ಅಭಿಪ್ರಾಯ / ಸಲಹೆಗಳು

 

1. ಚೇಳೂರು ಪೊಲೀಸ್ ಠಾಣೆ ಮೊ.ಸಂ.17/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:25/03/2021 ರಂದು ಮದ್ಯಾಹ್ನ 12:00 ಗಂಟೆಗೆ ಚೇಳೂರು ಪೊಲೀಸ್ ಠಾಣಾ ಪಿಎಸ್ ಐ ಪ್ರತಾಪ್ ಕೆಆರ್ ರವರು ಮಾಲು, ಪಂಚನಾಮೆ ಹಾಗೂ ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಈ ದಿನ ಬೆಳಗ್ಗೆ 10-30 ಗಂಟೆಯಲ್ಲಿ ಚೇಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರತಾಪ್ ಕೆ.ಆರ್ ಆದ ನಾನು ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ 42 ಜಿ 61 ನ ಜೀಪ್ ನಲ್ಲಿ ಜೀಪ್ ಚಾಲಕನಾಗಿ ಸಿಪಿಸಿ 437 ಸತೀಶ್ ಹಾಗೂ  ಠಾಣೆಯ ಸಿಬ್ಬಂದಿಯವರಾದ ಸಿ.ಪಿ.ಸಿ 468 ಅಂಜಿನಪ್ಪ  ರವರೊಂದಿಗೆ ಠಾಣಾ ಸರಹದ್ದು ವೆಂಕಟರೆಡ್ಡಿಪಲ್ಲಿ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ ಗ್ರಾಮದ ಅಮರೇನಾಯಕ ಬಿನ್ ಲೇಟ್ ರಾಮೇನಾಯಕ ,  51 ವರ್ಷ, ಲಂಬಾಣಿ ಜನಾಂಗ,  ಕಲ್ಲುಹೊಡೆಯುವ ಕೆಲಸ, ವೆಂಕಟರೆಡ್ಡಿಪಲ್ಲಿ ತಾಂಡ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ತನ್ನ ಮನೆಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶವನ್ನು ನೀಡಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು  ಅಮರೇನಾಯಕ ರವರ ಮನೆಯ ಬಳಿ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಮಧ್ಯಪಾನವನ್ನು ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಅಲ್ಲಿಂದ ಓಡಿ ಹೋಗಿರುತ್ತಾರೆ.  ಸದರಿ ಸ್ಥಳದಲ್ಲಿ ಮಧ್ಯದ ಪ್ಯಾಕೇಟ್ ಗಳಿದ್ದು ಅಲ್ಲಿಯೇ ಇದ್ದ ಅಮರೇನಾಯಕ ರವರನ್ನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು  ಮತ್ತು ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ  ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಯಾವುದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಸದರಿಯವರು  ನನ್ನ ಬಳಿ ಯಾವುದೇ ಪರವಾನಿಗೆ ಇಲ್ಲಾ ಎಂದು ಹೇಳಿದ್ದು ಸದರಿ  ಆಸಾಮಿಯ ಹೆಸರು & ವಿಳಾಸ ಕೇಳಲಾಗಿ ತನ್ನ ಹೆಸರು  ಅಮರೇನಾಯಕ ಬಿನ್ ಲೇಟ್ ರಾಮೇನಾಯಕ ,  51 ವರ್ಷ, ಲಂಬಾಣಿ ಜನಾಂಗ,  ಕಲ್ಲುಹೊಡೆಯುವ ಕೆಲಸ, ವೆಂಕಟರೆಡ್ಡಿಪಲ್ಲಿ ತಾಂಡ ಗ್ರಾಮ   ಫೋ ನಂ:8277401296  ಎಂದು ತಿಳಿಸಿದ್ದು  ಸದರಿ  ಸ್ಥಳದಲ್ಲಿದ್ದ  ಮಧ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ 90 ಎಂ.ಎಲ್ ನ HAYWARRDS CHEERS WHISKY ಕಂಪನಿಯ 20 ಟೆಟ್ರಾ ಪ್ಯಾಕೇಟ್ ಗಳಿದ್ದು ಒಟ್ಟು 1800 ಎಮ್ ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಬೆಲೆ 35.13  ಎಂದು ನಮೂದಿಸಿದ್ದು ಇವುಗಳು ಒಟ್ಟು 702.6 ರೂಗಳಾಗಿರುತ್ತೆ. ಸದರಿ ಸ್ಥಳದಲ್ಲಿದ್ದ 90 ಎಂ.ಎಲ್ ನ HAYWARRDS CHEERS WHISKY ಕಂಪನಿಯ 20 ಮಧ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು  ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ದಾಳಿ ಅಮಾನತು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಠಾಣೆಗೆ ಹಾಜರಾಗಿ ವರದಿಯನ್ನು  ಪಡೆದು ಠಾಣಾ ಮೊಸಂ:17/2021 ಕಲಂ 15(ಎ), 32(3) ಕೆ ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.

 

2. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.20/2021 ಕಲಂ. 419,420 ಐ.ಪಿ.ಸಿ & 66(D) ಐ.ಟಿ ಆಕ್ಟ್:-

