೂರು ತಾಲ್ಲೂಕು 2) ರವಿಕುಮಾರ್ ಬಿನ್ ಅಶ್ವತ್ಥಪ್ಪ, ಭೀಮನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಅಂತ ತಿಳಿಸಿರುತ್ತಾರೆ. ನಂತರ ಸಿಕ್ಕಿದ್ದವರ ಹೆಸರು ವಿಳಾಸ ಕೇಳಲಾಗಿ 3)ಕೆ.ಟಿ.ಗಂಗಾಧರ ಬಿನ್ ಲೇಟ್ ತಿಪ್ಪಣ್ಣ, 52 ವರ್ಷ,  ಒಕ್ಕಲಿಗರು, ತೆಂಗಿನ ಕಾಯಿ ವ್ಯಾಪಾರ, ವಾಸ- ಕಡಗತ್ತೂರು ಗ್ರಾಮ, ಕೊಡಿಗೇನಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ, 4) ಕೆ.ಎಸ್. ಶಿವಕುಮಾರ್ ಬಿನ್ ಸೋಮಶೇಖರ, 28 ವರ್ಷ, ನಾಯಕರು , ಖಾಸಗಿ ಕಂಪನಿಯಲ್ಲಿ ಕೆಲಸ, ಕುದುರಬ್ಯಾಲ್ಯ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು, 5) ಎನ್. ತಿಮ್ಮಾರೆಡ್ಡಿ ಬಿನ್ ನಂಜುಂಡಪ್ಪ, 40 ವರ್ಷ,  ಒಕ್ಕಲಿಗರು,  ಜಿರಾಯ್ತಿ, ಭೀಮನಹಳ್ಳಿ ಗ್ರಾಮ,  ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು, 6) ಡಿ.ನಾಗರಾಜ ಬಿನ್  ಲೇಟ್ ದೊಡ್ಡಮುತ್ತುರಾಯಪ್ಪ, 41 ವರ್ಷ,  ಕುರುಬರು, ಗಾರ್ಮೆಂಟ್ಸ್ ನಲ್ಲಿ ಕೆಲಸ,  ಬೊಮ್ಮಶೆಟ್ಟಿಹಳ್ಳಿ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು ಅಂತ ತಿಳಿಸಿರುತ್ತಾರೆ. ಜೂಜಾಟ ಸ್ಥಳದಲ್ಲಿ ಆರೋಪಿತರು ಪಣಕ್ಕೆ ಹಾಕಿದ್ದ 16330-00 ರೂ ನಗದು ಹಣ, 52 ಇಸ್ಪೀಟ್  ಎಲೆಗಳು,  ಕೆರೆಯ ಅಂಗಳದಲ್ಲಿ ನೆಲದ ಮೇಲೆ ಹಾಸಿ ಇಸ್ಫೀಟ್ ಜೂಜಾಟಕ್ಕೆ ಉಪಯೋಗಿಸಿದ್ದ ಒಂದು ನ್ಯೂಸ್ ಪೇಪರ್  ಅನ್ನು  ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದು, ಪಂಚನಾಮೆ ಕ್ರಮ ಜರುಗಿಸಿ, ಆರೋಪಿತರು ಕರೋನಾ ಸೊಂಕು ಹರಡುವುದಕ್ಕೆ ಅವಕಾಶ ಮಾಡಿಕೊಟ್ಟು  ಸರ್ಕಾರದ ನಿಯಮ  ಉಲ್ಲಂಘನೆ  ಮಾಡಿ ಅಂದರ್ ಬಾಹರ್ ಇಸ್ಪೀಟು ಜೂಜಾಟ  ಆಡುತ್ತಿದ್ದವರನ್ನು , ಮಾಲು ಮತ್ತು ಪಂಚನಾಮೆ  ಸಮೇತ ದೂರು ನೀಡಿದ್ದು ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

12. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.99/2021 ಕಲಂ. 307,324,504,34 ಐ.ಪಿ.ಸಿ:-

