ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.109/2021 ಕಲಂ. 323,427,448,504,506 ಐಪಿಸಿ :-

     ದಿನಾಂಕ 25/04/2021 ರಂದು ಬೆಳಿಗ್ಗೆ 10-30 ಗಂಟೆಗೆ ಫಿರ್ಯಾದಿದಾರರಾದ ವೆಂಕಟೇಶ್ ಬಿನ್ ಗಂಗಪ್ಪ, 30 ವರ್ಷ, ಬೋವಿ ಜನಾಂಗ, ಕೊಲಿಕೆಲಸ, ವಾಸ ದೇವರೆಡ್ಡಿಪಲ್ಲಿ ಗ್ರಾಮ, ಕಸಬಾ ಹೋಬಳಿ,ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ದೂರಿನ ಸಾರಾಂಶವೆನೆಂದರೆ  ನಾನು ಈಗ್ಗೆ 5 ವರ್ಷಗಳಿಂದ ನಮ್ಮ ಗ್ರಾಮದ ಬಳಿ ಇರುವ ಸಾಯಿ ಅಮೃತ ಕೋಳಿಫಾರಂ ನಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ. ದಿನಾಂಕ 24/04/2021 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ಕೋಳಿ ಫಾರಂ ನಲ್ಲಿ ಕೊಲಿ ಕೆಲಸಕ್ಕಾಗಿ ನಮ್ಮ ಗ್ರಾಮದಿಂದ ಹೆಂಗಸರನ್ನು ಕರೆದುಕೊಂಡು ಹೋಗಿರುತ್ತೇನೆ. ನಂತರ ಸಂಜೆ ಸುಮಾರು 4-00 ಗಂಟೆ ಸುಮಾರಿಗೆ ಕೊಲಿಕೆಲಸಕ್ಕೆ ಬಂದಿದ್ದ ಶ್ರೀಮತಿ ವೆಂಕಟಲಕ್ಷ್ಮಮ್ಮನ ಗಂಡನಾದ ಗಂಗರಾಜು ಬಿನ್ ನಕ್ಕಲಯಪ್ಪ, ಬೋವಿ ಜನಾಂಗ, ದೇವರೆಡ್ಡಿಪಲ್ಲಿ ಗ್ರಾಮದವರು ನಮ್ಮ ಕೋಳಿ ಫಾರಂ ಒಳಗೆ ಅಕ್ರಮ ಪ್ರವೇಶ ಮಾಡಿ ನನ್ನ ಹೆಂಡತಿಯನ್ನು ಇನ್ನೂ ಯಾಕೆ ಕೆಲಸದಿಂದ ಬಿಟ್ಟಿಲ್ಲವೆಂದು ಹೇಳಿ ನನ್ನ ಮೇಲೆ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ಬೈಯ್ದು , ತನ್ನ ಕೈಗಳಿಂದ ನನ್ನ ಮೈ ಮೇಲೆ ಹೊಡೆದು, ಮುಷ್ಟಿಯಿಂದ ನನ್ನ ಎಡ ಎದೆಯ ಮೇಲೆ ಬಲವಾಗಿ ಗುದ್ದಿ, ಎಡ ಎದೆಯ ಬಳಿ ತನ್ನ ಬಾಯಿಯಿಂದ ಕಚ್ಚಿ ಗಾಯವನ್ನುಂಟು ಮಾಡಿ, ನನಗೆ ನೆಲದ ಮೇಲೆ ಬೀಳಿಸಿ, ತನ್ನ ಕಾಲುಗಳಿಂದ ಮೈ ಮೇಲೆ ಒದ್ದು ನೂವುಂಟು ಮಾಡಿರುತ್ತಾನೆ. ನಂತರ ಕೋಳಿ ಪಾರಂ ಒಳಗೆ ಅಕ್ರಮವಾಗಿ ಪ್ರವೇಶ ಮಾಡಿ, ಸುಮಾರು 150-200 ಮೊಟ್ಟೆಗಳನ್ನು ಹೊಡೆದು ಹಾಕಿ ನಷ್ಟವನ್ನುಂಟು ಮಾಡಿರುತ್ತಾನೆ. ಅಷ್ಟರಲ್ಲಿ ಅಲ್ಲೆ ಇದ್ದ ನಾಗರತ್ನಮ್ಮ ಮತ್ತು ರಾಮಾಂಜಿನಮ್ಮ ರವರು ಜಗಳ ಬಿಡಿಸಿರುತ್ತಾರೆ. ನಿನ್ನನ್ನು ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಪ್ರಾಣಬೆದರಿಕೆ ಹಾಕಿರುತ್ತಾನೆ. ನಂತರ ನಾನು ಒಬ್ಬನೇ ಬಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿರುತ್ತೇನೆ. ಗ್ರಾಮದಲ್ಲಿ ಹಿರಿಯರು ಪಂಚಾಯ್ತಿ ಮಾಡುವುದಾಗಿ ಹೇಳಿದ್ದು, ಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು  ನನಗೆ ಹೊಡೆದು, ಬಾಯಿಯಿಂದ ಕಚ್ಚಿ ಗಾಯವನ್ನುಂಟು ಮಾಡಿ, ಕೋಳಿ ಫಾರಂ ಒಳಗೆ ಅಕ್ರಮ ಪ್ರವೇಶ ಮಾಡಿ ಕೋಳಿ ಮೊಟ್ಟೆಗಳನ್ನು ಹೊಡೆದು ಹಾಕಿ ನಷ್ಟವನ್ನುಂಟು ಮಾಡಿ ಪ್ರಾಣ ಬೆದರಿಕೆ ಹಾಕಿರುವ ಗಂಗರಾಜು ಬಿನ ನಕ್ಕಲಯಪ್ಪ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ದೂರಾಗಿರುತ್ತದೆ.

 

2. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.33/2021 ಕಲಂ. 32,34 ಕೆ.ಇ ಆಕ್ಟ್ :-

     ದಿನಾಂಕ:24-04-2021 ರಂದು ರಾತ್ರಿ 10-00 ಗಂಟೆಗೆ ಬಾಗೇಪಲ್ಲಿ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀ ರಾಜು ಜಿ.ಪಿ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ದಿನಾಂಕ:24-04-2021 ರಂದು ಬಾಗೇಪಲ್ಲಿ ಠಾಣೆಯ ಸಿಬ್ಬಂದಿಯಾದ ಹೆಚ್.ಸಿ-102 ಶಂಕರರೆಡ್ಡಿ, ಸಿಪಿಸಿ-01 ನರಸಿಂಹಪ್ಪ, ಮತ್ತು ಜೀಪ್ ಚಾಲಕ ಎಪಿಸಿ-110 ನರಸಿಂಹಮೂರ್ತಿರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-6399 ರಲ್ಲಿ ಬಿಳ್ಳೂರು, ಚಾಕವೇಲು ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 6-30 ಗಂಟೆಯ ಸಮಯದಲ್ಲಿ ಪುಲಗಲ್ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಊದವಾರಪಲ್ಲಿ ಗ್ರಾಮದ ಸೂರ್ಯನಾರಾಯಣರೆಡ್ಡಿ ಬಿನ್ ಲೇಟ್ ನರಸರೆಡ್ಡಿರವರು ಸಾರ್ವಜನಿಕರಿಗೆ ಮಾರಾಟ ಮಾಡುವ ಸಲುವಾಗಿ ಮಧ್ಯವನ್ನು ಅಕ್ರಮವಾಗಿ ತಮ್ಮ ಮನೆಯಲ್ಲಿ ದಾಸ್ತಾನು ಮಾಡಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಊದುವಾರಪಲ್ಲಿ ಗ್ರಾಮದ ಬಳಿಗೆ  ಚೇಳೂರು ಪೊಲೀಸ್ ಠಾಣೆಯ ಇನಾಯತ್ ಉಲ್ಲಾ ಹೆಚ್ ಸಿ-149, ರವಣಪ್ಪ ಹೆಚ್ ಸಿ-129 ರವರನ್ನು ಕರೆಯಿಸಿಕೊಂಡು ನಂತರ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಊದವಾರಪಲ್ಲಿ ಗ್ರಾಮದ ಸೂರ್ಯನಾರಾಯಣರೆಡ್ಡಿ ಬಿನ್ ಲೇಟ್ ನರಸರೆಡ್ಡಿ ರವರ ಮನೆಯ ಬಳಿ ಹೋಗಿ ಜೀಪನ್ನು ನಿಲ್ಲಿಸಿ ನೋಡಲಾಗಿ ಮನೆಯ ಬಾಗಿಲು ಹಾಕಿದ್ದು ಮನೆಯಲ್ಲಿ ಯಾರೂ ಇರಲಿಲ್ಲಾ ಅಲ್ಲಿಯೇ ಇದ್ದ ಆತನ ಮಗಳಾದ ಮಾನಸ ಬಿನ್ ಸೂರ್ಯನಾರಾಯಣರೆಡ್ಡಿ ರವರನ್ನು ಕರೆಯಿಸಿ ಪಂಚರ ಸಮಕ್ಷಮ ಬಾಗಿಲನ್ನು ತೆಗೆಸಿ ಮನೆಯಲ್ಲಿ ಪರಿಶೀಲಿಸಲಾಗಿ ಹಾಲ್ ನಲ್ಲಿ ಮರದ ಟೇಬಲ್ ಇದ್ದು, ಟೇಬಲ್ ನಲ್ಲಿ ಮತ್ತು ಅದರ ಕೆಳಗೆ ಕರ್ಟನ್ ಬಾಕ್ಸ್ ಗಳಿದ್ದು, ಅವುಗಳನ್ನು ತೆಗೆದು ಪರಿಶೀಲಿಸಲಾಗಿ 1) OLD TAVERN whisky ಕಂಪನಿಯ 2 ಬಾಕ್ಸ್ ಗಳಿದ್ದು, ಪ್ರತಿಯೊಂದು ಬಾಕ್ಸ್ ನಲ್ಲಿ 180 ಎಂ.ಎಲ್ ಸಾಮರ್ಥ್ಯದ 48 ಟೆಟ್ರಾ ಪಾಕೆಟ್ ಗಳಂತೆ ಒಟ್ಟು 96 ಟೆಟ್ರಾ ಪಾಕೆಟ್ ಗಳಿರುತ್ತವೆ. ಪ್ರತಿಯೊಂದು ಟೆಟ್ರಾ ಪಾಕೆಟ್ ಮೇಲೆ 86.75 ರೂ ಎಂದು ಇದ್ದು ಇವುಗಳ ಬೆಲೆ 8328 ರೂ ಆಗುತ್ತದೆ.2) HAYWARDS CHEERS whisky  ಕಂಪನಿಯ 4 ಕರ್ಟನ್ ಬಾಕ್ಸ್ ಗಳಿದ್ದು, ಪ್ರತಿಯೊಂದು ಬಾಕ್ಸ್ ನಲ್ಲಿ 90 ಎಂ.ಎಲ್ ಸಾಮರ್ಥ್ಯದ 96 ಟೆಟ್ರಾ ಪಾಕೆಟ್ ಗಳಂತೆ ಒಟ್ಟು 384 ಟೆಟ್ರಾ ಪಾಕೆಟ್ ಗಳಿರುತ್ತವೆ. ಪ್ರತಿಯೊಂದು ಟೆಟ್ರಾ ಪಾಕೆಟ್ ಮೇಲೆ 35.13 ರೂ ಎಂದು ಇದ್ದು ಇವುಗಳ ಬೆಲೆ 13,489.92 ರೂ ಆಗುತ್ತದೆ. 3) ಅದರ ಪಕ್ಕದಲ್ಲಿ 90 ಎಂ.ಎಲ್ ಸಾಮಥ್ರ್ಯದ HAYWARDS CHEERS whisky  53 ಟೆಟ್ರಾ ಪಾಕೆಟ್ ಗಳಿದ್ದು, ಪ್ರತಿಯೊಂದು ಟೆಟ್ರಾ ಪಾಕೆಟ್ ಮೇಲೆ 35.13 ರೂ ಎಂದು ಬೆಲೆ ಇದ್ದು ಇವುಗಳ ಒಟ್ಟು ಬೆಲೆ 1861.81 ರೂ ಆಗುತ್ತದೆ. 4) 180 ಎಂ.ಎಲ್ ಸಾಮರ್ಥ್ಯದ OLD ADMIRAL VSOP Brandy  ಕಂಪನಿಯ 23 ಪಾಕೆಟ್ ಗಳಿದ್ದು, ಪ್ರತಿಯೊಂದು ಟೆಟ್ರಾ ಪಾಕೆಟ್ ಮೇಲೆ 86.75 ರೂ ಎಂದು ಬೆಲೆಯಿದ್ದು ಇವುಗಳ ಬೆಲೆ 1995.25 ರೂ ಆಗುತ್ತದೆ.5) 180 ಎಂ.ಎಲ್ ಸಾಮಥ್ರ್ಯದ BAGPIPER  DELUXE whisky  ಕಂಪನಿಯ 48 ಟೆಟ್ರಾ ಪಾಕೆಟ್ ಗಳು ಒಂದು ಕರ್ಟ ನ್ ಬಾಕ್ಸ ನಲ್ಲಿದ್ದು , ಪ್ರತಿಯೊಂದು ಟೆಟ್ರಾ ಪಾಕೆಟ್ ಮೇಲೆ 106.23 ರೂ ಎಂದು ಬೆಲೆ ಇರುತ್ತದೆ, ಅದರ ಪಕ್ಕದಲ್ಲಿ 180 ಎಂ.