ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.206/2021 ಕಲಂ. 15(A),32(3) ಕೆ.ಇ  ಆಕ್ಟ್:-

   ದಿನಾಂಕ:23-07-2021 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಶ್ರೀ ನಾಗರಾಜ್ ಡಿ.ಆರ್ ಪೊಲೀಸ್ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಅಸಲು ಪಂಚನಾಮೆ, ಮಾಲು,ಮತ್ತು ಆರೋಪಿಯೊಂದಿಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೆನೆಂದರೆ ದಿನಾಂಕ; 23-07-2021 ರಂದು ಸಂಜೆ ಸುಮಾರು 7-00 ಗಂಟೆ ಸಮಯದಲ್ಲಿ ನಾನು ಮತ್ತು  ಸಿ ಹೆಚ್ ಸಿ-156 ನಟರಾಜ್ ಹಾಗೂ ಜೀಪ್ ಚಾಲಕ ಎ ಹೆಚ್ ಸಿ-57 ನೂರ್ ಪಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು, ಕೊತ್ತಕೋಟೆ, ಚೊಕ್ಕಂಪಲ್ಲಿ, ಮಿಟ್ಟೇಮರಿ ಗ್ರಾಮದ ಕಡೆಗೆ ಗಸ್ತು ಮಾಡುತ್ತಿದ್ದಾಗ, ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಮಿಟ್ಟೇಮರಿ ಗ್ರಾಮದ ಜೂಲ್ಯಪಾಳ್ಯ ಕ್ರಾಸ್ ಬಳಿ ಇರುವ ವೈಶಾಲಿ ಡಾಬದ ಮುಂಭಾಗದಲ್ಲಿ ಯಾರೋ ಒಬ್ಬ ಅಸಾಮಿಯು ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿ ಹೆಚ್ ಸಿ-156 ನಟರಾಜ್ ರವರೊಂದಿಗೆ  ಸರ್ಕಾರಿ ಜೀಪ್ ನಲ್ಲಿ ಹೊರಟು, ಮಿಟ್ಟೇಮರಿ ಗ್ರಾಮದ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಸಂಜೆ 7-15  ಗಂಟೆಗೆ ವೈಶಾಲಿ ಡಾಬದ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಡಾಬದ  ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗಲು ಪಯತ್ನಿಸುತ್ತಿದ್ದವನನ್ನು ಸಿಬ್ಬಂದಿಯಾದ ನಟರಾಜ್ ರವರು ಹಿಡಿದುಕೊಂಡಿದ್ದು, ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ಶ್ರೀಮಂಜುನಾಥ್ ಬಿನ್ ಯಲ್ಲಪ್ಪ, 32 ವರ್ಷ, ಭೋವಿ ಜನಾಂಗ, ವೈಶಾಲಿ ಡಾಬದಲ್ಲಿ ಕೆಲಸ, ವಾಸ: 6 ನೇ ವಾರ್ಡ, ಪೊಲೀಸ್ ಕ್ವಾಟ್ರಸ್ ಹಿಂಭಾಗ, ಬಾಗೇಪಲ್ಲಿ ಟೌನ್ ಎಂದು ತಿಳಿಸಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಆರೋಪಿ ಮತ್ತು ಮಾಲನ್ನು 8-30 ಗಂಟೆ ಠಾಣೆಯಲ್ಲಿ   ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ ಸಂ-206/2021 ಕಲಂ-15(A), 32(3) ಕೆಇ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.207/2021 ಕಲಂ. 279,304(A) ಐ.ಪಿ.ಸಿ:-

    ದಿನಾಂಕ: 23-07-2021 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಭೂದೇವಮ್ಮ ಕೋಂ ವೆಂಕಟರಾಮಪ್ಪ, 38 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ, ಘಂಟಂವಾರಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಈಗ್ಗೆ ಸುಮಾರು 20 ವರ್ಷಗಳ ಹಿಂದೆ ನಾನು ವೆಂಕಟರಾಮಪ್ಪ ಬಿನ್ ಲೇಟ್ ನಾರಾಯಣಪ್ಪ ರವರನ್ನು ವಿವಾಹವಾಗಿದ್ದು, ನಮಗೆ 18 ವರ್ಷದ  ಪ್ರಸಾದ್ ಎಂಬ ಮಗನಿರುತ್ತಾನೆ. ನನ್ನ ಗಂಡನ ಮೊದಲನೇ ಹೆಂಡತಿಯಾದ  ನರಸಮ್ಮ ರವರ ಇಬ್ಬರು ಮಕ್ಕಳಾದ  1) ಅಲವೇಲಮ್ಮ 2) ಅಮರಾವತಿ ರವರುಗಳನ್ನು ನನ್ನ  ತಮ್ಮಂದಿರಾದ 1) ನರಸಿಂಹಪ್ಪ 2) ನಾರಾಯಣಸ್ವಾಮಿ ರವರುಗಳಿಗೆ ವಿವಾಹ ಮಾಡಿಕೊಂಡಿರುತ್ತೇವೆ. ನರಸಮ್ಮ ಚಿಕ್ಕಬಳ್ಳಾಪುರದಲ್ಲಿ ವಾಸವಾಗಿರುತ್ತಾಳೆ.  ಮೇಲ್ಕಂಡ ವಿಳಾಸದಲ್ಲಿ ನಾನು ನನ್ನ ಗಂಡ ಮತ್ತು ನನ್ನ ಮಗ ವಾಸವಾಗಿರುತ್ತೇವೆ.   ನನ್ನ ಗಂಡ ವೆಂಕಟರಾಮಪ್ಪ ಬಿನ್ ಲೇಟ್ ನಾರಾಯಣಪ್ಪ, 50 ವರ್ಷ, ರವರು ಕೂಲಿ ಕೆಲಸವನ್ನು ಮಾಡಿಕೊಂಡಿದ್ದರು. ದಿನಾಂಕ:23/07/2021 ರಂದು ನಾನು ಕೂಲಿ ಕೆಲಸಕ್ಕೆ ಹೋಗಿದ್ದು, ವಾಪಸ್ಸು ಮನೆಗೆ ಬಂದಾಗ ಸಂಜೆ ಸುಮಾರು 7:30 ಗಂಟೆಯಲ್ಲಿ  ನಮ್ಮ ಪಕ್ಕದ ಮನೆಯವರು ಎನ್.ಹೆಚ್ 44 ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನ  ಗಂಡನಿಗೆ ಅಪಘಾತವಾಗಿದೆಯೆಂದು ತಿಳಿಸಿದರು. ತಕ್ಷಣ ನಾನು  ಎನ್.ಹೆಚ್ 44 ರಸ್ತೆಯಲ್ಲಿ ಬಂದು ನೋಡಲಾಗಿ ನನ್ನ ಗಂಡ ಎಡಕಾಲಿಗೆ, ಬಲಕೈಗೆ, ತಲೆಗೆ , ಮುಖಕ್ಕೆ ರಕ್ತಗಾಯವಾಗಿದ್ದು ಬಾಯಲ್ಲಿ ಮತ್ತು ಮೂಗಿನಲ್ಲಿ ರಕ್ತಬಂದಿತ್ತು. ನನ್ನ ಗಂಡನಿಗೆ ಅಪಘಾತವನ್ನುಂಟು ಮಾಡಿದ ಎ.ಪಿ-02 ಸಿ.ಜಿ-6526 ದ್ವಿಚಕ್ರ ವಾಹನ ಸ್ಥಳದಲ್ಲಿಯೇ ಇತ್ತು. ವಿಚಾರ ಮಾಡಲಾಗಿ ನನ್ನ ಗಂಡನು ಅಂಗಡಿಗೆ ಬಂದು ವಾಪಸ್ಸು ಮನೆಗೆ ಬರಲು ಬರುತ್ತಿದ್ದಾಗ, ಘಂಟಂವಾರಿಪಲ್ಲಿ ಸರ್ವೀಸ್ ರಸ್ತೆಯ ಪಕ್ಕದ ಎನ್.ಹೆಚ್ 44 ರಸ್ತೆಯಲ್ಲಿ ಹೈದ್ರಾಬಾದ್ ಕಡೆಯಿಂದ ಬಂದ ಎ.ಪಿ-02 ಸಿ.ಜಿ-6526 ದ್ವಿಚಕ್ರ ವಾಹನ ಸವಾರನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನನ್ನ ಗಂಡನಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಅಪಘಾತವಾಗಿರುವುದಾಗಿ ತಿಳಿಯಿತು.  ನನ್ನ ಗಂಡನನ್ನು ಆಂಬುಲೆನ್ಸಿನಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ನನ್ನ ಗಂಡನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಅಪಘಾತದಿಂದಾದ ಗಾಯಗಳ ದೆಸೆಯಿಂದ ನನ್ನ ಗಂಡನು ಮೃತಪಟ್ಟಿದ್ದು, ಅಪಘಾತವನ್ನುಂಟು ಮಾಡಿದ ಎ.ಪಿ-02 ಸಿ.ಜಿ-6526 ದ್ವಿಚಕ್ರ ವಾಹನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರು.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.208/2021 ಕಲಂ. 32,34,11 ಕೆ.ಇ ಆಕ್ಟ್:-

