ಅಭಿಪ್ರಾಯ / ಸಲಹೆಗಳು

 

1. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.50/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:24/05/2021 ರಂದು ಬೆಳಗ್ಗೆ 11:30 ಗಂಟೆಗೆ ಚೇಳೂರು ಪೊಲೀಸ್ ಠಾಣೆಯ ಪಿಎಸ್ ಐ ರವರಾದ ಪ್ರತಾಪ್ ಕೆ ಆರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:24/05/2021 ರಂದು ಬೆಳಗ್ಗೆ 10-00 ಗಂಟೆಯಲ್ಲಿ ಚೇಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರತಾಪ್ ಕೆ.ಆರ್ ಆದ ನಾನು ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ 42 ಜಿ 61 ನ ಜೀಪ್ ನಲ್ಲಿ ಜೀಪ್ ಚಾಲಕನಾಗಿ ಎಪಿಸಿ 87 ಮೋಹನ್  ಹಾಗೂ  ಠಾಣೆಯ ಸಿಬ್ಬಂದಿಯವರಾದ ಸಿ.ಹೆಚ್.ಸಿ 149 ಇನಾಯತ್ ರವರೊಂದಿಗೆ ಠಾಣಾ ಸರಹದ್ದು ನಾರಾಯಣಪಲ್ಲಿ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ ಸದರಿ ಗ್ರಾಮದ ವಾಸಿಯಾದ ಗಂಗುಲಪ್ಪ ಬಿನ್ ಲೇಟ್ ಯಲ್ಲಪ್ಪ ರವರು ತನ್ನ ಮನೆಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶವನ್ನು ನೀಡಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು  ಗಂಗುಲಪ್ಪ ರವರ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಮಧ್ಯಪಾನವನ್ನು `ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಮಧ್ಯಪಾನ ಮಾಡುತ್ತಿದ್ದವರು ಮತ್ತು ಮಧ್ಯದ ಪ್ಯಾಕೆಟ್ ಗಳನ್ನು ಇಟ್ಟುಕೊಂಡಿದ್ದ ವ್ಯಕ್ತಿ ಮದ್ಯದ ಪ್ಯಾಕೆಟ್ ಗಳನ್ನು ಸ್ಥಳದಲ್ಲಿಯೇ ಬಿಸಾಡಿ ಸ್ಥಳದಿಂದ ಓಡಿ ಹೋಗಿರುತ್ತಾರೆ. ಸದರಿ ಸ್ಥಳದಲ್ಲಿದ್ದ  ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 1) 180 ಎಂ.ಎಲ್ ನ  OLD TAVERN WHISKY ಕಂಪನಿಯ 4 ಟೆಟ್ರಾ ಪ್ಯಾಕೇಟ್ ಗಳಿದ್ದು ಒಟ್ಟು 720 ಎಮ್ ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಬೆಲೆ 86.75 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 347 ರೂಗಳಾಗಿರುತ್ತೆ. 2) 180 ಎಮ್ ಎಲ್ ನ OLD ADMIRAL ಕಂಪನಿಯ 6 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿ ಪ್ಯಾಕೆಟ್ ನ ಮೇಲೆ 86.75 ರೂ ಎಂದು ನಮೂದಿಸಿದ್ದು  ಒಟ್ಟು 1080 ಎಮ್ ಎಲ್ ಯಿದ್ದು, ಇವುಗಳು ಒಟ್ಟು 520.5 ರೂ  ಎಂದು ನಮೂದಿಸಿದ್ದು ಎರಡೂ ಕಂಪನಿಗಳ ಮಧ್ಯದ ಟೆಟ್ರಾ ಪ್ಯಾಕೆಟ್ ಗಳ ಒಟ್ಟು 1800 ಎಮ್ ಎಲ್ ಯಿದ್ದು, ಇವುಗಳ ಒಟ್ಟು 867.5 ರೂಗಳಾಗಿರುತ್ತೆ. ಸದರಿ ಸ್ಥಳದಲ್ಲಿದ್ದ ಸಾರ್ವಜನಿಕರನ್ನು  ಮಧ್ಯದ ಪ್ಯಾಕೆಟ್ ಗಳನ್ನಿಟ್ಟುಕೊಂಡಿದ್ದ  ಹಾಗೂ ನಮ್ಮಗಳನ್ನು ನೋಡಿ  ಓಡಿ ಹೋದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸದರಿ  ಆಸಾಮಿಯ ಹೆಸರು & ವಿಳಾಸ ಕೇಳಲಾಗಿ ತನ್ನ ಹೆಸರು ಗಂಗುಲಪ್ಪ ಬಿನ್ ಲೇಟ್ ಯಲ್ಲಪ್ಪ, 65 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ನಾರಾಯಣಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ  ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿರುತ್ತಾನೆಂದು ಹಾಗೂ ಆತನ ಬಳಿ ಯಾವುದೇ  ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ.  ಸದರಿ  ಸ್ಥಳದಲ್ಲಿದ್ದ  ಮೇಲ್ಕಂಡ ಮಧ್ಯದ  ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು  ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ದಾಳಿ ಅಮಾನತು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಠಾಣೆಗೆ ಹಾಜರಾಗಿ  ನೀಡಿದ ವರದಿಯನ್ನು  ಪಡೆದು ಠಾಣಾ ಮೊಸಂ:50/2021 ಕಲಂ 15(ಎ),32(3) ಕೆಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.

