Feedback / Suggestions

1. ಚೇಳೂರು ಪೊಲೀಸ್ ಠಾಣೆ ಮೊ.ಸಂ. 91/2021 ಕಲಂ. 323,324,504,506 ಐಪಿಸಿ :-

    ದಿನಾಂಕ 25-06-2021 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನನಗೆ ಶಿಲ್ಪ ಮತ್ತು ಶಶಿಕಲಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು ಶಿಲ್ಪಳನ್ನು ಚೇಳೂರು ಗ್ರಾಮದ ಮಾರಪ್ಪ ರೆಡ್ಡಿ ಎಂಬುವವರ ಮಗನಾದ ಬಾಸ್ಕರ್ ಎಂಬುವವರಿಗೆ ಸುಮಾರು 6 ವರ್ಷಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದು ಶಿಲ್ಪಳಿಗೆ 3ರು ಜನ ಗಂಡು  ಮಕ್ಕಳಿರುತ್ತಾರೆ . ನನ್ನ ಮಗಳು ಶಿಲ್ಪಳಿಗೆ   9 ತಿಂಗಳ ಹಿಂದೆ ಹೆರಿಗೆಯಾಗಿದ್ದ ಕಾರಣ ನಾನು ನನ್ನ ಮಗಳ ಹಾರೈಕೆಗೆ ಬಂದಿದ್ದು ದಿನಾಂಕ 24-09-2021 ರಂದು ನನ್ನ ಮಗಳು ಮತ್ತು ಅಳಿಯ ಯಾವುದೋ ವಿಚಾರಕ್ಕೆ ಗಲಾಟೆ ಮಾಡಿ ಕೊಳ್ಳುತ್ತಿದ್ದು ನನ್ನ ಮಗಳನ್ನು ನನ್ನ ಅಳಯನಾದ ಭಾಸ್ಕರ್  ಹಿಡಿದುಕೊಂಡು  ಹೊಡೆಯುತ್ತಿರುವಾಗ  ನಾನು ಇಬ್ಬರಿಗೂ ಸಮಾಧಾನ ಮಾಡುತ್ತಿದ್ದು ಈ ಸಮಯದಲ್ಲಿ ಭಾಸ್ಕರ್ ರವರ ಅಣ್ಣನಾದ ರೆಡ್ಡಪ್ಪನು ಏಕಾ-ಏಕಿ ಬಂದು ನನ್ನ ತಮ್ಮನ ಮೇಲೆ ಏಕೆ ಗಲಾಟೆ ಮಾಡುತ್ತಿರುವೆ ಎಂದು ನನ್ನ ಮಗಳಿಗೆ ಹೊಡೆಯುತ್ತಿರುವಾಗ  ಅಡ್ಡ ಹೋದ ನನಗೆ ರೆಡ್ಡಪ್ಪ ರವರು ಅಲ್ಲಿಯೆ ಇದ್ದ ಕಟ್ಟಿಗೆಯಿಂದ ಹೊಡೆದಿದ್ದು  ನನ್ನ ಅಳಿಯನಾದ ಬಾಸ್ಕರ್ ರವರು ಸಹ ನನಗೆ ಕೈಗಳಿಂದ ಹೊಡೆದಿರುತ್ತಾರೆ  ರೆಡ್ಡಪ್ಪ ರವರು ನನಗೆ ಆವಾಚ್ಯ ಶಬ್ದಗಳಿಂದ  ಬೈದು  ನಿಮ್ಮನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾನೆ ನಂತರ ನಾನು ಮತ್ತು ನನ್ನ ಮಗಳು ಚೇಳೂರು ಸರ್ಕಾರಿ ಆಸ್ವತ್ರೆಗೆ ಹೋಗಿ ಚಿಕಿತ್ಸೆಪಡೆದಿಕೊಂಡಿರುತ್ತೆವೆ  ಆದ್ದರಿಂದ ನನಗೆ ಹೊಡೆದಿರುವ ಬಾಸ್ಕರ್ ಮತ್ತು ರೆಡ್ಡಪ್ಪ ರವರ ವಿರುದ್ದ ಕಾನೂನು ರೀತ್ಯ ಕ್ರಮಕೈಗೊಳ್ಳುವಂತೆ ಕೋರಿ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 422/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ 1965 :-

