ಅಭಿಪ್ರಾಯ / ಸಲಹೆಗಳು

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 88/2021, ಕಲಂ. 323,324,447,504,506 ರೆ/ವಿ 34 ಐಪಿಸಿ :-

     ದಿನಾಂಕ 26/06/2021 ರಂದು ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಗಾಯಾಳು ರವಿ.ಎಂ ಬಿನ್ ಲೇಟ್ ಮುನಿಸ್ವಾಮಿ 41 ವರ್ಷ ಗೊಲ್ಲರು ಖಾಸಗಿ ಶಾಲಾ ಶಿಕ್ಷಕ ವೃತ್ತಿ ವಾಸ-ವಾಲೇಪುರ ವರ್ತೂರು ಹೊಸಕೋಟೆ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಲಿವಾಸ ಎಂ.ಗೊಲ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ಈಗ್ಗೆ ಸುಮಾರು 25 ವರ್ಷಗಳ ಹಿಂದೆ ನನ್ನ ತಂದೆಯಾದ ಬಿ.ಮುನಿಸ್ವಾಮಿ ವಯೋವೃದ್ದ ಹಾಗೂ ಖಾಯಿಲೆಯಿಂದ ಮೃತಪಟ್ಟಿರುತ್ತಾರೆ ನಮ್ಮ ತಂದೆಗೆ ಎರಡು ಗಂಡು,ಒಂದು ಹೆಣ್ಣು ಮಗು ಇರುತ್ತೆ ನನ್ನ ಅಣ್ಣನಾದ ಸುಬ್ರಮಣಿ ಹಾಗೂ ನನ್ನ ಅಕ್ಕನಾದ ಪೆದ್ದಕ್ಕ ರವರಿಗೆ ಮದುವೆಯಾಗಿದ್ದು ಕೊಡೆಗಂಡ್ಲು ಗ್ರಾಮದಲ್ಲಿ ವಾಸವಾಗಿರುತ್ತಾರೆ ನನಗೂ ಸಹ ಮದುವೆಯಾಗಿರುತ್ತದೆ ನಮಗೆ ಪಿರ್ತಾರ್ಜಿತ ಆಸ್ತಿ 7 ಎಕರೆ 17 ಗುಂಟೆ ಜಮೀನು ಇರುತ್ತೆ ಸರ್ವೇ ನಂಬರ್ 78/02 ಆಗಿರುತ್ತದೆ ನಾನು ಸಂಸಾರ ಸಮೇತ 25 ವರ್ಷಗಳ ಹಿಂದೆ ಚಿಂತಾಮಣಿ ಹಾಗೂ ಬೆಂಗಳೂರಿನಲ್ಲಿ ವಾಸವಾಗಿದ್ದೆ ಈಗ್ಗೆ ಸುಮಾರು 20 ದಿನಗಳ ಹಿಂದೆ ನನ್ನ ಸ್ವಂತ ಗ್ರಾಮವಾದ ಎಂ.ಗೊಲ್ಲಹಳ್ಳಿ ಗ್ರಾಮಕ್ಕೆ ಕುಟುಂಬ ಸಮೇತ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತೇವೆ ನನಗೂ ಮತ್ತು ನನ್ನ ಅಣ್ಣನಾದ ಸುಬ್ರಮಣಿ ರವರಿಗೆ ಸರ್ವೇ ನಂಬರ್ 78/02 ರಲ್ಲಿ ಚಿಂತಾಮಣಿ ಸಿವಿಲ್ ನ್ಯಾಯಾಲಯದಲ್ಲಿ 3 ಎಕರೆ 27 ಗುಂಟೆಯಂತೆ ಇಬ್ಬರಿಗೂ ಸಮಭಾಗವಾಗಿ ಆದೇಶವಾಗಿರುತ್ತೆ ಹೀಗಿರುವಲ್ಲಿ ದಿನಾಂಕ 26/06/2021 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ನನ್ನ ಭಾಗಕ್ಕೆ ಬಂದ ಜಮೀನಿನಲ್ಲಿ ಉಳುಮೆ ಮಾಡಿ ಬಿತ್ತನೆ ಮಾಡುತ್ತಿದ್ದಾಗ ನನ್ನ ಅಣ್ಣನಾದ ಸುಬ್ರಮಣಿ ಬಿನ್ ಲೇಟ್ ಬಿ.ಮುನಿಸ್ವಾಮಿ ಹಾಗೂ ದೇವರಾಜ್ ಬಿನ್ ನಾರಾಯಣಸ್ವಾಮಿ ರವರು ಏಕಾಏಕಿ ಜಮೀನಿನ ಬಳಿ ಅಕ್ರಮ ಪ್ರವೇಶ ಮಾಡಿ ಸದರಿ ಜಮೀನಿನಲ್ಲಿ ಏಕೆ ಬಿತ್ತನೆ ಮಾಡುತ್ತಿದ್ದೀಯ ಅಂತ ಕೇಳಿ ಅವಾಚ್ಯ ಶಬ್ದಗಳಿಂದ ಬೈದು ನನ್ನ ಅಣ್ಣ ಸುಬ್ರಮಣಿ ಕಾಲಿನಿಂದ ಒದ್ದು ಕೆಳಗೆ ಬೀಳಿಸಿ ಮಚ್ಚಿನಿಂದ ನನ್ನ ಹಣೆಯ ಎಡಭಾಗದ ಮೇಲೆ ಮತ್ತು ತಲೆಯ ಮೇಲೆ ಹಾಗೂ ಎಡಕೈನ ಅಂಗೈಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಜೊತೆಯಲ್ಲಿದ್ದ ದೇವರಾಜ್ ಬಿನ್ ನಾರಾಯಣಸ್ವಾಮಿ ರವರು ಟಮೋಟೋ ಕೋಲಿನಿಂದ ಬೆನ್ನಿನ ಮೇಲೆ ಕೈ ಕಾಲುಗಳ ಮೇಲೆ ಹೊಡೆದಿರುತ್ತಾನೆ ಅಲ್ಲಿಯೇ ಇದ್ದ ನನ್ನ ಹೆಂಡತಿಯಾದ ಸುನೀತಾ ಕೆ.ಸಿ ರವರು ಬಿಡಿಸಲು ಬಂದಾಗ ನನ್ನ ಹೆಂಡತಿಯನ್ನು ಉದ್ದೇಶಿಸಿ ನಿನ್ನನ್ನು ಕೇಯುತ್ತೇನೆ ಬಾರೇ ಎಂದು ಅವಾಚ್ಯ ಶಬ್ದಗಳಿಂದ ಬೈದು ಮಚ್ಚಿನಿಂದ ಎಡಕಣ್ಣಿನ ರೆಪ್ಪೆಯ ಮೇಲೆ ಹಾಗೂ ಮೂಗಿನ ಮೇಲೆ ಹೊಡೆದು ರಕ್ತಗಾಯಗಳು ಮಾಡಿರುತ್ತಾರೆ ಅಲ್ಲಿಯೇ ಇದ್ದ ದೇವರಾಜ್ ಬಿನ್ ನಾರಾಯಣಸ್ವಾಮಿ ಕೋಲಿನಿಂದ ಎಡ ಕೆನ್ನೆಯ ಮೇಲೆ ಬಲ ಕೈನ ತೋಳಿನ ಕೆಳಗೆ ಹೊಡೆದು ಎಳೆದಾಡಿ ರಕ್ತಗಾಯ ಮಾಡಿರುತ್ತಾರೆ ನಮ್ಮ ಜೊತೆಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಬಿನ್ ಬುಡ್ಡಪ್ಪ ರವರು ಜಗಳವನ್ನು ಬಿಡಿಸಿರುತ್ತಾರೆ ನಮ್ಮ ಮೇಲೆ ಗಲಾಟೆ ಮಾಡಿರುವ ಸುಬ್ರಮಣಿ ದೇವಾರಾಜ್ ರವರು ನಿಮ್ಮನ್ನು ಕೊಲೆ ಮಾಡುತ್ತೇವೆಂದು ಪ್ರಾಣ ಬೆದರಿಕೆ ಹಾಕಿದ್ದು ಸುಬ್ರಮಣಿ ಹಾಗೂ ದೇವರಾಜ್ ರವರ ಮೇಲೆ ಕಾನೂನುರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ಹೇಳಿಕೆಯನ್ನು ನೀಡಿರುತ್ತಾರೆ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 48/2021, ಕಲಂ. 323,324,504 ರೆ/ವಿ 34 ಐಪಿಸಿ :-

