ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.76/2021 ಕಲಂ. 32,34 ಕೆ.ಇ ಆಕ್ಟ್:-

          ಘನ ನ್ಯಾಯಾಲಯದ ಸನ್ನಿಧಾನದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ಟಿ.ಎನ್.ಪಾಪಣ್ಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ 23/05/2021 ರಂದು ನಾನು ಮತ್ತು ಠಾಣೆಯ ಸಿಬ್ಬಂದಿಯಾದ ಹೆಚ್.ಸಿ 139 ಶ್ರೀನಾಥ ಎಂ.ಪಿ, ಸಿಹೆಚ್ಸಿ 36 ಶ್ರೀ.ವಿಜಯ್ಕುಮಾರ್, 262 ಅಂಬರೀಶ್  ಮತ್ತು ಜೀಪ್ ಚಾಲಕ ಎಪಿಸಿ 65 ಶ್ರೀ.ವೆಂಕಟೇಶ್ ರವರೊಂದಿಗೆ ಕೊರೋನಾ ಲಾಕ್ಡೌನ ನಿಮಿತ ಬಿಲ್ಲಾಂಡ್ಲಹಳ್ಳಿ ಗ್ರಾಮದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ಠಾಣಾ ವ್ಯಾಪ್ತಿಯ ಪುಟ್ಟಗುಂಡ್ಲಹಳ್ಳಿ ಗ್ರಾಮದ ವಾಸಿಯಾದ ರಾಮಕೃಷ್ಣ ಬಿನ್ ಚಿಕ್ಕವೆಂಕಟೇಶ್ ಎಂಬುವರು ಅವರ ಮನೆಯಲ್ಲಿ ಅಕ್ರಮವಾಗಿ ಮದ್ಯವನ್ನು ಗ್ರಾಹಕರಿಗೆ ಮಾರಾಟಮಾಡಲು ದಾಸ್ತಾನುಮಾಡಿ ಇಟ್ಟುಕೊಂಡಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಸಿಬ್ಬಂದಿಯೊಂದಿಗೆ ಸಂಜೆ 4-00 ಗಂಟೆಗೆ ಪುಟ್ಟಗುಂಡ್ಲಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ಪುಟ್ಟಗುಂಡ್ಲಹಳ್ಳಿ ಗ್ರಾಮದ ವಾಸಿಯಾದ ರಾಮಕೃಷ್ಣ ಬಿನ್ ಚಿಕ್ಕವೆಂಕಟೇಶ್ ರವರ ಮನೆಯ  ಬಳಿಗೆ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿ ಇದ್ದ ನಮ್ಮಗಳನ್ನು ನೋಡಿ ಯಾರೋ ಒಬ್ಬ ಆಸಾಮಿಯು ಮನೆಯಿಂದ ಓಡಿ ಹೋಗಲು ಯತ್ನಿಸಿದ್ದು ಸದರಿ ಆಸಾಮಿಯನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದುಕೊಂಡು ಆತನ ಹೆಸರು ವಿಳಾಸವನ್ನು ವಿಚಾರಿಸಲಾಗಿ ತನ್ನ ಹೆಸರು ರಾಮಕೃಷ್ಣ ಬಿನ್ ಚಿಕ್ಕವೆಂಕಟೇಶ್, 46ವರ್ಷ, ಬಲಜಿಗರು, ಟ್ರ್ಯಾಕ್ಟರ್ ಚಾಲಕ ಕೆಲಸ, ಪುಟ್ಟಗುಂಡ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊಬೈಲ್ ನಂ 6304632725 ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ಓಡಿ ಹೋಗಲು ಯತ್ನಿಸಿದ್ದು ಯಾಕೆ ಎಂದು ವಿಚಾರಿಸಲಾಗಿ ತಾನು ಅಕ್ರಮವಾಗಿ ಮದ್ಯವನ್ನು ಮನೆಯಲ್ಲಿ ಶೇಖರಣೆಮಾಡಿ ಇಟ್ಟುಕೊಂಡು ಗ್ರಾಹಕರಿಗೆ ಮಾರಾಟಮಾಡುತ್ತಿರುವುದಾಗಿ ಪೊಲೀಸರು ಬಂದಿದ್ದನ್ನು ನೋಡಿ ಓಡಿ ಹೋಗಲು ಯತ್ನಿಸಿದಾಗಿ ತಿಳಿಸಿದ್ದು ಸದರಿ ಆಸಾಮಿಯನ್ನು ಮದ್ಯವನ್ನು ತೋರಿಸುವಂತೆ ಪಂಚಾಯ್ತಿದಾರರ ಸಮಕ್ಷಮ ವಿಚಾರಿಸಲಾಗಿ ಸದರಿ ಆಸಾಮಿಯು ನಮ್ಮಗಳನ್ನು ಆತನ ವಾಸದ ಮನೆಯ ಒಳಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಮಂಚದ ಕೆಳಗೆ ಬಚ್ಚಿಟ್ಟಿದ್ದ ಒಂದು ಬ್ಯಾಗ್ನ್ನು ತೆಗೆದು ತೋರಿಸಿದ್ದು ಪರಿಶೀಲಿಸಲಾಗಿ ಸದರಿ ಬ್ಯಾಗ್ನಲ್ಲಿ ವಿವಿದ ಬಗೆಯ ಮದ್ಯದ ಟೆಟ್ರಾ ಪ್ಯಾಕೇಟ್ಗಳು ಇದ್ದು ಸದರಿಯವುಗಳನ್ನು ಬೇರ್ಪಡಿಸಿ ಪರಿಶೀಲಿಸಲಾಗಿ 1) 90 ಎಂ.ಎಲ್ ಸಾಮಥ್ರ್ಯದ ಹೈವಾಡ್ಸರ್್ ಚೇರ್ಸ್ ವಿಸ್ಕಿಯ 39 ಟೆಟ್ರಾ ಪ್ಯಾಕೇಟ್ಗಳು ಇದ್ದು ಪ್ರತಿಯೊಂದರ ಮೇಲೆ ಎಂ.ಆರ್.ಪಿ 35.13 ರೂ ಎಂತ ಬೆಲೆ ಇದ್ದು ಒಟ್ಟು 1.370 ರೂ ಬೆಲೆ ಬಾಳುವ 3.510 ಲೀಟರ್ ನಷ್ಟು ಮದ್ಯ ಇರುತ್ತೆ, 2) 180 ಎಂ.ಎಲ್ ಸಾಮಥ್ರ್ಯದ ಓಲ್ಡ್ ಅಡ್ಮಿರಲ್  ವಿಎಸ್ಓಪಿ ಬ್ರಾಂದಿಯ 4 ಮದ್ಯದ ಟೆಟ್ರಾ ಪ್ಯಾಕೆಟ್ಗಳು ಇದ್ದು ಪ್ರತಿಯೊಂದರ ಮೇಲೆ ಬೆಲೆ 86.75 ರೂ ಎಂತ ಇದ್ದು ಒಟ್ಟು 347 ರೂ ಬೆಲೆ ಬಾಳುವ 0.720 ಲೀಟರ್ ನಷ್ಟು ಮದ್ಯ ಇರುತ್ತೆ, 3) 180 ಎಂ.ಎಲ್ ಸಾಮಥ್ರ್ಯದ ರಡಿಕೋ  8 ಪಿ.ಎಂ ವಿಸ್ಕಿಯ 6 ಮದ್ಯದ ಟೆಟ್ರಾ ಪ್ಯಾಕೇಟ್ ಗಳು ಇದ್ದು ಪ್ರತಿಯೊಂದರ ಮೇಲೆ ಬೆಲೆ 86.75 ರೂ ಎಂತ ಇದ್ದು ಒಟ್ಟು 520 ರೂ ಬೆಲೆ ಬಾಳುವ 1.080 ಲೀಟರ್ ನಷ್ಟು ಮದ್ಯ ಇರುತ್ತೆ, 4) 180 ಎಂ.ಎಲ್ ಸಾಮಥ್ರ್ಯದ ಓಲ್ಡ್ ಟವೆರನ್ ವಿಸ್ಕಿಯ 16 ಮದ್ಯದ ಟೆಟ್ರಾ ಪ್ಯಾಕೆಟ್ಗಳು ಇದ್ದು ಪ್ರತಿಯೊಂದರ ಮೇಲೆ ಬೆಲೆ 86.75 ರೂ ಎಂತ ಇದ್ದು ಒಟ್ಟು 1388 ರೂ ಬೆಲೆ ಬಾಳುವ 2.880 ಲೀಟರ್ ನಷ್ಟು ಮದ್ಯ ಇರುತ್ತೆ ಎಲ್ಲಾ ಒಟ್ಟು 3625 ರೂ ಬೆಲೆ ಬಾಳುವ 8.190 ಲೀಟರ್ ನಷ್ಟು ಮದ್ಯದ ಟೆಟ್ರಾ ಪ್ಯಾಕೆಟ್ಗಳು ಇದ್ದು ಸದರಿ ಮದ್ಯದ ಟೆಟ್ರಾ ಪ್ಯಾಕೆಟ್ಗಳ ಪೈಕಿ ಪ್ರತಿಯೋಂದರಲ್ಲೂ ಒಂದೊಂದು ಮದ್ಯದ ಟೆಟ್ರಾ ಪ್ಯಾಕೆಟ್ಗಳನ್ನು ಎಫ್.ಎಸ್.