ಅಭಿಪ್ರಾಯ / ಸಲಹೆಗಳು

 

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.82/2021 ಕಲಂ. 323,324,447,504,506,34 ಐ.ಪಿ.ಸಿ & 3(1)(f),3(1)(r),3(1)(s) The SC & ST (Prevention of Atrocities) Amendment Act 2015 :-

     ದಿನಾಂಕ: 26/02/2021 ರಂದು ಸಂಜೆ 5.00 ಗಂಟೆಯಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ ಎನ್.ವಿ ಚಂದ್ರಶೇಖರ್ ಬಿನ್ ವೆಂಕಟೆಶಪ್ಪ, 38 ವರ್ಷ, ನಾಯಕರು, ಜಿರಾಯ್ತಿ, ವಾಸ: ನಲ್ಲಗುಟ್ಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ತಾನು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ಚಿಂತಾಮಣಿ-ಬೆಂಗಳೂರು ಮಾರ್ಗದ ರಸ್ತೆಯಲ್ಲಿರುವ ಜೆ.ಸಿ.ಆರ್ ಬಾರ್ನ ಹಿಂಭಾಗದಲ್ಲಿ ತಮ್ಮ ಅಜ್ಜಿ-ತಾತ ರವರಿಗೆ ಸೇರಿದ ತಮ್ಮ ಗ್ರಾಮದ ಸರ್ವೆ ನಂ:42/7 ರಲ್ಲಿ 18 ಗುಂಟೆ ಮತ್ತು ಸರ್ವೆ ನಂ:13/ಪಿ2 ರಲ್ಲಿ 15 ಗುಂಟೆ ಜಮೀನು ಇದ್ದು, ಇದು ತಮ್ಮ ಪಿತ್ರಾರ್ಜಿತ ಆಸ್ತಿಯಾಗಿರುತ್ತೆ. ಮೇಲ್ಕಂಡ ಜಮೀನುಗಳ ಪೈಕಿ ಸರ್ವೆ ನಂ:13/ಪಿ2  ರಲ್ಲಿನ 15 ಕುಂಟೆ ಜಮೀನಿನ ವಿಚಾರದಲ್ಲಿ ಈಗ್ಗೆ ಸುಮಾರು 6 ತಿಂಗಳುಗಳಿಂದ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ವಾಸಿಯಾದ ನಟರಾಜ್ @ ಜೆ.ಸಿ.ಬಿ ನಟರಾಜ್ ಬಿನ್ ಸೀನಪ್ಪ ಎಂಬುವರು ಆಗಾಗ ತಮ್ಮ ಮೇಲೆ ತಕರಾರು ತೆಗೆಯುತ್ತಾ ಗಲಾಟೆಗಳನ್ನು ಮಾಡುತ್ತಿರುತ್ತಾರೆ. ಅದರಂತೆ ದಿ:26/02/2021 ರಂದು ಮದ್ಯಾಹ್ನ 12.30 ಗಂಟೆ ಸಮಯದಲ್ಲಿ ತಾನು ಸರ್ವೆ ನಂ:13/ಪಿ2 ಜಮೀನಿನ ಬಳಿಗೆ ಹೋದಾಗ ಕುರುಬ ಜನಾಂಗಕ್ಕೆ ಸೇರಿದ ನಟರಾಜ್ ರವರು ಮತ್ತು ಅವರೊಂದಿಗೆ ಕೃಷ್ಣಪ್ಪ ಬಿನ್ ನಾರಾಯಣಪ್ಪ ಎಂಬುವರು ಇದ್ದು ಇವರುಗಳು ತನ್ನ ಬಾಬತ್ತು ಜಮೀನಿನಲ್ಲಿ ಟ್ರಂಚ್ ಹೊಡೆಸಿರುವುದು ಕಂಡು ಬಂದಿದ್ದು ಆಗ ತಾನು ನಟರಾಜ್ ರವರಿಗೆ ನೀವು ಏಕೆ ತನ್ನ ಜಮೀನಿನಲ್ಲಿ ಜೆ.ಸಿ.ಬಿ ಯಿಂದ ಟ್ರಂಚ್ ಹೊಡೆಸಿದ್ದು ಎಂದು ಕೇಳಿದ್ದಕ್ಕೆ ನಟರಾಜ್ ತನ್ನನ್ನು ಕುರಿತು ನೀನ್ಯಾವನೋ ನನ್ನನ್ನು ಕೇಳುವುದಕ್ಕೆ ನಾಯಕ ಜಾತಿ ನನ್ನ ಮಗನೇ ನೀವು ಕೀಳು ಜಾತಿಯ ನನ್ನ ಮಕ್ಕಳು ನಮ್ಮನ್ನು ಪ್ರಶ್ನೆ ಮಾಡುವಷ್ಟು ಬೆಳೆದಿದ್ದೀರಾ ಎಂದು ಅವಾಚ್ಯ ಶಬ್ದಗಳಿಂದ ಬೈದು ತಮ್ಮ ಜಾತಿ ಬಗ್ಗೆ ಬೈದು ಏಕಾಏಕಿ ತನ್ನ ಮೈ ಮೇಲೆ ಇದ್ದ ಟಿ-ಶರ್ಟ್ ಅನ್ನು ಹಿಡಿದು ಹರಿದು ಹಾಕಿ ಆತನ ಕೈಯಲ್ಲಿದ್ದ ರೇಜರ್ ನಿಂದ ತನ್ನ ಎದೆಯ ಭಾಗಕ್ಕೆ ಮತ್ತು ಎಡ ಭುಜದ ಬಳಿ ಹಲ್ಲೆ ಮಾಡಿ ಗಾಯಪಡಿಸಿದನು ಆತನ ಜೊತೆಯಲ್ಲಿದ್ದ ಕೃಷ್ಣಪ್ಪ ಅಲ್ಲೇ ಇದ್ದ ಕಲ್ಲಿನಿಂದ ತನ್ನ ಬೆನ್ನಿನ ಹಿಂಭಾಗಕ್ಕೆ ಹೊಡೆದು ನೋವುಂಟು ಮಾಡಿದನು. ನಂತರ ಇಬ್ಬರು ಸೇರಿಕೊಂಡು ತನ್ನನ್ನು ಕೆಳಕ್ಕೆ ತಳ್ಳಿ ಕೈಗಳಿಂದ ಮೈ ಮೇಲೆ ಹೊಡೆದು ಕಾಲುಗಳಿಂದ ಒದ್ದರು. ಅಷ್ಟರಲ್ಲಿ ಅಲ್ಲಿದ್ದ ತಮ್ಮ ಗ್ರಾಮದ ವಾಸಿಗಳಾದ ಶಶಿಕುಮಾರ್ ಬಿನ್ ವೆಂಕಟೇಶಪ್ಪ, ಮುನಿನಾರಾಯಣಪ್ಪ ಬಿನ್ ನಾರೆಪ್ಪ, ಹನುಮಂತಪ್ಪ ಬಿನ್ ವೆಂಕಟೇಶಪ್ಪ ರವರು ಅಡ್ಡ ಬಂದು ಜಗಳ ಬಿಡಿಸಿ ತನ್ನನ್ನು ಉಪಚರಿಸಿದರು. ನಂತರ ನಟರಾಜ್ ಅಲ್ಲಿಂದ ಹೋಗುವಾಗ ಈ ದಿನ ತಪ್ಪಿಸಿಕೊಂಡಿದ್ದೀಯಾ ಒಂಟಿಯಾಗಿ ಎಲ್ಲಾದರೂ ಸಿಕ್ಕು ನಿನಗೆ ಒಂದು ಗತಿಯನ್ನು ಕಾಣಿಸುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿದನು. ನಂತರ ಗಾಯಗೊಂಡಿದ್ದ ತನ್ನನ್ನು ಶಶಿಕುಮಾರ್ ಮತ್ತು ಮುನಿನಾರಾಯಣಪ್ಪ ರವರು ದ್ವಿಚಕ್ರ ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಆದ್ದರಿಂದ ತನ್ನ ಬಾಬತ್ತು ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ, ಆ ಜಮೀನಿನಲ್ಲಿ ಜೆ.ಸಿ.ಬಿ ಯಿಂದ ಟ್ರಂಚ್ ಹೊಡೆಸಿದ್ದು ಕೇಳಲು ಹೋದ ತನಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ ಮೇಲ್ಕಂಡ ನಟರಾಜ್ ಮತ್ತು ಕೃಷ್ಣಪ್ಪ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.83/2021 ಕಲಂ. 447,427,307,504,506  ಐ.ಪಿ.ಸಿ:-

