ಅಭಿಪ್ರಾಯ / ಸಲಹೆಗಳು

 

1. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.370/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 24/08/2021 ರಂದು ಸಂಜೆ 6.30 ಗಂಟೆಗೆ ಠಾಣೆಯ ಸಿ.ಹೆಚ್.ಸಿ-03 ರಾಜಣ್ಣ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:24/08/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ತಾನು ಮತ್ತು ಸಿ.ಪಿ.ಸಿ-509 ಚಂದ್ರಪ್ಪರವರು ಠಾಣಾ ಸರಹದ್ದಿನ ಅನಕಲ್ಲು, ಪಾಲೇಪಲ್ಲಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5-00 ಗಂಟೆಯ ಸಮಯದಲ್ಲಿ ಶೆಟ್ಟಿಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಸುಬ್ಬಾರೆಡ್ಡಿ ಬಿನ್ ಲೇಟ್ ವೆಂಕಟರೆಡ್ಡಿರವರು ತನ್ನ ಮನೆಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಶೆಟ್ಟಿಹಳ್ಳಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಮನೆಯ ಮುಂದೆ ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 8 ಟೆಟ್ರಾ ಪಾಕೆಟ್ ಗಳು, 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಸುಬ್ಬಾರೆಡ್ಡಿ ಬಿನ್ ಲೇಟ್ ವೆಂಕಟರೆಡ್ಡಿ, 70 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಶೆಟ್ಟಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 5-15 ರಿಂದ 6-00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಸುಬ್ಬಾರೆಡ್ಡಿ ಬಿನ್ ಲೇಟ್ ವೆಂಕಟರೆಡ್ಡಿರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

2. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.201/2021 ಕಲಂ. 379 ಐ.ಪಿ.ಸಿ:-

     ದಿನಾಂಕ: 24/08/2021 ರಂದು ಸಂಜೆ 17-15 ಗಂಟೆಗೆ  ಪಿರರ್ಯಾದಿದಾರರಾದ ಲೋಕೆಶ್ ವಿ ಬಿನ್ ವೆಂಕಟೇಶಪ್ಪ ಪ್ರಾನಶುಪಾಲರು ಮೋರಾರ್ಜಿ ದೇಸಾಯಿ ವಸತಿ ಶಾಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 20/08/2021 ರಂದು ಬೆಳಿಗ್ಗೆ 11:39 ರ ಸಮಯದಲ್ಲಿ ಅನುಮಾನಸ್ಪದ ವ್ಯಕ್ತಿಗಳು ಬಾಲಕಿಯರ ವಸತಿ ನಿಲಯದ ಪಕ್ಕದಲ್ಲಿರುವ ಕಾಂಪೌಂಡ್ ಗೋಡೆಯನ್ನು ಹತ್ತಿ ವಸತಿ ನಿಲಯವನ್ನು ಪ್ರವೇಶಿಸಿ ಅದರಲ್ಲಿರುವ ಉಗ್ರಾಣ ಕೊಠಡಿಗಳ ಬೀಗಗಳನ್ನು ಮುರಿದಿರುತ್ತಾರೆ ಹಾಗೂ ಬಾಲಕಿಯರ ವಸತಿ ನಿಲಯದ ಮುಂದೆ ಒಡಾಡಿರುವ ಬಗ್ಗೆ ಶಾಲೆಯ ಸಿ.ಸಿ ಕ್ಯಾಮರಾದಲ್ಲಿ ದಾಖಲಾಗಿರುತ್ತದೆ. ಮತ್ತೆ ಅದೇ ದಿನ ರಾತ್ರಿ 9-20 ಗಂಟೆಗೆ ಅನುಮಾನಸ್ಪದ ವ್ಯಕ್ತಿ ಬಾಲಕಿಯರ ವಸತಿ ನಿಲಯದ ಸಮೀಪ ಬಂದಿರುವುದನ್ನು ನಮ್ಮ ಶಾಲೆಯ ಕಾವಲುಗಾರ ಮೋಹನ್ ಎಂಬುವವರು ನೋಡಿ ವಿಚಾರಿಸಿ ಕೂಗಿಕೊಂಡಾಗ ಇತರೆ ಸಿಬ್ಬಂದಿಗಳು ಅಲ್ಲಿಗೆ ಬಂದ ತಕ್ಷಣ ಕಾಂಪೌಂಡ್ ಹತ್ತಿ ಓಡಿ ಹೋಗಿರುತ್ತಾನೆ. ಈ ಬಗ್ಗೆ ಸಹಾಯವಾಣಿ ಸಂಖ್ಯೆ 112 ಗೆ ಕರೆಮಾಡಿ ವಿಷಯ ತಿಳಿಸಲಾಗಿರುತ್ತದೆ. ರಾತ್ರಿ ಪೊಲೀಸ್ ಗಸ್ತು ಸಹ ಬಂದು ಹೋಗಿರುತ್ತದೆ. ದಿನಾಂಕ 23/08/2021 ರಂದು ನಿಲಯಗಳ ನೀರಿನ ಸಂಪುಗಳನ್ನು ಸ್ವಚ್ಚ ಮಾಡಲು ಮಹಡಿ ಮೇಲೆ ಹತ್ತಿದಾಗ ಅಂದಾಜು 35000 ಬೆಲೆ ಬಾಳುವ 7 ಸೋಲಾರ್ ಪ್ಯಾನಲ್ ಗಳನ್ನು ಒಡೆದು ಹಾಕಿ ಅದರಲ್ಲಿರುವ ತಾಮ್ರದ ಲೋಹವನ್ನು ಕಳ್ಳತನ ಮಾಡಿರುವುದು ಕಂಡು ಬಂದಿರುತ್ತದೆ. ಶಾಲೆಯ ಹಿತದೃಷ್ಟಿಯಿಂದ ಕಳ್ಳರನ್ನು ಪತ್ತೆ ಮಾಡಿ ಶಿಕ್ಷೆ ಕೋಡಿಸಬೆಕೆಂದು ಈ ಮೂಲಕ ಮನವಿ ಮಾಡಿದೆ.

