ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.210/2021 ಕಲಂ. 379 ಐ.ಪಿ.ಸಿ:-

      ದಿನಾಂಕ:26/07/2021 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯಾದಿದಾರರಾದ ಚಂದ್ರಶೇಖರ.ಎಂ. ಬಿನ್ ಮುನಿಕೃಷ್ಣಪ್ಪ,  24 ವರ್ಷ, ಆದಿ ಕರ್ನಾಟಕ ಜನಾಂಗ, ಕಾರು ಚಾಲಕ, ವಾಸ ಮಾದಿನಾಯಕನಹಳ್ಳಿ ಗ್ರಾಮ, ಮಂಡಿಕಲ್ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 24/07/2021 ರಂದು ನಾನು ನನ್ನ ಬಾಬತ್ತು ಕೆ.ಎ-40-ಇ.ಇ.-2252 ನೊಂದಣಿ ಸಂಖ್ಯೆ ಹೀರೋ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನದಲ್ಲಿ ಬೆಳಿಗ್ಗೆ ನಮ್ಮ ಗ್ರಾಮದಿಂದ ಬಾಗೇಪಲ್ಲಿ ಟೌನ್ ಟಿ.ಬಿ ಕ್ರಾಸ್ ಗೆ ಸುಮಾರು 10-30 ಗಂಟೆಗೆ ಬಂದು ನನ್ನ ಬಾಬತ್ತು ದ್ವಿ ಚಕ್ರ ವಾಹನವನ್ನು ಟಿ.ಬಿ ಕ್ರಾಸ್ ನಲ್ಲಿರುವ ತರಕಾರಿ ಮಾರ್ಕೆಟ್ ಬಳಿ ರಸ್ತೆಯ ಪಕ್ಕದಲ್ಲಿ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ, ನನ್ನ ಸ್ನೇಹಿತನಾದ  ಶ್ರೀನಿವಾಸರೆಡ್ಡಿ ರವರ ಕಾರಿನಲ್ಲಿ ಪೆನುಗೊಂಡಕ್ಕೆ ಹೋಗಿ ಸಂಜೆ ಸುಮಾರು 4-30 ಗಂಟೆಗೆ ವಾಪಸ್ ಬಾಗೇಪಲ್ಲಿಗೆ ಬಂದು ನಾನು ನಿಲ್ಲಿಸಿದ್ದ ವಾಹನವನ್ನು ನೋಡಲಾಗಿ ದ್ವಿ ಚಕ್ರ ವಾಹನ ಸ್ಥಳದಲ್ಲಿ ಕಾಣಿಸಿರುವುದಿಲ್ಲ. ನಂತರ ನಾನು ಎಲ್ಲ ಕಡೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ. ಇದರ ಬೆಲೆ ಸುಮಾರು 45,000/- ರೂಗಳಾಗಿರುತ್ತೆ.  ನಾನು ಎಲ್ಲ ಕಡೆ ಹುಡುಕಾಡಿ ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು ಕಳ್ಳತನ ಆಗಿರುವ  ನನ್ನ ಬಾಬತ್ತು ಕೆ.ಎ-40-ಇ.ಇ.-2252 ನೊಂದಣಿ ಸಂಖ್ಯೆ ಹೀರೋ ಸ್ಪ್ಲೆಂಡರ್ ಪ್ಲಸ್ ದ್ವಿ  ಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.113/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:25-07-2021 ರಂದು ಮದ್ಯಾಹ್ನ 2.20 ಗಂಟೆ ಸಮಯದಲ್ಲಿ ಬಿ.ಎಸ್. ಮಂಜುನಾಥ  ಬಿನ್ ಲೇಟ್ ದೊಡ್ಡ ಬೈರಪ್ಪ , 43ವರ್ಷ, ವಕ್ಕಲಿಗರು, ವ್ಯವಸಾಯ, ಶೇಟ್ಟಿಗೆರೆ ಗ್ರಾಮ,  ಮಂಡಿಕಲ್ ಹೋಬಳಿ ಚಿಕ್ಕಬಳ್ಳಾಪುರ  ತಾಲ್ಲೂಕು  ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಮದರೆ, ದಿನಾಂಕ:21-07-2021 ರಂದು  ಬುದುವಾರ ರಂದು  ಮದ್ಯಾಹ್ನ  ಸುಮಾರು 2.30 ಗಂಟೆಯಲ್ಲಿ ತನ್ನ  ಅಣ್ಣನ ಮಗನಾದ   ಮಾಣಿಕ್ಯರೆಡ್ಡಿ ಬಿನ್ ಲೇಟ್ ಶ್ರೀರಾಮರೆಡ್ಡಿ, 23 ವರ್ಷ ರವರು ದೊಡ್ಡಪೈಲಗುರ್ಕಿ ಗೇಟ್ ನಲ್ಲಿ  ಹೈದಾರಬಾದ್ ಕಡೆಗೆ ಹೋಗುವ ವಾಹನಗಳಲ್ಲಿ ಹೂವನ್ನು ಹಾಕಲು ತನ್ನ ಬಾಬತ್ತು ಪಲ್ಸರ್ ದ್ವಿಚಕ್ರ ವಾಹನ ನಂಬರ್ KA-02-HH-7471 ರಲ್ಲಿ ಹೋಗಿ ಹೂವುಗಳನ್ನು  ಹಾಕಿ ಅನಂತರ ಮಾಣಿಕ್ಯರೆಡ್ಡಿ ಬಿನ್ ಲೇಟ್ ಶ್ರೀರಾಮರೆಡ್ಡಿ ರವರು ಶೆಟ್ಟಿಗೆರೆ ಗ್ರಾಮಕ್ಕೆ ಬರಲು   ದೊಡ್ಡಪೈಲಗುರ್ಕಿ ಗ್ರಾಮದಿಂದ ಹೈವೇಯಲ್ಲಿ ಬಂದು ಶೆಟ್ಟಿಗೆರೆ ಕ್ರಾಸ್ ನಿಂದ ಮಂಡಿಕಲ್ ರಸ್ತೆಯಲ್ಲಿ  ಶೆಟ್ಟಿಗೆರೆ ಗ್ರಾಮದ  ವೆಂಕಟೇಶಪ್ಪ ರವರ ಜಮೀನಿನ   ರಸ್ತೆಯಲ್ಲಿ ಮಾಣಿಕ್ಯರೆಡ್ಡಿ ರವರು ತನ್ನ ದ್ವಿಚಕ್ರವಾಹನವನ್ನು ಸವಾರಿ ಮಾಡಕೊಂಡು ಬರುತ್ತಿದ್ದಾಗ ಮದ್ಯಾಹ್ನ ಸುಮಾರು 3.20 ಗಂಟೆ ಸಮಯದಲ್ಲಿ ಮಂಡಿಕಲ್  ಕಡೆಯಿಂದ  KA-06-Z-1514 ಮಹೀಂದ್ರ  ಕಾರಿನ ಚಾಲಕನು ತನ್ನ  ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಾಣಿಕ್ಯರೆಡ್ಡಿ ರವರು ಸವಾರಿ ಮಾಡಿಕೊಂಡು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತ ಮಾಡಿದ್ದು ತನಗೆ ರಾಜಪ್ಪ ಬಿನ್ ರಾಮಪ್ಪ  ರವರು ವಿಷಯ ತಿಳಿಸಿದ್ದು ಆ ಕೂಡಲೇ  ತಾನು ಅಪಘಾತ ನಡೆದ ಸ್ಥಳಕ್ಕೆ ಬಂದು ನೋಡಲಾಗಿ ಮಾಣಿಕ್ಯರೆಡ್ಡಿ  ರವರಿಗೆ  ಬಲಮೊಣಕಾಲು ಮೇಲೆ ಮತ್ತು ಕೆಳಗೆ. ಬಲ ಮುಂಗೈ, ಎಡಕೈಗೆ ಎಡ ಕಾಲಿಗೆ ಮತ್ತು ತಲೆಯ ಹಿಂಭಾಗ ರಕ್ತಗಾಯವಾಗಿದ್ದು ನಂತರ ತಾನು ಮತ್ತು ಇತರರು ಗಾಯಾಳುವಿಗೆ ಉಪಚರಿಸಿ ಕಾರಿನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದು ದಾಖಲು ಮಾಡಿದ್ದು  ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಗಾಯಾಳು ಮಾಣಿಕ್ಯರೆಡ್ಡಿ ರವರಿಗೆ ಪ್ರಥಮ ಚಿಕಿತ್ಸೆಯನ್ನು ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟರು.  