ಅಭಿಪ್ರಾಯ / ಸಲಹೆಗಳು

 

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ .247/2021 ಕಲಂ. 341,323,324,427,504,506 ರೆ/ವಿ 34 ಐಪಿಸಿ :-

     ದಿನಾಂಕ 26-05-2021 ರಂದು ಸಂಜೆ 5-00 ಗಂಟೆಗೆ ಅರುಣ್ ಕುಮಾರ್ ಎಂ ಬಿನ್ ಮುನಿರಾಜು, 39 ವರ್ಷ, ಚಾಲಕ ವೃತ್ತಿ, ಆದಿ ಕರ್ನಾಟಕ, ಚಿಕ್ಕಕೋಲಿಗ ಗ್ರಾಮ, ಹೊಸಕೋಟೆ ತಾಲ್ಲೂಕು ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಚಾಲಕ ವೃತ್ತಿ ಮಾಡಿ ಕೊಂಡಿರುತ್ತೇನೆ. ಹೀಗಿ-ರುವಾಗ ತನ್ನ ಹೆಂಡತಿಯ ತಮ್ಮನಾದ ಪ್ರಕಾಶ್ ಬಿನ್ ಶ್ರೀನಿವಾಸ್, ಆಲಂಬಗಿರಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಬೂದಿಗೆರೆ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿರುವ ಆಟೋಲಿವ್ ಕಂಪನಿಯ ಎಸ್.ಆರ್.ಎಸ್ ಬಸ್ ನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ಸದರಿ ಪ್ರಕಾಶ್ ರವರು ಆತನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಎಸ್.ಆರ್.ಎಸ್ ಬಸ್ ಕಂಪನಿಯ ಅನುಮತಿ ಪಡೆದುಕೊಂಡು ದಿನಾಂಕ 22-05-2021 ರಂದು ತನಗೆ ಒಂದು ದಿನ ಪ್ರಕಾಶ್ ಚಾಲನೆ ಮಾಡುತ್ತಿದ್ದ ಕೆ42 ಎ737 ನೊಂದಣಿ ಸಂಖ್ಯೆಯ ಎಸ್.ಆರ್.ಎಸ್ ಬಸ್ ಗೆ ಚಾಲಕನಾಗಿ ಕೆಲಸ ಮಾಡುವಂತೆ ಕೇಳಿ ಕೊಂಡಿದ್ದು ಅದರಂತೆ ತಾನು ಕೆಎ42 ಎ737 ನೊಂದಣಿ ಸಂಖ್ಯೆಯ ಎಸ್.ಆರ್.ಎಸ್ ಬಸ್ ಅನ್ನು ದಿನಾಂಕ 22-05-2021 ರಂದು ಬೂದಿಗೆರೆಯಿಂದ ಚಿಂತಾಮಣಿಗೆ ಆಟೋಲಿವ್ ಕಂಪನಿಯ ಕಾರ್ಮಿಕರನ್ನು ಕರೆದುಕೊಂಡು ಬರುವ ಸಲುವಾಗಿ ಅದೇ ದಿನ ರಾತ್ರಿ 11-20 ಗಂಟೆ ಸಮಯದಲ್ಲಿ ಚಿಂತಾಮಣಿ-ಬೆಂಗಳೂರು ರಸ್ತೆಯ ವೈಜಕೂರು ಗ್ರಾಮದ ಬಳಿ ತಾನು ಚಿಂತಾಮಣಿಗೆ ಬರುತ್ತಿದ್ದಾಗ  ವೈಜಕೂರು ಗೇಟ್ ಬಳಿ ಹೊಸಕೋಟೆ ತಾಲ್ಲೂಕು ಚಿಕ್ಕಕೊಂಡಹಳ್ಳಿ ಗ್ರಾಮದ ವಾಸಿ ಮಹಾತ್ಮಗಾಂದಿ ಬಿನ್ ಚಿಕ್ಕ ಪಾಪಣ್ಣ, ಸಂತೇಕಲ್ಲಹಳ್ಳಿ ಗ್ರಾಮದ ವಾಸಿ ಶಾಕೀರ್ ಮತ್ತು ಅಟ್ಟೂರು ಗ್ರಾಮದ ಸುನೀಲ್ ಎಂಬುವವರು ಕೆಎ40 ವೈ5605 ನೊಂದಣಿ ಸಂಖ್ಯೆಯ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಬಂದು ನಮ್ಮ ಬಸ್ ಅನ್ನು ಅಡ್ಡಗಟ್ಟಿ ತನಗೆ ಬಸ್ ನಿಂದ ಕೆಳಗಿಳಿಯುವಂತೆ ಹೇಳಿದ್ದು ಆಗ ತಾನು ಏಕೆ ತನ್ನ ಬಸ್ ಅನ್ನು ನೀವು ಅಡ್ಡಗಟ್ಟಿದ್ದು ಎಂದು ಕೇಳಿದ್ದು ಆಗ ಅವರು ನೀನು ತಮ್ಮ ದ್ವಿಚಕ್ರ ವಾಹನವನ್ನು ಓವರ್ ಟೇಕ್ ಮಾಡಿಕೊಂಡು ಬಂದ್ದಿದಿಯಾ ನಿನಗೆ ಎಷ್ಟು ದೈರ್ಯ ಬೋಳಿ ನನ್ನ ಮಗನೇ ಎಂದು ಅವಾಶ್ಚ ಶಬ್ದಗಳಿಂದ ಬೈದು, ಆ ಪೈಕಿ ಮಹಾತ್ಮಗಾಂದಿ ರವರು ತನ್ನನ್ನು ಬಸ್ ನಿಂದ ಕೆಳಗೆ ಎಳೆದು ಕೈ ಗಳಿಂದ ಮೈ ಮೇಲೆ ಹೊಡೆದು, ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ತನ್ನ ತುಟಿಯ ಬಳಿ ಹೊಡೆದು ರಕ್ತಗಾಯ ಪಡಿಸಿದ. ನಂತರ ಶಾಕೀರ್ ಮತ್ತು ಸುನೀಲ್ ರವರು ಸಹ ತನಗೆ ಮೈ ಕೈ ಮೇಲೆ ಹೊಡೆದು ನೋವುಂಟು ಮಾಡಿದರು. ನಂತರ ಮೇಲ್ಕಂಡ ಮೂರು ಜನರು ಅಲ್ಲಿಯೇ ರಸ್ತೆಯ ಬದಿ ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೊಂಡು ತಮ್ಮ ಬಸ್ (ಕೆಎ42 ಎ737 ನೊಂದಣಿ ಸಂಖ್ಯೆಯ ಎಸ್.ಆರ್.ಎಸ್ ಬಸ್) ಮುಂಬಾಗದ ಗ್ಲಾಸ್ ಮತ್ತು ಚಾಲಕ ಸೀಟ್ ನ ಪಕ್ಕದ ಗ್ಲಾಸ್ ಗಳನ್ನು ಹೊಡೆದು ಹಾಕಿದರು. ಅಷ್ಟರಲ್ಲಿ ಬಸ್ ನಲ್ಲಿದ್ದ ಕಾರ್ಮಿಕರಾದ ಶಂಕರ್, ವೆಂಕಟೇಶ ಮತ್ತು ಸೋಮಶೇಖರ್ ರವರು ಅವರಿಂದ ತನ್ನನ್ನು ರಕ್ಷಿಸಿದರು. ನಂತರ ಮೇಲ್ಕಂಡ ಮೂರು ಜನರು ಈ ದಿನ ಉಳಿದುಕೊಂಡಿದ್ದಿಯಾ ಇನ್ನೋಂದು ಸಾರಿ ತಮ್ಮ ತಂಟೆಗೆ ಬಂದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಹೊರಟು ಹೋದರು. ನಂತರ ತಾನು ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತೇನೆ. ಸದರಿ ಗಲಾಟೆ ಬಗ್ಗೆ ತಾನು ತಮ್ಮ ಕಂಪನಿಯ ವ್ಯವಸ್ಥಾಪಕರಿಗೆ ವಿಚಾರವನ್ನು ತಿಳಿಸಿ ಈ ದಿನ ತಡವಾಗಿ ಬಂದು ಠಾಣೆಯಲ್ಲಿ ದೂರು ನೀಡುತ್ತಿದ್ದು ಮೇಲ್ಕಂಡ ಮೂರು ಜನರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ.

