ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.44/2021 ಕಲಂ.15(A),32(3) ಕೆ.ಪಿ.ಆಕ್ಟ್:-

     ದಿನಾಂಕ:27.03.2021 ರಂದು ಮದ್ಯಾಹ್ನ 13;10 ಗಂಟೆಗೆ ಪಿ.ಎಸ್.ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 27.03.2021 ರಂದು ಮದ್ಯಾಹ್ನ 13;00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ನಂದಿ ಹೋಬಳಿ ನಾಯನಹಳ್ಳಿ ಗ್ರಾಮದಲ್ಲಿ ರಾಜಪ್ಪ ಬಿನ್ ನಾರಾಯಣಪ್ಪ, 37 ವರ್ಷ, ಪರಿಶಿಷ್ಠ ಜಾತಿ, ಚಿಲ್ಲರೆ ಅಂಗಡಿ ವ್ಯಾಪಾರ ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆಂದು ಈ ಬಗ್ಗೆ  ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15[ಎ] , 32[3] ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.16/2021 ಕಲಂ.ಮನುಷ್ಯ ಕಾಣೆ:-

     ದಿನಾಂಕ; 27-03-2021 ರಂದು ಸಂಜೆ 6.30 ಗಂಟೆಗೆ ಪಿರ್ಯಾದಿಯಾದ ಶ್ರೀಮತಿ ರತ್ಮಮ್ಮ ಕೋಂ ಲಕ್ಷ್ಮಿನಾರಾಯಣ, 35 ವರ್ಷ, ಬಲಜಿಗರು, ಗೃಹಿಣಿ, ವಾಸ; ವಾರ್ಡ್ ನಂ: 31, ಮಂಜುನಾಥ ರವರ ಬಾಡಿಗೆ ಮನೆ, ಇಂದಿರಾ ನಗರ, ಚಿಕ್ಕಬಳ್ಳಾಪುರ ನಗರ. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಈಗ್ಗೆ ಸುಮಾರು 15 ವರ್ಷಗಳ ಹಿಂದೆ ದೊಡ್ಡತಮ್ಮನಹಳ್ಳಿ ಗ್ರಾಮದ ವಾಸಿ ನಂಜುಂಡಪ್ಪ ರವರ ಮಗನಾದ ಲಕ್ಷ್ಮಿನಾರಾಯಣ, 40 ವರ್ಷ, ಎಂಬುವರನ್ನು ಮದುವೆಯಾಗಿದ್ದು, ನಮಗೆ ಮಕ್ಕಳಾಗದೇ ಇದ್ದುದರಿಂದ ಎಲ್ಲರ ಒಪ್ಪಿಗೆಯ ಮೇರೆಗೆ ನನ್ನ ತಂಗಿಯಾದ ಶ್ರೀಮತಿ ಲಲಿತ ರವರನ್ನು ಕೊಟ್ಟು ಮದುವೆ ಮಾಡಿಸಿಕೊಟ್ಟಿದ್ದು, ಅಂದಿನಿಂದ ನಾವುಗಳು ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದೆವು. ನನ್ನ ತಂಗಿ ಲಲಿತಾಗೆ ಒಂದು ಗಂಡು ಮಗುವಾಗಿದ್ದು, ಜಸ್ವಂತ್ 10 ವರ್ಷ ಆಗಿರುತ್ತಾರೆ. ನನ್ನ ಗಂಡ ಗಾರೆ ಕೂಲಿ ಕೆಲಸದಿಂದ ಜೀವನ ಸಾಗಿಸುತ್ತಿದ್ದು, ಗಂಡ ಪ್ರತಿ ದಿನ ಬೆಳಗ್ಗೆ ಗಾರೆ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬರುತ್ತಿದ್ದನು. ತನ್ನ ಗಂಡನಿಗೆ ಕುಡಿತದ ಅಬ್ಯಾಸವಿದ್ದು, ದಿನಾಂಕ; 23-03-2021 ರಂದು ಬೆಳಗ್ಗೆ ಸುಮಾರು 7.00 ಗಂಟೆಗೆ ಗಾರೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವನು ಇದುವರೆಗೂ ವಾಪಸ್ಸು ಮನೆಗೆ ಬಂದಿರುವುದಿಲ್ಲ. ನಂತರ ನಾವುಗಳು ಚಿಕ್ಕಬಳ್ಳಾಪುರ ನಗರದ ಎಲ್ಲಾ ಮೇಸ್ತ್ರಿಗಳು, ಹಾಗೂ ಗಾರೆ ಕೆಲಸದವರು, ಹಾಗೂ ನಮ್ಮ ನೆಂಟರು, ಸಂಬಂದಿಕರು, ಪರಿಚಯಸ್ಥರು, ಸ್ನೇಹಿತರು, ಗೊತ್ತಿರುವ ಎಲ್ಲಾ ಕಡೆ ಹುಡಿಕಾಡಿದರೂ ಸಹ ತನ್ನ ಗಂಡನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಆದ್ದರಿಂದ ಈ ದಿನ ದಿನಾಂಕ; 27-03-2021 ರಂದು ಠಾಣೆಗೆ ಬಂದು ತಡವಾಗಿ ದೂರನ್ನು ನೀಡಿದ್ದು, ಕಾಣೆಯಾಗಿರುವ ತನ್ನ ಗಂಡ ಲಕ್ಷ್ಮಿನಾರಾಯಣ ರವರನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

3. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.17/2021 ಕಲಂ.420 ಐ.ಪಿ.ಸಿ:-

     ದಿನಾಂಕ-28/03/2021 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಶ್ರೀ ಎಂ,ಎನ್ ರಾಘವೇಂದ್ರ ರಾವ್ ಬಿನ್ ಲೇಟ್ ನರಸಿಂಹಮೂರ್ತಿ 73 ವರ್ಷ, ಚಿಕ್ಕಬಳ್ಳಾಪುರ ನಗರದ ಮುನಿಸಿಫಲ್ ಕಾಲೇಜ್ ಹಿಂಭಾಗ ವಾರ್ಡ್ ನಂ-09 ರಲ್ಲಿ ವಾಸವಾಗಿರುವ ತಾನು ಚಿಕ್ಕಬಳ್ಳಾಪುರ ನಗರದಲ್ಲಿ ಸುಮಾರು 35 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿಕೊಂಡಿರುತ್ತೇನೆ.ಪ್ರಸ್ತುತ ತನಗೆ ಪ್ರತಿ ತಿಂಗಳು ಸರ್ಕಾರದಿಂದ ಪಿಂಚಣಿ ಬರುತ್ತಿದ್ದು ತನ್ನ ವೃದ್ದಾಪ್ಯ ಜೀವನೋಪಾಯಕ್ಕಾಗಿ ಉಪಯೋಗಿಸಿಕೊಳ್ಳುತ್ತಿರುತ್ತೇನೆ ಈಗೀರುವಲ್ಲಿ ದಿನಾಂಕ-23/03/2021 ರಂದು ಮದ್ಯಾಹ್ನ ಸುಮಾರು 02:00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿರುವ ಎಂ.ಜಿ ರೋಡ್ ನ ಎಸ್.ಬಿ.ಐ ಎ.ಪಿ.ಎಂ.ಸಿ ಯಾರ್ಡ್ ಬ್ರಾಂಚ್ ನ ಎ.ಟಿ.ಎಂ ನಲ್ಲಿ ಹಣವನ್ನು ಡ್ರಾ ಮಾಡಲು ಹೋದಾಗ ತನಗೆ ಕಣ್ಣಿಗೆ ಶಸ್ತ್ರ ಚಿಕಿತ್ಸೆಯಾಗಿರುವುದರಿಂದ ತನಗೆ ಎ.ಟಿ.ಎಂ ಅನ್ನು ಅಪರೇಟ್ ಮಾಡಲು ಸಾದ್ಯವಾಗದೇ ಇದ್ದ ಕಾರಣ ಎ.ಟಿ.ಎಂ ನಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ತನ್ನ ಬಳಿ ಎ.ಟಿ.ಎಂ ಕಾರ್ಡ್ ಅನ್ನು ತೆಗದುಕೊಂಡು ತಾನು ಹಣವನ್ನು ತೆಗೆದುಕೊಡುತ್ತೇನೆ ಎಂದು ಎ.ಟಿ.ಎಂ ಪಿನ್ ಕೋಡ್ ಹೇಳುವಂತೆ ತಿಳಿಸಿದನು ಅದರಂತೆ ತಾನು ಎ.ಟಿ.ಎಂ ಪಿನ್ ಕೋಡ್ ಅನ್ನು ಒತ್ತಿರುತ್ತೇನೆ.ನಂತರ ಅಪರಿಚಿತ ವ್ಯಕ್ತಿ ಎ.ಟಿ.ಎಂ ಮಿಷಿನ್ ಕೆಲಸ ಮಾಡುತ್ತಿಲ್ಲ ಎಂದು ಹೇಳಿ ಕ್ಯಾನ್ಸಲ್ ಬಟನ್ ಹೊತ್ತಿ ನಿಮ್ಮ ಎ.ಟಿ.ಎಂ ತಗೋಳಿ ಎಂದು ಹೇಳಿ ತನ್ನ ಗಮನವನ್ನು ಬೇರೆಡೆ ಸೆಳೆದು ತನ್ನ ಎ.ಟಿ.ಎಂ ಅನ್ನು ತೆಗೆದುಕೊಂಡು ಯಾವುದೋ ಬೇರೆ ಎ.ಟಿ.ಎಂ ಕಾರ್ಡ್ ಅನ್ನು ತನಗೆ ಕೊಟ್ಟು ಹೊರಟುಹೋಗಿರುತ್ತಾನೆ ನಂತರ ದಿನಾಂಕ-26/03/2021 ರಂದು ತನ್ನ ಎ.ಟಿ.ಎಂ ಕಾರ್ಡ್ ನಿಂದ 11,000 ರೂಗಳು ಬ್ಯಾಂಕ್ ಆಫ್ ಇಂಡಿಯಾ ಎ.ಟಿ,ಎಂ ನಲ್ಲಿ ಡ್ರಾ ಆಗಿದ್ದಾಗಿ ತನ್ನ ಮೊಬೈಲ್ ಗೆ ಮೆಸೇಜ್ ಬಂದಿರುತ್ತೆ ನಂತರ ತಾನು ಬ್ಯಾಂಕ್ ಗೆ ಹೋಗಿ ತನ್ನ ಎ.ಟಿ.ಎಂ ಕಾರ್ಡ್ ಅನ್ನು ತಾನು ಎ.ಟಿ.ಎಂ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿರುತ್ತೇನೆ ಹಾಗೆಯೇ ತನ್ನ ಬಳಿ ಇರುವ ಎ,ಟಿ.ಎಂ ಕಾರ್ಡ್ ಅನ್ನು ನೋಡಲಾಗಿ ತನ್ನ  ಕಾರ್ಡ್ ಆಗಿರುವುದಿಲ್ಲ. ತನ್ನ ಗಮನವನ್ನು ಬೇರೆಡೆ ಸೆಳೆದು ಎ.ಟಿ.ಎಂ ಕಾರ್ಡ್ ಅನ್ನು ತೆಗೆದುಕೊಂಡು ಬೇರೆ ಎ,ಟಿ,ಎಂ ನಲ್ಲಿ ಹೋಗಿ ಹಣವನ್ನು ಡ್ರಾ ಮಾಡಿ ತನಗೆ ಮೋಸ ಮಾಡಿರುವ ಅಪರಿಚಿತ ವ್ಯಕ್ತಿಯನ್ನು  ಪತ್ತೇ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದರ ದೂರಿನ ಮೇರೆಗೆ ಈ ಪ್ರ.ವ.ವರದಿ.

