Feedback / Suggestions

1. ಚಿಂತಾಮಣಿ ಗ್ರಾಮಾಂತರ  ಪೊಲೀಸ್  ಠಾಣೆ ಮೊ.ಸಂ.288/2021 ಕಲಂ.87 ಕೆ.ಪಿ ಆಕ್ಟ್:-

     ದಿನಾಂಕ: 24/06/2020 ರಂದು ರಾತ್ರಿ 9.15 ಗಂಟೆಗೆ ಠಾಣೆಯ CPC-339 ರವರು ಘನ ನ್ಯಾಯಾಲಯದ ನ್ಯಾಯಾಧೀಶರ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಅನುಮತಿಯ ಪತ್ರದ ಸಾರಾಂಶವೇನೆಂದರೆ, ಈ ದಿನ ದಿನಾಂಕ:24/06/2021 ರಂದು ಸಂಜೆ 6.00 ಗಂಟೆಯಲ್ಲಿ ಠಾಣೆಯ ಶ್ರೀ.ನರೇಶ್ ನಾಯ್ಕ್.ಎಸ್, ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ, ಠಾಣಾ ಸರಹದ್ದಿಗೆ ಸೇರಿದ ಶ್ರೀನಿವಾಸಪುರದಿನ್ನೆ ಗ್ರಾಮದ ಬಳಿಯಿರುವ ಸರ್ಕಾರಿ ಕಾಲುವೆಯಲ್ಲಿರುವ ಹೊಂಗೆ ಮರದ ಕೆಳಗೆ ಯಾರೋ ಕೆಲವರು ಗುಂಪುಕಟ್ಟಿಕೊಂಡು ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಠಾಣೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಹೆಚ್.ಸಿ-41 ಜಗದೀಶ್, ಸಿ.ಪಿ.ಸಿ-544 ವೆಂಕಟರವಣ, ಸಿಪಿಸಿ-339 ಶ್ರೀ ಕರಿಯಪ್ಪ, ಸಿಪಿಸಿ-516 ಶ್ರೀ ವಿಶ್ವನಾಥ, ಸಿಪಿಸಿ-197 ಅಂಭರೀಶ ಹಾಗೂ ಚಾಲಕ ಎ.ಹೆಚ್.ಸಿ-38 ಮುಖೇಶ್ ಮತ್ತು ಪಂಚರೊಂದಿಗೆ KA-40-G-326 ನಂಬರಿನ ಠಾಣೆಯ ಸರ್ಕಾರಿ ಜೀಪಿನಲ್ಲಿ ಶ್ರೀನಿವಾಸಪುರದಿನ್ನೆ ಗ್ರಾಮದ ಬಳಿಯಿರುವ ಸರ್ಕಾರಿ ಕಾಲುವೆಯಲ್ಲಿರುವ ಹೊಂಗೆ ಮರದ ಬಳಿ ಹೋಗಿ ಜೀಪನ್ನು ನಿಲ್ಲಿಸಿ ನೋಡಲಾಗಿ ಸರ್ಕಾರಿ ಕಾಲುವೆಯಲ್ಲಿರುವ ಹೊಂಗೆ ಮರದ ಕೆಳಗೆ ಕೆಲವರು ಗುಂಪು ಕಟ್ಟಿಕೊಂಡು ಇಸ್ಪಿಟ್ ಜೂಜಾಟ ಆಡುತ್ತಿದ್ದು ಸದರಿಯವರನ್ನು ಸುತ್ತುವರಿದು ಓಡಿಹೋಗದಂತೆ ಎಚ್ಚರಿಕೆ ನೀಡಿ ಜೂಜಾಟ ಆಡುತ್ತಿದ್ದವರನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸ ಕೇಳಲಾಗಿ 1) ಆನಂದರೆಡ್ಡಿ ಬಿನ್ ಬೈಯಣ್ಣ, 41 ವರ್ಷ, ವಕ್ಕಲಿಗರು, ಜಿರಾಯ್ತಿ, ಧನಮಿಟ್ಟೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, 2) ನಟರಾಜ್ ಬಿನ್ ಲೇಟ್ ಶಿವದೇವಾಚಾರಿ, 46 ವರ್ಷ, ಆಚಾರ್ಯರು, ಕಾರು ಚಾಲಕ, ಕನ್ನಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು. 3) ದೇವರೆಡ್ಡಿ ಬಿನ್ ಯರ್ರಪ್ಪರೆಡ್ಡಿ, 49 ವರ್ಷ, ವಕ್ಕಲಿಗರು, ಜಿರಾಯ್ತಿ, ಶ್ರೀನಿವಾಸಪುರದಿನ್ನೆ ಗ್ರಾಮ, ಚಿಂತಾಮಣಿ ತಾಲ್ಲೂಕು. 4)ಆನಂದ ಬಿನ್ ಲೇಟ್ ವೆಂಕಟಪ್ಪ, 40 ವರ್ಷ, ವಕ್ಕಲಿಗರು, ಕೂಲಿ ಕೆಲಸ, ಕನ್ನಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು. 