ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.51/2021 ಕಲಂ. 323,324,504,34 ಐ.ಪಿ.ಸಿ :-

     ದಿನಾಂಕ;25/02/2021 ರಂದು ಬೆಳಿಗ್ಗೆ 8-30 ಗಂಟೆಗೆ ಗಾಯಾಳುವಿನ ತಾಯಿ ಶ್ರೀಮತಿ ಲಕ್ಷ್ಮೀ ಕೋಂ ಗಂಗಾಧರ, 26 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ: ಮಾರ್ಗಾನುಕುಂಟೆ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ. ನನ್ನ ಗಂಡ ಗಂಗಾಧರ ರವರು ಕೂಲಿ ಕೆಲಸಕ್ಕೆ ಬೆಂಗಳೂರಿಗೆ ಹೋಗಿದ್ದು, ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿರುತ್ತಾರೆ.ಮನೆಯಲ್ಲಿ ನಾನು ಮತ್ತು ನನ್ನ ಮಕ್ಕಳಾದ 1).ಮಮತ, 10 ವರ್ಷ. 2) ನವ್ಯ,8 ವರ್ಷ. 3) ಗಗನದೀಪ್, 7ವರ್ಷ. ರವರೊಂದಿಗೆ ನಮ್ಮ ಗ್ರಾಮದಲ್ಲಿ ವಾಸವಾಗಿರುತ್ತೇನೆ. ದಿನಾಂಕ:24/02/2021 ರಂದು ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ನನ್ನ ಮಗನಾದ ಗಗನ್ ದೀಪನಿಗೆ ನಮ್ಮ ಗ್ರಾಮದ ಲೋಕೇಶ್ ಬಿನ್ ವೆಂಕಟೇಶ್, 25 ವರ್ಷರವರು ನನ್ನ ಮಗನಿಗೆ 20 ರೂಪಾಯಿ ಕೊಟ್ಟು ಅಂಗಡಿಗೆ ಕಳುಹಿಸಿದ್ದು, ನನ್ನ ಮಗನಿಗೆ ತಿಳಿಯದೆ ಅಂಗಡಿಯಲ್ಲಿ ತಿಂಡಿಯನ್ನು ತೆಗೆದುಕೊಂಡು ತಿಂದಿರುತ್ತಾನೆ. ಈ ವಿಚಾರವಾಗಿ ನನ್ನ ಮಗನಿಗೆ ಬುದ್ದಿವಾದ ಹೇಳುತ್ತಿದ್ದರೆ ಲೋಕೇಶ್ ನನ್ನ ಬಳಿ ಬಂದು ಏಕಾಏಕಿ ಅವಾಚ್ಯ ಶಬ್ದಗಳಿಂದ ನನಗೆ ಕೈಯಿಂದ ಹೊಡೆದಿರುತ್ತಾನೆ. ನಂತರ ಕಾಲಿನಿಂದ ನನಗೆ ಹೊಡೆಯಲು ಬಂದಾಗ ನನ್ನ ಮಗಳಾದ 10 ವರ್ಷದ ಮಮತ ಅಡ್ಡ ಬಂದಾಗ ಆಕೆಯ ಎಡಕೈಗೆ ಕೋಲಿನಿಂದ ಹೊಡೆದು ನೋವುಂಟು ಮಾಡಿರುತ್ತಾನೆ. ಹಾಗೂ ಆತನ ತಂದೆ ವೆಂಕಟೇಶ, ತಾಯಿ ರಾಧಮ್ಮ, ಅವರ  ಅತ್ತೆ ಈರಮ್ಮ ಹಾಗೂ ಅವನ ಹೆಂಡತಿ ಐಶ್ವರ್ಯ ರವರೂ ಸಹ ನನಗೂ ಹಾಗೂ ನನ್ನ ಮಗಳು ಮಮತಳಿಗೆ ಅವಾಚ್ಯವಾಗಿ ಬೈದು, ಕೋಲು ಮತ್ತು ಕೈಗಳಿಂದ ಹೊಡೆದಿರುತ್ತಾರೆ. ನಂತರ ನನ್ನನ್ನು ಮತ್ತು ನನ್ನ ಮಗಳನ್ನು ಚಿಕಿತ್ಸೆಗಾಗಿ ನಮ್ಮ ಅತ್ತೆ ನರಸಮ್ಮ ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಯಾವುದೋ ಆಟೋದಲ್ಲಿ ಕರೆದುಕೊಂಡು ಬಂದು ದಾಖಲಿಸಿದ್ದು, ನಾವು ಚಿಕಿತ್ಸೆ ಪಡೆಯುತ್ತಿರುತ್ತೇವೆ. ಆದ್ದರಿಂದ ನನಗೆ ಹಾಗೂ ನನ್ನ ಮಗಳಿಗೆ ಬೈದು ಮತ್ತು ಹೊಡೆದಿರುವ ಮೇಲ್ಕಂಡ ಲೋಕೇಶ್,ವೆಂಕಟೇಶ, ರಾಧಮ್ಮ, ಈರಮ್ಮ, ಮತ್ತು ಐಶ್ವರ್ಯ ರವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.19/2021 ಕಲಂ. 323,324,504,506,34  ಐ.ಪಿ.ಸಿ :-

