ಅಭಿಪ್ರಾಯ / ಸಲಹೆಗಳು

 

1. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.21/2021 ಕಲಂ. 419,420 ಐ.ಪಿ.ಸಿ & 66(D) INFORMATION TECHNOLOGY ACT 2008:-

          ದಿನಾಂಕ::26/3ಕ/2021 ರಂದು ಪಿರ್ಯಧಿ ಶ್ರೀ ಜ್ಞಾನ ರಾಜ್ ಬಿನ್ ನಾರಾಯಣಸ್ವಾಮಿ,23 ವರ್ಷ, ಪ ಜಾತಿ, ಖಾಸಗಿ ಕಂಪನಿಯಲ್ಲಿ ಕೆಲಸ ವಾಸ ಜಂಗಮಕೋಟೆ ಕ್ರಾಸ್, ಶಿಡ್ಲಘಟ್ಟ ತಾಲ್ಲೂಕು, ಮೊ ಸಂಖ್ಯೆ:9380513865 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಡಿಪ್ಲಮೋ ವ್ಯಾಸಂಗವನ್ನು ಮಾಡಿಕೊಂಡಿರುತ್ತೇನೆ. ನಾನು ದೇವನಹಳ್ಳಿ ಹೆಚ್ ಡಿ ಎಪ್ ಸಿ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ನಂ:50100271783881 ಖಾತೆಯನ್ನು ಹೊಂದಿರುತ್ತೇನೆ.ಇದಕ್ಕೆ  ನನ್ನ ಪೋನ್ ನಂಬರ್ ನಿಂದ ಪೋನ್ ಫೇ ವ್ಯಾಲೆಟ್ ಲಿಂಕ್ ಮಾಡಿಕೊಂಡು ಇದರಲ್ಲಿ ನನ್ನ ಹಣ ಕಾಸಿನ ವ್ಯವಹಾರವನ್ನು ಮಾಡುತ್ತಿರುತ್ತೇನೆ. ಈಗಿರುವಲ್ಲಿ ದಿನಾಂಕ:19/4/2020 ರಲ್ಲಿ ನನ್ನ ಮೊಬೈಲ್ ಗೆ ಒಂದು ಸಂದೇಶ ಬಂದಿದ್ದು, ಅದಲ್ಲಿ ಕೆನಡಾ ದೇಶದಲ್ಲಿ ಜಾಬ್ ಬಗ್ಗೆ ಮಾಹಿತಿ ಇತ್ತು.ನಾನು ಸದರಿ ಸಂದೇಶದಲ್ಲಿ ಇದ್ದ  ಇ ಮೇಲ್ ವಿಳಾಸ hr@emeritaresources.ca   ಮೇಲ್ ಐ ಡಿ ಗೆ ದಾಖಲೆಗಳು ಮತ್ತು ರೆಸೂಮ್ ಕಳುಹಿಸಲು ತಿಳಿಸಿದ್ದು, ಅದರಂತೆ ನಾನು ಕೆನಡಾ ದೇಶದಲ್ಲಿ ಕೆಲಸಕ್ಕೆ ಹೋಗಲು  ನಾನು ಇಷ್ಟ ಪಟ್ಟು, ನನ್ನ ರೆಸೂಂ ಮತ್ತು ದಾಖಲೆಗಳನ್ನು ಸದರಿ ಮೇಲ್ ಐಡಿ ಗೆ ಕಳುಹಿಸಿದೆ. ನಂತರ ನನಗೆ ದಿನಾಂಕ:28/4/2020 ರಂದು ನೀವು ಕೆನಡಾ ದೇಶದಲ್ಲಿ ಜಾಬ್ ಗೆ ಸೆಲೆಕ್ಟ್ ಆಗಿದ್ದೀರವೆಂತ ಸಂದೇಶ ಬಂದಿತು. ನಂತರ ಮೊ ಸಂಖ್ಯೆ:+1(647)5573873, 8794637129, ಈ ನಂಭರ್ ಗಳಿಂದ ನನಗೆ ಕರೆ ಮಾಡಿ  ನೀವು ವೀಸಾ ರಿಜಿಸ್ಟರ್  ಮಾಡಲು ನೀವು 15000/- ರೂಗಳನ್ನು ಕಳುಹಿಸಲು ತಿಳಿಸಿ ಎಸ್ ಬಿ ಐ ಬ್ಯಾಂಕ್  ಅಕೌಂಟ್ ನಂ: 34982727582  IFSC CODE:-SBIN0000163.  & ಎಸ್ ಬಿ ಐ ಬ್ಯಾಂಕ್  ಅಕೌಂಟ್ ನಂ: 38044802559 IFSC CODE:-SBIN0001792 ಖಾತೆಗಳ ಸಂಖ್ಯೆಗಳನ್ನು ಕಳುಹಿಸಿದರು. ನಾನು ನನ್ನ ಮೇಲ್ಕಂಡ HDFC  BANK A/C  NOUMBERನಿಂದ ದಿನಾಂಕ:01/05/2020  ರಂದು ನಾನು 15000/- ರೂಗಳನ್ನು ಕಳುಹಿಸಿದೆ. ನಂತರ ಪುನಃ  ದಿನಾಂಕ:4/5/2020 ರಂದು ವೀಸಾ ಚಾರ್ಜು 15000/- ರೂಗಳನ್ನು ಪುನಃ ಕಟ್ಟ ಬೇಕು ಅಂತ ತಿಳಿಸಿದರು. ನಾನು ಕೂಡಲೆ ಮೇಲ್ಕಂಡ ನನ್ನ ಖಾತೆಯಿಂದ ನನ್ನ ಪೋನ್ ಫೇ ಮೂಲಕ 15000/- ರೂ ಹಣವನ್ನು ವರ್ಗಾಯಿಸಿರುತ್ತೇನೆ.ನಂತರ ವರ್ಕ ಫರ್ಮಿಟ್ ಚಾರ್ಜಗೆ ಅಂತ 64,700/-, 40,000/- ರೂಗಳನ್ನು ಆನ್ ಲೈನ್ ಮೂಲಕ ನನ್ನ ಮೇಲ್ಕಂಡ ಖಾತೆಯಿಂದ ವರ್ಗಾಯಿಸಿರುತ್ತೇನೆ. ಈಗೆ ನನ್ನಿಂದ ಒಟ್ಟು 1,34,700/- ರೂಗಳನ್ನು ನನ್ನಿಂದ ಪಡೆದು ನನಗೆ ಕೆನಡಾ ದೇಶದಲ್ಲಿ  ಜಾಬ್ ಕೊಡದೆ ಮತ್ತು ನನ್ನ ಹಣವನ್ನು ನನಗೆ ವಾಪಸ್ಸು ಕೊಡದೆ ವಂಚಿಸಿರುವ ಮೇಲ್ಕಂಡ ವ್ಯಕ್ತಿಗಳನ್ನು ಪತ್ತೆ ಮಾಡಿ ನನ್ನ ಹಣವನ್ನು ನನಗೆ ವಾಪಸ್ಸು ಕೊಡಿಸಲು ಮತ್ತು ಸದರಿ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರು.

