ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ  ಪೊಲೀಸ್  ಠಾಣೆ ಮೊ.ಸಂ.165/2021 ಕಲಂ.379 ಐ.ಪಿ.ಸಿ:-

     ದಿನಾಂಕ: 24/06/2021 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿದಾರರಾದ ನಾಗರಾಜ ಬಿನ್ ಶಿವನ್ನ, 4ನೇ ವಾರ್ಡ್ ಬಾಗೇಪಲ್ಲಿ ಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಖಾಸ ಬಾವನಾದ ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಅಂಚೆ ಯದ್ದಲಹಳ್ಳಿ ಗ್ರಾಮದ ವಾಸಿ ಮಂಜುನಾಥ ಬಿನ್ ಹನುಮಪ್ಪ ಎಂಬುವವರಿಂದ ನಾನು ಎಂಜಿನ್ ನಂ-HA10ENDHD51114. ಚಾಸಿಸ್ ನಂ-MBLHA10AWDHD26774 ಸುಮಾರು 20000 ರೂ ಬೆಲೆ ಬಾಳುವ ಕೆಎ-43 ಕ್ಯೂ-0478 ನೋಂದಣಿ ಸಂಖ್ಯೆಯ PASSION PRO CAST SELF ದ್ವಿಚಕ್ರ ವಾಹನವನ್ನು  ಖರೀದಿಸಿದ್ದು . ಈ ವಾಹನವನ್ನು ನಾನೇ ಬಾಗೇಪಲ್ಲಿಯಲ್ಲಿ ಉಪಯೋಗಿಸಿಕೊಳ್ಳುತ್ತಿರುತ್ತಿದ್ದು. ದಿನಾಂಕ:22/06/2021 ರಂದು ರಾತ್ರಿ ಸುಮಾರು 10.30 ಗಂಟೆಯಲ್ಲಿ ನಮ್ಮ ಮನೆಯ ಮುಂದೆ ನಿಲ್ಲಿಸಿ ನಂತರ ಬೆಳಿಗ್ಗೆ ನೋಡಲಾಗಿ ಸುಮಾರು 20000 ರೂ ಬೆಲೆ ಬಾಳುವ ಕೆಎ-43 ಕ್ಯೂ-0478 ನೋಂದಣಿ ಸಂಖ್ಯೆಯ PASSION PRO CAST SELF ನನ್ನ ದ್ವಿಚಕ್ರ ವಾಹನವನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಕಳುವಾದ ನನ್ನ ದ್ವಿಚಕ್ರ ವಾಹನವನ್ನು ಪತ್ತೆಮಾಡಿ ಕಳ್ಳತನ ಮಾಡಿರುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