 

3. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.196/2021 ಕಲಂ. 78(I),78(III) ಕೆ.ಪಿ ಆಕ್ಟ್:-

     ದಿನಾಂಕ:25/08/2021 ರಂದು ಬೆಳಗ್ಗೆ 10-30 ಗಂಟೆಗೆ ಘನ ನ್ಯಾಯಾಲಯದ ಪೇದೆ-430 ಪ್ರದೀಪ್ ಎಂ.ಬಿ ಠಾಣಾ NCR NO-246/2021 ರಲ್ಲಿ ಪ್ರಕರಣವನ್ನು ದಾಖಲಿಸಲು ಅನುಮತಿಯ ಆದೇಶದ ಪ್ರತಿಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ:24/08/2021 ರಂದು ಬೆಳಿಗ್ಗೆ 11-30  ಗಂಟೆಯಲ್ಲಿ ಶ್ರೀ.ಮಂಜುನಾಥ .ಡಿ. ಪಿ.ಎಸ್.ಐ , ಪೆರೇಸಂದ್ರ ಪೊಲೀಸ್ ಠಾಣೆ ರವರು  ಠಾಣೆಯಲ್ಲಿ  ನೀಡಿದ ದೂರಿನ ಸಾರಾಂಶವೇನೆಂದರೆ,  ಇವರಿಗೆ ದಿನಾಂಕ 24/08/2021 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿದ್ದಾಗ ಸಿಬ್ಬಂದಿಯಾದ ಹೆಚ್.ಸಿ-73 ಹನುಮಂತರಾಯಪ್ಪ ರವರು ವರ್ಲಕೊಂಡ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ  ಬಾತ್ಮಿದಾರರಿಂದ ಗುಡಿಬಂಡೆ  ತಾಲ್ಲೂಕು, ವರ್ಲಕೊಂಡ ಗ್ರಾಮದ  ಎನ್.ಹೆಚ್.-44  ರಸ್ತೆಯ ಬ್ರಿಡ್ಜ್ ಕೆಳಗೆ ರಸ್ತೆಯಲ್ಲಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದೆ ಎಂದು ತಿಳಿಸಿದ್ದರೆ ಮೇರೆಗೆ ನಾನು ಮತ್ತು  ಪೊಲೀಸ್ ಸಿಬ್ಬಂದಿಯವರಾದ ಹೆಚ್.ಸಿ-127 ಕರಿಬಾಬು  ಹೆಚ್.ಸಿ-102 ಆನಂದ  ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.1777  ರಲ್ಲಿ ಗ್ರಾಮಕ್ಕೆ ಬೆಳಿಗ್ಗೆ 9-30 ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ಆಸಾಮಿಯು  ವರ್ಲಕೊಂಡ ಗ್ರಾಮದ ಎನ್.ಹೆಚ್.-44  ರಸ್ತೆಯ ಬ್ರಿಡ್ಜ್ ಕೆಳಗೆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಗೋಪಾಲ್ ಬಿನ್ ಗುರ್ರಪ್ಪ,  50 ವರ್ಷ, ಗಾಣಿಗರು,   ಜಿರಾಯ್ತಿ, ವಾಸ ವರ್ಲಕೊಂಡ ಗ್ರಾಮ, ಗುಡಿಬಂಡೆ ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 1350-00  ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಗೋಪಾಲ್ ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 1350-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ  ಬೆಳಗ್ಗೆ 10-00   ಗಂಟೆಯಿಂದ 11-00  ಗಂಟಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ಬೆಳಗ್ಗೆ 11-30   ಗಂಟೆಗೆ   ಮಾಲು ಮತ್ತು ಆರೋಪಿಯ ವಿರುದ್ದ  ಮುಂದಿನ ಕಾನೂನಿನ ಕ್ರಮಕ್ಕಾಗಿ ಕೋರಿ ದೂರು .

 

4. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.197/2021 ಕಲಂ. 78(I),78(III) ಕೆ.ಪಿ ಆಕ್ಟ್:-

     ದಿನಾಂಕ:25/08/2021 ರಂದು ಬೆಳಗ್ಗೆ 11-00 ಗಂಟೆಗೆ ಘನ ನ್ಯಾಯಾಲಯದ ಪೇದೆ-430 ಪ್ರದೀಪ್.ಎಂ.ಬಿ ಠಾಣಾ NCR NO-247/2021 ರಲ್ಲಿ ಪ್ರಕರಣವನ್ನು ದಾಖಲಿಸಲು ಅನುಮತಿಯ ಆದೇಶದ ಪ್ರತಿಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ,ದಿನಾಂಕ:24/08/2021 ರಂದು ಮದ್ಯಾಹ್ನ 2-30  ಗಂಟೆಯಲ್ಲಿ ಶ್ರೀ.ಮಂಜುನಾಥ .ಡಿ. ಪಿ.ಎಸ್.ಐ , ಪೆರೇಸಂದ್ರ ಪೊಲೀಸ್ ಠಾಣೆ ರವರು  ಠಾಣೆಯಲ್ಲಿ  ನೀಡಿದ ದೂರಿನ ಸಾರಾಂಶವೇನೆಂದರೆ,  ಇವರಿಗೆ ದಿನಾಂಕ 24/08/2021 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿದ್ದಾಗ ಸಿಬ್ಬಂದಿಯಾದ ಹೆಚ್.ಸಿ-73 ಹನುಮಂತರಾಯಪ್ಪ ರವರು ಮುದ್ದರೆಡ್ಡಿಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ  ಬಾತ್ಮಿದಾರರಿಂದ ಗುಡಿಬಂಡೆ  ತಾಲ್ಲೂಕು, ಮುದ್ದರೆಡ್ಡಿಹಳ್ಳಿ ಗ್ರಾಮದ  ಅಶ್ವತ್ಥಕಟ್ಟೆಯ ಮುಂದೆ ಸಿಮೆಂಟ್  ರಸ್ತೆಯಲ್ಲಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದೆ ಎಂದು ತಿಳಿಸಿದ್ದರೆ ಮೇರೆಗೆ ನಾನು ಮತ್ತು  ಪೊಲೀಸ್ ಸಿಬ್ಬಂದಿಯವರಾದ ಹೆಚ್.ಸಿ-127 ಕರಿಬಾಬು  ಹೆಚ್.ಸಿ-102 ಆನಂದ  ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.1777  ರಲ್ಲಿ ಗ್ರಾಮಕ್ಕೆ ಮದ್ಯಾಹ್ನ 12-30 ಗಂಟೆಗೆ ಹೋಗಿ, ಅಲ್ಲಿ   ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ಆಸಾಮಿಯು  ಮುದ್ದರೆಡ್ಡಿಹಳ್ಳಿ ಗ್ರಾಮದ  ಅಶ್ವತ್ಥಕಟ್ಟೆಯ ಮುಂದೆ ಸಿಮೆಂಟ್  ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಕೃಷ್ಣಪ್ಪ ಬಿನ್ ಲೇಟ್ ಯರ್ರಪ್ಪ, 52 ವರ್ಷ, ಆದಿ ಕರ್ನಾಟಕ,  ಜಿರಾಯ್ತಿ, ವಾಸ ಮುದ್ದರೆಡ್ಡಿಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 1250-00  ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಕೃಷ್ಣಪ್ಪ ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 1250-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ  ಮದ್ಯಾಹ್ನ 1-00   ಗಂಟೆಯಿಂದ 02-00  ಗಂಟಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ಮದ್ಯಾಹ್ನ 2-30    ಗಂಟೆಗೆ   ಮಾಲು ಮತ್ತು ಆರೋಪಿಯ ವಿರುದ್ದ  ಮುಂದಿನ ಕಾನೂನಿನ ಕ್ರಮಕ್ಕಾಗಿ ಕೋರಿ ದೂರು .

