Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.209/2021 ಕಲಂ. 15(A),32  ಕೆ.ಇ  ಆಕ್ಟ್:-

      ದಿನಾಂಕ: 24/07/2021 ರಂದು ರಾತ್ರಿ 8-15 ಗಂಟೆಗೆ ಶ್ರೀ ಗೋಪಾಲರೆಡ್ಡಿ ಪಿಎಸ್ಐ, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಯಲ್ಲಿ ಹಾಜರುಪಡಿಸಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ; 24-07-2021 ರಂದು ಸಂಜೆ ಸುಮಾರು 7-00 ಗಂಟೆ ಸಮಯದಲ್ಲಿ ನಾನು ಮತ್ತು  ಸಿ ಪಿ.ಸಿ 237 ವಿನಯ್ ಕುಮಾರ್ ಯಾದವ್  ಹಾಗೂ ಜೀಪ್ ಚಾಲಕ ಎ ಹೆಚ್ ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು, ದೇವರಗುಡಿಪಲ್ಲಿ, ಕಾರಕೂರು ಕಡೆಗೆ ಗಸ್ತು ಮಾಡುತ್ತಿದ್ದಾಗ,  ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ಕಾರಕೂರು ಕ್ರಾಸ್ ಬಳಿ ಇರುವ ರಾಯಲ್ ಪಾರ್ಕ ಫ್ಯಾಮಿಲಿ ಡಾಬದ ಮುಂಭಾಗದಲ್ಲಿ ಯಾರೋ ಒಬ್ಬ ಅಸಾಮಿಯು ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ವಿನಯ್ ಕುಮಾರ್ ಯಾದವ್ ಪಿ.ಸಿ 237 ರವರೊಂದಿಗೆ  ಸರ್ಕಾರಿ ಜೀಪ್ ನಲ್ಲಿ ಹೊರಟು, ಕಾರಕೂರು ಕ್ರಾಸ್ ನಲ್ಲಿದ್ದ  ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಸಂಜೆ 7-15  ಗಂಟೆಗೆ ರಾಯಲ್ ಪಾರ್ಕ ಫ್ಯಾಮಿಲಿ ಡಾಬದ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಡಾಬದ ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗಲು ಪ್ರಯತ್ನಿಸುತ್ತಿದ್ದವನನ್ನು ಸಿಬ್ಬಂದಿಯಾದ ವಿನಯ್ ಕುಮಾರ್ ಯಾದವ್ ರವರು ಹಿಡಿದುಕೊಂಡು ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ಶ್ರೀ ಕಿರಣ್ ಕುಮಾರ್ ಬಿನ್ ಸೋಮಶೇಖರ ರೆಡ್ಡಿ, 28 ವರ್ಷ, ವಕ್ಕಲಿಗರು, ರಾಯಲ್ ಪಾರ್ಕ ಫ್ಯಾಮಿಲಿ ಡಾಬದಲ್ಲಿ ಕ್ಯಾಷಿಯರ್ ವಾಸ: ಕಾರಕೂರು ಕ್ರಾಸ್, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದುಬಂದಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯನ್ನು  ರಾತ್ರಿ 8-15 ಗಂಟೆಗೆ ಠಾಣೆಯಲ್ಲಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.71/2021 ಕಲಂ. 15(A),32(3) ಕೆ.ಇ  ಆಕ್ಟ್:-