          ದಿನಾಂಕ:27/04/2021 ರಂದು ಸಂಜೆ 5-15 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ಮೇಮೊವನ್ನು ಪಡೆದು 5-30 ಗಂಟೆಗೆ ಆಸ್ಪತ್ರೆಗೆ ಬೇಟಿನೀಡಿ ಗಾಯಾಳು ಅಂಜಿನಪ್ಪ ಬಿನ್ ಕೊಂಡಪ್ಪ, 36 ವರ್ಷ, ನಾಯಕರು, ದ್ರೈವರ ಕೆಲಸ, ಹುದುಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕ ರವರ ಹೇಳಿಕೆಯ ಸಾರಾಂಶವೇನೆಂದರೆ ತಾನು ಪ್ರತಿ ದಿನದಂತೆ ಕ್ಯಾಂಟರ್ ಡ್ರೈವಿಂಗ ಕೆಲಸಕ್ಕೆ ಹೋಗಿ ಬಂದು ದಿನಾಂಕ 27/04/2021 ರಂದು ಮದ್ಯಾನ 12-00 ಗಂಟೆಗೆ ಮನೆಗೆ ಬಂದೆ ಆಗ ನಮ್ಮ ಗ್ರಾಮದ ಶಿವಪ್ಪ ಬಿನ್ ನಾರಾಯಣಪ್ಪ ಎಂಬುವವರು ಮದ್ಯ ಸೇವನೆ ಮಾಡೊನ ಬಾ ಎಂದು ಕರೆದರು ನಾನು ನನ್ನ ಬಳಿ ಹಣವಿಲ್ಲವೇಂದು ಹೇಳಿ ಮನೆಯಲ್ಲಿ ಊಟಮಾಡಿ ಮಲಗಿಕೊಂಡೆ, ಮದ್ಯಾನ ಸೂಮಾರು 2-00 ಗಂಟೆಗೆ ಶಿವಪ್ಪ ಬಿನ್ ಲೇಟ್ ಗಂಗಪ್ಪ ಎಂಬುವವರು ನನ್ನನ್ನು ಮನೆಯಿಂದ ಎಬ್ಬಿಸಿ ಶಿವಪ್ಪ ಬಿನ್ ನಾರಾಯಣಪ್ಪ ರವರು ಕರೆಯುತ್ತಿರುತ್ತಾರೆ ಎಂದು ನಮ್ಮ ಗ್ರಾಮದ ಬಸ್ಸ ನಿಲ್ದಾಣಕ್ಕೆ ಕರೆದುಕೊಂಡು ಹೋದರು ಅಲ್ಲಿದ್ದ ಶಿವಪ್ಪ ಬಿನ್ ನಾರಾಯಣಪ್ಪ ರವರು ನಿನು ಕ್ಯಾಂಟರ್ ಡ್ರೈವರ್ ಕೇಲಸಕ್ಕೆ ಹೊಗುತ್ತಿಯಾ ನಾನು ಕುಡಿಯಲು ಹಣ ಕೆಳಿದರೆ ಇಲ್ಲವೇಂದು ಹೇಳುತ್ತಿಯ ಲೋಫರ್ ನನ್ನ ಮಗನೆ ಎಂದು ನಿನ್ನನ್ನು ಈ ದಿನ ಮುಗಿಸಿಬಿಡುತ್ತೆನೆಂದು ಕೋಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಬ್ಲೇಡ ನಿಂದ ನನ್ನ ಎಡ ಕುತ್ತಿಗೆ ಮತ್ತು ಎಡ ಕೆನ್ನೆಗೆ ಬ್ಲೇಡನಿಂದ ಹಾಕಿ ರಕ್ತ ಗಾಯ ಪಡಿಸಿರುತ್ತಾನೆ, ಅಲ್ಲಿಯೆ ಇದ್ದ ಸಾರ್ವಜನಿಕರು ತಮ್ಮನ್ನು ಬಿಡಿಸಿದರು ತಾನುಮನೆಯ ಬಳಿ ಹೊದೆ ತನಗೆ ರಕ್ತ ಬರುವದನ್ನು ನೋಡಿದ ತನ್ನ ಹೆಂಡತಿ ಉಮಾದೇವಿ ಯಾವು ಒಂದು ಆಟೋದಲ್ಲಿ ತನ್ನನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿರುತ್ತಾರೆ, ತನ್ನನ್ನು ಅವಾಚ್ಯಶಬ್ದಗಳಿಂದ ಬೈದು ಬ್ಲೇಡ ನಿಂದ ಗಾಯ ಪಡಿಸಿರುವ ಶಿವಪ್ಪ ಬಿನ್ ನಾರಾಯಣಪ್ಪ ಮತ್ತು ತಾನು ಮನೆಯಲ್ಲಿ ಮಲಗಿದ್ದರೆ ಬಲವಂತದಿಂದ ಎಬ್ಬಿಸಿಕೊಂಡು ಉದ್ದೇಶ ಪೂರ್ವಕವಾಗಿ ತನ್ನನ್ನು ಕರೆದುಕೊಂಡು ಹೊದ ಶಿವಪ್ಪ ಬಿನ್ ಗಂಗಪ್ಪ ರವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೆಕೆಂದು ಕೋರಿ ನೀಡಿದ ದೂರು.