2. ಬಾಗೇಪಲ್ಲಿ  ಪೊಲೀಸ್  ಠಾಣೆ ಮೊ.ಸಂ.166/2021 ಕಲಂ.279,304(ಎ) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ: 24/06/2021 ರಂದು ಮದ್ಯಾಹ್ನ 1-45 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಅನಿತಾ ಬಿನ್ ಸತ್ಯನಾರಾಯಣ, 31 ವರ್ಷ, ಬೋವಿ ಜನಾಂಗ, ಕೊಲಿಕೆಲಸ, ವಾಸ ನಾರೇಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ಈಗ್ಗೆ 15 ವರ್ಷಗಳ ಹಿಂದೆ ಹಿಂದೂಪುರ ತಾಲ್ಲೂಕು, ಚಿಲಮತ್ತೂರು ಮಂಡಲ, ರಾಯಚೆರ್ಲ ಗ್ರಾಮದ ಸತ್ಯನಾರಾಯಣ ಎಂಬುವವರೊಂದಿಗೆ ಮದುವೆಯಾಗಿದ್ದು, ನಮಗೆ ಇಬ್ಬರು ಗಂಡು ಮಕ್ಕಳು ಇರುತ್ತಾರೆ. ನಾನು ನನ್ನ ಗಂಡ ಮತ್ತು ಮಕ್ಕಳು  ಈಗ್ಗೆ 6 ತಿಂಗಳಿಂದ ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ, ನಾರೇಪಲ್ಲಿ ಗ್ರಾಮದಲ್ಲಿ ವಾಸವಾಗಿರುತ್ತೇನೆ. ನನ್ನ ಗಂಡ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 22/06/2021 ರಂದು  ರಾತ್ರಿ ಸುಮಾರು 7-00 ಗಂಟೆಗೆ ಕೆಲಸಕ್ಕೆಂದು ಅನಂತಪುರಕ್ಕೆ ಹೋಗಿರುತ್ತಾರೆ. ದಿನಾಂಕ 24/06/2021 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ  ನಾರೆಪಲ್ಲಿ ಗ್ರಾಮದ ಸೀನಪ್ಪರವರು  ಪೋನ್ ಮಾಡಿ ನಿನ್ನ ಗಂಡನಾದ ಸತ್ಯನಾರಾಯಣನಿಗೆ ಬೆಂಗಳೂರು-ಹೈದ್ರಾಬಾದ್ ರಸ್ತೆಯಲ್ಲಿ ದಿನಾಂಕ 23/06/2021 ರಂದು ರಾತ್ರಿ ಅಪಘಾತವಾಗಿ ಮೃತಪಟ್ಟಿದ್ದು ಮೃತದೇಹವು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಇರುವುದಾಗಿ ತಿಳಿಸಿದರು. ನಾನು ಆಸ್ಪತ್ರೆಯ ಬಳಿ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ವಿಚಾರ ಮಾಡಿ ತಿಳಿಯಲಾಗಿ ದಿನಾಂಕ 23/06/2021 ರಂದು ರಾತ್ರಿ ಸುಮಾರು 11-45 ಗಂಟೆಯಲ್ಲಿ ಬೆಂಗಳೂರು-ಹೈದ್ರಾಬಾದ್ ರಸ್ತೆಯಲ್ಲಿರುವ ಮಂಜುನಾಥ ಡಾಬಾದ ಬಳಿ ರಸ್ತೆಯ ಎಡಬಾಗ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಬೆಂಗಳೂರು ಕಡೆಯಿಂದ ಹೈದ್ರಾಬಾದ್ ಕಡೆಗೆ ಹೋಗುವ ಟಿ.ಎನ್-34-ಟಿ.-5355 ನೊಂದಣಿ ಸಂಖ್ಯೆಯ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ  ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ನನ್ನ ಗಂಡ ಸತ್ಯನಾರಾಯಣ, 45 ವರ್ಷ ರವರಿಗೆ ಡಿಕ್ಕಿ ಹೊಡೆದು ವಾಹನವನ್ನು ಸ್ಥಳದಲ್ಲಿ  ನಿಲ್ಲಿಸದೇ ಹೊರಟು ಹೋಗಿರುತ್ತಾರೆ. ಅಪಘಾತವಾದ ಪರಿಣಾಮ ನನ್ನ ಗಂಡನ ತಲೆಗೆ ರಕ್ತಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿಯಿತು. ಆದ್ದರಿಂದ ನನ್ನ ಗಂಡನಿಗೆ ಅಪಘಾತವನ್ನುಂಟು ಮಾಡಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ಟಿ.ಎನ್-34-ಟಿ-5355 ನೊಂದಣಿ ಸಂಖ್ಯೆ ವಾಹನವನ್ನು ಪತ್ತೆ ಮಾಡಿ, ಅದರ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಟ್ಲಹಳ್ಳಿ   ಪೊಲೀಸ್  ಠಾಣೆ ಮೊ.ಸಂ.87/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:-23/06/2021 ರಂದು ರಾತ್ರಿ 07-00 ಗಂಟೆಗೆ ಠಾಣೆಯ ಪಿಎಸ್ಐ ರವರಾದ ಶ್ರೀ ನಾರಾಯಣಸ್ವಾಮಿ.ಆರ್ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿಎಸ್ಐ ರವರು ಈ ದಿನ ದಿನಾಂಕ:23/06/2021 ರಂದು ಸಂಜೆ 05-00 ಗಂಟೆ ಸಮಯದಲ್ಲಿ  ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಕರೋನ ಮಹಾಮಾರಿ ಸಾಂಕ್ರಾಮಿಕ ಖಾಯಿಲೆಯ ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಠಾಣೆಯ ಹೆಚ್.ಸಿ-139 ಶ್ರೀನಾಥ ಎಂ.ಪಿ ರವರೊಂದಿಗೆ ಗಸ್ತಿನಲ್ಲಿದ್ದಾಗ ನನಗೆ ಗುಡಿವಾಬನಹಳ್ಳಿ (ಭುಜಂಗರಾಯನಕೋಟೆ) ಗ್ರಾಮದ ವಾಸಿಯಾದ ವೆಂಕಟರವಣಪ್ಪ ಬಿನ್ ಮರಿಮಾನು ಬೈಯಪ್ಪ ರವರು ಅವರ ವಾಸದ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಠಾಣೆಯ ಹೆಚ್.ಸಿ-139 ಶ್ರೀನಾಥ ಎಂ.ಪಿ ರವರೊಂದಿಗೆ ಗುಡಿವಾಬನಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚರನ್ನು ಕರೆದುಕೊಂಡು ಸಂಜೆ 05-15 ಗಂಟೆಗೆ ಗುಡಿವಾಬನಹಳ್ಳಿ ಗ್ರಾಮದ ವೆಂಕಟರವಣಪ್ಪ ಬಿನ್ ಮರಿಮಾನು ಬೈಯಪ್ಪ ರವರು ಮನೆಯ ಬಳಿಗೆ ಹೋಗಿ ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮಧ್ಯ ನೀಡುತ್ತಿದ್ದ ಒಬ್ಬ ವ್ಯಕ್ತಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ತಿಳಿಯಲಾಗಿ  ಶ್ರೀ.ವೆಂಕಟರವಣಪ್ಪ ಬಿನ್ ಮರಿಮಾನು ಬೈಯಪ್ಪ 48 ವರ್ಷ ವಕ್ಕಲಿಗರು ಜಿರಾಯ್ತಿ ವಾಸ ಗುಡಿವಾಬನಹಳ್ಳಿ (ಭುಜಂಗರಾಯನಕೋಟೆ) ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು. ನಂತರ ಪಂಚರ ಸಮಕ್ಷಮ ಸಂಜೆ 05--30 ಗಂಟೆಯಿಂದ ಸಂಜೆ 06-30 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ 90 ಎಂ.ಎಲ್ ಸಾಮರ್ಥ್ಯದ 16 ಹೈವಾರ್ಡ್ಸ್ ವಿಸ್ಕಿಯ ಟೆಟ್ರಾಪ್ಯಾಕೆಟ್ ಗಳು ಒಟ್ಟು 562.08 ರೂಗಳ ಬೆಲೆ ಬಾಳುವ 1 ಲೀಟರ್ 440 ಎಂ.ಎಲ್ ಮದ್ಯವನ್ನು, ಖಾಲಿಯ 90 ಎಂ.ಎಲ್ ನ 2 ಹೈವಾರ್ಡ್ಸ್ ವಿಸ್ಕಿ ಟೆಟ್ರಾ ಪಾಕೆಟ್ ಗಳನ್ನು ಮತ್ತು 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡಿದ್ದು ಈ ಬಗ್ಗೆ ಮೇಲ್ಕಂಡಂತೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಆರೋಪಿಯ ವಿರುದ್ದ ಮುಂದಿನ ಕಾನೂನುರೀತ್ಯ ಕ್ರಮ ಕೈಗೊಳ್ಳಲು ಕೊಟ್ಟ ದೂರನ್ನು ಮತ್ತು ದಾಳಿ ಅಮಾನತ್ತು ಪಂಚನಾಮೆ ಹಾಗೂ ಅಮಾನತ್ತುಪಡಿಸಿಕೊಂಡ ಮದ್ಯದ ಮಾಲನ್ನು ಪಡೆದು ಪ್ರಕರಣದ ದಾಖಲಿಸಿರುತ್ತೆ.

