ಅಭಿಪ್ರಾಯ / ಸಲಹೆಗಳು

1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 28/2021 ಕಲಂ. 379 ಐಪಿಸಿ :-

  ದಿನಾಂಕ 27/02/2021 ರಮದು ಪಿರ್ಯಾದುದಾರರಾದ ಅಪ್ಸರ್ ಪಾಷ ಬಿನ್ ಲೇಟ್  ಸೈಯದ್ ಯೂಸೆಪ್, 53 ವರ್ಷ, ವಾರ್ಡ್ ನಂ 14, ಸೊಣ್ಣಶೆಟ್ಟಹಳ್ಳಿ, ಚಿಂತಾಮಣಿ ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಕೆಎ 40 ಎಕ್ಸ್ 1400 ಆಕ್ಟೀವ್ ಹೊಂಡಾ ದ್ವಿ ಚಕ್ರ ವಾಹನವನ್ನು  ( ಛಾರ್ಸಿ ನಂ- ME4JF504FFT464836, ಇಂಜಿನ್ ನಂ - JF50ET2465641) ಹೊಂದಿದ್ದು ಸದರಿ ದ್ವಿ ಚಕ್ರ ವಾಹನವನ್ನು ದಿನಾಂಕ 17/02/2021 ರಂದು ಸಂಜೆ 4-00 ಗಂಟೆಗೆ  ಚಿಂತಾಮಣಿ ನಗರದ ಮುನ್ಸಿಪಲ್ ಮುಂಭಾಗ ಅಂದರೆ ಶಿವ ಶಂಕರ್ ಬಿಲ್ಡಿಂಗ್ ಕೆಳಗೆ ನಿಲ್ಲಿಸಿ ವಕೀಲರಾದ ಬೈರಾರೆಡ್ಡಿ ರವರ ಕಛೇರಿಗೆ ಹೋಗಿ  5-00 ಗಂಟೆಗೆ ಬಂದು ನೋಡಲಾಗಿ ನನ್ನ ದ್ವಿ ಚಕ್ರ ವಾಹನ ಇರುವುದಿಲ್ಲ.  ನಾನು ಸುತ್ತಮುತ್ತಲು ಹುಡುಕಾಡಿದರೂ ಸಹ ಪತ್ತೆಯಾಗದೇ ಇದ್ದು ಯಾರೋ ಕಳ್ಳರು ನನ್ನ  ದ್ವಿ ಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ದ್ವಿ ಚಕ್ರ ವಾಹನದ ಬೆಲೆ ಸುಮಾರು 25000/- ರೂ ಆಗಿರುತ್ತೆ. ಆದ್ದರಿಂದ ಕಳುವಾಗಿರುವ ನನ್ನ ದ್ವಿ ಚಕ್ರ ವಾಹನವನ್ನು  ಹಾಗೂ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು  ಕೋರಿ ದೂರು.

 

2. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 49/2021 ಕಲಂ.279,337 ಐಪಿಸಿ :-