 

13. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.100/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 12-03-2021 ರಂದು 00-15 ಗಂಟೆಗೆ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಎನ್,ಮೋಹನ್ ಪಿ.ಎಸ್.ಐ. ರವರು ಠಾಣೆಗೆ ಹಾಜರಾಗಿ 7 ಜನ ಆಸಾಮಿಗಳು, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 11-03-2021 ರಂದು ರಾತ್ರಿ 22-00 ಗಂಟೆಯಲ್ಲಿ ತಾನು ವಿಧುರಾಶ್ವಥ ಹೊರಠಾಣೆಯ ವ್ಯಾಪ್ತಿಯಲ್ಲಿ ಹೆಚ್.ಸಿ. 10 ಶ್ರೀರಾಮಯ್ಯ, ಪಿ.ಸಿ. 179, ಶಿವಶೇಖರ್, ಪಿ.ಸಿ. 512 ರಾಜಶೇಖರ, ಪಿ.ಸಿ. 302 ಕುಮಾರ ನಾಯ್ಕ ಮತ್ತು ಪಿ.ಸಿ. 381 ಜಗದೀಶರವರೊಂದಿಗೆ ಕೆ.ಎ.40-ಜಿ-538 ಸರ್ಕಾರಿ ವಾಹನದಲ್ಲಿ ಪೆಟ್ರೋಲಿಂಗ್ ಅನ್ನು ಮಾಡುತ್ತಿದ್ದಾಗ ಗೌರಿಬಿದನೂರು ತಾಲ್ಲೂಕು ವಿಧುರಾಶ್ವಥ ಗ್ರಾಮದಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಆಸಾಮಿಗಳು ಹಣವನ್ನು ಆಟೋ ಮತ್ತು ಮೊಬೈಲ್ ಗಳನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಅಂದರ್ ಬಾಹರ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ವರ್ತಮಾನದ ಮೇರೆಗೆ ಪಂಚರನ್ನು ಬರಮಾಡಿಕೊಂಡು ಪಂಚರು ಮತ್ತು ಸಿಬ್ಬಂದಿಯಾದ ಹೆಚ್.ಸಿ. 10 ಶ್ರೀರಾಮಯ್ಯ, ಪಿ.ಸಿ. 179, ಶಿವಶೇಖರ್, ಪಿ.ಸಿ. 512 ರಾಜಶೇಖರ, ಪಿ.ಸಿ. 302 ಕುಮಾರ ನಾಯ್ಕ, ಪಿ.ಸಿ.06 ನರಸಿಂಹ ಮೂರ್ತಿ, ಮತ್ತು ಪಿ.ಸಿ. 381 ಜಗದೀಶರವರೊಂದಿಗೆ ಕೆ.ಎ.40-ಜಿ-538 ಸರ್ಕಾರಿ ವಾಹನದಲ್ಲಿ ಗೌರಿಬಿದನೂರು ತಾಲ್ಲೂಕು ವಿಧುರಾಶ್ವಥ ಗ್ರಾಮದಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಹೋಗಿ ವಾಹನವನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಗೌರಿಬಿದನೂರು ಗೌರಿಬಿದನೂರು ತಾಲ್ಲೂಕು ವಿಧುರಾಶ್ವಥ ಗ್ರಾಮದಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ ಬಳಿ ಸಾರ್ವಜನಿಕ ರಸ್ತೆಯಲ್ಲಿ 7 ಜನ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 500 ರೂ ಬಾಹರ್ ಗೆ 500 ರೂ ಎಂದು ಕೂಗುತ್ತಿದ್ದು ಸದರಿ ಆಸಾಮಿಗಳು ಅಕ್ರಮ ಅಂದರ್-ಬಾಹರ್ ಜೂಜಾಟವನ್ನು ಆಡುತ್ತಿರುವುದು ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಒಬ್ಬೊಬ್ಬರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1)ನಾರಾಯಣಪ್ಪ ಬಿನ್ ಕಮ್ಮಣ್ನ, 45 ವರ್ಷ, ನಾಯಕರು, ಆಟೋ ಚಾಲಕ, ವಾಸ ವಿಧುರಾ ಕಾಲೋನಿ, ವಿಧುರಾಶ್ವಥ, ಗ್ರಾಮ, ಗೌರಿಬಿದನೂರು ತಾಲ್ಲೂಕು , 2) ಅಶೋಕ ಬಿನ್ ಚೌಡಪ್ಪ, 26 ವರ್ಷ, ನಾಯಕರು, ಲಾರಿ ಚಾಲಕ, ವಾಸ ವಿಧುರಾ ಕಾಲೋನಿ, ವಿಧುರಾಶ್ವಥ, ಗ್ರಾಮ, ಗೌರಿಬಿದನೂರು ತಾಲ್ಲೂಕು, 3)ಗುರುರಾಜ್ ಬಿನ್ ಲೇಟ್ ರಾಘವೇಂದ್ರ ರಾವ್, 50 ವರ್ಷ, ಬ್ರಾಹ್ಮಣರು, ಪುರೊಹಿತ, ವಾಸ ವಿಧುರಾ ಕಾಲೋನಿ, ವಿಧುರಾಶ್ವಥ, ಗ್ರಾಮ, ಗೌರಿಬಿದನೂರು ತಾಲ್ಲೂಕು , 4) ಗಣೇಶ ಬಿನ್ ರಾಮಾಂಜಿನಪ್ಪ, 22 ವರ್ಷ, ನಾಯಕರು, ಕ್ಯಾಂಟರ್ ಚಾಲಕ, ವಾಸ ವಿಧುರಾ ಕಾಲೋನಿ, ವಿಧುರಾಶ್ವಥ, ಗ್ರಾಮ, ಗೌರಿಬಿದನೂರು ತಾಲ್ಲೂಕು , 5)ಬಾಬು ಬಿನ್ ಗಂಗಾಧರಪ್ಪ, 24 ವರ್ಷ, ನಾಯಕರು, ಕಬಾಬ್ ವ್ಯಾಪಾರ, ವಾಸ ವಿಧುರಾ ಕಾಲೋನಿ, ವಿಧುರಾಶ್ವಥ, ಗ್ರಾಮ, ಗೌರಿಬಿದನೂರು ತಾಲ್ಲೂಕು , 6)ಸೂರ್ಯ ಪ್ರಕಾಶ್ ಬಿನ್ ಕಮ್ಮಣ್ನ, 25 ವರ್ಷ, ನಾಯಕರು, ಆಟೋ ಚಾಲಕ, ವಾಸ ವಿಧುರಾ ಕಾಲೋನಿ, ವಿಧುರಾಶ್ವಥ, ಗ್ರಾಮ, ಗೌರಿಬಿದನೂರು ತಾಲ್ಲೂಕು , 7)ಅಶೋಕ್ ಬಿನ್ ಪಾಪಣ್ಣ, 28 ವರ್ಷ, ಕುಂಭಾರ, ಆಟೋ ಚಾಲಕ, ವಾಸ ವಿಧುರಾ ಕಾಲೋನಿ, ವಿಧುರಾಶ್ವಥ, ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದರು. ನೆಲದ ಮೇಲೆ ನೋಡಲಾಗಿ ಇಸ್ಪೀಟ್ ಎಲೆಗಳು ಬಿದ್ದಿದ್ದು ಎಣಿಸಲಾಗಿ 52 ಇಸ್ಪೀಟ್ ಎಲೆಗಳಿರುತ್ತೆ. ಆಸಾಮಿಗಳು ಪಣಕ್ಕೀಟ್ಟಿದ್ದ ನಗದು ಹಣವನ್ನು ಎಣಿಸಲಾಗಿ 13,710/- ರೂ.ನಗದು ಹಣ ಇರುತ್ತೆ. 7 ಜನ ಆಸಾಮಿಗಳನ್ನುವಶಕ್ಕೆ ಪಡೆದುಕೊಂಡಿದ್ದು ಆಸಾಮಿಗಳು ಅಂದರ್ ಬಾಹರ್ ಜೂಜಾಟವನ್ನು ಆಡಲು ಪಣಕ್ಕಿಟ್ಟಿದ್ದ 1), 13,710/- ರೂ.ನಗದು ಹಣ , 2) 52 ಇಸ್ಪೀಟ್ ಎಲೆಗಳು, 3) ಒಂದು ನ್ಯೂಸ್ ಪೇಪರ್ ಅನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಪಂಚನಾಮೆಯನ್ನು 22-30 ಗಂಟೆಯಿಂದ 23-30 ಗಂಟೆಯವರೆಗೆ ಜರುಗಿಸಿದ್ದು ಆಸಾಮಿಗಳು, ಮಾಲು ಮತ್ತು ಪಂಚನಾಮೆಯೊಂದಿಗೆ ದಿನಾಂಕ 12-03-2021 ರಂದು 00-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು 7 ಜನ ಆರೋಪಿಗಳು, ಪಂಚನಾಮೆ ಮತ್ತು ಮಾಲನ್ನು ಸಹ ನೀಡುತ್ತಿದ್ದು, ಆಸಾಮಿಗಳ ವಿರುದ್ದ ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಎನ್.ಸಿ,ಆರ್. ನಂ. 132/2021 ರಂತೆ ನೊಂದಾಯಿಸಿಕೊಂಡಿರುತ್ತೆ.

 

14. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.81/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:27.04.2021 ರಂದು ಪಿರ್ಯಾದಿದಾರರಾದ ಶ್ರೀ ಆನಂದ ಪಿ.ಆರ್ ಬಿನ್ ರಾಮಪ್ಪ, 33 ವರ್ಷ, ಪ.ಜಾತಿ, ಜಿರಾಯ್ತಿ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:18/04/2021 ರಂದು ಸುಮಾರು ಸಂಜೆ 18.30 ಗಂಟೆಯಲ್ಲಿ ತನ್ನ ಅಣ್ಣನಾದ ಗೋಪಿನಾಥ ಪಿ.ಆರ್ ಬಿನ್ ರಾಮಪ್ಪ ರವರು ತನ್ನ ಬಾಬತ್ತು ಕೆಎ-40-ಇಬಿ-4299 ದ್ವಿ ಚಕ್ರ ವಾಹನದಲ್ಲಿ ಮಂಚೇನಹಳ್ಳಿ ಇಂದ ನಮ್ಮ ಊರಿಗೆ ಅಂದರೆ ಪೆದ್ದರೆಡ್ಡಿನಾಗೇನಹಳ್ಳಿಗೆ ಬರುತ್ತಿದ್ದಾಗ ಬಂಡಿರಾಮನಹಳ್ಳಿ ಹತ್ತಿರ   ಎದುರು ಗಡೆಯಿಂದ ಬಂದ ಕೆಎ-02-ಎಸ್-7214 ಬಜಾಜ್ ಚೇತಕ್ ವಾಹನದ ಸವಾರನಾದ ಬಂಡಿರಾಮನಹಳ್ಳಿ ಗ್ರಾಮದ ವಾಸಿ ಲೋಕೇಶ ಬಿನ್ ಪುಟ್ಟಪ್ಪಯ್ಯ  ಎಂಬುವರು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಲಿಸಿಕೊಂಡು ಬಂದು ಏಕಾಏಕಿ ಡಿಕ್ಕಿ ಹೊಡೆದ ಪರಿಣಾಮ ಪ್ರಜ್ಞೆ ತಪ್ಪಿ ಬಿದ್ದು ಹೋಗಿದ್ದು ಅಷ್ಟರಲ್ಲಿ ನನಗೆ ವಿಚಾರ ಗೊತ್ತಾಗಿ ಸ್ಥಳಕ್ಕೆ ಬಂದು ನೋಡಿದರೆ ಕಾಲಿಗೆ  ಪೆಟ್ಟು ಬಿದ್ದು ಬಲಗಾಲಿನ ಮೂಳೆ ಮುರಿದು  ತಲೆಗೆ ಸಹ ಪೆಟ್ಟಾಗಿದ್ದು  ಕಂಡು ಬಂದಿದ್ದ ಕಾರಣ ನಾನು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುತ್ತೇನೆ. ಈ ವಿಚಾರವಾಗಿ ನ್ಯಾಯ ಪಂಚಾಯ್ತಿ ಮಾಡುತ್ತೇವೆ ಎಂದು ಸ್ಥಳೀಯ ಮುಖಂಡರು ಒಪ್ಪಿಕೊಂಡರು ಆದರೆ ಇದುವರೆಗೂ ನ್ಯಾಯ ಮಾಡದಿದ್ದ ಕಾರಣ ತಡವಾಗಿ ದೂರು ನೀಡುತ್ತಿದ್ದೇನೆ. ಆದ್ದರಿಂದ ಅಪಘಾತ ಪಡಿಸಿದ ಲೋಕೇಶ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

15. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.32/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:27-04-2021 ರಂದು ಮಧ್ಯಾಹ್ನ 3-30 ಗಂಟೆಗೆ ಪಿ.ಎಸ್.ಐ ಶ್ರೀ ಎನ್.ರತ್ನಯ್ಯರವರು ಮಾಲು, ಪಂಚನಾಮೆ ಹಾಗೂ ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:27-04-2021 ರಂದು ಮದ್ಯಾಹ್ನ ತಾನು ಹಾಗೂ ಸಿಬ್ಬಂದಿಯವರಾದ ಸಿಪಿಸಿ-148 ಧನಂಜಯ, ಸಿಪಿಸಿ-234 ಸುರೇಶ ವೈ.ಕೊಂಡಗೂಳಿ, ಹಾಗೂ ಚಾಲಕ ಎ.ಹೆಚ್.ಸಿ-21 ಸತ್ಯಾನಾಯ್ಕ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-59 ರಲ್ಲಿ ಜೂಲಪಾಳ್ಯ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ವಾಸಪ್ಪರಾಳ್ಳಪಲ್ಲಿ ಗ್ರಾಮದ ಚಿಕ್ಕನಾರಾಯಣಸ್ವಾಮಿ ಬಿನ್ ರಂಗಪ್ಪ ಎಂಬುವವರು ತಮ್ಮ ಮನೆಯ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ತನಗೆ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಮೇಲ್ಕಂಡ ಸಿಬ್ಬಂದಿ ಹಾಗೂ ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಜೀಪನ್ನು ನಿಲ್ಲಿಸುತ್ತಿದ್ದಂತೆ ಜೀಪನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಮನೆಯ ಮಾಲೀಕರ ಹೆಸರು ಮತ್ತು ವಿಳಾಸ ಕೇಳಲಾಗಿ ಚಿಕ್ಕನಾರಾಯಣಸ್ವಾಮಿ ಬಿನ್ ರಂಗಪ್ಪ, 35 ವರ್ಷ, ಭೋವಿ ಜನಾಂಗ, ವ್ಯಾಪಾರ, ವಾಸಪ್ಪರಾಳ್ಳಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್.ನ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ 15 ಟೆಟ್ರಾ ಪ್ಯಾಕೆಟ್ ಗಳು ಇದ್ದು, (1 ಲೀಟರ್ 350 ಎಂ.ಎಲ್, ಅದರ ಬೆಲೆ 525/-ರೂಗಳು), ಒಂದು ಲೀಟರ್ ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್,  1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90 ಎಂ.ಎಲ್ ನ ಒಂದು ಖಾಲಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೇಟ್ ಇದ್ದು, ಸದರಿ ಆಸಾಮಿ ಚಿಕ್ಕನಾರಾಯಣಸ್ವಾಮಿ ರವರನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಿಗೆ ಪಡೆದಿರುವ ಬಗ್ಗೆ ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾನೆ. ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಮದ್ಯಾಹ್ನ 2-00 ಗಂಟೆಯಿಂದ 3-00 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ, ಆರೋಪಿ, ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

16. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.126/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 27/04/2021 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಪಿಸಿ 543 ಸುಧಾಕರ್ ರವರು ಮಾಲು ಮತ್ತು ಆರೋಪಿಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 27-04-2021 ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಸಂಗ್ರಹಣೆಯ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ತಾನು ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 7-15 ಗಂಟೆ ಸಮಯದಲ್ಲಿ ಚೀಮನಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಸದರಿ ಗ್ರಾಮದ ವಾಸಿ ದ್ವಾವಪ್ಪ ಬಿನ್ ವೆಂಕಟಪ್ಪ ಎಂಬುವನು ತನ್ನ ವಾಸದ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಅಲ್ಲಿಯೇ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುವು ಮಾಡಿಕೊಟ್ಟಿರುವುದಾಗಿ ಬಾತ್ಮಿ ಬಂದಿದ್ದು ನಂತರ ತಾನು ಮೇಲ್ಕಂಡ ಆಸಾಮಿಯ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಇಬ್ಬರು ಅಸಾಮಿಗಳು ಸಾರ್ವಜನಿಕ ಸ್ಥಳವಾದ ಮನೆಯ ಮುಂಭಾಗದ ರಸ್ತೆಯಲ್ಲಿ ಅಕ್ರಮವಾಗಿ ತಮ್ಮ ಬಳಿ ಒಂದೊಂದು ಮದ್ಯದ ಟೆಟ್ರಾ ಪಾಕೆಟ್ ಗಳಿರುವ ಕವರ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿರುವುದು ಖಚಿತವಾದ ಮೇಲೆ ಸದರಿ ಸ್ಥಳದ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಮದ್ಯವನ್ನು ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ನಂತರ ಸ್ಥಳದಲ್ಲಿದ್ದ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1) ದ್ವಾವಪ್ಪ ಬಿನ್ ವೆಂಕಟಪ್ಪ , 35 ವರ್ಷ, ಎ.ಕೆ ಜನಾಂಗ, ಕೂಲಿ ಕೆಲಸ, ವಾಸ-ಚೀಮನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು 2) ನಾರಾಯಣಸ್ವಾಮಿ ಬಿನ್ ವೆಂಕಟರಾಯಪ್ಪ, 35 ವರ್ಷ, ಎ.ಕೆ ಜನಾಂಗ, ಕೂಲಿ ಕೆಲಸ, ವಾಸ-ಚೀಮನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ನಂತರ ದ್ವಾವಪ್ಪ ರವರ ಬಳಿ ಇದ್ದ ಕವರ್ ಅನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಲಾಗಿ ಅದರಲ್ಲಿ 90 ಎಂ.ಎಲ್. ನ Original Choice Deluxe Whisky ಯ 10 ಟೆಟ್ರಾ ಪ್ಯಾಕೆಟ್ ಗಳಿದ್ದು, ಪ್ರತಿಯೊಂದು ಟೆಟ್ರಾ ಪಾಕೇಟ್ ನ ಮೇಲೆ 35.13 ರೂ ಎಂದು ಬೆಲೆ ನಮೂದಾಗಿದ್ದು ಇವುಗಳ ಒಟ್ಟು ಬೆಲೆ 353 ಆಗಿದ್ದು, ನಾರಾಯಣಸ್ವಾಮಿ ರವರ ಬಳಿ ಇದ್ದ ಕವರ್ ಅನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಲಾಗಿ ಅದರಲ್ಲೂ ಸಹ 90 ಎಂ.ಎಲ್. ನ Original Choice Deluxe Whisky ಯ 10 ಟೆಟ್ರಾ ಪ್ಯಾಕೆಟ್ ಗಳಿದ್ದು, ಪ್ರತಿಯೊಂದು ಟೆಟ್ರಾ ಪಾಕೇಟ್ ನ ಮೇಲೆ 35.13 ರೂ ಎಂದು ಬೆಲೆ ನಮೂದಾಗಿದ್ದು ಇವುಗಳ ಒಟ್ಟು ಬೆಲೆ 353 ಆಗಿದ್ದು, ಸ್ಥಳದಲ್ಲಿ 5 ಖಾಲಿ ಪ್ಲಾಸ್ಟಿಕ್ ಲೋಟಗಳು, 5 ಖಾಲಿ Original Choice Deluxe Whisky ಟೆಟ್ರಾ ಪ್ಯಾಕೇಟ್ ಗಳು ಮತ್ತು 5 ಖಾಲಿ ವಾಟರ್ ಪಾಕೇಟ್ ಗಳಿದ್ದು, ಸದರಿ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಕಾರಣ ಸದರಿ ಮಾಲನ್ನು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮದ ಬಗ್ಗೆ ತಮ್ಮ ಮುಂದೆ ಹಾಜರು ಪಡಿಸುತ್ತಿದ್ದ ಮೇಲ್ಕಂಡ ಮಾಲನ್ನು ಮತ್ತು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೊಟ್ಟ ದೂರು.