ಎಲ್ ಸಾಮರ್ಥ್ಯದ BAGPIPER  DELUXE whisky  ಕಂಪನಿಯ 20 ಟೆಟ್ರಾ ಪಾಕೆಟ್ ಗಳಿದ್ದು ಪ್ರತಿಯೊಂದು ಟೆಟ್ರಾ ಪಾಕೆಟ್ ಮೇಲೆ 106.23 ರೂ ಎಂದು ಬೆಲೆಯಿದ್ದು ಇವುಗಳ ಬೆಲೆ 7223.64 ರೂ ಆಗಿರುತ್ತೆ, 6) 650 ಎಂ.ಎಲ್ ಸಾಮರ್ಥ್ಯದ KING FISHER strong premium Beer  8 ಬಾಟಲ್ ಗಳಿದ್ದು, ಪ್ರತಿಯೊಂದು ಬಾಟಲ್ ಮೇಲೆ 150 ರೂ ಎಂದು ಬೆಲೆಯಿದ್ದು ಇವುಗಳ ಬೆಲೆ 1200 ರೂ ಆಗುತ್ತದೆ. 7) 650 ಎಂ.ಎಲ್ ಸಾಮಥ್ರ್ಯದ TUBORG premium beer 3  ಬಾಟಲ್ ಗಳಿದ್ದು, ಪ್ರತಿಯೊಂದು ಬಾಟಲ್ ಮೇಲೆ 150 ರೂ ಎಂದು ಬೆಲೆಯಿದ್ದು ಇವುಗಳ ಬೆಲೆ 450 ರೂ ಆಗುತ್ತದೆ. 8) 180 ಎಂ.ಎಲ್ ಸಾಮಥ್ರ್ಯದ 8 PM  ಮದ್ಯದ 16 ಟೆಟ್ರಾ ಪಾಕೆಟ್ ಗಳಿದ್ದು, ಪ್ರತಿಯೊಂದು ಟೆಟ್ರಾ ಪಾಕೆಟ್ ಮೇಲೆ 86.75 ರೂ ಎಂದು ಬೆಲೆಯಿದ್ದು  ಇವುಗಳ ಬೆಲೆ 1388 ರೂ ಆಗುತ್ತದೆ. 9) 500 ಎಂ.ಎಲ್ ಸಾಮಥ್ರ್ಯದ KING FISHER strong premium Beer  10 ಟಿನ್ ಗಳಿದ್ದು, ಪ್ರತಿಯೊಂದು ಟಿನ್ ಮೇಲೆ 120 ರೂ ಎಂದು ಬೆಲೆಯಿದ್ದು ಇವುಗಳ ಬೆಲೆ 1200 ರೂ ಆಗುತ್ತದೆ. 10) 180 ಎಂ.ಎಲ್ ಸಾಮರ್ಥ್ಯದ MANSION HOUSE French Brandy 6 ಬಾಟಲ್ ಗಳಿದ್ದು, ಪ್ರತಿಯೊಂದು ಬಾಟಲ್ ಮೇಲೆ 220.4 ರೂ ಎಂದು ಬೆಲೆಯಿದ್ದು ಇವುಗಳ ಬೆಲೆ 1322.76 ರೂ ಆಗುತ್ತದೆ. ಮೇಲ್ಕಂಡ ಎಲ್ಲಾ ಮದ್ಯದ ವಸ್ತುಗಳ ಒಟ್ಟು ಬೆಲೆ 38,459=46 ರೂಗಳಾಗಿರುತ್ತೆ. ಎಫ್.ಎಸ್.ಎಲ್ ಪರೀಕ್ಷೆಗೆ ಕಳುಹಿಸಿಕೊಡುವ ಸಲುವಾಗಿ ಮೇಲ್ಕಂಡ ಎಲ್ಲಾ ಮಧ್ಯದ ಟೆಟ್ರಾ ಪಾಕೆಟ್ ಗಳು ಮತ್ತು ಬಾಟಲ್ ಗಳ ಪೈಕಿ ತಲಾ ಒಂದೊಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಣ್ಣದ ಬಟ್ಟೆಯ ಚೀಲದಲ್ಲಿ ಇಟ್ಟು ಮೂತಿಯನ್ನು ದಾರದಿಂದ ಕಟ್ಟಿ “D’’ಎಂಬ ಆಂಗ್ಲಭಾಷೆಯ ಅಕ್ಷರದಿಂದ ಸೀಲ್ ಮಾಡಿರುತ್ತದೆ. ಮೇಲ್ಕಂಡ ಎಲ್ಲಾ ಮದ್ಯದ ವಸ್ತುಗಳನ್ನು ಹಾಗೂ ಮಾದರಿ ವಸ್ತುಗಳನ್ನು ಸಂಜೆ 7-15 ರಿಂದ ರಾತ್ರಿ 9-00 ಗಂಟೆಯವರೆಗೂ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮನೆಯ ಬಳಿ ಇದ್ದ ಸಾರ್ವಜನಿಕರನ್ನು ಸದರಿ ಮನೆಯ ಮಾಲೀಕರ ಹೆಸರು ವಿಳಾಸ ಕೇಳಲಾಗಿ ಸೂರ್ಯನಾರಾಯಣರೆಡ್ಡಿ ಬಿನ್ ಲೇಟ್ ನರಸರೆಡ್ಡಿ, 50ವರ್ಷ, ಒಕ್ಕಲಿಗರು, ವ್ಯಾಪಾರ, ಊದವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು,  ಸದರಿ ಆಸಾಮಿಯು ಮನೆಯಲ್ಲಿಲ್ಲದೇ ಎಲ್ಲಿಗೂ ಹೊರಟು ಹೋಗಿದ್ದು  ಆತನು ಸಾರ್ವಜನಿಕರಿಗೆ ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ಮನೆಯಲ್ಲಿ ಮಧ್ಯವನ್ನು ದಾಸ್ತಾನು ಮಾಡಿರುವುದಾಗಿ, ಸದರಿಯವರ ಮೇಲೆ ಈಗಾಗಲೇ ಅಕ್ರಮ ಮದ್ಯೆ ಮಾರಾಟದ ಬಗ್ಗೆ ಪ್ರಕರಣಗಳು ದಾಖಲಾಗಿದ್ದರೂ ಸಹ ಅದೇ ಚಾಳಿಯನ್ನು  ಮುಂದುವರಿಸಿರುವುದಾಗಿ ಗ್ರಾಮಸ್ಥರು ತಿಳಿಸಿರುತ್ತಾರೆ, ಮೇಲ್ಕಂಡ ಮದ್ಯದ ವಸ್ತುಗಳು ಮತ್ತು ಪಂಚನಾಮೆಯೊಂದಿಗೆ ರಾತ್ರಿ 10-00 ಗಂಟೆಗೆ ಠಾಣೆಗೆ ಬಂದು ವರದಿಯೊಂದಿಗೆ  ಅಸಲು ಪಂಚನಾಮೆಯನ್ನು ಮತ್ತು ಮಾಲನ್ನು ನೀಡುತ್ತಿದ್ದು,  ಸಾರ್ವಜನಿಕರಿಗೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ಮದ್ಯವನ್ನು ಅಕ್ರಮವಾಗಿ ಮನೆಯಲ್ಲಿ ದಾಸ್ತಾನು ಮಾಡಿರುವ ಮೇಲ್ಕಂಡ ಆಸಾಮಿಯ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

3. ಸಿ.ಇ.ಎನ್ ಪೊಲೀಸ್‌ ಠಾಣೆ ಮೊ.ಸಂ.27/2021 ಕಲಂ. 419,420 ಐ.ಪಿ.ಸಿ & 66(D),66(C) INFORMATION TECHNOLOGY ACT 2008:-

