ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.112/2021 ಕಲಂ. 11,32,34 ಕೆ.ಇ ಆಕ್ಟ್ :-

     ದಿನಾಂಕ: 26/04/2021 ರಂದು ರಾಜು ಸಿಪಿಐ ಬಾಗೇಪಲ್ಲಿ ವೃತ್ತ, ಬಾಗೇಪಲ್ಲಿ ರವರು  ಆರೋಪಿ, ಮಾಲು ಮತ್ತು ಅಸಲು ಪಂಚಮೆಯೊಂದಿಗೆ ಠಾಣೆಗೆ ಹಾಜರಾಗಿ  ಸೂಚಿಸಿದ ವರದಿಯ ಸಾರಾಂಶವೇನೆಂದರೆ  ಈ ದಿನ ದಿನಾಂಕ; 26-04-2021 ರಂದು ಬಾಗೇಪಲ್ಲಿ ಟೌನ್ ನಲ್ಲಿ  ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-6399 ವಾಹನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ   ಪಿಸಿ-276 ಸಾಗರ್ ಎಸ್ ವಿ,  ಹಾಗೂ ಜೀಪ್ ಚಾಲಕ ಎ.ಪಿ.ಸಿ-110 ನರಸಿಂಹಮೂರ್ತಿ ರವರೊಂದಿಗೆ ಚನ್ನರಾಯನಪಲ್ಲಿ, ಗೂಳೂರು ಮುಂತಾದ ಕಡೆ ಗಸ್ತು ಮಾಡಿಕೊಂಡು ವಾಪಸ್ಸು ಬರುತ್ತಿದ್ದಾಗ, ಮದ್ಯಾಹ್ನ ಸುಮಾರು 12:45 ಗಂಟೆಯಲ್ಲಿ ಪೊತೇಪಲ್ಲಿ  ಕ್ರಾಸ್ ಬಳಿ ಬಾಗೇಪಲ್ಲಿ-ಗೂಳೂರು ರಸ್ತೆಯಲ್ಲಿ ಬರುತ್ತಿದ್ದಾಗ,  ಕೆ.ಎ-40 ಎ-8747 ಅಪೇ ಆಟೋದಲ್ಲಿ ಯಾರೋ ಒಬ್ಬ  ಆಸಾಮಿಯು ಸರಕುಗಳ ಚೀಲಗಳನ್ನು ಹಾಕಿಕೊಂಡು ಗೂಳೂರು ಕಡೆಗೆ ಹೋಗುತ್ತಿದ್ದು, ನಾನು ಆಟೋವನ್ನು ನಿಲ್ಲಿಸಿದ್ದು, ಆಟೋದಲ್ಲಿದ್ದ ಆಸಾಮಿಯು ಪೊಲೀಸ್ ಜೀಪನ್ನು ಕಂಡು ಓಡಿಹೋಗಲು ಪ್ರಯತ್ನಿಸುತ್ತಿದವನ್ನು ಸಿಬ್ಬಂದಿಯಾದ ಸಾಗರ ಪಿ.ಸಿ 276 ರವರು ಹಿಡಿದುಕೊಂಡಿದ್ದು, ಆಟೋಚಾಲಕನನ್ನು ಕೇಳಲಾಗಿ ನಮ್ಮ ಗ್ರಾಮದ ಆಂಜನೇಯಲು ಬಿನ್ ನಂಜಪ್ಪ ರವರು ನಾನು ಬಾಗೇಪಲ್ಲಿಯಿಂದ ನಾನು ಊರಿಗೆ ಬರುತ್ತಿದ್ದಾಗ, ಬಾಗೇಪಲ್ಲಿಯಲ್ಲಿ ಚಿಲ್ಲರೆ ಅಂಗಡಿಯ ಸರಕುಗಳು ಎಂದು ನನ್ನ ಆಟೋದಲ್ಲಿ ಚೀಲಗಳನ್ನು ಹಿಂಬದಿ ಇಟ್ಟಿರುವುದಾಗಿ ತಿಳಿಸಿದನು. ಓಡಿಹೋಗಲೆತ್ನಿಸಿದ ಆಸಾಮಿಯನ್ನು ಕೇಳಲಾಗಿ ತನ್ನ ಹೆಸರು ಆಂಜನೇಯಲು ಬಿನ್ ನಂಜಪ್ಪ, 28 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ಮದಕವಾರಿಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ಎಂದು ತಿಳಿಸಿದ್ದು, ತಾನು ಆಟೋಚಾಲಕನಿಗೆ ಚಿಲ್ಲರೆ ಅಂಗಡಿಯ ಸಾಮಾನುಗಳೆಂದು ಹೇಳಿ ಚೀಲಗಳಲ್ಲಿ ಮದ್ಯವನ್ನು ಇಟ್ಟು ನಮ್ಮ ಗ್ರಾಮದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ. ಆಗ ನಾನು ಆಟೋಚಾಲಕನಿಗೆ ಹಾಗೂ ಗೂಳೂರು ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ವಿಚಾರವನ್ನು ತಿಳಿಸಿ ಪಂಚಾಯ್ತಿದಾರರಾಗಿ ಸಹಕರಿಸಲು ಕೋರಿ ಪಂಚರ ಸಮಕ್ಷಮದಲ್ಲಿ ಚೀಲಗಳನ್ನು ಪರಿಶೀಲಿಸಲಾಗಿ,  ಮೂರು  ಪ್ಲಾಸ್ಟಿಕ್ ಚೀಲಗಳಿದ್ದು, ಒಂದನೇ ಚೀಲವನ್ನು ಪರಿಶೀಲಿಸಲಾಗಿ ಇದರಲ್ಲಿ 180 ML ನ OLD TAVERN WHISKY ಮದ್ಯದ 96 ಟೆಟ್ರಾ ಪಾಕೇಟ್ ಗಳಿರುತ್ತೆ. ಎರಡನೇ ಚೀಲವನ್ನು ಪರಿಶೀಲಿಸಲಾಗಿ 650 ML ಸಾಮರ್ಥ್ಯದ KINGFISHER BEER ನ 24 ಬಾಟೆಲ್ ಗಳಿರುತ್ತೆ. ಮೂರನೇ ಚೀಲದಲ್ಲಿ 90 ML ಸಾಮಥ್ಯದ  HAYWARDS CHEERS WHISKY ಯ  288 ಟೆಟ್ರಾ ಪಾಕೇಟ್ ಗಳಿರುತ್ತೆ. ಒಟ್ಟು 58 ಲೀಟರ್ 800 ಎಂ.ಎಲ್ ಮದ್ಯವಿದ್ದು, ಇದರ ಒಟ್ಟು  ಅಂದಾಜು ಮೌಲ್ಯ 22,045/- ರೂ.ಗಳಾಗಿರುತ್ತದೆ. ಸದರಿ ಮದ್ಯವನ್ನು ಸಾಗಾಣಿಕೆ ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಪರವಾನಗಿ  ಇಲ್ಲವೆಂದು ಹೇಳಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಮಾಲನ್ನು ಮದ್ಯಾಹ್ನ 2:15 ಗಂಟೆಗೆ ಠಾಣೆಯಲ್ಲಿ  ಹಾಜರುಪಡಿಸುತ್ತಿದ್ದು, ಆಸಾಮಿಯ ವಿರುದ್ದ ಕಾನೂನು ರೀತ್ಯಾ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿರುವುದಾಗಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.60/2021 ಕಲಂ. 504,188,269,271 ಐ.ಪಿ.ಸಿ & 5(2) THE KARNATAKA EPIDEMIC DISEASES ACT 2020:-

     ದಿನಾಂಕ: 27/04/2021 ರಂದು ಮದ್ಯಾಹ್ನ 14-30 ಗಂಟೆಗೆ  ಪಿರ್ಯಾದಿದಾರರಾದ ಡಿ ಕೆ ನಾಗರಾಜಗೌಡ ಬಿನ್  ಲೇಟ್ ಡಿ ಕೆ ಕೃಷ್ಣಪ್ಪ, 53 ವರ್ಷ, ಪಂಚಾಯ್ತಿ ಅಭಿವೃದ್ದಿ ಅಧೀಕಾರಿಗಳು, ಕಡದನಮರಿ ಗ್ರಾಮ ಪಂಚಾಯ್ತಿ ಕಾರ್ಯಾಲಯ, ಕಡದನಮರಿ ಗ್ರಾಮ, ಸ್ದಂತ ಸ್ಥಳ:  ಕೆಂಚಾರ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ವಾಸ: ನ್ಯೂ ಪಬ್ಲಿಕ್ ಶಾಲೆ ಹತ್ತಿರ, ವೈ ಟಿ ವೆಂಕಟರವಣಪ್ಪ ರವರ ಮನೆಯಲ್ಲಿ ಬಾಡಿಗೆಗೆ ವಾಸ   ಚಿಂತಾಮಣಿ ನಗರ ಮೊ ನಂ: 9901162507 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಚಿಂತಾಮಣಿ ತಾಲ್ಲೂಕು ಕಡದನಮರಿ ಗ್ರಾಮ ಪಂಚಾಯತಿಯಲ್ಲಿ ದಿನಾಂಕ 27/04/2021 ರಂದು ಸುಮಾರು 1:15 ರ ಸಮಯದಲ್ಲಿ ಕೋರೋನಾ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಯ ಮುಂಭಾಗದಲ್ಲಿ ಮಾಸ್ಕ್ ಧರಿಸುವಂತೆ ಜನರಲ್ಲಿ ಅರಿವು ಮೂಡಿಸಲು ಮತ್ತು ಮಾಸ್ಕ್ ಧರಿಸದವರಿಗೆ ಪೈನ್ ಹಾಕುತ್ತಿರುವ ಸಮಯದಲ್ಲಿ ಕಡದನಮರಿ ಗ್ರಾಮದ ಲಕ್ಷ್ಮಣ್ಣ ಬಿನ್ ಬಿಲ್ಲಾಂಡ್ಲಪಲ್ಲಿ ಈರಪ್ಪ ರವರು ಕಡದನಮರಿ ಗ್ರಾಮದಲ್ಲಿ ಮಾಸ್ಕ್ ಧರಿಸದೆ ಬಂದಾಗ ನಾನು ಮತ್ತು ನಮ್ಮ ಗ್ರಾಮ ಪಂಚಾಯತಿ ಸಿಬ್ಬಂದಿಯವರಾದ ರಮೇಶ್ .ಎನ್ - ಸ್ವಚ್ಚಗಾರ,ಓಬಳೇಶ್ -ಕರವಸೂಲಿಗಾರ,ಸೀತಿಭೈಯರೆಡ್ಡಿ-ಜವಾನ ರವರು ಮಾಸ್ಕ್ ಧರಿಸುವಂತೆ ಸೂಚಿಸಿದಾಗ ನಾನು ಮಾಸ್ಕ್ ಹಾಕುವುದಿಲ್ಲವೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ ಈ ವ್ಯಕ್ತಿಯ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ತಮ್ಮಲ್ಲಿ ಸವಿನಯ ಪೂರ್ವಕವಾಗಿ ಕೋರಿ ಕೊಟ್ಟ ದೂರಿನ ಸಾರಾಂಶವಾಗಿರುತ್ತದೆ.

 

3. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.34/2021 ಕಲಂ. 32,34 ಕೆ.ಇ ಆಕ್ಟ್:-

     ದಿನಾಂಕ:27/04/2021 ರಂದು ಚೇಳೂರು ಪೊಲೀಸ್ ಠಾಣೆಯ ಎ.ಎಸ್.ಐ  ಅಮರೇಶ್ ಬಾಬು ರವರು ಬೆಳಗ್ಗೆ 7:45 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ:26/04/2021  ರಂದು ರಾತ್ರಿ ಗಸ್ತು ಕರ್ತವ್ಯಕ್ಕೆ ನಿಯೋಜಿಸಿದ್ದು ಅದರಂತೆ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಿಕೊಂಡು ಚಾಕವೇಲು ಪೊಲೀಸ್ ಚೌಕಿಯಲ್ಲಿದ್ದಾಗ ಈ ದಿನ ದಿನಾಂಕ:27/04/2021 ರಂದು ಬೆಳಗ್ಗೆ 5:45 ಗಂಟೆ ಸಮಯದಲ್ಲಿ ಕೊಂಡಂವಾರಪಲ್ಲಿ ಗ್ರಾಮದ ವಾಸಿಯಾದ  ನರಸಿಂಹಪ್ಪ ಬಿನ್ ಪಾಪಣ್ಣ ಎಂಬುವರು ತನ್ನ ಚಿಲ್ಲರೆ ಅಂಗಡಿಯಲ್ಲಿ ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಸಂಗ್ರಹಣೆ ಮಾಡಿರುವುದಾಗಿ ಮಾಹಿತಿ ತಿಳಿದು ಬಂದಿದ್ದು, ಅದರಂತೆ ನಾನು ಮತ್ತು ಸಿಬ್ಬಂದಿಯವರಾದ  ಸತೀಶ್ ಸಿಪಿಸಿ 437 ರವರು ಚಾಕವೇಲು ಗ್ರಾಮದ ಮುಖ್ಯರಸ್ತೆಯಲ್ಲಿ ಪಂಚರನ್ನು ಬರಮಾಡಿಕೊಂಡು ವಿಷಯವನ್ನು ತಿಳಿಸಿ ಮೇಲ್ಕಂಡ ಆಸಾಮಿಯ ಚಿಲ್ಲರೆ ಅಂಗಡಿಯ ಮೇಲೆ ದಾಳಿ ಮಾಡಲು ಪಂಚರಾಗಿ ಸಹಕರಿಸಬೇಕೆಂದು ಕೋರಿದ್ದರ ಮೇರೆಗೆ ಸದರಿಯವರು ಒಪ್ಪಿದ್ದು ನಂತರ ನಾವುಗಳು ಕೊಂಡಂವಾರಪಲ್ಲಿ ಗ್ರಾಮದ ನರಸಿಂಹಪ್ಪ ರವರ ಮನೆಯ ಬಳಿಗೆ ಹೋಗಿ ಪಂಚರ ಸಮಕ್ಷಮ ಸ್ಥಳದಲ್ಲಿದ್ದ 1) 90 ಎಮ್ ಎಲ್ ನ ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಯ 28 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿ ಪ್ಯಾಕೆಟ್ ನ  ಮೇಲೆ 35.13 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 2520 ಎಮ್ ಎಲ್ ಯಿದ್ದು ಇವುಗಳ ಬೆಲೆ 983.64 ರೂಗಳಾಗಿರುತ್ತೆ.  2) 650 ಎಂ.ಎಲ್ ಸಾಮರ್ಥ್ಯದ KNOCKOUT HIGH PUNCH STRONG BEER ನ 6 ಬೀರ್ ಬಾಟಲ್ ಗಳಿದ್ದು ಪ್ರತಿ ಬಾಟಲ್ ನ ಮೇಲೆ 145 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 3900 ಎಮ್ ಎಲ್ ಯಿದ್ದು ಇವುಗಳ ಬೆಲೆ 870 ರೂ ಗಳಾಗಿರುತ್ತೆ. 3) 500 ಎಂ.ಎಲ್ ಸಾಮರ್ಥ್ಯದ KNOCKOUT HIGH PUNCH STRONG BEER ನ 6 ಟಿನ್ ಬಾಟಲ್ ಗಳಿದ್ದು ಪ್ರತಿ ಬಾಟಲ್ ನ ಮೇಲೆ 115 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 3000 ಎಮ್ ಎಲ್ ಯಿದ್ದು ಇವುಗಳು ಒಟ್ಟು   690 ರೂಗಳಾಗಿದ್ದು ಈ ಎಲ್ಲಾ ಮೇಲ್ಕಂಡ   ಮಾಲುಗಳ  ಒಟ್ಟು ಸಾಮರ್ಥ್ಯ 9 ಲೀಟರ್ 420 ಎಂ.ಎಲ್ ಆಗಿದ್ದು, ಇದರ ಒಟ್ಟು ಬೆಲೆ 2,543. 64/- ರೂಗಳಾಗಿರುತ್ತೆ. ಸದರಿ ಆಸಾಮಿಗೆ ಮಧ್ಯವನ್ನು ಮಾರಾಟ ಮಾಡಲು ಯಾವುದಾದರೂ ಪರವಾನಗಿ ಇದೇಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು. ನಂತರ ಸದರಿ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸದರಿಯವರು ನರಸಿಂಹಪ್ಪ ಬಿನ್ ಪಾಪಣ್ಣ, 38 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಕೊಂಡಂವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. ಫೋ ನಂ:8762029460  ಎಂದು ತಿಳಿಸಿದ್ದು ನಂತರ ಸದರಿ ಮಾಲುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಎಲ್ಲಾ ಮಾಲುಗಳ ಪೈಕಿ ಒಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು D ಎಂಬ ಅಕ್ಷರದಿಂದ ಸೀಲು ಮಾಡುತ್ತಿದ್ದಾಗ ನರಸಿಂಹಪ್ಪ ರವರು ಸ್ಥಳದಿಂದ ಓಡಿ ಹೋಗಿ ತಲೆಮರೆಸಿಕೊಂಡಿರುತ್ತಾರೆ. ನಂತರ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿದ ನರಸಿಂಹಪ್ಪ ಬಿನ್ ಪಾಪಣ್ಣ ರವರ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಬಂದು ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯ ಮೇರೆಗೆ ಠಾಣಾ ಮೊಸಂ:34/2021 ಕಲಂ 32, 34 ಕೆ ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

4. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.35/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:27/04/2021 ರಂದು ಮದ್ಯಾಹ್ನ 12:00 ಗಂಟೆಗೆ ಚೇಳೂರು ಪೊಲೀಸ್ ಠಾಣಾ ಸಿಬ್ಬಂದಿಯವರಾದ  ರವಣಪ್ಪ ಬಿವಿ ಹೆಚ್ ಸಿ 129 ರವರು ಮಾಲು ಮತ್ತು  ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ:27-04-2021 ರಂದು ನಾನು ಬೆಳಗ್ಗೆ 9-00ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಚೇಳೂರು ಪೊಲೀಸ್ ಠಾಣೆಯ ಲೇಖಕರಾದ ಹಾಗೂ 2ನೇ ಗ್ರಾಮಗಸ್ತಿನ ಸಿಬ್ಬಂದಿಯಾದ ಅಂಜಿನಪ್ಪ ಟಿ.ಎಲ್ ಸಿಪಿಸಿ-468 ರವರು ನನಗೆ ಕರೆದು 2ನೇ ಗ್ರಾಮ ಗಸ್ತುನಲ್ಲಿ ಬರುವ ದಬ್ಬರವಾರಪಲ್ಲಿ ಗ್ರಾಮದಿಂದ ಬಂದ ಖಚಿತ ಮಾಹಿತಿಯ ಏನೆಂದರೆ ದಬ್ಬರವಾರಿಪಲ್ಲಿ ಗ್ರಾಮದಲ್ಲಿ ಯಾರೋ ಒಬ್ಬ ಅಸಾಮಿಯು ಒಂದು ಮನೆಯ ಮುಂದೆ ಆಕ್ರಮ ಮಧ್ಯಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ. ಅದ್ದರಿಂದ ಸದರಿ ಅಸಾಮಿಯ ಮೇಲೆ ದಾಳಿ ಮಾಡುವ ಸಲುವಾಗಿ ನನ್ನ ಜೊತೆ ಬರಲು ಕರೆದಿದ್ದರ ಮೇರೆಗೆ ನಾನು ಮತ್ತು ಸಿಪಿಸಿ-468 ಅಂಜಿನಪ್ಪ ರವರು  ಠಾಣಾ ಎಸ್.ಹೆಚ್.ಓ ಆದ ಶ್ರೀ.ನಾಗರಾಜ್ ಡಿ.ಜಿ ಎ.ಎಸ್.ಐ ರವರಿಗೆ ಮಾಹಿತಿಯನ್ನು ನೀಡಿ ದಬ್ಬರವಾರಿಪಲ್ಲಿ ಗ್ರಾಮಕ್ಕೆ ಇದೇ ದಿನ ಬೆಳಗ್ಗೆ 9-30 ಗಂಟೆಗೆ  ಹೋಗಿ ನೋಡಲಾಗಿ  ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಅದರಂತೆ ನಾನು ಮತ್ತು ಅಂಜಿನಪ್ಪ ಟಿ.ಎಲ್ ಸಿಪಿಸಿ-468 ರವರು ಪಂಚರನ್ನು ಬರಮಾಡಿಕೊಂಡು ಮದ್ಯಪಾನವನ್ನು ಮಾರಾಟ ಮಾಡುತ್ತಿದ್ದ ಜಾಗಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಬಳಿ ಅಕ್ರಮವಾಗಿ ಮಧ್ಯದ ಪ್ಯಾಕೆಟಗಳನ್ನು ಇಟ್ಟುಕೊಂಡು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟಗಳನ್ನು ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾರಾಟ ಮಾಡುತ್ತಿದ್ದ ಅಸಾಮಿಯ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಸ್ಥಳದಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಅಸಾಮಿಯು ಮದ್ಯದ ಪಾಕೆಟುಗಳನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾರೆ. ಸ್ಥಳದಲ್ಲಿದ್ದ ಗ್ರಾಮಸ್ಥರ ಬಳಿ ಸದರಿ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಚಲಪತಿ ಬಿನ್ ಲೇಟ್ ವೆಂಕಟರವಣಪ್ಪ, 45 ವರ್ಷ, ಭೋವಿ ಜನಾಂಗ, ಜಿರಾಯ್ತಿ, ವಾಸ ದಬ್ಬರವಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದು ಬಂದಿರುತ್ತದೆ. ನಂತರ ಸ್ಥಳದಲ್ಲಿ ಬಿಸಾಡಿ ಹೋಗಿದ್ದ ಮಧ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ  90 ಎಂ.ಎಲ್ ನ HAYWARDS CHEERS WHISKY ಯ 22 ಟೆಟ್ರಾ ಪ್ಯಾಕೇಟುಗಳಿದ್ದು,  ಪ್ರತಿ ಪಾಕೆಟು ಮೇಲೆ 35.13/-ರೂ ಬೆಲೆ ಇರುತ್ತದೆ. ಸದರಿ ಪಾಕೆಟುಗಳಲ್ಲಿ ಇರುವ ಮದ್ಯದ ಸಾಮರ್ಥ್ಯ 1980 ML ಇದ್ದು, ಇವುಗಳ ಒಟ್ಟು ಬೆಲೆ 772.86 ರೂಗಳಾಗಿರುತ್ತೆ. ಸದರಿ 90 ಎಂ.ಎಲ್ ನ HAYWARDS CHEERS WHISKY ಯ 22 ಮಧ್ಯದ ಟೆಟ್ರಾ ಪ್ಯಾಕೇಟಗಳನ್ನು ಹಾಗೂ ಸದರಿ ಸ್ಥಳದಲ್ಲಿದ್ದ ಒಂದು ಲೀಟರನ ಖಾಲಿ ವಾಟರ್ ಬಾಟಲ್  ಹಾಗೂ  ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸಗಳನ್ನು  ಬೆಳಗ್ಗೆ 10-00 ಗಂಟೆಯಿಂದ 11-00 ಗಂಟೆಯವರೆಗೆ ದಾಳಿ ಮಾಡಿ ಪಂಚನಾಮೆಯ ಮೂಲಕ ಮೇಲ್ಕಂಡವುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ  ವರದಿಯನ್ನು  ಪಡೆದು ಠಾಣಾ ಮೊಸಂ:35/2021 ಕಲಂ 15(ಎ), 32(3) ಕೆ ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.69/2021 ಕಲಂ. 87  ಕೆ.ಪಿ ಆಕ್ಟ್:-

     ದಿನಾಂಕ: 26/04/2021 ರಂದು ಸಂಜೆ 6-30 ಗಂಟೆ ಸಮಯದಲ್ಲಿ  ಶ್ರೀ. ಬಿ.ಎನ್.ಶರತ್ ಕುಮಾರ್ ಪಿ.ಎಸ್.ಐ. ಡಿಸಿಬಿ /ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಗೆ  ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,  ಈ ದಿನ ತಾನು ಮತ್ತು ಸಿಬ್ಬಂದಿಯೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಗಸ್ತು ನಿರ್ವಹಿಸುತ್ತಿದ್ದಾಗ ಸಂಜೆ 4-45 ಗಂಟೆಯ ಸಮಯದಲ್ಲಿ ಸಬ್ಬೇನಹಳ್ಳಿ ಗ್ರಾಮದ ಕಡೆ ಗಸ್ತು ನಿರ್ವಹಿಸುತ್ತಿದ್ದಾಗ  ಚಿಕ್ಕಬಳ್ಳಾಪುರ  ತಾಲ್ಲೂಕು ಅಣಕನೂರು ಗ್ರಾಮದ ಬಳಿ  ಚಿಕ್ಕಬಳ್ಳಾಪುರದ ನೂನಿ ಸಂಜೀವಪ್ಪ ರವರ  ಜಮೀನಿನಲ್ಲಿ ಬೇಲಿ ಗಿಡಗಳ   ಕೆಳಗೆ  ಯಾರೋ ಅಂದರ್ ಬಾಹರ್ ಇಸ್ವೀಟು ಜೂಜಾಟ ಆಡುತ್ತಿರುವುದಾಗಿ  ಬಂದ ಖಚಿತ  ಮಾಹಿತಿ ಬಂದಿದ್ದು ಪಂಚಾಯ್ತಿದಾರರೊಂದಿಗೆ ದಾಳಿ  ಕ್ರಮ ಜರುಗಿಸಿ  ಅಂದರ್ ಬಾಹರ್ ಇಸ್ವೀಟು  ಜೂಜಾಟ  ಆಡುತ್ತಿದ್ದ  1. ಕೃಷ್ಣಪ್ಪ  ಬಿನ್  ಲೇಟ್ ಮುನಿಶ್ವಾಮಪ್ಪ 52ವರ್ಷ ಬಲಿಜಿಗರು ವ್ಯಾಪಾರ. ವಾಸ: ವಾರ್ಡ್ ನಂಬರ್: 24 . ವಾಪಸಂದ್ರ ಚಿಕ್ಕಬಳ್ಳಾಪುರ  ಟೌನ್.  ಮತ್ತು  ಇತರೆ 06 ಜನ ಆಸಾಮಿಗಳನ್ನು  ವಶಕ್ಕೆ  ಪಡೆದು  ಜೂಜಾಟ  ಆಡಲು ಉಪಯೋಗಿಸಿದ್ದ (1) 4380/-ರೂ ನಗದು ಹಣ. (2) 52 ಇಸ್ವೀಟು ಎಲೆಗಳು. (3) ಒಂದು ನ್ಯೂಸ್ ಪೇಪರ್ ನ್ನು ಪಂಚನಾಮೆಯ  ಮೂಲಕ  ವಶಕ್ಕೆ  ಪಡೆದುಕೊಂಡು ಆರೋಪಿತರು, ಮಾಲು ಮತ್ತು  ಪಂಚನಾಮೆಯೊಂದಿಗೆ ನೀಡಿದ  ವರದಿಯನ್ನು ಪಡೆದುಕೊಂಡು  ಠಾಣಾ ಎನ್.ಸಿ.ಆರ್. ನಂಬರ್: 80/2021 ರಂತೆ ಅಸಂಜ್ಞೆಯ  ಪ್ರಕರಣ  ದಾಖಲು ಮಾಡಿಕೊಂಡಿರುತ್ತೆ.  ಅಸಂಜ್ಞೆಯ ಪ್ರಕರಣದಲ್ಲಿ ಆರೋಪಿತರ  ವಿರುದ್ದ ಕಲಂ: 87 ಕೆ.ಪಿ. ಆಕ್ಟ್ ರೀತ್ಯಾ  ಕೇಸು ದಾಖಲಿಸಿಕೊಂಡು ತನಿಖೆಯನ್ನು  ಕೈಗೊಳ್ಳಲು  ಅನುಮತಿ ನೀಡಬೇಕೆಂದು  ಕೋರಿ ಘನ ನ್ಯಾಯಾಲಯಕ್ಕೆ  ಮನವಿಯನ್ನು ಸಲ್ಲಿಸಿಕೊಂಡು , ಘನ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು  ಅನುಮತಿಯನ್ನು  ಪಡೆದುಕೊಂಡು ಠಾಣಾ ಮೊ.ಸಂ. 69/2021 ಕಲಂ: 87 ಕೆ.ಪಿ. ಆಕ್ಟ್ ರೀತ್ಯಾ  ಕೇಸನ್ನು ದಾಖಲಿಸಿಕೊಂಡಿರುತ್ತೆ.