 

5. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.87/2021 ಕಲಂ. 392 ಐ.ಪಿ.ಸಿ:-

     ದಿನಾಂಕ 25-08-2021 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾಧಿದಾರರಾದ ಜಿ.ಭಾಸ್ಕರ್ ಬಿನ್ ಲೇಟ್ ನಂಜುಂಡಪ್ಪ, 46 ವರ್ಷ, ಕುರುಬ ಜನಾಂಗ, ಕೋರ್ಲಪರ್ತಿ ಎಂ.ಎಸ್.ಐ.ಎಲ್ ಬಾರ್ ನಲ್ಲಿ ಕೆಲಸ, ವಾಸ ಕೆಂಚಾರ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಸುಮಾರು ಒಂದು ವರ್ಷದಿಂದ ಕೋರ್ಲಪರ್ತಿ ಗ್ರಾಮದ ಎಂ.ಎಸ್.ಐ.ಎಲ್ ಬಾರ್ ನಲ್ಲಿ ಸಹಾಯಕರಾಗಿ ಕೆಲಸ ಮಾಡಿಕೊಂಡಿರುತ್ತೇನೆ. ದಿನಾಂಕ 24/08/2021 ರಂದು ರಾತ್ರಿ ಸುಮಾರು 8.50 ಗಂಟೆಗೆ ಕೋರ್ಲಪರ್ತಿ ಗ್ರಾಮದ ಎಂ.ಎಸ್.ಐ.ಎಲ್ ಬಾರ್ ನಲ್ಲಿ ಕೆಲಸ ಮುಗಿಸಿಕೊಂಡು ಕೆಂಚಾರ್ಲಹಳ್ಳಿ ಗ್ರಾಮಕ್ಕೆ ಬರಲು ರಾತ್ರಿ ಸುಮಾರು 09.10 ಗಂಟೆಯ ಸಮಯದಲ್ಲಿ ಪಾಪತಿಮ್ಮನಹಳ್ಳಿ ಗ್ರಾಮದ ಬಳಿ ತನ್ನ ಬಾಬ್ತು ಕೆಎ-67-ಇ-3259 ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಹಿಂದುಗಡೆಯಿಂದ ಯಾರೋ ಇಬ್ಬರು ಆಸಾಮಿಗಳು ಪಲ್ಸರ್ ದ್ವಿಚಕ್ರವಾಹನದಲ್ಲಿ ಬಂದು ತನ್ನ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದರು. ತಾನು ಕೆಳಗೆ ಬಿದ್ದು ಹೋದೆನು. ಕೂಡಲೇ ಅವರ ಬಳಿಯಿದ್ದ ಕಾರದ ಪುಡಿಯನ್ನು ತನ್ನ ಮುಖಕ್ಕೆ ಚೆಲ್ಲಿ ತನ್ನ ಬಳಿ ಇದ್ದ ಬ್ಯಾಗ್ ನ್ನು ಮತ್ತು ತನ್ನ ಜೇಬಿನಲ್ಲಿದ್ದ  4500/- ರೂಗಳನ್ನು ಕಿತ್ತುಕೊಂಡು ತನ್ನ ದ್ವಿಚಕ್ರವಾಹನದ ಕೀಯನ್ನು ಬಿಸಾಕಿ ಅಲ್ಲಿಂದ ಓಡಿ ಹೋದರು. ಬ್ಯಾಗಿನಲ್ಲಿ ಎಂ.ಎಸ್.ಐ ಎಲ್  ಬಾರಿನ ಎರಡು ಸೆಟ್ ಕೀಗಳು, ಒಂದು ವೀವೋ ಕಂಪನಿಯ ಮೊಬೈಲ್, ಸಿಮ್ ನಂ 1ನೇ 9632024539, 2ನೇ 9448035652 ಎಸ್.ಬಿ.ಐ ಬ್ಯಾಂಕಿನ  ಎ.ಟಿ.ಎಂ ಕಾರ್ಡ್, ಆಕ್ಸ್ ಸ್ ಬ್ಯಾಂಕಿನ ಎ.ಟಿ.ಎಂ ಕಾರ್ಡ್, ಕೆನರಾ ಬ್ಯಾಂಕ್ ಎ.