Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.311/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 23/09/2021 ರಂದು ಮದ್ಯಾಹ್ನ 2-00 ಗಂಟೆಗೆ ಶ್ರೀ ನಾರಾಯಣರೆಡ್ಡಿ. ಸಿಹೆಚ್ ಸಿ 233 ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತುಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ  ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ: 23/09/2021 ರಂದು ದಿನಾಂಕ; 09-09-2021 ರಂದು  ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-130 ಬಾಬಾವಲಿ ರವರು ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣಾ ಸರಹದ್ದಿನ ಗೂಳೂರು, ಮಾರ್ಗಾನಕುಂಟೆ, ಕೊತ್ತಕೋಟೆ ಕಡೆ ಗಸ್ತು ಮಾಡಿಕೊಂಡು ಕೊಲಿಮಿಪಲ್ಲಿ ಗ್ರಾಮದಲ್ಲಿ  ಗಸ್ತು ಮಾಡುತ್ತಿದ್ದಾಗ ಯಾರೋ ಅಸಾಮಿಯು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ನಾವುಗಳು ಹತ್ತಿರ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಓಡಿಹೋಗುತ್ತಿದ್ದವನನ್ನು ಹಿಡಿದುಕೊಂಡಿದ್ದು, ನಂತರ ಅಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಪಂಚನಾಮೆಗೆ ಸಹಕರಿಸುವಂತೆ ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ  ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ಅಶ್ವತ್ಥಪ್ಪ ಬಿನ್ ಲೇಟ್ ವೆಂಕಟಪ್ಪ, 48 ವರ್ಷ, ನಾಯಕರು ಜನಾಂಗ, ಜಿರಾಯ್ತಿ, ವಾಸ: ಕೊಲಿಮಿಪಲ್ಲಿ ಗ್ರಾಮ, ಗೂಳೂರು ಹೋಬಳಿ, ಕೊತ್ತಕೋಟೆ ಪಂಚಾಯ್ತಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿರುತ್ತಾರೆ.  ನಂತರ ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿದ್ದ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಬೆಳಗ್ಗೆ 11.45 ಗಂಟೆಯಿಂದ 12.30 ಗಂಟೆಯವರೆಗೆ  ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 2.00 ಗಂಟೆಗೆ ಠಾಣೆಯಲ್ಲಿ ಹಾಜರು ಪಡಿಸುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಎನ್ ಸಿಆರ್ ನಂ-281/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ.  ದಿ:23-09-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.313/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ 24/09/2021 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿದಾರರಾದ ನಿಡುಮಾಮಿಡಿ ಬಿನ್ ರಾಮಪ್ಪ 43 ವರ್ಷ, ಬೋವಿ ಜನಾಂಗ, ಗ್ಯಾಸ್ ಡಿಲಿವರಿ ಕೆಲಸ, ನಾರೇಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:24/09/2021 ರಂದು ಬೆಳಗ್ಗೆ ಸುಮಾರು 6:30 ಗಂಟೆ ಸಮಯದಲ್ಲಿ ನಾನು ಕೆಲಸ ಪ್ರಯುಕ್ತ ಎನ್ ಹೆಚ್ 44 ರಸ್ತೆಯಲ್ಲಿ, ಎಸ್ ಆರ್ ಪೆಟ್ರೋಲ್ ಬಂಕ್ ಮುಂದೆ ಹೋಗುತ್ತಿದ್ದಾಗ ರಸ್ತೆಯ ಎಡಭಾಗದಲ್ಲಿ ಯಾವುದೂ ಅಪರಿಚಿತ ಸುಮಾರು 30 ವರ್ಷ ವಯಸ್ಸಿನ ವ್ಯಕ್ತಿಗೆ ಅಪಘಾತವಾಗಿ ಬಿದ್ದಿದ್ದು, ನಾನು ಸ್ಥಳಕ್ಕೆ ಹೋಗಿ ನೋಡಲಾಗಿ,  ತಲೆಗೆ, ಕೈಗಳಿಗೆ, ಕಾಲುಗಳಿಗೆ ತೀವ್ರ ಸ್ವರೂಪದ ಜಜ್ಜಿರುವಂತಹ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ,  ಈ ದಿನ ಬೆಳಗ್ಗೆ  ಸುಮಾರು 5:45 ಗಂಟೆ ಸಮಯದಲ್ಲಿ ಅಪರಿಚಿತ ವ್ಯಕ್ತಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೆಂಗಳೂರು ಕಡೆಯಿಂದ ಯಾವುದೂ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆಸಿ, ಸ್ಥಳದಲ್ಲಿ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿರುವುದಾಗಿರುತ್ತೆ, ಮೃತ ದೇಹವನ್ನು ಯಾವುದೂ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಅಸ್ಪತ್ರೆಯ ಶವಗಾರಕ್ಕೆ ಕಳುಹಿಸಿಕೊಟ್ಟಿರುತ್ತೆ.  ಯಾವುದೂ ಅಪರಿಚತ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಪಘಾತವನ್ನುಂಟು ಮಾಡಿ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿದೇ ಹೊರಟು ಹೋಗಿರುವ ವಾಹನ ಮತ್ತು ಅದರ ಚಾಲಕನನ್ನು ಮತ್ತು ಅಪಘಾತದಲ್ಲಿ ಮೃತಪಟ್ಟಿರುವ ಅಪರಿಚಿತ ಮೃತ ವ್ಯಕ್ತಿಯ ಹೆಸರು ವಿಳಾಸವನ್ನು ಪತ್ತೆ ಮಾಡಲು, ಹಾಗೂ ಅಪರಿಚಿತ ವಾಹನ ಮತ್ತು ಅದರ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.135/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ 24/09/2021 ರಂದು ಫಿರ್ಯಾಧಿದಾರರಾದ ಕವಿತಾ ಕೋಂ ಶಿವಶಂಕರ 28 ವರ್ಷ ವಕ್ಕಲಿಗರು ವಾಸ ಗುಡಮಾರ್ಲಹಳ್ಳಿ ಗ್ರಾಮ ಮುರುಗಮಲ್ಲಾ ಹೋಬಳಿ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಗುಡಮಾರ್ಲಹಳ್ಳಿ ಗ್ರಾಮದ ನನ್ನ ವಾಸದ ಮನೆಯಲ್ಲಿ ಸಣ್ಣ ಹೋಟೆಲ್ ಇಟ್ಟುಕೊಂಡು ವ್ಯಾಪಾರದಿಂದ ಜೀವನ ಮಾಡುತ್ತಾ ನನ್ನ ಗಂಡ ಶಿವಶಂಕರ್ ಮತ್ತು ನಾನು ವಾಸ ಇರುತ್ತೇವೆ ಹಾಗೂ ನನಗೆ ಭುವನ 10 ವರ್ಷದ ಮಗಳು,ಮನೋಜ್ ಕುಮಾರ್ 8 ವರ್ಷದ ಮಗ ಒಟ್ಟು ಇಬ್ಬರು ಮಕ್ಕಳಿರುತ್ತಾರೆ ಈಗ್ಗೆ ಸುಮಾರು 1 ತಿಂಗಳ ಹಿಂದೆ ನನ್ನ ಗಂಡ ಶಿವಶಂಕರ ರವರು ಅಂಗಡಿ ಸರಕುಗಳನ್ನು ತರಲು ಚಿಂತಾಮಣಿ ನಗರಕ್ಕೆ ಹೋಗಿ ಬರುತ್ತೇನೆಂದು ಹೇಳಿ ಚಿಂತಾಮಣಿ ನಗರಕ್ಕೆ ಹೋಗಿ ನಂತರ ಊರಿಗೆ ವಾಪಸ್ಸು ಬರದೇ ಇರುತ್ತಾರೆ ಹಾಗೂ ನಾನು ನನ್ನ ಗಂಡ ಶಿವಶಂಕರ ರವರ ಮೊಬೈಲ್ ಸಂಖೈ 8296185145 ಕ್ಕೆ ನನ್ನ ಮೊಬೈಲ್ ಪೋನ್ ನಿಂದ ಪೋನ್ ಮಾಡಿದರೆ ನನ್ನ ಪೋನ್ ಸ್ವೀಕರಿಸುತ್ತಿಲ್ಲಾ ಹಾಗೂ ಬೇರೆಯವರು ಪೋನ್ ಮಾಡಿದರೆ ಪೋನ್ ಸ್ವೀಕರಿಸುತ್ತಾ ಇರುತ್ತಾರೆ ಹಾಗೂ ನನ್ನ ಗಂಡ ಶಿವಶಂಕರ ಇರುವ ಸ್ಥಳವನ್ನು ಯಾರಿಗೂ ತಿಳಿಸುತ್ತಿಲ್ಲಾ ಹಾಗೂ ನನ್ನ ಗಂಡ ನನ್ನನ್ನು ಮಕ್ಕಳನ್ನು ಬಿಟ್ಟು ಏಕೆ ಹೋಗಿದ್ದಾನೆ ಎಂದು ನನಗೆ ತಿಳಿಯುತ್ತಿಲ್ಲಾ ಹಾಗೂ 1 ತಿಂಗಳು ಕಳೆದರೂ ಮನೆಗೆ ಬಂದಿಲ್ಲಾ ನಾನು ಒಂದು ತಿಂಗಳಿನಿಂದ ನಮ್ಮ ನೆಂಟರ ಸಂಬಂಧಿಕರ ಎಲ್ಲಾ ಗ್ರಾಮಗಳಿಗೆ ಹೋಗಿ ಹುಡುಕಾಡಿದರೂ ಪತ್ತೆಯಾಗದೇ ಕಾಣೆಯಾಗಿರುತ್ತಾರೆ ನನ್ನ ಗಂಡ ಶಿವಶಂಕರ್ ರವರ ಚಹರೆ ಎತ್ತರ 5.4 ಅಡಿ,ಕೋಲುಮುಖ ಕನ್ನಡ ತೆಲುಗು ಹಿಂದಿ ಭಾಷೆ ಮಾತನಾಡುತ್ತಾರೆ ಸಾಧಾರಣ ಬಿಳಿ ಬಣ್ಣ ಮನೆಯಿಂದ ಹೋಗುವಾಗ ಹಸಿರು ಶರ್ಟ್ ಪ್ಯಾಂಟ್ ಧರಿಸಿಕೊಂಡು ಹೋಗಿರುತ್ತಾರೆ ಆದಾಗಿ ತಾವಂದಿರೂ ದಯ ಮಾಡಿ ನನ್ನ ಗಂಡ ಶಿವಶಂಕರ ರವರನ್ನು ಪತ್ತೆ ಹಚ್ಚಿಕೊಡಬೇಕೆಂದು ತಮ್ಮಲ್ಲಿ ಪ್ರಾರ್ಧಿಸಿಕೊಳ್ಳುತ್ತೇನೆ ಹಾಗೂ ನನ್ನ ಗಂಡನನ್ನು ಹುಡುಕಾಡುವುದರಿಂದ ದೂರನ್ನು ಕೊಡಲು ವಿಳಂಬವಾಗಿ ಈ ದಿನ ದಿನಾಂಕ 24/09/2021 ರಂದು ತಡವಾಗಿ ದೂರನ್ನು ನೀಡುತ್ತಿದ್ದೇನೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.165/2021 ಕಲಂ. 379,420 ಐ.ಪಿ.ಸಿ:-

