ಅಭಿಪ್ರಾಯ / ಸಲಹೆಗಳು

 

1. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.22/2021 ಕಲಂ. 419,420 ಐ.ಪಿ.ಸಿ & 66(D) INFORMATION TECHNOLOGY ACT 2008:-

     ದಿನಾಂಕ:26/3/2021 ರಂದು ಪಿರ್ಯಾದಿ ಶ್ರೀ ರಾಹುಲ್ ವಿಲಾಸ್ ರಾವ್ ಬಿನ್ ವಿಲಾಸ್ ರಾವ್.22 ವರ್ಷ, ಎಮ್.ಬಿ.ಎ ವಿಧ್ಯಾರ್ಥಿ, ಬ್ರಾಹ್ಮಣ ಜನಾಂಗ, ಸ್ವಂತ ಸ್ಥಳ ದೊಂಬಿವಲಿ ಈಸ್ಟ್ , ಮುಂಬಯಿ ನಗರ,   ಪ್ರಸ್ತುತ ವಾಸ ಸತ್ಯ ಸಾಯಿ ವಿಧ್ಯಾ ಸಂಸ್ಥೆ. ಮುದ್ದೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, ಮೊಬೈಲ್ ನಂಬರ್-9380053594 ರವರು ಠಾಣೆಗೆ ಹಾಜರಾಗಿ ನೀಡಿದ  ದೂರು ಏನೆಂದರೆ ನಾನು ಮುಂಬಯಿ ನಗರದ ದೊಂಬಿವಲಿ ಈಸ್ಟ್ ಬ್ರಾಂಚ್ ನಲ್ಲಿ ಬ್ಯಾಂಕ್ ಆಫ್ ಬರೋಡದಲ್ಲಿ 76040100003496 ಸಂಖ್ಯೆಯ ಉಳಿತಾಯ ಖಾತೆಯನ್ನು ಹೊಂದಿರುತ್ತೇನೆ, ಈಗಿರುವಲ್ಲಿ ದಿನಾಂಕ:03-02-2021 ರಂದು ನಾನು ನನ್ನ ಮೊಬೈಲ್ ನಲ್ಲಿ ಸರ್ಚ್ ಮಾಡುತ್ತಿದ್ದಾಗ ಒ.ಎಲ್ ಎಕ್ಸ್ ನಲ್ಲಿ ಒಂದು ಆಫಲ್ ಸ್ಮಾರ್ಟ್ ವಾಚ್ ಸೀರಿಸ್-5 ಇದ್ದು ಅದರ ಬೆಲೆ 11,000/-ರೂಗಳಿದ್ದು ಅದರ ಪಕ್ಕದಲ್ಲಿ 9898250753 ಸಂಖ್ಯೆಯ ಪೋನ್ ನಂಬರ್ ಇರುತ್ತದೆ ಅದರಂತೆ ನಾನು ಸದರಿ ಸಂಖ್ಯೆಗೆ ಕಾಲ್ ಮಾಡಿದ್ದು  ಅವರು ನನ್ನ ಹೆಸರು ರವಿ ಎಂತ ತಿಳಿಸಿ ನೀವು ಈ ವಾಚ್ ಖರೀದಿ ಮಾಡಬೇಕಾದರೆ ನೀವು ಮೊದಲು 1,000/-ರೂಗಳನ್ನು ನಿಮ್ಮ ಹೆಸರಿನಲ್ಲಿ ಬಿಲ್ ತಯಾರು ಮಾಡಲು ಹಾಗೂ ಇನ್ನು ಉಳಿದ 10,000/-ರೂಗಳನ್ನು ಮತ್ತೆ ಕಳುಹಿಸಿ, ನಿಮಗೆ ಕೊರಿಯರ್ ಮುಖಾಂತರ ವಾಚ್ ಕಳುಹಿಸುತ್ತೇನೆಂತ ತಿಳಿಸಿದ್ದು ಅದರಂತೆ ನಾನು ಅವರು ಹೇಳಿದ ಹಾಗೆ ಅವರು ನೀಡಿದ್ದ ಏರ್ ಟೆಲ್ ಪೆಮೆಂಟ್ ಅಕೌಂಟ್ ನಂಬರ್ -7984175013(IFSC-AIR0000001) ಗೆ ನನ್ನ ಗೂಗಲ್ ಪೇ 9380053594 ಯಿಂದ ಹಣ ವರ್ಗಾವಣೆ ಮಾಡಿರುತ್ತೇನೆ,  ಆದರೆ ಸದರಿ ವ್ಯಕ್ತಿ ನನಗೆ ವಾಚನ್ನು ಕಳುಹಿಸದೇ ದಿನಾಂಕ:05-02-2021 ನಾವು ನಿಮಗೆ ಬೈ ಮಿಸ್ಟೇಕ್ ಆಗಿ ಆಫಲ್ ಸ್ಮಾರ್ಟ್ ವಾಚ್ ಸೀರಿಸ್-5 ಕಳುಹಿಸದೇ ಸೀರಿಸ್-6 ಕಳುಹಿಸಿರುವುದಾಗಿ ಅದರ ಬೆಲೆ 21,000/- ರೂಗಳಾಗಿದ್ದು ಮಿಕ್ಕ ಹಣ 10,000/-ರೂ ಕಳುಹಿಸುವಂತೆ ಕೇಳಿದ್ದು ಅದಕ್ಕೆ ನಾನು ನಿಜವೆಂತ ನಂಬಿ ಮಿಕ್ಕ ಹಣ ವನ್ನು ಅವರ ಮೇಲ್ಕಂಡ ಅಕೌಂಟ್ ಗೆ ಕಳುಹಿಸಿರುತ್ತೇನೆ,  ನಂತರ ಅವರು ನಿಮಗೆ ಒಂದು ಗಂಟೆಯಲ್ಲಿ ವಾಚ್ ಕಳುಹಿಸುತ್ತೇನೆ  ಇಲ್ಲವಾದರೇ ನಿಮ್ಮ ಹಣ ನಿಮಗೆ ವಾಪಸ್ಸು ಕಳುಹಿಸುತ್ತೇನೆಂತ ತಿಳಿಸಿರುತ್ತಾರೆ. ಆದರೆ ಇದೂವರೆವಿಗೂ ಕಾದರೂ ನನಗೆ ನನ್ನ ಹಣವಾಗಲಿ ಅಥವಾ ವಾಚ್ ಆಗಲಿ ಕಳುಹಿಸಿರುವವುದಿಲ್ಲ, ಅವನ ಪೋನ್ ನಂಬರ್ ಸ್ವಿಚ್ ಆಫ್ ಮಾಡಿರುತ್ತಾನೆ,  ಆದುದರಿಂದ ತಾವಂದಿರು ನನಗೆ ವಾಚ್ ಕಳುಹಿಸುತ್ತೇನೆಂತ ವಂಚಿಸಿ ಒಟ್ಟು 21,000/-ರೂಗಳನ್ನು ಅವರ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿರುವ  ಮೇಲ್ಕಂಡ  ವ್ಯಕ್ತಿಯನ್ನು  ಪತ್ತೆ ಮಾಡಿ ನನ್ನ  ಹಣವನ್ನು ನಮಗೆ ವಾಪಸ್ಸು ಕೊಡಿಸಿ ಆರೋಪಿಯ ವಿರುದ್ದ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರು.