     ದಿನಾಂಕ: 25-06-2021 ರಂದು ರಾತ್ರಿ 9-30 ಗಂಟೆಯಲ್ಲಿ  ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಯಾರ್ಡ್ ಬಳಿ ಇರುವ ಶ್ರೀ ತಿರುಮಲ ವೇಯರ್ಸ್ ನಲ್ಲಿ ಕೆಲಸ ಮಾಡುವ ಶ್ರೀ ಮಹೇಶ್ ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶ ವೇನೆಂದರೆ,   ತಾನು ಮೇಲ್ಕಂಡ ವಿಳಾಸದಲ್ಲಿ ತಿರುಮಲ ವೇಯರ್ಸ್  ವೇಬ್ರಿಡ್ಜ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ.  ಸದರಿ ತಿರುಮಲ ವೇಯರ್ಸ್  ವೇಬ್ರಿಡ್ಜ್ ಪಕ್ಕದಲ್ಲಿ ಎಪಿಎಂಸಿ ಯಾರ್ಡ್ ಸಹ ಇದ್ದು ಇಲ್ಲಿಗೆ ಬೇರೆ ಬೇರೆ ಕಡೆಗಳಿಂದ ವ್ಯಾಪಾರಿಗಳು  ಕೂಲಿ ಹಮಾಲಿಗಳು ಬಂದು ಹೋಗುತ್ತಿರುತ್ತಾರೆ. ಹಾಗೂ ಸದರಿ ಎಪಿಎಂಸಿ  ಗೋಡೌನ್ ಹಿಂಬಾಗದಲ್ಲಿ ನಿರ್ಜನ ಪ್ರದೇಶವಾಗಿದ್ದು  ಕೂಲಿ ಹಮಾಲಿಗಳು ಕುಡಿಯುವುದು  ಗಲಾಟೆ ಮಾಡಿಕೊಳ್ಳುವುದು ಸಾಮಾನ್ಯ ವಾಗಿರುತ್ತದೆ.  ದಿನಾಂಕ: 25-06-2021 ರಂದು  ಸಂಜೆ ಸುಮಾರು 5-00 ಗಂಟೆಯ ಸಮಯದಲ್ಲಿ ನಮ್ಮ ವೇಬ್ರಿಡ್ಜ್ ಪಕ್ಕದಲ್ಲಿರುವ  ಎಪಿಎಂಸಿ ಗೋಡೌನ್ ಹಿಂಬಾಗದಲ್ಲಿರುವ ಖಾಲಿ ಸ್ಥಳದಲ್ಲಿ  ಕೂಗಾಟಗಳು ಕೇಳಿ ಬಂದಿದ್ದು  ಯಾರೋ  ಹಮಾಲಿಗಳು ಕೆಟ್ಟ ಮಾತುಗಳಿಂದ ಬೈದಾಡಿ  ಗಲಾಟೆ ಮಾಡಿಕೊಳ್ಳುತ್ತಿದ್ದ  ಕೂಗಾಟ ಕೇಳುತ್ತಿದ್ದು ತಾನು ಏನೆಂದು  ಎಪಿಎಂಸಿ  ಕಾಂಪೋಂಡ್ ಹತ್ತಿ ನೋಡಿದಾಗ ಯಾರೊ ಒಬ್ಬ  ಸುಮಾರು 25-30 ವರ್ಷದ ವ್ಯಕ್ತಿಯು  ಅತಿಯಾಗಿ  ಮಧ್ಯಸೇವನೆ ಮಾಡಿ ಹೊಂಗೆ ಮರದ ಬಳಿ ನಿಂತ್ರಾಣನಾಗಿ ಬಿದ್ದಿದ್ದು ಅತನ ಕೈಗಳಿಗೆ ಹಾಗೂ ದೇಹದ ಇತರೆ ಕಡೆಗಳಲ್ಲಿ  ಸಣ್ಣಪುಟ್ಟ ಗಾಯಗಳಾಗಿ ರಕ್ತ ಬರುತ್ತಿದ್ದು  ನಂತರ ತಾನು ವಾಪಸ್ಸು  ನಮ್ಮ ವೇಬ್ರಿಡ್ಜ್ ಬಳಿ ಬಂದಾಗ  ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂಧಿಯವರಿಗೆ  ಮಾಹಿತಿಯನ್ನು ನೀಡಿದ್ದು   ಪೊಲೀಸರು  ಸದರಿ ವ್ಯಕ್ತಿಯನ್ನು  ತೆಗೆದುಕೊಂಡು  ಹೋಗಿರುತ್ತಾರೆ. ಯಾರೋ ಹಮಾಲಿಗಳು  ಕುಡಿತದ  ಅಮಲಿನಲ್ಲಿ ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡು  ಹೊಡೆದಾಡಿ ಅಪರಿಚಿತ ವ್ಯಕ್ತಿಯನ್ನು ಗಾಯಗೊಳಿಸಿ ಹೊರಟು ಹೋಗಿರುವ ಸಂಭವವಿರುತ್ತದೆ.  ಸದರಿ ಅಪರಿಚಿತ ವ್ಯಕ್ತಿಗೆ ಹೊಡೆದು ರಕ್ತಗಾಯಗೊಳಿಸಿ ಪರಾರಿಯಾಗಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಕೋರಿ ರಾತ್ರಿ ಕೆಲಸ ಮುಗಿಸಿಕೊಂಡು  ತಡವಾಗಿ ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ. .