ನಂತರ  ಗಾಯಾಳು ಮಾಣಿಕ್ಯರೆಡ್ಡಿ ರವರನ್ನು 108 ಅಂಬುಲೆನ್ಸ ವಾಹನದಲ್ಲಿ  ಕರೆದುಕೊಂಡು ಹೋಗಿ ಬೆಂಗಳೂರಿನ  ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದು  ಗಾಯಾಳುವಿಗೆ ಚಿಕಿತ್ಸೆ ಕೊಡಿಸುತ್ತಿದ್ದು ಗಾಯಾಳುವಿಗೆ ಆರೈಕೆ ಮಾಡಲು ಯಾರು ಇಲ್ಲದೇ ಇದ್ದರಿಂದ    ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಮಾಣಿಕ್ಯರೆಡ್ಡಿ ಬಿನ್ ಲೇಟ್ ಶ್ರೀರಾಮರೆಡ್ಡಿ ರವರಿಗೆ ಅಪಘಾತ ಮಾಡಿದ ನಂಬರ್ KA-06-Z-1514 ಮಹೀಂದ್ರ  ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ  ಕೈಗೊಳ್ಳಲು ಕೋರಿದ್ದು ಅಪಘಾತದಲ್ಲಿ  ಜಕ್ಕಂಗೊಂಡ  ವಾಹನಗಳು ಅಪಘಾತ ನಡೆದ  ಸ್ಥಳ ರಸ್ತೆಯ ಪಕ್ಕದಲ್ಲಿರುವುದಾಗಿ ಇದ್ದ ದೂರಿನ ಮೇಲೆ ಪ್ರ. ವ.ವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.325/2021 ಕಲಂ. 279,337  ಐ.ಪಿ.ಸಿ:-

     ದಿನಾಂಕ 25-07-2021 ರಂದು ಮದ್ಯಾಹ್ನ 13-00 ಗಂಟೆಗೆ ರಾಮರೆಡ್ಡಿ ಬಿನ್ ಮುನಿವೆಂಕಟಪ್ಪ,  45 ವರ್ಷ, ವಕ್ಕಲಿಗ ಜನಾಂಗ. ಜಿರಾಯ್ತಿ. ಕೊಂಗನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ತನ್ನ ಅಣ್ಣನ ಮಗನಾದ ಹಿಮವಂತ್ ಬಿನ್ ವೆಂಕಟರೆಡ್ಡಿ, 26 ವರ್ಷ ರವರು ಪಿಲ್ಲಗುಪ್ಪೆ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದು ಪ್ರತಿ ದಿನ ತಮ್ಮ ಗ್ರಾಮದಿಂದ ಪಿಲ್ಲಗುಪ್ಪೆಗೆ ಕೆಲಸಕ್ಕೆ ಹೋಗಿ ಬರುತ್ತಿರುತ್ತಾನೆ. ಅವರು ಕೆಲಸ ಮಾಡುವ ಕಂಪನಿಯ ವಾಹನ ಕೈವಾರ ಕ್ರಾಸ್ ಗೆ ಬರುತ್ತಿದ್ದು ಹಿಮವಂತ್ ತಮ್ಮ ಗ್ರಾಮದಿಂದ ಕೈವಾರ ಕ್ರಾಸ್ ಗೆ ನಡೆದುಕೊಂಡು ಹೋಗಿ ಅಲ್ಲಿಂದ ಅವರ ಕಂಪನಿಯ ವಾಹನದಲ್ಲಿ ಹೋಗುತ್ತಿರುತ್ತಾನೆ. ಹೀಗಿರುವಾಗ ದಿನಾಂಕ 22-07-2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಹಿಮವಂತ್ ರಾತ್ರಿ ಪಾಳಿಯ ಕೆಲಸಕ್ಕೆ ಹೋಗುವ ಸಲುವಾಗಿ ತಮ್ಮ ಮನೆಯನ್ನು ಬಿಟ್ಟು ನಡೆದುಕೊಂಡು ಕೈವಾರ ಕ್ರಾಸ್ ಗೆ ಹೋಗಿರುತ್ತಾನೆ. ನಂತರ ಅದೇ ದಿನ ಸಂಜೆ 7-45 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿ ಮುನಿಶಾಮಿರೆಡ್ಡಿ ಬಿನ್ ವೆಂಕಟೇಶಪ್ಪ ರವರು ತನಗೆ ಕರೆ ಮಾಡಿ ನಿಮ್ಮ ಹಿಮವಂತ್ ರವರಿಗೆ ಬೆಂಗಳೂರು ಕಡಪ ಮುಖ್ಯ ರಸ್ತೆಯ ಕೈವಾರ ಕ್ರಾಸ್ ಮತ್ತು ಕೊಂಗನಹಳ್ಳಿ ಗ್ರಾಮದ ಮದ್ಯೆ ಅಪಘಾತವಾಗಿದ್ದು ನೀವು ಈ ಕೂಡಲೇ ಬನ್ನಿ ಎಂದು ಹೇಳಿದ್ದು ತಾನು ಮತ್ತು ತನ್ನ ಅಣ್ಣ ನಾರಾಯಣಸ್ವಾಮಿ ರವರು ಸದರಿ ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ಹಿಮವಂತ್ ರವರು ರಸ್ತೆಯ ಮೇಲೆ ಮಲಗಿದ್ದು ಆತನಿಗೆ ಎಡ ಕಾಲಿಗೆ ಮೂಳೆ ಮುರಿತದ ರಕ್ತಗಾಯವಾಗಿ, ಎರಡೂ ಮೊಣ ಕಾಲುಗಳಿಗೆ, ಎರಡೂ ಮೊಣ ಕೈ ಗಳು, ತಲೆಗೆ ಹಾಗೂ ಇತರ ಕಡೆಗಳಲ್ಲಿ ರಕ್ತಗಾಯಗಳಾಗಿರುತ್ತೆ. ನಂತರ ತಾನು ತಮ್ಮ ಗ್ರಾಮದ ವಾಸಿ ಮುನಿಶಾಮಿರೆಡ್ಡಿ ರವರನ್ನು ಈ ಬಗ್ಗೆ ವಿಚಾರಿಸಲಾಗಿ ದಿನಾಂಕ 22-07-2021 ರಂದು ಸಂಜೆ 7-40 ಗಂಟೆ ಸಮಯದಲ್ಲಿ ತಾನು ಕೈವಾರ ಕ್ರಾಸ್ ಗೆ ಹೋಗುವ ಸಲುವಾಗಿ ತನ್ನ ಬಾಬತ್ತು ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ತನ್ನ ಮುಂದೆ ಹಿಮವಂತ್ ರವರು ರಸ್ತೆಯ ಎಡ ಭಾಗದಲ್ಲಿ ನಡೆದುಕೊಂಡು ಕೈವಾರ ಕ್ರಾಸ್ ಗೆ ಹೋಗುತ್ತಿದ್ದು ಆಗ ಚಿಂತಾಮಣಿ ಕಡೆಯಿಂದ ಬಂದ ಕೆಎ 53 ಇಎಲ್ 7684 ನೊಂದಣಿ ಸಂಖ್ಯೆಯ ಪ್ರಾಷನ್ ಪ್ರೋ ದ್ವಿ ಚಕ್ರ ವಾಹನದ ಸವಾರ ಆತನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಮವಂತ್ ರವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿದ್ದು ಹಿಮವಂತ್ ಕೂಡಲೇ ಕೆಳಗೆ ಬಿದ್ದು ಹೋಗಿದ್ದು ಹಿಮವಂತ್ ರವರಿಗೆ ರಕ್ತಗಾಯಗಳಾಗಿರುತ್ತೆ. ತಾನು ಕೂಡಲೇ ಹಿಮವಂತ್ ರವರನ್ನು ಉಪಚರಿಸಿ ನಿಮಗೆ ಕರೆ ಮಾಡಿದ್ದಾಗಿ ತಿಳಿಸಿರುತ್ತಾರೆ. ಹಿಮವಂತ್ ರವರಿಗೆ ಡಿಕ್ಕಿ ಹೊಡೆಸಿದ ದ್ವಿ ಚಕ್ರ ವಾಹನ ಅಲ್ಲಿಯೇ ಬಿದ್ದಿರುತ್ತೆ. ನಂತರ ತಾವು ಯಾವುದೋ ಕಾರಿನಲ್ಲಿ ಹಿಮವಂತ್ ರವರನ್ನು ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು ಇಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಗೌರವ್ ಆಸ್ವತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಹಾಲಿ ಹಿಮವಂತ್ ರವರು ಗೌರವ್ ಆಸ್ವತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುತ್ತಾನೆ. ತಾನು ಇದುವೆರೆಗೂ ಹಿಮವಂತ್ ರವರಿಗೆ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ಮೇಲ್ಕಂಡ ಅಪಘಾತಕ್ಕೆ ಕಾರಣನಾದ ಕೆಎ 53 ಇಎಲ್ 7684 ನೊಂದಣಿ ಸಂಖ್ಯೆಯ ಪ್ರಾಷನ್ ಪ್ರೋ ದ್ವಿ ಚಕ್ರ ವಾಹನದ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.326/2021 ಕಲಂ. 15(A) ಕೆ.ಇ ಆಕ್ಟ್:-

     ದಿನಾಂಕ: 25/07/2021 ರಂದು ಮದ್ಯಾಹ್ನ 3.00 ಗಂಟೆಗೆ ಠಾಣೆಯ ಶ್ರೀ ಸಂದೀಪ್ ಕುಮಾರ್, ಸಿ.ಹೆಚ್.ಸಿ-249 ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 25/07/2021 ರಂದು ಪಿ.ಎಸ್.ಐ  ಸಾಹೇಬರ ಆಧೇಶದಂತೆ ತಾನು ಮತ್ತು ಸತೀಶ್ ಸಿ.ಪಿ.ಸಿ-504 ರವರು ಬೆಳಿಗ್ಗೆ ಗಸ್ತು ಕರ್ತವ್ಯಕ್ಕೆ ಹೋಗಿದ್ದು, ಅದರಂತೆ ತಾವುಗಳು ಠಾಣಾ ವ್ಯಾಪ್ತಿಯ ಎನ್.ಕೊತ್ತೂರು, ತಿಪ್ಪನಹಳ್ಳಿ, ಕೆ.ರಾಗುಟ್ಟಹಳ್ಳಿ ಮುಂತಾದ ಗ್ರಾಮಗಳ ಕಡೆಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಮದ್ಯಾಹ್ನ 13.30 ಗಂಟೆಗೆ ಕೋಟಗಲ್  ಗ್ರಾಮದ ಬಳಿಗೆ ಹೋದಾಗ ಸದರಿ ಗ್ರಾಮದ ವಾಸಿಯಾದ ಶ್ರೀಮತಿ ಲಕ್ಷ್ಮೀದೇವಮ್ಮ ಕೊಂ ನಾರಾಯಣಸ್ವಾಮಿ ಎಂಬುವರು ಅವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮೀದಾರರಿಂದ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಸ್ಥಳದಿಂದ ಓಡಿ ಹೋಗಿದ್ದು, ಮನೆಯ ಮುಂಭಾಗ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಹೆಸರು ಮತ್ತು ವಿಳಾಸ ತಿಳಿಯಲಾಗಿ ಲಕ್ಷ್ಮೀದೇವಮ್ಮ ಕೋಂ  ನಾರಾಯಣಸ್ವಾಮಿ, 45 ವರ್ಷ, ಆದಿಕರ್ನಾಟಕ, ಗೃಹಿಣಿ, ವಾಸ ಕೋಟಗಲ್ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1)  180 ಎಂ.ಎಲ್  ಹೈವಾರ್ಡ್ ಚಿಯರ್ಸ್ ವಿಸ್ಕೀಯ 4 ಟೆಟ್ರಾ ಪ್ಯಾಕೆಟ್ ಗಳು 2) ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲ್, 3) 02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಮದ್ಯಾಹ್ನ 13.45 ಗಂಟೆಯಿಂದ 14.30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚ ನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಮನೆಯ ಮುಂಬಾಗದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ಲಕ್ಷ್ಮೀದೇವಮ್ಮ ಕೋಂ ನಾರಾಯಣಸ್ವಾಮಿ ರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.327/2021 ಕಲಂ. 15(A) ಕೆ.ಇ ಆಕ್ಟ್:-

     ದಿನಾಂಕ: 25/07/2021 ರಂದು ಸಂಜೆ 5.00 ಗಂಟೆಗೆ ಠಾಣೆಯ ಶ್ರೀ ವಿಜಯಕುಮಾರ್, ಸಿ.ಹೆಚ್.ಸಿ-167 ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 25/07/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು ಹಾಗೂ ಸಿ.ಪಿ.ಸಿ-544 ವೆಂಕಟರವಣ ರವರು ಠಾಣಾ ಸರಹದ್ದಿನ ಉಪ್ಪರಪೇಟೆ, ಕೋನಪಲ್ಲಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3.30 ಗಂಟೆಯ ಸಮಯದಲ್ಲಿ ಸುಬ್ಬರಾಯನಪೇಟೆ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಕೆಂಪಣ್ಣ ಬಿನ್ ವೆಂಕಟರಾಯಪ್ಪ ರವರು ಅವರ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಸುಬ್ಬರಾಯನಪೇಟೆ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ  ನೋಡಲಾಗಿ 1)90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 4 ಟೆಟ್ರಾ ಪಾಕೆಟ್ ಗಳು, 2)90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು 3)ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4)ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಓಪನ್ ಆಗಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಕೆಂಪಣ್ಣ ಬಿನ್ ವೆಂಕಟರಾಯಪ್ಪ, 48 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಸುಬ್ಬರಾಯನಪೇಟೆ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3.45 ರಿಂದ ಸಂಜೆ 4.30 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಕೆಂಪಣ್ಣ ಬಿನ್ ವೆಂಕಟರಾಯಪ್ಪ, ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

6. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.97/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 26/07/2021 ರಂದು ಮದ್ಯಾಹ್ನ 14.15 ಗಂಟೆಗೆ ಪಿ.ಎಸ್.ಐ ಶ್ರೀ ಪಾಪಣ್ಣ ಟಿ.ಎನ್ ರವರು ಆರೋಪಿ, ಮಾಲು ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಸ್ವತಃ ದಾಖಲಿಸಿಕೊಂಡಿರುವ ದೂರಿನ  ಸಾರಾಂಶವೇನಂದರೆ, ದಿನಾಂಕ:26/07/2021 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ತಾನು ಠಾಣಾ ಸರಹದ್ದಿನ ಗಸ್ತಿಗಾಗಿ  ಠಾಣಾ ಸಿಬ್ಬಂಧಿ ಹೆಚ್.ಸಿ-53 ಲೋಕೇಶ್ ಹಾಗೂ ಪಿ.ಸಿ-451 ರಾಮಾಂಜಿನೇಯ ರವರೊಂದಿಗೆ ಠಾಣಾ ಜೀಪ್ ಸಂಖ್ಯೆ ಕೆ.ಎ-40 ಜಿ-60 ರ ವಾಹನದಲ್ಲಿ ದಿಬ್ಬೂರಹಳ್ಳಿ, ವಡ್ಡಹಳ್ಳಿ, ಟಿ.ವೆಂಕಟಾಪುರ, ತಲಕಾಯಲಬೆಟ್ಟ ಗ್ರಾಮಗಳಿಗೆ ಬೇಟಿ ಮಾಡಿ ಮದ್ಯಾಹ್ನ 13.00 ಗಂಟೆಗೆ ಗಾಂಡ್ಲಚಿಂತೆ ಗ್ರಾಮಕ್ಕೆ ಬೇಟಿ ಮಾಡಿದಾಗ ಯಾರೋ ಬಾತ್ಮಿದಾರರು ತನಗೆ ಕರೆ ಮಾಡಿ ಗಾಂಡ್ಲಚಿಂತೆ ಗ್ರಾಮದ ನಾಗರಾಜ ಬಿನ್ ಲೇಟ್ ವೆಂಕಟಪ್ಪ ರವರು ವಾಸದ ಮನೆಯ ಮುಂಭಾಗ ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ನೀಡಿದ್ದು, ಸದರಿ ಸ್ಥಳದಲ್ಲಿ ದಾಳಿ ಮಾಡಲು ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ, ಪಂಚರಾಗಿ ಸಹಕರಿಸಲು ಕೋರಿದ್ದು, ಅವರು ಒಪ್ಪಿ ತಮ್ಮೊಂದಿಗೆ ಗಾಂಡ್ಲಚಿಂತೆ ಗ್ರಾಮದ ನಾಗರಾಜ ಬಿನ್ ಲೇಟ್ ವೆಂಕಟಪ್ಪ ರವರು ವಾಸದ ಮನೆಯ ಬಳಿ ಮದ್ಯಾಹ್ನ 13.15 ಗಂಟೆಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಖಾಲಿ ಪ್ಯಾಕೇಟ್ಗಳು, ನೀರಿನ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ನಂತರ ಸದರಿ ಮನೆಯಲ್ಲಿದ್ದ  ಆಸಾಮಿಯನ್ನು ಕರೆದು ಅವರ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ನಾಗರಾಜ ಬಿನ್ ಲೇಟ್ ವೆಂಕಟಪ್ಪ, 45 ವರ್ಷ, ಭಜಂತ್ರಿ ಜನಾಂಗ, ಕುಲ ವೃತ್ತಿ, ಗಾಂಡ್ಲಚಿಂತೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂ 9900791694 ಎಂದು ತಿಳಿಸಿದ್ದು, ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಿಗೆ ಇದಿಯೇ ಎಂಬ ಬಗ್ಗೆ ಕೇಳಲಾಗಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು, ಸದರಿ ಸ್ಥಳದಲ್ಲಿ  ಪಂಚನಾಮೆ ಕ್ರಮ ಕೈಗೊಂಡು, ಪಂಚನಾಮೆಯ ಕಾಲದಲ್ಲಿ ಒಟ್ಟು 1 ಲೀಟರ್ 440 ಎಂ.ಎಲ್ ಸಾಮರ್ಥ್ಯದ,  562.08/- ರೂಗಳ ಬೆಲೆ ಬಾಳುವ ಮಧ್ಯ ತುಂಬಿದ ಹೈವಾರ್ಡ್ಸ್ ಚೀರ್ಸ್ ವಿಸ್ಕಿ 90 ಎಂ.ಎಲ್ ನ 16 ಟೆಟ್ರಾ ಪ್ಯಾಕೇಟ್ಗಳು ಇದ್ದು, ಇವುಗಳ ಒಂದರ ಬೆಲೆ 35.13/-ರೂಗಳಾಗಿರುತ್ತೆ. ಇವುಗಳನ್ನು ಹಾಗೂ ಹೈವಾರ್ಡ್ಸ್ ಚೀರ್ಸ್ ವಿಸ್ಕಿ 90 ಎಂ.ಎಲ್ ನ 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಮತ್ತು 1 ಖಾಲಿ ವಾಟರ್ ಬಾಟೆಲನ್ನು ಮದ್ಯಾಹ್ನ 13.15 ಗಂಟೆಯಿಂದ 14.00 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು, ಮದ್ಯಾಹ್ನ 14.15 ಗಂಟೆಗೆ ಆರೋಪಿ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಠಾಣಾ ಮೊ.ಸಂ 97/2021, ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ನಾನೇ ಸ್ವತಃ ಮುಂದಿನ ಕ್ರಮಕ್ಕಾಗಿ ಪ್ರಕರಣ ದಾಖಲಿಸಿಕೊಂಡಿರುವುದಾಗಿರುತ್ತೆ.