ಎಲ್ ಪರೀಕ್ಷೆಗೆ ಕಳುಹಿಸಿಕೊಡಲು ಪ್ರತ್ಯೇಕವಾಗಿ ತೆಗೆದು ಪ್ರತ್ಯೇಕವಾಗಿ ಬಿಳಿ ಬಟ್ಟೆಯ ಚೀಲದಲ್ಲಿ ಇಟ್ಟು ತುದಿಗಳನ್ನು ದಾರದಿಂದ ಕಟ್ಟಿ ಅರಗುಮಾಡಿ ಬಿಟಿಎಲ್ ಎಂಬ ಅಕ್ಷರದಿಂದ ಸೀಲ್ ಮಾಡಿ ಪಂಚಾಯ್ತಿದಾರರ ಸಹಿಗಳಿರುವ ಚೀಟಿಗಳನ್ನು ಸದರಿಯವುಗಳ ಮೇಲೆ ಅಂಟಿಸಿ ಎಲ್ಲಾ ಮದ್ಯದ ಟೆಟ್ರಾ ಪ್ಯಾಕೆಟ್ಗಳನ್ನು ಪಂಚಾಯ್ತಿದಾರರ ಸಮಕ್ಷಮ ಸಂಜೆ 4-15 ಗಂಟೆಯಿಂದ 5-15 ಗಂಟೆಯವರೆಗೆ ಕೈಗೊಂಡ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಆರೋಪಿ ಮತ್ತು ಅಮಾನತ್ತುಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ಸಂಜೆ 6-00 ಗಂಟೆಗೆ ವಾಪಸ್ ಬಂದು ಆರೋಪಿಯ ವಿರುದ್ದ ಠಾಣಾ ಮೊ.ಸಂ 76/2021 ಕಲಂ 32, 34 ಕೆ.ಇ.ಆ್ಯಕ್ಟ್ ರೀತ್ಯ ಕೇಸು ದಾಖಲಿಸಿರುತ್ತೇನೆ.

 

2. ಸಿ.ಇ.ಎನ್ ಪೊಲೀಸ್‌ ಠಾಣೆ ಮೊ.ಸಂ.30/2021 ಕಲಂ. 419,420 ಐ.ಪಿ.ಸಿ & 66(D),66(C) (INFORMATION TECHNOLOGY ACT 2008:-

          ದಿನಾಂಕ:24/5/2021 ರಂದು ಪಿರ್ಯಾದಿ ವೆಂಕಟ್ರವಣಪ್ಪ ಟಿ ಆರ್, ಎ ಎಸ್ ಐ .ಪಾತಪಾಳ್ಯ ಪೊಲೀಸ್ ಠಾಣೆ, ಮೊ ಸಂಖ್ಯೆ: 9743923389. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಾನು ಚಿಕ್ಕಬಳ್ಳಾಪುರದಲ್ಲಿ ಎಸ್ ಬಿ ಐ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆ ನಂ:54039364009 ರಂತೆ ಖಾತೆಯನ್ನು ಹೊಂದಿದ್ದು, ಇದಕ್ಕೆ ಎ ಟಿ ಎಂ ಕಾರ್ಡ ಮತ್ತು ನನ್ನ ಮೊಬೈಲ್ ನಂ:9743923389 ಸಂಖ್ಯೆಯನ್ನು ಲಿಂಕ್ ಮಾಡಿಕೊಂಡು ಅದರಲ್ಲಿ PHONEPAY WALLET ನಲ್ಲಿ ನನ್ನ ಹಣ ಕಾಸಿನ ವ್ಯವಹಾರಗಳನ್ನು ಮಾಡಿಕೊಂಡಿರುತ್ತೇನೆ. ಈಗಿರುವಲ್ಲಿ  ನನಗೆ ಇತ್ತೀಚಿಗೆ ಕೋವೀಡ್ ಪಾಸಿಟೀವ್ ಬಂದಿದ್ದರಿಂದ ನಾನು ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಗ  ನನ್ನ ಸಂಬಂದಿಕರಿಗೆ 5000/- ಹಣವನ್ನು ನನ್ನ ಪೋನ್ ಫೇ ಮೂಲಕ ಕಳುಹಿಸಿದೆ ಆದರೆ ಸದರಿ ಹಣ  ಅವರಿಗೆ  ಹೋಗಿರಲಿಲ್ಲ. ನಂತರ ನಾನು ಪೋನ್ ಫೇ ಕಸ್ಟಮರ್ ಕೇರ್ ನಂಬರ್      8101227269 ಗೆ ಕರೆ  ಮಾಡಿದೆ. ಆದರೆ ಅವರು ಉತ್ತರಿಸಲಿಲ್ಲ. ನಂತರ ಸ್ವಲ್ಪ ಸಮಯದ ನಂತರ ಮೊ ಸಂಖ್ಯೆ: 9883812763 ರಿಂಧ ಕರೆ ಬಂದಿದ್ದು ನಾವು ಪೋನ್ ಕಸ್ಟಮರ್ ಕೇರ್  ನಿಂದ ಮಾತಾಡುತ್ತಿರುವುದಾಗಿ ತಿಳಿಸಿದ್ದು. ತಾನು  ಅವರಿಗೆ ವಿಷಯ ತಿಳಿಸಿದೆ. ನಂತರ ಅವರು ನಿಮ್ಮ 5000/- ರೂಗಳ ಹಣ ನಿಮ್ಮ ಖಾತೆಗೆ ವಾಪಸ್ಸು ಬರುತ್ತದೆಂತ ತಿಳಿಸಿ, ನೀವು ಪೋನ್ ಫೇ ಓಪನ್ ಮಾಡಿಕೊಂಡು  ನಾವು ಹೇಳಿದ ಕೋಡ್ ನಂಬರ್ ನ್ನು ಹಾಕಿ ಸೆಂಡ್ ಮಾಡಿ ಅಂತ ತಿಳಿಸಿದರು ನಾನು ಪೋನ್ ಫೇ ಕಂಪನಿಯವರು ಸುಳ್ಳು ಹೇಳುವುದಿಲ್ಲವೆಂತ ನಂಬಿ ಅವರು ಹೇಳಿದಂತೆ ಎರಡು ಭಾರಿ ಮಾಡಿದೆ, ನಂತರ ಮಾರನೆ ದಿನ ನೋಡಲಾಗಿ ನನ್ನ ಎಸ್ ಬಿ ಐ ಖಾತೆಯಿಂದ 02 ಭಾರಿ ಒಟ್ಟು 89,954/- ರೂಗಳನ್ನು ಆಪಾಧಿತನು ವರ್ಗಾಯಿಸಿ ಕೊಂಡಿರುವುದು ತಿಳಿಯಿತು. ಸದರಿ ನನಗೆ ಪೋನ್ ಫೇ ಕಸ್ಟಮರ್ ಕೇರ್ ಎಂತ ತಿಳಿಸಿ, ನನ್ನ ಖಾತೆಯಲ್ಲಿ ಇದ್ದ ಹಣವನ್ನು ವರ್ಗಾಯಿಸಿ ಕೊಂಡಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ನನ್ನ ಹಣವನ್ನು ನನಗೆ ವಾಪಸ್ಸು ಕೊಡಿಸಿ, ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರು.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.242/2021 ಕಲಂ. 279,337,304(A) ಐ.ಪಿ.ಸಿ:-

          ದಿನಾಂಕ 24-05-2021 ರಂದು ಬೆಳಗ್ಗೆ 10-45 ಗಂಟೆಗೆ ಸಿ.ವಿ.ಆಂಜಪ್ಪ ಬಿನ್ ಲೇಟ್ ಟಿ.ವೆಂಕಟರವಣಪ್ಪ, 64 ವರ್ಷ, ನಾಯಕರು, ಜಿರಾಯ್ತಿ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ರಮೇಶ ಬಿನ್ ಲೇಟ್ ತಿಮ್ಮಯ್ಯ ಎಂಬುವನು ತನ್ನ ದೊಡ್ಡಪ್ಪನ ಮಗನಾಗಿದ್ದು, ಆತನಿಗೆ 40 ವರ್ಷ ವಯಸ್ಸಾಗಿದ್ದು ತಮ್ಮ ಗ್ರಾಮದಲ್ಲಿ ಟೀ ಹೋಟೆಲ್ ಇಟ್ಟುಕೊಂಡು ಜೀವನ ಮಾಡಿಕೊಂಡಿರುತ್ತಾನೆ. ಈ ದಿನ ದಿನಾಂಕ 24/05/2021 ರಂದು ಬೆಳಿಗ್ಗೆ 09.10 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿಯಾದ ಎ.ಎಂ.