 

6. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.70/2021 ಕಲಂ. 188 ಐ.ಪಿ.ಸಿ & 5 THE EPIDEMIC DISEASES (AMENDMENT) ORDINANCE, 2020:-

     ದಿನಾಂಕ: 26/04/2021 ರಂದು ರಾತ್ರಿ 11-00 ಗಂಟೆಯ ಸಮಯದಲ್ಲಿ ಶ್ರೀ.ಬಿ.ಪಿ.ಮಂಜು ಪಿ.ಎಸ್.ಐ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 26/04/2021 ರಂದು ತಾನು ಸಿಬ್ಬಂದಿಯವರಾದ ಪಿಸಿ 579. ಚೇತನ ಕುಮಾರ್ ಮತ್ತು ಪಿಸಿ 580 ಸುನಿಲ್ ಎಂ ಬಾಳಮ್ಮ ನವರ್  ಜೀಪು ಚಾಲಕ ಮಂಜುನಾಥ ಎ.ಹೆಚ್.ಸಿ. 23  ರವರೊಂದಿಗೆ ಕೋವಿಡ್-19 ಸಾಂಕ್ರಾಮಿಕ ರೋಗದ 2ನೇ ಅಲೆ ವ್ಯಾಪಕವಾಗಿ  ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗಗಳು ಪ್ರಸರಿಸದಂತೆ ವ್ಯಕ್ತಿಗಳು ಗುಂಪುಗೂಡುವುದನ್ನು. ಯಾವುದೇ ಕಾರ್ಯಕ್ರಮಗಳ ಆಚರಣೆ ಮಾಡುವುದನ್ನು  ತಡೆಯಲು,  ವ್ಯಕ್ತಿಯಿಂದ ವ್ಯಕ್ತಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ವ್ಯಾಪ್ತಿಯಲ್ಲಿ ಗಸ್ತು ನಿರ್ವಹಿಸುತ್ತಿದ್ದಾಗ ರಾತ್ರಿ 10-00 ಗಂಟೆ ಸಮಯದಲ್ಲಿ ಬಾತ್ಮೀದಾರರಿಂದ  ಚಿಕ್ಕಬಳ್ಳಾಪುರ ತಾಲ್ಲೂಕು  ನಂದಿ ಹೋಬಳಿ  ಮನ್ನಾರಪುರ ಗ್ರಾಮದ ಸರ್ವೆ  ನಂಬರ್: 31 ರ  ಜಮೀನುನಲ್ಲಿರುವ  ಶ್ರೀ. ಪಟಾಲಮ್ಮ  ದೇವಸ್ಥಾನದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಕರೋನ-19 ರ ಎರಡನೇ ಅಲೆಯ  ಸಾಂಕ್ರಾಮಿಕ ರೋಗ ಹರಡುತ್ತಿರುವುದು  ಗೊತ್ತಿದ್ದು  ವ್ಯಕ್ತಿಯಿಂದ  ವ್ಯಕ್ತಿಗೆ ಸಾಮಾಜಿಕ  ಅಂತರವನ್ನು  ಕಾಯ್ದುಕೊಳ್ಳದೇ, ಮಾಸ್ಕ್ ನ್ನು ಧರಿಸದೇ ದೇವಸ್ಥಾನದ ಮುಂಭಾಗ ಜನರನ್ನು ಗುಂಪಾಗಿ ಕುಳ್ಳರಿಸಿಕೊಂಡು ಸರ್ಕಾರ ಆದೇಶವನ್ನು ಉಲ್ಲಂಘನೆ ಮಾಡುತ್ತಿರುವುದಾಗಿ  ಬಾತ್ಮೀ ದೊರೆಯಿತು. ತಾನು ಮೇಲ್ಕಂಡ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಮನ್ನಾರಪುರ ಗ್ರಾಮದ  ಶ್ರೀ ಪಟಾಲಮ್ಮ  ದೇವಸ್ಥಾನದ ಮುಂಭಾಗದಲ್ಲಿ ವ್ಯಕ್ತಿಯಿಂದ  ವ್ಯಕ್ತಿಗೆ ಸಾಮಾಜಿಕ  ಅಂತರವನ್ನು  ಕಾಯ್ದುಕೊಳ್ಳದೇ, ಮಾಸ್ಕ್ ನ್ನು ಧರಿಸದೇ  ಸಾರ್ವಜನಿಕರನ್ನು  ಗುಂಪಾಗಿ  ಕುಳ್ಳರಿಸಿಕೊಂಡು ಶ್ರೀ ಅಕ್ಕ ದೇವತಾ ಕಥೆಯನ್ನು  ಓದುತ್ತಿರುವುದು ಕಂಡು ಬಂದಿರುತ್ತದೆ. ಸದರಿ  ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದ  ಆಸಾಮಿಗಳ  ಹೆಸರು ವಿಳಾಸ (1)  ನಾರಾಯಣಪ್ಪ ಬಿನ್ ನಾನೆಪ್ಪ70ವರ್ಷ  ಬಲಿಜಿಗರು ಮನ್ನಾರಪುರ ಗ್ರಾಮ  ಮತ್ತು ಅಕ್ಕ ದೇವತಾ ಕಥೆಯನ್ನು ಓದುತ್ತಿದ್ದ ಇವರ ಅಳಿಯ  ವೆಂಕಟೇಶ  ಬಿನ್ ಗಂಗುಲಪ್ಪ ಇಡ್ಲಿಪಾಳ್ಯ  ಚಿಂತಾಮಣಿ  ಎಂತ ತಿಳಿಯಿತು. ಸದರಿ ಆಸಾಮಿಗಳ ವಿರುದ್ದ ಮೊ.ಸಂ.70/2021 ಕಲಂ: 188 ಐಪಿಸಿ ರೆ/ವಿ ಕಲಂ: 5 ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 ರ ರೀತ್ಯಾ ಕೇಸನ್ನು ದಾಖಲಿಸಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.166/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ: 26/04/2021 ರಂದು ಸಂಜೆ 7.00 ಗಂಟೆಗೆ ಶ್ರೀ. ಕೆ.ಎಂ.ಶ್ರೀನಿವಾಸಪ್ಪ, ಸಿ.ಪಿ.ಐ, ಚಿಂತಾಮಣಿ ಗ್ರಾಮಾಂತರ ವೃತ್ತ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 26/04/2021 ರಂದು ಸಂಜೆ 06.00 ಗಂಟೆ ಸಮಯದಲ್ಲಿ ಕೋವಿದ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ತನ್ನ ಸಿಬ್ಬಂದಿಯವರಾದ ಸಿ.ಹೆಚ್.ಸಿ-190 ವೀರಭದ್ರಸ್ವಾಮಿ ರವರು ಜೀಪ್ ಚಾಲಕ ವೇಣುಗೋಪಾಲ್ ರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-3339 ಜೀಪ್ ನಲ್ಲಿ ವೃತ್ತದ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಜೆ 06.30 ಸಮಯದಲ್ಲಿ ತಿಮ್ಮಸಂದ್ರ ಗ್ರಾಮದ ಚೌಡೇಶ್ವರಿ ಸಿಲ್ಕ್ ಹೌಸ್ ಬಟ್ಟೆ ಅಂಗಡಿಯ ಮಾಲೀಕ ದೇವರಾಜ ರವರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 7-8 ಜನರನ್ನು ಅಂಗಡಿಯಲ್ಲಿ ಅಕ್ಕಪಕ್ಕದಲ್ಲಿಯೇ ಕೂರಿಸಿಕೊಂಡು ಮತ್ತು ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ ದೇವರಾಜ್ ಬಿನ್ ಮುನಿನಾರಾಯಣಪ್ಪ , 49 ವರ್ಷ, ತೊಗಟರು , ಚೌಡೇಶ್ವರಿ ಸಿಲ್ಕ್ ಹೌಸ್  ಬಟ್ಟೆ ಅಂಗಡಿ ಮಾಲೀಕರು, ತಿಮ್ಮಸಂದ್ರ, ತಿಮ್ಮಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಬಟ್ಟೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

