ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.251/2021 ಕಲಂ. 78(3) ಕೆ.ಪಿ  ಆಕ್ಟ್:-

     ದಿನಾಂಕ: 25/08/2021 ರಂದು ಸಂಜೆ  ನರಸಿಂಹಮೂರ್ತಿ ಸಿಹೆಚ್ ಸಿ-50 ಡಿಸಿಬಿ-ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೇನೆಂದರೆ ನನಗೆ ಮತ್ತು ಮಂಜುನಾಥ ಸಿಪಿಸಿ-531 ರವರಿಗೆ ದಿನಾಂಕ: 25/08/2021 ರಂದು ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆದ ಶ್ರೀ ರಾಜಣ್ಣ ರವರು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ದಾಳಿ ಮಾಡಲು ನಮಗೆ ನೇಮಿಸಿದ್ದು, ಅದರಂತೆ ನಾವು ಬಾಗೇಪಲ್ಲಿ ತಾಲ್ಲೂಕು ಮಿಟ್ಟೇಮರಿ, ಕೊತ್ತಕೋಟೆ, ಟಿ ಬಿ ಕ್ರಾಸ್ ಕಡೆಗಳಲ್ಲಿ ಗಸ್ತಿನಲ್ಲಿದ್ದಾಗ ಸಾಯಂಕಾಲ 4-00 ಗಂಟೆ ಸಮಯದಲ್ಲಿ ಯಾರೋ ಒಬ್ಬ ಆಸಾಮಿ ದೇವರಗುಡಿಪಲ್ಲಿ ಬಸ್ ನಿಲ್ದಾಣದ ಹತ್ತಿರ ಅಕ್ರಮವಾಗಿ ಮಟ್ಕ ಅಂಕಿಗಳನ್ನು ಬರೆದುಕೊಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಅಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಸದರಿ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿ 1 ರೂಗೆ 70 ರೂ ಕೊಡುವುದಾಗಿ ಕೂಗುತ್ತಿದ್ದವನನ್ನು ಸುತ್ತುವರೆದು ಹಿಡಿದು ಆತನ ಹೆಸರು ವಿಳಾಸ ಕೇಳಲಾಗಿ ಬ್ರಹ್ಮಚಾರಿ ಬಿನ್ ರಾಮಾಚಾರಿ , 56 ವರ್ಷ, ಆಚಾರ್ಯರು, ಎನ್ ಎನ್ ಟಿ ರಸ್ತೆ, ಚಿಂತಾಮಣಿ ನಗರ ೆಂದು ತಿಳಿಸಿದ್ದು, ಅವನನ್ನು ಪರಿಶಿಲನೆ ಮಾಡಲಾಗಿ ವಿವಿಧ ಸಂಖ್ಯೆಯ ಅಂಕಿಗಳನ್ನು ಬರೆದಿರುವ 1 ಮಟ್ಕಾ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು, ಹಾಗೂ 250/- ರೂಗಳಿದ್ದು ಮೇಲ್ಕಂಡವುಗಳನ್ನು ಪಂಚರ ಸಮಕ್ಷಮದಲ್ಲಿ ನಮ್ಮ ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಠಾಣಾಧಿಕಾರಿಗಳಾದ ನಿಮ್ಮ ಮುಂದೆ ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಹಾಜರುಪಡಿಸಿದ್ದು ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ದೂರಿನ  ಮೇರೆಗೆ ಠಾಣಾ ಎನ್ ಸಿ ಆರ್ ನಂ-243/2021 ರೀತ್ಯಾ ದಾಖಲಿಸಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 26-08-2021 ರಂದು ಘನ ನ್ಯಾಯಾಲಯದಿಂದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.375/2021 ಕಲಂ. 78(3) ಕೆ.ಪಿ  ಆಕ್ಟ್:-

     ದಿನಾಂಕ 26-08-2021 ರಂದು ರಾತ್ರಿ 20-30 ಗಂಟೆಗೆ ಠಾಣೆಯ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯಾದ ಕರಿಯಪ್ಪ ರವರು ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂದರೆ ದಿನಾಂಕ:-26-08-2021 ರಂದು ಠಾಣೆಯ ಎ.ಎಸ್.ಐ ಸುಬ್ರಮಣಿ ರವರು ಆರೋಪಿಗಳು, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮದ್ಯಾಹ್ನ ಸುಮಾರು 2-00 ಗಂಟೆಯಲ್ಲಿ ಕೈವಾರ ಹೊರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಪಿ.ಎಸ್.