     ದಿನಾಂಕ 25/02/2021 ರಂದು ಬೆಳಿಗ್ಗೆ 11-30 ಗಂಟೆಗೆ HC 176 ರವರು ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶಿವ ಬಿನ್ ಸುಬ್ಬಣ್ಣ 30 ವರ್ಷ ಆದಿದ್ರಾವಿಡ ಜನಾಂಗ ಗಾರೆಕೆಲಸ ವಾಸ ಯರ್ರಕೋಟೆ ಗ್ರಾಮ ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ದಿನಾಂಕ 24/02/2021 ರಂದು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ನಾನು ಕುಡಿಯುವ ನೀರನ್ನು ತೆಗೆದುಕೊಂಡು ಬರಲು ನಮ್ಮ ಗ್ರಾಮದ ಗಂಗಮ್ಮ ದೇವಾಲಯದ ಬಳಿ ರಸ್ತೆಯಲ್ಲಿ ಹೋಗುತ್ತಿದ್ದಾಗ ನನ್ನ ಎದುರುಗಡೆಯಿಂದ ನಮ್ಮ ಗ್ರಾಮದ ವಾಸಿ ಗೋಪಾಲಕೃಷ್ಣ ಬಿನ್ ರೆಡ್ಡಪ್ಪ ಎಂಬುವವರು ಬಂದು ನನ್ನನ್ನು ನೋಡಿ ಗುರಾಯಿಸಿದನು ಆಗ ನಾನು ಗೋಪಾಲಕೃಷ್ಣ ರವರನ್ನು ಕುರಿತು ಏಕೆ ನೀನು ನನ್ನನ್ನು ಗುರಾಯಿಸುತ್ತಿರುವುದು ಎಂದು ಕೇಳಿದ್ದಕ್ಕೆ ಗೋಪಾಲಕೃಷ್ಣ ರವರು ನನ್ನನ್ನು ಕುರಿತು ಲೋಪರ್ ನನ್ನ ಮಗನೇ ನಿನ್ನಮ್ಮನೇ ಕೇಯ ನನ್ನ ಪಾಡಿಗೆ ನಾನು ರಸ್ತೆಯಲ್ಲಿ ಹೋಗುತ್ತಿದ್ದರೆ ನಿನಗೇನು ಎಂದು ಅವಾಚ್ಯ ಶಬ್ದಗಳಿಂದ ಬೈದು ನನ್ನ ಗಲ್ಲಾಪಟ್ಟಿಯನ್ನು ಹಿಡಿದು ಎಳೆದಾಡಿ ನನ್ನನ್ನು ಕೈಗಳಿಂದ ಹೊಡೆದನು ಆಗ ಗಲಾಟೆಯ ಶಬ್ದವನ್ನು ರವಿ ಬಿನ್ ವೆಂಕಟರೆಡ್ಡಿ,ಸೋಮಶೇಖರ್ ಬಿನ್ ರೆಡ್ಡಪ್ಪ ರವರು ಕೇಳಿಸಿಕೊಂಡು ಅಲ್ಲಿಗೆ ಬಂದು ರವಿ ರವರು ಅಲ್ಲಿಯೇ ಬಿದ್ದಿದ್ದ ಒಂದು ದೊಣ್ಣೆಯನ್ನು ತೆಗೆದುಕೊಂಡು ನನ್ನ ಮೈಕೈ ಮೇಲೆ ಹೊಡೆದನು ಸೋಮಶೇಖರ್ ರವರು ನನ್ನ ಜುಟ್ಟನ್ನು ಹಿಡಿದು ಎಳೆದಾಡಿ ನನ್ನನ್ನು ಚರಂಡಿಯಲ್ಲಿ ತಳ್ಳಿ ಕಾಲಿನಿಂದ ಒದ್ದನು ಗೋಪಾಲಕೃಷ್ಣ ರವರು ನನ್ನ ಬಲಕಣ್ಣಿನ ಕೆಳಭಾಗದಲ್ಲಿ ಕೆನ್ನೆಯ ಮೇಲೆ ಉಗುರುಗಳಿಂದ ಪರಚಿ ರಕ್ತಗಾಯವನ್ನು ಉಂಟು ಮಾಡಿದನು.ನಂತರ ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಎಡಕಿವಿಯ ಬಳಿ ಹೊಡೆದು ರಕ್ತಗಾಯಪಡಿಸಿ ಉಗುರುಗಳಿಂದ ನನ್ನ ಕತ್ತಿನ ಬಲಭಾಗದಲ್ಲಿ ಎಡಕಿವಿಯ ಬಳಿ ಪರಚಿ ನನ್ನ ಎಡಕೈನ ಹೆಬ್ಬೆರಳನ್ನು ಬಾಯಿಂದ ಕಚ್ಚಿ ರಕ್ತಗಾಯವನ್ನು ಉಂಟು ಮಾಡಿದನು ನಂತರ ಮೂರು ಜನರು ಸೇರಿಕೊಂಡು ನನ್ನನ್ನು ಕುರಿತು ಲೋಪರ್ ನನ್ನ ಮಗನೇ ನೀನು ಏನಾದರೂ ಗಾಂಚಾಲಿ ಮಾಡಿದರೆ ನಿನ್ನನ್ನು ಸಾಯಿಸಿಬಿಡುತ್ತೇವೆ ಎಂದು ಪ್ರಾಣ ಬೆದರಿಕೆಯನ್ನು ಹಾಕಿದರು ಅಷ್ಟರಲ್ಲಿ ನನ್ನ ತಮ್ಮನಾದ ಶ್ರೀನಿವಾಸ ಮತ್ತು ನಮ್ಮ ಮಾವ ಈಶ್ವರಪ್ಪ ರವರು ಅಡ್ಡ ಬಂದು ಜಗಳ ಬಿಡಿಸಿದರು ನಂತರ ಗಾಯಗೊಂಡಿದ್ದ ನನ್ನನ್ನು ನನ್ನ ತಮ್ಮ ಶ್ರೀನಿವಾಸರವರು ದ್ವಿಚಕ್ರ ವಾಹನದಲ್ಲಿ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ.ನನ್ನ ಮೇಲೆ ಗಲಾಟೆ ಮಾಡಿ ನನ್ನನ್ನು ಹೊಡೆದು ಹಲ್ಲೆ ಮಾಡಿದವರ ಮೇಲೆ ಕಾನೂನುರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿದೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.80/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ: 25/02/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ರೆಡ್ಡಪ್ಪ ಬಿನ್ ಮರಿಯಪ್ಪ, 37 ವರ್ಷ, ನಾಯಕರು, ಉಪನ್ಯಾಸಕರು, ದೊಡ್ಡಗಂಜೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 11.00 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು, ಸದರಿ ಕೇಳಿಕೆಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 25/02/2021 ರಂದು ತನಗೆ ಚಿಂತಾಮಣಿಯಲ್ಲಿ ಕೆಲಸ ಇದ್ದುದರಿಂದ ಚಿಂತಾಮಣಿಗೆ ಹೋಗಲು ತಾನು ತಮ್ಮ ಗ್ರಾಮದ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬೆಳಿಗ್ಗೆ 07.15 ಗಂಟೆ ಸಮಯದಲ್ಲಿ ಜಿ.ಕೋಡಿಹಳ್ಳಿ ಗ್ರಾಮದ ತನಗೆ ಪರಿಚಯವಿರುವ ಮಲ್ಲಿಕಾರ್ಜುನ ಬಿನ್ ರಾಮಪ್ಪ ರವರು ಅವರ ಬಾಬತ್ತು ಕೆಎ-40 -7287 ನೊಂದಣಿ ಸಂಖ್ಯೆಯ ಟಾಟಾ ಮ್ಯಾಜಿಕ್ ವಾಹನದಲ್ಲಿ ಅವರ ಗ್ರಾಮದ ಕಡೆಯಿಂದ ಬಂದು ತನ್ನ ಬಳಿ ನಿಲ್ಲಿಸಿದ್ದು ತಾನು ಸದರಿ ವಾಹನದಲ್ಲಿ ಹತ್ತಿಕೊಂಡು ಚಿಂತಾಮಣಿಗೆ ಬರುವ ಸಲುವಾಗಿ ಬೆಳಿಗ್ಗೆ ಸುಮಾರು 07.30 ಗಂಟೆ ಸಮಯದಲ್ಲಿ ಮಾಡಿಕೆರೆ ಕ್ರಾಸ್ ಸಮೀಪ ಬರುತ್ತಿದ್ದಾಗ ತಮ್ಮ ಹಿಂದುಗಡೆಯಿಂದ ಬಂದ ಕೆಎ-04 ಎಂಜೆ-4646 ಸ್ವಿಪ್ಟ್ ಡಿಜೈರ್ ಕಾರಿನ ಚಾಲಕ ಆತನ ಕಾರನ್ನು ಅತಿಬೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಮಡು ಬಂದು ತಮ್ಮ ವಾಹನಕ್ಕೆ ಹಿಂದುಗಡೆಯಿಂದ ಡಿಕ್ಕಿ ಹೊಡೆಸಿದ್ದು, ತಮ್ಮ ವಾಹನ ರಸ್ತೆಯ ಎಡಬದಿಯ ಹಳ್ಳಕ್ಕೆ ನುಗ್ಗಿರುತ್ತೆ. ಅಪಘಾತಪಡಿಸಿದ ಕಾರು ಸಹ ಮುಗಿಚಿಕೊಂಡು ಹಳ್ಳದಲ್ಲಿ ಬಿದ್ದಿರುತ್ತೆ. ಪರಿಣಾಮ ಎರಡೂ ವಾಹನಗಳು ಜಖಂ ಆಗಿರುತ್ತೆ. ಸದರಿ ಅಪಘಾತದಿಂದ ತನ್ನ ಎಡಮುಂಗೈ ಮತ್ತು ಎಡಕೈಗೆ ರಕ್ತಗಾಯವಾಗಿರುತ್ತೆ. ಚಾಲಕನಾದ ಮಲ್ಲಿಕಾರ್ಜುನ ರವರಿಗೆ ಎದೆಗೆ ಮತ್ತು ಮೈ ಕೈಗೆ ಗಾಯಗಳಾಗಿರುತ್ತೆ. ಆದ್ದರಿಂದ ಮೇಲ್ಕಂಡ ಕೆಎ-04 ಎಂಜೆ-4646 ಸ್ವಿಪ್ಟ್ ಡಿಜೈರ್ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.47/2021  ಕಲಂ. 324,504,506,34  ಐ.ಪಿ.ಸಿ :-