     ದಿನಾಂಕ:25/3/2021 ರಂದು ಪಿರ್ಯಾಧಿ ಶ್ರೀ ಶಿವಣ್ಣ ಕೆ ಎನ್ ಬಿನ್ ನಾರಾಯಣಸ್ವಾಮಿ,35 ವರ್ಷ, ನಾಯಕರು, ಜಿರಾಯ್ತಿ ಕೆಲಸ, ವಾಸ ಸೋಮಯಾಜಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, ಮೊ ಸಂಖ್ಯೆ:7259175241 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡಂತೆ ವಾಸವಿದ್ದು, ಜಿರಾಯ್ತಿ ಕೆಲಸವನ್ನು ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಾನು ದಿನಾಂಕ:9/3/2021 ರಂದು ಮನೆಯಲ್ಲಿ ಇದ್ದಾಗ ನನ್ನ ಮೊಬೈಲ್ ಗೆ ಒಂದು ಸಂದೇಶ ಬಂದಿದ್ದು, ಓಪನ್ ಮಾಡಿ ನೋಡಲಾಗಿ ಅದರಲ್ಲಿ ( LOAN YOJANA 1 LAKH TO 25 LAKH MINIMUM INTEREST 35 % SUBSIDY FOR MORE DETAILS  CALL-8217456939  ) ಈ ಸಂದೇಶ ಬಂದಿತ್ತು.  ನನಗೆ  ಜಿರಾಯ್ತಿ ಕೆಲಸವನ್ನು ಮಾಡಲು ಹಣದ ಆವಶ್ಯಕತೆ ಇದ್ದುದರಿಂದ  ಸಾಲವನ್ನು ಪಡೆಯೋಣವೆಂತ  ಅದರಲ್ಲಿ  ಇದ್ದ ಪೋನ್ ನಂಬರ್ 8217456939 ಕರೆ ಮಾಡಿ ವಿಚಾರಿಸಲಾಗಿ, ಅವರು ಲೋನ್ ಕೊಡುತ್ತೇವೆ. ನಿಮ್ಮ ದಾಖಲೆಗಳಾದ ಆಧಾರ್ ಕಾರ್ಡ, ಫಾನ್ ಕಾರ್ಡ, ಬ್ಯಾಂಕ್  ಫಾಸ್ ಬುಕ್ ಗಳನ್ನು ಪೋಟೋ ಮಾಡಿ  ವ್ಯಾಟ್ಸಾಪ್ ನಂಬರ್ 6360456791 ಗೆ ಕಳುಹಿಸಿದರೆ ನಿಮ್ಮ ಲೋನ್ ಅಪ್ರೂವಲ್ ಆಗುತ್ತದೆ ಅಂತ ಕನ್ನಡ ಬಾಷೆಯಲ್ಲಿ ತಿಳಿಸಿದರು. ಅದರಂತೆ ನಾನು ಸದರಿ ದಾಖಲೆಗಳನ್ನು ಪೋಟೋ ತೆಗೆದು ಅವರು ಕಳುಹಿಸಿದ್ದ ಮೇಲ್ಕಂಡ ವ್ಯಾಟ್ಶಾಪ್ ನಂಬರ್ ಗೆ ಕಳುಹಿಸಿದೆ. ನಂತರ ಮೇಲ್ಕಂಡ ಮೊ ಸಂಕ್ಯೆ: 8217456939 ರಿಂದ ನನಗೆ ಕರೆ ಮಾಡಿ ನಿಮ್ಮ ಲೋನ್ ಅಪ್ರೂವಲ್ ಆಗಿದೆ ಅಂತ ಹೇಳಿ ಅಪ್ರೂವಲ್ ಲೆಟರ್ ನ್ನು ವ್ಯಾಟ್ಸಾಪ್ ಗೆ ಕಳುಹಿಸಿದ. ನಾನು ಅದನ್ನು ನೋಡಿ ನಂಬಿದೆ.  ನಿಮ್ಮ ಲೊನ್ ಅಗ್ರಿಮೆಂಟ್ ಚಾರ್ಜ 5,100/- ರೂಗಳನ್ನು  ಕರ್ನಾಟಕ ಬ್ಯಾಂಕ್ ಅಕೌಂಟ್ ನಂ:3132500102342101 & ಐ ಎಪ್ ಎಸ್ ಸಿ ಕೋಡ್ :KARB0000313.  ಕ್ಕೆ ಕಳುಹಿಸಲು ತಿಳಿಸಿದ. ಅದರಂತೆ ನಾನು ನನ್ನ ಸ್ನೇಹಿತನಾದ ಸಂತೋಷ್ ರವರಿಗೆ ನಗದನ್ನು ಕೊಟ್ಟು, ಅವರ  ಎಸ್ ಬಿ ಐ ಬ್ಯಾಂಕ್   ಅಕೌಂಟ್ ನಂ:64129038320 ರಿಂದ  5,100/- ರೂಗಳನ್ನು ಅವನು ಬೀಮ್ ಆಪ್ ನಲ್ಲಿ ಕಳುಹಿಸಿದರು. ನಂತರ   ಲೋನ್ ಕಂಪನಿಯವರು ಪುನಃ ಕರೆ ಕರೆ ಮಾಡಿ ಒಂದು ಇಎಂಐ ಕಂತು ಮೊತ್ತದ 9,100/- ರೂಗಳನ್ನು ಕಳುಹಿಸಲು ತಿಳಿಸಿದ್ದು, ಅದರಂತೆ ನಾನು ನನ್ನ ಸ್ನೇಹಿತನಿಗೆ ನಗದು  9,100/- ರೂಗಳನ್ನು ಕೊಟ್ಟು ಅವನ ಖಾತೆಯಿಂದ  ನನ್ನ ಸ್ನೇಹಿತ ಕಳುಹಿಸಿದರು. ಪುನಃ ಕರೆ ಮಾಡಿ  ಸದರಿ ಲೋನ್ ಗೆ ಜಿ ಎಸ್ ಟಿ  ಕಟ್ಟಬೇಕು ಅದಕ್ಕೆ 10,500/- ರೂಗಳನ್ನು ಕಳುಹಿಸಲು ತಿಳಿಸಿದ.ನಂತರ ನಾನು ನನ್ನ ಸ್ನೇಹಿತನಿಗೆ ಕ್ಯಾಷ್ 10500/- ರೂಗಳನ್ನು ಕೊಟ್ಟು  ಅವರ ಕರ್ನಾಟಕ ಬ್ಯಾಂಕ್ ಅಕೌಂಟ್ ನಂಭರ್ :1422500103608501     ರಿಂದ 10,500/- ರೂಗಳ  ಹಣವನ್ನು ಮೇಲ್ಕಂಡ  ಅವನ ಖಾತೆಗೆ ಕಳುಹಿಸಿದ. ಅದೇ ರೀತಿ ಮೇಲ್ಕಂಡ ಪೋನ್  ನಂಬರ್ ಬಳಕೆದಾರನು  ವಿವಿಧ ಚಾರ್ಜುಗಳು ಅಂತ  ಒಟ್ಟು 67,200/- ರೂಗಳನ್ನು ನನ್ನಿಂದ ಪಡೆದು, ನನಗೆ ಲೋನ್ ಕೊಡದೆ ಮತ್ತು ನನ್ನ ಹಣವನ್ನು ನನಗೆ  ವಾಪಸ್ಸು ನೀಡದೆ ವಂಚಿಸಿರುವ ವ್ಯಕ್ತಿಯನ್ನು ಪತ್ತೆ ಮಾಡಿ ನನ್ನ ಹಣವನ್ನು ನನಗೆ ವಾಪಸ್ಸು ಕೊಡಿಸಿ, ಸದರಿ ವಂಚಿಸಿರುವ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಜರಗಿಸಲು ತಮ್ಮಲ್ಲಿ ಕೋರಿ ದೂರು.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.43/2021 ಕಲಂ. 279 ಐ.ಪಿ.ಸಿ :-