ಐ ರವರಾದ ಶ್ರೀ ನಾರಾಯಣಸ್ವಾಮಿ ರವರು ತಾನು ಚಿಕ್ಕಬಳ್ಳಾಪುರಕ್ಕೆ ಮಾನ್ಯ ಮುಖ್ಯಮಂತ್ರಿಗಳ ಬಂದೋಬಸ್ತ್ ಕರ್ತವ್ಯಕ್ಕೆ ಹೋಗುತ್ತಿದ್ದು ಚಿಂತಾಮಣಿ ತಾಲ್ಲೂಕು ಚಿನ್ನಸಂದ್ರ ಗ್ರಾಮದ ಲಲಿತಮ್ಮರವರ ಹೋಟೆಲ್ ಮುಂಬಾಗದಲ್ಲಿ ಯಾರೋ ಆಸಾಮಿಗಳು ಮಟ್ಕಾ ಸಂಖ್ಯೆಗಳನ್ನು ಬರೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಮೇಲ್ಕಂಡ ಸ್ಥಳದಲ್ಲಿ ಧಾಳಿ ಮಾಡುವಂತೆ ಮೌಖಿಕ ಆದೇಶ ನೀಡಿದರ ಮೆರೆಗೆ ನಾನು ಪಂಚರನ್ನು ಮತ್ತು ಸಿಬ್ಬಂದಿಯವರಾದ ಜಗದೀಶ್ ಹೆಚ್.ಸಿ 41 ಮತ್ತು ಸುರೇಶ್ ಹೆಚ್.ಸಿ 57 ರವರನ್ನು ಕರೆದುಕೊಂಡು ಕೈವಾರ ಕ್ರಾಸ್ ಮಾರ್ಗವಾಗಿ ಕಡಪ-ಬೆಂಗಳೂರಿನ ರಸ್ತೆಯ ಚಿನ್ನಸಂದ್ರ ಗ್ರಾಮದ ಹೆದ್ದಾರಿಯ ಬಳಿ ಇರುವ ಲಲಿತಮ್ಮರವರ ಹೋಟೆಲ್ ನಿಂದ ಸ್ವಲ್ಪ ದೂರದಲ್ಲಿ ನಿಂತುಕೊಂಡು ನೋಡಲಾಗಿ ಯಾರೋ ಇಬ್ಬರು ವ್ಯಕ್ತಿಗಳು ಕೈಗಳಲ್ಲಿ ಪೆನ್ನುಗಳನ್ನು  ಹಿಡಿದುಕೊಂಡು 1 ರೂಗೆ 80 ರೂ ಕೊಡುವುದಾಗಿ ಕೂಗಿಕೊಂಡು ಮಟ್ಕಾ ಸಂಖ್ಯೆಗಳನ್ನು ಚೀಟಿಯಲ್ಲಿ ಬರೆಯುತ್ತಿದ್ದರು. ಸದರಿಯವರನ್ನು ಸುತ್ತುವರೆದು ಹಿಡಿದು ಅವರ ಹೆಸರು ಮತ್ತು ವಿಳಾಸ ತಿಳಿಯಲಾಗಿ (1) ನರಸಿಂಹಮೂರ್ತಿ ಬಿನ್ ವೆಂಕಟರವಣಪ್ಪ, 35 ವರ್ಷ, ಗೊಲ್ಲರು, ಜಿರಾಯ್ತಿ, ಸೂಲದೇನಹಳ್ಳಿ, ಚಿಂತಾಮಣಿ ತಾಲ್ಲೂಕು ಎಂತಲೂ ಮತ್ತೊಬ್ಬ ವ್ಯಕ್ತಿಯ ಹೆಸರು ಮತ್ತು ವಿಳಾಸ ತಿಳಿಯಲಾಗಿ (2) ನೂರ್ ಪಾಷ ಬಿನ್ ಶೇಖ್ ಆದಮ್, 35 ವರ್ಷ, ವ್ಯಾಪಾರ, ವಾಸ ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದರು. ನಾವುಗಳು ಪಂಚರ ಸಮಕ್ಷಮ ಅಂಗಶೋಧನೆ ಮಾಡಲಾಗಿ ಅವರ ಬಳಿ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 825 ರೂಗಳಿದ್ದು, ಸದರಿ ಹಣದ ಬಗ್ಗೆ ವಿಚಾರಿ ಸಲಾಗಿ ತಾವು ಮಟ್ಕಾ ಚೀಟಿ ಬರೆದಿದ್ದರಿಂದ ಬಂದಂತಹ ಹಣವೆಂದು ತಿಳಿಸಿದರು. ಮದ್ಯಾಹ್ನ  3-00 ಗಂಟೆಯಿಂದ 4-00 ಗಂಟೆಯವರೆಗೆ ಧಾಳಿ ಪಂಚನಾಮೆಯನ್ನು ಕೈಗೊಂಡು ಇಬ್ಬರು ಆಸಾಮಿಗಳು ಮತ್ತು ವರದಿಯೊಂದಿಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿ ವರದಿಯನ್ನು ನೀಡಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.376/2021 ಕಲಂ. 78(3) ಕೆ.ಪಿ  ಆಕ್ಟ್:-

     ದಿನಾಂಕ 26-08-2021 ರಂದು ರಾತ್ರಿ 21-00 ಗಂಟೆಗೆ ಠಾಣೆಯ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯಾದ ಕರಿಯಪ್ಪ ರವರು ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂದರೆ ದಿನಾಂಕ:26-08-2021 ರಂದು ಡಿಸಿಬಿ ಸೆನ್ ಪೋಲಿಸ್ ಠಾಣೆಯ ಸಿ.ಹೆಚ್.ಸಿ 110 ವೇಣು ರವರು ಮಾಲು, ಆರೋಪಿ ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ ದಿನಾಂಕ: 26-08-2021 ರಂದು  ಪಿ.ಐ ಸಾಹೇಬರು ತನಗೆ ಹಾಗೂ ಸಿ.ಹೆಚ್.ಸಿ-198 ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ನೇಮಿಸಿದ್ದು, ಅದರಂತೆ ನಾವು ಚಿಂತಾಮಣಿ ತಾಲ್ಲೂಕಿನ ಕಟಮಾಚನಹಳ್ಳಿ, ದೊಡ್ಡಹಳ್ಳಿ, ನಾಯಿಂದ್ರಹಳ್ಳಿ, ಕೈವಾರ, ಮುಂತಾದ ಕಡೆ ಗಸ್ತು ಮಾಡಿಕೊಂಡು ಚಿನ್ನಸಂದ್ರ ಕಡೆ ಗಸ್ತು ಮಾಡುತ್ತಿದ್ದಾಗ ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಚಿನ್ನಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಅಂಕಿಗಳನ್ನು ಬರೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಪಂಚರನ್ನು ಬರ ಮಾಡಿಕೊಂಡು ವಿಚಾರ ತಿಳಿಸಿ ಪಂಚರೊಂದಿಗೆ ಚಿನ್ನಸಂದ್ರ ಗ್ರಾಮದ ಸರ್ಕಾರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಟಿ.ಅಂಗಡಿಯ ಮುಂಭಾಗದಲ್ಲಿ ಯಾರೋ ಒಬ್ಬ ಆಸಾಮಿಯು ಒಂದು ಪೆನ್ ಮತ್ತು ಪೇಪರ್ ಹಿಡಿದುಕೊಂಡು ಒಂದು ರೂ ಗೆ 80 ರೂ ಕೊಡುವುದು ಎಂದು ಕೂಗಿಕೊಂಡು ಚೀಟಿಯಲ್ಲಿ ಅಂಕಿಗಳನ್ನು ಬರೆಯುತ್ತಿದ್ದವನನ್ನು ಹಿಡಿದು ಆತನ ಹೆಸರು ವಿಳಾಸ ಕೇಳಲಾಗಿ ಶಿವ ಕುಮಾರ್ @ ಶಿವ ಬಿನ್ ಕುಮಾರ್, 22 ವರ್ಷ, ಕುರುಬ ಜನಾಂಗ, ಕೂಲಿ ಕೆಲಸ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದನು. ನಂತರ ಆತನ ಬಳಿ ಪರಿಶೀಲಿಸಲಾಗಿ ಒಂದು ಮಟ್ಕಾ ಚೀಟಿ, ಒಂದು ಪಾಲ್ ಪಾಯಿಂಟ್ ಪೆನ್ ಮತ್ತು 1640/- ರೂ ನಗದು ಹಣ ಇದ್ದು, ಸದರಿ ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಬರೆದಿದ್ದರಿಂದ ಬಂದ ಹಣ ಎಂದು ಹಾಗೂ ಈ ಹಣವನ್ನು ಪೈರೋಜ್(7899500356) ಚಿಂತಾಮಣಿ ನಗರ ರವರಿಗೆ ನೀಡುತ್ತಿರುವುದಾಗಿ ತಿಳಿಸಿರುತ್ತಾನೆ, ನಂತರ ಪಂಚರ ಸಮಕ್ಷಮ   ಮದ್ಯಾಹ್ನ 3-30 ಗಂಟೆಯಿಂದ ಸಂಜೆ 4-30 ಗಂಟೆ ವರೆಗೂ ಪಂಚನಾಮೆಯ ಮೂಲಕ ಸದರಿ ಮಾಲನ್ನು ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ವರದಿ ನೀಡಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.156/2021 ಕಲಂ. 78(3) ಕೆ.ಪಿ  ಆಕ್ಟ್:-

     ದಿನಾಂಕ: 26/08/2021 ರಂದು ಸಂಜೆ 17:30 ಗಂಟೆಗೆ ಘನ ನ್ಯಾಯಾಲಯದ  ಪಿ.ಸಿ 367 ರವರು ಎನ್ ಸಿ ಆರ್ 112/2021 ರಲ್ಲಿ ಅನುಮತಿ ಪಡೆದು ಪ್ರತಿಯನ್ನು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ:25/08/2021ರಂದು  ನಾರಾಯಣಸ್ವಾಮಿ.ಆರ್ ಪಿ.ಎಸ್.ಐ-1(ಕಾ&ಸು) ಆದ ನಾನು ಹಾಗೂ ಹೆಚ್.ಸಿ 245 ಸೋಮಶೇಖರಚಾರಿ, ಸರ್ವೇಶ್ ಹೆಚ್.ಸಿ-177 ರವರು  ಸರ್ಕಾರಿ ಜೀಪ್ ಸಂಖ್ಯೆ ಕೆಎ 40 ಜಿ 3699 ನಲ್ಲಿ ಚಿಂತಾಮಣಿ ನಗರದಲ್ಲಿ ಗಸ್ತಿನಲ್ಲಿದ್ದಾಗ  ಮದ್ಯಾಹ್ನ 5-30 ಗಂಟೆ ಸಮಯದಲ್ಲಿ ನಗರದ ಗಜಾನನ ವೃತ್ತದ ಬಳಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಅಂಕಿಗಳನ್ನು ಬರೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಗಜಾನನ ವೃತ್ತದಲ್ಲಿ ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ  ಪಂಚರೊಂದಿಗೆ ಗಜಾನನ ವೃತ್ತದ ಬಳಿ ಹೋಗಿ ಮೊರೆಯಲ್ಲಿ ನಿಂತು ನೋಡಲಾಗಿ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಯಾರೋ ಒಬ್ಬ ಆಸಾಮಿಯು ಒಂದು ಪೆನ್  ಪೇಪರ್ ಹಿಡಿದುಕೊಂಡು  1 ರೂ ಗೆ 80 ರೂ ಕೊಡುವುದಾಗಿ ಕೂಗಿಕೊಂಡು ಚೀಟಿಯಲ್ಲಿ ಅಂಕಿಗಳನ್ನು ಬರೆಯುತ್ತಿದ್ದವನನ್ನು ಹಿಡಿದು  ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಶಾಕೀರ್ ಬಿನ್ ಇಲಿಯಾಜ್ ಖುರೇಷಿ, 32 ವರ್ಷ, ಗಣೇಶ್ ಬಾರ್ ನಲ್ಲಿ ಸಪ್ಲೇಯರ್, ಊರು ಮುಂದೆ,ಕುಂಟಗಡ್ಡ ರಸ್ತೆ, ವಾರ್ಡ್ ನಂ: 25, ಚಿಂತಾಮಣಿ ನಗರ ಎಂತ ತಿಳಿಸಿರುತ್ತಾನೆ.  