     ದಿನಾಂಕ:24/02/2021 ರಂದು ಮದ್ಯಾಹ್ನ 13-00 ಗಂಟೆಗೆ ಸರ್ಕಾರಿ ಅಸ್ಪತ್ರೆಯಿಂದ ಬಂದ ಮೆಮೋ ಪಡೆದು ಅಸ್ಪತ್ರೆಗೆ ಭೆಟಿ ನೀಡಿ ಗಾಯಾಳು ವಿಜಯಕುಮಾರ ಬಿನ್ ಗಂಗಾಧರಪ್ಪ, 28 ವರ್ಷ, ಹರಿಜನರು, ವೇದಲವೇಣಿ ಗ್ರಾಮ ಗೌರೀಬಿದನೂರು ತಾಲ್ಲೂಕು ರವರು ನೀಡಿದ ಹೇಳಿಕೆ ಸಾರಾಂಶವೇನೆಂದರೆ, ದಿನಾಂಕ:23/02/2021 ರಂದು ರಾತ್ರಿ 7-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಗಾರೆ ಕೆಲಸ ಮಾಡಿ ತಮ್ಮ ಮನೆಯ ಬಳಿ ಬಂದು ಮನೆಯ ಹಿಂಭಾಗದಲ್ಲಿದ್ದಾಗ ಪಿರ್ಯಾದಿದಾರರ ಮನೆಯ ಹಿಂಭಾಗದವರಾದ ಆದಿನಾರಾಯಣಪ್ಪ ಬಿನ್ ಲೇಟ್ ರಾಮಪ್ಪ, ಲಕ್ಷ್ಮೀದೇವಮ್ಮ ಕೋಂ ಆದಿನಾರಾಯಣಪ್ಪ, ನರಸಿಂಹಮೂರ್ತಿ ಬಿನ್ ಲೇಟ್ ರಾಮಪ್ಪ, ಸರಸ್ವತಮ್ಮ ಕೋಂ ನರಸಿಂಹಮೂರ್ತಿ, ರವರು ಪಿರ್ಯಾದಿದಾರರ ಮೇಲೆ ಏಕಾ ಏಕಿ ಬಂದು ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ನರಸಿಂಹಮೂರ್ತಿ ಮಚ್ಚಿನಿಂದ ಪಿರ್ಯಾದಿದಾರರ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ನಾಲ್ಕು ಹೊಲಿಗೆ ಹಾಕಿರುತ್ತಾರೆ, ಆದಿನಾರಾಯಣಪ್ಪ, ಸರಸ್ವತಮ್ಮ, ಲಕ್ಷ್ಮೀದೇವಮ್ಮ ರವರು ಪಿರ್ಯಾದಿದಾರರಿಗೆ ಕಲ್ಲಿನಿಂದ ಹಾಕಿರುತ್ತಾರೆ. ಮತ್ತು ಪ್ರಾಣಬೆದರಿಕೆ ಹಾಕಿದ್ದು ಮನೆಯ ಹಿಂಬದಿಯಲ್ಲಿ ಈ ಮೆಲ್ಕಂಡವರು ತ್ಯಾಜ್ಯ ವಸ್ತುಗಳನ್ನು ತಂದು ಪಿರ್ಯಾದಿದಾರರ ಜಾಗದಲ್ಲಿ ಹಾಕುತ್ತಿದ್ದರು ಪಿರ್ಯಾದಿದಾರರು ಅವರಿಗೆ ಬುದ್ದಿವಾದ ಹೇಳಿದ್ದಕ್ಕೆ ಈ ರೀತಿ ಮಾಡಿದ್ದು ಸದರಿಯವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

 

5. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.36/2021 ಕಲಂ. 9B EXPLOSIVE ACT, 1884:-

     ದಿನಾಂಕ:24/02/2021 ರಂದು ರಾತ್ರಿ 11 ಗಂಟೆ ಸಮಯದಲ್ಲಿ ಠಾಣಾ ಸಿಬ್ಬಂದಿ ಸಿಪಿಸಿ 272 ಶ್ರೀನಿವಾಸ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನಗೆ ಠಾಣೆಯ 12 ನೇ ಗ್ರಾಮ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಸದರಿ ಗ್ರಾಮ ಗಸ್ತಿಗೆ ಚಿಕ್ಕನಾಗವಲ್ಲಿ ಗ್ರಾಮ ಸಹ ಸೇರುತ್ತೆ. ಈ ದಿನ ದಿನಾಂಕ: 24/02/2021 ರಂದು ರಾತ್ರಿ ಸುಮಾರು 9-00 ಗಂಟೆಯಲ್ಲಿ ತಾನು ಪೆರೆಸಂದ್ರ ಪೊಲೀಸ್ ಹೊರ ಠಾಣೆಯ ಬಳಿ ಇದ್ದಾಗ ತನಗೆ ಬಾತ್ಮೀದಾರರಿಂದ ಮುತ್ತಕದಹಳ್ಳಿ ಗ್ರಾಮದ ವೆಂಕಟೇಶ ಬಿನ್ ಬಜ್ಜಣ್ಣ  ರವರ ಬಾಬತ್ತು ಚಿಕ್ಕ ನಾಗವಲ್ಲಿ ಗ್ರಾಮದ ಸರ್ವೆ ನಂ 84 ರ ಜಮೀನು ಪಕ್ಕದ ನೀರಿನ ಹಳ್ಳದಲ್ಲಿ ಸ್ಪೋಟಕ ವಸ್ತುಗಳು ಇರುವುದಾಗಿ ಬಂದ ಬಾತ್ಮೀಯ ಮೇರೆಗೆ ಕೂಡಲೆ ತಾನು ಸ್ಥಳಕ್ಕೆ ಹೋದಾಗ ನೀರಿನ ಹಳ್ಳದಲ್ಲಿ ಮೂರು ಬಿಳಿ ಬಣ್ಣದ ಚೀಲಗಳನ್ನು ಮೂತಿಯನ್ನು ಕಟ್ಟಿದಂತೆ ಮತ್ತು ಸುತ್ತಲೂ ಅಲ್ಲಿಲ್ಲಿ ಕೆಂಪು ಬಣ್ಣದ, ಕೇಸರಿ ಬಣ್ಣದ ಮತ್ತು ನೀಲಿ ಬಣ್ಣದ ಅಪಾಯಕಾರಿ ಸ್ಪೋಟಕ ವಸ್ತುಗಳು ತರಹ ಕಂಡು ಬಂದಿದ್ದು, ಇವುಗಳನ್ನು ಯಾರೋ ದುಷ್ಕರ್ಮಿಗಳು ತಮ್ಮ ಮೇಲೆ ಪ್ರಕರಣ ದಾಖಲಾಗುತ್ತೆಂಬ ಭಯದಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ ಸ್ಪೋಟಕ ವಸ್ತುಗಳನ್ನು ಎಲ್ಲಿಂದಲೋ ತಂದು ಪೊಲೀಸರಿಗೆ ಮರೆಮಾಚಿಸುವ ಸಲುವಾಗಿ ನಾಶಪಡಿಸುವ ಉದ್ದೇಶದಿಂದ ನೀರಿನ ಹಳ್ಳಕ್ಕೆ ಈಗ್ಗೆ ಸುಮಾರು 2-3 ದಿನಗಳ ಹಿಂದೆ ಎಸೆದಿರಬಹುದು. ಆದ್ದರಿಂದ ಈ ದಿನ ರಾತ್ರಿ 10-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ವರದಿಯನ್ನು ಸಿದ್ದಪಡಿಸಿ ಮೇಲ್ಕಂಡಂತೆ ಅಪಾಯಕಾರಿ ಸ್ಫೋಟಕ ವಸ್ತುಗಳನ್ನು  ಎಸೆದು ಹೋಗಿರುವ ದುಷ್ಕರ್ಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

6. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.44/2021 ಕಲಂ. 324,504,506 ಐ.ಪಿ.ಸಿ:-

     ದಿನಾಂಕ:24/02/2021 ರಂದು ರಾತ್ರಿ 9-30 ಗಂಟೆಗೆ ಎ.ಎಸ್.ಐ ಶ್ರೀ ಪ್ರಭಾಕರ್.ಎಂ. ರವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುವಾದ ಜಿ.ಹನುಮಂತರೆಡ್ಡಿ ಬಿನ್ ಲೇಟ್ ಗಂಗಾಧರರೆಡ್ಡಿ ರವರಿಂದ ಹೇಳಿಕೆಯನ್ನು ಪಡೆದು ತಂದು ಪಡಿಸಿದರ ಸಾರಾಂಶವೇನೆಂದರೆ ತಮಗೂ ಮತ್ತು ತಮ್ಮ ಗ್ರಾಮದ ಶ್ರೀನಿವಾಸರೆಡ್ಡಿ ಬಿನ್ ಲೇಟ್ ನರಸಿಂಹರೆಡ್ಡಿ ರವರಿಗೂ ಈ ಹಿಂದಿನಿಂದಲೂ ಜಮೀನಿನ ವಿಚಾರದಲ್ಲಿ ವಿವಾದಗಳಿರುತ್ತದೆ. ಹೀಗಿರುವಾಗ ದಿನಾಂಕ:23/02/2021 ರಂದು ಬೆಳಿಗ್ಗೆ 09-30 ಗಂಟೆಗೆ ತಾನು ತಮ್ಮ ಗ್ರಾಮದ ಕೂಲಿಯಾಳುಗಳಾದ ಗಂಗರೆಡ್ಡಿ ಮತ್ತು ಮಂಜುನಾಥರೆಡ್ಡಿ ರವರನ್ನು ಕರೆದುಕೊಂಡು ತಮ್ಮ ಬಾಬತ್ತು ತಮ್ಮ ಗ್ರಾಮದ ಸರ್ವೆ ನಂಬರ್ 5/4 ರ ಜಮೀನಿನ ಕೃಷಿ ಹೊಂಡದ ಬಳಿ ಪಾತಿ ಮಾಡುವ ಕೆಲಸಗಳನ್ನು ಮಾಡಿಸುತ್ತಿದ್ದಾಗ ಕೂಲಿಯಾಳುಗಳು ಕೆಲವು ಕಳೆಗಿಡಗಳನ್ನು ತಮ್ಮ ಗ್ರಾಮದ ಶ್ರೀನಿವಾಸರೆಡ್ಡಿ ರವರ ಜಮೀನಿನಲ್ಲಿ ಎಸೆದಿದ್ದು, ಆಗ ಅಲ್ಲೆ ಇದ್ದ ಶ್ರೀನಿವಾಸರೆಡ್ಡಿ ರವರು ಏಕಾಏಕಿ ಅಲ್ಲಿಗೆ ಬಂದು ಹಳೇ ದ್ವೇಷದಿಂದ ತನ್ನ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ತನ್ನ ಹೆಂಡತಿಯಾದ ಜಿ.