     ದಿನಾಂಕ:24-07-2021 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಪಿಐ ಸಾಹೇಬರು ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ  ಸಾರಾಂಶವೆನೆಂದರೆ ಈ ದಿನ ದಿನಾಂಕ; 24-07-2021 ರಂದು ಬಾಗೇಪಲ್ಲಿ ಟೌನ್ ನಲ್ಲಿ  ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-1444 ವಾಹನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-156 ನಟರಾಜ,  ಪಿಸಿ-134 ಧನಂಜಯ್  ಹಾಗೂ ಜೀಪ್ ಚಾಲಕ ಎ.ಪಿ.ಸಿ-57 ನೂರ್ ಪಾಷಾ ರವರೊಂದಿಗೆ  ಬಾಗೇಪಲ್ಲಿ ಪುರದಲ್ಲಿ ಗಸ್ತು ಮಾಡುತ್ತಿದ್ದಾಗ ಬೆಳಿಗ್ಗೆ 9-00 ಗಂಟೆಯಲ್ಲಿ  ಯಾರೋ ಆಸಾಮಿಯು  UP-32-YU-8981 ನೊಂದಣಿ ಸಂಖ್ಯೆಯ ಕೆಂಪು ಬಣ್ಣದ ಮಾರುತಿ 800 ಕಾರಿನಲ್ಲಿ ಬೆಂಗಳೂರು-ಹೈದ್ರಾಬಾದ್ ಹೈವೆನಲ್ಲಿ ಗೋರೆಂಟ್ಲ  ಕಡೆಗೆ ಅಕ್ರಮವಾಗಿ  ಮದ್ಯವನ್ನು ಸಾಗಾಟ ಮಾಡುತ್ತಿರುವುದಾಗಿ ಖಚಿತ  ಮಾಹಿತಿ ಬಂದಿದ್ದು, ಬಾಗೇಪಲ್ಲಿ ಟಿ.ಬಿ.ಕ್ರಾಸ್   ಬಳಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಹಾಜರಿದ್ದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ನಂತರ ಪಂಚರು ಮತ್ತು ನಾವು  ಜೀಪಿನಲ್ಲಿ ಬಾಗೇಪಲ್ಲಿ ಟೋಲ್ ಪ್ಲಾಜಾದ ಬಳಿ  ಬೆಳಿಗ್ಗೆ  9-15 ಗಂಟೆಯಲ್ಲಿ ಕಾಯುತ್ತಿದ್ದಾಗ  ಬೆಂಗಳೂರು ಬಾಗೇಪಲ್ಲಿ ಕಡೆಯಿಂದ ಬಂದಂತಹ UP-32-YU-8981 ನೊಂದಣಿ ಸಂಖ್ಯೆಯ ಕೆಂಪು ಬಣ್ಣದ ಕಾರನ್ನು ನಿಲ್ಲಿಸಿ, ವಾಹನವನ್ನು ತಪಾಸಣೆ ಮಾಡಲಾಗಿ ಮದ್ಯದ ಬಾಕ್ಸ್ ಗಳು ಇದ್ದು, ನಂತರ ಕಾರಿನಲ್ಲಿದ್ದವನ  ಹೆಸರು ವಿಳಾಸ ಕೇಳಲಾಗಿ ರಾಘವೇಂದ್ರ ಬಿನ್ ಲೇಟ್ ಗಂಗರಾಜು, 23 ವರ್ಷ, ವಡ್ಡ ಜನಾಂಗ, ಚಾಲಕ ವೃತ್ತಿ, ವಾಸ ರೆಡ್ಡಿಚೆರುವುಪಲ್ಲಿ ಗ್ರಾಮ, ಗೋರೆಂಟ್ಲ ಮಂಡಲಂ, ಪೆನುಗೊಂಡ ತಾಲ್ಲೂಕು, ಎಂದು ತಿಳಿಸಿರುತ್ತಾರೆ. ನಂತರ ಮದ್ಯವನ್ನು ಸಾಗಾಟ ಮಾಡಲು ಮತ್ತು ಮಾರಾಟ  ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ನಂತರ  ಕಾರಿನಲ್ಲಿದ್ದ ಮದ್ಯದ ಬಾಕ್ಸ್ ಗಳನ್ನು ತೆಗೆದು ನೋಡಲಾಗಿ  HAYWARDS CHEERS WHISKY ಯ 8 ಬಾಕ್ಸ್ ಗಳಿದ್ದು, ಪ್ರತಿಯೊಂದು  ಬಾಕ್ಸ್ ನಲ್ಲಿ 90 ML ಸಾಮರ್ಥ್ಯದ 96 HAYWARDS CHEERS WHISKY ಯ ಟೆಟ್ರಾ ಪಾಕೇಟ್ ಗಳಿರುತ್ತವೆ. ಇವುಗಳು  ಒಟ್ಟು 69 ಲೀಟರ್ 120 ಎಂ.ಎಲ್ ಇದ್ದು, ಇದರ ಒಟ್ಟು ಬೆಲೆ 26.979 ರೂ 84 ಪೈಸೆಗಳಾಗಿರುತ್ತದೆ. ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ  ಬೆಳಿಗ್ಗೆ 11-00 ಗಂಟೆಗೆ ಠಾಣೆಯಲ್ಲಿ  ಹಾಜರುಪಡಿಸುತ್ತಿದ್ದು, ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ರಾಘವೇಂದ್ರ ಬಿನ್ ಲೇಟ್ ಗಂಗರಾಜು ರವರ ವಿರುದ್ದ ಕಾನೂನು ರೀತ್ಯಾ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲು ಸೂಚಿಸಿ ನೀಡಿದ ದೂರನ್ನು ಪಡೆದು ಠಾಣಾ ಮೊ ಸಂಖ್ಯೆ-208/2021 ಕಲಂ-11, 32, 34 ಕೆಇ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತೆ.

