Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.317/2021 ಕಲಂ. 279,337,304(A) ಐ.ಪಿ.ಸಿ:-

     ದಿನಾಂಕ:26/09/2021 ರಂದು ಸಂಜೆ 5-45 ಗಂಟೆಗೆ ಪಿರ್ಯಾದಿದಾರರಾದ ಶಿವ ಕುಮಾರ್ ಬಿನ್ ಸೀತರೆಡ್ಡಿ, 28 ವರ್ಷ, ವಕ್ಕಲಿಗರು, ವ್ಯವಸಾಯ, ಮುಮ್ಮನಹಳ್ಳಿ ಗ್ರಾಮ, ಬಶೆಟ್ಟಿಹಳ್ಳಿ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಾತ ಪೆದ್ದಪ್ಪಯ್ಯ ರವರಿಗೆ 4 ಜನ ಗಂಡು ಮಕ್ಕಳು ಮತ್ತು 3 ಜನ  ಹೆಣ್ಣು ಮಕ್ಕಳಿದ್ದು 1ನೇ ಸೀತಾರೆಡ್ಡಿ, 2ನೇ ಶ್ರೀಮತಿ ಸೀತಮ್ಮ, 3ನೇ ನಾರಾಯಣಸ್ವಾಮಿ, 4ನೇ ರಾಮಚಂದ್ರರೆಡ್ಡಿ, 5ನೇ ಶ್ರೀಮತಿ ಪಾರ್ವತಮ್ಮ, 6ನೇ  ಸಾವಿತ್ರಮ್ಮ, 7ನೇ ಮಂಜುನಾಥ ಆಗಿರುತ್ತಾರೆ, ನಾನು 1ನೇ ಸೀತಾರೆಡ್ಡಿ ರವರ ಮಗನಾಗಿರುತ್ತೇನೆ, ನಮ್ಮ ಚಿಕ್ಕಪ್ಪನಾದ ರಾಮಚಂದ್ರರೆಡ್ಡಿ ರವರಿಗೆ ನೇತ್ರಾವತಿ ಎಂಬಾಕೆಯೊಂದಿಗೆ ಮದುವೆಯಾಗಿದ್ದು, ಅವರಿಗೆ ಶ್ರಾವಣಿ ಎಂಬ ಒಂದು ಹೆಣ್ಣು ಮಗು ಇರುತ್ತದೆ,  ಈ ದಿನ ನಮ್ಮ ಚಿಕ್ಕಪ್ಪ ರಾಮಚಂದ್ರರೆಡ್ಡಿ ಮತ್ತು ನಮ್ಮ ಗ್ರಾಮದ ಆನಂದ ಎಂ.ಪಿ  ಬಿನ್ ನಾಗರಾಜ ರವರು, ಆನಂದ ರವರ ಬಾಬತ್ತು ಕೆಎ 50 ಇ 6916 ಡಿಸ್ಕವರಿ ದ್ವಿ ಚಕ್ರ ವಾಹನದಲ್ಲಿ  ಕೆಲಸದ ಪ್ರಯುಕ್ತ ಬೆಳಗ್ಗೆ ಸುಮಾರು 10:00 ಗಂಟೆಗೆ ಬಾಗೇಪಲ್ಲಿ ಕಡೆಗೆ ಬಂದರು, ನಂತರ ಸಂಜೆ ಸುಮಾರು 4:00 ಗಂಟೆಗೆ ನಮ್ಮ ಸಂಬಂದಿ ತುಮ್ಮೇಪಲ್ಲಿ ಗ್ರಾಮದ ಲಕ್ಷ್ಮಣರೆಡ್ಡಿ ಬಿನ್ ಮುನಿಯಪ್ಪ  ರವರು ನನಗೆ ದೂರವಾಣಿ ಕರೆ ಮಾಡಿ ನಮ್ಮ ಚಿಕ್ಕಪ್ಪ ರಾಮಚಂದ್ರರೆಡ್ಡಿ ರವರಿಗೆ ಮಿಟ್ಟೇಮರಿ ಸಮೀಪ ಗೋವಿಂದಪ್ಪ ಕುಂಟದ ಬಳಿ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ತಿಳಿಸಿದರು,  ತಕ್ಷಣ ನಾನು, ಮತ್ತು ಶಶಿಕುಮಾರ್ ಬಿನ್ ಕದಿರರೆಡ್ಡಿ ರವರು ಬಂದು ನೋಡಲಾಗಿ ವಿಚಾರ ನಿಜವಾಗಿತ್ತು, ನಂತರ ಅಪಘಾತದ ಬಗ್ಗೆ ವಿಚಾರಿಸಲಾಗಿ ಈ ದಿನ ನಮ್ಮ ಚಿಕ್ಕಪ್ಪ ರಾಮಚಂದ್ರರೆಡ್ಡಿ ಮತ್ತು ನಮ್ಮ ಗ್ರಾಮದ ಆನಂದ ರವರು ಕೆಲಸ ಪ್ರಯುಕ್ತ  ಬಾಗೇಪಲ್ಲಿಗೆ ಬಂದು ಕೆಲಸವನ್ನು ಮುಗಿಸಿಕೊಂಡು ನಮ್ಮ ಗ್ರಾಮಕ್ಕೆ ವಾಪಸ್ಸು ಬರಲು ಮದ್ಯಾಹ್ನ ಸುಮಾರು 3;20 ಗಂಟೆ ಸಮಯದಲ್ಲಿ ಆನಂದ ರವರ ಬಾಬತ್ತು ಕೆಎ 50 ಇ 6916 ಡಿಸ್ಕವರಿ ದ್ವಿ ಚಕ್ರ ವಾಹನದ ಹಿಂಬದಿಯಲ್ಲಿ ನಮ್ಮ ಚಿಕ್ಕಪ್ಪ ರಾಮಚಂದ್ರರೆಡ್ಡಿ ರವರನ್ನು ಕುಳ್ಳರಿಸಿಕೊಂಡು ಆನಂದ ರವರು ದ್ವಿಚಕ್ರ  ವಾಹನವನ್ನು ಸವಾರ ಮಾಡಿಕೊಂಡು ಮಿಟ್ಟೇಮರಿ ಸಮೀಪ ಹೋಗುತ್ತಿದ್ದಾಗ, ಆನಂದ ಬಿನ್ ನಾಗರಾಜ ರವರು ದ್ವಿ ಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರ ಮಾಡಿಕೊಂಡು ಹೋಗಿ ರಸ್ತೆಯಲ್ಲಿ ದ್ವಿ ಚಕ್ರ ವಾಹನವನ್ನು ನಿಯಂತ್ರಿಸಲಾಗದೇ, ರಸ್ತೆಯಲ್ಲಿ ಬೀಳಿಸಿ ಅಪಘಾತವನ್ನುಂಟು ಪರಿಣಾಮ ನಮ್ಮ ಚಿಕ್ಕಪ್ಪ ರಾಮಚಂದ್ರರೆಡ್ಡಿ ಬಿನ್ ಪೆದ್ದಪ್ಪಯ್ಯ 43 ವರ್ಷ, ವಕ್ಕಲಿಗರು, ಮುಮ್ಮನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರಿಗೆ ಬಲಕಾಲಿಗೆ ತೊಡೆಯ ಬಳಿ ರಕ್ತಗಾಯ, ಮೂಗಿನ ಮೇಲೆ ಗಾಯ, ಬಾಯಿ, ಮೂಗು, ಕಿವಿಯಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ದ್ವಿ ಚಕ್ರ ವಾಹನದ ಸವಾರ ಆನಂದ ಬಿನ್ ನಾಗರಾಜ 35 ವರ್ಷ,  ವಕ್ಕಲಿಗರು, ವ್ಯವಸಾಯ ಮುಮ್ಮನಹಳ್ಳಿ ಗ್ರಾಮ ರವರಿಗೆ ಬಲಕೈಗೆ ಮತ್ತು ಮೈಮೇಲೆ ಗಾಯಗಳಾಗಿರುತ್ತವೆ, ನಂತರ ನಾವು ಯಾವುದೂ ವಾಹನದಲ್ಲಿ ಗಾಯಾಳನ್ನು ಬಾಗೇಪಲ್ಲಿ ಸಕರ್ಾರಿ ಅಸ್ಪತ್ರೆಗೆ ಸಾಗಿಸಿಕೊಂಡು ಆನಂದ ರವರಿಗೆ ಚಿಕಿತ್ಸೆಯನ್ನು ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಿರುತ್ತಾರೆ, ನಮ್ಮ ಚಿಕ್ಕಪ್ಪ ರವರ  ಮೃತದೇಹವನ್ನು ಶವಗಾರಕ್ಕೆ ಸಾಗಿಸಿರುತ್ತೆ, ಆದ್ದರಿಂದ ಅಪಘಾತವನ್ನುಂಟು ಮಾಡಿದ ಕೆಎ 50 ಇ 6916 ಡಿಸ್ಕವರಿ ದ್ವಿ ಚಕ್ರ ವಾಹನದ ಸವಾರ ಆನಂದ ಬಿನ್ ನಾಗರಾಜ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.137/2021 ಕಲಂ. 279,304(A) ಐ.ಪಿ.ಸಿ:-

     ಈ ದಿನ ದಿನಾಂಕ 27/09/2021 ರಂದು ಬೆಳಿಗ್ಗೆ 8-15 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಖಾಸಗಿ ಶಾಲಾ ಶಿಕ್ಷಕ ವೃತ್ತಿಯನ್ನು ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಮ್ಮ ದೊಡ್ಡಪ್ಪ ಪಿ.ರಂಗಪ್ಪ ರವರ ಮಗನಾದ ಪಿ.ವೆಂಕಟರೆಡ್ಡಿ ಬಿನ್ ಪಿ.ರಂಗಪ್ಪ 41 ವರ್ಷ ವಕ್ಕಲಿಗರು ಜಿರಾಯ್ತಿ ವಾಸ ಕಾಪುಪಲ್ಲಿ ಗ್ರಾಮ ತಂಬಾಳಪಲ್ಲಿ ತಾಲ್ಲೂಕು ರವರು ನಿನ್ನೆಯ ದಿನ ದಿನಾಂಕ 26/09/2021 ರಂದು ಬೆಳಿಗ್ಗೆ 11-15 ಗಂಟೆ ಸಮಯದಲ್ಲಿ ಬಿಲ್ಲಾಂಡ್ಲಹಳ್ಳಿ ಬೈರೆಡ್ಡಿ ಎಂಬುವರು ನನಗೆ ಪೋನ್ ಮಾಡಿ ನನ್ನ ದೊಡ್ಡಪ್ಪನ ಮಗ ಪಿ.ವೆಂಕಟರೆಡ್ಡಿ ರವರು ಬಿಲ್ಲಾಂಡ್ಲಹಳ್ಳಿ–ಓಬಳಾಪುರ ಗ್ರಾಮದ ಮಾರ್ಗ ಮಧ್ಯೆ ಆರ್.ಬೈಯಪ್ಪ ರವರ ಜಮೀನಿನ ಪಕ್ಕದ ಟಾರು ರಸ್ತೆಯಲ್ಲಿ ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಓಬಳಾಪುರದಿಂದ ವಾಪಸ್ಸು ಊರಿಗೆ  ತನ್ನ ಭಾಬತ್ತು ಎ.ಪಿ-39-ಇಜೆಡ್-6508 ಹೀರೋ ಹೊಂಡಾ ಸ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಎದುರುಗಡೆಯಿಂದ ಬರುತ್ತಿದ್ದ ಕೆ.ಎ-50-ಎಲ್-8402 ರ ಬಜಾಜ್ ಡಿಸ್ಕವರಿ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ನಮ್ಮ ದೊಡ್ಡಪ್ಪನ ಮಗ  ಪಿ.ವೆಂಕಟರೆಡ್ಡಿ ರವರು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಪಿ.ವೆಂಕಟರೆಡ್ಡಿ ರವರಿಗೆ ತೀವ್ರಸ್ವರೂಪದ ಗಾಯಗಳಾಗಿರುವುದಾಗಿ ತಿಳಿಯಿತು, ನಾನು ತಕ್ಷಣ ಸ್ಥಳಕ್ಕೆ ಹೋಗಿ ನೋಡಲಾಗಿ  AP 39-EZ-6508 ದ್ವಿಚಕ್ರ ವಾಹನ ಮತ್ತು ಕೆಎ 50 ಎಲ್ 8402 ನೊಂದಣಿ ಸಂಖ್ಯೆ ಬಜಾಜ್ ಡಿಸ್ಕವರ್ ದ್ವಿಚಕ್ರ ವಾಹನಗಳು ಜಖಂಗೊಂಡು ಸ್ಥಳದಲ್ಲಿಯೇ ಬಿದ್ದಿದ್ದವು. ವೆಂಕಟರೆಡ್ಡಿಗೆ ಮೂಗು ಮತ್ತು ಎಡಕಣ್ಣಿನ ಮೇಲೆ ಹಣೆಯ ಭಾಗದಲ್ಲಿ ರಕ್ತಗಾಯವಾಗಿ ಮೂಗಿನಲ್ಲಿ ರಕ್ತಬರುತ್ತಿತ್ತು. ನಾನು ಮತ್ತು ಅಲ್ಲಿಯೇ ಇದ್ದ ಆನಂದ ಬಿನ್ ವೆಂಕಟರವಣಪ್ಪ, ಓಬಳಾಪುರ ಗ್ರಾಮ, ಶಿವ ಬಿನ್ ನಾರಾಯಣಪ್ಪ ಓಬಳಾಪುರ ಗ್ರಾಮ ಮತ್ತು ಬೈರೆಡ್ಡಿ ಬಿಲ್ಲಾಂಡ್ಲಹಳ್ಳಿ ರವರು ಗಾಯಗೊಂಡಿದ್ದ ಪಿ.ವೆಂಕಟರೆಡ್ಡಿ ರವರನ್ನು ಉಪಚರಿಸಿ  ಚಿಕಿತ್ಸೆಗಾಗಿ 108 ಆಂಬುಲೆನ್ಸ್ ನಲ್ಲಿ ಬಟ್ಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡಿಸಿ ನಂತರ ವೈದ್ಯರ ಸಲಹೆಯ ಮೇರೆಗೆ ವೆಂಕಟರೆಡ್ಡಿ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಿರುಪತಿಯ ರೂಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಲು ಕರೆದುಕೊಂಡು ಹೋದರು. ಅಪಘಾತಪಡಿಸಿದ ಸವಾರನಿಗೂ ಗಾಯಗಳಾಗಿರುವುದಾಗಿ ಗೊತ್ತಾಯಿತು. ನಾನು ದಿನಾಂಕ:26-09-2021 ರಂದು ರಾತ್ರಿ ಮನೆಯಲ್ಲಿ ಇದ್ದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನನ್ನ ದೊಡ್ಡಪ್ಪನ ಮಗ ಆನಂದ ಪೋನ್ ಮಾಡಿ ಪಿ.ವೆಂಕಟರೆಡ್ಡಿ ರವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 26/09/2021 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ತಿರುಪತಿಯ ರೂಯಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿ, ಕಂಪ್ಲೆಂಟ್ ನೀಡಲು ತಿಳಿಸದರು. ನಾನು ಈ ದಿನ ತಡವಾಗಿ ದೂರು ನೀಡುತ್ತಿದ್ದು, ಮೇಲ್ಕಂಡ ಕೆಎ 50 ಎಲ್ 8402 ರ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು  ಕೋರಿ ನೀಡಿರುವ ದೂರಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.423/2021 ಕಲಂ. 143,147,427,447,504,506,149 ಐ.ಪಿ.ಸಿ:-

