ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.52/2021 ಕಲಂ. 323,324,504,114,34 ಐ.ಪಿ.ಸಿ :-

     ದಿನಾಂಕ: 25/02/2021 ರಂದು ಬೆಳಿಗ್ಗೆ 11-00 ಗಂಟೆಗೆ ಗಾಯಾಳು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ:24/02/2021 ರಂದು ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ವಾಸಿಯಾದ ಲಕ್ಷ್ಮೀ ಕೋಂ ಗಂಗಾಧರ ರವರು ಕ್ಷುಲ್ಲಕವಾಗಿ ಗಲಾಟೆಗೆ ಬಂದು ಸದರಿ ಲಕ್ಷ್ಮೀ ರವರ ಕಿರಿಯ ಮಗನಾದ ಗಗನ್ ಕುಮಾರ್ ಕೈಗೆ ನಾನು 20 ರೂಪಾಯಿಗಳನ್ನು ನೀಡಿ ಅಂಗಡಿಗೆ ಕಳುಹಿಸಿದ್ದರೆ, ಸದರಿ ಗಗನ್ ಕುಮಾರ್ 20 ರೂಪಾಯಿಗಳನ್ನು ಅಂಗಡಿಯಲ್ಲಿ ಆತನೇ ಖರ್ಚು ಮಾಡಿಕೊಂಡಿದ್ದು, ಅದನ್ನು ನಾನು ಕೇಳಲಿಲ್ಲ, ಮತ್ತೆ ಅವರೇ ಗಲಾಟೆಗೆ ಬಂದು ಲಕ್ಷ್ಮೀ ಕೋಂ ಗಂಗಾಧರ 30 ವರ್ಷ ರವರು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯವಾಗುವಂತೆ ಗಾಯ ಮಾಡಿದ್ದು ಲಕ್ಷ್ಮೀ ರವರ ಸಂಬಂಧಿಯಾದ ನರಸಮ್ಮ ಕೋಂ ಗಂಗಪ್ಪ, 45 ವರ್ಷ ರವರು ನನ್ನ ಹೆಂಡತಿ ಜಗಳ ಬಿಡಿಸಲು ಬಂದಾಗ ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಎಳೆದಾಡಿರುತ್ತಾರೆ. ಆದ್ದರಿಂದ ನನ್ನ ತಲೆಗೆ ಕಲ್ಲಿನಿಂದ ಹೊಡೆದು ರಕ್ತಗಾಯ ಮಾಡಿದ ಲಕ್ಷ್ಮೀ ಕೋಂ ಗಂಗಾಧರ ರವರು ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಐಶ್ವರ್ಯ ರವರನ್ನು ಹಾಗೂ ನನ್ನನ್ನು ನರಸಮ್ಮ ಕೋಂ ಗಂಗಪ್ಪ ರವರೂ ಸಹ ಅವಾಚ್ಯ ಶಬ್ದಗಳಿಂದ ಬೈದು ಎಳೆದಾಡಿರುತ್ತಾರೆ. ಇದಕ್ಕೆಲ್ಲಾ ಕಾರಣರಾದ ನಮ್ಮ ಗ್ರಾಮದ ಶಿವಪ್ಪ ಬಿನ್ ಗಂಗಪ್ಪ ರವರು ಹಳೇ ವೈಶಮ್ಯದಿಂದ ಈ ರೀತಿ ಕುಮ್ಮಕ್ಕು ನೀಡಿ ಮಾಡಿಸಿದ್ದು, ಸದರಿ ಮೇಲ್ಕಂಡ ರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.20/2021 ಕಲಂ. 279,337,323,324,504,506 ಐ.ಪಿ.ಸಿ :-

     ದಿನಾಂಕ 25/02/2021 ರಂದು ಮಧ್ಯಾಹ್ನ 14-30 ಗಂಟೆಗೆ ಬಟ್ಲಹಳ್ಳಿ ಪೊಲೀಸ್ ಠಾಣೆಯ  ಸಹಾಯಕ ಆರಕ್ಷಕ ಉಪನಿರೀಕ್ಷರಾದ ವೆಂಕಟರವಣಪ್ಪ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ವೈ.ಆರ್.ಗೋಪಾಲಕೃಷ್ಣ ಬಿನ್ ರೆಡ್ಡಪ್ಪ 35 ವರ್ಷ ಆದಿದ್ರಾವಿಡ ಜನಾಂಗ.ಕೂಲಿಕೆಲಸ,ವಾಸ ಯರ್ರಕೋಟೆ ಗ್ರಾಮ ಚಿಂತಾಮಣಿ ತಾಲ್ಲೂಕು ಹೇಳಿಕೆಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ದಿನಾಂಕ 24/02/2021 ರಂದು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ನಾನಮ್ಮ ರವರ ಅಂಗಡಿಯಲ್ಲಿ ಮಕ್ಕಳಿಗೆ ತಿಂಡಿ ತೆಗೆದುಕೊಂಡು ವಾಪಸ್ಸು ಮನೆಗೆ ಹೋಗಲು ನಮ್ಮ ಗ್ರಾಮದ ದೊಡ್ಡನಾರಾಯಣಪ್ಪರವರ ಮಗ ವೆಂಕಟರಾಯಪ್ಪ ರವರ ಮನೆ ಬಳಿ ಸಿಮೆಂಟ್ ರಸ್ತೆಯ ಎಡಬದಿಯಲ್ಲಿ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದಾಗ ನನ್ನ ಎದುರಿಗೆ ನಮ್ಮ ಗ್ರಾಮದ ವಾಸಿ ಶಿವಣ್ಣ ಬಿನ್ ತೋಟಿ ಸುಬ್ಬನ್ನ ಅವರ ಬಾಬತ್ತು ಪ್ಲಾಟಿನ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಹಳೇ ದ್ವೇಷದಿಂದ ಕುಡಿದ ಅಮಲಿನಲ್ಲಿ ಅತಿವೇಗವಾಗಿ ಬಂದು ನನ್ನ ಎಡಕಾಲಿಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ನನ್ನ ಎಡಕಾಲಿನ ಹೆಬ್ಬೆರಳಿಗೆ ರಕ್ತಗಾಯವಾಗಿ ರಸ್ತೆ ಎಡಬದಿಯ ಚರಂಡಿಗೆ ಬಿದ್ದು ಹೋದಾಗ ದ್ವಿಚಕ್ರವಾಹನವನ್ನು ನಿಲ್ಲಿಸಿ ಶಿವಣ್ಣ ರವರು ಏನೋ ನನ್ನ ಮಗನೇ ನಿನ್ನ ತಾಯಿ ನಾನು ಕೇಯ ನನ್ನ ಗಾಡಿಗೆ ಅಡ್ಡ ಬರುತ್ತೀಯ ಲೋಫರ್ ನನ್ನ ಮಗನೇ ಎಂದು ಅವಾಚ್ಯವಾಗಿ ಬೈಯ್ದು ಕೈಯಿಂದ ನನ್ನ ಮುಖಕ್ಕೆ ಕೆಳತುಟಿಗೆ ಹೊಡೆದು ಮೂಗೇಟುಗಳು ಉಂಟು ಮಾಡಿದಾಗ ನಾನು ಕೈಗಳಿಂದ ತಳ್ಳಿದಾಗ ನನ್ನ ಬಲ ಕೈ ಎರಡು ಬೆರಳುಗಳಿಗೆ ಕಚ್ಚಿ ರಕ್ತಗಾಯಪಡಿಸಿದ್ದು ನಾನು ಕಿರುಚಿಕೊಳ್ಳಲು ನಮ್ಮ ಅಣ್ಣ ವೆಂಕಟರೆಡ್ಡಿ ಮಗ ರವಿತೇಜ ಅಡ್ಡಬಂದಾಗ ಶಿವಣ್ಣ ಕೈಯಿಂದ ರವಿತೇಜನ ಮುಖಕ್ಕೆ ಹೊಡೆದು ಕಾಲಿನಿಂದ ರವಿತೇಜನ ಎಡಕಾಲಿಗೆ ಒದ್ದು ಮೂಗೇಟುಗಳುಂಡು ಮಾಡಿ ನಿಮ್ಮ ಅಮ್ಮ ನಾನು ಕೇಯ ನಿಮ್ಮಲ್ಲಿ ಗೋಪಾಲಕೃಷ್ಣನನ್ನು ಮುಗಿಸಿಬಿಡುತ್ತೇನೆಂದು ಬೆದರಿಕೆ ಹಾಕಿರುತ್ತಾನೆ ಅಷ್ಟರಲ್ಲಿ ನಮ್ಮ ಗ್ರಾಮದ ವಾಸಿ ನಾರಾಯಣರೆಡ್ಡಿ ಬಿನ್ ಲೇಟ್ ರಘುನಾಥರೆಡ್ಡಿ ರವರು ಹಾಗೂ ನಮ್ಮ ಅಣ್ಣ ಸೋಮಶೇಖರ ರವರು ಬಂದು ಜಗಳ ಬಿಡಿಸಿದರು ನಂತರ ನಾನು ಮತ್ತು ರವಿತೇಜ ರವರು ನಮ್ಮ ಅಣ್ಣನಾದ ಸೋಮಶೇಖರರವರೊಂದಿಗೆ ದ್ವಿಚಕ್ರ ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ ನನಗೆ ಹಳೇ ದ್ವೇಶದಿಂದ ಅತಿವೇಗ ರಭಸವಾಗಿ ದ್ಚಿಚಕ್ರ ವಾಹನದಲ್ಲಿ ಗುದ್ದಿ ಕೆಳಕ್ಕೆ ಬೀಳಿಸಿ ಹೊಡೆದು ಪ್ರಾಣಬೆದರಿಕೆ ಹಾಕಿ ಮೇಲ್ಕಂಡ ಹಿರಿಯರು ಜಗಳ ಬಿಡಿಸಿದ ಮೇಲೆ ಶಿವಣ್ಣನೇ ತನ್ನ ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಹೋದಾಗ ನಾನು ದ್ವಿಚಕ್ರ ವಾಹನದ ನಂಬರನ್ನು ನೋಡಿದಾಗ KA04 ER-5248 ಆಗಿತ್ತು ಆದ್ದರಿಂದ ಮೇಲ್ಕಂಡ ಶಿವಣ್ಣ ಬಿನ್ ಸುಬ್ಬನ್ನ ರವರ ಮೇಲೆ ಕಾನೂನುರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ಹೇಳಿಕೆಯ ದೂರಾಗಿದೆ.

 

3. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.13/2021 ಕಲಂ. 419,420 ಐ.ಪಿ.ಸಿ & 66(D),66(C) INFORMATION TECHNOLOGY ACT 2008 :-

     ದಿನಾಂಕ:26/2/2021 ರಮದು ಪಿರ್ಯಾದಿ ಶ್ರೀ ಮಲ್ಲೇಶ್ ಆಚಾರ್  ಎಸ್ ಎನ್  ಬಿನ್ ಲೇಟ್ ಎಸ್ ನಂಜಪ್ಪಾಚಾರ್,60 ವರ್ಷ,ಅಕ್ಕಸಾಲಿಗರು, ನಿವೃತ್ತ ಶಿಕ್ಷಕರು, ವಾಸ ನಂ:282, ಗೌಡಗೆರೆ ಬೀದಿ, ಕಾರ್ಖಾನ್ ಪೇಟೆ, ಚಿಕ್ಕಬಳ್ಳಾಪುರ ಟೌನ್, ಮೊ ಸಂಖ್ಯೆ: 9986713482 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಚಿಕ್ಕಬಳ್ಳಾಪುರ ಬಿ ಬಿ ರಸ್ತೆಯಲ್ಲಿ ಇರುವ (ಶನಿಮಹಾತ್ಮ ಟೆಂಪಲ್ ಬಳಿ) ಇರುವ  ಎಸ್  ಬಿ ಐ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ನಂ: 30389919948 ರಂತೆ ಖಾತೆಯನ್ನು ಹೊಂದಿದ್ದು ಈ ಖಾತೆಗೆ ಪೋನ್ ಫೇ ವ್ಯಾಲೆಟ್ ನ್ನು ಲಿಂಕ್ ಮಾಡಿಕೊಂಡು ನಾನು ನನ್ನ ಹಣ ಕಾಸಿನ ವ್ಯವಹಾರವನ್ನು ಮಾಡುತ್ತಿರುತ್ತೇನೆ. ಈಗಿರುವಲ್ಲಿ ದಿನಾಂಕ;25/2/2021 ರಂದು ನಾನು  ನನ್ನ ಮೊಬೈಲ್ ಗೆ ಕರೆನ್ಸೀ  599/- ರೂಗಳನ್ನು ಪೋನ್ ಫೇ ಮೂಲಕ ಕಳುಹಿಸಿದಾಗ ಕೈತಪ್ಪಿ  ಬೇರೆ ನಂಬರ್  ಹಾಕಿದ್ದರಿಂದ ಹಣ ಬೇರೆಯವರಿಗೆ  ಹೋಗಿರುತ್ತದೆ. ನಂತರ ನಾನು ಏರ್ ಟೆಲ್ ಆಪೀಸ್ ನಲ್ಲಿ ವಿಚಾರ ಮಾಡಲಾಗಿ ಪೋನ್ ಫೇ ನಲ್ಲಿ ಕಳುಹಿಸಿದ್ದು,ಅದು ನಮಗೆ ಬರುವುಲ್ಲ. ನೀವು ಪೋನ್ ಫೇ ಕಸ್ಟಮರ್ ಕೇರ್ ಗೆ ಸಂಪರ್ಕಿಸಲು ತಿಳಿಸಿರುತ್ತಾರೆ. ನಾನು ಗೂಗಲ್ ನಲ್ಲಿ ಸರ್ಚ ಮಾಡಿ ಪೋನ್ ಫೇ ಕಸ್ಟಮರ್ ಕೇರ್ ನಂ:9339217553 & 9832811326 ಗೆ ಕರೆ ಮಾಡಿದಾಗ ನಿಮಗೆ ಏನ್ ತೊಂದರೆ ಆಗಿದೆ ಎಂತ ಕೇಳಿದರು, ನಾನು ಮೇಲ್ಕಂಡಂತೆ ನೆಡೆದ ವಿಚಾರವನ್ನು ಅವರಿಗೆ ತಿಳಿಸಿದೆ. ಆಗ ನಿಮಗೆ ಒಂದು ಕೋಡ್ ನಂಬರ್ 49865 ಕಳುಹಿಸುತ್ತೇನೆ. ಅದನ್ನು ನಿಮ್ಮ ಪೋನ್ ಫೇ ಯಲ್ಲಿ ಹಾಕಿ ಪೋನ್ ನಂಬರ್ 9554927659 ಗೆ ಕಳುಹಿಸುವಂತೆ ತಿಳಿಸಿದ ನಾನು ಅದರಂತೆ ನನ್ನ ಪೋನ್ ಫೇ ನಂಬರ್ ನಿಂದ ಮಾಡಿದೆ. ಪುನಃ ಅವನು ಅದು ಆಗಲಿಲ್ಲ. ಇನ್ನೊಂದು ಕೋಡ್ ಕಳುಹಿಸುತ್ತೇನೆಂತ 8001 ನ್ನು  ಕಳುಹಿಸಿ ಪೊನ್ ನಂಬರ್ 9918129973 ಸಂಖ್ಯೆಗೆ ಕಳುಹಿಸಲು ತಿಳಿಸಿದ ಅದರಂತೆ ನಾನು ಮಾಡಿದೆ.  ಈಗ  ನಿಮ್ಮ ಹಣ ನಿಮಗೆ ವಾಪಸ್ಸು ಬರುತ್ತದೆಂತ ತಿಳಿಸಿದ.ಆಗ ನಾನು ನನ್ನ ಹಣ ನನಗೆ ಬರುಬಹುದೆಂತ ನಂಬಿದ್ದು. ನಂತರ ನಾನು ನನ್ನ ಪೋನ್ ಫೇ ವ್ಯಾಲೆಟ್ ನ್ನು ಚಕ್ ಮಾಡಲಾಗಿ ಅದು ಓಪನ್ ಆಗದೆ ಪ್ರೋಸಸಿಂಗ್ ನಲ್ಲಿಯೆ ಇತ್ತು ನೋಡಲು ಆಗಲಿಲ್ಲ. ನಂತರ  ಅದೇ ದಿನ ಸಂಜೆ ನನ್ನ ಪೋನ್ ಫೇ ವ್ಯಾಲೆಟ್ ನಲ್ಲಿ ಚಕ್ ಮಾಡಿದಾಗ ನನ್ನ ಖಾತೆಯಲ್ಲಿದ್ದ ಹಣ  ಒಟ್ಟು 57,866/- ರೂಗಳು (49865+8001 ) ಎರಡು ಭಾರಿ ಕಟಾವು ಆಗಿರುವುದಾಗಿ ತಿಳಿಯಿತು. ಈ ದಿನ ಬ್ಯಾಂಕ್ ನಲ್ಲಿ ವಿಚಾರ ಮಾಡಲಾಗಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲು ತಿಳಸಿದ್ದು. ಸದರಿ ನನಗೆ ಕಸ್ಟಮರ್ ಕೇರ್ ನಿಂದ ಮಾತಾಡುತ್ತಿರುವುದಾಗಿ ನನ್ನನ್ನು ನಂಬಿಸಿ ಕೋಡ್ ನಂಬರ್ ಅಂತ ಕಳುಹಿಸಿ ನನ್ನಿಂದ ಹಣದ ಮೌಲ್ಯವನ್ನು ನಮೂದಿಸಿ ಹಣವನ್ನು ವರ್ಗಾಯಿಸಿ ಕೊಂಡಿರುವ ಮೇಲ್ಕಂಡ ಆರೋಪಿಗಳನ್ನು ಪತ್ತೆ ಮಾಡಿ ನಮ್ಮ ಹಣವನ್ನು ನಮಗೆ ವಾಪಸ್ಸು ಕೊಡಿಸಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರು.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.48/2021 ಕಲಂ. 279,337  ಐ.ಪಿ.ಸಿ:-

     ದಿನಾಂಕ26/02/2021 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾಧಿದಾರರಾದ ವೆಂಕಟಾಚಲಪ್ಪ , 56 ವರ್ಷ, ಸಾದರ ಗೌಡ ಜನಾಂಗ, ತವಕದಲ್ಲಿ ಗ್ರಾಮ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ದಿನಾಂಕ 20/02/2021 ರಂದು ಮದ್ಯಾಹ್ನ ಸುಮಾರು 2-30 ಗಂಟೆ ಸಮಯದಲ್ಲಿ  ನನ್ನ ಮಗನಾದ ಕೃಷ್ಣಮೂರ್ತಿ ಬಿನ್ ವೆಂಕಟಾಚಲಪ್ಪ ಮತ್ತು ನಮ್ಮ ಸಂಬಂದಿಕರ ಮಗನಾದ ನಿತಿನ್ ಬಿನ್ ನರಸೇಗೌಡ , 13 ವರ್ಷ, ಎಂಬುವರು  KA 53 W 1612  HONDA CD  ದ್ವಿಚಕ್ರ ವಾಹನದಲ್ಲಿ ವಿದುರಾಶ್ವತ್ಥ ದೇವಸ್ಥಾನದಲ್ಲಿ ಮದುವೆಗೆಂದು ಹೋಗುವಾಗ ಚಂದನದೂರಿನ ಬಳಿ KA 50 M 0550  OMINI  ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಪಘಾತ ಮಾಡಿರುತ್ತಾರೆ. ಇದರಿಂದ ನನ್ನ ಮಗನ ಎಡಗಾಲು ಮುರಿದಿರುತ್ತದೆ ಹಾಗೂ ನಿತಿನ್ ಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ಮತ್ತು ದ್ವಿಚಕ್ರ ವಾಹನಕ್ಕೆ ಹಿಂಡಿಕೇಟರ್ ಡೂಮ್ ಟ್ಯಾಂಕರ್ ಬಂಪರ್ ಮೀರರ್ ಎಲ್ಲಾವು ಮುರಿದು ಹೋಗಿರುತ್ತದೆ. ಅಪಘಾತ ಮಾಡಿದ ವಾಹನವನ್ನು ನೋಡಲಾಗಿ KA 50 M 0550  ಸಂಖ್ಯೆಯ ವಾಹನವವಾಗಿದ್ದು ನಂತರ ಕೃಷ್ಣಮೂರ್ತಿ  ಬಿನ್ ವೆಂಕಟಾಲಪ್ಪ ,26 ವರ್ಷ, ಸಾದರಗೌಡರನ್ನು ಅದೇ OMINI  ಕಾರಿನಲ್ಲಿ  ಸೋಮೆಶ್ವೇರ ಆಸ್ವತ್ರೆಗೆ ಕರೆದುಕೊಂಡು ಶಸ್ತ್ರ ಚಿಕಿಸ್ಸೆಗೆ ದಾಖಲು ಮಾಡಿರುತ್ತಾರೆ .ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತ ಮಾಡಿದ ಕಾರು ಚಾಲಕನ ಮೇಲೆ ಕಾನೂನು ರೀತ್ಯಾ  ಕ್ರಮ ಜರುಗಿಸಲು ಕೋರುತ್ತೇನೆ. ನಾನು ನನ್ನ ಮಗನಿಗೆ ಸೊಮೇಶ್ವರ ಆಸ್ವತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿ ಈ ದಿನ ದಿನಾಂಕ 26/02/2021 ರಂದು ತಡವಾಗಿ ಬಂದು ದೂರು ನೀಡಿರುತ್ತೇನೆ.

 

5. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.21/2021 ಕಲಂ. 20(b) NARCOTIC DRUGS & PSYCHOTROPIC SUBSTANCES ACT, 1985:-

     ದಿನಾಂಕ 25-02-2021 ರಂದು ಸಂಜೆ 06.00 ಗಂಟೆಗೆ ಶ್ರೀ ರಂಜನ್ ಕುಮಾರ್ ಡಿ, ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಮಹಜರ್, ಮಾಲು, ಆರೋಪಿಗಳೊಂದಿಗೆ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 25/02/2021 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಮುರಗಮಲ್ಲಾ ಗ್ರಾಮದ ಅನ್ಸರ್ ಖಾನ್ ರವರ ಬಾಬತ್ತು ವಸತಿ ಸಮುಚ್ಚಯದ ಯಾವುದೋ ಒಂದು ರೂಂನಲ್ಲಿ 20-25 ವರ್ಷ ವಯಸ್ಸಿನ ನಾಲ್ಕು ಜನ ಯುವಕರು ಅಕ್ರಮವಾಗಿ ಮಾದಕವಸ್ತು ಗಾಂಜಾ ವನ್ನು ಮಾರಾಟ ಮಾಡುವ ಸಲುವಾಗಿ ಇಟ್ಟುಕೊಂಡಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಠಾಣಾ ದಿನಚರಿಯಲ್ಲಿ ನಮೂದು ಮಾಡಿ ಈ ಬಗ್ಗೆ ಮೇಲಾಧಿಕಾರಿಗಳಾದ ಸಿಪಿಐ ಚಿಂತಾಮಣಿ ಗ್ರಾಮಾಂತರ ವೃತ್ತ ಮತ್ತು ಪೊಲೀಸ್ ಉಪಾಧೀಕ್ಷಕರು ಚಿಂತಾಮಣಿ ಉಪ ವಿಭಾಗ ರವರಿಗೆ ಮಾಹಿತಿ ನೀಡಿ, ಪೊಲೀಸ್ ಉಪಾಧೀಕ್ಷ್ಷಕರಲ್ಲಿ ಮನವಿ ಸಲ್ಲಿಸಿಕೊಂಡು ಸದರಿ ಸ್ಥಳದ ಶೋಧನೆ, ದಾಳಿ ಮಾಡಲು ಅನುಮತಿ ಪಡೆದುಕೊಂಡಿರುತ್ತೆ.  ನಂತರ  ದಾಳಿ ಕಾಲದಲ್ಲಿ ಪಂಚರಾಗಿ ಹಾಜರಿದ್ದು ತನಿಖೆಗೆ ಸಹಕರಿಸಬೇಕೆಂತ 1) ವಿ. ಸುರೇಶ ಬಿನ್ ವೆಂಕಟರವಣಪ್ಪ, ಪಿಡಿಓ ಮುರಗಮಲ್ಲಾ ಗ್ರಾಮ ಪಂಚಾಯ್ತಿ 2) ರಘು@ರಾಘವೇಂದ್ರ ಬಿನ್ ಲೇಟ್ ನಂಜುಂಡಪ್ಪ, ಮುರಗಮಲ್ಲಾ ಗ್ರಾಮ ರವರನ್ನು ಪೊಲೀಸ್ ಠಾಣೆಗೆ ಕರೆಯಿಸಿ ಪಂಚನಾಮೆಗೆ ಸಹಕರಿಸಲು ನೋಟೀಸ್ ನೀಡಿದ್ದು, ನಂತರ ಗೆಜೆಟೆಡ್ ಅಧಿಕಾರಿಯಾಗಿ ಹಾಜರಿರಲು ವೈದ್ಯಾಧಿಕಾರಿಗಳು ಮುರಗಮಲ್ಲಾ ರವರಿಗೆ ತಿಳಿಸಿ ಡಾ|| ಮುನಿಸ್ವಾಮಿರೆಡ್ಡಿ ರವರನ್ನು ಠಾಣೆಗೆ ಕರೆಯಿಸಿಕೊಂಡು ಮನವಿ ಪತ್ರ ಸಲ್ಲಿಸಿಕೊಂಡಿದ್ದು, ನಂತರ ಪಂಚರು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಯವರು, ಗೆಜೆಟೆಡ್ ಅಧಿಕಾರಿ ಪರಸ್ವರ ಅಂಗ ಶೋಧನೆ ಮಾಡಿಕೊಂಡು ಪಂಚರು, ತಾನು ಪಿ.ಎಸ್.ಐ ಡಿ ರಂಜನ್ ಕುಮಾರ್, ಸಿಬ್ಬಂದಿಯಾದ ಎ.ಎಸ್.