     ದಿನಾಂಕ:25/4/2021 ರಂದು ಪಿರ್ಯಾದಿ ಶ್ರೀ ರಘುನಾಥ್ ಎಸ್ ಕೆ ಬಿನ್ ಕೃಷ್ಣಪ್ಪ,42 ವರ್ಷ, ಗಾಣಿಗರು, ವ್ಯಾಪಾರ ವಾಸ  ಸೀಕಲ್ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ ಸಂಖ್ಯೆ:9740171168 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಚಿಂತಾಮಣಿ ನಗರದಲ್ಲಿ ಬೈರವೇಶ್ವರ ಟ್ರೇಡರ್ಸ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇನೆ. ಮತ್ತು  ನನ್ನ ವ್ಯವಹಾರಕ್ಕೋಸ್ಕರ ಎಸ್ ಬಿ ಐ ಬ್ಯಾಂಕ್ ಚಿಂತಾಮಣಿ ಶಾಖೆಯಲ್ಲಿ ಉಳಿತಾಯ ಖಾತೆ ನಂ;30233031372 ರಂತೆ ಖಾತೆಯನ್ನು ಹೊಂದಿದ್ದು ಇದಕ್ಕೆ ನನ್ನ ಮೇಲ್ಕಂಡ ಮೊಬೈಲ್ ಸಂಕ್ಯೆಯನ್ನು ಲಿಂಕ್ ಮಾಡಿಕೊಂಡು ಪೋನ್ ಫೇ ವ್ಯಾಲೆಟ್ ನ್ನು ಬಳಸುತ್ತಿರುತ್ತೇನೆ. ಈಗಿರುವಲ್ಲಿ ದಿನಾಂಕ:21/4/2021 ರಂದು ನಮ್ಮ ಅಂಗಡಿಯಲ್ಲಿ ಒಬ್ಬ ಗ್ರಾಹಕ ಔಷದಿಯನ್ನು ಕೊಂಡು ಕೊಂಡಿದ್ದು, ಅದರ ಬಾಬತ್ತು 4800/- ರೂಗಳನ್ನು ನನಗೆ ಪೋನ್ ಫೇ ಮೂಲಕ ಕಳುಹಿಸಿದ. ಆದರೆ ನನ್ನ ಖಾತೆಗೆ ಹಣ ಬರಲಿಲ್ಲ. ಅವರ ಖಾತೆಯಲ್ಲಿ ಹಣ ಕಟಾವು ಆಗಿರುತ್ತದೆ. ನಂತರ ನಾನು ಪೋನ್ ಫೇ ಕಸ್ಟರ್ ಕೇರ್ ನಂಬರ್; 08068727374 ಸಂಖ್ಯೆಗೆ ಕರೆ ಮಾಡಿದ್ದು, ಕರೆ ಸ್ವೀಕರಿಸಲಿಲ್ಲ. ನಂತರ ಮತ್ತೊಂದು  ನಂಬರ್ 891870901 ನಿಂದ ನನಗೆ ಕರೆ ಬಂದಿದ್ದು.ಸ್ವೀಕರಿಸಲಾಗಿ ನಾವು ಪೋನ್ ಫೇ ಕಸ್ಟಮರ್ ಕೇರ್ ನಿಂದ ಮಾತಾಡುತ್ತಿರುವುದಾಗಿ ತಿಳಿಸಿದ್ದು, ನಾನು 4800/- ರೂಗಳು ನನ್ನ ಖಾತೆಗೆ ಬಂದಿರುವುದಿಲ್ಲವೆಂತ ತಿಳಿಸಿದ್ದು. ಆ ವ್ಯಕ್ತಿ ನೀವು ನಿಮ್ಮ ಪೋನ್  ಪೋನ್ ಫೇ ಓಪನ್ ಮಾಡಿಕೊಂಡು CONTACT DETAILS OPEN ಮಾಡಿ ಅದರಲ್ಲಿ ಐಡಿ ನಂಭರ್ ನ್ನು ಕಳುಹಿಸುತ್ತೇನೆ. ಐಡಿ ನಂಬರ್ ನ್ನು ಹಾಕಿ ಕಳುಹಿಸು ನಿಮ್ಮ ಹಣ ನಿಮ್ಮ ಖಾತೆಗೆ ಜಮೆ ಹಾಗುತ್ತದೆ ಅಂತ ತಿಳಿಸಿ, MONEY REFUND 4800 REFUND ID CODE;49852 ಕೋಡ್ ಅಂತ  ಕಳುಹಿಸಿದ. ನಿಮ್ಮ ಹಣ ನಿಮ್ಮ ಖಾತೆಗೆ ಬರುತ್ತದೆಂತ ತಿಳಿಸಿದ,ನಾನು ನಿಜ ಇರಬಹುದೆಂತ ನಂಬಿ  ಅವರು ಹೇಳಿದಂತೆ ಮಾಡಿದೆ. ಪುನಃ ಮತ್ತೊಂದು ಕೋಡ್ 47855 ಹಾಕುವಂತೆ  ತಿಳಿಸಿದ. ಕೂಡಲೆ ನನ್ನ ಖಾತೆಯಿಂದ  ಎರಡು ಭಾರಿ ಸೇರಿ ಒಟ್ಟು 97,707/- ರೂಗಳನ್ನು ಪೋನ್ ಫೇ ಖಾತೆ ನಂ: 7706012413 ಗೆ ವರ್ಗಾವಣೆ ಮಾಡಿಕೊಂಡಿರುತ್ತಾನೆ.  ಮೇಲ್ಕಂಡ ಆರೋಪಿ ನನಗೆ ಪೋನ್ ಫೇ ಕಸ್ಟಮರ್ ಕೇರ್ ಅಂತ ಪರಿಚಯ ಮಾಡಿಕೊಂಡು ನಿಮ್ಮ ಹಣ ರೀಫಂಡ್ ಮಾಡಲಾಗುತ್ತದೆಂತ ನಂಬಿಸಿ ನನ್ನ ಖಾತೆಯಿಂದ ಮೇಲ್ಕಂಡ ಹಣವನ್ನು ವರ್ಗಾಯಿಸಿ ಕೊಂಡು ವಂಚಿಸಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ನಮ್ಮ ಹಣವನ್ನು ನಮಗೆ ವಾಪಸ್ಸು ಕೊಡಿಸಿ ಕಾನೂನು ಕ್ರಮವನ್ನು ಕೈಗೊಳ್ಳಲು ಕೋರಿ ನೀಡಿದ ದೂರು.

 

4. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.30/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 24-04-2021 ರಂದು ರಾತ್ರಿ 9.45 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆಯೊಂದಿಗೆ ನೀಡಿದ ಮಾಲು, ಆರೋಪಿತರು, ನ್ಯಾಯಾಲಯದಿಂದ ಅನುಮತಿ ಪತ್ರ ಹಾಗೂ ವರದಿಯ ದೂರಿನ ಸಾರಾಂಶವೇನೆಂದರೆ  ದಿನಾಂಕ 24-04-2021 ರಂದು  ರಾತ್ರಿ 7.00 ಗಂಟೆಯಲ್ಲಿ ಸಿಬ್ಬಂಧಿಯಾದ ಹೆಚ್.ಸಿ-48 ಶ್ರೀ ದಿನೇಶ್, ಸಿ.ಪಿ.ಸಿ-88 ಶ್ರೀ ರಮೇಶ್, ಸಿ.ಪಿ.ಸಿ-259 ಶ್ರೀ ಪರಶುರಾಮ ಬೋಯಿ, ಸಿ.ಪಿ.ಸಿ-275 ಶ್ರೀ ಬೀರಪ್ಪ ಏವೂರ, ಸಿ.ಪಿ.ಸಿ-541 ಗಂಗಾಧರ, ಪಿ.