ಟಿ.ಎಂ ಕಾರ್ಡ್, ಕೊಟೆಕ್ ಮಹಿಂದ್ರಾ ಬ್ಯಾಂಕ್ ಎ.ಟಿ.ಎಂ ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ತನ್ನ ಬಾಬ್ತು ದ್ವಿಚಕ್ರವಾಹನ ಆರ್.ಸಿ ದಾಖಲೆ ಬ್ಯಾಗ್ ನಲ್ಲಿತ್ತು. ತನ್ನ ಬಳಿ ಮೇಲ್ಕಂಡ ಮಾಲುಗಳಿದ್ದ ಬ್ಯಾಗ್ ಮತ್ತು ತನ್ನ ಜೇಬಿಬಲ್ಲಿದ್ದ ಹಣವನ್ನು ಕಿತ್ತುಕೊಂಡ ವ್ಯಕ್ತಿಗಳು ಕತ್ತಲಾಗಿದ್ದರಿಂದ ತನಗೆ ಗುರ್ತಿಸಲು ಸಾಧ್ಯವಾಗಿರುವುದಿಲ್ಲ.ಹಾಗೂ ಅವರ ದ್ವಿಚಕ್ರ ವಾಹನ ನೋಂದಣೀ ಸಂಖ್ಯೆ ನೋಡಲು ಆಗಲಿಲ್ಲ. ಅವರಿಬ್ಬರು ತೆಲುಗು ಭಾಷೆ ಮಾತನಾಡಿಕೊಂಡು ಕಾರದಪುಡಿ ಹಾಕಿ ಎಂದು ಹೇಳಿಕೊಳ್ಳತ್ತಿದ್ದರು. ತಾನು ಗಾಬರಿಯಲ್ಲಿ ದ್ವಿಚಕ್ರವಾಹನವನ್ನು ತಳ್ಳಿಕೊಂಡು ಪಾಪತಿಮ್ಮನಹಳ್ಳಿ ಗ್ರಾಮದ ಮಲ್ಲಿಕಾರ್ಜುನರೆಡ್ಡಿರವರ ಮನೆಯ ಬಳಿ ಹೋದಾಗ ಅವರು ತನಗೆ ಉಪಚರಿಸಿದರು. ತನ್ನ ದ್ವಿಚಕ್ರವಾಹನದ ಹಿಂದುಗಡೆಯಿಂದ ಡಿಕ್ಕಿ ಹೊಡೆಸಿ ಎಂ.ಎಸ್.ಐ ಎಲ್  ಬಾರಿನ ಎರಡು ಸೆಟ್ ಕೀಗಳು, ತನ್ನ ಒಂದು ವೀವೋ ಕಂಪನಿಯ ಮೊಬೈಲ್, ಎಸ್.ಬಿ.ಐ ಬ್ಯಾಂಕಿನ  ಎ.ಟಿ.ಎಂ ಕಾರ್ಡ್, ಆಕ್ಸ್ ಸ್ ಬ್ಯಾಂಕಿನ ಎ.ಟಿ.ಎಂ ಕಾರ್ಡ್, ಕೆನರಾ ಬ್ಯಾಂಕ್ ಎ.ಟಿ.ಎಂ ಕಾರ್ಡ್, ಕೊಟೆಕ್ ಮಹಿಂದ್ರಾ ಬ್ಯಾಂಕ್ ಎ.ಟಿ.ಎಂ ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ತನ್ನ ಬಾಬ್ತು ದ್ವಿಚಕ್ರವಾಹನ ಆರ್.ಸಿ ದಾಖಲೆದ್ದ ಬ್ಯಾಗ್ ನ್ನು ಮತ್ತು ತನ್ನ ಜೇಬಿನಲ್ಲಿದ್ದ 4500/- ರೂ ನಗದನ್ನು ಕಿತ್ತುಕೊಂಡು ಹೋದ ಆರೋಪಿಗಳನ್ನು ಪತ್ತೆ ಹಚ್ಚಿ ತನ್ನಿಂದ ಕಿತ್ತುಕೊಂಡು ಹೋದ ಹಣವನ್ನು ಹಾಗೂ ಇತರೆ ವಸ್ತುಗಳನ್ನು ತನಗೆ ಕೊಡಿಸಿಕೊಟ್ಟು, ಆರೋಪಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ಹಾಗೂ ತಾನು ಎಂ.ಎಸ್.ಐ.ಎಲ್ ಬಾರಿನ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿ ದೂರಿನ ಸಾರಾಂಶವಾಗಿರುತ್ತದೆ.