    ದಿನಾಂಕ: 25/09/2021 ರಂದು ಮದ್ಯಾಹ್ನ 12.45 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಶ್ರೀ ವೇಣು, ಸಿ.ಹೆಚ್.ಸಿ-110 ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 25/09/2021 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಶ್ರೀ ರಾಜಣ್ಣ.ಪಿ.ಐ ರವರು ತನಗೆ ಹಾಗೂ ತಮ್ಮ ಠಾಣೆಯ ಸಿ.ಹೆಚ್.ಸಿ-198 ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು, ಅದರಂತೆ ತಾವುಗಳು ಈ ದಿನ ಬೆಳಿಗ್ಗೆ ಸುಮಾರು 10.30 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕಿನ ನಲ್ಲರಾಳ್ಳಹಳ್ಳಿ ಕ್ರಾಸ್ ನಲ್ಲಿ ಗಸ್ತಿನಲ್ಲಿದ್ದಾಗ ನಲ್ಲರಾಳಹಳ್ಳಿ ಕ್ರಾಸ್ ನ ಆಂಜಪ್ಪ ಬಿನ್ ನಾರಾಯಣಪ್ಪ ಎಂಬುವವರು ಅವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯಂತೆ ಪಂಚರೊಂದಿಗೆ ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಲಾಗಿ ಮದ್ಯಪಾನ ಮಾಡುತ್ತಿದ್ದವರು ಸ್ಥಳದಿಂದ ಓಡಿ ಹೋಗಿದ್ದು, ಚಿಲ್ಲರೆ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆಸಾಮಿಯ ಹೆಸರು ಹಾಗೂ ವಿಳಾಸ ವಿಚಾರಿಸಲಾಗಿ ಆಂಜಪ್ಪ ಬಿನ್ ನಾರಾಯಣಪ್ಪ, 33 ವರ್ಷ, ಚೆನ್ನಾದಾಸರ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ನಲ್ಲರಾಳ್ಳಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ಸ್ಥಳದಲ್ಲಿ ಪರಿಶೀಲಿಸಲಾಗಿ 1).Haywards Cheers Whisky ಯ 90 ML ನ ಮದ್ಯ ತುಂಬಿದ 18 ಟೆಟ್ರಾ ಪಾಕೇಟ್ ಗಳು, 2).2 ಪ್ಲಾಸ್ಟಿಕ್ ಗ್ಲಾಸ್ ಗಳು, 3). Haywards Cheers Whisky ಯ 90 ML ನ 2 ಖಾಲಿ ಟೆಟ್ರಾ ಪಾಕೇಟ್ ಗಳು, 4). ಒಂದು ಲೀಟರ್ ನ ಒಂದು ಖಾಲಿ ನೀರಿನ ಬಾಟೆಲ್ ಇರುತ್ತೆ. ವಶಪಡಿಸಿಕೊಂಡ ಒಟ್ಟು ಮದ್ಯ 01 ಲೀಟರ್ 620 ML ಇದ್ದು, ಬೆಲೆ ಸುಮಾರು 632/- ರೂಗಳಾದ್ದಾಗಿರುತ್ತೆ. ನಂತರ ಮೇಲ್ಕಂಡ ಮಾಲುಗಳನ್ನು ಬೆಳಿಗ್ಗೆ 10.45 ಗಂಟೆಯಿಂದ ಬೆಳಿಗ್ಗೆ 11.45 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮುಖಾಂತರ ಅಮಾನತ್ತು ಪಡಿಸಿಕೊಂಡು ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ಯಾವುದೇ ಪರವಾನಿಗೆಯನ್ನು ಪಡೆಯದೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಂಜಪ್ಪ ಬಿನ್ ನಾರಾಯಣಪ್ಪ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

3. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 138/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ 1965 :-

