ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ  ಮೊ.ಸಂ.147/2021 ಕಲಂ. ಮನುಷ್ಯ ಕಾಣೆ:-

          ದಿನಾಕ:26/05/2021 ರಂದು ಬೆಳಿಗ್ಗೆ 11-45 ಗಂಟೆಗೆ ಪಿರ್ಯಾದಿದಾರರಾದ ಸತ್ಯನಾರಾಯಣನಾಯ್ಕ ಬಿನ್ ಲೇಟ್ ನರಸೇನಾಯ್ಕ, 26 ವರ್ಷ, ಲಂಬಾಣಿ ಜನಾಂಗ, ಕೂಲಿ ಕೆಲಸ, ಊಟಗೊಂದಿ ತಾಂಡ ಗ್ರಾಮ, ಮಿಟ್ಟೇಮರಿ ಹೋಬಳಿ,  ಬಾಗೇಪಲ್ಲಿ ತಾಲ್ಲೂಕು ರವರು ನನ್ನ ತಂದೆ ತಾಯಿ ರವರಿಗೆ ನಾವು ಮೂರು ಜನ  ಮಕ್ಕಳಿದ್ದು, 1ನೇ ನಮ್ಮ ಅಕ್ಕ ಜಯಮ್ಮ, 2ನೇ ನಾನು, 3 ನೇ ನನ್ನ ತಮ್ಮ ಗೋಪಾಲನಾಯ್ಕ ಆಗಿರುತ್ತೇವೆ.  ನನ್ನ ತಮ್ಮನಾದ ಗೋಪಾಲನಾಯ್ಕ ಈಗ್ಗೆ ಒಂದೂವರೆ ವರ್ಷದಿಂದ ಪೇರೆಸಂದ್ರ ಹಾಗೂ ಇತರೇ ಹಳ್ಳಿಗಳ ಕಡೆ ಜೆಸಿಬಿ ಚಾಲಕನಾಗಿ ಕೆಲಸಕ್ಕೆ ಹೋಗುತ್ತಿದ್ದು, ಮನೆಗೆ 2-3 ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದನು, ಹೀಗಿರುವಾಗ ನನ್ನ ತಮ್ಮ ಗೋಪಾಲನಾಯ್ಕ ಯುಗಾದಿ ಹಬ್ಬಕ್ಕೆಂದು ಮನೆಗೆ ಬಂದಿದ್ದು, ಹಬ್ಬ ಮುಗಿದ ನಂತರ ಮರು ದಿನ ದಿನಾಂಕ:14-04-2021 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ನನ್ನ ತಮ್ಮ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದು, ನಂತರ ಒಂದೂವರೆ ತಿಂಗಳಾದರೂ ಮನೆಗೆ ಬಾರದೇ ಇದ್ದುದ್ದರಿಂದ  ನನ್ನ ತಮ್ಮನ ಪೋನ್ ನಂಬರ್ 8296205824 ಗೆ ಹಲವು ಬಾರಿ ಫೋನ್ ಮಾಡಿದರೆ ಸ್ವಿಚ್ ಆಪ್ ಬರುತ್ತಿದ್ದರಿಂದ ನಾವು ನನ್ನ ತಮ್ಮ ಕೆಲಸ ಮಾಡುತ್ತಿದ್ದ ಕಡೆಗಳಲ್ಲಿ ಹೋಗಿ ವಿಚಾರಿಸಲಾಗಿ ನಮಗೆ ಗೊತ್ತಿಲ್ಲವೆಂದು ತಿಳಿಸಿದ್ದು,  ಇದುವರೆವಿಗೂ ನೆಂಟರ ಮತ್ತು ಸ್ನೇಹಿತರ ಮನೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗಲಿಲ್ಲ. ಆದ್ದರಿಂದ ಈಗ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ಕಾಣೆಯಾಗಿರುವ ನನ್ನ ತಮ್ಮನಾದ ಗೋಪಾಲನಾಯ್ಕ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.77/2021 ಕಲಂ. 15(A),32(3) ಕೆ.ಇ ಆಕ್ಟ್:-

          ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:26/05/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ಟಿ ಎನ್ ಪಾಪಣ್ಣ ಆದ ನಾನು  ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ  ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಕರೋನ ಮಹಾಮಾರಿ ಸಾಂಕ್ರಾಮಿಕ ಖಾಯಿಲೆಯ ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಠಾಣೆಯ ಹೆಚ್.