     ಮೇಲ್ಕಂಡ  ವಿಳಾಸಿಯಾದ ನಾನು ತಮ್ಮಲ್ಲಿ ಮನವಿ ಮಾಡುವುದೇನೆಂದರೆ, ದಿನಾಂಕ:25-09-2021 ರಂದು ಬೆಳಿಗ್ಗೆ ನನ್ನ ತಾಯಿಯಾದ  90 ವರ್ಷ ವಯಸ್ಸಿನ ಶ್ರೀಮತಿ. ಚಿನ್ನಮ್ಮ ಕೋಂ ಲೇಟ್ ಚಿಕ್ಕನಾರಾಯಣಪ್ಪ ಮತ್ತು ನನ್ನ ಹೆಂಡತಿ ಶ್ರೀಮತಿ. ಸುನಂದಮ್ಮರವರು ಮನೆಯಲ್ಲಿ ಇದ್ದಾಗ ಬೆಳಿಗ್ಗೆ ಸುಮಾರು 11.30 ಗಂಟೆ ಸಮಯದಲ್ಲಿ ಸುಮಾರು 35 ರಿಂದ 38 ವರ್ಷ ವಯಸ್ಸಿನ ಇಬ್ಬರು ಅಪರಿಚಿತ ವ್ಯಕ್ತಿಗಳು ಹೊಂಡಾ ದ್ವಿಚಕ್ರವಾಹನದಲ್ಲಿ ಗುಂಡ್ಲಗುರ್ಕಿ ಗ್ರಾಮಕ್ಕೆ ಬಂದಿದ್ದು ಸದರಿಯವರು ನಮ್ಮಮನೆಗೆ ಬಂದು ದೇವರ ಮನೆಗೆ ವಿಗ್ರಹಗಳು ಹಾಗು ಹಳೇ ಬಂಗಾರದ ವಡವೆಗಳನ್ನು ಪಾಲಿಷ್ ಮಾಡಿಕೊಡುವುದಾಗಿ ಹೇಳಿ ಬಂದಿರುತ್ತಾರೆ. ಆಗ ನನ್ನ ತಾಯಿಯವರಾದ ಶ್ರೀಮತಿ. ಚಿನ್ನಮ್ಮ ರವರು ಸುಮಾರು ಬೆಳ್ಳಿಯ ಎರಡು ವಿಗ್ರಹಗಳನ್ನು ಪಾಲಿಷ್ ಮಾಡಿಕೊಟ್ಟು ನಂತರ ಆಸಾಮಿಗಳು ಬಂಗಾರದ ವಡವೆಗಳನ್ನು ಕೊಡಿ ಅವುಗಳನ್ನು ಪಾಲಿಷ್ ಮಾಡಿಕೊಡುವುದಾಗಿ ಹೇಳಿದ್ದು ಆಗ ನನ್ನ ತಾಯಿಯವರು ಎಂಟು ಲಕ್ಷ ರೂಪಾಯಿ ಬೆಲೆ ಬಾಳುವ  ಸುಮಾರು 150 ಗ್ರಾಂ ತೂಕದ 04 ಬಂಗಾರದ ಕೈ ಬಳೆಗಳು, ಒಂದು ಮಾಂಗಲ್ಯ ಸರ, ಎರಡು ಎಳೆಯ ಬಂಗಾರದ ಸರವನ್ನು ಕೊಟ್ಟಿದ್ದು ಆಗ  ಆಸಾಮಿಗಳು  ಕುಡಿಯಲು ನೀರು ಕೊಡುವಂತೆ ನನ್ನ ಹೆಂಡತಿ ಶ್ರೀಮತಿ. ಸುನಂದಮ್ಮ ರವರು ಮನೆಯ ಒಳಗೆ ಹೋಗಿ  ನೀರು ತರುವಷ್ಟರಲ್ಲಿ ಆಸಾಮಿಗಳು  ಪಾಲಿಷ್ ಮಾಡಿಕೊಡುವ ನೆಪದಲ್ಲಿ  ಬಂಗಾರದ ವಡವೆಗಳನ್ನು ತೆಗೆದುಕೊಂಡು ಅಲ್ಲಿಂದ  ಅವರು ಬಂದಿದ್ದ ಬೈಕಿನಲ್ಲಿ ಪರಾರಿಯಾಗಿರುತ್ತಾರೆ. ನನ್ನ ಹೆಂಡತಿ ಶ್ರೀಮತಿ. ಸುನಂದಮ್ಮರವರು  ಕೂಗಾಡಿಕೊಂಡಾಗ  ನಮ್ಮ ಗ್ರಾಮದ ರಮೇಶ ರವರು ಅವರನ್ನು ಹಿಂಬಾಲಿಸಿದ್ದು ಆಸಾಮಿಗಳು ಪರಾರಿಯಾಗಿರುತ್ತಾರೆ. ನಾನು ಚಿಕ್ಕಬಳ್ಳಾಪುರದಲ್ಲಿ ಇದ್ದಾಗ ವಿಷಯ ತಿಳಿದು ಗ್ರಾಮಕ್ಕೆ ಹೋಗಿ ವಿಚಾರ ಮಾಡಿರುತ್ತೇನೆ.  ಈ ಮೇಲ್ಕಂಡ  ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿ ಕೋರಿದೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.420/2021 ಕಲಂ. 324,341,504,506 ಐ.ಪಿ.ಸಿ:-