     ದಿನಾಂಕ: 26/09/2021 ರಂದು ಸಂಜೆ 5.30 ಗಂಟೆಗೆ ಪಿರ್ಯಾಧಿದಾರರಾದ ಎನ್.ಶ್ರೀನಿವಾಸ ಬಿನ್ ವಿ.ನಂಜುಂಡಪ್ಪ, 47 ವರ್ಷ, ಬಲಜಿಗರು, ಶಿಕ್ಷಕರು, ನಾರಾಯಣಮೃತ ನಿಲಯ, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಕೈವಾರ ಗ್ರಾಮದಲ್ಲಿ ವಾಸವಾಗಿರುವ ಬೆಸ್ತರ ಜನಾಂಗದ ಲೇಟ್ ಕೆ.ಕೃಷ್ಣಪನವರ ಪತ್ನಿ ಸುಮಾರು 70 ವರ್ಷ ವಯಸ್ಸುಳ್ಳ ಗೌರಮ್ಮ ಮತ್ತು ಅವರ ಮಕ್ಕಳಾದ ಸುಮಾರು 50 ವರ್ಷದ ಕೆ.ಬಿ.ಅಶ್ವಥ್ ನಾರಾಯಣ, 45 ವರ್ಷದ ಕೆ.ಬಿ. ಅಮರನಾಥ ಹಾಗೂ ಮಗಳಾದ ಸುಮಾರು 38 ವರ್ಷ ಉಮಾದೇವಿ ಹಾಗೂ ಅಳಿಯನಾದ 40 ವರ್ಷದ ನಾರಾಯಣಸ್ವಾಮಿ ರವರುಗಳು ಕೈವಾರ ಗ್ರಾಮದಲ್ಲಿರುವ ತನ್ನ ನಿವೇಶನ ಸಂಖ್ಯೆ 74 ಮತ್ತು 49 ರಲ್ಲಿ ಕಲ್ಲು, ಇಟ್ಟಿಗೆ ಹಾಗೂ ಮರಳನ್ನು ಹದರಿ ಅತಿಕ್ರಮಿಸಿರುತ್ತಾರೆ. ದಿನಾಂಕ: 23/09/2021 ರಂದು ಬೆಳಿಗ್ಗೆ ಸುಮಾರು 07.00 ಗಂಟೆ ಸಮಯದಲ್ಲಿ ಮೇಲ್ಕಂಡವರು ತಮ್ಮ ಮನೆಗೆ ಕಲ್ಲುಗಳನ್ನು ಎಸೆದು ಗೇಟ್ ಲೈಟ್ ಹೊಡೆದು, ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿತ್ತಾರೆ ಹಾಗೂ ಕೊಲೆ ಮಾಡುವುದಾಗಿ ಬೊಬ್ಬೆ ಹಾಕಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಈ ಸ್ವತ್ತು ಮತ್ತು ನಿವೇಶನಗಳ ಕುರಿತಾಗಿ ಚಿಂತಾಮಣಿಯ ಘನ ನ್ಯಾಯಾಲಯದಲ್ಲಿ ದಾವೆ ಸಂಖ್ಯೆ 19/15-21/15 ರಂತೆ ದಾವೆ ಹೂಡಿದ್ದು, ಸದರಿ ವ್ಯಕ್ತಿಗಳು ತಮ್ಮ ನಿವೇಶನಗಳಲ್ಲಿ ಪ್ರವೇಶಿಸದಂತೆ ನ್ಯಾಯಾಲಯ ಪ್ರತಿಬಂಧಕಾಜ್ಞೆ ನೀಡಿರುತ್ತದೆ. ಆದಾಗಿಯೂ ಮೇಲಿನ ವ್ಯಕ್ತಿಗಳು ನಿರಂತರವಾಗಿ ಅತಿಕ್ರಮಿಸಿ ಕಾನೂನನ್ನು ಉಲ್ಲಂಘನೆ ಮಾಡಿರುತ್ತಾರೆ ಹಾಗೂ ಮಾನ್ಯ ನ್ಯಾಯಲಯ Ex 28/2017 ರಲ್ಲಿ ತಮಗೆ ಪೋಲಿಸ್ ಭದ್ರತೆ ನೀಡಬೇಕಾಗಿ ಆದೇಶ ಮಾಡಿರುತ್ತದೆ. ಆದ್ದರಿಂದ ತಮ್ಮ ಸ್ವತ್ತಿನಲ್ಲಿ ಅಕ್ರಮ ಪ್ರವೇಶ ಮಾಡಿ, ಗೇಟ್ ಬಳಿಯ ಲೈಟ್ ಅನ್ನು ಹೊಡೆದು ಹಾಕಿ, ಕೆಟ್ಟ ಮಾತುಗಳಿಂದ ತಮ್ಮನ್ನು ನಿಂದನೆ ಮಾಡಿರುವ ಹಾಗೂ ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡ ಆಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಮಾನ್ಯರಲ್ಲಿ ಕೋರುತ್ತೇನೆ. ಸದರಿ ಮೇಲ್ಕಂಡ ಘಟನೆಯ ಬಗ್ಗೆ ಗ್ರಾಮದ ಹಿರಿಯವರು ನ್ಯಾಯ ಪಂಚಾಯ್ತಿ ಮಾಡುವುದಾಗಿ ಹೇಳಿದ್ದು ಇದುವರೆಗೂ ಮೇಲ್ಕಂಡವರು ನ್ಯಾಯ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿರುತ್ತಾರೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.424/2021 ಕಲಂ. 323,324,341,427,448,504,506(B),34 ಐ.ಪಿ.ಸಿ:-