     ದಿನಾಂಕ: 24/03/2021 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಸೋಮಶೇಖರ್ ಬಿನ್ ಲೇಟ್ ರಾಮಚಂದ್ರಪ್ಪ, ಕೊಂಡರಾಜನಹಳ್ಳಿ ಗ್ರಾಮ, ಕೋಲಾರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈಗ್ಗೆ ಒಂದು ತಿಂಗಳ ಹಿಂದೆ ಕೋಲಾರ ನಗರದಲ್ಲಿ ಬಾಡಿಗೆಗಾಗಿ KA-07, A-5647 ಐಚರ್ ವಾಹನವನ್ನು ಕೊಂಡುಕೊಂಡಿದ್ದು, ನನ್ನ ಹೆಸರಿಗೆ ದಾಖಲಾತಿಗಳನ್ನು ಮಾಡಿಸಿ ಕೊಂಡಿರುತ್ತೇನೆ. ನನ್ನ ಬಾಬತ್ತು ಐಚರ್ ವಾಹನಕ್ಕೆ ಸಾಗರ್ ಡಿ.ಎನ್ ಬಿನ್ ನಾರಾಯಣಸ್ವಾಮಿ, 24 ವರ್ಷ, ಚಾಲಕ ವೃತ್ತಿ, ದಿಬ್ಬೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕುರವರನ್ನು ಚಾಲಕರನ್ನಾಗಿ ನೇಮಕ ಮಾಡಿಕೊಂಡಿರುತ್ತೇನೆ. ದಿನಾಂಕ: 20/03/2021 ರಂದು ನಮ್ಮ ಐಚರ್ ವಾಹನದ ಚಾಲಕ ಸಾಗರ್ ರವರು ಪೋಶೆಟ್ಟಿಹಳ್ಳಿ ಬಳಿ ಆಲೂಗೆಡ್ಡೆ ಲೋಡ್ ಇರುವುದಾಗಿ ಹೇಳಿ ನನಗೆ ಪೋನ್ ಮಾಡಿ ಐಚರ್ ವಾಹನವನ್ನು ತೆಗೆದುಕೊಂಡು ಹೋಗಿದ್ದರು. ಅದೇ ದಿನ ಸಂಜೆ ಸುಮಾರು 6-45 ಗಂಟೆ ಸಮಯದಲ್ಲಿ ನನ್ನ ಅಳಿಯ ಚಿಕ್ಕಬಳ್ಳಾಪುರ ಟೌನ್ ವಾಸಿ ದಿನೇಶ್ ಬಿನ್ ಶ್ರೀನಿವಾಸಮೂರ್ತಿ ರವರು ನನಗೆ ಪೋನ್ ಮಾಡಿ ಚಾಲಕ ಸಾಗರ್ ರವರು ನಮ್ಮ ಐಚರ್ ವಾಹನಕ್ಕೆ ಪೋಶೆಟ್ಟಿಹಳ್ಳೀ ಬಳಿ ಆಲೂಗೆಡ್ಡೆಯನ್ನು ಲೋಡ್ ಮಾಡಿಕೊಂಡು ಚಿಕ್ಕಬಳ್ಳಾಪುರದಲ್ಲಿರುವ ಕೋಲ್ಡ್ ಸ್ಟೋರೇಜ್ ಗೆ ಅನ್ ಲೋಡ್ ಮಾಡಲು ಗೌರಿಬಿದನೂರು-ಚಿಕ್ಕಬಳ್ಳಾಪುರ ರಸ್ತೆ ವೀರದಿಮ್ಮಮ್ಮನ ಕಣಿವೆಯಲ್ಲಿ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದಾಗ ಸಾಯಂಕಾಲ ಸುಮಾರು 5-00 ಗಂಟೆ ಸಮಯದಲ್ಲಿ ನಮ್ಮ ವಾಹನದ ಕ್ಲಚ್ ಪ್ಲೇಟ್ ಬ್ರೇಕ್ ಡೌನ್ ಆಗಿ ಕಣಿವೆ ರಸ್ತೆಯ ಬಲಬದಿಯಲ್ಲಿ ನಿಂತು ಹೋಗಿರುವುದಾಗಿ ನನಗೆ ಪೋನ್ ಮಾಡಿದ್ದು, ನಾನು ಸ್ಥಳಕ್ಕೆ ಬಂದಿದ್ದು, ಐಚರ್ ವಾಹನ ಸ್ಟಾರ್ಟ್ ಆಗದೇ ಇದ್ದುದರಿಂದ ಮೆಕಾನಿಕ್ ಗೆ ಪೋನ್ ಮಾಡಿ ವಾಹನದ ಬಳಿಯೇ ಇದ್ದಾಗ ಸಂಜೆ ಸುಮಾರು 6-30 ಗಂಟೆ ಸಮಯದಲ್ಲಿ ಗೌರಿಬಿದನೂರು ಕಡೆಯಿಂದ ಚಿಕ್ಕಬಳ್ಳಾಪುರಕ್ಕೆ ಕಣಿವೆಯಲ್ಲಿ ಹೋಗುತ್ತಿದ್ದ KA-40, A-0471 ಟಾಟಾ ಕ್ಯಾಂಟರ್ ವಾಹನ ಏರ್ ತೆಗೆದುಕೊಂಡಿದ್ದು, ಅದರ ಚಾಲಕ ಕ್ಯಾಂಟರ್ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬಲ ಬದಿಯಲ್ಲಿ ದುರಸ್ಥಿಯಾಗಿ ನಿಂತಿದ್ದ ನಮ್ಮ ಐಚರ್ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಐಚರ್ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ ಎಂದು ತಿಳಿಸಿದರು. ನಂತರ ನಾನು ಸ್ಥಳಕ್ಕೆ ಬಂದು ನಮ್ಮ ಐಚರ್ ವಾಹನದಲ್ಲಿದ್ದ ಲೋಡನ್ನು ಬೇರೆ ವಾಹನಕ್ಕೆ ಅನ್ ಲೋಡ್ ಮಾಡಿ ಕಳುಹಿಸಿಕೊಟ್ಟಿದ್ದು, ಅಪಘಾತದ ಸಂಬಂದ KA-40, A-0471 ಟಾಟಾ ಕ್ಯಾಂಟರ್ ವಾಹನದವರು ನಮ್ಮ ವಾಹನಕ್ಕೆ ಆಗಿರುವ ಜಖಂನ ರಿಪೇರಿ ಖರ್ಚನ್ನು ಭರಿಸಿ ಕೊಡುವುದಾಗಿ ತಿಳಿಸಿದ್ದು, ಇದುವರೆವಿಗೂ ಸದರಿ ವಾಹನದವರು ಯಾರೂ ಬಂದು ನಮ್ಮ ವಾಹನದ ರಿಪೇರಿ ಮಾಡಿಸಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿ ನಾನು ಠಾಣೆಗೆ ಬಂದು ನನ್ನ ಬಾಬತ್ತು KA-07, A-5647 ಐಚರ್ ವಾಹನಕ್ಕೆ ಅಪಘಾತ ಮಾಡಿ ಜಖಂಗೊಳಿಸಿರುವ KA-40, A-0471 ಟಾಟಾ ಕ್ಯಾಂಟರ್ ವಾಹನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನನ್ವಯ ಪ್ರ.ವ.ವರದಿ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.71/2021 ಕಲಂ. 379 ಐ.ಪಿ.ಸಿ :-