 

4. ಗೌರಿಬಿದನೂರು ಗ್ರಾಮಾಂತರ   ಪೊಲೀಸ್  ಠಾಣೆ ಮೊ.ಸಂ.140/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ:24.06.2021 ರಂದು ಬೆಳಿಗ್ಗೆ 11-00 ಗಂಟೆಗೆ ಸಿ.ಪಿ.ಸಿ-179 ,ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರಿಗೆ ವಿಧುರಾಶ್ವತ್ಥ ಹೊರ ಠಾಣೆಯ ಕರ್ತವ್ಯಕ್ಕೆ  ನೇಮಿಸಿದ್ದು ಅದರಂತೆ ಪಿರ್ಯಾದಿದಾರರು  ದಿನಾಂಕ: 22-06-2021 ರಂದು ರಾತ್ರಿ ಸುಮಾರು 10-30 ಗಂಟೆಯಲ್ಲಿ  ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಾ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ  ಶ್ರೀ.ಶ್ಯಾಮ್ ಎಂಟರ್ ಪ್ರೈಸಸ್ ಬಳಿ ಹೋಗುತ್ತಿದ್ದಂತೆ,  ಅಲ್ಲಿ ರಸ್ತೆಯಲ್ಲಿ ಒಂದು ಗಂಡು ಮಗು ಅಳುತ್ತಾ ನಿಂತಿತ್ತು ಕೂಡಲೇನಾನು ಆಮಗುವಿನ ಬಳಿ ಹೋಗಿ ಮಗುವನ್ನು ವಿಚಾರಿಸಲಾಗಿ, ತನ್ನ ಹೆಸರು. ಹೇಮಂತ್.ಇ ಅಂತ  ತಿಳಿಸಿದ್ದು ಅಲ್ಲೆ ಪಕ್ಕದಲ್ಲಿ ಆ ಮಗುವಿನ ಆದಾರ್ ಕಾರ್ಡ್ ಬಿದ್ದಿದ್ದು, ಪರಿಶೀಲಿಸಲಾಗಿ, ಅದರಲ್ಲಿ ಹೇಮಂತ್.ಇ ಬಿನ್ ಏಳುಮಲೈ, ಮರಳುಕುಂಟೆ , ಬೆಂಗಳೂರು ಅಂತ ಇದ್ದು, ಆಧಾರ್ ನಂಬರ್ 314211996571 ಆಗಿರುತ್ತೆ. ಆ ಮಗು ಅಮ್ಮಾ ಅಂತ ಅಳುತ್ತಾ ಸ್ವಲ್ಪ ದೂರ ರಸ್ತೆಯ  ಬಲ ಬದಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಯಾರೋ ಮಹಿಳೆ  ಮೃತ ಪಟ್ಟಿರುವುದು ಕಂಡು ಬಂದಿದ್ದು, ನೋಡಲಾಗಿ ಸುಮಾರು 25 ರಿಂದ 30 ವರ್ಷ ವಯಸ್ಸಿನ ಅಪರಿಚಿತ  ಮಹಿಳೆಯಾಗಿದ್ದು, ತಲೆಯ ಹಿಂಭಾಗ ರಕ್ತಗಾಯವಾಗಿರುತ್ತೆ. ಈಬಗ್ಗೆ ಸುತ್ತ-ಮುತ್ತ ವಿಚಾರ ಮಾಡಲಾಗಿ ಶ್ರೀ.ಶ್ಯಾಮ್ ಎಂಟರ್ ಪ್ರೈಸಸ್ ನ ಸೆಕ್ಯೂರಟಿ ಗಾರ್ಡ್ ಶ್ರೀ. ಡಿ.ಎಂ. ನಾಗರಾಜ ಬಿನ್ ಲೇಟ್ ನಾರಾಯಣಪ್ಪ, 44 ವರ್ಷ, ಉಪ್ಪಾರರು, ವಾಸ ದೊಡ್ಡಕುರುಗೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು ರವರಲ್ಲಿ ವಿಚಾರ ಮಾಡಿದ್ದು, ತಾನು ರಾತ್ರಿ ಸುಮಾರು 10-30 ಗಂಟೆಯಲ್ಲಿ ತಮ್ಮ ಪ್ಯಾಕ್ಟರಿಯ ಗೇಟಿನ ಮುಂಭಾಗ ನಿಂತಿದ್ದಾಗ, ಒಂದು ಟಿವಿಎಸ್ ಎಕ್ಸ್ ಎಲ್ ಸೂಪರ್ ಹೆವಿಡ್ಯೂಟಿ ಮೊಪೆಡ್ ನ್ನು ಚಾಲನೆ ಮಾಡುತ್ತಾ, ಹಿಂಬದಿಯಲ್ಲಿ ಒಬ್ಬ ಮಹಿಳೆ ಮತ್ತು ಮಗುವನ್ನು ಕುಳ್ಳರಿಸಿಕೊಂಡು, ತನ್ನ ಮೊಪೆಡನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ತಮ್ಮ ಪ್ಯಾಕ್ಟರಿಯ ಮುಂಭಾಗ ರಸ್ತೆಯ  ಬದಿಯಿರುವ ಮಣ್ಣಿನ ದಿಬ್ಬಕ್ಕೆಡಿಕ್ಕಿ ಹೊಡೆಸಿ ಆತ ದ್ವಿಚಕ್ರ ವಾಹನವನ್ನ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದು, ಅದರ ಹಿಂಬದಿಯಲ್ಲಿದ್ದ ಮಹಿಳೆ ಟಾರು ರಸ್ತೆಯ ಮೇಲೆ ಬಿದ್ದಿದ್ದು, ಆಕೆಯ ತಲೆಯ ಹಿಂಭಾಗ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಆಕೆಯೊಂದಿಗೆ ಇದ್ದ ಗಂಡು ಮಗುವಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಎಂತ ತಿಳಿಸಿದ.  ಅಲ್ಲೆ ಕೆಎ-40-ಇಇ-6843 ಟಿವಿಎಸ್ ಎಕ್ಸ್ ಎಲ್ ಸೂಪರ್ ಹೆವಿ ಡ್ಯೂಟಿ ಮೊಪೆಡ್ ಸಹ ಇರುತ್ತೆ. ಸದರಿ ಅಪರಿಚಿತ ಮಹಿಳೆಯ ಮೃತದೇಹವನ್ನು ಆಟೋದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿರುತ್ತೆ. ಸದರಿ ಮೃತ ಅಪರಿಚಿತ ಮಹಿಳೆಯ ವಾರಸುದಾರರ ಪತ್ತೆ ಬಗ್ಗೆ ಕುಡುಮಲಕುಂಟೆ ಕೈಗಾರಕಾ ಪ್ರದೇಶ, ಹಿಂದೂಪುರ ಚೆಕ್ ಪೋಸ್ಟ್, ಅಲ್ಲಿನ ಕೈಗಾರಿಕಾ ಪ್ರದೇಶ, ಹಿಂದೂಪುರ ಟೌನ್ , ಬೆಂಗಳೂರಿನ ಮರಳುಕುಂಟೆ ಪ್ರದೇಶದಲ್ಲಿ ಹುಡುಕಾಡಿದ್ದು, ಆಕೆಯ ಸಂಬಂಧಿಕರು ಪತ್ತೆಯಾಗಿರುವುದಿಲ್ಲ.   ಸದರಿ ಅಪರಿಚಿತ ಮಹಿಳೆಯ ಸಾವಿಗೆ ಕಾರಣನಾದ ಕೆಎ-40-ಇಇ-6843 ಟಿವಿಎಸ್ ಎಕ್ಸ್ ಎಲ್ ಸೂಪರ್ ಹೆವಿ ಡ್ಯೂಟಿ ಮೊಪೆಡನ ಸವಾರ ನ ವಿರುದ್ದ  ಕಾನೂನು  ರೀತ್ಯ ಕ್ರಮ ಕೈಗೊಳ್ಳಲು ಕೋರಿದೆ. ಮೃತಳ ಸಂಬಂಧಿಕರನ್ನು ಹುಡುಕಾಡಿದ್ದು, ಯಾರೂ ಪತ್ತೆಯಾಗದ ಕಾರಣ ದೂರು ನೀಡಲು ತಡವಾಗಿರುತ್ತೆ. ಮೃತ ಅಪರಿಚಿತ ಮಹಿಳೆಯ ಚಹರೆ ವಿವರಗಳು, ಹೆಸರು:- ತಿಳಿದು ಬಂದಿರುವುದಿಲ್ಲ, ವಯಸ್ಸು:- ಸುಮಾರು 25 ರಿಂದ 30 ವರ್ಷ, ಎತ್ತರ:- ಸುಮಾರು 4 ರಿಂದ 5 ಅಡಿ , ಚಹರೆ ವಿವರಗಳು:-   ಸಾದಾರಣ ಮೈ ಕಟ್ಟು, ಗೋಧಿ ಮೈಬಣ್ಣ, ಬಟ್ಟೆಗಳು:- ನೇರಳೆ ಬಣ್ಣದ  ಡಿಸೈನ್ ಸೀರೆ, ರಾಮಾ ಗ್ರೀನ್ ಬಣ್ಣದ ರವಿಕೆ ಧರಿಸಿರುತ್ತಾರೆಂದು, ದೂರಾಗಿರುತ್ತದೆ.

