Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.248/2021 ಕಲಂ. 78(3) ಕೆ.ಪಿ  ಆಕ್ಟ್:-

     ದಿನಾಂಕ:24/08/2021 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಪಿ ಐ ಸಾಹೇಬರು ಅಸಲು ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಠಾಣೆಯಲ್ಲಿ ಹಾಜರುಪಡಿಸಿದ ವರದಿಯ ದೂರಿನ ಸಾರಾಂಶವೇನೆಂದರೆ ದಿನಾಂಕ 24/08/2021 ರಂದು ಸಂಜೆ 4-30 ಗಂಟೆಯಲ್ಲಿ ಶ್ರೀ ನಾಗರಾಜ್ ಪಿ.ಐ ಬಾಗೇಪಲ್ಲಿ ಪೊಲೀಸ್ ಠಾಣೆ ಆದ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ ನಾಮಾ ಬಜಾರ್ ರಸ್ತೆಯಲ್ಲಿರುವ ನಾಮಾ ಅಂಗಡಿಯ ಮುಂಭಾಗ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಮೇರೆಗೆ ನಾನು ಮತ್ತು ಅಪರಾಧ ದಳದ ಸಿಬ್ಬಂದಿಯಾದ ಸಿ,ಹೆಚ್ಸಿ.ಸಿ-156 ನಟರಾಜ್ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-537 ವಾಹನದಲ್ಲಿ  ಜೀಪ್ ಚಾಲಕ ವೆಂಕಟೇಶ್ ಎ.ಹೆಚ್.ಸಿ-14 ರವರೊಂದಿಗೆ  ಎಸ್.ಟಿ.ಡಿ ಸರ್ಕಲ್ ನಲ್ಲಿ ಇದ್ದ ಪಂಚಾಯ್ತಿದಾರರನ್ನು ಕರೆದುಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ, ಪಂಚರೊಂದಿಗೆ ಸಂಜೆ 4-45 ಗಂಟೆಗೆ ನಾಮಾ ಬಜಾರ್ ರಸ್ತೆಗೆ ಹೋಗುವ  ಡಿವಿಜಿ ರಸ್ತೆಯಲ್ಲಿ ಜೀಪನ್ನು ನಿಲ್ಲಿಸಿ ನಾವು ಮತ್ತು ಪಂಚರು ನಡೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಅಂಗಡಿಗಳ ಮರೆಯಲ್ಲಿ ನಿಂತು ನೋಡಲಾಗಿ ನಾಮಾ ಅಂಗಡಿಯ ಮುಂಭಾಗದ ರಸ್ತೆಯಲ್ಲಿ  ಯಾರೋ ಒಬ್ಬ ಆಸಾಮಿ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ, 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 880/-ರೂ.ಹಣ ಇದ್ದು,  ಆಸಾಮಿಯ ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ  ಅಕ್ಬರ್ ಭಾಷ ಬಿನ್ ಲೇಟ್ ಸುನ್ನಾ ಸಾಬ್, 60 ವರ್ಷ, ಮುಸ್ಲಿಂ ಜನಾಂಗ, ಕೂಲಿ ಕೆಲಸ, ವಾಸ: ಮಕ್ಕಾ ಮಸೀದಿ ಹತ್ತಿರ, 13 ನೇ ವಾರ್ಡ, ಬಾಗೇಪಲ್ಲಿ ಪುರ ಎಂದು ತಿಳಿಸಿದ್ದು, ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿರುತ್ತಾನೆ. ಆತನ ಬಳಿ ಇದ್ದ ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜನಿಕರಿಂದ ಜೂಜಾಟದ ಸಮಯದಲ್ಲಿ ವಸೂಲಿ ಮಾಡಿದ ಹಣವೆಂದು ತಿಳಿಸಿರುತ್ತಾನೆ.  ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆಯನ್ನು ಜರುಗಿಸಿ, ಅಸಲು ಪಂಚನಾಮೆ,  ಮಾಲು ಮತ್ತು ಆಸಾಮಿಯನ್ನು ಸಂಜೆ 6-00  ಗಂಟೆಗೆ ಠಾಣೆಯಲ್ಲಿ ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯ ದೂರಿನ ಮೇರೆಗೆ ಠಾಣಾ ಎನ್ ಸಿ ಆರ್ ನಂ-242/2021 ರೀತ್ಯಾ ದಾಖಲಿಸಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 25-08-2021 ರಂದು ಘನ ನ್ಯಾಯಾಲಯದಿಂದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.250/2021 ಕಲಂ. 338 ಐ.ಪಿ.ಸಿ:-

     ದಿನಾಂಕ: 25/08/2021 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರವಿ ಜಿ ಎನ್  ಬಿನ್ ನಾರಾಯಣಸ್ವಾಮಿ  ಕಿರಿಯ ಇಂಜಿನೀಯರ್ ಟಿ ಎಲ್ ಎಂ ಶಾಖೆ, ಕ,ವಿ,ಪ್ರ,ನಿ,ನಿ ಗೌರಿಬಿದನೂರು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಗೌರಿಬಿದನೂರು ಟಿಎಲ್ ಎಂ ಶಾಖೆಯಲ್ಲಿ ದಿನಾಂಕ: 21/05/2011 ರಿಂದ ಕೆಲಸ ನಿರ್ವಹಿಸುತ್ತಿದ್ದೇನೆ, ನಮ್ಮ ವ್ಯಾಪ್ತಿಗೆ ಬರುವ 66 ಕೆವಿ ಬಾಗೇಪಲ್ಲಿ- ಪಾತಪಾಳ್ಯ ಪ್ರಸರಣ ಮಾರ್ಗವನ್ನು ಪರಿವೀಕ್ಷಣೆ ನಡೆಸಿದಾಗ ಪ್ರಸರಣ ಮಾರ್ಗದ ಗೋಪುದ ಸಂಖ್ಯೆ 01 ಬಾಗೇಪಲ್ಲಿ ಉಪ ವಿದ್ಯುತ್ ಕೇಂದ್ರದ ಬಳಿ ಶ್ರೀ ಸುಬ್ರಮಣಿ ಬಿನ್ ಲೇಟ್ ಕೊಂಡಪ್ಪ 22ನೇ ವಾರ್ಡ್  ಬಾಗೇಪಲ್ಲಿ ಪುರ ರವರು ಭಾರತೀಯ ವಿದ್ಯುತ್  ಸರಬರಾಜು 1956 ನೇ ನಿಯಮಾವಳಿಯನ್ನು ಉಲ್ಲಂಘಿಸಿ 66 ಕೆವಿ ಪ್ರಸರಣದ ಮಾರ್ಗದ ಅಡಿಯಲ್ಲಿ ಮನೆಯನ್ನು ನಿರ್ಮಿಸಿರುತ್ತಾರೆ. ಇದು ಕಾನೂನು ಬಾಹಿರವಾಗಿರುತ್ತದೆ. ಇದರ ಸಂಬಂಧ ಶ್ರೀ ಸುಬ್ರಮಣಿ ಬಿನ್ ಲೇಟ್ ಕೊಂಡಪ್ಪ ರವರಿಗೆ ತಿಳುವಳಿಕೆ ಹೇಳಿ ಸೂಚನಾ ಪತ್ರವನ್ನು ಸಹ ದಿನಾಂಕ:04/03/2020 ರಂದು ನೀಡಿರುತ್ತೇವೆ. ಆದರೆ ಮತ್ತೆ ಆ ಮನೆಯ ಮೇಲೆ ಇನ್ನೊಂದು ಮನೆಯನ್ನು ನಿರ್ಮಿಸುತ್ತಿದ್ದು ದಿನಾಂಕ: 25/08/2021 ರಂದು ಸುಮಾರು 13-41 ಗಂಟೆ ಸಮಯದಲ್ಲಿ ಮನೆಯ ಕಟ್ಟಡದ ಮೇಲ್ಛಾವಣಿ ಕೆಲಸ ಮಾಡುತ್ತಿರುವಾಗ ಶ್ರೀ ಶಿವು ಮತ್ತು ಶ್ರೀ ಚಿಕ್ಕನರಸಿಂಹಪ್ಪ ರವರು ಕೆಲಸ ನಿರ್ವಹಿಸುತ್ತಿದ್ದಾಗ ಮನೆಯ ಮೇಲ್ಛಾವಣೆಗೆ ಉಕ್ಕಿನ ಕಂಬಗಳನ್ನು ಅಳವಡಿಸುವಾಗ 66 ಕೆವಿ ವಿದ್ಯುತ್ ತಂತಿಗೆ ಕೆಲಸ ಮಾಡುವ ಕೆಲಸಗಾರನು ಉಕ್ಕಿನ ಕಂಬಿಯನ್ನು ವಿದ್ಯುತ್ ತಂತಿಗೆ ತಾಗಿಸಿರುವುದರಿಂದ ವಿದ್ಯುತ್ ಅವಘಡ ಸಂಭವಿಸಿರುತ್ತದೆ. ತಕ್ಷಣ 66 ಕೆವಿ ವಿದ್ಯುತ್ ಮಾರ್ಗವು ಟ್ರಿಪ್ ಆಗಿರುತ್ತದೆ. ಬಾಗೇಪಲ್ಲಿ ಉಪ ವಿದ್ಯುತ್ ಕೇಂದ್ರದ ಸಿಬ್ಬಂದಿಗೆ ಬಾರೀ ಶಬ್ದ ಕೇಳಿಸಿದ್ದು ಸ್ಥಳಕ್ಕೆ ಹೋಗಿ ನೋಡಿದಾಗ ವಿದ್ಯುತ್ ಅವಘಡ ಸಂಭವಿಸಿರುವುದು ಕಂಡುಬಂದಿರುತ್ತದೆ. ತಕ್ಷಣವೇ ವಿದ್ಯುತ್ ಅವಘಡ ಸಂಭವಿಸಿರುವ ಕೆಲಸಗಾರನನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗಾಗಿ ಸ್ಥಳೀಯರು ಕರೆದುಕೊಂಡು ಹೋಗಿರುತ್ತಾರೆಂದು ದೂರವಾಣಿಯ ಮುಲಕ ತಿಳಿಸಿರುತ್ತಾರೆ. ತಕ್ಷಣ ನಾನು ಮತ್ತು ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ವಿದ್ಯುತ್ ತಂತಿಗೆ ಉಕ್ಕಿನ ಕಂಬಿಯು ತಾಗಿ ಸುಟ್ಟಿರುವುದು ಕಂಡುಬಂದಿದೆ. ಈ ಸಂಬಂಧ ಕೆಲಸ ನಿರ್ವಹಿಸುತ್ತಿದ್ದಂತಹ ಶ್ರೀ ಚಿಕ್ಕನರಸಿಂಹಪ್ಪರವರನ್ನು ದೂರವಾಣಿ ಮುಖಾಂತರ (9741638677) ಸಂಪರ್ಕಿಸಿದಾಗ ನಾನು ಆರೋಗ್ಯವಾಗಿ ಬಾಗೇಪಲ್ಲಿಯ ನಿವಾಸದಲ್ಲಿ ಇರುವುದಾಗಿ ತಿಳಿಸಿ ಮತ್ತೊಬ್ಬ ಕಾರ್ಮಿಕರಾದಂತಹ ಶ್ರೀ ಶಿವು ಎಂಬುವವರನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಉನ್ನತ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ತಿಳಿಸಿದರು. ಶ್ರೀ ಸುಬ್ರಮಣಿ ಬಿನ್ ಲೇಟ್ ಕೊಂಡಪ್ಪ 22ನೇ ವಾರ್ಡ್  ಬಾಗೇಪಲ್ಲಿ ಪುರ ರವರ ಬೇಜಾಬ್ದಾರಿಯಿಂದ ಕೂಲಿಕಾರ್ಮಿಕರನ್ನು ಕರೆದುಕೊಂಡು ಬಂದು ಕೆಲಸ ನಿರ್ವಹಿಸಿರುತ್ತಾರೆ. ಆದ್ದರಿಂದ ಈ ಅಪಘಾತ ಸಂಭವಿಸಿರುತ್ತದೆ. ಶ್ರೀ ಸುಬ್ರಮಣಿ ಬಿನ್ ಲೇಟ್ ಕೊಂಡಪ್ಪ ರವರು ಭಾರತೀಯ ವಿದ್ಯುತ್ ಸರಬರಾಜು 1956 ನೇ ನಿಯಮಾವಳಿಯನ್ನು ಉಲ್ಲಂಘಿಸಿರುತ್ತಾರೆ. ಆದ್ದರಿಂದ ಆ ಮನೆಯ ಮಾಲೀಕರಾದ ಸುಬ್ರಮಣಿ ರವರ ಮೇಲೆ ಕಾನೂನಿನ ಪ್ರಕಾರ ಕ್ರಮಜರುಗಿಸಬೇಕೆಂದು ಕೋರಿ ನೀಡಿದ ದೂರು.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.120/2021 ಕಲಂ. 32,34 ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ.ವೆಂಕಟರವಣಪ್ಪ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:25/08/2021 ರಂದು ನಾನು ಠಾಣೆಯ ಹೆಚ್.ಸಿ-36 ವಿಜಯ್ ಕುಮಾರ್ ಹಾಗೂ  ಜೀಪ್ ಚಾಲಕ  ಎಪಿಸಿ - 65 ವೆಂಕಟೇಶ್ ರವರನ್ನು ಜೊತೆಯಲ್ಲಿ ಕರೆದುಕೊಂಡು ಠಾಣಾ ಸರಹದ್ದಿನ ಬಟ್ಲಹಳ್ಳಿ, ಮುಂಗಾನಹಳ್ಳಿ, ಯನಮಲಪಾಡಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಯನಮಲಪಾಡಿ ಗ್ರಾಮದಿಂದ ರಾಗಿಮಾಕಲಹಳ್ಳಿ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ ಮೋರಿಯ ಬಳಿ ಹೋಗುತ್ತಿದ್ದಾಗ ಯಾರೋ ಒಬ್ಬ ಆಸಾಮಿಯು ಅನುಮಾನಾಸ್ಪದವಾಗಿ ಒಂದು ಚೀಲದಲ್ಲಿ ಏನನ್ನೋ ತುಂಬಿಕೊಂಡು ತಲೆಯ ಮೇಲೆ ಹೊತ್ತುಕೊಂಡು ರಾಗಿಮಾಕಲಹಳ್ಳಿ ಗ್ರಾಮದ ಕಡೆಗೆ ಹೋಗುತ್ತಿದ್ದು ಸದರಿ ಆಸಾಮಿಯು ಪೊಲೀಸ್ ಜೀಪ್ ಅನ್ನು ನೋಡಿ ಗಾಬರಿಯಿಂದ ಚೀಲವನ್ನು ರಸ್ತೆಯಲ್ಲಿಯೇ ಬಿಸಾಡಿ ಓಡಿ ಹೋಗಿದ್ದು ಸದರಿ ಚೀಲವನ್ನು ಪರಿಶೀಲಿಸಲಾಗಿ ಚೀಲದಲ್ಲಿ ಮದ್ಯದ ಬಾಕ್ಸ್ ಗಳು ಇದ್ದು ಸದರಿ ಆಸಾಮಿಯು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟಮಾಡಲು ಮದ್ಯವನ್ನು ಸಾಗಾಣಿಕೆಮಾಡಿಕೊಂಡು ಹೋಗುತ್ತಿದ್ದದು ಕಂಡು ಬಂದಿದ್ದರ ಮೇರೆಗೆ ಸ್ಥಳಕ್ಕೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರ ಸಮಕ್ಷ ಚೀಲದಲ್ಲಿ ಇದ್ದ ಮದ್ಯವನ್ನು ಪರಿಶೀಲಿಸಲಾಗಿ ಎರಡು ಮದ್ಯದ  ಬಾಕ್ಸ್ ಗಳನ್ನು ಇದ್ದು  ಒಂದು ಬಾಕ್ಸ್ ನಲ್ಲಿ 180 ML OLD TAVERN WHISKY  48 ಟೆಟ್ರಾ ಪಾಕೆಟ್ ಗಳಿದ್ದು, ಪ್ರತಿಯೊಂದರ ಬೆಲೆ 86.75  ರೂ ಎಂತ ಇರುತ್ತೆ ಮತ್ತೊಂದು ಬಾಕ್ಸ್ ನಲ್ಲಿ 180 ML OLD TAVERN WHISKY  48 ಟೆಟ್ರಾ ಪಾಕೆಟ್ ಗಳಿದ್ದು, ಪ್ರತಿಯೊಂದರ ಬೆಲೆ 86.75  ರೂ ಎಂತ ಇರುತ್ತೆ  ಒಟ್ಟು ಮದ್ಯವು 17 ಲೀಟರ್ 280 ಎಂ ಎಲ್ ಮದ್ಯವಿದ್ದು, ಇವುಗಳ ಒಟ್ಟು ಬೆಲೆ 8328  /- ರೂಗಳಾಗಿರುತ್ತೆ. ಇವುಗಳಲ್ಲಿ ತಲಾ ಒಂದೊಂದು ಮದ್ಯದ ಪಾಕೆಟ್ ಗಳನ್ನು ಎಫ್ ಎಸ್ ಎಲ್ ತಜ್ಞರ ಪರೀಕ್ಷೆಗಾಗಿ ಕಳುಹಿಸಲು ಪ್ರತ್ಯೇಕವಾಗಿ ತೆಗೆದು ಬಿಳಿಯ ಬಟ್ಟೆಯ ಚೀಲದಲ್ಲಿ ಹಾಕಿ ತುದಿಯನ್ನು ದಾರದಿಂದ ಕಟ್ಟಿ BTL ಅಕ್ಷರದ ಸೀಲ್ ನಿಂದ ಸೀಲ್ ಮಾಡಿರುತ್ತೆ.  ಮೇಲ್ಕಂಡ ಮದ್ಯದ ಮಾಲುಗಳನ್ನು ಪಂಚರ ಸಮಕ್ಷಮ ಬೆಳಿಗ್ಗೆ 11-00 ಗಂಟೆಯಿಂದ ಬೆಳಿಗ್ಗೆ 12-00 ಗಂಟೆಯವರೆಗೆ ಮಹಜರ್ ಮೂಲಕ ಮದ್ಯದ  ಮಾಲುಗಳನ್ನು ಅಮಾನತ್ತು ಪಡಿಸಿಕೊಂಡು ಮಧ್ಯಾಹ್ನ 12-45 ಗಂಟೆಗೆ ಠಾಣೆಗೆ ವಾಪಸ್ ಬಂದು ಸ್ವತಃ ವರದಿಯ ಮೇರೆಗೆ ಠಾಣಾ ಮೊ.ಸಂ 120/2021 ಕಲಂ:32, 34 ಕೆ.ಇ. ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.134/2021 ಕಲಂ. 20(B)(ii)C NARCOTIC DRUGS & PSYCHOTROPIC SUBSTANCES ACT, 1985:-