    ದಿನಾಂಕ:25/04/2021 ರಂದು ಬೆಳಗ್ಗೆ 11-30 ಗಂಟೆಗೆ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಲು ಠಾಣೆಯ ಸಿಬ್ಬಂದಿಯಾದ ಸಿ.ಹೆಚ್.ಸಿ  22  ಶ್ರೀಮತಿ ಲಕ್ಷ್ಮೀ ಮತ್ತು ಸಿ.ಪಿ.ಸಿ 490 ಸೋಮಶೇಖರ್ ರವರುಗಳು ಮತ್ತು ಜೀಫ್ ಚಾಲಕರಾಗಿ ಎ.ಪಿ.ಸಿ 94  ಬೈರಪ್ಪ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಬೈಯಪ್ಪನಹಳ್ಳಿ, ರಾಮಲಿಂಗಾಪುರ , ಬಶೆಟ್ಟಿಹಳ್ಳಿ ಕ್ರಾಸ್, ದೊಡ್ಡತೇಕಹಳ್ಳಿ, ಚಿಕ್ಕತೇಕಹಳ್ಳಿ, ಅಜ್ಜಕದೀರೇನಹಳ್ಳಿ, ದ್ಯಾವಪ್ಪನಗುಡಿ,  ಕನ್ನಪ್ಪನಹಳ್ಳಿ, ತರಬಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿ ಕೊಂಡು ಮಧ್ಯಾಹ್ನ 12-30 ಗಂಟೆಗೆ  ಸದ್ದಹಳ್ಳಿ ಯ ಕಡೆಗ ಬಂದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ  ಸದ್ದಹಳ್ಳಿ  ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿಯು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಸದರಿ ಆಸಾಮಿಯ ಮೇಲೆ ದಾಳಿ ಮಾಡುವ ವಿಚಾರವನ್ನು ತಿಳಿಸಿ ಪಂಚರಾಗಿರಲು ಕೋರಿದರ ಮೇರೆಗೆ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ಪಂಚರೊಂದಿಗೆ ಸದ್ದಹಳ್ಳಿ ಗ್ರಾಮದ  ವೆಂಕಟಲಕ್ಷ್ಮಮ್ಮ ಕೊಂ ದ್ಯಾವಪ್ಪ ರವರ ಅಂಗಡಿಯ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ವೆಂಕಟಲಕ್ಷಮ್ಮ ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿದ್ದು ಸದರಿ ಆಸಾಮಿಯ ಮೇಲೆ ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ಅಷ್ಟರಲ್ಲಿ ಅಂಗಡಿಯ ಬಳಿಗೆ  ಸದ್ದಹಳ್ಳಿ ಗ್ರಾಮಸ್ಥರು ಸೇರಿದ್ದು ಗ್ರಾಮಸ್ಥರನ್ನು ವಿಚಾರಣೆ ಮಾಡುತ್ತಿದ್ದಾಗ ಜನರ ಮಧ್ಯದಲ್ಲಿದ್ದ ಅಂಗಡಿಯ ಮಾಲೀಕಳಾದ ವೆಂಕಟಲಕ್ಷ್ಮಮ್ಮ ಕೊಂ ದ್ಯಾವಪ್ಪ ರವರು ರವರು ಸಹ ಅಲ್ಲಿಂದ ಪರಾರಿಯಾಗಿರುತ್ತಾರೆ. ನಂತರ ಅಂಗಡಿಯ ಮಾಲೀಕರ  ಹೆಸರು ಮತ್ತು ಪೂರ್ಣ ವಿಳಾಸವನ್ನು ತಿಳಿಯಲಾಗಿ ವೆಂಕಟಲಕ್ಷ್ಮಮ್ಮ ಕೊಂ ದ್ಯಾವಪ್ಪ,40 ವರ್ಷ, ವಕ್ಕಲಿಗರು,ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಸದ್ದಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಪೋನ್ ನಂಬರ್:9108792437 ಎಂತ ತಿಳಿದು ಬಂದಿರುತ್ತೆ. ನಂತರ ಪಂಚರ ಸಮಕ್ಷಮ ಅಂಗಡಿ ಮುಂಭಾಗದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ,ಎಲ್ ನ ORIGINAL CHOICE DELUX WHISKYಯ  15 ಮಧ್ಯ ತುಂಬಿದ ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು 1350 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 526.95 ರೂ ಆಗಿದ್ದು  ಸದರಿ ಮಧ್ಯ ತುಂಬಿದ ಪ್ಯಾಕೇಟ್ ಗಳನ್ನು ಮತ್ತು ಸ್ಥಳದಲ್ಲಿಯೇ ಬಿದಿದ್ದ 1 ಖಾಲಿ 90 ಎಂ,ಲ್, ನ  ORIGINAL CHOICE DELUX WHISKYಯ ಟೆಟ್ರಾ ಪ್ಯಾಕೇಟ್ ನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಮತ್ತು ಒಂದು ಲೀಟರ್ ನ ಖಾಲಿ ವಾಟರ್ ಬಾಟೆಲ್ ನ್ನು ಮಧ್ಯಾಹ್ನ 12-45  ಗಂಟೆಯಿಂದ ಮಧ್ಯಾಹ್ನ 13-45  ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯು ಪರಾರಿಯಾಗಿದ್ದು ಮುಂದಿನ ಕ್ರಮಕ್ಕಾಗಿ ಮಾಲು ಮತ್ತು ಪಂಚನಾಮೆಯೊಂದಿಗೆ ಮಧ್ಯಾಹ್ನ 14-30  ಗಂಟೆಗೆ  ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಸ್ವತಃ ಮೊ.ಸಂಖ್ಯೆ:138/2021 ಕಲಂ:15(A),32(3) K,E ACT ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 262/2021 ಕಲಂ. 279 ಐಪಿಸಿ :-

    ದಿನಾಂಕ:25/09/2021 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿ ಕೆ.ವಿ ಕುಮಾರರೆಡ್ಡಿ ಬಿನ್ ರಾಮಚಂದ್ರ ರೆಡ್ಡಿ, 62 ವರ್ಷ, ಒಕ್ಕಲಿಗರು, ಕೋಳಿ ವ್ಯಾಪಾರ, ವಾಸ ಮುನೇಶ್ವರ ಬಡಾವಣೆ, ಗೌರಿಬಿದನೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರ ಬಾಬತ್ತು ಕೆ.ಎ-40, ಬಿ-0321 ಬೊಲೋರೋ ವಾಹನದ ಚಾಲಕ ಹರಿಪ್ರಸಾದ್ ರವರು ದಿನಾಂಕ:25/09/2021 ರಂದು ಬೆಳಿಗ್ಗೆ 5-00 ಗಂಟೆಯಲ್ಲಿ ಗೌರಿಬಿದನೂರಿನಿಂದ ಹಿಂದೂಪುರಕ್ಕೆ ಕೋಳಿಯನ್ನು ಲೋಡ್ ಮಾಡಿಕೊಂಡು ಹೊಗುತ್ತಿರುವಾಗ ಗೌರಿಬಿದನೂರು ತಾಲ್ಲೂಕಿನ ದೊಡ್ಡಕುರುಗೋಡು ಗ್ರಾಮದ ಇಂಡಿಯನ್ ಪೆಟ್ರೋಲ್ ಬಂಕ್ ಬಳಿಯ ರಸ್ತೆಯ ಮದ್ಯದಲ್ಲಿ ಆಕಸ್ಮಿಕವಾಗಿ ನಾಯಿ ಅಡ್ಡ ಬಂದ ಕಾರಣ ನಾಯಿಯನ್ನು ತಪ್ಪಿಸಲು ಹೋಗಿ ರಸ್ತೆಯ ಬಲಭಾಗದ ಚರಂಡಿಗೆ ಕೆ.ಎ-40, ಬಿ-0321 ಬೊಲೆರೋ ವಾಹನ ಪಲ್ಟಿ ಹೊಡೆದು ಬೊಲೆರೋ ವಾಹನದ ಎರಡೂ ಡೋರ್ ಗಳು, ಮುಂದಿರುವ ಇಂಜಿನ್, ಮೇಲ್ಬಾಗ ಇತ್ಯಾದಿ ಸಂಪೂರ್ಣವಾಗಿ ಜಖಂ ಆಗಿರುತ್ತದೆಂದು ಚಾಲಕ ಪಿರ್ಯಾದಿದಾರರಿಗೆ ತಿಳಿಸಿರುತ್ತಾರೆ. ಚಾಲಕನಿಗೆ ಯಾವುದೇ ಪ್ರಾಣಾಪಾಯವಾಗಿರುವುದಿಲ್ಲ. ಪಿರ್ಯಾದಿದಾರರ ಬಾಬತ್ತು ಕೆ.ಎ-40, ಬಿ-0321 ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತವನ್ನುಂಟು ಮಾಡಿ ವಾಹನವನ್ನು ಜಖಂಗೊಳಿಸಿದ ಚಾಲಕ ಹರಿಪ್ರಸಾದ್ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತದೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 263/2021 ಕಲಂ. 504,506 ಐಪಿಸಿ :-