 

5. ಗೌರಿಬಿದನೂರು ಗ್ರಾಮಾಂತರ   ಪೊಲೀಸ್  ಠಾಣೆ ಮೊ.ಸಂ.141/2021 ಕಲಂ. 279,337  ಐ.ಪಿ.ಸಿ:-

     ದಿನಾಂಕ:24.06.2021 ರಂದು ಮದ್ಯಾಹ್ನ 12-15 ಗಂಟೆಗೆ ಪಿರ್ಯಾದಿದಾರರಾದ ನವೀನ್ ಕುಮಾರ್ ಬಿನ್ ನರಸಿಂಹಪ್ಪ, 22 ವರ್ಷ, ಆದಿ ಕರ್ನಾಟಕ ಜನಾಂಗ, ಚೀಗಟಗೆರೆ ಗ್ರಾಮ, ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ಮತ್ತು ನನ್ನ ತಂಗಿಯ ಗಂಡ ಆನಂದ್ ರವರು ಗೌರೀಬಿದನೂರು ತಾಲ್ಲೂಕು ಆರ್.ಎಂ.ಸಿ ಯಲ್ಲಿ ಅಮಾಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ದಿನಾಂಕ:22.06.2021  ರಂದು ನಾನು ಮತ್ತು ತಂಗಿ ಗಂಡ ಆನಂದ್ ಬಿನ್ ಹನುಮಂತರಾಯಪ್ಪ, ಆರ್.ಎಂ.ಸಿ ಯಲ್ಲಿ ಕೆಲಸ ಮುಗಿಸಿಕೊಂಡು ಸಾಯಂಕಾಲ 6-30 ಗಂಟೆ ಯಲ್ಲಿ ನಮ್ಮ ಊರಿಗೆ ಹೋಗಲು ನಾನು ನನ್ನ ದ್ವಿಚಕ್ರ ವಾಹನದಲ್ಲಿ ಮತ್ತು ನನ್ನ ತಂಗಿಯ ಗಂಡ ಆನಂದ್ ರವರು ತನ್ನ ದ್ವಿ ಚಕ್ರ ವಾಹನ ಸಂ.ಕೆ.ಎ-40, ವೈ-4791.ಟಿ.ವಿ.ಎಸ್ ಎಕ್ಸ್ಎಲ್ ರಲ್ಲಿ ಮುಂದೆ ಚಾಲನೆ ಮಾಡಿಕೊಂಡು ಗೊಲ್ಲಹಳ್ಳಿ ಕ್ರಾಸ್ ಬಳಿ ಹೋಗುತ್ತಿದ್ದೆವು, ಅದೇ ಸಮಯಕ್ಕೆ ಗೌರೀಬಿದನೂರು ಕಡೆಯಿಂದ ಚಾಲಕ ಸಲೀಂ ರವರು ಬುಲೇರೋ ವಾಹನ ಸಂ. ಎ.ಪಿ-39, ಟಿಟಿ-1874 ರ ಗಾಡಿಯನ್ನು ಅಜಾಗರೂಕತೆಯಿಂದ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ತಂಗಿಯ ಗಂಡ ಆನಂದ ರವರ ದ್ವಿ ಚಕ್ರ ವಾಹನಕ್ಕೆ ತಗುಲಿಸಿದ್ದರಿಂದ ತಂಗಿಯ ಗಂಡ ಆನಂದ ರವರ ದವಡೆಗೆ ತೀವ್ರ ತರವಾದ ಗಾಯ ಉಂಟಾಗಿ ದವಡೆಯ 04 ಹಲ್ಲುಗಳು ಮುರಿದಿದ್ದು, ತೀವ್ರ ರಕ್ತ ಸ್ರಾವ ಆಗಿದ್ದು, ದ್ವಿ ಚಕ್ರ ವಾಹನ ಸಂ.ಕೆ.ಎ-40, ವೈ-4791, ಟಿ.ವಿ.ಎಸ್ ಎಕ್ಸ್ ಎಲ್ ಗಾಡಿಯು ತುಂಬಾ ಡ್ಯಾಮೇಜ್ ಆಗಿರುತ್ತದೆ. ತಕ್ಷಣ ಸದರಿ ಆನಂದ್ ರವರನ್ನು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು,  ವೈದ್ಯರ ಸಲಹೆ ಮೇರೆಗೆ ಬೆಂಗಳೂರು ನಗರದ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತೇವೆ, ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್ ಗಾಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ, ಅಪಘಾತವನ್ನುಂಟು ಮಾಡಿದ ಬುಲೇರೋ ವಾಹನ ಸಂ.ಎ.ಪಿ-39, ಟಿಟಿ-1874 ವಾಹನದ ಚಾಲಕ ಸಲೀಂ ರವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಈ ದಿನ ತಡವಾಗಿ ದೂರು.