ಶ್ಯಾಮಲಾ ಮತ್ತು ಮಗಳಾದ ಹೆಚ್.ನಳಿನ ರವರು ಅಲ್ಲಿಗೆ ಬಂದಿದ್ದು, ಆಗ ಶ್ರೀನಿವಾಸರೆಡ್ಡಿ ನಿನ್ನಿಂದ ನಾನು ಕೆಟ್ಟು ಹೋದೆ ಎಂದು ಹೇಳಿ ತನ್ನನ್ನು ಬೈದಾಗ ತಾನು ಕೂಲಿಯಾಳುಗಳಿಗೆ ಯಾಕೆ ಅವರ ಹೊಲದಲ್ಲಿ ಗಿಡಗಳನ್ನು ಹಾಕಿದ್ದು, ಎನ್ನುತ್ತಿದ್ದಾಗ ಶ್ರೀನಿವಾಸರೆಡ್ಡಿ ಒಂದು ಕೈಯಲ್ಲಿ ಸ್ಕ್ರೂ ಡ್ರೈವರ್ ಮತ್ತು ಒಂದು ಕೈಯಲ್ಲಿ ಕಟರ್ ಹಿಡಿದುಕೊಂಡು ಬಂದು ಅವರ ಬಳಿ ಏನು ಮಾತನಾಡುತ್ತೀಯಾ ನನ್ನ ಬಳಿ ಮಾತನಾಡಿ ಎಂದು ಹೇಳಿ ಈ ದಿನ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಹೇಳಿ ಬೆದರಿಕೆ ಹಾಕಿ ಒಂದು ಕೈಯಲ್ಲಿದ್ದ ಕಟರ್ ನಿಂದ ತನ್ನ  ಹೊಟ್ಟೆಯ ಎಡಭಾಗಕ್ಕೆ ತಿವಿದಿದ್ದು, ಆಗ ನಾನು ಕಿರುಚಿಕೊಂಡು ಕೆಳಗೆ ಬಿದ್ದು ಹೋದಾಗ ತನ್ನ ಹೆಂಡತಿ ಮತ್ತು ಮಗಳು ಬಿಡಿಸಲು ಬಂದಾಗ ಶ್ರೀನಿವಾಸರೆಡ್ಡಿ ಅಲ್ಲಿಂದ ಓಡಿ ಹೋಗಿರುತ್ತಾನೆ. ಆಗ ತನ್ನ ಹೆಂಡತಿ ಮತ್ತು ಮಗಳು ಹಾಗೂ ಕೂಲಿಯಾಳುಗಳು ತನ್ನನ್ನು ಉಪಚರಿಸಿ ಕಾರಿನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ 108 ಅಂಬ್ಯೂಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಬಂದು ನಂತರ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಹಳೇ ದ್ವೇಷದಿಂದ ತನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಸಾಯಿಸಿ ಬಿಡುವುದಾಗಿ ಬೆದರಿಕೆ ಹಾಕಿ ಕಟರ್ ನಿಂದ ತನ್ನ ಹೊಟ್ಟೆಯ ಎಡಭಾಗಕ್ಕೆ ತಿವಿದಿರುವ ಶ್ರೀನಿವಾಸರೆಡ್ಡಿ ಬಿನ್ ಲೇಟ್ ನರಸಿಂಹರೆಡ್ಡಿ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ಹೇಳಿಕೆ ದೂರು.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.49/2021 ಕಲಂ. 394  ಐ.ಪಿ.ಸಿ:-

     ದಿನಾಂಕ:24.02.2021 ರಂದು ಸಂಜೆ 5.00 ಗಂಟೆಗೆ ಪಿರ್ಯಾದಿದಾರರಾದ ಕೆ ರಾಮಾಂಜಿನೇಯ ಬಿನ್ ಕೃಷ್ಣಪ್ಪ, 48 ವರ್ಷ, ಗೊಲ್ಲರು, ಚಿಕ್ಕದಾಸೇನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಾನು ಈಗ್ಗೆ ಸುಮಾರು 7 ವರ್ಷಗಳಿಂದ ಚಿಂತಾಮಣಿ ನಗರದಲ್ಲಿ ಮನೆ ಲೀಜ್ ಗೆ ಹಾಕಿಕೊಂಡು ಸಂಸಾರದ ಸಮೇತವಾಗಿ ವಾಸವಾಗಿದ್ದು, ತಾನು ಪ್ರತಿ ದಿನ ದ್ವಿ ಚಕ್ರ ವಾಹನದಲ್ಲಿ ಚಿಂತಾಮಣಿಯಿಂದ ತಮ್ಮ ಗ್ರಾಮಕ್ಕೆ ಬಂದು ಜಿರಾಯ್ತಿ ಕೆಲಸ ಮಾಡಿಕೊಂಡು ವಾಪಸ್ಸು ಚಿಂತಾಮಣಿಗೆ ಹೋಗುತ್ತಿರುತ್ತೇನೆ. ಈಗ್ಗೆ 2 ವರ್ಷಗಳ ಹಿಂದೆ ಶಿಡ್ಲಘಟ್ಟ ತಾಲ್ಲೂಕು ಚಿಕ್ಕಪಾಪೇನಹಳ್ಳಿ ಗ್ರಾಮದ ವಾಸಿ ಮಂಜುನಾಥ ಬಿನ್ ಬೈಯ್ಯಣ್ಣ ಎಂಬುವನು ತಮ್ಮ ಮನೆಯ ಬಳಿ ಬಂದು ತನಗೆ ಹಣದ ಅವಶ್ಯಕತೆ ಇದೇ ತನ್ನ ಟ್ರಾಕ್ಟರ್ ದಾಖಲಾತಿಗಳನ್ನು ಇಟ್ಟುಕೊಂಡು ಹಣ ಕೊಡು, ಟ್ರಾಕ್ಟರ್ ಮಾರಾಟ ಮಾಡಿದರೆ ನಿನಗೆ ಕೊಡುತ್ತೇನೆಂದು ಹೇಳಿದಾಗ ತಾನು ಟ್ರಾಕ್ಟರ್ ನ ದಾಖಲಾತಿಗಳನ್ನು ಇಟ್ಟುಕೊಂಡು ಮಂಜುನಾಥ ರವರಿಗೆ 2.35.000-00 ರೂ ಹಣವನ್ನು ಕೊಟ್ಟಿರುತ್ತೇನೆ. ಇದಾದ 2 ತಿಂಗಳ ನಂತರ ಮಂಜುನಾಥ ರವರು ತನ್ನ ಟ್ರಾಕ್ಟರ್ ಅನ್ನು ಬೇರೆಯವರಿಗೆ ಮಾರಾಟ ಮಾಡಿದ್ದು, ಆಗ ತಾನು ಮಂಜುನಾಥ ರವರಿಗೆ ತನ್ನ ಹಣವನ್ನು ಕೊಡುವಂತೆ ಕೇಳಿದಾಗ ಆಗ ಆತನು ತನಗೆ ಒಂದು ಲಕ್ಷ ರೂ ಹಣವನ್ನು ಕೊಟ್ಟು ಉಳಿದ ಹಣವನ್ನು ಕೊಡುತ್ತೇನೆಂದು ಹೇಳಿರುತ್ತಾನೆ. ಇದಾದ ಸ್ವಲ್ಪ ದಿನಗಳ ಬಳಿಕ ಮಂಜುನಾಥ ರವರು ತನ್ನ ಗ್ರಾಮದ ವಾಸಿ ವೆಂಕಟರಾಯಪ್ಪ ರವರ ಜೊತೆಯಲ್ಲಿ ತನ್ನ ಬಳಿ ಬಂದು ತಾನು ಟ್ರಾಕ್ಟರ್ ಮಾರಿರುವವರಿಗೆ ದಾಖಲಾತಿಗಳನ್ನು ಕೊಟ್ಟರೆ, ಅವರು ದುಡ್ಡು ಕೊಡುತ್ತಾರೆ, ತಾನು ನಿನ್ನ ಹಣವನ್ನು ಇದೇ ದಿನ ಕೊಡುತ್ತೇನೆ, ಟ್ರಾಕ್ಟರ್ ನ ದಾಖಲಾತಿಗಳನ್ನು ಕೊಡುವಂತೆ ವೆಂಕಟರಾಯಪ್ಪ ರವರ ಮದ್ಯಸ್ಥಿಕೆಯಲ್ಲಿ ಕೇಳಿದಾಗ ತಾನು ಟ್ರಾಕ್ಟರ್ ನ ದಾಖಲಾತಿಗಳನ್ನು ವೆಂಕಟರಾಯಪ್ಪ ರವರಿಗೆ ಕೊಟ್ಟಿರುತ್ತೇನೆ. ಆದರೆ ಆ ದಿನ ಮಂಜುನಾಥ ರವರು ತನಗೆ ಬಾಕಿ ಇರುವ ಹಣ ಕೊಟ್ಟಿರುವುದಿಲ್ಲ. ಆನಂತರ ತಾನು 2-3 ಬಾರಿ ಮಂಜುನಾಥ ಮತ್ತು ವೆಂಕಟರಾಯಪ್ಪ ರವರಿಗೆ ತನ್ನ ಹಣದ ಬಗ್ಗೆ ಕೇಳಿದಾಗ ಅವರು ಸಬೂಬುಗಳನ್ನು ಹೇಳಿಕೊಂಡು ಬಂದಿರುತ್ತಾರೆ.     ದಿನಾಂಕ 22/02/2021 ರಂದು ಬೆಳಿಗ್ಗೆ ತಾನು ಎಂದಿನಂತೆ ತನ್ನ ದ್ವಿ ಚಕ್ರ ವಾಹನದಲ್ಲಿ ಚಿಂತಾಮಣಿಯಿಂದ ತಮ್ಮ ಸ್ವಂತ ಗ್ರಾಮಕ್ಕೆ ಬಂದು ತೋಟದ ಎಲ್ಲಾ ಕೆಲಸಗಳನ್ನು ನೋಡಿಕೊಂಡು, ಚಿಂತಾಮಣಿಯಲ್ಲಿ ತಾವು ವಾಸವಾಗಿರುವ ಮನೆಯ ಲೀಜ್ ಅವಧಿಯು ಮುಕ್ತಾಯವಾಗಿದ್ದು, ಲೀಜ್ ಅವಧಿಯನ್ನು ಮುಂದುವರೆಸಲು ಮನೆಯ ಮಾಲೀಕರಿಗೆ ಒಂದು ಲಕ್ಷ ರೂ ಹಣ ಕೊಡ ಬೇಕಾಗಿದ್ದು ಹಾಗು ತನ್ನ ಮಕ್ಕಳ ಸ್ಕೂಲ್ ಪೀಜ್ ಗಾಗಿ 50 ಸಾವಿರ ರೂ ಬೇಕಾಗಿದ್ದ ಕಾರಣ ತಾನು ಚಿಕ್ಕದಾಸೇನಹಳ್ಳಿ ಗ್ರಾಮದ ತಮ್ಮ ಮನೆಯಲ್ಲಿಟ್ಟಿದ್ದ 150000-00 ರೂ ಹಣವನ್ನು ತೆಗೆದುಕೊಂಡು ತನ್ನ ಜೇಬಿನಲ್ಲಿಟ್ಟುಕೊಂಡು ತನ್ನ ಬಾಬತ್ತು ಕೆಎ-40-ಇಎ-9435 