 

4. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.19/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ: 28-03-2021 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾಧುದಾರರಾದ  ಶ್ರೀ. ಸಂಜೀವ್ ಕುಮಾರ್ ಬಿನ್ ಲೇಟ್ ಲಕ್ಷ್ಮಯ್ಯ 50 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ನಂ-52, ವಾರ್ಡ್ ನಂ-01, ವಾಪಸಂದ್ರ, ಚಿಕ್ಕಬಳ್ಳಾಪುರ ಟೌನ್ ಮತ್ತು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ದಿನಾಂಕ:-10/03/2021 ರಂದು ತಮ್ಮ ಸೊಸೆಯಾದ ಶ್ರೀಮತಿ ಶಿಲ್ಪ ರವರಿಗೆ ಹೆರಿಗೆಯಾಗಿ ಜೀವನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರನ್ನು ನೋಡಲು ತನ್ನ ಹೆಂಡತಿ ಶ್ರೀಮತಿ ಸೆಲ್ವಿ 42 ವರ್ಷ ರವರು ತಮ್ಮಮಗಳ ಬಾಬತ್ತು KA-40-EE-1111 ರ ಹೊಂಡಾ ಆಕ್ಟೀವಾ ದ್ವಿಚಕ್ರವಾಹನದಲ್ಲಿ ಮನೆಯಿಂದ ಜೀವನ್ ಆಸ್ಪತ್ರೆಗೆ ಹೋಗಲು ಸುಮಾರು ಸಂಜೆ 5-30 ಗಂಟೆಯ ಸಮಯದಲ್ಲಿ ಮುಸ್ಟೂರು - ಡಿ.ಸಿ ಬಂಗ್ಲೆಗೆ ಹೋಗುವ ರಸ್ತೆಯಲ್ಲಿನ ಬಿ.ಜಿ.ಎಸ್ ವರ್ಲ್ಡ್ ಶಾಲೆಯ ಪಕ್ಕದಲ್ಲಿರುವ ಹೆಚ್.ಕೆ.ಜಿ.ಎನ್ ಎಂ.ಎನ್ ಫ್ರೂಟ್ ಕಂಪನಿಯ ಮುಂಭಾಗದ ಠಾರ್ ರಸ್ತೆಯ ಎಡಭಾಗದಲ್ಲಿ KA-40-EE-1111 ರ ಹೊಂಡಾ ಆಕ್ಟೀವಾ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಡಿ.ಸಿ ಬಂಗ್ಲೆ ಕಡೆಯಿಂದ ಮುಸ್ಟೂರು ಕಡೆಗೆ ಹೋಗಲು ಬರುತ್ತಿದ್ದ KA-40-B-0660 ರ ಟೆಂಪೋ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೇ ಯೂ-ಟರ್ನ್ ಮಾಡಿಕೊಂಡು ಬಂದು ತನ್ನ ಹೆಂಡತಿ ಚಾಲನೆ ಮಾಡುತ್ತಿದ್ದ KA-40-EE-1111 ರ ಹೊಂಡಾ ಆಕ್ಟೀವಾ ದ್ವಿಚಕ್ರವಾಹನಕ್ಕೆ ಡಿಕ್ಕಿ ಪಡಿಸಿ ಸ್ಥಳದಲ್ಲಿ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿದ್ದು ತನ್ನ ಹೆಂಡತಿ ದ್ವಿಚಕ್ರವಾಹನ ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ ಎಡ ಮೊಣಕಾಲಿನ ಬಳಿ, ಬಲ ಕಾಲಿನ ಪಾದಕ್ಕೆ, ಬಲ ಭುಜಕ್ಕೆ ರಕ್ತ್ತಗಾಯಗಳಾಗಿದ್ದು, ಅಲ್ಲಿನ ಸ್ಥಳೀಯರು ತನ್ನ ಹೆಂಡತಿಯನ್ನು ಉಪಚರಿಸಿ ಪಿರ್ಯಾಧುದಾರರಿಗೆ ಅಲ್ಲಿನ ಸ್ಥಳೀಯರು ತನ್ನ ಹೆಂಡತಿಯಿಂದ ಪಿರ್ಯಾಧುದಾರರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಮೊಬೈಲ್ ಕರೆಮಾಡಿ ತಮ್ಮ ಹೆಂಡತಿಗೆ ಬಿ.ಜಿ.ಎಸ್ ವರ್ಲ್ಡ್ ಶಾಲೆಯ ಬಳಿ ಅಪಘಾತವಾಗಿದೆ ಎಂದು ತಿಳಿಸಿದ್ದು, ಸಿ.ಎಸ್.ಐ ಆಸ್ಪತ್ರೆಯ ಬಳಿ ಇದ್ದ ತಾನು ತಕ್ಷಣ ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ತಕ್ಷಣ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಅದೇ ರಸ್ತೆಯಲ್ಲಿ ಹತ್ತಿರದಲ್ಲಿದ್ದ ರಾಧಾಕೃಷ್ಣ ಆರ್ಥೋ ಕೇರ್ ಗೆ ಸೇರಿಸಿ ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ನಗರದ ಜೀವನ್ ಆಸ್ಪತ್ರೆಗೆ ಸೇರಿಸಿ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆಯನ್ನು ಕೊಡಿಸಿಕೊಂಡು ಈ ದಿನ ತಡವಾಗಿ ದಿನಾಂಕ:-28/03/2021 ರಂದು ಅಪಘಾತಕ್ಕೆ ಕಾರಣನಾದ KA-40-B-0660 ರ ಟೆಂಪೋ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಗಣಕೀಕೃತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.128/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ: 27/03/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮೋಹನ್.ಕೆ.ಎನ್ ಬಿನ್ ಲೇಟ್ ನರಸಿಂಹಪ್ಪ, 32 ವರ್ಷ, ಆದಿ ಕರ್ನಾಟಕ ಜನಾಂಗ, ಚಾಲಕ ವೃತ್ತಿ. ಕೋನಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 12.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ 7-8 ವರ್ಷಗ ಹಿಂದೆ ಚಿಂತಾಮಣಿ ನಗರದ ವೆಂಕಟಗಿರಿಕೋಟೆಯ ವಾಸಿಯಾದ ರೂಪ ಬಿನ್ ಆಂಜಿನಪ್ಪ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದು, ತಮಗೆ 6 ವರ್ಷದ ಜೀವನ್ ಎಂಬ ಗಂಡು ಮಗ ಸಹ ಇರುತ್ತಾನೆ. ಮದುವೆಯಾದ ಸುಮಾರು ಎರಡು ವರ್ಷಗಳ ಕಾಲ ತಾವುಗಳು ಅನ್ಯೋನ್ಯವಾಗಿದ್ದು ತದ ನಂತರ ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದ ಕಾರಣ ತನ್ನ ಹೆಂಡತಿ ರೂಪ ತನ್ನನ್ನು ಬಿಟ್ಟು ತವರು ಮನಗೆ ಹೊರಟು ಹೋಗಿರುತ್ತಾಳೆ. ಆ ಮೇಲೆ ತನ್ನ ಹೆಂಡತಿಯ ತಮ್ಮ ವಿನೋದ್ ಹಾಗೂ ಇತರರು ತನ್ನನ್ನು ಹೊಡೆದಿದ್ದು ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ತಾನು ಹಾಲಿ ವಾಪಸ್ ಪಡೆದುಕೊಂಡಿರುತ್ತೇನೆ. ಡೈವರ್ಸ್ ಕೇಸ್ ಸಹ ದಾಖಲಾಗಿದ್ದು ಅದನ್ನು ಸಹ ವಾಪಸ್ ಪಡೆದುಕೊಂಡು ತಾನು ತಮ್ಮ ತಾಯಿ ನಾರಾಯಣಮ್ಮ ರವರ ಜೊತೆಯಲ್ಲಿ ವಾಸವಾಗಿದ್ದು, ರೂಪ ತನ್ನ ಮಗನೊಂದಿಗೆ ತವರು ಮನೆಯಲ್ಲಿ ವಾಸವಾಗಿರುತ್ತಾಳೆ. ಹೀಗಿರುವಾಗ ದಿನಾಂಕ: 26/03/2021 ರಂದು ರಾತ್ರಿ ಸುಮಾರು 9.00 ಗಂಟೆ ಸಮಯದಲ್ಲಿ ತಾನು ತನ್ನ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿ ಶಿಡ್ಲಘಟ್ಟ ರಸ್ತೆಯ ತಿಮ್ಮಸಂದ್ರ ಗ್ರಾಮದ ಬಳಿ ಇರುವ ಬಿ.ವಿ.ಎಂ ಕಲ್ಯಾಣ ಮಂಟಪದ ಬಳಿ ಇರುವ ಕಬಾಬ್ ಅಂಗಡಿಯಲ್ಲಿ ಕಬಾಬ್ ನ್ನು ತೆಗೆದುಕೊಂಡು ಬರಲು ಹೋಗಿದ್ದಾಗ ಅದೇ ವೇಳೆಗೆ ತನ್ನ ಬಾಮೈದನಾದ ವಿನೋದ್, ಆತನ ಸ್ನೇಹಿತನಾದ ಬಾಲಾಜಿ ಹಾಗೂ ಇತರರು ಆಟೋದಲ್ಲಿ ಬಂದಿದ್ದು, ತನ್ನನ್ನು ನೋಡಿ ಆಟೋವನ್ನು ನಿಲ್ಲಿಸಿ ಆ ಪೈಕಿ ವಿನೋದ್ ರವರು ತನ್ನನ್ನು ಕುರಿತು “ನಮ್ಮ ಮೇಲೆ ಕೇಸು ಹಾಕಿ ಕೋರ್ಟಿಗೆ ಕಳುಹಿಸುತ್ತೀಯಾ” ಎಂದು ತನ್ನ ಮೇಲೆ ಜಗಳ ತೆಗೆದು ಲೋಫರ್ ನನ್ನ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಎಲ್ಲರೂ ಬೈದಿರುತ್ತಾರೆ. ನಂತರ ವಿನೋದ್ ಕಬ್ಬಿಣದ ರಾಡಿನಿಂದ ಮೂಗಿಗೆ ಹಾಗೂ ಬಾಯಿಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಉಳಿದವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾರೆ ಹಾಗೂ ಮೇಲ್ಕಂಡವರೆಲ್ಲರೂ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.129/2021 ಕಲಂ. 15(A) ಕೆ.ಇ ಆಕ್ಟ್:-