ಸಿ 139 ಶ್ರೀನಾಥ ಎಂ.ಪಿ ಮತ್ತು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಜುಂಜನಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ನನಗೆ ಗುಂಡ್ಲಹಳ್ಳಿ ಗ್ರಾಮದ ವಾಸಿಯಾದ ನರಸಿಂಹಪ್ಪ ಬಿನ್ ಲೇಟ್ ಕದಿರಪ್ಪ ರವರು ತಮ್ಮ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಠಾಣೆಯ ಜೀಪ್ ಚಾಲಕ ಎಪಿಸಿ-65 ವೆಂಕಟೇಶ್ ಮತ್ತು ಹೆಚ್ ಸಿ-139 ಶ್ರೀನಾಥ ಎಂ.ಪಿ ರವರೊಂದಿಗೆ ಗುಂಡ್ಲಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚರನ್ನು ಕರೆದುಕೊಂಡು ಬೆಳಿಗ್ಗೆ 10-15 ಗಂಟೆಗೆ ನರಸಿಂಹಪ್ಪ ಬಿನ್ ಲೇಟ್ ಕದಿರಪ್ಪ ರವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮಧ್ಯ ನೀಡುತ್ತಿದ್ದ ಒಬ್ಬ ಆಸಾಮಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಸಾರ್ವಜನಿಕ ಸ್ಥಳವಾದ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವೆಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ತಿಳಿಯಲಾಗಿ ಶ್ರೀ.ನರಸಿಂಹಪ್ಪ ಬಿನ್ ಲೇಟ್ ಕದಿರಪ್ಪ 48 ವರ್ಷ ಆದಿಕರ್ನಾಟಕ ಜನಾಂಗ ಚಿಲ್ಲರೆ ಅಂಗಡಿ ವ್ಯಾಪಾರ ವಾಸ-ಗುಂಡ್ಲಹಳ್ಳಿ ಗ್ರಾಮ ಮುರುಗಮಲ್ಲಾ ಹೋಬಳಿ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಪಂಚರ ಸಮಕ್ಷಮ ಬೆಳಿಗ್ಗೆ 10-30 ಗಂಟೆಯಿಂದ ಬೆಳಿಗ್ಗೆ 11-30 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ 90 ಎಂ.ಎಲ್ ಸಾಮರ್ಥ್ಯದ 15 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳು ಒಟ್ಟು 1 ಲೀಟರ್ 350 ಎಂ.ಎಲ್ ನ 526.95 ರೂಗಳ ಬೆಲೆ ಬಾಳುವುದಾಗಿದ್ದು ಸದರಿ ಮದ್ಯದ ಟೆಟ್ರಾ ಪ್ಯಾಕಟ್ ಗಳನ್ನು ಮತ್ತು 2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು , 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ  ಬೆಳಿಗ್ಗೆ 12-30 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:77/2021 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.246/2021 ಕಲಂ. 454,457,380 ಐ.ಪಿ.ಸಿ:-