 

4. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.70/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:23/07/2021 ರಂದು ರಾತ್ರಿ 20:30 ಗಂಟೆಗೆ  ಚೇಳೂರು ಪೊಲೀಸ್ ಠಾಣೆಯ ಪಿಎಸ್ ಐ ರವರಾದ ಪ್ರತಾಪ್ ಕೆ ಆರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ  ದಿನಾಂಕ:23/07/2021 ರಂದು ಸಂಜೆ 18:30 ಗಂಟೆಯಲ್ಲಿ ಚೇಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರತಾಪ್ ಕೆ.ಆರ್ ಆದ ನಾನು ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ 42 ಜಿ 61 ನ ಜೀಪ್ ನಲ್ಲಿ ಜೀಪ್ ಚಾಲಕನಾಗಿ ಎಪಿಸಿ 87 ಮೋಹನ್  ಹಾಗೂ  ಠಾಣೆಯ ಸಿಬ್ಬಂದಿಯವರಾದ ಸಿ.ಹೆಚ್.ಸಿ 149 ಇನಾಯತ್ ರವರೊಂದಿಗೆ ಠಾಣಾ ಸರಹದ್ದು  ಪುಲಿಗಲ್  ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ ಸದರಿ ಗ್ರಾಮದ ವಾಸಿಯಾದ ವೆಂಕಟರವಣಮ್ಮ ರವರು ತನ್ನ  ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶವನ್ನು ನೀಡಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಅದೇ  ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ವೆಂಕಟರವಣಮ್ಮ ರವರ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಮಧ್ಯಪಾನವನ್ನು `ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಮಧ್ಯಪಾನ ಮಾಡುತ್ತಿದ್ದವರು ಮತ್ತು ಮಧ್ಯದ ಪ್ಯಾಕೆಟ್ ಗಳನ್ನು ಇಟ್ಟುಕೊಂಡಿದ್ದ ವ್ಯಕ್ತಿ ಮದ್ಯದ ಪ್ಯಾಕೆಟ್ ಗಳನ್ನು ಸ್ಥಳದಲ್ಲಿಯೇ ಬಿಸಾಡಿ ಸ್ಥಳದಿಂದ ಓಡಿ ಹೋಗಿರುತ್ತಾರೆ. ಸದರಿ ಸ್ಥಳದಲ್ಲಿದ್ದ  ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ  1) 90 ಎಂ.ಎಲ್ ನ  HAYWARDS CHEERS WHISKY ಕಂಪನಿಯ 10 ಟೆಟ್ರಾ ಪ್ಯಾಕೇಟ್ ಗಳಿದ್ದು ಒಟ್ಟು 900 ಎಮ್ ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಬೆಲೆ 35.13 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 351.3 ರೂಗಳಾಗಿರುತ್ತೆ. ಸದರಿ ಸ್ಥಳದಲ್ಲಿದ್ದ ಸಾರ್ವಜನಿಕರನ್ನು  ಮಧ್ಯದ ಪ್ಯಾಕೆಟ್ ಗಳನ್ನಿಟ್ಟುಕೊಂಡಿದ್ದ  ಹಾಗೂ ನಮ್ಮಗಳನ್ನು ನೋಡಿ  ಓಡಿ ಹೋದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ವೆಂಕಟರವಣಮ್ಮ ಕೊಂ ರಾಮಾಂಜಿ , 40 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಪುಲಿಗಲ್ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿರುತ್ತಾರೆಂದು ಹಾಗೂ ಅವರ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ.  ಸದರಿ  ಸ್ಥಳದಲ್ಲಿದ್ದ  ಮೇಲ್ಕಂಡ ಮಧ್ಯದ  ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು  ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ದಾಳಿ ಅಮಾನತು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಠಾಣೆಗೆ ಹಾಜರಾಗಿ ನೀಡಿದ ವರದಿಯನ್ನು  ಪಡೆದು ಠಾಣಾ ಮೊಸಂ:70/2021 ಕಲಂ 15(ಎ),32(3) ಕೆಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.

 

5. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.95/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:23/07/2021 ರಂದು ಸಂಜೆ 18-00 ಗಂಟೆಯ ಸಮಯದಲ್ಲಿ ನಾನು ಮತ್ತು ಠಾಣೆಯ ಸಿಬ್ಬಂದಿಯಾದ ಸಿ.ಪಿ.ಸಿ 91 ಮಂಜುನಾಥ ಹಾಗೂ ಜೀಫ್ ಚಾಲಕರಾಗಿ ಎ.ಪಿ.ಸಿ 94 ಬೈರಪ್ಪ ರವರೊಂದಿಗೆ  ಸರ್ಕಾರಿ ಜೀಫ್ ಸಂಖ್ಯೆ ಕೆಎ-40-ಜಿ-60 ಸರ್ಕಾರಿ ಜೀಫ್ ನಲ್ಲಿ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸಾದಲಿ ಗ್ರಾಮದ ಕಡೆಗೆ ಗಸ್ತಿನಲ್ಲಿದ್ದಾಗ ನನಗೆ ಬಂದ ಮಾಹಿತಿ ಏನೇಂದರೆ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕೆ.ಎಂ.ಎಫ್ ಪೀಡ್ ಪ್ಯಾಕ್ಟರಿಯ ಬಳಿ ಯಾರೋ ಒಬ್ಬ ಆಸಾಮಿಯು ತನ್ನ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಆದರಂತೆ ಎಸ್.ಗೊಲ್ಲಹಳ್ಳಿ ಗ್ರಾಮದ ಕ್ರಾಸ್ ಮುಖಾಂತರ  ಹೊಸದಾಗಿ ನಿರ್ಮಿಸುತ್ತಿರುವ ಕೆ.ಎಂ.ಎಫ್, ಪೀಡ್ ಪ್ಯಾಕ್ಟರಿಯ ಬಳಿ ಬಂದು ಮುಖ್ಯ ರಸ್ತೆಯಲ್ಲಿ ಪಂಚರನ್ನು ಬರಮಾಡಿಕೊಂಡು ಸದರಿಯವರಿಗೆ ದಾಳಿ ಮಾಡುವ ವಿಚಾರ ತಿಳಿಸಿ ಪಂಚರಾಗಿ ಬಂದು ಸಹಕರಿಸಬೇಕೆಂದು ಕೋರಿದರ ಮೇರೆಗೆ ಪಂಚರು ಒಪ್ಪಿರುತ್ತಾರೆ. ನಂತರ ಪಂಚರೊಂದಿಗೆ ಕೆ.ಎಂ.ಎಫ್ ಪೀಡ್ ಪ್ಯಾಕ್ಟರಿಯು ನಿರ್ಮಾಣ ಮಾಡುತ್ತಿರುವ ಸ್ಥಳದಲ್ಲಿ ರಸ್ತೆಯ ಬದಿಯಲ್ಲಿ ಮರೆಯಲ್ಲಿ ನಿಂತು ನೋಡಲಾಗಿ  ಯಾರೋ ಒಬ್ಬ ವ್ಯೆಕ್ತಿ ತನ್ನ ಚಿಲ್ಲರೆ ಅಂಗಡಿಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿದ್ದು ಸದರಿಯವರ ಮೇಲೆ ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ಪೊಲಿಸರನ್ನು ನೋಡಿ ಮಧ್ಯಫಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಅಲ್ಲಿಯೇ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದ ಆಸಾಮಿಗೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು ಹಾಗೂ ಮಧ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಾಕಾಶ ಮಾಡಲು ನಿನ್ನ ಬಳಿ ಯಾವುದಾದರೂ ಪರವಾನಿಗೆ ಇದಿಯೆ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ಹೇಳಿರುತ್ತಾನೆ ನಂತರ ಸದರಿ ಆಸಾಮಿಯ  ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ ಕೃಷ್ಣಾಚಾರಿ ಬಿನ್ ಲೇಟ್ ರಾಮಚಂದ್ರಚಾರಿ, 51 ವರ್ಷ,ಚಿಲ್ಲರೆ ಅಂಗಡಿಯ ವ್ಯಾಪಾರ, ಅಕ್ಕಸಾಲಿಗರು, ವಾಸ: ಎಸ್.ಗೊಲ್ಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:9148682915 ಎಂದು ತಿಳಿಸಿದ್ದು, ಪಂಚರ ಸಮಕ್ಷಮ ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ,ಎಲ್ ನ  HAYWARDS CHEERS WHISKY  ಯ 23 ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು ಮೌಲ್ಯ 2070 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 807.99 ರೂ ಆಗಿರುತ್ತೆ. ಸದರಿ ಮಧ್ಯದ ಪ್ಯಾಕೇಟ್ ಗಳನ್ನು ಮತ್ತು  ಸ್ಥಳದಲ್ಲಿಯೇ ಬಿದಿದ್ದ  2 ಖಾಲಿ 90 ಎಂ,ಎಲ್ ನ  HAYWARDS CHEERS WHISKYಯ ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಮತ್ತು ಒಂದು ಲೀಟರ್  ಖಾಲಿ ವಾಟರ್ ಬಾಟೆಲ್ ನ್ನು ಸಂಜೆ 18-30 ಗಂಟೆಯಿಂದ 19-30 ಗಂಟೆಯ ವರೆಗೆ ವಿಧ್ಯುತ್ ದ್ವೀಪದ ಬೆಳಕಿನಲ್ಲಿ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಆಸಾಮಿಯನ್ನು ಕರೆದುಕೊಂಡು ರಾತ್ರಿ 20-15 ಗಂಟೆಗೆ ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಸ್ವತಃ ಮೊ.ಸಂಖ್ಯೆ:95/2021 ಕಲಂ:15(A),32(3) ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

6. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.96/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ 24/07/2021 ರಂದು ಬೆಳಗ್ಗೆ 11.00 ಗಂಟೆಗೆ ಪಿ.ಎಸ್.ಐ ಶ್ರೀ ಪಾಪಣ್ಣ ಟಿ.ಎನ್ ರವರು ಮಾಲು ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಸ್ವತಃ ದಾಖಲಿಸಿಕೊಂಡಿರುವ ದೂರಿನ  ಸಾರಾಂಶವೇನಂದರೆ, ದಿನಾಂಕ:24/07/2021 ರಂದು ಬೆಳಗ್ಗೆ 9.00 ಗಂಟೆಯಲ್ಲಿ ತಾನು ಠಾಣಾ ಸರಹದ್ದಿನ ಗಸ್ತಿಗಾಗಿ  ಠಾಣಾ ಸಿಬ್ಬಂಧಿ ಪಿ.ಸಿ-196 ದೇವರಾಜ್ ಬಡಿಗೇರ್ ಮತ್ತು ಮ.ಪಿ.ಸಿ-225 ನಾಗಮಣಿ ರವರೊಂದಿಗೆ ಠಾಣಾ ಜೀಪ್ ಸಂಖ್ಯೆ ಕೆ.ಎ-40 ಜಿ-60 ರ ವಾಹನದಲ್ಲಿ ದಿಬ್ಬೂರಹಳ್ಳಿ, ವಡ್ಡಹಳ್ಳಿ, ಟಿ.ವೆಂಕಟಾಪುರ, ತಲಕಾಯಲಬೆಟ್ಟ ಗ್ರಾಮಗಳಿಗೆ ಬೇಟಿ ಮಾಡಿ ಬೆಳಗ್ಗೆ 9.30 ಗಂಟೆಗೆ ಮರಳಪ್ಪನಹಳ್ಳಿ ಗ್ರಾಮಕ್ಕೆ ಬೇಟಿ ಮಾಡಿದಾಗ ಯಾರೋ ಬಾತ್ಮಿದಾರರು ತನಗೆ ಕರೆ ಮಾಡಿ ಮರಳಪ್ಪನಹಳ್ಳಿ ಗ್ರಾಮದ ಶ್ರೀಮತಿ ಅನಿತಾ ಕೊಂ ಗೋವಿಂದಪ್ಪ ರವರು ತಮ್ಮ ಚಿಲ್ಲರೆ ಅಂಗಡಿಯ ಮುಂಭಾಗ  ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ನೀಡಿದ್ದು, ಸದರಿ ಸ್ಥಳದಲ್ಲಿ ದಾಳಿ ಮಾಡಲು ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ, ಪಂಚರಾಗಿ ಸಹಕರಿಸಲು ಕೋರಿದ್ದು, ಅವರು ಒಪ್ಪಿ ತಮ್ಮೊಂದಿಗೆ ಮರಳಪ್ಪನಹಳ್ಳಿ ಗ್ರಾಮದ ಶ್ರೀಮತಿ ಅನಿತಾ ಕೊಂ ಗೋವಿಂದಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಬೆಳಗ್ಗೆ 9.45 ಗಂಟೆಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಸಾರ್ವಜನಿಕರು ಮತ್ತು ಅಂಗಡಿಯಲ್ಲಿದ್ದ ಅಂಗಡಿ ಮಾಲೀಕರು ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಖಾಲಿ ಪ್ಯಾಕೇಟ್ಗಳು, ನೀರಿನ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ನಂತರ ಅಲ್ಲಿದ್ದವರನ್ನು ಪರಾರಿಯಾದ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ಶ್ರೀಮತಿ ಅನಿತಾ ಕೊಂ ಗೋವಿಂದಪ್ಪ, 30 ವರ್ಷ, ಆದಿ ಕರ್ನಾಟಕ ಜನಾಂಗ, ಅಂಗಡಿ ವ್ಯಾಪಾರಿ, ಮರಳಪ್ಪನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಪೋನ್ ನಂಬರ್ 9380253878 ಎಂದು ತಿಳಿದುಬಂದಿರುತ್ತೆ. ನಂತರ ಪಂಚರ ಸಮಕ್ಷಮ ಬೆಳಗ್ಗೆ 10.00 ಗಂಟೆಯಿಂದ  10.45  ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 1 ಲೀಟರ್ 530 ಎಂ.ಎಲ್ ಸಾಮರ್ಥ್ಯದ,  597.21/- ರೂಗಳ ಬೆಲೆ ಬಾಳುವ ಮಧ್ಯ ತುಂಬಿದ ಹೈವಾರ್ಡ್ಸ್ ಚೀರ್ಸ್ ವಿಸ್ಕಿ 90 ಎಂ.ಎಲ್ ನ 17 ಟೆಟ್ರಾ ಪ್ಯಾಕೇಟ್ಗಳು ಇದ್ದು, ಇವುಗಳ ಒಂದರ ಬೆಲೆ 35.13/-ರೂಗಳಾಗಿರುತ್ತೆ. ಇವುಗಳನ್ನು ಹಾಗೂ ಹೈವಾರ್ಡ್ಸ್ ಚೀರ್ಸ್ ವಿಸ್ಕಿ 90 ಎಂ.ಎಲ್ ನ 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಮತ್ತು 1 ಖಾಲಿ ವಾಟರ್ ಬಾಟೆಲನ್ನು ಅಮಾನತ್ತುಪಡಿಸಿಕೊಂಡು, ಬೆಳಗ್ಗೆ 11.00 ಗಂಟೆಗೆ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಠಾಣಾ ಮೊ.ಸಂ 96/2021, ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ನಾನೇ ಸ್ವತಃ ಮುಂದಿನ ಕ್ರಮಕ್ಕಾಗಿ ಪ್ರಕರಣ ದಾಖಲಿಸಿಕೊಂಡಿರುವುದಾಗಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.171/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ: 22/07/2021 ರಂದು 18-00 ಗಂಟೆ ಸಮಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ.ವಿಜಯ್ ಕುಮಾರ್.ಕೆ.ಸಿ.