5)ರಮೇಶ್ ಬಿನ್ ದೊಡ್ಡಯ್ಯ, 40 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ಎನ್.ಎನ್.ಟಿ ರಸ್ತೆ, ಚಿಂತಾಮಣಿ ಟೌನ್ ಎಂತ ತಿಳಿಸಿದರು, ಸ್ಥಳದಲ್ಲಿ ನೋಡಲಾಗಿ ಪಣಕ್ಕಿಟ್ಟಿದ್ದ 5,030/- ರೂ ನಗದು ಹಣ, 52 ಇಸ್ಪಿಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಹಾಗೂ ಜೂಜಾಡಲು ಆರೋಪಿತರು ಸ್ಥಳಕ್ಕೆ ತಂದಿದ್ದ 1)ಕೆಎ-40 ಕ್ಯೂ-8600 ಬಜಾಜ್ ಡಿಸ್ಕವರ್ ದ್ವಿಚಕ್ರ ವಾಹನ,2)ಕೆಎ-40 ಹೆಚ್-6187 ಟಿ.ವಿ.ಎಸ್ ಜುಪಿಟರ್ ದ್ವಿಚಕ್ರ ವಾಹನ, 3)ಕೆಎ-02 ಇಇ-8675 ಹಿರೊ ಹೊಂಡಾ ಸ್ಪೆಂಡರ್ ದ್ವಿಚಕ್ರ ವಾಹನ, 4)ಕೆಎ-40 ಕ್ಯೂ-7021 ಹಿರೋ ಹೊಂಡಾ ಪ್ಯಾಶನ್ ಪ್ರೋ ದ್ವಿಚಕ್ರ ವಾಹನಗಳು ಸ್ಥಳದಲ್ಲಿದ್ದು, ಸದರಿ ಮಾಲು ಮತ್ತು ದ್ವಿಚಕ್ರ ವಾಹನಗಳನ್ನು ಸಂಜೆ 6.30 ರಿಂದ 7.30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಮಾಲು, ಆರೋಪಿತರು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿದ್ದು, ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿರುತ್ತೆ. ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

2. ದಿಬ್ಬೂರಹಳ್ಳಿ   ಪೊಲೀಸ್  ಠಾಣೆ ಮೊ.ಸಂ.73/2021 ಕಲಂ. 323,324,341,504,506,34 ಐ.ಪಿ.ಸಿ:-

     ದಿನಾಂಕ:24/06/2021 ರಂದು ಸಂಜೆ 18-15 ಗಂಟೆಗೆ ಪಿರ್ಯಾದಿ ಸಿದ್ದಪ್ಪ ಬಿನ್ ಲೇಟ್ ಶಿವಪ್ಪ, 30 ವರ್ಷ, ಕೂಲಕೆಲಸ. ನಾಯಕರು, ಹಾಲಿ ವಾಸ: ತರಬಹಳ್ಳಿ ಗ್ರಾಮ ಶಿಡ್ಲ ಘಟ್ಟ ತಾಲ್ಲೂಕು ಸ್ವಂತ ಸ್ಥಳ:ಅಡಕಲಗುಡ್ಡ ಗ್ರಾಮ, ದೇವದುರ್ಗ ತಾಲ್ಲೂಕು,ರಾಯಚೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ, ತಾನು ಗಾರೆ ಮೇಸ್ತ್ರಿ ಕೆಲಸ ಮಾಡುತ್ತಿದ್ದು ತನ್ನ ಸ್ವಂತ ಗ್ರಾಮ  ಅಡಕಲಗುಡ್ಡ ಗ್ರಾಮ, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ ಯಾಗಿದ್ದು ನಾನು ನಮ್ಮ ಗ್ರಾಮದಿಂದ ಬೆಂಗಳೂರಿನಲ್ಲಿ ಕ್ರಾಂಟ್ರಕ್ಟರ್  ಗಳ  ಬಳಿ ಗಾರೆ ಕೆಲಸ ಮಾಡುತ್ತಿದ್ದು ಅಲ್ಲಿ ಪರಿಚಯಸ್ಥನಾದ ಪ್ರಕಾಶ್ ಎಂಬುವವರು ತನ್ನ ಸ್ವಂತ ಗ್ರಾಮವಾದ  ಶಿಡ್ಲಘಟ್ಟ ತಾಲ್ಲೂಕು ತರಬಹಳ್ಳಿ ಗ್ರಾಮದಲ್ಲಿ ಕಟ್ಟಡ ಕಟ್ಟುವ ಕೆಲಸ ಇದೆ ಎಂದು ಸುಮಾರು 08 ಜನರನ್ನು  ಕರೆದುಕೊಂಡು  ಬಂದಿದ್ದು ಈಗ್ಗೆ 15 ದಿನಗಳಿಂದ ನಾವು ಶಿಡ್ಲಘಟ್ಟ ತಾಲ್ಲೂಕು  ತರಬಹಳ್ಳಿ ಗ್ರಾಮದ  ಪ್ರಕಾಶ್ ರವರ   ಮನೆ ಕಟ್ಟುವ ಕೆಲಸ  ಮಾಡಿಕೊಮಡಿರುತ್ತೇವೆ.  