  ದಿನಾಂಕ:27/02/2021 ರಂದು  ರಾತ್ರಿ 8-15 ಗಂಟೆಯಲ್ಲಿ ಗೌರೀಬಿದನೂರು ಟೌನ್  ವಿಧ್ಯಾನಗರ ವಾಸಿಯಾದ  ಶ್ರೀ.ಲಕ್ಷ್ಮೀಪತಿ ಕೆ.ಎ. ಬಿನ್ ಅಶ್ವತ್ಥಪ್ಪ.ಎನ್. ವಯಸ್ಸು ಸುಮಾರು 50 ವರ್ಷ, ಸಾದರ ಜನಾಂಗ ಇವರು ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ತನ್ನ ಅಣ್ಣನಾದ  ನರಸೇಗೌಡ ಕೆ.ಎ ಎಂಬುವವರ ಮಗನಾದ ಮಿಥುನ್ ಕೆ.ಎನ್. ಬಿನ್ ನರಶೇ ಗೌಡ ಕೆ.ಎ. 18 ವರ್ಷ,  ಎಂಬುವವನು ಗೌರೀಬಿದನೂರು ಬಿ.ಜಿ.ಎಸ್. ಶಾಲೆಯಲ್ಲಿ ದ್ವಿತೀಯ ಪಿ.ಯು.ಸಿ. ಯಲ್ಲಿ ವ್ಯಾಸಂಗ ಮಾಡುತ್ತಿದ್ದು,  ದಿನಾಂಕ:27/02/2021 ರಂದು ಮಧ್ಯಾಹ್ನ ಸುಮಾರು 12-30 ರ ಸಮಯದಲ್ಲಿ  ಮಿಥುನ್ ಮಧುಗಿರಿ ತಾಲ್ಲೂಕು, ಗಂಕಾರ್ಲಹಳ್ಳಿಗೆ  ಹೋಗುತ್ತೇನೆಂದು ಹೇಳಿ  KA40-ED-8978 ಆಕ್ಟೀವ್ ಹೋಂಡಾ ದ್ವಿಚಕ್ರ ವಾಹನದಲ್ಲಿ ಹೋಗಿದ್ದು, ಮಧ್ಯಾಹ್ನ ಸುಮಾರು 1-15  ಗಂಟೆಯಲ್ಲಿ ಚಂದನದೂರು ಬಳಿ ಹೋಗುತ್ತಿದ್ದಾಗ, ಎದುರುಗಡೆಯಿಂದ  ಬಂದ ದ್ವಿಚಕ್ರ ವಾಹನ ಸವಾರ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಡಿಕ್ಕಿ ಹೊಡೆದ ಪರಿಣಾಮ ಕೆ.ಎನ್.ಮಿಥುನ್ ತಲೆಗೆ  ರಕ್ತಗಾಯಗಳಾಗಿದ್ದು,  ಡಿಕ್ಕಿ ಹೊಡೆಸಿದ  ದ್ವಿಚಕ್ರ ವಾಹನ ಸವಾರನಿಗೂ ಗಾಯಗಳಾಗಿರುವುದಾಗಿ, ಈ ಅಪಘಾತದ ವಿಚಾರವನ್ನು ನನ್ನ ಅತ್ತಿಗೆ ನನಗೆ ತಿಳಿಸಿದ್ದು, ನಾನು ಸಹ ಗೌರೀಬಿದನೂರು  ಸರ್ಕಾರಿ ಆಸ್ಪತ್ರೆ ಬಳಿಗೆ ಬಂದು ನೋಡಲಾಗಿ, ಕೆ.ಎನ್. ಮಿಥುನ್ ಗೆ ಅಪಘಾತವಾಗಿರುವುದು ನಿಜವಾಗಿದ್ದು,  ಅಪಘಾತ ಮಾಡಿದ  ದ್ವಿಚಕ್ರವಾಹನ ಸಂಖ್ಯೆ:KA.64.S.5863 ಆಗಿರುತ್ತೆ. ಸದರಿ ಸವಾರ ನ ಹೆಸರು ನವೀನ್ ಕುಮಾರ್ ಎಂದು ತಿಳಿದು ಬಂದಿದ್ದು,  ಈತನಿಗೂ ಸಹ ಅಪಘಾತದಲ್ಲಿ ಗಾಯಗಳಾಗಿರುತ್ತೆಂದು ತಿಳಿಯಿತು. ಮಿಥುನ್ ಗೆ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕತ್ಸೆಗೆ ಸೇರಿಸಿ ಬಂದು ದೂರನ್ನು ನೀಡುತ್ತಿರುವುದಾಗಿ, ಈ ಅಪಘಾತಕ್ಕೆ ಕಾರಣನಾದ KA.64.S.5863 ರ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

3. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 25/2021 ಕಲಂ. 323,324,504,506 ಐಪಿಸಿ :-

  ದಿನಾಂಕ 27-02-2021 ರಂದು ಸಂಜೆ 04.00 ಗಂಟೆಗೆ ಪಿ.ಸಿ-484 ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಮೂರ್ತೇಪ್ಪ ಬಿನ್ ಲೇಟ್ ಸಲವಾದಿ ವೆಂಕಟರಾಯಪ್ಪ, 43 ವರ್ಷ, ಆದಿ ದ್ರಾವಿಡ ಜನಾಂಗ, ಜಿರಾಯ್ತಿ, ವಾಸ ರಂಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ತಾನು ಹಾಲಿ ಬೆಂಗಳೂರಿನಲ್ಲಿ ಪರಂಗಿ ಹಣ್ಣು ವ್ಯಾಪಾರ ಮಾಡಿಕೊಂಡಿದ್ದು, ಈಗ ಬೋರ್ ವೆಲ್ ನಲ್ಲಿ ನೀರು ಬರುತ್ತಿದ್ದ ಕಾರಣ ಗ್ರಾಮಕ್ಕೆ ವ್ಯವಸಾಯ ಮಾಡುವ ಸಲುವಾಗಿ ದಿನಾಂಕ 26/02/2021 ರಂದು ಗ್ರಾಮಕ್ಕೆ ಬಂದು ತೋಟದ ಮನೆ ಬಳಿ ಇದ್ದಾಗ ಮದ್ಯಾಹ್ನ 03.00 ಗಂಟೆ ಸಮಯದಲ್ಲಿ ತನ್ನ ತಮ್ಮನಾದ ಗಣೇಶ ಎಂಬಾತನು ಏಕಾಏಕಿ ಜಗಳಕ್ಕೆ ಬಂದು ಫಾವತಿ ವಾರಸು ಮೂಲಕ ತನ್ನ ಹೆಸರಿಗೆ ಬಂದಿರುವ ಜಮೀನನ್ನು ಆತನ ಹೇಸರಿಗೆ ಬೇಗ ಮಾಡಿಕೊಡಲಿಲ್ಲವೆಂದು “ ಲೋಫರ್ ನನ್ನ ಮಗನೇ ಸೂಳೆ ನನ್ನ ಮಗನೇ ನಿನ್ನ ಅಮ್ಮನೇ ಕ್ಯೇಯಾ” ಇತ್ಯಾದಿ ಅವಾಚ್ಯವಾಗಿ ಬೈದು ಅಲ್ಲೇ ಬಿದ್ದಿದ್ದ ಕಲ್ಲುಗಳಿಂದ ತನ್ನ ಮೈಮೇಲೆ ಗುದ್ದಿ ಗಾಯಪಡಿಸಿ ಕೆಳಗೆ ತಳ್ಳಿ ಕಾಲುಗಳಿಂದ ಒದ್ದು “ನಿನ್ನ ಸಾಯಿಸುವತನಕ ಬಿಡುವುದಿಲ್ಲವೆಂದು” ಪ್ರಾಣ ಬೆದರಿಕೆ ಹಾಕಿದನು. ಆಗ ಅಲ್ಲಿಯೇ ಇದ್ದ ತಮ್ಮ ಗ್ರಾಮದ ಶ್ರೀನಿವಾಸ ಬಿನ್ ಮಾರಪ್ಪ, ಚಿಕ್ಕನರಸಿಂಹಪ್ಪ, ಶಿವ, ಮಂಜುನಾಥ ರವರು ಬಂದು ಜಗಳ ಬಿಡಿಸಿದರು. ನಂತರ ನೋವು ಜಾಸ್ತಿಯಾದ್ದರಿಂದ ಯಾವುದೋ ದ್ವಿಚಕ್ರ ವಾಹನದಲ್ಲಿ ಚಿಕಿತ್ಸೆಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಗಣೇಶನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೇಳಿಕೆ ಸಾರಾಂಶವಾಗಿರುತ್ತೆ.