     ದಿನಾಂಕ: 27/03/2021 ರಂದು ಮದ್ಯಾಹ್ನ 2.15 ಗಂಟೆಗೆ ಠಾಣೆಯ  ಅಮರೇಶ.ಪಿ.ಎನ್, ಸಿ.ಹೆಚ್.ಸಿ-09  ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:27/03/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ಬೆಳಿಗ್ಗೆ ಗಸ್ತು ಕರ್ತವ್ಯಕ್ಕೆ ತಾನು ಮತ್ತು ಸಿ.ಪಿ.ಸಿ-436 ಸರ್ವೇಶ್ ರವರು ಹೋಗಿದ್ದು, ಠಾಣಾ ವ್ಯಾಪ್ತಿಯ ಮಾಡಿಕೆರೆ, ದೊಡ್ಡಗಂಜೂರು. ಜಿ.ಕೋಡಿಹಳ್ಳಿ ಮುಂತಾದ ಗ್ರಾಮಗಳ ಕಡೆಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಮದ್ಯಾಹ್ನ 12.00 ಗಂಟೆಗೆ ಆನೂರು ಗ್ರಾಮದ ಬಳಿಗೆ ಹೋದಾಗ ಆನೂರು ಗ್ರಾಮದ ವಾಸಿ ಶ್ರೀನಿವಾಸ ಬಿನ್ ಚಿಕ್ಕವೆಂಕಟಸ್ವಾಮಿ ಎಂಬುವರು ಅವರ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮೀದಾರರಿಂದ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿ ದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಸ್ಥಳದಿಂದ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ಶ್ರೀನಿವಾಸ @ ಭೀಮ ಬಿನ್ ಚಿಕ್ಕವೆಂಕಟಸ್ವಾಮಿ, 45 ವರ್ಷ, ಕುಂಬಾರರು, ವ್ಯಾಪಾರ ವಾಸ ಆನೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) ಹೈವಾಡ್ಡ್ ಚೀಯರ್ಸ್ ವಿಸ್ಕಿ 90 ಎಂ.ಎಲ್ ನ 04 ಟೆಟ್ರಾ ಪ್ಯಾಕೆಟ್ ಗಳು 2) ಎರಡು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಎರಡು ನೀರಿನ ಪ್ಲಾಸ್ಟಿಕ್ ಬಾಟಲ್ 3) 02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಮದ್ಯಾಹ್ನ 12-30 ಗಂಟೆಯಿಂದ 13-30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾ ವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ಶ್ರೀನಿವಾಸ @ ಭೀಮ ಬಿನ್ ಚಿಕ್ಕವೆಂಕಟಸ್ವಾಮಿ ರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.130/2021 ಕಲಂ. 15(A) ಕೆ.ಇ ಆಕ್ಟ್:-

     ದಿನಾಂಕ: 27/03/2021 ರಂದು ಸಂಜೆ 5.00 ಗಂಟೆಗೆ ಠಾಣೆಯ  ಅಮರೇಶ .ಪಿ.ಎನ್, ಸಿ.ಹೆಚ್.ಸಿ-09  ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:27/03/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ತಾನು ಮತ್ತು ಸಿ.ಪಿ.ಸಿ-544 ವೆಂಕಟರವಣ ರವರು ಠಾಣಾ ಸರಹದ್ದಿನ ಕುರುಟಹಳ್ಳಿ, ರಾಂಪುರ, ಮುನಗನಹಳ್ಳಿ, ಬ್ರಾಹ್ಮಣರದಿನ್ನೆ, ಕಾಚಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3.30 ಗಂಟೆಯ ಸಮಯದಲ್ಲಿ ಚಿಂತಾಮಣಿ-ಕೋಲಾರ ರಸ್ತೆಯ ಕಾಚಹಳ್ಳಿ ಗೇಟ್ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ನಾರಾಯಣರೆಡ್ಡಿ  ಬಿನ್ ಮುನಿರೆಡ್ಡಿ ರವರು ತನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಕಾಚಹಳ್ಳಿ ಗೇಟ್ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ  ನೋಡಲಾಗಿ 1). 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, 2). ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು 3). ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ನಾರಾಯಣರೆಡ್ಡಿ ಬಿನ್ ಮುನಿರೆಡ್ಡಿ, 34 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಹಾದಿಗೆರೆ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3.45 ರಿಂದ 4.30 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ನಾರಾಯಣರೆಡ್ಡಿ  ಬಿನ್ ಮುನಿರೆಡ್ಡಿರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.131/2021 ಕಲಂ. 15(A) ಕೆ.ಇ ಆಕ್ಟ್:-