 

6. ಗೌರಿಬಿದನೂರು ಪುರ   ಪೊಲೀಸ್  ಠಾಣೆ ಮೊ.ಸಂ.85/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:23/06/2021 ರಂದು  ಸಂಜೆ 4-00 ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿಸಿ-318 ದೇವರಾಜ್ ರವರು ಎನ್ ಸಿ ಆರ್ – 114/2021 ರಲ್ಲಿ ಕ್ರಿಮಿನಲ್ ಕೇಸನ್ನು ದಾಖಲು ಮಾಡಲು  ಘನ ನ್ಯಾಯಾಲಯದಿಂದ ಅನುಮತಿ ಪತ್ರವನ್ನು ತಂದು ಹಾಜರ್ ಪಡಿಸಿದರ ಸಂಬದ ದಿನಾಂಕ;31/05/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ  ವರಧಿಯ ಸಾರಾಂಶವೇನೇಂಧರೆ ದಿನಾಂಕ:31/05/2021 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ತಾನು ಗೌರಿಬಿದನೂರು ನಗರದಲ್ಲಿ ಗಸ್ತಿನಲ್ಲಿ ಇದ್ದಾಗ ಸಾರ್ವಜನಿಕರು ಪೋನ್ ಮಾಡಿ ಗೌರಿಬಿದನೂರು ನಗರದ  ಮಧುಗಿರಿ ವೃತ್ತದಲ್ಲಿ  ಯಾರೋ ಆಸಾಮಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು .ಕೂಡಲೇ ತಾನು ಎನ್.ಆರ್ ವೃತ್ತದಲ್ಲಿ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ನಮ್ಮ ಠಾಣಾ ಸಿಬ್ಬಂದಿಯವರಾದ ಪಿ.ಸಿ 282 ರಮೇಶ್ ರವರನ್ನು ಕರೆದುಕೊಂಡು ಮಾಹಿತಿಯಂತೆ ಸರ್ಕಾರಿ ಗೌರಿಬಿದನೂರು ನಗರದ  ಮಧುಗಿರಿ ವೃತ್ತಕ್ಕಿಂತ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಗೌರಿಬಿದನೂರು ನಗರದ  ಮಧುಗಿರಿ ವೃತ್ತದಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಮದ್ಯ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ಕಂಡು ಮದ್ಯ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯ ಸರಬರಾಜು ಮಾಡುತ್ತಿದ್ದ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಗಂಗಾಧರಪ್ಪ ಬಿನ್ ಲೇಟ್ ಗೊಲ್ಲ ಚೆನ್ನಪ್ಪಯ್ಯ.38 ವರ್ಷ,ಆದಿ ಕರ್ನಾಟಕ ,ಕೂಲಿ ಕೆಲಸ,ವಾಸ;ಕಡಬೂರು ಗ್ರಾಮ ಗೌರಿಬಿದನೂರು ತಾಲ್ಲೂಕು ಪೋನ್;9741689570 ಎಂದು ತಿಳಿಸಿದನು ಆಸಾಮಿಗೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿಯ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ 1) 90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 16 ಟೆಟ್ರಾ ಪಾಕೆಟ್ ಗಳು 2)  90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 04 ಖಾಲಿ ಟೆಟ್ರಾ ಪಾಕೆಟ್ ಗಳು 3) 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 4)ಎರಡು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ. ಮದ್ಯವಿರುವ ಪಾಕೆಟ್ಗಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 35.13 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 562 ರೂ ಗಳಾಗಿರುತ್ತೆ. ಇದರ ಒಟ್ಟು ಮದ್ಯೆ ಪ್ರಮಾಣ 1440 ಎಮ್,ಎಲ್,ಆಗಿರುತ್ತೆ. ಆಸಾಮಿ ಮತ್ತು ಮಾಲುಗಳನ್ನು ಪಂಚನಾಮೆಯ ಮೂಲಕ ಬೆಳಿಗ್ಗೆ 11-00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ಠಾಣಾಧಿಕಾರಿಗಳಿಗೆ ನೀಡಿದ ವರಧಿಯನ್ನು ಪಡೆದು ಎನ್,ಸಿ,ಆರ್ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

