Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.314/2021 ಕಲಂ. 379 ಐ.ಪಿ.ಸಿ:-

     ದಿನಾಂಕ: 24/09/2021 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮುನಿರಾಜು ನಾಯ್ಡು ಪಿ ಬಿನ್ ಮುನಿಸ್ವಾಮಿ ನಾಯ್ಡು 42ವರ್ಷ, ಕಮ್ಮ ಜನಾಂಗ, ವ್ಯಾಪಾರ, ವಾಸ: ಗಂಗಮ್ಮ ಗುಡಿ ರಸ್ತೆ, 17ನೇ ವಾರ್ಡ್ ಬಾಗೇಪಲ್ಲಿ ಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ದಿನಾಂಕ: 16/06/2021 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ನನ್ನ ಬಾಬತ್ತು ಕೆಎ 40 ಇಡಿ 8669 ನೋಂದಣಿ ಸಂಖ್ಯೆಯ ಟಿವಿಎಸ್ ಎಕ್ಸ್ ಎಲ್  ದ್ವಿಚಕ್ರವಾಹನವನ್ನು  ಗಂಗಮ್ಮಗುಡಿ ರಸ್ತೆಯಲ್ಲಿರುವ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದು ನಂತರ ನಾನು ಎಂದಿನಂತೆ ದಿನಾಂಕ:17/06/2021 ರಂದು ಬೆಳಿಗ್ಗೆ 6-00  ಗಂಟೆಗೆ ಎದ್ದು ಹೊರಗೆ ಬಂದು ನೋಡಲಾಗಿ ಸ್ಥಳದಲ್ಲಿ ಸುಮಾರು 30 ಸಾವಿರ ಬೆಲೆ ಬಾಳುವ  ಕೆಎ 40 ಇಡಿ 8669 ನೋಂದಣಿ ಸಂಖ್ಯೆಯ ಟಿವಿಎಸ್ ಎಕ್ಸ್ ಎಲ್  ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ನಂತರ ನಾನು ಅಕ್ಕಪಕ್ಕದಲ್ಲಿ ಹಾಗೂ ಇದುವರೆಗೂ ಎಲ್ಲಾ ಕಡೆ ಹುಡುಕಾಡಲಾಗಿ   ಪತ್ತೆಯಾಗದ ಕಾರಣ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು. ಆದ್ದರಿಂದ ನಮ್ಮ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆಮಾಡಿ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ತಮ್ಮಲ್ಲಿ ಕೋರಿ ನೀಡಿದ ದೂರು.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.315/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ 24/09/2021 ರಂದು ರಾತ್ರಿ 7-00 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೇಮೊ ಪಡೆದುಕೊಂಡು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಗಂಗನ್ನ ಬಿನ್ ಲೇಟ್ ಪೆದ್ದ ಸತ್ಯನ್ನ, 60 ವರ್ಷ, ವಡ್ಡಿ ಜನಾಂಗ, ಕೊಲಿಕೆಲಸ, ಸೋಮರಾಜಕುಂಟೆ ಗ್ರಾಮ, ನಂಬಲಪೂಲಕುಂಟೆ ಮಂಡಲಂ ಕದಿರಿ ತಾಲ್ಲೂಕು ಅನಂತಪುರಂ ಜಿಲ್ಲೆ, ರವರು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ದಿನಾಂಕ 24/09/2021 ರಂದು ನನ್ನ ಹೆಂಡತಿ ಕೊಂಡಮ್ಮ ರವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಬೆಂಗಳೂರಿನ ಆಸ್ಪತ್ರೆಗೆ ಹೋಗಲು ಕದಿರಿಯಿಂದ AP-02-AJ-5544 ಟಾಟಾ ವಿಸ್ತಾ ಕಾರಿನಲ್ಲಿ ಸಂಜೆ 6-00 ಗಂಟೆ ಸಮಯದಲ್ಲಿ  ಬಾಗೇಪಲ್ಲಿ ತಾಲ್ಲೂಕು ಗೂಳೂರು ಗ್ರಾಮದ ಬಳಿ ಮಾರ್ಗಾನುಕುಂಟೆ ಕ್ರಾಸ್ ಬಳಿ ಬರುವಾಗ ಎದುರಿನಿಂದ ಅಂದರೆ ಗೂಳೂರು ಕಡೆಯಿಂದ ಬಂದ AP-02-B W-1558  ರೇನಾಲ್ಟ್ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಅಳಿಯನ ಬಾಬತ್ತು A.P-02-AJ-5544 ಟಾಟಾ ವಿಸ್ಟಾ ಕಾರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಕಾರಿನ ಹಿಂಬಾಗದಲ್ಲಿ ಕುಳಿತ್ತಿದ್ದ ನನ್ನ ತಲೆಗೆ ರಕ್ತಗಾಯವಾಗಿದ್ದು ಎಡಗೈಗೆ ಮೂಗೇಟು ಉಂಟಾಗಿರುತ್ತೆ. ಕಾರಿನಲ್ಲಿದ್ದ ನನ್ನ ಅಳಿಯ,  ಹೆಂಡತಿ,  ಮತ್ತು ಚಿಕ್ಕಅಳಿಯನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯವಾಗಿದ್ದ ನನ್ನನ್ನು ನನ್ನ ಅಳಿಯಂದಿರು ಯಾವುದೋ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿರುತ್ತೇನೆ. ಆದ್ದರಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ A.PI-02-B W – 1558 ಕಾರಿನ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತದೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.421/2021 ಕಲಂ. 379 ಐ.ಪಿ.ಸಿ:-

     ದಿನಾಂಕ: 24/09/2021 ರಂದು ಸಂಜೆ 6.00 ಗಂಟೆಗೆ ಪಿರ್ಯಾಧಿದಾರರಾದ ಅಂಬರೀಷ ಬಿನ್ ನಾರಾಯಣಸ್ವಾಮಿ, 28 ವರ್ಷ, ಇಂಜಿನಿಯರ್ ಕೆಲಸ, ಬೆಸ್ತರ ಜನಾಂಗ, ಬಂಡಪಲ್ಲಿ ಗ್ರಾಮ, ಶ್ರೀನಿವಾಸಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು 5 ವರ್ಷಗಳಿಂದ ಚಿಂತಾಮಣಿ ತಾಲ್ಲೂಕು, ಮಸ್ತೇನಹಳ್ಳಿ ಗ್ರಾಮದ ಬಳಿ ಇರುವ ಶ್ಯಾಮ್ ಅರ್ಥ ಮೂವರ್ಸ್ ಮತ್ತು ಕನ್ಸ್ ಸ್ಟ್ರಕ್ಷನ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುತ್ತೇನೆ. ತಮಗೆ ಕಂಪನಿಯಿಂದ ಈಗ್ಗೆ ಸುಮಾರು 4 ವರ್ಷಗಳ ಹಿಂದೆ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಉಪಯೋಗಕ್ಕಾಗಿ ಕೆಎ-19 ಇಆರ್-1151 ಸಂಖ್ಯೆಯ ಬಜಾಜ್ ಸಿಟಿ 100 ಅದರ ಚಾರ್ಸೀಸ್ ನಂ MD2A18AZ3FWB00643, ಇಂಜಿನ್ ನಂ DUZWFB91489 ದ್ವಿ-ಚಕ್ರ ವಾಹನವನ್ನು ಕೊಟ್ಟಿದ್ದು ಸದರಿ ವಾಹನಕ್ಕೆ ಪೆಟ್ರೋಲ್ ಸಹ ಕಂಪನಿಯಿಂದಲೇ ಭರಿಸುತ್ತಿತ್ತು. ಇದು ಕಂಪನಿಯ ಮಾಲೀಕರಾದ ಕೆ.ಬಿ ಶರೀಪ್ ಬಿನ್ ಬಾವ, ಸೂರತ್ಕಲ್, ಮಂಗಳೂರು ರವರ ಹೆಸರಿನಲ್ಲಿರುತ್ತದೆ. ಈಗಿರುವಲ್ಲಿ ದಿನಾಂಕ: 09/09/2021 ರಂದು ಬೆಳಿಗ್ಗೆ 09.00 ಗಂಟೆಗೆ ಮೇಲ್ಕಂಡ ನಂಬರಿನ ದ್ವಿ ಚಕ್ರ ವಾಹನವನ್ನು ಸೈಟ್ ನಂ 1 ರಲ್ಲಿ ನಿಲ್ಲಿಸಿ ಎಲ್ಲರೂ ಅವರರವರ ಕೆಲಸಗಳನ್ನು ಮಾಡಿಕೊಂಡು ಸಂಜೆ ಸುಮಾರು 6.00 ಗಂಟೆಗೆ ವಾಪಸ್ಸು ಬಂದು ನೋಡಲಾಗಿ ವಾಹನ ಕಾಣಿಸಲಿಲ್ಲ. ಈ ಬಗ್ಗೆ ಮೇಲ್ವಿಚಾರಕರಿಗೆ ವಿಷಯ ತಿಳಿಸಿದೆ. ಅಲ್ಲಿದ್ದ ಕಾರ್ಮಿಕರನ್ನು ಕೇಳಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ಇದೂವರೆವಿಗೂ ನಾವೆಲ್ಲರೂ ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲಿಯೂ ದ್ವಿ-ಚಕ್ರ ವಾಹನ ಪತ್ತೆಯಾಗಿರುವುದಿಲ್ಲ. ಕೆಎ-19 ಇಆರ್-1151 ಸಂಖ್ಯೆಯ ಬಜಾಜ್ ಸಿಟಿ 100 ದ್ವಿ-ಚಕ್ರ ವಾಹನವು ದಿನಾಂಕ: 09/09/2021 ರಂದು ಬೆಳಿಗ್ಗೆ 09.00 ಗಂಟೆಯಿಂದ ಸಂಜೆ 6.00 ಗಂಟೆಯ ಮದ್ಯೆ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ದ್ವಿ-ಚಕ್ರ ವಾಹನದ ಬೆಲೆಯು ಸುಮಾರು 20 ಸಾವಿರ ರೂ ಬೆಲೆ ಬಾಳಬಹುದು. ಮೇಲ್ಕಂಡ ತಮ್ಮ ಕಂಪನಿಯ ಹೆಸರಿನಲ್ಲಿರುವ ಕೆಎ-19 ಇಆರ್-1151 ಸಂಖ್ಯೆಯ ಬಜಾಜ್ ಸಿಟಿ 100 ದ್ವಿ-ಚಕ್ರ ವಾಹನವನ್ನು ಪತ್ತೆ ಮಾಡಿ ಕಳ್ಳರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 

4. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.136/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:24/09/2021 ರಂದು  ರಾತ್ರಿ 7-30 ಗಂಟೆಗೆ ಪಿ.ಎಸ್,ಐರವರಾದ ಶ್ರಿ ಟಿ.ಎನ್ ಪಾಪಣ್ಣ ರವರು ಮಾಲು, 4 ಜನ  ಆಸಾಮಿಗಳು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:24/09/2021 ರಂದು ತಾನು ಮತ್ತು ಜೀಪ್ ಚಾಲಕನಾಗಿ ಎ.ಪಿ.ಸಿ94 ಬೈರಪ್ಪ ರವರು ಮತ್ತು ಠಾಣೆಯ ಸಿಬ್ಬಂದಿಯಾದ  ಸಿ.ಹೆಚ್.ಸಿ 53 ಲೋಕೇಶ್, ಸಿ,ಹೆಚ್,ಸಿ 186 ನರಸಿಂಹಯ್ಯ, ಸಿ,ಪಿ,ಸಿ 91 ಮಂಜುನಾಥ,  ಸಿ.ಪಿ.ಸಿ 09 ನಾರಾಯಣಸ್ವಾಮಿ, ಸಿ,ಪಿ,ಸಿ 451 ರಾಮಾಂಜಿನೇಯ, ಸಿ,ಪಿ,ಸಿ 196 ದೇವರಾಜ ಬಡಿಗೇರ ರವರುಗಳೊಂದಿಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ಸರಹದ್ದು  ಕುದುಪಕುಂಟೆ, ತಿಮ್ಮನಾಯಕನಹಳ್ಳಿ, ದಡಂಘಟ್ಟ, ಗೊರ್ಲಗುಮ್ಮನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ 16-00 ಗಂಟೆಯ ಸಮಯದಲ್ಲಿ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ಸರಹದ್ದು ಮರಿಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ನನಗೆ ಮರಿಹಳ್ಳಿ ಗ್ರಾಮದ ತಿರುಮಲಸ್ವಾಮಿ ದೇವಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವು ಆಸಾಮಿಗಳು ಗುಂಪು ಕಟ್ಟಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಬಾತ್ಮಿ ಬಂದಿದ್ದು, ಸದರಿ ಆಸಾಮಿಗಳ ಮೇಲೆ ದಾಳಿ ಮಾಡಿ ಹಾಗೂ ಕಾನೂನು ಕ್ರಮ ಕೈಗೊಳ್ಳಲು ಠಾಣೆಯ ಠಾಣಾಧಿಕಾರಿಯಾದ ಸಿ,ಹೆಚ್,ಸಿ 217 ಗೋಪಾಲ್ ಆದ ನಿಮಗೆ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಳ್ಳಲು ಮಾಹಿತಿಯನ್ನು ತಿಳಿಸಿ ನಂತರ ನೀವು ಸಂಜೆ 17-40 ಗಂಟೆಗೆ  ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡಿತ್ತೇವೆಂದು ತಿಳಿಸಿದ  ನಂತರ ಸಂಜೆ 17-45 ಗಂಟೆಗೆ  ಮರಿಹಳ್ಳಿ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಸದರಿ ಆಸಾಮಿಗಳ ಮೇಲೆ ದಾಳಿ ಮಾಡುವ ಮಾಹಿತಿಯನ್ನು ತಿಳಿಸಿ ಪಂಚರಾಗಿರಲು ಕೋರಿದರ ಮೇರೆಗೆ ಪಂಚರು ಒಪ್ಪಿರುತ್ತಾರೆ. ನಂತರ ನಾನು, ಪಂಚರು  ಮತ್ತು ಸಿಬ್ಬಂದಿಯವರುಗಳು ನಡೆದುಕೊಂಡು ಮರಿಹಳ್ಳಿ ಗ್ರಾಮದ ತಿರುಮಲಸ್ವಾಮಿ ದೇವಸ್ಥಾನದ  ಬಳಿ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವು ಆಸಾಮಿಗಳು ದೇವಾಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ವೃತ್ತಾಕಾರವಾಗಿ ಕುಳಿತುಕೊಂಡು ಒಬ್ಬ ಆಸಾಮಿಯು ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದು ಮತ್ತೊಬ್ಬ ಆಸಾಮಿಯು ಅಂದರ್ ಕಡೆ 100 ರೂ ಎಂತಲೂ ಮತ್ತೊಬ್ಬ ಆಸಾಮಿಯ ಬಾಹರ್ ಕಡೆ 100 ರೂ ಎಂತಲೂ, ಇನ್ನುಳಿದ ಆಸಾಮಿಗಳು ಸಹ ಅಂದರ್-ಬಾಹರ್ ಎಂದು ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟವಾಡುತ್ತಿರುವುದು ಖಚಿತವಾದ ಮೇಲೆ ಸದರಿ ಆಸಾಮಿಗಳನ್ನು ಸುತ್ತುವರೆದ ನಾವು ಎಲ್ಲಿಯೂ ಓಡಬಾರದೆಂದು ಎಚ್ಚರಿಸಿದರು ಸಹ  ಕೆಲವು ಆಸಾಮಿಗಳು ಮರಿಹಳ್ಳಿ ಗ್ರಾಮದ ಒಳಗೆ ಓಡಿ ಹೋದರು ಸದರಿ ಆಸಾಮಿಗಳ ಪೈಕಿ 04 ಜನರನ್ನು ವಶಕ್ಕೆ ಪಡೆದು ಅವರ ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ 01) ಅಂಬರೀಶ್ ಬಿನ್ ಯಾಮರ ಪಿಲ್ಲಪ್ಪ, 20 ವರ್ಷ, ವಿಧ್ಯಾರ್ಥಿ, ನಾಯಕರು, ವಾಸ: ಮರಿಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:9606663806  (02) ರಾಜ ಶೇಖರ್ ಬಿನ್ ಮುನಿಸ್ವಾಮಿ,24 ವರ್ಷ, ಕೂಲಿ ಕೆಲಸ, ನಾಯಕರು, ವಾಸ: ಮರಿಹಳ್ಳಿ ಗ್ರಾಮ, ಶಿಡ್ಲಘಟ್ಟ  ತಾಲ್ಲೂಕು, (03) ನವೀನ್ ಬಿನ್ ಮುನಿಸ್ವಾಮಿ, 28 ವರ್ಷ, ನಾಯಕರು, ಜಿರಾಯ್ತಿ, ವಾಸ: ಪಲಚೆರ್ಲು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:7338130947  (04) ವೆಂಕಟೇಶ್ ಬಿನ್ ನ್ಯಾತಪ್ಪ, 55 ವರ್ಷ, ನಾಯಕರು, ಗಾರೆ ಕೆಲಸ, ವಾಸ: ಮರಿಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:8971814129 ಎಂತಲೂ ನಂತರ ಓಡಿ ಹೋದ ಆಸಾಮಿಗಳ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ (05) ಹರೀಶ್ ಬಿನ್ ಲೇಟ್ ಚಿನ್ನಗಂಗಪ್ಪ, 31 ವರ್ಷ,  ಗೊಲ್ಲರು, ಜಿರಾಯ್ತಿ, ವಾಸ: ಪಲಿಚರ್ಲು  ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:8197083382 (06) ಮಂಜುನಾಥ @ ಬುಡ್ಡು ಬಿನ್ ಬುಡ್ಡಪ್ಪ, 22 ವರ್ಷ, ಕುರುಬರು, ವಾಸ: ಮುಮ್ಮನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:8105265137 (07) ಸಂದೀಪ್ ಬಿನ್  ವೆಂಕಟಸ್ವಾಮಿ, 20 ವರ್ಷ, ವ್ಯವಸಾಯ, ನಾಯಕರು, ವಾಸ: ಮರಿಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು  (08) ಮಂಜು ಬಿನ್ ಶ್ರೀನಿವಾಸ, 32 ವರ್ಷ, ಅಗಸರು, ಜಿರಾಯ್ತಿ, ವಾಸ: ಅಂಜನಾಪುರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:8073588970 (09) ಲೋಕೇಶ್ ಬಿನ್  ನಾರಾಯಣಪ್ಪ, 35 ವರ್ಷ, ನಾಯಕರು,  ಜಿರಾಯ್ತ, ವಾಸ:ಮರಿಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು (10) ನಾಗರಾಜು @ ನಾಗಪ್ಪ ಬಿನ್ ವೆಂಕಟರಾಯಪ್ಪ, 36 ವರ್ಷ, ನಾಯಕರು, ಜಿರಾಯ್ತಿ, ವಾಸ: ಮರಿಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು (11) ಸತೀಶ್ ಬಿನ್ ದಾಸಪ್ಪ, 35 ವರ್ಷ, ಜಿರಾಯ್ತಿ, ವಾಸ: ಮರಿಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, (12) ಹರೀಶ್ ಬಿನ್ ಯಾಮರ ಪಿಲ್ಲಪ್ಪ, 22 ವರ್ಷ, ಜಿರಾಯ್ತಿ, ನಾಯಕರು, ವಾಸ: ಮರಿಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು (13) ಶ್ರೀನಿವಾಸ ಬಿನ್ ದ್ಯಾವಪ್ಪ, 40 ವರ್ಷ, ಜಿರಾಯ್ತಿ, ನಾಯಕರು, ವಾಸ: ಮರಿಹಳ್ಳಿ ಗ್ರಾಮ,ಶಿಡ್ಲಘಟ್ಟ ತಾಲ್ಲೂಕು (14) ವೆಂಕಟರೆಡ್ಡಿ ಬಿನ್ ನರಸಿಂಹಪ್ಪ, 30 ವರ್ಷ,  ನಾಯಕರು, ಜಿರಾಯ್ತಿ, ವಾಸ:ರಾಚನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:9741516043 (15) ಸುಬ್ರಮಣಿ ಬಿನ್ ಚಿಕ್ಕವೆಂಕಟಪ್ಪ, ಆದಿ ದ್ರಾವಿಡ, ಜನಾಂಗ, ಜಿರಾಯ್ತಿ, ವಾಸ: ರಾಚನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು  ಪೋನ  ನಂಬರ್:9980783869 (16) ನಾರಾಯಣಸ್ವಾಮಿ ಬಿನ್ ಕೃಷ್ಣಪ್ಪ, 30 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ಮುಮ್ಮನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರುಗಳು ದೇವಾಲಯದ ಮುಂಭಾಗದಿಂದ ಮರಿಹಳ್ಳಿ ಗ್ರಾಮ ಒಳಗೆ ಓಡಿ ಹೋದ ಆಸಾಮಿಗಳೆಂದು  ತಿಳಿದು ಬಂದಿರುತ್ತೆ.  ನಂತರ ವಶಕ್ಕೆ ಪಡೆದುಕೊಂಡ ಆಸಾಮಿಗಳಿಗೆ ಇಸ್ಪೀಟ್ ಜೂಜಾಟವಾಡುವ ಬಗ್ಗೆ ನಿಮ್ಮ ಬಳಿ ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಸದರಿ ಆಸಾಮಿಗಳು ನಾವು ಯಾವುದೇ ಪರವಾನಿಗೆ ಪಡೆದಿರುವುದಿಲ್ಲವೆಂದು ತಿಳಿಸಿರುತ್ತಾರೆ. ನಂತರ ಪ್ಲಾಸ್ಟಿಕ್ ಪೇಪರ್  ಮೇಲೆ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ ಇಸ್ಪೀಟ್ ಎಲೆಗಳನ್ನು ಎಣಿಕೆ ಮಾಡಲಾಗಿ ಇಸ್ಪೀಟ್ ಎಲೆಗಳು 52 ಇದ್ದು, ಅಲ್ಲಿಯೇ ಇದ್ದ ಹಣವನ್ನು ಎಣಿಕೆ ಮಾಡಲಾಗಿ 2650-00 (ಎರಡು ಸಾವಿರದ ಆರು ನೂರ ಐವತ್ತು) ರೂಗಳು ಇದ್ದು, ಸದರಿ  ನಗದು ಹಣವನ್ನು, 52 ಇಸ್ಪೀಟ್ ಎಲೆಗಳನ್ನು ಹಾಗೂ ಪ್ಲಾಸ್ಟಿಕ್ ಪೇಪರ್ ನ್ನು ಮತ್ತು ಆಸಾಮಿಗಳು ದೇವಾಲಯದ ಬಳಿ ಆರೋಪಿಗಳು ನಿಲ್ಲಿಸಿದ್ದ ನೊಂದಣಿ ಸಂಖ್ಯೆ ಇಲ್ಲದ ಒಂದು ದ್ವಿ ಚಕ್ರ ವಾಹನ ಅದರ ಚಾಸಿಸ್ ನಂಬರ್:MBLHAW129M5H ಮತ್ತು ಇಂಜನ್ ನಂಬರ್: HA11EYM5H62135 ಸ್ಪ್ಲೆಂಡರ್  ಪ್ಲಸ್  ದ್ವಿ ಚಕ್ರ ವಾಹನ ಹಾಗೂ KA-40-ET-7739 ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನವನ್ನು ಸಂಜೆ 17-50 ಗಂಟೆಯಿಂದ 18-50 ಗಂಟೆಯ ವರೆಗೆ ದಾಳಿ ಅಮಾನತ್ತು ಪಂಚನಾಮೆಯ ಮೂಲಕ ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡ ಮಾಲುಗಳು, ಪಂಚನಾಮೆ, ವಶಕ್ಕೆ ಪಡೆದ 4 ಜನ ಆಸಾಮಿಗಳೊಂದಿಗೆ ಠಾಣೆಗೆ ಹಾಜರಾಗಿ ಠಾಣಾಧಿಕಾರಿಗಳ ವಶಕ್ಕೆ ನೀಡಿ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:136/2021 ಕಲಂ:87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

5. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.153/2021 ಕಲಂ. 32,34,36(B) ಕೆ.ಇ ಆಕ್ಟ್:-

     ದಿ:24/09/2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಶ್ರೀಮತಿ ಸರಸ್ವತಮ್ಮ. ಮ.ಪಿ.ಎಸ್.ಐ. ಡಿ.ಸಿ.ಬಿ- ಸಿ.ಇ.ಎನ್ ಪೊಲೀಸ್ ಠಾಣೆ ರವರು  ಠಾಣೆ ಹಾಜರಾಗಿ ನೀಡಿದ ವರದಿಯ ಸಾರಾಮಶವೆನೆಂದರೆ ದಿ:24-09-2021 ರಂದು ತಾನು ಮತ್ತು ತಮ್ಮ ಠಾಣೆಯ ಸಿಬ್ಬಂದಿಯಾದ ಎಚ್.ಸಿ.80-ಕೃಷ್ಣಪ್ಪ, ಪಿ.ಸಿ.152 ಜಯಣ್ಣ ಹಾಗು ಜೀಪ್ ಚಾಲಕರಾದ ಎ.ಪಿ.ಸಿ- 138  ಮಹಬೂಬ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ-ಕೆ.ಎ.40-ಜಿ-270 ವಾಹನದಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆಗೌರಿಬಿದನೂರು ಪುರದ ಮಧುಗಿರಿ ಸರ್ಕಲ್ನಲ್ಲಿ ಗಸ್ತಿನಲ್ಲಿದ್ದಾಗ  ಬೆಳಿಗ್ಗೆ 10-30  ಗಂಟೆಗೆ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಗೌರಿಬಿದನೂರು ನಗರದ ಹಿಂದೂಪುರ –ಬೆಂಗಳೂರು ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ಒಂದು ಬಿಳಿ ಬಣ್ಣದ ಸ್ಕೂಟಿಯಲ್ಲಿ ಆಕ್ರಮವಾಗಿ ಮದ್ಯವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ಮಾಹಿತಿ ಬಂದಿದ್ದು. ಪಂಚರನ್ನು ಬರ ಮಾಡಿಕೊಂಡು ಪಂಚರ ಸಮಕ್ಷಮ ಬೆಳಿಗ್ಗೆ10-45 ಗಂಟೆಗೆ ಮಾಧವನಗರದ  ಅರ್ ಎಸ್ ಎಸ್  ಫ್ಯಾಷನ್ಸ್ ಬಟ್ಟೆ ಆಂಗಡಿ ಮುಂಭಾಗಕ್ಕೆ ಬಂದು ದ್ವಿಚಕ್ರ ವಾಹನವನ್ನು ನಿಲ್ಲಿಸಿ ವಿಚಾರಣೆ  ಮಾಡಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ  ವೆಂಕಟೇಶ ಬಿನ್  ಗಂಗಪ್ಪ23 ವರ್ಷ ಉಪ್ಪಾರರು, ಬೆಂಗಳೂರು ಲಿಕ್ಕರಸ್ ನಲ್ಲಿ ಕೆಲಸ , ಹುಣಸೇಕುಂಟೆ ಗ್ರಾಮ ಹೊಸೂರು ಹೋಬಳಿ ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ನಂತರ  ಚೀಲವನ್ನು   ಪರಿಶೀಲಿಸಲಾಗಿ  ಚೀಲದಲ್ಲಿ   ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ ಕಂಪನಿಯ 90 ಎಮ್ ಎಲ್ ನ 72 ಟೆಟ್ರಾ ಪಾಕೆಟ್ ಗಳು ಇದ್ದು ,  ಅದರಲ್ಲಿಯೇ  ಒರಿಜಿನಲ್ ಚಾಯಸ್ ಡಿಲೆಕ್ಸ್ ವಿಸ್ಕಿ ಕಂಪನಿಯ  90 ಎಂ ಎಲ್ ನ   24 ಟೆಟ್ರಾ ಪಾಕೆಟ್ ಗಳು ಇದ್ದು.  ಇದರ ದ್ರವ್ಯ ಪ್ರಮಾಣ 8 ಲೀಟರ್ 640 ಎಮ್.ಎಲ್ ಇದ್ದು ಇದರ ಒಟ್ಟು ಬೆಲೆ 3372/ ರೂ ಗಳಾಗಿರುತ್ತೆ. ಸದರಿ ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಗಿ   ಅದು ಒಂದು ಬಿಳಿ ಬಣ್ಣದ ಕೆ.ಎ. 40-ಇ.ಡಿ-7079 ಹೋಂಡಾ ಅಕ್ಟಿವ್  5 ಜಿ ದ್ವಿಚಕ್ರ ವಾಹನವಾಗಿರುತ್ತೆ.  ಮಧ್ಯವನ್ನು ಬೆಂಗಳೂರು ಲಿಕ್ಕರ್ಸ ನಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ. ಸದರಿ ಮಧ್ಯವನ್ನು ಮಾರಾಟ ಮಾಡಲು ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಮೇಲ್ಖಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿರುತ್ತೆ.  ಸ್ಥಳದಲ್ಲಿ ಸಿಕ್ಕಿಬಿದ್ದ ಆರೋಪಿ, ಮಾಲನ್ನು ಅಸಲು ಪಂಚನಾಮೆಯೊಂದಿಗೆ   ನಿಮ್ಮ ವಶಕ್ಕೆ  ನೀಡುತ್ತಿದ್ದು, ಸದರಿ ಆರೋಪಿ ಮತ್ತು ಬೆಂಗಳೂರು ಲಿಕ್ಕರ್ಸ ಮಾಲೀಕರು  ಹಾಗೂ ಕ್ಯಾಷಿಯರ್   ವಿರುದ್ದ   ಮುಂದಿನ ಕಾನೂನು ಕ್ರಮ ಜರುಗಿಸಲು  ಕೋರಿ ನೀಡಿದ ದೂರಿನ ವರದಿಯನ್ನು ಪಡೆದುಕೊಂಡು ದಾಖಲು ಮಾಡಿಕೊಂಡಿರುತ್ತೆ.

 

6. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.176/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:24/09/2021 ರಂದು ಠಾಣಾ ಹೆಚ್.ಸಿ.155 ಪ್ರಸನ್ನಸ್ವಾಮಿ ರವರು ಮಾಲು, ಆರೋಪಿ ಮತ್ತು ಮಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 24/09/2021 ರಂದು ಮದ್ಯಾಹ್ನ 2-00 ಗಂಟೆಯ ಸಮಯದಲ್ಲಿ  ನಾನು ಮತ್ತು ಹೆಚ್.ಸಿ.93 ಶಿವಶಂಕರ್ ಹಾಗೂ ಪಿ.ಸಿ-336 ಉಮೇಶ್ ಬಿ ಶಿರಶ್ಯಾಡ್ ರವರೊಂದಿಗೆ ತೊಂಡೇಬಾವಿ ಕಡೆಗಳಲ್ಲಿ ಗಸ್ತಿನಲ್ಲಿ ಇರುವಾಗ ಬಂದ ಮಾಹಿತಿ ಏನೇಂದರೆ ಅಲ್ಲೀಪುರ ಗ್ರಾಮದ ನರಸಿಂಹಮೂರ್ತಿ ಬಿನ್ ವೆಂಕಟರಾಯಪ್ಪ, ರವರು ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಜೊತೆಯಲ್ಲಿದ್ದ ಹೆಚ್.ಸಿ.93 ಶಿವಶಂಕರ್, ಪಿ.ಸಿ. 336 ಉಮೇಶ್ ಬಿ ಶಿರಶ್ಯಾಡ್  ರವರು ಹಾಗೂ ಪಂಚರೊಂದಿಗೆ  ಮದ್ಯಾಹ್ನ 2-30  ಗಂಟೆಯ ಸಮಯಕ್ಕೆ  ಅಲ್ಲೀಪುರ ಗ್ರಾಮದ ನರಸಿಂಹಮೂರ್ತಿ ಬಿನ್ ವೆಂಕಟರಾಯಪ್ಪ ರವರ ಮನೆಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ನರಸಿಂಹಮೂರ್ತಿ ಬಿನ್ ವೆಂಕಟರಾಯಪ್ಪ. 44 ವರ್ಷ, ಒಕ್ಕಲಿಗರು,  ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಅಲ್ಲೀಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 10  ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು 3). 2 ಪ್ಲಾಸ್ಟಿಕ್  ಲೋಟ ಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು ಪಂಚನಾಮೆಯ ಮೂಲಕ  ಮದ್ಯಾಹ್ನ 2-45 ಗಂಟೆಯಿಂದ 3-45 ಗಂಟೆಯವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 380/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ನರಸಿಂಹಮೂರ್ತಿ ಬಿನ್ ವೆಂಕಟರಾಯಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 

7. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.115/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:24-09-2021 ರಂದು ಸಂಜೆ 5-30 ಗಂಟೆಗೆ ಸಾಹೇಬರು ದಾಳಿಯಿಂದ ಠಾಣೆಗೆ ಆರೋಫಿ ಅಮಾನತ್ತು ಪಡಿಸಿದ್ದ ಮಾಲು ಹಾಗೂ ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 24-09-2021 ಸಂಜೆ 4-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಕಡಶಿಗೇನಹಳ್ಳಿ ಗ್ರಾಮದ ಪುಜಕಾಂತ ಬಿನ್ ಮುನಿವೆಂಕಟಪ್ಪ ತನ್ನ ಅಂಗಡಿಯ ಮುಂಭಾಗದಲ್ಲಿ ಅಕ್ರಮವಾಗಿ ಗಿರಾಕಿಗಳಿಗೆ ಸ್ಥಳದಲ್ಲೇ ಮದ್ಯವನ್ನು ಸೇವಿಸಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯನ್ನು ಅನುಸರಿಸಿ ಸರ್ಕಾರಿ ಪೊಲೀಸ್ ಜೀಪ್ KA-40-G-1555 ರಲ್ಲಿ ಸಿಬ್ಬಂದಿಯಾದ ಪಿಸಿ-413 ಶೇಖಪ್ಪ ಮತ್ತು ಪಿಸಿ-435 ವೆಂಕಟಶಿವ್  ರವರೊಂದಿಗೆ ಸದರಿ ಸ್ಥಳದ ಮೇಲೆ ಧಾಳಿ ಮಾಡಿ ಕ್ರಮ ಜರುಗಿಸಲು ಕೊಂಡೇನಹಳ್ಳಿ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಅವರ ಸಮಕ್ಷಮ  ಸಂಜೆ 4-30 ಗಂಟೆಯಲ್ಲಿ ಕಡಶಿಗೇನಹಳ್ಳಿ ಗ್ರಾಮದಲ್ಲಿನ ಪುಜಕಾಂತ ರವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿ  ಪರಾರಿಯಾಗಿ ಹೋದರು. ಇವನ ಅಂಗಡಿಯ ಬಳಿ ಖಾಲಿ ಮದ್ಯದ ಟೆಟ್ರಾ ಪ್ಯಾಕೇಟುಗಳು ಹಾಗೂ ಖಾಲಿ ಲೋಟಗಳು ಇದ್ದವು, ಮದ್ಯ ಸೇವನೆ ಸ್ಥಳವಾಕಾಶ ಮಾಡಿಕೊಟ್ಟ ಹೆಸರು ವಿಳಾಸವನ್ನು ಕೇಳಲಾಗಿ ಪುಜಕಾಂತ ಬಿನ್ ಮುನಿವೆಂಕಟಪ್ಪ, 50 ವರ್ಷ, ಗೊಲ್ಲ ಜನಾಂಗ, ಕೂಲಿ ಕೆಲಸ, ಕಡಶಿಗೇನಹಳ್ಳಿ ಗ್ರಾಮ,  ನಂದಿ ಹೋಬಳಿ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದನು. ಅಂಗಡಿಯ ಮುಂಬಾಗದ ಬಳಿ  ಒಂದು ಕಪ್ಪು ಪ್ಲಾಸ್ಟಿಕ್ ಕವರ್ ಇದ್ದು  ಕವರಿನಲ್ಲಿದ್ದ ಮದ್ಯದ ಟೆಟ್ರಾ ಪ್ಯಾಕೇಟುಗಳು ಇರುವುದು ಕಂಡುಬಂದಿರುತ್ತದೆ, ಕವರಿನಲ್ಲಿ 1) 90 ML ಸಾಮರ್ಥದ HAYWARDS CHEERS  WHISKY  ಹೆಸರಿನ 9 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ ಬೆಲೆ 35.13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-810 ML ಮದ್ಯವಿದ್ದು ಒಟ್ಟು ಬೆಲೆ 316 ರೂ ಆಗುತ್ತದೆ.2) 90 ಎಂ ಎಲ್ ಸಾಮರ್ಥ್ಯದ HAYWARDS CHEERS  WHISKY  ಖಾಲಿ 5 ಟೆಟ್ರಾ ಪ್ಯಾಕೇಟುಗಳು ಇರುತ್ತವೆ, 3) 5 ಖಾಲಿ ಲೋಟಗಳು ಸಿಕ್ಕಿದ್ದು, ಪುಜಕಾಂತನನ್ನು ಗಿರಾಕಿಗಳಿಗೆ, ಮದ್ಯಸೇವನೆಗೆ  ಸ್ಥಳಾವಕಾಶ ಮಾಡಿಕೊಟ್ಟಿದ್ದಕ್ಕೆ ನಿನ್ನಬಳಿ ಪರವಾನಿಗೆ, ಇದೆಯೇ? ಇದ್ದರೆ ಹಾಜರುಪಡಿಸಲು ಕೋರಿದಾಗ ಸದರಿ ಆಸಾಮಿಯು ತನ್ನ ಬಳಿ ಯಾವುದೂ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 4-35 ಗಂಟೆಯಿಂದ ಸಂಜೆ 5-10 ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಸಂಜೆ 5-25 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರವ ವರದಿ.

 

8. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.116/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:24/09/2021 ರಂದು ಸಂಜೆ 7:45 ಗಂಟೆಗೆ ಎ.ಎಸ್.ಐ ಶ್ರಿ. ನಾಗರಾಜು ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:24-09-2021 ರಂದು ಸಂಜೆ 6:00 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-32 ಕೇಶವಮೂರ್ತಿ ಮತ್ತು ಪಿಸಿ-240 ಮಧುಸೂಧನ್ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ಕಣಿವೆನಾರಾಯಣಪುರ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಗೌಚೇನಹಳ್ಳಿ ಗ್ರಾಮದ ಕೃಷ್ಣಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ತನ್ನ ಅಂಗಡಿಯ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಕಂಗಾನಹಳ್ಳಿ ಗ್ರಾಮದ ಹೊರವಲಯದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಸಂಜೆ 6:25 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಕೃಷ್ಣಪ್ಪ ಬಿನ್ ಲೇಟ್ ತಿಪ್ಪಣ್ಣ, 57 ವರ್ಷ, ಪ.ಜಾತಿ, ಅಂಗಡಿ ವ್ಯಾಪಾರ, ವಾಸ: ಗೌಚೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 16 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 16 ಟೆಟ್ರಾ ಪ್ಯಾಕೇಟುಗಳ ಬೆಲೆ 562 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 440 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 5 ಖಾಲಿ ಟೆಟ್ರಾ ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 6:30 ಗಂಟೆಯಿಂದ ಸಂಜೆ 7:15 ಗಂಟೆ ವರೆಗೆ ಪಂಚನಾಮೆಯ ಮೂಲಕ ವಿದ್ಯುತ್ ಬೆಳಕಿನಲ್ಲಿ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

9. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.117/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ: 25-09-2021 ರಂದು  ಪಿರ್ಯಾದಿದಾರರಾದ ಶ್ರೀ ವೆಂಕಟೇಶ್ ಬಿನ್ ಲೇಟ್ ಜ್ಞಾನಪ್ರಕಾಶ , 52 ವರ್ಷ,ಪ.ಜಾತಿ, ಪೇಟಿಂಗ್ ಕೆಲಸ, #120 ಮೇಟ್ರೋ ಲೇಔಟ್, ಪೈಪ್ ಲೈನ್ ರೋಡ್ , ಸುಂಕದಕಟ್ಟೆ , ಬೆಂಗಳೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ತನಗೆ 3 ಜನ ಮಕ್ಕಳಿದ್ದು , 1ನೇ ಮಗಳು ಸುಷ್ಮಿತಾ 25 ವರ್ಷ, 2ನೇ ಮಗಳು ದಿವ್ಯ 24 ವರ್ಷ, 3ನೇ ಮಗ ರೋಹಿತ್ ,22 ವರ್ಷ, ಮಕ್ಕಳಿದ್ದು, ಆ ಪೈಕಿ ಸುಷ್ಮೀತಾ ರವರು ಬೆಂಗಳೂರಿನ ಓರಾಕಲ್ ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. 2ನೇ ಮಗಳು ದಿವ್ಯ ರವರು ಇ ವೈ ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ತನ್ನ  ಮಗ ರೋಹಿತ್ ರವರು ಬೆಂಗಳೂರಿನ ಆಂಕ್ಸಚೇರ್ ಕಂಪನಿಯಲ್ಲಿ 3 ತಿಂಗಳಿನಿಂದ ಕೆಲಸ ಮಾಡುತ್ತಿರುತ್ತಾನೆ. ತನ್ನ ಮಗನಿಗೆ ಸ್ನೇಹಿತರ ಜೊತೆ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅಭ್ಯಸವಿರುತ್ತದೆ. ಅದೇ ರೀತಿ ತನ್ನ ಮಗನ ಸ್ನೇಹಿತನಾದ ಸಂದೀಪ್ ರವರ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಹೋಗಿ ಬರುತ್ತೇನೆಂದು ದಿನಾಂಕ:24-09-2021 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ ಮನೆಯಿಂದ ಹೋರ ಬಂದನು ಸಂಜೆ ಸುಮಾರು 5-00 ಗಂಟೆಯಾದರು ಮನೆಗೆ ಬರಲಿಲ್ಲಾ , ಸುಮಾರು ಸಂಜೆ  6-30  ಗಂಟೆಯಲ್ಲಿ ತನ್ನ ಮಗನ ಸ್ನೇಹಿತನಾದ ಸಂದೀಪ್ ರವರು ತನಗೆ ಕರೆ ಮಾಡಿ ನಿಮ್ಮ ಮಗ ರೋಹಿತ್ ರವರು ಮತ್ತು ನನ್ನ ಸ್ನೇಹಿತರು ನನ್ನ ಹುಟ್ಟು ಹಬ್ಬ ಆಚರಿಸಲು ಚಿಕ್ಕಬಳ್ಳಾಪುರ ತಾಲ್ಲೂಕಿನ ಜಕ್ಕಲಮಡಗು ಕರೆಯ ಬಳಿ  ಬಂದಿದ್ದು ಹುಟ್ಟು ಹಬ್ಬ ಆಚರಣೆಯಾದ ನಂತರ ನಿಮ್ಮ ಮಗ ರೋಹಿತ್ ಹಾಗೂ ನಮ್ಮ ಜೊತೆ ಬಂದಿದ್ದ ಸ್ನೇಹಿತರೆಲ್ಲರೂ ಜಕ್ಕಲಮಡಗು ಕರೆಯ ನೀರಿನಲ್ಲಿ ಇಳಿದು ಸ್ನಾನ ಮಾಡಿ ಎಲ್ಲರೂ ನೀರಿನಿಂದ ಮೇಲೆ ಬಂದು ನೋಡಿದಾಗ ನಿಮ್ಮ ಮಗ ರೋಹಿತ್ ಇದ್ದಕ್ಕಿದಂತೆ ಆ ಜಾಗದಲ್ಲಿ ಕಾಣಿಸಲಿಲ್ಲಾ. ನಾವೇಲ್ಲರೂ ಜಕ್ಕಲಮಡಗು ಕರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡಕಿದರು ನಿಮ್ಮ ಮಗ ರೋಹಿತ್ ಸಿಗಲಿಲ್ಲಾ ಎಂದು ತನ್ನ ಮಗನ ಸ್ನೇಹಿತ ಸಂದೀಪ್ ರವರು ತನಗೆ ಕರೆ ಮಾಡಿ ತಿಳಿಸಿದಾಗ ತಾನು ಸಹಾ ಸದರಿ ಸ್ಥಳಕ್ಕೆ ಬಂದು ತನ್ನ ಮಗನನ್ನು ಹುಡುಕಿದರು ಸಹಾ ತನ್ನ ಮಗ ಸಿಗಲಿಲ್ಲಾ , ನಮ್ಮ ಪರಿಚಯಸ್ತರಿಗೆ ಹಾಗೂ ನೆಂಟರಿಗೆ (ಸಂಬಂದಿಕರಿಗೆ )ಕರೆ ಮಾಡಿ ತನ್ನ ಮಗ ರೋಹಿತ್ ನ  ಬಗ್ಗೆ ವಿಚಾರಿಸಲಾಗಿ ಯಾವುದೇ ಸುಳಿವು ಸಿಕ್ಕರುವುದಿಲ್ಲ. ಆದ್ದರಿಂದ ತನ್ನ ಮಗ ಕಾಣೆಯಾಗಿರುವ ಬಗ್ಗೆ ದಿನಾಂಕ: 25-09-2021 ರಂದು ಬೆಳಿಗಿನ ಜಾವ 1-15 ಗಂಟೆಗೆ ಠಾಣೆಗೆ ಬಂದು ದೂರು ನೀಡಿ ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿದರ ಮೇರೆಗೆ ಈ ಪ್ರ.ವ.ವರದಿ.