ರವರು ಠಾಣಾಧಿಕಾರಿಗಳಾದ ತನಗೆ ಸೂಚಿಸಿದ್ದೇನೆಂದರೆ ಈ ದಿನ ದಿನಾಂಕ;22-07-2021 ರಂದು ಮಧ್ಯಾಹ್ನ 4-00 ಗಂಟೆಯಲ್ಲಿ  ಗೌರೀಬಿದನೂರು ತಾಲ್ಲೂಕು ಹೊಸೂರು ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ, ಗೆದರೆ ಗ್ರಾಮ ಕೆರೆಯ  ಅಂಗಳದಲ್ಲಿ ಯಾರೋ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪಂಚಾಯ್ತಿದಾರರು ಹಾಗು  ಪೊಲೀಸ್ ಠಾಣೆಯ  ಪೊಲೀಸ್  ಸಿಬ್ಬಂದಿಯವರಾದ ಪಿಸಿ-512 ರಾಜಶೇಖರ, ಪಿಸಿ-520 ಶ್ರೀನಾಥ, ಪಿಸಿ-579 ಚೇತನ್ ಕುಮಾರ್ , ಜೀಪ್ ಚಾಲಕ ಎಪಿಸಿ-143 ಮಹೇಶ್ ರವರನ್ನು ಕರೆದುಕೊಂಡು ಕೆ.ಎ.40.ಜಿ.538 ಸರ್ಕಾರಿ ಜೀಪಿನಲ್ಲಿ ಗೆದರೆ ಗ್ರಾಮದ ಕೆರೆಯ ಅಂಗಳಕ್ಕೆ  ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,   ಪೊದೆಗಳ ನಡುವೆ  6  ಜನರು   ಗುಂಪಾಗಿ ಕುಳಿತು  ಇವರಲ್ಲಿ  ಕೆಲವರು ಅಂದರ್ ಗೆ ನೂರು ರೂಪಾಯಿ ಇನ್ನೂ ಕೆಲವರು ಬಾಹರ್ ಗೆ  ನೂರು ರೂಪಾಯಿ ಎಂದು ಹಣವನ್ನು ಜೂಜಾಟಕ್ಕೆ ಕಟ್ಟಿ, ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿವುದನ್ನು ಖಚಿತ ಪಡಿಸಿಕೊಂಡು, ಪೊಲೀಸರು ಸದರಿ ಸ್ಥಳವನ್ನು ಸುತ್ತುವರೆದು ನಮ್ಮಗಳ ಸಮಕ್ಷಮ ಸದರಿ ಸ್ಥಳದ ಮೇಲೆ ದಾಳಿ ಮಾಡಿ  ಜೂಜಾಟವಾಡುತ್ತಿದ್ದವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸವನ್ನು ಕೇಳಲಾಗಿ,, 1]ಪ್ರಭಾಕರ ಬಿನ್ ಲೇಟ್ ಚನ್ನರಾಯಪ್ಪ, 60 ವರ್ಷ, ಹಿಂದೂ ಸಾದರು, ಜಿರಾಯ್ತಿ, ಗೆದರೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು, 2] ಬಾಷಾ ಬಿನ್ ಅಮಾನುಲ್ಲಾ, 44 ವರ್ಷ, ಬೀಡಿ ಕಟ್ಟುವ ಕೆಲಸ, ಗೆದರೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು[9901500596],3] ರಾಮಣ್ಣ ಬಿನ್ ಲೇಟ್ ನರಸಿಂಹಯ್ಯ, 50ವರ್ಷ, ಒಕ್ಕಲಿಗರು, ಗೆದರೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು[7676826960], 4] ಲಕ್ಷ್ಮೀನಾರಾಯಣ ಬಿನ್ ಲೇಟ್ ಗಂಗಾಧರಪ್ಪ, 28 ವರ್ಷ, ಶೆಟ್ಟಿ ಬಲಜಿಗರು, ವೆಂಕಟಪ್ಪಗಲ್ಲಿ, ಗೌರಿಬಿದನೂರು ಟೌನ್ [8792701607], 5] ರಘು.ಕೆ.ಎನ್. ಬಿನ್ ಲೇಟ್ ನರಸಪ್ಪ, 38 ವರ್ಷ, ಮಡಿವಾಳರು, ಜಿರಾಯ್ತಿ, ಕೋಡಿಗೇನಹಳ್ಳಿ ಗ್ರಾಮ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ [8618917262], 6} ಯು.ಪಿ. ಮಂಜುನಾಥ ಬಿನ್ ಪುಟ್ಟಯ್ಯ, 45 ವರ್ಷ, ಮಡಿವಾಳರು, ಚಾಲಕ ವೃತ್ತಿ, ಊರ್ಡಿಗೆರೆ ಗ್ರಾಮ, ತುಮಕೂರು ತಾಲ್ಲೂಕು & ಜಿಲ್ಲೆ [ 9740778413],   ಎಂದು ತಿಳಿಸಿದ್ದು, . ಸ್ಥಳದಲ್ಲಿ ಪರಿಶೀಲಿಸಲಾಗಿ ನೀಲಿ ಬಣ್ಣದ ಪ್ಲಾಸ್ಟಿಕ್ ಪೇಪರ್ ಮೇಲೆ ಜೂಜಾಟವಾಡಲು ಬಳಸುತ್ತಿದ್ದ  ಇಸ್ಟೀಟ್ ಎಲೆಗಳು,  ಮತ್ತು  ಜೂಜಾಟಕ್ಕೆ ಕಟ್ಟಿದ್ದ ನಗದು ಹಣ ಚೆಲ್ಲಾಪಿಲ್ಲಿಯಾಗಿ  ಬಿದ್ದಿದ್ದು,  ಹಣವನ್ನು ಎಣಿಸಲಾಗಿ 7330/- ರೂ ನಗದು ಹಣ ಹಾಗು 52 ಇಸ್ಪೀಟ್ ಎಲೆಗಳು ಇರುತ್ತವೆ. ಇವುಗಳನ್ನು  ಪಂಚರ ಸಮಕ್ಷಮದಲ್ಲಿ ಸಂಜೆ4-30 ರಿಂದ 5-30 ಗಂಟೆಯವರೆಗೆ  ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಂಡಿರುತ್ತೆ.  ನಂತರ ಸಂಜೆ 6-00 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು,  ಸ್ಥಳದಲ್ಲಿ ವಶಕ್ಕೆಪಡೆದಿದ್ದ ನೀಲಿ ಬಣ್ಣದ ಪ್ಲಾಸ್ಟಿಕ್ ಪೇಪರ್ , 52 ಇಸ್ಪೀಟ್ ಎಲೆಗಳು, 7330/- ನಗದು ಹಣ, ಹಾಗು ಆರೋಪಿಗಳನ್ನು  ನಿಮ್ಮ ವಶಕ್ಕೆ ನೀಡುತ್ತಿದ್ದು,  ಕಾನೂನು ಕ್ರಮ  ಕೈಗೊಳ್ಳಲು ಸೂಚಿಸಿದ್ದು ಈ ದೂರಿನಲ್ಲಿನ ಅಂಶಗಳು ಅಸಂಜ್ಞೇಯ ಅಂಶಗಳಾಗಿರುವುದರಿಂದ ಎನ್.ಸಿ.ಆರ್ ನಂ.326/2021 ರಂತೆ ದಾಖಲಿಸಿಕೊಂಡಿರುತ್ತೇನೆ.ನಂತರ ಈಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು  ಘನ ನ್ಯಾಯಾಲಯದಿಂದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಈದಿನ ನೀಡಿದ ಅನುಮತಿಯ ಆದೇಶದಂತೆ ಪ್ರಕರಣವನ್ನು ದಾಖಲಿಸಿರುತ್ತೆ.