     ದಿನಾಂಕ: 25/08/2021 ರಂದು ಮದ್ಯಾಹ್ನ 3-50 ಗಂಟೆಯ ಸಮಯದಲ್ಲಿ ಶ್ರೀ.ಎಂ.ಎಂ. ಪ್ರಶಾಂತ್ ಸಿಪಿಐ ಚಿಕ್ಕಬಳ್ಳಾಪುರ  ವೃತ್ತ  ಚಿಕ್ಕಬಳ್ಳಾಪುರ ರವರು ಠಾಣೆಯಲ್ಲಿ  ನೀಡಿದ  ದೂರಿನ  ಸಾರಾಂಶವೇನೆಂದರೆ. ಈ  ಮೂಲಕ  ನಿಮಗೆ  ತಿಳಿಯಪಡಿಸುವುದೇನೆಂದರೆ ದಿನಾಂಕ:25/08/2021 ರಂದು  ಮದ್ಯಾಹ್ನ 12-00 ಗಂಟೆಯಲ್ಲಿ  ನಾನು ಕಛೇರಿಯಲ್ಲಿದ್ದಾಗ  ನನಗೆ  ಬಂದ ಖಚಿತ ಮಾಹಿತಿ ಏನೆಂದರೆ  ಚಿಕ್ಕಬಳ್ಳಾಪುರ  ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದು ಎನ್.ಹೆಚ್.234 ರಸ್ತೆಯ ಜಾತವಾರ ಗ್ರಾಮದ  ಗೇಟಿನ ಬಳಿ  ನಾಲ್ಕು ಜನ ಆಸಾಮಿಗಳು ಕೆ.ಎ.40.ಎಲ್.8289 ನಂಬರಿನ ದ್ವಿ ಚಕ್ರ ವಾಹನದಲ್ಲಿ ಮಾಧಕವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲು ಸಾಗಾಣಿಕೆ ಮಾಡಿಕೊಂಡು ಬಂದು ಸಾರ್ವಜನಿಕರಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವು ದಾಗಿ ಮಾಹಿತಿ ಬಂದಿದ್ದು  ಈ ಬಗ್ಗೆ ದಿನಚರಿಯಲ್ಲಿ ನಮೂದಿಸಿ ನಂತರ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿ ನಂತರ ಮಾನ್ಯ ಡಿ.ವೈ.ಎಸ್.ಪಿ. ಚಿಕ್ಕಬಳ್ಳಾಪುರ ಉಪ ವಿಭಾಗ ರವರಿಂದ ಲಿಖಿತ ಅನುಮತಿಯನ್ನು ಪಡೆದುಕೊಂಡು ನಂತರ  ಪಂಚಾಯ್ತಿದಾರರಾದ ಚೇತನ್ ಬಿನ್ ಗೋಪಾಲ್ ಮತ್ತು ಪವನ್ ಕುಮಾರ್ ಬಿನ್ ಮುನಿಕೃಷ್ಣಪ್ಪರವರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಪಂಚರಿಗೆ ಕಲಂ:41 NDPS  ಆಕ್ಟ್ ರೀತ್ಯಾ ನೋಟಿಸ್ ಜಾರಿ ಮಾಡಿ ನಂತರ ಸಿಬ್ಬಂದಿಯೊಂದಿಗೆ ಮದ್ಯಾಹ್ನ 1-00 ಗಂಟೆಗೆ ಜಾತವಾರ ಗ್ರಾಮದ ಗೇಟ್ ಬಳಿ ಹೋಗಿ ಸರ್ಕಾರಿ ವಾಹನವನ್ನು ಮರೆಯಲ್ಲಿ  ನಿಲ್ಲಿಸಿ  ನಾವುಗಳು ಪರಸ್ಪರ ಅಂಗಶೋಧನೆ ಮಾಡಿಕೊಂಡೆವು. ನಂತರ ನಾವು ಮದ್ಯಾಹ್ನ 1-30 ಗಂಟೆಯಲ್ಲಿ ಜಾತವಾರ ಗೇಟಿನಲ್ಲಿದ್ದಾಗ ದ್ವಿ ಚಕ್ರ ವಾಹನದಲ್ಲಿ 03 ಜನ  ಬಂದಿದ್ದು  ನಂತರ  ಜಾತವಾರ  ಗ್ರಾಮದ ಕಡೆಯಿಂದ ಮತ್ತೊಬ್ಬ ಆಸಾಮಿ 03 ಜನ ಇದ್ದ ಸ್ಥಳಕ್ಕೆ  ಹೋದಾಗ ಅವರು ದ್ವಿಚಕ್ರ ವಾಹನದಲ್ಲಿ ತಂದಿದ್ದ ಬ್ಯಾಗನ್ನು ಕೊಡಲು ಹೋದಾಗ ನಾವು ಗಾಂಜಾ ಇರುವುದನ್ನು ಖಚಿತಪಡಿಸಿಕೊಂಡು ಅವರನ್ನು ಸುತ್ತುವರೆದು ಅವರನ್ನು ವಶಕ್ಕೆ  ಪಡೆದು ಹೆಸರು ವಿಳಾಸ ಕೇಳಲಾಗಿ (1) ಮಹೇಶ ಬಿನ್ ಲೇಟ್ ವೆಂಕಟೇಶಪ್ಪ 21ವರ್ಷ ಪರಿಶಿಷ್ಟ ಜಾತಿ ವಿದ್ಯಾರ್ಥಿ. ವಾಸ: ಜಾತವಾರ  ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು  ಸ್ವಂತ ಸ್ಥಳ:  ಕೆಳಗಿನ ಅಪ್ಪಿರೆಡ್ಡಿಹಳ್ಳಿ  ಗ್ರಾಮ ಗುಡಿಬಂಡೆ  ತಾಲ್ಲೂಕು.  (2) -ವೆಂಕಟೇಶಪ್ಪ ಬಿನ್ ಲೇಟ್ ಸುಬ್ಬಣ್ಣ 73ವರ್ಷ  ಭೋವಿ ಜನಾಂಗ ಕೂಲಿ ಕೆಲಸ ವಾಸ: ಪೈಚೆರವು ಗ್ರಾಮ ಚಿಲಕಲನೇರ್ಪು  ಹೋಬಳಿ. ಚಿಂತಾಮಣಿ  ತಾಲ್ಲೂಕು  ಮತ್ತು  ಚಿಕ್ಕಬಳ್ಳಾಪುರ  ಜಿಲ್ಲೆ ( 3) ಶ್ರೀನಿವಾಸ  ಬಿನ್  ಲೇಟ್ ಮುನಿಸ್ವಾಮಿ 42ವರ್ಷ  ಬಲಿಜಿಗರು ಗಾರೆ  ಕೆಲಸ ವಾಸ: ಟಿ.ವೆಂಕಟಾಪುರ ಗ್ರಾಮದ ಸಾದಲಿ ಹೋಬಳಿ  ಶಿಡ್ಲಘಟ್ಟ  ತಾಲ್ಲೂಕು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ. (4) ಲಕ್ಷ್ಮಯ್ಯ ಬಿನ್  ಲೇಟ್ ನಾರಾಯಣಪ್ಪ 34ವರ್ಷ ಗಾರುಡಿ  ಜನಾಂಗ ಕೂಲಿ ಕೆಲಸ ವಾಸ:ವರಸಂದ್ರ ಗ್ರಾಮ ಈ.ತಿಮ್ಮಸಂದ್ರ   ಹೋಬಳಿ  ಶಿಡ್ಲಘಟ್ಟ ತಾಲ್ಲೂಕು  ಮತ್ತು  ಚಿಕ್ಕಬಳ್ಳಾಪುರ  ಜಿಲ್ಲೆ ಎಂದು   ತಿಳಿಸಿದರು.  ನಂತರ  ಆಸಾಮಿಗಳನ್ನು  ಪ್ರಶ್ನಿಸಿದಾಗ ಆಸಾಮಿಗಳು ದಿಬ್ಬೂರಹಳ್ಳಿ  ಕಡೆಯಿಂದ  ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಕಡೆಗೆ ಗಾಂಜಾವನ್ನು ಮಾರಾಟ ಮಾಡಲು ದ್ವಿ ಚಕ್ರ ವಾಹನದಲ್ಲಿ ಸಾಗಣೆ ಮಾಡುತ್ತಿರುವುದಾಗಿ  ಒಪ್ಪಿಕೊಂಡರು.  ನಂತರ ಮಾನ್ಯ ಡಿ.ಎಸ್.ಪಿ.ಸಾಹೇಬರಿಗೆ  ವಿಷಯ  ತಿಳಿಸಿ ದಾಳಿ ಕ್ರಮ ಜರುಗಿಸಲು  ಪತ್ರಾಂಕಿತ ಅಧಿಕಾರಿಯಾಗಿ ಬಂದು ಅಂಗಶೋಧನೆ ಮಾಡಲು ಕೋರಿದೆನು. ಸದರಿ ಮಾಹಿತಿಯಂತೆ ಮಾನ್ಯ ಡಿ.ಎಸ್.ಪಿ.ಸಾಹೇಬರು ಸದರಿ ಸ್ಥಳಕ್ಕೆ ಮದ್ಯಾಹ್ನ 2-00 ಗಂಟೆಗೆ ಬಂದು  ಆರೋಫಿತರನ್ನು ವಿಚಾರಣೆ ಮಾಡಿ ಪ್ರಶ್ನಿಸಿ ಅವರಿಗೆ ಕಲಂ: 50 NDPS ಆಕ್ಟ್ ರೀತ್ಯಾ ನೋಟೀಸ್  ಜಾರಿ ಮಾಡಿ  ನಿಯಮಾನುಸಾರ  ಪ್ರಶ್ನಾವಳಿಗಳನ್ನು ಸಿದ್ದಪಡಿಸಿ ಅವರ ಸಹಿಯನ್ನು ಪಡೆದು  ಸಿಬ್ಬಂದಿಯವರ ಸಹಾಯದಿಂದ  ಆಸಾಮಿಗಳ  ಅಂಗಶೋಧನೆ ಮಾಡಲಾಯಿತು.  ನಂತರ  ಆರೋಫಿಗಳ  ವಶದಲ್ಲಿದ್ದ ದ್ವಿ ಚಕ್ರ ವಾಹನ. ದ್ವಿಚಕ್ರ ವಾಹನದಲ್ಲಿ ಎರಡು ಪೇಪರ್ ಬಂಡಲ್ ಗಳಲ್ಲಿದ್ದ  ಒಟ್ಟು  4 ಕೆ.ಜಿ. ತೂಕದ  ಎಲೆ. ಹೂವು . ಕಾಂಡ ಬೀಜಗಳಿಂದ  ಕೂಡಿದ್ದ  ಮಾದಕ ವಸ್ತುವನ್ನು  ಎರಡು ಬಳಿಯ ಬಟ್ಟೆ  ಬ್ಯಾಗುಗಳಲ್ಲಿ  ಶೇಖರಿಸಿ ಪ್ರತಿ  ಬ್ಯಾಗಿನಲ್ಲಿ  ರಾಸಾಯನಿಕೆ ಪರೀಕ್ಷೆಯ ಸಲುವಾಗಿ 50 ಗ್ರಾಂ  ಮಾದಕ ವಸ್ತು ಗಾಂಜಾ ಸೊಪ್ಪನ್ನು  ಪ್ರತ್ಯೇಕವಾಗಿ ಶೇಖರಿಸಿಕೊಂಡು ಆರೋಪಿಗಳು ಮಾದಕ ವಸ್ತು ಸಾಗಾಣಿಕೆ ಮತ್ತು ಮಾರಾಟ ಮಾಡುವುದು ಕಾನೂನು ಬಾಹಿರವಾಗಿರುವುದರಿಂದ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿ ಮೇಲ್ಕಂಡ 04 ಜನ ಆಸಾಮಿಗಳನ್ನು, (1) ಕೆ.ಎ.40.ಎಲ್.8289 ನಂಬರಿನ TVS HEAVY DUTY  ದ್ವಿ ಚಕ್ರ ವಾಹನ. (2)  ಒಂದು ಪ್ಲಾಸ್ಟಿಕ್ ಬ್ಯಾಗು. (3) ಒಂದು  ಮೊಹರು ಮಾಡಲಾದ  ಬಟ್ಟೆಯ ಬ್ಯಾಗು  ಇದರಲ್ಲಿ 02.ಕೆ.ಜಿ 10  ಗ್ರಾಮ್  ತೂಕದ  ಗಾಂಜಾ ಸೊಪ್ಪು. (4) ಒಂದು  ಮೊಹರು ಮಾಡಲಾದ  ಬಟ್ಟೆಯ ಬ್ಯಾಗು  ಇದರಲ್ಲಿ 1.ಕೆ.ಜಿ 890  ಗ್ರಾಮ್ ಗಾಂಜಾ ಸೊಪ್ಪು. (5)  ಒಂದು  ಮೊಹರು ಮಾಡಲಾದ  ಬಟ್ಟೆಯ ಬ್ಯಾಗು  ಇದರಲ್ಲಿ  ಮಾದರಿಗಾಗಿ ಶೇಖರಿಸಿದ  50  ಗ್ರಾಮ್  ಗಾಂಜಾ ಸೊಪ್ಪು. (6)  ಒಂದು  ಮೊಹರು ಮಾಡಲಾದ  ಬಟ್ಟೆಯ ಬ್ಯಾಗು ಇದರಲ್ಲಿ ಮಾದರಿಗಾಗಿ ಶೇಖರಿಸಿದ  50 ಗ್ರಾಮ್ ಗಾಂಜಾಸೊಪ್ಪು. ಮತ್ತು ದಾಳಿ ಪಂಚನಾಮೆಯನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ  ಕ್ರಮ ಕೈಗೊಳ್ಳಲು ಸೂಚಿಸಿ ನೀಡಿದ ದೂರಿನ  ಮೇರೆಗೆ ಈ ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.135/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 25/08/2021 ರಂದು 17-10 ಗಂಟೆ ಸಮಯದಲ್ಲಿ ಶ್ರೀ ಬಿ,ಪಿ ಮಂಜು ಪಿ,ಎಸ್,ಐ ಸಾಹೇಬರು ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:25.08.2021 ರಂದು ಸಂಜೆ 17-05 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಜಾತವಾರ ಹೊಸಹಳ್ಳಿ ಗ್ರಾಮದ ವಾಸಿ  ವೆಂಕಟಸ್ವಾಮಿ ರೆಡ್ಡಿ ಬಿನ್ ಲಕ್ಷ್ಮಿನಾರಾಯಣಪ್ಪ, 45 ವರ್ಷ, ವಕ್ಕಲಿಗರು, ವ್ಯಾಪಾರ ವೃತ್ತಿ,  ರವರು ತಮ್ಮ ಚಿಲ್ಲರೆ ಅಂಗಡಿ ಬಳಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಕೊಳ್ಳಲು  ಸೂಚಿಸಿದ ಮೇರೆಗೆ ಈ ಪ್ರ,ವ,ವರದಿ.

 

6. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.136/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:25-08-2021 ರಂದು ಸಂಜೆ 5-30 ಗಂಟೆಯಲ್ಲಿ ಶ್ರೀಮತಿ ಸರಸ್ವತಮ್ಮ ಮಹಿಳಾ ಪಿ,ಸ್,ಐ DCB/CEN ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:25.08.2021 ರಂದು ತಾನು ಮತ್ತು ಸಬ್ಬಂದಿಯವರಾದ ಸಿ,ಪಿ,ಸಿ 529 ಮಧು. ಸಿ,ಪಿ,ಸಿ-142 ಅಶೋಕ್. ಸಿ,ಪಿ,ಸಿ-152 ಜಯಣ್ಣ ರವರೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಗಾಗಿ ನೇಮಕ ಮಾಡಿದ್ದು ಅದರಂತೆ ನಾವುಗಳು ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆ ಗುಂಡ್ಲಗುರ್ಕಿ ಮಂಚನಬಲೆ ಸಬ್ಬೇನಹಳ್ಳಿ ಕಡೆ ಗಸ್ತು ಮಾಡಿಕೊಂಡು ಸಂಜೆ 4-00 ಗಂಟೆಗೆ ಸಬ್ಬೇನಹಳ್ಳಿ ಗ್ರಾಮದಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹತಿ ಏನೆಂದರೆ ಅಣಕನೂರು ಗ್ರಾಮದ ಸಮೀಪ ವಾಪಸಂದ್ರ ಸಿದ್ದಪ್ಪ ರವರ ಜಮೀನಿನಲ್ಲಿ ಯಾರೋ ಕೆಲವರು ಅಸಾಮಿಗಳು ಅಂದರ್-ಬಾಹರ್ ಇಸ್ಪಿಟು ಜೂಜಾಟ ಆಡುತ್ತಿರುವುದಾಗಿ ಮಾಹಿತಿಯ  ಮೇರೆಗೆ ಪಂಚರೊಂದಿಗೆ ಸಂಜೆ4-15 ಗಂಟೆಯಿಂದ 5-00 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಜರುಗಿಸಿ ಸ್ಥಳದಲ್ಲಿ ದೊರೆತ ಇಬ್ಬರು ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಕೃತ್ಯಕ್ಕೆ ಬಳಸಿದ 1830/- ರೂ ಹಣ 52 ಇಸ್ಪಿಟು ಎಲೆ ಮತ್ತು ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚನಾಮೆ ಮುಖಾಂತರ ಅಮಾನತ್ತುಪಡಿಸಿಕೊಂಡು ಅಕ್ರಮವಾಗಿ ಇಸ್ಪಿಟು ಜೂಜಾಟ ಆಡುತ್ತಿದ್ದ ಆಸಾಮಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿದ ಮೇರೆಗೆ ಠಾಣಾ ಎನ್,ಸಿ,ಆರ್ 209/2021 ರೀತ್ಯಾ ದಾಖಲಿಸಿಕೊಂಡು ನಂತರ  ಇದು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಸಂಜ್ಞೆಯ  ಪ್ರಕರಣವೆಂದು  ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಗೊಳ್ಳಲು ಮಾನ್ಯ ಎಸಿ.ಜೆ. ಮತ್ತು  ಜೆ.ಎಂ.ಎಪ್.ಸಿ. ನ್ಯಾಯಾಲಯದಿಂದ ಅನುಮತಿಯನ್ನು  ಪಡೆದು ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಂಡಿರುತ್ತೆ. ಆದ್ದರಿಂದ ಈ ಪ್ರ.ವ.ವರದಿ.

 

7. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.59/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ:25/08/2021 ರಂದು ಸಂಜೆ  ಜಿಲ್ಲಾಸ್ಪತ್ರೆಯಿಂದ ಬಂದ ಮೆಮೊವನ್ನುಸ್ವೀಕರಿಸಿ, ನಂತರ ಹೇಳಿಕೆಯನ್ನು ಪಡೆಯಲು ಠಾಣೆಯ ಪಿ.ಸಿ-123 ರವರನ್ನು ಕಳುಹಿಸಿದ್ದು, ಸದರಿಯವರು ಜಿಲ್ಲಾಸ್ಪತ್ರೆಗೆ ಬೇಟಿ ನೀಡಿ ವೈದ್ಯರ ಸಮಕ್ಷಮದಲ್ಲಿ ಗಾಯಾಳು ಶ್ರೀ ಬಿ ಎಲ್ ಕೇಶವ ಕುಮಾರ್ ಬಿನ್ ಲೇಟ್ ಬಿ.ವಿ ಲಕ್ಷ್ಮೀನಾರಾಯಣ 44 ವರ್ಷ, ಕಮ್ಮ ನಾಯ್ಡು ಜನಾಂಗ, ಜಿರಾಯ್ತಿ, ವಾಸ: ವಾರ್ಡ್ ನಂ-01, ವಾಪಸಂದ್ರ ಚಿಕ್ಕಬಳ್ಳಾಪುರ ನಗರ ರವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಯಲ್ಲಿ ಹಾಜರುಪಡಿಸಿದ ಸಾರಾಂಶವೇನೆಂದರೆ, ತಮ್ಮ ತಾತ ದೊಡ್ಡವೆಂಕಟರಾಯಪ್ಪ ರವರಿಗೆ ನಾಲ್ಕು ಜನ ಮಕ್ಕಳಿದ್ದು 1 ನೇ ನಾರಾಯಣಸ್ವಾಮಿ (ಪವತಿ) 2 ನೇ ಸರೋಜಮ್ಮ (ಪವತಿ) 3 ನೇ ಲಕ್ಷ್ಮೀನಾರಾಯಣಸ್ವಾಮಿ (ಪವತಿ) 4 ನೇ ಸತ್ಯನಾರಾಯಣ ರವರಾಗಿರುತ್ತಾರೆ. 1 ನೇ ನಾರಾಯಣಸ್ವಾಮಿ ರವರ ಮಗನಾದ ಶೋಭಾ ನಂದ ಕುಮಾರ್ ರವರಿಗೂ ಹಾಗೂ 3 ನೇ ಲಕ್ಷ್ಮೀನಾರಾಯಣ ರವರ ಮಕ್ಕಳಾದ ಪಿರ್ಯಾಧಿ ರವರಿಗೂ ಆಸ್ತಿ ವಿಚಾರದಲ್ಲಿ ಆಗಾಗ ತಂಟೆ ತಕರಾರುಗಳು ಹಾಗೂ ಕುಟುಂಬ ಕಲಹಗಳು ನಡೆಯುತ್ತಿದ್ದು, ಆಸ್ತಿ ವಿಚಾರದಲ್ಲಿ ಕೋರ್ಟ್ ನಲ್ಲಿ ವಿಚಾರಣೆಯಲ್ಲಿರುತ್ತೆ ತಮ್ಮ ತಂದೆಯವರಾದ ಬಿ.ವಿ ಲಕ್ಷ್ಮೀನಾರಾಯಣ ರವರು ಪಿರ್ಯಾಧಿದಾರರರ ಅತ್ತೆಯವರಾದ ಸರೋಜಮ್ಮ ರವರ ಬಳಿ ಖಾತೆ ಸಂಖ್ಯೆ 276/1, 262/1 ರ 25 X 50 ಅಡಿಗಳ ವಿಸ್ತೀರ್ಣದ ಮನೆಯನ್ನು ಖರೀದಿ ಮಾಡಿದ್ದು, ನಂತರ ತಮ್ಮ ತಂದೆ ರವರು ಧಾನಪತ್ರದ ಮುಖಾಂತರ ತನ್ನ ಹೆಸರಿಗೆ ಕ್ರಯಮಾಡಿ ಕೊಟ್ಟಿದ್ದು, ಅಂದಿನಿಂದ ತಾನೇ ಅನುಭೋಗದಲ್ಲಿದ್ದು, ದಿನಾಂಕ:-25/08/2021 ರಂದು ಬೆಳಿಗ್ಗೆ ಸುಮಾರು 11-30 ಗಂಟೆಯ ಸಮಯದಲ್ಲಿ ವಾಪಸಂದ್ರದ ಬಳಿ ಇರುವ ಮೇಲ್ಕಂಡ ಮನೆಯ ಬಳಿ ಹೋಗಿ ರಾತ್ರಿ ಮಳೆ ಬಿದ್ದಿರುವುದರಿಂದ ಮನೆಯ ಮೇಲೆ ನೀರು ನಿಂತಿದ್ದು ನೋಡಲು ಹೋಗಿದ್ದಾಗ ಅದೇ ಸಮಯಕ್ಕೆ 1) ಶೋಭಾ ನಂದ್ ಕುಮಾರ್ ಬಿನ್ ಲೇಟ್ ನಾರಾಯಣಸ್ವಾಮಿ 58 ವರ್ಷ, 2) ವರಲಕ್ಷ್ಮೀ ಕೋಂ  ಶೋಭಾ ನಂದ್ ಕುಮಾರ್ ಇವರ ಮಕ್ಕಳಾದ 3) ಉದಯ್ ರಾಜ್ 4) ಶಶಿ ಕುಮಾರ್ ರವರು ಏಕಾ-ಏಕಿ ಬಂದು ನೀನು ಇಲ್ಲಿ ಏನೂ ಮಾಡುತ್ತಿದ್ದಿಯಾ? ಇದು ನಮ್ಮ ಜಾಗ ನಿನಗೆ  ಏನೂ ಇಲ್ಲಿ ಕೆಲಸ ಎಂದು ಕೆಟ್ಟ ಮಾತುಗಳಿಂದ ಬೈದು ಶೋಭಾ ನಂದ್ ಕುಮಾರ್ ರವರು ಅಲ್ಲಿಯೇ ಇದ್ದ ಮರದ ರಿಪೀಸ್ ಅನ್ನು ತೆಗೆದುಕೊಂಡು ನನ್ನ ಮಗನೇ ನೀನು ಇದ್ದರೇ ತಾನೇ ಇದು ನನ್ನದು ಎನ್ನುವುದು ನಿನ್ನನ್ನು ಇವತ್ತು ಮುಗಿಸಿ ಬಿಡುತ್ತೇನೆ ಎಂದು ತನ್ನ ಎಡಭುಜ ಮತ್ತು ಎದೆಯ ಭಾಗಕ್ಕೆ ಹೊಡೆದಿದ್ದು, ನಂತರ ಅವರ ಮಕ್ಕಳಾದ ಉದಯ್ ರಾಜ್ ಮತ್ತು ಶಶಿ ಕುಮಾರ್ ರವರು ಹಿಡಿದುಕೊಂಡು ಎಳೆದಾಡಿ ಕೈಗಳಿಂದ ಗುದ್ದಿದರು ವರಲಕ್ಷ್ಮೀ ರವರು ತಳ್ಳಾಡಿ ಕೆಟ್ಟ ಮಾತುಗಳಿಂದ ಬೈದು, ಸದರಿ ರವರು ಆಸ್ತಿ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಮಡು ಪದೆ ಪದೆ ತನ್ನ ಮೇಲೆ ಗಲಾಟೆ ಮಾಡಿ ಪ್ರಾಣ ಬೆದರಿಕೆ ಸಹಾ ಹಾಕಿರುತ್ತಾರೆ. ನಂತರ ಗಲಾಟೆಯನ್ನು ಅಲ್ಲಿಯೇ ಇದ್ದ ಸುರೇಶ್ ಮತ್ತು ಇತರರು ಬಂದು ಬಿಡಿಸಿ ಬುದ್ದಿವಾದ ಹೇಲಿ ಕಳುಹಿಸದರು ನಂತರ ತಾನು ಯಾವುದೋ ವಾಹದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು ಚಿಕಿತ್ಸೆಯನ್ನು ಪಡೆಯುತ್ತಿರುತ್ತೇನೆ ಆದ್ದರಿಂದ ವಿನಾಃ ಕಾರಣ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಮರದ ರಿಪೀಸ್ ನಿಂದ ದೆಗೆ ಮತ್ತು ಎಡ ತೋಳಿಗೆ/ಭುಜಕ್ಕೆ ಹೊಡೆದು ಗಾಯವುಂಟುಮಾಡಿ ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿ ಈ ದಿನ ರಾತ್ರಿ 7-15 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.371/2021 ಕಲಂ. 379 ಐ.ಪಿ.ಸಿ:-

     ದಿನಾಂಕ: 25/08/2021 ರಂದು ಸಂಜೆ 6.15 ಗಂಟೆಗೆ ಠಾಣೆಯ ಶ್ರೀ ನಾರಾಯಣಸ್ವಾಮಿ, ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ 25/08/2021 ರಂದು ತಾನು ಠಾಣೆಗೆ ಒದಗಿಸಿರುವ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-326 ವಾಹನದಲ್ಲಿ ಸಿಬ್ಬಂದಿಯವರಾದ ಸಿ.ಹೆಚ್.ಸಿ-41 ಜಗದೀಶ, ಸಿ.ಹೆಚ್.ಸಿ-39 ಬಾಬಾಜಾನ್, ಸಿ.ಹೆಚ್.ಸಿ-249 ಸಂದೀಪ್ ಕುಮಾರ್, ಸಿ.ಪಿ.ಸಿ-544 ವೆಂಕಟರವಣ ಮತ್ತು ಸಿ.ಪಿ.ಸಿ-16 ಲೋಕೇಶ ರವರೊಂದಿಗೆ ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5.30 ಗಂಟೆ ಸಮಯದಲ್ಲಿ ದೊಡ್ಡಗಂಜೂರು ಗ್ರಾಮದ ಬಳಿ ಹೋಗುತ್ತಿದ್ದಾಗ, ಯಾರೋ ಇಬ್ಬರು ವ್ಯಕ್ತಿಗಳು ಕೆಎ-07 ಎಕ್ಸ್-1997 ನೊಂದಣಿ ಸಂಖ್ಯೆಯ ಟಿವಿಎಸ್ ಹೆವಿಡ್ಯೂಟಿ ದ್ವಿಚಕ್ರ ವಾಹನದಲ್ಲಿ ಒಂದು ಚೀಲವನ್ನು ಇಟ್ಟುಕೊಂಡು ಚಿಂತಾಮಣಿಗೆ ಕಡೆಗೆ ಬರುತ್ತಿದ್ದು, ಪೊಲೀಸ್ ಜೀಪ್ ಮತ್ತು ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಅವರು ದ್ವಿಚಕ್ರ ವಾಹನವನ್ನು ಹಿಂದಕ್ಕೆ ತಿರುಗಿಸಿಕೊಂಡು ಹೋಗುತ್ತಿದ್ದಾಗ ತಮಗೆ ಅನುಮಾನ ಬಂದು ಜೀಪ್ ನಲ್ಲಿ ಅವರನ್ನು ಹಿಂಬಾಲಿಸಿಕೊಂಡು ಹೋಗಿ ತಾನು ಮತ್ತು ಸಿಬ್ಬಂದಿಯವರು ಅವರನ್ನು ಹಿಡಿದು ಅವರ ಹೆಸರು ಮತ್ತು ವಿಳಾಸ ಕೇಳಲಾಗಿ 1) ಮುನಿರಾಜು @ ಮುನಿ ಬಿನ್ ವೆಂಕಟೇಶಪ್ಪ, 32 ವರ್ಷ, ಆದಿ ಕರ್ನಾಟಕ ಜನಾಂಗ, ನಂಬಿಹಳ್ಳಿ ಗ್ರಾಮ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ, 2) ಶಿವಕುಮಾರ್ @ ಶಿವ ಬಿನ್ ಮುನಿಯಪ್ಪ, 32 ವರ್ಷ, ಆದಿ ಕರ್ನಾಟಕ ಜನಾಂಗ, ಸೀಪುರ ಗ್ರಾಮ, ಕೋಲಾರ ತಾಲ್ಲೂಕು ಮತ್ತು ಜಿಲ್ಲೆ ಹಾಲಿವಾಸ: ನಂಬಿಹಳ್ಳಿ ಗ್ರಾಮ, ಶ್ರೀನಿವಾಸಪುರ ತಾಲ್ಲೂಕು ಎಂದು ಗಾಬರಿಯಿಂದ ತಿಳಿಸಿದ್ದು, ದ್ವಿಚಕ್ರ ವಾಹನದಲ್ಲಿದ್ದ ಚೀಲವನ್ನು ಬಿಚ್ಚಿ ನೋಡಲಾಗಿ ಅದರಲ್ಲಿ ಕೇಬಲ್ ವೈರು ಇದ್ದು, ಅವರನ್ನು ಕುರಿತು ಸದರಿ ಕೇಬಲ್ ವೈರ್ ನ ಬಗ್ಗೆ ವಿಚಾರಿಸಲಾಗಿ ಅವರು ಸದರಿ ಮಾಲಿನ ಬಗ್ಗೆ ಸಮಂಜಸವಾದ ಉತ್ತರ ನೀಡದೆ ಇದ್ದು, ಅವರನ್ನು ಮಾಲಿನ ಬಗ್ಗೆ ಸರಿಯಾದ ಉತ್ತರವನ್ನು ನೀಡುವಂತೆ ತಿಳಿಸಿದಾಗ, ತಾವಿಬ್ಬರೂ ಸದರಿ ಕೇಬಲ್ ವೈರ್ ಅನ್ನು ಈ ದಿನ ಮದ್ಯಾಹ್ನ 3.30 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕು ಚಿಕ್ಕಪುರ ಗ್ರಾಮದ ಬಳಿ ಇರುವ ನರಸಿಂಹರೆಡ್ಡಿ ರವರ ಜಮೀನಿನಲ್ಲಿ ಇರುವ ಕೊಳವೆ ಬಾವಿಗೆ ಅಳವಡಿಸಿದ್ದನ್ನು ಕಳ್ಳತನ ಮಾಡಿದ್ದು, ಸದರಿ ಕೇಬಲ್ ವೈರ್ ಅನ್ನು ಚಿಂತಾಮಣಿ ನಗರದಲ್ಲಿ ಯಾರಿಗಾದರೂ ಮಾರಾಟ ಮಾಡುವ ಸಲುವಾಗಿ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾರೆ. ಕೇಬಲ್ ವೈರ್ ಅನ್ನು ಪರಿಶೀಲಿಸಲಾಗಿ ಇದು ಸಮಾರು 10 ಮೀಟರ್ ಉದ್ದ ಇದ್ದು ಸುಮಾರು 1,300/- ರೂ ಬೆಲೆ ಬಾಳುತ್ತೆ. ನಂತರ ಆರೋಪಿಗಳನ್ನು ವಶಕ್ಕೆ ಪಡೆದು ಮಾಲು ಮತ್ತು ದ್ವಿಚಕ್ರ ವಾಹನದ ಸಮೇತ ಆರೋಪಿಗಳನ್ನು ಠಾಣೆಯಲ್ಲಿ ಹಾಜರುಪಡಿಸಿದ್ದು, ಸದರಿ ಆರೋಪಿಗಳ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.373/2021 ಕಲಂ. 323,504,307,34 ಐ.ಪಿ.ಸಿ:-

     ದಿನಾಂಕ: 25/08/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ರಾಧಾಕೃಷ್ಣ.ಎಸ್ ಬಿನ್ ಲೇಟ್ ಶ್ರೀರಾಮ, 31 ವರ್ಷ, ವಕ್ಕಲಿಗರು, ಟೆಂಪೋ ಚಾಲಕ, ಕರಿಯಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 8.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ ತಾಯಿಗೆ 1ನೇ ತಾನು ಹಾಗೂ 2ನೇ ನಾಗಾರ್ಜುನ ಎಂಬ ಇಬ್ಬರು ಮಕ್ಕಳಿದ್ದು, ತನ್ನ ತಮ್ಮ ನಾಗಾರ್ಜುನ ಈಗ್ಗೆ 3 ವರ್ಷಗಳ ಹಿಂದೆ ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿರುತ್ತಾನೆ. ತನ್ನ ತಂದೆ ಸರ್ಕಾರಿ ಶಿಕ್ಷಕರಾಗಿದ್ದು, ಈಗ್ಗೆ ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ. ತಾನು ಸರ್ಕಾರಿ ಕೆಲಸಕ್ಕಾಗಿ ಅರ್ಜಿಯನ್ನು ಹಾಕಿಕೊಂಡಿರುತ್ತೇನೆ. ತಾನು ಈಗ್ಗೆ ಒಂದೂವರೆ ವರ್ಷದ ಹಿಂದೆ ತೆಲಂಗಾಣ ರಾಜ್ಯದ ಹೈದರಾಬಾದ್ ನಗರದ ವಾಸಿ ಲೇಟ್ ಆರ್.ವೆಂಕಣ್ಣ ರವರ ಮಗಳಾದ ರಮಾದೇವಿ ರವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿರುತ್ತೇನೆ. ತಾನು ಪ್ರೀತಿಸಿ ಮದುವೆಯಾಗಿರುವುದು ತನ್ನ ತಮ್ಮನಿಗೆ ಇಷ್ಠವಿರಲಿಲ್ಲ. ಈ ವಿಚಾರವಾಗಿ ತನಗೂ ಮತ್ತು ತನ್ನ ತಮ್ಮನಿಗೆ ಈ ಹಿಂದೆ ಹಲವಾರು ಬಾರಿ ಗಲಾಟೆಗಳಾಗಿದ್ದು, ತಮ್ಮ ಗ್ರಾಮದ ಹಿರಿಯರು ತಮಗೆ ಬುದ್ದಿವಾದ ಹೇಳಿ ರಾಜಿ ಮಾಡಿರುತ್ತಾರೆ. ಈಗಿರುವಲ್ಲಿ ದಿನಾಂಕ: 24/08/2021 ರಂದು ರಾತ್ರಿ ಸುಮಾರು 10.15 ಗಂಟೆ ಸಮಯದಲ್ಲಿ ತನ್ನ ತಮ್ಮ ನಾಗಾರ್ಜುನ ಮತ್ತು ಆತನ ಹೆಂಡತಿ ರೋಜಾ ಹಾಗೂ ಆತನ ಮಾವ ಶಿವಲಿಂಗಾರೆಡ್ಡಿ ರವರು ತನ್ನ ಮನೆಯ ಬಳಿ ಬಂದು ತನ್ನನ್ನು ಕುರಿತು “ಲೋಫರ್ ನನ್ನ ಮಗನೇ, ಬೋಳಿ ನನ್ನ ಮಗನೇ, ನಮ್ಮ ಒಪ್ಪಿಗೆ ಇಲ್ಲದೆ ಆಂದ್ರದ ಹುಡುಗಿಯನ್ನು ಮದುವೆ ಮಾಡಿಕೊಂಡು ಬಂದು ನಮ್ಮ ಮನೆಯ ಮುಂದೆ ವಾಸ ಮಾಡುತ್ತೀಯಾ” ಎಂದು ಅವಾಚ್ಯಶಬ್ದಗಳಿಂದ ಬೈದು, ಆ ಪೈಕಿ ನಾಗಾರ್ಜುನ ಕೈಗಳಿಂದ ತನ್ನ ಮೈ ಮೇಲೆ ಹೊಡೆದು ಕೆಳಕ್ಕೆ ಬೀಳಿಸಿದ್ದು, ರೋಜಾ ಮತ್ತು ಶಿವಲಿಂಗಾರೆಡ್ಡಿ ರವರು ಕಾಲುಗಳಿಂದ ಮೈ ಮೇಲೆ ಒದ್ದಿರುತ್ತಾರೆ. ಎಲ್ಲರೂ ಸೇರಿ “ಈ ನನ್ನ ಮಗನನ್ನು ಇಲ್ಲಿಯೇ ಸಾಯಿಸಿ ಬಿಡೋಣ” ಎಂದು ಪ್ರಾಣಬೆದರಿಕೆ ಹಾಕಿದ್ದು, ಆ ಪೈಕಿ ನಾಗಾರ್ಜುನ ತಾನು ಪ್ರೀತಿಸಿ ಮದುವೆಯಾಗಿರುವ ಹಳೆ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ನಾಗಾರ್ಜುನ ತನ್ನ ಕತ್ತಿನ ಕೆಳಭಾಗ ಚಾಕುವಿನಿಂದ ಕೋಯ್ದು ಕೊಲೆ ಮಾಡಲು ಪ್ರಯತ್ನಿಸಿ ರಕ್ತಗಾಯವನ್ನುಂಟು ಮಾಡಿರುತ್ತಾನೆ. ತಾನು ನೋವಿನಿಂದ ಕಿರುಚಿಕೊಂಡಾಗ ಸ್ಥಳಕ್ಕೆ ತಮ್ಮ ಪಕ್ಕದ ಮನೆಯ ವಾಸಿಗಳಾದ ಗಂಗಾಧರ ಮತ್ತು ಮಂಜುನಾಥ ರವರು ಬಂದಾಗ ಮೇಲ್ಕಂಡ ಮೂರು ಜನರು ಓಡಿ ಹೋಗಿರುತ್ತಾರೆ. ನಂತರ ಗಂಗಾಧರ ಮತ್ತು ತನ್ನ ಪತ್ನಿ ರಮಾದೇವಿ ತನ್ನನ್ನು ದ್ವಿಚಕ್ರ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಆಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ನಂತರ ಈ ದಿನ ಸಂಜೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ವಾಪಸ್ಸು ಬಂದು ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಮೇಲ್ಕಂಡ ಮೂರು ಜನರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

10.ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.154/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ: 25/08/2021 ರಂದು ಸಂಜೆ 17:15 ಗಂಟೆಗೆ ಘನ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುವ ಪಿಸಿ 367 ಚೇತನ್ ರೆಡ್ಡಿ ರವರು ಎನ್.ಸಿ.ಆರ್ ನಂ: 110/2021 ರ ಅನುಮತಿ ಪಡೆದ ಪ್ರತಿಯನ್ನು ಹಾಜರುಪಡಿಸಿದ ಸಾರಾಂಶವೆನೆಂದರೆ  ದಿನಾಂಕ:24/08/2021ರಂದು  ನಾನು ಹಾಗೂ ಹೆಚ್.ಸಿ 177 ಸರ್ವೇಶ್ ಹಾಗೂ ಪಿಸಿ 190 ವೇಣು ರವರು  ಸರ್ಕಾರಿ ಜೀಪ್ ಸಂಖ್ಯೆ ಕೆಎ 40 ಜಿ 3699 ನಲ್ಲಿ ಚಿಂತಾಮಣಿ ನಗರದಲ್ಲಿ ಗಸ್ತಿನಲ್ಲಿದ್ದಾಗ  ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ನಗರದ ಊರು ಮುಂದೆ ಬಳಿ ಇರುವ ಚಿಲ್ಲರೆ ಅಂಗಡಿಯ ಬಳಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಅಂಕಿಗಳನ್ನು ಬರೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಗಜಾನನ ವೃತ್ತದಲ್ಲಿ ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ  ಪಂಚರೊಂದಿಗೆ ಊರು ಮುಂದೆ ಬಳಿ ಹೋಗಿ ಮೊರೆಯಲ್ಲಿ ನಿಂತು ನೋಡಲಾಗಿ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಯಾರೋ ಒಬ್ಬ ಆಸಾಮಿಯು ಒಂದು ಪೆನ್  ಪೇಪರ್ ಹಿಡಿದುಕೊಂಡು  1 ರೂ ಗೆ 80 ರೂ ಕೊಡುವುದಾಗಿ ಕೂಗಿಕೊಂಡು ಚೀಟಿಯಲ್ಲಿ ಅಂಕಿಗಳನ್ನು ಬರೆಯುತ್ತಿದ್ದವನನ್ನು ಹಿಡಿದು  ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಜಬೀ ವುಲ್ಲಾ ಬಿನ್ ಮೆಹಮದ್ ಖಾನ್, 25 ವರ್ಷ,  ಕೂಲಿ ಕೆಲಸ, ಮುಸ್ಲಿಂ ಜನಾಂಗ, ಕಿದ್ವಾಯಿ ನಗರ, ಚಿಂತಾಮಣಿ ನಗರ ಎಂತ ತಿಳಿಸಿರುತ್ತಾನೆ.  ನಂತರ ಆತನ ಬಳಿ ಪರಿಶೀಲಿಸಲಾಗಿ 1 ಮಟ್ಕಾಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಮತ್ತು 350/- ರೂ ನಗದು ಹಣ ಇದ್ದು ಸದರಿ ಹಣದ ಬಗ್ಗೆ ವಿಚಾರಿಸಲಾಗಿ ಮಟ್ಕಾ ಬರೆದಿದ್ದರಿಂದ ಬಂದ ಹಣವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಸದರಿ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೊಂಡಿರುತ್ತೆ. ಮೇಲ್ಕಂಡ ಆಸಾಮಿ ಮತ್ತು ಮಾಲನ್ನು ಠಾಣೆಗೆ ಕರೆದುಕೊಂಡು ಬಂದಿದ್ದು ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯ ಮೇರೆಗೆ ಠಾಣಾ ಎನ್.ಸಿ,ಆರ್ ನಂ: 110/2021 ರಂತೆ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದ ಮೇರೆಗೆ ಠಾಣಾ ಮೊ ಸಂ: 154/2021 ಕಲಂ: 78(3) ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೇ.