 

2. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 53/2021 ಕಲಂ. 323,324,504,506 ರೆ/ವಿ 34 ಐಪಿಸಿ :-

     ದಿನಾಂಕ 26-05-2021 ರಂದು ಸಂಜೆ 05.00 ಗಂಟೆಗೆ ಪಿರ್ಯಾಧಿದಾರರಾದ ವೆಂಕಟೇಶ್  ಬಿನ್ ಲೇಟ್ ವೆಂಕಟಶಾಮಿ, 45  ವರ್ಷ, ಜಿರಾಯ್ತಿ, ಬಲಜಿಗರು, ಗೊಲ್ಲಪಲ್ಲಿ ಗಡ್ಡ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತಮ್ಮ ತಂದೆಗೆ 04 ಗಂಡು ಮಕ್ಕಳಾಗಿದ್ದು, 01 ನೇ ಗೋವಿಂದಪ್ಪ, 02 ನೇ ವೆಂಕಟರವಣಪ್ಪ, 03 ನೇ ಆದಿ ನಾರಾಯಣಸ್ವಾಮಿ, ನಾಲ್ಕನೇ ತಾನು ಆಗಿರುತ್ತೇವೆ. ಎಲ್ಲಾರೂ ಬೇರೆ ಬೇರೆ ವಾಸವಿರುತ್ತೇವೆ.  ಆದರೆ ಎಲ್ಲಾ  ಜಮೀನು 02 ನೇ ವೆಂಕಟರವಣಪ್ಪ  ರವರ ಹೆಸರಿನಲ್ಲಿ ಎಲ್ಲಾ ಆಸ್ತಿ ಇರುತ್ತದೆ.  ವೆಂಕಟರವಣಪ್ಪ ರವರು ತಮಗೆ ಭಾಗವನ್ನು ಕೊಡದೇ ಇದ್ದು ಕೇಳಿದರೆ ಕೊಡುವುದಿಲ್ಲವೆಂದು ಗಲಾಟೆ ಮಾಡುತ್ತಿರುತ್ತಾರೆ. ತಾನು ತಮ್ಮ ಹೆಂಡತಿಯ ತವರು ಮನೆ ಅದೇ ಗ್ರಾಮವಾಗಿರುವುದರಿಂದ ತಮ್ಮ ಮನೆಯಲ್ಲಿ  ಕೆಲವು ಸಾಮಾನುಗಳನ್ನು ಬೀರುವಿನಲ್ಲಿ ಮತ್ತು ಬೇರೆ ಕಡೆ ಇಟ್ಟು  ತನಗೆ ಮನೆಯಲ್ಲಿ ಭಾಗ ಇಲ್ಲದೇ ಇದ್ದುದರಿಂದ ತನ್ನ ಹೆಂಡತಿಯ ತವರು ಮನೆಯಲ್ಲಿ ವಾಸವಾಗಿದ್ದೆವು. ಈಗಿರುವಲ್ಲಿ ತಮ್ಮ ಮನೆಯಲ್ಲಿಟ್ಟಿದ್ದ ಬೀರುವುಗಳನ್ನು ಮನೆಯಿಂದ ಆಚೆಗೆ  ವೆಂಕಟರವಣಪ್ಪ ರವರ ಮನೆಯವರು ಇಟ್ಟಿದ್ದು, ದಿನಾಂಕ:25/05/2021 ರಂದು ರಾತ್ರಿ ಮಳೆ ಬಿದ್ದು ಬೀರುವಿನಲ್ಲಿಟ್ಟಿದ್ದ ಬಟ್ಟೆ ಸಾಮಾನುಗಳು ನೆನೆದು ಹೋಗಿದ್ದರಿಂದ ದಿನಾಂಕ:26/05/2021 ರಂದು ಬೆಳಿಗ್ಗೆ ಸುಮಾರು 11-00 ಗಂಟೆಯ ಸಮಯದಲ್ಲಿ ತಾನು, ತನ್ನ ಹೆಂಡತಿ ಸುನಿತಾಮ್ಮ, ತನ್ನ ಮಗಳಾದ ಮೌನಿಕಾ ರವರು ತಮ್ಮ ಮನೆಗೆ ಹೋಗಿ ಬೀರುವನ್ನು ಮತ್ತು ಸಾಮಾನುಗಳನ್ನು ಸರಿಪಡೆಸುತ್ತಿದ್ದಾಗ  ತಮ್ಮ ಅಣ್ಣನಾದ ವೆಂಕಟರವಣಪ್ಪ, ವೆಂಕಟರವಣಪ್ಪನ ಮಗ ಹರೀಶ, ಇನ್ನೊಬ್ಬ ಅಣ್ಣನಾದ ಆದಿನಾರಾಯಣಸ್ವಾಮಿ ರವರು ಏಕಾಏಕಿ ಗಲಾಟೆಗೆ ಬಂದು ಎಲ್ಲಾರೂ ಎರಡು ಬೀರುವುಗಳನ್ನು ತಳ್ಳಿ ಹಾಕಿ ವಸ್ತುಗಳನ್ನು ಚೆಲ್ಲಾ ಪಿಲ್ಲಿ ಮಾಡಿ ಲೋಪರ್ ನನ್ನ ಮಗನೇ ಮತ್ತೆ ಮನೆಗೆ ಬಂದಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಆ ಪೈಕಿ ಹರೀಶ ರವರು ದೊಣ್ಣೆಯಿಂದ ತನ್ನ ಮೈಮೇಲೆ ಮತ್ತು ಎಡ ಕಾಲಿಗೆ ಹೊಡೆದು ಗಾಯಪಡಿಸಿದನು. ಆಗ ತನ್ನ ಹೆಂಡತಿ ಮತ್ತು ತನ್ನ ಮಗಳು ಗಲಾಟೆ ಬಿಡಿಸಲು ಬಂದಾಗ  ಹರೀಶ, ಆದಿ ನಾರಾಯಣಸ್ವಾಮಿ ಮತ್ತು ವೆಂಕಟರವಣಪ್ಪ ರವರು ತನ್ನ ಹೆಂಡತಿಯನ್ನು ಕೆಳಕ್ಕೆ ತಳ್ಳಿದಾಗ ಕೆಳಗೆ  ಬಿದ್ದು ಸೊಂಟಕ್ಕೆ ಗಾಯವಾಗಿರುತ್ತೆ. ತನ್ನ ಮಗಳಿಗೆ ಹರೀಶರವರು ಅದೇ ದೊಣ್ಣೆಯಿಂದ ಬಲಕೈಗೆ ಹೊಡೆದು ಗಾಯಪಡೆಸಿದನು.  ನಂತರ ಮೂರು ಜನರು  ಸೇರಿ ಮತ್ತೆ ಈ ಮನೆಯ ಕಡೆಗೆ ಬಂದರೇ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದರು. ಆಗ ತಮ್ಮ ಗ್ರಾಮದ ಗಣೇಶ ಬಿನ್ ಸುಬ್ಬಣ್ಣ, ಲೋಕೇಶ ಬಿನ್ ಸುಬ್ಬಯ್ಯ ರವರು ಬಂದು ಜಗಳ ಬಿಡಿಸಿದರು. ನಂತರ ನಾವು ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಸಿಕೊಂಡಿರುತ್ತೇವೆ. ತಮ್ಮ ಮೇಲೆ ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೇ ಮಾಡಿ, ಪ್ರಾಣ ಬೆದರಿಕೆ ಹಾಕಿದ ವೆಂಕಟರವಣಪ್ಪ, ಹರೀಶ, ಆದಿನಾರಾಯಣಸ್ವಾಮಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

3. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 58/2021 ಕಲಂ. 447,448,504 ರೆ/ವಿ 34 ಐಪಿಸಿ :-

     ದಿನಾಂಕ.26.05.2021 ರಂದು ಸಂಜೆ 5.30 ಗಂಟೆಗೆ ಪಿರ್ಯಾದಿ ಹರ್ಷದ್ ಪಾಷ ಬಿನ್ ಲೇಟ್ ಅಮೀರ್ ಜಾನ್, ರಹಮತ್ ನಗರ ರವರು ಠಾಣೆಗೆ ಹಾಜರಾಗಿ ನಾವು ಇದೇ ಶಿಡ್ಲಘಟ್ಟ ರಹಮತ್ ನಗರದಲ್ಲಿ ಖಾಯಂವಾಸಿಯಾಗಿದ್ದು, 2ನೇ ಕಾರ್ಮಿಕನಗರದಲ್ಲಿರುವ ಶಿಡ್ಲಘಟ್ಟ ಗ್ರಾಮಕ್ಕೆ ಸೇರಿದ ಸ.ನಂ.37/1 ರಲ್ಲಿ 0-08 ಗುಂಟೆ, 37/2 ರಲ್ಲಿ 0-07 ಗುಂಟೆ, 37/3 ರಲ್ಲಿ 0.07 ಗುಂಟೆ, 37/4 ರಲ್ಲಿ 0.07 ಗುಂಟೆ ಹಾಗೂ 37/5 ರಲ್ಲಿ 1.00 ಎಕರೆ ಜಮೀನು ನಾನು ನಮ್ಮ ಅಣ್ಣನಾದ ನ್ಯಾಮತ್ ರವರು ದಿನಾಂಕ.11.05.1992 ರಂದು ಅದರ ಮಾಲೀಕರಾದ ಶಿಡ್ಲಘಟ್ಟ ಟೌನ್ ಎ.ಕೆ.ಕಾಲೋನಿಯಲ್ಲಿ ವಾಸವಾಗಿದ್ದ ಶ್ರೀಮತಿ. ಜಮೀಲಾಬಿ ಮತ್ತು ಇವರ ಮಗನದ ಅಬ್ದುಲ್ ರಶೀದ್ ರವರಿಂದ ಆಗಿನ ಬೆಲೆ 98,000/-ರೂಗಳಿಗೆ ಶಿಡ್ಲಘಟ್ಟ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಪರಿಶುದ್ದ ಕ್ರಯ ಮಾಡಿಕೊಂಡಿದ್ದು, ಮುಟೇಷನ್ ನಂ.9/92-93 ರಂತೆ ನಮ್ಮ ಹೆಸರಿಗೆ ಖಾತೆಯಾಗಿ ಪಹಣಿ ಸಹ ಬಂದು ಅಂದಿನಿಂದ ನಾವೇ ಅನುಭವದಲ್ಲಿರುತ್ತೇವೆ. ಹಾಗೂ ಈ ಜಮೀನಿಗಳಲ್ಲಿ 15 ಮನೆಗಳನ್ನು ಕಟ್ಟಿಕೊಂಡು ನಾವು ನಮ್ಮ ಸಂಬಂದಿಕರು ಹಾಗೂ ಕೂಲಿ ಕೆಲಸದವರು ವಾಸವಾಗಿರುತ್ತೇವೆ. ಹೀಗಿರುವಾಗ ಮೇಲ್ಕಂಡ ಜಮೀನುಗಳ ಮೇಲೆ ಶ್ರೀಮತಿ. ಜಮೀಲಾಬಿ ರವರ ಸೊಸೆಯಾದ ಶ್ರೀಮತಿ. ಪಹೀಂವುನ್ನಿಸಾ ಕೊಂ ಲೇಟ್ ಅಬ್ದುಲ್ ರಶೀದ್ ರವರು ನಮ್ಮಗಳ ವಿರುದ್ದ ಶಿಡ್ಲಘಟ್ಟ ಘನ ಸಿವಿಲ್ ನ್ಯಾಯಾಲಯದಲ್ಲಿ O.S.No.183/2008 ರಂತೆ ದಾವೆ ಹೂಡಿದ್ದು, ವಿಚಾರಣೆ ನಡೆದು ನಮ್ಮ ಪರವಾಗಿ ಅದೇಶವಾಗಿರುತ್ತೆ. ನಂತರ ಚಿಕ್ಕಬಳ್ಳಾಪುರ ಮಾನ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ R.A.No.12/2009-10 ರಂತೆ ನಮ್ಮ ವಿರುದ್ದ ಮೇಲ್ಮನವಿ ಸಲ್ಲಿಸಿಕೊಂಡಿದ್ದು, ಅಲ್ಲಿಯೂ ಸಹ ವಿಚಾರಣೆ ನಡೆದು ದಿನಾಂಕ.15.12.2010 ರಂದು ವಜಾ ಗೊಂಡಿರುತ್ತೆ. ಇದಾದ ನಂತರ ಶಿಡ್ಲಘಟ್ಟ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ R.A.No.20/2011 ರಂತೆ ಮೇಲ್ಮನವಿ ಸಲ್ಲಿಸಿಕೊಂಡಿದ್ದು ಅದೂ ಸಹ ವಿಚಾರಣೆ ನಡೆದು ದಿನಾಂಕ.17.07.2018 ರಂದು ವಜಾಗೊಂಡಿರುತ್ತೆ. ಈ ಮೇಲ್ಕಂಡ ಎಲ್ಲಾ ಸ.ನಂ. ಜಮೀನುಗಳು ನನ್ನ ಮತ್ತು ನಮ್ಮ ಅಣ್ಣ ನ್ಯಾಮತ್ ಪಾಷ ರವರ ಹೆಸರಿನಲ್ಲಿ ಜಂಟಿ ಖಾತೆ ಇರುತ್ತೆ. ಈ ಜಮೀನುಗಳ ಪೈಕಿ ಸ.ನಂ.37/5 ರ 1.00 ಎಕರೆ ಪೈಕಿ 18*20 ಅಡಿ ಜಾಗ ನನ್ನ ಹೆಂಡತಿ ಅಕ್ಕನಾದ ಶ್ರೀಮತಿ. ಹಸೀನಾ ತಾಜ್ ಕೊಂ ನಜೀರ್ ಅಹಮದ್ ರವರಿಗೆ 2 ಲಕ್ಷರೂಗಳಿಗೆ ಮಾರಾಟ ಮಾಡಿದ್ದು, ಅದರಲ್ಲಿ ಹೊಸದಾಗಿ ನಿವೇಶನ ಕಟ್ಟುತ್ತಿದ್ದು ಗೋಡೆಗಳು ಮಾತ್ರ ನಿರ್ಮಿಸಿದ್ದು ಇನ್ನೂ ಮನೆ ನಿರ್ಮಾಣ ಹಂತದಲ್ಲಿರುತ್ತೆ. ಹೀಗಿರುವಾಗ ದಿನಾಂಕ.24.05.2021 ರಂದು ಸಂಜೆ ಸುಮಾರು 4.00 ಗಂಟೆಯಲ್ಲಿ ಸಿದ್ದಾರ್ಥನಗರದ ಶ್ರೀಮತಿ ಪಹೀಂವುನ್ನಿಸಾ ಕೊಂ ಲೇಟ್ ಅಬ್ದುಲ್ ರಶೀದ್ ಅವರ ಮಕ್ಕಳಾದ ಕಲೀಂ ಹಾಗೂ ಪಾರೂಕ್ ರವರು KA.51.M.1571 ಮಾರುತಿ ಓಮನಿ ವ್ಯಾನ್ KA.02.C.9531 ಮತ್ತು KA.43.7642 ಆಟೋಗಳಲ್ಲಿ ಅವರ ಮನೆಯ ಸಾಮಾನುಗಳನ್ನು ಸಾಗಿಸಿಕೊಂಡು ಬಂದು ನಮ್ಮ ಸ್ವತ್ತಿನಲ್ಲಿ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿ ಕೆಲವು ಸಾಮಾನುಗಳನ್ನು ಇಟ್ಟಿರುತ್ತಾರೆ. ನಾನು ನಮ್ಮ ಅಣ್ಣನ ಮಗ ಇಮ್ರಾನ್ ಪಾಷ ರವರು ಅವರನ್ನು ಏಕೆ ಹಸೀನಾ ತಾಜ್ ರವರು ಕಟ್ಟುತ್ತಿರುವ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿದ್ದೀರಿ ಎಂದು ಕೇಳಿದ್ದಕ್ಕೆ ಇವರೆಲ್ಲರೂ ಈ ಜಾಗ ನಮ್ಮದು ನಾವು ಬಿಡುವುದಿಲ್ಲ ನಿಮ್ಮ ಕೈಲ್ಲಿ ಏನಾಗುತ್ತೆ ಮಾಡಿಕೊಳ್ಳಿ ಎಂದು ನಮ್ಮ ಮೇಲೆ ಗಲಾಟೆಗೆ ಬಂದು 3 ಜನ ಹೋಗೋ ನನ್ನ ಮಕ್ಕಳೇ ಇಲ್ಲಿಂದ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಆಗ ಅಕ್ಕ ಪಕ್ಕದ ಇರ್ಪಾನ್ ಬಿನ್ ಷಫೀವುಲ್ಲಾ, ಷಬ್ಬೀರ್ ಬಿನ್ ಮೌಲ, ಸಾದೀಕ್ ಪಿಲೇಚರ್ ಕ್ವಾಟ್ರಸ್ ರವರು ಬಂದು ಮೇಲ್ಕಂಡವರನ್ನು ಕರೆಸಿ ನ್ಯಾಯಾ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು, ಅದರೆ ಇವರು ಇದುವರೆಗೂ ಪಂಚಾಯ್ತಿಗೆ ಬಂದಿರುವುದಿಲ್ಲ. ಹಾಗೂ ಮನೆಯನ್ನು ಖಾಲಿ ಮಾಡಿರುವುದಿಲ್ಲ. ಮೇಲ್ಕಂಡ ಸ.ನಂ. ಜಮೀನುಗಳು ನ್ಯಾಯಾಲಯಗಳಲ್ಲಿ ನಮ್ಮ ಪರವಾಗಿ ಅದೇಶವಾಗಿದ್ದರೂ ಸಿದ್ದಾರ್ಥನಗರದ ಪಹೀಂವುನ್ನಿಸಾ ಇವರ ಮಕ್ಕಳಾದ ಕಲೀಂ ಮತ್ತು ಪಾರೂಕ್ ರವರು ದೌರ್ಜನ್ಯದಿಂದ ನಮ್ಮ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿ ಸೇರಿಕೊಂಡು ನಮ್ಮ ಮೇಲೆ ಜಗಳ ಮಾಡಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಈ ದಿನ ತಡವಾಗಿ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 27-05-2021 05:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080