Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.245/2021 ಕಲಂ. (PREVENTION OF CRUELTY TO ANIMALS ACT, 1960 U/s 11(1) ; THE KARNATAKA PREVENTION OF SLAUGHTER AND PRESERVATION OF CATTLE ACT-2020 U/s 4,5,12 ; INDIAN MOTOR VEHICLES ACT, 1988 U/s 192(A) ಐ.ಪಿ.ಸಿ:-

     ದಿನಾಂಕ:23/08/2021 ರಂದು ರಾತ್ರಿ 7-00 ಗಂಟೆಗೆ ಶ್ರೀ.ನಾಗರಾಜ್ ಡಿ.ಆರ್ ಪೊಲೀಸ್ ಇನ್ಸ್ ಪೆಕ್ಟರ್ ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ 23/08/2021 ರಂದು ಸಂಜೆ 6-30 ಗಂಟೆಯಲ್ಲಿ  ನಾನು ಠಾಣೆಯಲ್ಲಿರುವಾಗ ಯಾರೋ ಆಸಾಮಿಗಳು ಹೈದ್ರಾಬಾದ್ ಕಡೆಯಿಂದ ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಣಿಕೆ ಮಾಡುತ್ತಿರುವುದಾಗಿ ಬಂದು ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ-178 ಶ್ರೀಪತಿ, ಪಿಸಿ-214 ಅಶೋಕ,  ಪಿಸಿ-278 ಶಬ್ಬೀರ್ ರವರನ್ನು ಜೊತೆಗೆ ಕರೆದುಕೊಂಡು ಹೋಗಿ ಬಾಗೇಪಲ್ಲಿ ಟೋಲ್ ಪ್ಲಾಜಾ  ಬಳಿ  ಕಾಯುತ್ತಿದ್ದಾಗ ಸಂಜೆ ಸುಮಾರು 7-00 ಗಂಟೆ ಸಮಯದಲ್ಲಿ ಹೈದ್ರಾಬಾದ್ ಕಡೆಯಿಂದ ಹೆಚ್.ಆರ್-55ಎಸ್-3168 ನೊಂದಣೀ ಸಂಖ್ಯೆಯ ಅಶೋಕ್ ಲೈ ಲ್ಯಾಂಡ್ ಗೂಡ್ಸ್ ಕಂಟೈನರ್ ವಾಹನ ಬರುತ್ತಿದ್ದು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಮತ್ತು ಪೊಲೀಸ್ ಜೀಪನ್ನು ನೋಡಿದ ವಾಹನ ಚಾಲಕನು ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿ ಓಡಿಹೋಗಲು ಪ್ರಯತ್ನಿಸಿದವನನ್ನು ಪೊಲೀಸ್ ಸಿಬ್ಬಂದಿಯವರಾದ ಪಿಸಿ-214 ಅಶೋಕ, ಪಿಸಿ-278 ಶಬ್ಬೀರ್ ರವರು ಹಿಂಬಾಲಿಸಿ ಹಿಡಿದುಕೊಂಡು ಬಂದು ಹಾಜರುಪಡಿಸಿದವರನ್ನು ವಿಚಾರಿಸಲಾಗಿ 1.ಪ್ರಕಾಶ ಕಾಲಮ್ಮನವರ್ ಬಿನ್ ಲೇಟ್ ಹನುಮಂತಪ್ಪ, 40 ವರ್ಷ, ವಾಲ್ಮೀಕಿ  ಜನಾಂಗ, ಚಾಲಕ ವೃತ್ತಿ, ವಾಸ 4ನೇ ಕ್ರಾಸ್, ಆಂಜನೇಯ ಗಣೇಶ ದೇವಾಸ್ಥಾನದ ಎದುರುಗಡೆ, ಹೊಸನಗರ, ಹಾವೇರಿ ಟೌನ್, ಹಾವೇರಿ ಜಿಲ್ಲೆ, ಮತ್ತು ವಾಹನದಲ್ಲಿದ್ದ ಇನ್ನೂಬ್ಬ ಆಸಾಮಿಯನ್ನು ವಿಚಾರಿಸಲಾಗಿ ದೇವರಾಜ ಬಿನ್ ಸುರೇಶಪ್ಪ ಎಸ್ ಬಿದರಗಡ್ಡಿ, 28 ವರ್ಷ, ವಾಲ್ಮೀಕಿ ಜನಾಂಗ, ಚಾಲಕ ಮತ್ತು ಕ್ಲೀನರ್ ವೃತ್ತಿ, ದಿಡಗೂರು ಗ್ರಾಮ, ಹಾವೇರಿ ತಾಲ್ಲೂಕು ಮತ್ತು ಜಿಲ್ಲೆ ಎಂದು ತಿಳಿಸಿರುತ್ತಾರೆ. ಜಾನುವಾರುಗಳನ್ನು ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ವಾಹನದಲ್ಲಿ ಪರಿಶೀಲಿಸಲಾಗಿ 28 ಕೋಣಗಳಿದ್ದು, ಜಾನುವಾರುಗಳನ್ನು ಸಾಗಾಣಿಕೆ ಮಾಡಲು ಪರವಾನಗಿ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾರೆ.  ಜಾನುವಾರುಗಳನ್ನು ಇಕ್ಕಟಿನಲ್ಲಿ  ಕಟ್ಟಿಕೊಂಡು ಅಮಾನವೀಯ ರೀತಿಯಲ್ಲಿ ಕ್ರೂರತನದಿಂದ ಸಾಗಾಣಿಕೆ ಮಾಡಿಕೊಂಡು, ಅವುಗಳಿಗೆ ಆಹಾರ ಮತ್ತು ನೀರಿಲ್ಲದೆ ಅಕ್ರಮವಾಗಿ ಯಾವುಧೇ ಪರವಾನಗಿ ಇಲ್ಲದೇ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ನಂತರ ಜಾನುವಾರುಗಳನ್ನು ತುಂಬಿರುವ ಹೆಚ್.ಆರ್-55ಎಸ್-3168 ನೊಂದಣಿ ಸಂಖ್ಯೆಯ ಅಶೋಕ್ ಲೈ ಲ್ಯಾಂಡ್ ಗೂಡ್ಸ್ ವಾಹನ ಮತ್ತು ಆರೋಪಿಗಳನ್ನು  ವಶಕ್ಕೆ ಪಡೆದುಕೊಂಡು ವರದಿಯೊಂದಿಗೆ ಹಾಜರುಪಡಿಸುತ್ತಿದ್ದು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ಜಾನುವಾರುಗಳನ್ನು ಹೆಚ್.