 

11. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.155/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ: 25/08/2021 ರಂದು ಸಂಜೆ 17:30 ಗಂಟೆಗೆ ಘನ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುವ ಪಿಸಿ 367 ಚೇತನ್ ರೆಡ್ಡಿ ರವರು ಎನ್.ಸಿ.ಆರ್ ನಂ: 111/2021 ರ ಅನುಮತಿ ಪಡೆದ ಪ್ರತಿಯನ್ನು ಹಾಜರುಪಡಿಸಿದ ಸಾರಾಂಶವೆನೆಂದರೆ  ಹೆಚ್.ಸಿ 110 ವೇಣು, ಡಿಸಿಬಿ/ಸಿ.ಇಎನ್ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಆದ ನಾನು ದಿನಾಂಕ:24/08/2021ರಂದು  ಪಿ.ಐ ಸಾಹೇಬರು ನನಗೆ ಹಾಗೂ ಹೆಚ್.ಸಿ 198 ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ನೇಮಿಸಿದ್ದು ಅದರಂತೆ ನಾವು  ಚಿಂತಾಮಣಿ ನಗರದ   ಜೆಜೆ ಕಾಲೋನಿ, ಅಜಾದ್ ಚೌಕ್, ಚೇಳೂರು  ವೃತ್ತ ಕಡೆ ಗಸ್ತು ಮಾಡುತ್ತಿದ್ದ   ಸಂಜೆ 5-30 ಗಂಟೆ ಸಮಯದಲ್ಲಿ ನಗರದ ಮುಸ್ಸಿಪಲ್ ಕಾಂಪ್ಲೇಕ್ಸ್  ನಲ್ಲಿರುವ ಟೀ ಅಂಗಡಿಯ ಮುಂಭಾಗದಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಅಂಕಿಗಳನ್ನು ಬರೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ ಪಂಚರೊಂದಿಗೆ ಮುಸ್ಸಿಪಲ್ ಕಾಂಪ್ಲೇಕ್ ನ ಬಳಿ ಹೋಗಿ ಮೊರೆಯಲ್ಲಿ ನಿಂತು  ನೋಡಲಾಗಿ ಟೀ ಅಂಗಡಿಯ ಮುಂಭಾಗದಲ್ಲಿ ಯಾರೋ ಒಬ್ಬ ಆಸಾಮಿಯು ಒಂದು ಪೆನ್  ಪೇಪರ್ ಹಿಡಿದುಕೊಂಡು  1 ರೂ ಗೆ 80 ರೂ ಕೊಡುವುದಾಗಿ ಕೂಗಿಕೊಂಡು ಚೀಟಿಯಲ್ಲಿ ಅಂಕಿಗಳನ್ನು ಬರೆಯುತ್ತಿದ್ದವನನ್ನು ಹಿಡಿದು  ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಕಾರ್ತಿಕ್ ಬಿನ್ ಶ್ರೀನಿವಾಸ್, 23 ವರ್ಷ, ನಾಯಕರು, ಕೂಲಿ ಕೆಲಸ, ಯಶವಂತಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿರುತ್ತಾನೆ.  ನಂತರ ಆತನ ಬಳಿ ಪರಿಶೀಲಿಸಲಾಗಿ 1 ಮಟ್ಕಾಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಮತ್ತು 530/- ರೂ ನಗದು ಹಣ ಇದ್ದು ಸದರಿ ಹಣದ ಬಗ್ಗೆ ವಿಚಾರಿಸಲಾಗಿ ಮಟ್ಕಾ ಬರೆದಿದ್ದರಿಂದ ಬಂದ ಹಣವೆಂದು ಹಾಗೂ ಈ ಹಣವನ್ನು ನಾನು ಸಿದ್ದು [ಪೋನ್ ನಂ 8073438050]  ಚಿಂತಾಮಣಿ  ನಗರ ರವರಿಗೆ ನೀಡುತ್ತಿರುವುದಾಗಿ ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಸದರಿ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೊಂಡಿರುತ್ತೆ. ಮೇಲ್ಕಂಡ ಆಸಾಮಿ ಮತ್ತು ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯ ಮೇರೆಗೆ ಠಾಣಾ ಎನ್.ಸಿ,ಆರ್ ನಂ: 111/2021 ರಂತೆ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದ ಮೇರೆಗೆ ಠಾಣಾ ಮೊ ಸಂ: 155/2021 ಕಲಂ: 78(3) ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೇ.

 

12. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.155/2021 ಕಲಂ. 20(a)(b) NARCOTIC DRUGS & PSYCHOTROPIC SUBSTANCES ACT, 1985:-

     ದಿನಾಂಕ: 25/08/2021 ರಂದು ಬೆಳಿಗ್ಗೆ 07-30 ಗಂಟೆಗೆ ಬಾತ್ಮಿದಾರರಿಂದ ನನಗೆ ಬಂದ ಖಚಿತ ಮಾಹಿತಿ ಏನೆಂದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ವಂಟೂರು  ಗ್ರಾಮದ ವಾಸಿಯಾದ ದ್ಯಾವಪ್ಪ ಬಿನ್ ಲೇಟ್ ಚಿನ್ನಪ್ಪ ಎಂಬುವವರು ತನ್ನ ಜಮೀನಿನಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಗಾಂಜಾ ಗಿಡಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಬೆಳೆಸಿರುವುದಾಗಿ  ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿದ್ದು ಸದರಿ ಮಾಹಿತಿಯನ್ನು ನಾನು ಮಾನ್ಯ ಪೊಲೀಸ್ ಅಧೀಕ್ಷಕರು ಚಿಕ್ಕಬಳ್ಳಾಪುರ ರವರಿಗೆ ತಿಳಿಸಿ ಮೇಲ್ಕಂಡ ಸ್ಥಳದ ಮೇಲೆ ದಾಳಿ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಅವರಿಂದ ಮೌಖಿಕ ಅನುಮತಿಯನ್ನು ಪಡೆದುಕೊಂಡು, ದಾಳಿ ಸಮಯದಲ್ಲಿ ಗೆಜೆಟೆಡ್ ಅಧಿಕಾರಿಯಾಗಿ ಹಾಜರಿರಲು , ದಾಳಿ ಮಾಡಲು ಲಿಖಿತ ಅನುಮತಿ ಕೋರಿ ಮಾನ್ಯ ಪೊಲೀಸ್ ಉಪಾಧೀಕ್ಷಕರು, ಚಿಂತಾಮಣಿ ಉಪವಿಭಾಗ ರವರಿಗೆ ಮನವಿಯನ್ನು ಸಲ್ಲಿಸಿಕೊಂಡು ಲಿಖಿತ ಅನುಮತಿಯನ್ನು ಪಡೆದುಕೊಂಡ ನಂತರ  ದಾಳಿ ಮಾಡುವ ಸಮಯದಲ್ಲಿ ಗೆಜೆಟೆಡ್ ಅಧಿಕಾರಿಯು ಹಾಜರಿರಲು ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯ ವೈಧ್ಯಾಧಿಕಾರಿಗಳಾದ  ಶ್ರೀ ಗಿರಿಜೇಶ್ ರವರಿಗೆ ದಾಳಿ ಪಂಚನಾಮೆಗೆ ಹಾಜರಾಗಿ ನಿಯಮನುಸಾರ ಶೀಘ್ರವಾಗಿ ಕ್ರಮ ಕೈಗೊಳ್ಳಲು ಮನವಿಯನ್ನು ಸಲ್ಲಿಸಿಕೊಂಡು ಗೆಜೆಟೆಡ್ ಅಧಿಕಾರಿಯಾಗಿ ಶ್ರೀ ಗಿರಿಜೇಶ್ ವೈಧ್ಯಾಧಿಕಾರಿಗಳು ಬಶೆಟ್ಟಿಹಳ್ಳಿ ಪ್ರಾಥಮಿಕ ಆಸ್ಪತ್ರೆ ರವರನ್ನು ಬರಮಾಡಿಕೊಂಡು ಮತ್ತು ಪಂಚರಾಗಿ ಬಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿಯಾದ ಶ್ರೀ ಕೆ.ವಿ ವೆಂಕಟೇಶ್ ಬಿನ್ ವೆಂಕಟರವಣಪ್ಪ ರವರನ್ನು ,ಬಶೆಟ್ಟಿಹಳ್ಳಿ ಗ್ರಾಮ ಲೆಕ್ಕಾಧಿಕಾರಿಯಾದ  ಶ್ರೀ ಬಸವರಾಜು ಬಿನ್ ಯಲ್ಲಪ್ಪ ಅಂಗಡಿ ರವರನ್ನು ಬರಮಾಡಿಕೊಂಡು ಅವರಿಗೆ ಮೇಲ್ಕಂಡ ವಿಚಾರ ತಿಳಿಸಿ ದಾಳಿ ಪಂಚನಾಮೆಗೆ ಪಂಚರಾಗಿ ಬಂದು ಸಹಕರಿಸಲು ಕೋರಿದ್ದರ ಮೇರೆಗೆ ಅವರು ಒಪ್ಪಿಕೊಂಡಿದ್ದು ಪಂಚರಿಗೆ ನೋಟೀಸ್ ಜಾರಿ ಮಾಡಿ ಸಹಿಗಳನ್ನು ಪಡೆದುಕೊಂಡು ನಂತರ ಬಶೆಟ್ಟಿಹಳ್ಳಿ ಗ್ರಾಮದ ತರಕಾರಿ ಮತ್ತು ಚಿಲ್ಲರೆ ಅಂಗಡಿಯ ಮಾಲೀಕರಾದ  ಶ್ರೀ ಅಂಬರೀಶ ಬಿನ್ ದ್ಯಾವಪ್ಪ,27 ವರ್ಷ ರವರನ್ನು ತೂಕದ ಯಂತ್ರದ ಸಮೇತ ಮೌಲ್ಯ ಮಾಪಕರಾಗಿ ಬರಮಾಡಿಕೊಂಡು ನಂತರ ಬೆಳಗ್ಗೆ 11-00 ಗಂಟೆಗೆ ಸಿಬ್ಬಂದಿಯವರಾದ ಸಿ.ಹೆಚ್.ಸಿ 119 ಆಶ್ವಥ ಬಿ.ಎ, ಸಿ.ಹೆಚ್.ಸಿ 143 ಶ್ರೀನಾಥ,ಸಿ.ಹೆಚ್.ಸಿ 186 ನರಸಿಂಹಯ್ಯ ಮತ್ತು ಸಿ.ಪಿ.ಸಿ 91 ಮಂಜುನಾಥ,ಸಿ.ಪಿ.ಸಿ 557 ಶ್ರೀನಿವಾಸ ಮೂರ್ತಿ, ಸಿ.ಪಿ.ಸಿ 434 ಹೊನ್ನಪ್ಪ ತಳವಾರ ರವರನ್ನು ಕರೆದುಕೊಂಡು ಠಾಣೆಗೆ ಒದಗಿಸಿರುವ ಕೆಎ40-ಜಿ-60 ಸರ್ಕಾರಿ ಜೀಪ್ ನಲ್ಲಿ ವಂಟೂರು ಗ್ರಾಮದ ಬಳಿಗೆ ಹೋಗಿ ಮತ್ತೊಮ್ಮೆ ಬಾತ್ಮಿದಾರರಿಂದ ಮಾಹಿತಿಯನ್ನು ಖಚಿತ ಪಡಿಸಿಕೊಂಡು  ವಂಟೂರು ಗ್ರಾಮದ ವಾಸಿಯಾದ ಆರೋಪಿ ದ್ಯಾವಪ್ಪ ಬಿನ್ ಲೇಟ್ ಚಿನ್ನಪ್ಪ ರವರ ಬಗ್ಗೆ ಮಾಹಿತಿ ಪಡೆದು ಅವರನ್ನು ಗ್ರಾಮದಲ್ಲಿ ವಶಕ್ಕೆ ಪಡೆದು ತನ್ನ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ನಂತರ ಪಂಚರೊಂದಿಗೆ ಆಸಾಮಿಯನ್ನು ಕುರಿತು ಜಮೀನಿನ ಬಳಿಗೆ ಕರೆದುಕೊಂಡು ಹೋಗಲು ತಿಳಿಸಿದ್ದು ಅದರಂತೆ   ಆಸಾಮಿಯು ಪೊಲೀಸರನ್ನು ಮತ್ತು ಪಂಚರನ್ನು ತಮ್ಮ ಗ್ರಾಮದಿಂದ  ಪಶ್ಚಿಮದ ದಿಕ್ಕಿಗೆ ತನ್ನ ಜಮೀನಿನ ಬಳಿಗೆ ಕರೆದುಕೊಂಡು ಹೋಗಿದ್ದು ನಾವುಗಳು ಸದರಿ ಜಮೀನಿನಲ್ಲಿ ಪರಿಶೀಲಿಸಲಾಗಿ ಜಮೀನಿನ ಮಧ್ಯಭಾಗದಲ್ಲಿ ಒಂದು ಹಸಿರು ಬಣ್ಣದ ಮೆಸ್ ನ್ನು ಒಂದು ಗಿಡ ಕಾಣಿಸದಂತೆ ಗಿಡದ ಸುತ್ತಲೂ  ಕಟ್ಟಿದ್ದು  ಉಳಿದಂತೆ  ಸದರಿ ಜಮೀನಿನ ಅಲ್ಲಲ್ಲಿ 4 ಗಾಂಜಾ ಗಿಡಗಳು ಬೆಳೆಸಿರುವುದು ಕಂಡು ಬಂದಿರುತ್ತೆ. ಸದರಿ ಐದು ಗಿಡಗಳು ಗಾಂಜಾ ಗಿಡಗಳು ಎಂತ ಖಚಿತಪಡಿಸಿಕೊಂಡು ಸದರಿ ಆಸಾಮಿಗೆ ನೀವು ಏತಕ್ಕಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವುದು, ಗಾಂಜಾ ಗಿಡಗಳನ್ನು ಬೆಳೆಸಲು ನಿಮ್ಮ ಬಳಿ ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲ ತಾನು ಗಾಂಜಾ ಗಿಡಗಳನ್ನು ಬೆಳಸಿ ನಂತರ ಮಾರಾಟ ಮಾಡಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಬೆಳೆಸಿರುವುದಾಗಿ ತಿಳಿಸಿರುತ್ತಾನೆ. ನಂತರ ಆಸಾಮಿಗೆ ಗೆಜೆಟೆಡ್ ಅಧಿಕಾರಿಗಳು ಎನ್.ಡಿ.ಪಿ.ಎಸ್ ಆಕ್ಟ್ ಕಲಂ:50 ರೀತ್ಯ ಪ್ರಶ್ನಾವಳಿಗಳನ್ನು ಸಿದ್ದಪಡಿಸಿ ನಮಗೆ ನೀನು ಮಾದಕ ವಸ್ತು ಬೆಳಸಿರುವ ಬಗ್ಗೆ ಮಾಹಿತಿ ಇರುತ್ತದೆ ಹೌದೆ ?, ನಿಮ್ಮನ್ನು ಯಾರಾದರು ನ್ಯಾಯಾಧಿಶರ ಮುಂದೆ ಅಥವಾ ಬೆರೋಬ್ಬ ಗೆಜೆಟೆಡ್ ಅಧಿಕಾರಿಯವರ ಮುಂದೆ ಹಾಜರು ಪಡಿಸಿ ಅಂಗಶೋಧನೆ ಮಾಡಿಸಬೇಕೆ ? ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಹಕ್ಕು ಕಾನೂನು ಪ್ರಕಾರ ನಿಮಗಿದೆ, ನಾನು ಸಹ ಒಬ್ಬ ಗೆಜೆಟೆಡ್ ಅಧಿಕಾರಿಯಾಗಿದ್ದು,ನಾನೆ ಮಾಡಬಹುದೆ? ಎಂಬ ಪ್ರಶ್ನೆಗಳನ್ನು ಕೇಳಿ ಆಸಾಮಿಯ ಅಂಗಶೋಧನೆ ಮಾಡಿದ್ದು ಆಸಾಮಿಯ ಅಂಗಶೋದನೆ ಸಮಯದಲ್ಲಿ ಆತನ ಬಳಿ ಯಾವುದೇ ಮಾದಕ ವಸ್ತಗಳು ಸಿಕ್ಕಿರುವುದಿಲ್ಲ. ನಂತರ ಆರೋಪಿಯು ತನ್ನ ಜಮೀನಿನಲ್ಲಿ ಬೆಳೆಸಿದ್ದ  ಗಾಂಜಾ ಗಿಡಗಳನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಿದಾಗ ಸದರಿ ಜಮೀನಿನಲ್ಲಿ ಒಟ್ಟು 5 ಗಾಂಜಾ ಗಿಡಗಳಿದ್ದು, ಅವುಗಳ ಪೈಕಿ ಒಂದು ಗಿಡ ಸುಮಾರು 4 ಅಡಿ ಎತ್ತರವಿದ್ದು ಉಳಿದ 4 ಗಿಡಗಳು ಸುಮಾರು 2-3 ½  ಅಡಿ ಎತ್ತರ ವಿರುತ್ತವೆ.  ಇವು ಹಸಿ ಗಾಂಜಾ ಗಿಡಗಳಾಗಿರುತ್ತವೆ. ಇವುಗಳನ್ನು ಗೆಜೆಟೆಡ್ ಅಧಿಕಾರಿ, ಪಂಚರು ಮತ್ತು ಮೌಲ್ಯಮಾಪಕರ ಸಮಕ್ಷಮದಲ್ಲಿ ಆರೋಪಿ ದ್ಯಾವಪ್ಪ ಬಿನ್ ಲೇಟ್ ಚಿನ್ನಪ್ಪ ರವರಿಂದ  ಬೇರು ಸಮೇತ ಕಿತ್ತಿಸಿ ತೂಕದ ಯಂತ್ರದ ಸಹಾಯದಿಂದ ತೂಕ ಹಾಕಿಸಿದಾಗ ಓಟ್ಟು 8 ಕೆ.ಜಿ 750 ಗ್ರಾಂ ತೂಕ ಇರುತ್ತೆ. ಇವುಗಳ ಅಂದಾಜು ಮೌಲ್ಯ 50,000/- ರೂಗಳು ಆಗಬಹುದೆಂದು ಅಂದಾಜಿಸಲಾಯಿತು. ನಂತರ 5 ಗಾಂಜಾ ಗಿಡಗಳನ್ನು ಅಮಾನತ್ತು ಪಡಿಸಿಕೊಂಡು ಅದರಲ್ಲಿ ಎಫ್.ಎಸ್.ಎಲ್ ತಜ್ಞರಿಗೆ ಕಳುಹಿಸಕೊಡವ ಸಲುವಾಗಿ ಮಾದರಿಗಾಗಿ 300 ಗ್ರಾಂ ಗಾಂಜಾ ಪ್ರತ್ಯೇಕವಾಗಿ ತೆಗೆದುಕೊಂಡು ಸದರಿ ಗಾಂಜವನ್ನು ಮತ್ತು ಉಳಿದ ಗಾಂಜಾ ಗಿಡಗಳನ್ನು ಬಿಳಿ ಬಟ್ಟೆಯಿಂದ ಸುತ್ತಿ “ಡಿ” ಎಂಬ ಅಕ್ಷರದಿಂದ ಸೀಲು ಮಾಡಿರುತ್ತೆ. ಸದರಿ ಹಸಿ ಗಾಂಜಾ ಗಿಡಗಳನ್ನು  ಬೆಳಗ್ಗೆ 11-30 ಗಂಟೆಯಿಂದ ಮಧ್ಯಾಹ್ನ 14-00 ಗಂಟೆಯವರೆಗೆ  ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಪಂಚನಾಮೆ, ಮಾಲು, ಆರೋಪಿಯೊಂದಿಗೆ ಮಧ್ಯಾಹ್ನ 14-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಮಾದಕ ವಸ್ತುವಾದ 5 ಗಾಂಜಾ ಗಿಡಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ತನ್ನ ಜಮೀನಿನಲ್ಲಿ  ಬೆಳೆಸಿರುವ  ಆರೋಪಿ ದ್ಯಾವಪ್ಪ ಬಿನ್ ಲೇಟ್ ಚಿನ್ನಪ್ಪರವರ ರವರ ವಿರುದ್ದ ಠಾಣಾ ಮೊ.ಸಂ:117/2021 ಕಲಂ:20(ಎ) ಮತ್ತು (ಬಿ)ಎನ್.ಡಿ.ಪಿ.ಎಸ್ ಆಕ್ಟ್-1985 ರೀತ್ಯ ಸ್ವತಃ ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

