Feedback / Suggestions

1. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.31/2021 ಕಲಂ. 188 ಐಪಿಸಿ, 5 THE KARNATAKA EPIDEMIC DISEASES ACT, 2020 & 60 THE DISASTER MANAGEMENT ACT, 2005 :-

     ದಿನಾಂಕ: 24-04-2021 ರಂದು  ಪಿಎಸ್ಐ ಶ್ರೀ ಎಂ.ಪಿ ಹೊನ್ನೇಗೌಡ ರವರು ಮದ್ಯಾಹ್ನ ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ, ಕೋವಿಡ್-2019  ಸಾಂಕ್ರಾಮಿಕ ರೋಗದ 2 ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ  ಸರ್ಕಾರದ ಆದೇಶದಂತೆ  ಸಾಂಕ್ರಾಮಿಕ ರೋಗಗಳು ಪಸರಿಸದಂತೆ ವ್ಯಕ್ತಿಗಳು ಗುಂಪು ಗೂಡುವುದನ್ನು, ಯಾವುದೇ ಕಾರ್ಯಕ್ರಮಗಳನ್ನು  ಆಚರಣೆ  ಮಾಡುವುದನ್ನು  ತಡೆಯಲು, ವ್ಯಕ್ತಿಯಿಂದ ವ್ಯಕ್ತಿಗೆ  ಸಾಂಕ್ರಾಮಿಕ ರೋಗಗಳು ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು  ಮುಂಜಾಗ್ರತಾ ಕ್ರಮಕ್ಕಾಗಿ ಜಿಲ್ಲಾಡಳಿತವು ಕಲಂ 144 ಸಿಅರ್ ಪಿಸಿ ರೀತ್ಯಾ ನಿಶೇದಾಜ್ಞೆಯನ್ನು ಜಾರಿ ಮಾಡಿರುತ್ತಾರೆ.  ಅದರಂತೆ  ಈ ದಿನ ದಿನಾಂಕ:24-04-2021 ರಂದು ಬೆಳಗ್ಗೆ ಸುಮಾರು 11-00 ಗಂಟೆಯಲ್ಲಿ ನಿಶೇದಾಜ್ಞೆ ಜಾರಿಯಲ್ಲಿದ್ದ ಸಮಯದಲ್ಲಿ ಸಿಬ್ಬಂಧಿಗೆ  ಪಾಯಿಂಟ್ ಕರ್ತವ್ಯಗಳಿಗೆ ನೇಮಿಸಿ  ನಂತರ ನಾನು ಮತ್ತು ಸಿಬ್ಬಂಧಿಯಾದ. ಶ್ರೀ ದಿನೇಶ್ ಹೆಚ್ ಸಿ-48, ಶ್ರೀ ಮುರಳಿ ಪಿಸಿ-138, ಶ್ರೀ ಪರಶುರಾಮ ಬೋವಿ ಪಿಸಿ-259, ಶ್ರೀ ಹರೀಶ್-428 ರವರೊಂದಿಗೆ  ನಗರದಲ್ಲಿ ಗಸ್ತು ಮಾಡುತ್ತಿದ್ದಾಗ  ಚಿಕ್ಕಬಳ್ಳಾಪುರ ನಗರದ  ಎಲೆಪೇಟೆಯಲ್ಲಿರುವ  ಮಂಜುನಾಥ ಕ್ಲೀನಿಕ್ ಬಳಿ  ಎಲೆ ಪೇಟೆಯ ವಾಸಿಯಾದ ಗಜೇಂದ್ರ ಎಂಬುವವರು  ಮಂಜುನಾಥ ಕ್ಲೀನಿಕ್ ನಲ್ಲಿ  ಕೋವಿಡ್-19 ರ ರೋಗಿಗಳನ್ನು  ತಂದು ಚಿಕಿತ್ಸೆ ಪಡಿಸುತ್ತಿರುವುದನ್ನು ವಿರೋಧಿಸಿ  ಅಕ್ಕಪಕ್ಕದ  ಮನೆಯ ಸಾರ್ವಜನಿಕರನ್ನು ಆಕ್ರಮವಾಗಿ ಗುಂಪು ಸೇರಿಸಿಕೊಂಡು  ಮಂಜುನಾಥ ಕ್ಲೀನಿಕ್ ಬಳಿ  ಪ್ರತಿಭಟನೆ ಮಾಡಿ  ನಂತರ ನಗರದಲ್ಲಿ ಗುಂಪು ಸೇರಿಸಿಕೊಂಡು  ಜಿಲ್ಲಾಧಿಕಾರಿಗಳ ಮನೆಯ ಬಳಿ ಹೋಗಿರುತ್ತಾರೆ.  ಅರೋಪಿಗಳು  ಕೋವಿಡ್-19 ರ ತುರ್ತುಪರಿಸ್ಥಿತಿಯಲ್ಲಿ  ವ್ಯಾಪಕವಾಗಿ ಹರಡುತ್ತಿರುವ 2 ನೇ ಅಲೆ ಕೋವಿಡ್-2019  ಸಾಂಕ್ರಾಮಿಕ ರೋಗ ತಡೆಗಟ್ಟುವ ಸಲುವಾಗಿ ಜಿಲ್ಲಾಡಳಿತವು ಕಲಂ 144 ಸಿಅರ್ ಪಿಸಿ ರೀತ್ಯಾ ನಿಷೇದಾಜ್ಞೆ ಅಧೇಶವನ್ನು ಮಾಡಿದ್ದರೂ ಸಹ  ಅದೇಶವನ್ನು ದಿಕ್ಕರಿಸಿ ಕೋವಿಡ್-2 ಸಾಂಕ್ರಾಮಿಕ ರೋಗ ಹರಡಲು  ಅನವು ಮಾಡಿಕೊಡುವ ಸಲುವಾಗಿ ಜನರನ್ನು ಗುಂಪು ಸೇರಿಸಿ ಪ್ರತಿಭಟನೆ ಮಾಡಿದ್ದಲ್ಲದೆ      ಕೋವಿಡ್ ರೋಗಿಗಳ ಚಿಕಿತ್ಸೆ ಮಾಡಲು ಪ್ರತಿಭಟನೆ ಮಾಡಿ  ತೊಂದರೆ ನೀಡಿ  ಕಲಂ:188 ಐಪಿಸಿ & 60 ಡಿಸಾರ್ಟರ್ ಮ್ಯಾನೇಜ್ ಮೆಂಟ್ ಅಕ್ಟ್ -2005. ಮತ್ತು  ಕಲಂ-5 ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ-2020 ರ ಅಡಿಯಲ್ಲಿ   ಅರೋಪಿಗಳ ವಿರುದ್ದ ಕಾನೂನು ರೀತ್ಯಾ  ಅಪರಾಧವೆಸಗಿರುತ್ತಾರೆ. ಅದ್ದರಿಂದ ಸದರಿ  ಅರೋಪಿಗಳ ವಿರುದ್ದ ಕ್ರಮ ಕೈಗೊಂಡು  ತನಿಖೆ ಕೈಗೊಳ್ಳಲು  ಸೂಚಿಸಿದ ಮೇರೆಗೆ  ವರಧಿಯನ್ನು ಪಡೆದುಕೊಂಡು ಘನ ನ್ಯಾಯಾಲಯಕ್ಕೆ ವರಧಿಯನ್ನು ಸಲ್ಲಿಸಿಕೊಂಡು ಈ ದಿನ  ನ್ಯಾಯಾಲಯದ ಪೇದೆ-419 ರವರು  ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು  ತಂದು ಹಾಜರು ಪಡಿಸಿದ  ಅನುಮತಿ ಪತ್ರವನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು  ಕೈಗೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.29/2021 ಕಲಂ. 279,336 ಐಪಿಸಿ & 134 INDIAN MOTOR VEHICLES ACT, 1988 :-