 

2. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.18/2021 ಕಲಂ. 279,337 ಐ.ಪಿ.ಸಿ :-

          ದಿನಾಂಕ: 25-03-2021 ರಂದು ಮಧ್ಯಾಹ್ನ 2-00 ಗಂಟೆಗೆ ಚಿಕ್ಕಬಳ್ಳಾಪುರ ನಗರದ ಸುರಕ್ಷಾ ಆಸ್ಪತ್ರೆಯಿಂದ ಬಂದ ಮೆಮೋ ಮೇರೆಗೆ ಸುರಕ್ಷಾ ಆಸ್ಪತ್ರೆಗೆ ಹೋಗಿ ಗಾಯಾಳು ಶ್ರೀಮತಿ.ಜಮುನಾರಾಣಿ ಕೊಂ ಎಂ.ವಿ ಕುಮಾರ್ , 61 ವರ್ಷ,  ಆರ್ಯವೈಶ್ಯ ಜನಾಂಗ, ಗೃಹಿಣಿ, ನಂ: 40/9, 1 ನೇ ಸಿ ಕ್ರಾಸ್, ಭುವನೇಶ್ವರಿ ನಗರ, ಬನಶಂಕರಿ 3 ನೇ ಹಂತ, ಬೆಂಗಳೂರು ರವರು ನೀಡಿದ ಹೇಳಿಕೆ ದೂರಿನ ಸಾರಾಂಶವೆನೆಂದರೆ, ತಾನು ಚಿಕ್ಕಬಳ್ಳಾಪುರ ಟೌನ್ ನ ವಾರ್ಡ್ ನಂ: 2 ರ ವಾಪಸಂದ್ರದಲ್ಲಿ ವಾಸವಾಗಿರುವ ತನ್ನ ಅಳಿಯನಾದ  ಅಭಿನಂದನ್ ರವರ ಮನೆಗೆ ಬಂದಿದ್ದು ದಿನಾಂಕ: 25-03-2021 ರಂದು ಬೆಳಗ್ಗೆ 8-55 ಗಂಟೆಗೆ ತಾನು ವಾಕಿಂಗ್ ಮಾಡಲು ಸಿಟಿಜನ್ ಕ್ಲಬ್ ಗೆ ಹೋಗಲು ಬಿ.ಜಿ.ಎಸ್ ಶಾಲೆಯ ಮುಂಭಾಗ ಹೋಗುತ್ತಿದ್ದಾಗ ಕೆ.ಎಸ್.ಆರ್.ಟಿ.ಸಿ ಡಿಪೋ ಕಡೆಯಿಂದ ಬಂದ KA-40-W-7974 ನೊಂದಣಿ ಸಂಖ್ಯೆಯ ಡಿಯೋ ವಾಹನದ ಸವಾರಳು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ನಡೆದುಕೊಂಡು ಹೋಗುತ್ತಿದ್ದ ತನಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ  ತಾನು ಠಾರ್ ರಸ್ತೆಯ ಮೇಲೆ ಬಿದ್ದು ತನ್ನ ಎಡಕಾಲಿನ ಪಾದದ ಮೇಲಿನ ಕೀಲು  ಮುರಿದಿದ್ದು  ಮತ್ತು ಎಡಕಾಲಿನ ಮೊಣಕಾಲಿಗೆ ರಕ್ತಗಾಯಗಳಾಗಿರುತ್ತದೆ. ಸ್ಥಳದಲ್ಲಿದ್ದ ಸ್ಥಳಿಯರು ತನ್ನನ್ನು ಉಪಚರಿಸಿ  ತನ್ನ ಅಳಿಯ  ಅಭಿನಂದನ್ ಬಿನ್ ವೆಂಕಟರತ್ನಂ ರವರಿಗೆ ಕರೆ ಮಾಡಿ  ತಿಳಿಸಿದ್ದು  ಸದರಿಯವರು ಬಂದು ತನ್ನನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ನಗರದ ಸುರಕ್ಷಾ ಆಸ್ಪತ್ರೆಗೆ  ದಾಖಲಿಸಿರುವುದಾಗಿ, ಈ ಅಪಘಾತಪಡಿಸಿದ ಸವಾರಳ ಹೆಸರನ್ನು ತಿಳಿಯಲಾಗಿ ಸೌಮ್ಯಶ್ರೀ ಬಿನ್ ಪೆರುಮಾಳ್, 25 ವರ್ಷ, ಉಪನ್ಯಾಸಕಿ ವೃತ್ತಿ, 4 ನೇ ವಾರ್ಡ್ , ಪ್ರಶಾಂತ ನಗರ ಎಂಬುದಾಗಿ ತಿಳಿದು ಬಂದಿದ್ದು, ಸದರಿ ಅಪಘಾತಕ್ಕೆ ಕಾರಣಳಾದ KA-40-W-7974 ನೊಂದಣಿ ಸಂಖ್ಯೆಯ ಡಿಯೋ ವಾಹನದ ಸವಾರಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಿಲು ಕೋರಿ ನೀಡಿದ ದೂರಿನ ಮೇರೆಗೆ ಮಧ್ಯಾಹ್ನ 3-00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಠಾಣಾ ಮೊ.ಸಂ:18/2021 ಕಲಂ: 279, 337 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.125/2021 ಕಲಂ. 379  ಐ.ಪಿ.ಸಿ :-