     ದಿನಾಂಕ: 26/02/2021 ರಂದು ಸಂಜೆ 5.30 ಗಂಟೆಯಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ ಎಸ್.ನಟರಾಜ್ ಬಿನ್ ಲೇಟ್ ಸೀನಪ್ಪ, 45 ವರ್ಷ, ಕುರುಬರು, ವ್ಯಾಪಾರ ವಾಸ: ವಾಣಿ ಶಾಲೆಯ ಬಳಿ, ಸೊಣ್ಣಶೆಟ್ಟಿಹಳ್ಳಿ, ಚಿಂತಾಮಣಿ ನಗರ ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ತಾನು ವ್ಯಾಪಾರದಿಂದ ಜೀವನ ಮಾಡಿಕೊಂಡಿರುತ್ತೇನೆ. ತಾನು ಚಿಂತಾಮಣಿ-ಬೆಂಗಳೂರು ಮಾರ್ಗದ ರಸ್ತೆಯಲ್ಲಿರುವ ಜೆ.ಸಿ.ಆರ್ ಬಾರ್ ನ ಹಿಂಭಾಗದಲ್ಲಿ ಬರುವ ಚಿಂತಾಮಣಿ ತಾಲ್ಲೂಕು ಚಿನ್ನಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಹಳ್ಳಿ ಗ್ರಾಮದ ಸರ್ವೆ ನಂ:108, 109, 110 ರಲ್ಲಿ ಓಟ್ಟು 3 ಎಕರೆ 32 ಕುಂಟೆ ಜಮೀನನ್ನು ಖರೀದಿಸಿ ಸುಮಾರು 10 ವರ್ಷಗಳಿಂದ ನಾನೇ ಸ್ವಾದೀನದಲ್ಲಿರುತ್ತೇನೆ. ಜಮೀನನ್ನು ಸರ್ವೆ ಮಾಡಿಸಿ ಹದ್ದುಬಸ್ಥನ್ನು ಸಹ ಗುರುತಿಸಿಕೊಂಡು ಕಲ್ಲು ಮತ್ತು ಸಿಮೆಂಟ್ ಇಟ್ಟಿಗೆಗಳಿಂದ ಪಶ್ಚಿ-ದಕ್ಷಿಣ ದಿಕ್ಕುಗಳ ಕಡೆ ಕಾಂಪೌಂಡ್ ಗೋಡೆಯನ್ನು ಕಟ್ಟಿರುತ್ತೇನೆ. ಮೇಲ್ಕಂಡ ಜಮೀನಿನ ವಿಚಾರದಲ್ಲಿ ನಲ್ಲಗುಟ್ಟಹಳ್ಳಿ ಗ್ರಾಮದ ವಾಸಿ ನಾಯಕ ಜನಾಂಗಕ್ಕೆ ಸೇರಿದ ಚಂದ್ರ ಶೇಖರ್ ಬಿನ್ ವೆಂಕಟೇಶಪ್ಪ ಎಂಬುವನು ಈ ಭಾಗದಲ್ಲಿ ಪಿ ನಂಬರ್ ಜಮೀನು ಇರುವುದಾಗಿ ಹೇಳುತ್ತಾ ಆಗಾಗ ತನಗೆ ತೊಂದರೆಯನ್ನುಂಟು ಮಾಡುತ್ತಿದ್ದನು. ಅದರಂತೆ ದಿನಾಂಕ:26/02/2021 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ಮೇಲ್ಕಂಡ ಚಂದ್ರಶೇಖರ್ ತನ್ನ ಬಾಬತ್ತು ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಜೆ.ಸಿ.