ನಾವು ಕೆಲಸ ಮಾಡುತ್ತಿದ್ದ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ಒಂದು ಎಗ್ ರೈಸ್ ಅಂಗಡಿ ಇದ್ದು  ಅಲ್ಲಿ ಗೆ  ದಿನಾಂಕ:23/06/2021 ರಂದು ಸಂಜೆ 6-30 ಗಂಟೆಯ ಸಮಯದಲ್ಲಿ ಎಗ್ ರೈಸ್ ತಿನ್ನಲು ನಾನು ಮತ್ತು ನನ್ನ ಜೊತೆ ಕೆಲಸ ಮಾಡುತ್ತಿದ್ದ ಮಹೇಶ್ ಬಿನ್ ಭೀಮಣ್ಣ ರವರು ಹೋದಾಗ ನಾನು ಸರಿಯಾಗಿ ಮಾಸ್ಕ್ ಹಾಕಿದಿರುವುದಿಲ್ಲ ಎಂದು ಎಗ್ ರೈಸ್ ಅಂಗಡಿಯಲ್ಲಿದ್ದ ವ್ಯಕ್ತಿಯು ಹೇಳಿದ್ದು ನಾನು ಮೊದಲು ನೀನು ಮಾಸ್ಕ್ ಧರಿಸು ಅಣ್ಣ ಎಂದು ಹೇಳುತ್ತಿದ್ದಾಗ ಅಂಗಡಿಯ ಒಳಗಿನಿಂದ ಒಬ್ಬ ವ್ಯೆಕ್ತಿಯು ಬಂದು ಏಕಾಏಕಿ ನಿಮಮ್ಮನೇ ಕೇಯಾ  ಪಸ್ಟ್ ಇಲ್ಲಿಂದ ಹೋಗು ನೀನು ಎಂದು ತನ್ನ ಕೈಯಲ್ಲಿದ್ದ ಮರದ ರೀಪೀಸ್ ತೆಗೆದುಕೊಂಡು  ಬಲ ಕೈನ ಭುಜದ ಬಳಿ ಹಾಗೂ ಎಡಕಾಲಿನ ತೊಡೆಗೆ ಹೊಡೆದು ಮೂಗೇಟುನ್ನುಂಟು ಮಾಡಿ ನೀನು ಇಲ್ಲಿಂದ ಹೋಗು ಇಲ್ಲವಾದರೆ ಪ್ರಾಣ ಸಹಿತ ಬಿಡುವುದಿಲ್ಲಾವೆಂದು ಪ್ರಾಣ ಬೆದರಿಕೆ ಹಾಕಿ ಅವಾಚ್ಯವಾಗಿ ಬೈದಿದ್ದು ಅಲ್ಲಿಯೇ ಇದ್ದ ಇನ್ನೊಬ್ಬ ಮಹಿಳೆಯು ನನ್ನ ಗಲ್ಲಪಟ್ಟಿಯನ್ನು ಹಿಡಿದು ನನ್ನನ್ನು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿ ತಡೆದು ಕೈಯಿಂದ ಬೆನ್ನಿನ ಮೇಲೆ ಹೊಡೆದಿರುತ್ತಾರೆ. ಆಗ  ನನ್ನ ಜೊತೆಯಲ್ಲಿ ಬಂದ ಮಹೇಶ್ ಬಿನ್  ಭೀಮಣ್ಣ, 28 ವರ್ಷ, ಗಾರೆ ಕೆಲಸ. ಕುರುಬ ಜನಾಂಗ, ಹಾಲಿ ವಾಸ: ತರಬಹಳ್ಳಿ ಗ್ರಾಮ ಶಿಡ್ಲ ಘಟ್ಟ ತಾಲ್ಲೂಕು ,ಸ್ವಂತ ಸ್ಥಳ:ಅಡಕಲಗುಡ್ಡ ಗ್ರಾಮ, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ ರವರು ಗಲಾಟೆ ಬಿಡಿಸಲು ಬಂದಾಗ  ಮಹೇಶ್ ರವರಿಗೆ ಅದೇ ವ್ಯಕ್ತಿಯು ಕೈಗಳಿಂದ ಮತ್ತು ಅದೇ ರೀಪೀಸ್ ನಿಂದ ಆತನ ಎಡ ಕೈನ ಅಂಗೈನ ಮೇಲೆ ಹಾಗೂ ಎಡ ಭುಜಕ್ಕೆ ಹೊಡೆದು  ಮೂಗೇಟನ್ನುಂಟು ಮಾಡಿರುತ್ತಾರೆ. ನಂತರ  ತರಬಹಳ್ಳಿ ಗ್ರಾಮದ ಪ್ರಕಾಶ್ ಬಿನ್ ಲೇಟ್ ರಾಮಕೃಷ್ಣಪ್ಪ ,55 ವರ್ಷ, ಜಿರಾಯ್ತಿ, ವಕ್ಕಲಿಗರು ರವರು ಅಲ್ಲಿಗೆ ಬಂದು ಗಲಾಟೆಯನ್ನು ಬಿಡಿಸಿ ಗಾಯಗೊಂಡಿದ್ದ ನನ್ನನ್ನು ಚಿಕಿತ್ಸೆಗಾಗಿ ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾರೆ. ಮಹೇಶ್ ಬಿನ್ ಭೀಮಣ್ಣ ರವರಿಗೆ ಮೂಗೇಟುಗಳಾದ ಕಾರಣ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಿಲ್ಲ. ನನ್ನನ್ನು ಮತ್ತು ಮಹೇಶ್ ಬಿನ್  ಭೀಮಣ್ಣ ರವರನ್ನು  ಕೈಗಳಿಂದ  ಹಾಗೂ ರೀಪೀಸ್ ನಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿರುವ  ವ್ಯಕ್ತಿಗಳ ಬಗ್ಗೆ ತಿಳಿಯಲಾಗಿ ಆತನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಶ್ರೀನಿವಾಸ ಬಿನ್ ದೊಡ್ಡ ವೆಂಕಟಪ್ಪ , 45 ವರ್ಷ, ಎಗ್ ರೈಸ್ ಅಂಗಡಿಯ ಮಾಲೀಕ ವಾಸ: ಪಲಿಚೆರ್ಲು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು  ಹಾಗೂ ಆತನ ಹೆಂಡತಿ ಬೇಟಮ್ಮ @ಭಾಗ್ಯಮ್ಮ ಕೊಂ ಶ್ರೀನಿವಾಸ, 33 ವರ್ಷ ಎಂದು  ತಿಳಿದು ಬಂದಿರುತ್ತೆ. ಆದ್ದರಿಂದ್ದ ನಮ್ಮ ಮೇಲೆ ಗಲಾಟೆ ಮಾಡಿರುವವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ಪಡೆದು ಠಾಣಾ ಮೊ.ಸಂಖ್ಯೆ:73/2021 ಕಲಂ:323,324,341,504,506 ರೆ-ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

3. ಗೌರಿಬಿದನೂರು ಗ್ರಾಮಾಂತರ   ಪೊಲೀಸ್  ಠಾಣೆ ಮೊ.ಸಂ.142/2021 ಕಲಂ. 279,337  ಐ.ಪಿ.ಸಿ:-

     ದಿನಾಂಕ: 24-06-2021 ರಂದು  ಮದ್ಯಾಹ್ನ 1-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ.ತಿಪ್ಪರಾಜು ಬಿನ್ ರಾಮಪ್ಪ, 38 ವರ್ಷ, ನಾಯಕರು , ಪಂಚರ್ ಅಂಗಡಿ ಕೆಲಸ, ವಾಸ : ಸುಬ್ಬರಾಯನಹಳ್ಳಿ ಗ್ರಾಮ, ವಾಟದಹೊಸಹಳ್ಳಿ ಪಂಚಾಯ್ತಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ, ದಿನಾಂಕ: 22-06-2021 ರಂದು ಬೆಳಗ್ಗೆ 6-40 ಗಂಟೆಗೆ ಪಿರ್ಯಾದಿದಾರರ 12 ವರ್ಷದ ಮಗನಾದ ಶಶಿಕುಮಾರ್  ರವರು  ಹಾಲನ್ನು ತೆಗೆದುಕೊಂಡು ಬೈಸಿಕಲ್ ನಲ್ಲಿ ಮನೆಗೆ ಬರುವಾಗ ವಾಟದಹೊಸಹಳ್ಳಿ ಗ್ರಾಮ ಪಂಚಾಯ್ತಿ ಮುಂದೆ  ಕೆಎ-42-1564 ಗಾರ್ಮೆಂಟ್ಸ್ ಬಸ್ ಚಾಲಕನು ಬಸ್ಸನ್ನು ಗೌರಿಬಿದನೂರು ಕಡೆಯಿಂದ ವಾಟದಹೊಸಹಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ಶಶಿಕುಮಾರ್ ರವರಿಗೆ ಡಿಕ್ಕಿ ಹೊಡೆಸಿ, ಚಾಲಕ ಬಸ್ಸನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ, ಎದುರಿನ  ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ  ಪಿರ್ಯಾದಿ ಮತ್ತು  ಗ್ರಾಮಸ್ಥರಾದ ಮೋಹನ್ ಬಿನ್  ಶಿವಪ್ಪ ರವರು ಹೋಗಿ ನೋಡಲಾಗಿ ಮಗ ಶಶಿಕುಮಾರ್ ರವರಿಗೆ ತಲೆಗೆ ಊತದ ಗಾಯವಾಗಿದ್ದು, ಪ್ರಜ್ಞಾ ಹೀನನಾಗಿದ್ದು, ಕೂಡಲೇ  ವಾಟದಹೊಸಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಮಾಡಿಸಿ,  ನಂತರ ನಾನು ಮತ್ತು ಮೋಹನ್  ಯಾವುದೋ ಆಟೋದಲ್ಲಿ ಗೌರಿಬಿದನೂರು ಮಾನಸ ಆಸ್ಪತ್ರೆಗೆ ಚಿಕಿತ್ಸೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅದರಂತೆ ನಾವು ನನ್ನ ಮಗ ಶಶಿಕುಮಾರ್ ನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಒಳರೋಗಿಯಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಈದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಕೆಎ-42-1564 ಗಾರ್ಮೆಂಟ್ಸ್ ಬಸ್  ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

4. ಗೌರಿಬಿದನೂರು ಪುರ   ಪೊಲೀಸ್  ಠಾಣೆ ಮೊ.ಸಂ.88/2021 ಕಲಂ. 379  ಐ.ಪಿ.ಸಿ:-

     ದಿನಾಂಕ 25/06/2021 ರಂದು ಬೆಳಗ್ಗೆ 10-00 ಗಂಟೆಗೆ ಪಿರ್ಯಾದಿದಾರರಾದ ಶಶಿಕುಮಾರ್ ಬಿ, ಬಿನ್ ಬಾಲಪ್ಪ 23 ವರ್ಷ, ಆದಿಕರ್ನಾಟಕ, ಜನಾಂಗ, ಹಿರೇಬಿದನೂರು ಗೌರಿಬಿದನೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 22/06/2021 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ತನ್ನ ಬಾಬ್ತು ದ್ವಿಚಕ್ರ ವಾಹನ ಸಂಖ್ಯೆ ಕೆ ಎ 40 ಇಎಫ್ 2787 ಪಲ್ಸರ್  ಸಿಸಿ ರೆಡ್ ಬ್ಲಾಕ್ ದ್ವಿಚಕ್ರ ವಾಹನವನ್ನು ನಮ್ಮ ಮನೆಯ ಪಕ್ಕದಲ್ಲಿರುವ ಕೆನರಾ ಬ್ಯಾಂಕ್  ಮುಂಭಾಗ ನಿಲ್ಲಿಸಿ ರಾತ್ರಿ ಮಲಗಿ ಬೆಳಗ್ಗೆ5-50 ಗಂಟೆಗೆ ಎದ್ದು ನೋಡಲಾಗಿ ತನ್ನ ಬಾಬ್ತು ದ್ವಿಚಕ್ರ ವಾಹನ ಕೆನರಾ ಬ್ಯಾಂಕ್ ಮುಂಭಾಗ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ದ್ವಿಚಕ್ರ ವಾಹನದ ಬೆಲೆ 35000/- ಆಗಿದ್ದು  ಪತ್ತೆ ಮಾಡಿಕೊಡಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

5. ಮಂಚೇನಹಳ್ಳಿ   ಪೊಲೀಸ್  ಠಾಣೆ ಮೊ.ಸಂ.102/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:24/06/2021 ರಂದು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:23-06-2021. ರಂದು ಸಂಜೆ19-30 ಗಂಟೆಗೆ  ಚಿಕ್ಕಬಳ್ಳಾಪುರ  ಡಿ.ಸಿ.ಬಿ./ಸಿ.ಇಎನ್.ಪೊಲೀಸ್ ಠಾಣೆಯ  ಪೊಲೀಸ್ ಸಬ್ಇನ್ಸ್ ಪೆಕ್ಟರ್ ಶ್ರೀ ಶರತ್ ಕುಮಾರ್ ರವರು ಮಾಲು ಮಹಜರ್ ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಈ ದಿನ ನಾನು ಮತ್ತು ನಮ್ಮ ಸಿಬ್ಬಂದಿಯವರು ಗೌರಿಬಿದನೂರು ತಾಲ್ಲೂಕಿನ ಕಡೆ ಕಾನೂನು ಬಾಹೀರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಕರ್ತವ್ಯದಲ್ಲಿದ್ದಾಗ, ಸಂಜೆ 4-00 ಗಂಟೆ ಸಮಯದಲ್ಲಿ  ಬಿಸಲಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ, ಮಂಚೇನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಪುರ ಗ್ರಾಮದಿಂದ ಉತ್ತರಕ್ಕಿ ರುವ  ಸರ್ಕಾರಿ ಬೆಟ್ಟದ ತಪ್ಪಲಿನ ಒಂದು ಚಿಗರೆ ಮರದ ಕೆಳಗೆ ಯಾರೋ ಕೆಲವರು ಕಾನೂನು ಬಾಹೀರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಸದರಿ ಜೂಜಾಟದ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಲಾಗಿ  ದಾಳಿಯಲ್ಲಿ 1) ಬಾಲಪ್ಪ @ ಪಾಂಡು ಬಿನ್ ಕೃಷ್ಣಪ್ಪ, 30 ವರ್ಷ, ಪ.ಜಾತಿ, ಜಿರಾಯ್ತಿ, ವಾಸ ವರವಣಿ ಗ್ರಾಮ,  ಗೌರಿಬಿದನೂರು ತಾಲ್ಲೂಕು 2) ವರದರಾಜು ಬಿನ್ ಗೋಪಾಲಪ್ಪ, 40 ವರ್ಷ, ಕುಂಬಾರರು, ಜಿರಾಯ್ತಿ, ವರವಣಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಸಿಕ್ಕಿದ್ದು, ಸ್ಥಳದಿಂದ  3)ನವೀನ್ ಬಿನ್ ಲೇಟ್ ನಾಗಯ್ಯ, 35 ವರ್ಷ, ಸ್ಟೂಡಿಯೋದಲ್ಲಿ ಕೆಲಸ, ವಾಸ ಪು ಗ್ರಾಮ, ಗೌರಿಬಿದನೂರು ತಾಲ್ಲೂಕು. 4) ಚಿಟ್ಟಿ ಗಂಗಾಧರಪ್ಪ ಬಿನ್ ಗಂಗಪ್ಪ, 50 ವರ್ಷ, ನಾಯಕರು, ಕೂಲಿ ಕೆಲಸ, ಮಾವಿನಕಾಯಲಹಳ್ಳಿ ಗ್ರಾಮ, 5) ಶ್ರೀನಿವಾಸ ಬಿನ್ ನಾರಾಯಣಪ್ಪ, 35 ವರ್ಷ, ಬಲಜಿಗರು, ಜಿರಾಯ್ತಿ, ಆರ್ಕುಂದ ಗ್ರಾಮ, ಗೌರಿಬಿದನೂರು ತಾಲ್ಲೂಕ 3 ಜನ ಆರೋಪಿತರು ಪರಾರಿಯಾಗಿರುತ್ತಾರೆ, ನಂತರ ಸ್ಥಳದಲ್ಲಿ ಜೂಜಾಟಕ್ಕೆ ಬಳಸಿದ್ದ 1) 52 ಇಸ್ಪೀಟು ಎಲೆಗಳು 2) ಒಂದು ಹಳೆ ನ್ಯೂಸ್ ಪೇಪರ್ 3) ಹಾಗೂ ಪಣಕ್ಕೆ ಹಾಕಿದ್ದ 4,220/-ರೂಪಾಯಿಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ, ಜೂಜಾಟದ ಸ್ಥಳದಲ್ಲಿ ಸಿಕ್ಕಿಬಿದ್ದ ಆರೋಪಿತರನ್ನು ಮತ್ತು ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು,  ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್ 165/2021 ರಂತೆ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

6. ಶಿಡ್ಲಘಟ್ಟ ಗ್ರಾಮಾಂತರ   ಪೊಲೀಸ್  ಠಾಣೆ ಮೊ.ಸಂ.210/2021 ಕಲಂ. 379 ಐ.ಪಿ.ಸಿ:-

     ದಿನಾಂಕ:24.03.2021 ರಂದು ಮದ್ಯಾಹ್ನ 3.00 ಗಂಟೆಗೆ ಪಿರ್ಯಾದಿದಾರರಾದ ಎ ಗೋಪಾಲ್ ಬಿನ್ ಅಶ್ವಥಪ್ಪ, ವಕ್ಕಲಿಗರು, ಜಿರಾಯ್ತಿ, ಯಣ್ಣಂಗೂರು ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನಂದರೆ, ಯಣ್ಣಂಗೂರು ಗ್ರಾಮದ ಸರ್ವೆ ನಂ 125/1, 123/1, 121/2 ರಲ್ಲಿ ಒಟ್ಟು 3 ಎಕರೆ ಜಮೀನು ಇದ್ದು ತಮ್ಮ ಜಮೀನಿನ ಪಕ್ಕದಲ್ಲಿ ಇರುವ ತಮ್ಮ ಸಂಬಂದಿಕರಾದ ಪಿಳ್ಳಹನುಮೇಗೌಡ ಬಿನ್ ಆರ್ ಮುನಿಯಪ್ಪ ರವರ ಹೆಸರಿನಲ್ಲಿ ಯಣ್ಣಂಗೂರು ಗ್ರಾಮದ ಸರ್ವೆ ನಂ 123/4, 126/1 ರಲ್ಲಿ 2 ಎಕರೆ ಜಮೀನು ಇದ್ದು ಸದರಿ ಜಮೀನುಗಳಲ್ಲಿ ನಾವುಗಳು ಬೆಳೆಗಳನ್ನು ಇಟ್ಟಿರುತ್ತೇವೆ. ಹಾಲಿ ತಮ್ಮ ಜಮೀನಿನಲ್ಲಿ ರೇಷ್ಮೆ ಬೆಳೆಯಿದ್ದು ತಮ್ಮ ಸಂಬಂದಿಕರಾದ ಪಿಳ್ಳಹನುಮೇಗೌಡ ರವರು ಕೋಸು ಬೆಳೆಯನ್ನು ಇಟ್ಟಿರುತ್ತಾರೆ ಈ ಬೆಳೆಗಳಿಗೆ ನೀರನ್ನು ಹಾಯಿಸಲು 2 ಜಮೀನಿನಲ್ಲಿ ಸಂಪ್ ನ್ನು ನಿರ್ಮಿಸಿ ಸಂಪ್ ಗೆ ನೀರು ತುಂಬಿಸಿ ಸಂಪ್ ನಿಂದ ನೀರನ್ನು ಮೇಲಕ್ಕೆ ಎತ್ತಲು 3 ಹೆಚ್.ಪಿ ಯ 2 ಮೋಟಾರ್ ಮತ್ತು ಕೇಬಲ್ ಅನ್ನು ಅಳವಡಿಸಿ ಮೋಟಾರ್ ಸಹಾಯದಿಂದ ನೀರನ್ನು ಬೆಳೆಗಳಿಗೆ ಹಾಯಿಸಿ ಬೆಳೆಯನ್ನು ತೆಗೆಯುತಿರುತ್ತೇವೆ. ದಿನಾಂಕ:22.06.2021 ರಂದು ತಮ್ಮ ಬೆಳೆಗಳಿಗೆ ನೀರನ್ನು ಹಾಯಿಸಿ ಸಂಜೆ ಮನೆಗೆ ಹೋಗಿರುತ್ತೇವೆ. ನಂತರ ದಿನಾಂಕ:23.06.2021 ರಂದು ಎಂದಿನಂತೆ ಬೆಳಿಗ್ಗೆ 8.00 ಗಂಟೆ ಸಮಯದಲ್ಲಿ ಬೆಳೆಗಳಿಗೆ ನೀರನ್ನು ಹಾಯಿಸಲು ತಾನು ಮತ್ತು ಪಿಳ್ಳಹನುಮೇಗೌಡ ರವರು ತೋಟದ ಬಳಿ ಹೋಗಿ ಬೆಳೆಗಳಿಗೆ ನೀರು ಹಾಯಿಸಲು ಮೋಟಾರ್ ಆನ್ ಮಾಡಲು ಸಂಪನ್ ನಲ್ಲಿ ಇದ್ದ ಮೋಟಾರ್ ನೋಡಲಾಗಿ ಎರಡೂ ಸಂಪಿನಲ್ಲಿ ಇದ್ದ 3 ಹೆಚ್.ಪಿ ಮೋಟರ್ ಗಳು ಮತ್ತು ಅದಕ್ಕೆ ಅಳವಡಿಸಿದ್ದ 10 ಮೀಟರ್  ಕೇಬಲ್ ಅನ್ನು 22.06.2021 ರಂದು ರಾತ್ರಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ 3 ಹೆಚ್.ಪಿ ಮೋಟರ್ ಮತ್ತು ಕೇಬಲ್ ವೈರ್ ನ ಬೆಲೆ ಸುಮಾರು 29,000 ರೂ ಆಗಿರುತ್ತೆ. ತಾವುಗಳು ತಮ್ಮ ಜಮೀನುಗಳಲ್ಲಿ ಮತ್ತು ಅಕ್ಕಪಕ್ಕದ ಜಮೀನುಗಳಲ್ಲಿ ಹುಡುಕಾಡಿದರೂ ಸಹ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತಿದ್ದು ಕಳುವಾಗಿರುವ  3 ಹೆಚ್.ಪಿ ಯ ಎರಡು ಮೋಟಾರ್ ಮತ್ತು ಕೇಬಲ್ ಅನ್ನು ಮತ್ತು ಕಳುವು ಮಾಡಿರುವ ಅಸಾಮಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

7. ಮಹಿಳಾ   ಪೊಲೀಸ್  ಠಾಣೆ ಮೊ.ಸಂ.55/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ:25/06/2021 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿದಾರರಾದ ಪ್ರೇಮಾ  ಕೋಂ ಅರುಣ್ ಕುಮಾರ್ ವಿ  24 ವರ್ಷ. ರವರು ಠಾಣೆಗೆ ಬಂದು ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ  ನಮ್ಮ ತಂದೆ ತಾಯಿಗೆ ನಾವು ಇಬ್ಬರು ಮಕ್ಕಳಿದ್ದು  1 ನೇ ನನ್ನ ಅಕ್ಕ ಶೋಭಾ ,2 ನೇ ನಾನಾಗಿರುತ್ತೇನೆ.  