     ದಿನಾಂಕ 24/03/2021 ರಮದು ಪಿರ್ಯಾಧಿದಾರರಾದ ರಘುಪತಿ ಬಿನ್ ಚಿಕ್ಕರಂಗಪ್ಪ, 32 ವರ್ಷ, ಆದಿ ಕರ್ನಾಟಕ ಜನಾಂಗ , ಕೂಲಿ ಕೆಲಸ, ಕಲ್ಲಿನಾಯಕನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ದಿನಾಂಕ 21/02/2021 ರಂದು ನನ್ನ ಸ್ವಂತ ಮಾವನ ಮಗಳಾದ ಗೀತಾಂಜಲಿ ರವರ ಮದುವೆಯು ಗೌರಿಬಿದನೂರು ತಾಲ್ಲೂಕು ವಿಧುರಾಶ್ವತ್ಥದ ಹರೆ ತಿಮ್ಮಪ್ಪ ಹರೇ ನಾಗಪ್ಪ ರವರ ಕಲ್ಯಾಣ ಮಂಟಪದಲ್ಲಿದ್ದು ನಾನು ನನ್ನ ಸ್ವಂತ ಗ್ರಾಮ ಕಲ್ಲಿನಾಯಕನಹಳ್ಳಿ ಗ್ರಾಮದಿಂದ ನನ್ನ ಸ್ವಂತ ದಿಚಕ್ರ ವಾಹನ ಕೆಎ-40 ಡಬ್ಯೂ 8316 ನೊಂದಣಿ ಸಂಖ್ಯೆಯ ಫ್ಯಾಷನ್ ಪ್ರೋ ದ್ವಿಚಕ್ರ ವಾಹನದಲ್ಲಿ ನನ್ನ ಹೆಂಡತಿಯಾದ ಶ್ರೀಮತಿ ನಿರ್ಮಾಲಾರೊಂದಿಗೆ ಬೆಳಿಗ್ಗೆ ಬಂದು ಕಲ್ಯಾಣ ಮಂಟಪದ ಮುಂಭಾಗದಲ್ಲಿ ನಾನು ದ್ವಿಚಕ್ರ ವಾಹನವನ್ನು ನಿಲ್ಲಿಸಿ ಮದುವೆಗೆ ಹೋಗಿ ಮದುವೆ ಕೆಲಸವನ್ನು ಮಾಡಿಕೊಂಡಿರುತ್ತೇನೆ. ಅದೇ ದಿನ ಮಳೆ ಬರುತ್ತಿದ್ದು ನಾವುಗಳು ಕಲ್ಯಾಣ ಮಂಟಪಕ್ಕೆ ಹೋದೆವು ಮಧ್ಯಾಹ್ನ 2-30 ಗಂಟೆಗೆ ಬಂದು ನೋಡಿದಾಗ ನನ್ನ ಬಾಬ್ತು ದ್ವಿಚಕ್ರ ವಾಹನ ನಾನು   ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ ನಾವುಗಳು ಎಲ್ಲಾ ಕಡೆ ಹುಡುಕಾಡಿದರೂ ನನ್ನ ಬಾಬ್ತು ಪ್ಯಾಷನ್ ಪ್ರೋ ದ್ವಿಚಕ್ರ ವಾಹನ ಪತ್ತೆಯಾಗಲಿಲ್ಲ , ಯಾರೋ ಕಳ್ಳರು ನಲವತ್ತು ಸಾವಿರ ಬೆಲೆ ಬಾಳುವ ನನ್ನ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ನಾವುಗಳು ಇದುವರೆಗೂ ನನ್ನ ಬಾಬ್ತು ದ್ವಿಚಕ್ರ ವಾಹನವನ್ನು ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ,ಆದ್ದರಿಂದ  ದಿನ ದಿನಾಂಕ 24/03/2021 ರಂದು ತಡವಾಗ ಬಂದು ದೂರು ನೀಡುತ್ತಿದ್ದು ಕಳುವಾಗಿರುವ ನನ್ನ ಬಾಬ್ತು ದ್ವಿಚಕ್ರವಾಹನ ಸಂಖ್ಯೆ ಕೆಎ 40 ಡಬ್ಯೂ 8316 ಅನ್ನು ಪತ್ತೆ ಮಾಡಿಕೊಡಬೇಕೆಂದು ಕೋರುತ್ತೇನೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.72/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ 25/03/2021 ರಂದು ಮದ್ಯಾಹ್ನ 12-12 ಗಂಟೆಗೆ ಪಿರ್ಯಾಧಿದಾರರಾದ ಆನಂದ ಬಿನ್ ಸಿದ್ದಗಂಗಪ್ಪ, 33 ವರ್ಷ, ಗೊಲ್ಲಜನಾಂಗ, ವ್ಯವಸಾಯ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ ರವರು  ಠಾಣೆಗೆ -ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ದಿನಾಂಕ 24/03/2021 ರಮದು ಬೆಳಿಗ್ಗೆ 7-00 ಗಂಟೆಗೆ ಕೊರಟಗೆರೆಯಿಂದ ಲಾರಿ ಸಂಕ್ಯೆ KA -02-AB-4546  ಲಾರಿಯಲ್ಲಿ ಧನದಗೊಬ್ಬರ ತುಂಬಿದ ಲಾರಿಯಲ್ಲಿ ಹಿಂದೂಪುರಕ್ಕೆ ಹೋಗಿ ಅನ್ ಲೋಡ್ ಮಾಡಿಕೊಂಡು ಹಿಂದೂಪುರ ದಿಂದ ಗೌರಿಬಿದನೂರು ಮಾರ್ಗವಾಗಿ ಕೊರಟಗೆರೆಗೆ ಬರುವಾಗ ಮಧ್ಯಾಹ್ನ  ಸುಮಾರು  1-30 ಗಂಟೆಯಲ್ಲಿ ಲಾರಿಯ ಚಾಲಕ ರವಿ ಪ್ರಸಾದ್ ಲಾರಿಯನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ವಾಹನ ಚಾಲನೆ ಮಾಡಿದ್ದರಿಂದ ವಿದುರಾಶ್ವತ್ಥ ಕ್ರಾಸ್ ನ ತಿರುವಿನಲ್ಲಿರಸ್ತೆಯ ಎಡಭಾಗದಲ್ಲಿ ನಿಯಂತ್ರಣ ತಪ್ಪಿ ಲಾರಿಯ್ನು ಅಪಘಾತ ಮಾಡಿದ ಪರಿಣಾಮ ಲಾರಿಯಲ್ಲಿದ್ದ ನಾಗೇಶ್ ಬಿನ್ ಸಿದ್ದಗಂಗಪ್ಪ , 36 ವರ್ಷ, ಗೊಲ್ಲಜನಾಂಗ, ಕೂಲಿ ಕೆಲಸ ಕೊರಟಗೆರೆ ಇತನಿಗೆ ಎಡಭಾಗದ ಎಡಭಾಗದ ಎಡಕಾಲಿನ ಹೆಬ್ಬೆರಳು ತುಂಡಾಗಿದ್ದು ಎಡಗೈ ಮೂಳೆ ಮುರಿದಿರುತ್ತದೆ. ಮತ್ತೊಬ್ಬರಾದ ಸದಶಿವ ಬಿನ್ ಸಿದ್ದಗಂಗಪ್ಪ, 35 ವರ್ಷ, ಗೊಲ್ಲಜನಾಂಗ, ಕೂಲಿ ಕೆಲಸ ಕೊರಟಗೆರೆ ಇತನಿಗೆ ಎಡಭಾಗದ ಪಕ್ಕೆಲುಬು ಮುರಿದಿರುತ್ತದೆ. ಮತ್ತು ಸಣ್ಣಪುಟ್ಟ ಗಾಯಗಾಳಾಗಿರುತ್ತದೆ. ಹಾಗೂ ಕಾಂತರಾಜು ಬಿನ್ ನ್ಯಾತಪ್ಪ ರವರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ ಗಾಯಳುಗಳನ್ನು 108 ಅಂಬುಲೇನ್ಸ್ ಮುಖಾಂತರ ಗೌರಿಬಿದನೂರು ಸರ್ಕಾರಿ ಆಸ್ವತ್ರೆಗೆ ದಾಖಲು ಮಾಡಿರುತ್ತಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಿದ್ದು ನಾನು ಅವರರೊಂದಿಗೆ ಹೋಗಿ ಚಿಕಿತ್ಸೆ ಕೊಡಿಸಿ ಅಲ್ಲೇ ಇದ್ದು ಈ ದಿನ ದೂರು ನೀಡಿರುತ್ತೇನೆ. ಆದ್ದರಿಂದ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳು ಕೋರಿ ಮನವಿ.

 

6. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.42/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ 25/03/2021 ರಂದು ಮದ್ಯಾಹ್ನ 3:00 ಗಂಟೆಯಲ್ಲಿ ಪಿರ್ಯಾದಿ ನರಸಿಂಹಮೂರ್ತಿ A S ಬಿನ್ ಸಿದ್ದಪ್ಪ, 47 ವರ್ಷ, ಒಕ್ಕಲಿಗರು, ಆನೂಡಿ ಗ್ರಾಮ ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ 19/03/2021 ರಂದು ಬೆಳಿಗ್ಗೆ 6:50 ಗಂಟೆ ಸಮಯದಲ್ಲಿ ತಾನು ಗೌರಿಬಿದನೂರು ನಗರದ BGS ಶಾಲೆ ಬಳಿ ಇರುವಾಗ ತನ್ನ ಅಣ್ಣ ಗೋವಿಂದ ರೆಡ್ಡಿ ರವರ ಮಗನಾದ ಮೋಹನ್ ರೆಡ್ಡಿ ರವರು KA-40-V-7720 ದ್ವಿಚಕ್ರ ವಾಹನದಲ್ಲಿ ಮರಳೂರು ಗ್ರಾಮದಿಂದ ಗೌರಿಬಿದನೂರು ನಗರಕ್ಕೆ ಬರುತ್ತಿರುವಾಗ ಗೌರಿಬಿದನೂರು ನಗರದ BGS ಸ್ಕೂಲ್ ಮುಂಭಾಗದ ರಸ್ತೆಯಲ್ಲಿ ಕಾಲುದಾರಿಯಿಂದ ಮುಖ್ಯ ರಸ್ತೆಗೆ ನಂಬರ್ KA-40-ED-6117 ದ್ವಿಚಕ್ರ ವಾಹನ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದು ನನ್ನ ಅಣ್ಣನ ಮಗನಾದ ಮೋಹನ್ ರೆಡ್ಡಿ ರವರು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಹನ್ ರೆಡ್ಡಿ ರವರ ಬಲಕಾಲು ಮತ್ತು ಬಲಕೈ ಗೆ ಮೂಳೆ ಮುರಿತದ ರಕ್ತಗಾಯವಾಗಿರುತ್ತೆ. ಹಾಗೂ ಡಿಕ್ಕಿ ಹೊಡೆದ KA-40-ED-6117 ದ್ವಿಚಕ್ರ ವಾಹನ ಸವಾರನಿಗೂ ಸಹ ಮುಖದಲ್ಲಿ ಹಾಗೂ ಕೈಕಾಲುಗಳಿಗೆ ರಕ್ತಗಾಯವಾಗಿರುತ್ತೆ. ನಂತರ ಸ್ಥಳದಲ್ಲಿದ್ದ ಸಾರ್ವಜನಿಕರ ಸಹಾಯದಿಂದ ತಾನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುತ್ತೇವೆ. ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿರುತ್ತಾರೆ. ನಂತರ ತಾನು ಮೋಹನ್ ರೆಡ್ಡಿ ರವರನ್ನು ಬೆಂಗಳೂರಿನ ಸಂಜಯ್ ಗಾಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತೇನೆ. ಚಿಕಿತ್ಸೆಗೆ ದಾಖಲಿಸಿ ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ ಈ ದಿನ ದಿನಾಂಕ 25/03/2021 ರಂದು ಠಾಣೆಗೆ ಹಾಜರಾಗಿ ತಡವಾಗಿ ದೂರು ನೀಡಿರುತ್ತೇನೆ. ಆದ್ದರಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಹನ್ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ KA-40-ED-6117 ದ್ವಿಚಕ್ರ ವಾಹನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