 

7. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.102/2021 ಕಲಂ. 34,504,324 ಐ.ಪಿ.ಸಿ:-

     ದಿ:25/07/2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಗೌರಿಬಿದನೂರು ಸರ್ಕಾರಿ ಅಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಅಸ್ಪತ್ರೆಗೆ ಹೋಗಿ ಗಾಯಾಳು ಶಶಿಧರ ರವರ ಹೇಳೀಕೆಯನ್ನು ಪಡೆದುಕೊಂಡು ರಾತ್ರಿ 8-00 ಗಂಟೆ ಸಮಯಕ್ಕೆ ಠಾಣೆಗೆ ವಾಪಸ್ಸು ಬಂದಿದ್ದು ಗಾಯಾಳು ಶಶಿಧರ ರವರು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ತನ್ನ ತಂದೆ ತಾಯಿಗೆ 03 ಜನ ಮಕ್ಕಳಿರುತ್ತಾರೆ. ತಾನು ಮೊದಲನೇಯವರಾಗಿದ್ದು , ತನಗೆ ಸುಮಾರು 04 ವರ್ಷಗಳ ಹಿಂದೆ ಸುನೀತಾ ಎಂಬುವರೊಂದಿಗೆ ಮದುವೆ ಯಾಗಿದ್ದು ತನಗೆ ಒಂದು ಹೆಣ್ಣು ಮಗುವಿದ್ದು, ಹೀಗ್ಗೆ ಸುಮಾರು 03 ವರ್ಷಗಳ ಹಿಂದೆ ತಮ್ಮ ಮನೆಯ ಮುಂದಿನ ವಾಸಿಯಾದ ಲೋಕೇಶ್ ಬಿನ್ ನಂಜಪ್ಪ, 25 ವರ್ಷ, ಸಾದರು ಜನಾಂಗ  ರವರಿಗೆ 30,000=00 ರೂಪಾಯಿಗಳನ್ನು ಕೊಟ್ಟಿರುತ್ತೇನೆ. ಇಷ್ಟು ದಿನವಾದರೂ ತನ್ನ ಹಣವನ್ನುವಾಪಸ್ಸು ಕೊಟ್ಟಿರುವುದಿಲ್ಲ. ಈ ದಿನ ದಿ:25/07/2021 ರಂದು ಸಂಜೆ 5-45 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಹಾಲಿನ ಡೈರಿಯ ಮುಂದೆ ಲೋಕೇಶ್ ರವರನ್ನು ತಾನು ಕೊಟ್ಟಿದ್ದ ಹಣವನ್ನು ಕೇಳಿದಕ್ಕೆ ಲೋಕೇಶ್ ರವರಿಗೆ ನನಗೂ ಬಾಯಿ ಮಾತಿನ ಜಗಳವಾಗಿರುತ್ತೆ. ತಾನು ಅಲ್ಲಿಂದ ಹೊರಟು ಹೋಗಿರುತ್ತಾರೆ. ತಾನು ತಮ್ಮ ಮನೆಗೆ  ಹೋಗಲು ತಮ್ಮ ಗ್ರಾಮದ ಜಗುಲಿಕಟ್ಟಿಯ ಬಳಿ ಹೋಗುತ್ತಿದ್ದಾಗ 1) ಲೋಕೇಶ್ ಬಿನ್ ನಂಜಪ್ಪ, 2) ರಮೇಶ್ ಬಿನ್ ವೆಂಕಟಚಲಪತಿ, 3) ವಿವೇಕ ಬಿನ್ ಗೊವಿಂದರಾಜು ರವರು ಬಂದು ಲೋಕೇಶ್ ರವರು ನಿನಗೆ ಯಾವುದೋ ದುಡ್ಡ ಕೊಡಬೇಕು ಎಂದು ತನ್ನ ಕಾಲರ್ ನ್ನು ಹಿಡಿದುಕೊಂಡು ಲೋಫರ್ ನನ್ನ ಮಗನೇ ಎಂದು ಬೈದು ತಳ್ಳಿದನು, ರಮೇಶ್ ರವರು ಅಲ್ಲಿಯೇ ಇದ್ದ ದೊಣ್ಣೆಯನ್ನು ತೆಗೆದುಕೊಂಡು ತನಗೆ ಎಡಗೈ ಮತ್ತು ಬಲಕಾಲಿಗೆ ಹೊಡೆದು ರಕ್ತ ಗಾಯ ಮಾಡಿದನು. ವಿವೇಕ ರವರು ಕಾಲಿನಿಂದ ಒದ್ದು ಮೂಗೇಟು ಉಂಟು ಮಾಡಿದನು, ಅಲ್ಲಿಗೆ ಪ್ರಮೋದ್ ಬಿನ್ ಲಕ್ಷ್ಮಿಪತಿ ರವರು ಬಂದು  ಜಗಳವನ್ನು ಬಿಡಿಸಿ ಯಾವುದೋ ಆಟೋದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದನು.  ಆದ್ದರಿಂದ ತನಗೆ ಹೊಡೆದ 1) ಲೋಕೇಶ್ 2) ರಮೇಶ್ 3) ವಿವೇಕ್ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ  ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

8. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.166/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:27-07-2021 ರಂದು  ಬೆಳಿಗ್ಗೆ 10-30ಗಂಟೆಗೆ ಠಾಣಾ ಪಿಸಿ-89 ರವರು NCR NO-206/2021 ರಲ್ಲಿ ಘನ ನ್ಯಾಯಾಲಯದಿಂದ ಕ್ರಿಮೀನಲ್ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ ಆದೇಶದ ಸಾರಾಂಶವೇನೆಂದರೆ:ದಿನಾಂಕ:23/072021 ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ,ಎಸ್,ಐ ನಂಜುಂಡಶರ್ಮ  ಆದ ತಾನು ಈ ದಿನ ದಿನಾಂಕ:23/07/2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಗುಪ್ತ ಮಾಹಿತಿ   ಸಿಬ್ಬಂದಿ ಶ್ರೀ. ಹನುಮಂತರಾಯಪ್ಪ ಸಿ.ಹೆಚ್.ಸಿ-73 ರವರು ತನಗೆ ಪೋನ್ ಮಾಡಿ ಗುಡಿಬಂಡೆ ಟೌನಿನಲ್ಲಿ  ಗಸ್ತುನಲ್ಲಿರುವಾಗ ಗುಡಿಬಂಡೆ ಟೌನಿನ 5 ನೇ ವಾರ್ಡ್ನಲ್ಲಿ ವಾಸವಿರುವ  ವೆಂಕಟೇಶ  ರವರ ಮನೆಯ ಪಕ್ಕದಲ್ಲಿ  ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಠಾಣಾ ಸಿಬ್ಬಂದಿಯಾದ ಸಂತೋಷ ಸಿ.ಪಿ.ಸಿ-141 ರವರನ್ನು ಕರೆದುಕೊಂಡು ದ್ವಿಚಕ್ರವಾಹನದಲ್ಲಿ ಬೆಳಿಗ್ಗೆ 10-20 ಗಂಟೆ ಸಮಯಕ್ಕೆ ಮಾರುತಿ ವೃತ್ತದಲ್ಲಿ ಇದ್ದ  ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ ಗುಡಿಬಂಡೆ ಟೌನಿನ 5 ನೇ ವಾಡರ್ಿನಲ್ಲಿ  ಹೋಗಿ ವೆಂಕಟೆಶ್ ರವರ  ಮನೆಯ ಪಕ್ಕದಲ್ಲಿ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಬೆಳಿಗ್ಗೆ 11-00 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯೂ ಸಹಾ ಓಡಿ ಹೋಗಿದ್ದು ಸದರಿ ಆಸಾಮಿಯ  ಹೆಸರು & ವಿಳಾಸ ಕೇಳಿ  ತಿಳಿಯಲಾಗಿ  ವೆಂಕಟೇಶ ಬಿನ್ ದೊಡ್ಡವೆಂಕಟರಾಯಪ್ಪ, 40 ವರ್ಷ, ಎಸ್.