 

4. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 51/2021 ಕಲಂ. 324,504,506 ಐಪಿಸಿ :-

  ದಿನಾಂಕ 27/02/2021 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಪಾರ್ವತಮ್ಮ ಕೋಂ ಎಂ.ಶಾಮಣ್ಣ , 65 ವರ್ಷ, ವಾಸ-ಇರಿಗೇನಹಳ್ಳಿ ಗ್ರಾಮ, ಚನ್ನರಾಯಪಟ್ಟಣ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 21/02/2021 ರಂದು ಭಾನುವಾರದಂದು ತನ್ನ ತಮ್ಮನಾದ ಟಿ.ವಿ ನಂಜೇಗೌಡ ರವರು ನಾಗಮಂಗಲ ಗ್ರಾಮದ ಗೇಟಿನ ಬಳಿ ಇರುವ ತಮ್ಮ ನೀಲಗಿರಿ ತೋಪನ್ನು ಮಾರಾಟ ಮಾಡಿದ್ದು, ತೋಪನ್ನು ಕಟಾವು ಮಾಡಲು ದಿನಾಂಕ 23/02/2021 ರಂದು ಮದ್ಯಾಹ್ನ 12-30 ಗಂಟೆಗೆ ಖರೀದಿಸಿರುವರು ಬಂದು ಮರಗಳನ್ನು ಕಟಾವು ಮಾಡುತ್ತಿದ್ದಾಗ ತನ್ನ ಹಿರಿಯ ತಮ್ಮನಾದ ಟಿ.ವಿ ಬಚ್ಚೇಗೌಡರವರು ತಕರಾರು ಮಾಡಿದ್ದಾನೆಂದು ವಿಷಯ ತಿಳಿದು ಟಿ.ವಿ ನಂಜೇಗೌಡ ರವರು ಬೆಂಗಳೂರಿನಿಂದ ನಮಗೆ ಪೋನ್ ಮೂಲಕ ತಿಳಿಸಿದಾಗ ತಾನು ಮತ್ತು ತನ್ನ ಗಂಡನಾದ ಶಾಮಣ್ಣ ರವರು ಗಲಾಟೆ ಬೇಡ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ನೀಲಗಿರಿ ತೋಪಿನ ಬಳಿ ಹೋದಾಗ ಟಿ.ವಿ ಬಚ್ಚೇಗೌಡನು ಅಲ್ಲಿಗೆ ಬಂದು ಏಕಾಏಕಿ ಮರಗಳನ್ನು ಕಡಿಯುತ್ತಿದ್ದ ಜನರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮರದ ತುಂಡನ್ನು ತೆಗೆದುಕೊಂಡು ಹೊಡೆಯಲು ಹೋದನು, ಆಗ ತಾನು ಮತ್ತು ತನ್ನ ಗಂಡ ಶಾಮಣ್ಣ ರವರು ಗಲಾಟೆ ಮಾಡಬೇಡ ಮಾತನಾಡೋಣವೆಂದು ಹೇಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಗಂಡ ಶಾಮಣ್ಣ ರವರಿಗೆ ಹೊಡೆಯುತ್ತಿದ್ದಾಗ ತಾನು ತಡೆಯಲು ಹೋದಾಗ ತನ್ನ ಎಡ ಮುಂಗೈಗೆ ಬಲವಾದ ಪೆಟ್ಟು ಬಿದ್ದು, ರಕ್ತಗಾಯವಾಗಿರುತ್ತದೆ. ಮತ್ತು ತನ್ನ ಗಂಡನ ಬೆನ್ನಿಗೆ ಸೊಂಟಕ್ಕೆ ಮತ್ತು ಮುಖಕ್ಕೆ ಹೊಡೆದಿದ್ದರಿಂದ ಎರಡು ತುಟಿಗಳು ಹರಿದು ರಕ್ತಗಾಯವಾಗಿರುತ್ತದೆ. ಆ ಸಂದರ್ಭದಲ್ಲಿ ಮರದ ಬುಡಕ್ಕೆ ಎಡವಿ ಬಿದ್ದು ನಂತರ ಬಚ್ಚೇಗೌಡನು ನಮಗೆ ಧಮ್ಕಿ ಹಾಕಿ ಹೋಗಿರುತ್ತಾನೆ. ತಾವು ಜಂಗಮಕೋಟೆಯಲ್ಲಿರುವ ಖಾಸಗೀ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿರುತ್ತೇವೆ. ತನಗೆ ಘಟನೆಯಿಂದ ಆಘಾತವಾಗಿದ್ದರಿಂದ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡ ಟಿ.ವಿ ಬಚ್ಚೇಗೌಡ ರವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 28-02-2021 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080