8. ಚಿಂತಾಮಣಿ ನಗರ ಪೊಲೀಸ್‌ ಠಾಣೆ  ಮೊ.ಸಂ.66/2021 ಕಲಂ. 188,269,270 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ಪಿರ್ಯಾದಿದಾರರಾದ ನಾರಾಯಣಸ್ವಾಮಿ.ಆರ್ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದದದರೆ  ದಿನಾಂಕ: 26/04/2021 ರಂದು ಸಂಜೆ ನಾನು ಠಾಣೆಯ ಸಿಬ್ಬಂದಿಯಾದ  ಸರ್ವೇಶ, ಸಿಪಿಸಿ-426 ಜೀಪ್ ಚಾಲಕ ಚೌಡಪ್ಪ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-138 ರಲ್ಲಿ ನಗರ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ಇದೇ ದಿನ  ಸಂಜೆ 05-30  ಗಂಟೆ ಸಮಯದಲ್ಲಿ ಬೆಂಗಳೂರು ರಸ್ತೆಯ ಕಡೆ ಗಸ್ತು ಮಾಡುತ್ತಿದ್ದಾಗ ಬೆಂಗಳೂರು ರಸ್ತೆಯಲ್ಲಿರುವ ನವನೀತ್ ಪಾನೀಪೂರಿ ಸೆಂಟರ್  ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು  ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು ಸದರಿ ಅಂಗಡಿ ಮಾಲೀಕರ ಹೆಸರು ಮತ್ತು ವಿಳಾಸ ಕೇಳಲಾಗಿ ರಾಮ್ ಕುಮಾರ್ ಬಿನ್ ರಂಗಯ್ಯಶೆಟ್ಟಿ, 41 ವರ್ಷ, ವೈಶ್ಯರು, ನವನೀತ್ ಪಾನೀಪೂರಿ, ಸೆಂಟರ್ ಮಾಲೀಕರು, ವಾಸ ಎನ್.ಆರ್.ಬಡಾವಣೆ ಚಿಂತಾಮಣಿ ನಗರ ಹಾಗೂ ಅಶಾ ಕಿರಣ್ ಕೊಂ ರಾಮ್ ಕುಮಾರ್, 32 ವರ್ಷ, ವೈಶ್ಯರು, ರಾಘವೇಂದ್ರಸ್ವಾಮಿ ದೇವಾಲಯದ ಹತ್ತಿರ, ಎನ್ ಆರ್ ಬಡಾವಣೆ, ಚಿಂತಾಮಣಿ ನಗರ  ಎಂದು ತಿಳಿಸಿದ್ದು ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರೀಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಪಾನೀಪೂರಿ ಅಂಗಡಿ ಮಾಲೀಕರುಗಳ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

9. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.49/2021 ಕಲಂ. 279 ಐ.ಪಿ.ಸಿ :-

     ದಿನಾಂಕ 27/04/2021 ರಂದು ಪಿರ್ಯಾದಿ ಠಾಣೆಹಗೆ ಹಾಜರಾಗಿ ನೀಡಿದ ದೂರನ ಸಾರಾಂಶವೇನಂದರೆ ತಾನು ಈಗ್ಗೆ ಸುಮಾರು 8 ತಿಂಗಳ ಹಿಂದೆ ಕೆ.ಎ 53 ಎ.ಎ 1930 ನೊಂದಣಿ ಸಂಖ್ಯೆ ಮಹೇಂದ್ರ ಕಂಪನಿಯ ಬೊಲೇರೋ ಪಿಕಪ್ ಗೋಡ್ಸ್ ವಾಹನವನ್ನು ಖರರೀದಿಸಿದ್ದು, ಈ ವಾಹನಕ್ಕೆ ಚಾಲಕನಾಗಿ ತಮ್ಮ ಗ್ರಾಮದ ಸುರೇಶ ಬಿನ್ ಲೇಟ್ ವೆಂಕಟರೆಡ್ಡಿ, 25 ವರ್ಷ, ವಕ್ಕಲಿಗರು, ಚಾಲಕ ವೃತ್ತಿ ರವರನ್ನು  ನೇಮಿಸಿಕೊಂಡಿದ್ದು, ತನ್ನ ಮೇಲ್ಕಂಡ ವಾಹನವನ್ನು ತರಕಾರಿ-ಹಣ್ಣುಗಳ ಬಾಡಿಗೆಗೆ ಕಳುಹಿಸುತ್ತಿದ್ದು, ದಿನಾಂಕ 25/04/2021 ರಂದು ತಮ್ಮ ಗ್ರಾಮದ ಈಶ್ವರಪ್ಪ ಬಿನ್ ಗೌಡ್ಲ ವೆಂಕಟರಾಯಪ್ಪರವರಿಗೆ ಬಾಡಿಗೆಗಾಗಿ ಬೆಂಗಳೂರಿಗೆ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ತನ್ನ ವಾಹನದ ಚಾಲಕ ಸುರೇಶರವರನ್ನು ಕಳುಹಿಸಿದ್ದು, ಸುರೇಶ ಮತ್ತು ಈಶ್ವರಪ್ಪರವರು ತನ್ನ ವಾಹನದಲ್ಲಿ ಬೆಂಗಳೂರಿಗೆ ಹೋಗಿದ್ದು, ನಂತರ ದಿನಾಂಕ 26/04/2021 ರಂದು ಬೆಳಗ್ಗೆ ಸುಮಾರು 10.30 ಗಂಟೆಯಲ್ಲಿ ತಮ್ಮ ಗ್ರಾಮದ ಮೇಲ್ಕಂಡ ಈಶ್ವರಪ್ಪರವರು ತನಗೆ ಕರೆ ಮಾಡಿ ನಾವು ಬೆಂಗಳೂರಿನಿಂದ ವಾಪಸ್ಸು ನಮ್ಮ ಗ್ರಾಮಕ್ಕೆ ನಿಮ್ಮ ವಾಹನದಲ್ಲಿ ಬರುತ್ತಿದ್ದಾಗ ಬೆಳಗ್ಗೆ ಸುಮಾರು 10.00 ಗಂಟೆಯಲ್ಲಿ  ಶಿಡ್ಲಘಟ್ಟ ತಾಲ್ಲೂಕು ರಾಚನಹಳ್ಳಿ ಕ್ರಾಸ್ ಬಳಿ ನಿನ್ನ ವಾಹನದ ಚಾಲಕ ಸುರೇಶರವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡ ಭಾಗದಲ್ಲಿದ್ದ ನೀಲಗಿರಿ ಮರಗಳಿಗೆ ಡಿಕ್ಕಿ ಹೊಡೆಸಿರುವುದಾಗಿ ತಿಳಿಸಿದ್ದು ಆಗ ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿರುತ್ತೆ. ಸ್ಥಳದಲ್ಲಿದ್ದು ಚಾಲಕ ಸುರೇಶ ಮತ್ತು  ಈಶ್ವರಪ್ಪರವರನ್ನು ವಿಚಾರ ಮಾಡಲಾಗಿ ತಮಗೆ ಯಾವುದೇ ಗಾಯಗಳಾಗಿರುವುದಿಲ್ಲವೆಂದು ತಿಳಿಸಿದ್ದು, ತನಗೆ ದೂರ ನೀಡಲು ಸಾಧ್ಯವಾಗದೇ ಇದ್ದಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡಿದ್ದು, ಅಪಘಾತದ ವಾಹನವು  ಸ್ಥಳದಲ್ಲಿಯೇ ಇದ್ದು, ಈ ಅಪಘಾತಕ್ಕೆ ತನ್ನ ವಾಹನದ ಚಾಲಕ ಸುರೇಶರವರ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿದ್ದು,  ಆದ್ದರಿಂದ ಮುಂದಿನ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು ಕೋರುರುವುದಾಗಿರುತ್ತೆ.

 

10. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.97/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ 13/04/2021 ರಂದು ರಾತ್ರಿ 7-15 ಗಂಟೆಗೆ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಮೋಹನ್ ಎನ್. ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಆಸಾಮಿಗಳು, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13/04/2021 ರಂದು ಸಂಜೆ 6-05 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಉಡಮಲೋಡು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪ್ರೊಬೆಷನರಿ ಸಬ್ ಇನ್ಸೆಪೆಕ್ಟರ್ ಮುತ್ತರಾಜು .ಕೆ ಹಾಗೂ ಸಿಬ್ಬಂದಿಯವರಾದ, ಹೆಚ್.ಸಿ-166 ಸಂಪಂಗಿರಾಮಯ್ಯ, ಹೆಚ್.ಸಿ-171 ಬಾಬು.ಸಿ, ಹೆಚ್.ಸಿ-170 ಜೂಲಪ್ಪ, ಪಿ.ಸಿ-512 ರಾಜಶೇಖರ, ಪಿ.ಸಿ-518 ಆನಂದ, ಪಿ.ಸಿ-246 ಸಿಕಂದರ್ ಮುಲ್ಲಾ, ಪಿ.ಸಿ-433 ಬಾಬಾಜಾನ್, ಪಿ.ಸಿ-381 ಜಗದೀಶ, ಪಿ.ಸಿ-281 ಗುರುಸ್ವಾಮಿ, ಪಿ.ಸಿ-426 ಲೋಹಿತ್, ಜೀಪಿನ ಚಾಲಕ ಎ.ಪಿ.ಸಿ-143 ಮಹೇಶ, ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ಮತ್ತು ಸಿಬ್ಬಂದಿಯ ದ್ವಿಚಕ್ರ ವಾಹನಗಳಲ್ಲಿ ಉಡಮಲೋಡು ಗ್ರಾಮಕ್ಕೆ ಸಂಜೆ 6-15 ಗಂಟೆಗೆ ಹೋಗಿ ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ಹಾಗೂ ಸಿಬ್ಬಂದಿಯ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಗ್ರಾಮದಲ್ಲಿ ಇರುವ ಸಾರ್ವಜನಿಕ ರಸ್ತೆಯಲ್ಲಿ ಜನರು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 100 ರೂ, ಬಾಹರ್ ಗೆ 100 ರೂ ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ಜೂಜಾಡುತ್ತಿದ್ದವರನ್ನು ಸುತ್ತುವರೆದು ಹಿಡಿದುಕೊಂಡು ಒಬ್ಬೊಬ್ಬರನ್ನಾಗಿ ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ 1) ರವಿಚಂದ್ರ ಬಿನ್ ನಾರಾಯಣಪ್ಪ, 27 ವರ್ಷ, ಕುರುಬರು, ಕಾರ್ಖಾನೆಯಲ್ಲಿ ಕೆಲಸ, ವಾಸ ವೈಚಕೂರ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು. 2) ಹರೀಶ ಬಿನ್ ನರಸಿಂಹಪ್ಪ, 26 ವರ್ಷ, ನಾಯಕರು, ಜಿರಾಯ್ತಿ, ವಾಸ ಮರಳೂರು ಗ್ರಾಮ , ಗೌರಿಬಿದನೂರು ತಾಲ್ಲೂಕು. 3) ರಾಮಚಂದ್ರ ಬಿನ್ ದೊಡ್ಡ ಓಬಳಯ್ಯ, 37 ವರ್ಷ, ನಾಯಕರು, ವ್ಯಾಪಾರ, ರಮಾಫುರ ಗ್ರಾಮ, ಗೌರಿಬಿದನೂರು ತಾಲ್ಲೂಕು. 4) ನಾಗರಾಜು ಬಿನ್ ನರಸಿಂಹ ಮೂರ್ತಿ, 34 ವರ್ಷ, ವಕ್ಕಲಿಗರು, ಚಾಲಕ ವೃತ್ತಿ, ವಾಸ ವೈಚಕೂರ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿರುತ್ತಾರೆ. ಇನ್ನೂ ಕೆಲವರು ಸ್ಥಳದಿಂದ ಓಡಿ ಹೋಗಿರುತ್ತಾರೆ. ಸ್ಥಳದಲ್ಲಿ ಜೂಜಾಟಕ್ಕೆ ಪಣಕ್ಕೆ ಕಟ್ಟಿದ್ದ ಹಣ ಇದ್ದು ಎಣಿಸಲಾಗಿ 1) 16820/- ರೂ ಹಣ , 2) 52 ಸ್ಪೀಟ್ ಎಲೆಗಳು , 3) ಒಂದು ಪ್ಲಾಸ್ಟಿಕ್ ಚೀಲ ಇರುತ್ತೆ. ಸ್ಥಳದಲ್ಲಿ ಸಂಜೆ 6-15 ಗಂಟೆಯಿಂದ 7-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಕೃತಕ ಬೆಳಕನಲ್ಲಿ ಪಂಚನಾಮೆ ಕ್ರಮ ಜರುಗಿಸಿ ಮೇಲ್ಕಂಡ ನಗದು, ಇಸ್ಪೀಟು ಎಲೆಗಳನ್ನು ವಶಪಡಿಸಿಕೊಂಡು, ರಾತ್ರಿ 7-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಆರೋಪಿಗಳು, ಪಂಚನಾಮೆ ಮತ್ತು ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಎನ.ಸಿ.ಆರ್ ಅನ್ನು ನೊಂದಾಯಿಸಿಕೊಂಡಿರುತ್ತೆ.ಈ ದಿನ ನ್ಯಾಯಾಲಯದ ಪಿಸಿ ರವರು ನೀಡಿದ ನ್ಯಾಯಾಲಯದ ಅನುಮತಿಯ ಪ್ರತಿ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.123/2021 ಕಲಂ. 32,34  ಕೆ.ಇ ಆಕ್ಟ್ :-

     ದಿನಾಂಕ:26.04.2021 ರಂದು ರಾತ್ರಿ 8.00 ಗಂಟೆ ಸಮಯದಲ್ಲಿ ಪಿಸಿ 543 ಸುಧಾಕರ್ ರವರು ಠಾಣೆಗೆ ಹಾಜರಾಗಿ ಅರೋಪಿ, ಮಾಲು ಮತ್ತು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ 26/04/2021 ರಂದು ಬೆಳಿಗ್ಗೆ ಪಿ.ಎಸ್.ಐ ರವರು ನನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ನಾನು ಈ ದಿನ ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 6-30 ಗಂಟೆ ಸಮಯದಲ್ಲಿ ಮೇಲೂರು ಗ್ರಾಮದಲ್ಲಿ ಗಸ್ತು ಮಾಡಿಕೊಂಡು ಗುಪ್ತ ಮಾಹಿತಿ ಸಂಗ್ರಹಣೆಯಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಕಡೆಯಿಂದ ಇಬ್ಬರು ಆಸಾಮಿಗಳು ಒಂದು ಗೋಣಿ ಚೀಲದಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ನಾನು ಮೇಲೂರು ಗ್ರಾಮದ ಸಕರ್ಾರಿ ಶಾಲೆಯ ಮುಂಭಾಗದಲ್ಲಿ ನಿಂತುಕೊಂಡು ಶಿಡ್ಲಘಟ್ಟ ಕಡೆಯಿಂದ ಬರುತ್ತಿದ್ದ ದ್ವಿ ಚಕ್ರ ವಾಹನಗಳನ್ನು ಗಮನಿಸುತ್ತಿದ್ದಾಗ ಸಂಜೆ ಸುಮಾರು 6-45 ಗಂಟೆ ಸಮಯದಲ್ಲಿ ಯಾರೋ ಇಬ್ಬರು ಆಸಾಮಿಗಳು ತಮ್ಮ ಮದ್ಯಭಾಗದಲ್ಲಿ ಒಂದು ಗೋಣಿ ಚೀಲದ ಬ್ಯಾಗ್ ಅನ್ನು ಮದ್ಯಭಾಗದಲ್ಲಿ ಇಟ್ಟುಕೊಂಡು ಮೇಲೂರು ಗ್ರಾಮದ ಕಡೆಗೆ ಬರುತ್ತಿದ್ದಾಗ ಸದರಿ ದ್ವಿ ಚಕ್ರ ವಾಹನವನ್ನು ನಿಲ್ಲಿಸಲಾಗಿ ಸದರಿ ದ್ವಿ ಚಕ್ರ ವಾಹನದ ಸವಾರರು ಸಮವಸ್ತ್ರದಲ್ಲಿದ್ದ ನನ್ನನ್ನು ಕಂಡು ತಮ್ಮ ದ್ವಿ ಚಕ್ರ ವಾಹನದ ಸಮೇತವಾಗಿ ಪರಾರಿಯಾಗಲು ಪ್ರಯತ್ನ ಪಟ್ಟಾಗ ನಾನು ದ್ವಿ ಚಕ್ರ ವಾಹನವನ್ನು ತಡೆದು ನಿಲ್ಲಿಸಿ, ಅವರ ಹೆಸರು ವಿಳಾಸ ಕೇಳಲಾಗಿ 1) ಗೋವಿಂದಪ್ಪ ಬಿನ್ ಮುನಿಯಪ್ಪ, 42 ವರ್ಷ, ನಾಯಕರು, ಕೂಲಿ, ವಾಸ-ಕಂಬದಹಳ್ಳಿ ರಸ್ತೆ, ಮೇಲೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. 2) ರಾಜಣ್ಣ ಬಿನ್ ಕದಿರಪ್ಪ, 32 ವರ್ಷ, ಎ.ಕೆ ಜನಾಂಗ, ಕೂಲಿ, ವಾಸ-ಮೇಲೂರು ಗ್ರಾಮ, ಸ್ವಂತ ಸ್ಥಳ:-ಅಪ್ಪೇಗೌಡನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಗಳ ಬಳಿ ಇದ್ದ ಗೋಣಿ ಚೀಲದ ಬ್ಯಾಗ್ ಅನ್ನು ಪರಿಶೀಲಿಸಲಾಗಿ ಅದರಲ್ಲಿ 90 ಎಂ.ಎಲ್ ನ ಓರಿಜಿನಿಲ್ ಚಾಯ್ಸ್ ಮತ್ತು ಓಲ್ಡ್ ಟರ್ವನ್ ನ ಮದ್ಯದ ಟೆಟ್ರಾ ಪಾಕೇಟ್ ಗಳಿದ್ದು, ಓರಿಜಿನಿಲ್ ಚಾಯ್ಸ್ ನ ಟೆಟ್ರಾ ಪಾಕೇಟ್ ಗಳನ್ನು ಎಣಿಕೆ ಮಾಡಲಾಗಿ ಇವು 48 ಇದ್ದು, ಪ್ರತಿ ಟೆಟ್ರಾ ಪಾಕೇಟ್ ನ ಮೇಲೆ 35.13 ಎಂದು ಬೆಲೆ ನಮೂದಾಗಿದ್ದು, ಇವುಗಳ ಒಟ್ಟು ಬೆಲೆ 1686.24 ರೂ ಆಗಿದ್ದು, ಓಲ್ಡ್ ಟರ್ವನ್ ನ ಟೆಟ್ರಾ ಪಾಕೇಟ್ ಗಳನ್ನು ಎಣಿಕೆ ಮಾಡಲಾಗಿ ಇವು 20 ಇದ್ದು, ಪ್ರತಿ ಟೆಟ್ರಾ ಪಾಕೇಟ್ ನ ಮೇಲೆ 1062.40 ಆಗಿದ್ದು ಮೇಲ್ಕಂಡ ಮದ್ಯವು 6 ಲೀಟರ್ 120 ಎಂ.ಎಲ್ ನಷ್ಟಿದ್ದು, ಸದರಿ ಆಸಾಮಿಗಳು ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿ ಚಕ್ರ ವಾಹನವನ್ನು ಪರಿಶೀಲಿಸಲಾಗಿ ಇದು ಕೆಎ-03-ಹೆಚ್ಎಕ್ಸ್-3945 ನೊಂದಣಿ ಸಂಖ್ಯೆಯ ಟಿವಿಎಸ್ ಸ್ಟಾರ್ ಸಿಟಿ ದ್ವಿ ಚಕ್ರ ವಾಹನವಾಗಿರುತ್ತದೆ. ಸದರಿ ಆಸಾಮಿಗಳಿಗೆ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಪರವಾನಿಗೆಯನ್ನು ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಿಗೆ ಇರುವುದಿಲ್ಲ, ತಾವು ಮೇಲ್ಕಂಡ ಮದ್ಯವನ್ನು ಚೌಡಸಂದ್ರ ಗ್ರಾಮದ ಬಳಿ ಇರುವ ಎಂ.ಎಸ್.ಐ.ಎಲ್ ನಲ್ಲಿ ಖರೀದಿ ಮಾಡಿಕೊಂಡು ಅದನ್ನು ತಮ್ಮ ಗ್ರಾಮದಲ್ಲಿ ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸಲು ಸಾಗಾಣಿಕೆ ಮಾಡುತ್ತಿದ್ದುದ್ದಾಗಿ ತಿಳಿಸಿದ್ದು, ಮೇಲ್ಕಂಡ ದ್ವಿ ಚಕ್ರ ವಾಹನವನ್ನು, ಮದ್ಯವನ್ನು ಹಾಗು ಸದರಿ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಬಂದು ತಮ್ಮ ಮುಂದೆ ಹಾಜರು ಪಡಿಸುತ್ತಿದ್ದು ಸದರಿ ಆಸಾಮಿಗಳ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.124/2021 ಕಲಂ. 32,34  ಕೆ.ಇ ಆಕ್ಟ್ :-