          ದಿನಾಂಕ 25-05-2021 ರಂದು ಸಂಜೆ 6-30 ಗಂಟೆಗೆ ಪ್ರವೀಣ್ ಬಿನ್ ಕೃಷ್ಣಪ್ಪ ಕುಲಾಲ್, 26 ವರ್ಷ, ಹೆಚ್.ಆರ್. ಕೆಲಸ, ಸಾತ್ವಿಕ್ ಪುಡ್ಸ್ ಪ್ರವೈಟ್ ಲಿಮಿಟೆಡ್, ಕೊಂಗನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಚಿಂತಾಮಣಿ ತಾಲ್ಲೂಕು ಬೆಂಗಳೂರು ರಸ್ತೆಯಲ್ಲಿರುವ ಕೈವಾರ ಕ್ರಾಸ್ ನಿಂದ ಮುತುಕದಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಸಾತ್ವಿಕ್ ಪುಡ್ಸ್ ಪ್ರವೈಟ್ ಲಿಮಿಟೆಡ್ ಕಂಪನಿಯಲ್ಲಿ ಸುಮಾರು ಒಂದು ವರ್ಷದಿಂದ ಹೆಚ್.ಆರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ಸದರಿ ಕಂಪನಿಯಲ್ಲಿ ಸುಮಾರು 40 ಜನ ಕೆಲಸಗಾರರು ಇದ್ದು, ತಮ್ಮ ಕಛೇರಿ ಬೆಳಗ್ಗೆ 8-00 ಗಂಟೆಯಿಂದ ಸಂಜೆ 7-30 ಗಂಟೆಯ ವರೆಗೂ ಕಾರ್ಯ ನಿರ್ವಹಿಸುತ್ತದೆ. ಹೀಗಿರುವಾಗ ದಿನಾಂಕ 24-05-2021 ರಂದು ಸಂಜೆ 7-30 ಗಂಟೆಗೆ ತಾವು ಕಛೇರಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು ಈ ದಿನ ದಿನಾಂಕ 25-05-2021 ರಂದು ಬೆಳಗ್ಗೆ 8-00 ಗಂಟೆಗೆ ತಮ್ಮ ಕಛೇರಿಯ ಸೂಪರ್ ವೈಸರ್ ಮೌನೇಶ್ ರವರು ತನಗೆ ಕರೆ ಮಾಡಿ ತಮ್ಮ ಕಛೇರಿಯಲ್ಲಿ ರಾತ್ರಿ ಕಳುವಾಗಿದೆ ಕೂಡಲೇ ಬನ್ನಿ ಎಂದು ಹೇಳಿದ್ದು ತಾನು ಕೂಡಲೇ ಅಲ್ಲಿಗೆ ಹೋಗಿ ನೋಡಲಾಗಿ ಯಾರೋ ಕಳ್ಳರು ತಮ್ಮ ಕಛೇರಿಯ ಹಿಂಬಾಗದಲ್ಲಿರುವ ಮೆಸ್ ಕಿಟಕಿಯನ್ನು ಕಿತ್ತು ಹಾಲ್ ನೊಳಗೆ ಪ್ರವೇಶಿಸಿ ಅಲ್ಲಿಂದ ಮೇಲ್ಬಾಗದಲ್ಲಿರುವ ಕಛೇರಿಗೆ ಮೆಟ್ಟಿಲು ಮೂಲಕ ಮೇಲಕ್ಕೆ ಹೋಗಿ ಅಲ್ಲಿರುವ ಕಛೇರಿಯ ಬಾಗಿಲನ್ನು ಕಿತ್ತುಹಾಕಿ ಕಛೇರಿಯಲ್ಲಿದ್ದ 1)ಡೆಲ್ ಕಂಪನಿಯ ಒಂದು ಲ್ಯಾಪ್ ಟ್ಯಾಪ್, ಬೆಲೆ ಅಂದಾಜು 25,000 ರೂ 2)ಲೆನೆವೋ ಕಂಪನಿಯ ಒಂದು ಲ್ಯಾಪ್ ಟ್ಯಾಪ್, ಬೆಲೆ ಅಂದಾಜು 20,000 ರೂ 3) ತೋಶಿಬಾ ಕಂಪನಿಯ ಒಂದು ಲ್ಯಾಪ್ ಟ್ಯಾಪ್, ಬೆಲೆ ಅಂದಾಜು 20,000 ರೂ 4)ಡೆಲ್ ಕಂಪನಿಯ ಒಂದು ಕಂಪ್ಯೂಟರ್, ಬೆಲೆ ಅಂದಾಜು 34,000 ರೂ ಮತ್ತು 5)1,40,000 ರೂ ನಗದು ಕಳುವಾಗಿದ್ದು, ಕಳುವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು 2,39,000 ರೂ ಆಗಿರುತ್ತೆ. ಯಾರೋ ಕಳ್ಳರು ದಿನಾಂಕ 24-05-2021 ರಂದು ಸಂಜೆ 7-30 ಗಂಟೆಯಿಂದ ದಿನಾಂಕ 25-04-2021 ರಂದು ಬೆಳಗ್ಗೆ 8-00 ಗಂಟೆ ಒಳಗೆ ತಮ್ಮ ಕಛೇರಿಯ ಬಾಗಿಲನ್ನು ಕಿತ್ತು ಹಾಕಿ ಮೇಲ್ಕಂಡ ವಸ್ತುಗಳನ್ನು ಮತ್ತು ನಗದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳ್ಳತನ ವಾಗಿರುವ ವಸ್ತುಗಳನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿದೆ.