 

10. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.118/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:25/09/2021 ರಂದು ಬೆಳಿಗ್ಗೆ 11:30 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:25-09-2021 ರಂದು ಬೆಳಿಗ್ಗೆ 10:00 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಪಿಸಿ-435 ವೆಂಕಟಶಿವ, ಪಿಸಿ-207 ನವೀನ್ ಕುಮಾರ್ ಮತ್ತು ಪಿಸಿ-413 ಶೇಖಪ್ಪ ಗುರಿಕಾರ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ನಂದಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಮುದ್ದೇನಹಳ್ಳಿ ಗ್ರಾಮದ ಮುದ್ದುಕೃಷ್ಣ @ ಬಳ್ಳಾರಿ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ತನ್ನ ಅಂಗಡಿಯ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಬಂಡಹಳ್ಳಿ ಗ್ರಾಮದ ಹೊರವಲಯದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಬೆಳಿಗ್ಗೆ 10:20 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಮುದ್ದುಕೃಷ್ಣ @ ಬಳ್ಳಾರಿ ಬಿನ್ ಚಿಕ್ಕಮುನಿಶಾಮಪ್ಪ, 50 ವರ್ಷ, ಒಕ್ಕಲಿಗರು, ಅಂಗಡಿ ವ್ಯಾಪಾರ, ವಾಸ: ಮುದ್ದೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 20 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 20 ಟೆಟ್ರಾ ಪ್ಯಾಕೇಟುಗಳ ಬೆಲೆ 702 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 800 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 10 ಖಾಲಿ ಟೆಟ್ರಾ ಪ್ಯಾಕೇಟುಗಳು, 3) ಉಪಯೋಗಿಸಿರುವ 9 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಬೆಳಿಗ್ಗೆ 10:25 ಗಂಟೆಯಿಂದ ಬೆಳಿಗ್ಗೆ 11:10 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