     ದಿನಾಂಕ:24/07/2021 ರಂದು ಮದ್ಯಾಹ್ನ 14:00 ಗಂಟೆಗೆ ಚೇಳೂರು ಪೊಲೀಸ್ ಠಾಣೆಯ ಪಿ ಎಸ್ ಐ ರವರಾದ ಪ್ರತಾಪ್ ಕೆ ಆರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:24-07-2021 ರಂದು ನಾನು ಬೆಳಗ್ಗೆ 11-15 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಚೇಳೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ಊದುವಾರಪಲ್ಲಿ ಗ್ರಾಮದ ಹೊರವಲಯದಲ್ಲಿ ಅಂದರೆ ಊದುವಾರಿಪಲ್ಲಿಯಿಂದ ಅಂದ್ರದ ಕಂದುಕೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವ  ರಸ್ತೆಯಲ್ಲಿ ಯಾರೋ ಒಬ್ಬ ಅಸಾಮಿಯು ಸಾರ್ವಜಿನಿಕರ ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಆಕ್ರಮ ಮಧ್ಯಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಮದ್ಯಪಾನವನ್ನು ಮಾಡುವುದಕ್ಕೆ ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿರುತ್ತದೆ. ಅದ್ದರಿಂದ ಸದರಿ ಅಸಾಮಿಯ ಮೇಲೆ ದಾಳಿ ಮಾಡುವ ಸಲುವಾಗಿ ಠಾಣೆಯಲ್ಲಿದ್ದ ಸಿಪಿಸಿ-07 ವಿಧ್ಯಾಧರ ಮತ್ತು ಚಾಲಕನಾದ ಎಪಿಸಿ-87 ಮೋಹನ್ ಕುಮಾರ್ ಜಿ.ಎ ರವರೊಂದಿಗೆ ಮತ್ತು  ಪಂಚಾಯ್ತಿದಾರರನ್ನು ಬರಮಾಡಿಕೊಂಡು  ಸರ್ಕಾರಿ ಜೀಪ್ ಸಂಖ್ಯೆ ಕೆಎ-42 ಜಿ-0061 ರಲ್ಲಿ ಚೇಳೂರು ಠಾಣಾ ಸರಹದ್ದಿನ  ಊದುವಾರಪಲ್ಲಿ ಗ್ರಾಮದ ಹೊರವಲಯದಲ್ಲಿ ಅಂದರೆ ಊದುವಾರಿಪಲ್ಲಿಯಿಂದ ಅಂದ್ರದ ಕಂದುಕೂರು ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದ ಮರದ   ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿಯು ತನ್ನ ಬಳಿ ಅಕ್ರಮವಾಗಿ ಮಧ್ಯದ ಪ್ಯಾಕೆಟಗಳನ್ನು ಇಟ್ಟುಕೊಂಡು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟಗಳನ್ನು ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟಿದ್ದ ಅಸಾಮಿಯ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಸ್ಥಳದಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಅಸಾಮಿಯು ಮದ್ಯದ ಪಾಕೆಟುಗಳನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾರೆ. ಗ್ರಾಮದಲ್ಲಿ ಸದರಿ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಚೌಡಪ್ಪ ಬಿನ್ ಲೇಟ್ ಶ್ರೀ.ವೆಂಕಟರಾಯಪ್ಪ , 45 ವರ್ಷ, ಬೋವಿ ಜನಾಂಗ , ಜಿರಾಯ್ತಿ, ವಾಸ ಊದುವಾರಪಲ್ಲಿ ಗ್ರಾಮ , ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದು ಬಂದಿರುತ್ತದೆ. ನಂತರ ಸ್ಥಳದಲ್ಲಿ ಬಿಸಾಡಿ ಹೋಗಿದ್ದ ಮಧ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ  90 ಎಂ.ಎಲ್ ನ HAYWARDS CHEERS WHISKY ಯ 10 ಟೆಟ್ರಾ ಪ್ಯಾಕೇಟುಗಳಿದ್ದು, ಪ್ರತಿ ಪ್ಯಾಕೆಟು ಮೇಲೆ 35.13/-ರೂ ಬೆಲೆ ಇರುತ್ತದೆ. ಸದರಿ ಪಾಕೆಟುಗಳಲ್ಲಿ ಇರುವ ಮದ್ಯದ ಸಾಮರ್ಥ್ಯ 900 ML ಇದ್ದು, ಇವುಗಳ ಒಟ್ಟು ಬೆಲೆ 351.3/- ರೂಗಳಾಗಿರುತ್ತೆ.ಮತ್ತು OLD ADMIRAL VS OP BRANDY ಯ 3 ರು ಪ್ಯಾಕೆಟುಗಳಿದ್ದು ಪ್ರತಿ ಪ್ಯಾಕೇಟು ಮೇಲೆ 86.07 ರೂಗಳಾಗಿರುತ್ತೆ ಮತ್ತುಸದರಿ ಪ್ಯಾಕಟುಗಳಲ್ಲಿರುವ ಮದ್ಯಧ ಸಾಮರ್ಥ್ಯ 540 ML ಇದ್ದು, ಇವುಗಳ ಒಟ್ಟು ಬೆಲೆ  260.25/- ರೂಗಳಾಗಿರುತ್ತೆ OLD TAVERN WHISKY ಯ 02 ಟೆಟ್ರಾ ಪ್ಯಾಕೇಟುಗಳಿದ್ದು,  ಪ್ರತಿ ಪಾಕೆಟು ಮೇಲೆ 86.75 /-ರೂಗಳಿರುತ್ತೆ ಸದರಿ ಪಾಕೆಟುಗಳಲ್ಲಿ ಇರುವ ಮದ್ಯದ ಸಾಮರ್ಥ್ಯ 360 ML ಇದ್ದು, ಇವುಗಳ ಒಟ್ಟು ಬೆಲೆ 173.5/- ರೂಗಳಾಗಿರುತ್ತೆ ಹಾಗೂ ಸದರಿ ಸ್ಥಳದಲ್ಲಿದ್ದ ಒಂದು ಲೀಟರನ ಖಾಲಿ ವಾಟರ್ ಬಾಟಲ್  ಹಾಗೂ  ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸಗಳನ್ನು  ಬೆಳಗ್ಗೆ  12-30 ಗಂಟೆಯಿಂದ 13-30 ಗಂಟೆಯವರೆಗೆ ದಾಳಿ ಮಾಡಿ ಪಂಚನಾಮೆಯ ಮೂಲಕ ಮೇಲ್ಕಂಡವುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:71/2021 ಕಲಂ 15(ಎ),32(3) ಕೆಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.323/2021 ಕಲಂ. 15(A) ಕೆ.ಇ ಆಕ್ಟ್:-