    ದಿನಾಂಕ 25-09-2021 ರಂದು 19-00 ಗಂಟೆಗೆ ನ್ಯಾಯಾಲಯದ ಪಿ.ಸಿ. 205 ಮೋಹನ್ ರವರು ಘನ ನ್ಯಾಯಾಲಯದಿಂದ ಎನ್.ಸಿ.ಆರ್. ನಂ.429/2021 ರಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲು ಅನುಮತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ  ಅರ್ಜಿದಾರರಾದ ಸಿ.ಎಸ್. ಮೋಹನ್ ಬಿನ್ ಸಿ.ವಿ.ಶ್ರೀಧರ ಮೂರ್ತಿ 73 ವರ್ಷ, ಸಕ್ಕರೆ ಕಾರ್ಖಾನೆ ಕಾರ್ಮಿಕರ ಸಂಘದ ಅಧ್ಯಕ್ಷರು, ವಾಸ ನಂ. ಏ 158. ವಿಧ್ಯಾನಗರ ಗಣೇಶ ದೇವಸ್ಥಾನದ ಹತ್ತಿರ, ಗೌರಿಬಿದನೂರು ಟೌನ್ ರವರು ಠಾಣೆಗೆ ಹಾಜರಾಗಿ ಗೌರಿಬಿದನೂರು ತಾಲ್ಲೂಕು ಸಕ್ಕರೆ ಕಾರ್ಖಾನೆಯು ಕಾರಣಾಂತರಗಳಿಂದ ನಿಂತು ಹೋಗಿದ್ದು ಅನೇಕ ಕಾರ್ಮಿಕರು ನಿರುದ್ಯೋಗಿಗಳಾಗಿರುತ್ತಾರೆ. ಫ್ಯಾಕ್ಟರಿಯ ನೌಕರರಿಗೆ ಬರಬೇಕಾದ ವೇತನ ಮತ್ತು ಇತರೇ ಸೌಲಭ್ಯಗಳನ್ನು ಫ್ಯಾಕ್ಟರಿಯ ಮೇನೇಜ್ ಮೆಂಟ್ ನವರು ಕೊಡದೇ ಇದ್ದ ಕಾರಣ ನಾವು ಅನೇಕ ಪ್ರಕರಣಗಳನ್ನು ದಾಖಲಿಸಿರುತ್ತೇವೆ. ಪ್ರಕರಣಗಳು ಇತ್ಯರ್ಥವಾಗುವರೆಗೆ ಯಂತ್ರೋಪಕರಣಗಳನ್ನು ಮಾರಾಟವನ್ನು ಮಾಡಬಾರದೆಂದು  ತೆಯಾಜ್ಞೆಇರುತ್ತೆ.  ದಿನಾಂಕ 14-09-2021 ರಂದು ಕಂಪನಿಯ ಮುಖ್ಯಸ್ಥರಾದ ಎಸ್. ಲೋಕೇಶ್ ರವರು ನ್ಯಾಯಾಲಯದ ತಡೆಯಾಜ್ಞೆಯನ್ನು ಲೆಕ್ಕಿಸದೇ ಸಕ್ಕರೆ ಕಾರ್ಖಾನೆಯ ಯಂತ್ರೋಪಕರಣಗಳನ್ನು ಮಾರಾಟವನ್ನು ಮಾಡಿಕೊಂಡು ಪರಾರಿಯಾಗುವ ವಿಚಾರ ತಿಳಿದು ಮಧ್ಯಾಹ್ನ ಸುಮಾರು 03-00 ಗಂಟೆಗೆ  ನಾನು ಮತ್ತು ಕೆಲವು ಕಾರ್ಮಿಕರು ಸಕ್ಕರೆ ಕಾರ್ಖಾನೆಯ ಬಳಿಗೆ  ಹೋಗಿ ಸದರಿ ಲೋಕೇಶ್ ರವರನ್ನು  ನಮಗೆ ಬರಬೇಕಾದ  ವೇತನ ಮತ್ತು ಇತರೇ ಸೌಲಭ್ಯಗಳನ್ನು ಕೊಡುವವರೆಗೂ ಕಾರ್ಖಾನೆಯ ವಸ್ತುಗಳನ್ನು ಮಾರಾಟವನ್ನು ಮಾಡುವಂತಿಲ್ಲ ಎಂದಾಗ ಏಕಾಏಕಿ  ನನ್ನನ್ನು ಅವಾಚ್ಯ ಶಬ್ದಗಳಿಂದ  ನಿಂದಿಸಿ  ನೀವು ಮತ್ತು  ನಿಮ್ಮ ಕಾರ್ಮಿಕರು ಫ್ಯಕ್ಟರಿಯ ಬಳಿಗೆ ಬಂದರೆ ಜೆ.