 

4. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.87/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 25/05/2021 ರಂದು ಬೆಳಿಗ್ಗೆ 10:00 ಗಂಟೆಗೆ ಪಿ.ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:25/05/2021 ರಂದು ಬೆಳಿಗ್ಗೆ ತಾನು ಠಾಣಾ ಸಿಬ್ಬಂದಿ ಸಿ.ಪಿ.ಸಿ-426 ಸರ್ವೇಶ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-3699 ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 09-45 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಮಾರುತಿ ಸರ್ಕಲ್ ಬಳಿ ಗಸ್ತು ಮಾಡುತ್ತಿದ್ದಾಗ ಪಾಲಿಟೆಕ್ನಿಕ್ ರಸ್ತೆಯಲ್ಲಿ ಇರುವ ಎಂ.ಆರ್ ಪ್ಯಾಷನ್ಸ್ನ ಮಾಲೀಕರು ಸರ್ಕಾರವು ಯಾವುದೇ ಬಟ್ಟೆ ಅಂಗಡಿ ವ್ಯಾಪಾರ ನಿಷೇಧಿಸಿದ್ದರೂ ಅಂಗಡಿ ತೆಗೆದುಕೊಂಡು ಹಾಗೂ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ಸದರಿ ಬಟ್ಟೆ ಅಂಗಡಿಯ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಮೋಹನ್ ರೆಡ್ಡಿ ಬಿನ್ ಮುನಿರೆಡ್ಡಿ, 40 ವರ್ಷ, ವಕ್ಕಲಿಗರು, ಬಟ್ಟೆ ವ್ಯಾಪಾರ,  ಎಂ.ಆರ್ ಪ್ಯಾಷನ್ಸ್ ಮಾಲೀಕರು, ಕೆ.ಆರ್ ಬಡಾವಣೆ, ಚಿಂತಾಮಣಿ ನಗರ ಎಂದು ತಿಳಿಸಿರುತ್ತಾರೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ ಬಟ್ಟೆಅಂಗಡಿಯ ಬಳಿ ಸಾಮಾಜಿಕ ಅಂತರವನ್ನು ಪಾಲಿಸದೆ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಸದರಿ ಎಂ.ಆರ್ ಪ್ಯಾಷನ್ಸ್ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.88/2021 ಕಲಂ. 224 ಐ.ಪಿ.ಸಿ:-

          ದಿನಾಂಕ 25/05/2021 ರಂದು ರಾತ್ರಿ 11-45 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಸೋಮಸಿಂಗ್ ಬಿ.ಎಲ್ , ಅಧೀಕ್ಷಕರು, ಚಿಂತಾಮಣಿ ತಾಲ್ಲೂಕು ಉಪ ಕಾರಗೃಹ ರವರು  ನೀಡಿದ ದೂರಿನ ಸಾರಾಂಶವೇನೆಂದರೆ,  ಕಾರಗೃಹದ ವಿಚಾರಣಾ ಬಂಧಿ ಸಂಖ್ಯೆ 271/2020 ಶಂಕರಪ್ಪ ಬಿನ್ ರಮಣಪ್ಪ, 29 ವರ್ಷ,ಇರವಾರಪಲ್ಲಿ ಗ್ರಾಮ, ಗಟ್ಲಮಿಂದ, ಬಿ ಕೊತ್ತಕೋಟ ಮಂಡಲಂ, ಚಿತ್ತೂರು ಜಿಲ್ಲೆ, ಆಂಧ್ರ ಪ್ರದೇಶ ರಾಜ್ಯ  ರವರು ಘನ ಪ್ರಧಾನ ಸಿಜೆ ಮತ್ತು ಜೆ.