 

7. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.44/2021 ಕಲಂ. 355,506 ಐ.ಪಿ.ಸಿ & 3(1)(f),3(1)(r),3(1)(s) The SC & ST (Prevention of Atrocities) Amendment Act 2015 :-

     ದಿನಾಂಕ:24/03/2021 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶಿವಕುಮಾರ್ ಬಿನ್ ವ್ಯಾಸರಾಯಪ್ಪ 40 ವರ್ಷ ಆದಿ ದ್ರಾವಿಡ ಜನಾಂಗ, ವಾಸ: ಬೊಮ್ಮಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:06/03/2021 ರಂದು ತಮ್ಮ ಗ್ರಾಮದ ಬ್ರಾಹ್ಮಣ ಜಾತಿಯವರಾದ ನಾಗೇಂದ್ರ ರವರು ನೀವು ಸ್ವಾದೀನದಲ್ಲಿರುವ ಸೈಟು ನಮ್ಮ ಸಂಬಂಧಿಕರದ್ದು ಎಂದು ಹೇಳಿದ್ದು ಅದರಂತೆ ತಾನು ಅವರನ್ನು ಕರೆಸಿ ಸೈಟು ನಮ್ಮದು ನಮ್ಮ ಸೈಟಿಗೆ ಸಂಬಂದಿಸಿದ ದಾಖಲೆ ಇದೆ ಎಂದು ಹೇಳಿದ್ದು ದಿನಾಂಕ:11/03/2021 ರಂದು ಬೆಳಿಗ್ಗೆ ಸುಮಾರು 11-45 ಗಂಟೆ ಸಮಯಕ್ಕೆ ಬೇರೆ ಗ್ರಾಮದ ನಿವಾಸಿ ಬ್ರಾಹ್ಮಣ ಜಾತಿಯವರಾದ ಸುಮನ್ ಮತ್ತು ಅವರ ಸಂಬಂಧಿ ಜೋತೆ ತಮ್ಮ ಗ್ರಾಮಕ್ಕೆ ಬಂದು ತಮ್ಮ ಮನೆ ಹತ್ತಿರಕ್ಕೆ ಬಂದು ವಿನಾಕಾರಣ ತನ್ನ ಮೇಲೆ ಗಲಾಟೆ ಮಾಡಿರುತ್ತಾರೆ. ಈ ಸೈಟು ನಮಗೆ ಸೇರಿದ್ದು ನೀವು ಖಾಲಿ ಮಾಡಿ ಅಂದಾಗ ನಾವು ಸುಮಾರು 40 ವರ್ಷಗಳಿಂದ ಅನುಭವದಲ್ಲಿದ್ದೇವೆ. ನಾವು ಯಾಕೆ ಖಾಲಿ ಮಾಡಬೇಕು ಎಂದು ಕೇಳಿದಕ್ಕೆ ನಿಮ್ಮ ಹೊಲೆ ಮಾದಿಗ ಜಾತಿ ನನ್ನ ಮಕ್ಕಳನ್ನು ಸೇರಿಸಬಾರದು ನಿಮಗೆ ಮೂಲ ನಾವೇ ಇಲ್ಲಿ ಇರೊದಕ್ಕೆ ಬಿಟ್ಟಿದ್ದು ನಿಮ್ಮ ಹೊಲೆ ಮಾದಿಗ ನನ್ನ ಮಕ್ಕಳನ್ನು ಮೊದಲೇ ಓಡಿಸಬೇಕಿತ್ತು ಎಂದು ಬೈದರು ನಾನು ಈ ರೀತಿಯಾಗಿ ಮಾತಾಡಬೇಡಿ ನಮಗೆ ದಾಖಲೆ ಇದೆ ನಮಗೆ ಯಾರು ಪುಕ್ಕಟ್ಟೆ  ಕೊಟ್ಟಿಲ್ಲ ಎಂದಾಗ ಸುಮನ್ ಮತ್ತು ಅವರ ಸ್ನೇಹಿತ ಹುಣಸೆ ಮರದ ಕೆಳಗೆ ನಮ್ಮ ಧನ ಕರುಗಳ ಹಗ್ಗ ಬಿಚ್ಚಿ ಓಡಿಸಲು ಹೋದರು ತಾನು ಅಡ್ಡ ಹೋಗಿದಕ್ಕೆ ಸುಮನ್ ಇವರ ಜೊತೆ ಬಂದಿದ್ದ ವ್ಯಕ್ತಿ ನನಗೆ ಈ ಸೈಟು ನಿನಗೆ ಬಿಡ್ತಿವಿ ಅದಕ್ಕೆ ನೀನು ಸಗಣಿ ತಿನ್ನು ಎಂದು ಬಲವಂತವಾಗಿ ಸಗಣಿ ತಿನ್ನಿಸಲು ಯತ್ನಿಸಿದರು, ಆಗ ತನ್ನ ಹೆಂಡತಿ ಚೈತ್ರ ಲಕ್ಷ್ಮೀ ರಾಜಕುಮಾರ ಪಿಳ್ಳಕ್ಕ ಇವರೆಲ್ಲಾ ಸ್ಥಳದಲ್ಲಿಯೇ ಇದ್ದು  ಸುಮನ್ ರವರಿಗೆ ಗಲಾಟೆ ಬಿಡಿಸಿ ಅಡ್ಡ ಬಂದು ನೀವು ಪಂಚಾಯ್ತಿಯಲ್ಲಿ ಸರ್ವೆ ಮಾಡಿಸಿ ಎಂದು ಬುದ್ದಿವಾದ ಹೇಳಿರುತ್ತಾರೆ. ಸುಮನ್ ಎಂಬುವವರು ನಾನು ಬೆಂಗಳೂರಿನ ಸಿಟಿ ಸಿವಿಲ್ ಕೊರ್ಟ ನಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ದೊಡ್ಡ ದೊಡ್ಡ ರೌಡಿಗಳ ಪರಿಚಯವಿದೆ. ನೀನು ಬೆಂಗಳೂರಿನಲ್ಲಿ ಹಾಕಿರುವ ಕೇಸು ನಂಬರ್ ಹಾಗೂ  ಹಾಗೂ ನಿಮ್ಮ ಸರ್ಕರಿ ಆಭಿಯೋಜಕರ ಪೊನ್ ನಂಬರ್ ಕೊಡು ಎಂದು ನಂಬರ್ ಪಡೆದು ಹೊರಟು ಹೋದರು ದಿನಾಂಕ:12/03/2021 ರಂದು ದೊಡ್ಡಪೈಯಲಗುರ್ಕಿ ಪಂಚಾಯ್ತಿಯ ಹತ್ತಿರ ತಾನು ಅನಿಲ್ ಚಂದ್ರಶೇಖರ್ ಹೋಗಿದ್ದಾಗ ಸುಮನ್ ರವರು ಅವರ ಸಂಬಂಧಿಗಳು ನಾಲ್ಕು ಜನರನ್ನು ಕರೆದುಕೊಂಡು ಬಂದು ಪಂಚಾಯ್ತಿ ಮುಂದೆ ಮೊಬೈಲ್ ನಲ್ಲಿ ತನ್ನ ಪೋಟೋ ತೆಗೆದು ನನ್ನ ಸ್ನೇಹಿತರಿಗೆ ವಾಟ್ಸ ಆಪ್ ಮಾಡ್ತೀನಿ ನಿನ್ನನ್ನು ಕೊಲೆ ಮಾಡಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಸುಮನ್ ಮತ್ತು ಇವರ ಜೊತೆ ಬಂದಿದ್ದ ಸಂಬಂಧಿ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