ಬಿ ಯಿಂದ ಜಮೀನಿನ ಉತ್ತರದ ಕಡೆ ರಸ್ತೆಗೆ ಟ್ರಂಚ್ ಹೊಡೆದಿದ್ದು ಇದನ್ನು ತಿಳಿದು ನಾನು ಅಲ್ಲಿಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ತನಗೆ ಸೇರಿದ ಸುಮಾರು 300 ಅಡಿಗಳ ಕಾಂಪೌಂಡ್ ಗೋಡೆಯನ್ನು ಸಹ ದ್ವಂಸ ಮಾಡಿರುವುದು ಕಂಡು ಬಂದಿರುಇತ್ತೆ. ಆಗ ತಾನು ಸ್ತಳದಲ್ಲಿದ್ದ ಚಂದ್ರಶೇಖರ್ನಿಗೆ ತನ್ನ ಜಮೀನಿನಲ್ಲಿ ಕೆಲಸ ಮಾಡುವುದು ಸರಿಯೇ? ಈ ರೀತಿ ಅಕ್ರಮವಾಗಿ ಏಕೆ ಕೆಲಸ ಮಾಡಿಸಿದ್ದೀಯಾ ಎಂದು ಕೇಳಿದ್ದಕ್ಕೆ ಚಂದ್ರಶೇಖರ್ ತನ್ನನ್ನು ಕುರಿತು ನಿನ್ನಮ್ಮನ್ನೇ ಕ್ಯಾಯಾ, ನಿನ್ನ ಹೆಂಡತಿನೇ ಕ್ಯಾಯಾ ನಿನ್ನನ್ನು ಈಗಲೇ ಸಾಯಿಸ ಬೇಕಾಗಿತ್ತು ಈ ಜಮೀನಿನ ವಿಚಾರಕ್ಕೆ ಬರುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಆತನ ಬಳಿ ಇದ್ದ ಮಚ್ಚಿನಿಂದ ನನ್ನನ್ನು ಕೊಚ್ಚಿ ಕೊಲೆ ಮಾಡುವ ಉದ್ದೇಶದಿಂದ ನನ್ನನ್ನು ಓಡಿಸಿಕೊಂಡು ಬಂದನು ಆಗ ತಾನು ಆತನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು, ಅದೇ ಸಮಯಕ್ಕೆ ಅಲ್ಲಿದ್ದ ಕಟಮಾಚನಹಳ್ಳಿ ಗ್ರಾಮದ ವಾಸಿ ಕೆ.ಸಿ ಮಂಜುನಾಥ ಬಿನ್ ಚಿನ್ನಪ್ಪಯ್ಯ ಮತ್ತು ಚಿನ್ನಸಂದ್ರ ಗ್ರಾಮದ ವಾಸಿ ಸಿ.ವಿ ಆಂಜಪ್ಪ ರವರುಗಳು ನನ್ನನ್ನು ಆತನಿಂದ ರಕ್ಷಿಸಿ ದ್ವಿಚಕ್ರ ವಾಹನದಲ್ಲಿ ಕಳುಹಿಸಿಕೊಟ್ಟರು. ಆಗ ಚಂದ್ರಶೇಖರ್ ನನ್ನನ್ನು ಕುರಿತು ಈ ದಿನ ತಪ್ಪಿಸಿಕೊಂಡಿದ್ದೀಯಾ ಇನ್ನೊಂದು ಬಾರಿ ಸಿಕ್ಕರೆ ನಿನಗೆ ಒಂದು ಗತಿ ಕಾಣಿಸುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿದನು. ನಂತರ ತನಗೆ ಮೈ ಕೈಗೆ ನೋವುಂಟಾಗಿದ್ದರಿಂದ ತಾನು ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇನೆ. ಆದ್ದರಿಂದ ತನ್ನ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ, ಜಮೀನಲ್ಲಿದ್ದ ಕಾಂಪೌಂಡ್ ಗೋಡೆಯನ್ನು ದ್ವಂಸ ಮಾಡಿ ಟ್ರಂಚ್ ಹೊಡೆದು ನಷ್ಟವನ್ನುಂಟು ಮಾಡಿ, ಕೊಲೆ ಮಾಡಲು ಪ್ರಯತ್ನಿಸಿರುವ ಚಂದ್ರಶೇಖರ್ ವಿರುದ್ದ ಕಾನೂನು ಕ್ರಮ ಜರುಸಬೇಕೆಂದು ಕೋರಿರುತ್ತಾರೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.84/2021 ಕಲಂ. 302  ಐ.ಪಿ.ಸಿ:-