 

2. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.51/2021 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ:24-05-2021 ರಂದು ಸಂಜೆ 4:30  ಗಂಟೆಗೆ ಪಿರ್ಯಾಧಿದಾರರಾದ ಶ್ರೀ.ಪ್ರತಾಪ್ ಕೆ.ಆರ್ ಪಿ.ಎಸ್.ಐ ರವರು  ಮಾಲುಗಳು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ್ದರ ವರದಿಯ ಸಾರಾಂಶವೇನೆಂದರೆ    ಈ ದಿನ ನಾನು ಮತ್ತು ಸಿಬ್ಬಂದಿಯವರಾದ ಹೆಚ್ ಸಿ 149 ಇನಾಯತ್ , ಪಿಸಿ 07 ವಿಧ್ಯಾಧರ  ಹಾಗೂ ಜೀಪ್ ಚಾಲಕನಾದ ಎಪಿಸಿ 87 ಮೋಹನ್  ರವರೊಂದಿಗೆ  ಈ ದಿನ ದಿನಾಂಕ:24/05/2021 ರಂದು ಮದ್ಯಾಹ್ನ 2:30 ಗಂಟೆಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-42-ಜಿ-0061 ವಾಹನದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ  ಊದುವಾರಪಲ್ಲಿ ಗ್ರಾಮದ  ಕಡೆ ಗಸ್ತು ಮಾಡುತ್ತಿದ್ದಾಗ  ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಇದೇ ಗ್ರಾಮದ ವಾಸಿಯಾದ ಶಂಕರ ಬಿನ್  ವೆಂಕಟರವಣಪ್ಪ ಎಂಬುವರು ತನ್ನ ಚಿಲ್ಲರೆ ಅಂಗಡಿಯಲ್ಲಿ ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಸಂಗ್ರಹಣೆ ಮಾಡಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರ ಸಮಕ್ಷಮ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಚಿಲ್ಲರೆ ಅಂಗಡಿಯಲ್ಲಿ ಯಾರೂ ಇರಲಿಲ್ಲ ನಂತರ ಸ್ಥಳದಲ್ಲಿದ್ದ  ಅಂಗಡಿಯ ಮಾಲೀಕರಾದ ಶಂಕರ ರವರ ಹೆಂಡತಿ ರಮಾದೇವಿ ಹಾಗೂ ಪಂಚರ  ಸಮಕ್ಷಮ ಸದರಿ ಚಿಲ್ಲರೆ ಅಂಗಡಿಯನ್ನು ಪರಿಶೀಲಿಸಲಾಗಿ  1) ಮದ್ಯ ತುಂಬಿರುವ 180 ಎಮ್ ಎಲ್ ನ OLD  TAVERN WHISKY ಯ  10 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿ ಟೆಟ್ರಾ  ಪ್ಯಾಕೆಟ್ ನ ಮೇಲೆ 86.75 ರೂ ಎಂದು ನಮೂದಿಸಿದ್ದು ಒಟ್ಟು 867.5  ರೂಗಳಾಗಿರುತ್ತೆ.  2) ಮಧ್ಯ ತುಂಬಿದ್ದ 180  ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಕಂಪನಿಯ  7 ಟೆಟ್ರಾ ಪಾಕೆಟ್ ಗಳಿದ್ದು ಪ್ರತಿ ಪ್ಯಾಕೆಟ್ ನ ಮೇಲೆ 70.26 ಎಂದು ನಮೂದಿಸಿದ್ದು ಒಟ್ಟು  491.82 ರೂಗಳಾಗಿರುತ್ತೆ. 3) ಮಧ್ಯ ತುಂಬಿದ್ದ  90 ಎಂ.ಎಲ್ ಸಾಮರ್ಥ್ಯದ  HAYWARDS CHEERS WHISKY ಕಂಪನಿಯ  38 ಟೆಟ್ರಾ ಪಾಕೆಟ್ ಗಳಿದ್ದು, ಪ್ರತಿ ಪ್ಯಾಕೆಟ್ ನ ಮೇಲೆ  35.13 ರೂ ಎಂದು ನಮೂದಿಸಿದ್ದು  ಇವುಗಳು ಒಟ್ಟು 1334.94 ರೂ ಗಳಾಗಿರುತ್ತೆ, ಮೇಲ್ಕಂಡ ಮಾಲುಗಳು ಒಟ್ಟಾರೆಯಾಗಿ 6480 ಎಮ್ ಎಲ್ ಯಿದ್ದು ಇವುಗಳ ಒಟ್ಟು ಬೆಲೆ 2694.26 ರೂ ಗಳಾಗಿರುತ್ತೆ. ಸದರಿ ಚಿಲ್ಲರೆ ಅಂಗಡಿಯ ಮಾಲೀಕನ ಹೆಸರು ಮತ್ತು ವಿಳಾಸವನ್ನು ಅಲ್ಲಿಯೇ ಇದ್ದ ಆತನ ಹೆಂಡತಿಯಾದ ರಮಾದೇವಿ ಯವರ  ಬಳಿ ವಿಚಾರಿಸಲಾಗಿ  ಶಂಕರ ಬಿನ್ ವೆಂಕಟರವಣಪ್ಪ, 40 ವರ್ಷ, ಭೋವಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಊದುವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು  ಎಂದು  ತಿಳಿಸಿದ್ದು  ಸದರಿಯವರು ಕೆಲಸದ ನಿಮಿತ್ತ ಚಾಕವೇಲು ಗ್ರಾಮಕ್ಕೆ ಹೋಗಿದ್ದಾರೆಂದು ತಿಳಿಸಿರುತ್ತಾರೆ.  