      ದಿನಾಂಕ: 24/07/2021 ರಂದು ಸಂಜೆ 5.30 ಗಂಟೆ ಸಮಯದಲ್ಲಿ ಠಾಣೆಯ ಶ್ರೀ ಆನಂದಕುಮಾರ್.ಕೆ.ಎಸ್, ಸಿ.ಹೆಚ್.ಸಿ-96 ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:24/07/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ತಾನು ಹಾಗೂ ಸಿ.ಪಿ.ಸಿ-185 ಶ್ರೀನಿವಾಸಮೂರ್ತಿರವರು ಠಾಣಾ ಸರಹದ್ದಿನ ಸೀಕಲ್ಲು, ಗಡದಾಸನಹಳ್ಳಿ, ವಿಶ್ವನಾಥಪುರ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 4.00 ಗಂಟೆಯ ಸಮಯದಲ್ಲಿ ಆನೂರು ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಅಮರನಾಥ ಬಿನ್ ವೆಂಕಟಸ್ವಾಮಿರವರು ತನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಆನೂರು ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಅಮರನಾಥ ಬಿನ್ ವೆಂಕಟಸ್ವಾಮಿ, 39 ವರ್ಷ, ಬಲಜಿಗರು, ಅಂಗಡಿ ವ್ಯಾಪಾರ, ವಾಸ:ಆನೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 4.15 ರಿಂದ 5.00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಅಮರನಾಥ ಬಿನ್ ವೆಂಕಟಸ್ವಾಮಿರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.324/2021 ಕಲಂ. 457,380 ಐ.ಪಿ.ಸಿ:-