     ದಿನಾಂಕ: 27/03/2021 ರಂದು ಸಂಜೆ 6.15 ಗಂಟೆಗೆ ಠಾಣೆಯ ಎ.ಎಸ್.ಐ ಅಕ್ಬರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ 27/03/2021 ರಂದು ಪಿ.ಎಸ್.ಐ ರವರು ತನಗೆ ಮತ್ತು ಸಿ.ಪಿ.ಸಿ-436 ಸರ್ವೇಶ ರವರನ್ನು ಗ್ರಾಮ ಗಸ್ತಿಗೆ ನೇಮಿಸಿದ್ದು, ಅದರಂತೆ ತಾವು ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಆನೂರು ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ಮುನಿಕೃಷ್ಣಪ್ಪ ಬಿನ್ ಮುನಿಯಪ್ಪ ರವರು ತನ್ನ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತನಗೆ ಖಚಿತ ಮಾಹಿತಿ ದೊರೆತಿದ್ದು, ಸದರಿ ಅಂಗಡಿಯ ಬಳಿ ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಮುನಿಕೃಷ್ಣಪ್ಪ ಬಿನ್ ಮುನಿಯಪ್ಪ ರವರ ಅಂಗಡಿಯ ಮುಂಭಾಗ ಹೋಗುವಷ್ಟರಲ್ಲಿ ಸದರಿ ಅಂಗಡಿಯ ಮುಂದೆ ಕುಳಿತಿದ್ದ ವ್ಯಕ್ತಿಗಳು ಮತ್ತು ಅಂಗಡಿಯಲ್ಲಿದ್ದ ಆಸಾಮಿಯು ಓಡಿ ಹೋಗಿದ್ದು, ಅಂಗಡಿಯ ಮುಂಭಾಗದಲ್ಲಿ ನೋಡಲಾಗಿ 1) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 3 ಟೆಟ್ರಾ ಪಾಕೆಟ್ ಗಳು, 2) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು 3) ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, 4) 90 ಎಂ ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೇಟ್ ಗಳು ಓಪನ್ ಆಗಿದ್ದು ಇವುಗಳನ್ನು ಪರಿಶೀಲಿಸಲಾಗಿ ಆವುಗಳಲ್ಲಿ ಸ್ವಲ್ವ ಮದ್ಯವಿರುತ್ತೆ. ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ಎರಡು ನೀರಿನ ಬಾಟಲ್ ಗಳು ಓಪನ್ ಆಗಿದ್ದು ಆವುಗಳಲ್ಲಿ ಸ್ವಲ್ಪ ಭಾಗದ ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ಮುನಿಕೃಷ್ಣಪ್ಪ ಬಿನ್ ಮುನಿಯಪ್ಪ 65 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ಆನೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು, ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 5.00 ಗಂಟೆಯಿಂದ 5.45 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ಎಲ್ಲಾ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲುಗಳು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ತನ್ನ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಮುನಿಕೃಷ್ಣಪ್ಪ ಬಿನ್ ಮುನಿಯಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.132/2021 ಕಲಂ. 379 ಐ.ಪಿ.ಸಿ:-

     ದಿನಾಂಕ: 27/03/2021 ರಂದು ರಾತ್ರಿ 8.30 ಗಂಟೆಗೆ ಜಿ.ಎಸ್.ಸಾಮ್ರಾಟ್ ಬಿನ್ ಲೇಟ್ ಶ್ರೀರಾಮಗುಪ್ತ, 34 ವರ್ಷ, ವೈಶ್ಯರು, ಜಿರಾಯ್ತಿ, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಹೆಸರಿನಲ್ಲಿ ಮಹೇಂದ್ರ ಕಂಪನಿಯ ಬೊಲೊರೋ ಮ್ಯಾಕ್ಸಿ ಟ್ರಕ್ ವಾಹನವಿದ್ದು, ಇದರ ಎಂಜಿನ್ ಸಂಖ್ಯೆ GLC1H67759, ಚಾರ್ಸೀಸ್ ಸಂಖ್ಯೆ MAZP2GLKC3H45618 ಆಗಿರುತ್ತೆ. ಸದರಿ ವಾಹನದ ನೊಂದಣಿ ಸಂಖ್ಯೆ ಕೆಎ-53 ಎ-8878 ಆಗಿರುತ್ತೆ. ಸದರಿ ವಾಹನಕ್ಕೆ ತಮ್ಮ ಗ್ರಾಮದ ಚರಣ್ ಬಿನ್ ಯಾಮನ್ನ ಎಂಬುವನು ಚಾಲಕನಾಗಿರುತ್ತಾನೆ. ದಿನಾಂಕ: 26/03/2021 ರಂದು ಸಂಜೆ 4.00 ಗಂಟೆ ಸಮಯದಲ್ಲಿ ಚಾಲಕನಾದ ಚರಣ್ ಎಂಬುವನು ವಾಹನವನ್ನು ತಮ್ಮ ಗ್ರಾಮದ ತಮ್ಮ ಸಿಮೆಂಟ್ ಅಂಗಡಿಯ ಬಳಿ ನಿಲ್ಲಿಸಿ ವಾಹನದ ಬೀಗದ ಕೈಯನ್ನು ತನಗೆ ಕೊಟ್ಟು ಹೋಗಿರುತ್ತಾನೆ. ಸಂಜೆ 7.00 ಗಂಟೆ ಸಮಯದಲ್ಲಿ ತಾನು ಅಂಗಡಿಯನ್ನು ಮುಚ್ಚಿಕೊಂಡು ಹೋಗುವಾಗ ಮೇಲ್ಕಂಡ ತನ್ನ ವಾಹನ ಅಂಗಡಿಯ ಮುಂದೆ ಇರುತ್ತೆ. ಈ ದಿನ ದಿನಾಂಕ: 27/03/2021 ರಂದು ಬೆಳಿಗ್ಗೆ 08.30 ಗಂಟೆಗೆ ತಾನು ಅಂಗಡಿಯನ್ನು ತೆಗೆಯಲು ಹೋಗಿದ್ದು, ನೋಡಲಾಗಿ ನಿನ್ನೆ ನಿಲ್ಲಿಸಿದ ಮೇಲ್ಕಂಡ ತನ್ನ ಬಾಬ್ತು ಕೆಎ-53 ಎ-8878 ವಾಹನ ಸ್ಥಳದಲ್ಲಿ ಇಲ್ಲದೆ ಕಳ್ಳತನವಾಗಿರುತ್ತೆ. ತಮ್ಮ ಗ್ರಾಮ ಮತ್ತು ಸುತ್ತ ಮುತ್ತಲಿನಲ್ಲಿ ಹುಡುಕಲಾಗಿ ವಾಹನವು ಪತ್ತೆ ಆಗಿರುವುದಿಲ್ಲ. ದಿನಾಂಕ: 26/03/2021 ರಂದು ಸಂಜೆ 7.00 ಗಂಟೆಯಿಂದ ಈ ದಿನ ದಿನಾಂಕ: 27/03/2021 ರಂದು ಬೆಳಿಗ್ಗೆ 08.30 ಗಂಟೆಯ ಮದ್ಯೆ ಯಾರೋ ಕಳ್ಳರು ತನ್ನ ವಾಹನವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ವಾಹನದ ಬೆಲೆ ಸುಮಾರು 1,95,000/- (ಒಂದು ಲಕ್ಷ ತೊಂಬತ್ತೈದು ಸಾವಿರ) ಆಗಿರುತ್ತೆ. ಆದ್ದರಿಂದ ಕಳುವಾಗಿರುವ ತನ್ನ ವಾಹನವನ್ನು ಪತ್ತೆ ಮಾಡಿ ಕಳ್ಳರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

10. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.76/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ 27/03/2021 ರಂದು ಪಿಸಿ 179 ಶಿವಶೇಖರ್ ರವರು ಬೆಳಿಗ್ಗೆ 9-30 ಗಂಟೆಗೆ ಠಾಣೆಗೆ ಬಂದು ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ- ನನಗೆ ವಿಧುರಾಶ್ವತ್ಥ  ಹೊರ ಠಾಣೆಯ ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ನಾನು  ದಿನಾಂಕ; 26/03/2021 ರಂದು ರಾತ್ರಿ ಸುಮಾರು 10-00 ಗಂಟೆಯಲ್ಲಿ ವಿಧುರಾಶ್ವತ್ಥ ಕ್ರಾಸ್, ದೊಡ್ಡಕುರುಗೋಡು, ಚೌಳೂರು ಗೇಟ್ ಮುಂತಾದ ಕಡೆಗಳಲ್ಲಿ ಗಸ್ತು ಮಾಡುತ್ತಿದ್ದಾಗ, ಕುಡುಮಲಕುಂಟೆ ಕ್ರಾಸ್ ನಿಂದ ಸ್ವಲ್ಪ ಮುಂದೆ ಕೈಗಾರಿಕಾ ಪ್ರದೇಶದ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ವ್ಯಕ್ತಿಗೆ ವಾಹನ ಅಪಘಾತವಾಗಿ ಗಾಯಗೊಂಡಿರುವುದಾಗಿ ಮಾಹಿತಿ ಬಂದಿದ್ದು, ಕೂಡಲೇ ಸ್ಥಳಕ್ಕೆ ಹೋದಾಗ, ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ಬಳಿ, ಎಸ್.ಹೆಚ್-9 ರಸ್ತೆ, ಹಿಂದೂಪುರದಿಂದ ಗೌರೀಬಿದನೂರಿಗೆ ಹೋಗುವ ರಸ್ತೆಯಲ್ಲಿ ರಸ್ತೆಯ ಬದಿಯಲ್ಲಿ ಯಾರೋ ಒಬ್ಬ ವ್ಯಕ್ತಿ ಗಾಯಗೊಂಡು ಬಿದ್ದಿದ್ದು, ಈತನ ಮುಖಕ್ಕೆ ರಕ್ತಗಾಯವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಈತ ಅಪರಿಚಿತ ವ್ಯಕ್ತಿಯಾಗಿದ್ದು, ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವುವನಂತೆ ಕಂಡು ಬರುತ್ತಿದ್ದಾನೆಂದು, ಈತ ರಸ್ತೆ ಬದಿಯಲ್ಲಿ ಕುಡುಮಲಕುಂಟೆ ಕ್ರಾಸ್ ಕಡೆಯಿಂದ ಕೈಗಾರಿಕಾ ಪ್ರದೇಶದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಯಾವುದೋ ವಾಹನ ಅಪಘಾತ ಮಾಡಿ, ಅದರ ಚಾಲಕ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿರುವುದಾಗಿ,    ಅಲ್ಲಿ ನೆರೆದಿದ್ದ  ಜನರು ತಿಳಿಸಿದ್ದು, ಕೂಡಲೇ ಸ್ಥಳಕ್ಕೆ 108 ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಈತನ ಸಂಬಂಧಿಕರನ್ನು ಪತ್ತೆ ಮಾಡಲು ಕುಡುಮಲಕುಂಟೆ ಕೈಗಾರಿಕಾ ಪ್ರದೇಶಗಳಲ್ಲಿ, ಹಿಂದೂಪುರಕ್ಕೆ ಸೇರಿದ ಚೆಕೆ ಪೋಸ್ಟ್, ಕೈಗಾರಿಕಾ ಪ್ರದೇಶಗಳಲ್ಲಿ, ಹಾಗು ಹಿಂದೂಪುರ ಟೌನ್, ರಹಮತ್ ಪುರ, ಮಾಡ್ರನ್ ಕಾಲೋನಿ, ಮುಂತಾದ  ಕಡೆ ಹೋಗಿ ಹುಡುಕಾಡಿದ್ದು, ಈತನ ಸಂಬಂಧಿಕರು ಯಾರೂ ಸಹ  ಪತ್ತೆಯಾಗಿರುವುದಿಲ್ಲ. ನಂತರ ಗಾಯಾಳುವನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿರುವುದಾಗಿ ತಿಳಿಯಿತು. ಮೃತನ ಹೆಸರು ವಿಳಾಸ ಗೊತ್ತಿರುವುದಿಲ್ಲ. ಮೃತ ವ್ಯಕ್ತಿಯು ವಯಸ್ಸು ಸುಮಾರು 35  ರಿಂದ 40 ವರ್ಷ ವಯಸ್ಸಿನವನಂತೆ ಕಂಡು ಬರುತ್ತಿದ್ದು, ಎತ್ತರ ಸುಮಾರು 5-4 ಅಡಿ ಇರುತ್ತಾನೆ. ತಲೆಯಲ್ಲಿ ಕಪ್ಪು ಕೂದಲು ಇರುತ್ತೆ. ಕಡು ಕಂದು  ಬಣ್ಣದ ತುಂಬು ತೋಳಿನ ಶರ್ಟ್ , ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಬಿಳೀ ಬನಿಯನ್ , ಕೆಂಪು ಬಣ್ಣದ ಕಾಚಾ ಧರಿಸಿರುತ್ತಾನೆ.  ಅಪಘಾತ ಮಾಡಿರುವ ವಾಹನ ಹಾಗು ಅದರ ಚಾಲಕನ ಹೆಸರು ವಿಳಾಸ ಸಹ ತಿಳಿದು ಬಂದಿರುವುದಿಲ್ಲ. ಆದುದರಿಂದ ವಾಹನವನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು  ಅಪಘಾತ ಮಾಡಿ ವಾಹನ ನಿಲ್ಲಿಸದೇ ಹೊರಟು ಹೋಗಿರುವ ಚಾಲಕ ಹಾಗು ಅಪಘಾತ ಮಾಡಿರುವ ವಾಹನವನ್ನು    ಪತ್ತೆ ಮಾಡಿ, ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ.  ಮೃತನು ಕೆಲಸ ಮಾಡುವ ಸ್ಥಳ ಹಾಗು ಸಂಬಂಧಿಕರನ್ನು ಹುಡುಕಾಡಿ, ಸಂಬಂಧಿಕರು ಯಾರೂ ಪತ್ತೆಯಾಗದೇ ಇರುವ  ಕಾರಣ  ದೂರು ನೀಡಲು  ತಡವಾಗಿರುತ್ತೆ.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.77/2021 ಕಲಂ. 379  ಐ.ಪಿ.ಸಿ :-

     ದಿನಾಂಕ 27/03/2021 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ  ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಮೋಹನ್ .ಎನ್.   ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ   ಈ ದಿನ ದಿನಾಂಕ 27-03-2021 ರಂದು ಮದ್ಯಾಹ್ನ 1-00 ಗಂಟೆ  ಸಮಯದಲ್ಲಿ  ಗೌರೀಬಿದನೂರು ತಾಲ್ಲೂಕು, ನಗರಗೆರೆ  ಗ್ರಾಮದ ಬಳಿ ಇರುವ ಕೆರೆಯ  ಅಂಗಳದಲ್ಲಿ ಯಾರೋ ಅಕ್ರಮವಾಗಿ ಟ್ರಾಕ್ಟರ್ ನಲ್ಲಿ  ಮರಳು ಕಳ್ಳತನವಾಗಿ ತುಂಬುತ್ತಿರುವ  ಬಗ್ಗೆ ಮಾಹಿತಿ ಬಂದ  ಮೇರೆಗೆ ತಾನು ಮತ್ತು ನಗರಗೆರೆ  ಪೊಲೀಸ್ ಸಹಾಯವಾಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂಧಿಯಾದ ಪಿ.ಸಿ-426 ಲೋಹಿತ್  ಹಾಗು  ಪಿ.ಸಿ-281  ಗುರುಸ್ವಾಮಿ   ಹಾಗೂ ನಗರಗೆರೆ  ಗ್ರಾಮದ ಬಸ್ ನಿಲ್ದಾಣದ ಬಳಿ ಇದ್ದ ಪಂಚರನ್ನು ಕರೆದುಕೊಂಡು  ಮದ್ಯಾಹ್ನ 1-45 ಗಂಟೆ  ನಗರಗೆರೆ ಗ್ರಾಮದ ಬಳಿ ಇರುವ ಕೆರೆಯ  ಅಂಗಳಕ್ಕೆ  ಹೋದಾಗ, ಯಾರೋ  ಟ್ರಾಕ್ಟರ್ ನಲ್ಲಿ  ಮರಳನ್ನು ತುಂಬಿಸುತ್ತಿದ್ದು, ನಮ್ಮನ್ನು ಮತ್ತು ಪೊಲೀಸ್ ಜೀಪನ್ನು ದೂರದಿಂದಲೇ ನೋಡಿ, ಮರಳು ತುಂಬಿರುವ ಟ್ರಾಕ್ಟರ್ ಅನ್ನು   ಸ್ಥಳದಲ್ಲೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದು ತಾನು ಮತ್ತು ಸಿಬ್ಬಂದಿಯು ಬೆನ್ನಟ್ಟಿ ಹಿಡಿದುಕೊಂಡಿದ್ದು  ಹೆಸರು ಮತ್ತು ವಿಳಾಸ ಕೇಳಲಾಗಿ ಲೋಕೇಶ್ ಬಿನ್ ಗಂಗಾಧರಪ್ಪ, 25 ವರ್ಷ, ನಾಯಕರು, ಜಿರಾಯ್ತಿ, ವಾಸ ಕಂಚಿಸಮುದ್ರಂ ಗ್ರಾಮ, ಲೇಪಾಕ್ಷಿ ಮಂಡಲಂ, ಹಿಂದೂಪುರ ತಾಲ್ಲೂಕು , ಅನಂತಪುರ ಜಿಲ್ಲೆ. ಮೊ. 9346827721 ಎಂದು ತಿಳಿಸಿರುತ್ತಾನೆ.  ನಂತರ ಟ್ರಾಕ್ಟರ್ ಬಳಿ ಹೋಗಿ ಪರಿಶೀಲಿಸಿ ನೋಡಲಾಗಿ ಅದು ಈಚರ್ -480 ಕಂಪನಿಯ ಟ್ರ್ಯಾಕ್ಟರ್ ಆಗಿರುತ್ತೆ.   ಟ್ರಾಕ್ಟರ್ ನ ಇಂಜಿನ್ ನ ಮುಂಬಾಗದಲ್ಲಿ  ಎ.ಪಿ-39-ಜಿ.ಆರ್ 8606 ನೊಂದಣಿ ಸಂಖ್ಯೆ  ಇರುತ್ತೆ.  ಟ್ರಾಕ್ಟರ್ ನ ಇಂಜಿನ್ ನಂ. S325L17669  ಆಗಿರುತ್ತೆ. ಟ್ರಾಕ್ಟರ್ ನ ಚಾಸಿಸ್  ನಂ. 929813020360  ಆಗಿರುತ್ತೆ  ಟ್ರ್ಯಾಲಿಯಲ್ಲಿ ಬಾಡಿ ಲೆವೆಲ್ಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ  ಮರಳು ತುಂಬಿರುತ್ತೆ. ಟ್ರ್ಯಾಲಿಗೆ ನೊಂದಣಿ ಸಂಖ್ಯೆ ಇರುವುದಿಲ್ಲ.  ಮರಳು ತೆಗೆದು ಸಾಗಾಣಿಕೆಯನ್ನು  ಮಾಡಲು  ಸರ್ಕಾರ ನಿಷೇದಿಸಿದ್ದರೂ ಸಹಾ  ಮೇಲ್ಕಂಡ ಟ್ರ್ಯಾಕ್ಟರ್  ಮತ್ತು ಟ್ರ್ಯಾಲಿಯಲ್ಲಿ ಅದರ ಮಾಲೀಕ ಹಾಗು ಚಾಲಕ ಯಾವುದೇ ಪರವಾನಗಿ ಇಲ್ಲದೇ ಕಳ್ಳತನವಾಗಿ ಮರಳನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ  ಅಕ್ರಮವಾಗಿ ಮರಳು ಕಳವು  ಮಾಡಿರುತ್ತಾರೆ. ಮರಳು ತುಂಬಿದ  ಟ್ರ್ಯಾಕ್ಟರ್  ಮತ್ತು ಟ್ರ್ಯಾಲಿಯನ್ನು ಮದ್ಯಾಹ್ನ 1-45  ರಿಂದ 2-45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಮತ್ತು  ಟ್ರಾಕ್ಟರ್ ಚಾಲಕನನ್ನು ವಶಕ್ಕೆ ತೆಗೆದುಕೊಂಡು  ಠಾಣೆಗೆ ಮದ್ಯಾಹ್ನ 3-30 ಗಂಟೆಗೆ  ಠಾಣೆಗೆ ವಾಪಸ್ಸು ಬಂದು, ಮೇಲ್ಕಂಡ ಟ್ರ್ಯಾಕ್ಟರ್  ಚಾಲಕ ಮತ್ತು ಮಾಲೀಕನ ಮೇಲೆ ಕಲಂ: 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ  ಕೇಸು ದಾಖಲಿಸಿರುತ್ತೆ.