 

17. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.127/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ:-28/04/2021 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎಂ.ಎನ್ ಮುನಿಕೃಷ್ಣಪ್ಪ ಬಿನ್ ಲೇಟ್ ನಾರಾಯಣಪ್ಪ, 44 ವರ್ಷ, ಪ ಜಾತಿ, ಕೂಲಿ ಕೆಲಸ, ವಾಸ-ಮಳ್ಳೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆಗೆ 2 ಜನ ಗಂಡು ಮತ್ತು 3 ಜನ ಹೆಣ್ಣು ಮಕ್ಕಳಿದ್ದು, ತಮಗೆಲ್ಲರಿಗೂ ಮದುವೆಯಾಗಿ ಬೇರೆ-ಬೇರೆಯಾಗಿ ವಾಸವಾಗಿದ್ದು, ತನ್ನ ತಮ್ಮನಾದ ಮುನಿನಾರಾಯಣ (36 ವರ್ಷ) ರವರಿಗೆ ಗಾಯಿತ್ರಿ ಮತ್ತು ಲಕ್ಷ್ಮಮ್ಮ ಎಂಬ ಇಬ್ಬರು ಹೆಂಡತಿಯರಿದ್ದು ತನ್ನ ತಮ್ಮ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತಾನೆ. ಹೀಗಿರುವಾಗ ದಿನಾಂಕ 27/04/2021 ರಂದು ಸಂಜೆ ತನ್ನ ತಮ್ಮನಾದ ಮುನಿನಾರಾಯಣ ರವರು ತನ್ನ ಸ್ವಂತ ಕೆಲಸದ ನಿಮಿತ್ತವಾಗಿ ತಮ್ಮ ಗ್ರಾಮದಿಂದ ತನ್ನ ಬಾಬತ್ತು ಕೆಎ-40-ಕ್ಯೂ-3903 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ಗಂಗನಹಳ್ಳಿ ಗ್ರಾಮಕ್ಕೆ ಹೋಗಿ ತನ್ನ ಕೆಲಸವನ್ನು ಮುಗಿಸಿಕೊಂಡು ವಾಪಸ್ಸು ಮೇಲೂರು ಗ್ರಾಮದ ಮುಖಾಂತರವಾಗಿ ತಮ್ಮ ಗ್ರಾಮಕ್ಕೆ ಬರಲು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ಮೇಲೂರು ಗ್ರಾಮದ ಸಮೀಪ ತನ್ನ ದ್ವಿ ಚಕ್ರ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿರುವ ಹಂಪ್ಸ್ ನ ಮೇಲೆ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿದಾಗ ದ್ವಿ ಚಕ್ರ ವಾಹನವು ಆತನ ನಿಯಂತ್ರಣ ತಪ್ಪಿ ದ್ವಿ ಚಕ್ರ ವಾಹನದ ಸಮೇತವಾಗಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ನಂತರ ತನಗೆ ವಿಷಯ ತಿಳಿದು ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ತನ್ನ ತಮ್ಮನ ದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿರುವುದಿಲ್ಲ. ನಂತರ ತಾನು ತನ್ನ ತಮ್ಮನ ಶವವನ್ನು ಯಾವುದೋ ವಾಹನದಲ್ಲಿ ಸಾಗಿಸಿಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತೇನೆ. ಈ ವಿಷಯವನ್ನು ತಾನು ತನ್ನ ಸಮುದಾಯದ ಮುಖಂಡರುಗಳಿಗೆ, ತಮ್ಮ ಸಂಬಂಧಿಕರಿಗೆ ವಿಷಯ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ತಾವು ಸ್ಥಳಕ್ಕೆ ಬಂದು ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 28-04-2021 05:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080