 

13. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.118/2021 ಕಲಂ. 143,144,147,148,323,324,504,506,149 ಐ.ಪಿ.ಸಿ:-

     ದಿನಾಂಕ:25-08-2021 ರಂದು ಮಧ್ಯಾಹ್ನ 03-45  ಗಂಟೆಗೆ ಸಿ.ಹೆಚ್.ಸಿ 159 ರವರು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಪಡೆದ ಗಾಯಾಳು ಬಾಬಾ ಬಿನ್ ದಸ್ತುಸಾಭಿ ,36 ವರ್ಷ, ಮುಸ್ಲೀಂ ಜನಾಂಗ, ಜಿರಾಯ್ತಿ , ಈ ತಿಮ್ಮ ಸಂದ್ರ ಗ್ರಾಮ ರವರ ಹೇಳಿಕೆಯನ್ನು ಠಾಣೆಯಲ್ಲಿ ಹಾಜರುಪಡಿಸಿದ್ದ ಹೇಳಿಕೆಯ ಸಾರಾಂಶವೇನೆಂದರೆ, ತಮ್ಮ ಮನೆಯ ಪಕ್ಕದಲ್ಲಿ ತನ್ನ ತಾಯಿ, ತಮ್ಮ ರವರು ವಾಸವಾಗಿರುತ್ತಾರೆ. ದಿನಾಂಕ:24-08-2021 ರಂದು ಮಧ್ಯಾಹ್ನ 02-00 ಗಂಟೆ ಸಮಯದಲ್ಲಿ ತಮ್ಮ ಮನೆಯ ಮುಂದಿನ ಚೆರಂಡಿಯಲ್ಲಿ ನೀರು ಸಾರಾಗವಾಗಿ ಹೋಗುತ್ತಿಲ್ಲವಾದ್ದರಿಂದ ಅದನ್ನು ಕ್ಲೀನ್ ಮಾಡುತ್ತಿದ್ದೆ, ಆ ವೇಳೆಗೆ ತಮ್ಮದೇ ಗ್ರಾಮ ಅಜೀಂ ಬಾಷ ರವರು ತಮ್ಮ ಮನೆಯ ಬಳಿ ಬಂದು ಈ ಚೆರಂಡಿ ತಮ್ಮ ಮನೆಯ ಹಿಂಭಾಗಕ್ಕೆ ಹೋಗಿದ್ದು, ನೀನು ಚೆರಂಡಿ ಮುಖಾಂತರ ನೀರು ಬಿಟ್ಟರೇ ತಮ್ಮ ಮನೆಗೆ ತೊಂದರೆಯಾಗುತ್ತೆ. ಎಂದು ಹೇಳಿ ತಮ್ಮ ಮೇಲೆ ಜಗಳಕ್ಕೆ ಬಂದನು ಆಗ ತಾನು ತಮ್ಮ ಮನೆಯ ಮುಂದೆ ಗಲೀಜನ್ನು ಕ್ಲೀನ್ ಮಾಡುತ್ತಿದ್ದೇನೆ. ಎಂದು ಹೇಳಿದಾಗ ಏಕಾಏಕಿಯಾಗಿ ಅಜೀಂ ಬಾಷನು ತನ್ನ ಮೇಲೆ ಹಲ್ಲೇ ಮಾಡಲು ಪ್ರಯತ್ನ ಮಾಡಿದನು. ಆ ವೇಳೆಗೆ ಅವರ ತಾಯಿಯಾದ ವಹೀಬಾ ಕೊಂ ಪ್ರಕೃದ್ದೀನ್ ಸಾಬಿ ರವರು ಕೆಟ್ಟ ಮಾತುಗಳಿಂದ ಬೈಯುತ್ತಿದ್ದು ನಮ್ಮ ಮನೆಯ ಬಳಿ ಬಂದರು ತಾನು ತಾವು ಗಂಡಸರು ಮಾತನಾಡಿಕೊಳ್ಳುತ್ತೇವೆ ನೀನು ಹೋಗು ಅಲ್ಲಿ ಮನೆಗೆ ಎಂದು ಹೇಳಿದಾಗ ಆಕೆಯ ಹಿಂಭಾಗ ತಮ್ಮ ಬಲಭುಜದ ಕೆಳಗೆ ಬೆನ್ನಿನ ಕಡೆ ಜೋರಾಗಿ ಕಚ್ಚಿ ರಕ್ತ ಗಾಯ ಮಾಡಿದರು. ತಾನು ಆಕೆಯಿಂದ ಬಿಡಿಸಿಕೊಳ್ಳುವಷ್ಠರಲ್ಲಿ ಅಜೀಂ ಬಾಷ ಅಲ್ಲಿಯೇ ಬಿದ್ದದ್ದ ಕಲ್ಲಿನಿಂದ ತನ್ನ ತಲೆಗೆ ಹೊಡೆದಿದ್ದು, ತಲೆ ಹಿಂಬಾಗ ಹೊಡೆದು ಗಾಯ ಪಡಿಸಿದನು. ಆವೇಳೆಗೆ ಅವರ ತಂಗಿ ನಾಜಿಮಾ ಮತ್ತು ಮಹಬೂಬ್ ಬಿನ್ ಬಾಷು ಸಾಬಿ ಮತ್ತು ಅಜೀಂ ಬಾಷ ತಂದೆ ಪಕೃದ್ದೀನ್ ರವರು ಎಲ್ಲರೂ ತಮ್ಮ ಮನೆ ಒಳಗೆ ಬಂದು ಕೆಟ್ಟ ಕೆಟ್ಟ ಮಾತುಗಳಿಂದ ಬೈಯುತ್ತಾ ಈ ದಿನ ನಿನನ್ನು ಜೀವ ಸಹಿತ ಬಿಡುವುದಿಲ್ಲ ಬೆದರಿಕೆ ಹಾಕುತ್ತಾ ಗಲಾಟೆ ಮಾಡಿದರು. ತನಗೆ ತಲೆಗೆ ಗಾಯಗಿದ್ದರಿಂದ ಅಲ್ಲಿಂದ ಹೊರಟುಹೋದರು. ಗಲಾಟೆ ನಡೆಯುವಾಗ ತನ್ನನ್ನು ಬಿಡಿಸಲು ಬಂದ ತನ್ನ ತಾಯಿ ಹಯಾ ತ್ ಬೀ ಕೊಂ ದಸ್ತು ಸಾಬಿ ರವರು ಬಂದಾಗ ಅವರನ್ನು ಸಹ ಜೋರಾಗಿ ತಳ್ಳಿದ್ದರಿಂದ ಅವರೂ ಸಹ ಕೆಳಕ್ಕೆ ಬಿದ್ದು ಮೂಗೇಟುಗಳಾಗಿರುತ್ತೇವೆ. ಹಾಗು ತನ್ನ ತಮ್ಮನ ಹೆಂಡತಿ ಯಾದ ಷಾರಿಜಾನ್ ಕೋಂ ಸರ್ದಾರ್ ರವರಿಗೆ ಸಹ ಕೈಗಳಿಂದ ಹೊಡೆದು ಅಜೀಂ ಬಾಷ ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾನೆ. ತನಗೆ ಮತ್ತು ತನ್ನ ತಾಯಿಗೆ ನೋವುಗಳ ಹಾಗೂ ಗಾಯಗಳಾಗಿದ್ದರಿಂದ ಅಂಬ್ಯೂಲೆನ್ಸ್ ಮುಖಾಂತರ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿರುತ್ತೇನೆ. ವಿನಾಕಾರಣ ತನ್ನ ಮೇಲೆ ಜಗಳ ಮಾಡಿ ಕಲ್ಲಿನಿಂದ ಹೊಡೆದು ಗಾಯಗಳ ಮಾಡಿದ್ದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿರುವ ಹೇಳಿಕೆಯಾಗಿರುತ್ತೆ.

 

14. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.119/2021 ಕಲಂ. 143,144,147,148,323,324,504,506,149 ಐ.ಪಿ.ಸಿ:-

     ದಿನಾಂಕ:25-08-2021 ರಂದು ಸಂಜೆ 04-30 ಗಂಟೆಗೆ ಪಿರ್ಯಾಧಿಯಾದ ಫಕೃದ್ದೀನ್ ಸಾಬ್ ಬಿನ್ ಲೇಟ್ ಅನಿಫ್ ಸಾಬಿ , 60 ವರ್ಷ, ಮುಸ್ಲೀಂ ಜನಾಂಗ, ಜಿರಾಯ್ತಿ, ಈ ತಿಮ್ಮಸಂದ್ರ ಗ್ರಾಮ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:24-08-2021 ರಂದು ಮಧ್ಯಾಹ್ನ 01-00 ಗಂಟೆ ಸಮಯದಲ್ಲಿ ಪಂಚಾಯ್ತಿ ವತಿಯಿಂದ ತಮ್ಮ ಮನೆಯ ಬಳಿ ಚರಂಡಿ ಕೆಲಸ ಮಾಡುತ್ತಿದ್ದು ತಮ್ಮ ಮನೆಗೆ ತೊಂದರೆಯಾಗದಂತೆ ಹಾಗೂ ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಕೆಲಸ ಮಾಡಿಕೊಳ್ಳಿ ಎಂದು ಪಿ.ಡಿ.ಓ ರವರಿಗೆ ಹೇಳುತ್ತಿದ್ದಾಗ ತಮ್ಮ ಗ್ರಾಮದ ಸಂಬಂಧಿಕರಾದ ಬಾಬಾ ಬಿನ್ ದಸ್ತುಸಾಬಿ ಮತ್ತು ಸರ್ಧಾರ್ ಬಿನ್ ದಸ್ತುಸಾಬಿ ರವರು ತಮ್ಮ ಮನೆಯ ಬಳಿ ಮಧ್ಯಾಹ್ನ 01-30 ಗಂಟೆ ಸಮಯಕ್ಕೆ ಬಂದು ಚರಂಡಿ ವಿಚಾರದಲ್ಲಿ ತಮ್ಮ ಮೇಲೆ ಜಗಳ ತೆಗೆದು ತಮ್ಮ ಜಮೀನಿನಲ್ಲಿಯೇ ಚರಂಡಿ ತೆಗೆಯ ಬೇಕೆಂದು ಸರ್ಧಾರ್ ರವರು ಲೋಫರ್ ನನ್ನ ಮಗನೇ ಎಂತ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆಯುತ್ತಿದ್ದಾಗ ಅಷ್ಠರಲ್ಲಿ ತನ್ನ ಹೆಂಡತಿ ವಹಿದಾ ಮತ್ತು ತನ್ನ ಮಗ ಅಜೀಂ ಪಾಷ ರವರು ರವರು ಅಡ್ಡ ಬಂದಾಗ ಬಾಬಾ ಅಲ್ಲಿಯೇ ಬಿದ್ದಿದ್ದ ದೊಣ್ಣೆಯನ್ನು ತೆಗೆದುಕೊಂಡು ತನ್ನ ಹೆಂಡತಿ ತೆಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಪಡಿಸಿ ಸೊಂಟದ ಮೇಲೆ ಹೊಡೆದು ಮೂಗೇಟು ಉಂಟು ಮಾಡಿರುತ್ತಾನೆ. ಅಷ್ಠರಲ್ಲಿ ಬಾಬಾ ರವರ ತಾಯಿ ಹಯಾತ್ ಭಿ  ಬಾಬ ರವರ ಪತ್ನಿ ಅಮ್ಮಾಜಾನ್ ಮತ್ತು ಸರ್ಧಾರ್ ರವರ ಪತ್ನಿ ಶಾಹಜಾನ್ ರವರು ಬಂದು ತಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು ಆ ಪೈಕಿ ಹಯಾತ್  ಭಿ ರವರು ತನ್ನ ಮಗನನ್ನು ಕೈಗಳಿಂದ ಹೊಡೆದು ಮೂಗೇಟು ಉಂಟು ಮಾಡಿರುತ್ತಾರೆ. ನಂತರ  ಬಾಬಾ ಚಾಕನ್ನು ತೆಗೆದುಕೊಂಡು ಬಂದು ನಿಮ್ಮ ಸಾಯಿಸುವುದಾಗಿ ಬೆದರಿಕೆ ಹಾಕಿರುತ್ತಾನೆ. ಅಷ್ಠರಲ್ಲಿ ತಮ್ಮ ಗ್ರಾಮದ ಮೌಲ ಬಿನ್ ಭಕ್ಷು ಸಾಬಿ, ಇಮ್ರಾನ್ ಬಿನ್ ಖಾಸಿಂ ಸಾಬ್ ರಹಮತ್ತುಲ್ಲಾ ಬಿನ್ ಲತೀಫ್ ಸಾಭ್ ರವರು ಬಂದು ಜಗಳ ಬಿಡಿಸಿ ಉಪಚರಿಸಿ ನಂತರ ತಾವು ತಮ್ಮ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ತನ್ನ ಹೆಂಡತಿಯನ್ನು ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ನಂತರ ವೈಧ್ಯರ ಸಲಹೆ ಮೇರೆಗೆ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಸಿರುತ್ತೇನೆ. ಆದ್ದರಿಂದ ತಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕ್ರಮ ಜರುಗಿಸಬೇಕೆಂದು ನೀಡಿರುವ ದೂರಾಗಿರುತ್ತೆ.

 

15. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.202/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:21/08/2021 ರಂದು ಸಂಜೆ 18-15 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಆರೋಪಿ, ಮಾಲು, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಮೇಮೋವಿನ ಸಾರಾಂಶವೇನೆಂದರೆ,  ದಿನಾಂಕ: 21/08/2021 ರಂದು ಸಂಜೆ 4-00 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ವಿಧುರಾಶ್ವತ್ಥ ಹೊರ ಠಾಣೆ ವ್ಯಾಪ್ತಿಯ ರಾಮಚಂದ್ರಪುರ ಗ್ರಾಮದಲ್ಲಿ, ಚಿಕ್ಕನಾರಾಯಾಣಪ್ಪ ಬಿನ್ ಲೇಟ್ ಚಿಕ್ಕ ಆದಿಮೂರ್ತಿ ರವರ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ವಿಧುರಾಶ್ವತ್ಥ ಹೊರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಸಿ-179 ಶಿವಶೇಖರ, ಮತ್ತು ಗ್ರಾಮ ಗಸ್ತಿನ ಪಿ.ಸಿ-281 ಗುರುಸ್ವಾಮಿ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು ಸಂಜೆ 4-30 ಗಂಟೆಗೆ ಮಾಹಿತಿ ಇದ್ದ  ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋದರು. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿ ಹೆಸರು ವಿಳಾಸ ಕೇಳಲಾಗಿ, ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿ ತನ್ನ ಹೆಸರು  ಚಿಕ್ಕನಾರಾಯಾಣಪ್ಪ ಬಿನ್ ಲೇಟ್ ಚಿಕ್ಕ ಆದಿಮೂರ್ತಿ, 53 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ರಾಮಚಂದ್ರಪುರ ಗ್ರಾಮ, ಕಸಬಾ ಹೋಬಳಿ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ,  ಅದರಲ್ಲಿ  90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 18 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 620 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 632.34/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಸಂಜೆ 4-45 ಗಂಟೆಯಿಂದ 5-45  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 18  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 6-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ 363/2021 ರಂತೆ ದಾಖಲು ಮಾಡಿರುತ್ತೆ.ಈ ದಿನ ನ್ಯಾಯಾಲಯದ ಪಿಸಿ 205 ರವರು ನೀಡಿದ ನ್ಯಾಯಾಲಯದ ಅನುಮತಿಯ ವರದಿಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 

16. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.203/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:23/08/2021 ರಂದು ಸಂಜೆ:7-00 ಗಂಟೆಗೆ  ಫಿರ್ಯಾದುದಾರರಾದ ಶ್ರೀಮತಿ ಲಲಿತಮ್ಮ ಮ.ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ: 23/08/2021 ರಂದು  ಸಂಜೆ 4-30  ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ಗೌರಿಬಿದನೂರು ಕಸಬಾ ಹೋಬಳಿ ಕುಡುಮಲಕುಂಟೆ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಹೆಚ್.ಸಿ-455 ಅಶ್ವತ್ಥಪ್ಪ, ಹೆಚ್,ಸಿ-20 ಶ್ರೀ ನಿವಾಸರೆಡ್ಡಿ  ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-140 ರಲ್ಲಿ  ಕುಡುಮಲಕುಂಟೆ ಗ್ರಾಮದಲ್ಲಿ  ಹೋಗಿ , ಅಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಸಂಜೆ 5-00   ಗಂಟೆಗೆ   ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ.  ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ  ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ಪ್ರಕಾಶ್ ಬಿನ್ ಮಂಜುನಾಥ, 22ವರ್ಷ, ಅಂಗಡಿ ವ್ಯಾಪಾರ, ವಕ್ಕಲಿಗರು, ಭೀಮನಹಳ್ಳೀ ಗ್ರಾಮ, ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು    ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 15   ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 350 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 526.95/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಸಂಜೆ 5-30 ಗಂಟೆಯಿಂದ   ಸಂಜೆ 6-30   ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ   90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 15  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 7-00 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,   ಈ ಮೆಮೋ ನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ದೂರಾಗಿರುತ್ತೆ.