ಸಿ-150 ಶ್ರೀ ಸಾಧಿಕ್ ಉಲ್ಲಾ, ರವರುಗಳೊಂದಿಗೆ ಇವನಿಂಗ್ ರೌಂಡ್ಸ್ ಪುಟ್ ಪೆಟ್ರೋಲಿಂಗ್, ರೌಂಡ್ಸ್ ಪ್ರಯುಕ್ತ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಚಿಕ್ಕಬಳ್ಳಾಪುರ ನಗರದ ರೈಲ್ವೆ ನಿಲ್ದಾಣದ ಪೂರ್ವದ ಕಡೆ ಇರುವ ಶಾಂತಿ ನಗರದ ಆವರಣದ ನಿರ್ಜನ ಪ್ರದೇಶದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್  ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ  ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಜೂಜಾಟ ದಾಳಿಗೆ ಪಂಚರನ್ನು ಬರಮಾಡಿಕೊಂಡು  ಅವರಿಗೆ ಕೇಸಿನ ಸಾರಾಂಶವನ್ನು ತಿಳಿಸಿ ಪಂಚರಾಗಿ ಬರುವಂತೆ ಕೋರಿರುತ್ತೆ ಕಡೆಗೆ ಸ್ವಲ್ಪ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಶಾಂತಿ ನಗರದ ಪಕ್ಕದಲ್ಲಿರುವ ರೈಲ್ವೆ ನಿಲ್ದಾಣದ ಪೂರ್ವದ ಕಡೆ ಇರುವ ಆವರಣದ ಖಾಲಿ ನಿರ್ಜನ ಪ್ರದೇಶದಲ್ಲಿ  ಕೆಲವರು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 100 ರೂ ಬಾಹರ್ ಗೆ 100 ರೂ ಎಂದು ಕೂಗುತ್ತಿದ್ದು,  ಅರೋಪಿಗಳು ಅಕ್ರಮ ಜೂಜಾಟ ಅಡುತ್ತಿರುವುದು ಖಚಿತ ಪಡಿಸಿಕೊಂಡು ಸಿಬ್ಬಂಧಿಯವರಿಗೆ  ಕೊಟ್ಟ ಸೂಚನೆಯಂತೆ  ಸಿಬ್ಬಂದಿಯವರು ಅವರನ್ನು ಸುತ್ತುವರೆದಿದ್ದು ಅಷ್ಟರಲ್ಲಿ  ಪೊಲೀಸರನ್ನು ನೋಡಿ ಜೂಜಾಟುತ್ತಿದ್ದ 5 ಜನರು ಓಡಿ ಹೋಗಲು ಪ್ರಯತ್ನಿಸಿದ್ದು ಕೂಡಲೆ ಸಿಬ್ಬಂದಿಯವರು ಹಿಂಬಾಲಿಸಿ ಇಬ್ಬರನ್ನು ಹಿಡಿದುಕೊಂಡು ನನ್ನ ಮುಂದೆ ಹಾಜರು ಪಡಿಸಿರುತ್ತಾರೆ. ಸದರಿ ಆಸಾಮಿಗಳನ್ನು ಪಂಚರ ಸಮಕ್ಷಮ ವಿಚಾರಣೆ ಮಾಡಲಾಗಿ  ಅವರು ಒಬ್ಬೊಬ್ಬರಾಗಿ ತಮ್ಮ ಹೆಸರು ವಿಳಾಸ ತಿಳಿಸಿದ್ದು, 1, ಮೌಲಾ ಬಿನ್ ಅಮಾನುಲ್ಲಾ, 22 ವರ್ಷ, ಮುಸ್ಲಿಂ, ಮಾವಿನ ವ್ಯಾಪಾರಿ, ವಾಸ: ನಾರಾಯಣಸ್ವಾಮಿ ರವರ ಬಾಡಿಗೆ ಮನೆಯಲ್ಲಿ ವಾಸ, ಸೆಂಟ್ ಜೋಸೆಪ್ ಕಾನ್ವೆಂಟ್ ಚಿಕ್ಕಬಳ್ಳಾಪುರ ನಗರ.  2) ಅಲ್ಲಾಬಕಾಷ್ @ ಅಲೀಂ, ಬಿನ್ ರಸುಲ್, 23 ವರ್ಷ, ಮುಸ್ಲಿಂ, ಕಾರ್ ಪೆಂಟರ್ ಕೆಲಸ, ವಾಸ: ವಾರ್ಡ್ ನಂ: 21, ಶಾಂತಿ ನಗರ, ಚಿಕ್ಕಬಳ್ಳಾಪುರ ನಗರ 3) ದಾದಾಪೀರ್ ಬಿನ್ ಅಲ್ಲಾಬಕಾಷ್ ಅಲಿ, 22 ವರ್ಷ, ಮುಸ್ಲಿಂ, ಮೆಕಾನಿಕ್ ಕೆಲಸ, ವಾಸ; ವಾರ್ಡ್ ನಂ: 21, ಶಾಂತಿ ನಗರ, ಚಿಕ್ಕಬಳ್ಳಾಪುರ ನಗರ.  4) ನದೀಂ ಬಿನ್ ಬಿ. ಕಲೀಂ, ಮುಸ್ಲಿಂ, 27 ವರ್ಷ, ಪ್ರೂಟ್ ವ್ಯಾಪಾರ, ವಾಸ:ಶಾಂತಿ ನಗರ, ವಾರ್ಡ್ ನಂ: 21, ಚಿಕ್ಕಬಳ್ಳಾಪುರ ನಗರ.  5) ಸೈಯದ್ ಷಪಾ ಬಿನ್ ಸೈಯದ್ ಬಾಬು, ಮುಸ್ಲಿಂ, 18 ವರ್ಷ, ವೆಲ್ಡಿಂಗ್ ಕೆಲಸ, ವಾಸ; ವಾರ್ಡ್ ನಂ: 21, 6 ನೇ ಕ್ರಾಸ್, ಚಿಕ್ಕಬಳ್ಳಾಪುರ ನಗರ. ವಾಸಿಗಳು ಎಂದು ತಿಳಿಸಿದರು. ಸದರಿ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಅಕ್ರಮವಾಗಿ ಅಂದರ್ ಬಾಹರ್  ಜೂಜಾಟ ವನ್ನು ಆಡುತ್ತಿದ್ದು ಆಸಾಮಿಗಳು ಜೂಜಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ  ಪಣಕ್ಕಿಟ್ಟಿದ್ದ ಹಣ ಮತ್ತು ಇಸ್ಪೀಟ್ ಎಲೆಗಳನ್ನು ಚೆಲ್ಲಾ ಪಿಲ್ಲಿಯಾಗಿ ಎಸೆದಿದ್ದನ್ನು  ಸಂಗ್ರಹಿಸಿಕೊಂಡು ಎಣಿಸಲಾಗಿ ನಗದು 6750/- ರೂ ಮತ್ತು 52 ಇಸ್ಪೀಟ್ ಎಲೆಗಳು ದೊರೆತಿರುತ್ತದೆ.  ಆಸಾಮಿಗಳು ಪಣಕ್ಕಿಟ್ಟಿದ್ದ ಹಣ 6750/- ರೂ ಮತ್ತು 52 ಇಸ್ಪೀಟ್ ಎಲೆಗಳನ್ನು  ಹಾಗೂ ಒಂದು ಪ್ಲಾಸ್ಟಿಕ್ ಚೀಲವನ್ನು ಅಮಾನತ್ತು ಪಡಿಸಿಕೊಂಡು ವಶಕ್ಕೆ ಪಡೆದುಕೊಂಡಿರುತ್ತದೆ. ಪಂಚನಾಮೆಯನ್ನು ರಾತ್ರಿ 8.00 ಗಂಟೆಯಿಂದ ರಾತ್ರಿ 9.00 ಗಂಟೆಯವರೆಗೆ ಠಾಣೆಗೆ ಒದಗಿಸಿರುವ ಬ್ಯಾಟರಿ ಟಾರ್ಚ್ ಬೆಳಕಿನಲ್ಲಿ ಕೈಗೊಂಡಿರುತ್ತೆ. ಅಮಾನತ್ತು ಪಡಿಸಿಕೊಂಡ ಮಾಲು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ರಾತ್ರಿ 9.30 ಗಂಟೆಗೆ ವಾಪಾಸ್ಸಾಗಿ ಆಸಾಮಿಗಳು, ಮಾಲು, ಪಂಚನಾಮೆ ಮತ್ತು ಘನ ನ್ಯಾಯಾಲಯದ ಅನುಮತಿ ಪತ್ರವನ್ನು ಹಾಜರು ಪಡಿಸುತ್ತಿದ್ದು  ಅರೋಪಿಗಳ ವಿರುದ್ದ  ಕಲಂ 87 ಕೆಪಿ ಅಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಈಪ್ರ.ವ.ವರದಿ.