     ದಿನಾಂಕ: 26/09/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮಾರುತಿಬಾಬು ಬಿನ್ ಅಶ್ವಥನಾರಾಯಣ, 26 ವರ್ಷ, ಬೋವಿ ಜನಾಂಗ, ವ್ಯಾಪಾರ, ಮೂಡಚಿಂತಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 7.00 ಗಂಟೆಗೆ ಠಾಣೆಗೆ ಹಾಜರಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ರಸ್ತೆಯ ವಿಚಾರವಾಗಿ ತಮ್ಮ ಗ್ರಾಮದ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದ ಶಾರದಮ್ಮ ಬಿನ್ ಲೇಟ್ ವೆಂಕಟೇಶಪ್ಪ ರವರ ನಡುವೆ ಈಗ್ಗೆ ಮೂರು ದಿನಗಳ ಹಿಂದೆ ಗಲಾಟೆ ನಡೆದಿದ್ದು ತಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡಿರುತ್ತಾರೆ. ಹೀಗಿರುವಾಗ ಈ ದಿನ ದಿನಾಂಕ: 26/09/2021 ರಂದು ಸಂಜೆ 5.30 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಮುಂದೆ ಇದ್ದಾಗ ಶಾರದಮ್ಮ ರವರ ಸಂಬಂಧಿಯಾದ ನಂದೀಶ ಬಿನ್ ಲೇಟ್ ಗಂಗಪ್ಪ ರವರು ಮೊನ್ನೆ ನಡೆದ ಗಲಾಟೆಯ ವಿಚಾರವಾಗಿ ಮಾತನಾಡಬೇಕು ಬಾ ಎಂದು ಕರೆದಿದ್ದು, ತಾನು ಬರುವುದಿಲ್ಲವೆಂದು ಹೇಳೀರುತ್ತೇನೆ. ಆಗ ಶಾರದಮ್ಮ ರವರು ಅವರ ಕಾರಿನಲ್ಲಿ ಬಂದು ತಮ್ಮ ಮನೆಯ ಮುಂದೆ ನಿಲ್ಲಿಸಿ ತನ್ನನ್ನು ಕುರಿತು ಏನೋ ಲೋಫರ್ ನನ್ನ ಮಗನೇ ಕರೆದರೆ ಬರುವುದಕ್ಕೆ ಆಗುವುದಿಲ್ಲವಾ ಎಂದು ಅವಾಚ್ಯಶಬ್ದಗಳಿಂದ ಬೈದು, ತನ್ನ ಕುತ್ತಿಗೆ ಹಿಡಿದು ಕೆಳಕ್ಕೆ ತಳ್ಳಿದಳು. ಗಲಾಟೆಯ ಶಬ್ದಗಳನ್ನು ಕೇಳಿಸಿಕೊಂಡು ತನ್ನ ತಂದೆ ಅಶ್ವಥನಾರಾಯಣ ರವರು ಅಲ್ಲಿಗೆ ಬಂದಿದ್ದು ಶಾರದಮ್ಮ ರವರು ಕಟ್ಟಿಗೆಯನ್ನು ತೆಗೆದುಕೊಂಡು ತನ್ನ ತಂದೆಯ ಎಡ ಕಣ್ಣಿನ ಮೇಲ್ಬಾಗದಲ್ಲಿ ಹೊಡೆದು ರಕ್ತಗಾಯ ಮಾಡಿದಳು. ನಂದೀಶ ತನ್ನ ಕೈಯಲ್ಲಿದ್ದ ಚಾಕುವಿನಿಂದ ತನ್ನ ಬೆನ್ನಿನ ಹಿಂದೆ ತಿವಿದು ರಕ್ತಗಾಯವನ್ನುಂಟು ಮಾಡಿದನು. ತಾವು ಅವರಿಂದ ತಪ್ಪಿಸಿಕೊಂಡು ಮನೆಯ ಒಳಗೆ ಓಡಿಹೋಗಲು ಪ್ರಯತ್ನಿಸಿದಾಗ ತಮ್ಮನ್ನು ಮುಂದೆ ಹೋಗದಂತೆ ಅಡ್ಡಗಟ್ಟಿ ತಡೆದು ಕೈಗಳಿಂದ ಹೊಡೆದರು. ನಂದೀಶ ಅಲ್ಲಿಯೇ ಬಿದ್ದಿದ್ದ ದೊಣ್ಣೆಯಿಂದ ತನ್ನ ತಂದೆಯ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿದನು. ನಂತರ ಅವರಿಬ್ಬರು ತಾವು ಮನೆಯ ಒಳಗೆ ಹೋದರೂ ಬಿಡದೆ ಅಕ್ರಮವಾಗಿ ತಮ್ಮ ಮನೆಯೊಳಗೆ ಪ್ರವೇಶ ಮಾಡಿ, ನಂದೀಶ ರವರು ಆತನ ಕೈಯಲ್ಲಿದ್ದ ಚಾಕುವನ್ನು ಹಾಗೂ ಶಾರದಮ್ಮ ರವರು ಇಟ್ಟಿಗೆಯನ್ನು ತೋರಿಸಿ ಈ ದಿನ ನಿಮ್ಮನ್ನು ಸಾಯಿಸುವವರೆಗೂ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿದರು. ನಂತರ ಅವರು ಅಲ್ಲಿಂದ ಹೋಗುವಾಗ ತಮ್ಮ ಓಮ್ನಿ ಕಾರಿನ ಮುಂಭಾಗಕ್ಕೆ ಹೊಡೆದು ಜಖಂ ಗೊಳಿಸಿರು. ಆದ್ದರಿಂದ ಮೇಲ್ಕಂಡ ಶಾರದಮ್ಮ ಮತ್ತು ನಂದೀಶ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.426/2021 ಕಲಂ. 143,147,148,323,324,307,504,506,149 ಐ.ಪಿ.ಸಿ:-