          ದಿನಾಂಕ:25/03/2021 ರಂದು ರಾತ್ರಿ 8.30 ಗಂಟೆಗೆ ಪಿರ್ಯಾದಿದಾರರಾದ ಸಬರಿ ಬಿನ್ ಪೆರಮಾಳ್, 21 ವರ್ಷ, ವನ್ನಿಯಾರ್ ಜನಾಂಗ, ಖಾಸಗಿ ಕಂಪನಿಯಲ್ಲಿ ಕೆಲಸ ವಾಸ: ಮನೆ ನಂ:1/72, ಪರದೇಶಿಪಟ್ಟಿ ಗ್ರಾಮ, ಕಕ್ಕಂಗೆರೆ ಪೋಸ್ಟ್, ತಿರುಪತ್ತ್ತೂರ್ ತಾಲ್ಲೂಕು ಮತ್ತು ಜಿಲ್ಲೆ. ತಮಿಳುನಾಡು ರಾಜ್ಯ, ಹಾಲಿ ವಾಸ: ಭತ್ತಲಪಲ್ಲಿ ಗ್ರಾಮ, ಹೊಸೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಈಗ್ಗೆ ಸುಮಾರು ಒಂದೂವರೆ ವರ್ಷದಿಂದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ಹೈಕ್ಯೂ ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಪ್ರೊಡಕ್ಷನ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ಈಗ್ಗೆ ಸುಮಾರು 6 ತಿಂಗಳ ಹಿಂದೆ ಬಜಾಜ್ ಪಲ್ಸರ್ ಎನ್ಎಸ್ 200 ಕಂಪನಿಯ ಒಂದು ದ್ವಿಚಕ್ರ ವಾಹನವನ್ನು ಕೊಂಡುಕೊಂಡಿದ್ದು, ಸದರಿ  ವಾಹನದ ನೊಂದಣಿ ಸಂಖ್ಯೆ TN-83 M-4242 ಆಗಿದ್ದು, ಇದರ ಇಂಜಿನ್ ಸಂಖ್ಯೆ: JLXCLE09946, ಚಾರ್ಸಿಸ್ ಸಂಖ್ಯೆ: MD2A36FX1LCE31451 ಆಗಿರುತ್ತೆ. ಚಿಂತಾಮಣಿ ತಾಲ್ಲೂಕು, ಕೈವಾರ ಗ್ರಾಮದಲ್ಲಿ ಶ್ರೀ ಅಮರನಾರಾಯಣಸ್ವಾಮಿ ದೇವಸ್ಥಾನವು ಪ್ರಸಿದ್ದಿಯಾಗಿದ್ದು ಸದರಿ ದೇವಸ್ಥಾನಕ್ಕೆ ಬರಲು ದಿನಾಂಕ:17/03/2021 ರಂದು ತಾನು ಮತ್ತು ತನ್ನ ಸ್ನೇಹಿತನಾದ ತಮ್ಮ ಗ್ರಾಮದ ಸತೀಶ್ ಬಿನ್ ಉದಯ್ ಕುಮಾರ್ ರವರು ಮೇಲ್ಕಂಡ ತನ್ನ ಬಾಬತ್ತು ದ್ವಿಚಕ್ರ ವಾಹನದಲ್ಲಿ ಸಂಜೆ 5.00 ಗಂಟೆಗೆ ಕೈವಾರದ ಶ್ರೀ ಅಮರನಾರಾಯಣಸ್ವಾಮಿ ದೇವಸ್ಥಾನದ ಬಳಿ ಬಂದು ದ್ವಿಚಕ್ರ ವಾಹನವನ್ನು ದೇವಸ್ಥಾನದ ಪಕ್ಕದಲ್ಲಿ ನಿಲ್ಲಿಸಿ ತಾವಿಬ್ಬರು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಸಂಜೆ 6.00 ಗಂಟೆಗೆ ಹೊರಗೆ ಬಂದು ನೋಡಲಾಗಿ ತಾನು ನಿಲ್ಲಿಸಿದ್ದ ಸ್ಥಳದಲ್ಲಿ ದ್ವಿಚಕ್ರ ವಾಹನ ಇಲ್ಲದೆ ಕಳುವಾಗಿರುತ್ತೆ. ನಂತರ ತಾನು ಸುತ್ತ-ಮುತ್ತ ಹುಡುಕಾಡಲಾಗಿ ತನ್ನ ಬಾಬತ್ತು ದ್ವಿಚಕ್ರ ವಾಹನ ಸಿಕ್ಕಿರುವುದಿಲ್ಲ. ತನಗೆ ಇಲ್ಲಿ ಯಾರು ಪರಿಚಯಸ್ಥರು ಇಲ್ಲದೆ ಇದ್ದುದ್ದರಿಂದ ಎಲ್ಲಿ ದೂರು ನೀಡಬೇಕೆಂದು ತಿಳಿಯದೆ ವಾಪಸ್ಸು ಹೊಸೂರಿಗೆ ಹೋಗಿರುತ್ತೇನೆ. ಕಳುವಾಗಿರುವ ದ್ವಿಚಕ್ರವಾಹನದ ಬೆಲೆ ಸುಮಾರು 1,30,000/- (ಒಂದು ಲಕ್ಷ ಮೂವತ್ತು ಸಾವಿರ) ರೂಗಳಾಗಿರುತ್ತೆ. ಕಳುವಾಗಿರುವ ತನ್ನ ದ್ವಿಚಕ್ರ ವಾಹನದ ಬಗ್ಗೆ ಸಂಬಂದಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ತನಗೆ ಪರಿಚಯವಿರುವವರು ತಿಳಿಸಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಳುವಾಗಿರುವ ತನ್ನ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ತನಗೆ ಕನ್ನಡ ಬಾರದೆ ಇದ್ದು ತಾನು ತಮಿಳಿನಲ್ಲಿ ಹೇಳಿದ್ದನ್ನು ಬೇರೆಯವರು ಕನ್ನಡ ಭಾಷೆಯಲ್ಲಿ ಟೈಪ್ ಮಾಡಿಕೊಟ್ಟ ದೂರನ್ನು ತಾನು ಠಾಣೆಯಲ್ಲಿ ಹಾಜರು ಪಡಿಸಿರುತ್ತೇನೆಂದು ಇದ್ದ ದೂರನ್ನು ಪಡೆದು ಠಾಣಾ ಮೊ.ಸಂ:125/2021 ಕಲಂ 379 ಐ.ಪಿ.ಸಿ ರೀತ್ಯ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.126/2021 ಕಲಂ. 279,337  ಐ.ಪಿ.ಸಿ :-

          ದಿನಾಂಕ: 26/03/2021 ರಂದು ಬೆಳಿಗ್ಗೆ 09.30 ಗಂಟೆಗೆ ಕೆ.ವಿ.ಶ್ರೀನಾಥರೆಡ್ಡಿ ಬಿನ್ ಲೇಟ್ ವೆಂಕಟರಾಯಪ್ಪ, 43 ವರ್ಷ, ವಕ್ಕಲಿಗರು, ವ್ಯಾಪಾರ, ಮಾಳಪಲ್ಲಿ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 20/03/2021 ರಂದು ತಾನು ತನ್ನ ಸ್ವಂತ ಕೆಲಸದ ನೀಮಿತ್ತ ತನ್ನ ಬಾಬತ್ತು ನಂಬರ್ KA-67 E-8145 ಯಮಹಾ ಕಂಪನಿಯ ಸ್ಕೂಟಿ ದ್ವಿಚಕ್ರ ವಾಹನದಲ್ಲಿ ಕುರುಟಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಕೆಲಸವನ್ನು ಮುಗಿಸಿಕೊಂಡು ಮುನಗನಹಳ್ಳಿ ಗ್ರಾಮಕ್ಕೆ ಹೋಗಲು ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ಸಂಜೆ ಸುಮಾರು 6.00 ಗಂಟೆ ಸಮಯದಲ್ಲಿ ಮದನಪಲ್ಲಿ-ಬೆಂಗಳೂರು ರಸ್ತೆಯ ಮುನಗನಹಳ್ಳಿ ಕ್ರಾಸ್ ಆರ್ಚ್ ಬಳಿ ಹೋಗುತ್ತಿದ್ದಾಗ ಹಿಂಬದಿಯಿಂದ ಅಂದರೆ ಮದನಪಲ್ಲಿ ಕಡೆಯಿಂದ ಬಂದ ನಂಬರ್ AP-39 BA-8462 ಟಯೋಟಾ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆಸಿದ ಪರಿಣಾಮ ತಾನು ದ್ವಿಚಕ್ರ ವಾಹನ ಸಮೇತ ರಸ್ತೆಯಲ್ಲಿ ಬಿದ್ದು ಹೋಗಿದ್ದು, ಇದರರಿಂದ ತನ್ನ ಎಡಕಾಲಿನ ಮೊಣಕಾಲಿಗೆ ಊತದ ಗಾಯ, ತಲೆಯ ಮುಂಭಾಗದಲ್ಲಿ ರಕ್ತಗಾಯ ಹಾಗೂ ಬಲಕಾಲಿನ ಪಾದದ ಸ್ವಲ್ಪ ಮೇಲ್ಬಾಗದಲ್ಲಿ ರಕ್ತಗಾಯಗಳಾಗಿರುತ್ತೆ ಹಾಗೂ ದ್ವಿಚಕ್ರ ವಾಹನ ಜಖಂ ಗೊಂಡಿರುತ್ತೆ. ಅಷ್ಟರಲ್ಲಿ ಕಲ್ಲಹಳ್ಳಿ ರಾಜೇಶ್ ಹಾಗೂ ಇತರರು ತನ್ನನ್ನು ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿ ತನ್ನನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ತನ್ನನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ನಂತರ ತಾನು ಸದರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಮಾರನೇ ದಿನ ದಿನಾಂಕ: 21/03/2021 ರಂದು ಪುನಃ ಚಿಂತಾಮಣಿ ನಗರದ ರಾಧಕೃಷ್ಣ ಆಸ್ಪತ್ರೆಯಲ್ಲಿ ಎಡಕಾಲಿಗೆ ಆಪರೇಷನ್ ಮಾಡಿಕೊಂಡು ಚೇತರಿಸಿಕೊಳ್ಳುತ್ತಿರುತ್ತೇನೆ. ತನಗೆ ಓಡಾಡಲು ಸಾದ್ಯವಾಗದ ಕಾರಣ ಹಾಗೂ ಆಸ್ಪತ್ರೆಯಲ್ಲಿ ಇದುವರೆಗೂ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರಿಂದ ದೂರನ್ನು ನೀಡಲು ಸಾದ್ಯವಾಗದೇ ಈ ದಿನ ತಡವಾಗಿ ದೂರನ್ನು ನೀಡುತ್ತಿರುತ್ತೇನೆ. ತನಗೆ ಅಪಘಾತವನ್ನುಂಟು ಮಾಡಿದ ಕಾರನ್ನು ಹಾಗೂ ತನ್ನ ದ್ವಿಚಕ್ರ ವಾಹನವನ್ನು ಅಲ್ಲಿದ್ದ ಸಾರ್ವಜನಿಕರು ಪೊಲೀಸ್ ಠಾಣೆಯ ಬಳಿಗೆ ತೆಗೆದುಕೊಂಡು ಹೋಗಿರುತ್ತಾರೆಂದು ತಿಳಿಯಿತು. ಆದ್ದರಿಂದ ಮೇಲ್ಕಂಡಂತೆ ತನಗೆ ಅಪಘಾತವನ್ನುಂಟು ಮಾಡಿದ ನಂಬರ್ AP-39 BA-8462 ಟಯೋಟಾ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.127/2021 ಕಲಂ. 379   ಐ.ಪಿ.ಸಿ :-