 

3. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 32/2021, ಕಲಂ. 279,337 ಐಪಿಸಿ :-

     ದಿನಾಂಕ:-25/06/2021 ರಂದು ಸಂಜೆ 4-00 ಗಂಟೆಗೆ ಪಿರ್ಯಾಧಿದಾರರಾದ  ಶ್ರೀ.ಮುಕೇಶ್ ಕುಮಾರ್ ಬಿನ್ ಅತರ್ ಸಿಂಗ್ 45 ವರ್ಷ, ರಜಪೂತ್ ಜನಾಂಗ, ಚಾಲಕ ವೃತ್ತಿ, ಬೋರೂಲಿ ಗ್ರಾಮ, ಖುರ್ಜಾ ಅಂಚೆ, ಬುಲಸಂದೂರ್ ಜಿಲ್ಲೆ, ಉತ್ತರ ಪ್ರದೇಶ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, HR-47-D-6128 ರ ಅಶೋಕಾ ಲೈಲ್ಯಾಂಡ್ ಲಾರಿಯ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ:-24/06/2021 ರಂದು ತಮಿಳುನಾಡಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಪಂಜಾಬ್ ಗೆ ಹೋಗಲು ಸುಮಾರು ಬೆಳಗಿನ ಜಾವ 01-00 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಬೆಂಗಳೂರು - ಹೈದರಬಾದ್ ಎನ್.ಹೆಚ್-44 ಬೈಪಾಸ್ ರಸ್ತೆಯ ಮಂಚನಬಲೆ ರಸ್ತೆಯ ಬ್ರಿಡ್ಜ್ ಬಳಿ HR-55-AC-9829 ರ ಅಶೋಕಾ ಲೈಲ್ಯಾಂಡ್ ಲಾರಿಯನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಅದೇ ಸಮಯಕ್ಕೆ ಹೈವೇ ರಸ್ತೆಯಲ್ಲಿ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳದೇ ವಿರುದ್ದ ದಿಕ್ಕಿನಲ್ಲಿ ಅಡ್ಡವಾಗಿ ನಿಲ್ಲಿಸಿದ್ದ HR-55-AC-9829 ಲಾರಿಯ ಮುಂಭಾಗಕ್ಕೆ ತಗುಲಿಸಿದಾಗ ಸದರಿ ಲಾರಿಯು ಅದರ ಹಿಂದೆ ನಿಂತಿದ್ದ HR-55-AC-7411 ರ ಲಾರಿಗೆ ತಗುಲಿದ ಪರಿಣಾಮ ನನಗೆ ಬಲ ಕೈಗೆ, ಎದೆಯ ಭಾಗಕ್ಕೆ, ಬಲ ಹಿಮ್ಮಡಿ ಬಳಿ ಮೂಗೇಟುಗಳಾಗಿದ್ದು ಹಾಗೂ ಸದರಿ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನಿಗೂ ಸಹಾ ಹಣೆಗೆ, ಬಲ ಮೊಣಕಾಲಿನ ಬಳಿ ಮೂಗೇಟುಗಳಾಗಿದ್ದು ಸದರಿ ಅಪಘಾತಕ್ಕೆ ಕಾರಣನಾದ HR-55-AC-9829 ಲಾರಿ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಪ್ರದೀಪ್ ಎಂ ಬಿನ್ ಮುನಿನಾರಾಯಣಪ್ಪ 24 ವರ್ಷ, ವಕ್ಕಲಿಗರು, ಯಲಿಯೂರು ಗ್ರಾಮ, ಚನ್ನರಾಯಪಟ್ಟಣ ಹೋಬಳಿ, ದೇವನಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಅಲ್ಲಿದ್ದವರು ನಮ್ಮನ್ನು ಉಪಚರಿಸಿ ಅಲ್ಲಿಗೆ ಬಂದ 108 ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು ನಾನು ಚಿಕಿತ್ಸೆಯನ್ನು ಪಡೆದುಕೊಂಡು ಈ ದಿನ ದಿನಾಂಕ:-25/06/2021 ರಂದು ತಡವಾಗಿ ಸದರಿ ಅಪಘಾತಕ್ಕೆ ಕಾರಣನಾದ HR-55-AC-9829 ರ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 290/2021, ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ: 25/06/2020 ರಂದು ಸಂಜೆ 5.00 ಗಂಟೆಗೆ ಠಾಣೆಯ CPC-339 ರವರು ಘನ ನ್ಯಾಯಾಲಯದ ನ್ಯಾಯಾಧೀಶರ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಅನುಮತಿಯ ಪತ್ರದ ಸಾರಾಂಶವೇನೆಂದರೆ, ಈ ದಿನ ದಿನಾಂಕ 25/06/2021 ರಂದು ಬೆಳಿಗ್ಗೆ 11.30 ಗಂಟೆಯ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ, ಠಾಣಾ ಸರಹದ್ದಿಗೆ ಸೇರಿದ ಮೈಲಾಪುರ ಗ್ರಾಮದ ಸರ್ಕಾರಿ ಕೆರೆಯ ಅಂಗಳದಲ್ಲಿ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಜೂಜಾಟ ಆಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ದೊರೆತಿದ್ದು, ಸದರಿ ಜೂಜಾಟ ಆಡುತ್ತಿದ್ದವರ ಮೇಲೆ ಧಾಳಿ ಮಾಡುವ ಸಲುವಾಗಿ ತಾನು ಸಿಬ್ಬಂದಿಯವರಾದ ಸಿ.ಹೆಚ್.ಸಿ-41 ಜಗದೀಶ, ಸಿ.ಹೆಚ್.ಸಿ-199 ಬಿ.ಎಂ.ನಾಗರಾಜು, ಸಿ.ಪಿ.ಸಿ-464 ಅರುಣ್ ಕುಮಾರ್, ಸಿ.ಪಿ.