 

12. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.46/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ:27/03/2021 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಘನ ನ್ಯಾಯಾಲಯದ ಪಿ,ಸಿ 89 ಮಂಜುನಾಥ ರವರು ಠಾಣಾ ಎನ್,ಸಿ,ಆರ್ ನಂ:64/2021 ರಲ್ಲಿ ಘನ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಲು ಅನುಮತಿ ಪಡೆದುಕೊಂಡು ಬಂದ ದೂರಿನ ಸಾರಾಂಶವೇನೆಂದರೆ ದಿನಾಂಕ:27/03/2021 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರವರಾದ ಸರಸ್ವತಮ್ಮ ರವರು ಮತ್ತು ಸಿಬ್ಬಂದಿ ಸಿ,ಹೆಚ್,ಸಿ 85 ನರಸಿಂಹ , ಸಿ,ಹೆಚ್,ಸಿ 71 ಸುಬ್ರಮಣಿ ಸಿ,ಹೆಚ್,ಸಿ-80 ಕೃಷ್ಣಪ್ಪ, ಸಿ,ಹೆಚ್,ಸಿ 208 ಗಿರೀಶ್, ಸಿ,ಪಿ,ಸಿ-527 ಮಧು, ಸಿ,ಪಿ,ಸಿ 152 ಜಯಣ್ಣ ರವರೊಂಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40-ಜಿ-270 ರಲ್ಲಿ ಚಾಲಕ ಎ,ಪಿ,ಸಿ 138 ಮಹಬೂಬ್ ಬಾಷ ರವರೊಂದಿಗೆ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ದೊಡ್ಡಪೈಯಲಗುರ್ಕಿ, ಶೆಟ್ಟಿಗೆರೆ ಕ್ರಾಸ್, ಅರೂರು ಕಡೆ ಗಸ್ತು ಮಾಡಿಕೊಂಡು ಸಂಜೆ 4-30 ಗಂಟೆಗೆ ಪೆರೇಸಂದ್ರ ಗ್ರಾಮಕ್ಕೆ ಬಂದು ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಗುಡಿಬಂಡೆ ರಸ್ತೆಯಲ್ಲಿ ಬರುವ ಕಮ್ಮಗಾನಹಳ್ಳಿ ಗೇಟಿನಿಂದ ಉತ್ತರಕ್ಕೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಮುತ್ತುಕದಹಳ್ಳಿ ಗ್ರಾಮದ ವಾಸಿಯಾದ ದಯಾನಂದ ರವರ ಮಾವಿನ ತೋಪಿನಲ್ಲಿ ಮಾವಿನ ಮರದ ಕೆಳಗೆ ಕಾನೂನು ಬಾಹಿರವಾದ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರ ಸಮಕ್ಷಮ ಜೀಪಿನಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಜೆ 5-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ  ವಾಹನಗಳನ್ನು ಮರೆಯಲ್ಲಿ ನಿಲ್ಲಿಸಿ ನೋಡಲಾಗಿ ಯಾರೋ ಕೆಲವರು ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿ ಇಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಗೆ 200 ರೂ ಎಂತಲೂ ಬಾಹರ್ ಗೆ 200 ರೂ ಎಂತಲೂ ಇಸ್ಪೀಟ್ ಜೂಜಾಟವಾಡುತ್ತಿದ್ದು, ಪಂಚರ ಸಮಕ್ಷಮ ಸುತ್ತುವರೆದು ದಾಳಿ ಮಾಡಿ ಸ್ಥಳದಲ್ಲಿ ದೊರೆತ 1) ಜೂಜಾಟಕ್ಕೆ ಪಣವಾಗಿಟ್ಟಿದ್ದ 16580/- ರೂ ನಗದು ಹಣ, 2) 52 ಇಸ್ಪೀಟ್ ಎಲೆಗಳು 3) ಒಂದು ನ್ಯೂಸ್ ಪೇಪರ್ ಹಾಗೂ 1)ಸಾಯಿ 2) ರವಿ ಕುಮಾರ್ 3) ಶ್ರೀನಿವಾಸಚಾರಿ 4) ಶ್ರೀಕಾಂತ 5)ಮಹೇಶ್ ಎಂಬ 05 ಜನ ಆಸಾಮಿಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ವಶಕ್ಕೆ ಪಡೆದುಕೊಂಡು ಮಾಲುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಕಾನೂನು ಬಾಹಿರವಾಗಿ ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ಆಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಮಾಲು, ಅಸಲು ಪಂಚನಾಮೆ ಮತ್ತು ಆರೋಪಿಗಳೊಂದಿಗೆ ವರದಿಯನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ಕೋರಿದ ದೂರು.

 

13. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.47/2021 ಕಲಂ. 504,355,143,147,149,448,323 ಐ.ಪಿ.ಸಿ:-

     ದಿನಾಂಕ 27/03/2021 ರಂದು ರಾತ್ರಿ 8-45 ಗಂಟೆಗೆ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದುಕೊಂಡು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸುಜಾತಮ್ಮ ಗುಡಿಬಂಡೆ ಟೌನ್ ರವರ ಹೇಳಿಕೆಯನ್ನು ಪಡೆದು ಕೊಂಡಿದ್ದರ ಸಾರಾಂಶವೇನೆಂದರೆ, ದಿನಾಂಕ 27/03/2021 ರಂದು ಸಂಜೆ 7-00 ಗಂಟೆಯ ಸಮಯದಲ್ಲಿ ಗಾಯಾಳು ತನ್ನ ಮನೆಯಲ್ಲಿ ತನ್ನ ಮಗಳು ಲೇಖನ ಮತ್ತು ತನ್ನ ಅಕ್ಕ  ಮಂಜುಳ ರವರು ಇದ್ದಾಗ ಆರೋಪಿತರು ತನ್ನ ಮನೆಗೆ ಬಂದು ಈ ಪೈಕಿ ಗಂಗಾದೇವಿ ತನ್ನ ಜುಟ್ಟು ಹಿಡಿದು ಎಳೆದಾಡಿದ್ದುಮ ಮಮತ ರವರು ತನ್ನ ಕೆನ್ನೆಗೆ ಕೈಗಳಿಂದ ಹೊಡೆದದ್ದು, ಚಂದ್ರ ರವರು ತನಗೆ ಚಪ್ಪಲಿಂದ ಹೊಡೆದಿದ್ದು, ಆಗ ಬಿಡಿಸಲು ಅಡ್ಡ ಬಂದ ತನ್ನ ಅಕ್ಕ ಮಂಜುಳ ಹಾಗೂ ತನ್ನ ಮಗಳು ಲೇಖನ ರವರಿಗೆ ಕೈಗಳಿಂದ ಹಾಗೂ ಚಪ್ಪಲಿಂದ ಹೊಡೆದಿದ್ದು, ಸೀನಾ ಎಂಬುವನು ಅವಾಚ್ಯ ಶಬ್ದಗಳಿಂದ ಬೈದಿದ್ದು, ತಮಗೆ ಸೇರಿದ ಮನಗೆ ಮತ್ತು ಅಂಗಡಿಗಳ ವಿಚಾರದಲ್ಲಿ ಗಲಾಟೆ ಮಾಡಿರುತ್ತಾರೆ ಎಂತ ನೀಡಿದ ಹೇಳಿಕೆಯ ಮೇರೆಗೆ ಠಾಣೆಗೆ ರಾತ್ರಿ 9-45 ಗಂಟೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿಕೊಂಡಿರುತ್ತೆ,

 

14. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.36/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ 28-03-2021 ರಂದು ಮಧ್ಯಾಹ್ನ 12.00 ಗಂಟೆಗೆ ಪಿರ್ಯಾದಿದಾರರಾದ ರಾಮಪ್ಪ ಬಿನ್ ಲೇಟ್ ಮದ್ದಿರೆಡ್ಡಿ, 66 ವರ್ಷ, ಜಿರಾಯ್ತಿ, ವಕ್ಕಲಿಗರು, ವಾಸ ಹೊಸಹುಡ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನಗೆ ಇಬ್ಬರು ಗಂಡು ಮಕ್ಕಳಿದ್ದು  ಒಂದನೇ 32 ವರ್ಷದ  ಆಂಜನೇಯರೆಡ್ಡಿ, ಎರಡನೇ 29 ವರ್ಷದ ಮಧು ಆಗಿರುತ್ತಾರೆ. ತಾವು ಜಿರಾಯ್ತಿ ಮತ್ತು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ. ದಿನಾಂಕ:26/03/2021 ರಂದು ಬೆಳಗಿನ ಜಾವ ತನ್ನ ದೊಡ್ಡ ಮಗ ಆಂಜನೇಯರೆಡ್ಡಿರವರು ತಾವು ಬೆಳೆದಿದ್ದ ಮೆಣಸಿನ ಕಾಯಿಗಳನ್ನು ಚಿಂತಾಮಣಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿಕೊಂಡು ಬೆಳಿಗ್ಗೆ ಚಿಂತಾಮಣಿಯಿಂದ ಕೆ.ಎ.05-ಬಿ-6231 ರ ಎ.ಎನ್.ಆರ್ ಖಾಸಗಿ ಬಸ್ಸಿನಲ್ಲಿ  ತಮ್ಮ ಗ್ರಾಮಕ್ಕೆ ಬರಲು ಬೆಳಿಗ್ಗೆ ಸುಮಾರು 09-15 ಗಂಟೆಯ ಸಮಯದಲ್ಲಿ  ತನ್ನ ಮಗ ಬಸ್ಸಿನ ಹಿಂಭಾಗದ ಟೈರ್ ಗಳ ಮೇಲೆ ಇರುವ ಸೀಟಿನಲ್ಲಿ  ಕುಳಿತುಕೊಂಡು ಶೆಟ್ಟಿನಾಯಕನಹಳ್ಳಿ ಕ್ರಾಸ್ - ನಡಂಪಲ್ಲಿ ಗ್ರಾಮದ ಮಧ್ಯ ಚಿಂತಾಮಣಿ-ಚೇಳೂರು ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ಸಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ  ಬಸ್ಸಿನ ಹಿಂಭಾಗದ ಟೈರ್ ಹೊಡೆದು ಹೋಗಿ  ತನ್ನ ಮಗನಿಗೆ ಕಾಲುಗಳಿಗೆ ಗಾಯಗಳಾಗಿದ್ದು ಕೂಡಲೇ ಅದೇ ಬಸ್ಸಿನಲ್ಲಿ ಬರುತ್ತಿದ್ದ ತಮ್ಮ ಗ್ರಾಮದ ಕೆ.ವಿ.ವೆಂಕಟರವಣಪ್ಪ ಬಿನ್ ಲೇಟ್ ವೆಂಕಟರಾಯಪ್ಪ ರವರು ತನ್ನ ಮಗನನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಪಡೆಸಿಕೊಂಡು ತಮ್ಮ ಮನೆಗೆ ಕರೆದುಕೊಂಡು ಬಂದರು. ಆದರೇ ದಿನಾಂಕ:27/03/2021 ರಂದು ತನ್ನ ಮಗ ಆಂಜನೇಯರೆಡ್ಡಿ ರವರಿಗೆ ನೋವುಗಳು ಜಾಸ್ತಿಯಾಗಿದ್ದರಿಂದ ಮತ್ತು ಊತ ಬಂದಿದ್ದರಿಂದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಲು ಸೂಚಿಸಿದ್ದರ ಮೇರೆಗೆ ಬೆಂಗಳೂರು ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುತ್ತೇವೆ. ಹಾಗೂ ಟೈರ್ ಹೊಡೆದಿದ್ದರಿಂದ ಬಸ್ಸಿನಲ್ಲಿದ್ದ ಇನ್ನು ಕೆಲವರಿಗೆ ಗಾಯಗಳಾಗಿದೆಂದು ತಿಳಿಯಿತು.  ಕೆ.ಎ.05-ಬಿ-6231 ರ ಎ.ಎನ್.ಆರ್ ಖಾಸಗಿ ಬಸ್ಸಿನ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ  ಟೈರ್ ಹೊಡೆದಿದ್ದರಿಂದ ಬಸ್ಸಿನಲ್ಲಿ ಕುಳಿತಿದ್ದ ತನ್ನ ಮಗ ಆಂಜನೇಯರೆಡ್ಡಿರವರಿಗೆ ಗಾಯಗಳಾಗಲು ಕಾರಣರಾದ  ಬಸ್ಸು ಮತ್ತು ಬಸ್ಸಿನ ಚಾಲಕರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ. ತನ್ನ ಮಗನಿಗೆ ಚಿಕಿತ್ಸೆ ಕೊಡೆಸುತ್ತಿದ್ದರಿಂದ ಈ ದಿನ ದಿನಾಂಕ:28/03/2021 ರಂದು ದೂರನ್ನು ತಡವಾಗಿ ನೀಡಿರುತ್ತೇನೆಂದು  ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

15. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.57/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ:27/03/2021 ರಂದು ಸಂಜೆ 18-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಾಲಾಜಿ ಬಿನ್ ನರಸಿಂಹಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ತಂದೆಯವರಾದ ನರಸಿಂಹಮೂರ್ತಿ ಬಿನ್ ಕದಿರಪ್ಪ, 45 ವರ್ಷ ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ಈ ದಿನ ದಿನಾಂಕ:27/03/2021 ರಂದು ನಮ್ಮ ಗ್ರಾಮದ ಮೇಸ್ತ್ರಿ ಗಂಗಾಧರಪ್ಪ ರವರ ಜೊತೆಯಲ್ಲಿ ಗೌರಿಬಿದನೂರು ತಾಲ್ಲೂಕು ರಾಗಿಮಾಕಲಹಳ್ಳಿ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ಹಾಕಲು ಕೂಲಿ ಕೆಲಸಕ್ಕೆ ಹೋಗಿದ್ದು, ಮದ್ಯಾಹ್ನ ಸುಮಾರು 3-30 ಗಂಟೆಗೆ ನಮ್ಮ ತಂದೆ ಕೆಲಸ ಮಾಡುತ್ತಿದ್ದಾಗ ಕಾಂಕ್ರೀಟ್ ಮಿಕ್ಸಿಂಗ್ ಮಾಡುವ ವಾಹನ KA-01, MJ-8035 ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆಲಸ ಮಾಡುತ್ತಿದ್ದ ನಮ್ಮ ತಂದೆಗೆ ಡಿಕ್ಕಿ ಹೊಡೆಸಿದ ಪರಿಣಾಮ ನಮ್ಮ ತಂದೆ ಕೆಳಗೆ ಬಿದ್ದು, ಮುಖಕ್ಕೆ ರಕ್ತಗಾಯವಾಗಿ ಎಡಕಾಲಿನ ಮುಂಗಾಲಿನ ಮೇಲೆ ವಾಹನದ ಚಕ್ರ ಹರಿದು ರಕ್ತಗಾಯವಾಗಿದ್ದು, ಆಗ ತಕ್ಷಣ ಅಲ್ಲಿ ಕೆಲಸ ಮಾಡುತ್ತಿದ್ದ ಮೆಸ್ತ್ರಿ ಗಂಗಾಧರಪ್ಪ ರವರು 108 ಅಂಬ್ಯೂಲೇನ್ಸ್ ನಲ್ಲಿ ನಮ್ಮ ತಂದೆಯನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ದಾರಿ ಮಧ್ಯೆ ನಮ್ಮ ತಂದೆ ಮೃತಪಟ್ಟಿದ್ದು, ಸದರಿ ವಿಚಾರವನ್ನು ಗಂಗಾಧರಪ್ಪ ರವರು ನನಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು, ನಾನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ನಮ್ಮ ತಂದೆಗೆ ಅಪಘಾತ ಪಡಿಸಿದ KA-01, MJ-8035 ಕಾಂಕ್ರೀಟ್ ಮಿಕ್ಸಿಂಗ್ ವಾಹನದ ಚಾಲಕ ಮತ್ತು ಮಾಲೀಕ ಹಾಗೂ ಕೆಲಸ ಮಾಡುವಾಗ ನಿರ್ಲಕ್ಷತೆ ವಹಿಸಿದ ಗುತ್ತಿಗೆದಾರ ವೆಂಕಟೇಶ ರಾಗಿಮಾಕಲಹಳ್ಳಿ ಗ್ರಾಮ ಮತ್ತು ಮೇಸ್ತ್ರಿ ಗಂಗಾಧರಪ್ಪ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

16. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.58/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:27/03/2021 ರಂದು ಪಿರ್ಯಾದಿದಾರರಾದ ಶ್ರೀ. ನಾರಾಯಣ ಬಿನ್ ಅಂಕಯ್ಯ 32 ವರ್ಷ ಪ.ಜಾತಿ ಕೂಲಿ ಕೆಲಸ ಗುರುಗುಪಾಡು ಗ್ರಾಮ ಪೋದಲಿ ತಾಲ್ಲೂಕು ಪ್ರಕಾಶಂ ಜಿಲ್ಲೆ. ಆಂದ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:27/03/2021 ರಂದು  ತನ್ನ ತಮ್ಮ ಸೀನು  ಬಿನ್ ಅಂಕಯ್ಯ 30 ವರ್ಷ ಮತ್ತು  ತನ್ನ ಮಗಳಾದ ಸಾಯಿ ಆಸಿನಿ 3 ವರ್ಷ, ಮತ್ತು  ಅವರ  ಅಕ್ಕನ ಮಗನಾಧ ಅಖಿಲ್ ಬಿನ್ ಕೃಷ್ಣ  9  ವರ್ಷ ರವರುಗಳು ಎ.ಪಿ.27-ಬಿ.ಹೆಚ್-0315 ರ ದ್ವಿ ಚಕ್ರವಾಹನದಲ್ಲಿ ಇಂದಿರಾನಗರದಿಂದ ಅಲ್ಲಿಪುರಕ್ಕೆ ಹೋಗಿ ಮನೆಯ ಸಾಮಾನುಗಳನ್ನು ತೆಗೆದುಕೊಂಡು ಬರಲು ಕಳುಹಿಸಿಕೊಟ್ಟಿದ್ದು. ಮನೆ ಸಾಮಾನುಗಳನ್ನು ತೆಗೆದುಕೊಂಡು ವಾಪಸ್ಸು ಇಂದಿರಾನಗರಕ್ಕೆ ಬರಲು ಅಲ್ಲಿಪುರ ಹೆಚ್.ಪಿ.ಪೆಟ್ರೋಲ್ ಬಂಕ್ ಎಸ್.ಹೆಚ್-9 ರಸ್ತೆಯಲ್ಲಿ ಬರುತ್ತಿರುವಾಗ ತೊಂಡೇಬಾವಿ ಕಡೆಯಿಂದ ಬಂದ ಕೆ.ಎ-64-2958 ರ ಟಾಟಾ ಎ.ಸಿ. ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿ ಚಕ್ರವಾಹನಕ್ಕೆ ಮದ್ಯಾಹ್ನ 1-30 ಗಂಟೆಯ ಸಮಯದಲ್ಲಿ ಡಿಕ್ಕಿ ಹೊಡೆಯಿಸಿದ್ದು. ಅಪಘಾತದಿಂದ ಸೀನು ರವರಿಗೆ ಮುಖಕ್ಕೆ ಹಾಗೂ ಎಡಗೈಗೆ ಮತ್ತು ಸಾಯಿ ಆಸಿನಿ ರವರಿಗೆ ಬಲಗಾಲಿಗೆ ಹಾಗೂ ಅಖೀಲ್ ರವರಿಗೆ ಕೈಗಳಿಗೆ ಗಾಯವಾಗಿದ್ದು. ಅಪಘಾತವನ್ನುಂಟುಮಾಡಿದ ವಾಹನ ಸ್ಥಳದಿಂದ ಹೊರಟುಹೋಗಿದ್ದು. ಗಾಯಾಳುಗಳನ್ನು 108 ಆಂಬ್ಯೂಲೆನ್ಸ್ ವಾಹನದಲ್ಲಿ ಗೌರೀಬಿದನೂರು ಸರ್ಕಾರಿ ಆಸ್ವತ್ರೆಗೆ ಸೇರಿಸಿ ನಂತರ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರು ವಿಕ್ಟೋರಿಯಾ ಆಸ್ವತ್ರೆಗೆ ದಾಖಲಿಸಿದ್ದು. ಅಪಘಾತಪಡಿಸಿ ಸ್ಥಳದಿಂದ ಹೊರಟು ಹೋದ  ಕೆ.ಎ-64-2958 ರ ಟಾಟಾ ಎ.ಸಿ. ವಾಹನದ ಚಾಲಕನ  ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

17. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.85/2021 ಕಲಂ. 379 ಐ.ಪಿ.ಸಿ :-

     ದಿನಾಂಕ 28/03/2021 ರಂದು ಮದ್ಯಾಹ್ನ ಸುಮಾರು 12-30 ಗಂಟೆಗೆ ಪಿರ್ಯಾದಿದಾರರಾದ ಮಂಜುನಾಥ ಎಂ ಬಿನ್ ನಾರಯಣಪ್ಪ, 32 ವರ್ಷ, ನಾಯಕ, ಬಾರ್ ಕ್ಯಾಷೀಯರ್, ಪಿ ಜಿಡಮಾಕಲಹಳ್ಳಿ, ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಸುಮಾರು 5 ತಿಂಗಳಿನಿಂದ ಬೀಚಗೊಂಡಹಳ್ಳಿ ಗ್ರಾಮದ ಗೇಟ್ ನಲ್ಲಿರುವ ಎಂ.ಎಸ್.ಐ.ಎಲ್ ನಲ್ಲಿ ಕ್ಯಾಷೀಯರ್ ಆಗಿ ಕೆಲಸ ಮಾಡಿಕೊಂಡು ಹೆಚ್.ಕ್ರಾಸ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇರುತ್ತೇನೆ. ತಾನು ಬಿಡುವಿನ ಸಮಯದಲ್ಲಿ ತಮ್ಮ ಗ್ರಾಮವಾದ ಪಿ ಜಿಡಮಾಕಲಹಳ್ಳಿ ಗ್ರಾಮಕ್ಕೆ ಹೋಗಿ ಬರಲು ತನ್ನ ಸ್ನೇಹಿತನಾದ ಶ್ರೀನಿವಾಸಪುರ ತಾಲ್ಲೂಕು ಕಲ್ಲೂರು ಗ್ರಾಮದ ವಾಸಿ ದೇವರಾಜ ಬಿನ್ ನಾರಾಯಣಸ್ವಾಮಿ ರವರ ಬಾಬತ್ತು ಸುಮಾರು 45000 ರೂ ಬೆಲೆ ಬಾಳುವ ಕೆಎ.07.ಇಸಿ.9234 ನೊಂದಣಿ ಸಂಖ್ಯೆಯ ಕಪ್ಪು ಬಣ್ಣದ ಪಲ್ಸರ್ ದ್ವಿ ಚಕ್ರ ವಾಹನವನ್ನು ಪಡೆದುಕೊಂಡಿದ್ದು ತಾನು ಪ್ರತಿ ದಿನ ಹೆಚ್.ಕ್ರಾಸ್ ನಿಂದ ಬೀಚಗೊಂಡಹಳ್ಳಿ ಗ್ರಾಮದ ಬಳಿ ಇರುವ ಎಂ.ಎಸ್.ಐ.ಎಲ್ಗೆ ಹೋಗಿ ಬರುತ್ತಿರುತ್ತೇನೆ. ಎಂದಿನಂತೆ ದಿನಾಂಕ:19.03.2021 ರಂದು ಬೆಳಿಗ್ಗೆ 10.30 ಗಂಟೆಗೆ ಕೆಎ.07.ಇಸಿ.9234 ನೊಂದಣಿ ಸಂಖ್ಯೆಯ ಕಪ್ಪು ಬಣ್ಣದ ಪಲ್ಸರ್ ದ್ವಿ ಚಕ್ರ ವಾಹನದಲ್ಲಿ ಎಂ.ಎಸ್.ಐ.ಎಲ್ಗೆ ಕೆಲಸಕ್ಕೆ ಹೋಗಿ ಕೆಲಸವನ್ನು ಮುಗಿಸಿಕೊಂಡು ಪುನಃ ರಾತ್ರಿ 10.10 ಗಂಟೆಗೆ ಕೆಎ.07.ಇಸಿ.9234 ನೊಂದಣಿ ಸಂಖ್ಯೆಯ ಕಪ್ಪು ಬಣ್ಣದ ಪಲ್ಸರ್ ದ್ವಿ ಚಕ್ರ ವಾಹನದಲ್ಲಿ ಹೆಚ್.ಕ್ರಾಸ್ ನಲ್ಲಿರುವ ಬಾಡಿಗೆ ಮನೆಯ ಬಳಿ ಬಂದು ದ್ವಿ ಚಕ್ರ ವಾಹವನ್ನು ಮನೆಯ ಮುಂಬಾಗದಲ್ಲಿ ನಿಲ್ಲಿಸಿ ಮನೆಯ ಒಳಗೆ ಹೋಗಿದ್ದು ನಂತರ 10.40 ಗಂಟೆ ಸಮಯದಲ್ಲಿ ತಾನು ಮನೆಯಿಂದ ಹೊರಗಡೆ ಬಂದು ನೋಡಿದಾಗ ಕೆಎ.07.ಇಸಿ.9234 ನೊಂದಣಿ ಸಂಖ್ಯೆಯ ಕಪ್ಪು ಬಣ್ಣದ ಪಲ್ಸರ್ ದ್ವಿ ಚಕ್ರ ವಾಹನ ಕಾಣದೇ ಇದ್ದು ಸದರಿ ದ್ವಿ ಚಕ್ರ ವಾಹವನ್ನು ಯಾರೋ ಅಸಾಮಿಗಳು ತಾನು ಮನೆಯ ಒಳಗಡೆ ಹೋಗಿದ್ದಾಗ ಕಳವು ಮಾಡಿಕೊಂಡು ಹೋಗಿರುತ್ತಾರೆ. ನಂತರ ತಾನು ತನ್ನ ದ್ವಿ ಚಕ್ರ ವಾಹವನ್ನು ಹೆಚ್.ಕ್ರಾಸ್ ನ ಹಲವಾರು ಕಡೆಗಳಲ್ಲಿ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ತಾನು ತನ್ನ ದ್ವಿ ಚಕ್ರ ವಾಹನ ಕಳುವಾದ ಬಗ್ಗೆ ತಮ್ಮ ಸ್ನೇಹಿತ ದೇವರಾಜ್ ರವರಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತಿದ್ದು ಕಳವಾಗಿರುವ ಕೆಎ.07.ಇಸಿ.9234 ಪಲ್ಸರ್ ದ್ವಿ ಚಕ್ರ ವಾಹನವನ್ನು ಪತ್ತೆ ಮಾಡಿ ಕಳವು ಮಾಡಿರುವ ಅಸಾಮಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 28-03-2021 06:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080