ಐ ವೆಂಕಟರವಣಪ್ಪ, ಸಿ.ಹೆಚ್.ಸಿ-99 ರಾಮನಾಥರೆಡ್ಡಿ, ಸಿಪಿಸಿ-422 ಲಕ್ಷ್ಮೀಪತಿ, ಎಪಿಸಿ-163 ಆಯ್ ರಾಜ್,  ಗೆಜೆಟೆಡ್ ಅಧಿಕಾರಿಯಾದ ಡಾ|| ಮುನಿಸ್ವಾಮಿರೆಡ್ಡಿ ರವರೊಂದಿಗೆ ಕೆಎ-40-ಜಿ-539 ಸರ್ಕಾರಿ ಜೀಪ್ ನಲ್ಲಿ ಮಧ್ಯಾಹ್ನ 12-45 ಗಂಟೆಗೆ  ಠಾಣೆಯನ್ನು ಬಿಟ್ಟು ಮುರಗಮಲ್ಲಾಗೆ  13-20 ಗಂಟೆಗೆ ನಾವು ಎಲ್ಲರೂ ವಾಹನವನ್ನು ಮುರಗಮಲ್ಲಾ ಹೊರ ಠಾಣೆಯ ಬಳಿ ನಿಲ್ಲಿಸಿ ಎಲ್ಲರೂ ಅಲ್ಲಿನ ಗ್ರಾಮ ಪಂಚಾಯ್ತಿ ಉಫಾಧ್ಯಕ್ಷರಾದ ಅನ್ಸರ್ ಖಾನ್ ರವರ ಬಾಬತ್ತು ವಸತಿ ಸಮುಚ್ಚಯ ಕಟ್ಟಡದ ಎರಡನೇ ಮಹಡಿಯಲ್ಲಿನ ಮೂಲೆಯಲ್ಲಿರುವ ನಾಲ್ಕು ಜನ ಆಸಾಮಿಗಳು ಬಾಡಿಗೆಗೆ ಪಡೆದಿದ್ದ ರೂಂ ಬಳಿ ಹೋಗಿ ಮರೆಯಲ್ಲಿ ನಿಂತು ಕೇಳಲಾಗಿ ರೂಂ ನಲ್ಲಿದ್ದ ಯಾರೋ ಒಬ್ಬ ಆಸಾಮಿಯು ನಾವು ಬೆಂಗಳೂರಿನಲ್ಲಿ ಗಾಂಜಾವನ್ನು ಹೆಚ್ಚಿನ ಬೆಲೆ ಮಾರಾಟ ಮಾಡೋಣವೆಂದು ಮಾತನಾಡುತ್ತಿದ್ದನ್ನು ಕೇಳಿಸಿಕೊಂಡು ನಾವುಗಳು ರೂಂನ ಬಾಗಿಲು ತೆಗೆಯುವಂತೆ ಸೂಚಿಸಿದಾಗ ಯಾರೋ ಒಬ್ಬ ಆಸಾಮಿ ಬಾಗಿಲು ತೆಗೆದಿದ್ದು, ಪರಿಶೀಲಿಸಲಾಗಿ ನಾಲ್ಕು ಜನ ಆಸಾಮಿಗಳಿದ್ದು,  ಹೆಸರು ಮತ್ತು ವಿಳಾಸ ಕೇಳಲಾಗಿ  ಸದರಿಯವರು  1 ನೇ ನಬ್ಬೀರ್ ಪಾಷ ಬಿನ್ ಚಾಂದ್ ಪಾಷ, 23 ವರ್ಷ, ಮುಸ್ಲೀಂ ಜನಾಂಗ, ಬಟ್ಟೆ ಅಂಗಡಿ ವ್ಯಾಪಾರ, 6 ನೇ ಕ್ರಾಸ್, ಗೋರಿಪಾಳ್ಯ, ರಂಗನಾಥಪುರ, ಜೆಜೆ ನಗರ, ಪಾದರಾಯನಪುರ, ಬೆಂಗಳೂರು ಎಂದು 2 ನೇ ಮುಬಾರಕ್ ಪಾಷ ಬಿನ್ ಶೌಕತ್ ಪಾಷ, ಮುಸ್ಲೀಂ ಜನಾಂಗ, 20 ವರ್ಷ, ಕಾರು ಮೆಕ್ಯಾನಿಕ್, ಮನೆ ನಂ 16/02, 13 ನೇ ಕ್ರಾಸ್, ಜೆಜೆ ನಗರ, ಬೆಂಗಳೂರು, 3 ನೇ ಅಪ್ರೀಜ್ ಬಿನ್ ಫೈರೋಜ್, ಮುಸ್ಲೀಂ ಜನಾಂಗ, 22 ವರ್ಷ, ಗ್ಯಾಸ್ ವೆಲ್ಡಿಂಗ್ ಕೆಲಸ, 1 ನೇ ಕ್ರಾಸ್, ಗೌರಿಪಾಳ್ಯ ಗುಡ್ಡದಹಳ್ಳಿ, ಬೆಂಗಳೂರು,  4 ನೇ ಅಬ್ಬಾಸ್ ಪಾಷ ಬಿನ್ ಇಲಿಯಾಜ್ ಪಾಷ, 24 ವರ್ಷ, ಮುಸ್ಲೀಂ ಜನಾಂಗ, ಕಾರು ಚಾಲಕ, ವಾಸ 13 ನೇ ಕ್ರಾಸ್, ಪಾದರಾಯನಪುರ, ಬೆಂಗಳೂರು ಎಂದು ತಿಳಿಸಿದರು. ನಂತರ ಸ್ಥಳದಲ್ಲಿದ್ದ ನಾವುಗಳು, ಪಂಚರುಗಳು ಮತ್ತು ಗೆಜೆಟೆಡ್ ಅಧಿಕಾರಿಗಳು ನಿಯಮಾನುಸಾರ ನಾಲ್ಕು ಆಸಾಮಿಗಳನ್ನು ಮತ್ತು ರೂಂ ನ್ನು ಪರಿಶೀಲಿಸಿದಾಗ ಸದರಿಯವರ ಬಳಿ ವಿವೋ ಕಂಪನಿಯ 1 ಸ್ಮಾರ್ಟ ಪೋನ್,  ಸ್ಯಾಮ್ ಸಂಗ್ ಕಂಪನಿಯ 1 ಸ್ಮಾರ್ಟ ಪೋನ್,  ಒಪ್ಪೋ ಕಂಪನಿಯ 1 ಸ್ಮಾರ್ಟ ಪೋನ್, ಸ್ಯಾಮಸಂಗ್ ಕಂಪನಿಯ ಗೋಲ್ಡ್ ಕಲರ್ ನ ಸ್ಮಾರ್ಟ ಪೋನ್ ಇದ್ದು, ಜಿಯೋ 1 ಕೀಪ್ಯಾಡ್ ಪೋನ್ ಸೇರಿ 5 ಮೊಬೈಲ್ ಪೋನ್ ಗಳಿರುತ್ತವೆ. ನಂತರ ರೂಂ ನ್ನು ಪರಿಶೀಲಿಸಲಾಗಿ ಸದರಿ ರೂಂನ ನೈರುತ್ಯ ಮೂಲೆಯಲ್ಲಿ ಬಟ್ಟೆಯಂತಿರುವ ಒಂದು ಕಪ್ಪು,ಕೆಂಪು, ಕಂದು ಹಾಗೂ ಕ್ರೀಮ್ ಬಣ್ಣದ  ಕೈ ಹಿಡಿ ಇರುವ ಬ್ಯಾಗ್  ನಲ್ಲಿ ಮಾದಕ ವಸ್ತು ಗಾಂಜಾ ಇದ್ದು, ಸದರಿ ಗಾಂಜಾವನ್ನು ನಿಯಮಾನುಸಾರ ತೂಕ ಮಾಡಿ ನೋಡಲಾಗಿ  450 ಗ್ರಾಂ ನಷ್ಟು ತೂಕ ಇರುತ್ತದೆ. ಸದರಿ ಮಾಲನ್ನು ಪಂಚರ ಸಮಕ್ಷಮ ಬಿಳಿ ಬಟ್ಟೆಯಿಂದ ಹೊಲೆದು "VH" ಎಂದು ಮೊಹರು ಮಾಡಿರುತ್ತೆ. ಮಾದಕ ವಸ್ತು ಗಾಂಜಾದ ಬೆಲೆ ಸುಮಾರು ರೂ. 