ಸಿ ಜನಾಂಗ,  ವ್ಯಾಪಾರ, 5 ನೇ ವಾರ್ಡ, ಗುಡಿಬಂಡೆ ಟೌನ್ , ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 08 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 720 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*08=281.04/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಗ್ಗೆ 11-00 ಗಂಟೆಯಿಂದ ಮದ್ಯಾಹ್ನ 12-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 12-45 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ 1-00 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

9. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.167/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:27-07-2021 ರಂದು  ಬೆಳಿಗ್ಗೆ 11-00ಗಂಟೆಗೆ ಠಾಣಾ ಪಿಸಿ-89 ರವರು NCR NO-208/2021 ರಲ್ಲಿ ಘನ ನ್ಯಾಯಾಲಯದಿಂದ ಕ್ರಿಮೀನಲ್ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ ಆದೇಶದ ಸಾರಾಂಶವೇನೆಂದರೆ: ದಿನಾಂಕ:23/07/2021 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯ ಎ.ಎಸ್.ಐ  ಶ್ರೀ ನಂಜುಂಡಶರ್ಮ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:23/07/2021 ರಂದು ಸಂಜೆ 5-00 ಗಂಟೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿದ್ದಾಗ ಗುಡಿಬಂಡೆ ಪೊಲೀಸ್ ಠಾಣೆಯ ಸಿಬ್ಬಂದಿ ಹನುಮಂತರಾಯಪ್ಪ ಸಿ,ಹೆಚ್ಸಿ-73 ರವರು ನನಗೆ ಪೋನ್ ಮಾಡಿ ಈ ದಿನ ದಿನಾಂಕ:    23/07/2021 ರಂದು ನಾನು ರೇಣುಮಾಕಲಹಳ್ಳಿ, ಬೊಮ್ಮಗಾನಹಳ್ಳಿ ಕಡೆ ಗಸ್ತು ಮಾಡುತ್ತಿರುವಾಗ ಆರ್. ಚೊಕ್ಕನಹಳ್ಳಿ   ಗ್ರಾಮದ ಬಳಿ ಕೆರೆಯ ಅಂಗಳದಲ್ಲಿ  ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ನನಗೆ ಮಾಹಿತಿ ನೀಡಿದರ ಮೇರೆಗೆ, ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-141 ಸಂತೋಷ ಸಿ,ಹೆಚ್,ಸಿ-29 ಶ್ರೀನಿವಾಸ ಸಿ,ಹೆಚ್,ಸಿ-222 ನಾಗರಾಜು, ಸಿ,ಹೆಚ್,ಸಿ-102 ಆನಂದ ಪಿ.ಸಿ-85 ಸುನಿಲ್ ಕುಮಾರ್   ರವರನ್ನು ಕರೆಯಿಸಿಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ತಿಳಿಸಿ ಸಂಜೆ 5-15 ಗಂಟೆಗೆ ಗುಡಿಬಂಡೆ ಪೊಲೀಸ್ ಠಾಣೆಯಿಂದ ಬಿಟ್ಟು ಸಂಜೆ 5-30  ಗಂಟೆಗೆ ಸಿ.ಹೆಚ್.ಸಿ-73 ಹನುಮಂತರಾಯಪ್ಪ ರವರನ್ನು ಮತ್ತು ಪಂಚರನ್ನು ಬರಮಾಡಿಕೊಂಡು ಆರ್. ಚೊಕ್ಕನಹಳ್ಳಿ    ಗ್ರಾಮದ ಬಳಿ ಮರೆಯಲ್ಲಿ ನಿಂತು ನೋಡಲಾಗಿ, ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-100 ಬಾಹರ್-100 ಎಂದು ಕೂಗುತ್ತಾ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಸಂಜೆ 5-30  ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು ಆಡುತ್ತಿದ್ದವರು ಓಡಿ ಹೋಗಿದ್ದು ಓಡಿ ಹೋದವರ  ಪೈಕಿ ಒಬ್ಬನನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ಕೃಷ್ಣಪ್ಪ ಬಿನ್ ವೆಂಕಟಪ್ಪ, 55 ವರ್ಷ, ಭೋವಿ ಜನಾಂಗ, ಗಾರೆ ಕೆಲಸ, ವಾಸ ಆರ್ ಚೊಕ್ಕನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 2) ನರಸಿಂಹಪ್ಪ ಬಿನ್ ದೊಡ್ಡಗಂಗಪ್ಪ, 30 ವರ್ಷ, ಆದಿ ಕರ್ನಾಟಕ, ಜಿರಾಯ್ತಿ,  ವಾಸ ಆರ್ ಚೊಕ್ಕನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 3) ವೆಂಕಟರಾಮ ಬಿನ್ ಜೂಲಪ್ಪ, 40 ವರ್ಷ, ಭೋವಿ ಜನಾಂಗ, ಬಂಡೆ ಕೆಲಸ, ವಾಸ ಆರ್ ಚೊಕ್ಕನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು,  ಎಂದು ತಿಳಿಸಿದ್ದು ಓಡಿ ಹೋದವರ ಹೆಸರು ಮತ್ತು ವಿಳಾಸ ಕೇಳಲಾಗಿ 4)    ಅಶೋಕ ಬಿನ್ ಗಂಗಪ್ಪ, 19 ವರ್ಷ, ಎಸ್.ಸಿ ಜನಾಂಗ, ಕೂಲಿ ಕೆಲಸ, ವಾಸ ಆರ್ ಚೊಕ್ಕನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು,  5)  ಅಶ್ವತ್ಥ ಬಿನ್ ನರಸಿಂಹಪ್ಪ, 30 ವರ್ಷ,  ಎಸ್.