ಅಭಿಪ್ರಾಯ / ಸಲಹೆಗಳು

1. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ. 118/2021 ಕಲಂ. 323,324,504,506 ಐಪಿಸಿ :-

     ದಿನಾಂಕ: 26/06/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ ವೇಣು ಎನ್ ಬಿನ್ ನಾರಾಯಣಪ್ಪ 51 ವರ್ಷ,ವಕ್ಕಲಿಗ, ವ್ಯವಸಾಯ,  ಎನ್ ಎನ್ ಟಿ ರಸ್ತೆ,ಅಬ್ಬಗುಂಡು,  ಚಿಂತಾಮಣಿ ನಗರ ರವರು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ನಾನು ವ್ಯವಸಾಯ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು ಎನ್ ಎನ್ ಟಿ ರಸ್ತೆಯಲ್ಲಿರುವ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ವಾಹನಗಳು ಸಾರ್ವಜನಿಕರು ಓಡಾಡಲು ತೊಂದರೆ ಯಾಗುವಂತೆ ನಮ್ಮ ಏರಿಯಾದ ವಾಸಿ ಬೇಸ್ಕಾಂ ನಲ್ಲಿ ಕೆಲಸ ಮಾಡುವ ಧನಂಜಯಚಾರಿ ಬಿನ್ ಬಾಲಕೃಷ್ಣಚಾರಿ ರವರು ಬೆಸ್ಕಾಂ ಓಮಿನಿ ವಾಹನವನ್ನು ನಿಲ್ಲಿಸುತ್ತಿದ್ದರು ನಾವು ಏಷ್ಟು ಬಾರಿ ವಾಹನವನ್ನು ಬೇರೆ ಕಡೆ ನಿಲ್ಲಿಸಲು ಹೇಳಿದರು ಸಹ ಕೇಳುತ್ತಿರಲಿಲ್ಲ ಈ ದಿನ ದಿನಾಂಕ: 26/06/2021 ರಂದು ರಾತ್ರಿ 9:30 ಗಂಟೆ ಸಮಯದಲ್ಲಿ ಧನಂಜಯ ಚಾರಿ ರವರು ಎಂದಿನಂತೆ ತನ್ನ ಮೇಲ್ಕಂಡ ಬೆಸ್ಕಾಂ ವಾಹನವನ್ನು ದಾರಿಯಲ್ಲಿ ಓಡಾಡುವವರಿಗೆ ತೊಂದರೆಯಾಗುವಂತೆ ನಿಲ್ಲಿಸಿದ್ದು ನಾನು ಯಾಕಯ್ಯ ದಿನಾ ನಿನಗೆ ಹೇಳಿದರೂ ಬುದ್ದಿ ಇಲ್ಲದೆ ಗಾಡಿಯನ್ನು ನಿಲ್ಲಿಸುತ್ತಿಯಾ ಎಂದು ಕೇಳಿದಕ್ಕೆ ಅಯ್ಯೈ ಬೇವರ್ಸಿ ನನ್ನ ಮಗನೆ ನಿನ್ಯಾರೋ ಕೇಳೋದಿಕ್ಕೆ ಎಂದು  ನನ್ನನ್ನು ಕೆಟ್ಟ ಮಾತುಗಳಿಂದ ನಿಂದಿಸಿ ಕೈಗಳಿಂದ ನನ್ನ ಬೆನ್ನಿಗೆ ಜೋರಾಗಿ ಗುದ್ದಿದ ನಂತರ ತನ್ನ ವಾಹನದಲ್ಲಿದ್ದ ರಾಡಿನಿಂದ ನನ್ನ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಮಾಡಿ ಅದೇ ರಾಡಿನಿಂದ ನನ್ನ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಮಾಡಿ ಅದೇ ರಾಡಿನಿಂದ ಬಲಗೈ ಮುಂಗೈಗೆ ಬಲ ಕಾಲಿನ ಮಂಡಿಗೆ ಎಡ ಕಿವಿಯ ಹಿಂಭಾಗ ಹೊಡೆದು ಊತಗಾಯ ಮಾಡಿರುತ್ತಾನೆ ನಾನು ಕೆಳಗೆ ಬಿದ್ದು ಹೋದಾಗ ಕಾಲುಗಳಿಂದ ನನ್ನ ಎರಡೂ ಕಾಲುಗಳಿಗೆ ಒದ್ದು ಇನ್ನು ಮುಂದೆ ಈ ವಿಚಾರ ಕೇಳಿದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ ಅಷ್ಟರಲ್ಲಿ ನಮ್ಮ ಏರಿಯಾದ ವಾಸಿಗಳಾದ ಜಿ ಚಂದ್ರಶೇಖರ್, ಸಂತೋಷ್ರವರು ಜಗಳವನ್ನು ಬಿಡಿಸಿರುತ್ತಾರೆ ಅವನು ಅಲ್ಲಿಂದ ಹೊರಟು ಹೋಗಿರುತ್ತಾನೆ ನನಗೆ ತಲೆಗೆ ಗಾಯವಾಗಿದ್ದರಿಂದ ಮೇಲ್ಕಂಡ ಚಂದ್ರ ಶೇಖರ್ ರವರು ನನ್ನನ್ನು ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ ಮೇಲ್ಕಂಡ ಧನಂಜಯ ರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ

 

2. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ. 55/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:26-06-21 ರಂದು ಸಂಜೆ 6-15 ಗಂಟೆಗೆ PSI ರವರು ಆರೋಪಿ, ಮಾಲು & ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂ ದರೆ, ದಿನಾಂಕ:26-05-21 ರಂದು ಸಂಜೆ  CPC-148 & AHC-21 ರವರೊಂದಿಗೆ KA-40-G-59 ರಲ್ಲಿ ಗಸ್ತಿನಲ್ಲಿದ್ದಾಗ ಬಂದ ಮಾಹಿತಿ ಮೇರೆಗೆ  ಪಂಚಾಯ್ತಿ ದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಜೀಪನ್ನು ನಿಲ್ಲಿಸುತ್ತಿದ್ದಂತೆ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಅಂಗಡಿಯ ಮಾಲೀಕರ ಹೆಸರು & ವಿಳಾಸ ಕೇಳಲಾಗಿ ನಾರಾಯಣರೆಡ್ಡಿ ಬಿನ್ ಸೀತಪ್ಪ, 45 ವರ್ಷ, ಒಕ್ಕಲಿಗರು, ವ್ಯಾಪಾರ, ಕೊತ್ತಪಲ್ಲಿ ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90ML ನ Haywards Cheers Whisky 16 Tetra Pockets ಇದ್ದು, (1 Litre 440 ML  ಅದರ ಬೆಲೆ 562/-Rs), 1 Litre ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90ML ನ Haywards Cheers Whisky 1 Emty Tetra Pocket ಇದ್ದು, ಸದರಿ ಆಸಾಮಿ ನಾರಾಯಣರೆಡ್ಡಿ ರವರನ್ನು ಮದ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಿಗೆ ಪಡೆದಿರುವ ಬಗ್ಗೆ ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿದ್ದು, ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಸಂಜೆ 4-00 ಗಂಟೆಯಿಂದ 4-45 ವರೆಗೆ ಅಮಾನತ್ತುಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

3. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ. 72/2021 ಕಲಂ. 96(B) ಕೆ.ಪಿ. ಆಕ್ಟ್‌ :-