 

8. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.33/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ 24/03/2021 ರಂದು ಪಿರ್ಯಾದಿದಾರರಾದ ಶ್ರೀ ಪಿ ಮುರಳಿ ಬಿನ್ ಪೆದ್ದ ವೆಂಕಟರಾಯಪ್ಪ, 40 ವರ್ಷ, ನಾಯಕ ಜನಾಂಗ, ಜಿರಾಯ್ತಿ, ವಾಸ ಮಿಟ್ಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ: ದಿನಾಂಕ 21/03/2021 ರಂದು ಬಾನುವಾರ ತನ್ನ ಮಕ್ಕಳಾದ 1 ನೇ 15 ವರ್ಷ ವಯಸ್ಸಿನ ಬಾಲು 2 ನೇ 9 ವರ್ಷ ವಯಸ್ಸಿನ ಲೊಕೇಶ್ ರವರು ತಮ್ಮ ಗ್ರಾಮದಿಂದ ರಾಸಪಲ್ಲಿ ಕ್ರಾಸ್ ನಲ್ಲಿರುವ ಚಿಕನ್ ಅಂಗಡಿಗೆ ಚಿಕನ್ ತರುವ ಸಲುವಾಗಿ ಹೋದರು. ಅವರು ಹೋದ ಸ್ವಲ್ಪ ಸಮಯದ ನಂತರ ಮಧ್ಯಾಹ್ನ 12-40 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ನಾರಾಯಣಸ್ವಾಮಿ ಬಿನ್ ಲೇಟ್ ಚಿಕ್ಕಮುನಿಯಪ್ಪ ರವರು ತನಗೆ ಮೊಬೈಲ್ ಕರೆ ಮಾಡಿ ರಾಸಪಲ್ಲಿ ಕ್ರಾಸ್ ನಲ್ಲಿ ಲೊಕೇಶ್ ಗೆ ಯಾವುದೋ ಖಾಸಗಿ ಬಸ್ ಡಿಕ್ಕಿ ಹೊಡೆದು ಅಪಘಾತವಾಗಿರುವುದಾಗಿ ತಿಳಿಸಿದ್ದರಿಂದ ಕೂಡಲೇ ತಾನು ಸ್ಥಳಕ್ಕೆ ಬಂದು ನೋಡಲಾಗಿ ತನ್ನ ಮಗನಾದ ಲೋಕೇಶ್ ಗೆ ಅಪಘಾತವಾಗಿ ಬಲಕಣ್ಣಿನ ಬಳಿ ಬಲವಾದ ರಕ್ತಗಾಯವಾಗಿ ಮೈಯೆಲ್ಲಾ ತರಚಿದ ಗಾಯಗಳಾಗಿ ರಕ್ತ ಸೋರುತ್ತಿರುತ್ತದೆ. ವಿಚಾರ ಮಾಡಲಾಗಿ ತನ್ನ ಮಕ್ಕಳು ಇಬ್ಬರು ಮಧ್ಯಾಹ್ನ ಸಮಾರು 12-30 ಗಂಟೆ ಸಮಯದಲ್ಲಿ ರಸ್ತೆಯ ಪೂರ್ವಕ್ಕೆ ಇರುವ ಚಿಕನ್ ಅಂಗಡಿಯಲ್ಲಿ ಚಿಕನ್ ಹೊಡೆಸಿಕೊಂಡು ರಸ್ತೆಯನ್ನು ದಾಟಿ ಪಶ್ಚಿಮಕ್ಕೆ ಹೋದಾಗ ರಸ್ತೆಯ ಅಂಚಿನಲ್ಲಿದ್ದ ಲೋಕೇಶ್ ಗೆ ಚಿಂತಾಮಣಿ ಕಡೆಯಿಂದ ಬಂದ ಕೆಎ-06-ಸಿ-6666 ನೋಂದಣಿ ಸಂಖ್ಯೆಯ ಎಸ್.ಎಲ್.ಎನ್ ಹೆಸರಿನ ಖಾಸಗಿ ಬಸ್ ಚಾಲಕ ಬಸ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿ ಅಪಘಾತಪಡಿಸಿ ಲೋಕೇಶ್  ಟಾರ್ ರಸ್ತೆಯಲ್ಲಿ ಬಸ್ ಸ್ವಲ್ಪ ದೂರು ಎಳೆದುಕೊಂಡು ಹೋಗಿ ನಂತರ  ರಸ್ತೆಯಲ್ಲಿ ಬಿದ್ದು ಲೋಕೇಶ್ ಗೆ ಗಾಯಗಳಾದಾಗ ಅಲ್ಲಿಯೇ ಚಿಕನ್ ಹೊಡೆಸಿಕೊಳ್ಳುತ್ತಿದ್ದ ತಮ್ಮ ಗ್ರಾಮದ ನಾರಾಯಣಸ್ವಾಮಿ  ಮತ್ತು ಟಿ.ಎಸ್. ದೇವರಾಜ್ ಬಿನ್ ಲೇಟ್ ಶೆಟ್ಟಪ್ಪ ಉಪಚರಿಸಿದ್ದಾಗಿ ತಿಳಿಯಿತು. ಕೂಡಲೇ ತಾನು ತನ್ನ ಮಗನನ್ನು ಉಪಚರಿಸಿ 108 ಅಂಬ್ಯೂಲೆನ್ಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡಿಸಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ  ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡಿಸಿ ಈಗ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಪಡಿಸುತ್ತಿರುತ್ತೇನೆ. ಆಸ್ಪತ್ರೆಗೆ ಸುತ್ತಾಡುತ್ತಿದ್ದರಿಂದ ದೂರು ನೀಡಲು ತಡವಾಗಿದ್ದರಿಂದ ಈ ದಿನ ದಿನಾಂಕ 24/03/2021 ರಂದು ದೂರು ನೀಡುತ್ತಿದ್ದು, ಅಪಘಾತಪಡಿಸಿದ ಕೆಎ-06-ಸಿ-6666 ನೋಂದಣಿ ಸಂಖ್ಯೆಯ ಎಸ್.ಎಲ್.ಎನ್ ಹೆಸರಿನ ಖಾಸಗಿ ಬಸ್ ಚಾಲಕನ ವಿರುದ್ದ  ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಪಿರ್ಯಾದು.