     ದಿನಾಂಕ:-26/04/2021 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾಧಿದಾರರಾದ ಶ್ರೀ. ಮುರುಗೇಸನ್ ಎಸ್ ಬಿನ್ ಸೆಲ್ವಂ 35 ವರ್ಷ, ಪ.ಜಾತಿ (ಪೆರಿಯಾರ್ ಜನಾಂಗ), ಚಾಲಕ ವೃತ್ತಿ, ನಂ-2/65, ನಂ-2/65 ಮಂತವೇಲಿಕುಂಬಲ್ ಗ್ರಾಮ, ಕುರುಂಬಲ್ ಮನಾಲಿ ಅಂಚೆ, ತಿರುತುರಾಪೊಂಡಿ ತಾಲ್ಲೂಕು, ತಿರುವರೂರ್ ಜಿಲ್ಲೆ, ತಮಿಳುನಡು ರಾಜ್ಯ-610203 ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಾನು TN-52-H-1135 ರ ಲಾರಿಯ ಚಾಲಕನಾಗಿದ್ದು, ಬಾಡಿಗೆಯ ನಿಮಿತ್ತ TN-52-H-1135 ರ ಲಾರಿಯಲ್ಲಿ ಬೇಲ್ ಗಳನ್ನು ನಾಗ್ಪುರದಲ್ಲಿ ಲೋಡ್ ಮಾಡಿಕೊಂಡು ನಾಗ್ಪುರದಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ತಮಿಳುನಾಡಿನ ದಂಡಿಕಲ್ಲಿಗೆ ಹೋಗಲು ದಿನಾಂಕ:-24/04/2021 ರಂದು ಬೆಳಿಗ್ಗೆ ಸುಮಾರು 07-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಬಾಗೇಪಲ್ಲಿ - ಬೆಂಗಳೂರು ಎನ್.ಹೆಚ್-44 ಬೈಪಾಸ್ ರಸ್ತೆಯ ಹೊನ್ನೇನಹಳ್ಳಿ ಗೇಟ್ ಬಳಿ ತನ್ನ ಲಾರಿಯನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಾಗೇಪಲ್ಲಿ ಕಡೆಯಿಂದ ಬಂದ AP-03-TK-0495 ರ ಕ್ಸೆನಾನ್ ಯೋಧ ಟೆಂಪೋ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಯಾರಿಗೂ ಗಾಯಗಳಾಗದೇ ತಮ್ಮ ಲಾರಿಯ ಹಿಂಭಾಗ ಹಾಗೂ ಸದರಿ ಅಪಘಾತ ಪಡಿಸಿದ AP-03-TK-0495 ರ ಕ್ಸೆನಾನ್ ಯೋಧ ಟೆಂಪೋ ವಾಹದ ಮುಂಭಾಗ ಸಂಪೂರ್ಣವಾಗಿ ಜಕಂಗೊಂಡಿದ್ದು ಸದರಿ ಅಪಘಾತಕ್ಕೆ ಕಾರಣನಾದ AP-03-TK-0495 ರ ಕ್ಸೆನಾನ್ ಯೋಧ ಟೆಂಪೋ ವಾಹನದ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ತಮ್ಮ ಲಾರಿ ಮಾಲೀಕರಿಗೆ ವಿಚಾರ ತಿಳಿಸಿ ಈ ದಿನ ತಡವಾಗಿ ದಿನಾಂಕ:-26/04/2021 ರಂದು ಸದರಿ ಅಪಘಾತಕ್ಕೆ ಕಾರಣನಾದ AP-03-TK-0495 ರ ಕ್ಸೆನಾನ್ ಯೋಧ ಟೆಂಪೋ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಸಿಕೊಂಡಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.163/2021 ಕಲಂ. 15(A) ಕೆ.ಇ ಆಕ್ಟ್:-

     ದಿನಾಂಕ: 25/04/2021 ರಂದು ಸಂಜೆ 5.00 ಗಂಟೆಗೆ ಠಾಣೆಯ ಸಿ.ಹೆಚ್.ಸಿ-167 ವಿಜಯಕುಮಾರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:25/04/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ತಾನು ಹಾಗೂ ಸಿ.ಹೆಚ್.ಸಿ-40 ಸೀನಪ್ಪರವರು ಠಾಣಾ ಸರಹದ್ದಿನ ಕುರುಟಹಳ್ಳಿ, ರಾಂಪುರ, ಮುನಗನಹಳ್ಳಿ, ಕಾಚಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3.30 ಗಂಟೆಯ ಸಮಯದಲ್ಲಿ ಬ್ರಾಹ್ಮಣರದಿನ್ನೆ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ನರಸಿಂಹಪ್ಪ ಬಿನ್ ರಾಮಪ್ಪರವರು ತನ್ನ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಸದರಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ  ನೋಡಲಾಗಿ 1).90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 4 ಟೆಟ್ರಾ ಪಾಕೆಟ್ ಗಳು, 2).ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು 3).ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ನರಸಿಂಹಪ್ಪ ಬಿನ್ ರಾಮಪ್ಪ, 34 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ಬ್ರಾಹ್ಮಣರದಿನ್ನೆ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3.45 ರಿಂದ 4.30 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ನರಸಿಂಹಪ್ಪ ಬಿನ್ ರಾಮಪ್ಪರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.164/2021 ಕಲಂ. 87  ಕೆ.ಪಿ ಆಕ್ಟ್:-