 

5. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.46/2021 ಕಲಂ. 379 ಐ.ಪಿ.ಸಿ:-

          ದಿನಾಂಕ 24/04/2021 ರಂದು ಎಸ್.ಗೊಲ್ಲಹಳ್ಳಿ ಗ್ರಾಮದ ವಾಸಿ ಪಿರ್ಯಾದಿ ಅಶ್ವತ್ಥಪ್ಪ ಬಿನ್ ಗಂಗಪ್ಪರವರು ಠಾಣೆಗೆ ಹಾಜರಾಗಿ ನೀಡಿದ ಲಿಖತ ದೂರಿನ ಸಾರಾಂಶವೇನೆಂದರೆ ದಿನಾಂಕ 22/04/2021 ರಂದು ಸಂಜೆ ಸುಮಾರು 7.45 ಗಂಟೆಯ ಸಮಯದಲ್ಲಿ ತನ್ನ ವೈಯಕ್ತಿಕ ಕೆಲಸಗಳನ್ನು ಮುಗಿಸಿಕೊಂಡು ಬಂದು ತನ್ನ ಬಾಬತ್ತು ದ್ವಿಚಕ್ರ ವಾಹನದ ಸಂಖ್ಯೆ KA 40 Y 8489 ನೊಂದಣಿ ಸಂಖ್ಯೆ TVS XL 100ವಾಹನವನ್ನು ತಮ್ಮ ಮನೆಯ ಮುಂದೆ ನಿಲ್ಲಿದ್ದು, ದಿನಾಂಕ 23/04/2021 ರಂದು ಬೆಳಗಿನ ಜಾವ ಸುಮಾರು 5.15 ಗಂಟೆಯಲ್ಲಿ ಎದ್ದು ನೋಡಲಾಗಿ ತನ್ನ ದ್ವಿ-ಚಕ್ರ ವಾಹನವು ಕಳುವಾಗಿದ್ದು, ಈ ಬಗ್ಗೆ ತಮ್ಮ ಗ್ರಾಮದಲ್ಲಿ ವಿಚಾರ ಮಾಡಲಾಗಿ ಹಾಗೂ ಸುತ್ತ-ಮುತ್ತ ಹುಡಕಲಾಗಿ ಪತ್ತೆಯಾಗದೇ ಇದ್ದು, ಇದರ ಅಂದಾಜು ಬೆಲೆ 25,000/-ರೂಗಳಾಗಿದ್ದು, ಈ ಬಗ್ಗೆ ಮುಂದಿನ ಕ್ರಮಕ್ಕಾಗಿ ತಡವಾಗಿ ದೂರು ನೀಡಿರುವುದಾಗಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.95/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ: 10/04/2021 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ವೈಚಕೂರ್ಲಹಳ್ಳಿ ಗ್ರಾಮದ ಬಳಿ ಇರುವ ಸರ್ಕಾರಿ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಹೆಚ್.ಸಿ- 170 ಜೂಲಪ್ಪ , ಪಿ.ಸಿ-518 ಆನಂದ, ಪಿ.ಸಿ-512 ರಾಜಶೇಖರ, , ಪಿ.ಸಿ-520 ಶ್ರೀನಾಥ್, ಪಿ.ಸಿ-302 ಕುಮಾರ್ ನಾಯಕ್, ಪಿ.ಸಿ-381 ಜಗದೀಶ, ಪಿ.ಸಿ-129 ರಾಮಚಂದ್ರ, ರವರೊಂದಿಗೆ ಗಸ್ತು ಮಾಡುತ್ತಿದ್ದಾಗ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ವೈಚಕೂರ್ಲಹಳ್ಳಿ ಗ್ರಾಮಕ್ಕೆ ಮದ್ಯಾಹ್ನ 1-30 ಹೋಗಿ ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸರ್ಕಾರಿ ಕೆರೆಯ ಅಂಗಳದಲ್ಲಿ 7 ಜನರು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 100 ರೂ, ಬಾಹರ್ ಗೆ 100 ರೂ ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಸುತ್ತುವರೆದು ಕುಳಿತಿದ್ದವರನ್ನು ಹಿಡಿದುಕೊಂಡು ವಿಚಾರಿಸಲಾಗಿ 1) ರಾಜೇಶ್ ಬಿನ್ ನಾರಾಯಣಪ್ಪ , 30 ವರ್ಷ. ವಕ್ಕಲಿಗ ಜನಾಂಗ, ವ್ಯಸಾಯ, ಮರಳೂರು ಗ್ರಾಮ, ಗೌರಿಬಿದನೂರು ತಾಲ್ಲೂಕು 2)ನಾಗರಾಜ್ ಬಿನ್ ಲೇಟ್ ವಾಚಯ್ಯ, 35 ವರ್ಷ, ನಾಯಕ ಜನಾಂಗ, ವ್ಯವಸಾಯ, ಮರಳೂರು ಗ್ರಾಮ, ಗೌರಿಬಿದನೂರು ತಾಲ್ಲೂಕು.3)ರಾಜೇಶ್ ಬಿನ್ ಹನುಮಂತರಾಯಪ್ಪ, ವ್ಯವಸಾಯ,ಕುಂಬಾರ ಜನಾಂಗ,ವೈಚಕೂರ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 4)ನಾಗೇಶ್ ಬಿನ್ ಅಶ್ವತ್ಥಪ್ಪ, 27 ವರ್ಷ, ಕುರುಬ ಜನಾಂಗ, ವ್ಯವಸಾಯ, ವೈಚಕೂರ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 5) ಗೋವಿಂದ ರೆಡ್ಡಿ ಬಿನ್ ಲೇಟ್ ವೆಂಕಟಪ್ಪ, 54 ವರ್ಷ, ,ಒಕ್ಕಲಿಗ ಜನಾಂಗ, ವ್ಯವಸಾಯ, ವೈಚಕೂರ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 6)ಕೆಂಪಯ್ಯ ಬಿನ್ ಲೇಟ್ ದೊಡ್ಡಗಂಗಪ್ಪ, 71 ವರ್ಷ, ಆದಿ ಕರ್ನಾಟ ಜನಾಂಗ, ವ್ಯವಸಾಯ , ಮರಳೂರು ಗ್ರಾಮ, ಗೌರಿಬಿದನೂರು ತಾಲ್ಲೂಕು,7)ವೆಂಕಟೇಶ್ ಬಿನ್ ಚಿಕ್ಕಮಾದೇವಪ್ಪ, 50 ವರ್ಷ, ಕುರುಬ ಜನಾಂಗ, ಹುಣಸೇನಹಳ್ಳಿ ಗ್ರಾಮ,ಗೌರಿಬಿದನೂರು ತಾಲ್ಲೂಕು.ಎಂದು ತಿಳಿಸಿದ್ದು ಸ್ಥಳದಲ್ಲಿ ಬಿದ್ದಿದ್ದ ಪಣಕ್ಕಿಟ್ಟಿದ್ದ ಹಣ ಎಣಿಸಲಾಗಿ 3650/- ರೂ ಹಣ , 52 ಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಇರುತ್ತೆ. ಸ್ಥಳದಲ್ಲಿ ಮದ್ಯಾಹ್ನ 2-00 ಗಂಟೆಯಿಂದ 3-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ 3650/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು , ಒಂದು ಪ್ಲಾಸ್ಟಿಕ್ ಪೇಪರ್ ವಶಪಡಿಸಿಕೊಂಡು, ಠಾಣೆಗೆ ಮದ್ಯಾಹ್ನ 3-00 ಗಂಟೆಗೆ ವಾಪಸ್ಸು ಬಂದಿದ್ದು, ಆರೋಪಿಗಳು, ಪಂಚನಾಮೆ ಮತ್ತು ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ ಕಲಂ: 87 ಕೆ.ಪಿ.ಆಕ್ಟ್ – 1963 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದೆ.