ಸಿ.ಬಿಯಿಂದ ಹೊಡೆಯಿಸಿ ಎಲ್ಲರನ್ನು  ಸಾಯಿಸುತ್ತೇವೆಂದು  ಕೊಲೆ ಬೆದರಿಕೆ ಹಾಕಿರುತ್ತಾರೆ. ಯಾವ  ಲೋಫರ್  ಎಸ್.ಸಿ./ಎಸ್.ಟಿ. ಯವರನ್ನು ಕಟ್ಟಿಕೊಂಡು ಬಂದು ಏನೇನೋ ಮಾತಾಡುತ್ತೀಯಾ, ಈ ಮೊದಲೆ ನಿನ್ನನ್ನು ಮುಗಿಸಲು ಪ್ಲಾನ್ ಮಾಡಿಸಿದ್ದು  ನೆನಪಿದೆಯಾ ಎಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ. ಜೊತೆಗೆ ನನ್ನನ್ನು ಕುರಿತು ಹೇ ನೀನು ಯಾವ ಸಂಘದ ಅಧ್ಯಕ್ಷನೋ  ನನ್ನಮಗನೇ ಹೋಗೋ  ಅದು ಏನು ಮಾಡಿಕೊಳ್ಳುತ್ತೀಯೋ  ನೋಡಿಯೇ ಬಿಡುತ್ತೇನೆಂದು ಅವಾಚ್ಯ ಶಬ್ದಗಳಿಂದ  ನಿಂದಿಸಿರುತ್ತಾನೆ. ಇದಕ್ಕೆಲ್ಲ ಅಸಿಸ್ಟೆಂಟ್ ಮೇನೇಜರ್ ಆಗಿರುವ ಅಮರನಾಥ್ ಬಿನ್ ವೆಂಕಟೇಶ ಶರ್ಮ ಇವರು ಲೋಕೇಶ್ ರವರಿಗೆ ಪ್ರಚೋದನೆಯನ್ನು ಮಾಡಿದ್ದು ಕಾರ್ಖಾನೆಯ ಯಂತ್ರೋಪಕರಣಗಳನ್ನು ಮಾರಾಟವನ್ನು ಮಾಡಲು ಪ್ರಯತ್ನಿಸುತ್ತಿರುವ 1) ಅಮರನಾಥ್ ಬಿನ್ ವೆಂಕಟೇಶ ಶರ್ಮ, ಮತ್ತು ಕಂಪನಿಯ ಮುಖ್ಯಸ್ಥರಾದ 2) ಎಸ್ ಲೋಕೇಶ್ ರವರ ವಿರುದ್ದ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರನ್ನು ಪಡೆದುಕೊಂಡು ಠಾಣಾ ಎನ್.ಸಿ.ಆರ್. ನಂ 429/2021 ರಂತೆ ನೊಂದಾಯಿಸಿಕೊಂಡಿದ್ದು ಪಿರ್ಯಾದಿದಾರರು ನೀಡಿರುವ ದೂರು ಕಲಂ 504, 506 ಐ.ಪಿಸಿ ಅಗಿದ್ದು ಸದರಿ ಕಲಂ ಗಳು ಅಸಂಜ್ಞೇಯ ಅಪರಾಧವಾಗಿರುವುದರಿಂದ  ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುವುದು.