     ದಿನಾಂಕ:27/02/2021 ರಂದು ಬೆಳಿಗ್ಗೆ 11.00 ಗಂಟೆಗೆ ಶ್ರೀಮತಿ ಆಂಜಮ್ಮ ಕೊಂ ನಾಗಪ್ಪ, 68 ವರ್ಷ, ನಾಯಕರು, ಗೃಹಿಣಿ, ಬ್ರಾಹ್ಮಣರದಿನ್ನೆ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮಗೆ ಇಬ್ಬರು ಗಂಡು ಮತ್ತು 3 ಜನ ಹೆಣ್ಣು ಮಕ್ಕಳಿರುತ್ತಾರೆ. 1ನೇ ಮುನಿರತ್ನಮ್ಮ, 2ನೇ ಮುನಿಲಕ್ಷ್ಮಮ್ಮ, 3ನೇ ನರಸಿಂಹ, 4ನೇ ಮಂಜುಳಮ್ಮ ಹಾಗೂ 5ನೇ ರವಿ ಎಂಬುವರಾಗಿರುತ್ತಾರೆ. ಎಲ್ಲಾ ಮಕ್ಕಳಿಗೂ ಮದುವೆಗಳಾಗಿದ್ದು, ಎಲ್ಲರೂ ಬೇರೆ ಬೇರೆಯಾಗಿ ವಾಸವಾಗಿರುತ್ತಾರೆ. ತಾನು ಮತ್ತು ತನ್ನ ಗಂಡ ನಾಗಪ್ಪ ರವರು ಸಹ ಬೇರೆಯಾಗಿ ವಾಸವಾಗಿರುತ್ತೇವೆ. ತನ್ನ ಕೊನೆಯ ಮಗನಾದ ರವಿ ಎಂಬುವನಿಗೆ ಈಗ್ಗೆ ಸುಮಾರು 8 ವರ್ಷಗಳ ಹಿಂದೆ ಚಿಂತಾಮಣಿ ಟೌನ್ ವಿನಾಯಕ ನಗರದ ಮಂಜುನಾಥ ರವರ ಮಗಳಾದ ಶಶಿಕಲಾ ಎಂಬುವರೊಂದಿಗೆ ಮದುವೆಯಾಗಿದ್ದು ಅವರಿಗೆ ಸುಮಾರು ವರ್ಷಗಳಿಂದ ಮಕ್ಕಳಾಗದೆ ಇದ್ದು ಇತ್ತೀಚಿಗೆ ಒಂದು ಹೆಣ್ಣು ಮಗುವಾಗಿದ್ದು, ಆಕೆಗೆ 9 ತಿಂಗಳ ವಯಸ್ಸಾಗಿದ್ದು ಕುಸುಮ ಎಂದು ಹೆಸರಿಟ್ಟಿರುತ್ತಾರೆ. ಈಗ್ಗೆ ಸುಮಾರು 3 ತಿಂಗಳ ಹಿಂದೆ ತನ್ನ ಸೊಸೆ ಶಶಿಕಲಾರವರು ಅನಾರೋಗ್ಯದಿಂದ ಮರಣ ಹೊಂದಿರುತ್ತಾಳೆ. ಅಂದಿನಿಂದ ತನ್ನ ಮಗ ರವಿ ಒಬ್ಬನೇ ಮಗುವಿನ ಲಾಲನೆ ಪಾಲನೆ ಮಾಡಿಕೊಂಡಿದ್ದನು. ಆದರೆ ಮಗುವಿಗೆ ತಾಯಿಯ ಆಸರೆ ಇಲ್ಲವೆಂದು ಮನನೊಂದಿದ್ದನು. ಆದ್ದರಿಂದ ತಾವೆಲ್ಲರೂ ಸೇರಿ ತನ್ನ ಮಗನಾದ ರವಿಗೆ ದಿನಾಂಕ: 14/02/2021 ರಂದು ಆಂದ್ರಪ್ರದೇಶದ ಹಿಂದೂಪುರ ಬಳಿ ಇರುವ ಪೂಲಕುಂಟ ಗ್ರಾಮದ ವಾಸಿಯಾದ ಸೋಮಯ್ಯ ರವರ ಮಗಳಾದ ಶ್ರಾವಣಿ ಎಂಬುವರೊಂದಿಗೆ 2ನೇ ಮದುವೆ ಮಾಡಿರುತ್ತೇವೆ. ಆದರೂ ಸಹ ತನ್ನ ಮಗ ಹಿರಿಯ ಹೆಂಡತಿಯನ್ನು ನೆನಪಿಸಿಕೊಂಡು ಆಗಾಗ ಬೇಜಾರು ಮಾಡಿಕೊಳ್ಳುತ್ತಿದ್ದನು.        ದಿನಾಂಕ: 26/02/2021 ರಂದು ರಾತ್ರಿ ಸುಮಾರು 9.30 ಗಂಟೆಯಲ್ಲಿ ಕುಸುಮ ಅಳುತ್ತಿದ್ದು ತನ್ನ ಮಗ ರವಿ ಮಗುವನ್ನು ಎತ್ತಿಕೊಂಡು ಹೊರಗಡೆ ಸುತ್ತಾಡಿಕೊಂಡು ಬರುವುದಾಗಿ ಹೇಳಿ ಹೋದವನು ಮನೆಗೆ ವಾಪಸ್ಸು ಬಂದಿರುವುದಿಲ್ಲ. ತಾವು ತಮ್ಮ ಗ್ರಾಮದ ಸುತ್ತಲೂ ಹುಡುಕಾಡಲಾಗಿ ರವಿ ಮತ್ತು ಮಗು ಸಿಕ್ಕಿರುವುದಿಲ್ಲ.  