     ದಿನಾಂಕ: 23/09/2021 ರಂದು ಮದ್ಯಾಹ್ನ 1.30 ಗಂಟೆಗೆ ಪಿರ್ಯಾಧಿದಾರರಾದ ಕೇಶವ ಬಿನ್ ವೆಕಟರಾಯಪ್ಪ, 38 ವರ್ಷ, ಅಡುಗೆ ಬಟ್ಟರ ಕೆಲಸ, ಚಿಕ್ಕಗುಟ್ಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಚಿಕ್ಕಗುಟ್ಟಿಹಳ್ಳಿ ಗ್ರಾಮದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ತನ್ನ ಹೆಂಡತಿ ನಾಗರತ್ನ ಈಗ್ಗೆ ಒಂದು ತಿಂಗಳ ಹಿಂದೆ ವಿಷ ಕುಡಿದು ಮೃತಪಟ್ಟಿರುತ್ತಾಳೆ. ತನ್ನ ಹೆಂಡತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಹುಲುಗುಮನಹಳ್ಳಿ ಗ್ರಾಮದ ಶ್ರೀನಿವಾಸ ಮತ್ತು ಇತರರು ಕಾರಣರಾಗಿದ್ದು, ಅವರ ಪ್ರಚೋದನೆಯಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ, ಕಿರುಕುಳ ಕೊಟ್ಟಿದ್ದರಿಂದ ತನ್ನ ಹೆಂಡತಿ ನಾಗರತ್ನ ವಿಷ ಕುಡಿದಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 27/08/2021 ರಂದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆದಲ್ಲಿ ಮೃತಪಟ್ಟಿದ್ದು, ಈ ಬಗ್ಗೆ ಹುಲುಗುಮ್ಮನಹಳ್ಳಿ ಶ್ರೀನಿವಾಸ ಹಾಗೂ ಇತರರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಕೋರಿ ಚಿಂತಾಮಣಿ ಗ್ರಾಮಾಂತರ ಠಾಣೆಗೆ ತಮ್ಮ ಅತ್ತೆ ಸಂಪಂಗಮ್ಮ ದೂರು ಕೊಟ್ಟಿರುತ್ತಾರೆ. ಈ ಬಗ್ಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ. 386/2021, ಕಲಂ 306, 149 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 22/09/2021 ರಂದು ರಾತ್ರಿ 8.15 ಗಂಟೆ ಸಮಯದಲ್ಲಿ ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ಮೋರಿ ಬಳಿಯಲ್ಲಿ ತಾನು ಊಟ ಮಾಡಿ ಓಡಾಡುತ್ತಿರುವಾಗ ಮೇಲ್ಕಂಡ ಪ್ರಕರಣದ ಆರೋಪಿ ಶ್ರೀನಿವಾಸ ಬಿನ್ ಕೃಷ್ಣಪ್ಪ ರವರು ಯಾವುದೋ ಒಂದು ಬೈಕ್ನಲ್ಲಿ ಬಂದು ತನ್ನನ್ನು ಕಂಡು ಬೈಕ್ನ್ನು ರಸ್ತೆ ಅಂಚಿನಲ್ಲಿ ನಿಲ್ಲಿಸಿ ತನ್ನ ಬಳಿಗೆ ಬಂದು ತನ್ನನ್ನು ತಡೆದು ನಿಲ್ಲಿಸಿ ಏನಲೇ ಸೂಳೆ ಮಗನೇ, ನಿನ್ನ ಅಮ್ಮನ ಕ್ಯಾಯ, ನಿನ್ನ ಅಕ್ಕನ ಕ್ಯಾಯ, ಲೋಪರ್ ನನ್ನ ಮಗನೇ ನನ್ನ ಮೇಲೆ ನೀವು ನಿಮ್ಮ ಅತ್ತೆ ಕಡೆಯಿಂದ ಕಂಪ್ಲೇಂಟ್ ಕೊಡಿಸುತ್ತಿಯಾ ಎಂದು ಅಲ್ಲಿಯೇ ಬಿದಿದ್ದ ಒಂದು ದೊಣ್ಣೆಯನ್ನು ತೆಗೆದುಕೊಂಡು ತನ್ನ ಕೈಗಳಿಗೆ ನೋವಾಗುವಂತೆ ಹೊಡೆದು, ನಿನ್ನ ಹೆಂಡತಿಯನ್ನು ಇಟ್ಟುಕೊಂಡು, ಅವಳನ್ನು ಮಜಾ ಮಾಡಿ ಅವಳೊಂದಿಗೆ ಪೋನಿನಲ್ಲಿ ಮಾತನಾಡಿ ಅವಳ ತಲೆ ಕೆಡೆಸಿ ಅವಳನ್ನು ನಿಮ್ಮ ಮೇಲೆ ಎತ್ತಿಕಟ್ಟಿ ನಿಮ್ಮ ಸಂಸಾರದಲ್ಲಿ ಜಗಳ ಬರುವಂತೆ ಮಾಡಿ ಅವಳನ್ನು ಬೇರೆ ಜಾಗದಲ್ಲಿ ಮನೆ ಮಾಡಿ ಇಡಬೇಕೆಂದು ಪ್ಲಾನ್ ಮಾಡಿದ್ದೆ. ಅವಳ ಬಟ್ಟೆ ಸಹ ಬುಡುಗಮ್ಮ ಮನೆಯಲ್ಲಿ ಇರಿಸಿದ್ದೆ. ಅಷ್ಟರ ಒಳಗೆ ಅವಳು ವಿಷ ಕುಡಿದಿದ್ದಾಳೆ. ಅವಳು ವಿಷ ಕುಡಿಯುವ ಸಮಯದಲ್ಲೂ ಸಹ ನಾನು ಪೋನ್ ಕಾಂಟ್ಯಾಂಕ್ಟ್ ನಲ್ಲಿ ಇದ್ದೆ. ಪೊಲೀಸರು ಇಲ್ಲಿಯರವರೆಗೂ ನನ್ನ ಹಿಡಿಯಕ್ಕೆ ಆಗಲಿಲ್ಲ. ಈಗ ನನಗೆ ಬೇಲ್ ಸಿಕ್ಕಿದೆ. ನನ್ನ ಮೇಲೆ ಕಂಪ್ಲೇಂಟ್ ಕೊಟ್ಟು ನೀವು ಮತ್ತು ಪೊಲೀಸರು ಏನ್ ಕಿತ್ತುಕೊಂಡಿರಿ,, ಇನ್ನು ಒಂದೇ ಕೇಸು ಆಗುವುದು ನಿನ್ನ ಮತ್ತು ನಿನ್ನ ಅತ್ತೆಯನ್ನು ನಿನ್ನ ಹೆಂಡತಿ ಹೋಗಿರುವ ಜಾಗಕ್ಕೆ ಕಳುಹಿಸದೆ ಇದ್ದಲ್ಲಿ ನನಗೆ ನಿದ್ದೆ ಬರುವುದಿಲ್ಲ, ಆದ್ದರಿಂದ ಆದಷ್ಟು ಬೇಗ ನೀನು ನಿಮ್ಮ ಆತ್ತೆ ಹೋಗಿ ಕಂಪ್ಲೇಂಟ್ ವಾಪಸ್ ತೆಗೆದುಕೋ. ಇಲ್ಲ ಅಂದರೆ ಮಗನೆ ನಿನ್ನ ಹೆಂಡತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಂತೆ ನೀನು ಮತ್ತು ನಿನ್ನ ಅತ್ತೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕು ಆ ರೀತಿ ಮಡುತ್ತೇನೆ. ನಾನು ಮತ್ತು ನಿನ್ನ ಹೆಂಡತಿ ನಾಗರತ್ನ ಮಾತನಾಡಿರುವ ಸಂಬಾಷಣೆ ಪೋನ್ ನ ಮೆಮೋರಿ ಕಾರ್ಡ್ನಲ್ಲಿ ರೆಕಾರ್ಡ್ ಆಗಿದೆಯಂತೆ, ಅದು ನನಗೆ ಗೊತ್ತಾಗಿದೆ. ಅದನ್ನು ನನಗೆ ಕೊಟ್ಟು ಬಿಡು ನಾನು ಅಡಮಾನ ಇಟ್ಟಿರುವ ನಿನ್ನ ಹೆಂಡತಿ ಬೈಕ್ ಮತ್ತು ನಿನ್ನ ಹೆಂಡತಿಯ ಒಡವೆ ಹಾಗೂ ನಿನ್ನ ಹೆಂಡತಿ ಸಂಘದಿಂದ ಎತ್ತಿ ನನಗೆ ಕೊಟ್ಟಿರುವ ಹತ್ತು ಸಾವಿರ ಹಣ ವಾಪಸ್ಸು ಕೊಡುತ್ತೇನೆ. ನಿನ್ನ ಹೆಂಡತಿ ದಿನಾಂಕ: 27/08/2021 ರಂದು ನಿಮ್ಮ ಮನೆಗೆ ಬಂದಿರುವ ಸ್ಕೂಟಿ (ಬೈಕ್) ಗಾಡಿಯನ್ನು ನನಗೆ ಕೊಡು, ಇಲ್ಲವಾದಲ್ಲಿ ನಿನ್ನ ಮತ್ತು ನಿಮ್ಮ ಅತ್ತೆ, ಮಾವನನ್ನು ಸಾಯಿಸಿ ಗುರುತು ಸಿಗದಂತೆ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇನೆ. ನನ್ನ ಸಹವಾಸ ಸರಿಯಲ್ಲ. ನನಗೆ ಎದುರಾದರೆ ನಾನು ಯಾರನ್ನು ಜೀವ ಸಹಿತ ಬಿಡುವುದಿಲ್ಲ. ಒಳ್ಳೆಯ ಮಾತನಿಂದ ಕೇಸು ವಾಪಸ್ಸು ತೆಗೆದುಕೊ ನಾನು ಕೇಳಿರುವುದನ್ನು ಕೊಟ್ಟು ಬಿಡು, ನಿನಗೂ ಒಳ್ಳೆಯಾಗುತ್ತೆ. ನನಗೂ ಒಳ್ಳೆಯದಾಗುತ್ತೆ ಎಂದು ಜೀವ ಬೆದರಿಕ ಹಾಕಿರುತ್ತಾನೆ. ಆದ್ದರಿಂದ ನನಗೆ ಮತ್ತು ನಮ್ಮ ಅತ್ತೆ ಸಂಪಂಗೆಮ್ಮ ಮತ್ತು ನಮ್ಮ ಮಾವ ನಾರಾಯಸ್ವಾಮಿ ರವರನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈದು, ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಬೆದರಿಕೆ ಹಾಕಿರುವ ಹುಲುಗುಮ್ಮನಹಳ್ಳಿ ಶ್ರೀನಿವಾಸನ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

6. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.135/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:23-09-2021 ರಂದು ಬೆಳಗ್ಗೆ 11-00 ಗಂಟೆಯಲ್ಲಿ ನಾನು ಮತ್ತು ಠಾಣೆಯ ಸಿಬ್ಬಂದಿಯಾದ ಸಿ.ಪಿ.ಸಿ 91 ಮಂಜುನಾಥ ಮತ್ತು ಸಿ.ಹೆಚ್.ಸಿ 186 ನರಸಿಂಹಯ್ಯ ರವರೊಂದಿಗೆ  ದಿಬ್ಬೂರಹಳ್ಳಿ ಪೊಲೀಸ್ ಠಾಣಾ ಸರಹದ್ದು ಅಜ್ಜಕದಿರೇನಹಳ್ಳಿ ,ಅನೆಮಡುಗು ಗ್ರಾಮ, ಮರಿಹಳ್ಳಿ, ಚೌಡರೆಡ್ಡಿಪಲ್ಲಿ,11 ನೇ ಮೈಲಿ, ಚೊಕ್ಕನಹಳ್ಳಿ ಕ್ರಾಸ್, ಗಂಜಿಗುಂಟೆ, ತುರಕಾಚನಹಳ್ಳಿ ಕೊಮ್ಮಸಂದ್ರ,ಈ ತಿಮ್ಮಸಂದ್ರ ಗ್ರಾಮಗಳ ಕಡೆ  ಗಸ್ತು ಮಾಡಿಕೊಂಡು ಐ.ಎಂ.ವಿ ಕೇಸುಗಳನ್ನು  ಹಾಕಿ ಸಂಜೆ 16-00 ಗಂಟೆಗೆ  ಕೊಂಡಪ್ಪಗಾರಹಳ್ಳಿ  ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ನನಗೆ ಬಂದ ಖಚಿತವಾದ ಮಾಹಿತಿ ಏನೆಂದರೆ  ಸದರಿ ಗ್ರಾಮದ ವಾಸಿಯಾದ ಗಂಗರಾಜು ಬಿನ್ ಸುಬ್ಬರಾಯಪ್ಪ ಎಂಬ ಆಸಾಮಿಯು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ತಿಳಿದು ಬಂದಿದ್ದು ಈ ಬಗ್ಗೆ ದಾಳಿ ನಡೆಸಲು ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಸದರಿ ಸ್ಥಳದ ಮೇಲೆ ದಾಳಿ ಮಾಡುವ ವಿಚಾರವನ್ನು ತಿಳಿಸಿ ಪಂಚರಾಗಿರಲು ಕೋರಿದರ ಮೇರೆಗೆ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ಪಂಚರೊಂದಿಗೆ ಕೊಂಡಪ್ಪಗಾರಹಳ್ಳಿ ಗ್ರಾಮದ ಎಸ್. ಗಂಗರಾಜು ರವರ ಚಿಲ್ಲರೆ ಅಂಗಡಿಯ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಗಂಗರಾಜು ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿದ್ದು ಸದರಿ ಆಸಾಮಿಯ ಮೇಲೆ ಪಂಚರೊಂದಿಗೆ ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್ ರನ್ನು ನೋಡಿ ಮಧ್ಯಫಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಸಾರ್ವಜನಿಕ ಸ್ಥಳದಲ್ಲಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದ ಆಸಾಮಿಯನ್ನು ಕುರಿತು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿಕೊಡಲು ನಿನ್ನ ಬಳಿ ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ಹೇಳಿದ್ದು ನಂತರ ಸದರಿ ಆಸಾಮಿಯ ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ ಎಸ್. ಗಂಗರಾಜು ಬಿನ್ ಸುಬ್ಬರಾಯಪ್ಪ, 45 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಕೊಂಡಪ್ಪಗಾರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:9663802100 ಎಂದು  ತಿಳಿಸಿದ್ದು ನಂತರ ಪಂಚರ ಸಮಕ್ಷಮ ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ,ಎಲ್ ನ ORIGINAL CHOICE DELUX WHISKYಯ  20 ಮಧ್ಯ ತುಂಬಿದ ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು 1800 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 702.6 ರೂ ಆಗಿದ್ದು  ಸದರಿ ಮಧ್ಯ ತುಂಬಿದ ಪ್ಯಾಕೇಟ್ ಗಳನ್ನು ಮತ್ತು ಸ್ಥಳದಲ್ಲಿಯೇ ಬಿದಿದ್ದ  1 ಖಾಲಿ 90 ಎಂ,ಲ್, ನ  ORIGINAL CHOICE DELUX WHISKYಯ ಟೆಟ್ರಾ ಪ್ಯಾಕೇಟ್ ನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಮತ್ತು ಒಂದು ಲೀಟರ್ ನ ಖಾಲಿ ವಾಟರ್ ಬಾಟೆಲ್ ನ್ನು ಸಂಜೆ 16-30 ಗಂಟೆಯಿಂದ ಸಂಜೆ 17-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಾಲು ಮತ್ತು ಪಂಚನಾಮೆ, ಆಸಾಮಿಯೊಂದಿಗೆ ಸಂಜೆ 18-00 ಗಂಟೆಗೆ ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಸ್ವತಃ ಮೊ.ಸಂಖ್ಯೆ:135/2021 ಕಲಂ:15(A),32(3) K,E ACT ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.260/2021 ಕಲಂ. 32,34,36(A) ಕೆ.ಇ ಆಕ್ಟ್:-