 

6. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 102/2021 ಕಲಂ. 427,447 ಐಪಿಸಿ :-

    ದಿನಾಂಕ 25/09/2021 ರಂದು ಮದ್ಯಾಹ್ನ1.30 ಗಂಟೆಗೆ ಪಿರ್ಯಾಧಿದಾರರಾದ ಬಚ್ಚರೆಡ್ಡಿ ಬಿನ್ ಮುನಿವೆಂಕಟಪ್ಪ, 62 ವರ್ಷ, ವಕ್ಕಲಿಗ ಜನಾಂಗ, ಜಿರಾಯ್ತಿ,ವಾಸ ಮರಿನಾಯಕನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಮರಿನಾಯಕನಹಳ್ಳಿ ಗ್ರಾಮದ ಸರ್ವೆ ನಂ 89/ಪಿ28 ರ 0-30 ಗುಂಟೆ ಜಮೀನು ಈ ಹಿಂದೆ ಬಚ್ಚಿರೆಡ್ಡಿ ಬಿನ್ ಲೇಟ್ ಹುಚ್ಚಪ್ಪರವರ ಸ್ವತ್ತಾಗಿದ್ದು, ಈ ಸ್ವತ್ತನ್ನು ಸದರಿ ಬಚ್ಚಿರೆಡ್ಡಿ ಬಿನ್ ಲೇಟ್ ಹುಚ್ಚಪ್ಪ ಮತ್ತು ಅವರ ಕುಟುಂಬದವರಿಂದ ತಾನು ದಿನಾಂಕ 07/03/2001 ರಂದು ನೋಟರಿ ಜಿ.ಪಿ.ಎ ಮೂಲಕ ಪಡೆದುಕೊಂಡಿರುತ್ತೇನೆ. ಅಂದಿನಿಂದ ತಾನೇ ಜಮೀನಿನಲ್ಲಿ ಸ್ವಾದೀನಾನುಭವದಲ್ಲಿರುತ್ತೇನೆ. ಆದರೆ ಬಚ್ಚಿರೆಡ್ಡಿ ಬಿನ್ ಲೇಟ್ ಹುಚ್ಚಪ್ಪರವರು ಸದರಿ ಜಮೀನಿನ ವಿಚಾರವಾಗಿ ತಂಟೆ ತಕರಾರುಗಳನ್ನು ಉಂಟು ಮಾಡುತ್ತಿದ್ದು ಈ ಕಾರಣ ತಾನು ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ (ಹಿರಿಯಶ್ರೇಣಿ) ಚಿಂತಾಮಣಿ ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ :ಎಂ.ಎ6/2021 ರಂತೆ ಪ್ರಕರಣ ಹೂಡಿದ್ದು, ಪ್ರಕರಣ ಮುಂದುವರೆಯುತ್ತಿರುತ್ತದೆ. ಹಾಗೂ ಘನ ನ್ಯಾಯಾಲಯವು ತಡೆಯಾಜ್ಞೆಯನ್ನು ಸಹಾ ನೀಡಿರುತ್ತದೆ. ಆದರೆ ತನಗೆ ಜಿ.ಪಿ.ಎ ಮಾಡಿರುವ ಬಚ್ಚಿರೆಡ್ಡಿ ಬಿನ್ ಲೇಟ್ ಹುಚ್ಚಪ್ಪರವರು ದಿನಾಂಕ 16/09/2021 ರಂದು ರಾತ್ರಿ 08.00 ಗಂಟೆಯಲ್ಲಿ ತಮ್ಮ ಜಮೀನಿನಲ್ಲಿರುವ ಮನೆ ಕಟ್ಟಡದೊಳಗೆ ನಕಲಿ ಕೀ ಬಳಸಿ, ಅಕ್ರಮ ಪ್ರವೇಶ ಮಾಡಿ ಸದರಿ ಜಮೀನಿನಲ್ಲಿರುವ ಬೇವಿನ ಮರಗಳ ಸೊಪ್ಪನ್ನು ಕಟಾವು ಮಾಡಿರುತ್ತಾರೆ. ಆದ್ದರಿಂದ ತಾವುಗಳು ತಮ್ಮ ಜಮೀನಿನಲ್ಲಿರುವ ಮನೆ ಕಟ್ಟಡದೊಳಗೆ ನಕಲಿ ಕೀ ಬಳಸಿ, ಅಕ್ರಮ ಪ್ರವೇಶ ಮಾಡಿ , ಜಮೀನಿನಲ್ಲಿರುವ ಬೇವಿನ ಮರಗಳ ಸೊಪ್ಪನ್ನು ಕಟಾವು  ಮಾಡಿರುವವರ ವಿರುದ್ದಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

7. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 177/2021 ಕಲಂ. 143,147,148,324 ರೆ/ವಿ 149 ಐಪಿಸಿ :-