ನಂತರ ಮಾರನೇ ದಿನ ಅಂದರೆ ದಿನಾಂಕ: 27/02/2021 ರಂದು ಬೆಳಿಗ್ಗೆ ಸುಮಾರು 07.30 ಗಂಟೆ ಸಮಯದಲ್ಲಿ ಗಡದಾಸನಹಳ್ಳಿ ಗ್ರಾಮದ ಬಳಿ ಇರುವ ವೆಂಕಟೇಶಗೌಡ ರವರ ಕೃಷಿಹೊಂಡಾದಲ್ಲಿ ತಂದೆ ಮತ್ತು ಮಗು ಬಿದ್ದು ಸತ್ತು ಹೋಗಿರುವ ವಿಚಾರ ತಿಳಿದು ಬಂದಿದ್ದು ತಾನು ಮತ್ತು ತಮ್ಮ ಮನೆಯವರು ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿತ್ತು. ತನ್ನ ಮಗ ರವಿ ಮತ್ತು ಮೊಮ್ಮಗಳಾದ 9 ತಿಂಗಳ ಕುಸುಮ ರವರ ಮೃತದೇಹಗಳು ನೀರಿನಲ್ಲಿ ಕಾಣಿಸುತ್ತಿದ್ದವು ಕೃಷಿಹೊಂಡದ ಪಕ್ಕದಲ್ಲಿ ಎರಡು ವಿಷದ ಬಾಟಲುಗಳು, ಒಂದು ಮದ್ಯದ ಪಾಕೆಟ್ ಮತ್ತು ಒಂದು ಪ್ಲಾಸ್ಟಿಕ್ ಬಾಟಲ್ ಇರುತ್ತೆ. ನಂತರ ತಾವು ಅಲ್ಲಿದ್ದ ಜನರ ಸಹಾಯದಿಂದ ಮೃತ ದೇಹಗಳನ್ನು ನೀರಿನಿಂದ ಹೊರಕ್ಕೆ ತೆಗೆದು ಯಾವುದೋ ವಾಹನದಲ್ಲಿ ಚಿಂತಾಮಣಿ ಸಕರ್ಾರಿ ಆಸ್ಪತ್ರೆಗೆ ರವಾನಿಸಿರುತ್ತೇವೆ. ತನ್ನ ಮಗ ರವಿ ರವರು ತನ್ನ ಮೊದಲನೆ ಹೆಂಡತಿ ಶಶಿಕಲಾ ಮೃತಪಟ್ಟಿರುವ ವಿಚಾರದಲ್ಲಿ ತನ್ನ ಜೀವನದಲ್ಲಿ ಜಿಗುಪ್ಸೆ ಹೊಂದಿ ತಾನು ಮತ್ತು ಮಗು ಸತ್ತುಹೋಗಬೇಕೆಂದು ತೀರ್ಮಾನಿಸಿಕೊಂಡು ದಿನಾಂಕ: 26/02/2021 ರಂದು  ರಾತ್ರಿ  ತನ್ನ  ಬಾಬತ್ತು ಕೆಎ-05 ಎಂಡಿ-5095 ನೊಂದಣಿ  ಸಂಖ್ಯೆಯ  ಇಂಡಿಕಾ  ಕಾರಿನಲ್ಲಿ  ಮಗುವಿನೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ತಾನು ತೆಗೆದುಕೊಂಡು ಹೋಗಿದ್ದ ವಿಷದ ಬಾಟಲಿಗಳಲ್ಲಿನ ವಿಷವನ್ನು ಪ್ಲಾಸ್ಟಿಕ್ ಬಾಟಲಿಗೆ ಹಾಕಿ ಮಗುವಿಗೆ ವಿಷವನ್ನು ಕುಡಿಸಿ, ಮಗುವನ್ನು ನೀರಿಗೆ ಎಸೆದು ಕೊಲೆ ಮಾಡಿ, ತಾನು ಸಹ ವಿಷವನ್ನು ಮದ್ಯದ ಪಾಕೆಟ್ ನಲ್ಲಿ ಬೆರೆಸಿ ಕುಡಿದು ಕೃಷಿಹೊಂಡದ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾನೆ. ಆದ್ದರಿಂದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.23/2021 ಕಲಂ. 457,380  ಐ.ಪಿ.ಸಿ:-