     ದಿನಾಂಕ:-26/04/2021 ರಂದು ರಾತ್ರಿ 9-30 ಗಂಟೆಗೆ ಪಿಸಿ-481 ಮಂಜುನಾಥ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 26/04/2021 ರಂದು ಬೆಳಿಗ್ಗೆ ಪಿ.ಎಸ್.ಐ ರವರು ತನಗೆ ಠಾಣೆಯ 20 ನೇ ಗ್ರಾಮ ಗಸ್ತಿಗೆ ನೇಮಕ ಮಾಡಿದ್ದು ಅದರಂತೆ ತಾನು 20 ನೇ ಗ್ರಾಮ ಗಸ್ತಿನಲ್ಲಿ ಬರುವ ಗ್ರಾಮಗಳಾದ ಜೆ.ವೆಕಟಾಪುರ, ಮಿತ್ತನಹಳ್ಳಿ, ಸುಗಟೂರು ಕಡೆಗಳಲ್ಲಿ ಗಸ್ತು ಮಾಡಿಕೊಂಡು ರಾತ್ರಿ 8-00 ಗಂಟೆ ಸಮಯದಲ್ಲಿ ಬಳುವನಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಬಳುವನಹಳ್ಳಿ ಗ್ರಾಮದ ವಾಸಿ ಸೂರ್ಯಕುಮಾರ್ ಬಿನ್ ಲೇಟ್ ಪುಚ್ಚಪ್ಪ ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಒಂದು ಗೋಣಿ ಚೀಲದಲ್ಲಿ ಅಕ್ರಮವಾಗಿ ಮದ್ಯವನ್ನು ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಬಾತ್ಮೀದಾರರಿಂದ ಮಾಹಿತಿ ಬಂದಿದ್ದು, ನಂತರ ತಾನು ಸೂರ್ಯಕುಮಾರ್ ರವರ ಅಂಗಿಡಯ ಸಮೀಪ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಅಂಗಡಿಯ ಮುಂಭಾಗದಲ್ಲಿ ಯಾರೋ ಒಬ್ಬ ಆಸಾಮಿಯು ನಿಂತು ಕೊಂಡು ಗೋಣಿ ಚೀಲದಲ್ಲಿದ್ದ ಮದ್ಯವನನು ತೆಗೆದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಖಚಿತವಾದ ಮೇಲೆ ಸದರಿ ಸ್ಥಳದ ಮೇಲೆ ದಾಳಿ ಮಾಡಲಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಆಸಾಮಿ ಹಾಗು ಸಾರ್ವಜನಿಕರು ಓಡಿ ಹೋಗಿದ್ದು ನಂತರ ಸ್ಥಳದಲ್ಲಿದ್ದ ಗೋಣಿ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 90 ಎಂ.ಎಲ್ ಸಾಮಥ್ರ್ಯದ 35 ಹೆಯ್ ವಡ್ಸ್ ಚೀಯರ್ಸ್ ವಿಸ್ಕಿಯ ಟೆಟ್ರಾ ಪಾಕೇಟ್ ಗಳಿದ್ದು, ಪ್ರತಿಯೊಂದು ಟೆಟ್ರಾ ಪಾಕೇಟ್ ನ ಮೇಲೆ 35.13 ಎಂದು ಬೆಲೆ ನಮೂದಾಗಿದ್ದು ಇವುಗಳ ಒಟ್ಟು ಬೆಲೆ 1229.55 ರೂಗಳಾಗಿರುತ್ತದೆ. ಸದರಿ ಮದ್ಯವು  3 ಲೀಟರ್ 150 ಎಂಎಲ್ ನಷ್ಟಿರುತ್ತದೆ. ಸ್ಥಳಕ್ಕೆ ಬಂದು ಸಾರ್ವಜನಿಕರನ್ನು ಓಡಿ ಹೋದ ಅಂಗಡಿಯ ಮಾಲೀಕನ ಹೆಸರು ವಿಳಾಸ ಕೇಳಲಾಗಿ ಸೂರ್ಯಕುಮಾರ್ ಬಿನ್ ಲೇಟ್ ಪುಟ್ಟಣ್ಣ, 58 ವರ್ಷ, ಲಿಂಗಾಯಿತರು, ವ್ಯಾಪಾರ, ವಾಸ-ಬಳುವನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಯು ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಮದ್ಯವನ್ನು ತನ್ನ ಅಂಗಡಿಯ ಬಳಿ ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಕಂಡು ಬಂದಿದ್ದು, ಸದರಿ ಮದ್ಯವನ್ನು ವಶಕ್ಕೆ ಪಡೆದುಕೊಂಡು ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಮಾಲನ್ನು ತಮ್ಮ ವಶಕ್ಕೆ ಪಡೆದುಕೊಂಡು ಮೇಲ್ಕಂಡ ಆಸಾಮಿಯ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

13. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.125/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ 26/04/2021 ರಂದು ಬೆಳಿಗ್ಗೆ ಪಿ.ಎಸ್.ಐ ರವರು ನನಗೆ 20 ನೇ ಗ್ರಾಮ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ನಾನು 20 ನೇ ಗ್ರಾಮ ಗಸ್ತಿನಲ್ಲಿ ಬರುವ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ರಾತ್ರಿ 8-30 ಗಂಟೆ ಸಮಯದಲ್ಲಿ ಬಳುವನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ದಾಳಿಯಲ್ಲಿದ್ದಾಗ ಸದರಿ ಗ್ರಾಮದ ವಾಸಿ ಪ್ರಕಾಶ್ ಬಿನ್ ನಾರಾಯಣಸ್ವಾಮಿ ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಮದ್ಯವನ್ನು ದಾಸ್ತಾನು ಮಾಡಿಕೊಂಡು ಅಲ್ಲಿಯೇ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ನಾನು ಪ್ರಕಾಶ್ ರವರ ಅಂಗಡಿಯ ಸಮೀಪ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಚಿಲ್ಲರೆ ಅಂಗಡಿಯ ಮುಂಭಾಗ ಯಾರೋ ಇಬ್ಬರು ಆಸಾಮಿಗಳು ಮದ್ಯವನ್ನು ಸೇವನೆ ಮಾಡುತ್ತಾ ಕುಳಿತಿದ್ದ ಒಬ್ಬ ಆಸಾಮಿಯು ತನ್ನ ಬಳಿ ಇದ್ದ ಒಂದು ಕಪ್ಪು ಬಣ್ಣದ ಕವರ್ ನಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯದ ಪಾಕೇಟ್ ಗಳನ್ನು ಮಾರಾಟ ಮಾಡುತ್ತಾ ಕುಡಿಯಲು ಅನುವು ಮಾಡಿಕೊಟ್ಟಿರುವುದು ಖಚಿತವಾದ ಮೇಲೆ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಹಾಗು ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಸಮವಸ್ತ್ರದಲ್ಲಿದ್ದ ನನ್ನನ್ನು ಕಂಡು ಓಡಿ ಹೋಗಿದ್ದು, ನಂತರ ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಕಪ್ಪು ಬಣ್ಣದ ಕವರ್ ನಲ್ಲಿ ಹೆಯ್ ವರ್ಡ್ ಚೀಯರ್ಸ್ ವಿಸ್ಕಿಯ 8 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಮೇಲೆ 35.13 ರೂ ಎಂದು ಇದ್ದು ಇವುಗಳ ಒಟ್ಟು ಬೆಲೆ 281.04 ರೂ.ಗಳಾಗಿರುತ್ತೆ, ಸ್ಥಳದಲ್ಲಿ 2 ಪ್ಲಾಸ್ಟಿಕ್ ಗ್ಲಾಸುಗಳು, 2ಖಾಲಿ ನೀರಿನ ಪಾಕೇಟುಗಳು ಹಾಗು 90 ಎಂ.ಎಲ್ ನ ಹೆಯ್ ವರ್ಡ್ ಚೀಯರ್ಸ್ ವಿಸ್ಕಿಯ 2 ಖಾಲಿ ಟೆಟ್ರಾ ಪಾಕೇಟ್ ಗಳಿದ್ದು, ಸ್ಥಳಕ್ಕೆ ಬಂದ ಸಾರ್ವಜನಿರನ್ನು ಓಡಿ ಹೋದ ಅಂಗಡಿಯ ಮಾಲೀಕನ ಹೆಸರು ವಿಳಾಸ ಕೇಳಲಾಗಿ ಪ್ರಕಾಶ್ ಬಿನ್ ನಾರಾಯಣಸ್ವಾಮಿ, 30 ವರ್ಷ, ತೊಗಟ ಜನಾಂಗ, ವಾಸ-ಬಳುವನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಆಸಾಮಿ ಪ್ರಕಾಶ್ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಮೇಲ್ಕಂಡ ಮಾಲನ್ನು ವಶಕ್ಕೆ ಪಡೆದುಕೊಂಡು ತಮ್ಮ ಮುಂದೆ ಹಾಜರು ಪಡಿಸುತ್ತಿದ್ದು ತಮ್ಮ ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

14. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ  ಮೊ.ಸಂ.46/2021 ಕಲಂ. 32,34 ಕೆ.ಇ ಆಕ್ಟ್ :-

     ದಿನಾಂಕ-26-04-2021 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಸಿ.ವಿ ಜಯಶೇಖರ, ಹೆಚ್.ಸಿ 136, ಶಿಡ್ಲಘಟ್ಟ ನಗರ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ.26.04.2021 ರಂದು ಬೆಳಿಗ್ಗೆ 8.00 ಗಂಟೆಗೆ ಠಾಣಾಧಿಕಾರಿಗಳು ನನಗೆ ಮತ್ತು ಹೆಚ್.ಜಿ.624 ಆನೆಪ್ಪ ರವರಿಗೆ ಶಿಡ್ಲಘಟ್ಟ ಬಸ್ ನಿಲ್ದಾಣದಲ್ಲಿ ಸಂಚಾರಿ ನಿಯಂತ್ರಣ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಆದೇಶದಂತೆ ನಾವು ಠಾಣೆಯಿಂದ ಹೊರಟು ಶಿಡ್ಲಘಟ್ಟ ನಗರದ ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ಮುಖ್ಯ ರಸ್ತೆಯ ಬಸ್ ನಿಲ್ದಾಣದಲ್ಲಿರುವ ಪೊಲೀಸ್ ಚೌಕಿಯ ಮುಂದೆ ನಿಂತುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಜೆ ಸುಮಾರು 4.45 ಗಂಟೆಯಲ್ಲಿ ಚಿಂತಾಮಣಿ ಕಡೆಯಿಂದ ಟಾಟಾ ಇಂಡಿಕಾ ಕಾರನ್ನು ಅದರ ಚಾಲಕ ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದು, ಆಗ ನಾನು ಮತ್ತು ಹೆಚ್.ಜಿ ಆನೆಪ್ಪ ರವರು ಮುಖ್ಯ ರಸ್ತೆಯಲ್ಲಿ ವಾಹನಗಳು ಹೆಚ್ಚಾಗಿ ಓಡಾಡುತ್ತಿದ್ದರಿಂದ ನಿಧಾನವಾಗಿ ಚಾಲನೆ ಮಾಡಿಕೊಂಡು ಹೋಗಲು ಸೂಚನೆಗಳನ್ನು ನೀಡುವ ಸಲುವಾಗಿ ಕಾರನ್ನು ನಿಲ್ಲಿಸಲು ತಿಳಿಸಿದಾಗ ಸದರಿ ಕಾರಿನ ಚಾಲಕ ನನ್ನ ಸೂಚನೆಗಳನ್ನು ಪಾಲಿಸದೆ ಪುನಃ ಹಂಪ್ಸ್ ನಲ್ಲಿ ವೇಗವಾಗಿ ಚಾಲನೆ ಮಾಡಿಕೊಂಡು ಟಿ.ಬಿ.ರಸ್ತೆ ಕಡೆ ತಿರುಗಿಸಿದಾಗ ನಾನು ಸದರಿ ಕಾರನ್ನು ಅನುಮಾನ ಬಂದು ಹಿಂಬಾಲಿಸಿದಾಗ ಸದರಿ ಕಾರಿನ ಚಾಲಕ ಸಲ್ಲಾಪುರಂ ದೇವಾಲಯದ ಮುಂದೆ ಬೈಪಾಸ್ ರಸ್ತೆ ಕಡೆ ಹೋಗುತ್ತಿದ್ದವನು ಪುನಃ ವಾಪಸ್ಸು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹೋಗಿ ಟಿ.ಬಿ.ರಸ್ತೆ ಕಡೆ ಬಂದಾಗ ನಾನು ಸದರಿ ವಾಹನವನ್ನು ನಿಲ್ಲಿಸು ನಿಲ್ಲಿಸು ಎಂದು ಕೂಗಿದಾಗ ಸದರಿ ಕಾರಿನ ಚಾಲಕ ನನ್ನನ್ನು ನೋಡಿ ಸ್ವಲ್ಪ ದೂರದಲ್ಲಿಯೇ ನಿಲ್ಲಿಸಿ ಅದರ ಮುಂಭಾಗದಲ್ಲಿ ಕುಳಿತಿದ ವ್ಯಕ್ತಿ ಮತ್ತು ಚಾಲಕ ವಾಹನವನ್ನು ಬಿಟ್ಟು ಹಿಂದೆ ಬೈಪಾಸ್ ರಸ್ತೆಯಲ್ಲಿ ಓಡಿ ಹೋದರು. ನಂತರ ಕಾರಿನಲ್ಲಿ ಚೆಕ್ ಮಾಡಿದಾಗ ಹಿಂದುಗಡೆ ಸೀಟಿನ ಮೇಲೆ ಬಟ್ಟೆಗಳು ಹಾಕಿದ್ದು ಬಟ್ಟೆಗಳ ಕೆಳಗೆ ಮದ್ಯದ ಬಾಕ್ಸ್ಗಳು ಇರುವುದು ಕಂಡು ಬಂದಿದ್ದು, ಬಟ್ಟೆಗಳನ್ನು ಪಕ್ಕಕ್ಕೆ ತೆಗೆದು ನೋಡಲಾಗಿ 1] HAYWARDS Cheers whisky 90 ML 2-Box 2] BAGPIPER Delux Whisky 180 ML 3-Box 3] old tavern Whisky 180 ML- 2-Box 4] TUBORG premium Beer 650 ML 1-Box ಮದ್ಯದ ರಟ್ಟಿನ ಬಾಕ್ಸ್ ಗಳು ಇರುತ್ತೆ. ಇವುಗಳ ಬೆಲೆ ಸುಮಾರು 32.000/- ರೂ ಬೆಲೆ ಬಾಳುವುದಾಗಿರುತ್ತೆ. ಕಾರಿನ ನಂಬರ್ ನೋಡಲಾಗಿ KA.03.C.3051 ನಂಬರಿನ ಟಾಟಾ ಇಂಡಿಕಾ ಕಾರ್ ಆಗಿರುತ್ತೆ. ಓಡಿ ಹೋದ ಸದರಿ ಕಾರಿನ ಚಾಲಕ ಮತ್ತು ಆತನ ಜೊತೆಯಲ್ಲಿದ್ದ ಆಸಾಮಿಯ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಸದರಿಯವರು ಮದ್ಯದ ಬಾಕ್ಸ್ ಗಳನ್ನು ಯಾವುದೇ ಪರವಾನಗಿ ಇಲ್ಲದೆ ಮಾರಾಟ ಮಾಡಲು ಸಾಗಿಸುತ್ತಿರುವುದಾಗಿ ತಿಳಿದು ಬಂದಿರುತ್ತೆ. ಕಾರನ್ನು ಮದ್ಯದ ಬಾಕ್ಸ್ ಗಳ ಸಮೇತ ವಶಕ್ಕೆ ಪಡೆದು ಠಾಣೆಯ ಬಳಿ ತಂದು ಹಾಜರುಪಡಿಸುತ್ತಿದ್ದು, ಪರವಾನಗಿ ಇಲ್ಲದೆ ಮದ್ಯ ಸಾಗಿಸುತ್ತಿದ್ದ ಕಾರಿನ ಚಾಲಕ ಮತ್ತು ಅವರ ಜೊತೆಯಲ್ಲಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

ಇತ್ತೀಚಿನ ನವೀಕರಣ​ : 27-04-2021 05:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080