          ದಿನಾಂಕ: 23/03/2021 ರಂದು ಬೆಳಿಗ್ಗೆ 10.00 ಗಂಟೆಗೆ ಹರೀಶ್ ಕುಮಾರ್ ಬಿನ್ ಶಿವಪ್ಪ @ ಶಿವರಾಮಯ್ಯ, 27 ವರ್ಷ, ವನ್ನಿಯಾರ್ ಗೌಂಡರ್ ಜನಾಂಗ, ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ: ಮನೆ ನಂ: 1/338 ತೊರಪಲ್ಲಿ ಅಗ್ರಹಾರಂ ಗ್ರಾಮ ಮತ್ತು ಪೋಸ್ಟ್, ಹೊಸೂರು ತಾಲ್ಲೂಕು, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು ರಾಜ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ ಸುಮಾರು ಒಂದೂವರೆ ವರ್ಷದಿಂದ ಕೋರೋನಾ ಪ್ರಯುಕ್ತ ಮನೆಯಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ.  2017 ನೇ ಸಾಲಿನಲ್ಲಿ ರಾಯಲ್ ಎನ್ ಪೀಲ್ಡ್ ಕ್ಲಾಸಿಕ್ 350 ದ್ವಿ-ಚಕ್ರ ವಾಹನವನ್ನು ಖರೀದಿಸಿದ್ದು, ಸದರಿ ವಾಹನದ ನೊಂದಣಿ ಸಂಖ್ಯೆ TN-70-V-1759 ಆಗಿದ್ದು, ಇದರ ಚಾರ್ಸೀಸ್ ಸಂಖ್ಯೆ: ME3U3S5C1 HC829808, ಇಂಜಿನ್ ಸಂಖ್ಯೆ: U3S5C1HC495573 ಆಗಿರುತ್ತೆ. ದಿನಾಂಕ: 18/03/2021 ರಂದು ತಾನು  ಸ್ವಂತ ಕೆಲಸದ ನಿಮಿತ್ತ ತನ್ನ ಬಾಬತ್ತು ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿಗೆ ಬಂದು ಚಿಂತಾಮಣಿ ಯಲ್ಲಿ ಕೆಲಸ ಮುಗಿಸಿಕೊಂಡು ಹೊಸೂರಿಗೆ ವಾಪಸ್ಸು ಹೋಗಲು ಅದೇ ದಿನ ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ಚಿಂತಾಮಣಿ-ಬೆಂಗಳೂರು ರಸ್ತೆಯ ಕೊಂಗನಹಳ್ಳಿ-ಕೈವಾರಕ್ರಾಸ್ ಮಾರ್ಗ ಮದ್ಯೆ ಇರುವ ಒಂದು ಹೋಟೆಲ್ ಬಳಿ ದ್ವಿ-ಚಕ್ರ ವಾಹನವನ್ನು ನಿಲ್ಲಿಸಿ ಲಾಕ್ ಮಾಡಿಕೊಂಡು ಹೋಟೆಲ್ ನಲ್ಲಿ ಊಟ ಮಾಡಿ ಕೊಂಡು ಮದ್ಯಾಹ್ನ 2.30 ಗಂಟೆಗೆ ಹೊರಗೆ ಬಂದು ನೋಡಲಾಗಿ ತಾನು ನಿಲ್ಲಿಸಿದ್ದ ಸ್ಥಳದಲ್ಲಿ ದ್ವಿಚಕ್ರ ವಾಹನ ಇಲ್ಲದೆ ಕಳುವಾಗಿರುತ್ತೆ. ನಂತರ ತಾನು ಸುತ್ತ-ಮುತ್ತ ಹುಡುಕಾಡಲಾಗಿ ತನ್ನ ದ್ವಿಚಕ್ರ ವಾಹನ ಕಾಣಿಸಲಿಲ್ಲ. ಸ್ಥಳೀಯವಾಗಿ ತನಗೆ ಯಾರೂ ಪರಿಚಯವಿಲ್ಲದ ಕಾರಣ ಎಲ್ಲಿ ದೂರು ನೀಡಬೇಕೆಂದು ತಿಳಿಯದೆ ದೂರನ್ನು ನೀಡಿರುವುದಿಲ್ಲ. ಕಳುವಾಗಿರುವ ದ್ವಿ-ಚಕ್ರವಾಹನದ ಬೆಲೆ ಸುಮಾರು 1,10,000/- (ಒಂದು ಲಕ್ಷ ಹತ್ತು ಸಾವಿರ) ರೂಗಳಾಗಿರುತ್ತೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಕಳುವಾಗಿದ್ದ ತನ್ನ ದ್ವಿ-ಚಕ್ರ ವಾಹನವನ್ನು ಪತ್ತೆಮಾಡಿರುವುದಾಗಿ ತಿಳಿದು, ಠಾಣೆಯ ಬಳಿ ಬಂದು ನೋಡಲಾಗಿ ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದ ತನ್ನ ಬಾಬತ್ತು ದ್ವಿ-ಚಕ್ರ ವಾಹನವನ್ನು ನೋಡಿ ಗುರುತಿಸಿರುತ್ತೇನೆ. ತನ್ನ ದ್ವಿ-ಚಕ್ರ ವಾಹನವನ್ನು ಕಳುವು ಮಾಡಿದವರ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ 1) ರಾಜೇಶ್ ಬಿನ್ ಮಾದೇಶ್, 24 ವರ್ಷ, ವಕ್ಕಲಿಗರು, ನಾಯನಹಳ್ಳಿ, ಆನೇಕಲ್ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, 2) ಪ್ರಕಾಶ್ @ ಪ್ರತಾಪ್ ಬಿನ್ ರಾಜಪ್ಪ, 20 ವರ್ಷ, ಬೋವಿ ಜನಾಂಗ ಸ್ವಂತ ಗ್ರಾಮ ಅಂಚಹಟ್ಟಿ ಗ್ರಾಮ, ಕೃಷ್ಣಗಿರಿ ಜಿಲ್ಲೆ, ಹಾಲಿ ವಾಸ ಮಾದರಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಯಿತು. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸ ಬೇಕೆಂದು ಕೋರುತ್ತೇನೆ. ತನಗೆ ಕನ್ನಡ ಬಾರದೆ ಇದ್ದು ತಾನು ತಮಿಳಿನಲ್ಲಿ ಹೇಳಿದ್ದನ್ನು ಬೇರೆಯವರು ಕನ್ನಡ ಭಾಷೆಗೆ ತರ್ಜುಮೆ ಮಾಡಿ ಟೈಪ್ ಮಾಡಿಕೊಟ್ಟ ದೂರನ್ನು ಠಾಣೆಯಲ್ಲಿ ತಂದು ಹಾಜರುಪಡಿಸಿರುವುದಾಗಿರುತ್ತೆ.