ನಂತರ ಸದರಿ ಮಾಲುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಎಲ್ಲಾ ಮಾಲುಗಳ ಪೈಕಿ ಒಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಕಟ್ಟಿ ಅದರ ಮೂತಿಯನ್ನು  D ಎಂಬ ಅಕ್ಷರದಿಂದ ಸೀಲು ಮಾಡಿರುತ್ತೆ. ನಂತರ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿದ  ಶಂಕರ ಬಿನ್ ವೆಂಕಟರವಣಪ್ಪ  ರವರ ವಿರುದ್ದ  ಕಾನೂನು ರೀತ್ಯಾ ಕ್ರಮಜರುಗಿಸಲು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ  ಆಸಾಮಿಯ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿ  ನೀಡಿದ್ದರ ವರದಿಯ  ಮೇರೆಗೆ ಠಾಣಾ ಮೊ.ಸಂ: 51/2021 ಕಲಂ: 32,34 ಕೆ.ಇ ಆಕ್ಟ್ ರೀತ್ಯ ಪ್ರಕರಣ ದಾಖಲು ಮಾಡಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.243/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 24/05/2021 ರಂದು ಮದ್ಯಾಹ್ನ 2.15 ಗಂಟೆಗೆ ಠಾಣೆಯ ಶ್ರೀ.ರಾಜು, ಸಿ.ಹೆಚ್.ಸಿ-136 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 24/05/2021 ರಂದು ಮದ್ಯಾಹ್ನ 1.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-516 ವಿಶ್ವನಾಥ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ  ನಲ್ಲಗುಟ್ಟಹಳ್ಳಿ ಗ್ರಾಮದ ವೆಂಕಟೇಶ ಬಿನ್ ಲೇಟ್ ವೆಂಕಟಸ್ವಾಮಿ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಮದ್ಯಾಹ್ನ 1.15 ಗಂಟೆಗೆ ನಲ್ಲಗುಟ್ಟಹಳ್ಳಿ ಗ್ರಾಮದ ವೆಂಕಟೇಶ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ವೆಂಕಟೇಶ ಬಿನ್ ಲೇಟ್ ವೆಂಕಟಸ್ವಾಮಿ, 35 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರ, ಆದಿ ಕರ್ನಾಟಕ ಜನಾಂಗ, ವಾಸ: ನಲ್ಲಗುಟ್ಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.244/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 24/05/2021 ರಂದು ಸಂಜೆ 4.30 ಗಂಟೆಗೆ ಠಾಣೆಯ ಶ್ರೀ.ಸೀನಪ್ಪ, ಸಿ.ಹೆಚ್.ಸಿ-40 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 24/05/2021 ರಂದು ಮದ್ಯಾಹ್ನ 03.