ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.211/2021 ಕಲಂ. 504,506  ಐ.ಪಿ.ಸಿ:-

     ದಿನಾಂಕ: 26/07/2021 ರಂದು ಸಂಜೆ 5-30 ಗಂಟೆಗೆ ನ್ಯಾಯಾಲಯದ ಪಿಸಿ-235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ:23/07/2021 ರಂದು ಪಿರ್ಯಾದಿದಾರರಾದ ಶ್ರೀನಿವಾಸ ಬಿನ್ ರಾಮಕೃಷ್ಣಪ್ಪ ಮಾಮಿಡಿಕಾಯಲಪಲ್ಲಿ ಗ್ರಾಮ ರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ ಬಿಜೆಪಿ ಕಾರ್ಯಕರ್ತರು ಬಾಗೇಪಲ್ಲಿ ಎಂದು ವಾಟ್ಸ್ ಆಪ್  ಗ್ರೂಪ್ ಮಾಡಿಕೊಂಡಿದ್ದು ಸದರಿ ಗ್ರೂಪಿನಲ್ಲಿ ಅಧ್ಯಕ್ಷರು ಮತ್ತು ಕಾರ್ಯಕರ್ತರ ಬಗ್ಗೆ ಗೂಳೂರು ಲಕ್ಷ್ಮೀನಾರಾಯಣ ಎಂಬುವವರು ಕೆಟ್ಟದಾಗಿ ಕಾಮೆಂಟ್ ಮಾಡಿರುತ್ತಾರೆ. ನಾನು ಯಾಕೆ ಹೀಗೆ ಮಾಡುತ್ತಿದ್ದೀಯಾ ನೀವು ಜೆಡಿಎಸ್ ಪಕ್ಷದವರು ನಿಮ್ಮ ಕಾರ್ಯಕರ್ತರ ಬಗ್ಗೆ ಕಾಮೆಂಟ್ ಮಾಡಿಕೊಳ್ಳಿ ಎಂದು ಹೇಳಿದ್ದಕ್ಕೆ, ದಿನಾಂಕ: 21/07/2021 ನನಗೆ ಕರೆ ಮಾಡಿ ಅವಾಚ್ಯಶಬ್ದಗಳಿಂದ ಬೈದು, ಬಂದರೆ ನಿನ್ನನ್ನು ಸಾಯಿಸುತ್ತೇನೆಂದು ಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಸದರಿ ಲಕ್ಷ್ಮೀನಾರಾಯಣ ರವರನ್ನು ಠಾಣೆಗೆ ಕರೆಸಿ ನನ್ನ ತಂಟೆಗೆ ಬಾರದಂತೆ ಸೂಕ್ತ ಬಂದೋಬಸ್ತ್ ಮಾಡಿ ನನಗೆ ನ್ಯಾಯ ಮಾಡಿಕೊಡಲು ಕೋರಿ ನೀಡಿದ ದೂರು ಪಡೆದು ಠಾಣಾ ಎನ್ ಸಿಆರ್-199/2021 ರಂತೆ ದಾಖಲಿಸಿರುತ್ತೆ.  ಈ ಪ್ರಕರಣವು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡವರ ವಿರುದ್ದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿ ನೀಡಲು ಘನನ್ಯಾಯಾಲಯದಲ್ಲಿ ಕೋರಿದೆ.     ದಿನಾಂಕ:26/07/2021 ರಂದು ನ್ಯಾಯಾಲಯದ ಪಿಸಿ-235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಸಿ.ಇ.ಎನ್ ಪೊಲೀಸ್‌ ಠಾಣೆ ಮೊ.ಸಂ.33/2021 ಕಲಂ. 419,420 ಐ.ಪಿ.ಸಿ & 66(C),66(D) INFORMATION TECHNOLOGY ACT 2008:-

    ದಿನಾಂಕ:27/7/2021 ರಂದು ಪಿರ್ಯಾದಿ ಶ್ರೀಮತಿ ಡಿ ಹೆಚ್ ರೋಜಾ ಕೋಂ ಕಾಂತ್ ಕುಮಾರ್,26 ವರ್ಷ, ಒಕ್ಕಲಿಗರು. ಗೃಹಣಿ, ವಾಸ ದೊಡ್ಡದಾಸರಹಳ್ಳಿ ಗ್ರಾಮ, ಶಿಢ್ಲಘಟ್ಟ ತಾಲ್ಲೂಕು, ಮೊ ಸಂಖ್ಯೆ: 9535382823 ರವರು ಠಾಣೆಗೆ ಹಾಜರಾಗಿ ನೀಡಿದ  ದೂರು ಏನೆಂದರೆ ತಾನು ನಮ್ಮ ಮನೆಯ ವ್ಯವಹಾರಕ್ಕೋಸ್ಕರ ಶಿಡ್ಲಘಟ್ಟ ಟೌನ್ ನಲ್ಲಿನ ಡಿಸಿಸಿ ಬ್ಯಾಂಕ್ ನಲ್ಲಿ ಅಕೌಂಟ್ ನಂ: 125001857222 ರಂತೆ ಉಳಿತಾಯ ಖಾತೆಯನ್ನು ಹೊಂದಿರುತ್ತೇನೆ. ಇದಕ್ಕೆ  ಎ ಟಿ ಎಂ ಕಾರ್ಡನ್ನು ಸಹ ಹೊಂದಿರುತ್ತೇನೆ. ನನ್ನ ಖಾತೆಯಲ್ಲಿ 40,000/- ರೂಗಳು ಇತ್ತು. ಈಗಿರುವಲ್ಲಿ ನಾನು ದಿನಾಂಕ:14/5/2021 ರಂದು ನನಗೆ ಹಣದ ಆವಶ್ಯಕತೆ ಇದ್ದುದರಿಂದ ಹಣ ಡ್ರಾ ಮಾಡಲು ಎ ಟಿ ಎಂ ಗೆ ಹೋಗಿ ಚಕ್ ಮಾಡಿದಾಗ ಹಣ ಬರಲಿಲ್ಲ, ನಂತರ ಶಿಢ್ಲಘಟ್ಟ ಡಿಸಿಸಿ ಬ್ಯಾಂಕ್ ನಲ್ಲಿ ಹೋಗಿ ವಿಚಾರಿಸಿದಾಗ ಯಾರೋ ಹಣ ವರ್ಗಾಯಿಸಿಕೊಂಡಿದ್ದಾರೆಂತ ತಿಳಿಸಿದರು. ಆದರೆ ನನಗೆ ಈ ಹಿಂದೆ ಯಾವುದೆ ಸಂದೇಶಗಳು ಸಹ ನನ್ನ ಮೊಬೈಲ್ ಗೆ ಬಂದಿರುವುದಿಲ್ಲ. ಸದರಿ ನನ್ನ ಖಾತೆಯ  ಎ ಟಿ ಎಂ ಕಾರ್ಡ ನನ್ನ ಬಳಿಯೆ ಇದ್ದರೂ ಸಹ  ಮತ್ತು ನಾನು ಹಣ ಡ್ರಾ ಮಾಡದೆ ಇದ್ದರೂ ಸಹ ನನ್ನ ಮೇಲ್ಕಂಡ ಖಾತೆಯಿಂದ ದಿನಾಂಕ:26/3/2021 ರಿಂದ 22/4/2021 ವರಿಗೆ ಒಟ್ಟು 11 ಭಾರಿ ಒಟ್ಟು37,600/- ರೂಗಳ ಹಣವನ್ನು ವರ್ಗಾವಣೆ ಮಾಡಿಕೊಂಡಿರುವ ಬಗ್ಗೆ  ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ನಮ್ಮ ಗಮನಕ್ಕೆ ಬಂದಿರುತ್ತದೆ. ಆದುದರಿಂದ ನನ್ನ ಖಾತೆಯಲ್ಲಿ ನಾನು ಹಣ ಡ್ರಾ ಮಾಡದೆ ಇದ್ದು, ಯಾರೋ ಹಣ ವರ್ಗಾಯಿಸಿಕೊಂಡಿರುವವರನ್ನು ಪತ್ತೆ ಮಾಡಿ ನಮ್ಮ ಹಣವನ್ನು ನಮಗೆ ವಾಪಸ್ಸು ಕೊಡಿಸಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರಗಿಸಲು ತಮ್ಮಲ್ಲಿ ಕೋರಿ ನೀಡಿದ ದೂರು.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.328/2021 ಕಲಂ. 15(ಎ) ಕೆ.ಇ ಆಕ್ಟ್:-

     ದಿನಾಂಕ: 26/07/2021 ರಂದು ಸಂಜೆ 5.00 ಗಂಟೆಗೆ ಠಾಣೆಯ ಶ್ರೀ. ರಾಜಣ್ಣ, ಸಿ.ಹೆಚ್.ಸಿ-03 ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 26/07/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು ಹಾಗೂ ಸಿ.ಪಿ.ಸಿ- 75 ಆಂಜನಾರೆಡ್ಡಿ ರವರು ಠಾಣಾ ಸರಹದ್ದಿನ ಕೈವಾರ, ಮುತುಕದಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3.30 ಗಂಟೆಯ ಸಮಯದಲ್ಲಿ ಚಿಕ್ಕಕಟ್ಟಿಗೇನಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಶ್ರೀನಿವಾಸಪ್ಪ ಬಿನ್ ಲೇಟ್ ಹುಚ್ಚಪ್ಪ ರವರು ಅವರ ಮನೆಯ ಮುಂಬಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಚಿಕ್ಕಕಟ್ಟಿಗೇನಹಳ್ಳಿ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ ನೋಡಲಾಗಿ 1)90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, 2)90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು 3)ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4)ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಓಪನ್ ಆಗಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಶ್ರೀನಿವಾಸಪ್ಪ ಬಿನ್ ಲೇಟ್ ಹುಚ್ಚಪ್ಪ, 65 ವರ್ಷ, ದೋಬಿ ಜನಾಂಗ, ಕೂಲಿ ಕೆಲಸ, ಚಿಕ್ಕಕಟ್ಟಿಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ- 7760285493 ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3.45 ರಿಂದ ಸಂಜೆ 4.30 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಶ್ರೀನಿವಾಸಪ್ಪ ಬಿನ್ ಲೇಟ್ ಹುಚ್ಚಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.329/2021 ಕಲಂ. 15(ಎ) ಕೆ.ಇ ಆಕ್ಟ್:-

   ದಿನಾಂಕ: 26/07/2021 ರಂದು ಸಂಜೆ 5.30 ಗಂಟೆಗೆ ಠಾಣೆಯ ಶ್ರೀ.ವಿಜಯಕುಮಾರ್, ಸಿ.ಹೆಚ್.ಸಿ-167 ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 26/07/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು ಹಾಗೂ ಸಿ.ಪಿ.ಸಿ-516 ವಿಶ್ವನಾಥ ರವರು ಠಾಣಾ ಸರಹದ್ದಿನ ಕೈವಾರ, ಮುತುಕದಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 4-00 ಗಂಟೆಯ ಸಮಯದಲ್ಲಿ ಹಿರೇಕಟ್ಟಿಗೇನಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಕೃಷ್ಣಪ್ಪ ಬಿನ್ ಮುನಿಯಪ್ಪ ರವರು ಅವರ ಮನೆಯ ಮುಂಬಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಹಿರೇಕಟ್ಟಿಗೇನಹಳ್ಳಿ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ ನೋಡಲಾಗಿ 1)90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, 2)90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು, 3)ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4)ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಓಪನ್ ಆಗಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಕೃಷ್ಣಪ್ಪ ಬಿನ್ ಮುನಿಯಪ್ಪ, 55 ವರ್ಷ, ಗೊಲ್ಲ ಜನಾಂಗ, ಕೂಲಿ ಕೆಲಸ, ಹಿರೇಕಟ್ಟಿಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ- 8762661167 ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3.45 ರಿಂದ ಸಂಜೆ 4.30 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಕೃಷ್ಣಪ್ಪ ಬಿನ್ ಮುನಿಯಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.331/2021 ಕಲಂ. 341,323,504,506,34 ಐ.ಪಿ.ಸಿ:-

    ದಿನಾಂಕ: 27/07/2021 ರಂದು ಬೆಳಿಗ್ಗೆ 11.30 ಗಂಟೆಗೆ ಮಂಜುನಾಥ ಬಿನ್ ಶಿವಣ್ಣ, 35 ವರ್ಷ, ಕುರುಬರು, ಪೆಸ್ಟ್ ಕಂಟ್ರೊಲ್ ಕೆಲಸ, ಚನ್ನಕೇಶವಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಕೋಲಾರ ನಗರದ ಟಮಕ ಬಳಿ ಇರುವ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಪೆಸ್ಟ್ ಕಂಟ್ರೋಲ್ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತಾವುಗಳು ತಮ್ಮ ತಂದೆ ತಾಯಿಯವರಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು, ಒಟ್ಟು ಮೂರು ಜನ ಮಕ್ಕಳಿರುತ್ತೇವೆ. ತಮ್ಮ ಮೂರು ಜನಕ್ಕೆ ಮದುವೆಗಳಾಗಿದ್ದು, ತಾನು ಮತ್ತು ತನ್ನ ಅಣ್ಣ ರವಿಕುಮಾರ್ ರವರು ಬೇರೆ ಬೇರೆಯಾಗಿ ವಾಸವಾಗಿರುತ್ತೇವೆ. ತಮ್ಮ ತಂದೆ ಹಾಗೂ ತಾಯಿಯವರು ತನ್ನ ಜೊತೆಯಲ್ಲಿಯೇ ವಾಸವಾಗಿರುತ್ತಾರೆ. ತಾನು ಬೆಂಗಳೂರು ನಗರದ ಈಜಿಪುರದ ವಾಸಿ ಕ್ರಿಶ್ಚಿಯನ್ ಜನಾಂಗದ ಹೊನ್ನಪ್ಪ ರವರ ಮಗಳಾದ ಕವಿತಾ ರವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿರುತ್ತೇನೆ. ತಾನು ಕ್ರಿಶ್ಚಿಯನ್ ಜನಾಂಗದ ಕವಿತಾ ರವರನ್ನು ಮದುವೆಯಾಗಿರುವ ಕಾರಣ ತನ್ನ ಅಣ್ಣ ರವಿಕುಮಾರ್ ರವರು ಅಗಾಗ್ಗೆ ತನ್ನ ಮೇಲೆ ಹಾಗೂ ತನ್ನ ಪತ್ನಿಯ ಮೇಲೆ ಗಲಾಟೆ ಮಾಡುತ್ತಿರುತ್ತಾರೆ. ಹೀಗಿರುವಾಗ ತನ್ನ ಅಣ್ಣನಾದ ರವಿಕುಮಾರ್ ರವರು ತನ್ನ ಸ್ನೆಹಿತನೊಂದಿಗೆ ಪೋನ್ ಮುಖಾಂತರ ತನ್ನ ಪತ್ನಿಯಾದ ಕವಿತಾ ರವರ ಬಗ್ಗೆ ಕೆಟ್ಟದಾಗಿ ಮಾತನಾಡಿರುತ್ತಾನೆ. ತಾನು ದಿನಾಂಕ: 10/07/2021 ರಂದು ಸಂಜೆ 7.00 ಗಂಟೆ ಸಮಯದಲ್ಲಿ ತಾನು ತಮ್ಮ ತೋಟದಿಂದ ತಮ್ಮ ಮನೆಗೆ ವಾಪಸ್ಸು ಬರುತ್ತಿದ್ದಾಗ ತಮ್ಮ ಅಣ್ಣ ರವಿಕುಮಾರ್ ಬಿನ್ ಶಿವಣ್ಣ ಮತ್ತು ಅವರ ಹೆಂಡತಿ ಸುನಂದಮ್ಮ ರವರು ತನ್ನನ್ನು ರಸ್ತೆಯಲ್ಲಿ ಅಡ್ಡಗಟ್ಟಿ, ಆ ಪೈಕಿ ತನ್ನ ಅಣ್ಣ ತನ್ನನ್ನು ಕುರಿತು ನೀನು ಲೋಪರ್ ನನ್ನ ಮಗ, ನೀನು ನಮ್ಮ ಮಾತು ಕೇಳದೆ ಮದುವೆ ಮಾಡಿಕೊಂಡಿದ್ದಿಯಾ ಎಂದು ಅವಾಶ್ಚ ಶಬ್ದಗಳಿಂದ ಬೈದಿದ್ದು ಆಗ ತಾನು ನನ್ನ ಮದುವೆ ನನ್ನ ಇಷ್ಟ ನೀನು ಯಾಕೆ ವಿನಾಕಾರಣ ಬೈಯುತ್ತಿಯಾ ಎಂದು ಕೇಳಿದ್ದಕ್ಕೆ ರವಿಕುಮಾರ್ ರವರು ಏನೋ ಬೋಳಿ ಮಗನೇ ನನಗೆ ಎದರು ಮಾತನಾಡುತ್ತಿಯಾ ಎಂದು ಕೈ ಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡದರು. ಸುನಂದಮ್ಮ ರವರು ನೀನು ನಮ್ಮ ಮನೆ ಮರ್ಯಾದೆ ಕಳೆದುಹಾಕಿದ್ದಿಯಾ ಲೋಪರ್ ನನ್ನ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈ ಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದಳು. ಅಷ್ಟರಲ್ಲಿ ತಮ್ಮ ಗ್ರಾಮದ ವಾಸಿಗಳಾದ ಮಹದೇವ ಬಿನ್ ಹನುಮಂತಪ್ಪ ಮತ್ತು ಬಾಬು ಬಿನ್ ರಂಗಪ್ಪ ರವರು ಅಡ್ಡಬಂದು ಜಗಳ ಬಿಡಿಸಿದರು. ನಂತರ ರವಿ ಮತ್ತು ಸುನಂದಮ್ಮ ರವರು ತನ್ನನ್ನು ಕುರಿತು ಈ ದಿನ ಉಳಿದುಕೊಂಡಿದ್ದಿಯಾ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದರು. ಸದರಿ ಗಲಾಟೆ ಬಗ್ಗೆ ತಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡೋಣವೆಂದು ಹೇಳಿದ್ದು ಇದುವರೆಗೂ ನ್ಯಾಯ ಪಂಚಾಯ್ತಿ ಮಾಡದ ಕಾರಣ ನಾನು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ತನ್ನ ಮೇಲೆ ಗಲಾಟೆ ಮಾಡಿದ ಮೇಲ್ಕಂಡ ತನ್ನ ಅಣ್ಣ ರವಿಕುಮಾರ್ ಮತ್ತು ಅವರ ಹೆಂಡತಿ ಸುನಂದಮ್ಮ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೊರಿರುವುದಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.332/2021 ಕಲಂ. 323,324,504,506 ಐ.ಪಿ.ಸಿ:-

     ದಿನಾಂಕ: 27/07/2021 ರಂದು ಮದ್ಯಾಹ್ನ 12.15 ಗಂಟೆಗೆ ರಾಮಸ್ವಾಮಿ ಬಿನ್ ಲೇಟ್ ಕೋದಂಡಪ್ಪ, 62ವರ್ಷ, ಬಜಂತ್ರಿ ಜನಾಂಗ, ಜಿರಾಯ್ತಿ, ಮಲ್ಲಿಕಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ತಮ್ಮ ಗ್ರಾಮದ ಸರ್ವೇ ನಂ 31/3 ರಲ್ಲಿ 3 ಎಕರೆ ಜಮೀನು ಇರುತ್ತದೆ, ಈ ಜಮೀನನ್ನು ತನ್ನ ಮಗನಾದ ಲೋಕೇಶ್ ರವರು ತನ್ನ ಹೆಸರಿಗೆ ಮಾಡಿಕೊಡುವಂತೆ ಆಗ್ಗಾಗ್ಗೆ ವಿನಾಕಾರಣ ತನ್ನ ಮೇಲೆ ಗಲಾಟೆ ಮಾಡುತ್ತಿರುತ್ತೇನೆ. ಈ ವಿಚಾರವಾಗಿ ತಮ್ಮ ಗ್ರಾಮದ ಹಿರಿಯರು ಹಲವಾರು ಬಾರಿ ರಾಜಿ ಪಂಚಾಯ್ತಿ ಮಾಡಿರುತ್ತಾರೆ. ಹೀಗಿರುವಾಗ ದಿನಾಂಕ: 26/07/2021 ರಂದು ರಾತ್ರಿ 8.45 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಮುಂದೆ ಕುಳಿತ್ತಿದ್ದಾಗ ತನ್ನ ಮಗನಾದ ಲೋಕೇಶ್ ರವರು ತನ್ನ ಬಳಿ ಬಂದು  ತನ್ನನ್ನು ಕುರಿತು ಲೇ ಲೋಫರ್ ನನ್ನ ಮಗನೇ ನಿನಗೆ ಎಷ್ಟು ಸಹ ಹೇಳಬೇಕು ಜಮೀನು ನನ್ನ ಹೆಸರಿಗೆ ಮಾಡಿಕೊಡು ಎಂತ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ತನ್ನ ಮೈ ಕೈ ಮೇಲೆ ಹೊಡೆದು ನಂತರ ಅಲ್ಲಿಯೇ ಬಿದ್ದಿದ್ದ ದೊಣ್ಣೆಯನ್ನು ತೆಗೆದುಕೊಂಡು ತನ್ನ ತಲೆಯ ಹಿಂದೆ ಹೊಡೆದು ರಕ್ತಗಾಯವನ್ನುಂಟು ಮಾಡಿದನು. ಅಷ್ಡರಲ್ಲಿ ತನ್ನ ಹೆಂಡತಿ ಲಕ್ಷ್ಮೀದೇವಮ್ಮ ಮತ್ತು ತಮ್ಮ ಗ್ರಾಮದ ನಾರಾಯಣಸ್ವಾಮಿ ಮತ್ತು ಇತರರು ಅಡ್ಡ ಬಂದು ಗಲಾಟೆಯನ್ನು ಬಿಡಿಸಿದರು. ನಂತರ ತನ್ನ ಮಗನು ಸ್ಥಳದಿಂದ ಹೋಗುವಾಗ ತನ್ನನ್ನು ಕುರಿತು ಈ ದಿನ ಉಳಿದುಕೊಂಡಿದೀಯಾ ಸದರಿ ಜಮೀನು ನನ್ನ ಹೆಸರಿಗೆ ಮಾಡದೇ ಇದ್ದರೇ ನಿನ್ನನ್ನು ಸಾಯಿಸಿ ಇಲ್ಲಿಯೇ ಊತಿಬಿಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿದರನು. ಗಾಯಗೊಂಡಿದ್ದ ತನ್ನನ್ನು ತನ್ನ ಹೆಂಡತಿ ಲಕ್ಷ್ಮೀದೇವಮ್ಮರವರು ಚಿಕಿತ್ಸೆಗಾಗಿ ಯಾವುದೋ ವಾಹನದಲ್ಲಿ ಕೈವಾರದ ಪ್ರಾಥಮಿಕ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿರುತ್ತಾರೆ. ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ರಾತ್ರಿ ಅವೇಳೆಯಾಗಿದ್ದರಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು. ತನ್ನ ಮೇಲೆ ಗಲಾಟೆ ಮಾಡಿದ ಲೋಕೇಶ್ ರವರ ವಿರುದ್ದ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

7. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.168/2021 ಕಲಂ. 15(A),32(3) ಕೆ.ಇ ಆಕ್ಟ್:-

    ದಿನಾಂಕ:25/07/2021 ರಂದು ಎ,ಎಸ್,ಐ ಗಂಗಾಧರಪ್ಪ.ಆರ್  ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:25/07/2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಪೆರೇಸಂದ್ರ ಹೊರ ಠಾಣೆಯಲ್ಲಿದ್ದಾಗ ಹೊರ ಠಾಣಾ   ಸಿಬ್ಬಂದಿ ಶ್ರೀನಿವಾಸ ಸಿ.ಪಿ.