 

6. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.44/2021 ಕಲಂ. 279,304(A)   ಐ.ಪಿ.ಸಿ :-

          ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಈಗ್ಗೆ 26 ವರ್ಷಗಳಿಂದ ಚಿಂತಾಮಣಿ ಡಿಪೋದಲ್ಲಿ ಕೆಎಸ್ಆರ್ಟಿ ಸಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ.  ನನ್ನ ತಮ್ಮನಾದ ಮಹಮದ್ ಆಲಿ ರವರು ಲಾರಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದು ನನ್ನ ತಮ್ಮ ಮಹಮದ್ ಆಲಿ ರವರಿಗೆ 3 ಜನ ಮಕ್ಕಳಿದ್ದು, 1 ನೇ ಸಮೀರ್ ಪಾಷ 2 ನೇ ಸಾಕಿಬ್ 3 ನೇ ಗೌಸಿಯಾ ರವರಾಗಿದ್ದು 1 ನೇ ಸಮೀರ್ ಪಾಷ ರವರು ಚಿಂತಾಮಣಿಯ ನಗರದಲ್ಲಿರುವ ನ್ಯೂ ಹಾರಿಜನ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದು, ಸಮೀರ್ ಪಾಷ ರವರು ಈಗ್ಗೆ 3 ವರ್ಷಗಳಿಂದ ಕೆ ಜಿ ಎನ್ ಬಡಾವಣೆಯಲ್ಲಿ ಕರಾಟೆ ಕಲಿಯಲು ಹೋಗುತ್ತಿರುತ್ತಾನೆ. ಈಗಿರುವಲ್ಲಿ ಈ ದಿನ ದಿನಾಂಕ;26/03/2021 ರಂದು ಬೆಳಗ್ಗೆ 5.45 ಗಂಟೆ ಸಮಯದಲ್ಲಿ ನಮ್ಮ ಬಾಬತ್ತು ಕೆಎ04-ಇಎಲ್-6085 ದ್ವಿ ಚಕ್ರ ವಾಹನದಲ್ಲಿ ಹೋಗುವುದಾಗಿ ಮನೆಯಲ್ಲಿ ಹೇಳಿ ಹೊಗಿರುತ್ತಾನೆ. ಮತ್ತೆ ಈ ದಿನ ಬೆಳಗ್ಗೆ 6.30 ಗಂಟೆ ಸಮಯದಲ್ಲಿ ನಾವುಗಳು ಮನೆಯಲ್ಲಿದ್ದಾಗ ಯಾರೋ ಸಾರ್ವಜನಿಕರು ಕರೆ ಮಾಡಿ ಸಮೀರ್ ಪಾಷ ರವರಿಗೆ ಈ ದಿನ ಬೆಳಗ್ಗೆ ಬೆಂಗಳೂರು-ಚಿಂತಾಮಣಿ ರಸ್ತೆಯ ಎಡಬದಿಗೆ ಬರುವ ಬೆಕರಿ ಮುಂಭಾಗದ ರಸ್ತೆಯಲ್ಲಿ ಅಪಘಾತವಾಗಿದೆ ಬೇಗ ಬನ್ನಿ ಎಂತ ತಿಳಿಸಿದರು. ನಾವುಗಳು ಕೂಡಲೇ ಬಂದು ನೋಡಲಾಗಿ ವಿಷಯ ನಿಜವಾಗಿದ್ದು ವಿಚಾರ ತಿಳಿಯಲಾಗಿ ಸಮೀರ್ ಪಾಷ ರವರು ಬಂದಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಗಳೂರು ರಸ್ತೆಯಲ್ಲಿ ಪೇಟ್ರೋಲ್ ಹಾಕಿಸಿಕೊಂಡು ಬರುತ್ತಿದ್ದಾಗ ಬೆಂಗಳೂರು-ಚಿಂತಾಮಣಿ ರಸ್ತೆಯ ಎಡಬದಿಗೆ ಬರುವ ಬೆಕರಿ ಮುಂಭಾಗದ ರಸ್ತೆಯಲ್ಲಿ ಬೆಳಗ್ಗೆ 6.00 ಗಂಟೆ ಸಮಯದಲ್ಲಿ ಸಮೀರ್ ಪಾಷ ರವರು ಕೆಎ04-ಇಎಲ್-6085 ದ್ವಿ ಚಕ್ರ ವಾಹನವನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿ ಹಂಪ್ಸ್ನ್ನು ಏಗರಿಸಿ, ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿದ್ದರಿಂದ ಸಮೀರ್ ಪಾಷ ರವರು ದ್ವಿ ಚಕ್ರ ವಾಹನದಿಂದ ರಸ್ತೆಯ ಮೆಲೆ ಬಿದ್ದು ಆತನ ಮುಖಕ್ಕೆ ರಕ್ತಗಾಯವಾಗಿ ಮೂಗಿನಲ್ಲಿ ರಕ್ತಬಂದಿದ್ದು ಕೂಡಲೆ ಯಾರೋ ಸಾರ್ವಜನಿಕರು ಯಾವುದೋ ವಾಹನದಲ್ಲಿ ಕರೆದುಕೊಂಡು ಬಂದು ಚಿಂತಾಮಣಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ವೈದ್ಯರು ಪರಿಕ್ಷೇ ಮಾಡುವಷ್ಟರಲ್ಲಿ ಸಮೀರ್ ಪಾಷ ರವರು ಮೃತಪಟ್ಟಿರುತ್ತಾರೆಂತ ತಿಳಿಯಿತು.ಈ ಬಗ್ಗೆ ತಾವು ಸ್ಥಳಕ್ಕೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.73/2021 ಕಲಂ. 323,427,448,34 ಐ.ಪಿ.ಸಿ :-