     ದಿನಾಂಕ: 26/09/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ನಾರಾಯಣಸ್ವಾಮಿ ಬಿನ್ ವೆಂಕಟೇಶಪ್ಪ, 46 ವರ್ಷ, ಬೆಸ್ತರ ಜನಾಂಗ, ಚಾಲಕ ವೃತ್ತಿ, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 10.30 ಗಂಟೆಗೆ ಠಾಣೆಗೆ ಹಾಜರಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಅತ್ತೆಯಾದ ಗೌರಮ್ಮ ರವರಿಗೂ ಹಾಗೂ ತಮ್ಮ ಗ್ರಾಮದ ಬಲಜಿಗ ಜನಾಂಗದ ಶ್ರೀನಿವಾಸ್.ಎನ್ ಬಿನ್ ನಂಜುಂಡಪ್ಪ ರವರಿಗೆ ಸುಮಾರು 9 ವರ್ಷಗಳಿಂದ ನಿವೇಶನಗಳ ವಿಚಾರದಲ್ಲಿ ತಕರಾರು ಇದ್ದು, ಗಲಾಟೆಯಾಗಿ ಪ್ರಕರಣಗಳು ಸಹ ದಾಖಲಾಗಿರುತ್ತವೆ. ಸದರಿ ವಿವಾದದ ಬಗ್ಗೆ ತಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡಿದರೂ ಸಹ ಶ್ರೀನಿವಾಸ ರವರು ಒಪ್ಪಿರುವುದಿಲ್ಲ. ಹೀಗಿರುವಾಗ ದಿನಾಂಕ: 21/09/2021 ರಂದು ಸಂಜೆ 6.00 ಗಂಟೆ ಸಮಯದಲ್ಲಿ ತಮ್ಮಗಳ ನಡುವೆ ಗಲಾಟೆಯಾಗಿ ಶ್ರೀನಿವಾಸ ರವರು ಈ ವಿಚಾರದಲ್ಲಿ ದೂರನ್ನು ನೀಡಿರುತ್ತಾರೆ. ಹೀಗಿರುವಲ್ಲಿ ಈ ದಿನ ದಿನಾಂಕ: 26/09/2021 ರಂದು ಸಂಜೆ 7.10 ಗಂಟೆ ಸಮಯದಲ್ಲಿ ತಾನು ಮನೆಗೆ ಬಂದು ಗೇಟ್ ತೆಗೆಯುತ್ತಿದ್ದಾಗ ತಮ್ಮ ಗ್ರಾಮದ ಮೇಲ್ಕಂಡ ಶ್ರೀನಿವಾಸ ಬಿನ್ ನಂಜುಂಡಪ್ಪ ಮತ್ತು ಅವರ ತಮ್ಮಂದಿರಾದ ಅಂಜನ್ ಕುಮಾರ್ ಮತ್ತು ವೆಂಕಟರಾಜು ರವರು ಮತ್ತು ಇತರರು ಗುಂಪು ಕಟ್ಟಿಕೊಂಡು ಬಂದು ಆ ಪೈಕಿ ಅಂಜನ್ ಕುಮಾರ್ ಮತ್ತು ವೆಂಕಟರಾಜು ತನ್ನನ್ನು ಓಡಿ ಹೋಗದಂತೆ ಹಿಡಿದುಕೊಂಡಿದ್ದು, ಅ ಪೈಕಿ ಶ್ರೀನಿವಾಸ ರವರು ತನ್ನ ಕೈಯಲ್ಲಿದ್ದ ಮಚ್ಚಿನಿಂದ ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ತಲೆಯ ಮೇಲೆ ಹೊಡೆದು ರಕ್ತ ಗಾಯವನ್ನುಂಟು ಮಾಡಿದನು. ನಂತರ ಅಂಜನ್ ಕುಮಾರ್ ಕಬ್ಬಿಣದ ರಾಡಿನಿಂದ ತನ್ನ ಹೊಟ್ಟೆ ಮತ್ತು ಎಡಕೈನ ಕಿರು ಬೆರಳಿಗೆ ಹೊಡೆದು ಗಾಯ ಮಾಡಿರುತ್ತಾನೆ. ತನ್ನನ್ನು ಬಿಡಿಸಲು ಬಂದ ತನ್ನ ದೊಡ್ಡ ಭಾವನಾದ ಅಶ್ವಥನಾರಾಯಣ ರವರಿಗೂ ಸಹ ಅಂಜನ್ ಕುಮಾರ್ ರಾಡಿನಿಂದ ಎಡ ಕಾಲಿನ ತೊಡೆಗೆ ಹೊಡೆದಿದ್ದು, ಶ್ರೀನಿವಾಸ್ ತಲೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದನು. ಆಗ ಸ್ಥಳಕ್ಕೆ ಬಂದ ತನ್ನ ಚಿಕ್ಕಭಾವ ಅಮರನಾಥ ಬಿನ್ ಕೃಷ್ಣಪ್ಪ, ತನ್ನ ಹೆಂಡತಿ ಉಮಾದೇವಿ ಮತ್ತು ತನ್ನ ಅತ್ತೆ ಗೌರಮ್ಮ ರವರಿಗೂ ಸಹ ಮೇಲ್ಕಂಡವರು ಅವಾಚ್ಯಶಬ್ದಗಳಿಂದ ಬೈದು, ನಿಮ್ಮನ್ನು ಸಾಯಿಸುತ್ತೇವೆಂದು ಕಬ್ಬಿಣದ ರಾಡಿನಿಂಡ ಹೊಡೆದು ಗಾಯವನ್ನುಂಟು ಮಾಡಿದರು. ಗೌರಮ್ಮ ರವರನ್ನು ಕೈಗಳಿಂದ ಹೊಡೆದು ಕೆಳಕ್ಕೆ ತಳ್ಳಿದರು. ಅಷ್ಠರಲ್ಲಿ ತಮ್ಮ ಗ್ರಾಮದ ಮಂಜುನಾಥರೆಡ್ಡಿ ಬಿನ್ ನಾರಾಯಣರೆಡ್ಡಿ, ಶಿವಕುಮಾರ್ ಬಿನ್ ಕೃಷ್ಣಪ್ಪ ಮತ್ತು ಇತರರು ಬಂದು ತಮ್ಮನ್ನು ಅವರಿಂದ ರಕ್ಷಿಸಿ ಆಟೋದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.427/2021 ಕಲಂ. 143,147,148,324,307,448,427,504,506,149 ಐ.ಪಿ.ಸಿ:-

     ದಿನಾಂಕ: 27/09/2021 ರಂದು 12.10 AM ಗಂಟೆಗೆ ಪಿರ್ಯಾಧಿದಾರರಾದ ಎನ್.ಶ್ರೀನಿವಾಸ್ ಬಿನ್ ನಂಜುಂಡಪ್ಪ, 47 ವರ್ಷ, ಬಲಜಿಗರು, ಶಿಕ್ಷಕರು, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 26/09/2021 ರಂದು ಸಂಜೆ 6.45 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ತಮ್ಮಂದಿರು ಚಿಂತಾಮಣಿಯಿಂದ ಕೈವಾರದಲ್ಲಿರುವ ತಮ್ಮ ಮನೆಗೆ ಹೋದಾಗ ತಮ್ಮ ಗ್ರಾಮದ ಬೆಸ್ತರ ಜನಾಂಗದ ಲೇಟ್ ಕೃಷ್ಣಪ್ಪ ರವರ ಮಕ್ಕಳಾದ ಸುಮಾರು 50 ವರ್ಷದ ಕೆ.ಬಿ.ಅಶ್ವಥನಾರಾಯಣ, 45 ವರ್ಷದ ಕೆ.ಬಿ.ಅಮರನಾಥ ಹಾಗೂ ಮಗಳಾದ ಸುಮಾರು 38 ವರ್ಷದ ಉಮಾದೇವಿ ಹಾಗೂ ಉಮಾದೇವಿ ರವರ ಗಂಡನಾದ ನಾರಾಯಣಸ್ವಾಮಿ, ಲೇಟ್ ಕೃಷ್ಣಪ್ಪ ರವರ ಹೆಂಡತಿ ಗೌರಮ್ಮ ರವರು ಒಟ್ಟು ಗೂಡಿ ತಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಮಚ್ಚು, ಗೊಡಲಿ, ದೊಣ್ಣೆ ಮತ್ತು ಖಾರದ ಪುಡಿಯನ್ನು ತೆಗೆದುಕೊಂಡು ನಾರಾಯಣಸ್ವಾಮಿ ರವರು ಗೊಡಲಿಯಿಂದ ತನ್ನನ್ನು ಹೊಡೆಯಲು ಬಂದಾಗ ತಾನು ಸಿಗದಿದ್ದಾಗ ಗೊಡಲಿಯಿಂದ ತನ್ನ ತಮ್ಮನಾದ ವೆಂಕಟರಾಜು ಬಿನ್ ನಂಜುಂಡಪ್ಪ ರವರ ತಲೆ ಹೊಡೆಯಲು ಪ್ರಯತ್ನಿಸಿದ. ತಲೆ ತಪ್ಪಿಸಿಕೊಂಡಾಗ ಕೊಡಲಿ ಏಟು ಕೈಗೆ ಬಿತ್ತು. ಅಮರನಾಥ ರವರು ತನಗೆ ಮಚ್ಚಿನಿಂದ ತಲೆಗೆ ಹೊಡೆದನು. ತಾನು ತಪ್ಪಿಸಿಕೊಂಡಾಗ ತನ್ನ ಕೈಗೆ ಮಚ್ಚಿನ ಏಟು ಬಿತ್ತು. ಅಶ್ವಥನಾರಾಯಣ ರವರು ದೊಣ್ಣೆಯಿಂದ ತನಗೆ ತನ್ನ ತಮ್ಮಂದಿರಿಗೆ ಹೊಡೆದರು ಹಾಗೂ ಉಮಾದೇವಿ ಮತ್ತು ಗೌರಮ್ಮ ರವರು ತನಗೆ ಮತ್ತು ತನ್ನ ತಮ್ಮಂದಿರಿಗೆ ಖಾರದ ಪುಡಿ ಕಣ್ಣಿಗೆ ಎರಚಿ ತಮ್ಮನ್ನು ಕೊಲೆ ಮಾಡಲು ಪ್ರಯತ್ನಿಸಿದರು. ನಾರಾಯಣಸ್ವಾಮಿ ಮತ್ತು ಅಮರನಾಥ ರವರು ತನ್ನ ತಮ್ಮನಾದ ವೆಂಕಟರಾಜು ರವರಿಗೆ ಗೊಡಲಿಯಿಂದ ಹಾಗೂ ದೊಣ್ಣೆಯಿಂದ ಹೊಡೆದರು. ಆದ್ದರಿಂದ ಮೇಲಿನವರ ಮೇಲೆ ಈಗಾಗಲೇ ಹಲವಾರು ಬಾರಿ ದೂರುಗಳನ್ನು ನೀಡಿದರೂ ಅವರು ತಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಹಾಗೂ ಭಯಕ್ಕೆ ತಾವು ಓಡಿ ಹೋಗಿ ಮನೆಯ ಒಳಗೆ ಬಾಗಿಲು ಹಾಕಿಕೊಂಡಾಗ ಎಲ್ಲರೂ ಒಟ್ಟು ಗೂಡಿ ಒಳಗೆ ಪ್ರವೇಶಿಸಿ ಮನೆಯ ಗ್ಲಾಸ್ ಗಳು, ಬಾಗಿಲುಗಳು ಎಲ್ಲವನ್ನು ಪುಡಿ ಪುಡಿ ಮಾಡಿ ತಮ್ಮನ್ನು ಸಾಯಿಸಲು ಅವಾಚ್ಯಶಬ್ದಗಳಿಂದ ನಿಂದಿಸಿ ಹೊರಗೆ ಬಂದರೆ ಎಲ್ಲರನ್ನು ಒಟ್ಟಾಗಿ ಸಾಯಿಸಿ ಬಿಡುತ್ತೇವೆಂದು ಪ್ರಾಣಬೆದರಿಕೆ ಹಾಕಿದರು. ತನ್ನ ತಮ್ಮ ವೆಂಕಟರಾಜು ರವರಿಗೆ ಹೊಡೆದಿದ್ದರಿಂದ ಕಾಲು ಮುರಿದು, ಕೈ ಊದಿಕೊಂಡಿರುವುದರಿಂದ ಆಸ್ಪತ್ರೆಯಲ್ಲಿ ಇರುತ್ತಾರೆ. ಆದ್ದರಿಂದ ಮೇಲ್ಕಂಡ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

7. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.139/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:-26/04/2021 ರಂದು ಬೆಳಗ್ಗೆ 9-30 ಗಂಟೆಗೆ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಲು ಸರ್ಕಾರಿ ಜೀಪ್ ಸಂಖ್ಯೆ:ಕೆಎ-40-ಜಿ-60 ರಲ್ಲಿ ಜೀಫ್ ಚಾಲಕರಾಗಿ ಎ.ಪಿ.ಸಿ 94  ಬೈರಪ್ಪರವರು ಮತ್ತು ಸಿ.ಪಿ.ಸಿ 91 ಮಂಜುನಾಥ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಯಲಗಲಹಳ್ಳಿ, ಚಿಕ್ಕ ದಿಬ್ಬೂರಹಳ್ಳಿ, ದಿಬ್ಬೂರಹಳ್ಳಿ, ವಡ್ಡಹಳ್ಳಿ,  ತಲಕಾಯಲಬೆಟ್ಟ, ನಲ್ಲಚೆರುವುಪಲ್ಲಿ, ಜಿ,ನಕ್ಕಲಹಳ್ಳಿ, ಕರಿಯಪ್ಪನಹಳ್ಳಿ, ಈಗಲೇಟಹಳ್ಳಿ, ಸುಬ್ಬರಾಯನಹಳ್ಳಿ, ಬೈರಗಾನಹಳ್ಳಿ, ಈ ತಿಮ್ಮಸಂದ್ರ, ಬಂಡಹಳ್ಳಿ, ಆಟಗೊಲ್ಲಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ 16-30 ಗಂಟೆಗೆ ಗಾಂಡ್ಲಚಿಂತೆ ಗ್ರಾಮದ ಕಡೆಗ ಬಂದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಗಾಂಡ್ಲಚಿಂತೆ  ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿಯು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಸದರಿ ಆಸಾಮಿಯ ಮೇಲೆ ದಾಳಿ ಮಾಡುವ ವಿಚಾರವನ್ನು ತಿಳಿಸಿ ಪಂಚರಾಗಿರಲು ಕೋರಿದರ ಮೇರೆಗೆ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ಪಂಚರೊಂದಿಗೆ ಗಾಂಡ್ಲಚಿಂತೆ ಗ್ರಾಮದ  ಲಕ್ಷ್ಮೀ ದೇವಮ್ಮ ಕೋಂ ಲೇಟ್ ವೆಂಕಟರವಣಪ್ಪ ರವರ ಅಂಗಡಿಯ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಲಕ್ಷ್ಮೀದೇವಮ್ಮ ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿದ್ದು ಸದರಿ ಆಸಾಮಿಯ ಮೇಲೆ ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ಸಮವಸ್ತ್ರದಲ್ಲಿದ್ದ  ಪೊಲೀಸ್ ಸಿಬ್ಬಂದಿಯವರನ್ನು ನೋಡಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಯು ಹಾಗೂ ಅಂಗಡಿಯ ಮಾಲೀಕಳಾದ ಲಕ್ಷ್ಮೀದೇವಮ್ಮ ರವರು ಸಹ ಅಲ್ಲಿಂದ ಗ್ರಾಮದ ಒಳಗೆ ಪರಾರಿಯಾಗಿರುತ್ತಾರೆ. ನಂತರ ಅಂಗಡಿಯ ಮಾಲೀಕರ  ಹೆಸರು ಮತ್ತು ಪೂರ್ಣ ವಿಳಾಸವನ್ನು ತಿಳಿಯಲಾಗಿ ಲಕ್ಷ್ಮೀದೇವಮ್ಮ ಕೊಂ ಲೇಟ್ ವೆಂಕಟರವಣಪ್ಪ, 38 ವರ್ಷ, ಭಜಂತ್ರಿ ಜನಾಂಗ, ವಾಸ: ಗಾಂಡ್ಲಚಿಂತೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಎಂತ ತಿಳಿದು ಬಂದಿರುತ್ತೆ. ನಂತರ ಪಂಚರ ಸಮಕ್ಷಮ ಅಂಗಡಿ ಮುಂಭಾಗದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ,ಎಲ್ ನ ORIGINAL CHOICE DELUX WHISKYಯ  12 ಮಧ್ಯ ತುಂಬಿದ ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು 1080 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 421.56 ರೂ ಆಗಿದ್ದು  ಸದರಿ ಮಧ್ಯ ತುಂಬಿದ ಪ್ಯಾಕೇಟ್ ಗಳನ್ನು ಮತ್ತು ಸ್ಥಳದಲ್ಲಿಯೇ ಬಿದಿದ್ದ 1 ಖಾಲಿ 90 ಎಂ,ಲ್, ನ  ORIGINAL CHOICE DELUX WHISKYಯ ಟೆಟ್ರಾ ಪ್ಯಾಕೇಟ್ ನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಮತ್ತು ಒಂದು ಲೀಟರ್ ನ ಖಾಲಿ ವಾಟರ್ ಬಾಟೆಲ್ ನ್ನು ಸಂಜೆ 16-45  ಗಂಟೆಯಿಂದ ಸಂಜೆ 17-45  ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯು ಪರಾರಿಯಾಗಿದ್ದು ಮುಂದಿನ ಕ್ರಮಕ್ಕಾಗಿ ಮಾಲು ಮತ್ತು ಪಂಚನಾಮೆಯೊಂದಿಗೆ ಸಂಜೆ 18-30  ಗಂಟೆಗೆ  ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಸ್ವತಃ ಮೊ.ಸಂಖ್ಯೆ:139/2021 ಕಲಂ:15(A), 32(3) K, E ACT ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

8. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.103/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ 27/08/2021 ರಂದು  ಮದ್ಯಾಹ್ನ 1.15 ಗಂಟೆಗೆ ಪಿರ್ಯಾದಿದಾರರಾದ  ಶ್ರೀ ರಮೇಶ್ ಬಿನ್ ಸುಬ್ಬರಾಯಪ್ಪ,  45 ವರ್ಷ, ವಕ್ಕಲಿಗ ಜನಾಂಗ, ಜಿರಾಯ್ತಿ ವಾಸ ಜಂಗಾಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ:ತನಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯವನಾದ 21 ವರ್ಷ ವಯಸ್ಸಿನ  ಚಂದನ್ ಜೆ.ಆರ್ ರವರು ಚಿಂತಾಮಣಿ ಪ್ರಗತಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದನು. ದಿನಾಂಕ 25/09/2021 ರಂದು ರಾತ್ರಿ 10-00 ಗಂಟೆ ಸುಮಾರಿನಲ್ಲಿ ತನ್ನ ಮಗನಾದ ಚಂದನ್ ಜೆ.ಆರ್ ರವರೊಂದಿಗೆ ಕುಟುಂಬದವರೆಲ್ಲಾ ಊಟ ಮಾಡಿ ಮನೆಯಲ್ಲಿ ಮಲಗಿದ್ದು, ದಿನಾಂಕ 26/09/2021 ರಂದು ಬೆಳಿಗ್ಗೆ 6-00 ಗಂಟೆಗೆ ಎದ್ದು ನೋಡಲಾಗಿ ತನ್ನ ಮಗ ಕಾಣೆಯಾಗಿದ್ದು, ತನ್ನ ಮಗನ ಮೊಬೈಲ್ ಸಂಖ್ಯೆ 9902505944 ಗೆ ಕರೆ ಮಾಡಿದಾಗ ರಿಂಗ್ ಆಗುತ್ತಿದ್ದು, ಕರೆ ಸ್ವೀಕರಿಸುತ್ತಿರಲಿಲ್ಲ. ಮದ್ಯಾಹ್ನ 1-00 ಗಂಟೆ ವರೆಗೆ ಪೋನ್ ರಿಂಗ್ ಆಗಿ ನಂತರ ಸ್ವಿಚ್ ಆಫ್ ಆಗಿರುತ್ತದೆ.  ತನ್ನ ಮಗ ಚಂದನ್.ಜೆ.ಆರ್ ಕಾಣೆಯಾದ ಬಗ್ಗೆ ತಮ್ಮ ಸಂಭಂಧಿಕರ ಮತ್ತು ಸ್ನೇಹಿತರ ಮನೆಗಳಲ್ಲಿ ಹಾಗೂ ಗ್ರಾಮದ ಸುತ್ತಮುತ್ತಲ ಹುಡುಕಾಡಿ ಈಗ ತಡವಾಗಿ ದೂರು ನೀಡುತ್ತಿದ್ದು, ಕಾಣೆಯಾದ ತನ್ನ ಮಗನನ್ನು ಪತ್ತೆ ಮಾಡಲು ಕೋರಿ ನೀಡಿದ ದುರಿನ ಸಾರಾಂಶವಾಗಿರುತ್ತದೆ.

 

9. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.179/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 26/09/2021 ರಂದು ಸಂಜೆ 7-00 ಗಂಟೆಗೆ ಮಾನ್ಯ ಸಿ.ಪಿ.ಐ ಸಾಹೇಬರವರು ನೀಡಿದ ದೂರು ವರದಿಯ ಸಾರಾಂಶವೇನೆಂದರೆ ಈ ದಿನ ಮಂಚೇನಹಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಶ್ರೀ ಶಶಿಧರ, ಸಿ.ಪಿ.ಐ ಆಧ ನಾನು ಸೂಚಿಸುವುದೇನೆಂದರೆ ದಿನಾಂಕ: 26/09/2021 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ನಾನು ಗೌರಿಬಿದನೂರು ವೃತ್ತ ಕಛೇರಿಯಲ್ಲಿದ್ದಾಗ ರೆಡ್ಡಿದ್ಯಾವರಹಳ್ಳಿ ಗ್ರಾಮದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ಹೆಚ್.ಸಿ-220 ಗಂಗರಾಜು ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ KA-40, G-1234 ರಲ್ಲಿ ಮದ್ಯಾಹ್ನ 3-45 ಗಂಟೆಗೆ ರೆಡ್ಡಿದ್ಯಾವರಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ತನ್ನ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮದ್ಯಪಾನ ಮಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಮಾಡುತ್ತಿದ್ದವರು ಓಡಿ ಹೋಗಿರುತ್ತಾರೆ. ಮದ್ಯದ ಪ್ಯಾಕೇಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಈರಪ್ಪ ಬಿನ್ ಲೇಟ್ ಗಂಗಪ್ಪ, 55 ವರ್ಷ, ಕೂಲಿಕೆಲಸ, ರೆಡ್ಡಿದ್ಯಾವರಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 15 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು 1 ಲೀಟರ್ 350 ಎಂ.ಎಲ್ ಆಗಿರುತ್ತೆ. ಇವುಗಳ ಒಟ್ಟು ಬೆಲೆ 530/- ರೂ.ಗಳಾಗಿರುತ್ತೆ. ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 4 ಖಾಲಿ ಟೆಟ್ರಾ ಪ್ಯಾಕೇಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗೂ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇದೆಯೇ ಎಂದು ಕೇಳಿದಾಗ ಯಾವುದೇ ಪರವಾನಗಿ ಇಲ್ಲವೆಂದು ತಿಳಿದು ಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಮದ್ಯಾಹ್ನ 4-00 ಗಂಟೆಯಿಂದ 4-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂ.ಎಲ್. ಸಾಮರ್ಥ್ಯದ HAY WARDS CHEERS WHISKY ಯ 15 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS WHISKY ಯ 4 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ ಮಾಲನ್ನು ಸಹಾ ನೀಡುತ್ತಿದ್ದು, ಆರೋಪಿಯ ವಿರುದ್ದ ಕಲಂ: 15[ಎ], 32 ಕ್ಲಾಸ್ [3] ಕೆ.ಇ. ಆಕ್ಟ್ - 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರ.ವ.ವರದಿ.