 

2. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.45/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 26/03/2021 ರಂದು ಸಂಜೆ 6-30 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯ ಪಿ.ಸಿ 89 ರವರು ಠಾಣೆಗೆ ಹಾಜರಾಗಿ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದ MTNo 152/2021 ರ ಆದೇಶದಂತೆ ಅನುಮತಿ ನೀಡಿದ್ದನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ,  ದಿನಾಂಕ:26/03/2021 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ ಶ್ರೀಧರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:26-03-2021 ರಂದು ಮದ್ಯಹ್ನ 2-45 ಗಂಟೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿದ್ದಾಗ ಗುಡಿಬಂಡೆ ಪೊಲೀಸ್ ಠಾಣೆಯ 1ನೇ ಬೀಟ್ ಸಿಬ್ಬಂದಿ ಹನುಮಂತರಾಯಪ್ಪ ಸಿ,ಹೆಚ್ಸಿ-73 ರವರು ನನಗೆ ಪೋನ್ ಮಾಡಿ ಈ ದಿನ ದಿನಾಂಕ:26/03/2021 ರಂದು ನಾನು ಗುಡಿಬಂಡೆ ಟೌನ್ ನ ಬಾಪೂಜಿ ನಗರದ ಕಡೆ ಗಸ್ತು ಮಾಡುತ್ತಿರುವಾಗ ಗುಡಿಬಂಡೆ ಟೌನ್ ನ ನಮಾಜ್ ಬಂಡೆಯ  ಮೇಲೆ ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ನನಗೆ ಮಾಹಿತಿ ನೀಡಿದರ ಮೇರೆಗೆ, ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-84 ಮುನಿರಾಜು ಸಿ,ಎಚ್,ಸಿ-23 ಕುಮಾರ್ ನಾಯಕ ಸಿ,ಪಿ,ಸಿ-85 ಸುನೀಲ್ ಕುಮಾರ್ ರವರನ್ನು ಕರೆಯಿಸಿಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ತಿಳಿಸಿ ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಎಚ್,ಸಿ-43 ವೆಂಕಟಾಚಲ ರವರೊಂದಿಗೆ ಮದ್ಯಾಹ್ನ 3-00 ಗಂಟೆಗೆ ಗುಡಿಬಂಡೆ ಪೊಲೀಸ್ ಠಾಣೆಯಿಂದ ಬಿಟ್ಟು ಮದ್ಯಾಹ್ನ 3.10 ಮಾರುತಿ ಸರ್ಕಲ್ ಬಳಿ ಹೋಗಿ  ಗಸ್ತಿನಲ್ಲಿದ್ದ ಸಿ,ಹೆಚ್,ಸಿ-73 ಹನುಮಂತರಾಯಪ್ಪ ರವರನ್ನು ಕರೆದುಕೊಂಡು ಹಾಗೂ ಅಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಗುಡಿಬಂಡೆಯ ನಮಾಜ್ ಬಂಡೆಯ ಬಳಿಯಿಂದ ಸ್ವಲ್ಪ ದೂರದಲ್ಲಿ ಜೀಪ್ ನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ, ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-100 