ಸಿ-544 ವೆಂಕಟರವಣ, ಸಿಪಿಸಿ-504 ಸತೀಶ ಮತ್ತು ಪಂಚರೊಂದಿಗೆ KA-40 G-326 ನಂಬರಿನ ಠಾಣೆಯ ಇಲಾಖಾ ಜೀಪಿನಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ನಾರಾಯಣಹಳ್ಳಿ ರಸ್ತೆಯ ಮುಖಾಂತರ ಮೈಲಾಪುರ ಗ್ರಾಮದ ಸರ್ಕಾರಿ ಕೆರೆಯ ಅಂಗಳದ ಬಳಿ ಹೋಗಿ ಜೀಪ್ ಹಾಗೂ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಗಿಡಗಳ ಮರೆಯಲ್ಲಿ ನಿಂತು ನೋಡಲಾಗಿ, ಕೆರೆಯ ಅಂಗಳದಲ್ಲಿರುವ ಒಂದು ಹೊಂಗೇ ಮರದ ಕೆಳಗೆ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕೋಳಿ ಪಂದ್ಯ ಜೂಜಾಟ ಆಡುತ್ತಿರುವ ಕೂಗು ಕೇಳಿಸಿತು. ತಕ್ಷಣ ತಾನು ಸಿಬ್ಬಂದಿಯವರೊಂದಿಗೆ ಹಣವನ್ನು ಪಣಕ್ಕಿಟ್ಟು ಕೋಳಿ ಪಂದ್ಯ ಜೂಜಾಟವಾಡುತ್ತಿದ್ದವರನ್ನು ಸುತ್ತುವರಿಯುವಾಗ ಕೋಳಿ ಪಂದ್ಯದಲ್ಲಿ ತೊಡಗಿದ್ದ ಕೆಲವರು ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಒಂದು ಕೋಳಿ ಹುಂಜವನ್ನು ಎತ್ತಿಕೊಂಡು ಓಡಿ ಹೋಗಿರುತ್ತಾರೆ. ಉಳಿದ 5 ಜನರನ್ನು ವಶಕ್ಕೆ ಪಡೆದು ಅವರುಗಳ ಹೆಸರು ವಿಳಾಸ ಕೇಳಲಾಗಿ 1) ಪ್ರಸಾದ್ ಬಿನ್ ಕೃಷ್ಣಪ್ಪ, 38 ವರ್ಷ, ನಾಯಕರು, ಮೆಡಿಕಲ್ ರೆಪ್ರೆಸೆಂಟೇಟೀವ್ ಕೆಲಸ, ಟಿ.ಹೊಸೂರು ಗ್ರಾಮ, ಚಿಂತಾಮಣಿ ತಾಲ್ಲೂಕು, 2) ಕೃಷ್ಣಮೂರ್ತಿ ಬಿನ್ ಮುನಿಯಪ್ಪ, 38 ವರ್ಷ, ನಾಯಕರು, ಕೂಲಿಕೆಲಸ, ದಬ್ಬರಗಾನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 3) ವೆಂಕಟೇಶ ಬಿನ್ ಪಾಪಣ್ಣ, 40 ವರ್ಷ, ನಾಯಕರು, ಜಿರಾಯ್ತಿ, ಮಾರಪ್ಪನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, 4) ಟಿ.ಎನ್.ಆಂಜಿನಪ್ಪ ಬಿನ್ ನಾರಾಯಣಪ್ಪ, 32 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ತಳಗವಾರ ಗ್ರಾಮ, ಚಿಂತಾಮಣಿ ತಾಲ್ಲೂಕು, 5) ಎಂ.ಸಿ ಮಂಜುನಾಥ ಬಿನ್ ಚಿಕ್ಕ ನರಸಪ್ಪ, 30 ವರ್ಷ, ನಾಯಕರು, ಮಾರಪ್ಪನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಪರಿಶೀಲಿಸಲಾಗಿ ಒಂದು ಕೋಳಿ ಹುಂಜ ಹಾಗೂ ಪಣಕ್ಕಿಟ್ಟಿದ್ದ ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಪಣಕ್ಕಿಟ್ಟಿದ್ದ ಹಣವನ್ನು ಎಣಿಸಲಾಗಿ ಒಟ್ಟು 6,730/- ರೂ ಇರುತ್ತೆ. ನಂತರ ವಶದಲ್ಲಿದ್ದ ಆಸಾಮಿಗಳನ್ನು ಓಡಿ ಹೋದವರ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ 6) ಆಂಜಿನಪ್ಪ, ಕನ್ನಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 7) ಚಿನ್ನಪ್ಪ, ಕೊಂಡ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, 8) ರಾಮು, ದೊಡ್ಡಕೊಂಡ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, 9) ಸೀನಪ್ಪ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, 10) ಕೃಷ್ಣಮೂರ್ತಿ ಬಿನ್ ದೊಡ್ಡ ಮುನಿದಾಸಪ್ಪ, ದೊಡ್ಡಕೊಂಡ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಹಾಗೂ ಇನ್ನೂ ಇತರರು ಇದ್ದು ಅವರ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಆರೋಪಿಗಳು ಜೂಜಾಟ ಆಡಲು ತೆಗೆದುಕೊಂಡು ಬಂದಿದ್ದ 1) ಕೆಎ-40 ಇಎ-3646 ನೊಂದಣಿ ಸಂಖ್ಯೆಯ ಹೀರೋ ಸ್ಲೆಂಡರ್ ಪ್ಲಸ್, 2) ಕೆಎ-40 ಎಸ್-4144 ನೊಂದಣಿ ಸಂಖ್ಯೆಯ ಹೀರೋ ಪ್ಯಾಷನ್ ಪ್ರೋ, 3) ಕೆಎ-43 ಕೆ-4537 ನೊಂದಣಿ ಸಂಖ್ಯೆಯ ಹೀರೋ ಹೋಂಡಾ ಪ್ಯಾಷನ್ ಪ್ರೋ, 4) ಕೆಎ-02 ಎಫ್ಆರ್-9686 ನೊಂದಣಿ ಸಂಖ್ಯೆಯ ಬಜಾಜ್ ಸಿಟಿ 100, 5) ಕೆಎ-40 ಯು-6155 ನೊಂದಣಿ ಸಂಖ್ಯೆಯ ಹೀರೋ ಪ್ರಾಷನ್ ಪ್ರೋ ಮತ್ತು 6) ಕೆಎ-43 ಯು-9386 ನೊಂದಣಿ ಸಂಖ್ಯೆಯ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನಗಳು ಇರುತ್ತೆ. ನಂತರ ಆರೋಪಿಗಳು ಜೂಜಾಟ ಆಡಲು ಬಳಸಿದ ಕೋಳಿ ಹುಂಜ, ಹಣವನ್ನು ಮತ್ತು ದ್ವಿಚಕ್ರ ವಾಹನಗಳನ್ನು ಮದ್ಯಾಹ್ನ 12.00 ಗಂಟೆಯಿಂದ 1.00 ಗಂಟೆಯವರೆಗೆ ಪಂಚರ ಸಮಕ್ಷಮ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿದ್ದು, ಯಾವುದೇ ಪರವಾನಿಗೆ ಇಲ್ಲದೆ ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಜೂಜಾಟ ಜೂಜಾಟವಾಡುತ್ತಿದ್ದ ಮೇಲ್ಕಂಡ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿರುತ್ತೆ. ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

5. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 116/2021, ಕಲಂ. 323,324,504,506 ಐಪಿಸಿ :-

     ದಿನಾಂಕ: 25/06/2021 ರಂದು ಗಾಯಾಳುವಾದ ಶ್ರೀಮತಿ ವಿಮಲ ಕೋಂ ಶಿವಾನಂದ, 32 ವರ್ಷ, ವಕ್ಕಲಿಗ, ನಾರಸಿಂಹಪೇಟೆ, ಚಿಂತಾಮಣಿ ನಗರ ರವರು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ನಮ್ಮ ಮನೆಯ ಪಕ್ಕದಲ್ಲಿಯೆ ನಮ್ಮ ಸ್ವಂತ ಚಿಕ್ಕಪ್ಪ ಶ್ರೀನಿವಾಸ್ ಚಿಕ್ಕಮ್ಮ ಲಕ್ಷಮ್ಮ ರವರು ವಾಸವಿರುತ್ತಾರೆ ಹೀಗಿರುವಾಗ ದಿನಾಂಕ: 24/06/2021 ರಂದು ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿ ಊಟ ಮಾಡಿ ಕುಳಿತುಕೊಂಡಿರುವಾಗ ನಮ್ಮ ಚಿಕ್ಕಮ್ಮ ಮಗನಾದ ಶೇಖರ್ ಎಂಬುವವರು ಬೈದಾಡಿಕೊಳ್ಳುತ್ತಿದ್ದು ಅದನ್ನು ಕಂಡು ನಾನು ಶೇಖರ್ ಪ್ರತಿ ದಿನ ಈ ರೀತಿ ಮಾಡುತ್ತಿದ್ದ ಕಾರಣ ನಾನು ಮನೆಯಲ್ಲಿ ಕೇಳಿಸಿಕೊಂಡು ಇರುತ್ತೇನೆ ಆದರೂ ಸಹ ಶೇಖರ್ ನಮ್ಮ ಮನೆಯ ಬಳಿ ಬಂದು ಮುಂದೆ ನಾಟಿ ಮಾಡಿರುವ ಹೂಕುಂಡಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದ ಅದನ್ನು ಕಂಡು ನಾನು ಮನೆಯಿಂದ ಹೊರಗಡೆ ಬಂದು ನೋಡಿ ಯಾಕೇ ನೀನು ಈ ರೀತಿಯಾಗಿ ಹೂ ಗಿಡವನ್ನು ಹಾಳು ಮಾಡುತ್ತಿದ್ದಿಯಾ ಎಂತ ಕೇಳಿದಕ್ಕೆ ಶೇಖರ್ ನನ್ನನ್ನು ಏಬೇವರ್ಸಿ ಮುಂಡೆ ನೀನು ಯಾರು ಕೇಳುವುದಕ್ಕೆ ಎಂತ ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆಯಲು ಬಂದು ಅಲ್ಲಿಯೇ ಬಿದಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ತಲೆಯ ಮೇಲೆ ಗುದ್ದಿ ಗಾಯಪಡಿಸಿರುತ್ತಾನೆ ನಂತರ ನೀನು ಈ ಜಾಗದಲ್ಲಿ ಮತ್ತೆ ಕಾಣಿಸಿಕೊಂಡರೆ ನಿನ್ನನ್ನ ಪ್ರಾಣ ಸಹಿತ ಬಿಡುವುದಿಲ್ಲವೆಂತ ಬೆದರಿಕೆ ಹಾಕಿರುತ್ತಾನೆ ಅಷ್ಟರಲ್ಲಿ ನನ್ನ ಗಂಡ ಬಂದು ನನ್ನನ್ನು ಅವನಿಂದ ಬಿಡಿಸಿ ಉಪಚರಿಸಿ ಯಾವುದೋ ಒಂದು ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಆದ್ದರಿಂದ ನನ್ನ ಮೇಲೆ ವಿನಾಕಾರಣ ಗಲಾಟೆ ಮಾಡಿ ಕೆಟ್ಟ ಮಾತುಗಳಿಂದ ಬೈದು ಹಲ್ಲೆ ಮಾಡಿದ ಮೇಲ್ಕಂಡ ಶೇಖರ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ ಈ ಬಗ್ಗೆ ನಮ್ಮ ಹಿರಿಯರು ರಾಜಿ ಮಾಡುವುದಾಗಿ ತಿಳಿಸಿದ್ದ ಯಾವುದೇ ಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ನನ್ನ ಹೇಳೀಕೆಯನ್ನು ನೀಡಿರುತ್ತೆನೆಂದು ನೀಡಿದ ಹೇಳಿಕೆಯಾಗಿರುತ್ತೆ.