ಆರ್-55-ಎಸ್-3168 ನೊಂದಣಿ ಸಂಖ್ಯೆಯ ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿರುವ ಮೇಲ್ಕಂಡ ಆಸಾಮಿಗಳ ವಿರುದ್ದ ಕಲಂ 11(1) PREVENTION  OF  CRUELTY  TO ANIMAL ACT 1960, U/S  4, 5, 12  THE KARNATAKA PREVENTION OF SLANGHTER AND  PRESERVATION OF  CATTLE ORDINANCE ACT-2020 AND U/S 192(A)  INDIAN MOTOR VEHICLE ACT1988 ರೀತ್ಯಾ ಪ್ರಕರಣದ ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.118/2021 ಕಲಂ. 15(A),32(3) ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ.ವೆಂಕಟರವಣಪ್ಪ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:23/08/2021 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಠಾಣಾ ವ್ಯಾಪ್ತಿಯ ದಿಗವಕೋಟೆ ಗ್ರಾಮದ ವಾಸಿಯಾದ ನಾಗಮ್ಮ ಕೋಂ ನಾರಾಯಣಸ್ವಾಮಿ ರವರ ಅವರ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಠಾಣಾ ಸಿಬ್ಬಂದಿ ಸಿಪಿಸಿ 101 ಶ್ರೀನಿವಾಸ್ ಮತ್ತು  ಪಂಚಾಯ್ತಿದಾರರೊಂದಿಗೆ ದಾಳಿ ಮಾಡಿ ಪಂಚನಾಮೆ ಕ್ರಮ ಕೈಗೊಂಡ ನಂತರ ಮಧ್ಯಾಹ್ನ 12-15 ಗಂಟೆ ಸಮಯದಲ್ಲಿ ನನಗೆ ಅದೇ ಗ್ರಾಮದ ವಾಸಿಯಾದ ಪ್ರಸಾದ್ ಬಿನ್ ಲೇಟ್ ವೆಂಕಟಗಿರಿಯಪ್ಪ ರವರು ಅವರ ಮನೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಮತ್ತು ಠಾಣೆಯ ಸಿಪಿಸಿ 101 ಶ್ರೀನಿವಾಸ ರವರು ಪಂಚಾಯ್ತಿದಾರರೊಂದಿಗೆ ಮಧ್ಯಾಹ್ನ 12-30 ಗಂಟೆಗೆ ದಿಗವಕೋಟೆ ಗ್ರಾಮದ ವಾಸಿ ಪ್ರಸಾದ್ ಬಿನ್ ಲೇಟ್ ವೆಂಕಟಗಿರಿಯಪ್ಪ ರವರ ಮನೆಯ ಬಳಿಗೆ ಹೋಗಿ ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಶ್ರೀ.ಪ್ರಸಾದ್ ಬಿನ್ ಲೇಟ್ ವೆಂಕಟಗಿರಿಯಪ್ಪ,35 ವರ್ಷ,ತೋಟಿಗರು,ಕೂಲಿಕೆಲಸ,ವಾಸ ದಿಗವಕೋಟೆ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ನಂತರ ಸದರಿ ಆಸಾಮಿಯ ಯಾವುದೇ ಪರವಾನಿಗೆಯನ್ನು ಹೊಂದಿರದೇ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಕಂಡು ಬಂದಿದ್ದು ಸದರಿ ಸ್ಥಳದಲ್ಲಿ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ನೋಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿದ್ದರಿಂದ  ಸದರಿಯವುಗಳನ್ನು ಪರಿಶೀಲಿಸಲಾಗಿ 90 ಎಂ.ಎಲ್ ಸಾಮರ್ಥ್ಯದ 15 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು ಅವುಗಳ ಒಟ್ಟು ಮೌಲ್ಯ 526.95 ರೂಗಳ 1 ಲೀಟರ್ 350 ಎಂ.ಎಲ್ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು, 2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಒಂದು ಲೀಟರ್ ಸಾಮರ್ಥ್ಯದ ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಮಧ್ಯಾಹ್ನ 12-30  ಗಂಟೆಯಿಂದ ಮಧ್ಯಾಹ್ನ 01-15 ಗಂಟೆಯವರೆಗೆ ಕೈಗೊಂಡ ಪಂಚನಾಮೆ ಮುಖಾಂತರ ಅಮಾನತ್ತುಪಡಿಸಿಕೊಂಡು ಅಮಾನತ್ತು ಪಂಚನಾಮೆ ಮತ್ತು ಮಾಲಿನೊಂದಿಗೆ  ಮಧ್ಯಾಹ್ನ 02-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಸ್ವತಃ ವರದಿಯ ಮೇರೆಗೆ ಮಧ್ಯಾಹ್ನ 02-30 ಗಂಟೆಗೆ ಠಾಣಾ ಮೊ.ಸಂ 118/2021 ಕಲಂ 15(ಎ) 32(3) K.E ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.119/2021 ಕಲಂ. 341,447,504,506,34 ಐ.ಪಿ.ಸಿ:-

     ದಿನಾಂಕ 24/08/2021 ರಂದು ಮಧ್ಯಾಹ್ನ 01-00 ಗಂಟೆಗೆ ಠಾಣೆಗೆ ಫಿರ್ಯಾಧಿದಾರರಾದ ಬಿ.ರಾಮರೆಡ್ಡಿ ಬಿನ್ ಲೇಟ್ ಬಚ್ಚರೆಡ್ಡಿ,74 ವರ್ಷ,ವಕ್ಕಲಿಗರು,ಜಿರಾಯ್ತಿ,ವಾಸ-ವಾರ್ಡ್ ನಂಬರ್-31 ತಿಮ್ಮಸಂದ್ರ ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ಮುಂಗಾನಹಳ್ಳಿ ಹೋಬಳಿ ಕೊಂಡ್ಲೀಗಾನಹಳ್ಳಿ ಗ್ರಾಮದ ಸರ್ವೇ ನಂಬರ್ 129 ರಲ್ಲಿ 3.10 ಗುಂಟೆ ಜಮೀನು ಇದ್ದು ಈ ನನ್ನ ಜಮೀನನ್ನು ಹಣ ಕೊಟ್ಟು ಕ್ರಯ ಮಾಡಿಕೊಳ್ಳಲು ಕೊಂಡ್ಲೀಗಾನಹಳ್ಳಿ ಗ್ರಾಮದ ವಾಸಿಗಳಾದ ಕೆ.ಎಂ.ಕೃಷ್ಣಾರೆಡ್ಡಿ ಬಿನ್ ಲೇಟ್ ಮುನಿಸ್ವಾಮಿ, ಕೆ.ಬಿ.ಈರಪ್ಪರೆಡ್ಡಿ ಬಿನ್ ಲೇಟ್ ಬೈಯಣ್ಣ,ಕೆ.ಇ.ಬ್ರಹ್ಮಾನಂದ ಬಿನ್ ಕೆ.ಬಿ.ಈರಪ್ಪರೆಡ್ಡಿ, ಕೆ.ಬಿ.ಈರಪ್ಪರೆಡ್ಡಿ ಬಿನ್ ಬೈಯಣ್ಣ ರವರುಗಳು ಒಬ್ಬರಿಗೊಬ್ಬರು ಕುಮ್ಮಕ್ಕು ಮಾಡಿಕೊಂಡು ಕೆ.ಬಿ.ಈರಪ್ಪರೆಡ್ಡಿ ಬಿನ್ ಲೇಟ್ ಬೈಯಣ್ಣ ರವರು ಚಿಂತಾಮಣಿ ನ್ಯಾಯಾಲಯದ O.S NO-136/2020 ರಂತೆ ನನ್ನ ಮೇಲೆ ಘನ ನ್ಯಾಯಾಲಯದಲ್ಲಿ ದಾವೆ ಹೂಡಿ ನಮ್ಮ ಜಮೀನಿನಲ್ಲಿ ಬೆಳೆ ಇಡದಂತೆ ಮೇಲ್ಕಂಡವರು ಅಡ್ಡಿಪಡಿಸಿದಾಗ ನಾನು ಸಹ ನ್ಯಾಯಾಲಯಕ್ಕೆ  O.S NO-136/2020 ರಲ್ಲಿ ನನಗೆ ಸಂಬಂದಿಸಿದ ದಾಖಲೆಗಳನ್ನು ಹಾಗೂ ಮೇಲ್ಕಂಡವರು ಅಡ್ಡಿಪಡಿಸಿರುವ ಬಗ್ಗೆ ಪೋಟೋ ಮತ್ತು ವಿಡಿಯೋಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರ ಮೇರೆಗೆ ಮಾನ್ಯ ನ್ಯಾಯಾಧೀಶರು ಪರಿಶೀಲಿಸಿ ದಿನಾಂಕ 31/07/2021 ರಲ್ಲಿ ಮೇಲ್ಕಂಡವರಾಗಲಿ ಅಥವಾ ಅವರ ಸಂಬಂಧಿಕರಾಗಲಿ ನಮ್ಮ ಜಮೀನಿನಲ್ಲಿ ನಾವು ಉಳುಮೆ ಮಾಡಿ ಬೆಳೆ ಇಟ್ಟುಕೊಳ್ಳಲು ತೊಂದರೆ ಮಾಡಬಾರದೆಂದು ಆದೇಶವಿದ್ದರು ಸಹ ದಿನಾಂಕ 21/08/2021 ರಂದು ಸಂಜೆ ಸುಮಾರು 06-00 ಗಂಟೆ ಸಮಯದಲ್ಲಿ ನಾನು ಕೂಲಿಯವರನ್ನು ಇಟ್ಟುಕೊಂಡು ಜೆ,ಸಿ.ಬಿ ಯಲ್ಲಿ ಗೆನಿಮೆಗಳನ್ನು ಹಾಕಿಸಲು ಮತ್ತು ಟ್ರಾಕ್ಟರ್ ನಲ್ಲಿ ಉಳುಮೆ ಮಾಡುತ್ತಿದ್ದಾಗ ಏಕಾಏಕಿ ಮೇಲ್ಕಂಡ 4 ಜನರು ನಮ್ಮ ಬಾಬತ್ತು ಜಮೀನಿನೋಳಗೆ ಅಕ್ರಮ ಪ್ರವೇಶಮಾಡಿ ಜಮೀನು ಉಳುಮೆಮಾಡುತ್ತಿದ್ದ ನನ್ನನ್ನು ಅಕ್ರಮವಾಗಿ ತಡೆದು  ಜೆಸಿಬಿ ಗೆ ಅಡ್ಡಲಾಗಿ ನಿಂತುಕೊಂಡು ನಿನ್ನ ತಾಯಂದಿರನೇ ಕೇಯ ನೀವೇಕೆ ನಮ್ಮ ಜಮೀನಿನಲ್ಲಿ ಕೆಲಸಕ್ಕೆ ಬಂದಿದ್ದೀರಿ ಈ ಲೋಫರ್ ನನ್ನ ಮಗ ರಾಮರೆಡ್ಡಿಗಾನಿಗೆ ಕೈ ಕಾಲು ಮುರಿದು ತಿಮ್ಮಸಂದ್ರ ಬಿಟ್ಟು ಈ ಕಡೆ ಬಂದರೆ ಸಾಯಿಸಿಬಿಡುತ್ತೇವೆ ಎಂದು ಬೆದರಿಕೆ ಹಾಕಿ ನನ್ನ ಕೆಲಸವನ್ನು ನಿಲ್ಲಿಸಿ ನಮ್ಮ ಮೇಲೆ ಗಲಾಟೆ ಮಾಡುತ್ತಿದ್ದಾಗ ಕೊಂಡ್ಲೀಗಾನಹಳ್ಳಿ ಗ್ರಾಮದ ವಾಸಿಗಳಾದ ಕೆ.ಎನ್.ಮಂಜುನಾಥ ಬಿನ್ ನಾರೆಪ್ಪ,ಕೆ.ಎನ್.ರಂಜಿತ್ ಕುಮಾರ್ ಬಿನ್ ಕೆ.ಎಂ.ನಾರಾಯಣಸ್ವಾಮಿ ರವರು ಬಂದು ಜಗಳ ಬಿಡಿಸಿರುತ್ತಾರೆ ಈ ವಿಚಾರದಲ್ಲಿ ನ್ಯಾಯ ಪಂಚಾಯ್ತಿ ಮಾಡೋಣವೆಂದು ಕೊಂಡ್ಲೀಗಾನಹಳ್ಳಿ ಗ್ರಾಮದ ಹಿರಿಯರು ಹೇಳಿದ್ದು ಇದುವರೆವಿಗೂ ಹಿರಿಯರ ಪಂಚಾಯ್ತಿಗೆ ಬರದೆ ಇರುವುದರಿಂದ ಈ ದಿನ ತಡವಾಗಿ ಠಾಣೆಗೆ ದೂರು ನೀಡುತ್ತಿದ್ದು ಮೇಲ್ಕಂಡವರ ಮೇಲೆ ಕಾನೂನುರೀತ್ಯ ಕ್ರಮ ಜರುಗಿಸಿ ನನಗೆ ರಕ್ಷಣೆ ನೀಡಲು ಕೋರಿ ನೀಡಿದ ದೂರಾಗಿದೆ.