ಎಂ.ಎಫ್.ಸಿ  ನ್ಯಾಯಾಲಯಕ್ಕೆ ಸಂಬಂಧಪಟ್ಟ  ಮೊ.ಸಂ 101/2020 ಕಲಂ 302 ಐ.ಪಿ.ಸಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಯ  ಪ್ರಕರಣದಲ್ಲಿ ನ್ಯಾಯಾಂಗ ಬಂಧನದ ದಿನಾಂಕ 21/11/2020 ರಂದು ಕಾರಾಗೃಹಕ್ಕೆ ದಾಖಲಾಗಿ ಬ್ಯಾರಕ್ ಸಂಖ್ಯೆ 02 ರಲ್ಲಿ ಬಂಧನದಲ್ಲಿಡಲಾಗಿರುತ್ತೆ.  ಕೋವಿಡ್-19 ಹಿನ್ನೆಲೆ  ಪ್ರತಿ ದಿನವು ಕಾರಾಗೃಹಕ್ಕೆ ಸ್ಯಾನಿಟೈಸ್ ಮಾಡುತ್ತಿದ್ದು  ಎಂದಿನಂತೆ ಈ ದಿನ ದಿನಾಂಕ 25/05/2021 ರಂದು ಕಾರಾಗೃಹದಲ್ಲಿ ಬೀಗ ಮುದ್ರೆ ಮಾಡಿದ ನಂತರ ಕಾರಗೃಹವನ್ನು ಸ್ಯಾನಿಟೈಸ್  ಮಾಡಲು   ಶಂಕರಪ್ಪ ಬಿನ್ ರಮಣಪ್ಪ  ಹಾಗೂ ಸುನೀಲ್ ಎಂಬ ಇಬ್ಬರು ಬಂಧಿಗಳನ್ನು ಸ್ಯಾನಿಟೈಸ್ ಮಾಡಲು ಬಿಟ್ಟಿದ್ದು ಆ ಸಮಯದಲ್ಲಿ ಗಾರ್ಡನ್ ಬಾಗಿಲು ತೆರೆದು ರಾತ್ರಿ 19-09 ಗಂಟೆ ಸಮಯದಲ್ಲಿ ಪೈಪು ಹತ್ತಿ ಮೇಲೆಯಿಂದ  ಶಂಕರಪ್ಪ ಬಿನ್ ಲೇಟ್ ರಮಣಪ್ಪ ರವರು ಪರಾರಿಯಾಗಿರುತ್ತಾರೆ. ಆದ್ದರಿಂದ ಮೇಲ್ಕಂಡ ಶಂಕರಪ್ಪ ಬಿನ್ ರಮಣಪ್ಪ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

6. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.61/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 26/05/2021 ರಂದು ಠಾಣಾ ಸಿಬ್ಬಂಧಿ ಹೆಚ್.ಸಿ-53 ರವರು ಮಾಲು ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ ದಿನಾಂಕ:26/05/2021 ರಂದು ಬೆಳಗ್ಗೆ 10.00 ಗಂಟೆಯಲ್ಲಿ ಠಾಣಾಧಿಕಾರಿಗಳು ತನಗೆ ಮತ್ತು ಠಾಣಾ ಸಿಬ್ಬಂದಿಯಾದ  ಪಿ.ಸಿ -200 ಚಂದ್ರಶೇಖರ್ ರವರಿಗೆ ಕೋವಿಡ್ -19 ಪ್ರಯುಕ್ತ ಗ್ರಾಮಗಳ ಗಸ್ತಿಗಾಗಿ ನೇಮಕ ಮಾಡಿದ್ದು, ಅದರಂತೆ ಠಾಣಾ ಸರಹದ್ದು ದಿಬ್ಬೂರಹಳ್ಳಿ, ಕುದಪಕುಂಟೆ, ರಾಯಪ್ಪನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಬೆಳಗ್ಗೆ 10.45 ಗಂಟೆಗೆ ಧಡಂಘಟ್ಟ ಗ್ರಾಮಕ್ಕೆ ಬೇಟಿ ಮಾಡಿದಾಗ ಯಾರೋ ಬಾತ್ಮಿದಾರರು ಧಡಂಘಟ್ಟ ಗ್ರಾಮದ ಭಾಸ್ಕರ ಬಿನ್ ವೆಂಕಟರಾಯಪ್ಪರವರ ವಾಸದ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ನೀಡಿದ್ದು, ಅದರಂತೆ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಪಂಚರಾಗಿ ಸಹಕರಿಸಲು ಕೋರಲಾಗಿ ಅವರು ಒಪ್ಪಿ ತಮ್ಮಗಳೊಂದಿಗೆ ಧಡಂಘಟ್ಟ ಗ್ರಾಮದ ಭಾಸ್ಕರ ಬಿನ್ ವೆಂಕಟರಾಯಪ್ಪರವರ ವಾಸದ ಮನೆಯ ಬಳಿಗೆ ಬೆಳಗ್ಗೆ 10.55 ಗಂಟೆಗೆ ಹೋಗಿ ನೋಡುವಷ್ಟರಲ್ಲಿ ಸದರಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಮಧ್ಯಪಾನ ಮಾಡುತ್ತಿದ್ದವರು ಹಾಗೂ ಸ್ಥಳಾವಕಾಶ ಮಾಡಿಕೊಟ್ಟ ಮನೆ ಮಾಲೀಕ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಖಾಲಿ ಪ್ಯಾಕೇಟ್ಗಳು, ನೀರಿನ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಓಡಿ ಹೋದ ಮನೆಯ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ಭಾಸ್ಕರ ಬಿನ್ ವೆಂಕಟರಾಯಪ್ಪ, 39 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ಧಡಂಘಟ್ಟ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿದುಬಂದಿದ್ದು, ನಂತರ ಪಂಚರ ಸಮಕ್ಷಮ ಬೆಳಗ್ಗೆ 11.00 ಗಂಟೆಯಿಂದ  ಮದ್ಯಾಹ್ನ 12.00  ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ ಒಟ್ಟು 1 ಲೀಟರ್ 0.80 ಎಂ.ಎಲ್ ನ 421.56  ರೂಗಳ ಬೆಲೆ ಬಾಳುವ ಮಧ್ಯ ತುಂಬಿದ ಒರಿಜಿನಲ್ ಚಾಯ್ಸ್  ವಿಸ್ಕಿಯ 90 ಎಂ.ಎಲ್ ನ 12 ಟೆಟ್ರಾ ಪ್ಯಾಕೇಟ್ಗಳು, ಇವುಗಳ ಒಂದರ ಬೆಲೆ 35.13/-ರೂಗಳಾಗಿರುತ್ತೆ. ಇವುಗಳನ್ನು ಹಾಗೂ ಒರಿಜಿನಲ್ ಚಾಯ್ಸ್ 90 ಎಂ.ಎಲ್ ನ 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲನ್ನು ಅಮಾನತ್ತುಪಡಿಸಿಕೊಂಡಿರುತ್ತೇನೆ, ಮೇಲ್ಕಂಡ ಆಸಾಮಿಯು ತಮ್ಮ ಮನೆಯ ಮುಂಭಾಗ ಸರ್ಕಾರದ ಯಾವುದೇ ಪರವಾನಿಗೆ ಪಡೆಯದೆ ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು,  ಮಾಲು ಮತ್ತು ಪಂಚನಾಮೆಯನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

7. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.85/2021 ಕಲಂ. 188,269,271 ಐ.ಪಿ.ಸಿ & 5 THE KARNATAKA EPIDEMIC DISEASES ACT, 2020 :-