          ದಿನಾಂಕ: 25/04/2020 ರಂದು ರಾತ್ರಿ 8.45 ಗಂಟೆಗೆ ಠಾಣೆಯ CHC-57 ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಅನುಮತಿಯ ಪತ್ರದ ಸಾರಾಂಶವೇನೆಂದರೆ, ಈ ದಿನ ದಿನಾಂಕ 25/04/2021 ರಂದು ಸಂಜೆ 4.30 ಗಂಟೆಯಲ್ಲಿ ಶ್ರೀ ನರೇಶ್ ನಾಯ್ಕ್,ಎಸ್, ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ, ಠಾಣಾ ಸರಹದ್ದಿಗೆ ಸೇರಿದ ಚಿಕ್ಕ ಕೊಂಡ್ರಹಳ್ಳಿ ಗ್ರಾಮದ ಬಳಿ ಇರುವ ಸರ್ಕಾರಿ ಕೆರೆಯಂಗಳದ ಬಳಿ ಇರುವ ಮರದ ಕೆಳಗೆ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಠಾಣೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಸಿ.ಹೆಚ್.ಸಿ-249 ಶ್ರೀ ಸಂದೀಪ್ ಕುಮಾರ್, ಸಿ.ಹೆಚ್.ಸಿ.-41, ಜಗದೀಶ, ಸಿ.ಹೆಚ್.ಸಿ-199 ನಾಗರಾಜ, ಸಿ.ಪಿ.ಸಿ-544 ವೆಂಕಟರವಣ ಮತ್ತು ಸಿ.ಪಿ.ಸಿ-430 ನರಸಿಂಹಯ್ಯ ಜೀಪ್ ಚಾಲಕ ಎ.ಹೆಚ್.ಸಿ-08 ಮುಖೇಶ್ ಮತ್ತು ಪಂಚರೊಂದಿಗೆ KA-40-G-326 ನಂಬರಿನ ಠಾಣೆಯ ಸರ್ಕಾರಿ ಜೀಪಿನಲ್ಲಿ ಚಿಕ್ಕ ಕೊಂಡ್ರಹಳ್ಳಿ ಗ್ರಾಮದ ಬಳಿ ಇರುವ ಸರ್ಕಾರಿ ಕೆರೆಯಂಗಳದ ಬಳಿ ಹೋಗಿ ನೋಡಲಾಗಿ ಹೊಂಗೇ ಮರದ ಕೆಳಗೆ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಇಸ್ಪೀಟ್ ಜೂಜಾಟ ಆಡುತ್ತಿದ್ದು, ತಾವು ಅವರನ್ನು ಸುತ್ತುವರಿಯಲು ಹೋಗುತ್ತಿದ್ದಾಗ ಅವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಓಡಿಹೋಗಿದ್ದು, ಅವರನ್ನು ಬೆನ್ನಟ್ಟಿ ಹಿಡಿಯಲು ಹೋದರೂ ಸಹ ಅವರು ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ. ಸ್ಥಳದಲ್ಲಿ ಪರಿಶೀಲಿಸಲಾಗಿ ಪಣಕ್ಕಿಟ್ಟಿದ್ದ 1,620/- ರೂ ನಗದು ಹಣ, 52 ಇಸ್ಪಿಟ್ ಎಲೆಗಳು, ಹಾಗೂ ಒಂದು ಪ್ಲಾಸ್ಟಿಕ್ ಪೇಪರ್ ಹಾಗೂ ಆರೋಪಿಗಳು ಜೂಜಾಟ ಆಡಲು ತೆಗೆದುಕೊಂಡು ಬಂದಿದ್ದ 1) ಕೆಎ-40 ಯು-1938 ನೊಂದಣಿ ಸಂಖ್ಯೆಯ ಹೀರೋ ಹೋಂಡಾ ಸ್ಲೆಂಡರ್ ಪ್ಲಸ್ 2) ಕೆಎ-40 ಇಬಿ-7725 ನೊಂದಣಿ ಸಂಖ್ಯೆಯ ಹೀರೋ ಪ್ಯಾಷನ್ ಪ್ಲಸ್ 3) ಕೆಎ-53 ಹೆಚ್-1144 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ 150 ದ್ವಿಚಕ್ರ ವಾಹನ 4) ಕೆಎ-03 ಹೆಚ್ ಸಿ-1300 ನೊಂದಣಿ ಸಂಖ್ಯೆಯ ಹೀರೋ ಹೋಂಡಾ ಸ್ಲೆಂಡರ್ ಪ್ಲಸ್ ಮತ್ತು 5) ಕೆಎ-50 ಕೆ-9404 ನೊಂದಣಿ ಸಂಖ್ಯೆಯ ಹೀರೋ ಪ್ಯಾಷನ್ ಪ್ರೋ ಮತ್ತು 6) ಕೆಎ-01 ಇಬಿ-2463 ನೊಂದಣಿ ಸಂಖ್ಯೆಯ ಟಿವಿಎಸ್ ವಿಕ್ಟರ್ ಜಿಎಲ್ ಎಕ್ಸ್ ದ್ವಿಚಕ್ರ ವಾಹನಗಳಿದ್ದು ಸದರಿ ಮಾಲುಗಳನ್ನು ಸಂಜೆ 5.00 ರಿಂದ 5.45 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಮಾಲು, ದ್ವಿಚಕ್ರ ವಾಹನಗಳು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿದ್ದು, ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿರುತ್ತೆ. ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.165/2021 ಕಲಂ. 269,270,188 ಐ.ಪಿ.ಸಿ & 51(b) DISASTER MANAGEMENT ACT, 2005:-