7. ಗೌರಿಬಿದನೂರು ಪುರ   ಪೊಲೀಸ್  ಠಾಣೆ ಮೊ.ಸಂ.86/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:23/06/2021 ರಂದು  ಸಂಜೆ 4-30 ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿಸಿ-318 ದೇವರಾಜ್ ರವರು ಎನ್ ಸಿ ಆರ್ – 115/2021 ರಲ್ಲಿ ಕ್ರಿಮಿನಲ್ ಕೇಸನ್ನು ದಾಖಲು ಮಾಡಲು  ಘನ ನ್ಯಾಯಾಲಯದಿಂದ ಅನುಮತಿ ಪತ್ರವನ್ನು ತಂದು ಹಾಜರ್ ಪಡಿಸಿದರ ಸಂಬದ ದಿನಾಂಕ:01/06/2021 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ತಾನು ಗೌರಿಬಿದನೂರು ನಗರದಲ್ಲಿ ಗಸ್ತಿನಲ್ಲಿ ಇದ್ದಾಗ ಸಾರ್ವಜನಿಕರು ಪೋನ್ ಮಾಡಿ ಗೌರಿಬಿದನೂರು ನಗರದ  ಸೆಂಟ್ ಆನ್ಸ ಶಾಲೆಯ ಮುಂಭಾಗದಲ್ಲಿ ಯಾರೋ ಆಸಾಮಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು .ಕೂಡಲೇ ತಾನು ಬೆಂಗಳೂರು ವೃತ್ತದಲ್ಲಿ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ತಮ್ಮ ಠಾಣಾ ಸಿಬ್ಬಂದಿಯವರಾದ ಪಿ.ಸಿ 318 ದೇವರಾಜು ರವರನ್ನು ಕರೆದುಕೊಂಡು ಮಾಹಿತಿಯಂತೆ ಸರ್ಕಾರಿ ಗೌರಿಬಿದನೂರು ನಗರದ  ಸೆಂಟ್ ಆನ್ಸ ಶಾಲೆ ಕ್ಕಿಂತ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಗೌರಿಬಿದನೂರು ನಗರದ  ಸೆಂಟ್ ಆನ್ಸ ಶಾಲೆ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ  ಮದ್ಯ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ತಮ್ಮನ್ನು ಕಂಡು ಮದ್ಯ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯ ಸರಬರಾಜು ಮಾಡುತ್ತಿದ್ದ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಸುರೇಶ್ ಬಿನ್ ಅಣ್ಣಾಯಪ್ಪ,35 ವರ್ಷ,ಾದಿ ಕರ್ನಾಟಕ,ಕೂಲಿ ಕೆಲಸ,ವಾಸ;ಗೌರಿಬಿದನೂರು ತಾಲ್ಲೂಕು ಪೋನ್;9148861318 ಎಂದು ತಿಳಿಸಿದನು ಆಸಾಮಿಗೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿಯ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ 1) 90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 14 ಟೆಟ್ರಾ ಪಾಕೆಟ್ ಗಳು 2)  90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 04 ಖಾಲಿ ಟೆಟ್ರಾ ಪಾಕೆಟ್ ಗಳು 3) 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 4)ಎರಡು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ. ಮದ್ಯವಿರುವ ಪಾಕೆಟ್ಗಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 35.13 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 491.82 ರೂ ಗಳಾಗಿರುತ್ತೆ. ಇದರ ಒಟ್ಟು ಮದ್ಯೆ ಪ್ರಮಾಣ 1260 ಎಮ್,ಎಲ್,ಆಗಿರುತ್ತೆ. ಆಸಾಮಿ ಮತ್ತು ಮಾಲುಗಳನ್ನು ಪಂಚನಾಮೆಯ ಮೂಲಕ ಬೆಳಿಗ್ಗೆ 11-00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ನೀಡಿದ ವರಧಿಯನ್ನು ಪಡೆದು ಎನ್,ಸಿ,ಆರ್ ದಾಖಲಿಸಿಕೊಂಡಿದ್ದು ಈ ದಿನ ದಿನಾಂಕ:23/06/2021 ಘನ ನ್ಯಾಯಾಲಯದ ಅನುಮತಿಯನ್ನು ಪಡೆದ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

8. ನಂದಿಗಿರಿಧಾಮ   ಪೊಲೀಸ್  ಠಾಣೆ ಮೊ.ಸಂ.62/2021 ಕಲಂ. 506,504,324 ಐ.ಪಿ.ಸಿ:-

     ದಿನಾಂಕ 24-06-2021 ರಂದು ಮದ್ಯಾಹ್ನ 14-15 ಗಂಟೆಗೆ   ನಂದಿ ಗ್ರಾಮದ  ವಾಸಿಯಾದ ಶಿವು ಬಿನ್ ಮುನಿಯಪ್ಪ 43 ವರ್ಷ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ  ದೂರಿನ ಸಾರಾಂಶವೇನೆಂದರೆ  ದಿನಾಂಕ 18-06-2021 ರಂದು ಸಂಜೆ 17-00 ಗಂಟೆಯ ಸಮಯದಲ್ಲಿ  ಪಿಳ್ಳಪ್ಪ  ಎಂಬುವರು ನಮ್ಮ ಮನೆಯ ಮುಂದೆ ನಿಂತು ನಮ್ಮನ್ನು ಅವಾಚ್ಯವಾಗಿ ಬೈದುಕೊಳ್ಳುತ್ತಿದ್ದು  ಅದನ್ನು ನಾನು ಕೇಳಿದ್ದಕ್ಕೆ  ಅವನ ಮಗನಾದ ಅಭಿಲಾಷ್ @ ಚೋಟಾರಿ ಬಿನ್ ಪಿಳ್ಳಪ್ಪ ರವರು ನಮ್ಮ  ಮನೆಯ ಬಳಿ ಬಂದು ನನ್ನನ್ನು ಕುರಿತು  ಹೋಗೋ ಲೋಪರ್ ನನ್ನ ಮಗನೆ  ನಾವು  ಹೀಗೆ  ಬೈದುಕೊಳ್ಳುವುದು ಅಂತ ಹೇಳಿದಾಗ  ಸಮಯದ;ಲ್ಲಿ ತಾನು ಹೀಗೆ ಬೈದುಕೊಳ್ಳುವುದು  ಸರಿಯಲ್ಲಾ ಎಂತಾ  ಹೇಳಿದ್ದಕ್ಕೆ  ಅಬಿಲಾಷನು ಅವರು ಏಕಾ ಎಕಿ ಹಿಂಬಾಗದಿಂದ ನನಗೆ ಹೊಡೆದ   ವಿಚಾರವನ್ನು ನಮ್ಮ ಗ್ರಾಮದ ಹಿರಿಯ ಜನರಿಗೆ ತಿಳಿಸಿದಾಗ ದರ ಬಗ್ಗೆ ಮಾತನಾಡೋಣವೆಂದು ಹೇಳಿದ್ದು ಅದಕ್ಕೆ ನಾನು ಸುಮ್ಮನಿದ್ದಾಗ  ದಿನಾಂಕ;-22-06-2021  ರಂದು ಸಂಜೆ 5-30 ಗಂಟೆಗೆ ಸದರಿ ಅಭಿಲಾಷನು ನಮ್ಮ ಮನೆಯ ಬಳಿ ಬಂದು ಏಕಾ ಎಕಿ ನನ್ನ ಮೇಲೆ ಗಲಾಟೆಯನ್ನು ಮಾಡಿ ಅವಾಛ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಬೆನ್ನಿನ ಹಿಂಬಾಗ ಬಲಗೈನ ಹೆಬ್ಬರಳಿಗೆ ಎಡಗೈನ  ಮದ್ಯದ ಬೆರಳಿಗೆ  ತೋರು ಬೆರಳಿಗೆ  ಎಡಗಾಲಿನ ತೊಡೆಗೆ ಮತ್ತು ಎಡಕೈಗೆ ಹೊಡೆದು ಗಾಯಪಡಿ ಸಿರುತ್ತಾನೆ, ನಂತರ ನೀನೇನಾದರೂ ಇನ್ನು ಮುಂದೆ ನಾವು ಬೈದುಕೊಳ್ಳೂವ ವಿಚಾರದಲ್ಲಿ ಕೇಳಿದ್ದೆ ಆದರೆ ನಿನ್ನನ್ನು ಸಾಯಿಸುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕುತ್ತಿದ್ದಾಗ ನಮ್ಮ ಗ್ರಾಮದ ರಾಧ ಕೋಂ ಮೂರ್ತಿ  ಪದ್ಮಮ್ಮ ಕೊಂ ಮುನಿರಾಜು ರವರು ಅಡ್ಡ ಬಂದು ಜಗಳ ಬಿಡಿಸಿರುತ್ತಾರೆ,  ನಾನು ಚಿಕಿತ್ಸೆಗ ಚಿಕ್ಕಬಳ್ಳಾಪುರ  ಜಿಲ್ಲಾಸ್ಪತ್ರಗೆ  ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡು ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು  ತನ್ನ ಮೇಲೆ   ಗಲಾಟೆ  ಮಾಡಿರುವ ಅಬಿಲಾಷ್ ಬಿನ ಪಿಳ್ಳಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ,