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-534 ನಂದೀಶ್ ಕುಮಾರ್ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಕುರುಬೂರು ಗ್ರಾಮದ ಅಮೀರ್ ಬೇಗ್ ಬಿನ್ ಇಮಾಮ್ ಬೇಗ್ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಮದ್ಯಾಹ್ನ 3.15 ಗಂಟೆಗೆ ಕುರುಬೂರು ಗ್ರಾಮದ ಅಮೀರ್ ಬೇಗ್ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಅಮೀರ್ ಬೇಗ್ ಬಿನ್ ಇಮಾಮ್ ಬೇಗ್, 65 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರ, ಮುಸ್ಲಿಂ ಜನಾಂಗ, ವಾಸ: ಕುರುಬೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.245/2021 ಕಲಂ. 429 ಐ.ಪಿ.ಸಿ & 4,8,9,11 KARNTAKA PREVENTION OF COW SLANGHTER & CATTLE PREVENTION ACT-1964:-

          ದಿನಾಂಕ 24-05-2021 ರಂದು ರಾತ್ರಿ 10-15 ಗಂಟೆಗೆ ನರಸಿಂಹರೆಡ್ಡಿ ಬಿನ್ ಕೃಷ್ಣಾರೆಡ್ಡಿ, 30 ವರ್ಷ, ವಕ್ಕಲಿಗರು, ಜಿರಾಯ್ತಿ, ದೊಡ್ಡಹಳ್ಳಿ ಗ್ರಾಮ, ಕೈವಾರ ಹೋಬಳಿ, ಹಾಲಿವಾಸ ಕನ್ನಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ 8ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಗ್ರಾಮದ ಬಳಿ ಇರುವ ನಮ್ಮ ಜಮೀನಿನಲ್ಲಿ ತಾನು ಟಮ್ಯಾಟೋ ಬೆಳೆಯನ್ನು ಇಟ್ಟಿದ್ದು, ತಾನು ಕನ್ನಂಪಲ್ಲಿಯಿಂದ ತಮ್ಮ ಊರಿನ ಬಳಿ ಹೋಗಿ ಬೆಳೆಯನ್ನು ನೋಡಿಕೊಂಡು ಬರುತ್ತಿರುತ್ತೇನೆ. ಈ ದಿನ ದಿನಾಂಕ 24/05/2021 ರಂದು ಸಂಜೆ ತಾನು ತಮ್ಮ ಗ್ರಾಮದ ಬಳಿ ಇರುವ ಟಮ್ಯಾಟೋ ತೋಟಕ್ಕೆ ಹೋಗಿ ತೋಟದಲ್ಲಿ ಕೆಲಸ ಮಾಡಿಕೊಂಡು ಕನ್ನಂಪಲ್ಲಿಗೆ ವಾಪಸ್ಸು ಬರಲು ರಾತ್ರಿ 8.45 ಗಂಟೆ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಕನ್ನಂಪಲ್ಲಿ ಗ್ರಾಮದ ಬಳಿ ಇರುವ ಆರ್.ಆರ್ ಪೆಟ್ರೋಲ್ ಬಂಕ್ ಬಳಿ ಇರುವ ಕೆರೆಯ ಸಮೀಪ ಬರುತ್ತಿದ್ದಾಗ, ಚಿನ್ನಸಂದ್ರ ಕಡೆಯಿಂದ ಮೂವರು ವ್ಯಕ್ತಿಗಳು 4 ನಾಟಿ ಹಸುಗಳನ್ನು ಹೊಡೆದುಕೊಂಡು ಚಿಂತಾಮಣಿ ಕಡೆಗೆ ಬರುತ್ತಿದ್ದು, ತಾನು ಅವರನ್ನು ಕುರಿತು ಈ ಹಸುಗಳನ್ನು ಎಲ್ಲಿಗೆ ಹೊಡೆದುಕೊಂಡು ಹೋಗುತ್ತಿರುವುದು ಎಂದು ಕೇಳಿದ್ದಕ್ಕೆ ಅವರು ತಾವು ಇವುಗಳನ್ನು ಕೊಯ್ಯಲು ಕಸಾಯಿಖಾನೆಗೆ ಸಾಗಿಸಿಕೊಂಡು ಹೋಗುತ್ತಿದ್ದೀವಿ ನೀನು ಯಾರು ನಮ್ಮನ್ನು ಕೇಳುವುದಕ್ಕೆ ಎಂದು ಏರು ದ್ವನಿಯಿಂದ ಮಾತನಾಡಿದಾಗ ತಕ್ಷಣ ತಾನು ದೊಡ್ಡಹಳ್ಳಿ ಗ್ರಾಮದ ತನ್ನ ಸ್ನೇಹಿತರಾದ ಅಶೋಕ ಬಿನ್ ಕೋದಂಡರಾಮಶೆಟ್ಟಿ, ಚಿಂತಾಮಣಿ ನಗರ ಚೌಡರೆಡ್ಡಿಪಾಳ್ಯ ವಾಸಿಯಾದ ಬಾಲು ಬಿನ್ ನಾಗರಾಜಪ್ಪ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಪೋನ್ ಮಾಡಿ ಸ್ಥಳಕ್ಕೆ ತನ್ನ ಸ್ನೇಹಿತರನ್ನು ಮತ್ತು ಪೊಲೀಸರನ್ನು ಕರೆಯಿಸಿಕೊಂಡಿದ್ದು, ಹಸುಗಳನ್ನು ಹೊಡೆದುಕೊಂಡು ಹೋಗುತ್ತಿದ್ದವರ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ 1) ಚಾಂದ್ ಪಾಷ ಬಿನ್ ಲೇಟ್ ಬಾಷಾಸಾಬ್, 55 ವರ್ಷ, ಮುಸ್ಲಿಂ ಜನಾಂಗ, ಹಸು ವ್ಯಾಪಾರಿ, ನೂರಾನಿ ಮಸೀದಿ ಹತ್ತಿರ, ವೆಂಕಟಗಿರಿಕೋಟೆ, ಚಿಂತಾಮಣಿ ನಗರ 2) ತೌಫಿಕ್ ಬಿನ್ ಸರ್ದಾರ್, 20 ವರ್ಷ, ಮುಸ್ಲಿಂ ಜನಾಂಗ, ದನ ಕಡಿಯುವ ಕೆಲಸ, ವೆಂಕಟಗಿರಿಕೋಟೆ, ಚಿಂತಾಮಣಿ ನಗರ 3) ತಫೀಜ್ ಬಿನ್ ಅಯೂಬ್ ಪಾಷ, 20 ವರ್ಷ, ಮುಸ್ಲಿಂ ಜನಾಂಗ, ಹಸು ವ್ಯಾಪಾರಿ, ವೆಂಕಟಗಿರಿಕೋಟೆ, ಚಿಂತಾಮಣಿ ನಗರ ಎಂದು ತಿಳಿಸಿರುತ್ತಾರೆ. ಮೇಲ್ಕಂಡವರು ಸದರಿ ಹಸುಗಳನ್ನು ವಧೆ ಮಾಡಲು ಸಂಬಂದಪಟ್ಟ ಇಲಾಖೆಗಳ ಕಡೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೆ ಸದರಿ ಪ್ರಾಣಿಗಳನ್ನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡಲು ಎಲ್ಲಿಂದಲೋ ಅಕ್ರಮವಾಗಿ ಹೊಡೆದುಕೊಂಡು ಬರುತ್ತಿರುವುದಾಗಿ ಕಂಡು ಬಂದಿರುತ್ತೆ. ನಂತರ ತಾವು ಪೊಲೀಸರ ಜೊತೆ 4 ಹಸುಗಳನ್ನು ಸಂರಕ್ಷಣೆ ಮಾಡಿ ಅವುಗಳನ್ನು ಹೊಡೆದುಕೊಂಡು ಹೋಗುತ್ತಿದ್ದ 3 ಜನ ಆಸಾಮಿಗಳನ್ನು ಸ್ಥಳದಲ್ಲಿ ಪೊಲೀಸರ ವಶಕ್ಕೆ ನೀಡಿರುತ್ತೇವೆ. ಆದ್ದರಿಂದ ಮೇಲ್ಕಂಡವರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುತ್ತೆ.

 

6. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.86/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 24/05/2021 ರಂದು ಬೆಳಿಗ್ಗೆ 9:45 ಗಂಟೆಗೆ  ಪಿ.ಎಸ್.ಐ. ರವರು ಠಾಣೆಗೆ ಹಾಜರಾಗಿ ನೀಡಿದ ಜ್ವಾಪನಾದ ಸಾರಾಂಶವೇನೆಂದರೆ  ದಿನಾಂಕ:24/05/2021 ರಂದು ಬೆಳಿಗ್ಗೆ ತಾನು ಠಾಣಾ ಸಿಬ್ಬಂದಿ ಸಿ.ಪಿ.ಸಿ-426 ಸರ್ವೇಶ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-138 ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಎಂ.ಜಿ ರಸ್ತೆಯಲ್ಲಿ ಮಾಡುತ್ತಿದ್ದಾಗ ರಸ್ತೆಯ ಎಡಗಡೆಗೆ ಇರುವ ಲಕ್ಷ್ಮೀ ವೆಂಕಟೇಶ್ವರ ಸ್ಟೋರ್ ನ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ಸದರಿ ಪ್ರಾವಿಜನ್ ಸ್ಟೋರ್/ದಿನಸಿ ಅಂಗಡಿಯ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ವೆಂಕಟೇಶ್ ಬಿನ್ ಪಾಂಡುರಂಗಯ್ಯಶೆಟ್ಟಿ, 50 ವರ್ಷ, ವೈಶ್ಯರು, ಲಕ್ಷ್ಮೀ ವೆಂಕಟೇಶ್ವರ ಸ್ಟೋರ್ ಮಾಲೀಕರು, ಎನ್ ಆರ್ ಬಡಾವಣೆ, ಚಿಂತಾಮಣಿ ನಗರ ಎಂದು ತಿಳಿಸಿರುತ್ತಾರೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ ಅಂಗಡಿಯ ಬಳಿ ಸಾಮಾಜಿಕ ಅಂತರವನ್ನು ಪಾಲೀಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಸದರಿ ಲಕ್ಷ್ಮೀ ವೆಂಕಟೇಶ್ವರ ಸ್ಟೋರ್ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.60/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:24/05/2021 ರಂದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಸಿ.ಹೆಚ್.ಸಿ 53 ಲೋಕೇಶ ಜಿ ಎಂ ರವರು ಠಾಣೆಗೆ ಹಾಜರಾಗಿ ಮಾಲು ಮತ್ತು ಪಂಚನಾಮೆಯೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಹಾಗೂ ಠಾಣಾ ಸಿಬ್ಬಂದಿ ಸಿ.ಪಿ.ಸಿ-196 ದೇವರಾಜ ಬಡಿಗೇರ ಹಾಗೂ ನಾಗಮಣಿ ಮ.