 

9. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.32/2021 ಕಲಂ. 279  ಐ.ಪಿ.ಸಿ:-

     ದಿನಾಂಕ:24/03/2021 ರಂದು ಮದ್ಯಾಹ್ನ 2:30 ಗಂಟೆಯಲ್ಲಿ ಪಿರ್ಯಾದಿ ಗಜೇಂದ್ರ ಬಿನ್ ಮುನಿರಾಜು, 25 ವರ್ಷ, ಒಕ್ಕಲಿಗರು, ಡ್ರೈವರ್ ಕೆಲಸ, ವಾಸ: ಕಾರಹಳ್ಳಿ ಗ್ರಾಮ, ದೇವನಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ತಮ್ಮ ಗ್ರಾಮದ ಹರೀಶ್ ಬಿನ್ ಮುನೇಗೌಡ ರವರ ಕೆ.ಎ-43 9374 ಟಿಪ್ಪರ್ ಲಾರಿಗೆ ಚಾಲಕನಾಗಿ ಒಂದು ವರ್ಷದಿಂದ ಕೆಲಸ ಮಾಡಿಕೊಂಡಿದ್ದು ದಿನಾಂಕ: 22/03/2021 ರಂದು ಕೊಡಿಕೊಂಡ್ಲ ಬಳಿ ಜಿಲ್ಲಿಯನ್ನು ತುಂಬಿಸಿಕೊಂಡು ಬರುವ ಸಲುವಾಗಿ ಕಾರಹಳ್ಳಿ ಗ್ರಾಮದಿಂದ ಹೊರಟು ಬೆಳಿಗ್ಗೆ ಸುಮಾರು 08-00 ಗಂಟೆ ಸಮಯದಲ್ಲಿ ನಂದಿ ಕ್ರಾಸ್ ಎನ್ಹೆಚ್-07 ರಸ್ತೆಯ ಪಕ್ಕದ ಸರ್ವಿಸ್ ರಸ್ತೆಯ ಸಮೀಪವಿರುವ  ಶ್ರೀ ಅನ್ನಪೂರ್ಣೇಶ್ವರಿ ಹೋಟೆಲ್ ಮುಂಭಾಗದ ಹಂಪ್ ಬಳಿ ತಾನು ವಾಹನವನ್ನು ನಿದಾನಿಸಿ ಚಿಕ್ಕಬಳ್ಳಾಪುರದ ಕಡೆಗೆ ಹೋಗುತ್ತಿದ್ದಾಗ ತನ್ನ ಹಿಂದೆ ಬರುತ್ತಿದ್ದ ಟಿಪ್ಪರ್ ಲಾರಿ ಸಂಖ್ಯೆ ಕೆಎ-43-9343 ರನ್ನು ಚಾಲಕ ಟಿಪ್ಪರ್ ಲಾರಿಯನ್ನು ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ತಮ್ಮ ವಾಹನದ ಹಿಂಬಾಗಕ್ಕೆ  ಡಿಕ್ಕಿ ಹೊಡೆಸಿದ ಪರಿಣಾಮ ತಾನು ಚಾಲನೆ ಮಾಡುತ್ತಿದ್ದ ಕೆಎ-43-9374 ಟಿಪ್ಪರ್ ಲಾರಿ ಹಿಂಬಾಗ ಸ್ವಲ್ಪ ಜಖಂಗೊಂಡು ಅಪಘಾತ ಪಡಿಸಿದ ಟಿಪ್ಪರ ವಾಹನ ಸಂಖ್ಯೆ ಕೆಎ-43-9343 ರ ಮುಂಬಾಗ ಕ್ಯಾಬಿನ್ ಜಖಂ ಗೊಂಡಿದ್ದು, ಮುಂಭಾಗದ ಗ್ಲಾಸ್ ಹೊಡೆದುಹೋಗಿರುತ್ತದೆ. ಈ ಅಪಘಾತದಿಂದ ಎರಡೂ ವಾಹನಗಳಲ್ಲಿದ್ದ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಈ ವಿಚಾರವನ್ನು ನಮ್ಮ ಲಾರಿಯ ಮಾಲೀಕರಿಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕೆಎ-43-9343 ಟಿಪ್ಪರ್ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

 

10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.82/2021 ಕಲಂ. 379  ಐ.ಪಿ.ಸಿ:-

     ದಿನಾಂಕ:24.03.2021 ರಂದು ಸಂಜೆ 7-50 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎಸ್ ನಾರಾಯಣಸ್ವಾಮಿ ಬಿನ್ ಲೇಟ್ ಸೊಣ್ಣಪ್ಪ, 71 ವರ್ಷ, ವಕ್ಕಲಿಗರು, ಜಿರಾಯ್ತಿ, ಭಕ್ತರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಬಾಬತ್ತು ತನ್ನ ಹೆಸರಿನಲ್ಲಿ ಶಿಡ್ಲಘಟ್ಟ ತಾಲ್ಲೂಕು ಭಕ್ತರಹಳ್ಳಿ ಗ್ರಾಮದ ಸರ್ವೇ ನಂಬರ್ 61/3, 61/1 ರಲ್ಲಿ 4 ಎಕರೆ 24 ಗುಂಟೆ ಜಮೀನು ಇದ್ದು ಸದರಿ ಜಮೀನಿನಲ್ಲಿ ತಾನು ಗೋಡಂಬಿ ಬೆಳೆಯನ್ನು ಇಟ್ಟಿದ್ದು ಗೊಡಂಬಿ ಬೆಳೆಗೆ ನೀರು ಹಾಯಿಸಲು ನೀರಿನ ಸಂಪ್ ನಿರ್ಮಿಸಿ ಸದರಿ ಸಂಪ್ ಗೆ ನೀರು ತುಂಬಿಸಿ ನಂತರ ಸಂಪ್ ನಲ್ಲಿ ಅಳವಡಿಸಿರುವ ರೂ 10800 ರೂ ಮೌಲ್ಯದ 2 ಹೆಚ್.ಪಿ ಮೋಟಾರ್ ಅಳವಡಿಸಿ ಸದರಿ ಮೋಟಾರ್ ನಿಂದ ಬೆಳೆಗಳಿಗೆ ನೀರುಹಾಯಿಸುತ್ತಿರುತ್ತೇನೆ. ಎಂದಿನಂತೆ ದಿನಾಂಕ:17.03.2021 ರಂದು ಸಂಪ್ ನಿಂದ ಗೋಡಂಬಿ ಬೆಳೆಗೆ ನೀರು ಹಾಯಿಸಿ ಸಂಜೆ 6 ಗಂಟೆಗೆ ಮನೆಗೆ ವಾಪಸ್ಸು ಹೋಗಿರುತ್ತೇನೆ. ನಂತರ ದಿನಾಂಕ:18.03.2021 ರಂದು ಬೆಳಿಗ್ಗೆ 8.00 ಗಂಟೆ ಸಮಯದಲ್ಲಿ ಎಂದಿನಂತೆ ತಾನು ಗೋಡಂಬಿ ಬೆಳೆಗೆ ನೀರು ಹಾಯಿಸಲು ಸಂಪಿನ ಮೋಟಾರ್ ಅನ್ನು ಚಾಲನೆ ಮಾಡಲು ಹೋಗಿ ನೋಡಿದಾಗ ರೂ 10800 ರೂ ಮೌಲ್ಯದ 2 ಹೆಚ್.ಪಿ ಮೋಟಾರ್ ಕಾಣಿಸಿದೇ ಇದ್ದು ದಿನಾಂಕ:17.03.2021 ರಂದು ರಾತ್ರಿ ಯಾರೋ ಕಳ್ಳರು ತಮ್ಮ ಜಮೀನಿನ ಸಂಪ್ ನಲ್ಲಿ ಅಳವಡಿಸಿದ್ದ 2 ಹೆಚ್.ಪಿ ಮೋಟಾರ್ ಅನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಂತರ ತಾನು ಅಕ್ಕದ ಪಕ್ಕದ ತೋಟಗಳಲ್ಲಿ ಮೊಟಾರ್ ಅನ್ನು ಹುಡುಕಾಡಿಕೊಂಡಿದ್ದು ಪತ್ತೆಯಾಗದ ಕಾರಣ ಈ ದಿನ ಠಾಣೆಗೆ ಬಂದು ದೂರು ನೀಡುತಿದ್ದು ಕಳುವಾಗಿರುವ 2 ಹೆಚ್.ಪಿ ಮೋಟಾರ್ ಅನ್ನು ಹಾಗು ಕಳುವು ಮಾಡಿಕೊಂಡುಹೋಗಿರುವ ಅಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗಿ ಕೊಟ್ಟ ದೂರು.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.83/2021 ಕಲಂ. 143,147,323,504,506(2),149  ಐ.ಪಿ.ಸಿ:-