 

6. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.147/2021 ಕಲಂ. 279 ಐ.ಪಿ.ಸಿ:-

     ದಿನಾಂಕ:25.08.2021 ರಂದು ಮದ್ಯಾಹ್ನ  12.30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಶಾರದಮ್ಮ ಕೋಂ ಸುಖದೇವಪ್ಪ, 58 ವರ್ಷ, ಲಿಂಗಾಯಿತ ಜನಾಂಗ, ಗೃಹಿಣಿ, ವಾಸ: ಪುರ ಗ್ರಾಮ,  ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ನಾವು ಸ್ವಂತಕ್ಕಾಗಿ ಈಗ್ಗೆ 5 ತಿಂಗಳ ಹಿಂದೆ ಸಹ್ಯಾದ್ರಿ ಎಲೆಕ್ಟ್ರೋ ಕಂಟ್ರೋಲ್ಸ್ ಇಂಡಿಯಾ ಪ್ರೈ.ಲಿ. ಕಂಪನಿಯಿಂದ KA-04, MR-2875 ಹೊಂಡೈ ಕಂಪನಿಯ ಕ್ರೇಟಾ ಕಾರನ್ನು ಕೊಂಡುಕೊಂಡಿದ್ದು, ಹಾಲಿ ನನ್ನ ಹೆಸರಿನಲ್ಲಿರುತ್ತೆ. ನಮ್ಮ ಕಾರಿಗೆ ನಮ್ಮ ಗ್ರಾಮದ ಹಾಲಿ ಹಿರೇಬಿದನೂರು ಗ್ರಾಮದಲ್ಲಿರುವ ರವಿಕುಮಾರ್ ಬಿನ್ ನಟರಾಜ್ ಎಂಬುವವರನ್ನು ಚಾಲಕರನ್ನಾಗಿ ನೇಮಿಸಿ ಕೊಂಡಿದ್ದೆವು. ದಿನಾಂಕ: 22/08/2021 ರಂದು ರಾತ್ರಿ ನನ್ನ ಮಗಳು ರಾಜೇಶ್ವರಿ ರವರನ್ನು ನಮ್ಮ ಚಾಲಕ ರವಿಕುಮಾರ್ ರವರು ನಮ್ಮ ಕಾರಿನಲ್ಲಿ ಗೌರಿಬಿದನೂರಿನಿಂದ ಪುರ ಗ್ರಾಮಕ್ಕೆ ಕರೆದುಕೊಂಡು ಬಂದು ಬಿಟ್ಟು ವಾಪಸ್ಸು ತಾನು ವಾಸವಿರುವ ಹಿರೇಬಿದನೂರಿಗೆ ಹೋಗುವುದಾಗಿ ಹೇಳಿ ಹೋದನು. ಮದ್ಯರಾತ್ರಿ ಸುಮಾರು 12-45 ಗಂಟೆ ಸಮಯದಲ್ಲಿ ರವಿಕುಮಾರ್ ರವರು ನನಗೆ ಪೋನ್ ಮಾಡಿ ನಾನು ಪುರ ಗ್ರಾಮದಿಂದ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದಾಗ ಮದ್ಯರಾತ್ರಿ ಸುಮಾರು 12-30 ಗಂಟೆ ಸಮಯದಲ್ಲಿ ಕೊಂಡೇನಹಳ್ಳಿ ಗ್ರಾಮದ ಸಮೀಪ ನಂಜೇಗೌಡರವರ ಮನೆಯ ಹತ್ತಿರ ಚಿಕ್ಕಬಳ್ಳಾಪುರ-ಗೌರಿಬಿದನೂರು ರಸ್ತೆಯಲ್ಲಿ ನಾಯಿಗಳು ಕಚ್ಚಾಡಿಕೊಂಡು ನಮ್ಮ ಕಾರಿಗೆ ಅಡ್ಡ ಬಂದಿದ್ದರಿಂದ ನಾಯಿಗಳಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರನ್ನು ಪಕ್ಕಕ್ಕೆ ಅತಿವೇಗವಾಗಿ ತಿರುಗಿಸಿದ್ದರಿಂದ ಕಾರು ರಸ್ತೆಯ ಎಡಭಾಗದಲ್ಲಿರುವ ಹಳ್ಳದಲ್ಲಿ ಎರಡು ಪಲ್ಟಿಯಾಗಿದ್ದು, ನನಗೆ ಯಾವುದೇ ಗಾಯಗಳಾಗಿರುವುದಿಲ್ಲ ಎಂದು ತಿಳಿಸಿದರು. ನಾನು ನನ್ನ ಮಗಳು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿರುತ್ತೆ. ನಮ್ಮ ಕಾರಿನ ಚಾಲಕ ರವಿಕುಮಾರ್ ರವರು ನನ್ನ ಬಾಬತ್ತು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಅಪಘಾತವನ್ನುಂಟು ಮಾಡಿದ್ದು, ಕಾರು ಸಂಪೂರ್ಣ ಜಖಂ ಗೊಂಡಿರುತ್ತೆ. ಸದರಿ ಕಾರಿನ ಚಾಲಕ ರವಿಕುಮಾರ್ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ದೂರು.