ಸಿ ಜನಾಂಗ, ಕೂಲಿ ಕೆಲಸ, ವಾಸ ಆರ್ ಚೊಕ್ಕನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು 6) ಚಿಕ್ಕನರಸಿಂಹಪ್ಪ ಬಿನ್ ಗಂಗಪ್ಪ, 30 ವರ್ಷ, ಎಸ್.ಸಿ ಜನಾಂಗ, ಟೈಲರ್  ಕೆಲಸ, ವಾಸ ಆರ್ ಚೊಕ್ಕನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. 7) ಮುನಿರಾಜು ಬಿನ್ ವೆಂಕಟರಾಯಪ್ಪ, 28 ವರ್ಷ, ನಾಯಕರು, ಕೂಲಿ ಕೆಲಸ, ವಾಸ ಆರ್ ಚೊಕ್ಕನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು 8)  ರವಿ ಬಿನ್ ಗಂಗರೆಡ್ಡಿ , 25 ವರ್ಷ, ವಕ್ಕಲಿಗರು,  ಜಿರಾಯ್ತಿ, ವಾಸ ಆರ್ ಚೊಕ್ಕನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. 9) ದಿಲೀಪ್ ಬಿನ್ ಕೊಂಡಪರೆಡ್ಡಿ, 20 ವರ್ಷ, ವಕ್ಕಲಿಗರು,  ಜಿರಾಯ್ತಿ, ವಾಸ ಆರ್ ಚೊಕ್ಕನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ.  ಸ್ಥಳದಲ್ಲಿ 1050 ರೂ ನಗದು ಹಣ, 52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ ಜೂಜಾಟಕ್ಕೆ ಪಣಕ್ಕೆ ಇಟ್ಟಿದ್ದ 1050/- ರೂ & 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಸಂಜೆ 5-45 ಗಂಟೆಯಿಂದ ಸಂಜೆ 6-45 ಗಂಟೆಯವರೆಗೆ ಕೃತಕ ವಿದ್ಯೂತ್ ಬೆಳಕಿನಲ್ಲಿ ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ 03 ಜನ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 7-15  ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ರಾತ್ರಿ  7-30 ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.244/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:25.07.2021 ರಂದು ರಾತ್ರಿ 11.30 ಗಂಟೆಗೆ ಪಿರ್ಯಾದಿದಾರರಾದ ಲಿಯಾಕತ್ ಉಲ್ಲಾ ಪಿ.ಎಸ್.ಐ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ಮಾಲು, ಪಂಚನಾಮೆ, ಅರೋಪಿಗಳನ್ನು ಹಾಗು ದೂರನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೆ,  ದಿನಾಂಕ:25.07.2021ರಂದು ಸಂಜೆ 5.30  ಗಂಟೆಯಲ್ಲಿ ನಾನು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಯಾರೋ ಭಾತ್ಮಿದಾರರಿಂದ ಬೈರಸಂದ್ರ ಗ್ರಾಮದ ಅರಣ್ಯ ಪ್ರದೇಶಕ್ಕೆ ಅಂಟಿಕೊಂಡಿರುವ ಬೈರಸಂದ್ರ ಗ್ರಾಮದ ಗುಂಡಪ್ಪ ರವರ ಜಮೀನಿನಲ್ಲಿ ಅಕ್ರಮವಾಗಿ ಹಣವನ್ನು, ಕಾರು ಮತ್ತು ದ್ವಿ ಚಕ್ರ ವಾಹನ ಗಳನ್ನು ಪಣವಾಗಿ ಕಟ್ಟಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸದರಿ ಸ್ಥಳದ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು, ಚಿಂತಾಮಣಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಹಾಗು ಸಿಪಿಐ ಶಿಡ್ಲಘಟ್ಟ ವೃತ್ತ ರವರ ನಿರ್ದೇಶನದಲ್ಲಿ ಠಾಣೆಯ ಸಿಬ್ಬಂಧಿಯವರಾದ ಹೆಚ್.ಸಿ 147 ಶ್ರೀನಾಥ, ಹೆಚ್.ಸಿ 210 ಕೆ ಜಿ ನರಸಿಂಹಯ್ಯ, ಹೆಚ್.ಸಿ-48 ನಾರಾಯಣಸ್ವಾಮಿ, ಹೆಚ್.ಸಿ-111 ರಮೇಶ ಪಿಸಿ-199 ನರೇಶ, ಪಿಸಿ-548 ಕೃಷ್ಣಪ್ಪ, ಪಿಸಿ-143 ಶಿವರಾಜ, ಪಿಸಿ-543 ಸುಧಾಕರ್ ಹಾಗೂ ಪಂಚರೊಂದಿಗೆ ಜೀಪು ಚಾಲಕ ಎ.ಹೆಚ್.ಸಿ.15 ಗೌರಿಶಂಕರ್ ರವರೊಂದಿಗೆ ಕೆಎ.40.ಜಿ.357 ನಂಬರಿನ ಠಾಣಾ ಜೀಪಿನಲ್ಲಿ ಹಾಗು ದ್ವಿ ಚಕ್ರ ವಾಹನಗಳಲ್ಲಿ ಬೈರಸಂದ್ರ ಗ್ರಾಮದ ಅರಣ್ಯ ಪ್ರದೇಶಕ್ಕೆ ಅಂಟಿಕೊಂಡಿರುವ ಗುಂಡಪ್ಪ ರವರ ಜಮೀನಿನ ಸಮೀಪ ಹೋಗಿ ಸ್ವಲ್ಪ ದೂರದಲ್ಲಿ ಜೀಪ್ ಮತ್ತು ದ್ವಿ ಚಕ್ರ ವಾಹನಗಳನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಸದರಿ ಜಮೀನಿನಲ್ಲಿನ ಸಮತಟ್ಟಾದ ಪ್ರದೇಶದಲ್ಲಿ 14 ಜನ ಅಸಾಮಿಗಳು ನೆಲಕ್ಕೆ ಪ್ಲಾಸ್ಟಿಕ್ ಟಾರ್ಪಲ್ ಹಾಕಿಕೊಂಡು ಕಾರುಗಳು, ದ್ವಿ ಚಕ್ರವಾಹನಗಳ ದೀಪಗಳ ಬೆಳಕಿನಲ್ಲಿ ವೃತ್ತಾಕಾರವಾಗಿ ಕುಳಿತುಕೊಂಡು ಒಬ್ಬ ಅಸಾಮಿಯು ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದು, ಕುಳಿತಿದ್ದವರ ಪೈಕಿ ಒಬ್ಬ ಆಸಾಮಿಯು ಅಂದರ್ 1000 ರೂ ಎಂತಲೂ, ಮತ್ತೊಬ್ಬ ಆಸಾಮಿಯು ಬಾಹರ್ 1000 ರೂ ಎಂತಲೂ ಒಬ್ಬ ಆಸಾಮಿಯು ನನ್ನ ಕಾರ್ ಅಂದರ್ ಎಂತಲೂ, ಒಬ್ಬ ಆಸಾಮಿಯು ನನ್ನ ದ್ವಿ ಚಕ್ರ ವಾಹನ ಬಾಹರ್ ಎಂತಲೂ ಹಣವನ್ನು ಮತ್ತು ವಾಹನಗಳನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಇಸ್ಟೀಟು ಜೂಜಾಟವಾಡುತ್ತಿರುವುದು ಖಚಿತವಾದ ಮೇಲೆ ಸದರಿ ಅಸಾಮಿಗಳನ್ನು ಸುತ್ತುವರೆದು ಯಾರು ಓಡಬಾರದೆಂದು ಸೂಚಿಸಿದರೂ ಸಹ 14 ಜನ ಅಸಾಮಿಗಳ ಪೈಕಿ 6 ಜನ ಅಸಾಮಿಗಳು ಓಡಿ ಹೋಗಿದ್ದು ಉಳಿದ ಅಸಾಮಿಗಳನ್ನು ವಶಕ್ಕೆ ಪಡೆದು ಅವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಬಿ.ಕೆ ಸುಬ್ರಮಣಿ ಬಿನ್ ಕರಗಪ್ಪ, 39 ವರ್ಷ, ಪ .ಜಾತಿ, ಕಾರು ಚಾಲಕ, ಬೈರಸಂದ್ರ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ, 2) ಬಿ.ಎಂ ದೇವೆಗೌಡ ಬಿನ್ ಮುನಿಶಾಮಿಗೌಡ, 52 ವರ್ಷ, ವಕ್ಕಲಿಗರು, ಜಿರಾಯ್ತಿ, ಬಳುವನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ, 3) ಬಿ.ಸಿ ಅನೀಲ್ ಕುಮಾರ್ ಬಿನ್ ಚಿಕ್ಕಕರಗಪ್ಪ, 24 ವರ್ಷ, ಪ.ಜಾತಿ, ಕಾರು ಚಾಲಕ, ಬೈರಸಂದ್ರ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ. 4) ಜಿ ಮಂಜುನಾಥ ಬಿನ್ ಗೊವಿಂದರಾಜು, 37 ವರ್ಷ, ವಕ್ಕಲಿಗರು, ಜಿರಾಯ್ತಿ, ರೆಡ್ಡಿಹಳ್ಳಿ ಗ್ರಾಮ ಚನ್ನರಾಯಪಟ್ಟಣ ಹೋಬಳಿ ದೇವನಹಳ್ಳಿ ತಾಲ್ಲೂಕು, 5) ಸಿ ಶೇಖರ್ ಬಿನ್ ಚನ್ನರಾಯಪ್ಪ, 30 ವರ್ಷ, ಪ.ಜಾತಿ, ಟ್ರಾಕ್ಟರ್ ಚಾಲಕ, ಹೊಸಹಳ್ಳಿ ಗ್ರಾಮ ಸೂಲೆಬೆಲೆ ಹೋಬಳಿ ಹೊಸಕೋಟೆ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, 6) ಆರ್.ವಿ ಕೃಷ್ಣೇಗೌಡ ಬಿನ್ ವೆಂಕಟೇಗೌಡ, 25 ವರ್ಷ, ವಕ್ಕಲಿಗರು, ಜಿರಾಯ್ತಿ, ರೆಡ್ಡಿಹಳ್ಳಿ ಗ್ರಾಮ ಚನ್ನರಾಯಪಟ್ಟಣ, ಹೋಬಳಿ, ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, 7) ಸಂದೀಪ್ ಕುಮಾರ್ ಆರ್.ವಿ ಬಿನ್ ವೆಂಕಟರೆಡ್ಡಿ, 30 ವರ್ಷ, ವಕ್ಕಲಿಗರು, ಜಿರಾಯ್ತಿ, ರೆಡ್ಡಿಹಳ್ಳಿ ಗ್ರಾಮ ಚನ್ನರಾಯಪಟ್ಟಣ, ಹೋಬಳಿ, ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, 8) ಬಿ.ಕೆ ರಾಜಣ್ಣ ಬಿನ್ ಕರಗಪ್ಪ, 35 ವರ್ಷ, ಪ.ಜಾತಿ, ಕಾರು ಚಾಲಕ, ಬೈರಸಂದ್ರ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ಎಂತ ತಿಳಿಸಿದ್ದು ನಂತರ ಓಡಿ ಹೋದ 6 ಜನ ಅಸಾಮಿಗಳ ಹೆಸರು ಮತ್ತು ವಿಳಾಸ ತಿಳಿಯಲಾಗಿ 9) ನಟರಾಜ್ ಬಿನ್ ಬಚ್ಚಣ್ಣ, 38 ವರ್ಷ, ವಕ್ಕಲಿಗರು, ವಾಸ-ರೆಡ್ಡಿಹಳ್ಳಿ ಗ್ರಾಮ, ದೇವನಹಳ್ಳಿ ತಾಲ್ಲೂಕು, 10) ಶಿವಕುಮಾರ್ ಬಿನ್ ಕೃಷ್ಣಪ್ಪ, 35 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ರೆಡ್ಡಿಹಳ್ಳಿ ಗ್ರಾಮ, ದೇವನಹಳ್ಳಿ ತಾಲ್ಲೂಕು, 11) ಮಂಜುನಾಥ ವಾಸ-ಹರಳೂರು ಗ್ರಾಮ, ಚನ್ನರಾಯಪಟ್ಟಣ ಹೋಬಳಿ, ದೇವನಹಳ್ಳಿ ತಾಲ್ಲೂಕು, 12) ಮುನಿಕೃಷ್ಣ ವಾಸ-ಹರಳೂರು ಗ್ರಾಮ, ಚನ್ನರಾಯಪಟ್ಟಣ ಹೋಬಳಿ, ದೇವನಹಳ್ಳಿ ತಾಲ್ಲೂಕು, 13) ಬೈರೇಗೌಡ ವಾಸ-ವಾಪಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು, 14) ಶ್ರೀಧರ್ ವಾಸ-ಬೈರಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿದ್ದ ಆರೋಪಿಗಳು ಪಣವಾಗಿ ಕಟ್ಟಿದ್ದ ವಾಹನಗಳನ್ನು ಪರಿಶೀಲಿಸಲಾಗಿ 1) ಕೆಎ-40-ಎಂಕೆ-9955 ನೊಂದಣಿ ಸಂಖ್ಯೆಯ ಸ್ಕೋಡಾ ಕಾರು, 2) ಕೆಎ-43-ಎಂ-4952 ಸ್ವಿಪ್ಟ್ ಕಾರು, 3) ಕೆಎ-03-ಎಂಜಡ್-3060 ಏರಿಟೀಗಾ ಕಾರು, 4) ಕೆಎ-03-ಇಸಿ-2198 ನೊಂದಣಿ ಸಂಖ್ಯೆಯ ಪಲ್ಸರ್ ದ್ವಿ ಚಕ್ರ ವಾಹನ, 5) ಕೆಎ-03-ಇಕ್ಯೂ-8598 ನೊಂದಣಿ ಸಂಖ್ಯೆಯ ವಿಕ್ಟರ್ ದ್ವಿ ಚಕ್ರ ವಾಹನಗಳಾಗಿದ್ದು, ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ 40.950-00 (ನಲವತ್ತು ಸಾವಿರದ ಒಂಬೈನೂರ ಐವತ್ತು) ರೂಗಳಿದ್ದು, ಸದರಿ ಆಸಾಮಿಗಳು ಸರ್ಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ ಕಾರಣ ಮೇಲ್ಕಂಡ ಹಣವನ್ನು, 52 ಇಸ್ಪೀಟ್ ಎಲೆಗಳನ್ನು, ಒಂದು ಪ್ಲಾಸ್ಟಿಕ್ ಟಾರ್ಪಲ್ ಅನ್ನು, ವಾಹನಗಳನ್ನು ರಾತ್ರಿ 8-45 ಗಂಟೆಯಿಂದ 9-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬಂದು ತಮ್ಮ ಮುಂದೆ ಹಾಜರು ಪಡಿಸುತ್ತಿದ್ದು ಸದರಿ ಮಾಲನ್ನು, ಪಂಚನಾಮೆಯನ್ನು ಹಾಗು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 26-07-2021 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080