          ಘನ ನ್ಯಾಯಾಲಯದಲ್ಲಿ ಲಕ್ಷ್ಮೀನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:26.05.2021 ರಂದು ನಾನು ಕೋವಿಡ್-19 ಸಾಂಕ್ರಾಮಿಕ ರೋಗದ 02 ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ವ್ಯಕ್ತಿಗಳು ಗುಂಪು ಗೂಡುವುದನ್ನು ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಸಾಂಕ್ರಾಮಿಕ ರೋಗ ಹರಡದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಈ ದಿನ ಸಿಬ್ಬಂದಿಯವರಾದ ಪಿಸಿ 28 ಅಶ್ವತ್ಥನಾಯ್ಕ ಮತ್ತು ಜೀಪ್ ಚಾಲಕ ಎಪಿಸಿ-120 ನಟೇಶ್ ರವರೊಂದಿಗೆ ಮಂಚೇನಹಳ್ಳಿ ಯಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಮಂಚೇನಹಳ್ಳಿಯ ತಂಗುದಾಣದ ಮುಂಭಾಗ ಇರುವ ರಾಜು ಟೀ ಸ್ಟಾಲ್ ನಲ್ಲಿ ಬೆಳಗ್ಗೆ 09.00 ಗಂಟೆಯ ಸಮಯದಲ್ಲಿ ಸಾಂಕ್ರಾಮಿಕ ರೋಗ ಹರಡುವುದು ಗೊತ್ತಿದ್ದೂ  ಹಾಗೂ ಸರ್ಕಾರವು ದಿನಸಿ ಅಂಗಡಿ ಹಾಗೂ ಅಗತ್ಯ ವಸ್ತುಗಳ ಅಂಗಡಿಗಳನ್ನಲ್ಲದೆ ಇತರೆ ಬೇರೆ ಯಾವುದೇ ರೀತಿಯ ವ್ಯಾಪಾರ ವಹಿವಾಟುಗಳನ್ನು ನಡೆಸಬಾರದೆಂದು ಆದೇಶ ಮಾಡಿದ್ದರೂ ಸಹಾ ಸದರಿ ಅಂಗಡಿಯ ಮಾಲೀಕ ಸಾರ್ವಜನಿಕರನ್ನು ಗುಂಪಾಗಿ ಸೇರಿಸಿಕೊಂಡು  ವ್ಯಕ್ತಿಯಿಂದ ವ್ಯಕ್ತಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಟೀ ವ್ಯಾಪಾರ ಮಾಡಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿರುತ್ತೆ. ಸ್ಥಳದಲ್ಲಿದ್ದ ಟೀ ಅಂಗಡಿಯ ಮಾಲೀಕನ ಹೆಸರು ವಿಳಾಸ ಕೇಳಲಾಗಿ ರಾಜಶೇಖರ ಬಿನ್ ಹನುಮಂತಪ್ಪ, 41 ವರ್ಷ, ಒಕ್ಕಲಿಗರು, ಟೀ ಅಂಗಡಿ ವ್ಯಾಪಾರ, ವಾಸ: 05 ನೇ ವಾರ್ಡ್, ಮಂಚೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಟೀ ಅಂಗಡಿಯ ಮಾಲೀಕನು ಟೀ ಅಂಗಡಿ ತೆರೆಯ ಬಾರದೆಂದು ಆದೇಶವಿದ್ದರೂ ಸಹಾ  ಅಂಗಡಿಯನ್ನು ತೆರೆದು ಗ್ರಾಹಕರನ್ನು ಗುಂಪಾಗಿ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ್ದು ಆದ್ದರಿಂದ ಸದರಿಯವರ ಮೇಲೆ ಬೆಳಗ್ಗೆ 09.30 ಗಂಟೆಗೆ ಠಾಣಾ ಮೊ.ಸಂ.85/2021 ಕಲಂ 5 ಕರ್ನಾಟಕ ಸಾಂಕ್ರಾಮಿಕ ಆದ್ಯಾದೇಶ ಕಾಯ್ದೆ 2020 ಮತ್ತು ಕಲಂ 188, 269, 271  ಐಪಿಸಿ ರೀತ್ಯಾ ಸ್ವತಃ ಪ್ರಕರಣ ದಾಖಲಿಸಿರುತ್ತೆ.