ಪಿ.ಸಿ-225 ರವರಿಗೆ ಲಾಕ್ ಡೌನ್ ಪ್ರಯುಕ್ತ ಬಂದೋಬಸ್ತ್ ಕರ್ತವ್ಯಕ್ಕೆ ನೇಮಿಸಿದ್ದು ಆದರಂತೆ ತಾವು  ದಿಬ್ಬೂರಹಳ್ಳಿ, ವಡ್ಡಹಳ್ಳಿ, ತಲಕಾಯಬೆಟ್ಟ, ಟಿ ವೆಂಕಟಾಪುರ, ಈ ತಿಮ್ಮಸಂದ್ರ ಕಡೆ ಹೋಗುತ್ತಿದ್ದಾಗ ದಾರಿಯ ಮಧ್ಯೆ ಗಾಂಡ್ಲಚಿಂತೆ ಗ್ರಾಮಕ್ಕೆ ಬೇಟಿ ನೀಡಿದಾಗ ಯಾರೋ ಬಾತ್ಮಿದಾರರು ಗಾಂಡ್ಲಚಿಂತೆ ಗ್ರಾಮದ ಶ್ರೀಮತಿ ಲಕ್ಷ್ಮೀದೇವಮ್ಮ ಕೋಂ ಲೇಟ್ ವೆಂಕಟರವಣಪ್ಪ ಮನೆಯ ಮುಂಭಾಗ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯದ ಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ, ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ ದಾಳಿ ಪಂಚನಾಮೆಗೆ ಸಹಕರಿಸಲು ಕೋರಿದ್ದು, ಪಂಚರು ಒಪ್ಪಿ ತಮ್ಮಗಳೊಂದಿಗೆ ಗಾಂಡ್ಲಚಿಂತೆ ಗ್ರಾಮದ ಲಕ್ಷ್ಮೀದೇವಮ್ಮ ಕೋಂ ಲೇಟ್ ವೆಂಕಟರವಣಪ್ಪ ರವರ  ವಾಸದ ಮನೆಯ ಬಳಿ ಹೋಗಿ ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜಕರಿಗೆ ಮಧ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು ತಾವು ಪಂಚರೊಂದಿಗೆ ದಾಳಿ ಮಾಡಲಾಗಿ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಅಂಗಡಿ ಮಾಲಿಕರರು ಸಮವಸ್ರದಲ್ಲಿದ್ದ ತಮ್ಮನ್ನು ನೋಡಿ ಓಡಿ ಹೋಗಿರುತ್ತಾರೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ ಮಧ್ಯ ತುಂಬಿದ ಟೆಟ್ರಾ ಪಾಕೇಟ್ ಗಳು, ಖಾಲಿ ಮಧ್ಯದ ಪಾಕೇಟ್ ಗಳು, ವಾಟರ್ ಪಾಕೇಟ್ ಗಳು, ಪಾಸ್ಲಿಟಿಕ್ ಗ್ಲಾಸ್ ಗಳು ಕಂಡುಬಂದಿರುತ್ತದೆ. ಸದರಿ ಮಾಲುಗಳನ್ನು ಪರಿಶೀಲಿಸಲಾಗಿ RAJA WHISKY 90 ML ನ ಮಧ್ಯ ತುಂಬಿದ  RAJA WHSKY ಯ 9 ಟೆಟ್ರಾ ಪಾಕೇಟ್ ಗಳು ಇದ್ದು. ಇವುಗಳ ಪರಿಶೀಲಿಸಲಾಗಿ ಒಂದರ ಬೆಲೆ 35.13 ರೂ ಆಗಿರತ್ತೆ,  ಇವುಗಳ ಒಟ್ಟು ಬೆಲೆ 316.17/-ರೂಗಳಾಗಿರುತ್ತೆ. ನಂತರ ಸ್ಥಳದಲ್ಲಿ 90 ml ನ 2 ಖಾಲಿ RAJA WHSKY ಯ ಟೆಟ್ರಾ ಪಾಕೆಟ್ ಗಳು, 2 ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 5 ನೀರಿನ ಪ್ಲಾಸ್ಟಿಕ್ ವಾಟರ್ ಪಾಕೆಟ್ ಗಳು ಕಂಡು ಬಂದಿದ್ದು, ಸದರಿ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಬೆಳಗ್ಗೆ 11.45 ಗಂಟೆಯಿಂದ ಮದ್ಯಾಹ್ನ 12.45 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡಿದ್ದು, ಸದರಿ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ಶ್ರೀಮತಿ ಲಕ್ಷ್ಮೀದೇವಮ್ಮ ಕೋಂ ಲೇಟ್ ವೆಂಕಟರಾಯಪ್ಪ, 35 ವರ್ಷ, ಭಜಂತ್ರಿ ಜನಾಂಗ, ಕೂಲಿ ಕೆಲಸ, ಗಾಂಡ್ಲಚಿಂತೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿದು ಬಂದಿದ್ದು, ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಠಾಣಾಧಿಕಾರಿಗಳಲ್ಲಿ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯಾಗಿರುತ್ತೆ.