ನಂತರ ಆತನ ಬಳಿ ಪರಿಶೀಲಿಸಲಾಗಿ 1 ಮಟ್ಕಾಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಮತ್ತು 430/-- ರೂ ನಗದು ಹಣ ಇದ್ದು ಸದರಿ ಹಣದ ಬಗ್ಗೆ ವಿಚಾರಿಸಲಾಗಿ ಮಟ್ಕಾ ಬರೆದಿದ್ದರಿಂದ ಬಂದ ಹಣವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಸದರಿ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೊಂಡಿರುತ್ತೆ.  ಮೇಲ್ಕಂಡ ಆಸಾಮಿ ಮತ್ತು ಮಾಲನ್ನು ಠಾಣೆಗೆ ಕರೆದುಕೊಂಡು ಬಂದು  ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಮೇರೆಗೆ ಇದು ಅಸಂಜ್ಞೆಯ ಅಪರಾಧವಾಗಿರುವುದರಿಂದ ಠಾಣೆಯ ಎನ್.ಸಿ.ಆರ್ ಸಂಖ್ಯೆ 112/2021 ರಂತೆ ದಾಖಲಿಸಿಕೊಂಡು ಇದು ಅಸಂಜ್ಞೇಯ ಅಪರಾಧವಾಗಿದ್ದರಿಂದ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.123/2021 ಕಲಂ. 20(b) (NARCOTIC DRUGS & PSYCHOTROPIC SUBSTANCES ACT, 1985:-

     ಗೌರಿಬಿದನೂರು ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಚಂದ್ರ ಕಲಾ ಎನ್ ಆದ ನನಗೆ ದಿನಾಂಕ:26/08/2021 ರಂದು ಮದ್ಯಾಹ್ನ 12:00 ಗಂಟೆಗೆ  ಗೌರಿಬಿದನೂರು ನಗರದ ನಾಗಪ್ಪಬ್ಲಾಕ್ ಬೈಪಾಸ್ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದ್ದು, ಮೇಲಾಧಿಕಾರಿಗಳಿಗೆ ವಿಚಾರವನ್ನು ತಿಳಿಸಿ ಮೌಖಿಕ ಆದೇಶವನ್ನು ಪಡೆದುಕೊಂಡಿದ್ದು, ಸದರಿ ಆಸಾಮಿಯ ಮೇಲೆ ದಾಳಿ ಮಾಡಲು ಠಾಣೆಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡಿರುತ್ತೇನೆ.  ಅಕ್ರಮವಾಗಿ ಗಾಂಜಾ ಮಾಡುತ್ತಿದ್ದ ಆಸಾಮಿಗಳ ಮೇಲೆ ದಾಳಿ ಮಾಡಲು ಪಂಚಾಯ್ತಿದಾರರಾಗಿ ಸಹಕರಿಸಲು ರೆಕಾರ್ಡ್ ಆಫ್ ರೀಷನ್ ಕಲಂ 41 ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ನಮಗೆ ಪೊಲೀಸ್ ನೊಟೀಸನ್ನು ಜಾರಿ ಮಾಡಿದ್ದು, ಪಂಚರು  ನೊಟೀಸಿಗೆ ಸಹಿ ಮಾಡಿ ಪಂಚಾಯ್ತಿದಾರರಾಗಿ ಸಹಕರಿಸಲು ಒಪ್ಪಿಕೊಂಡಿರುತ್ತಾರೆ.ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಶ್ರೀನಿವಾಸ ರವರನ್ನು ದಾಳಿ ಮಾಡಲು ಗೆಜೆಟೆಡ್ ಅಧಿಕಾರಿಗಳಾಗಿ  ಬರಮಾಡಿಕೊಂಡೆನು.  ಆಡಳಿತ ವೈದ್ಯಾಧಿಕಾರಿಗಳು,  ನಾನು ಪೊಲೀಸ್  ಸಿಬ್ಬಂದಿಯಾದ ಹೆಚ್.ಸಿ 244 ಗೋಪಾಲ, ಪಿಸಿ-201 ಸುರೇಶ್ ,ಪಿಸಿ-34 ಮಂಜುನಾಥ  ಮತ್ತು ಜೀಪ್ ಚಾಲಕ ಹೆಚ್,ಜಿ 257 ಅಶೋಕ ರವರೊಂದಿಗೆ ಅಮಾನತ್ತುಪಡಿಸುವ ಸಮಯದಲ್ಲಿ ಉಪಯೋಗಿಸಲಾಗುವ ಬೆಂಕಿ ಪೊಟ್ಟಣ, ಮೇಣದ ಬತ್ತಿ, ದಾರ, ಸೂಜಿ ಮತ್ತು ಅರಗು, ಮೊಹರು ತೂಕದ ಯಂತ್ರವನ್ನು ತಗೆದುಕೊಂಡು ಸಕರ್ಾರಿ ಪೊಲೀಸ್ ಜೀಪ್ ಸಂಖ್ಯೆ ಕೆ.ಎ-40 ಜಿ-92 ವಾಹನದಲ್ಲಿ  ನಾಗಪ್ಪ ಬ್ಲಾಕ್ ಬೈಪಾಸ್  ಬಳಿ ಬಂದಿದ್ದು, ನಾವುಗಳೆಲ್ಲರೂ ಜೀಪಿನಿಂದ ಕೆಳಗೆ ಇಳಿದು ನಾಗಪ್ಪ ಬ್ಲಾಕ್  ಬೈಪಾಸ್  ಬಳಿ ಮರೆಯಲ್ಲಿ ನಿಂತು  ನೋಡುಲಾಗಿ ಯಾರೋ ಒಬ್ಬ ಅಸಾಮಿ ಒಂದು ಪಿಂಕ್ ಬಣ್ಣದ ಪ್ಲಾಸ್ಟಿಕ್ ಕವರ್ ಅನ್ನ  ಕೈಗಳಲ್ಲಿ ಹಿಡಿದುಕೊಂಡು ನಿಂತಿದ್ದು,  ಪಂಚರು ಮತ್ತು ಪೊಲೀಸ್ ಸಿಬ್ಬಂದಿ ಆಡಳಿತ ವೈದ್ಯಾದಿಕಾರಿಗಳು ಪರಸ್ಪರ ಒಬ್ಬರನ್ನೊಬ್ಬರು ಅಂಗಶೋದನೆ ಮಾಡಿಕೊಂಡು ನಮ್ಮಗಳ ಯಾರ ಬಳಿಯೂ ಮಾಧಕ ವಸ್ತು ಗಾಂಜಾ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡೆವು. ನಂತರ ಸಮವಸ್ತ್ರದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು  ಪಂಚರು  ಆಸಾಮಿ ಹತ್ತಿರ ಹೋಗಿದ್ದು, ಆಸಾಮಿಯು ಓಡಿಹೋಗಲು ಪ್ರಯತ್ನಿಸಿದ್ದು, ಪೊಲೀಸ್ ಸಿಬ್ಬಂದಿ ಹೆಚ್.ಸಿ 244 ಗೋಪಾಲ, ರವರು ಆಸಾಮಿಯನ್ನು ಹಿಡಿದುಕೊಂಡರು. ಗಾಂಜಾ ಸೊಪ್ಪನ್ನು ಮಾರುತ್ತಿದ್ದ ಆಸಾಮಿ ಕೈಯ್ಯಲ್ಲಿ ಹಿಡಿದುಕೊಂಡಿದ್ದ ಕವರ್ ನಲ್ಲಿ ಏನು  ಎಂದು ಕೇಳಲಾಗಿ ಗಾಂಜಾ ಸೊಪ್ಪು ಎಂದು ಹೇಳಿದನು.  ಪರಿಶೀಲಿಸಲಾಗಿ ಘಾಟಿನಿಂದ ಕೂಡಿದ ಮಾಧಕ ವಸ್ತು ಗಾಂಜಾ ಆಗಿತ್ತು. ಆಸಾಮಿಗೆ ಗಾಂಜಾ ಸೊಪ್ಪನ್ನು ಮಾರಾಟ ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಆಸಾಮಿಯು ಯಾವುದೇ ಪರವಾನಗಿ ಇರುವುದಿಲ್ಲವೆಂದು ಹೇಳಿದನು. ಆಸಾಮಿಯನ್ನು  ವಿಚಾರಣೆ ಮಾಡಿ ಹೆಸರು ಮತ್ತು ವಿಳಾಸ ಕೇಳಲಾಗಿ ಆತನು ತನ್ನ ಹೆಸರು ಅಜಯ್ ಬಿನ್ ಛತ್ರಪಾಲ್, 24 ವರ್ಷ, ಸೋನ್ವಾನಿ ಜನಾಂಗ, ಶಂಪಾರಸ್ ಸ್ಟೀಲ್ ಪ್ಯಾಕ್ಟರಿಯಲ್ಲಿ ಕೆಲಸ, ಸಂತೆಬಿದನೂರು ಗೇಟ್, ಹಿಂದೂಪುರ ಸ್ವಂತ ಸ್ಥಳ:-ನಂ 307-ಎ, ಸುಭೇದಾರ್ ಖೇಡ, ಕುಸಂಭಿ ಗ್ರಾಮ, ಅಸನ್ ಗಂಜ್ ತಾಲ್ಲೂಕು, ಉನ್ನಾವ ಜಿಲ್ಲೆ, ಉತ್ತರಪ್ರದೇಶ ಎಂತ ತಿಳಿಸಿರುತ್ತಾನೆ. ನಂತರ ಪೊಲೀಸರು ಸದರಿ ಗಾಂಜಾ ಮಾರಾಟ ಮಾಡುತ್ತಿದ್ದ ಆಸಾಮಿಯನ್ನು   ನಿನ್ನ ವಶದಲ್ಲಿರುವ ಗಾಂಜಾ ಸೊಪ್ಪು ಎಲ್ಲಿಂದ ಬಂತು ಎಂದು ವಿಚಾರಿಸಲಾಗಿ ಸದರಿ ಗಾಂಜಾದ ಸೊಪ್ಪನ್ನು ಈಗ್ಗೆ ಸುಮಾರು 12 ದಿನಗಳ ಹಿಂದೆ ತಾನು ಸಂತೇಬಿದನೂರು ಗೇಟ್ ನ ಬಳಿ ಇದ್ದಾಗ ದೆಹಲಿ ಕಡೆಯಿಂದ ಬಂದ ಪ್ರವಾಸಿಗರು ಬಸ್ಸಿನಲ್ಲಿ  ಬಂದು ಬಸ್ ಅನ್ನು ನಿಲ್ಲಿಸಿದ್ದರು ಅವರನ್ನು ಮಾತನಾಡಿಸಲಾಗಿ ತಮ್ಮ ಬಳಿ ಗಾಂಜಾ ಇದೆ ಬೇಕೆ ಎಂದು ಹೇಳಿದರು ಆಗ ತಾನು ರವರಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂದು ಅವರಿಂದ ಪಡೆದುಕೊಂಡು. ಈ ದಿನ ತಾನು ಗೌರಿಬಿದನೂರು ನಗರದಲ್ಲಿ  ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ನಾಗಪ್ಪ ಬ್ಲಾಕ್ ಬಳಿ  ಇದ್ದಾಗ ಪೊಲೀಸರು ಹಿಡಿದುಕೊಂಡಿರುವುದಾಗಿ  ತಿಳಿಸಿ ತಾನು ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದುದು ತಪ್ಪಾಗಿರುತ್ತದೆಂದು ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ.  ನಂತರ  ಆಡಳಿತ ವೈದ್ಯಾದಿಕಾರಿಗಳು ರವರಾದ ಶ್ರೀ. ಶ್ರೀನಿವಾಸ್  ರವರು  ಆಸಾಮಿಯನ್ನು ಕುರಿತು ಮಾಧಕ ವಸ್ತುವನ್ನು ನಿಮ್ಮ ವಶದಲ್ಲಿಟ್ಟುಕೊಳ್ಳುವುದು ಕಾನೂನಿನ ರೀತಿ ಅಪರಾಧವಾಗಿರುತ್ತದೆ. ನಿಮ್ಮ ಬಳಿ ಮಾದಕ ವಸ್ತು ಇರುವುದರಿಂದ  ಅದನ್ನು ಅಮಾನತ್ತುಪಡಿಸಿಕೊಳ್ಳಬೇಕಾಗಿದೆ.  