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ರಾತ್ರಿ ಸುಮಾರು 8-15 ಗಂಟೆಗೆ ತಮ್ಮ ಗ್ರಾಮದಿಂದ ಚಿಂತಾಮಣಿ ಕಡೆಗೆ ಹೊರಟಿದ್ದು, ತಮ್ಮ ಗ್ರಾಮದಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿರುವ ದೇವರಾಜ ರವರ ಜಮೀನಿನ ಬಳಿ ಇರುವ ಹುಣಸೇಮರದ ಬಳಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಆ ಸಮಯದಲ್ಲಿ ಮಂಜುನಾಥ ಯಾರೋ 3 ಜನ ಆಸಾಮಿಗಳೊಂದಿಗೆ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದು, ಮಂಜುನಾಥ ರವರು ತನ್ನನ್ನು ಕಂಡು ಏಕಾಏಕಿ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಎಡ ಕೈಗೆ ಹೊಡೆದ ಪರಿಣಾಮ ತಾನು ದ್ವಿ ಚಕ್ರ ವಾಹನದ ಸಮೇತವಾಗಿ ಕೆಳಗೆ ಬಿದ್ದು ಹೋಗಿ ತನ್ನ ತಲೆಗೆ, ಸೊಂಟದ ಬಳಿ, ಬಲ ಕಾಲಿಗೆ ಗಾಯವಾಗಿದ್ದು, ಆದ ಮೇಲ್ಕಂಡವರು ತನ್ನನ್ನು ಹೊಡೆದು ರಸ್ತೆಯಿಂದ 50 ಅಡಿ ಜಮೀನೊಳಗೆ ಕರೆದುಕೊಂಡು ಹೋಗಿ ತನ್ನ ಜೇಬಿನಲ್ಲಿದ್ದ ಹಣವನ್ನು ಕಿತ್ತುಕೊಂಡಿರುತ್ತಾರೆ. ತಾನು ಪ್ರಜ್ಞಾಹೀನನಾಗಿ ಬಿದ್ದು ಹೋಗಿದ್ದು, ದಿನಾಂಕ 23/02/2021 ರಂದು ಬೆಳಗಿನ ಜಾವ ಸುಮಾರು 4-00 ಗಂಟೆ ಸಮಯದಲ್ಲಿ ತನಗೆ ಜ್ಞಾಪನ ಬಂದಿದ್ದು, ಆಗ ತಾನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿದ್ದು, ಆಸ್ಪತ್ರೆಯಲ್ಲಿದ್ದ ತನ್ನ ತಮ್ಮ ನಾರಾಯಣಸ್ವಾಮಿ ರವರನ್ನು ವಿಚಾರ ಮಾಡಲಾಗಿ ತಾನು ಪ್ರಜ್ಞೆತಪ್ಪಿ ಬಿದ್ದು ಹೋಗಿದ್ದ ಸ್ಥಳದಲ್ಲಿ ತನ್ನನ್ನು ನೋಡಿದ ದೊಡ್ಡದಾಸೇನಹಳ್ಳಿ ಗ್ರಾಮದ ವಾಸಿ ವಿಜಯ್ ಕುಮಾರ್ ಮತ್ತು ಮುದ್ದುಕೃಷ್ಣ ರವರು ತಮ್ಮ ಗ್ರಾಮದ ವಾಸಿ ಮಂಜುನಾಥ ರವರಿಗೆ ತಿಳಿಸಿದ್ದು, ಮಂಜುನಾಥ ರವರು ತನಗೆ ಮಾಹಿತಿ ನೀಡಿದ ಕೂಡಲೇ ತಾನು, ತಮ್ಮ ಅಣ್ಣ ನರಸಿಂಹಗೌಡ ಹಾಗು ತಮ್ಮ ಗ್ರಾಮದ ವಾಸಿ ನರಸಿಂಹಗೌಡ, ಕದಿರಿನಾಯಕನಹಳ್ಳಿ ಗ್ರಾಮದ ನರಸಿಂಹಮೂರ್ತಿ ರವರೊಂದಿಗೆ ಕಾರಿನಲ್ಲಿ ಸ್ಥಳಕ್ಕೆ ಬಂದು ತನ್ನನ್ನು ಕರೆದುಕೊಂಡು ಬಂದು ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿ ವಿಷಯ ತಿಳಿಸಿರುತ್ತಾನೆ. ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಸಿಕೊಂಡು ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡ ಆಸಾಮಿಗಳ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 25-02-2021 04:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080