     ದಿನಾಂಕ:23/09/2021 ರಂದು ರಾತ್ರಿ 8-55 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಸಬ್ಇನ್ಸ್ ಪೆಕ್ಟರ್ ರವರಾದ ಸರಸ್ವತಮ್ಮ ಆದ ನಾನು ನೀಡುವ ವರದಿಯೇನೆಂದರೆ, ಈ ದಿನ ದಿನಾಂಕ:23.09.2021 ರಂದು ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯಾದ ಹೆಚ್.ಸಿ 80 ಕೃಷ್ಣಪ್ಪ ಪಿಸಿ-152 ಜಯಣ್ಣ ಹಾಗೂ ಜೀಪ್ ಚಾಲಕರಾದ ಸುಶೀಲ್ ಕುಮಾರ್ ಎಹೆಚ್ ಸಿ-13ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ:ಕೆಎ-40-ಜಿ-58 ರಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿಗಾಗಿ ಗೌರಿಬಿದನೂರು ತಾಲ್ಲೂಕು ಕೋಟಾಲದಿನ್ನೆ ಕಡೆ ಗಸ್ತಿನಲ್ಲಿದ್ದಾಗ ಸಂಜೆ 6.15 ಗಂಟೆಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಕುದುರೆಬ್ಯಾಲ್ಯ ಗ್ರಾಮದ ವೆಂಕಟೇಶಪ್ಪರವರ ಮನೆಯ ಮುಂಭಾಗದ ವರಂಡಾದಲ್ಲಿ ಯಾರೋ ಒಬ್ಬ ಆಸಾಮಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು,ಸದರಿ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ದಾಳಿಮಾಡಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಚನ್ನರಾಯಪ್ಪ ಬಿನ್ ಲೇಟ್ ಚನ್ನಪ್ಪ, 62 ವರ್ಷ, ನಾಯಕರು, ವ್ಯವಸಾಯ, ಕುದುರೆಬ್ಯಾಲ್ಯ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ನಂತರ ಪಕ್ಕದಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಸದರಿ ಪ್ಲಾಸ್ಟಿಕ್ ಚೀಲದಲ್ಲಿ   1) ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್ ನ 45 ಟೆಟ್ರಾ ಪಾಕೆಟಗಳು 2) ಓಲ್ಡ್ ಟವರ್ನ್ ವಿಸ್ಕಿ ಕಂಪನಿಯ 180 ಎಂ.ಎಲ್ ನ 9 ಟೆಟ್ರಾ ಪಾಕೆಟುಗಳು, 3) ಬ್ಯಾಗ್ ಪೈಪರ್ಸ್ ಡಿಲಕ್ಸ್ ವಿಸ್ಕಿ ಕಂಪನಿಯ 4 ಟೆಟ್ರಾ ಪಾಕೆಟುಗಳು ಇದ್ದು, ಒಟ್ಟು ಇದರ ಮದ್ಯದ ಪ್ರಮಾಣವು 6 ಲೀಟರ್ 390 ಎಂ.ಎಲ್ ಇದ್ದು,ಇದರ ಒಟ್ಟು ಬೆಲೆ 2786/-ರೂಗಳಾಗಿರುತ್ತೆ. ಎಫ್.ಎಸ್.ಎಲ್ ಗೆ ಕಳುಹಿಸುವ ಸಲುವಾಗಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್ ನ ಒಂದು ಟೆಟ್ರಾ ಪಾಕೆಟ್ ಅನ್ನು, ಓಲ್ಡ್ ಟವರ್ನ್ ವಿಸ್ಕಿ ಕಂಪನಿಯ 180 ಎಂ.ಎಲ್ ನ ಒಂದು ಟೆಟ್ರಾ ಪಾಕೆಟ್ ಅನ್ನು ಮತ್ತು ಬ್ಯಾಗ್ ಪೈಪರ್ಸ್ ಡಿಲಕ್ಸ್ ವಿಸ್ಕಿ ಕಂಪನಿಯ ಒಂದು ಟೆಟ್ರಾ ಪಾಕೆಟ್ ಅನ್ನು ಅಲಾಯಿದೆಯಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು “ಕೆ” ಎಂಬ ಇಂಗ್ಲೀಷ್ ಅಕ್ಷರದ ಅರಗಿನಿಂದ ಸೀಲ್ ಮಾಡಿರುತ್ತೆ.  ಸದರಿ ಮದ್ಯವನ್ನು ಕೋಟಾಲದಿನ್ನೆಯ ಬಾರ್ ನಲ್ಲಿ ಖರೀದಿ ಮಾಡಿರುತ್ತಾನೆಂದು ತಿಳಿಸಿರುತ್ತಾನೆ. ಸದರಿ ಮದ್ಯವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಆರೋಪಿ, ಮಾಲನ್ನು ಅಸಲು ಪಂಚನಾಮೆಯೊಂದಿಗೆ ನಿಮ್ಮ ವಶಕ್ಕೆ ನೀಡುತ್ತಿದ್ದು, ಸದರಿ ಆರೋಪಿ ಮತ್ತು ಕೋಟಾಲದಿನ್ನೆಯ ಬಾರ್ ಹಾಗೂ ಬಾರ್ ಕ್ಯಾಷಿಯರ್ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಾಗಿರುತ್ತೆ.