 

6. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 89/2021, ಕಲಂ. 20(b) NARCOTIC DRUGS & PSYCHOTROPIC SUBSTANCES ACT, 1985 :-

     ದಿನಾಂಕ 25/06/2021 ರಂದು ಸಂಜೆ 7:00 ಗಂಟೆಯಲ್ಲಿ ಪಿ.ಎಸ್.ಐ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 25/06/2021 ರಂದು ಮದ್ಯಾಹ್ನ 3:00 ಗಂಟೆಯಲ್ಲಿ ಬಾತ್ಮೀದಾರರಿಂದ ಬಂದ ಮಾಹಿತಿಯಂತೆ ಗೌರಿಬಿದನೂರು ನಗರದ ಕಾಕನತೋಪಿನ ಮರಿಗಮ್ಮ ದೇವಾಲಯದ ಬಳಿ ಪಿನಾಕಿನಿ ನದಿ ದಡದಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದ ಆಸಿಫ್ @ ಮಹಮದ್ ಆಸಿಫ್ ಬಿನ್ ,ಸರ್ದಾರ್ ಪಾಷ,  ಮುನ್ನಾಕುಮಾರ್ ಗುಪ್ತ ಬಿನ್ ಲೇಟ್ ಈಶ್ವರ್ ಗುಪ್ತ ರವರ ಮೇಲೆ ಶ್ರೀ ರವಿಶಂಕರ್ ಉಪಾಧೀಕ್ಷಕರು, ಚಿಕ್ಕಬಳ್ಳಾಪುರ ಉಪವಿಭಾಗ ಚಿಕ್ಕಬಳ್ಳಾಪುರ ರವರು ಗೆಜೆಟೆಡ್ ಅಧಿಕಾರಿಯಾಗಿ ಪಂಚರ ಸಮಕ್ಷಮ ದಾಳಿ ಮಾಡಿ ಪಂಚನಾಮೆ ಮೂಲಕ ಆರೋಪಿಗಳ ಬಳಿ ಇದ್ದ 900 ಗ್ರಾಂ ಗಾಂಜಾ ಪದಾರ್ಥ , 1200 ರೂಪಾಯಿಗಳ ಹಣ ಹಾಗೂ KA-05-HC-4641 (Chasis no: MD621BD1872C11171) (Engine no: OD1C71977826)  ದ್ವಿಚಕ್ರ ವಾಹನ ಮತ್ತು ಪ್ಲಾಸ್ಟಿಕ್ ಚೀಲವನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಆದ್ದರಿಂದ ಮೇಲ್ಕಂಡ ಆರೋಪಿಗಳಾದ ಮಹಮದ್ ಆಸಿಫ್, ಮತ್ತು ಮುನ್ನಾಕುಮಾರ್ ಗುಪ್ತ ಹಾಗೂ ಸ್ಥಳದಿಂದ ಓಡಿಹೋದ ಬಾಬಾಜಾನ್ @ ಚೋರ್ ಬಾಬಾ ಹಾಗೂ ಅಕ್ರಂ ಬಾಷ @ ಚಿಕ್ಕು @ ಮಿರ್ಚಿ ಬಿನ್ ಎಕ್ಬಾಲ್ @ ಮಿರ್ಚಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೇನೆ.

 

7. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 104/2021, ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ:26/06/2021 ರಂದು ಬೆಳಿಗ್ಗೆ 11-00 ಗಂಟೆಗೆ ಘನ ನ್ಯಾಯಾಲಯದಿಂಧ ಅನುಮತಿಯನ್ನು ಪಡೆದು ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ ಘನ ನ್ಯಾಯಾಲಯದಲ್ಲಿ ಲಕ್ಷ್ಮಿನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ನಾನು ಈ ದಿನ ದಿನಾಂಕ:25/06/2021 ರಂದು ಮದ್ಯಾಹ್ನ 3-15 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ಅಲಕಾಪುರ ಗ್ರಾಮದ ಬಳಿ ಇರುವ ಸರ್ಕಾರಿ ಕೆರೆಯ ಹೊಂಗೆ ಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿ.ಸಿ.283 ಅರವಿಂದ, ಪಿ.ಸಿ.311 ಗೂಳಪ್ಪ, ಪಿ.ಸಿ.336 ಉಮೇಶ್, ಪಿ.ಸಿ.175 ನವೀನ್ ಕುಮಾರ್, ಪಿ.ಸಿ.483 ರಮೇಶ್, ಪಿ.ಸಿ.238 ದಿಲೀಪ್ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ 120  ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಜೆ 3-45 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಸಿದ್ದಿಕ್ ಬಿನ್ ಜಬೀಉಲ್ಲಾ 33 ವರ್ಷ, ಮುಸ್ಲಿಂ, ವ್ಯಾಪಾರ, ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ಅಂಜನ್ ಬಿನ್ ಲೇಟ್ ಅಪ್ಜಲ್, 34 ವರ್ಷ, ಮುಸ್ಲಿಂ, ಚಾಲಕ ವೃತ್ತಿ, ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ಸೂರಪ್ಪ ಬಿನ್ ಲೇಟ್ ತಮ್ಮಣ್ಣ, 60 ವರ್ಷ, ಸಾದರು ಜನಾಂಗ, ಜಿರಾಯ್ತಿ, ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು  4) ಚಂದ್ರಶೇಖರ್ ಬಿನ್ ಲೇಟ್ ಚಿಕ್ಕಣ್ಣ, 40 ವರ್ಷ, ಅಗಸರು, ಆಟೋ ಚಾಲಕ, ವಾಸ ಅಲಕಾಪುರ ಗ್ರಾಮ,  ಗೌರಿಬಿದನೂರು ತಾಲ್ಲೂಕು 5) ದಾದಾಪೀರ್ ಬಿನ್ ಲೇಟ್ ಇಸ್ಮಾಯಿಲ್, 50 ವರ್ಷ, ಮುಸ್ಲಿಂ, ಚಾಲಕ ವೃತ್ತಿ, ವಾಸ ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು, ಎಂದು ತಿಳಿಸಿದ್ದು, ಸದರಿಯವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ನಂತರ ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ 4600/- ( ನಾಲ್ಕು ಸಾವಿರದ ಆರು ನೂರು ರೂಪಾಯಿಗಳು ಮಾತ್ರ.) ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಮದ್ಯಾಹ್ನ 4-15 ಗಂಟೆಯಿಂದ 5-15 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಸಂಜೆ 5-45 ಗಂಟೆಗೆ ಠಾಣೆಗೆ ವಾಪಾಸ್ ಬಂದು ಆರೋಪಿತರ ಮೇಲೆ ಮುಂದಿನ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಲು ಸ್ವತಃ ಠಾಣಾ ಎನ್.ಸಿ.ಆರ್ ನಂಬರ್ 168/2021 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

8. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 63/2021, ಕಲಂ. 399, 402 ಐಪಿಸಿ :-

     ದಿನಾಂಕ:25/06/2021 ರಂದು ಸಂಜೆ 7:05 ಗಂಟೆಗೆ ಪಿ.ಎಸ್.ಐ ಶ್ರೀ ಸುನೀಲ್ ಕುಮಾರ್, ನಂದಿ ಗಿರಿಧಾಮ ಠಾಣೆ ರವರು ಇಬ್ಬರು ಆರೋಪಿಗಳನ್ನು, ಅಸಲು ಪಂಚನಾಮೆ, ವಶಪಡಿಸಿಕೊಂಡ ಮಾಲನ್ನು  ಹಾಜರ್ಪಡಿಸಿ ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:25/06/2021 ರಂದು ಸಂಜೆ 4:30 ಗಂಟೆಗೆ ತಾನು ಠಾಣೆಯಲ್ಲಿರುವಾಗ್ಗೆ, ಚಿಕ್ಕಬಳ್ಳಾಪುರ- ಕೋಲಾರ ರಸ್ತೆಯ ದೊಡ್ಡಮರಳಿ ಗ್ರಾಮದ ಗೇಟಿನ ಸಮೀಪ ಯಾರೋ ಐದು ಜನರು ರಸ್ತೆಯಲ್ಲಿ ದ್ವಿಚಕ್ರ ವಾಹನದೊಂದಿಗೆ ಕೈಗಳಲ್ಲಿ ಅಪಾಯಕಾರಿ ಆಯುದಗಳನ್ನು ಹಿಡಿದುಕೊಂಡು, ರಸ್ತೆಯಲ್ಲಿ ಬರುವ  ಒಂಟಿ ವಾಹನಗಳನ್ನು ನಿಲ್ಲಿಸಿ ದರೋಡೆ ಮಾಡಲು ಸಿದ್ದತೆ ಮಾಡಿಕೊಂಡು ಹೊಂಚು ಹಾಕುತ್ತಿರುವುದಾಗಿ ಬಂದ ಬಾತ್ಮೀ ಮೇರೆಗೆ  ಮೇಲಾಧಿಕಾರಿಗಳಿಗೆ ವಿಚಾರವನ್ನು ತಿಳಿಸಿ, ಸದರಿ ಆಸಾಮಿಗಳ ಮೇಲೆ ದಾಳಿ ಮಾಡಲು ಪಂಚಾಯ್ತಿದಾರರನ್ನು ಠಾಣೆಗೆ ಬರಮಾಡಿಕೊಂಡು ಪಂಚರು ಮತ್ತು ಠಾಣೆಯಲ್ಲಿದ್ದ ಪಿಸಿ-240 ಮಧುಸೂಧನ್, ಪಿಸಿ-436 ಬಾಲಕೃಷ್ಣ ರವರೊಂದಿಗೆ  ಸರ್ಕಾರಿ ಜೀಪ್ ಕೆ.ಎ-40 ಜಿ-1555 ವಾಹನದಲ್ಲಿ ನಂದಿ ಕ್ರಾಸ್ಗೆ ಹೋಗಿ ಹಗಲು ಗಸ್ತಿನಲ್ಲಿದ್ದ ಹೆಚ್.ಸಿ-118 ಪೆಂಚಲಪ್ಪ, ಹೆಚ್.ಸಿ-166 ಸಂಪಂಗಿ ರಾಮ್, ಹೆಚ್.ಸಿ-133 ಪುರುಷೋತ್ತಮ ರವರನ್ನು ಸ್ಥಳಕ್ಕೆ ಬರುವಂತೆ ತಿಳಿಸಿ ಸದರಿ ರವರು ಸ್ಥಳಕ್ಕೆ ಬಂದಿರುತ್ತಾರೆ. ನಾವೆಲ್ಲರು ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ಮತ್ತು  ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ನಾವೆಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಐದು ಜನ ಆಸಾಮಿಗಳು ದ್ವಿಚಕ್ರ ವಾಹನದೊಂದಿಗೆ ಕೈಗಳಲ್ಲಿ ಅಪಾಯಕಾರಿ ಆಯುಧಗಳನ್ನು ಹಿಡಿದುಕೊಂಡು ನಿಂತಿದ್ದು, ರಸ್ತೆಯಲ್ಲಿ ಬರುವ ಒಂಟಿ ವಾಹನಗಳನ್ನು ನಿಲ್ಲಿಸಿಕೊಂಡು ದರೋಡೆ ಮಾಡೋಣವೆಂದು ಮಾತನಾಡಿಕೊಳ್ಳುತ್ತಿದ್ದು, ಒಂಟಿಯಾಗಿ ಬರುವ ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಾ, ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು. ಇವರನ್ನು ಸಮವಸ್ತ್ರದಲ್ಲಿದ್ದ ನಾವುಗಳು ಸಂಜೆ 4:45 ಗಂಟೆಗೆ ಸುತ್ತುವರಿಯುತ್ತಿದ್ದಂತೆ ಐದು ಜನರೂ ಓಡಿ ಹೋಗಲು ಪ್ರಯತ್ನಿಸಿದ್ದು, ಅವರುಗಳನ್ನು ಹಿಡಿಯಲು ಬೆನ್ನತ್ತಿ ಇಬ್ಬರನ್ನು ಹಿಡಿದುಕೊಂಡಿದ್ದು, ಮೂರು ಜನ ಅಸಾನಿಗಳೂ ಓಡಿ ಹೋಗಿರುತ್ತಾರೆ. ಆ ಪೈಕಿ ಹೆಚ್.