12000/- ರೂಗಳಾಗಬಹುದೆಂದು ಅಂದಾಜಿಸಲಾಯಿತು. ನಂತರ ಸುಮಾರು 2.5 ಅಡಿ ಉದ್ದದ 1.5 ಇಂಚು ಅಗಲದ ಸ್ಟೀಲ್ ಲಾಂಗ್ ಇದ್ದು, 13 ಇಂಚು ಉದ್ದದ 1.5 ಇಂಚು ಅಗಲದ ಕಬ್ಬಿಣದ ಚಾಕು ಇರುತ್ತದೆ. ನಂತರ ಕಟ್ಟಡದ ಮುಂದೆ ಪೂರ್ವದ ಕಡೆಗೆ ಇರುವ ಖಾಲಿ ನಿವೇಶನದಲ್ಲಿ ನಿಲ್ಲಿಸಿದ್ದ ಎಪಿ-09 ಬಿಎನ್-1646 ನೊಂದಣಿ ಸಂಖ್ಯೆಯ ಸಿಲ್ವರ್ ಬಣ್ಣದ ಸ್ಯಾಂಟ್ರೋ ಕಾರು ಮತ್ತು ಎಲ್ಲಾ ಮಾಲುಗಳನ್ನು  ಈ ಕೇಸಿನ ಮುಂದಿನ ನಡಾವಳಿಗಾಗಿ ಮಧ್ಯಾಹ್ನ 13-30 ಗಂಟೆಯಿಂದ ಸಂಜೆ 16-30 ಗಂಟೆಯವರೆಗೆ ಅಮಾನತ್ತು ಮಹಜರ್ ಮೂಲಕ ಅಮಾನತ್ತುಪಡಿಸಲಾಯಿತು. ಮಾಲು ಮತ್ತು ಆರೋಪಿತರನ್ನು ಸಂಜೆ 18-00 ಗಂಟೆಗೆ ಮುಂದಿನ ಕಾನೂನು ಕ್ರಮಕ್ಕಾಗಿ ಎಸ್.ಹೆಚ್.ಓ ರವರಿಗೆ ನೀಡಿದ ವರದಿ ಸಾರಾಂಶವಾಗಿರುತ್ತೆ.

 

6. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.14/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:25-02-2021 ರಂದು ಸಂಜೆ 5-00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ದಿನಾಂಕ:25/02/2021 ರಂದು ಮಧ್ಯಾಹ್ನ 3-00 ಗಂಟೆಯ ಸಮಯದಲ್ಲಿ ನಾನು ಸಿಬ್ಬಂದಿಯಾದ ಸಿಪಿಸಿ-181 ಪ್ರಸಾದ್, ಸಿಪಿಸಿ-148 ಧನಂಜಯ ಹಾಗೂ ಚಾಲಕ ಎ.ಹೆಚ್.ಸಿ-21 ಸತ್ಯಾನಾಯಕ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-59 ರಲ್ಲಿ ಬಿಳ್ಳೂರು ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬಾಬೇನಾಯ್ಕ ತಾಂಡಾ ಗ್ರಾಮದ ನರಸಿಂಹನಾಯ್ಕ್ ಬಿನ್ ಸೇಕೇ ನಾಯ್ಕ್ ಎಂಬುವವರು ಬಿಳ್ಳೂರು-ಅಮಡಗೂರು ರಸ್ತೆಯ ಪಕ್ಕದಲ್ಲಿರುವ ಬೋಯಿಪಲ್ಲಿ ಕೆರೆಯ ಕಟ್ಟೆಯ ಮೇಲೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ನನಗೆ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿ ಹಾಗೂ ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಜೀಪನ್ನು ನಿಲ್ಲಿಸುತ್ತಿದ್ದಂತೆ ಜೀಪನ್ನು ಕಂಡು ಮದ್ಯಪಾನ ಮಾಡುತ್ತಿದ್ದ ಯಾರೋ ಇಬ್ಬರು ಆಸಾಮಿಗಳು ಓಡಿ ಹೋಗಿದ್ದು, ಸ್ಥಳದಲ್ಲಿ ಒಬ್ಬ ಆಸಾಮಿಯು ಇದ್ದು ಹೆಸರು ವಿಳಾಸ ಕೇಳಲಾಗಿ ನರಸಿಂಹನಾಯ್ಕ್ ಬಿನ್ ಸೇಕೇ ನಾಯ್ಕ್, 38ವರ್ಷ, ಲಂಬಾಣಿ ಜನಾಂಗ, ಜಿರಾಯ್ತಿ, ಬಾಬೇನಾಯ್ಕನ ತಾಂಡಾ, ಬಿಳ್ಳೂರು ಅಂಚೆ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ  90 ಎಂ.ಎಲ್ ನ 14 ಹೈವಾರ್ಡ್ಸ್  ಚಿಯರ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕೆಟ್ ಗಳು ( 1 ಲೀಟರ್ 260 ಎಂ.ಎಲ್ ಮದ್ಯ, ಅದರ ಬೆಲೆ ಸುಮಾರು 491/- ರೂ), ಒಂದು ಲೀಟರ್ ನ 01 ಖಾಲಿ ವಾಟರ್ ಬಾಟಲ್, 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ 90 ಎಂ.ಎಲ್ ನ 01 ಖಾಲಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ ಟೆಟ್ರಾ ಪಾಕೆಟ್ ಇದ್ದು ನರಸಿಂಹನಾಯ್ಕ್ ರವರನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಮಧ್ಯಾಹ್ನ 3-30 ರಿಂದ ಸಂಜೆ 4-30 ಗಂಟೆಯವರೆಗೂ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಪಂಚನಾಮೆ, ಆರೋಪಿ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.50/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ 26/02/2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಿ.ವಿ ಭರತ್ ಬಿನ್ ಟಿ.ವಿ ಬಚ್ಚೇಗೌಡ, 25 ವರ್ಷ, ವಕ್ಕಲಿಗರು, ಡೆಂಟಿಸ್ಟ್, ವಾಸ-ನಂ 44, 5 ನೇ ಮೈನ್, 7 ನೇ ಬ್ಲಾಕ್, ಬನಗಿರಿ ನಗರ, ಬನಶಂಕರಿ, 3 ನೇ ಹಂತ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಬೆಂಗಳೂರಿನ ನಾಗರಭಾವಿಯಲ್ಲಿರುವ ಕಣ್ವ ಡಯೋಗ್ನೋಸ್ಟಿಕ್ ನಲ್ಲಿ ಡೆಂಟಲ್ ಡಾಕ್ಟರ್ ಆಗಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿರುತ್ತೇನೆ. ತನ್ನ ತಂದೆ ಹಾಗು ತನ್ನ ತಾಯಿಯವರು ಜಂಗಮಕೋಟೆ ಕ್ರಾಸ್ ನಲ್ಲಿರುವ ತಮ್ಮ ಸ್ವಂತ ಮನೆಯಲ್ಲಿ ವಾಸವಾಗಿರುತ್ತಾರೆ. ಇದೇ ಶಿಡ್ಲಘಟ್ಟ ತಾಲ್ಲೂಕು ನಾಗಮಂಗಲ ಗ್ರಾಮದ ಸರ್ವೇ ನಂಬರ್ 173/2, ಸರ್ವೇ ನಂಬರ್ 174/2 ರಲ್ಲಿ ಒಟ್ಟು 2 ಎಕರೆ 36 ಗುಂಟೆ ಜಮೀನು ತನ್ನ ತಾತನಾದ ಲೇಟ್ ಬಿ.ವೆಂಕಟೇಗೌಡ ರವರ ಹೆಸರಿನಲ್ಲಿದ್ದು, ಸದರಿ ಜಮೀನಿನಲ್ಲಿ ತನ್ನ ತಾತನವರು ನೀಲಗಿರಿ ಮರಗಳನ್ನು ಬೆಳೆಸಿದ್ದು, ಸದರಿ ಜಮೀನುಗಳು ಇನ್ನು ತನ್ನ ತಂದೆಯವರ ಅಣ್ಣ-ತಮ್ಮಂದಿರುಗಳಲ್ಲಿ ವಿಭಾಗವಾಗಿರುವುದಿಲ್ಲ. ಹೀಗಿರುವಾಗ ದಿನಾಂಕ 23/02/2021 ರಂದು ಮದ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ತನ್ನ ತಂದೆಯವರಾದ ಟಿ.ವಿ ಬಚ್ಚೇಗೌಡ ರವರು ನೀಲಗಿರಿ ಜಮೀನಿನ ಕಡೆ ಓಡಾಡಿಕೊಂಡು ಬರಲು ಹೋಗಿದ್ದು, ಆ ಸಮಯದಲ್ಲಿ ದೇವನಹಳ್ಳಿ ತಾಲ್ಲೂಕು ಹಿರಿಗೇನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ತನ್ನ ಅತ್ತೆ ಪಾರ್ವತಮ್ಮ ಹಾಗು ಮಾವ ಶಾಮಣ್ಣ.ಎಂ ರವರು ಯಾರೋ ಯಾರೋ ಅಪರಿಚಿತರಿಂದ ನೀಲಗಿರಿ ಮರಗಳನ್ನು ಕಟಾವು ಮಾಡುತ್ತಿದ್ದಾಗ ಆ ಸಮಯದಲ್ಲಿ ತನ್ನ ತಂದೆಯವರು ತನ್ನ ಅತ್ತೆ ಹಾಗು ತನ್ನ ಮಾವನನ್ನು ಕುರಿತು ಈ ಜಮೀನು ಇನ್ನು ಯಾರಿಗೂ ಸಹ ವಿಭಾಗವಾಗಿರುವುದಿಲ್ಲ, ನೀವು ಯಾಕೇ ಮರಗಳನ್ನು ಕಟಾವು ಮಾಡಿಸುತ್ತಿದ್ದೀರಾ ಎಂದು ಕೇಳಿದಾಗ ಈ ಜಮೀನಿನಲ್ಲಿನ ಮರಗಳು ನಮಗೆ ಸೇರ ಬೇಕು ನಾವು ಯಾರಿಗಾದರೂ ಮಾರಾಟ ಮಾಡುತ್ತೇವೆ, ಇದನ್ನು ಕೇಳುವುದಕ್ಕೆ ನೀನು ಯಾರು ಎಂದು ತನ್ನ ತಂದೆಯವರಿಗೆ ಕೆಟ್ಟ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು, ತನ್ನ ಅತ್ತೆ ಪಾರ್ವತಮ್ಮ ರವರು ಕಲ್ಲನ್ನು ಎತ್ತಿಕೊಂಡು ತನ್ನ ತಂದೆಯವರ ಎದೆಯ ಭಾಗದಲ್ಲಿ ಹೊಡೆದು, ಉಗುರುಗಳಿಂದ ಪರಚಿ, ಅಲ್ಲಿಯೇ ಇದ್ದ ನೀಲಗಿರಿ ದೊಣ್ಣೆಯನ್ನು ಎತ್ತಿಕೊಂಡು ತನ್ನ ತಂದೆಯವರ ಬಲಕಾಲಿನ ತೊಡೆಗೆ ಹೊಡೆದು ಊತಗಾಯವನ್ನುಂಟು ಮಾಡಿದಾಗ ತನ್ನ ಮಾವ ಶಾಮಣ್ಣ ರವರು ದೊಣ್ಣೆಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದಾಗ ತನ್ನ ತಂದೆಯವರ ಮೂಗಿನಿಂದ ರಕ್ತ ಬಂದಿರುತ್ತಾರೆ. ಆಗ ಮೇಲ್ಕಂಡವರು ತನ್ನ ತಂದೆಯವರನ್ನು ಕುರಿತು ಇನ್ನೊಂದು ಸಲ ಜಮೀನಿನ ತಂಟೆಗೆ ಬಂದರೆ ನಿನ್ನನ್ನು ಸಾಯಿಸಿ ಬಿಡುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ, ನಂತರ ತನ್ನ ತಂದೆಯವರು ಸ್ಥಳದಲ್ಲಿಯೇ ಮೂರ್ಚೆ ಹೋಗಿದ್ದು, ಆ ಸಮಯದಲ್ಲಿ ಅಲ್ಲೇ ಇದ್ದ ಜಂಗಮಕೋಟೆ ಕ್ರಾಸ್ ನ ವಾಸಿಗಳಾದ ವೇಣುಕುಮಾರ್ ಬಿನ್ ಅಶ್ವಥನಾರಾಯಣ ಶೆಟ್ಟಿ ರವರು ಅಡ್ಡ ಹೋಗಿ ಜಗಳವನ್ನು ಬಿಡಿಸಿ ತನ್ನ ತಂದೆಯವರನ್ನು ಆತನ ಕಾರಿನಲ್ಲಿ ಕರೆದುಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಪಡಿಸಿ, ಇಲ್ಲಿನ ವೈದ್ಯರ ಸಲಹೆಯ ಮೇರೆಗೆ ಇನ್ನು ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಈ ವಿಷಯವನ್ನು ವೇಣುಕುಮಾರ್ ರವರು ತನ್ನ ತಾಯಿಯವರಿಗೆ ಪೋನ್ ಮಾಡಿ ತಿಳಿಸಿದ್ದು, ತನ್ನ ತಾಯಿಯವರು ಮತ್ತೆ ತನಗೆ ಪೋನ್ ಮಾಡಿ ತಿಳಿಸಿದ್ದು, ಕೂಡಲೇ ತಾನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಾಗಿರುತ್ತದೆ. ನಂತರ ತಾನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಿಂದ ಇನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಪೋರ್ಟೀಸ್ ಖಾಸಗೀ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ತನ್ನ ತಂದೆಯವರನ್ನು ಇನ್ನು ಒಳರೋಗಿಯಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು, ತಾನು ತನ್ನ ತಂದೆಯವರ ಆರೈಕೆಯಲ್ಲಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

8. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.19/2021 ಕಲಂ. 379  ಐ.ಪಿ.ಸಿ:-

     ದಿನಾಂಕ:25/02/2021 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿ ಶ್ರೀಮತಿ. ಪ್ರಮೀಳಮ್ಮ ಕೊಂ ಮುನಿರೆಡ್ಡಿ, ಕನ್ನಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ.24.02.2021 ರಂದು ಮದ್ಯಾಹ್ನ ಸುಮಾರು 1.00 ಗಂಟೆಯಲ್ಲಿ ನಮ್ಮೂರಿನಿಂದ ಹೊಸಕೋಟೆ ತಾಲ್ಲೂಕು ತಿಮ್ಮಪ್ಪನಹಳ್ಳಿ ಗ್ರಾಮದ ನಮ್ಮ ತವರು ಮನೆಯಲ್ಲಿ ತಮ್ಮನ ಗೃಹ ಪ್ರವೇಶ ಕಾರ್ಯ ಇದ್ದುದ್ದರಿಂದ ಊರಿಗೆ ಹೋಗಲು ಯಾವುದೋ ಬಸ್ಸಿನಲ್ಲಿ  ಶಿಡ್ಲಘಟ್ಟಕ್ಕೆ ಬಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಇರುವ ಬೇಕರಿಯಲ್ಲಿ ತಿಂಡಿಗಳನ್ನು ತೆಗೆದುಕೊಳ್ಳಲು ಹೋಗಿ ಮದ್ಯಾಹ್ನ ಸುಮಾರು 2.00 ಗಂಟೆಯಲ್ಲಿ ವ್ಯಾಪಾರ ಮಾಡಿ ಹಣ ಕೊಡಲು ಬ್ಯಾಗಿನಲ್ಲಿದ್ದ ಪರ್ಸುನಲ್ಲಿ ಹಣ ತೆಗೆದುಕೊಡಲು ಬ್ಯಾಗಿನಲ್ಲಿ ನೋಡಿದಾಗ ಬ್ಯಾಗಿನಲ್ಲಿಟ್ಟಿದ್ದ ಪರ್ಸನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಪರ್ಸುನಲ್ಲಿ ಬಂಗಾರದ ಓಲೆ ಕಲ್ಲಿನ ಮಾಟಿ, ಒಂದು ಉಂಗುರ, ರೋಲ್ಡ್ ಗೋಲ್ಡ್ ನಕ್ಲೀಸ್, ಒಂದು ಕೀ ಪ್ಯಾಡ್ ಮೊಬೈಲ್ ಮತ್ತು 500/-ರೂ ನಗದು ಹಣ ಇದ್ದು, ಬಂಗಾರದ ಓಲೆ ಕಲ್ಲಿನ ಮಾಟಿ, ಒಂದು ಉಂಗುರ ಸುಮಾರು 55,000/-ರೂ, ಮೊಬೈಲ್ ಪೋನ್ 2000/-ರೂ, ರೋಲ್ಡ್ ಗೋಲ್ಡ್ ನಕ್ಲೀಸ್ 500/-ರೂ ಬೆಲೆ ಬಾಳುವುದಾಗಿದ್ದು, ಕಳ್ಳತನ ಮಾಡಿದ ತಪ್ಪಿತಸ್ಥರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ ಕಳುವುವಾದ ಮಾಲುಗಳನ್ನು ವಾಪಸ್ಸು ಕೊಡಿಸಿಕೊಡಲು ಈ ದಿನ ತಡವಾಗಿ ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.   

ಇತ್ತೀಚಿನ ನವೀಕರಣ​ : 26-02-2021 05:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080