     ದಿನಾಂಕ: 26/04/2021 ರಂದು ಮದ್ಯಾಹ್ನ 1.00 ಗಂಟೆಗೆ ಶ್ರೀ. ಕೆ.ಎಂ.ಶ್ರೀನಿವಾಸಪ್ಪ, ಸಿ.ಪಿ.ಐ, ಚಿಂತಾಮಣಿ ಗ್ರಾಮಾಂತರ ವೃತ್ತ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 26/04/2021 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ತನ್ನ ಸಿಬ್ಬಂದಿಯವರಾದ ಸಿ.ಹೆಚ್.ಸಿ 106, ಶಂಕರಪ್ಪ, ಮತ್ತು ಸಿ.ಹೆಚ್.ಸಿ 190 ವೀರಭದ್ರಸ್ವಾಮಿ ರವರು ಜೀಪ್ ಚಾಲಕ ವೇಣುಗೋಪಾಲ್ ರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-3339 ಜೀಪ್ ನಲ್ಲಿ ವೃತ್ತದ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಮದ್ಯಾಹ್ನ 12.00 ಗಂಟೆ ಸಮಯದಲ್ಲಿ ತಿಮ್ಮಸಂದ್ರ ಗ್ರಾಮದ ವಿಜಯ ಹ್ಯಾಂಡ್ ಲೂಮ್ಸ್ ಬಟ್ಟೆ ಅಂಗಡಿಯ ಮಾಲೀಕ ನಾಗರಾಜ ರವರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 7-8 ಜನರನ್ನು ಅಂಗಡಿಯಲ್ಲಿ ಅಕ್ಕಪಕ್ಕದಲ್ಲಿಯೇ ಕೂರಿಸಿಕೊಂಡು ಮತ್ತು ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ನಾಗರಾಜ ಬಿನ್ ಮುನಿಯಪ್ಪ, 43 ವರ್ಷ, ನಾಯಕರು, ವಿಜಯ ಹ್ಯಾಂಡ್ ಲೂಮ್ಸ್  ಅಂಗಡಿ ಮಾಲೀಕರು, ತಿಮ್ಮಸಂದ್ರ, ತಿಮ್ಮಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಬಟ್ಟೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.47/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:25/04/2021 ರಂದು ಮದ್ಯಾಹ್ನ 12.30 ಗಂಟೆಗೆ ಎ.ಎಸ್.ಐ ಕೃಷ್ಣಪ್ಪ ರವರು ಮಾಲು ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ದಾಖಲಿಸಿಕೊಂಡ ಪ್ರಕರಣದ ಸಾರಾಂಶವೆನೇಂದರೆ, ತಾನು ಹಾಗೂ ಠಾಣಾ ಸಿಬ್ಬಂದಿ ಹೆಚ್.ಸಿ 53 ಲೋಕೇಶ್, ಪಿ.ಸಿ 490 ಸೋಮಶೇಖರ್, ಪಿ.ಸಿ 461 ಸಂತೋಷ್, ದಿನಾಂಕ 25/04/2021 ರಂದು ಬೆಳಿಗ್ಗೆ 10.00 ಗಂಟೆಗೆ ಗ್ರಾಮಗಳ ಗಸ್ತು ಚೊಕ್ಕನಹಳ್ಳಿ, ಗೊರ್ಲಗುಮ್ಮನಹಳ್ಳಿ, ಗೋಣಿಮರದಹಳ್ಳಿ, 11 ನೇ ಮೈಲಿ, ಬುಡಗವಾರಹಳ್ಳಿ, ದಿಂಬಾರ್ಲಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಅಲಗುರ್ಕಿ ಗ್ರಾಮಕ್ಕೆ ಭೇಟಿ ನೀಡಿದಾಗ ಬಾತ್ಮಿದಾರರಿಂದ ಅಲಗುರ್ಕಿ ಗ್ರಾಮದ ಚಿನ್ನಚೌಡರೆಡ್ಡಿ ಹುಣಸೇತೋಪಿನಲ್ಲಿ ಯಾರೋ ಕೆಲವರು ಕೋಳಿ ಪಂದ್ಯವಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ ಸದರಿ ಮೇಲ್ಕಂಡ ಸ್ಥಳದಲ್ಲಿ ಪಂಚರೊಂದಿಗೆ ತಾನು ಮತ್ತು ಸಿಬ್ಬಂದಿಯವರೊಂದಿಗೆ 10.30 ಗಂಟೆಗೆ ಅಲಗುರ್ಕಿ ಗ್ರಾಮದ ಚಿನ್ನ ಚೌಡರೆಡ್ಡಿ ರವರ ಹುಣಸೇ ತೋಪಿನಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಆಡುತ್ತಿರುವುದಾಗಿ ಕಂಡುಬಂದಿದ್ದು ಅಲ್ಲಿದ್ದವರ ಪೈಕಿ ಒಬ್ಬ ಆಸಾಮಿ ನನ್ನ ಕೋಳಿ ಗೆಲ್ಲುತ್ತದೆಂದು 200 ರೂ ಮತ್ತೋಬ್ಬ ಆಸಾಮಿ ನನ್ನ ಕೋಳಿ ಗೆಲ್ಲುತ್ತದೆಂದು 300 ರೂಗಳನ್ನು ಹಣವನ್ನು ಪಣವಾಗಿಟ್ಟು ಕೋಳಿ ಪಂದ್ಯ ಜೂಜಾಟವಾಡುತ್ತಿರುವುದಾಗಿ ಕಂಡು ಬಂದಿದ್ದು  ತಾವು ಹೋಗಿ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಅಲ್ಲಿದ್ದವರು ಓಡಿ ಹೋಗಲು ಪ್ರಾರಂಬಿಸಿದ್ದು ಅವರನ್ನು ಹಿಂಭಾಲಿಸಿ ಹಿಡಿದುಕೊಳ್ಳಲಾಗಿ ಇಬ್ಬರು ಸಿಕ್ಕಿದ್ದು ಅವರುಗಳ ಹೆಸರು ಮತ್ತು ವಿಳಾಸ ತಿಳಿಯಲಾಗಿ 1. ಅಕ್ಕಲರೆಡ್ಡಿ ಬಿನ್ ನಾರಾಯಣಸ್ವಾಮಿ, 30 ವರ್ಷ, ವಕ್ಕಲಿಗರು, ಜಿರಾಯ್ತಿ, ಬುಡುಗವಾರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. 2) ಕೃಷ್ಣಪ್ಪ ಬಿನ್ ಸಂಪಗಪ್ಪ, 45 ವರ್ಷ, ಕೊರಚರು, ಜಿರಾಯ್ತಿ, ಬುಡುಗವಾರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. ಎಂದು ತಿಳಿಸಿದ್ದು ಓಡಿ ಹೋದ ಆಸಾಮಿಗಳ ಬಗ್ಗೆ ಕೇಳಲಾಗಿ 3) ರಾಜಾರೆಡ್ಡಿ ಬಿನ್ ಗೆರಿಗಪ್ಪ, 25 ವರ್ಷ, ವಕ್ಕಲಿಗರು, ಜಿರಾಯ್ತಿ, ಬುಡುಗವಾರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು.  4) ರಾಜೇಶ ಬಿನ್ ವೆಂಕಟರೋಣಪ್ಪ,22 ವರ್ಷ, ಕೊರಚರು, ಭತ್ತಲಹಳ್ಳಿ ಗ್ರಾಮ, ಕುಂದಲಗುರ್ಕಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಮತ್ತು 5) ಗರಿಗೆಪ್ಪ ಬಿನ್ ರಾಮಪ್ಪ, 45 ವರ್ಷ, ವಕ್ಕಲಿಗರು, ಜಿರಾಯ್ತಿ, ಬುಡುಗವಾರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. ಎಂದು ತಿಳಿಸಿದ್ದು ನಂತರ ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಎರಡು ಜೀವಂತ ಕೋಳಿ ಹುಂಜಗಳು ಸಿಕ್ಕಿದ್ದು ಹಾಗೂ ವಶಕ್ಕೆ ಪಡೆದುಕೊಂಡ ಆಸಾಮಿಗಳ ಬಳಿ ಪರಿಶೀಲಿಸಲಾಗಿ ಜೂಜಾಟಕ್ಕೆ ತಂದಿದ್ದ ಒಟ್ಟು 1250-00 ರೂ ನಗದು ಹಣ ಇದ್ದು ಪಂಚರ ಸಮಕ್ಷಮ ಬೆಳಿಗ್ಗೆ 10.45 ಗಂಟೆಯಿಂದ 11.45 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತು ಪಡಿಸಿಕೊಂಡು, ಸ್ಥಳದಲ್ಲಿ ವಶಕ್ಕೆ ಪಡೆದುಕೊಂಡ ಇಬ್ಬರು ಆಸಾಮಿಗಳನ್ನು ಹಾಗೂ ಅಮಾನತು ಪಡಿಸಿಕೊಂಡ ಕೋಳಿಗಳನ್ನು ಹಾಗೂ ಹಣದೊಂದಿಗೆ ಠಾಣೆಗೆ ಹಾಜರಾಗಿ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿರುತ್ತೆ.

 

7. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.48/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ:25/04/2021 ರಂದು ರಾತ್ರಿ 11-30 ಗಂಟೆಗೆ ಪಿರ್ಯಾದಿ ನಾಗೇದ್ರ ಪ್ರಸಾದ್ ಸಿ,ಹೆಚ್.ಸಿ140  ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕಯಂತ್ರ ಮುದ್ರಿತ ದೂರಿನ ಸಾರಾಂಶವೆನೇಂದರೆ, ತಾನು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ದಿನ ದಿನಾಂಕ:25.04.2021 ರಂದು ಮಾನ್ಯ ಸಿಪಿಐ, ಶಿಡ್ಲಘಟ್ಟ ವೃತ್ತ ರವರು ನನಗೆ ಮತ್ತು ನಮ್ಮ ಠಾಣೆಯ ಸಿಬ್ಬಂದಿ ಸಿಪಿಸಿ-570 ಶ್ರೀ.ನರಸಿಂಹಪ್ಪರ ರವರಿಗೆ ಕೋವಿಡ್-19 ಪಾಸಿಟೀವ್ ಪ್ರಕರಣಗಳ ಕಾಂಟ್ಯಾಕ್ಟ್ ಟ್ರೇಸಿಂಗ್ ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ನನಗೆ ಹನುಮಂತಪುರ, ಗುಡಿಹಳ್ಳಿ, ವಲಸೇನಹಳ್ಳಿ ಮತ್ತು ಕುದುಪಕುಂಟೆ ಗ್ರಾಮಗಳಿಗೆ ಹಾಗೂ ಸಿಪಿಸಿ-570 ಶ್ರೀ.ನರಸಿಂಹಪ್ಪರ ರವರಿಗೆ ಕೆಂಪನಹಳ್ಳಿ, ಬೈರಗಾನಹಳ್ಳಿ, ಚಿಕ್ಕತೇಕಹಳ್ಳಿ ಮತ್ತು ದೊಡ್ಡತೇಕಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸದರಿ ಗ್ರಾಮಗಳಲ್ಲಿ ವರದಿಯಾಗಿರುವ ಕೋವಿಡ್-19 ಪಾಸಿಟೀವ್ ಪ್ರಕರಣಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ತಲಾ 20 ಜನರ ಮಾಹಿತಿಗಳನ್ನು ಸಾಮಾಜಿಕ ಅಂತರದೊಂದಿಗೆ ಸಂಗ್ರಹಿಸಿಕೊಂಡು ಬರಲು ಸೂಚಿಸಿ ನಮಗೆ ದಿನಾಂಕ:25.04.2021 ರಂದು ಸಂಖ್ಯೆ:ಸಿಪಿಐ/ಎಸ್.ಡಿ.ಎಲ್/ಮೆಮೋ/32/2021 ರಂತೆ ಜ್ಞಾಪನ ನೀಡಿದ್ದು, ಅದರಂತೆ ನಾವು ಸಂಜೆ 5:00 ಗಂಟೆಗೆ ಠಾಣೆಯನ್ನು ಬಿಟ್ಟು ನಾನು ನನ್ನ ದ್ವಿಚಕ್ರ ವಾಹನ ಕೆಎ.40.ಕ್ಯೂ.5375 ಹಿರೋಹೊಂಡಾ ಸ್ಪ್ಲೇಂಡರ್ ಪ್ಲಸ್ ಹಾಗೂ ಸಿಪಿಸಿ-570 ಶ್ರೀ.ನರಸಿಂಹಪ್ಪರ ರವರು ಅವರ ಬಾಬತ್ತು ದ್ವಿಚಕ್ರ ವಾಹನ ಕೆಎ.67.ಇ.4865 ಹೊಂಡಾ ಶೈನ್ ವಾಹನಗಳಲ್ಲಿ ಹೋಗಿದ್ದು, ನಾನು ಹನುಮಂತಪುರ ಮತ್ತು ಗುಡಿಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಕೋವಿಡ್-19 ಪಾಸಿಟೀವ್ ಪ್ರಕರಣಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪತರ ಲಿಸ್ಟ್ನ್ನು ತಯಾರಿಸಿಕೊಂಡು ದ್ಯಾವಪ್ಪನಗುಡಿ ಬಳಿ ಬಂದಾಗ ಸಿಪಿಸಿ-570 ಶ್ರೀ.ನರಸಿಂಹಪ್ಪರ ರವರು ಕೆಂಪನಹಳ್ಳಿ ಮತ್ತು ಬೈರಗಾನಹಳ್ಳಿ ಗ್ರಾಮಗಳಿಗೆ ಹೋಗಿ ಕೋವಿಡ್-19 ಪಾಸಿಟೀವ್ ಪ್ರಕರಣಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ  ಲಿಸ್ಟ್ ನ್ನು ತಯಾರಿಸಿಕೊಂಡು ಅವರೂ ಸಹ ದ್ಯಾವಪ್ಪನಗುಡಿ ಬಳಿಗೆ ಬಂದಿರುತ್ತಾರೆ. ನಂತರ ಇಬ್ಬರೂ ಸೇರಿ ನಮ್ಮ ದ್ವಿಚಕ್ರ ವಾಹನಗಳಲ್ಲಿ ಉಳಿದ ಗ್ರಾಮಗಳಿಗೆ ಭೇಟಿ ನೀಡಲು ಮುಂದೆ ಸಿಪಿಸಿ-570 ಶ್ರೀ.ನರಸಿಂಹಪ್ಪರ ರವರು ಅವರ ಹಿಂದೆ ನಾನು ಹೋಗುತ್ತಿದ್ದಾಗ ರಾತ್ರಿ ಸುಮಾರು 8:00 ಗಂಟೆ ಸಮಯದಲ್ಲಿ ದೊಡ್ಡತೇಕಹಳ್ಳಿ ಗ್ರಾಮದ ಗೇಟ್ ಬಳಿ ಹೋಗುತ್ತಿದ್ದಾಗ ದಿಬ್ಬೂರಹಳ್ಳಿ ಕಡೆಯಿಂದ ಶಿಡ್ಲಘಟ್ಟ ಕಡೆಗೆ ಬರುತ್ತಿದ್ದ ಯಾವುದೋ ಟಾಟಾ ಏಸ್ ವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ  ತನ್ನ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ಸಿಪಿಸಿ-570 ಶ್ರೀ.ನರಸಿಂಹಪ್ಪರ ರವರ ದಿಚಕ್ರ ವಾಹನಕ್ಕೆ ಡಿಕ್ಕಿಹೊಡೆಸಿದ ಪರಿಣಾಮ ಸಿಪಿಸಿ-570 ಶ್ರೀ.ನರಸಿಂಹಪ್ಪರ ರವರು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದುಹೋಗಿದ್ದು, ಹಿಂದೆ ಬರುತ್ತಿದ್ದ ನಾನು ತಕ್ಷಣ ನರಸಿಂಹಪ್ಪ ರವರನ್ನು ಉಪಚರಿಸಿದ್ದು, ನರಸಿಂಹಪ್ಪರವರಿಗೆ ತಲೆಯ ಹಿಂಭಾಗ, ತುಟಿ, ಕಣ್ಣಿನ ಬಳಿ, ಮೂಗಿನ ಬಳಿ ಹಾಗೂ ಬಲಕೈಗೆ ರಕ್ತಗಾಯಗಳಾಗಿರುತ್ತವೆ. ಸದರಿ ಟಾಟಾ ಏಸ್ ವಾಹನವನ್ನು ಪರಿಶೀಲಿಸಲಾಗಿ ವಾಹನ ಸಂಖ್ಯೆ: ಕೆಎ.53.ಸಿ.4388 ಆಗಿದ್ದು, ಟಾಟಾ ಏಸ್ ವಾಹನದ ಚಾಲಕ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ. ನಂತರ ನಾನು ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಠಾಣೆಯ ಬಳಿ ಇದ್ದ 108 ಆಂಬುಲೆನ್ಸ್ ವಾಹನವು ಅಪಘಾತವಾದ ಸ್ಥಳಕ್ಕೆ ಬಂದಿದ್ದು, ನಾನು ಸಿಪಿಸಿ-570 ಶ್ರೀ.ನರಸಿಂಹಪ್ಪರ ರವರನ್ನು ಶಿಡ್ಲಘಟ್ಟ ನಗರ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದು, ಅಷ್ಟರಲ್ಲಿ ನಮ್ಮ ಠಾಣೆಯ ಪಿ.ಎಸ್.ಐ ಮತ್ತು ಇತರೆ ಸಿಬ್ಬಂದಿರವರು ಆಸ್ಪತ್ರೆಗೆ ಬಂದಿದ್ದು, ಪ್ರಥಮ ಚಿಕಿತ್ಸೆ ಕೊಡಿಸಿರುತ್ತೇನೆ. ನಂತರ ಗಾಯಾಳುವನ್ನು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅದರಂತೆ ಪಿ.ಎಸ್.ಐ ಮತ್ತು ಇತರೆ ಸಿಬ್ಬಂದಿರವರು ಸಿಪಿಸಿ-570 ಶ್ರೀ.ನರಸಿಂಹಪ್ಪರ ರವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ನಂತರ ನಾನು ತಡವಾಗಿ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ಬಂದು ಅತಿವೇಗ ಮತ್ತು ಅಜಾಗರೂಕತೆಯಿಂದ  ಕೆಎ.53.ಸಿ.4388 ಟಾಟಾ ಏಸ್ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ಅಪಘಾತಪಡಿಸಿದ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು  ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂಖ್ಯೆ:48/2021 ಕಲಂ:279,337 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.96/2021 ಕಲಂ. (1),5(4) THE KARNATAKA EPIDEMIC DISEASES ACT, 2020 & 87 ಕೆ.ಪಿ ಆಕ್ಟ್:-