11. ಪೆರೇಸಂದ್ರ ಪೊಲೀಸ್‌ ಠಾಣೆ ಮೊ.ಸಂ.04/2021 ಕಲಂ. 32,34,36(B) ಕೆ.ಇ ಆಕ್ಟ್:-

     ದಿನಾಂಕ 24/09/2021 ರಂದು  ರಾತ್ರಿ 10-00 ಗಂಟೆಗೆ  ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ರವರಾದ ಸರಸ್ವತಮ್ಮ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:24.09.2021 ರಂದು ತಾನು ಮತ್ತು ತಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್ಸಿ-71 ಸುಬ್ರಮಣಿ ಪಿಸಿ-531 ಮಂಜುನಾಥ ಹಾಗೂ ಜೀಪ್ ಚಾಲಕರಾದ ಎಪಿಸಿ-138 ಮಹಬೂಬ್ ಬಾಷರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ:ಕೆಎ-40-ಜಿ-270 ರಲ್ಲಿ ಗುಡಿಬಂಡೆ ತಾಲ್ಲೂಕು ಮತ್ತು ಪರೇಸಂದ್ರ ಕಡೆ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಗಸ್ತಿನಲ್ಲಿದ್ದಾಗ ರಾತ್ರಿ ಸುಮಾರು 8.00 ಗಂಟೆ ಸಮಯಕ್ಕೆ ಭಾತ್ಮೀದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಪೆರೇಸಂದ್ರ ಕ್ರಾಸ್ ನ ಗುಡಿಬಂಡೆ ರಸ್ತೆಯಲ್ಲಿರುವ ವಿ.ಕೆ. ಬಾರ್ & ರೆಸ್ಟೊರೆಂಟ್ ನಿಂದ ಅದರಲ್ಲಿ ಕೆಲಸಮಾಡುವವರು ಒಂದು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡಿಕೊಂಡು ಬಾಗೇಪಲ್ಲಿ ಕಡೆಗೆ ಹೋಗುತ್ತಿರುವುದಾಗಿ ಬಂದ ಮಾಹಿತಿಯ ಮೇರೆಗೆ ಪೆರೇಸಂದ್ರ ಪೊಲೀಸ್ ಠಾಣೆಯ ಪಿಸಿ-89 ಮಂಜುನಾಥರವರನ್ನು ನಮ್ಮದೊಂದಿಗೆ ಕರೆದುಕೊಂಡು ಪೆರೇಸಂದ್ರ ಕ್ರಾಸ್ನಲ್ಲಿ ಪಂಚರನ್ನು ಬರಮಾಡಿಕೊಂಡು ಪರೇಸಂದ್ರ ಕ್ರಾಸ್ನಿಂದ ಬಾಗೇಪಲ್ಲಿ ಕಡೆಗೆ ಹೋಗುವ ಸರ್ವೀಸ್  ರಸ್ತೆಯ ಹೆಚ್.ಪಿ ಪೆಟ್ರೋಲ್ ಬಂಕ್ ಸಮೀಪ  ರಾತ್ರಿ 8-15 ಗಂಟೆಗೆ  ಪಂಚರ ಸಮಕ್ಷಮ ದಾಳಿಮಾಡಿ ಆಸಾಮಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ 1. ಸಂಪ್ರೀತ್ ಬಿನ್ ಸಂತೋಷ್, 26 ವರ್ಷ, ಗೌಡರು, ವಿ.ಕೆ ಬಾರ್ ನಲ್ಲಿ ಕ್ಯಾಷಿಯರ್ ಕೆಲಸ, ಸ್ವಂತ ಸ್ಥಳ:- ಒಣಗೂರು ಗ್ರಾಮ, ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆ ಹಾಲಿ ವಾಸ:- ವಿಜಯ್ಕುಮಾರ್ರವರ ಬಿಲ್ಡಿಂಗ್, ಪರೇಸಂದ್ರ ಕ್ರಾಸ್ ಎಂತ ತಿಳಿಸಿರುತ್ತಾನೆ. ಮತ್ತೋಬ್ಬ ಆಸಾಮಿ 2. ಚಂದ್ರಶೇಖರ್ ಬಿನ್ ಸುಬ್ರಮಣಿ, 25 ವರ್ಷ, ವಕ್ಕಲಿಗರು, ಗಾರೆಕೆಲಸ, ವಾಸ:- ಹರಿಸ್ಥಳ  ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಹಾಲಿ ವಾಸ:- ವಿಜಯ್ಕುಮಾರ್ರವರ ಬಿಲ್ಡಿಂಗ್, ಪರೇಸಂದ್ರ ಕ್ರಾಸ್ ಎಂತ ತಿಳಿಸಿರುತ್ತಾನೆ. ಸದರಿ ಆಸಾಮಿಗಳು ಮದ್ಯವನ್ನು ಸಾಗಿಸುತ್ತಿದ್ದ ದ್ವಿಚಕ್ರವಾಹವನ್ನು ಪರಿಶೀಲನೆ ಮಾಡಲಾಗಿ DIO ಕಂಪನಿಯ ಸ್ಕೂಟಿ ಸಂಖ್ಯೆ;ಕೆಎ-50-ಕ್ಯೂ-6087 ನೀಲಿ & ಬಿಳಿಬಣ್ಣಾಗಿದ್ದು, ದ್ವಿಚಕ್ರ ವಾಹನದಲ್ಲಿ ಮೂರು ಬಳಿ ಪ್ಲಾಸ್ಟಿಕ್ ಚೀಲಗಳಿದ್ದು, ಅವುಗಳನ್ನು ಪರಿಶೀಲಸಲಾಗಿ 1) KING FISHER STRONG BEER  ನ ಒಂದು ಬಾಕ್ಸ್ನಲ್ಲಿ ಮದ್ಯ ತುಂಬಿರುವ 650 ಎಂ.ಎಲ್ನ 12 ಬಿಯರ್ ಬಾಟಲ್ಗಳು ಇದ್ದು, ಇದರ ಒಂದು ಬಾಟಲ್ ಬೆಲೆ 155/-ರೂಗಳಾಗಿದ್ದು, ಒಟ್ಟು ಬೆಲೆ 1860 ರೂಗಳಾಗಿರುತ್ತೆ. 2) TUBORG STRONG & PREMIUM BEER ನ 3 ಬಾಕ್ಸ್ಗಳಲ್ಲಿ ಮದ್ಯ ತುಂಬಿರುವ 650 ಎಂ.ಎಲ್ನ 36 ಬಿಯರ್ ಬಾಟಲ್ಗಳು ಇದ್ದು, ಇದರ ಒಂದು ಬಾಟಲ್ ಬಲೆ 155/-ರೂಗಳಾಗಿದ್ದು, ಒಟ್ಟು ಬೆಲೆ 5580/- ರೂಗಳಾಗಿರುತ್ತೆ. ಮತ್ತೊಂದು ಬಾಕ್ಸ್ ನಲ್ಲಿ ನೋಡಲಾಗಿ 3) McDowell’s ಕಂಪನಿಯ 180 ಎಂ.ಎಲ್ನ 5 ಬಾಟಲ್ಗಳು ಇದ್ದು, ಒಂದರ ಬೆಲೆ 198/-ರೂ ನಂತರ ಒಟ್ಟು 990/- ರೂಗಳಾಗಿರುತ್ತೆ. 4) IMPERIAL BLUE WHISKY ಕಂಪನಿಯ 180 ಎಂ.ಎಲ್ನ 5 ಬಾಟಲ್ಗಳು ಇದ್ದು, ಒಂದರ ಬೆಲೆ 198/-ರೂ ನಂತರ ಒಟ್ಟು 990/- ರೂಗಳಾಗಿರುತ್ತೆ. 5) BAGPIPER DELUXE WHISKY ಕಂಪನಿಯ 180 ಎಂ.ಎಲ್ನ 5 ಟೆಟ್ರಾ ಪಾಕೆಟ್ಗಳು ಇದ್ದು, ಒಂದರ ಬೆಲೆ 106/-ರೂ ನಂತರ ಒಟ್ಟು 530/- ರೂಗಳಾಗಿರುತ್ತೆ. 6) OLD TAVERN WHISKY ಕಂಪನಿಯ 180 ಎಂ.ಎಲ್ನ 5 ಟೆಟ್ರಾ ಪಾಕೆಟ್ಗಳು ಇದ್ದು, ಒಂದರ ಬೆಲೆ 86/-ರೂ ನಂತರ ಒಟ್ಟು 430/- ರೂಗಳಾಗಿರುತ್ತೆ. ಮೇಲ್ಕಂಡ ಎಲ್ಲಾ ಮದ್ಯದ ಒಟ್ಟು ಪ್ರಮಾಣವು 34 ಲೀಟರ್ 800 ಎಂ.ಎಲ್ ಇದ್ದು, ಇವುಗಳ ಎಲ್ಲಾ ಕಂಪನಿ ಬ್ರಾಂಡ್ ಗಳ ಒಟ್ಟು ಬೆಲೆ 10,380/-ರೂಗಳಾಗಿರುತ್ತೆ. ಸದರಿ ಮಾಲುಗಳಿಂದ ಒಂದೊಂದು ಕಂಪನಿಯ ಮದ್ಯತುಂಬಿರುವ ಒಂದೊಂದು ಬಾಟಲ್ಗಳಂತೆ 4 ಬಾಟಲ್ಗಳನ್ನು ಹಾಗೂ 2 ಟೆಟ್ರಾಪಾಕೆಟ್ಗಳನ್ನು ಎಫ್.ಎಸ್.ಎಲ್ ಗೆ ಕಳುಹಿಸುವ ಸಲುವಾಗಿ ಪ್ರತ್ಯೇಕವಾಗಿ ತೆಗೆದು ಬಳಿ ಬಟ್ಟೆಯ ಚೀಲದಲ್ಲಿ ಇಟ್ಟು ದಾರದಿಂದ ಸುತ್ತಿ “P”  ಎಂಬ ಇಂಗ್ಲೀಷ್ ಅಕ್ಷರದಿಂದ ಸೀಲ್ಮಾಡಿರುತ್ತೆ. ಸದರಿ ಮದ್ಯವನ್ನು ಪೆರೇಸಂದ್ರ ಕ್ರಾಸ್ ನ  ಗುಡಿಬಂಡೆ ರಸ್ತೆಯಲ್ಲಿರುವ ವಿ.ಕೆ ಬಾರ್ನಿಂದ ತೆಗೆದುಕೊಂಡು ಜನಕಾ ಡಾಬಾ & ರೆಸ್ಟೋರೆಂಟ್ಗೆ ಕೊಡಲು ಹೋಗಿತ್ತಿರುವುದಾಗಿ, ಸದರಿ ಮದ್ಯವನ್ನು ಸಾಗಾಣಿಕೆ ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾರೆ. ಸದರಿ ಮದ್ಯವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿತರನ್ನು ವಶಕ್ಕೆ ಪಡೆದಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಆರೋಪಿತರು ಮತ್ತು ಮಾಲನ್ನು ಅಸಲು ಪಂಚನಾಮೆಯೊಂದಿಗೆ ನಿಮ್ಮ ವಶಕ್ಕೆ ನೀಡುತ್ತಿದ್ದು, ಸದರಿ ಆರೋಪಿತರು ಮತ್ತು ವಿ.ಕೆ ಬಾರ್  ಮಾಲೀಕರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

 