ಬಾಹರ್-100 ಎಂದು ಕೂಗುತ್ತಾ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಸಂಜೆ 3.30 ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು ಆಡುತ್ತಿದ್ದವರು ಓಡಿ ಹೋಗಿದ್ದು ಓಡಿ ಹೋದವರ  ಪೈಕಿ ನಾವುಗಳು ಕೆಲವರನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ವಜೀರ್ ಸಾಬ್ ಬಿನ್ ಲೇಟ್ ಸುಭಾನ್ ಸಾಬ್ 42 ವರ್ಷ, ಮುಸ್ಲೀಂ ಜನಾಂಗ ಕೂಲಿ ಕೆಲಸ ವಾಸ: 3 ನೇ ವಾರ್ಡ ಎ ಬ್ಲಾಕ್ ಗುಡಿಬಂಡೆ ಟೌನ್ 2) ಅನಿಲ್ ಕುಮಾರ್ ಬಿನ್ ಸಂಜೀವಪ್ಪ 19 ವರ್ಷ, ನಾಯಕ ಜನಾಂಗ ಆಟೋ ಚಾಲಕ ವಾಸ: ಸಿ ಬ್ಲಾಕ್ ಗುಡಿಬಂಡೆ ಟೌನ್ 3) ಜಗದೀಶ್ ಬಿನ್ ಗಂಗಾಧರಪ್ಪ 32 ವರ್ಷ, ನಾಯಕ ಜನಾಂಗ ಕೂಲಿ ಕೆಲಸ ವಾಸ: ಮಾರುತಿ ಸರ್ಕಲ್ ಗುಡಿಬಂಡೆ ಟೌನ್  4) ಜಬೀವುಲ್ಲಾ ಬಿನ್ ಷೇಕ್ ಫಕೃದ್ದೀನ್ 26 ವರ್ಷ, ಮುಸ್ಲೀಂ ಜನಾಂಗ ಕೂಲಿ ಕೆಲಸ ವಾಸ: ಮುತ್ಯಾಲಮ್ಮ ದೇವಸ್ಥಾನದ ಬಳಿ 9 ನೇ ವಾರ್ಡ ಗುಡಿಬಂಡೆ ಟೌನ್ 5) ಬಾಬಾಜಾನ್ ಬಿನ್ ಫಕೃದ್ದೀನ್ ಸಾಬ್  34 ವರ್ಷ, ಮುಸ್ಲೀಂ ಜನಾಂಗ ಟೀ ಅಂಗಡಿ ವ್ಯಾಪಾರಿ ವಾಸ: ಬಾಪೂಜಿ ನಗರ ಗುಡಿಬಂಡೆ ಟೌನ್ 6) ಗುಲ್ ಷೀರ್ ಬಿನ್ ಅಹಮ್ಮದ್ ಖಾನ್ 34 ವರ್ಷ, ಮುಸ್ಲೀಂ ಜನಾಂಗ ಮೆಕಾನಿಕ್ ಕೆಲಸ ವಾಸ: 8 ನೇ ವಾರ್ಡ ಖಾಜೀಪೇಟೆ ಗುಡಿಬಂಡೆ ಟೌನ್  ಎಂದು ತಿಳಿಸಿರುತ್ತಾರೆ.  ನಂತರ ಪಂಚರ ಸಮಕ್ಷಮ ವಶದಲಿದ್ದ್ಲ ಆಸಾಮಿಗಳನ್ನು ಪರಿಶೀಲನೆ ಮಾಡಲಾಗಿ 1) ವಜೀರ್ ಸಾಬ್ ರವರ ಬಳಿ 470 ರೂ 2) ಅನಿಲ್ ಕುಮಾರ್ ರವರ ಬಳಿ 690/- ರೂ 3) ಜಗದೀಶ್ ರವರ ಬಳಿ 450/- ರೂ  4) ಜಬೀವುಲ್ಲಾ ರವರ ಬಳಿ 610/- ರೂ 5) ಬಾಬಾಜಾನ್ ರವರ ಬಳಿ 310/-  6) ಬಾಬಾಜಾನ್ ರವರ ಬಳಿ 320/- ರೂ ಇದ್ದು ಒಟ್ಟು ಲೆಕ್ಕ ಮಾಡಲಾಗಿ 2850/- ರೂ ಗಳಿದ್ದು ಸ್ಥಳದಲ್ಲಿ 52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ ಜೂಜಾಟಕ್ಕೆ ಪಣಕ್ಕೆ ಇಟ್ಟಿದ್ದ 2850/- ರೂ & 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಮದ್ಯಾಹ್ನ 3-45 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 5-15 ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 5-30 ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿನೀಡಿದ ದೂರಾಗಿರುತ್ತೆ.