 

8. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.75/2021 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ:24/05/2021 ರಂದು ಸಂಜೆ 6-45 ಗಂಟೆಗೆ ಪಿ.ಎಸ್.ಐ ಸಾಹೇಬರು ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ: 24/05/2021 ರಂದು ತಾನು  ಕೆ.ಎ-40 ಜಿ-281 ನೊಂದಣಿ ಸಂಖ್ಯೆ  ಸರ್ಕಾರಿ ಜೀಪ್ ನಲ್ಲಿ ಚಾಲಕ  ಎ.ಪಿ.ಸಿ-105 ಅಶ್ವತ್ಥರೆಡ್ಡಿ ರವರೊಂದಿಗೆ ಗೌರಿಬಿದನೂರು ನಗರದಲ್ಲಿ ಮದುಗಿರಿ ರಸ್ತೆ ಮತ್ತು ಬಿ ಹೆಚ್ ರಸ್ತೆಗಳಲ್ಲಿ ಗಸ್ತು ಮಾಡಿಕೊಂಡು  ಸಂಜೆ 5-00 ಗಂಟೆ ಸಮಯದಲ್ಲಿ ನಾಗಪ್ಪಬ್ಲಾಕ್ ಚೆಕ್ ಪೋಸ್ಟ್ ನಲ್ಲಿದ್ದ ಠಾಣಾ ಸಿಬ್ಬಂದಿಯಾದ ಸಿಪಿಸಿ-318 ದೇವರಾಜ್ ರವರೊಂದಿಗೆ  ವಾಹನಗಳನ್ನು ತಪಾಸನೆ ಮಾಡುತ್ತಿದ್ದು ಹಿಂದೂಪುರದ ಕಡೆಯಿಂದ ಕೆ.ಎ-52 ಆರ್-3934 ನೊಂದಣಿ ಸಂಖ್ಯೆ  TVS  ಕಂಪನಿಯ  HEAVY DUTY  ದ್ವಿ ಚಕ್ರ ವಾಹನದಲ್ಲಿ ಇಬ್ಬರು  ಅಸಾಮಿಗಳು ಬಂದಿದ್ದು ಸದರಿ ದ್ವಿ ಚಕ್ರ ವಾಹನವನ್ನು ತಡೆದು ನಿಲ್ಲಿಸಿ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  1) ನಂದೀಶ್ ಬಿನ್ ನರಸಿಂಹರೆಡ್ಡಿ 19 ವರ್ಷ, ಕೂಲಿ ಕೆಲಸ, ಹಕ್ಕಿಪಿಕ್ಕಿ ಜನಾಂಗ, ವಾಸ: ಸೂಲಿಕುಂಟೆ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು 2) ನಾಗರಾಜ ಬಿನ್ ರಾಮಾಂಜಿನಪ್ಪ, 26 ವರ್ಷ,ಹಕ್ಕಿಪಿಕ್ಕಿ ಜನಾಂಗ, ಕೂಲಿ ಕೆಲಸ, ಸುಮಂಗಲಿ ಕಲ್ಯಾಣ ಮಂಟಪದ ಬಳಿಯಿರುವ ಗುಡಿಸಲುಗಳು ಗೌರಿಬಿದನೂರು ಟೌನ್, ಎಂದು ತಿಳಿಸಿದ್ದು ನಂತರ ದ್ವಿ ವಾಹನವನ್ನು ಒಂದು ಬಿಳಿ ಚೀಲ ಇದ್ದು ಅದನ್ನು ಪರಿಶೀಲಿಸಿಲಾಗಿ ಅದರಲ್ಲಿ 35 ಲೀಟರ್ ಸಾಮರ್ಥ್ಯದ ಒಂದು  ಪ್ಲಾಸ್ಟಿಕ್ ಕ್ಯಾನ್ ಇದ್ದು ಅದರಲ್ಲಿ ಬಿಳಿ ದ್ರಾವಣ ತುಂಬಿರುತ್ತೆ ಅದರ ಮೂತಿಯನ್ನು ತೆಗೆದು ವಾಸನೆಯನ್ನು ನೋಡಲಾಗಿ ಹೆಂಡದ ವಾಸನೆಯು ಬರುತ್ತೀರುತ್ತೆ. ನಂತರ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಪಂಚರ ಸಮಕ್ಷಮ ಮಾಲಗಳಲನ್ನು  ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ವಶ ಪಡಿಸಿಕೊಂಡ ಒಂದು ಪ್ಲಾಸ್ಟಿಕ್ ಕ್ಯಾನ್ ನಲ್ಲಿದ್ದ 35 ಲೀಟರ್ ಹೆಂಡದಲ್ಲಿ FSL ಗೆ ಕಳುಹಿಸಲು  ಪ್ರತ್ಯಕವಾಗಿ 01 ಲೀಟರ್ ನಷ್ಟು ಹೆಂಡವನ್ನು ಪ್ಲಾಸ್ಟಿಕ್ ಬಾಟೆಲ್ ನಲ್ಲಿ ಹಾಕಿ ಮುಚ್ಚಳ ಮುಚ್ಚಿ  ಬಿಳಿ ಚೀಲದಲ್ಲಿ ಮೂತಿ ಕಟ್ಟಿ ಮೊಹರು ಮಾಡಿ  K ಎಂಬ ಆಂಗ್ಲ ಅಕ್ಷರದಿಂದ ಸೀಲ್ ಮಾಡಲಾಯಿತು. ಸಂಜೆ 5-15 ಗಂಟೆಯಿಂದ 6-15 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತೆ. ವಶಕ್ಕೆ ಪಡೆದಿದ್ದ ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ವರದಿಯನ್ನು ಸಿದ್ದಪಡಸಿ ಸಂಜೆ 6-45 ಗಂಟೆಗೆ ಆರೋಪಿತರು ಮತ್ತು ಮಾಲಿನ ವಿರುದ್ದ  ಮುಂದಿನ ಕಾನೂನು ಕ್ರಮವನ್ನು ಜರಿಗಿಸಲು ಸೂಚಿಸಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

9. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.56/2021 ಕಲಂ. 87  ಕೆ.ಪಿ  ಆಕ್ಟ್:-