      ದಿನಾಂಕ: 24/07/2021 ರಂದು ರಾತ್ರಿ 8.45 ಗಂಟೆಗೆ ಶ್ರೀಮತಿ ನಾಗರತ್ನಮ್ಮ ಕೋಂ ಲೇಟ್ ವೆಂಕಟರೆಡ್ಡಿ, 50 ವರ್ಷ, ವಕ್ಕಲಿಗರು, ಮನೆಕೆಲಸ, ಅಮಿಟಗಾನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ 3 ಹಸುಗಳಿದ್ದು ಸದರಿ ಹಸುಗಳನ್ನು ತಾನು ತಮ್ಮ ಮನೆಯ ಹಿಂದುಗಡೆ ಇರುವ ಶೆಡ್ ನಲ್ಲಿ ಕಟ್ಟಿ ಹಾಕುತ್ತಿರುತ್ತೇನೆ. ಎಂದಿನಿಂತೆ ಈ ದಿನ ದಿನಾಂಕ 24/07/2021 ರಂದು ಬೆಳಗಿನ ಜಾವ ಸುಮಾರು 01.30 ಗಂಟೆ ಸಮಯದಲ್ಲಿ ತಮ್ಮ ಮನೆಯ ಹಿಂದೆ ಕಟ್ಟಿ ಹಾಕಿದ್ದ ಹಸುಗಳು ಕೂಗಿದ ಶಬ್ದ ಕೇಳಿ ತಾನು ನಿದ್ದೆ ಎದ್ದು ದನಗಳ ಕೊಟ್ಟಿಗೆಯ ಬಳಿ ಹೋಗಿ ದನಗಳಿಗೆ ಮೇವು ಹಾಕಿ ಮನೆಗೆ ಬಂದು ನೋಡಲಾಗಿ ಮನೆಯ ಬೀರುವಾದ ಬಾಗಿಲು ತೆಗೆದಿದ್ದು, ಲಾಕರ್ ಓಪನ್ ಆಗಿದ್ದು ನೋಡಲಾಗಿ ಲಾಕರ್ ನಲ್ಲಿದ್ದ 20 ಗ್ರಾಂ ಬಂಗಾರದ ಕತ್ತಿನ ಚೈನು ಮತ್ತು 8 ಗ್ರಾಂ ಉಂಗುರ ಕಳುವಾಗಿರುತ್ತೆ. ತಾನು ಮನೆಯ ಆಚೆ ಬಂದು ನೋಡಲಾಗಿ ಯಾರೋ 3 ಜನ ಅಪರಿಚಿತರು ಓಡಿ ಹೋದರು. ನಂತರ ತಾನು ತಮ್ಮ ಅಕ್ಕ-ಪಕ್ಕದ ಮನೆಯವರನ್ನು ಎಬ್ಬಿಸಿ ಅವರಿಗೆ ವಿಚಾರವನ್ನು ತಿಳಿಸಿ ಕತ್ತಲಿನಲ್ಲಿ ಹುಡುಕಾಡಲಾಗಿ ಅವರು ಸಿಕ್ಕಿರುವುದಿಲ್ಲ. ಕಳುವಾಗಿರುವ ವಡವೆಗಳ ಬೆಲೆ ಸುಮಾರು 1,12,000/- ರೂಗಳಾಗಿರುತ್ತೆ. ತನ್ನ ಮಗನಾದ ವೇಣು ರವರು ಚೇಳೂರು ಬಳಿ ಇರುವ ನವಾಬ್ ಕೋಟೆಗೆ ಹೋಗಿದ್ದು ಅವನಿಗೆ ವಿಚಾರವನ್ನು ತಿಳಿಸಿ ತಡವಾಗಿ ದೂರು ನೀಡುತ್ತಿದ್ದು ಕಳುವಾಗಿರುವ ತನ್ನ ವಡವೆಗಳನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

5. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.72/2021 ಕಲಂ. 457,380 ಐ.ಪಿ.ಸಿ:-

       ದಿನಾಂಕ:24-07-2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದುದಾರರಾದ ಶ್ರೀ.ಎಂ.ಎನ್.ಮಂಜುನಾಥ ಬಿನ್ ಎಂ ನಂಜುಂಡಪ್ಪ, 39 ವರ್ಷ, ಬಲಜಿಗರು, ನಾಡಕಛೇರಿ ಬಳಿ, ಪಾತಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಮೊ.ಸಂ.9740001977 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ತಮ್ಮ ಜಮೀನಿನಲ್ಲಿ ಮನೆಯನ್ನು ಕಟ್ಟಿಕೊಂಡಿದ್ದು, ತಮ್ಮ ಹೆಂಡತಿ ಟೂರ್ ಗೆ ಹೋಗಬೇಕೆಂದು ಕೇಳದ್ದರಿಂದ ನೆನ್ನೆ ದಿನ ದಿನಾಂಕ: 23/07/2021 ರಂದು ತಾನು ತನ್ನ ಹೆಂಡತಿಯನ್ನು ಕರೆದುಕೊಂಡು ತಮ್ಮ ಮಾವನ ಮನೆಯಾದ ಬಾಗೇಪಲ್ಲಿ ಹತ್ತಿರ ಇರುವ ಕೊಂಡಂವಾರಿಪಲ್ಲಿ  (ಜಕ್ಕನಾಯಕನಪಲ್ಲಿ) ಗ್ರಾಮಕ್ಕೆ ಕರೆದುಕೊಂಡು ಹೋಗಿ ರಾತ್ರಿ ಅಲ್ಲಿಯೇ ಇದ್ದು, ಈ ದಿನ ದಿನಾಂಕ:24/07/2021 ರಂದು ಬೆಳಗ್ಗೆ 08-00 ಗಂಟೆಗೆ ತಾನು ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ತಮ್ಮ ಮನೆಯ ಗೇಟ್ ಬೀಗವನ್ನು ಹೊಡೆದು ಹಾಕಿ ತಮ್ಮ ಮನೆಯ ಬಾಗಿಲಿಗೆ ಹಾಕಿದ್ದ ಡೋರ್ ಲಾಕ್ ಬೀಗವನ್ನು ಗಡಾರಿಯಿಂದ ಮೀಟಿ ಮನೆಯ ಒಳಗೆ ಪ್ರವೇಶಿಸಿ ಗೋಡೆಗೆ ಅಳವಡಿಸಿದ್ದ ಕಬೋರ್ಡ್ ನ್ನು ಹೊಡೆದು ಹಾಕಿ ಅದರಲ್ಲಿದ್ದ ಬಟ್ಟೆ ಬರೆಗಳನ್ನು ಕಿತ್ತು ಮನೆಯಲ್ಲಿ ಬಿಸಾಕಿ ಕಬೋರ್ಡ್ ನಲ್ಲಿ ಇಟ್ಟಿದ್ದ ಬಂಗಾರದ ಒಡವೆಗಳಾದ 1)ಬಂಗಾರದ ಹಾರ 35 ಗ್ರಾಂ ತೂಕ  2)ಒಂದು ಜೊತೆ ಓಲೆ  ಮತ್ತು ಮಾಟಿಗಳು 17 ಗ್ರಾಂ 3)ಕತ್ತಿನ ಚೈನ್ 11 ಗ್ರಾಂ 4)ಬಂಗಾರದ ಉಂಗುರ 6 ಗ್ರಾಂ ಬೆಳ್ಳಿಯ ಒಡವೆಗಳಾದ 1)ಕಳಸದ ಚೆಂಬು-500 ಗ್ರಾಂ  2)ತಟ್ಟೆ-500 ಗ್ರಾಂ 3)ದೀಪಗಳು-2,   4)ಕುಂಕುಮ ಭರಣಿಗಳು-4, 5)ಗಣಪತಿ ವಿಗ್ರಹ  ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಸದರಿ ಒಡವೆಗಳು ಅಂದಾಜು 3 ಲಕ್ಷ 50 ಸಾವಿರ ರೂಗಳು  ಬೆಲೆಬಾಳುವ ಒಡವೆಗಳಾಗಿದ್ದು, ದಿನಾಂಕ:23/07/2021 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ತಮ್ಮ ಮನೆಯೊಳಗೆ ಪ್ರವೇಶಿಸಿ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಕಳುವಾಗಿರುವ ಬಂಗಾರದ & ಬೆಳ್ಳಿಯ ಒಡವೆಗಳನ್ನು ಹಾಗೂ ಕಳ್ಳರನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ.