ಗೆಜೆಟೆಡ್ ಅಧಿಕಾರಿಯಾದ  ಆದ  ನಾನೇ ಪೊಲೀಸ್  ಸಿಬ್ಬಂದಿಯಿಂದ ಅಂಗಶೋದನೆ ಮಾಡಿಸಬಹುದೇ? ಅಥವಾ ನಿಮ್ಮನ್ನ ಕಾನೂನಿನ ಪ್ರಕಾರ  ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅಂಗಶೋದನೆ ಮಾಡಿಸಬೇಕೆ? ಅಥಾವಾ ಬೇರೆ ಗೆಜೆಟೆಡ್ ಅಧಿಕಾರಿಗಳ ಮುಂದೆ ಹಾಜರುಪಡಿಸಿ ಅಂಗಶೋದನೆ ಮಾಡಿಸಬೇಕೆ? ಎಂದು ಹಿಂದಿ ಬಾಷೆಯಲ್ಲಿ  ಕೇಳಲಾಗಿ ಅಜಯ್  ರವರು ಗೆಜೆಟೆಡ್ ಅಧಿಕಾರಿಗಳಾದ ನೀವೇ ಪೊಲೀಸ್ ಸಿಬ್ಬಂದಿಯವರಿಂದ ಅಂಗಶೋದನೆ ಮಾಡಬಹುದೆಂದು ಒಪ್ಪಿ  ತಿಳಿಸಿದರು. ಅದರಂತೆ ಗೆಜೆಟೆಡ್  ಅದಿಕಾರಿಗಳಾದ ಶ್ರೀ. ಶ್ರೀನಿವಾಸ್ ರವರು ಪೊಲೀಸ್  ಸಿಬ್ಬಂದಿರವರಿಂದ ಅಜಯ್ ರವರನ್ನು   ಅಂಗಶೋದನೆ ಮಾಡಲು ಈ ಕೆಳಕಂಡಂತೆ  ಪ್ರಶ್ನಾವಳಿಯನ್ನು. ಮಾಡಲಾಗಿರುತ್ತೆ. 1. ನಮಗೆ ನೀನು ಮಾದಕ ವಸ್ತು ಹೊಂದಿರುವ ಬಗ್ಗೆ ಮಾಹಿತಿ ಇರುತ್ತದೆ ಹೌದೆ ? 2. ನಿನ್ನನ್ನು ಯಾರಾದರು ನ್ಯಾಯಾಧಿಶರ ಮುಂದೆ ಅಥವಾ ಗೆಜೆಟೆಡ್ ಅಧಿಕಾರಿಯವರ ಮುಂದೆ ಹಾಜರು ಪಡಿಸಿ ಅಂಗಶೋಧನೆ ಮಾಡಿಸಬೇಕೆ ? ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಹಕ್ಕು ಕಾನೂನು ಪ್ರಕಾರ ನಿಮಗಿದೆ. 3. ನಾನು ಸಹ ಒಬ್ಬ ಗೆಜೆಟೆಡ್ ಅಧಿಕಾರಿಯಾಗಿದ್ದು, ಬೇರೊಬ್ಬ ಗೆಜೆಟೆಡ್ ಅಧಿಕಾರಿಯವರ ಮುಂದೆ ಹಾಜರು ಪಡಿಸಿ ಅಂಗಶೋಧನೆ ಮಾಡಿಸಬೇಕೆ ? ಅಥವಾ ನಾನೆ ಮಾಡಬಹುದೆ ?  ಎಂದು ಪ್ರಶ್ನಾವಳಿಯನ್ನು ಸಿದ್ದಪಡಿಸಿ ಆತನ ಬಾಷೆಗೆ ತಜರ್ುಮೆ ಮಾಡಿಸಿ(ಹಿಂದಿ ಬಾಷೆಗೆ) ಆಸಾಮಿ ಗೆ ಜಾರಿ ಮಾಡಿದರು. ಆಸಾಮಿಯು ಪ್ರಶ್ನಾವಳಿ ಪ್ರತಿಯನ್ನು ಪಡೆದು ಹಿಂದಿ ಬಾಷೆಯಲಿ ಓದಿಸಿ ಪ್ರಶ್ನಾವಳಿಯನ್ನು ಅರ್ಥಮಾಡಿಕೊಂಡು ಅಂಗಶೋದನೆಗೆ ಒಪ್ಪಿಗೆ ನೀಡಿ ಆಸಾಮಿಯು ಸಹಿ ಮಾಡಿದನು. ಅದಕ್ಕೆ ಪಂಚರ ಸಹಿಗಳನ್ನು ಪಡೆದುಕೊಂಡರು.ನಂತರ ಆಡಳಿತ ವೈದ್ಯಾದಿಕಾರಿಗಳು ಪೊಲೀಸರಿಂದ ಪಂಚರ ಸಮಕ್ಷಮ ಆಸಾಮಿಯ ಅಂಗಶೋದನೆಯನ್ನು ಮಾಡಲಾಗಿ ಆಸಾಮಿಯ ಬಳಿ ಒಂದು ಪಿಂಕ್ ಬಣ್ಣದ ಬ್ಯಾಗ್ ನಲ್ಲಿ ಗಾಂಜಾ ಸೊಪ್ಪು ಇದ್ದು ಅವುಗಳನ್ನು ಪರಿಶೀಲಿಸಿ ನೋಡಲಾಗಿ ಇದು ಗಾಂಜಾ ಸೊಪ್ಪು ಆಗಿರುತ್ತದೆ. ಪೊಲೀಸರು ತಂದಿದ್ದ ತಕ್ಕಡಿಯಲ್ಲಿ ತೂಕ ಹಾಕಲಾಗಿ 315 ಗ್ರಾಂ. ಇದ್ದು, ಸ್ವಲ್ಪ ಹಸಿಯಾಗಿರುತ್ತೆ. ಒಣಗಿದ ನಂತರ ತೂಕ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಅಂಗಶೋದನೆ ಮಾಡಿಸಲಾಗಿ 100/- ರೂ. ಮುಖಬೆಲೆಯ ನಾಲ್ಕು ನೋಟುಗಳು ಒಟ್ಟು 400/- ನೋಟುಗಳು ಇರುತ್ತವೆ.ಸದರಿ ಅಜಯ್ ರವರ ಬಳಿ ಇದ್ದ ಒಟ್ಟು 315 ಗ್ರಾಂ. ಗಾಂಜಾ ಸೊಪ್ಪಿನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಮಾದರಿಗಾಗಿ ನಮ್ಮಗಳ ಸಮಕ್ಷಮ ಸುಮಾರು 50 ಗ್ರಾಂ.ನಷ್ಟು ಗಾಂಜಾ ಸೊಪ್ಪನ್ನು  ಪ್ಲಾಸ್ಟೀಕ್ ಕವರನಲ್ಲಿ ಹಾಕಿ ನಂತರ ಬಳಿ ಬಟ್ಟೆ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು ಭದ್ರಪಡಿಸಲಾಯಿತು. ನಂತರ ಇದಕ್ಕೆ ಅರಗಿನ ಸಹಾಯದಿಂದ ಏ ಎಂಬ ಅಕ್ಷರ ಇರುವ ಸೀಲಿನಿಂದ ಮೊಹರು ಮಾಡಿ ಸದರಿ ಚೀಲಕ್ಕೆ ಪಂಚರಾದ ನಮ್ಮಗಳ ಮತ್ತು ಆಡಳಿತ ವೈಧ್ಯಾದಿಕಾರಿಗಳು  ಸಹಿಯನ್ನು ಒಳಗೊಂಡ ಚೀಟಿಯನ್ನು ಅಂಟಿಸಲಾಯಿತು. ಇದಕ್ಕೆ ಕ್ರಮ ಸಂಖ್ಯೆ-1 ಎಂತ ನೀಡಲಾಯಿತು. ಉಳಿದ 265 ಗ್ರಾಂ ಗಾಂಜಾವನ್ನು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಅದನ್ನು ಬಿಳಿ ಬಟ್ಟೆಯ ಚೀಲದಲ್ಲಿ ಇಟ್ಟು ದಾರದಿಂದ ಹೊಲೆದು, ಅರಗು ಮಾಡಿ ಏ ಎಂಬ ಅಕ್ಷರದಿಂದ ಸೀಲು ಮಾಡಿಲಾಯಿತು. ಇದಕ್ಕೆ ಕ್ರಮ ಸಂಖ್ಯೆ 02 ಎಂತ ನೀಡಲಾಯಿತು. ಇದರ ಮೇಲೆ ಪಂಚಾಯ್ತಿದಾರರು ಮತ್ತು ಆಡಳಿತ ವೈದ್ಯಾದಿಕಾರಿಗಳು   ಸಹಿ ಮಾಡಿದ್ದ ಚೀಟಿಯನ್ನು ಅಂಟಿಸಲಾಯಿತು.