 

4. ಸಿ.ಇ.ಎನ್ ಪೊಲೀಸ್‌ ಠಾಣೆ ಮೊ.ಸಂ.35/2021 ಕಲಂ. 419,420 ಐ.ಪಿ.ಸಿ & 66(C),66(D) (INFORMATION TECHNOLOGY ACT 2000:-

     ದಿನಾಂಕ:24/8/2021 ರಂದು ಎಸ್ .ಲಕ್ಷ್ಮೀನಾರಾಯಣರೆಡ್ಡಿ ಬಿನ್ ಸುಬ್ಬನ್ನ,49 ವರ್ಷ, ವಕ್ಕಲಿಗರು, ಜಿರಾಯ್ತಿ, ಕೆಲಸ, ವಾಸ  ನಂದನವನ ಗ್ರಾಮ, ಮಿಟ್ಟಿಹಳ್ಳಿ ಪಂಚಾಯಿತಿ, ಚಿಂತಾಮಣಿ ತಾಲ್ಲೂಕು, ಮೊ ಸಂಖ್ಯೆ: 9448918970  ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂದರೆ ತಾನು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ತಾನು ತನ್ನ ಹಣಕಾಸಿನ ವ್ಯವಹಾರದ ಉದ್ದೇಶಕ್ಕಾಗಿ ಚಿಂತಾಮಣಿ ನಗರದಲ್ಲಿರುವ ಹೆಚ್,ಡಿ,ಎಫ್,ಸಿ ಬ್ಯಾಂಕ್ ನಲ್ಲಿ 50100174361471 ರಂತೆ ಉಳಿತಾಯ ಖಾತೆಯನ್ನು ಹೊಂದಿರುತ್ತೇನೆ. ಈ ಖಾತೆಗೆ ಎ ಟಿ ಎಂ ಕಾರ್ಢನ್ನು ಮತ್ತು ತನ್ನ ಮೊಬೈಲ್ ನಂಬರ್ ಲಿಂಕ್ ಮಾಡಿಕೊಂಡು ಗೂಗಲ್ ಫೇ ವ್ಯಾಲೆಟ್ ನ್ನು ಬಳಸುತ್ತಿರುತ್ತೇನೆ. ಈಗಿರುವಲ್ಲಿ ದಿನಾಂಕ:4/6/2021 ರಂದು LIMEROADON LINE SHOPPING APP FOR WOMEN,MEN & KIDS ನಲ್ಲಿ ಬಟ್ಟೆಗಳನ್ನು ಬುಕ್ ಮಾಡಿದ್ದು 698/-ರೂಗಳನ್ನು ಫಾವತಿಸಿರುತ್ತೇನೆ. ಆದರೆ ವಸ್ತುಗಳು ನಮಗೆ ಡಿಲಿವರಿ ಆಗಿರಲಿಲ್ಲ, ನಂತರ ನಾನು ಅದರಲ್ಲಿದ್ದ ಕಷ್ಟಮರ್ ನಂಬರ್ ಗಳಾದ 7070085647 ಮತ್ತು 9883486578 ಗೆ ಕಾಲ್ ಮಾಡಿದ್ದು ಅವರು ನಿಮಗೆ ನಿಮ್ಮ ಹಣ ರೀಪಂಡ್ ಮಾಡುವುದಾಗಿ ತಿಳಿಸಿದರು. ನಂತರ ನಿಮ್ಮ ಎಟೆಂ ಕಾರ್ಢನ ಲಾಸ್ಟ್ 04  ನಂಬರ್ ಗಳನ್ನು & ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ ನಂಬರ್ ಹೇಳುವಂತೆ ತಿಳಿಸಿರುತ್ತಾರೆ, ನಂತರ ನಾನು ನಿಜವೆಂತ ನಂಬಿ ಅವರು ಹೇಳಿದಂತೆ ನನ್ನ ಎಟಿಎಂ ಕಾರ್ಢನ ಕಡೆಯ 04  ನಂಬರ್ ಗಳಾದ 0234 ನ್ನು ಮೊಬೈಲ್ ಗೆ ಬಂದಿದ್ದ ಒಟಿಪಿ ನಂಬರ್ ನ್ನು ನೀಡಿದ್ದು ಆಗ ನನ್ನ ಖಾತೆಯಿಂದ 9,999/-ರೂಗಳು ಹಾಗೂ 14,014/-ರೂಗಳು ಎರಡು ಬಾರಿ ಒಟ್ಟು  24,013/-ರೂಗಳನ್ನು ಯಾರೋ ಸೈಬರ್ ವಂಚಕರು ವರ್ಗಾಯಿಸಿ ಕೊಂಡಿರುತ್ತಾರೆ. ಆದುದರಿಂದ ಸದರಿ ನನ್ನ ಖಾತೆಯಲ್ಲಿದ್ದ ಹಣವನ್ನು ವರ್ಗಾಯಿಸಿ ಕೊಂಡು ವಂಚಿಕರನ್ನು ಪತ್ತೆ ಮಾಡಿ &  ನನ್ನ ಹಣ ನನಗೆ ವಾಪಸ್ಸುಕೊಡಿಸಬೇಕಾಗಿ  & ಆರೋಪಿಗಳ ವಿರುದ್ದ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರು.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.133/2021 ಕಲಂ. 465,468,420,34 ಐ.ಪಿ.ಸಿ :-

     ದಿನಾಂಕ: 23/08/2021 ರಂದು ಸಂಜೆ 6-30 ಗಂಟೆಯಲ್ಲಿ ಚಿಕ್ಕಬಳ್ಳಾಪುರ  ವೃತ್ತದ ಮಾನ್ಯ  ಆರಕ್ಷಕ  ವೃತ್ತ  ನಿರೀಕ್ಷಕರ ರವರ  ಕಛೇರಿ ಸಂಖ್ಯೆ: ಸಿಪಿಐ/ಸಿಬಿಪಿ/ಸಿಸಿ66/2021 ದಿನಾಂಕ: 23/08/2021 ರಂತೆ ಗೌರವಾನ್ವಿತ  ಚಿಕ್ಕಬಳ್ಳಾಪುರ ಸಿವಿಲ್ ಜೆಡ್ಜ್ ಮತ್ತು  ಜೆ.ಎಂ.ಎಪ್.ಸಿ.  ನ್ಯಾಯಾಲಯದಿಂದ ಸಾದರಾಧ ಪಿಸಿಆರ್ 44/2021 ರ ಪ್ರಕರಣದ  ಸಾರಾಂಶವೇನೆಂದರೆ, ಪಿರ್ಯಾದಿ ಜಿ.ವಿ.ಪ್ರಕಾಶ್ ಬಿನ್ ಲೇಟ್ ಚಿಕ್ಕವೆಂಕಟರಾಯಪ್ಪ 45ವರ್ಷ ಅಣಕನೂರು ಗ್ರಾಮ ಚಿಕ್ಕಬಳ್ಳಾಪುರ  ತಾಲ್ಲೂಕು ರವರಿಗೆ ಚಿಕ್ಕಬಳ್ಳಾಪುರ  ತಾಲ್ಲೂಕು ಕಸಬಾ ಹೋಬಳಿ ಅಡವಿಗೊಲ್ಲವಾರಹಳ್ಳಿ  ಗ್ರಾಮದ ಸರ್ವೆ ನಂಬರ್; 41/14 ರಲ್ಲಿನ 03-00 ಎಕರೆ  ಜಮೀನನ್ನು  ದಿನಾಂಕ: 25/09/2014 ರಂದು ಆರೋಪಿತರಾದ ಶ್ರೀಮತಿ  ಜಿ.ಮುನಿಕೃಷ್ಣಪ್ಪ ಕೋಂ ಪಿ.ಎನ್.ಕೃಷ್ಣಮೂರ್ತಿ. ಮತ್ತು ಶ್ರೀಮತಿ ನಾರಾಯಣಮ್ಮ ಕೋಂ ಆವುಲಪ್ಪ ರವರು  19.80.000/-ರೂಪಾಯಿಗಳಿಗೆ ಮುಂಗಡವಾಗಿ 5.00.000/- ರೂಪಾಯಿಗಳನ್ನು ಪಡೆದು  ಚಿಕ್ಕಬಳ್ಳಾಪುರ ಸಬ್ ರಿಜಿಸ್ಟರ್  ಕಛೇರಿಯಲ್ಲಿ  ಕ್ರಯದ ಕರಾರು ಮಾಡಿಕೊಟ್ಟಿದ್ದು ನಂತರ ಹೆಚ್ಚುವರಿಯಾಗಿ  ಕರಾರು ಮಾಡಿಕೊಟ್ಟಿದ್ದು ಇದಕ್ಕೆ ಆರೋಫಿ 3 ಮೋಹನ್ ರಾಜ್ ಬಿನ್ ವೀರಣ್ಣ ಸದಾಶಿವನಗರ ಬೆಂಗಳೂರು ರವರು   ಕ್ರಯ ಆಗದ  ಕರಾರುನ್ನು  ಒಪ್ಪಿಗೆಯಿಂದ  ಬರೆದುಕೊಟ್ಟಿರುತ್ತಾರೆ.  ಆರೋಪಿ 1 ರಿಂದ 3 ರವರುಗಳು ಸೇರಿಕೊಂಡು  ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಪಿರ್ಯಾದಿದಾರರ  ಗಮನಕ್ಕೆ ಬಾರದೇ 03ನೇ ವ್ಯಕ್ತಿಗೆ ಸದರಿ ಜಮೀನನ್ನು  ದಿನಾಂಕ: 04/02/2020 ರಂದು ಕರಾರು ಮಾಡಿಕೊಟ್ಟಿರುತ್ತಾರೆಂದು ಇತ್ಯಾದಿ ಯಾಗಿ  ಆರೋಪಿಗಳ ವಿರುದ್ದ  ಕಲ: 465. 468. 420 ರ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಕಲ: 156(3) ಸಿ.ಆರ್.ಪಿ.ಸಿ. ಅಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆದಿ ಅಂತಿಮ ವರದಿಯನ್ನು ಸಲ್ಲಿಸಲು  ರವಾನಿಸಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.368/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 23-08-2021 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಠಾಣೆಯ ಹೆಚ್.ಸಿ-165 ಚಂದ್ರಪ್ಪ ಟಿ.ಎಂ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 23/08/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ನಾನು ಮತ್ತು ಸಿ.ಪಿ.ಸಿ-509 ಚಂದ್ರಪ್ಪ.ಎಂ ರವರು ಠಾಣಾ ಸರಹದ್ದಿನ ಚೊಕ್ಕಹಳ್ಳಿ, ನಾಯನಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 4.00 ಗಂಟೆಯ ಸಮಯದಲ್ಲಿ ಧನಮಿಟ್ಟೇನಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಚೆನ್ನಕೃಷ್ಣಪ್ಪ ಬಿನ್ ಸೀತಪ್ಪರವರು ತನ್ನ ಚಿಲ್ಲರೆ ಅಂಗಡಿಯ ಬಳಿ ರಸ್ತೆಯಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಅದೇ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಮನೆಯ ಮುಂದೆ ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 8 ಟೆಟ್ರಾ ಪಾಕೆಟ್ ಗಳು, 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಚೆನ್ನಕೃಷ್ಣಪ್ಪ ಬಿನ್ ಸೀತಪ್ಪ, 40 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ, ವಾಸ:ಧನಮಿಟ್ಟೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 4-15 ರಿಂದ 5-00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಚೆನ್ನಕೃಷ್ಣಪ್ಪ ಬಿನ್ ಸೀತಪ್ಪರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.200/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ 23-08-2021 ರಂದು 17-00 ರಂದು ಪಿರ್ಯಾದಿದಾರರಾದ  ಶ್ರೀಮತಿ ಈಶ್ವರಮ್ಮ ಕೋಂ ಆದಿನಾರಾಯಣ, 40 ವರ್ಷ, ಮಡಿವಾಳರು, ಮನೆ ಕೆಲಸ, ವಾಸ ಬೈಚಾಪುರ ಗ್ರಾಮ, ಕಸಬಾ ಹೋಬಳಿ, ಗೌರಿಬಿದನೂರು  ತಾಲ್ಲೂಕು ರವರು ಠಾಣೆಗೆ ಹಾಝರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತನ್ನ  ಗಂಡ ಎ. ಆದಿನಾರಾಯಣ ಬಿನ್ ಲೇಟ್ ಆವುಲಮೂರ್ತಿ 45 ವರ್ಷ, ಮಡಿವಾಳರು, ಬೈಚಾಪುರ ಗ್ರಾಮ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಬೆಂಗಳೂರು ಡಿವಿಜನ್  ರೈಲ್ವೇ ಇಲಾಖೆಯಲ್ಲಿ ಎಲೆಕ್ಟ್ರಿಕಲ್ ವೈರ್ ಮನ್ ಆಗಿ ಕೆಲಸವನ್ನು ಮಾಡಿಕೊಂಡಿರುತ್ತಾರೆ.  ನನ್ನ ಗಂಡ ಅದಿನಾರಾಯಣರವರು ಕೆ.ಎ.40 ಇ.ಡಿ.