 

10. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.180/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 26/09/2021 ರಂದು ಸಂಜೆ 7-15 ಗಂಟೆಗೆ ಮಾನ್ಯ ಸಿ.ಪಿ.ಐ ಸಾಹೇಬರವರು ನೀಡಿದ ದೂರು ವರದಿಯ ಸಾರಾಂಶವೇನೆಂದರೆ ಈ ದಿನ ಮಂಚೇನಹಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಶ್ರೀ ಶಶಿಧರ, ಸಿ.ಪಿ.ಐ ಆಧ ನಾನು ಸೂಚಿಸುವುದೇನೆಂದರೆ ದಿನಾಂಕ: 26/09/2021 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ನಾನು ಗೌರಿಬಿದನೂರು ವೃತ್ತ ಕಛೇರಿಯಲ್ಲಿದ್ದಾಗ ಇಂದಿರಾನಗರ ಗ್ರಾಮದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ಪಿ.ಸಿ-532 ಚಿಕ್ಕಣ್ಣ, ಎ.ಪಿ.ಸಿ-133 ಹೇಮಂತ್ ಕುಮಾರ್ ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ KA-40, G-1234 ರಲ್ಲಿ ಮದ್ಯಾಹ್ನ 4-45 ಗಂಟೆಗೆ ಇಂದಿರಾನಗರ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ತನ್ನ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮದ್ಯಪಾನ ಮಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಮಾಡುತ್ತಿದ್ದವರು ಓಡಿ ಹೋಗಿರುತ್ತಾರೆ. ಮದ್ಯದ ಪ್ಯಾಕೇಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಮಲ್ಲೇಶ್ ಬಿನ್ ಚಿಕ್ಕಮೈಲಪ್ಪ, 47 ವರ್ಷ, ಗೊಲ್ಲರು, ಅಂಗಡಿ ವ್ಯಾಪಾರ, ಇಂದರಾನಗರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 12 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು 1 ಲೀಟರ್ 080 ಎಂ.ಎಲ್ ಆಗಿರುತ್ತೆ. ಇವುಗಳ ಒಟ್ಟು ಬೆಲೆ 424.08/- ರೂ.ಗಳಾಗಿರುತ್ತೆ. ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 4 ಖಾಲಿ ಟೆಟ್ರಾ ಪ್ಯಾಕೇಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗೂ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇದೆಯೇ ಎಂದು ಕೇಳಿದಾಗ ಯಾವುದೇ ಪರವಾನಗಿ ಇಲ್ಲವೆಂದು ತಿಳಿದು ಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಸಾಯಂಕಾಲ 5-00 ಗಂಟೆಯಿಂದ 5-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂ.ಎಲ್. ಸಾಮರ್ಥ್ಯದ HAY WARDS CHEERS WHISKY ಯ 12 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS WHISKY ಯ 4 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ ಮಾಲನ್ನು ಸಹಾ ನೀಡುತ್ತಿದ್ದು, ಆರೋಪಿಯ ವಿರುದ್ದ ಕಲಂ: 15[ಎ], 32 ಕ್ಲಾಸ್ [3] ಕೆ.ಇ. ಆಕ್ಟ್ - 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರ.ವ.ವರದಿ.

 

11. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.181/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 26/09/2021 ರಂದು ಸಂಜೆ 7-30 ಗಂಟೆಗೆ ಮಾನ್ಯ ಸಿ.ಪಿ.ಐ ಸಾಹೇಬರವರು ನೀಡಿದ ದೂರು ವರದಿಯ ಸಾರಾಂಶವೇನೆಂದರೆ ಈ ದಿನ ಮಂಚೇನಹಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಶ್ರೀ ಶಶಿಧರ, ಸಿ.ಪಿ.ಐ ಆಧ ನಾನು ಸೂಚಿಸುವುದೇನೆಂದರೆ ದಿನಾಂಕ: 26/09/2021 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ನಾನು ಗೌರಿಬಿದನೂರು ವೃತ್ತ ಕಛೇರಿಯಲ್ಲಿದ್ದಾಗ ಜ್ಯೋತಿನಗರ ಗ್ರಾಮದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ಪಿ.ಸಿ-310 ಮೈಲಾರಪ್ಪ, ಎ.ಪಿ.ಸಿ-133 ಹೇಮಂತ್ ಕುಮಾರ್ ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ KA-40, G-1234 ರಲ್ಲಿ ಮದ್ಯಾಹ್ನ 5-45 ಗಂಟೆಗೆ ಜ್ಯೋತಿನಗರ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ತನ್ನ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮದ್ಯಪಾನ ಮಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಮಾಡುತ್ತಿದ್ದವರು ಓಡಿ ಹೋಗಿರುತ್ತಾರೆ. ಮದ್ಯದ ಪ್ಯಾಕೇಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಆನಂದಪ್ಪ ಬಿನ್ ಲೇಟ್ ತಿಮ್ಮಯ್ಯ, 50 ವರ್ಷ, ಕುರುಬ ಜನಾಂಗ, ಅಂಗಡಿ ವ್ಯಾಪಾರ, ಜ್ಯೋತಿನಗರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 18 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು 1 ಲೀಟರ್ 620 ಎಂ.ಎಲ್ ಆಗಿರುತ್ತೆ. ಇವುಗಳ ಒಟ್ಟು ಬೆಲೆ 636.12/- ರೂ.ಗಳಾಗಿರುತ್ತೆ. ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 4 ಖಾಲಿ ಟೆಟ್ರಾ ಪ್ಯಾಕೇಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗೂ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇದೆಯೇ ಎಂದು ಕೇಳಿದಾಗ ಯಾವುದೇ ಪರವಾನಗಿ ಇಲ್ಲವೆಂದು ತಿಳಿದು ಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಸಂಜೆ 6-00 ಗಂಟೆಯಿಂದ 6-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂ.ಎಲ್. ಸಾಮರ್ಥ್ಯದ HAY WARDS CHEERS WHISKY ಯ 18 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS WHISKY ಯ 4 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ ಮಾಲನ್ನು ಸಹಾ ನೀಡುತ್ತಿದ್ದು, ಆರೋಪಿಯ ವಿರುದ್ದ ಕಲಂ: 15[ಎ], 32 ಕ್ಲಾಸ್ [3] ಕೆ.ಇ. ಆಕ್ಟ್ - 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರ.ವ.ವರದಿ.

 

12. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.119/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:27/09/2021 ರಂದು ಬೆಳಿಗ್ಗೆ 09:30 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:27-09-2021 ರಂದು ಭಾರತ್ ಬಂದ್ ಪ್ರಯುಕ್ತ ಬೆಳಿಗ್ಗೆ 08:00 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-85 ನರಸಿಂಹ, ಹೆಚ್.ಸಿ-234 ಶೇಖರ್ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ಚದಲಪುರ ಕ್ರಾಸಿನ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಕೊಳವನಹಳ್ಳಿ ಗ್ರಾಮದ ಹರೀಶ್ ಬಿನ್ ಮುನಿನಾರಾಯಣಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ತನ್ನ ಮನೆಯ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಚಿನ್ನಂಡಹಳ್ಳಿ ಗ್ರಾಮದ ಹೊರವಲಯದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಬೆಳಿಗ್ಗೆ 08:15 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಹರೀಶ್ ಬಿನ್ ಮುನಿನಾರಾಯಣಪ್ಪ, 26 ವರ್ಷ, ಒಕ್ಕಲಿಗರು, ವ್ಯಾಪಾರ, ಕೊಳವನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 20 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 20 ಟೆಟ್ರಾ ಪ್ಯಾಕೇಟುಗಳ ಬೆಲೆ 702 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 800 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 5 ಖಾಲಿ ಟೆಟ್ರಾ ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಬೆಳಿಗ್ಗೆ 08:20 ಗಂಟೆಯಿಂದ ಬೆಳಿಗ್ಗೆ 09:10 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

Last Updated: 27-09-2021 07:09 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080