ಆರೋಪಿಯು ಗಾಂಜಾ ಸೊಪ್ಪನ್ನು  ಇಟ್ಟುಕೊಂಡಿದ್ದ ಒಂದು ಪಿಂಕ್  ಬಣ್ಣದ ಪ್ಲಾಸ್ಟಿಕ್  ಬ್ಯಾಗನ್ನು  ಒಂದು  ಪ್ಲಾಸ್ಟೀಕ್ ಕವರ್ ನಲ್ಲಿ ಹಾಕಿ ನಂತರ ಬಿಳಿ ಬಟ್ಟೆ ಚೀಲದಲ್ಲಿ ಇಟ್ಟು ದಾರದಿಂದ ಹೊಲೆದು ಭದ್ರಪಡಿಸಿ ಇವುಗಳಿಗೆ ಅರಗಿನ ಸಹಾಯದಿಂದ  ಏ ಎಂಬ ಅಕ್ಷರ ಇರುವ ಸೀಲಿನಿಂದ ಮೊಹರು ಮಾಡಿ ಸದರಿ ಚೀಲಕ್ಕೆ ಪಂಚರಾದ ನಮ್ಮಗಳ ಮತ್ತು ವೈದ್ಯಾದಿಕಾರಿಗಳ ರವರ ಸಹಿಯನ್ನು ಒಳಗೊಂಡ ಚೀಟಿಯನ್ನು ಅಂಟಿಸಲಾಯಿತು. ಸದರಿ ಚೀಲಕ್ಕೆ  ಕ್ರಮವಾಗಿ ಕ್ರಮ ಸಂಖ್ಯೆ:03 ಎಂತ ನೀಡಲಾಯಿತು. ನೌಷಾದ್ ರವರ ಬಳಿ ಇದ್ದ 100/- ರೂ. ನಾಲ್ಕು ನೋಟುಗಳು ಒಟ್ಟು 400/- ರೂ. ಹಣವನ್ನು ಬಿಳಿ ಬಟ್ಟೆಯ ಚೀಲದಲ್ಲಿ ಇಟ್ಟು  ದಾರದಿಂದ ಹೊಲೆದು ಭದ್ರಪಡಿಸಿ ಅರಗಿನ ಸಹಾಯದಿಂದ ಏ ಎಂಬ ಅಕ್ಷರ ಇರುವ ಸೀಲಿನಿಂದ ಮೊಹರು ಮಾಡಿ ಸದರಿ ಚೀಲಕ್ಕೆ ಪಂಚರ ಮತ್ತು ವೈದ್ಯಾದಿಕಾರಿಗಳ ರವರ ಸಹಿಯನ್ನು ಒಳಗೊಂಡ ಚೀಟಿಯನ್ನು ಅಂಟಿಸಲಾಯಿತು. ಸದರಿ ಚೀಲಕ್ಕೆ  ಕ್ರಮವಾಗಿ ಕ್ರಮ ಸಂಖ್ಯೆ:04 ಎಂತ ನೀಡಲಾಯಿತು. ಆರೋಪಿಯಿಂದ ವಶಪಡಿಸಿಕೊಂಡ ಮಾದಕ ವಸ್ತು ಗಾಂಜಾ ಸೊಪ್ಪು  ಒಟ್ಟು ತೂಕ ಸುಮಾರು 315 ಗ್ರಾಂ. ಇದ್ದು,  ಇದರ ಬೆಲೆ ಸುಮಾರು 12600/ ರೂಪಾಯಿಗಳಾಗಬಹುದೆಂದು ಪಂಚರು  ಅಂದಾಜಿಸಿದೆವು. ಆರೋಪಿ ಅಜಯ್ ಬಿನ್ ಛತ್ರಪಾಲ್, 24 ವರ್ಷ, ಸೋನ್ವಾನಿ ಜನಾಂಗ, ಶಂಪಾರಸ್ ಸ್ಟೀಲ್ ಪ್ಯಾಕ್ಟರಿಯಲ್ಲಿ ಕೆಲಸ,  ಹಾಳಿ ವಾಸ;ಸಂತೇಬಿದನೂರು  ಗೇಟ್ ಬಳಿ ಶಂಪಾರಸ್ ಸ್ಟೀಲ್ ಪ್ಯಾಕ್ಟರಿ ಹಿಂದೂಪುರ ತಾಲ್ಲೂಕು, ಸ್ವಂತ ಸ್ಥಳ:-ಕುಶಂಲೀ ಗ್ರಾಮ ಹಸನ್ ಗಂಗ್ ತಾಲ್ಲೂಕು .ಉನ್ನಾವ ಜಿಲ್ಲೆ, ಉತ್ತರಪ್ರದೇಶ ಎಂಬುವವರನ್ನು ಆಕೆಯ ಬಳಿ ಇದ್ದ ಮೇಲ್ಕಂಡ ಮಾಲುಗಳ ಸಮೇತ ಪಿ.ಎಸ್.ಐ ರವರು    ವಶಕ್ಕೆ ಪಡೆದುಕೊಂಡರು.    ಸದರಿ ಸ್ಥಳಕ್ಕೆ ಚೆಕ್ಕು ಬಂದಿ: ಪೂರ್ವಕ್ಕೆ:ಹಿರೇಬಿದನೂರು ಕಡೆ ಹೋಗುವ ಬೈಪಾಸ್ ಕಡೆ ಹೋಗುವ ಬೈಪಾಸ್ ರಸ್ತೆ . ಪಶ್ಚಿಮಕ್ಕೆಬೆಂಗಳೂರು- ಹೈದಾರಾಬಾದ್ ರಸ್ತೆ ಹೋಗುವ ಬೈಪಾಸ್ ರಸ್ತೆ , ಉತ್ತರಕ್ಕೆ ರಸ್ತೆ ವಿಭಜಕ ಅದರ ಆಚೆ ಮತ್ತು ಬೈಪಾಸ್ ರಸ್ತೆ ಮತ್ತು ದಕ್ಷಿಣಕ್ಕೆ ಖಾಸಗಿ ರವರ ಜಮೀನು ರಸ್ತೆ ಇರುತ್ತೆ. ಈ ಪಂಚನಾಮೆಯನ್ನು  ಲ್ಯಾಪ್ ಟ್ಯಾಪ್ನಲ್ಲಿ ಟೈಪ್ ಮಾಡಿರುತ್ತೆ.  ಸದರಿ ಪಂಚನಾಮೆಯನ್ನು ಮದ್ಯಾಹ್ನ 12:15 ಗಂಟೆಯಿಂದ 1-45 ಗಂಟೆಯವರಿಗೆ ಟೈಪ್ ಮಾಡಿ ಠಾಣಾ ಸಿಬ್ಬಂದಿಯ ಮೂಲಕ ಪೆನ್ ಡ್ರೈವ್ ನಲ್ಲಿ ಠಾಣೆಗೆ ಕಳುಹಿಸಿಕೊಟ್ಟು ಸ್ಥಳಕ್ಕೆ ಪ್ರಿಂಟ್ ತರಿಸಿರುತ್ತೆ.  ಆಡಳಿತ ವೈದ್ಯಾಧಿಕಾರಿಗಳ, ಪಂಚರ ಸಹಿಗಳನ್ನು ಪಡೆದುಕೊಂಡು ಬಂದು  ಆರೋಪಿ ಮತ್ತು ಮಾಲಿನೊಂದಿಗೆ ಮದ್ಯಾಹ್ನ 2:00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಸ್ವತಃ ಪ್ರಕರಣವನ್ನು ದಾಖಲಿಸಿರುವುದಾಗಿರುತ್ತೆ.