 

9. ಶಿಡ್ಲಘಟ್ಟ ಗ್ರಾಮಾಂತರ   ಪೊಲೀಸ್  ಠಾಣೆ ಮೊ.ಸಂ.208/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ 23/06/2021 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿದಾರರಾದ ಜಿ.ಬಿ ಅಶೋಕ್ ಕುಮಾರ್ ಬಿನ್ ಜೆ.ಎ ಬಾಲಕೃಷ್ಣಪ್ಪ ವಾಸ-ಜಂಗಮಕೋಟೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತಂದೆಗೆ 3 ಜನ ಗಂಡು ಮಕ್ಕಳಿದ್ದು, 1 ನೇ 46 ವರ್ಷದ ತಾನು, 2 ನೇ 43 ವರ್ಷದ ಆನಂದ ಕುಮಾರ್ ಜೆ.ಬಿ, 3 ನೇ 39 ವರ್ಷದ ಜೆ.ಬಿ ಹರೀಶ್ ರವರಾಗಿದ್ದು ತನ್ನ ತಮ್ಮನಾದ ಆನಂದಕುಮಾರ್ ರವರು ಈಗ್ಗೆ ಸುಮಾರು 2004 ನೇ ಸಾಲಿನಿಂದ ಸಕರ್ಾರಿ ಶಿಕ್ಷಕನಾಗಿ ಕೆಲಸ ಮಾಡಿಕೊಂಡಿದ್ದು, ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವಿದ್ದ ಕಾರಣ ಶಿಕ್ಷಣ ಇಲಾಖೆಯ ಸಿ.ಆರ್.ಪಿ (ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ) ಕರ್ತವ್ಯ ನಿರ್ವಹಿಸುತ್ತಿದ್ದು, ಕೋವಿಡ್ ಸಾಂಕ್ರಾಮಿಕ ಅವನನ್ನು ಕೋವಿಡ್ ಕಾಲ್ ಸೆಂಟರ್ (ತಾಲ್ಲೂಕು ಕಚೇರಿಯಲ್ಲಿ) ಕರ್ತವ್ಯಕ್ಕೆ ನಿಯೋಜಿಸಿದ್ದ ಕಾರಣ ಆತನು ದಿನಾಂಕ 22/06/2021 ರಂದು ತಾಲ್ಲೂಕು ಕಚೇರಿ ಶಿಡ್ಲಘಟ್ಟದಲ್ಲಿ ಕೋವಿಡ್ ಕರ್ತವ್ಯ ಮುಗಿಸಿ ತಮ್ಮ ನಿವಾಸ ಜಂಗಮಕೋಟೆಗೆ ಆತನ ಹಿರೋ ಐ ಸ್ಮಾಟ್ ವಾಹನ ಸಂಖ್ಯೆ ಕೆಎ-40-ಇಎ-3375 ಮೋಟಾರ್ ಬೈಕ್ ನಲ್ಲಿ ಹಿಂದಿರುಗಿ ಮನೆಗೆ ಬರುವಾಗ ಮದ್ಯಾಹ್ನ 3-00 ಗಂಟೆಗೆ ಶಿಡ್ಲಘಟ್ಟ-ಜಂಗಮಕೋಟೆ ರಸ್ತೆಯ ಹಿತ್ತಲಹಳ್ಳಿ ಗೇಟ್ ಬಳಿ ಎದುರುಗಡೆಯಿಂದ ಬಂದ ಟಾಟಾ 407 ಟೆಂಫೋ ವಾಹನ ಡಿಕ್ಕಿ ಹೊಡೆಸಿರುವುದಾಗಿ ತಿಳಿಯಿತು ವಿಚಾರ ತಿಳಿದ ತಕ್ಷಣ ತಾನು ಸದರಿ ಸ್ಥಳಕ್ಕೆ ಹೋಗಿ ನೋಡಿದಾಗ ಅಪಘಾತದಲ್ಲಿ ತನ್ನ ತಮ್ಮ ಆನಂದ ಕುಮಾರ್ ಜೆ.ಬಿ ಗೆ ಮೊಣಕೈ ಕೆಳಗೆ ಹಾಗು ಭುಜಕ್ಕೆ ಪೆಟ್ಟುಗಳಾಗಿದ್ದು, ಆತನ ದ್ವಿ ಚಕ್ರ ವಾಹನ ಸಹ ಜಖಂ ಆಗಿರುತ್ತದೆ. ಅಪಘಾತ ಪಡಿಸಿದ ಟಾಟಾ 407 ಟೆಂಪೋ ಚಾಲಕ ವಾಹನ ನಿಲ್ಲಿಸದೇ ಅತೀವೇಗ ಮತ್ತು ಅಜಾಹರೂಕತೆಯಿಂದ ಪರಾರಿಯಾಗಿರುತ್ತಾನೆ. ಆಗ ತಾನು ತನ್ನ ಸ್ವಂತ ಕಾರಿನಲ್ಲಿ ತನ್ನ ತಮ್ಮ ಆನಂದ ಕುಮಾರ್ ರವರನ್ನು ಕರೆದುಕೊಂಡು ಹೋಗಿ ಬೆಂಗಳೂರಿನ ಹಾಸ್ ಮಟ್ ಆಸ್ಪತ್ರೆಗೆ ದಾಖಲಿಸಿರುತ್ತೇನೆ. ಆದ್ದರಿಂದ ಸದರಿ ಅಪಘಾತವನ್ನುಂಟು ಮಾಡಿದ ಅಪರಿಚಿತ ಟಾಟಾ 407 ಟೆಂಪೋ ವಾಹನದ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸ ಬೇಕಾಗಿ, ತನ್ನ ತಮ್ಮ ಒಳರೋಗಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಆತನ ಆರೈಕೆಯಲ್ಲಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿರುವುದ್ದಾಗಿರುತ್ತದೆ.