 

8. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.162/2021 ಕಲಂ. 341,34,355,323 ಐ.ಪಿ.ಸಿ:-

     ದಿನಾಂಕ: 23.07.2021 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ನಿರ್ಮಲ ಕೋಂ ಹೆಚ್.ಎಂ,ಮುನಿರಾಜು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿ: 12.07.2021 ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ಪೆರೇಸಂದ್ರ ಕ್ರಾಸ್ ನಿಂದ ಮಂಡಿಕಲ್ಲು ಗ್ರಾಮಕ್ಕೆ ಕೋಳಿಗಳನ್ನು ತರಲು ನಮ್ಮ ಸ್ವಂತ ದ್ವಿಚಕ್ರ ವಾಹನದಲ್ಲಿ ನನ್ನ ಮಗ ನೀತಿನ ಹೋಗುತ್ತಿದ್ದಾಗ ಮಂಡಿಕಲ್ಲು ಗ್ರಾಮದ 1 ನೇ ಅಬಿ ಬಿನ್ ಮುನಿರಾಜು, 2 ನೇ ಶ್ರೀಕಾಂತ, 3ನೇ ಶಿರಾಜ್ ಮತ್ತು 4 ನೇ ಗೋವರ್ದನ್ ಎಂಬ 4 ಜನ ಆಸಾಮಿಗಳು ಅಕ್ರಮವಾಗಿ ವಿನಾ ಕಾರಣ ಅಡ್ಡಗಟ್ಟಿ, ಕೈಗಳಿಂದ ಹೊಡೆದು ಬಲವಾಗಿ ಎಡಭಾಗ ಮತ್ತು ಬಲಭಾಗದ ಬುಜಕ್ಕೆ ಗುದ್ದಿ ಮೂಗೇಟುವುಂಟುಮಾಡಿರುತ್ತಾರೆ. ಮತ್ತು ಚಪ್ಪಲಿಕಾಲುಗಳಿಂದ ಒದ್ದಿರುತ್ತಾರೆ. ದ್ವಿಚಕ್ರ ವಾಹನವನ್ನು ತಡೆದಿದ್ದರಿಂದ ಕೆಳಗೆ ಬಿದ್ದಿರುತ್ತಾನೆ. ನನ್ನ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದಾಗ ಗುಂಡ್ಲ ಮಂಡಿಕಲ್ಲು ಬಳಿ ಸಾರ್ವಜನಿಕ ರಸ್ತೆಯಲ್ಲಿ ಕಿರುಚಿಕೊಳ್ಳುತ್ತಿದ್ದಾಗ ಸಾರ್ವಜನಿಕರು ಹಲ್ಲೆಯನ್ನು ತಡೆದು ಜಗಳ ಬಿಡಿಸಿರುತ್ತಾರೆ. ವಿಷಯವನ್ನು ನನ್ನ ಮಗ ದೂರವಾಣಿ ಮೂಕಾಂತರ ತಿಳಿಸಿದ್ದರ ಮೇರೆಗೆ ತಕ್ಷಣ  ಆ ಸ್ಥಳಕ್ಕೆ ಬಂದು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕ ನಂತರ ದೂರನ್ನು ತಡವಾಗಿ ನೀಡಿರುತ್ತೇವೆ. ಸದರಿಯವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಪ್ರಾರ್ಥನೆ ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

9. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.163/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:23/07/2021 ರಂದು ಸಂಜೆ 4-30 ಗಂಟೆಯಲ್ಲಿ ಪಿರ್ಯಾದಿದಾರರಾದ ಎಮ್ ಜಾಫರ್ ಹುಸೇನ್ ಬಿನ್ ಚಿನ್ನ ಬಾಬಯ್ಯ 25 ವರ್ಷ, ಮುಸ್ಲೀಂ ಜನಾಂಗ, ಚಾಲಕ, ವಾಸ: ನಂ 15/198-1 ದಸ್ತಗಿರಿ ಪೇಟ, 18 ನೇ ವಾರ್ಡ, ಪ್ರೊದ್ದಟೂರು ಟೌನ್, ವೈ,ಎಸ್,ಆರ್ ಕಡಪಾ ಜಿಲ್ಲೆ ಆಂದ್ರಪ್ರಧೇಶ ಮೊ:8790492759 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:22/07/2021 ರಂದು ರಾತ್ರಿ ಸುಮಾರು 10.00 ಗಂಟೆ ಸಮಯದಲ್ಲಿ ನಾನು ಮತ್ತು ನಮ್ಮ ಪೊದ್ದಟೂರು ಟೌನಿನ ನನ್ನ ಸ್ನೇಹಿತರಾದ éಷೇಕ್ ತೋಪಿಕ್ ಬಿನ್ ಷೇಕ್ ಹಾಜಿ 19 ವರ್ಷ,  ಷೇಕ್ ಆಜಂ, ಸಾದಕ್, ತೋಹಿರ್, ಅಬ್ದುಲ್ ರಹಮಾನ್, ಹರ್ಷದ್ ಬಿನ್ ಅನ್ವಾರ್ ಹುಸೇನ್ 18 ವರ್ಷ ರವರು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಕ್ಕೆ ಹೋಗಲು ಎ,ಪಿ-26 ಎಎ-9988 ನೊಂದಣಿ ಸಂಖ್ಯೆಯ ಸ್ಕಾರ್ಪಿಯೋ ಕಾರಿನಲ್ಲಿ ನಾನು ಚಾಲನೆ ಮಾಡಿಕೊಂಡು ನಮ್ಮ ಪೊದ್ದಟೂರು ಗ್ರಾಮ ಬಿಟ್ಟು ಹೈದರಾಬಾದ್ ನಿಂದ ಬೆಂಗಳೂರಿಗೆ ಹೋಗುವ ಎನ್,ಎಚ್ 44 ರಸ್ತೆಯಲ್ಲಿ ಈ ದಿನ ದಿನಾಂಕ:23/07/2021 ರಂದು ಬೆಳಿಗ್ಗೆ 4-30 ಗಂಟೆಯಲ್ಲಿ ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಬರುತ್ತಿದ್ದಾಗ ನಾವು ಬರುತ್ತಿದ್ದ ಕಾರಿನ ಮುಂದಿನ ಎಡಭಾಗದ ಚಕ್ರ ಬಿಚ್ಚುಕೊಂಡು ಬಂದು ಬಿಟ್ಟಿದ್ದು ನಾನು ಕಾರನ್ನು ನಿಲ್ಲಿಸಿ ಇಂಡಿಕೇಟರ್ ಮತ್ತು ಪಾರ್ಕಿಂಗ್ ಲೈಟ್ಸ್ ಹಾಕಿ ಎಲ್ಲರೂ ಕಾರಿನಿಂದ ಇಳಿದು ಪಕ್ಕದಲ್ಲಿ ನಿಂತುಕೊಂಡು ಕಾರನ್ನು ರಿಪೇರಿ ಮಾಡಿಸಲು ನೋಡುತ್ತಿದ್ದಾಗ ಈ ದಿನ ದಿನಾಂಕ:23/07/2021 ರಂದು ಬೆಳಿಗ್ಗೆ 5-00 ಗಂಟೆ ಸಮಯದಲ್ಲಿ ಹೈದರಾಬಾದ್ ಕಡೆಯಿಂದ ಕೆ,ಎ 02 ಎ,ಬಿ 0633 ನೊಂದಣಿ ಸಂಖ್ಯೆಯ ಕ್ಯಾಂಟರ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಂತಿದ್ದ ನಮ್ಮ ಎ,ಪಿ-26 ಎಎ-9988 ನೊಂದಣಿ ಸಂಖ್ಯೆಯ ಸ್ಕಾರ್ಪಿಯೋ ಕಾರಿಗೆ ಹಿಂಭಾಗ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ನಮ್ಮ ಎ,ಪಿ-26 ಎಎ-9988 ನೊಂದಣಿ ಸಂಖ್ಯೆಯ ಸ್ಕಾರ್ಪಿಯೋ ಕಾರು ಪೂರ್ತಿಯಾಗಿ ಜಖಂಗೊಂಡಿರುತ್ತೆ. ಅಪಘಾತದಲ್ಲಿ ಕೆ,ಎ 02 ಎ,ಬಿ 0633 ನೊಂದಣಿ ಸಂಖ್ಯೆಯ ಕ್ಯಾಂಟರ್ ವಾಹನದ ಚಾಲಕನಿಗೆ ಸಣ್ಣಪುಟ್ಟಗಾಯವಾಗಿರುತ್ತೆ. ನಮ್ಮ ಎ,ಪಿ-26 ಎಎ-9988 ನೊಂದಣಿ ಸಂಖ್ಯೆಯ ಸ್ಕಾರ್ಪಿಯೋ ಕಾರಿಗೆ ಅಪಘಾತ ಪಡಿಸಿದ ಕೆ,ಎ 02 ಎ,ಬಿ 0633 ನೊಂದಣಿ ಸಂಖ್ಯೆಯ ಕ್ಯಾಂಟರ್ ವಾಹನದ ಚಾಲಕನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

10. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.164/2021 ಕಲಂ. 279,304(A) ಐ.ಪಿ.ಸಿ:-

   ದಿನಾಂಕ:24/07/2021 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ವಿಶಾಲಾಕ್ಷ್ಮಮ್ಮ ಎಸ್,ವಿ ಕೊಂ ವೆಂಕಟಪ್ಪ 35 ವರ್ಷ, ವಿಶ್ವಕರ್ಮ ಜನಾಂಗ, ಜಿರಾಯ್ತಿ, ವಾಸ: ತಟ್ಟಹಳ್ಳಿ ಗ್ರಾಮ, ಸೋಮೇನಹಳ್ಳಿ ಹೋಬಳಿ ಗುಡಿಬಂಡೆ ತಾಲ್ಲೂಕು ಮೊ:8197202718 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಸುಮಾರು 15 ವರ್ಷಗಳ ಹಿಂದೆ ತಟ್ಟಹಳ್ಳಿ ಗ್ರಾಮದ ವೆಂಕಟಪ್ಪ ರವರನ್ನು ಮದುವೆ ಮಾಡಿಕೊಂಡಿದ್ದು ತಮಗೆ 1 ನೇ ತೇಜಸ್ವಿನಿ 2 ನೇ ಪ್ರತಿಭಾ ಎಂಬ ಮಕ್ಕಳಿರುತ್ತಾರೆ. ತನ್ನ ಗಂಡ ಜಿರಾಯ್ತಿ ಮಾಡುತ್ತಿದ್ದು ಜಿರಾಯ್ತಿಯಿಂದ ದುಡಿದು ಜೀವನ ನಡೆಸುತ್ತಿರುತ್ತೇವೆ. ಈಗಿರುವಾಗ ದಿನಾಂಕ:23/07/2021 ರಂದು ಸಂಜೆ 7-00 ಗಂಟೆಯಲ್ಲಿ ಬಾಗೇಪಲ್ಲಿ ಟೌನ್ನಲ್ಲಿ ಕೆಲಸವಿದೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದು ನಂತರ ದಿನಾಂಕ:23/07/2021 ರಂದು ರಾತ್ರಿ 11-10 ಗಂಟೆ ಸಮಯದಲ್ಲಿ ತಮ್ಮ ಭಾವನ ಮಗ ನಂದೀಶ್ ರವರು ತನಗೆ ಕರೆ ಮಾಡಿ ತಿಳಿಸಿದ್ದೇನೆಂದರೆ ತಾನು ಮನೆಯಲ್ಲಿದ್ದಾಗ ತನ್ನ ಗಂಡ ವೆಂಕಟಪ್ಪ ರವರು ಬಾಗೇಪಲ್ಲಿಯಲ್ಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದೇನೆ ನೀನು ದ್ವಿ ಚಕ್ರ ವಾಹನ ತೆಗೆದುಕೊಂಡು ತಟ್ಟಹಳ್ಳಿ ಕ್ರಾಸ್ ಬಳಿ ಬರಲು ತನಗೆ ಹೇಳಿದ್ದು ಅದರಂತೆ ತಾನು ತನ್ನ ದ್ವಿ ಚಕ್ರ ವಾಹನ ತೆಗೆದುಕೊಂಡು ದಿನಾಂಕ:23/07/2021 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ತಟ್ಟಹಳ್ಳಿ ಕ್ರಾಸ್ನಲ್ಲಿ ಕಾಯುತ್ತಿದ್ದಾಗ ತನ್ನ ಗಂಡ ವೆಂಕಟಪ್ಪ ರವರು ಬಾಗೇಪಲ್ಲಿಯಿಂದ ಬಂದು ಚೆಂಡೂರು ಕ್ರಾಸ್ ಬಸ್ ನಿಲ್ದಾಣದಲ್ಲಿ ಇಳಿದು ಬೆಂಗಳೂರಿನಿಂದ ಹೈದರಾಬಾದ್ ಕಡೆ ಬರುವ ಎನ್,ಎಚ್ 44 ರಸ್ತೆಯ ಎಡಭಾಗದ ಬದಿಯಲ್ಲಿ ನಡೆದುಕೊಂಡು ತಟ್ಟಹಳ್ಳಿ ಕ್ರಾಸ್ ಬಳಿ ಬರುತ್ತಿದ್ದಾಗ ಹಿಂದುಗಡೆ ಬೆಂಗಳೂರು ಕಡೆಯಿಂದ ಅಪಘಾತಪಡಿಸಿದ AP02-BU-6555  ನೊಂದಣಿ ಸಂಖ್ಯೆಯ ಬ್ರಿಜಾ ಕಾರಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಗಂಡ ವೆಂಕಟಪ್ಪ ರವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ತಕ್ಷಣ ತಾನು ಹೋಗಿ ತನ್ನ ಗಂಡ ವೆಂಕಟಪ್ಪ ರವರನ್ನು ಉಪಚರಿಸಿದಾಗ ತಲೆಗೆ ಮತ್ತು ಕಾಲಿಗೆ ತೀವ್ರಾವಾದ ರಕ್ತಗಾಯವಾಗಿದ್ದು ತಾನು ಮತ್ತು ಅಲ್ಲಿಗೆ ಬಂದ ತಮ್ಮ ಗ್ರಾಮದ ಪ್ರಸಾದ್ ಬಿನ್ ರಾಮಕೃಷ್ಣಪ್ಪ ರವರು ಅಂಬುಲೆನ್ಸಗೆ ಕರೆ ಮಾಡಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಅಂಬುಲೆನ್ಸ ನಲ್ಲಿ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು. ನಂತರ ತಾನು ಮತ್ತು ತಮ್ಮ ಗ್ರಾಮದ ನಾರಾಯಣಸ್ವಾಮಿ ಬಿನ್ ಮದ್ದಯ್ಯ ರವರು ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ ಸಕರ್ಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ತನ್ನ ಗಂಡನಿಗೆ ಅಪಘಾತವಾಗಿರುವುದು ನಿಜವಾಗಿದ್ದು. ವೈದ್ಯರು ತನ್ನ ಗಂಡ ವೆಂಕಟಪ್ಪ ರವರನ್ನು ಪರೀಕ್ಷಿಸಿ ತನ್ನ ಗಂಡನಿಗೆ ಅಪಘಾತದಲ್ಲಿ ಆದ ತೀವ್ರಾವಾದ ರಕ್ತಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದರು. ತನ್ನ ಗಂಡ ವೆಂಕಟಪ್ಪ ರವರ ಮೃತ ದೇಹವು ಬಾಗೇಪಲ್ಲಿ ಸರ್ಕಾರಿ  ಆಸ್ಪತ್ರೆಯ ಶವಗಾರದಲ್ಲಿರುತ್ತೆ. ಆದ್ದರಿಂದ ತನ್ನ ಗಂಡ ವೆಂಕಟಪ್ಪ ರವರಿಗೆ ಅಪಘಾತಪಡಿಸಿದ AP02-BU-6555 ನೊಂದಣಿ ಸಂಖ್ಯೆಯ ಬ್ರಿಜಾ ಕಾರಿನ ಚಾಲಕನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 

11. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.165/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:24-07-2021  ರಂದು ಮದ್ಯಾಹ್ನ 12.30 ಗಂಟೆಗೆ  ಘನ ನ್ಯಾಯಾಲಯದ ಪಿಸಿ 89 ರವರು ಠಾಣಾ ಎನ್.ಸಿ.ಆರ್ ನಂಬರ್ -207/2021 ರಲ್ಲಿ ಘನ ನ್ಯಾಯಾಲಯದಿಂದ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡೆಸಿದ ಆದೇಶ ಸಾರಾಂಶವೆನೆಂದರೆ , ದಿನಾಂಕ:23-07-2021 ರಂದು ಮದ್ಯಾಹ್ನ 2-.00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಅಪರಾಧ ವಿಭಾಗದ  ಸಿಬ್ಬಂದಿ ಶ್ರೀನಿವಾಸ ಸಿ.ಹೆಚ್.ಸಿ-29 ರವರು  ನನಗೆ ಪೋನ್ ಮಾಡಿ ಗುಡಿಬಂಡೆ ತಾಲ್ಲೂಕು ಬೀಚಗಾನಹಳ್ಳಿ  ಗ್ರಾಮದಲ್ಲಿ   ಗಸ್ತುನಲ್ಲಿರುವಾಗ ಕೃಷ್ಣಮೂರ್ತಿ  ರವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಯರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಠಾಣಾ ಸಿಬ್ಬಂದಿಯಾದ ಸಂತೋಷ ಸಿ.ಪಿ.ಸಿ-141 ರವರನ್ನು ಕರೆದುಕೊಂಡು ದ್ವಿಚಕ್ರವಾಹನದಲ್ಲಿ ಮದ್ಯಾಹ್ನ 02-30 ಗಂಟೆ ಸಮಯಕ್ಕೆ ಬೀಚಗಾನಹಳ್ಳಿ ಗ್ರಾಮಕ್ಕೆ ಹೋಗಿ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ ಕೃಷಮೂರ್ತಿ ರವರ ಅಂಗಡಿಯ ಮುಂಭಾಗದ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಮದ್ಯಾಹ್ನ 02-45 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯೂ ಸಹಾ ಓಡಿ ಹೋಗಿದ್ದು ಸದರಿ ಆಸಾಮಿಯ  ಹೆಸರು & ವಿಳಾಸ ಕೆಳಿ ತಿಳಿಯಲಾಗಿ ಕೃಷ್ಣಮೂರ್ತಿ  ಬಿನ್ ನರಸಿಂಹಪ್ಪ, 30 ವರ್ಷ, ನಾಯಕರು, ವ್ಯಾಪಾರ, ಬೀಚಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 12 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮರ್ಥ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 80 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*12=421.44/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 03-00 ಗಂಟೆಯಿಂದ ಸಂಜೆ 4-00  ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 4-30 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 5-00 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ದೂರನ್ನು ದಾಖಲಿಸಿರುತ್ತೆನೆ.

 

12. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.88/2021 ಕಲಂ. 87 ಕೆ.ಪಿ  ಆಕ್ಟ್:-

     ದಿನಾಂಕ.23.07.2021 ರಂದು ಸಂಜೆ 05.45 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ:-23-07-2021 ರಂದು ಮದ್ಯಾಹ್ನ 03.30 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಕೆ.ಸತೀಶ್ ಆದ ನಾನು ನಗರದಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ಇಲಾಹಿ ನಗರದ ಮುಬಾರಕ್ ಎಂಬುವರ ಸಾ-ಮಿಲ್ ಹಿಂಭಾಗದ ಖಾಲಿಜಾಗದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡಿರುತ್ತೆ. ನಂತರ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ 97, ಸುಬ್ರಮಣಿ, ಪಿಸಿ-278 ನಾರಾಯಣ, ಪಿ.ಸಿ-126 ವೆಂಕಟೇಶ್,ಪಿ,ಸಿ-308 ಚಂದಪ್ಪ ಯಲಿಗಾರ್, ಪಿ,ಸಿ-327 ಮುರಳಿ ಕೃಷ್ಣೇಗೌಡ,   ಜೀಪ್ ಚಾಲಕ ಮಂಜುನಾಥ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 04.20 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಸಿಬ್ಬಂದಿಯವರು ಹಿಂಬಾಲಿಸಿ ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1]  ಜಾವೀದ್ ಬಿನ್ ಸಾದೀಕ್, 26 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಮಹಬೂಬ್ ನಗರ, ಶಿಡ್ಲಘಟ್ಟ ನಗರ, 2] ಬಕಾಶ್ ಬಿನ್ ಲೇಟ್ ಅಜೀಜ್ ಸಾಬ್,  29 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಮಹಬೂಬ್ ನಗರ, ಶಿಡ್ಲಘಟ್ಟ ನಗರ, 3] ಸುಹೇಲ್ ಬಿನ್ ಬಾಷ,  24 ವರ್ಷ, ಮುಸ್ಲಿಮರು, ರೇಷ್ಮೆ ಕೆಲಸ, ಮಹಬೂಬ್ ನಗರ, ಶಿಡ್ಲಘಟ್ಟ ನಗರ. 4] ಜಿಕ್ರೀಯಾ ಬಿನ್  ಬಾಷ, 27 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಮಹಬೂಬ್ ನಗರ, ಶಿಡ್ಲಘಟ್ಟ ನಗರ, ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 1260/-ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಸಂಜೆ 04.45 ಗಂಟೆಯಿಂದ 05.10 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 04 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 24-07-2021 05:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080