    ದಿನಾಂಕ: 26/09/2021 ರಂದು ಬೆಳಿಗ್ಗೆ 10-15 ಗಂಟೆ ಸಮಯದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಹೆಚ್.ಸಿ-137 ಮಂಜುನಾಥರವರು ಗಾಯಾಳು ಇಲಿಯಾಜ್ ಬಾಷ ಬಿನ್ ಚಾಂದ್ ಬಾಷ, 31 ವರ್ಷ, ಮುಸ್ಲೀಮರು, ಗಾರೆಕೆಲಸ, ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರ ಹೇಳಿಕೆಯನ್ನು ತಂದು ಹಾಜರುಪಡಿಸಿದ್ದನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ದಿನಾಂಕ: 25/09/2021 ರಂದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ನನ್ನ ತಮ್ಮ ಸೈಪು ಬಿನ್ ಮಹಬೂಬ್ ರವರಿಗೆ ಸಲೀಂ ರವರು ದೂರವಾಣಿ ಕರೆ ಮಾಡಿ ಸ್ವಲ್ಪ ಮಾತನಾಡಬೇಕು ಮನೆಯ ಬಳಿ ಬರಬೇಕೆಂದು ಹೇಳಿದನು. ಆಗ ನನ್ನ ತಮ್ಮ ಸೈಪು ಅವರ ಮನೆಯ ಬಳಿ ಹೋದನು. ಅಲ್ಲಿ ಅವರಿಬ್ಬರಿಗೂ ಮಾತಿಗೆ ಮಾತು ಬೆಳೆದು ಒಬ್ಬರನ್ನೊಬ್ಬರು ಪರಸ್ಪರ ಹೊಡೆದಾಡಿ ಕೊಳ್ಳುತ್ತಿರುವ ವಿಚಾರ ತಿಳಿದು ನಾನು ಸ್ಥಳಕ್ಕೆ ಹೋಗಿ ಜಗಳ ಬಿಡಿಸುತ್ತಿದ್ದಾಗ ನಮ್ಮ ಗ್ರಾಮದ ಸಲೀಂ, ವಸೀಂ, ಸಿದ್ದುಬಾ, ಸುಭಾನ್, ಜಬಿ ಮತ್ತು ಅಬುಜರ ರವರು ಅಕ್ರಮ ಗುಂಪುಕಟ್ಟಿಕೊಂಡು ಕೈಗಳಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಬಂದು ನನ್ನ ಮತ್ತು ನನ್ನ ತಮ್ಮ ಸೈಪುನ ಮೇಲೆ ಹಲ್ಲೆ ಮಾಡಿದರು. ಆ ಸಮಯದಲ್ಲಿ ಸುಬಾನ್ ರವರು ತನ್ನ ಬಳಿ ಇದ್ದ ಚಾಕುವಿನಿಂದ ನನ್ನ ಬೆನ್ನಿಗೆ ಹಲ್ಲೆ ಮಾಡಿದ್ದು, ಬೆನ್ನಿಗೆ ರಕ್ತಗಾಯವಾಗಿರುತ್ತೆ. ಆಗ ನಮ್ಮ ಗ್ರಾಮದ ಇತರರು ಬಂದು ಜಗಳ ಬಿಡಿಸಿ ಗಾಯಗೊಂಡಿದ್ದ ನಮ್ಮನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ನಮ್ಮನ್ನು ಹಲ್ಲೆ ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆ ದೂರಿನ ಮೇರೆಗೆ ಪ್ರ.ವ.ವರದಿ.

 

8. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 178/2021 ಕಲಂ. 143,147,148,324,504,506 ರೆ/ವಿ 149 ಐಪಿಸಿ :-

    ದಿನಾಂಕ:26/09/2021 ರಂದು ಹೆಚ್.ಸಿ.137 ಮಂಜುನಾಥ ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುವಾದ ಶ್ರೀ ಸುಬಾನ್ ಬಿನ್ ಜಬೀವುಲ್ಲಾ 23 ವರ್ಷ, ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರಿಂದ ಹೇಳಿಕೆಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ದಿನಾಂಕ:26/09/2021 ರಂದು ರಾತ್ರಿ ಸುಮಾರು 9-00 ಗಂಟೆಗೆ ನಾನು ನಮ್ಮ ಮನೆಯ ಬಳಿ ಇದ್ದಾಗ ನಮ್ಮ ಗ್ರಾಮದ ಸೈಫುಲ್ಲಾ ರವರು ಹಾಗೂ ಸಲೇಹ, ಇಲ್ಲೂ @ ಇಲಿಯಾಜ್, ಬಾಬಾ @ 90 ಬಾಬಾ, ಫಾರೂಕ್ ಸಿದ್ದೀಕ್ ರವರು ರವರು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಕಲ್ಲು ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ಹಳೇ ವೈಷಮ್ಯವನ್ನು ಇಟ್ಟುಕೊಂಡು ವಿನಾ ಕಾರಣ ನನ್ನ ಹಾಗೂ ನನ್ನ ಮನೆಯವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ನಮ್ಮ ಮೇಲೆ ಹಲ್ಲೇ ಮಾಡಿದರು ಬಿಡಿಸಲು ಬಂದ ಶೌಕರ್ ರವರಿಗೂ ಸಹ ತಮ್ಮ ಕೈಗಳಲ್ಲಿದ್ದ ದೊಣ್ಣೆ ಹಾಗೂ ಕಲ್ಲಿನಿಂದ ಹಲ್ಲೆ ಮಾಡಿದರು ಸೈಫುಲ್ಲಾ, ಬಾಬಾ ರವರು ತಮ್ಮ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ಎಡಕೈಗೆ ಹೊಡೆದರು ಹಾಗೂ ಇವರನ್ನು ಸಾಯಿಸಿ ಬಿಡಬೇಕೆಂದು ಕೂಗಾಡಿದರು ಅಷ್ಟರಲ್ಲಿ ನಮ್ಮ ಗ್ರಾಮದ ಇತರರು ಬಂದು ಜಗಳ ಬಿಡಿಸಿ ನಮ್ಮನ್ನು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು ನಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ಹೇಳಿಕೆ ದೂರು.

Last Updated: 26-09-2021 05:14 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080