 

6. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.198/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 25/08/2021 ರಂದು ರಾತ್ರಿ 8-30 ಗಂಟೆಗೆ    ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ ಮಂಜುನಾಥ ಡಿ.  ರವರು ಠಾಅಣೆಯಲ್ಲಿ ನಿಡಿದ ದೂರಿನ ಸಾರಾಂಶವೇನೆಂದರೆ ಇವರಿಗೆ  ದಿನಾಂಕ:25/08/2021 ರಂದು ಸಂಜೆ 5-00 ಗಂಟೆಯಲ್ಲಿ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿದ್ದಾಗ ಗುಪ್ತ ಮಾಹಿತಿ ಸಿಬ್ಬಂದಿ ಹನುಮಂತರಾಯಪ್ಪ ಸಿ,ಹೆಚ್ಸಿ-73 ರವರು ತನಗೆ ಪೋನ್ ಮಾಡಿ ಈ ದಿನ ದಿನಾಂಕ: 25/08/2021 ರಂದು ನಾನು ಮಂಡಿಕಲ್ಲು, ಕಮ್ಮಗುಟ್ಟಹಳ್ಳಿ  ಕಡೆ ಗಸ್ತು ಮಾಡುತ್ತಿರುವಾಗ ಯದಾರ್ಲಹಳ್ಳಿ    ಗ್ರಾಮದ ಬಳಿ ಕೆರೆಯ ಅಂಗಳದಲ್ಲಿ  ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ನನಗೆ ಮಾಹಿತಿ ನೀಡಿದರ ಮೇರೆಗೆ, ಠಾಣಾ ಸಿಬ್ಬಂದಿಯಾದ ಎ.ಎಸ್.ಐ ಗಂಗಾಧರಪ್ಪ , ಸಿ,ಹೆಚ್,ಸಿ-102 ಆನಂದ , ಸಿ.ಪಿ.ಸಿ-272 ಶ್ರೀನಿವಾಸ  ಸಿ.ಪಿ.ಸಿ- 553 ಮುಕುಂದ ,  ಸಿ.ಪಿ.ಸಿ- 203 ಮಂಜುನಾಥ ನಾಯಕ,  ಜೀಪಿನ ಚಾಲಕ ಎ.ಪಿ.ಸಿ-05 ಮದುಕುಮಾರ್ ರವರನ್ನು ಕರೆಯಿಸಿಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ತಿಳಿಸಿ ಸಂಜೆ 5-30 ಗಂಟೆಗೆ ಪೆರೇಸಂದ್ರ ಪೊಲೀಸ್ ಠಾಣೆಯಿಂದ ಬಿಟ್ಟು ಸರ್ಕಾರಿ ಜೀಪ್ ಕೆ.ಎ-40-ಜಿ-1777 ರಲ್ಲಿ ಸಂಜೆ 6-00  ಗಂಟೆಗೆ ಸಿ.ಹೆಚ್.ಸಿ-73 ಹನುಮಂತರಾಯಪ್ಪ ರವರನ್ನು ಮತ್ತು ಪಂಚರನ್ನು ಬರಮಾಡಿಕೊಂಡು ಯದಾರ್ಲಹಳ್ಳಿ   ಗ್ರಾಮದ ಬಳಿ ಮರೆಯಲ್ಲಿ ನಿಂತು ನೋಡಲಾಗಿ, ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-100 ಬಾಹರ್-100 ಎಂದು ಕೂಗುತ್ತಾ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಸಂಜೆ 6-30 ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು ಆಡುತ್ತಿದ್ದವರು ಕೆಲವರು ಓಡಿ ಹೋಗಿದ್ದು ಓಡಿ ಹೋದವರ  ಪೈಕಿ 04 ಜನರನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ಬಾಲಕೃಷ್ಣ ಬಿನ್ ನರಸಿಂಹಪ್ಪ, 49 ವರ್ಷ, ಜಿರಾಯ್ತಿ, ನಾಯಕ, ವಾಸ ದರಬೂರು    ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 2) ಗಂಗರಾಜು ಬಿನ್ ಚಿಕ್ಕನರಸಿಂಹಯ್ಯ,  42 ವರ್ಷ, ವಕ್ಕಲಿಗರು,  ಜಿರಾಯ್ತಿ,  ವಾಸ ಯದಾರ್ಲಹಳ್ಳಿ   ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 3) ಅನಿಲ್ ಕುಮಾರ್ ಬಿನ್ ಮುನಿಶ್ಯಾಮಪ್ಪ, 29 ವರ್ಷ, ಅಗಸರು,  ವಾಸ ಬಚ್ಚೇನಹಳ್ಳಿ  ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 4) ನಾಗರಾಜು ಬಿನ್ ಮೂರ್ತಪ್ಪ, 38 ವರ್ಷ, ಆದಿ ಕನರ್ಾಟಕ , ಜಿರಾಯ್ತಿ, ವಾಸ 3 ನೇ ವಾರ್ಡ, ಚಿಕ್ಕಬಳ್ಳಾಪುರ ಟೌನ್  ಎಂದು ತಿಳಿಸಿದ್ದು ಓಡಿ ಹೋದವರ ಹೆಸರು ಮತ್ತು ವಿಳಾಸ ಕೇಳಲಾಗಿ 4)    ಆನಂದ , ದರಬುರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು,  5)   ನರಸಿಂಹ ಮೂತರ್ಿ , ದರಬುರು ಗ್ರಾಮ,  ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ.  ಸ್ಥಳದಲ್ಲಿ 3190 ರೂ ನಗದು ಹಣ, 52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ ಜೂಜಾಟಕ್ಕೆ ಪಣಕ್ಕೆ ಇಟ್ಟಿದ್ದ 3190/- ರೂ & 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಸಂಜೆ 6-45 ಗಂಟೆಯಿಂದ ರಾತ್ರಿ  7-45 ಗಂಟೆಯವರೆಗೆ ಕೃತಕ ವಿದ್ಯೂತ್ ಬೆಳಕಿನಲ್ಲಿ ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ 04 ಜನ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ರಾತ್ರಿ 8-15  ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ರಾತ್ರಿ  8-30 ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 27-08-2021 05:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080