 

8. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.45/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

          ದಿನಾಂಕ:26-05-2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿ.ಎಸ್.ಐ., ಪಾತಪಾಳ್ಯ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:26-05-2021 ರಂದು ಕೋವಿಡ್-19 ಹಿನ್ನೆಲೆಯಲ್ಲಿ ನಾನು ಸಿಬ್ಬಂದಿಯವರಾದ ಸಿಪಿಸಿ-148 ಧನಂಜಯ ರವರೊಂದಿಗೆ ಕೆಎ-40-ಜಿ-59 ಸರ್ಕಾರಿ ಜೀಪಿನಲ್ಲಿ ಚಾಲಕ ಎ.ಹೆಚ್.ಸಿ-21 ಸತ್ಯಾನಾಯ್ಕ್ ರವರ ಜೊತೆಯಲ್ಲಿ ಬೆಳಿಗ್ಗೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೆಳಿಗ್ಗೆ 10-30 ಗಂಟೆಯಲ್ಲಿ ಪಾತಪಾಳ್ಯ ಗ್ರಾಮದಲ್ಲಿನ ಪಾತಕೋಟೆ ಕ್ರಾಸ್ ಬಳಿ ಒಂದು ಎ-1 ಚಿಕನ್ ಸೆಂಟರ್ ಅಂಗಡಿ ಬಳಿ ಜನರು ಗುಂಪಾಗಿ ಸೇರಿದ್ದು, ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಚಿಕನ್ ಅಂಗಡಿಯವರು ಕೋವಿಡ್-19 ರೋಗ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಬೆಳಿಗ್ಗೆ 10-00 ಗಂಟೆಯ ನಂತರ ಅಂಗಡಿಯನ್ನು ತೆರೆದು ನಿರ್ಲಕ್ಷ್ಯತನದಿಂದ ಜನರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು, ಸದರಿ ಚಿಕನ್ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕನ ಹೆಸರು & ವಿಳಾಸ ಕೇಳಲಾಗಿ ಶಿವರಾಮ ಬಿನ್ ನಾರಾಯಣಪ್ಪ, 27 ವರ್ಷ, ನಾಯಕರು, ವ್ಯಾಪಾರ, ವಾಸ: ಚಿಲಕಲನೇರ್ಪು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿರುತ್ತಾರೆ. ಸದರಿ ಚಿಕನ್  ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕ ಶಿವರಾಮ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.169/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 26-05-2021  ರಂದು ಬೆಳಿಗ್ಗೆ 9-30  ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 26-05-2021  ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಹಿತ್ತಲಹಳ್ಳಿ, ಬೆಳ್ಳುಟ್ಟಿ, ಬೋದಗೂರು, ಭಕ್ತರಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳ್ಳಿಗೆ 9-00 ಗಂಟೆ ಸಮಯದಲ್ಲಿ ಆನೂರು ಗ್ರಾಮದ ಕಡೆ ಹೋಗಲು ಬರುತ್ತಿದ್ದಾಗ ಬಾತ್ಮಿದಾರರಿಂದ ಆನೂರು ಗ್ರಾಮದ ಗೇಟ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಆನೂರು ಗ್ರಾಮದ ಗೇಟ್  ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಕವರ್  ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ನಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಮುನಿಕುಂಟಪ್ಪ ಬಿನ್ ನಾರಾಯಣಪ್ಪ, 47 ವರ್ಷ, ಆದಿ ದ್ರಾವಿಡ ಜನಾಂಗ, ಕೂಲಿ ಕೆಲಸ, ವಾಸ: ತುಮ್ಮನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರ್  ಪರಿಶೀಲಿಸಲಾಗಿ 90 ಎಂ.ಎಲ್.  ಸಾಮರ್ಥ್ಯದ 10 RAJA WHISKY ಟೆಟ್ರಾ ಪ್ಯಾಕೆಟ್ ಗಳಿದ್ದು,  ಸದರಿ ಸ್ಥಳದಲ್ಲಿ 2 ಖಾಲಿ ಪ್ಲಾಸ್ಟಿಕ್ ಲೋಟಗಳು ,4 ಖಾಲಿ ವಾಟರ್ ಪಾಕೇಟ್ ಗಳನ್ನು ಮತ್ತು 90 ಎಂ.ಎಲ್.  ಸಾಮರ್ಥ್ಯದ 2 RAJA WHISKY ಖಾಲಿ ಟೆಟ್ರಾ ಪ್ಯಾಕೆಟ್  ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಬೆಳ್ಳಿಗೆ 9-30 ಗಂಟೆಯಲ್ಲಿ ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇನೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಮುನಿಕುಂಟಪ್ಪ ಬಿನ್ ನಾರಾಯಣಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ. 151/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 26-05-2021 05:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080