 

6. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.73/2021 ಕಲಂ. 15(A),32(3) ಕೆ.ಇ ಆಕ್ಟ್:-

      ದಿನಾಂಕ:25-07-2021 ರಂದು ಬೆಳಿಗ್ಗೆ 11-45 ಗಂಟೆಗೆ ASI ಲಕ್ಷ್ಮೀನಾರಾಯಣ ರವರು ಮಾಲು, ಆರೋಪಿ ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:25-07-2021 ರಂದು PSI ರವರ ನೇಮಕದಂತೆ ತಾನು & ಸಿಬ್ಬಂದಿ HC-180 & PC-584 ರವರು ಬೆಳಿಗ್ಗೆ 10-30 ಗಂಟೆಯಲ್ಲಿ ಕಲ್ಲಿಪಲ್ಲಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಅದೇ ಗ್ರಾಮದ ನರಸಿಂಹಪ್ಪ ಎಂಬುವವರು ತಮ್ಮ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ನರಸಿಂಹಪ್ಪರವರು ತಮ್ಮ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ತಾವು ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಅಲ್ಲಿಂದ ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸ ಕೇಳಲಾಗಿ ನರಸಿಂಹಪ್ಪ ಬಿನ್ ನಂಜಪ್ಪ, 43 ವರ್ಷ, ಆದಿಕರ್ನಾಟಕ, ವ್ಯಾಪಾರ, ಕಲ್ಲಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90ML ಓಲ್ಡ್ ಟಾವೆರ್ನ್ ವಿಸ್ಕಿಯ 15 ಟೆಟ್ರಾ ಪ್ಯಾಕೆಟ್ ಗಳು ಇದ್ದು, (1 ಲೀಟರ್ 350ML ಬೆಲೆ 526/-ರೂಗಳು), ಒಂದು ಲೀಟರ್ ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90ML ಒಂದು ಖಾಲಿ ಓಲ್ಡ್ ಟಾವೆರ್ನ್  ವಿಸ್ಕಿಯ ಟೆಟ್ರಾ ಪ್ಯಾಕೆಟ್ ಇದ್ದು, ಆರೋಪಿಯನ್ನು ವಶಕ್ಕೆ ಪಡೆದು ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಬೆಳಿಗ್ಗೆ 10-30 ಗಂಟೆಯಿಂದ 11-15 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ, ಆರೋಪಿ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕೋರಿ.

Last Updated: 25-07-2021 05:38 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080