 

8. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.260/2021 ಕಲಂ. 506,34,323,324 ಐ.ಪಿ.ಸಿ:-

     ದಿನಾಂಕ 23/09/2021 ರಂದು ಸಂಜೆ 6:30 ಗಂಟೆಯಲ್ಲಿ ಪಿರ್ಯಾದಿ ಮಂಜುನಾಥ ಬಿನ್ ನಾರಾಯಣಪ್ಪ, 38 ವರ್ಷ, ದೋಬಿ ಜನಾಂಗ, ಸುಮಂಗಲೀ ಬಡಾವಣೆ, ಗೌರಿಬಿದನೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 22/09/2021 ರಂದು ಸಂಜೆ 7:45 ಗಂಟೆಯಲ್ಲಿ ಗೌರಿಬಿದನೂರು ನಗರದ ದುರ್ಗಾಗ್ರ್ಯಾಂಡ್ ಹೋಟೆಲ್ ಮುಂಭಾಗದ ಆಟೋಸ್ಟಾಂಡ್ ಬಳಿ ಇರುವಾಗ ವಿಜಯಮ್ಮ ಕೋಂ ಲೇಟ್ ರವಿಕುಮಾರ್, ಅವರ ಅಣ್ಣ ಸುಬ್ಬು ಮತ್ತು ಇನ್ನಿಬ್ಬರು ಆಸ್ತಿ ವಿಚಾರವಾಗಿ ತನ್ನ ಬಳಿ ಬಂದು ವಿಜಯಮ್ಮ ರವರು ತನ್ನ ಕಣ್ಣಿಗೆ ಖಾರದ ಪುಡಿ ಎರೆಚಿರುತ್ತಾರೆ ಹಾಗೂ ಸುಬ್ಬು ಮತ್ತು ಇನ್ನಿಬ್ಬರು ತನ್ನನ್ನು ಹಿಡಿದುಕೊಂಡು ಹೊಡೆದಿರುತ್ತಾರೆ. ನಂತರ ಮಚ್ಚು ಮತ್ತು ಚಾಕುವಿನಿಂದ ಇರಿಯಲು ಯತ್ನಿಸಿದಾಗ ಪ್ರಾಣ ರಕ್ಷಣೆಗಾಗಿ ತಪ್ಪಿಸಿಕೊಂಡು ಓಡುತ್ತಿರುವಾಗ ಚೂರಿಯಿಂದ ತನಗೆ ಎಸೆದಿರುತ್ತಾರೆ. ಇದರಿಂದ ತನ್ನ ಬೆನ್ನಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ನಂತರ ತಾನು ತನ್ನ ಮಾವನ ಮನೆಗೆ ಹೋಗಿ ಅಣ್ಣ ಚಂದ್ರಣ್ಣ ರವರನ್ನು ಕರೆಸಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.  ತಮಗೆ ಪ್ರಾಣ ಬೆದರಿಕೆ ಇದ್ದು ತನ್ನ ಬೆನ್ನಿಗೆ ಗಾಯಗಳುಂಟು ಮಾಡಿದ ವಿಜಿಯಮ್ಮ, ಸುಬ್ಬು ಮತ್ತು ಇನ್ನಿಬ್ಬರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

 

9. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.101/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 23/09/2021 ರಂದು  ಮದ್ಯಾಹ್ನ 02.15 ಗಂಟೆಯಲ್ಲಿ ಎ.ಎಸ್.ಐ ಶ್ರಿನಿವಾಸಗೌಡರವರು ರವರು ಮಾಲು ಪಂಚನಾಮೆಯೊಂದಿಗೆ ಠಾಣೆಯಲ್ಲಿ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆನಾಂಕ:23/09/2021 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಠಾಣಾ ಸರಹದ್ದಿನ ಏನಿಗದಲೆ ಬಳಿ ಗಸ್ತಿನಲ್ಲಿದ್ದಾಗ ಠಾಣಾ ಸರಹದ್ದಿನ  ಬಾಲರೆಡ್ಡಿಪಲ್ಲಿ ಗ್ರಾಮದ ಚಿಕ್ಕನಾರಾಯಣಸ್ವಾಮಿ ಬಿನ್ ನೀರಗಂಟಿ ವೆಂಕಟರಾಯಪ್ಪ  ರವರು ತಮ್ಮ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಸ್ಥಳದ ಮೇಲೆ ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿಹೆಚ್ಸಿ-56 ಅಶ್ವತ್ಥಪ್ಪ ರವರೊಂದಿಗೆ  ಬಾಲರೆಡ್ಡಿಪಲ್ಲಿ ಗ್ರಾಮದ ಬಳಿ ಹೋಗಿ ಅಲ್ಲಿದ್ದ ಇಬ್ಬರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಗ್ರಾಮದೊಳಗೆ ಹೋಗಿ ಬಾಲರೆಡ್ಡಿಪಲ್ಲಿ ಗ್ರಾಮದ ಚಿಕ್ಕನಾರಾಯಣಸ್ವಾಮಿ ಬಿನ್ ನೀರಗಂಟಿ ವೆಂಕಟರಾಯಪ್ಪ  ರವರ ಮನೆಯ ಬಳಿ ಹೋಗಿ ನೋಡಲಾಗಿ ಮನೆಯ ಮಾಲೀಕನಾದ ಚಿಕ್ಕನಾರಾಯಣಸ್ವಾಮಿ ತಮ್ಮ ಮನೆಯ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಮತ್ತು ಮಧ್ಯ ಸೇವನೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದ  ಚಿಕ್ಕನಾರಾಯಣಸ್ವಾಮಿ, ರವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿಹೋಗಿದ್ದು, ಮನೆ ಮಾಲೀಕನ  ಹೆಸರು ಮತ್ತು ವಿಳಾಸ ಕೇಳಲಾಗಿ  ಚಿಕ್ಕನಾರಾಯಣಸ್ವಾಮಿ ಬಿನ್ ನೀರಗಂಟಿ ವೆಂಕಟರಾಯಪ್ಪ, 45 ವರ್ಷ, ಅಂಗಡಿ ವ್ಯಾಪಾರ, ಆದಿ ಕನರ್ಾಟಕ ಜನಾಂಗ, ವಾಸ ಬಾಲರೆಡ್ಡಿಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿಯಿತು.  ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 02 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು ಊಂಙಘಂಖಆಖ ಅಊಇಇಖಖ ಘಊಖಏಇಙ 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  90 ಎಂ.ಎಲ್ ನ ಊಂಙಘಂಖಆಖ ಅಊಇಇಖಖ ಘಊಖಏಇಙ  ಮಧ್ಯದ 15 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆೆ 35.13/- ರೂ  ಆಗಿದ್ದು, 15 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 526/-ರೂ ಆಗಿರುತ್ತೆ. ಮದ್ಯ ಒಟ್ಟು 1350 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಗಿ ಇಲ್ಲದೇ ಇರುವುದರಿಂದ ಮನೆಯ ಮಾಲೀಕನಾದ ಚಿಕ್ಕನಾರಾಯಣಸ್ವಾಮಿ ಸ್ಥಳದಿಂದ ಓಡಿ ಹೋಗಿರುತ್ತಾನೆ. ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 12-30 ರಿಂದ 1-30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು, ಮಹಜರ್ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಚಿಕ್ಕನಾರಾಯಣಸ್ವಾಮಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ವರದಿ ದೂರಿನ ಸಾರಾಂಶವಾಗಿರುತ್ತದೆ.

 

10. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.174/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:23/09/2021 ರಂದು ಸಂಜೆ 18.45 ಗಂಟೆಗೆ ಘನ ನ್ಯಾಯಾಲಯದ  ಅನುಮತಿಯನ್ನು ಪಡೆದುಕೊಂಡು ಹೆಚ್.ಸಿ-137 ರವರು ಹಾಜರುಪಡಿಸಿದ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:22/09/2021 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಡಿ.ಪಾಳ್ಯ ಹೋಬಳಿ ಸಾರಗೊಂಡ್ಲು ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಹಳ್ಳದ ಬಳಿ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-188 ಮಂಜುನಾಥ, ಪಿ.ಸಿ-311 ಗೂಳಪ್ಪ ನಿಂಗನೂರ್, ಪಿ.ಸಿ-283 ಅರವಿಂದ, ಪಿಸಿ-336 ಉಮೇಶ್.ಬಿ.ಶಿರಶ್ಯಾಡ್, ಪಿ.ಸಿ-483 ರಮೇಶ್ ಮತ್ತು ಜೀಪ್ ಚಾಲಕ ಎಪಿಸಿ-120 ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಮದ್ಯಾಹ್ನ 12-00 ಗಂಟೆಗೆ ಮೇಲ್ಕಂಡ ಸ್ಥಳದಿಂದ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಕಾಲು ನಡುಗೆಯಲ್ಲಿ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಹೊಂಗೆಮರದ ಕೆಳಗೆ ಅಂದರ್ ಗೆ 200/- ಬಾಹರ್ 200/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಸ್ಥಳದಲ್ಲಿದ್ದವರನ್ನು ಹಿಡಿದು ಕೊಳ್ಳುವಷ್ಟರಲ್ಲಿ ಎಲ್ಲರೂ ಎದ್ದು ಓಡಲು ಪ್ರಾರಂಭಿಸಿದ್ದು, ನಾನು ಸಿಬ್ಬಂದಿಯವರು ಅವರನ್ನು ಹಿಂಬಾಲಿಸಿ ಹಿಡಿದುಕೊಂಡಿದ್ದು, ಒಬ್ಬ ಆಸಾಮಿ ಓಡಿ ಪರಾರಿಯಾಗಿದ್ದು, ಹಿಡಿದುಕೊಂಡವರ ಹೆಸರು ವಿಳಾಸ ಕೇಳಲಾಗಿ 1) ನರಸಿಂಹಪ್ಪ ಬಿನ್ ಗಂಗಾಧರಪ್ಪ, 35 ವರ್ಷ, ಪರಿಶಿಷ್ಟ ಜಾತಿ, ಕೂಲಿಕೆಲಸ, ಕಡಬೂರು ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು, 2] ಶ್ರೀನಿವಾಸಗೌಡ ಬಿನ್ ಗೋವಿಂದಗೌಡ, 58 ವರ್ಷ, ಸಾದರಗೌಡ ಜನಾಂಗ, ಜಿರಾಯ್ತಿ, ಕಡಬೂರು ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು, 3] ಸೋಮು ಬಿನ್ ನಂಜಪ್ಪ, 36 ವರ್ಷ, ಪರಿಶಿಷ್ಟ ಜಾತಿ, ಪೈಂಟ್ ಕೆಲಸ, ಕಡಬೂರು ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು, 4] ರಾಮಚಂದ್ರಪ್ಪ ಬಿನ್ ಲೇಟ್ ಗಂಗಾಧರಪ್ಪ, 56 ವರ್ಷ, ಬಲಜಿಗರು, ಜಿರಾಯ್ತಿ, ಸಾರಗೊಂಡ್ಲು ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು, ಎಂದು ತಿಳಿಸಿದ್ದು, ಓಡಿ ಹೋದವನ ಹೆಸರು ವಿಳಾಸ ಕೇಳಲಾಗಿ 5] ವೆಂಕಟರಾಮೇಗೌಡ ಬಿನ್ ನಿಂಗೇಗೌಡ, 38 ವರ್ಷ, ಸಾದರಗೌಡ ಜನಾಂಗ, ಜಿರಾಯ್ತಿ, ಸಾರಗೊಂಡ್ಲು ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಸದರಿ ಎಲ್ಲರನ್ನೂ ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಸೇರಿಕೊಂಡು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ಸ್ಥಳದಲ್ಲಿ ದೊರೆತ 3200/- (ಮೂರು ಸಾವಿರದ ಇನ್ನೂರು ರೂಪಾಯಿಗಳು ಮಾತ್ರ) ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಮದ್ಯಾಹ್ನ 12-15 ಗಂಟೆಯಿಂದ 1-00 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಮದ್ಯಾಹ್ನ 1-30 ಗಂಟೆಗೆ ಠಾಣೆಗೆ ವಾಪಾಸ್ ಬಂದು ಆರೋಪಿತರ ಮೇಲೆ ಮುಂದಿನ ಕ್ರಮ ಜರುಗಿಸಲು ಸ್ವತಃ ಠಾಣಾ ಎನ್.ಸಿ.ಆರ್ ನಂಬರ್ 293/2021 ರಂತೆ ದಾಖಲಿಸಿಕೊಂಡಿರುತ್ತದೆ.