ಸಿ-166 ಸಂಪಗಿರಾಮ್ ರವರು ಒಬ್ಬ ಆಸಾಮಿಯನ್ನು ಕಬ್ಬಿಣದ ರಾಡ್ ಸಮೇತವಾಗಿ ಹಿಡಿದುಕೊಂಡು ಬಂದಿದ್ದು ಸದರಿ ಅಸಾಮಿಯ ಹೆಸರು ವಿಳಾಸ ಕೇಳಲಾಗಿ 1) ವೆಂಕಟೇಶ್ @ ಅಪ್ಪು ಬಿನ್ ಕೃಷ್ಣಪ್ಪ, 24 ವರ್ಷ, ನಾಯಕರು, ಅಪ್ಪು ಹೋಟೆಲ್ ಮಾಲೀಕರು, ನಾರಾಯಣಪುರ ಗ್ರಾಮ, ದೇವನಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು, ಆಸಾಮಿಯು ತನ್ನ ಕೈಯ್ಯಲ್ಲಿ ಹಿಡಿದುಕೊಂಡಿದ್ದ ಕಬ್ಬಿಣದ ರಾಡನ್ನು ಪರಿಶೀಲಿಸಲಾಗಿ ಸುಮಾರು 2 ಅಡಿ ಉದ್ದದ ಸುಮಾರು 7 ಸೆಂ.ಮೀಟರ್ ಗಾತ್ರ ದಪ್ಪದ ಕಬ್ಬಿಣದ ರಾಡಾಗಿರುತ್ತೆ. ಆಸಾಮಿಯ ಬಳಿ ಇದ್ದ ಟಿ.ಎಂ.ಬಿ ಎಂಬ ಕೀ ಪ್ಯಾಡ್ ಕಪ್ಪು ಬಣ್ಣದ ಪೋನ್ ಇರುತ್ತೆ ಹಾಗೂ ಜೊಬಿನಲ್ಲಿ ಪ್ಲಾಸ್ಟಿಕ್ ಕವರಿನಲ್ಲಿ ತುಂಬಿರುವ ಖಾರದ ಪುಡಿಯ ಪಟ್ಟಣ ಇರುತ್ತೆ. ಮತ್ತೊಬ್ಬ ಆಸಾಮಿಯನ್ನು ಪಿ.ಸಿ-240 ಮಧುಸೂಧನ್ ರವರು ಆಸಾಮಿಯನ್ನು ದೊಡ್ಡ ಸಮೇತವಾಗಿ  ಹಿಡಿದುಕೊಂಡು ಬಂದು ಹಾಜರುಪಡಿಸಿದ್ದು, ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 2) ನವೀನ್ ಹೆಚ್.ವಿ ಬಿನ್ ವಿಜಿಯಪ್ಪ, 23 ವರ್ಷ, ಒಕ್ಕಲಿಗರು, ಕೂಲಿ ಕೆಲಸ, ವಾಸ: ಡಿ.ಹೊಸೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು, ಆತನ ಬಳಿ ಇದ್ದ ದೊಣ್ಣೆ ಅನ್ನು ಪರಿಶೀಲಿಸಲಾಗಿ ಸುಮಾರು ಮೂರು ಅಡಿ ಉದ್ದದ, ಹಿಡಿ ಗಾತ್ರ ದಪ್ಪದ ನೀಲಗೀರಿ ದೊಣ್ಣೆ ಇರುತ್ತದೆ. ಆಸಾಮಿಯ ಬಳಿ ಒಪ್ಪೊ ಮೊಬೈಲ್ ಇರುತ್ತೆ. ವಶಕ್ಕೆ ಪಡೆದುಕೊಂಡಿದ್ದ ಅಸಾಮಿಗಳಿಂದ ಓಡಿ ಹೋದ ಅಸಾಮಿಗಳ ಹೆಸರು ವಿಳಾಸ ಕೇಳಲಾಗಿ 1) ಅಜಯ್, 2) ಶಿವು, 3) ಬುಜ್ಜಿ ಎಲ್ಲರ ವಿಳಾಸ ವಿಜಯಪುರ ಟೌನ್ ಆಗಿರುತ್ತೆಂದು ತಿಳಿಸಿರುತ್ತಾರೆ. ಸದರಿ ಅಸಾಮಿಗಳಿಗೆ ಸೇರಿದ KA-05 HM-9890 BAJAJ DISCOVER ದ್ವಿಚಕ್ರ ವಾಹನ ಇರುತ್ತೆ. ಮೇಲ್ಕಂಡ ಇಬ್ಬರು ಆಸಾಮಿಗಳನ್ನು ಅವರುಗಳ ಬಳಿ ಇದ್ದ ಎರಡು ಮೊಬೈಲ್ ಪೋನ್ ಗಳು, ಒಂದು ಕಬ್ಬಿಣದ ರಾಡು, ನೀಲಗೀರಿ ದೊಣ್ಣೆ ಮತ್ತು ದ್ವಿಚಕ್ರ ವಾಹನವನ್ನು ಸಂಜೆ 4:45 ಗಂಟೆಯಿಂದ 6:30 ಗಂಟೆಯವರೆಗೆ ಜರುಗಿಸಿದ ಪಂಚನಾಮೆಯ ಮೂಲಕ ವಶಕ್ಕೆ ಪಡೆದುಕೊಂಡು ಆಸಾಮಿಗಳು, ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂಖ್ಯೆ:63/2021 ಕಲಂ: 399,402 ಐಪಿಸಿ ರೀತ್ಯ ಪ್ರ.ವ.ವರದಿ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 27-06-2021 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080