 

7. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.80/2021 ಕಲಂ. 279 ಐ.ಪಿ.ಸಿ:-

          ದಿ:25.04.2021 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿದಾರರಾದ ಸುಬ್ರಮಣಿ ಬಿನ್ ರಮೇಶ್, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂಧರೆ ದಿ:23.04.2021 ರಂದು  ಬೆಳಿಗ್ಗೆ ಸುಮಾರು 11-00 ಗಂಟೆ ಸಮಯಲ್ಲಿ ನಾನು ಕೆ.ಎ.40.ಇಇ.3549 ದ್ವಿಚಕ್ರ ವಾಹನದಲ್ಲಿ ತೀಲಕುಂಟಹಳ್ಳಿ ಗ್ರಾಮದ ಬಳಿ ಇರುವ ಬೆಸ್ಟೊ ಕ್ರಷರ್ ಹತ್ತಿರ ಸ್ಯಾಂಡ್ ಬ್ಯಾಂಕ್ ಕ್ರಷರ್ ಕಡೆಗೆ ಹೋಗುತ್ತಿದ್ದಾಗ, ಬೆಸ್ಟೋ ಕ್ರಷರ್ ಬಳಿ ಕೆ.ಎ.01.ಎ.ಹೆಚ್.4713 ನೊಂದಣಿ ಸಂಖ್ಯೆಯ ಟಿಪ್ಪರ್ ಲಾರಿಯ ಚಾಲಕ ಯಾವುದೇ ಸೂಚನೆಗಳನ್ನು ನೀಡದೆ, ಟಿಪ್ಪರ್ ಲಾರಿಯನ್ನು ಹಿಂದಕ್ಕೆ ಓಡಿಸಿಕೊಂಡು ಬಂದು ನಾನು ಸವಾರಿ ಮಾಡಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು, ತಕ್ಷಣ ನಾನು ಪಕ್ಕಕ್ಕೆ ಜಿಗಿದ ಕಾರಣ ನನಗೆ ಯಾವುದೇ ಆಪಾಯವಾಗಿರುವುದಿಲ್ಲ.   ಟಿಪ್ಪರ್ ಲಾರಿಯು ನನ್ನ ದ್ವಿಚಕ್ರ ವಾಹನದ ಮೇಲೆ ಹರಿದ ಪರಿಣಾಮ ದ್ವಿಚಕ್ರ ವಾಹನ ಜಖಂಗೊಂಡಿರುತ್ತೆ. ಈ ಅಪಘಾತವನ್ನುಂಟು ಮಾಡಿರುವ ಕೆ.ಎ.01.ಎ.ಹೆಚ್.4713 ನೊಂದಣಿ ಸಂಖ್ಯೆಯ ಟಿಪ್ಪರ್ ಲಾರಿಯ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಈ ಮೂಲಕ ಕೋರಿದೆ ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.120/2021 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ 24/04/2021 ರಂದು ಮದ್ಯಾಹ್ನ 3-00 ಗಂಟೆಗೆ ಪಿ.ಎಸ್.ಐ ಶ್ರೀ ಲಿಯಾಕತ್ ಉಲ್ಲಾ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ರವರು ಮಾಲು & ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 24/04/2021 ರಂದು ತಾವು ಠಾಣೆಯ ಸಿಬ್ಬಂಧಿಯಾದ ಪಿಸಿ-14 ಗೋವಿಂದಪ್ಪ ಹಾಗು ಪಿಸಿ-543 ಸುಧಾಕರ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-357 ರಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಹೆಚ್ ಕ್ರಾಸ್ ಗ್ರಾಮದ ವೃತ್ತದಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಹೆಚ್ ಕ್ರಾಸ್ ಗ್ರಾಮದಿಂದ ಚಿಂತಾಮಣಿ ರಸ್ತೆಯ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ವಿ.ಎಸ್.ಆರ್ ಗಾರ್ಡನ್ ಬಾರ್ & ರೆಸ್ಟೊಂರೆಂಟ್ ನಲ್ಲಿ ಕೆಲಸ ಮಾಡುವ ಅಸಿಸ್ಟೆಂಟ್ ಕ್ಯಾಷಿಯರ್ ರವರು ಬಾರ್ ಆವರಣದಲ್ಲಿರುವ ಒಂದು ರೂಂಮಿನ ಮುಂಭಾಗದಲ್ಲಿ ಅಕ್ರಮವಾಗಿ ಮದ್ಯವನ್ನು ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಸ್ಥಳಕ್ಕೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ವಿಷಯವನ್ನು ತಿಳಿಸಿ, ಪಂಚಾಯ್ತಿದಾರರು ಮತ್ತು ಸಿಬ್ಬಂಧಿಯೊಂದಿಗೆ ಮೇಲ್ಕಂಡ ಬಾರ್ ನ ಸಮೀಪ ಹೋಗಿ ಜೀಪ್ ಅನ್ನು ನಿಲ್ಲಿಸಿ, ಬಾರ್ ನ ಕಾಂಪೌಂಡ್ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಬಾರ್ ನ ಪಕ್ಕದಲ್ಲಿರುವ ಒಂದು ರೂಂ ನ ಮುಂಭಾಗದಲ್ಲಿ ಒಬ್ಬ ಆಸಾಮಿಯು ಒಂದು ಬಟ್ಟೆಯ ಬ್ಯಾಗಿನಲ್ಲಿ ಮದ್ಯವನ್ನು ದಾಸ್ತಾನು ಮಾಡಿಕೊಂಡು ಇಟ್ಟುಕೊಂಡು ಅದರಲ್ಲಿನ ಮದ್ಯವನ್ನು ತೆಗೆದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಖಚಿತವಾದ ಮೇಲೆ ಪಂಚಾಯ್ತಿದಾರರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಅಲ್ಲಿದ್ದ ಸಾರ್ವಜನಿಕರು ಹಾಗು ಮದ್ಯವನ್ನು ಮಾರಾಟ ಮಾಡುತ್ತಿದ್ದ ಆಸಾಮಿಯು ಓಡಿ ಹೋಗಿದ್ದು, ನಂತರ ಸ್ಥಳದಲ್ಲಿದ್ದ ಬ್ಯಾಗ್ ಅನ್ನು ಪರಿಶೀಲಿಸಲಾಗಿ  ಅದರಲ್ಲಿ ವಿವಿಧ ಬಗೆಯ ಬೀರ್ ಬಾಟೆಲ್ ಗಳು ಮತ್ತು ಮದ್ಯದ ಟೆಟ್ರಾ ಪಾಕೇಟ್ ಗಳಿದ್ದು, ಬೀರ್ ಬಾಟೆಲ್ ಗಳನ್ನು ಪರಿಶೀಲಿಸಲಾಗಿ 1) 650 ಎಂ.ಎಲ್ ಸಾಮಥ್ರ್ಯದ 5 ಪೋಸ್ಟರ್ ಲಾಗರ್ ಬೀರ್ ಗಳಿದ್ದು ಪ್ರತಿ ಬೀರ್ ಬಾಟೆಲ್ ನ ಮೇಲೆ 115 ರೂ ಎಂದು ನಮೂದಾಗಿದ್ದು, ಇವುಗಳ ಒಟ್ಟು ಬೆಲೆ 575 ಆಗಿದ್ದು, 2) 650 ಎಂ.ಎಲ್ ಸಾಮಥ್ರ್ಯದ 3 ಕಿಂಗ್ ಪಿಶರ್ ಬೀರ್ ಗಳಿದ್ದು ಪ್ರತಿ ಬೀರ್ ಬಾಟೆಲ್ ನ ಮೇಲೆ 150 ರೂ ಎಂದು ನಮೂದಾಗಿದ್ದು, ಇವುಗಳ ಒಟ್ಟು ಬೆಲೆ 450-00 ರೂ ಆಗಿರುತ್ತದೆ. 3) 650 ಎಂ.ಎಲ್ ಸಾಮಥ್ರ್ಯದ 6 ಟೂಬರ್ಗ್ ಪ್ರೀಮಿಯಂ ಸ್ಟ್ರಾಂಗ್ ಬೀರ್ ಗಳಿದ್ದು ಪ್ರತಿ ಬೀರ್ ಬಾಟೆಲ್ ನ ಮೇಲೆ 150 ರೂ ಎಂದು ನಮೂದಾಗಿದ್ದು, ಇವುಗಳ ಒಟ್ಟು ಬೆಲೆ 900 ರೂ ಆಗಿದ್ದು, 4) 330 ಎಂ.ಎಲ್ ಸಾಮಥ್ರ್ಯದ 4 ಪೋಸ್ಟರ್ ಗೋಲ್ಡ್ ಸ್ಟ್ರಾಂಗ್ ಬೀರ್ ಗಳಿದ್ದು ಪ್ರತಿ ಬೀರ್ ಬಾಟೆಲ್ ನ ಮೇಲೆ 60 ರೂ ಎಂದು ನಮೂದಾಗಿದ್ದು, ಇವುಗಳ ಒಟ್ಟು ಬೆಲೆ 240 ಆಗಿದ್ದು, ಟೆಟ್ರಾ ಪಾಕೇಟ್ ಗಳನ್ನು ಪರಿಶೀಲಿಸಲಾಗಿ 5) 180 ಎಂ.ಎಲ್ ಸಾಮಥ್ರ್ಯದ 14 ಓಲ್ಡ್ ಟಾವರ್ನ್ ವಿಸ್ಕಿಯ ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಮೇಲೆ 86.75 ರೂ ಎಂದು ನಮೂದಾಗಿದ್ದು, ಇವುಗಳ ಒಟ್ಟು ಬೆಲೆ 1214.50 ಆಗಿದ್ದು, 6) 180 ಎಂ.