          ದಿನಾಂಕ 25/03/2021 ರಂದು ಮದ್ಯಾಹ್ನ 17-30 ಗಂಟೆಗೆ ಪಿರ್ಯಾಧಿದಾರರಾದ ಹನುಮಂತರೆಡ್ಡಿ ಬಿನ್ ಲೇಟ್ ಎಸ್.ಹೆಚ್. ತಿಮ್ಮಯ್ಯ, 35 ವರ್ಷ, ವಕ್ಕಲಿಗ ಜನಾಂಗ, ವ್ಯವಸಾಯ, ಸೋಮಶೆಟ್ಟಿಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ  ಜಿಲ್ಲೆ ರವರು  ಠಾಣೆಗೆ -ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ದಿನಾಂಕ 19/03/2021    ರಂದು ಮಧ್ಯಾಹ್ನ 1-30  ಗಂಟೆ  ಸಮಯದಲ್ಲಿ  ಸೋಮಶೆಟ್ಟಿಹಳ್ಳಿ ಗ್ರಾಮದ ಬ್ರಹ್ಮರಾಜು ಬಿನ್ ಗಂಗಾಧರಪ್ಪ, ಲಕ್ಷ್ಮೀ ಕೋಂ ಬ್ರಹ್ಮರಾಜು, ಮತ್ತು ಗಗನ್ ಬಿನ್ ಬ್ರಹ್ಮರಾಜು ರವರು ಪಿರ್ಯಾದಿದಾರರ ತಾಯಿಯಾದ ನರಸಮ್ಮ ಮತ್ತು ಪತ್ನಿ ದೀಪಿಕ ರವರು ಮನೆಯಲ್ಲಿದ್ದಾಗ ಆರೋಪಿಗಳು ಹಳೆದ್ವೇಷದಿಂದ ಹೀನಾಯವಾಗಿ ಬೈದು ಕಲ್ಲು ಮತ್ತು ಇಟ್ಟಿಗೆಯಿಂದ ಹೋಡೆದಿರುತ್ತಾರೆ ಹಾಗೂ ಮನೆಯ ಒಳಗೆ ಅಕ್ರಮವಾಗಿ ಪ್ರವೇಶ ಮಾಡಿ ಮನೆಯ ಬಾಗಿಲನ್ನು ಸಹಾ ಜಕ್ಕಂ ಮಾಡಿರುತ್ತಾರೆಂದು  ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳು ಕೋರಿ ನೀಡಿದ ದೂರಾಗಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.75/2021 ಕಲಂ. 32,34,36(A) ಕೆ.ಇ ಆಕ್ಟ್:-