     ದಿನಾಂಕ:-25/03/2021 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಾಗರಾಜಪ್ಪ ಬಿನ್ ಲೇಟ್ ಮುನಿಕೆಂಪಣ್ಣ, 67 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಭಕ್ತರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಸರ್ವೇ ನಂಬರ್ 186 ರಲ್ಲಿ 2 ಎಕರೆ 19 ಗುಂಟೆ ಜಮೀನು ತಮ್ಮ ಪಿತ್ರಾರ್ಜಿತವಾದ ಜಮೀನು ಆಗಿದ್ದು, ಸದರಿ ಜಮೀನಿನ ಪೈಕಿ 2 ಎಕರೆ 11 ಗುಂಟೆ ಜಮೀನನ್ನು ಈಗ್ಗೆ ಸುಮಾರು 50 ವರ್ಷಗಳ ಹಿಂದೆ ತನ್ನ ತಾತನಾದ ಮುನಿಶಾಮಪ್ಪ ರವರು ತಮ್ಮ ಗ್ರಾಮದ ವಾಸಿ ವೆಂಕಟರಾಯಪ್ಪ ರವರಿಗೆ ಮಾರಾಟ ಮಾಡಿದ್ದು, ಉಳಿದ 8 ಗುಂಟೆ ಜಮೀನು ಅಂದಿನಿಂದಲೂ ತಮ್ಮ ಸ್ವಾಧೀನ ಅನುಭೋಗದಲ್ಲಿದ್ದು, ಸದರಿ 8 ಗುಂಟೆ ಜಮೀನಿನಲ್ಲಿ ತಮ್ಮ ಪೂರ್ವಜನ ಸಮಾಧಿಗಳು ಇರುತ್ತದೆ. ಈ 8 ಗುಂಟೆ ಜಮೀನನ್ನು ಸಹ ವೆಂಕಟರಾಯಪ್ಪ ರವರು ಆ ಕಾಲದಲ್ಲಿ ರಾಜಕೀಯವಾಗಿ ಬಲಾಡ್ಯರಾಗಿದ್ದ ಕಾರಣ ತಮ್ಮ ಅರಿವಿಗೆ ಇಲ್ಲದೆ ಯಾವುದೋ ರೀತಿಯಲ್ಲಿ ತನ್ನ ಹೆಸರಿಗೆ ಮಾಡಿಕೊಂಡಿರುತ್ತಾನೆ. ಹೀಗಿರುವಾಗ ದಿನಾಂಕ 19/03/2021 ರಂದು ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ಮೇಲ್ಕಂಡ ವೆಂಕಟರಾಯಪ್ಪ ರವರ ವಂಶಸ್ಥರಾದ 1. ಸತೀಶ್ ಚಂದ್ರ ಬಿನ್ ನಾರಾಯಣಪ್ಪ 2. ರಾಮಮೂರ್ತಿ ಬಿನ್ ನಾರಾಯಣಪ್ಪ, 3. ಯತೀಶ್ ಬಿನ್ ಸತೀಶ್ ಚಂದ್ರ, 4. ಅಂಬರೀಶ್ ಬಿನ್ ನಾರಾಯಣಪ್ಪ, 5. ಅನುಷ್ ಬಿನ್ ಸತೀಶ್ ಚಂದ್ರ ರವರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಯಾವುದೋ ಜೆಸಿಬಿಯಲ್ಲಿ ತಮ್ಮ ಅನುಭೋಗದ ಸಮಾಧಿಗಳಿರುವ 8 ಗುಂಟೆ ಜಮೀನಿನಲ್ಲಿ ಮಣ್ಣನ್ನು ತೋಡಿ ತಮ್ಮ ಪೂರ್ವಜರ ಒಂದು ಸಮಾಧಿಯನ್ನು ಜಖಂಗೊಳಿಸಿ ಕೆಲಸ ಮಾಡುತ್ತಿದ್ದಾಗ ಈ ನಮಗೆ ವಿಷಯವನ್ನು ತಿಳಿದು ತಾನು ಮತ್ತು ತನ್ನ ಅಣ್ಣ ಚಂದ್ರಪ್ಪ, ತನ್ನ ಮಗ ಕೇಶವ, ತನ್ನ ತಮ್ಮ ಆಂಜಿನಪ್ಪ, ತನ್ನ ಚಿಕ್ಕಪ್ಪ ಚಿಕ್ಕನಾರಾಯಣಸ್ವಾಮಿ, ತನ್ನ ಮಗ ವಿಶ್ವನಾಥ ರವರು ಅಲ್ಲಿಗೆ ಹೋಗಿ ಮೇಲ್ಕಂಡರಿಗೆ ಯಾಕೇ ನೀವು ನಮ್ಮ ಹಿರಿಯರ ಸಮಾಧಿ ಜಖಂ ಮಾಡಿ, ನಮ್ಮ ಜಮೀನಿನಲ್ಲಿ ಮಣ್ಣನ್ನು ಅಗೆದಿದ್ದು ಎಂದು ಕೇಳಿದ್ದಕ್ಕೆ ಮೇಲ್ಕಂಡವರು ತನಗೆ ಮತ್ತು ತಮ್ಮ ಮನೆಯವರಿಗೆ ಕೆಟ್ಟ-ಕೆಟ್ಟ ಮಾತುಗಳಿಂದ ಬೈದು, ಈ ಜಮೀನು ನಮಗೆ ಸೇರ ಬೇಕು ಈ ಜಮೀನಿನ ದಾಖಲೆಗಳು ನಮ್ಮ ಹೆಸರಿನಲ್ಲಿ ಇದೇ ಎಂದು ತಮ್ಮ ಮೇಲೆ ಗಲಾಟೆಯನ್ನು ಮಾಡಿ ಆ ಪೈಕಿ ಸತೀಶ್ ರವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೋವುಂಟು ಮಾಡಿದಾಗ ತಮ್ಮ ಮನೆಯವರು ಅಡ್ಡ ಬಂದಿರುತ್ತಾರೆ. ಆಗ ರಾಮಮೂರ್ತಿ ರವರು ಜೆಸಿಬಿಯಲ್ಲಿದ್ದ ಮಚ್ಚನ್ನು ಎತ್ತಿಕೊಂಡು ಅದನ್ನು ತೋರಿಸಿ ನನ್ನ ಮಕ್ಕಳಾ ಬಾರೋ ಈ ದಿನ ನಿಮಗೆ ಒಂದು ಗತಿ ಕಾಣಿಸುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿ ಜಗಳ ಮಾಡುತ್ತಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ವೆಂಕಟಮೂರ್ತಿ ಬಿನ್ ಕೃಷ್ಣೇಗೌಡ, ಚಂದ್ರಶೇಖರ್ ಬಿನ್ ಭಜಂತ್ರಿ ವೆಂಕಟೇಶಪ್ಪ ರವರು ಅಡ್ಡ ಬಂದು ಜಗಳವನ್ನು ಬಿಡಿಸಿದಾಗ ಉಳಿದವರು ಸಹ ಈ ಜಮೀನಿನ ಸುದ್ದಿಗೆ ಬಂದರೆ ನಿಮ್ಮನ್ನು ಸಾಯಿಸಿ ಇಲ್ಲೇ ಸಮಾಧಿ ಮಾಡುತ್ತೇವೆಂದು ತನಗೆ ಮತ್ತು ತಮ್ಮ ಮನೆಯವರಿಗೆ ಬೆದರಿಕೆಯನ್ನು ಹಾಕಿರುತ್ತಾರೆ. ಈ ವಿಷಯದ ಬಗ್ಗೆ ತಾನು ತಮ್ಮ ಗ್ರಾಮದ ಮುಖಂಡರುಗಳಿಗೆ ತಿಳಿಸಿದಾಗ ಅವರು ನ್ಯಾಯ ಪಂಚಾಯ್ತಿ ಮಾಡೋಣವೆಂದು ಹೇಳಿದ್ದು ಮೇಲ್ಕಂಡವರು ಇದುವರೆವಿಗೂ ಸಹ ನ್ಯಾಯ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.  

ಇತ್ತೀಚಿನ ನವೀಕರಣ​ : 25-03-2021 05:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080