ಎಲ್ ಸಾಮಥ್ರ್ಯದ 12 ಬ್ಯಾಗ್ ಪೈಪರ್ ವಿಸ್ಕಿಯ ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಮೇಲೆ 86.75 ರೂ ಎಂದು ನಮೂದಾಗಿದ್ದು, ಇವುಗಳ ಒಟ್ಟು ಬೆಲೆ 1214.50 ಆಗಿದ್ದು, 7) 180 ಎಂ.ಎಲ್ ಸಾಮಥ್ರ್ಯದ 8 ಪಿಎಂನ ವಿಸ್ಕಿಯ 6 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಮೇಲೆ 86.75 ರೂ ಎಂದು ನಮೂದಾಗಿದ್ದು, ಇವುಗಳ ಒಟ್ಟು ಬೆಲೆ 520.50 ಆಗಿದ್ದು, 8) 90 ಎಂ.ಎಲ್ ಸಾಮಥ್ರ್ಯದ ಹೆಯ್ ವಡ್ಸ್ ಚೀಯರ್ಸ್ ವಿಸ್ಕಿಯ 8 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಮೇಲೆ 35.13 ರೂ ಎಂದು ನಮೂದಾಗಿದ್ದು, ಇವುಗಳ ಒಟ್ಟು ಬೆಲೆ 281.04 ಆಗಿದ್ದು, ಮೇಲ್ಕಂಡ ಎಲ್ಲಾ ಮದ್ಯವು 5455.80 ಬೆಲೆ ಬಾಳುವುದ್ದಾಗಿದ್ದು, ಬೀರ್ ಬಾಟೆಲ್ ಗಳು 10 ಲೀಟರ್ 420 ಎಂ.ಎಲ್ ನಷ್ಟಿದ್ದು, ಟೆಟ್ರಾ ಪಾಕೇಟ್ ಗಳು 6 ಲೀಟರ್ 480 ಎಂ.ಎಲ್ ನಷ್ಟಿದ್ದು, ಮೇಲ್ಕಂಡ ಮದ್ಯದ ಪೈಕಿ ಬೀರ್ ಬಾಟೆಲ್ ಗಳ ಪೈಕಿ ಒಂದೊಂದನ್ನು ಹಾಗು 180 ಸಾಮಥ್ರ್ಯದ ಟೆಟ್ರಾ ಪಾಕೇಟ್ ಗಳ ಪೈಕಿ ತಲಾ 5 ಪಾಕೇಟ್ ಗಳನ್ನು ಹಾಗು 90 ಎಂ.ಎಲ್ ನ ಪಾಕೇಟ್ ಗಳ ಪೈಕಿ 2 ನ್ನು ಅಲಾಯಿದೆಯಾಗಿ ತಜ್ಞರ ಪರೀಕ್ಷೆಗೆ ಕಳುಹಿಸಿ ಕೊಡುವ ಸಲುವಾಗಿ ಒಂದೊಂದು ಬಿಳಿಯ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಕಟ್ಟಿ ಅರಗು ಮಾಡಿ ಎಫ್ ಎಂಬ ಅಕ್ಷರದಿಂದ ಸೀಲು ಮಾಡಿ ಮೇಲ್ಕಂಡ ಎಲ್ಲಾ ಮಾಲುಗಳನ್ನು ಪಂಚನಾಮೆ ಮೂಲಕ ಮದ್ಯಾಹ್ನ 1-15 ಗಂಟೆಯಿಂದ 2-15 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿದ್ದು, ನಂತರ ಸ್ಥಳಕ್ಕೆ ಬಂದ ಸಾರ್ವಜನಿಕರನ್ನು ಓಡಿ ಹೋದ ಬಾರ್ ಕ್ಯಾಷಿಯರ್ ನ ಹೆಸರು ವಿಳಾಸ ಕೇಳಲಾಗಿ ಸುನೀಲ್ ಎನ್.ಹೆಚ್ ಬಿನ್ ಹೂವಪ್ಪ, 24 ವರ್ಷ, ಈಡಿಗರು, ಅಸಿಸ್ಟೆಂಟ್ ಬಾರ್ ಕ್ಯಾಷಿಯರ್, ಹಾಲಿ ವಾಸ-ಹೆಚ್ ಕ್ರಾಸ್, ಸ್ವಂತ ಗ್ರಾಮ ನಡವಳ್ಳಿ ಗ್ರಾಮ, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಎಂದು ತಿಳಿಸಿರುತ್ತಾರೆ. ಸದರಿ ಆಸಾಮಿಯು ತನ್ನ ಬಾರ್ ನ ಮಾಲೀಕರಿಗೆ ವಿಷಯ ತಿಳಿಸಿಯೋ ಅಥವಾ ಇಲ್ಲದೆಯೋ ಮದ್ಯವನ್ನು ಮಾರಾಟ ಮಾಡಿರುವುದನ್ನು ತನಿಖೆಯಿಂದ ತಿಳಿಯಬೇಕಾಗಿದ್ದು, ಮೇಲ್ಕಂಡ ಮದ್ಯವನ್ನು ಹಾಗು ಪಂಚನಾಮೆಯನ್ನು ತಮ್ಮ ವಶಕ್ಕೆ ಪಡೆದುಕೊಂಡು ಅಕ್ರಮವಾಗಿ ಮದ್ಯವನ್ನು ದಾಸ್ತಾನು ಕ್ಯಾಷಿಯರ್ ರವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರು.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.121/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 24-04-2021 ರಂದು ಸಂಜೆ 6.45 ಗಂಟೆಯಲ್ಲಿ ಸಿಪಿಸಿ-137 ಕಿರಣ್ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 24-04-2021 ರಂದು ಠಾಣಾಧಿಕಾರಿಗಳು ತನಗೆ ಹೆಚ್.ಕ್ರಾಸ್ ಸುತ್ತ-ಮುತ್ತಲ ಗ್ರಾಮಗಳ ಗ್ರಾಮ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಹಾರಡಿ, ಕೆ.ಹೊಸೂರು, ಕುಂಬಿಗಾನಹಳ್ಳಿ, ಅಂಬಿಗಾನಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 6.15 ಗಂಟೆ ಸಮಯದಲ್ಲಿ ಹೆಚ್.ಕ್ರಾಸ್ ಗೆ ಹೋಗುವ ಸಲುವಾಗಿ ಹೆಚ್.ಕ್ರಾಸ್ ನ ಎಸ್.ಬಿ.ಐ. ಬ್ಯಾಂಕ್ ಬಳಿ ಬಂದಾಗ ಹೆಚ್.ಕ್ರಾಸ್ ನ ಮುನಿಶಾಮಪ್ಪ ಬಿನ್ ಮುನಿನಾರಾಯಣಪ್ಪ ರವರ ಕಬಾಬ್ ಅಂಗಡಿಯ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಹೆಚ್.ಕ್ರಾಸ್ ನ ಮುನಿಶಾಮಪ್ಪ ಬಿನ್ ಮುನಿನಾರಾಯಣಪ್ಪ ರವರ ಕಬಾಬ್ ಅಂಗಡಿಯ ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳವಾದ ಪುಟ್ ಪಾತ್ ಮೇಲೆ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ನಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ಆತನನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಆದಿನಾರಾಯಣ ಬಿನ್ ಕೃಷ್ಣಪ್ಪ, 26 ವರ್ಷ, ಗೊಲ್ಲರು, ಕೂಲಿ ಕೆಲಸ, ಹೆಚ್.ಕ್ರಾಸ್ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್. ನ 17 Haywards Deluxe Whisky ಟೆಟ್ರಾ ಪ್ಯಾಕೆಟ್ ಗಳಿದ್ದು, ಸ್ಥಳದಲ್ಲಿ ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು, ಮೂರು ಖಾಲಿ Haywards Deluxe Whisky ಟೆಟ್ರಾ ಪ್ಯಾಕೇಟ್ ಗಳು ಮತ್ತು ಸ್ಥಳದಲ್ಲಿ ಬಿದ್ದಿದ್ದ ಖಾಲಿ ವಾಟರ್ ಪಾಕೇಟ್ ಗಳನ್ನು ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮದ್ಯದ ಟೆಟ್ರಾ ಪ್ಯಾಕೇಟ್ ಗಳಿದ್ದ ಚೀಲವನ್ನು ಹಾಜರುಪಡಿಸಿ ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಆದಿನಾರಾಯಣ ಬಿನ್ ಕೃಷ್ಣಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ. 121/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 26-04-2021 12:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080