          ದಿನಾಂಕ 25/03/2021 ರಮದು ಪಿರ್ಯಾದಿದಾರರಾದ ಶ್ರಿ ರಾಜಣ್ಣ  ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ , ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ- ದಿನಾಂಕ 25/03/2021 ರಂದು ಸರ್ಕಾರಿ ಜೀಪ್ ಸಂಕ್ಯೆ KA 40 G 270 ರಲ್ಲಿ ಕಾನೂನು ಬಾಹಿರ ಚಟುವಟಿಕಿಗಳ ಮಾಹಿತಿ ಸಂಗ್ರಹಣೆಗಾಗಿ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ, ಬೈಚಾಪುರ , ಹುಣಸೇನಹಳ್ಳಿ ಇತ್ಯಾದಿ ಗ್ರಾಮಗಳ ಕಡೆ ಗಸ್ತು  ಮಾಡಿಕೊಂಡು  ಸಂಜೆ 6-15 ಗಂಟೆಗೆ ಮೇಳ್ಯಾ ಗ್ರಾಮಕ್ಕೆ ಬಂದಾಗ ಯಾರೋ ಒಬ್ಬ ಆಸಾಮಿ ನೊಂದಣಿ ಸಂಕ್ಯೆ KA 40 S 5065 TVS XL HEAVY DUTY ವಾಹನದಲ್ಲಿ ಒಂದು ಬಿಳಿ ಚೀಲವನ್ನು ಹಾಕಿಕೊಂಡು ಬಂದಿದ್ದು ಸದರಿಯವರನ್ನು ತಡೆದು ನಿಲ್ಲಿಸಿ ಚೀಲವನ್ನು ಪರಿಶೀಲಿಸಲಾಗಿ ಮದ್ಯ ತುಂಬಿದ 02 ರಟ್ಟಿನ ಬಾಕ್ಸ್ ಗಳಿರುತ್ತೆ.ಅದೇ ಸಮಯಕ್ಕೆ ಪಂಚರು ಸ್ಥಳಕ್ಕೆ ಬಂದಿದ್ದು ಸದರಿಯವರಿಗೆ ಮುಂದಿನ ಕ್ರಮ ಕೈಗೊಳ್ಳಲು ಪಂಚರಾಗಿ ಸಹರಿಸಲು ಕೋರಿದ್ದು ಸದರಿಯವರು ಒಪ್ಪಿದ ಮೇಲೆ ಸದರಿ ರಟ್ಟಿನ ಬಾಕ್ಸ್ ಗಳನ್ನು ಬಿಚ್ಚಿಸಿ ನೋಡಲಾಗಿ 1) ಒಂದು ರಟ್ಟಿನ ಬಾಕ್ಸ್ ನಲ್ಲಿ 90 ML HAYWRDS CHEERS WHISKY ಯ 96  ಮದ್ಯ ತುಂಬಿದ ಟೆಟ್ರಾ ಪಾಕೇಟ್ ಗಳಲ್ಲಿ ಪ್ರತಿಯೊಂದು ಟೆಟ್ರಾ ಪಾಕೇಟ್ ನ ಬೆಲೆ 35 ರೂಪಾಯಿ 13 ಪೈಸೆ ಇರುತ್ತೆ ನಂತರ 2) 2ನೇ ರಟ್ಟಿನ ಬಾಕ್ಸ್ ಗಳನ್ನು ಪರಿಶೀಲಿಸಲಾಗಿ OLD TAVERN 180 ML  ನ 48 ಟೆಟ್ರಾ ಪಾಕೇಟ್ ಗಳಲ್ಲಿ ಪ್ರತಿಯೊಂದರ ಬೆಲೆ 96.75 ಪೈಸೆ ಇರುತ್ತೆ. ನಂತರ ಆಸಾಮಿಯನ್ನು ಕುರಿತು ಸದರಿ ಮದ್ಯವನ್ನು ಸಾಗಣೆ ಮಾಡಲು ಯಾವುದಾರೂ ಪರವಾನಗಿ ಇದೆಯೇ ಎಂತ ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂತ ತಿಳಿಸಿದರು ನಂತರ ತನ್ನ ಹೆಸರು ಮತ್ತು ವಿಳಾಸ ಕೇಳಲಾಗಿ ರಮೇಶ್ ಬಿನ್ ವೆಂಕಟಸ್ವಾಮಿ ,38 ವರ್ಷ, ST ಜನಾಂಗ, ಅಂಜನಿ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಕೆಲಸ ವಾಸ ಮುದ್ದಲೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ಹೇಳಲಾಗಿ   ಸದರಿ ಬಾರ್ ಕ್ಯಾಷಿಯರ್ ರಾಮಚಂದ್ರ ಎಂಬಾವವರು ಸದರಿ ಮದ್ಯವನ್ನು ನೀಡಿದಾಗಿ ತಿಳಿಸಿದರು ನಂತರ ಆಸಾಮಿಯನ್ನು ವಶಕ್ಕೆ ಪಡೆದು ಸದರಿ ಮದ್ಯವನ್ನು ಪಂಚರ ಸಮಕ್ಷಮ ಮಾನತ್ತು ಪಡಿಸಿಕೊಂಡಿರುತ್ತೆ. ಯಾವುದೇ ಪರವಾನಗಿ ಇಲ್ಲದೆ ಮದ್ಯಾವನ್ನು ಸಾಗಾಣೆ ಮಾಡಿಕೊಂಡು ಬರುತ್ತಿದ್ದ ಆಸಾಮಿ ಮತ್ತು ಅಬಕಾರಿ ನಿಯಮಗಳನ್ನು ಪಾಲಿಸದೇ ಹೆಚ್ಚಿನ ಮದ್ಯವನ್ನು ಮಾರಾಟಕ್ಕೆ ನೀಡಿದ ಸದರಿ ಬಾರ್ ನ ಕ್ಯಾಷಿಯರ್ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳು ಕೋರಿದೆ.

 

9. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.33/2021 ಕಲಂ. 380,457 ಐ.ಪಿ.ಸಿ:-

          ದಿನಾಂಕ:26/03/2021 ರಂದು ಬೆಳಿಗ್ಗೆ 11:30 ಗಂಟೆಗೆ ಪಿರ್ಯಾದಿ ಕೆ.ವಿ ಗೋಪಾಲ ಬಿನ್ ಲೇಟ್ ಸಿ ವೆಂಕಟಸ್ವಾಮಿ, 53 ವರ್ಷ, ಆರ್ಕಾಲಾಜಿಕಲ್ ಸರ್ವೆ ಆಫ್ ಇಂಡಿಯಾದಲ್ಲಿ ಸ್ಮಾರಕ ಪರಿಚಾರಕ ಕೆಲಸ, ಭೋಗನಂದೀಶ್ವರ ದೇವಾಲಯ, ನಂದಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:25/03/2021 ರಂದು ಸಂಜೆ 7:30 ಗಂಟೆಗೆ ಭೋಗನಂದೀಶ್ವರ ದೇವಾಲಯದ ಬಾಗಿಲುಗಳನ್ನು ಕ್ಲೋಸ್ ಮಾಡಿ ಇಬ್ಬರು ಸೆಕ್ಯೂರಿಟಿ ಗಾರ್ಡುಗಳು ಕರ್ತವ್ಯದಲ್ಲಿದ್ದರು. ದಿನಾಂಕ:26/03/2021 ರಂದು ಬೆಳಿಗ್ಗೆ 7:00 ಗಂಟೆಗೆ ಬಾಗಿಲು ತೆಗೆದು ನೋಡಿದಾಗ ದೇವಾಲಯದೊಳಗೆ ಇರುವ ಕಮಠೇಶ್ವರ ಗುಡಿಗೆ ಹಾಕಿದ್ದ ಬೀಗ ಜಖಂ ಆಗಿ ಕೆಳಗೆ ಬಿದ್ದಿದ್ದು ಕಬ್ಬಿಣದ ಕಂಬಿಯ ಬಾಗಿಲು ತೆಗೆದಿದ್ದು ಗುಡಿಯಲ್ಲಿದ್ದ ಬಸವಣ್ಣ ವಿಗ್ರಹದ ಬಲ ಕಾಲು ಮುರಿದಿದ್ದು ಮುರಿದ ಬಾಗ ಇರುವುದಿಲ್ಲ ಆದ್ದರಿಂದ ಯಾರೋ ಕಳ್ಳರು ರಾತ್ರಿ ನಂದಿ ವಿಗ್ರಹದ ಬಲ ಕಾಲು ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 26-03-2021 07:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080