     ದಿನಾಂಕ 26-02-2021 ರಂದು ಮದ್ಯಾಹ್ನ 03.00 ಗಂಟೆಗೆ ಪಿರ್ಯಾಧಿದಾರರಾದ ಭಾಗ್ಯಮ್ಮ ಕೋಂ ಆನಂದ, 45 ವರ್ಷ, ವಕ್ಕಲಿಗರು, ಅಂಗನವಾಡಿ ಕಾರ್ಯಕರ್ತೆ, ವಾಸ ವೆಂಕಟಾಪುರ ಗ್ರಾಮ, ಚೇಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡಂತೆ ವಾಸವಾಗಿದ್ದು, ಚಿಂತಾಮಣಿ ತಾಲ್ಲೂಕು ಹೊಸಹುಡ್ಯ ಗ್ರಾಮದ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ 26 ವರ್ಷಗಳಿಂದ ಕೆಲಸ ಮಾಡುತ್ತಿರುತ್ತೇನೆ. ಸಹಾಯಕರಾಗಿ ಷಾಹೀನಾ ಕೋಂ ಬಾಬಾಜಾನ್ ರವರು ಕೆಲಸ ಮಾಡುತ್ತಿರುತ್ತಾರೆ. ದಿನಾಂಕ 22/02/2021 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಅಂಗನವಾಡಿ ಕೇಂದ್ರದ ಬೀಗ ಹೊಡೆದು  ಅದರಲ್ಲಿನ ಭಾರತ್ ಗ್ಯಾಸ್ ಅಡುಗೆ ಅನಿಲ ಸಿಲೆಂಡರ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ದಿನಾಂಕ 23/02/2021 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ನಮ್ಮ ಅಂಗನವಾಡಿಯ ಅಡುಗೆ ಸಹಾಯಕಿ ಮತ್ತು ಗ್ರಾಮಸ್ಥರಾದ ಬಾಬು ಬಿನ್ ಕೃಷ್ಣಾರೆಡ್ಡಿ, ಅನಿಲ್ ಬಿನ್ ಆರ್.ಟಿ. ಪ್ರಸಾದ್ ರೆಡ್ಡಿ ರವರು ಅಂಗನವಾಡಿಯಲ್ಲಿ ಸಿಲೆಂಡರ್ ಕಳುವಾಗಿರುವ ಬಗ್ಗೆ ನೋಡಿ ನನಗೆ ವಿಚಾರ ತಿಳಿಸಿದ್ದು, ಕೂಡಲೇ ತಾನು ಬಂದು ನೋಡಲಾಗಿ ಯಾರೋ ರಾತ್ರಿ ವೇಳೆಯಲ್ಲಿ ಅಡುಗೆ ಕೋಣೆಯಲ್ಲಿನ ಭಾರತ್ ಗ್ಯಾಸ್ ಅಡುಗೆ ಸಿಲಿಂಡರ್ ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಸಿಲಿಂಡರ್ ಬೆಲೆ 2500/- ರೂ ಆಗಿರುತ್ತದೆ. ಸಿಲೆಂಡರ್ ಬಗ್ಗೆ ವಿಚಾರ ಮಾಡಿ ನಮ್ಮ ಇಲಾಖಾ ಮೇಲಾಧೀಕಾರಿಗಳಲ್ಲಿ ವಿಚಾರ ತಿಳಿಸಿ ಈ ದಿನ ತಡವಾಗಿ ದೂರು ನೀಡುತ್ತಿದ್ದು,  ಕಳುವು ಮಾಡಿದ ಆರೋಪಿತರನ್ನು ಪತ್ತೆ ಮಾಡಿ ಕಳವಾದ ಸಿಲೆಂಡರ್ ನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.    

ಇತ್ತೀಚಿನ ನವೀಕರಣ​ : 27-02-2021 04:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080