ಸಿ-272  ರವರು  ನನಗೆ ಪೋನ್ ಮಾಡಿ ಚಿಕ್ಕಬಳ್ಳಾಪುರ   ತಾಲ್ಲೂಕು ತಿಪ್ಪರೆಡ್ಡಿನಾಗೇನಹಳ್ಳಿ ಗ್ರಾಮದಲ್ಲಿ   ಗಸ್ತುನಲ್ಲಿರುವಾಗ ನಾರಾಯಣಸ್ವಾಮಿ   ರವರ ಮನೆಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ದ್ವಿಚಕ್ರವಾಹನದಲ್ಲಿ ಬೆಳಿಗ್ಗೆ 10-30 ಗಂಟೆ ಸಮಯಕ್ಕೆ ತಿಪ್ಪರೆಡ್ಡಿನಾಗೇನಹಳ್ಳಿ   ಗ್ರಾಮಕ್ಕೆ ಹೋಗಿ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ ನಾರಾಯಣಸ್ವಾಮಿ   ರವರ ಮನೆಯ ಮುಂಭಾಗದ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಬೆಳಿಗ್ಗೆ 10-45 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯೂ ಸಹಾ ಓಡಿ ಹೋಗಿದ್ದು ಸದರಿ ಆಸಾಮಿಯ  ಹೆಸರು & ವಿಳಾಸ ಕೆಳಿ ತಿಳಿಯಲಾಗಿ ನಾರಾಯಣಸ್ವಾಮಿ ಬಿನ್ ಲೇಟ್ ಮುನಿಸ್ವಾಮಿ, 61 ವರ್ಷ, ಕೊರಚರು, ಕೂಲಿ ಕೆಲಸ, ತಿಪ್ಪರೆಡ್ಡಿನಾಗೇನಹಳಿ ಗ್ರಾಮ, ಚಿಕ್ಕಬಳ್ಳಾಪುರ  ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 12 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 80 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*12=421.44/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 11-00 ಗಂಟೆಯಿಂದ 12-00   ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ ಮದ್ಯಾಹ್ನ 12-30  ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ 1-00  ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ  ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.245/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 26/07/2021 ರಂದು ಸಂಜೆ 6-15 ಗಂಟೆಯಲ್ಲಿ ಪಿ.ಸಿ-543 ಶ್ರೀ ಸುಧಾಕರ್ ರವರು ಮಾಲನ್ನು ಠಾಣೆಯಲ್ಲಿ ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 26/07/2021 ರಂದು ಪಿಸಿ 543 ಸುಧಾಕರ್ ಆದ ನನ್ನನ್ನು ಗುಪ್ತ ಮಾಹಿತಿ ಸಂಗ್ರ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಠಾಣಾ ಸರಹದ್ದಿನ ಗ್ರಾಮಗಳಾದ ವರದನಾಯಕನಹಳ್ಳಿ ಹರಳಹಳ್ಳಿ, ಚೀಮನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ 5.30 ಗಂಟೆ ಸಮಯದಲ್ಲಿ ಹನುಮಂತಪುರ ಗ್ರಾಮದಲ್ಲಿ ಮಾಹಿತಿ ಸಂಗ್ರಹದಲ್ಲಿದ್ದಾಗ, ಬಾತ್ಮೀದಾರರಿಂದ ಹನುಮಂತಪುರ ಗ್ರಾಮದ ವಾಸಿಯಾದ ರಾಮಚಂದ್ರ ಬಿನ್ ರಾಮಕೃಷ್ಣಪ್ಪ ರವರು ಅವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ನಾನು ರಾಮಚಂದ್ರ ಬಿನ್ ರಾಮಕೃಷ್ಣಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಚಿಲ್ಲರೆ ಅಂಗಡಿಯ ಮುಂಭಾಗ ಯಾರೋ ಮೂರು ಜನ ಆಸಾಮಿಗಳು ಮದ್ಯವನ್ನು ಸೇವನೆ ಮಾಡುತ್ತಾ ಕುಳಿತಿದ್ದು, ಒಬ್ಬ ಅಸಾಮಿ ತನ್ನ ಬಳಿ ಇದ್ದ ಒಂದು ಕಪ್ಪು ಬಣ್ಣದ ಕವರ್ ನಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯದ ಪಾಕೇಟ್ ಗಳನ್ನು ಮಾರಾಟ ಮಾಡುತ್ತಾ ಕುಡಿಯಲು ಅನುವು ಮಾಡಿಕೊಟ್ಟಿರುವುದು ಖಚಿತವಾದ ಮೇಲೆ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಮತ್ತು ಮದ್ಯದ ಪಾಕೆಟ್ ಗಳನ್ನು ಹಿಡಿದುಕೊಂಡಿದ್ದ ವ್ಯಕ್ತಿ ಸಮವಸ್ತ್ರದಲ್ಲಿದ್ದ ನನ್ನನ್ನು ಕಂಡು ಮದ್ಯದ ಪಾಕೆಟ್ ಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ. ಮದ್ಯದ ಪಾಕೆಟ್ ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ತಿಳಿಯಲಾಗಿ, ರಾಮಚಂದ್ರ ಬಿನ್ ರಾಮಕೃಷ್ಣಪ್ಪ, 48 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಹನುಮಂತಪುರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. ಎಂದು ತಿಳಿಯಿತು. ಆಸಾಮಿ ಸ್ಥಳದಲ್ಲಿ ಬಿಟ್ಟು ಹೋದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ನಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಪರಿಶೀಲಿಸಲಾಗಿ, 90 ಎಮ್.ಎಲ್ ನ ORIGINAL CHOICE DELUXE WHISKY ಯ 7 ಟೆಟ್ರ ಪಾಕೆಟ್ ಗಳಿದ್ದು, ಪ್ರತಿ ಟೆಟ್ರಾ ಪಾಕೆಟ್ ನ ಬೆಲೆ 35.13 ಎಂದು ಇದ್ದು, ಇವುಗಳ ಒಟ್ಟು ಬೆಲೆ 245.91 ರೂಗಳಾಗಿರುತ್ತೆ. ಸ್ಥಳದಲ್ಲಿ 3 ಪ್ಲಾಸ್ಟಿಕ್ ಗ್ಲಾಸುಗಳು, 2 ಖಾಲಿ ನೀರಿನ ಪಾಕೇಟುಗಳು ಹಾಗು 90 ಎಂ.ಎಲ್ ನ ORIGINAL CHOICE DELUXE WHISKY ಯ 4 ಖಾಲಿ ಟೆಟ್ರಾ ಪಾಕೇಟ್ ಗಳಿದ್ದು, ಮೇಲ್ಕಂಡ ರಾಮಚಂದ್ರ ಬಿನ್ ರಾಮಕೃಷ್ಣಪ್ಪ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಮಾಲನ್ನು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿ ಹಾಜರುಪಡಿಸಿದ್ದು, ಪರಾರಿಯಾದ ರಾಮಚಂದ್ರ ಬಿನ್ ರಾಮಕೃಷ್ಣಪ್ಪ ರವರ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 27-07-2021 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080