ನಾನು ಈಗ್ಗೆ ಸುಮಾರು ಒಂದು ವರ್ಷದ ಹಿಂದೆ  ನಮ್ಮ  ಗ್ರಾಮದ  ವೆಂಕಟೇಶಪ್ಪ ರವರ ಮಗನಾದ  ಅರುಣ್ ಕುಮಾರ್  ರವರನ್ನು ಪ್ರೀತಿಸಿ ಮದುವೆಯಾಗಿರುತ್ತೇನೆ.ನಮ್ಮ ಸಂಸಾರದಲ್ಲಿ  ನಾವು ಮದುವೆಯಾದಾಗಿನಿಂದ  ಅನ್ಯೋನ್ಯವಾಗಿದ್ದು  ನಮಗೆ ಮಕ್ಕಳಿರುವುದಿಲ್ಲ. ಈಗಿರುವಲ್ಲಿ ನನ್ನ  ಗಂಡ ಮರಗೆಲಸ ಮಾಡುತ್ತಿದ್ದು  ತಿಪ್ಪೇನಹಳ್ಳಿ ಯ ವಾಸಿ ಮೂರ್ತಿ ಎಂಬುವವರ ಬಳಿ ಅವರ ಅಂಗಡಿಯಲ್ಲಿ ಕೆಲಸವನ್ನು ಮಾಡುತ್ತಿದ್ದನು .ಈಗಿರುವಲ್ಲಿ   ದಿನಾಂಕಃ04/05/2021  ರಂದು  ಸಂಜೆ 07.00 ಗಂಟೆಯಲ್ಲಿ  ನನ್ನ ಗಂಡನಿಗೆ ಮತ್ತು ನನಗೆ ಸಂಸಾರ ವಿಚಾರದಲ್ಲಿ    ಬಾಯಿ ಮಾತಿನ ಗಲಾಟೆಯಾಗಿದ್ದು   ನಂತರ ಆ  ದಿನ ರಾತ್ರಿ 10.00  ಗಂಟೆಯವರೆಗೆ ನನ್ನ  ಗಂಡ ಮನೆಯಲ್ಲಿದ್ದರು .ನಂತರ ನಾನು  ಮಲಗಿಕೊಡು ನಿದ್ದೆ ಮಾಡಿದ್ದೆ. ನಂತರ ನಾನು   ದಿನಾಂಕಃ05/05/2021  ರಂದು ಬೆಳಗ್ಗೆ 06.00  ಗಂಟೆಗೆ ಎದ್ದು ನೋಡಲಾಗಿ ನನ್ನ ಗಂಡ ಮನೆಯಲ್ಲಿರಲಿಲ್ಲ. ನಮ್ಮ ಅತ್ತೆ ಮತ್ತು ಮಾವ ಸುಮಾರು ಒಂದು ವರ್ಷದಿದ  ರಾಮಗಾನ ಪರ್ತಿ  ಗ್ರಾಮದಲ್ಲಿ  ವಾಸವಾಗಿದ್ದು,ನಾನು ನನ್ನ ಗಂಡ ನಮ್ಮ ಅತ್ತೆಯ ಮನೆಗೆ ಹೋಗಿರಬಹುದೆಂದು  ನನ್ನ ಅತ್ತೆಯಾದ ಆನಂದಮ್ಮ ರವರಿಗೆ ಪೋನ್ ಮಾಡಿ  ನನ್ನ ಗಂಡನ ಬಗ್ಗೆ  ವಿಚಾರಿಸಲಾಗಿ   ನನ್ನ ಗಂಡ ರಾಮಗಾನಪರ್ತಿಗೆ ಬಂದಿರುವುದಿಲ್ಲವೆಂದು ತಿಳಿಸಿರುತ್ತಾರೆ.ನನ್ನ ಗಂಡ  ಆಗಾಗ ಮನೆಯಲ್ಲಿ  ಬಿಟ್ಟು ಹೋಗಿ ನಂತರ  ಮನೆಗೆ ವಾಪಸ್ಸು ಬರುತ್ತಿದ್ದನು .ನಾನು ನನ್ನ ಗಂಡ ಬರುತ್ತಾನೆಂದು ತಿಳಿದುಕೊಂಡಿದ್ದೆ .ಆದರೆ ಇಷ್ಟು ದಿನವಾದರೂ ನನ್ನ ಗಂಡ ಮನೆಗೆ ಬರಲಿಲ್ಲ.ನನ್ನ ಗಂಡ ಮನೆಯನ್ನು ಬಿಟ್ಟು ಹೋದಾಗಿನಿಂದ ನಾನು ನನ್ನ ಗಂಡನನ್ನು ನಮ್ಮ ನೆಂಟರ ಮನೆಗಳಲ್ಲಿ  ನನ್ನ ಗಂಡನ ಸ್ನೇಹಿತರ ಮನೆಗಳಲ್ಲಿನಮ್ಮ ಸಂಬಂದಿಕರ ಮನೆಗಳಲ್ಲಿಎಲ್ಲಾ ಕಡೆ ಹುಡುಕಾಡಿರುತ್ತೇನೆ,ನನ್ನ ಗಂಡ ಪತ್ತೆಯಾಗಿರುವುದಿಲ್ಲ,ನನ್ನ ಗಂಡನನ್ನು ಎಲ್ಲಾ ಕಡೆ ಹುಡುಕಾಡಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿರುತ್ತೇನೆ .ನನ್ನ ಗಂಡನ ಮೊಬೈಲ್ ನಂಬರ್ 7975765924  ಗೆ ಪೋನ್ ಮಾಡಿದರೆ ಪೋನ್ ಸ್ವಿಚ್ ಆಪ್ ಬಂದಿರುತ್ತದೆ.  ಕಾಣೆಯಾದ ನನ್ನ ಗಂಡನಾದ ಅರುಣ್ ಕುಮಾರ್ ವಿ 29 ವರ್ಷ ರವನ್ನು ಪತ್ತೆ ಮಾಡಿಕೊಡಬೇಕಾಗಿ  ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

Last Updated: 25-06-2021 05:38 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080