 

7. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.105/2021 ಕಲಂ. 420 ಐ.ಪಿ.ಸಿ:-

     ದಿನಾಂಕ.24.08.2021 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿ ಕೆ.ವಿ ಶ್ರೀನಿವಾಸ ಜೋಗುಪೇಟೆ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಸಾರಾಂಶವೇನಂದರೆ, ದಿನಾಂಕ.24.08.2021 ರಂದು ಬೆಳಿಗ್ಗೆ ಸುಮಾರು 11-00 ಗಂಟೆಯಲ್ಲಿ ನಾನು ನನ್ನ ಹೆಂಡತಿ ಕಮಲಮ್ಮ 09 ವರ್ಷದ ಮೊಮ್ಮಗಳೊಂದಿಗೆ ಮನೆಯಲ್ಲಿದ್ದಾಗ ಯಾರೋ ಇಬ್ಬರೂ ಸುಮಾರು 25 ರಿಂದ 30 ವರ್ಷದ ವಯಸ್ಸಿನ ಅಪರಿಚಿತ ವ್ಯಕ್ತಿಗಳು ನಮ್ಮ ಮನೆಗೆ ಬಂದು ನನ್ನ ಹೆಂಡತಿಗೆ ಮನೆಯಲ್ಲಿ ಟೈಲ್ಸ್ ಮತ್ತು ಓಡವೆಗಳಿಗೆ ಪಾಲಿಶ್ ಹಾಕುವ ಪೌಡರ್ ಇದೆ ಅದನ್ನು ತೆಗೆದುಕೊಳ್ಳಿ ಎಂದು ಮಾತನಾಡುತ್ತಿದ್ದಾಗ ನಾನು ನಮಗೆ ಯಾವುದು ಬೇಡ ಹೋಗಿ ಎಂದು ತಿಳಿಸಿದೆ. ಅವರು ಮನೆಯಲ್ಲಿರುವ ಬೆಳ್ಳಿ ತಾಮ್ರ ಬಂಗಾರದ ವಡವೆಗಳಿಗೆ ಪಾಲಿಷ್ ಹಾಕಿದರೆ ಚೆನ್ನಾಗಿ ಒಳಪು ಬರುತ್ತೆ. ಇದು 30/- ರೂ ಆಗುತ್ತೆ ಎಂದು ತೋರಿಸಿದರು ಆಗ ನಮಗೆ ಬೇಡಬ ಎಂದು ತಿಳಿಸಿದೆ. ಆದರೂ ಅವರು ಒಂದು ಡಬ್ಬಿಯನ್ನು ತೋರಿಸಿ ಬೇಕಾದರೇ ಇದನ್ನುಮುಟ್ಟಿ ನೋಡಿ ಇದು ಅಂಗಡಿಯಲ್ಲಿ ಸಿಗುತ್ತೆ ಎಂದು ತೋರಿಸಿದಾಗ ಅದನ್ನು ನಾನು ನನ್ನ ಹೆಂಡತಿ ಮುಟ್ಟಿ ನೋಡಿದೆವು ಆದರೆ ನಮಗೇ ಏನಾಯಿತೋ ಗೋತ್ತಾಗಲಿಲ್ಲ ನಮಗೆ ಪ್ರಜ್ಙೆ ಇಲ್ಲದಂತೆ ಆಯಿತು ಸ್ವಲ್ಪ ಸಮಯದ ನಂತರ ನಾವು ಎಚ್ಚರಗೊಂಡು ನೋಡಿದಾಗ ನನ್ನ ಹೆಂಡತಿ ಕುತ್ತಿಗೆಯಲ್ಲಿದ್ದ ಸುಮಾರು 60 ಗ್ರಾಂ ತೂಕದ ಬಂಗಾರದ ಚೈನು ಇಲ್ಲದೇ ಇರುವುದು ಕಂಡು ಬಂದಿರುತ್ತೆ. ನಂತರ ನಾವು ಹೊರಗಡೆ ಬಂದು ನೋಡಿದರೂ ಅವರು ಸಿಗಲಿಲ್ಲ. ಅವರು ನನ್ನ ಹೆಂಡತಿ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಪಾಲೀಷ್ ಮಾಡಿಕೊಡುವುದಾಗಿ ನಂಬಿಸಿ ಮೋಸ ಮಾಡಿ ತೆಗೆದುಕೊಂಡು ಹೊರಟು ಹೋಗಿರುತ್ತಾರೆ. ಆದ್ದರಿಂದ ಅವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿರುತ್ತೆ.