          ದಿನಾಂಕ.24-05-2021 ರಂದು ರಾತ್ರಿ 9-30 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲುಗಳನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ.24-05-2021 ರಂದು ರಾತ್ರಿ 8-20 ಗಂಟೆಯಲ್ಲಿ ತಾನು ಠಾಣೆಯ ನಗರ ಗಸ್ತಿನಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ಜೂನಿಯರ್ ಕಾಲೇಜ್ ಹಿಂಭಾಗ ವಿದ್ಯುತ್ ಲೈಟ್ ಬೆಳಕಿನಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ.97,ಸುಬ್ರಮಣಿ, ಹೆಚ್.ಸಿ.115, ವೆಂಕಟರವಣಪ್ಪ, ಪಿ.ಸಿ-127 ಕೃಷ್ಣಪ್ಪ, ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ರಾತ್ರಿ 8-30  ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದು ಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಸುಹೇಕ್ ಬಿನ್ ಸಾದೀಕ್ ಪಾಷ, 2] ಮುನೀರ್ ಬಿನ್ ಸುಬಾನ್, 3] ಖಾದರ್ ಪಾಷ ಬಿನ್ ಹುಸೇನ್, 4] ಅಪ್ಸರ್ ಪಾಷ ಬಿನ್ ಅಮೀರ್ ಪಾಷ, 5] ಪಾರೂಕ್ ಪಾಷ ಬಿನ್ ಬಾಬಾ,  ಶಿಡ್ಲಘಟ್ಟ ನಗರ ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 2710/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ರಾತ್ರಿ 8-35 ಗಂಟೆಯಿಂದ 9-10 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 05 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಸದರಿಯವರ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 

10. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.57/2021 ಕಲಂ. 87  ಕೆ.ಪಿ  ಆಕ್ಟ್:-

          ದಿನಾಂಕ.24-05-2021 ರಂದು ರಾತ್ರಿ 11-10 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲುಗಳನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ.24-05-2021 ರಂದು ರಾತ್ರಿ 9-45 ಗಂಟೆಯಲ್ಲಿ ತಾನು ಠಾಣೆಯ ನಗರ ಗಸ್ತಿನಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ನೆಹರು ಮೈದಾನದ ಬಳಿ ವಿದ್ಯುತ್ ಲೈಟ್ ಬೆಳಕಿನಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ.95 ಪ್ರಕಾಶ್, ಪಿ.ಸಿ-555 ಅಶ್ವಥರೆಡ್ಡಿ, ಪಿ.ಸಿ.132 ವಿನಯ್, ಪಿ.ಸಿ.506 ಶಶಿಕುಮಾರ್ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ರಾತ್ರಿ 10-00 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 200/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 200/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದು ಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ನೂರ್ ಪಾಷ ಬಿನ್ ಅಬ್ದುಲ್ ಅಜೀಜ್, 2] ಪಯಾಜ್ ಬಿನ್ ಬಾಬಾಜಾನ್ 3] ನವಾಜ್ ಪಾಷ ಬಿನ್ ಕಲೀಂಪಾಷ, 4] ಸಾದೀಕ್ ಬಿನ್ ಸಮೀವುಲ್ಲಾ, 5] ಅಲ್ತಾಪ್ ಬಿನ್ ಮುನಾವರ್ ಪಾಷ, 6] ನಿಸಾರ್ ಬಿನ್ ಫಜಲುದ್ದೀನ್ ಎಲ್ಲರೂ  ಶಿಡ್ಲಘಟ್ಟ ನಗರ ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 3450/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ರಾತ್ರಿ 10-10 ಗಂಟೆಯಿಂದ 10-45 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 06 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಸದರಿಯವರ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 25-05-2021 05:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080