     ಶಿಡ್ಲಘಟ್ಟ ಘನ ಹಿರಿಯ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ. ಪದ್ಮಾವತಮ್ಮ ಪಿ.ಎಸ್.ಐ (ಅಪರಾದ ವಿಭಾಗ) ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ದಿನಾಂಕ:26.06.2021 ರಂದು ಸಂಜೆ 6.20 ಗಂಟೆಗೆ ಸಂಜೆ ಗಸ್ತಿನ ಬಗ್ಗೆ ಪಿಸಿ 308 ಚಂದಪ್ಪ ಯಲಿಗಾರ ರವರೊಂದಿಗೆ ಪೊಲೀಸ್ ವಾಹನ ಸಂಖ್ಯೆ- KA.40.G.141 ರಲ್ಲಿ ಠಾಣೆಯಿಂದ ಹೊರಟು ಶಿಡ್ಲಘಟ್ಟ ನಗರದ ಕದರಿಪಾಳ್ಯ, ಮಯೂರ ಸರ್ಕಲ್, ಬಸ್ ನಿಲ್ದಾಣ, ಕೆ.ಕೆ.ಪೇಟೆ, ರಾಜೀವ್ ಗಾಂದಿ ಲೇ ಔಟ್, 1ನೇ ಕಾರ್ಮಿಕ ನಗರದ ಕಡೆಗಳಲ್ಲಿ ಗಸ್ತು ಮಾಡಿಕೊಂಡು ರಾತ್ರಿ ಸುಮಾರು 07-10 ಗಂಟೆ ಸಮಯದಲ್ಲಿ ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆಯ ಬಾಷು ಬಾಬಾ ದರ್ಗಾ ಬಳಿ ಗಸ್ತು ಮಾಡುತ್ತಿದ್ದಾಗ ಯಾರೋ ಒಬ್ಬ ಆಸಾಮಿ ಬಾಷು ಬಾಬಾ ದರ್ಗಾ ಬಳಿ ಇರುವ ರಸ್ತೆಯ ಮೆಕಾನಿಕ್ ಅಂಗಡಿ ಬಳಿ ಕುಳಿತಿದ್ದು ಪೊಲೀಸ್ ವಾಹನವನ್ನು ಕಂಡು ಕತ್ತಲಲ್ಲಿ ಮುಖ ಮರೆಮಾಚಿಕೊಂಡು ಯಾವುದೋ ಕೃತ್ಯ ವೆಸಗಲು ಹೊಂಚು ಹಾಕುತ್ತಿದ್ದವನು ನಮ್ಮಗಳನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದವನನ್ನು ಪಿ.ಸಿ.308 ರವರು ಹಿಂಬಾಲಿಸಿ ಹಿಡಿದುಕೊಂಡು ಬಂದಿದ್ದು, ವಿಚಾರ ಮಾಡಲಾಗಿ ಗಾಬರಿಯಿಂದ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ ನವಾಜ್ ಅಹಮದ್ @ ವೀಲರ್ ಷರೀಪ್ ಬಿನ್ ನಸೀರ್ ಅಹಮದ್, 24 ವರ್ಷ, ಮುಸ್ಲೀಂರು, ಚಿಕ್ಕನ್ ಅಂಗಡಿಯಲ್ಲಿ ಕೆಲಸ, ವಾಸ-ದೊಡ್ಡ ಖಾಜಿ ಬೀದಿ,  ಶಿಡ್ಲಘಟ್ಟ ನಗರ ಎಂತ ತಿಳಿಸಿದ್ದು. ಆತನ ಬಳಿ ತಪಾಸಣೆ ಮಾಡಿದಾಗ ಸ್ಕ್ರೂ ಡೈವರ್ ಇಟ್ಟುಕೊಂಡಿದ್ದು, ಆತನ ಅವೇಳೆ ಇರುವಿಕೆಯ ಬಗ್ಗೆ ಹಾಗೂ ಸ್ಕ್ರೂ ಡೈವರ್ ಇರುವಿಕೆಯ ಬಗ್ಗೆ ಕೇಳಲಾಗಿ ಸಮಂಜಸವಾದ ಉತ್ತರ ನೀಡದೆ ಇದ್ದು, ಸದರಿ ಆಸಾಮಿ ಯಾವುದೋ ಸಂಜ್ಞೆಯ ಅಪರಾದ ಮಾಡಲು ಹೊಂಚು ಹಾಕುತ್ತಿದ್ದನೆಂಬ ಅನುಮಾನದ ಮೇರೆಗೆ ಸದರಿ ಆಸಾಮಿಯನ್ನು ವಶಕ್ಕೆ ಪಡೆದು ನಂತರ ಸ್ಥಳಕ್ಕೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಆರೋಪಿ ವಶದಲ್ಲಿರುವ ಸ್ಕ್ರೂ ಡೈವರ್ ಅನ್ನು ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ರಾತ್ರಿ 08-00 ಗಂಟೆಗೆ ಠಾಣೆಗೆ ಕರೆತಂದು ಮುಂದಿನ ಕ್ರಮದ ಬಗ್ಗೆ ಠಾಣಾ ಮೊ.ಸಂ.72/2021 ಕಲಂ.96(ಬಿ) ಕೆ.ಪಿ.ಆಕ್ಟ್ ರೀತ್ಯಾ ಸ್ವತಃ ಪ್ರಕರಣ ದಾಖಲಿಸಿರುತ್ತೇನೆ.

 

4. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ. 73/2021 ಕಲಂ. ಮನುಷ್ಯ ಕಾಣೆ :-

     ದಿನಾಂಕ: 27/06/2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರು ನೀಡಿದ ದೂರೇನೆಂದರೆ,  ತನಗೆ ಅಬೂಬಕರ್ ರವರೊಂದಿಗೆ ಮದುವೆಯಾಗಿ 7 ವರ್ಷಗಳಾಗಿದ್ದು, ಮದುವೆಯಾದಗಿನಿಂದಲೂ ಅನ್ಯೋನ್ಯವಾಗಿದ್ದು, ತಮಗೆ 1 ಗಂಡು, 1 ಜನ ಹೆಣ್ಣು ಮಕ್ಕಳಿದ್ದು, ತಾನು ಮತ್ತು ತನ್ನ ಗಂಡ ರೇಷ್ಮೆ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು,  ಈಗಿರುವಲ್ಲಿ ದಿನಾಂಕ: 23/06/2021  ರಂದು ತನ್ನ ಗಂಡ ಸ್ನೇಹಿತನ ಮನೆ ಬಳಿ ಹೋಗಿ ಬರುತ್ತೇನೆ ಎಂದು ರಾತ್ರಿ ಸುಮಾರು 9-00 ಗಂಟೆಯಲ್ಲಿ ತನಗೆ ಹೇಳಿ ಮನೆಯಿಂದ ಹೋದವನು ರಾತ್ರಿ 11-00 ಗಂಟೆಯಾದರು ಮನೆಗೆ ಬಾರದ ಕಾರಣ ತನ್ನ ಗಂಡನ ಮೊಬೈಲ್ ಫೋನ್ ನಂ: 78297862163 ಗೆ ಕರೆ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿರುತ್ತೆ. ನಂತರ ತನ್ನ ಗಂಡನ ಸ್ನೇಹಿತರೂ ಹಾಗೂ ಸಂಬಂಧಿಕರನ್ನು ವಿಚಾರಿಸಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಆದ್ದರಿಂದ ಕಾಣೆಯಾದ ತನ್ನ ಗಂಡನನನ್ನು ಪತ್ತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ಈ ದಿನ ತಡವಾಗಿ ದೂರನ್ನು ನೀಡಿದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 27-06-2021 05:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080