 

10. ಶಿಡ್ಲಘಟ್ಟ ಪುರ   ಪೊಲೀಸ್  ಠಾಣೆ ಮೊ.ಸಂ.71/2021 ಕಲಂ. 87 ಕೆ.ಪಿ  ಆಕ್ಟ್:-

     ದಿನಾಂಕ.23-06-2021 ರಂದು ಸಂಜೆ 6.50 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲುಗಳನ್ನು ಠಾಣೆಯಲ್ಲಿ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ ದಿನಾಂಕ:-23-06-2021 ರಂದು ಸಂಜೆ 05-20 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಕೆ.ಸತೀಶ್ ಆದ ನಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ಚಿಂತಾಮಣಿ ರಸ್ತೆಯಲ್ಲಿರುವ ಚರ್ಚ್ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ 97, ಸುಬ್ರಮಣಿ, ಪಿಸಿ-278 ನಾರಾಯಣ, ಪಿಸಿ.280 ಶಶಿಕುಮಾರ್, ಪಿಸಿ 127 ಕೃಷ್ಣಪ್ಪ, ಪಿಸಿ.126 ವೆಂಕಟೇಶ್, ಜೀಪ್ ಚಾಲಕ ಮಂಜುನಾಥ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಸಂಜೆ 05-30 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 200/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 200/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ  1] ಮುರಳಿ ಬಿನ ಲೇಟ್ ಕೃಷ್ಣಪ್ಪ, 42 ವರ್ಷ, ಪದ್ಮಸಾಲಿಗರು, ರೇಷ್ಮೆಕೆಲಸ, ವಾಸ-ಖಾದರಪ್ಪ ಬೀದಿ, ಶಿಡ್ಲಘಟ್ಟ ಟೌನ್, 2] ಕೃಷ್ಣ ಬಿನ್ ಲೇಟ್ ನಾರಾಯಣಸ್ವಾಮಿ, 38 ವರ್ಷ, ಭಜಂತ್ರಿ, ಮರ ಕೆಲಸ, ವಾಸ- ಕುರುಬರಪೇಟೆ, ಶಿಡ್ಲಘಟ್ಟ ಟೌನ್, 3] ಅಶೋಕ ಬಿನ್ ಲೇಟ್ ನಾರಾಯಣಸ್ವಾಮಿ, 28 ವರ್ಷ, ಗೊಲ್ಲರು, ಚಾಲಕರು, ವಾಸ-ಇಲಾಹಿ ನಗರ, ಶಿಡ್ಲಘಟ್ಟ ಟೌನ್, 4] ಅನೀಲ್ ಕುಮಾರ್ ಬಿನ್ ಲೇಟ್ ನಾರಾಯಣಸ್ವಾಮಿ, 26 ವರ್ಷ, ಪ.ಪಂಗಡ, ಕೂಲಿ ಕೆಲಸ, ವಾಸ-ಎಡಿ ಕಾಲೋನಿ, ಶಿಡ್ಲಘಟ್ಟ ಟೌನ್,   5] ಅರುಣ್ ಕುಮಾರ್ ಬಿನ್ ಲೇಟ್ ನರಸಿಂಹಪ್ಪ, 37 ವರ್ಷ, ಬೆಸ್ತರು, ಡಿ ಗ್ರೂಪ್ ಕೆಲಸ, ವಾಸ-ಅಂಜನಿ ಬಡಾವಣೆ, ಶಿಡ್ಲಘಟ್ಟ ಟೌನ್, 6] ಬಾಬು ಬಿನ್ ಲೇಟ್ ಆಜಾದ್, 45 ವರ್ಷ, ಮುಸ್ಲೀಂ, ತರಕಾರಿ ವ್ಯಾಪಾರ, ವಾಸ-ಆಜಾದ್ ನಗರ, ಶಿಡ್ಲಘಟ್ಟ ಟೌನ್, 7] ಶ್ರೀನಿವಾಸ ಬಿನ್ ಲೇಟ್  ರಾಮಪ್ಪ, 35 ವರ್ಷ, ತಿಗಳರು, ಹೋಟೆಲ್ ನಲ್ಲಿ ಕೆಲಸ, ವಾಸ-ಯಲ್ಲಮ್ಮ ದೇವಾಲಯದ ಬಳಿ, ಶಿಡ್ಲಘಟ್ಟ ಟೌನ್, 8] ಪ್ರಕಾಶ್ ಬಿನ್ ಗೋವಿಂದಪ್ಪ, 36 ವರ್ಷ, ತಿಗಳರು, ಹೋಟೆಲ್ ನಲ್ಲಿ ಕೆಲಸ, ವಾಸ-ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 17.300/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಸಂಜೆ 5-40 ಗಂಟೆಯಿಂದ 6-30 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 08 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 24-06-2021 05:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080