 

17. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.118/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿ:25/08/2021 ರಂದು ಬೆ:ಗ್ಗೆ 10-30 ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿಸಿ 318 ರವರು ನ್ಯಾಯಾಲಯದಿಂದ ಎನ್ ಸಿ ಆರ್ ನಂಬರ್ 154/2021 ರಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಅನುಮತಿ ಪಡೆದುಕೊಂಡು ಬಂದು ಆದೇಶವನ್ನು ಹಾಜರ್ ಪಡಿಸಿದರ ಸಾರಾಂಶವೆನೆಂದರೆ ದಿನಾಂಕ:19/07/2021 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ  ಸಿ ಹೆಚ್ ಸಿ-214 ಲೋಕೇಶ್ ನೀಡಿದ  ದೂರಿನ ಸಂಬಂದವೆನೆಂದರೆ ದಿನಾಂಕ: 19/07/2021 ರಂದು ಬೆಳಿಗ್ಗೆ  ಮಾನ್ಯ ಪಿ.ಎಸ್ ಐ, ಸಾಹೇಬರು ತನಗೆ ಗೌರಿಬಿದನೂರು ನಗರದಲ್ಲಿ ಗುಪ್ತ ಮಾಹಿತಿ ಮತ್ತು ಅಕ್ರಮ ಚಟುವಟಿಕೆಗಳಾದ ಅಕ್ರಮ ಮದ್ಯ ಮಾರಾಟ-ಸಾಗಣಿಕೆ, ಇಸ್ಪೀಟ್, ಮಟ್ಕಾ ಜೂಜಾಟಗಳ ಬಗ್ಗೆ ಮಾಹಿತಿ ಸಂಗ್ರಹಣೆ ಹಾಗೂ ಅಂತಹವರ ವಿರುದ್ದ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೇಮಕ ಮಾಡಿದ್ದು ಅದರಂತೆ ಗೌರಿಬಿದನೂರು ನಗರದಲ್ಲಿ ಗಸ್ತು ಮಾಡುತ್ತೀದ್ದಾಗ ಬಾತ್ಮಿದಾರರು ತನಗೆ ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಪೊನ್ ಮಾಡಿ ಗೌರಿಬಿದನೂರು ನಗರ ಮರಿಗಮ್ಮ ದೇವಸ್ಥಾನದ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡು ಸ್ಥಳವಾಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ತಾನು ಮಾನ್ಯ ಪಿ ಎಸ್ ಐ ಸಾಹೇಬರಿಗೆ ಮಾಹಿತಿಯನ್ನು ತಿಳಿಸಿ ಸಿ ಹೆಚ್ ಸಿ -12 ಶಿವಶಂಕಪ್ಪ ರವರನ್ನು ಬರಮಾಡಿಕೊಂಡು ಅವರೋಂದಿಗೆ ಬೆಂಗಳೂರು ವೃತ್ತ ಬಿಳಿ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿ ಪಂಚರೋಂದಿಗೆ ಸ್ವಲ್ಪ ದೂರ ನಡೆದುಕೊಂಡು ಹೋಗಿ ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ದೇವಸ್ಥಾನದ ಮರೆಯಲ್ಲಿ  ನಿಂತು ನೋಡಲಾಗಿ ಯಾರೋ ಒಬ್ಬ ಅಸಾಮಿಯು ಮರಿಗಮ್ಮ ದೇವಸ್ಥಾನದ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ  ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳವಕಾಶ  ಮಾಡಿಕೊಟ್ಟಿದ್ದು ಅಲ್ಲಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತೀರುವುದು ಕಂಡು ಬಂದಿದ್ದು ಪಂಚರ ಸಮಕ್ಷಮ ದಾಳಿ ಮಾಡಲು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರು ಓಡಿ ಹೋಗಿದ್ದು ಮದ್ಯವನ್ನು ಸರಬರಾಜು ಮಾಡುತ್ತೀದ್ದವನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶ್ರೀನಿವಾಸ  ಬಿನ್ ಲಕ್ಷ್ಮಪ್ಪ, 30 ವರ್ಷ, ನಾಯಕರು, ಜಿರಾಯ್ತಿ, ವಾಸ: ಜಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು. ಪೊನ್: 9731561812 ಎಂದು ತಿಳಿಸಿದ್ದು ಸದರಿಯವರನ್ನು ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳವಕಾಶವನ್ನು ಮಾಡಿಕೊಟ್ಟ ಬಗ್ಗೆ ಯಾವುದಾರರೂ  ಪರವಾನಿಗೆ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ  ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 1) ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ,ಎಲ್, ಸಾಮಥ್ರ್ಯದ ಮದ್ಯವಿರುವ 13 ಟೆಟ್ರಾ ಪಾಕೇಟ್ಗಳು ಇದ್ದು ಇವುಗಳ ಮೌಲ್ಯ 457-00 ರೂಗಳು ಆಗಿದ್ದು ಮದ್ಯದ ಪ್ರಮಾಣವನ್ನು ಲೇಕ್ಕ ಮಾಡಲಾಗಿ 1.170 ಎಂ.ಎಲ್ ಆಗಿರುತ್ತೆ. 2) ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ,ಎಲ್, ಸಾಮಥ್ರ್ಯದ ಖಾಲಿ 03 ಟೆಟ್ರಾ ಪಾಕೇಟ್ಗಳು, 3) ಮದ್ಯವನ್ನು ಕುಡಿದು ಬಿಸಾಕಿದಂತಹ ಖಾಲಿ 03 ಪ್ಲಾಸ್ಟಿಕ್ ಗ್ಲಾಸ್ಗಳು, ಮತ್ತು 4) ಒಂದು ಲೀಟರ್ ಸಾಮಥ್ರ್ಯದ ಒಂದು ಖಾಲಿ ವಾಟರ್ ಬಾಟೆಲ್ ಇದ್ದು ಇವುಗಳನ್ನು ಬೆಳಿಗ್ಗೆ 10-45 ಗಂಟೆಯಿಂದ ಬೆಳಿಗ್ಗೆ 11-45 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ  ಮದ್ಯಾಹ್ನ 12-00 ಗಂಟೆಗೆ ಬಂದು ಮದ್ಯಾಹ್ನ 12-30 ಗಂಟೆಗೆ ವರದಿಯನ್ನು ಸಿದ್ದಪಡಿಸಿ  ಆರೋಪಿಯ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕಾಗಿ ಕೋರುತ್ತೇನೆ  ನೀಡಿದ ವರದಿ ದೂರನ್ನು ಪಡೆದುಕೊಂಡು ಠಾಣಾ ಎನ್ ಸಿ ಆರ್:154/2021 ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡು ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿದ್ದು ಈ ದಿನ ನ್ಯಾಯಾಲಯದ ಆದೇಶದ ಪತ್ರವನ್ನು ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

18. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.119/2021 ಕಲಂ. 78(III) ಕೆ.ಪಿ ಆಕ್ಟ್:-

     ದಿ:25/08/2021 ರಂದು ಸಂಜೆ 5-30 ಗಂಟೆ ಸಮಯದಲ್ಲಿ ನ್ಯಾಯಾಲಯದಲ್ಲಿ ಪಿ ಸಿ-318 ರವರು ಎನ್ ಸಿ ಆರ್ ನಂ:165/2021 ರಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲು  ಮಾಡಿಕೊಳ್ಳಲು ಅನುಮತಿಯನ್ನು ತಂದು ಹಾಜರ್ ಪಡಿಸಿದ ಸಾರಾಂಶವೆನಂದರೆ  ದಿನಾಂಕ:31/07/2021 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ಪಿ.ಎಸ್.ಐ ಸಾಹೇಬರು ನೀಡಿದ ವರದಿಯ ಈ ಸಂಬಂದ ದಿನಾಂಕ:31/07/2021 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಗೌರಿಬಿದನೂರು ನಗರ ಪೊಲೀಸ್ ಠಾಣೆಗೆ ಒದಗಿಸಿರುವ ಸರ್ಕಾರಿ ಜೀಪ್ ಸಂಖ್ಯೆ-40 ಜಿ-281 ರಲ್ಲಿ ಚಾಲಕ ಎ.ಪಿ.ಸಿ-76 ಹರೀಶ್ ರವರೊಂದಿಗೆ ಗಸ್ತು ಮಾಡುತ್ತೀರುವಾಗ ಬೆಳಿಗ್ಗೆ 10-15 ಗಂಟೆಯಲ್ಲಿ ಗೌರಿಬಿದನೂರು ನಗರ ಪೊಲೀಸ್ ಬೀಟ್ ಸಿಬ್ಬಂದಿಯಾದ ಲಿಂಗಪ್ಪ. ಸಿ.ಹೆಚ್.ಸಿ-226 ರವರು ಪೊನ್ ಮಾಡಿ ಗೌರಿಬಿದನೂರು ನಗರದ ನೆಹರೂಜಿ ಕಾಲೋನಿಯ ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿ ಯಾರೋ ಒಬ್ಬ ಮಹಿಳೆಯು ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ಯಾವುದೇ ಪರವಾನಿಗೆ ಇಲ್ಲದೇ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತೀರುವುದಾಗಿ  ಮಾಹಿತಿಯನ್ನು ತಿಳಿಸಿದ್ದು ಅದರಂತೆ ತಾನು ಬೆಂಗಳೂರು ವೃತ್ತದ ಬಳಿ ಹೋಗಿ ಅಲ್ಲಿಗೆ ಠಾಣಾ ಸಿಬ್ಬಂದಿಯಾದ ಸಿ ಹೆಚ್ ಸಿ-214 ಲೋಕೇಶ್ ಮತ್ತು ಮ.ಪಿ.ಸಿ-592 ಸರ್ವಮಂಗಳ ರವರನ್ನು ಬೆಳಿಗ್ಗೆ 10-30 ಗಂಟೆ ಸಮಯಕ್ಕೆ ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಸರ್ಕಾರಿ ಜೀಪ್ನಲ್ಲಿ ಕರೆದುಕೊಂಡು ಪಶು ಅಸ್ಪತ್ರೆಯ ಬಳಿ ಬೆಳಿಗ್ಗೆ 10-35 ಗಂಟೆ ಸಮಯಕ್ಕೆ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ದಾಳಿ ಕಾಲದಲ್ಲಿ ಹಾಜರಿದ್ದು ತನಿಖೆಗೆ ಸಹಕರಿಸಲು ಕೋರಿದ್ದರ ಮೆರೆಗೆ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನೆಹರೂಜಿ ಕಾಲೋನಿಗೆ ಹೋಗುವ ರಸ್ತೆಯ ಮರೆಯಲ್ಲಿ ಜೀಪ್ನ್ನು ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಮಹಿಳೆಯು ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿ ಅಕ್ರಮವಾಗಿ 1 ರೂಗೆ 70-00 ರೂಪಾಯಿಗಳನ್ನು ಕೋಡುವುದಾಗಿ ಅಮಿಷವೋಡ್ಡಿ ಸಾರ್ವಜನಿಕರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತೀರುವುದಾಗಿ ಕಂಡುಬಂದಿದ್ದು ನಂತರ ನಾವುಗಳು ಪಂಚರೊಂದಿಗೆ ಸದರಿಯವರ ಮೇಲೆ ದಾಳಿ ಮಾಡಿ ಮ.ಪಿ.ಸಿ-592 ಸರ್ವಮಂಗಳ ರವರ ಸಹಾಯದಿಂದ ಆಕೆಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ ಶ್ರೀಮತಿ ರಾಧಮ್ಮ ಕೋಂ ಮೋಹನ್, 38 ವರ್ಷ, ಬಲಜಿಗರು, ವ್ಯಾಪಾರ, ವಾಸ: ನೆಹರೂಜಿ ಕಾಲೋನಿ, ಗೌರಿಬಿದನೂರು ನಗರ ಎಂದು ತಿಳಿಸಿದ್ದು ಮ.ಪಿ.ಸಿ-592 ರವರ ಸಹಾಯದಿಂದ ಪರಿಶೀಲನೆ ಮಾಡಲಾಗಿ ವಿವಿದ ಮುಖ ಬೆಲೆಯ ಒಟ್ಟು 670-00 ರೂಪಾಯಿಗಳು, ಒಂದು ಮಟ್ಕಾ ಚೀಟಿ, ಮತ್ತು ಒಂದು ಬಾಲ್ ಪೆನ್ನು ಇರುತ್ತೆ. ಮಟ್ಕಾ ಚೀಟಿ ಮತ್ತು ಮಟ್ಕಾ ಜೂಜಾಟದಿಂದ ಹಣವನ್ನು ಯಾರಿಗೆ ಕೊಡುತ್ತೀಯಾ ಎಂದು ಕೇಳಿದಕ್ಕೆ ಗೌರಿಬಿದನೂರು ನಗದ ನದಿಗಡ್ಡೆ ವಾಸಿಯಾದ ಗುಲ್ಜಾರ್ ಖಾನ್ @ ಗುಲ್ಲು ಬಿನ್ ಬಾಷ, 28 ವರ್ಷ, ರವರಿಗೆ ಕೋಡುತ್ತೆನೆಂದು ತಿಳಿಸಿದ್ದು. ನಂತರ ಮಾಲುಗಳನ್ನು ಮುಂದಿನ ಕ್ರಮಕ್ಕಾಗಿ ಬೆಳಿಗ್ಗೆ 10-45 ಗಂಟೆಯಿಂದ 11-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು  ಆರೋಪಿ, ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಮದ್ಯಾಹ್ನ 12-00 ಗಂಟೆ ಸಮಯಕ್ಕೆ ಬಂದು  ಮದ್ಯಾಹ್ನ 12-30 ಗಂಟೆಗೆ ವರದಿಯನ್ನು ಸಿದ್ದಪಡಿಸಿ ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ ಮೆರೆಗೆ ಠಾಣಾ ಎನ್.ಸಿ.ಆರ್. ನಂ:165/2021 ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಲು ಅನುಮತಿಗಾಗಿ ಘನ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿಕೊಂಡಿದ್ದು ಈ ದಿನ ದಿನಾಂಕ:25/08/2021 ರಂದು ನ್ಯಾಯಾಲಯವು ಅನುಮತಿ ನೀಡಿರುವ  ಆದೇಶವನ್ನು  ಪಡೆದುಕೊಂಡು ಠಾಣಾ ಮೊ.ಸಂ:119/2021 ಕಲಂ 78(3) ಕೆ. ಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

19. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.120/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿ:25/08/2021 ರಂದು ಸಂಜೆ 6-00 ಗಂಟೆಯ ಸಮಯದಲ್ಲಿ ಗೌರಿಬಿದನೂರು ನಗರ ಪೊಲೀಸ್ ಠಾಣೆಯ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಸಿಪಿಸಿ-318.ಶ್ರೀ.ದೇವರಾಜ ರವರು ಠಾಣಾ ಎನ್.ಸಿ.ಆರ್.ನಂ.167/2021 ರಲ್ಲಿ  ಆರೋಪಿಯ ವಿರುದ್ದ ಕ್ರಿಮಿನಲ್  ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಕೋರಿ ಅನುಮತಿಯನ್ನು ನೀಡಲು ಕೋರಿ ಅಸಲು ಎನ್.ಸಿ.ಆರ್.167/2021 ಹಾಗೂ  ಪಿರ್ಯಾದಿದಾರರ  ಅಸಲು-ದೂರು ವರದಿಯೊಂದಿಗೆ  ಸಲ್ಲಿಸಿಕೊಂಡಿದ್ದ  ಮನವಿಯ ವಿಚಾರದಲ್ಲಿ  ಘನ ನ್ಯಾಯಾಲಯವು ಅನುಮತಿಯನ್ನು ನೀಡಿರುವ  ಆದೇಶದ  ದಾಖಲೆಯನ್ನು ಹಾಜರ್ಪಡಿಸಿದ್ದನ್ನು ಪಡೆದುಕೊಂಡಿದ್ದು ಎನ್.ಸಿ.ಆರ್.167/2021 ದೂರು ವರದಿಗೆ ಸಂಬಂಧಿಸಿದ  ವಿಚಾರವೇನೆಂದರೆ ದಿ:31/07/2021 ರಂದು ಸಂಜೆ 4-30 ಗ0ಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ ಶಶಿಧರ್, ಸಿಪಿಐ ಸಾಹೇಬರು ಠಾಣಾಗೆ ಹಾಜರಾಗಿ ನೀಡಿದ ಮೇಮೋವಿನ ಸಾರಾಂಶದಲ್ಲಿ ದಿ:31/07/2021 ರಂದು ಮದ್ಯಾಹ್ನ 2-50 ಗಂಟೆ ಸಮಯದಲ್ಲಿ ವೃತ್ತ ಕಛೇರಿಯಲ್ಲಿದ್ದಾಗ ಕಲ್ಲೂಡಿ ಬ್ರಿಡ್ಜ್ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ಹೆಚ್.ಸಿ-224 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ:40 ಜಿ-1222 ರಲ್ಲಿ ಕಲ್ಲೂಡಿ ಬ್ರಿಡ್ಜ್ ಬಳಿ ಮದ್ಯಾಹ್ನ 3-05 ಗಂಟೆಗೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರ ಮಾಡಿಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಯಾರೋ ಇಬ್ಬರಿಗೆ ತೆಗೆದುಕೊಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ತಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿ ತಮ್ಮನ್ನು ಕಂಡು ಮದ್ಯಪಾನ ಮಾಡುತ್ತಿದ್ದವರು ಓಡಿ ಹೋಗಿರುತ್ತಾರೆ. ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯ  ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ವಿ.ಎನ್ ನಾರಾಯಣಗೌಡ ಬಿನ್ ಪಾಟೇಲ್ ಗೌಡ, 65 ವರ್ಷ, ವ್ಯವಸಾಯ, ವೆಳಪಿ ಗ್ರಾಮ, ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು ಸ್ಥಳದಲ್ಲಿದ್ದ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲನೆ ಮಾಡಲಾಗಿ ಅದರಲ್ಲಿ 1] 90 ಎಂ.ಎಲ್. ಸಾಮರ್ಥ್ಯದ ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ ಮದ್ಯವಿರುವ 22 ಟೆಟ್ರಾ ಪಾಕೆಟ್ ಗಳು, ಇವುಗಳ ಒಟ್ಟು ಸಾಮರ್ಥ್ಯ 01 ಲೀಟರ್ 980 ಎಂ.ಎಲ್ ಆಗಿದ್ದು ಇವುಗಳ ಒಟ್ಟು ಬೆಲೆ 772-86/- ರೂಪಾಯಿಗಳು ಆಗಿರುತ್ತೆ. 2] ಸ್ಥಳದಲ್ಲಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು, 3] 90 ಎಂ.ಎಲ್. ಸಾಮರ್ಥ್ಯದ ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು, ಸದರಿ ವ್ಯಕ್ತಿಯನ್ನು ಮಾರಲು ಮತ್ತು ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟ ಬಗ್ಗೆ ಯಾವುದಾದರೂ ಪರವಾನಿಗೆ ಇದ್ದರೇ ತೊರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೋ ಇಲ್ಲವೆಂದು ತಿಳಿಸಿರುತ್ತಾನೆ. ಆದ್ದರಿಂದ ಸ್ಥಳದಲ್ಲಿ ಮದ್ಯಾಹ್ನ 3-00 ಗಂಟೆಯಿಂದ 4-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂ.ಎಲ್. ಸಾಮರ್ಥ್ಯದ ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ ಮದ್ಯವಿರುವ 22 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದಿದ್ದ ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್. ಸಾಮರ್ಥ್ಯದ ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ 04 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು ಸಂಜೆ 4-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು ಈ ಮೇಮೂನೊಂದಿಗೆ ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ದ ಕಲಂ 15(ಎ)32(3) ಕೆ.ಇ ಆಕ್ಟ್ -1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್:167/2021 ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುವುದಾಗಿರುತ್ತೆ.   ನಂತರ ಠಾಣೆಯ  ಎನ್.ಸಿ.ಆರ್.ನಂ.167/2021 ರಲ್ಲಿನ  ಆರೋಪಿಯ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಬೇಕಾಗಿರುವುದರಿಂದ ಘನ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿ ಕೊಳ್ಳಲು ಅನುಮತಿಯನ್ನು  ನೀಡಲು ಕೋರಿ ವರದಿಯನ್ನು ನಿವೇದಿಸಿಕೊಳ್ಳಲಾಗಿರುತ್ತೆ.  ಈ ಸಂಬಂಧ ಘನ  ನ್ಯಾಯಾಲಯವು  ಆರೋಪಿಯ ವಿರುದ್ದ  ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಿರುವ ಅದೇಶವನ್ನು   ಈದಿನ ದಿ:25/08/2021 ರಂದು ಪಡೆದುಕೊಂಡು ಅರೋಪಿಯ ವಿರುದ್ದ ಠಾಣೆಯಲ್ಲಿ  ಮೊ.ಸಂ.120/2021 ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

20. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.121/2021 ಕಲಂ. 380,457 ಐ.ಪಿ.ಸಿ:-

     ದಿನಾಂಕ:26/08/2021 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಚಿಕ್ಕಮ್ಮ ಕೊಂ ಕರಿಯಣ್ಣ, ರವರು ಠಾಣಾಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನಂದರೆ ದಿನಾಂಕ;23/08/2021 ರಂದು ತನ್ನ ಮಕ್ಕಳಿಗೆ ಬ್ಯಾಂಕ್ ಖಾತೆಯನ್ನು ಮಾಡಿಸಲು ತನ್ನ ಗ್ರಾಮವಾದ ನಗರಗೆರೆ ಹೋಗಿದ್ದು ತನ್ನ ಗಂಡ ವ್ಯಾಪಾರಕ್ಕಾಗಿ (ಬ್ರಷ್) ಬೆಂಗಳುರು ಮತ್ತು ಇತರೆ ಕಡೆಗಳಿಗೆ ಹೋಗಿರುತ್ತಾರೆ. ಮನೆಯಲ್ಲಿ ತಾನು ಮತ್ತು ತನ್ನ ಮಕ್ಕಳಿರುತ್ತಾರೆ. ಆದರಂತೆ ಈ ಮೇಲ್ಕಂಡ ದಿನಾಂಕದಲ್ಲಿ ಊರಿಗೆ ಹೋಗಿದೆವು, ಆ ದಿನ ದಿನಾಂಕ:26/08/2021 ರಂದು ಬೆಳಗಿನ ಜಾವ 6-30 ಗಂಟೆ ಸಮಯದಲ್ಲಿ ಸುವರ್ಣ ಕೊಓಂ ಮಂಜಣ್ಣ,  ನವರು ಕರೆ ಮಾಡಿ ತನಗೆ ನಿಮ್ಮ ಮನೆ ಕಳ್ಳತವಾಗಿದೆ. ಎಂದು ಹೇಳಿದರು ಅದರಂತೆ ತಾನು ಗೌರಿಬಿದನೂರಿನಲ್ಲಿರುವ ತನಗೆ ಮನೆಗೆ ಬಂದು ನೋಡಲಾಗಿ ತನ್ನ ಮನೆಯ ಬಾಗಿಲನ್ನು ತೆಗೆದಿದ್ದು ಒಳಗಡೆ ನೋಡಿದಾಗ ರೋಮಿನಲ್ಲಿ ಇದ್ದ ಬೀರುವಿನ ಬಾಗಿಲು ಕಿತ್ತು ಹಾಕಿ ಅದರಲ್ಲಿ ಇದ್ದ ಸುಮಾರು 1] ಬಂಗಾದ ಚೈನು 37.900 ಗ್ರಾಂ, 2) 02 ಉಂಗುರಗಳು 20 ಗ್ರಾಂ, 3] 01 ಜೊತೆ ಮಾಟಿ 15-70 ಗ್ರಾಂ, 4] 01 ಡಾಲರು 4,350 ಗ್ರಾಂ, 5] ನಗದು ಹಣ 20,000=00 ರೂಪಾಯಿಗಳು ಬಂಗಾರದ ಒಡವೆಗಳು ಒಟ್ಟು 70 ಗ್ರಾಂ, ಆಗಿದು ಇವುಗಳನ್ನು ಅಂದಾಜು ಬೆಲೆ 2,30,000=00 ಬೆಲೆ ಬಾಳುವದಾಗಿರುತ್ತವೆ. ಇವುಗಳನ್ನು ಪತ್ತೆ ಹಚ್ಚಿ ಹಾಗೂ ಕಳ್ಳತನ ಮಾಡಿರು ಕಳ್ಳರನ್ನು ಸಹ ಪತ್ತೆ ಹಚ್ಚಿ ಇವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

21. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.122/2021 ಕಲಂ. 20(b) NARCOTIC DRUGS & PSYCHOTROPIC SUBSTANCES ACT, 1985:-

     ದಿನಾಂಕ;26/08/2021 ರಂದು ಬೆಳಿಗ್ಗೆ 11-30 ಗಂಟೆಗೆ ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಗೆ ವಾಪಸ್ಸಾಗಿ ದಾಳಿ ಮಾಡಿದ ಸಾರಾಂಶವೆನೆಂದರೆ ಈ ದಿನ ದಿನಾಂಕ:26-08-2021 ರಂದು ಬೆಳಿಗ್ಗೆ 9:30 ಘಂಟೆಯಲ್ಲಿ ಗೌರಿಬಿದನೂರು  ಗೌರಿಬಿದನೂರು ಆರಕ್ಷಕ ಉಪನಿರೀಕ್ಷಕರಾದ ಶ್ರೀ. ಪ್ರಸನ್ನ ಕುಮಾರ್ ಕೆ ರವರು ನಮ್ಮನ್ನು ಠಾಣೆಗೆ ಬರಮಾಡಿಕೊಂಡು ತಿಳಿಸಿದ್ದೇನೆಂದರೆ, ಗೌರಿಬಿದನೂರು ನಗರದ ಹೀರೆಬಿದನೂರು ಬೈಪಾಸ್ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದು, ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ದಾಳಿ ಮಾಡಲು ಮೌಖಿಕವಾಗಿ ಅನುಮತಿಯನ್ನು ಪಡೆದುಕೊಂಡಿದ್ದು, ಸದರಿ ಆಸಾಮಿಯ ಮೇಲೆ ದಾಳಿ ಮಾಡಲು ನೀವುಗಳು ಪಂಚಾಯ್ತಿದಾರರಾಗಿ ಸಹಕರಿಸಬೇಕಾಗಿ ಕೋರಿದ್ದು, ನಾವುಗಳು ಪಂಚಾಯ್ತಿದಾರರಾಗಿ ಸಹಕರಿಸಲು ಒಪ್ಪಿಕೊಂಡೆವು. ಆರಕ್ಷಕ ಉಪ ನಿರೀಕ್ಷಕರಾದ ಶ್ರೀ.ಪ್ರಸನ್ನ ಕುಮಾರ್ ಕೆ ರವರು ಅಕ್ರಮವಾಗಿ ಗಾಂಜಾ ಮಾಡುತ್ತಿದ್ದ ಆಸಾಮಿಗಳ ಮೇಲೆ ದಾಳಿ ಮಾಡಲು ಪಂಚಾಯ್ತಿದಾರರಾಗಿ ಸಹಕರಿಸಲು ರೆಕಾರ್ಡ್  ಆಫ್ ರೀಷನ್ ಕಲಂ 41 ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ನಮಗೆ ಪೊಲೀಸ್ ನೊಟೀಸನ್ನು ಜಾರಿ ಮಾಡಿದ್ದು, ನಾವುಗಳು ನೊಟೀಸಿಗೆ ಸಹಿಮಾಡಿರುತೇವೆ. ನಂತರ ಸಬ್ ಇನ್ಸ್ ಪೆಕ್ಟರ್ ರವರು ಗೆಜೆಟೆಡ್ ಅಧಿಕಾರಿಗಳಾದ ಡಾ. ಶ್ರೀನಿವಾಸ ರವರನ್ನು ದಾಳಿಗೆ ಸಹಕರಿಸಲು ಬರಮಾಡಿಕೊಂಡಿರುತ್ತಾರೆ. ನಂತರ ಗೌರಿಬಿದನೂರು ನಗರ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಪ್ರಸನ್ನ ಕುಮಾರ್ ರವರು ನಮ್ಮನ್ನು, ಡಾ.ಶ್ರೀನಿವಾಸ ಮತ್ತು  ಪೊಲೀಸ್  ಸಿಬ್ಬಂದಿಯಾದ ಜೀಪ್ ಚಾಲಕ ಹೆಚ್.ಸಿ 244 ಗೋಪಾಲ, ಹೆಚ್.ಸಿ 214 ಲೊಕೇಶ,  ಪಿ.ಸಿ 34 ಮಂಜುನಾಥ ರವರೊಂದಿಗೆ ಅಮಾನತ್ತುಪಡಿಸುವ ಸಮಯದಲ್ಲಿ ಉಪಯೋಗಿಸಲಾಗುವ ಬೆಂಕಿ ಪೊಟ್ಟಣ, ಮೇಣದ ಬತ್ತಿ, ದಾರ, ಸೂಜಿ ಮತ್ತು ಅರಗು, ಮೊಹರು ಮತ್ತು ತೂಕದ ಯಂತ್ರವನ್ನು ತಗೆದುಕೊಂಡು ಸರ್ಕಾರಿ ಪೊಲೀಸ್ ಜೀಪ್ ಸಂಖ್ಯೆ ಕೆ.ಎ-40 ಜಿ-281 ವಾಹನದಲ್ಲಿ  ಹೀರೆಬಿದನೂರು ಬೈಪಾಸ್ ಕಡೆಗೆ ಬಂದು ದರ್ಗಾ ಕಡೆಗೆ ಮರೆಯಲ್ಲಿ ಜೀಪನ್ನು ನಿಲ್ಲಿಸಿದ್ದು, ನಾವುಗಳೆಲ್ಲರೂ ಜೀಪಿನಿಂದ ಕೆಳಗೆ ಇಳಿದು ಬೈಪಾಸ್ ನ  ದರ್ಗಾ ಕಡೆಗೆ ಇರುವ ಅಂಗಡಿಗಳ ಮರೆಯಲ್ಲಿ ನಿಂತು  ನೋಡುಲಾಗಿ ಯಾರೋ ಒಬ್ಬ ವ್ಯಕ್ತಿ ಹೀರೆಬಿದನೂರು ಬೈಪಾಸ್ ನ ಸರ್ಕಲ್ ನ ಹಿಂದೂಪುರ ಕಡೆಯಿಂದ ಬರುವ ರಸ್ತೆಯ ಪೂರ್ವದ ಕಡೆಯಲ್ಲಿ  ನಿಂತಿದ್ದು, ಆತನ ಕೈಯ್ಯಲ್ಲಿ ಪಿಂಕ್ ಕಲರ್ ಪ್ಲಾಸ್ಟಿಕ್ ಕವರ್ ಅನ್ನು  ಹಿಡಿದುಕೊಂಡು ನಿಂತಿದ್ದು, ಪಂಚರಾದ ನಾವುಗಳು ಮತ್ತು ಪೊಲೀಸರು, ಆಡಳಿತ ವೈದ್ಯಾಧಿಕಾರಿಗಳಾದ ಡಾ.ಶ್ರೀನಿವಾಸ ರವರು ಪರಸ್ಪರ ಒಬ್ಬರನ್ನೊಬ್ಬರು ಅಂಗಶೋದನೆ ಮಾಡಿಕೊಂಡು ನಮ್ಮಗಳ ಯಾರ ಬಳಿಯೂ ಮಾಧಕ ವಸ್ತು ಗಾಂಜಾ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡೆವು. ನಂತರ ಸಮವಸ್ತ್ರದಲ್ಲಿ ಪೊಲೀಸ್ ಅಧಿಕಾರಿಗಳು ಆಸಾಮಿಗಳ ಹೋಗಿದ್ದು, ಪೊಲೀಸರನ್ನು ಕಂಡ ಆಸಾಮಿ ಓಡಿ ಹೋಗಲು ಪ್ರಯತ್ನಿಸಿದ್ದು, ಪೊಲೀಸರು ಸದರಿ ಆಸಾಮಿಯನ್ನು ಹಿಡಿದುಕೊಂಡರು. ಆಸಾಮಿಯ ಕೈಯ್ಯಲ್ಲಿ ಹಿಡಿದುಕೊಂಡಿದ್ದ ಕವರ್ ನಲ್ಲಿ ಏನು  ಎಂದು ಕೇಳಲಾಗಿ ಗಾಂಜಾ ಸೊಪ್ಪು ಎಂದು ಹೇಳಿದನು.  ಪರಿಶೀಲಿಸಲಾಗಿ ಘಾಟಿನಿಂದ ಕೂಡಿದ ಮಾಧಕ ವಸ್ತು ಗಾಂಜಾ ಆಗಿತ್ತು. ಅವನಿಗೆ ಗಾಂಜಾ ಸೊಪ್ಪನ್ನು ಮಾರಾಟ ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಆತನು ಯಾವುದೇ ಪರವಾನಗಿ ಇರುವುದಿಲ್ಲವೆಂದು ಹೇಳಿದನು. ಪೊಲೀಸರು  ಆತನನ್ನು  ವಿಚಾರಣೆ ಮಾಡಿ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ನೌಷಾದ್ @ ಕಟ್ಟಿ ಬಿನ್ ಚಾಂದ್ ಭಾಷ, 22 ವರ್ಷ, ಮುಸ್ಲೀಮರು, ಆಟೋಚಾಲಕ, ಸಕರ್ಾರಿ ಆಸ್ಪತ್ರೆಯ ಪಕ್ಕ, ನ್ಯೂಹಸನಾಬಾದ್, ಹಿಂದೂಫುರ ಟೌನ್,  ಅನಂತಪುರ ಜಿಲ್ಲೆ, ಆಂದ್ರಪ್ರದೇಶ ಎಂತ ತಿಳಿಸಿರುತ್ತಾನೆ. ಪೊಲೀಸರು ಸದರಿ ಆಸಾಮಿಯನ್ನು ಕುರಿತು ನಿಮ್ಮ ವಶದಲ್ಲಿರುವ ಗಾಂಜಾ ಸೊಪ್ಪು ಎಲ್ಲಿಂದ ಬಂತು ಎಂದು ವಿಚಾರಿಸಲಾಗಿ ಸದರಿ ಗಾಂಜಾದ ಸೊಪ್ಪನ್ನು ಈಗ್ಗೆ ಸುಮಾರು 15 ದಿನಗಳ ಹಿಂದೆ ಹಿಂದೂಪರಕ್ಕೆ ಬಂದಿದ್ದ ದೆಹಲಿ ಬಳಿ ಮತ್ರಾ ಊರಿನ ಟೂರಿಸ್ಟ್ ರವರಿಂದ ಪಡೆದುಕೊಂಡಿದ್ದು, ಅವರ ಹೆಸರು ವಿಳಾಸ ತಿಳಿದಿರುವುದಿಲ್ಲ. ನಾನು ಗೌರಿಬಿದನೂರು ಕಡೆಗೆ   ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಹಿಂದೂಪುರದಿಂದ ಗೌರಿಬಿದನೂರಿಗೆ ಬಂದು ಗೌರಿಬಿದನೂರಿನ ಬೈಪಾಸ್ ರಸ್ತೆಯಲ್ಲಿ  ಇದ್ದಾಗ ಪೊಲೀಸರು ಹಿಡಿದುಕೊಂಡಿರುವುದಾಗಿ  ತಿಳಿಸಿ ತಾವು ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದುದು ತಪ್ಪಾಗಿರುತ್ತದೆಂದು ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ.   ನಂತರ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಶ್ರೀನಿವಾಸ ರವರು  ನೌಷಾದ್ @ ಕಟ್ಟಿ ರವರನ್ನು ಕುರಿತು ಮಾಧಕ ವಸ್ತುವನ್ನು ನಿಮ್ಮ ವಶದಲ್ಲಿಟ್ಟುಕೊಳ್ಳುವುದು ಕಾನೂನಿನ ರೀತಿ ಅಪರಾಧವಾಗಿರುತ್ತದೆ. ನಿಮ್ಮ ಬಳಿ ಮಾದಕ ವಸ್ತು ಇರುವುದರಿಂದ  ಅದನ್ನು ಅಮಾನತ್ತುಪಡಿಸಿಕೊಳ್ಳಬೇಕಾಗಿದೆ.  ಗೆಜೆಟೆಡ್ ಅಧಿಕಾರಿಯಾದ  ಆದ  ನಾನೇ ಪೊಲೀಸ್ ಸಿಬ್ಬಂದಿಯಿಂದ ಅಂಗಶೋದನೆ ಮಾಡಿಸಬಹುದೇ? ಅಥವಾ ನಿಮ್ಮನ್ನ ಕಾನೂನಿನ ಪ್ರಕಾರ  ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅಂಗಶೋದನೆ ಮಾಡಿಸಬೇಕೆ? ಅಥಾವಾ ಬೇರೆ ಗೆಜೆಟೆಡ್ ಅಧಿಕಾರಿಗಳ ಮುಂದೆ ಹಾಜರುಪಡಿಸಿ ಅಂಗಶೋದನೆ ಮಾಡಿಸಬೇಕೆ? ಎಂದು ಕೇಳಲಾಗಿ ಸದರಿಯರವರು ಗೆಜೆಟೆಡ್ ಅಧಿಕಾರಿಗಳಾದ ನೀವೇ  ಅಂಗಶೋದನೆ ಮಾಡಬಹುದೆಂದು ಒಪ್ಪಿ  ತಿಳಿಸಿದನು. ಅದರಂತೆ ಗೆಜೆಟೆಡ್  ಅದಿಕಾರಿಗಳಾದ ಶ್ರೀ.ಶ್ರೀನಿವಾಸ  ರವರು ಪೊಲೀಸ್ ಸಿಬ್ಬಂದಿರವರಿಂದ ನೌಷಾದ್    ರವರನ್ನು   ಅಂಗಶೋದನೆ ಮಾಡಲು ಈ ಕೆಳಕಂಡಂತೆ  ಪ್ರಶ್ನಾವಳಿಯನ್ನು. ಮಾಡಲಾಗಿರುತ್ತೆ. 1. ನಮಗೆ ನೀನು ಮಾದಕ ವಸ್ತು ಹೊಂದಿರುವ ಬಗ್ಗೆ ಮಾಹಿತಿ ಇರುತ್ತದೆ ಹೌದೆ ? 2. ನಿನ್ನನ್ನು ಯಾರಾದರು ನ್ಯಾಯಾಧಿಶರ ಮುಂದೆ ಅಥವಾ ಗೆಜೆಟೆಡ್ ಅಧಿಕಾರಿಯವರ ಮುಂದೆ ಹಾಜರು ಪಡಿಸಿ ಅಂಗಶೋಧನೆ ಮಾಡಿಸಬೇಕೆ ? ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಹಕ್ಕು ಕಾನೂನು ಪ್ರಕಾರ ನಿಮಗಿದೆ. 3. ನಾನು ಸಹ ಒಬ್ಬ ಗೆಜೆಟೆಡ್ ಅಧಿಕಾರಿಯಾಗಿದ್ದು, ಬೇರೊಬ್ಬ ಗೆಜೆಟೆಡ್ ಅಧಿಕಾರಿಯವರ ಮುಂದೆ ಹಾಜರು ಪಡಿಸಿ ಅಂಗಶೋಧನೆ ಮಾಡಿಸಬೇಕೆ ? ಅಥವಾ ನಾನೆ ಮಾಡಬಹುದೆ ? ಎಂದು ಪ್ರಶ್ನಾವಳಿಯನ್ನು ಸಿದ್ದಪಡಿಸಿ ಅವರುಗಳಿಗೆ ಜಾರಿ ಮಾಡಿದರು. ಅವರು ಪ್ರಶ್ನಾವಳಿ ಪ್ರತಿಯನ್ನು ಪಡೆದು ಅವರ ಭಾಷೆಯಲ್ಲಿ  ಪ್ರಶ್ನಾವಳಿಯನ್ನು ಅರ್ಥಮಾಡಿಕೊಂಡು ಅಂಗಶೋದನೆಗೆ ಒಪ್ಪಿಗೆ ನೀಡಿ ಆತನು ಸಹಿ ಮಾಡಿದನು. ಅದಕ್ಕೆ ಪಂಚರಾದ ನಮ್ಮಗಳ ಸಹಿಗಳನ್ನು ಪಡೆದುಕೊಂಡರು.  ನಂತರ ಆಡಳಿತ ವೈದ್ಯಾಧಿಕಾರಿಗಳು ಪೊಲೀಸರಿಂದ ನಮ್ಮಗಳ ಸಮಕ್ಷಮದಲ್ಲಿ ಆಸಾಮಿಯ ಅಂಗಶೋದನೆಯನ್ನು ಮಾಡಿಸಲಾಗಿ ನೌಷಾದ್ ಬಳಿ ಒಂದು ಪಿಂಕ್ ಕಲರ್  ಪ್ಲಾಸ್ಟಿಕ್ ಕವರ್ ನಲ್ಲಿ ಗಾಂಜಾ ಸೊಪ್ಪು ಇದ್ದು ಅವುಗಳನ್ನು ಪರಿಶೀಲಿಸಿ ನೋಡಲಾಗಿ ಇದು ಗಾಂಜಾ ಸೊಪ್ಪು ಆಗಿರುತ್ತದೆ. ಪೊಲೀಸರು ತಂದಿದ್ದ ತಕ್ಕಡಿಯಲ್ಲಿ ತೂಕ ಹಾಕಲಾಗಿ 410 ಗ್ರಾಂ. ಇದ್ದು,  ಒಣಗಿದ ನಂತರ ತೂಕ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.  ಅಂಗಶೋಧನೆ ಮಾಡಿಸಲಾಗಿ 100/- ರೂ ಮುಖಬೆಲೆಯ ಎರಡು ನೋಟುಗಳು ಒಟ್ಟು 200/- ರೂ. ಹಣವಿದ್ದು, ಗಾಂಜಾ ಮಾರಾಟದಿಂದ ಬಂದ ಹಣವೆಂದು ತಿಳಿಸಿರುತ್ತಾನೆ.   ಸದರಿ ನೌಷಾದ್  ರವರ ಬಳಿ ಇದ್ದ ಒಟ್ಟು 410 ಗ್ಫ್ರಂ. ಗಾಂಜಾ ಸೊಪ್ಪಿನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಮಾದರಿಗಾಗಿ ನಮ್ಮಗಳ ಸಮಕ್ಷಮ ಸುಮಾರು 50 ಗ್ರಾಂ.ನಷ್ಟು ಗಾಂಜಾ ಸೊಪ್ಪನ್ನು   ಬಳಿ ಬಟ್ಟೆ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು ಭದ್ರಪಡಿಸಲಾಯಿತು. ನಂತರ ಇದಕ್ಕೆ ಅರಗಿನ ಸಹಾಯದಿಂದ ಕ ಎಂಬ ಅಕ್ಷರ ಇರುವ ಸೀಲಿನಿಂದ ಮೊಹರು ಮಾಡಿ ಸದರಿ ಚೀಲಕ್ಕೆ ಪಂಚರಾದ ನಮ್ಮಗಳ ಮತ್ತು ಆಡಳಿತ ವೈದ್ಯಾಧಿಕಾರಿಗಳ ಸಹಿಯನ್ನು ಒಳಗೊಂಡ ಚೀಟಿಯನ್ನು ಅಂಟಿಸಲಾಯಿತು. ಇದಕ್ಕೆ ಕ್ರಮ ಸಂಖ್ಯೆ-1 ಎಂತ ನೀಡಲಾಯಿತು. ಉಳಿದ 360 ಗ್ರಾಂ ಗಾಂಜಾವನ್ನು ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಇಟ್ಟು ದಾರದಿಂದ ಹೊಲೆದು, ಅರಗು ಮಾಡಿ ಕ ಎಂಬ ಅಕ್ಷರದಿಂದ ಸೀಲು ಮಾಡಿಲಾಯಿತು. ಇದಕ್ಕೆ ಕ್ರಮ ಸಂಖ್ಯೆ 02 ಎಂತ ನೀಡಲಾಯಿತು. ಇದರ ಮೇಲೆ ಪಂಚಾಯ್ತಿದಾರರು ಮತ್ತು ಆಡಳಿತ ವೈದ್ಯಾಧಿಕಾರಿಗಳ ಸಹಿ ಮಾಡಿದ ಚೀಟಿಯನ್ನು ಅಂಟಿಸಲಾಯಿತು. ಆಸಾಮಿಯು ಗಾಂಜಾ ಸೊಪ್ಪನ್ನು  ಇಟ್ಟುಕೊಂಡಿದ್ದ ಒಂದು ಪಿಂಕ್ ಕಲರ್  ಪ್ಲಾಸ್ಟೀಕ್ ಕವರ್ ಅನ್ನು  ಬಿಳಿ ಬಟ್ಟೆ ಚೀಲದಲ್ಲಿ ಇಟ್ಟು ದಾರದಿಂದ ಹೊಲೆದು ಭದ್ರಪಡಿಸಿ ಅರಗಿನ ಸಹಾಯದಿಂದ  ಕ ಎಂಬ ಅಕ್ಷರ ಇರುವ ಸೀಲಿನಿಂದ ಮೊಹರು ಮಾಡಿ ಸದರಿ ಚೀಲಕ್ಕೆ ಪಂಚರಾದ ನಮ್ಮಗಳ ಮತ್ತು ಆಡಳಿತ ವೈದ್ಯಾಧಿಕಾರಿಗಳ  ಸಹಿಯನ್ನು ಒಳಗೊಂಡ ಚೀಟಿಯನ್ನು ಅಂಟಿಸಲಾಯಿತು. ಸದರಿ ಚೀಲಕ್ಕೆ  ಕ್ರಮವಾಗಿ ಕ್ರಮ ಸಂಖ್ಯೆ:03 ಎಂತ ನೀಡಲಾಯಿತು. ನೌಷದ್ ರವರ ಬಳಿ ಇದ್ದ 200/- ರೂಪಾಯಿ ಹಣವನ್ನು ಬಿಳಿ ಬಟ್ಟೆಯ ಚೀಲದಲ್ಲಿ ಇಟ್ಟು ದಾರದಿಂದ ಹೊಲೆದು ಭದ್ರಪಡಿಸಿ ಅರಗಿನ ಸಹಾಯದಿಂದ  ಕ ಎಂಬ ಅಕ್ಷರ ಇರುವ ಸೀಲಿನಿಂದ ಮೊಹರು ಮಾಡಿ ಸದರಿ ಚೀಲಕ್ಕೆ ಪಂಚರಾದ ನಮ್ಮಗಳ ಮತ್ತು ಆಡಳಿತ  ವೈದ್ಯಾಧಿಕಾರಿಗಳ ಸಹಿಯನ್ನು ಒಳಗೊಂಡ ಚೀಟಿಯನ್ನು ಅಂಟಿಸಲಾಯಿತು. ಸದರಿ ಚೀಲಕ್ಕೆ  ಕ್ರಮವಾಗಿ ಕ್ರಮ ಸಂಖ್ಯೆ:04 ಎಂತ ನೀಡಲಾಯಿತು. ಆರೋಪಿಯಿಂದ ವಶಪಡಿಸಿಕೊಂಡ ಮಾದಕ ವಸ್ತು ಗಾಂಜಾ ಸೊಪ್ಪು  ಒಟ್ಟು ತೂಕ ಸುಮಾರು 410 ಗ್ರಾಂ. ಇದ್ದು,  ಇದರ ಬೆಲೆ ಸುಮಾರು 16,400/- ರೂಪಾಯಿಗಳಾಗಬಹುದೆಂದು ಪಂಚಾಯ್ತಿದಾರರಾದ ನಾವುಗಳು ಅಂದಾಜಿಸಲಾಯಿತು. ಆಸಾಮಿ ನೌಷಾದ್ರವರನ್ನು ಆತನ ಬಳಿ ಇದ್ದ ಮೇಲ್ಕಂಡ ಮಾಲುಗಳ ಸಮೇತ ಪಿ.ಎಸ್.ಐ ರವರು  ವಶಕ್ಕೆ ಪಡೆದುಕೊಂಡರು.    ಸದರಿ ಸ್ಥಳಕ್ಕೆ ಚೆಕ್ಕು ಬಂದಿ: ಪೂರ್ವಕ್ಕೆ: ಗೌರಿಬಿದನೂರು ಆರ್.ಎಂ.ಸಿ ಕಡೆಯಿಚಿದ ಬೆಂಗಳೂರು ಕಡೆಗೆ ಹೋಗುವ ಟಾರ್ ರಸ್ತೆ, ಪಶ್ಚಿಮಕ್ಕೆ ಹಿಂದೂಪುರಕ್ಕೆ ಹೋಗುವ ಟಾರ್ ರಸ್ತೆ, ಉತ್ತರಕ್ಕೆ ಗೌರಿಬಿದನೂರು ನಗರಕ್ಕೆ ಹೋಗುವ ಟಾರ್ ರಸ್ತೆ, ದಕ್ಷಿಣಕ್ಕೆ ಹೀರೆಬಿದನೂರು, ಚಿಕ್ಕಬಳ್ಳಾಪುರದ ಕಡೆಗೆ ಹೋಗುವ ಟಾರ್ ರಸ್ತೆ ಇರುತ್ತೆ. ಈ ಪಂಚನಾಮೆಯನ್ನು  ಲ್ಯಾಪ್ ಠಾಣಾ  ಟ್ಯಾಪ್ನಲ್ಲಿ ಬೆಳಿಗ್ಗೆ 9:50  ಗಂಟೆಯಿಂದ 11:15 ಗಂಟೆಯವರೆಗೆ  ಟೈಪ್ ಮಾಡಿ ಪೆನ್ ಡ್ರೈವ್ ಮೂಲಕ ಠಾಣಾ ಸಿಬ್ಬಂದಿಯಿಂದ ಠಾಣೆಗೆ ಕಳುಹಿಸಿಕೊಟ್ಟು ಸ್ಥಳಕ್ಕೆ ಪ್ರಿಂಟ್ ತರಿಸಿ ಸಹಿಗಳನ್ನು ಪಡೆದು ಸ್ವತಃ ಬೆಳಿಗ್ಗೆ 11-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಸ್ವತಃ ಪ್ರಕರಣ ದಾಖಲಿಸಿರುತ್ತೆ.