 

3. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.34/2021 ಕಲಂ. 324,504 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act 2015:-

     ದಿನಾಂಕ 26-03-2021 ರಂದು ಮಧ್ಯಾಹ್ನ 02.45 ಗಂಟೆಗೆ ಪಿ.ಸಿ-484 ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಸುಬ್ರಮಣಿ ಬಿನ್ ಲೇಟ್ ಗಂಗುಲಪ್ಪ, 42 ವರ್ಷ, ಭೋವಿ ಜನಾಂಗ, ಪಂಚಾಯ್ತಿ ವಾಟರ್ ಮ್ಯಾನ್ ಕೆಲಸ, ವಾಸ ಸೋಮಯಾಜಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ತಾನು ಈಗ್ಗೆ 5-6 ವರ್ಷಗಳಿಂದ ತಮ್ಮ ಗ್ರಾಮದಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುತ್ತೇನೆ. ದಿನಾಂಕ 25-03-2021 ರಂದು ತಮ್ಮ ಗ್ರಾಮದಲ್ಲಿ ಕರೆಂಟ್ ಇಲ್ಲದೇ ಇದ್ದು ಸಂಜೆ 07.30 ಗಂಟೆಗೆ ವಿದ್ಯುತ್ ಬಂದ ನಂತರ ತಾನು ತಮ್ಮ ಗ್ರಾಮದ ಬಳಿ ಇರುವ ಗ್ರಾಮದ ಕೊಳವೆಬಾವಿ ಬಳಿ ಹೋಗಿ ಮೋಟರ್ ಎತ್ತಲು ಮುಂದಾದಾಗ ಅಲ್ಲಿನ ಕೊಳವೆ ಬಾವಿಗೆ ಸಂಪರ್ಕ ಇರುವ 25 ಕೆ.ವಿ ವಿದ್ಯುತ್ ಟ್ರಾನ್ಸ್ ಪಾರ್ಮರ್ ಗೆ ತಮ್ಮ ಗ್ರಾಮದ ವಕ್ಕಲಿಗ ಜನಾಂಗದ ಶ್ರೀನಿವಾಸರೆಡ್ಡಿ ಸಂಪರ್ಕ ಕಲ್ಪಿಸಿರುವುದು ಕಂಡುಬಂದಿದ್ದರಿಂದ ರಾತ್ರಿ 08.00 ಗಂಟೆ ಸುಮಾರಿನಲ್ಲಿ ಅಲ್ಲಿಯೇ ಇದ್ದ ಶ್ರೀನಿವಾಸರೆಡ್ಡಿಯನ್ನು ಕುರಿತು ನೀನು ಈ ರೀತಿ ಸಂಪರ್ಕ ಕಲ್ಪಿಸಿರುವುದರಿಂದ ಟ್ರಾನ್ಸ್ ಫಾರ್ಮರ್ ಸುಟ್ಟುಹೋದರೆ ಊರಿಗೆಲ್ಲಾ ತೊಂದರೆ ಹಾಗೂ ಪಂಚಾಯ್ತಿಯವರು ತನಗೆ ಬೈಯುತ್ತಾರೆ ಎಂದು ಹೇಳುವಷ್ಟರಲ್ಲಿ ಶ್ರೀನಿವಾಸರೆಡ್ಡಿ ಏಕಾಏಕಿ ತನ್ನ ಮೇಲೆ ಜಗಳ ತೆಗೆದು “ ನೀ ಯಾಳಿ ವಡ್ಡೀ ದೆಂಗಾ, ನಿಯಮ್ಮನೇ ದೇಂಗಾ” ಎಂದು ತನ್ನನ್ನು, ಪಂಚಾಯ್ತಿ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಅಲ್ಲಿಯೇ ಇದ್ದ ನೀಲಗಿರಿ ದೊಣ್ಣೆಯಿಂದ ತನ್ನ ತಲೆಯ ಹಿಂಭಾಗಕ್ಕೆ ಹೊಡೆದಿದ್ದರಿಂದ ತನಗೆ ರಕ್ತಗಾಯವಾಯಿತು. ಕೂಡಲೇ ತಾನು ಜೋರಾಗಿ ಕಿರುಚಾಡಿಕೊಂಡಾಗ ತನ್ನ ಹೆಂಡತಿಯಾದ ಪಾರ್ವತಮ್ಮ ತಮ್ಮ ಗ್ರಾಮದ ರಮೇಶ ಬಿನ್ ನಾರಾಯಣಪ್ಪ, ಶಿವಕುಮಾರ ಬಿನ್ ಲಕ್ಷ್ಮನ್ನ ರವರು ಬಂದು ಜಗಳ ಬಿಡಿಸಿ ಉಪಚರಿಸಿ ನಂತರ ಯೊವುದೋ ದ್ವಿಚಕ್ರ ವಾಹನದಲ್ಲಿ ಚಿಕಿತ್ಸೆಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ತನ್ನ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಶ್ರೀನಿವಾಸರೆಡ್ಡಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೇಳಿಕೆಯ ಸಾರಾಂಶವಾಗಿರುತ್ತೆ.

ಇತ್ತೀಚಿನ ನವೀಕರಣ​ : 27-03-2021 05:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080