12. ಪೆರೇಸಂದ್ರ ಪೊಲೀಸ್‌ ಠಾಣೆ ಮೊ.ಸಂ.05/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 24/09/2021 ರಂದು ಸಂಜೆ 5-30  ಗಂಟೆಗೆ    ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ ಮಂಜುನಾಥ ಡಿ.  ರವರು ಠಾಣೆಯಲ್ಲಿ ನಿಡಿದ ದೂರಿನ ಸಾರಾಂಶವೇನೆಂದರೆ ಇವರಿಗೆ  ದಿನಾಂಕ:24/09/2021 ರಂದು ಮದ್ಯಾಹ್ನ 3-00  ಗಂಟೆಯಲ್ಲಿ ನಾನು ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿದ್ದಾಗ  ಬೀಟ್  ಸಿಬ್ಬಂದಿ ಮಂಜುನಾಥ ಸಿ.ಪಿ.ಸಿ-89 ರವರು ನನಗೆ ಪೋನ್ ಮಾಡಿ ಈ ದಿನ ದಿನಾಂಕ: 24/09/2021 ರಂದು ಮುದ್ದರೆಡ್ಡಿಹಳ್ಳಿ, ವರ್ಲಕೊಂಡ ಗ್ರಾಮಗಳ   ಕಡೆ ಗಸ್ತು ಮಾಡುತ್ತಿರುವಾಗ ವರ್ಲಕೊಂಡ    ಗ್ರಾಮದ ಬಳಿ ಕೆರೆಯ ಅಂಗಳದಲ್ಲಿ  ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ನನಗೆ ಮಾಹಿತಿ ನೀಡಿದರ ಮೇರೆಗೆ, ಠಾಣಾ ಸಿಬ್ಬಂದಿಯಾದ ಸಿ,ಹೆಚ್,ಸಿ-253 ಬಾಬಾಜಾನ್ , ಸಿ.ಪಿ.ಸಿ-22  ಶ್ರೀನಿವಾಸ  ಸಿ.ಪಿ.ಸಿ- 553 ಮುಕುಂದ , ಜೀಪಿನ ಚಾಲಕ ಎ.ಪಿ.ಸಿ-05 ಮದುಕುಮಾರ್ ರವರನ್ನು ಕರೆಯಿಸಿಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ತಿಳಿಸಿ ಮದ್ಯಾಹ್ನ 3-15 ಗಂಟೆಗೆ ಪೆರೇಸಂದ್ರ ಪೊಲೀಸ್ ಠಾಣೆಯಿಂದ ಬಿಟ್ಟು ಸಕರ್ಾರಿ ಜೀಪ್ ಕೆ.ಎ-40-ಜಿ-1777 ರಲ್ಲಿ ಮದ್ಯಾಹ್ನ 3-30 ಗಂಟೆಗೆ ವರ್ಲಕೊಂಡ ಗ್ರಾಮಕ್ಕೆ ಹೋಗಿ ಅಲ್ಲಿದ್ದ ಮಂಜುನಾಥ ಸಿ.ಪಿ.ಸಿ-89 ರವರನ್ನು ಮತ್ತು ಪಂಚರನ್ನು ಬರಮಾಡಿಕೊಂಡು ವರ್ಲಕೊಂಡ   ಗ್ರಾಮದ ಕೆರೆಯ ಬಳಿ ಮರೆಯಲ್ಲಿ ನಿಂತು ನೋಡಲಾಗಿ, ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-100 ಬಾಹರ್-100 ಎಂದು ಕೂಗುತ್ತಾ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಮದ್ಯಾಹ್ನ 3-45 ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು  ಆಡುತ್ತಿದ್ದ  04 ಜನರನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ನಾರಾಯಣಸ್ವಾಮಿ ಬಿನ್ ಲೇಟ್ ವೆಂಕಟಸ್ವಾಮಿ, 51 ವರ್ಷ, ಭೋವಿ, ಚಾಲಕ ವೃತ್ತಿ,  ವಾಸ ಲಕ್ಷ್ಮಿಸಾಗರ ಗ್ರಾಮ, ಗುಡಿಬಂಡೆ ತಾಲ್ಲೂಕು. 2) ಆನಂದ ಬಿನ್ ಕೊಂಡಪ್ಪ, 36 ವರ್ಷ, ಬಲಜಿಗರು, ಗಾರೆ ಕೆಲಸ, ವಾಸ ಲಕ್ಷ್ಮಿಸಾಗರ ಗ್ರಾಮ, ಗುಡಿಬಂಡೆ ತಾಲ್ಲೂಕು.  3) ಹರೀಶ ಬಿನ್ ಲಕ್ಷ್ಮಣ್ಣ, 34 ವರ್ಷ, ಭೋವಿ ಜನಾಂಗ, ಚಾಲಕ ವೃತ್ತಿ, ಚೆಂಡೂರು ಗ್ರಾಮ, ಗುಡಿಬಂಡೆ ತಾಲ್ಲೂಕು. 4) ಶ್ರೀನಿವಾಸ ಬಿನ್ ಲೇಟ್ ನಾರಾಯಣಸ್ವಾಮಿ, 53 ವರ್ಷ, ಬಲಜಿಗರು, ಸೆಕ್ಯೂರಿಟಿ ಕೆಲಸ, ವಾಸ ಲಕ್ಷ್ಮಿಸಾಗರ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ.  ಸ್ಥಳದಲ್ಲಿ 1450 ರೂ ನಗದು ಹಣ, 52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ ಜೂಜಾಟಕ್ಕೆ ಪಣಕ್ಕೆ ಇಟ್ಟಿದ್ದ 1450/- ರೂ & 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಸಂಜೆ 4-00  ಗಂಟೆಯಿಂದ 5-00  ಗಂಟೆಯವರೆಗೆ ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ 04 ಜನ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 5-15  ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 5-30   ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿ ಘನ ನ್ಯಾಯಾಲಯಕ್ಕೆ ನಿವೇದಿಸಿಕೊಂಡು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣಾ ಮೊ.ಸಂ 05/2021 ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

13. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.301/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:25.09.2021 ರಂದು ಸಂಜೆ 4.00 ಗಂಟೆಗೆ ಪಿಯರ್ಾದಿದಾರರಾದ ಶಂಕರಪ್ಪ ಶಿವಪುರ ಬಿನ್ ಬೀಮ್ಲಾ, 56 ವರ್ಷ,  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಾನು ಚಿಕ್ಕಬಳ್ಳಾಪುರ ವಿಭಾಗ, ಚಿಕ್ಕಬಳ್ಳಾಪುರ ಡಿಪೋವಿನಲ್ಲಿ  ಬಿಲ್ಲೆ ಸಂಖ್ಯೆ: 3555 ರಂತೆ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿನಾಂಕ: 24/09/2021 ರಂದು ನನಗೆ ಕೆ.ಎ-09 ಎಫ್-5069 ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನಾಗಿ ತನಗೆ ಹಾಗೂ ಬಿಲ್ಲೆ ಸಂಖ್ಯೆ: 575 ಶ್ರೀ ನಾರಾಯಣಸ್ವಾಮಿ ರವರನ್ನು  ನಿವರ್ಾಹಕನಾಗಿ ರೂಟ್ ನಂಬರ್-136 ( ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ರಸ್ತೆ ಸಂಪರ್ಕ ಸಾರಿಗೆ ) ಕರ್ತವ್ಯಕ್ಕೆ ನೇಮಕ ಮಾಡಿರುತ್ತಾರೆ. ಅದರಂತೆ ತಾನು ಹಾಗೂ ನಾರಾಯಣಸ್ವಾಮಿ ರವರು ಮೇಲ್ಕಂಡ ಬಸ್ಸಿನಲ್ಲಿ ಇದೇ ದಿನ ಬೆಳಿಗ್ಗೆ ಸುಮಾರು 6-30 ಗಂಟೆಗೆ ಘಟಕದಿಂದ ಹೊರಟು ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ರಸ್ತೆ ಮಾರ್ಗವಾಗಿ ಸಂಚಾರ ನಡೆಸುತ್ತಿದ್ದೆವು. ತಾವು 10 ನೇ ಸುತ್ತುವಳಿ ಕರ್ತವ್ಯದ ಸಲುವಾಗಿ ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರಕ್ಕೆ ಹೋಗುತ್ತಿದ್ದಾಗ, ಮದ್ಯಾಹ್ನ 1-40 ಗಂಟೆಯಲ್ಲಿ ಶಿಲೇಮಾಕನಹಳ್ಳಿ ಗೇಟ್ ಬಳಿ ನಿಯಮಿತ ವೇಗದಲ್ಲಿ ರಸ್ತೆಯ ಎಡಬದಿಯಲ್ಲಿ ಹೋಗುತ್ತಿರುವಾಗ ಬಸ್ಸಿನ ಹಿಂದೆ ಕೆ.ಎ-43 ಜೆ-608 ದ್ವಿಚಕ್ರ ವಾಹನವನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಬಸ್ಸಿನ ಹಿಂಭಾಗದ ಬಲಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ಬಿದ್ದುಹೋಗಿ ಗಾಯಗಳಾಗಿರುತ್ತವೆ. ತಮ್ಮ  ಬಸ್ಸಿನ ಹಿಂಭಾಗದ ಬಲಭಾಗ ಮೂಲೆಯಲ್ಲಿ ಜಖಂಗೊಂಡಿರುತ್ತೆ. ಸದರಿ ಅಪಘಾತದ ಬಗ್ಗೆ ನಮ್ಮ ಮೇಲಾಧಿಕಾರಿಗಳಲ್ಲಿ ತಿಳಿಸಿ ಈ ದಿನ ಬಂದು ದೂರು ನೀಡುತಿದ್ದು ತಮ್ಮ ಬಸ್ಸಿನ ಹಿಂಬದಿಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ಬಸ್ಸಿನ ಹಿಂಭಾಗದ ಬಲಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಮೇಲ್ಕಂಡ ಕೆ.ಎ-43 ಜೆ-608 ದ್ವಿಚಕ್ರ ವಾಹನ ಸವಾರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

Last Updated: 25-09-2021 05:29 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080