 

8. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.106/2021 ಕಲಂ. 20(b) NARCOTIC DRUGS & PSYCHOTROPIC SUBSTANCES ACT, 1985:-

     ದಿನಾಂಕ.25.08.2021 ರಂದು ಬೆಳಿಗ್ಗೆ 9-45 ಗಂಟೆಗೆ ಎ.ಎಸ್.ಐ ನರಸಿಂಹಮೂರ್ತಿ ರವರು ನೀಡಿದ ವರಧಿಯ ಸಾರಾಂಶವೇನೆಂದರೆ, ದಿನಾಂಕ: 25/08/2021 ರಂದು ಬೆಳಿಗ್ಗೆ 7-30 ಗಂಟೆಗೆ ಅಪರಾಧ ವಿಭಾಗದ ಪಿ.ಎಸ್.ಐ ರವರು ಎ.ಎಸ್.ಐ ನರಸಿಂಹಮೂರ್ತಿ ಆದ ನನಗೆ ಮತ್ತು ಹೆಚ್.ಸಿ-95 ರವರಿಗೆ ಶಿಡ್ಲಘಟ್ಟ ನಗರ ಠಾಣೆಯಲ್ಲಿ ವರಧಿಯಾಗಿರುವ ಕಳವು ಪ್ರಕರಣಗಳ ಪತ್ತೆ ಬಗ್ಗೆ ಹಾಗೂ ಆರೋಪಿಗಳ ಪತ್ತೆ ಬಗ್ಗೆ ನೇಮಕ ಮಾಡಿ ಕಳುಹಿಸಿದ್ದು, ಅದರಂತೆ ನಾವು ಶಿಡ್ಲಘಟ್ಟ ನಗರದಲ್ಲಿ ಟಿ.ಬಿ.ರಸ್ತೆ, ಕೋಟೆ ಸರ್ಕಲ್, ಆಶೋಕರಸ್ತೆ, ಗಾಂದೀನಗರ, ದೇಶದಪೇಟೆ ಕಡೆ ಗಸ್ತು ಮಾಡಿಕೊಂಡು ಬೆಳಿಗ್ಗೆ 9-00 ಗಂಟೆಯ ಸಮಯದಲ್ಲಿ ಚಿಂತಾಮಣಿ ರಸ್ತೆ ಪಂಪ್ ಹೌಸ್ ಬಳಿ ಗಸ್ತು ಮಾಡಿಕೊಂಡು ವಾಪಸ್ಸು ಬರುವಾಗ ಯಾರೋ ಬಾತ್ಮಿದಾರರಿಂದ ಚಿಂತಾಮಣಿ ತಾಲ್ಲೂಕು ಚಿನ್ನಸಂದ್ರ ಗ್ರಾಮ, ಸೈಯದ್ ಖಾದರ್ ಬಿನ್ ಲೇಟ್ ಸೈಯದ್ ಇಮಾಮ್ ಸಾಬ್, ಎಂಬುವರು ಆಗಾಗ ಚಿಂತಾಮಣಿಯಿಂದ ಶಿಡ್ಲಘಟ್ಟಕ್ಕೆ ಬಂದು ಪಂಪ್ ಹೌಸ್ ಬಳಿ ಕುಳಿತುಕೊಂಡು ಯಾರೋ ಸಾರ್ವಜನಿಕರಿಗೆ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ತಿಳಿಸಿರುತ್ತಾರೆ. ಅದರಂತೆ ಈ ದಿನ ಸಹ ಸಾದ್ಯತೆ ಇರುವುದಾಗಿ ಮಾಹಿತಿ ನೀಡಿದ್ದು, ಆದ್ದರಿಂದ ಕಾನೂನು ಬಾಹಿರವಾಗಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಸೈಯದ್ ಖಾದರ್ ಬಿನ್ ಲೇಟ್ ಸೈಯದ್ ಇಮಾಮ್ ಸಾಬ್ ರವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 25-08-2021 07:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080