-1569 ಹಿರೋ ಫ್ಯಾಷನ್ ಪ್ರೋ ಬೈಕ್ ಅನ್ನು ಇಟ್ಟಿಕೊಂಡಿರುತ್ತಾರೆ. ದಿನಾಂಕ 21-08-2021 ರಂದು ಬೆಳಿಗ್ಗೆ 08-30 ಗಂಟೆಗೆ ಹಿಂದೂಪುರಕ್ಕೆ ಕೆಲಸಕ್ಕೆ ಹೋದರು. ಅದೇ ದಿನ ರಾತ್ರಿ ಸುಮಾರು 08-45 ಗಂಟೆಯಲ್ಲಿ ನಾನು ಮನೆಯಲ್ಲಿದ್ದಾಗ ನಮ್ಮ ಅತ್ತಿಗೆಯಾದ ರೇಣುಕಮ್ಮ ರವರು ಮನೆಯ ಬಳಿಗೆ ಬಂದು ನನ್ನ ಗಂಡನಿಗೆ ಬೈಚಾಪುರ ರಸ್ತೆಯಲ್ಲಿ ವೆಂಕಟಪತಿರವರ ಜಮೀನಿನ ಮುಂಭಾಗದಲ್ಲಿ ರಸ್ತೆಯಲ್ಲಿ ಅಪಘಾತವಾಗಿರುವುದಾಗಿ ನಾಗಾರ್ಜುನರವರಿಗೆ ರಂಜಿತ್ ಎಂಬುವರು ಪೋನ್ ಮಾಡಿದ್ದಾರೆಂದು ತಿಳಿಸಿದರು. ಅಲ್ಲಿಗೆ ನಾನು ಮತ್ತು ನಾಗಾರ್ಜುನ, ರೇಣುಕಮ್ಮರವರೊಂದಿಗೆ ಹೋಗಿ ನೋಡಿದಾಗ ನನ್ನ ಗಂಡ ಆದಿನಾರಾಯಣ ರಸ್ತೆಯಲ್ಲಿ ಬಿದ್ದಿದ್ದು  ಗಾಡಿ ರಸ್ತೆಯಲ್ಲಿ ಬಿದ್ದಿರುತ್ತೆ. ನನ್ನ ಗಂಡನಿಗೆ ತಲೆಯಲ್ಲಿ ಬಲಗಡೆ ರಕ್ತಗಾಯವಾಗಿದ್ದು ಕಿವಿಯಲ್ಲಿ ಮತ್ತು ಮೂಗಿನಲ್ಲಿ ರಕ್ತಬರುತ್ತಿತ್ತು. ನಂತರ ನಾನು ಮತ್ತು ರೇಣುಕಮ್ಮ ನಾಗಾರ್ಜುನ 3 ಜನರು ಆಂಬ್ಯುಲೆನ್ಸ್ ನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿದ್ದು ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ಗಂಡನನ್ನು ಬೆಂಗಳೂರಿನ ಬ್ಯಾಟರಾಯನ ಪುರದಲ್ಲಿರುವ ಪ್ರೋಲೈಫ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಿರುತ್ತೇವೆ. ನನ್ನ ಗಂಡ ಆದಿನಾರಾಯಣ.ಎ. ರವರು ಗೌರಿಬಿದನೂರಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬೈಚಾಪುರ ರಸ್ತೆಯಲ್ಲಿ ಬರುತ್ತಿದ್ದಾಗ ತನ್ನ ದ್ವಿಚಕ್ರವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ನಿಯಂತ್ರಣ ಸಿಗದೇ ತನ್ನಷ್ಟಕ್ಕೆ ತಾನೇ ಕೆಳಗೆ ಬಿದ್ದಿದ್ದು ಅಪಘಾತವಾಗಿರುತ್ತೆ. ನನ್ನ ಗಂಡನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ದೂರು ನೀಡಲು ತಡವಾಗಿದ್ದು ಮುಂದಿನ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿರುತ್ತೆ. ನನ್ನ ಗಂಡನಿಗೆ ಅಪಘಾತವಾಗಿರುವ ಸಮಯ ರಾತ್ರಿ 08-30 ಗಂಟೆಯಾಗಿರುತ್ತೆ.

 

8. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.117/2021 ಕಲಂ. 420  ಐ.ಪಿ.ಸಿ:-

     ದಿನಾಂಕ:23/08/2021 ರಂದು ಸಂಜೆ 19-30 ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿಸಿ-318 ದೇವರಾಜ್ ರವರು ನ್ಯಾಯಾಲಯದಿಂದ ಪಿ.ಸಿಆರ್ ನಂಬರ್:71/2021 ರನ್ನು ಹಾಜರು ಪಡಿಸಿದ್ದರ ಸಾರಾಂಶವೆನೆಂದರೆ ಈ ಪಿ.ಸಿ ಆರ್ ನ ಪಿರ್ಯಾದಿದರರಾದ  ಶ್ರೀ ಬದ್ರಿನಾಥ    ಬಿನ್ ಲೇಟ್ ನಾಗರಾಜ ಶೆಟ್ಟಿ, 52 ವರ್ಷ, ಆರ್ಯ ವೈಶ್ಯ ಜನಾಂಗ, ಆಚಾರ್ಯ ಫ್ರೌಢಶಾಲೆ ಬಳಿ, ಎಂ.ಜಿ ರಸ್ತೆ, ಗೌರಿಬಿದನೂರು ನಗರ ರವರು ಈ ಪ್ರಕರಣದ ಆರೋಪಿಯಾದ  ಆನಂದರಾಮುಲು ಬಿನ್ ಲೇಟ್ ರತ್ನಯ್ಯ ಶೆಟ್ಟಿ, 54 ವರ್ಷ, ಆರ್ಯ ವೈಶ್ಯ ಜನಾಂಗ, ರಾಮ ಮಂದಿರ ಹಿಂಭಾಗ ಗೌರಿಬಿದನೂರು ರವರಿಗೆ ಪಿರ್ಯಾದಿದಾರರು  ಸುಮಾರು ವರ್ಷಗಳ ಹಿಂದೆ ತನ್ನ ಕುಟುಂಬ ಪೊಷಣೆಗೆ ಮತ್ತು ತನ್ನ ತುರ್ತು ಅವಶ್ಯಕತೆ ಇದ್ದುದ್ದರಿಂದ ಈ ಪ್ರಕರಣದ ಆರೋಪಿಯಾದ ಆನಂದ ರಾಮಲು ರವರಿಂದ 900000=00 (ಒಂಭತ್ತು ಲಕ್ಷ ರೂಪಾಯಗಳು) ಗಳನ್ನು ತಿಂಗಳಿಗೆ 3% ಶೇಕಾಡ ಬಡ್ಡಿಯನ್ನು ಕೊಡಲು ಒಪ್ಪಿಕೊಂಡು ಹಣವನ್ನು   ಪಡೆದುಕೊಂಡಿರುತ್ತಾರೆ. ಈ ಹಣದ ಭದ್ರತೆಗಾಗಿ ಆರೋಪಿಯು ಪಿರ್ಯಾದಿ ಕಡೆಯಿಂದ 218 ಗ್ರಾಂ ಬಂಗಾರ ವಡವೆಗಳನ್ನು ಮತ್ತು 1] ದಿ:01/05/2009 ರಂದು 100000=00 ಆನ್ ಡಿಮ್ಯಾಂಡ್ ನೋಟ್ ಪ್ರೋ, 2] ದಿ:14/09/2014 ರಂದು 100000=00 ಆನ್ ಡಿಮ್ಯಾಂಡ್ ನೋಟ್ ಪ್ರೋ, 3] ದಿ:06/09/2014 ರಂದು 100000=00 ಆನ್ ಡಿಮ್ಯಾಂಡ್ ನೋಟ್ ಪ್ರೋ, 4] ದಿ:26/05/2015 ರಂದು 200000=00 ಆನ್ ಡಿಮ್ಯಾಂಡ್ ನೋಟ್ ಪ್ರೋ, 5] ದಿ:15/02/2016 ರಂದು 400000=00 ಖಾಲಿ ಪೆಪರ್ ಮತ್ತು 218 ಗ್ರಾಂ ಬಂಗಾರದ ವಡವೆಗಳು ಗಳನ್ನು ಒತ್ತೆಯಾಗಿಟ್ಟು ಕೊಂಡಿರುತ್ತಾರೆ. ಪಿರ್ಯಾದಿಯು ಮೇಲ್ಕಂಡ ಹಣಕ್ಕೆ ತಿಂಗಳಿಗೆ 3% ಬಡ್ಡಿಯಂತೆ ಪ್ರತಿ ತಿಂಗಳು ಪಾವತಿ ಮಾಡಿಕೊಂಡು ಬಂದಿರುತ್ತಾನೆ. ಆದರೆ ಪಿರ್ಯಾದಿಯು  ಆರೋಪಿಯ ಬಳಿ ತೆಗೆದುಕೊಂಡಿದ್ದ ಹಣವನ್ನು ಬಡ್ಡಿ ಸಮೇತ ವಾಪಸ್ಸು ಆನಂದರಾಮಲು ರವರಿಗೆ ನೀಡಿದ್ದು ಆದರೆ ಆನಂದರಾಮುಲು ರವರು ತಾನು ಇಟ್ಟುಕೊಂಡಿದ್ದ ಬಂಗಾರದ ವಡವೆಗಳು ಮತ್ತು ಪ್ರೋ ನೋಟ್ ಗಳನ್ನು ವಾಪಸ್ಸು ಕೊಡದೆ ತನಗೆ ಮೋಸ ಮಾಡಿರುವುದಾಗಿ ಮತ್ತು ಇತ್ಯಾದಿಯಾಗಿ ನ್ಯಾಯಾಲಯದಿಂದ ಸಾದಾರ ಪಡಿಸಿದ  ದೂರಾಗಿದೆ. ಹೆಚ್ಚಿನ ವಿವರಗಳಿಗೆ ಘನ ನ್ಯಾಯಾಲಯದಿಂದ ಬಂದಿರುವ ಪಿರ್ಯಾದಿದಾರರ ಪಿ.ಸಿ ಆರ್ 71/2021 ನ್ನು ಲಗತ್ತಿಸಿರುತ್ತೆ.

 

9. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.145/2021 ಕಲಂ. 143,144,323,324,447,504,506 ಐ.ಪಿ.ಸಿ:-

     ದಿನಾಂಕ:24/08/2021 ರಂದು ಬೆಳಗ್ಗೆ 11.00 ಗಂಟೆಗೆ ಘನ ನ್ಯಾಯಾಲಯದ ಹೆಚ್.ಸಿ-137 ರವರು ಘನ ನ್ಯಾಯಾಲಯದ ಪಿಸಿಆರ್ ಸಂಖ್ಯೆ:06/2021 ನೇದ್ದನ್ನು ತಂದು ಹಾಜರುಪಡಿಸಿದ ದೂರಿನ ಸಾರಾಂಶವೇನೆಂದರೆ ದಿನಾಂಕ:27.06.2021 ರಂದು ಮದ್ಯಾಹ್ನ 12 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಮತ್ತು ಅವರ ತಾಯಿ ಕದಿರದೇವರಹಳ್ಳಿ ಗ್ರಾಮದ ಸರ್ವೆ ನಂ. 120 ಹಾಗೂ ಸರ್ವೆ ನಂ.56/2 ರಲ್ಲಿ ಕೂಲಿ ಆಳುಗಳೊಂದಿಗೆ ಬೆಳೆಯನ್ನು ಇಡುತ್ತಿದ್ದ  ಸಂದರ್ಭದಲ್ಲಿ ಆರೋಪಿ 1 ರಿಂದ 5 ರವರುಗಳು ಕೆಳಗೆ ಬೀಳಿಸಿ ಪಿರ್ಯಾದಿದಾರರನ್ನು ಆರೋಪಿ 4 ಹಾಗೂ 5 ರವರು ಪಿರ್ಯಾದಿದಾರರನ್ನು ಕೈಗಳಿಂದ ಹಿಡಿದುಕೊಂಡು ಮತ್ತು ಆರೋಪಿ 1 ರಿಂದ ಆರೋಪಿ 3 ರವರು ಪಿರ್ಯಾದಿದಾರರ ಮೇಲೆ ಹಲ್ಲೆ ನಡೆಸಿ ಕೈಗಳಿಂದ ಕಲ್ಲುಗಳಿಂದ ಬೆನ್ನಿನ ಮೇಲೆ ಹೊಡೆದು ಹಾಗೂ ಎಡಗೈ ಮುಂಗೈ ಮೇಲೆ ತರಚು ಗಾಯಗಳನ್ನು ಹಾಗೂ ಬಲಮೊಣಕಾಲಿನ ಮೇಲೆ ತರಚು ಗಾಯಗಳಾಗಿದ್ದು ಮೂಗೇಟು ಉಂಟುಮಾಡಿರುತ್ತಾರೆ. ಹಾಗೂ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಪಿರ್ಯಾದಿದಾರರು ಮತ್ತು ಅವರ ತಾಯಿ ಜಮೀನಿನ ಒಳಗೆ ಪ್ರವೇಶ ಮಾಡಿ ಬೆಳೆ ಇಟ್ಟರೆ ಪ್ರಾಣ ತೆಗೆಯುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಜಮೀನಿನಿಂದ ಆಚೆಗೆ ತಳ್ಳಿರುತ್ತಾರೆ. ಈ ಸಂದರ್ಭದಲ್ಲಿ ಪಿರ್ಯಾದಿದಾರರು ಮತ್ತು ಅವರ ತಾಯಿಯ ರಕ್ಷಣೆಗೆ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಪಿರ್ಯಾದುದಾರರ ಚಿಕ್ಕಪ್ಪ ರವರ ಮಗ ಅಂಜಿನಪ್ಪ ಹಾಗೂ ನೇಗಿಲು ಉಳಲು ಬಂದಿದ್ದ ವೆಂಕಟೇಶಪ್ಪ, ದಾರಿಯಲ್ಲಿ ತೋಟಕ್ಕೆ ಹೋಗುತ್ತಿದ್ದ ವೆಂಕಟೇಶಪ್ಪ  ಎಲ್ಲರೂ ಬಂದು ಪಿರ್ಯಾದಿದಾರರು ಮತ್ತು ಇವರ ತಾಯಿಗೆ ರಕ್ಷಣೆ ನೀಡಿ ಜಗಳ ಬಿಡಿಸಿ ಆರೋಪಿ 1, 2, 3 ,4, 5 ರವರುಗಳಿಗೆ ಬುದ್ದಿ ಹೇಳಿ ಕಳುಹಿಸಿ ಪಿರ್ಯಾದಿದಾರರ ಪಿತ್ರಾರ್ಜಿತ ಸ್ವತ್ತು ಸರ್ವೆ ನಂಬರ್ 120(1 ಎಕರೆ 18 ಗುಂಟೆ) ಸರ್ವೆ ನಂಬರ್ 56/2 (08 ಗುಂಟೆ) ಜಮೀನಿನಲ್ಲಿ ಬೆಳೆ ಇಡಲು ಅವಕಾಶ ಮಾಡಿ ಪ್ರಸ್ತುತ ಪಿರ್ಯಾದಿದಾರರು ದಿನಾಂಕ:27.06.2021 ರಂದು ಬೆಳೆ ಇಟ್ಟಿರುತ್ತಾರೆ. ಆದ್ದರಿಂದ ರೋಪಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

10. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.146/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 24-08-2021 ರಂದು ಮದ್ಯಾಹ್ನ 03-15 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಕರೆತಂದು ಹಾಜರುಪಡಿಸಿದ ಆರೋಪಿತ,ಪಂಚನಾಮೆ,ಮಾಲು ಹಾಗೂ ವರದಿಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ,  ಈ ದಿನ ದಿನಾಂಕ 24/08/2021 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಡಿ.ಪಾಳ್ಯ ಹೋಬಳಿ ಸಿದ್ದೇನಹಳ್ಳಿ ಗ್ರಾಮದಲ್ಲಿ ಮಂಜುನಾಥ ಬಿನ್ ನರಸಿಂಹಯ್ಯ ಎಂಬುವವರು ತನ್ನ ಪೆಟ್ಟಿಗೆ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ಸಿಬ್ಬಂದಿಯವರಾದ ಹೆಚ್.ಸಿ-137 ಮಂಜುನಾಥ, ಜೀಪು ಚಾಲಕ ಎ.ಪಿ.ಸಿ-120 ನಟೇಶ್ ಮತ್ತು ಪಂಚರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ.ಎ-40, ಜಿ-395 ರಲ್ಲಿ ಸಿದ್ದೇನಹಳ್ಳಿ ಗ್ರಾಮಕ್ಕೆ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಇಳಿದು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮಂಜುನಾಥರವರ ಪೆಟ್ಟಿಗೆ ಅಂಗಡಿಯ ಮುಂದೆ ಒಬ್ಬ ಆಸಾಮಿ ಪ್ಲಾಸ್ಟಿಕ್ ಕವರನ್ನು ಹಿಡಿದುಕೊಂಡು ನಿಂತಿದ್ದು, ಅದರಲ್ಲಿರುವ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಅಂಗಡಿಯ ಮುಂದೆ ಇಬ್ಬರು ಗಂಡಸರು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಮಾಡುತ್ತಿದ್ದ ಇಬ್ಬರು ಗಂಡಸರು ಓಡಿ ಹೋಗಿದ್ದು, ಚಿಲ್ಲರೆ ಅಂಗಡಿಯ ಮುಂದೆ ಪ್ಲಾಸ್ಟಿಕ್ ಕವರನ್ನು ಹಿಡಿದುಕೊಂಡು ಮದ್ಯದ ಪ್ಯಾಕೇಟ್ ಗಳನ್ನು ಕೊಟ್ಟು ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಆತ ತನ್ನ ಹೆಸರು ಮಂಜುನಾಥ ಬಿನ್ ನರಸಿಂಹಯ್ಯ, 25 ವರ್ಷ, ಈಡಿಗರು, ಅಂಗಡಿ ವ್ಯಾಪಾರ, ಸಿದ್ದೇನಹಳ್ಳಿ ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಈತನ ಬಳಿ ಇದ್ದ ಪ್ಲಾಸ್ಟಿಕ್ ಕವರ್ ನ್ನು ಪರಿಶೀಲಿಸಿದಾಗ, ಅದರಲ್ಲಿ ಮದ್ಯ ತುಂಬಿದ 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 18 ಟೆಟ್ರಾ ಪಾಕೆಟ್ ಗಳು ಇದ್ದು, ಒಟ್ಟು 1,620 ಲೀಟರ್ ಆಗಿರುತ್ತೆ. ಇವುಗಳ ಬೆಲೆ 632.34 ರೂ.ಗಳಾಗಿದ್ದು, ಮದ್ಯಪಾನ ಮಾಡುತ್ತಿದ್ದ ಸ್ಥಳದಲ್ಲಿ 2 ಖಾಲಿ ಪೇಪರ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 2 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿಯನ್ನು ಮದ್ಯದ ಪ್ಯಾಕೇಟ್ ಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯಾ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಸ್ಥಳದಲ್ಲಿ ಮದ್ಯಾಹ್ನ 1-30 ಗಂಟೆಯಿಂದ 2-15 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ ಆರೋಪಿಯನ್ನು ಹಾಗು 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 18 ಟೆಟ್ರಾ ಪಾಕೆಟ್ ಗಳು, 2 ಖಾಲಿ ಪೇಪರ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKYಯ 2 ಖಾಲಿ ಟೆಟ್ರಾ ಪಾಕೆಟ್ ಗಳು ಮತ್ತು ಪ್ಲಾಸ್ಟಿಕ್ ಕವರನ್ನು ವಶಪಡಿಸಿ ಕೊಂಡು, ಠಾಣೆಗೆ ಮದ್ಯಾಹ್ನ 3-15 ಗಂಟೆಗೆ ವಾಪಸ್ಸು ಬಂದು, ವಶಪಡಿಸಿಕೊಂಡಿರುವ ಮಾಲನ್ನು ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಳ್ಳಲು ಸೂಚಿಸಿರುತ್ತೇನೆ.

Last Updated: 24-08-2021 07:01 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080