     ದಿನಾಂಕ 25/04/2021  ರಂದು 15-15 ಗಂಟೆಗೆ  ಮಾನ್ಯ ಡಿ.ವೈ.ಎಸ್.ಪಿ   ಶ್ರೀ.  ಕೆ. ರವಿಶಂಕರ್ , ಚಿಕ್ಕಬಳ್ಲಾಪುರ  ಉಪವಿಭಾಗ , ಚಿಕ್ಕಬಳ್ಳಾಪುರ  ರವರು  ಠಾಣೆಗೆ ಹಾಜರಾಗಿ  ಮಾಲು, ಆರೋಪಿಗಳು, ಪಂಚನಾಮೆಯೊಂದಿಗೆ  ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ   ಪಿರ್ಯಾದಿದಾರರು ಮತ್ತು ಅವರ ಕಚೇರಿ ಸಿಬ್ಬಂದಿಯಾದ  ಹೆಚ್.ಸಿ-205 ರಮೆಶ್, ಪಿ.ಸಿ-286 ಗೌತಮ್ ಹಾಗೂ ಜೀಪ್ ಚಾಲಕ  ಎ.ಪಿ.ಸಿ-119 ಅಶೋಕ್ ರವರೊಂದಿಗೆ ಸರ್ಕಾರಿ ಜೀಪ್ ಕೆ.ಎ-40-ಜಿ-0855 ರಲ್ಲಿ ಕರೋನಾ ಪ್ರಯುಕ್ತ ಲಾಕ್ ಡೌನ್ ನಿಯಮ ಸರ್ಕಾರ ಜಾರಿ ಮಾಡಿದ್ದು ಈ ಬಗ್ಗೆ ಉಪವಿಭಾಗದ ಗೌರಿಬಿದನೂರು ತಾಲ್ಲೂಕಿನ  ಕಡೆ ಗಸ್ತಿನಲ್ಲಿದ್ದಾಗ  ಮದ್ಯಾಹ್ನ ಸುಮಾರು 01 ಗಂಟೆ  ಸಮಯದಲ್ಲಿ  ಮುದಗಾನಕುಂಟೆ  ಬಳಿ ಬಂದಾಗ ಬಾತ್ಮಿದಾರರಿಂದ ಬಂದ ಮಾಹಿತಿಯಂತೆ ಅಲ್ಲಿಯೇ ಕ್ರಾಸ್ ನಲ್ಲಿದ್ದ ಪಂಚಾಯ್ತಿದಾರರನ್ನು  ಬರಮಾಡಿಕೊಂಡು ಅವರಿಗೆ  ಮಾಹಿತಿ ತಿಳಿಸಿ  ನಂತರ  ಸಿಬ್ಬಂದಿ ಮತ್ತು ಪಂಚರೊಂದಿಗೆ  ಕೆಂಗೇನಹಳ್ಳಿ ಗ್ರಾಮಕ್ಕೆ ಹೊಗಿ  ಅಲ್ಲಿ ಹೊರ ವಲಯದಲ್ಲಿ ಜೀಪ್ ಅನ್ನು ಮರೆಯಲ್ಲಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿ ಬಂದ  ಬಾತ್ಮಿಯಂತೆ  ಸರ್ಕಾರಿ ಕಿರಿಯ ಪ್ರಾಥಮಿಕ  ಶಾಲೆ ಆವರಣದಲ್ಲಿ  ಒಂದು ಹುಣಸೇಮರದ ಕೆಳಗೆ ಸರ್ಕಾರವು ಕರೋನಾ ಸೊಂಕು ಹರಡುವುದನ್ನು ನಿಯಂತ್ರಿಸಲು ಜಾರಿ ಮಾಡಿದ್ದರೂ ಸದರಿ ನಿಯಮ  ಉಲ್ಲಂಘನೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾಸ್ಕ ಧರಿಸದೇ ಸೊಂಕು ಹರಡುವುದಕ್ಕೆ ಅವಕಾಶ ಮಾಡಿಕೊಟ್ಟು ಎಲ್ಲಾರೂ ವತ್ತಾಕಾರದಲ್ಲಿ ಮರದ ಕೆಳಗೆ ಗುಂಪಾಗಿ   ಕುಳಿತುಕೊಂಡು ಹಣವನ್ನು ಪಣಕ್ಕೆ ಹಾಕಿ ಅಂದರ್ ಬಾಹರ್ ಇಸ್ಪೀಟು ಜೂಜಾಟ  ಆಡುತ್ತಿದ್ದವರ  ಮೇಲೆ  ದಾಳಿ ಮಾಡಿ ಸ್ಥಳದಲ್ಲಿ 04 ಜನ   ಆಸಾಮಿಗಳು  ಸಿಕ್ಕಿದ್ದು 02 ಅಸಾಮಿಗಳು  ಓಡಿ ಹೋಗಿದ್ದು  ಸ್ದಳದಲ್ಲಿ ಸಿಕ್ಕ 04 ಜನ  ಆಸಾಮಿಗಳು, ಪಣಕ್ಕೆ ಇಟ್ಟಿದ್ದ 10420 ರೂ ನಗದು ಹಣ,  ಒಂದು ನ್ಯೂಸ್ ಪೇಪರ್ , 52 ಎಲೆ ಇಸ್ಪೀಟು ಎಲೆಗಳನ್ನು, ಮೂರು ವಿವಿಧ ಕಂಪನಿಯ ಮೊಬೈಲ್ ಗಳನ್ನು  ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದು, ಪಂಚನಾಮೆ ಕ್ರಮ ಜರುಗಿಸಿ, ಆರೋಪಿತರು ಕರೋನಾ ಸೊಂಕು ಹರಡುವುದಕ್ಕೆ ಅವಕಾಶ ಮಾಡಿಕೊಟ್ಟು  ಸರ್ಕಾರದ ನಿಯಮ  ಉಲ್ಲಂಘನೆ  ಮಾಡಿ ಅಂದರ್ ಬಾಹರ್ ಇಸ್ಪೀಟು ಜೂಜಾಟ  ಆಡುತ್ತಿದ್ದವರನ್ನು , ಮಾಲು ಮತ್ತು ಪಂಚನಾಮೆ  ಸಮೇತ ದೂರು ನೀಡಿದ್ದು ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

9. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.79/2021 ಕಲಂ. 143,147,148,323,324,341,149 ಐ.ಪಿ.ಸಿ:-

     ದಿನಾಂಕ:26.04.2021 ರಂದು ಪಿರ್ಯಾದಿದಾರರಾದ ಬಾಲಪ್ಪ ಬಿನ್ ಲೇಟ್ ಚಿಕ್ಕನರಸಿಂಹಪ್ಪ, 45  ವರ್ಷ,  ಆದಿ ಕರ್ನಾಟಕ, ಮಿಣಕನಗುರ್ಕಿ ಗ್ರಾಮ, ಮಂಚೇನಹಳ್ಳಿ ಹೋಬಳಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:25.04.2021 ರಂದು ರಾತ್ರಿ 7.30 ಗಂಟೆಯಲ್ಲಿ ನಮ್ಮ ಗ್ರಾಮದ ಮದ್ಯ ಭಾಗದಲ್ಲಿರುವ  ಆದಿ ಕರ್ನಾಟಕ ಜನಾಂಗದ ಚಿಕ್ಕನರಸಿಂಹಪ್ಪನ ಮಗ 58 ವರ್ಷದ ನರಸಿಂಹಪ್ಪ ಮತ್ತು ಈತನ ಹೆಂಡ್ತಿ ಜಯಲಕ್ಷ್ಮಮ್ಮ  ಇಬ್ಬರು ಸಂಸಾರದ ಬಗ್ಗೆ ಜಗಳ ಮಾಡಿಕೊಳ್ಳುತ್ತಿದ್ದರು. ಆದರೆ ಇವರ ಪಕ್ಕದ ಮನೆಯಲ್ಲಿರುವ ಲೇಟ್ ಚಿಕ್ಕ ಕದಿರಪ್ಪನ ಮಗ 43 ವರ್ಷದ ಬಾಲಪ್ಪ ಈತನ ತಮ್ಮ 38 ವರ್ಷದ ಕದಿರಪ್ಪ, ಕದಿರಪ್ಪನ ಮಗ 35 ವರ್ಷದ ಬಾಲಕೃಷ್ಣ ಇವನ ಬಾವಮೈದನಾದ ವಡ್ಡರ ಪಾಳ್ಯದ ವಾಸಿಯಾದ ಮುನಿನಂಜಪ್ಪನ ಮಗ 28 ವರ್ಷದ ಶಶಿ ಮತ್ತು ಬಾಲಪ್ಪನ ಮಗ 19 ವರ್ಷದ ಶಶಿಧರ, ಕದಿರಪ್ಪನ ಹೆಂಡ್ತಿ 30 ವರ್ಷದ (ಸರಸಮ್ಮ) ಸರಸ್ವತಮ್ಮ ವರು ನನ್ನ ತಮ್ಮ 38 ವರ್ಷದ ನಾರಾಯಣಸ್ವಾಮಿ ಎಂಬುವನು ಚೀಟಿ ಹಣವನ್ನು ಕಟ್ಟಲು  ಹೋಗುತ್ತಿದ್ದರೆ ಅವನನ್ನು ಹಿಂಬಾಲಿಸಿಕೊಂಡು ಕದಿರಪ್ಪ, ಬಾಲಕೃಷ್ಣ, ಶಶಿ ಇವರು 3 ಜನರು ಅವನನ್ನು ಪಕ್ಕಕ್ಕೆ ದಬ್ಬಿ ಕೈಗಳಿಂದ ಹೊಡೆದು ರಿಪೀಸ್ ನಿಂದ ಬೆನ್ನಿಗೆ ಹೊಡೆದರಂತೆ ನಂತರ ಕದಿರಪ್ಪ, ಬಾಲಪ್ಪ ಇಬ್ಬರು ನಮ್ಮಅಣ್ಣನಾದ ನರಸಿಂಹಪ್ಪನಿಗೆ ಮಚ್ಚಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಮತ್ತು ಶಶಿ ಎಂಬುವನು ಕಬ್ಬಿಣದ ರಾಡ್ ನಿಂದ ನನ್ನ ತಲೆಗೆ ಹೊಡೆದು ರಸ್ತೆ ಗಾಯಪಡಿಸಿರುತ್ತಾನೆ. ಇವರು ಪ್ರತಿದಿನ ನಮ್ಮ ಮೇಲೆ ಗಲಾಟೆಗೆ ಬರುತ್ತಾರೆ. ದಿನಾಂಕ:25.04.2021 ರ ರಾತ್ರಿಯಲ್ಲಿ ಉದ್ದೇಶ ಪೂರ್ವಕವಾಗಿ ಗಲಾಟೆ ಮಾಡಿ ಹಲ್ಲೆ ಮಾಡಿರುತ್ತಾರೆ. ಆದ್ದರಿಂದ ತಾವಂದಿರು ಸದರಿ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

10. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.80/2021 ಕಲಂ. 143,147,323,324,448,506,149 ಐ.ಪಿ.ಸಿ:-

     ದಿನಾಂಕ:26.04.2021 ರಂದು ಪಿರ್ಯಾದಿದಾರರಾದ ಬಾಲಕೃಷ್ಣ ಬಿನ್ ಕದಿರಪ್ಪ, 35 ವರ್ಷ,  ಜಿರಾಯ್ತಿ, ಆದಿಕರ್ನಾಟಕ ಜನಾಂಗ, ಮಿಣಕನಗುರ್ಕಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:25.04.2021 ರ ಸಂಜೆ 06.30 ಗಂಟೆಯಲ್ಲಿ ನಮ್ಮ ಮನೆಯ ಪಕ್ಕದಲ್ಲಿರುವ ಪಾಪಲಪ್ಪ ಮತ್ತು ಬಾಲಪ್ಪ ರವರು ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡಿಕೊಳ್ಳುತ್ತಿದ್ದು ಆಗ ನಾನು ಅಲ್ಲಿಗೆ ಹೋಗಿ ಇಬ್ಬರಿಗೂ ಸಮಾಧಾನ ಪಡಿಸಿ ಕಳುಹಿಸಿದ್ದು ಇದೇ ದಿನ ರಾತ್ರಿ 11-20 ಗಂಟೆಯ ಸಮಯದಲ್ಲಿ ಬಾಲಪ್ಪ @ ಗೂಟಾಲು ಮತ್ತು ಈತನ ಸಂಬಂಧಿಕರಾದ ನಾರಾಯಣಸ್ವಾಮಿ ಬಿನ್ ಚಿಕ್ಕ ನರಸಿಂಹಪ್ಪ, ಸುಶೀಲ ಕೋಂ ರಂಗಪ್ಪ(ಕೋಡಗದಾಳ), ದರ್ಶನ್ ಬಿನ್ ರಂಗಪ್ಪ, ಪರಮೇಶ್ವರ್ (ಬ್ಯಾಲ್ಯ), ನವೀನ್ (ಚಿಕ್ಕ ಕುರುಗೋಡು) ಮತ್ತು ಇವನ ತಂದೆ ಗಂಗಾಧರಪ್ಪ, ಗಂಗರಾಜು (ಚಿಕ್ಕ ಕುರುಗೋಡು) ಕಡಬೂರು ವೆಂಕಟೇಶ್, ಹುಟ್ಕೂರು ಹರೀಶ್ ಮತ್ತು ರಾಮಾಂಜಿ ಇವರುಗಳು ಮನೆಯ ಬಳಿ ಬಂದು ನಾವು ಬಾಗಿಲು ಹಾಕಿ ನಿದ್ದೆ ಮಾಡುತ್ತಿದ್ದರೆ ಬಾಗಿಲು ಬಡಿದು ಬಾಗಿಲು ತೆಗೆಯಿಸಿ ಏಕಾಏಕಿ ಮನೆಯ ಒಳಗೆ ನುಗ್ಗಿ  ನಮ್ಮ ಮೇಲೆ ಮೆಣಸಿನ ಪುಡಿ ಚೆಲ್ಲಿ ನಿದ್ದೆಯಲ್ಲಿದ್ದ  16 ವರ್ಷದ ಗಗನ ಎಂಬುವವಳಿಗೆ ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದಿದ್ದು ಇದನ್ನು ನೋಡಿ ನಾವು ಮನೆಮಂದಿಯೆಲ್ಲ ಭಯ ಭೀತರಾಗಿ ಮನೆ ಬಿಟ್ಟು ಓಡಿ ಹೋಗಿದ್ದು ಇವರಿಂದ ನಮಗೆ ಪ್ರಾಣಭಯ ಇರುವುದರಿಂದ ಇವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

11. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.31/2021 ಕಲಂ. 188 ಐ.ಪಿ.ಸಿ & 5 THE EPIDEMIC DISEASES (AMENDMENT) ORDINANCE, 2020:-

     ದಿನಾಂಕ:26-04-2021 ರಂದು ಮಧ್ಯಾಹ್ನ 12-45 ಗಂಟೆಗೆ ಠಾಣೆಯ ಹೆಚ್.ಸಿ-183 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಕೋವಿಡ್-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತನಗೆ ಈ ದಿನ ದಿನಾಂಕ:26-04-2021 ರಂದು ಪಿ.ಎಸ್.ಐ ಸಾಹೇಬರು ಪಾತಪಾಳ್ಯ ಗ್ರಾಮದಲ್ಲಿ ಗಸ್ತು ನಿರ್ವಹಿಸಲು ಕರ್ತವ್ಯಕ್ಕೆ ನೇಮಕ ಮಾಡಿದ್ದು, ನೇಮಕದಂತೆ ತಾನು ಪಾತಪಾಳ್ಯ ಗ್ರಾಮದ ಗಸ್ತು ಕರ್ತವ್ಯದಲ್ಲಿ ಸಾರ್ವಜನಿಕರಿಗೆ ಮತ್ತು ಅಂಗಡಿ ಮಾಲೀಕರಿಗೆ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ಬಗ್ಗೆ ಅಧಿಸೂಚನೆಗಳ ಬಗ್ಗೆ ಪ್ರತಿಯೊಬ್ಬರಿಗೂ ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿಯನ್ನು ಮೂಡಿಸಿರುತ್ತೇನೆ. ಹೀಗಿರುವಾಗ ಈ ದಿನ ದಿನಾಂಕ:26-04-2021 ರಂದು ಮದ್ಯಾಹ್ನ 12-15 ಗಂಟೆಯಲ್ಲಿ ಪಾತಪಾಳ್ಯ ಗ್ರಾಮದ ಮುಖ್ಯರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಕಾಮಸಾನಿಪಲ್ಲಿಗೆ ಹೋಗುವ ಸರ್ಕಲ್ ಬಳಿ ಇರುವ ಚಿಲ್ಲರೆ ಅಂಗಡಿ ಮುಂಭಾಗ ಜನರು ಗುಂಪಾಗಿ ಸೇರಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಮಾತನಾಡಿಕೊಂಡು ಕುಳಿತಿದ್ದು, ತಾನು ಸದರಿ ಸ್ಥಳಕ್ಕೆ ಹೋಗುವಷ್ಟರಲ್ಲಿ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸದರಿ ಚಿಲ್ಲರೆ ಅಂಗಡಿ ಮಾಲೀಕ ಕೋವಿಡ್-19 ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತನದಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಜನರನ್ನು ಗುಂಪು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು, ಸದರಿ ಆಸಾಮಿಯ ಹೆಸರು & ವಿಳಾಸ ಕೇಳಲಾಗಿ ಮಹಮ್ಮದ್ ಬಿನ್ ಲೇಟ್ ಫಕೃದ್ದೀನ್, 65 ವರ್ಷ, ಮುಸ್ಲಿಂ ಜನಾಂಗ, ವ್ಯಾಪಾರ, ವಾಸ: ಪಾತಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಫೋನ್: 8022109786 ಎಂತ ತಿಳಿಸಿರುತ್ತಾರೆ. ಮೇಲ್ಕಂಡ ಆಸಾಮಿಯು ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣ ಸಂಬಂಧ ನೀಡಿರುವ ನಿಭಂದನೆಗಳನ್ನು ಉಲ್ಲಂಘಿಸಿರುವುದರಿಂದ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.122/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 25-04-2021 ರಂದು ಸಂಜೆ 6.30 ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 25-04-2021 ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಹನುಮಂತಪುರ, ತಾತಹಳ್ಳಿ, ವರದನಾಯಕನಹಳ್ಳಿ, ಚೀಮನಹಳ್ಳಿ, ಗುಡಿಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಅಬ್ಲೂಡು ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಸಂಜೆ 6-00  ಗಂಟೆಯಲ್ಲಿ ಅಬ್ಲೂಡು ಬೇಬಿಶ್ರೀ ಹೋಟೆಲ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಅಬ್ಲೂಡು ದಿಬ್ಬೂರಹಳ್ಳಿ ರಸ್ತೆಯ ಬೇಬಿಶ್ರೀ ಹೋಟೆಲ್ ಮುಂಭಾಗದ ಸಾರ್ವಜನಿಕ ಸ್ಥಳದ ಬಳಿಗೆ ಹೋಗಿ ನೋಡಲಾಗಿ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ತಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ಆತನನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಎ.ಆರ್. ನಂದಕುಮಾರ ಬಿನ್ ರಾಮಕೃಷ್ಣಪ್ಪ, 36 ವರ್ಷ, ಬಲಜಿಗರು, ಹೋಟೆಲ್ ಕೆಲಸ, ಅಬ್ಲೂಡು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್. ನ 10 Haywards Deluxe Whisky ಟೆಟ್ರಾ ಪ್ಯಾಕೆಟ್ ಗಳಿದ್ದು, ಸ್ಥಳದಲ್ಲಿ ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು, ಮೂರು ಖಾಲಿ Haywards Deluxe Whisky ಟೆಟ್ರಾ ಪ್ಯಾಕೇಟ್ ಗಳು ಮತ್ತು ಸ್ಥಳದಲ್ಲಿ ಬಿದ್ದಿದ್ದ ಖಾಲಿ ವಾಟರ್ ಪಾಕೇಟ್ ಗಳನ್ನು ವಶಕ್ಕೆ ಪಡೆದುಕೊಂಡು ಸಂಜೆ 6.30 ಗಂಟೆಯಲ್ಲಿ ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇನೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ನಂದಕುಮಾರ ಬಿನ್ ರಾಮಕೃಷ್ಣಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆ. ಇದ್ದ ಸಂಗತಿಯನ್ನು ನಿವೇದಿಸಿಕೊಳ್ಳುತ್ತೇನೆ.

Last Updated: 26-04-2021 05:33 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080