 

11. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.114/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:24/09/2021 ರಂದು ನಾನು ಠಾಣೆಯಲ್ಲಿರುವಾಗ ಮದ್ಯಾಹ್ನ 1:30 ಗಂಟೆ ಸಮಯದಲ್ಲಿ ಆಗಲಗುರ್ಕಿ ಕೈಗಾರಿಕಾ ಪ್ರದೇಶದ ಶ್ರೀ ಸಪ್ತಗಿರಿ ರೈಸ್ ಮೀಲ್ ಮುಂಭಾಗದ ಸಾರ್ವಜನಿಕರ ರಸ್ತೆಯಲ್ಲಿ ಅಕ್ರಮವಾಗಿ ಕೆಲವರು ಹಣವನ್ನು ಪಣಕಿಟ್ಟು ಅಂದರ್- ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವವರ ಬಗ್ಗೆ ಮಾಹಿತಿ ಬಂದ ಮೇರೆಗೆ ಠಾಣಾ ಎನ್,ಸಿ.ಆರ್ ನಂ:118/2021 ರಲ್ಲಿ ನಮೂದು ಮಾಡಿದ್ದು ನಂತರ ಪ್ರಥಮ ಪರ್ತಮಾನ ವರದಿಯನ್ನು ತಯಾರಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ತನಿಖೆ ಕೈಗೊಳ್ಳಲು ಅನುಮತಿ ನೀಡುವಂತೆ ಘನ ನ್ಯಾಯಾಲಯದಲ್ಲಿ ಕೋರಿ ಅನುಮತಿ ಪಡೆದುಕೊಂಡಿದ್ದು ಅಂದರ್-ಬಾಹರ್ ಇಸ್ಪೀಟ್ ಜೂಜಾಟದ ಮೇಲೆ ದಾಳಿ ಮಾಡಿ ಮುಂದಿನ ಕ್ರಮ ಜರುಗಿಸಲು ಈ ಪ್ರ.ವ.ವರದಿ.

 

12. ಪೆರೇಸಂದ್ರ ಪೊಲೀಸ್‌ ಠಾಣೆ ಮೊ.ಸಂ.03/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ 23/09/2021 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ನಾಗರತ್ನಮ್ಮ ಕೊಂ ನಾರಾಯಣಸ್ವಾಮಿ, 45 ವರ್ಷ, ವಕ್ಕಲಿಗರು, ಗೃಹಿಣಿ, ವಾಸ  ಈ ತಿಮ್ಮಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇಂದರೆ ತನ್ನ ಅಣ್ಣ ಶ್ರೀನಿವಾಸ ಬಿನ್ ಅಂಜಿನಪ್ಪ, 53 ವರ್ಷ, ವಕ್ಕಲಿಗರು, ಈ ತಿಮ್ಮಸಂದ್ರ ಗ್ರಾಮ ರವರು  ಸುಮಾರು ಒಂದು ವರ್ಷದಿಂದ ಗುರುಸಾಯಿ ಟ್ರಾನ್ಸಪೋರ್ಟ್  ಕಂಪನಿಯಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದು ದಿನಾಂಕ 26/08/2021 ರಂದು ರಾತ್ರಿ ಸುಮಾರು 11-00 ಗಂಟೆಯಿಂದ 12-00  ಗಂಟೆಯ ನಡುವೆ ಚಿಕ್ಕಬಳ್ಳಾಪುರ ತಾಲ್ಲೂಕು ರೆಡ್ಡಿಹಳ್ಳಿ ಗ್ರಾಮದ ಬಳಿ ದೊಡ್ಡಪೈಯಲಗುರ್ಕಿ ಯಿಂದ ದಿಬ್ಬೂರಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ತನ್ನ ಅಣ್ಣನಿಗೆ ಅಪಘಾತವಾಗಿರುವುದಾಗಿ ತನ್ನ ಗ್ರಾಮದ ನರಸಿಂಹಪ್ಪ ಬಿನ್ ಗಂಗಪ್ಪ ರವರು ಪೋನ್ ಮಾಡಿ ತಿಳಿಸಿದ್ದು ತಾನು ಬಂದು ನೋಡಿ ವಿಚಾರಿಸಲಾಗಿ ತಮ್ಮ ಅಣ್ಣನು ಚಾಲನೆ ಮಾಡುತ್ತಿದ್ದ ಎ.ಪಿ-04-ಟಿ,ಡಬ್ಲ್ಯೂ -8116 ನೊಂದಣಿ ಸಂಖ್ಯೆಯ ಲಾರಿಯನ್ನು ಬೆಂಗಳೂರಿನಿಂದ ತಮ್ಮ ಗ್ರಾಮಕ್ಕೆ ಬರಲು  ರೆಡ್ಡಿಹಳ್ಳಿ  ಗ್ರಾಮದ ಬಳಿ ಬರುತ್ತಿದ್ದಾಗ ತನ್ನ ಅಣ್ಣ ತನ್ನ ಲಾರಿಯನ್ನ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದು ಎದುರು ಗಡೆಯಿಂದ ಯಾವುದೋ ಒಂದು ದ್ದಿಚಕ್ರ ವಾಹನವು ಆಕಸ್ಮಿಕವಾಗಿ ಅಡ್ಡ ಬಂದಿದ್ದು ಅದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿನ ಹಳ್ಳಕ್ಕೆ ಬಿದ್ದು ಲಾರಿ ಜಖಗೊಂಡಿದ್ದು, ತನ್ನ ಅಣ್ಣನಿಗೆ ಬೆನ್ನಿಗೆ ಗಾಯವಾಗಿದ್ದು, ಕಾಲುಗಳಿಗೆ ರಕ್ತಗಾಯಗಳಾಗಿರುತ್ತೆ. ಅಪಘಾತ ಆದಾಗಿನಿಂದ ದಿನಾಂಕ 29/08/2021 ರವರಿಗೆ ತಮ್ಮ ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದು ದಿನಾಂಕ 30/08/2021 ರಂದು ಗಾಯಾಳುವನ್ನು ಬೆಂಗಳೂರಿನ ಸಂಜಯ್ ಗಾಂದಿ ಟ್ರಾಮ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು ಚಿಕಿತ್ಸೆ ಕೊಡಿಸಿ ಪಕ್ಕದಲ್ಲೆ ಇದ್ದ ತಮ್ಮ ಮನೆಯಲ್ಲಿ ಇರಸಿಕೊಂಡು ಚಿಕಿತ್ಸೆ  ಕೊಡಿಸಿ ತನ್ನ ಅಣ್ಣನನ್ನು ಯಾರೂ ನೋಡಿಕೊಳ್ಳಲು ಇಲ್ಲದ ಕಾರಣ  ಈ ದಿನ ತಡವಾಗಿ ದೂರು ನೀಡುತ್ತಿದ್ದು ಈ ಬಗ್ಗೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

Last Updated: 24-09-2021 07:24 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080