 

22. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.148/2021 ಕಲಂ. 78(1)(A)(iv)(vi) ಕೆ.ಪಿ ಆಕ್ಟ್:-

     ದಿನಾಂಕ:25/08/2021 ರಂದು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ದಾಖಲಿಸಿದ ಪ್ರಕರಣ ಸಾರಾಂಶವೇನೆಂದರೆ ಘನ ನ್ಯಾಯಾಲಯದಲ್ಲಿ ಲಕ್ಷ್ಮೀನಾರಾಯಣ, ಪಿ.ಎಸ್.ಐ ಆದ ನಾನು ನಿವೇದಿಸಿಕೊಳ್ಳುವುದೇನೆಂದೆ ದಿನಾಂಕ: 24/08/2021 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಮಂಚೇನಹಳ್ಳೀ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿ ಗುಯ್ಯಲಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಯಾರೋ ಆಸಾಮಿ ಮಟಕಾ ಅಂಕಿಗಳ ಬರೆದು ಜುಜಾಟವಾಡುತ್ತಿರುವುದಾಗಿ ನನಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರಾದ ಪಿ.ಸಿ-483 ರಮೇಶ್ ಬಾಬು, ಪಿ.ಸಿ-283 ಅರವಿಂದ, ಜೀಪು ಚಾಲಕ ಎ.ಪಿ.ಸಿ-120 ನಟೇಶ್ ಮತ್ತು ಪಂಚರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ.ಎ-40, ಜಿ-395 ರಲ್ಲಿ ಗುಯ್ಯಲಹಳ್ಳಿ ಗ್ರಾಮಕ್ಕೆ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಇಳಿದು ಪಂಚರು ಮತ್ತು ಪೊಲೀಸ್ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳವಾದ ಆಂಜನೇಯಸ್ವಾಮಿ ದೇವಸ್ಥಾನದ ಬಳಿಗೆ ನಡೆದುಕೊಂಡು ಹೋಗಿ ಮನೆಗಳ ಮರೆಯಲ್ಲಿ ನೋಡಿದಾಗ ದೇವಸ್ಥಾನದ ಮುಂಭಾಗ ದಲ್ಲಿರುವ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ನಿಂತಿದ್ದು, ರಸ್ತೆಯಲ್ಲಿ ಹೋಗುವ ಸಾರ್ವಜನಿಕರಿಗೆ ಬನ್ನಿ ಬನ್ನಿ 1/- ರೂ. ಗೆ 70/- ರೂ. ಗಳನ್ನು ಕೊಡುತ್ತೇನೆಂದು ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಜೇಬಿನಲ್ಲಿಟ್ಟು ಕೊಂಡು ಪೆನ್ನಿನಿಂದ ಒಂದು ಚೀಟಿಯಲ್ಲಿ ಮಟ್ಕಾ ಅಂಕಿಗಳನ್ನು ಬರೆದುಕೊಂಡು ಮಟ್ಕಾ ಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ದಾಳಿ ಮಾಡಿ ಸದರಿ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಜಿ.ಎಸ್.ವೆಂಕಟಾಚಲಪತಿ ಬಿನ್ ಲೇಟ ಸೀನಪ್ಪ, 55 ವರ್ಷ, ಬಲಜಿಗರು, ಜಿರಾಯ್ತಿ, ಗುಯ್ಯಲಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಯನ್ನು ಪರಿಶೀಲಿಸಲಾಗಿ ಆತನ ಕೈಯಲ್ಲಿ ಒಂದು ಮಟ್ಕಾ ಅಂಕಿಗಳನ್ನು ಬರೆದಿರುವ ಚೀಟಿ ಹಾಗೂ ಒಂದು ಪೆನ್ನು ಇದ್ದು, ಜೇಬಿನಲ್ಲಿ ಮಟ್ಕಾ ಜುಜಾಟದಿಂದ ಸಂಗ್ರಹಣೆ ಮಾಡಿದ್ದ ವಿವಿಧ ಮುಖ ಬೆಲೆಯ 950 ರೂ ನಗದು ಹಣವಿರುತ್ತೆ. ಜಿ.ಎಸ್.ವೆಂಕಟಾಚಲಪತಿಯು ಸದರಿ ಮಟ್ಕಾಜೂಜಾಟದ ಹಣ ಮತ್ತು ಮಟ್ಕಾಚೀಟಿಯನ್ನು ಗೌರಿಬಿದನೂರು ತಾಲ್ಲೂಕು ಗಿಡಗಾನಹಳ್ಳಿ ಗ್ರಾಮದ ವಾಸಿ ಗಂಗಾಧರ @ ಗಡ್ಡ ಬಿನ್ ಲೇಟ್ ಗೋವಿಂದಪ್ಪರವರಿಗೆ ನೀಡುತ್ತಿರುವುದಾಗಿ ತಿಳಿಸಿರುತ್ತಾನೆ. ಸದರಿ ಆರೋಪಿತ ಜಿ.ಎಸ್.ವೆಂಕಟಾಚಲಪತಿಯನ್ನು ವಶಕ್ಕೆ ಪಡೆದುಕೊಂಡು 1) 950/- ರೂ. ನಗದು ಹಣ, 2) ಮಟ್ಕಾ ಚೀಟಿ, 3) ಒಂದು ಪೆನ್ನು ಇವುಗಳನ್ನು ಪಂಚರ ಸಮಕ್ಷಮ ಮದ್ಯಾಹ್ನ 12-00 ಗಂಟೆಯಿಂದ 12-45 ಗಂಟೆಯವರೆವಿಗೂ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಇದೇ ದಿನ ಮದ್ಯಾಹ್ನ 1-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿತರ ಮೇಲೆ ಮುಂದಿನ ಕ್ರಮ ಜರುಗಿಸಲು  ಸ್ವತಃ ಠಾಣಾ ಎನ್.ಸಿ.ಆರ್ ನಂ-252/2021 ರಂತೆ ದಾಖಲಿಸಿಕೊಂಡು. ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

23. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.94/2021 ಕಲಂ. 506,34,504,323,324,114 ಐ.ಪಿ.ಸಿ:-

     ದಿನಾಂಕ: 25-08-2021 ರಂದು ರಾತ್ರಿ 11-15 ಗಂಟೆಗೆ ಎಎಸ್ಐ ಶಿವಣ್ಣ ರವರು ಚಿಕ್ಕಬಳ್ಳಾಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿರುವ ಗಾಯಾಳುವಿನ   ಹೇಳಿಕೆಯ ಸಾರಾಂಶವೇನಂದರೆ, ಗಾಯಾಳಿವಿಗೆ 24 ವರ್ಷಗಳ ಹಿಂದೆ ಶೀಡ್ಲಘಟ್ಟ ತಾಲ್ಲೂಕು ಬೊಮ್ಮನಹಳ್ಳಿ ಗ್ರಾಮದ ಮಂಜುಳಮ್ಮ ರವರನ್ನು ಮದುವೆಯಾಗಿದ್ದು, ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇರುತ್ತೆ. ನಂತರ ಮಂಜುಳಮ್ಮ ರವರು ತಿರಿಕೊಂಡಿದ್ದು 9 ವರ್ಷಗಳ ನಂತರ ಲೇಪಾಕ್ಷಿ ವಾಸಿಯಾದ ಜಮುಲಮ್ಮ ರವರನ್ನು ಮದುವೆ ಮಾಡಿಕೊಂಡಿದ್ದು, 7 ವರ್ಷದ ಗಂಡು ಮಗು ಇರುತ್ತೆ. ಮೊದಲ ಹೆಂಡತಿಯ ಮಗನಾದ ನವೀನ್ ಕುಮಾರ್ ತನ್ನ ಜೊತೆ ಇದ್ದ , ತನ್ನ ಮಗಳನ್ನು ಮದುವೆ ಮಾಡಿದ್ದು ಬೆಂಗಳೂರಿನಲ್ಲಿ ವಾಸವಿರುತ್ತಾರೆ. ತಮ್ಮ ತಂದೆ-ತಾಯಿಗೆ 3 ಜನ ಗಂಡು ಮಕ್ಕಳಿದ್ದು 1ನೇ ರಾಮಾಂಜಿನಪ್ಪ, 2ನೇ ನಾನು , 3ನೇ ಶಿವರಾಮ ಇದ್ದು ತಾನು ಬೇರೆಯಾಗಿ ಜೀವನ ಮಾಡಿಕೊಂಡಿರುತ್ತೇನೆ. ದರಕಾಸ್ತು ಆಧಾರದ ಮೇಲೆ ಬಂದಿರುವ ಸರ್ವೆ ನಂ: 47/2 ರಲ್ಲಿ 3-16 ಎಕರೆ ಜಮೀನಿನಲ್ಲಿ ಅದನ್ನು ಹಂಚಿಕೆ ಮಾಡುವ ವಿಚಾರದಲ್ಲಿ ತನಗೆ ಮತ್ತು ತನ್ನ ಅಣ್ಣ ತಮ್ಮಂದಿರೊಂದಿಗೆ ವಿವಾದ ವಿದ್ದು ಅದರ ವಿಚಾರದಲ್ಲಿ ತಮ್ಮ ಅಣ್ಣ ರಾಮಾಂಜಿನಪ್ಪ ನನ್ನ ಮಗನಾದ ನವೀನಕುಮಾರ್ ನನ್ನು ತನ್ನ ಮೇಲೆ ಜಗಳ ಮಾಡುವಂತೆ ಮಾಡಿ ರಾಮಾಂಜಿನಪ್ಪ ಮತ್ತು ಆತನ ಮಗ ರಮೇಶ ರವರು ಕುಮ್ಮಕ್ಕು ನೀಡಿ ಈ ದಿನ ದಿನಾಂಕ: 25-08-2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ 2ನೇ ಹೆಂಡತಿ ಮನೆಯಲ್ಲಿದ್ದಾಗ ರಾಮಾಂಜಿನಪ್ಪ, ರಮೇಶ್ , ರತ್ನಮ್ಮ, ರವರು ನವೀನ ನನ್ನು ಗಲಾಟೆ ಮಾಡುವಂತೆ ಕಳಿಸಿ ದೂರದಿಂದ ಅವರು ನೋಡುತ್ತಿದ್ದರು, ನವೀನನು ನಮ್ಮ ಬಳಿ ಬಂದು ಬಾಯಿಗೆ ಬಂದಂತೆ ಬೈದು ನೀವಿರುವ ಮನೆ ನನಗೆ ಸೇರಿದ್ದು ಅದನ್ನು ಬಿಟ್ಟು ನೀನು ಮತ್ತು ನೀನ್ನ ಹೆಂಡಂತಿ ಮನೆ ಮತ್ತು ಆಸ್ತಿ ಬಿಟ್ಟು ಹೊರಟು ಹೋಗಿ ಇಲ್ಲವಾದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿ ಅವನ ಕೈಯಲ್ಲಿದ್ದ ಕಿಟಕಿ ರಿಪೀಸಿನಿಂದ ತನ್ನ ತಲಗೆ ಹೊಡೆಯಲು ಬಂದಾಗ ತಪ್ಪಿಸಿಕೊಳ್ಳುತ್ತಿದ್ದಂತೆ ತನ್ನ ಚಪ್ಪಲಿ ಕಾಲಿನಿಂದ ಎದೆಗೆ ಒದ್ದ ಆಗ ತಾನು ಕೆಳಗೆ ಬಿದ್ದು ಬಿಟ್ಟೆ, ಬಿಡಿಸಲು ಬಂದ ನನ್ನ ಹೆಂಡತಿಯನ್ನು ಸಹ ಕೈಗಳಿಂದ ಹೊಡೆದು ಎಡಕೈಯನ್ನು ತಿರಿವಿ ನೋವುಂಟು ಮಾಡಿ ನಂತರ ಆಕೆಯನ್ನು ಸಹಾ ಕಾಲಿನಿಂದ ಹೊಟ್ಟೆಗೆ ಒದ್ದು ಕೆಳಗೆ ಉರುಳಿಸಿದ, ಅಲ್ಲಿವರೆಗೂ ಸಹಾ ತನ್ನ ಅಣ್ಣ ಮತ್ತು ಆತನ ಹೆಂಡತಿ ಮತ್ತು ಮಗ ನೋಡುತ್ತಿದ್ದರೆ ಹೊರತು ಯಾರು ಬಂದು ಬಿಡಿಸಲು ಸಹಾಯ ಮಾಡಲಿಲ್ಲ ಅವರುಗಳು ಬಂದು ತಮ್ಮ ಮೇಲೆ ಗಲಾಟೆ ಮಾಡುತ್ತಾರೆಂಬ ಭಯಕ್ಕೆ 108 ಆಂಬುಲೇನ್ಸ್ ಗೆ ಪೋನ್ ಮಾಡಿದ್ದು ಅದು ಬಂದ ನಂತರ ತಾನು ಮತ್ತು ತನ್ನ ಹೆಂಡತಿ ಜಮುಲಮ್ಮ ರವರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿರುತ್ತೇವೆ. ತನ್ನ ಅಣ್ಣ ರಾಮಾಂಜಿನಪ್ಪ, ಅತ್ತಿಗೆ ರತ್ನಮ್ಮ , ರಮೇಶ್, ಕುಮ್ಮಕ್ಕಿನಿಂದ ತನ್ನ ಮಗ ತನ್ನ ಮೇಲೆ ಗಲಾಟೆ ಮಾಡಿದ್ದು, ಅವರ ಮೇಲೆ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ ಮೇರೆಗೆ ದಾಖಲಿಸಿದ  ಪ್ರ.ವ ವರದಿ.

Last Updated: 26-08-2021 07:38 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080