ವೆಂಕಟರವಣಪ್ಪ ಬಿನ್ ಮುನಿಯಪ್ಪ ರವರು ತನಗೆ ಪೋನ್ ಮಾಡಿ ನಿನ್ನ ತಮ್ಮ ರಮೇಶ ಮತ್ತು ಆತನ ಹೆಂಡತಿ ಸರೋಜಮ್ಮ ರವರು ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿಯಿಂದ ಊರಿಗೆ ಬರುತ್ತಿದ್ದಾಗ, ಚಿಂತಾಮಣಿ-ಬೆಂಗಳೂರು ರಸ್ತೆಯ ಕಟಮಾಚನಹಳ್ಳಿ ಗ್ರಾಮದ ಬಳಿ ಇರುವ ಆರ್.ಕೆ.ಇಂಟರ್ನ್ಯಾಷನಲ್ ಶಾಲೆಯ ಪಕ್ಕದ ರಸ್ತೆಯ ಮದ್ಯೆ ಇರುವ ರಸ್ತೆ ವಿಭಜಕದ ಮುಖಾಂತರ ಬಜಾಜ್ ಪಲ್ಸರ್ ದ್ವಿಚಕ್ರ ವಾಹನದ ಸವಾರ ವಾಹನವನ್ನು ಏಕಾಏಕಿ ರಸ್ತೆಗೆ ತಿರುಗಿಸಿ ವಾಹನವನ್ನು ನಿನ್ನ ತಮ್ಮ ನಡೆಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರಿಂದ ಎರಡೂ ವಾಹನಗಳು ರಸ್ತೆಯ ಮೇಲೆ ಬಿದ್ದು ಹೋಗಿ ವಾಹನಗಳಲ್ಲಿದ್ದವರು ಗಾಯಗೊಂಡಿರುವುದಾಗಿ ತಿಳಿಸಿದ್ದರ ಮೇರೆಗೆ ತಕ್ಷಣ ತಾನು, ತಮ್ಮ ಗ್ರಾಮದ ಸುಲ್ತಾನ್ ಬಿನ್ ಅಪ್ಸರ್ ಪಾಷ ಮತ್ತು ಅಂಬರೀಶ ಬಿನ್ ನರಸಿಂಹಪ್ಪ ಮತ್ತಿತರರು ಸ್ಥಳಕ್ಕೆ ಬಂದು ನೋಡಲಾಗಿ ಸಂಗತಿ ನಿಜವಾಗಿದ್ದು, ಸ್ಥಳದಲ್ಲಿ ಜನರು ಸೇರಿದ್ದು, ತನ್ನ ತಮ್ಮನ ತಲೆಯ ಮುಂಭಾಗದಲ್ಲಿ ತೀವ್ರ ಸ್ವರೂಪದ ರಕ್ತಗಾಯವಾಗಿ ಮೈ-ಕೈಗೆ ತರಚಿದ ಗಾಯಗಳಾಗಿ ಮೃತಪಟ್ಟಿದ್ದನು. ತನ್ನ ನಾದಿನಿ ಸರೋಜಮ್ಮ ರವರ ತಲೆಯ ಹಿಂಭಾಗದಲ್ಲಿ ಮತ್ತು ಮೈ-ಕೈಗೆ ಗಾಯಗಳಾಗಿದ್ದು, ರಸ್ತೆಯ ಬದಿಯಲ್ಲಿ ತನ್ನ ತಮ್ಮನ ಕೆಎ-04 ಇಬಿ-0404 ನೊಂದಣಿ ಸಂಖ್ಯೆಯ ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನ ಹಾಗೂ ಕೆಎ-40 ವೈ-2833 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ವಿಚಕ್ರ ವಾಹನವಿದ್ದು ಎರಡೂ ವಾಹನಗಳು ಜಖಂ ಆಗಿರುತ್ತೆ. ನಾವು 108 ಆಂಬುಲೆನ್ಸ್ ವಾಹನದಲ್ಲಿ ಗಾಯಗೊಂಡಿದ್ದ ತನ್ನ ನಾಧಿನಿಯನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಪಡೆಸಿ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಯಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟು, ನಂತರ ತನ್ನ ತಮ್ಮನ ಮೃತದೇಹವನ್ನು ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿರುತ್ತೇವೆ. ನಂತರ ಎ.ಎಂ.ವೆಂಕಟರವಣಪ್ಪ ರವರನ್ನು ಘಟನೆಯ ಬಗ್ಗೆ ವಿಚಾರ ಮಾಡಲಾಗಿ ಈ ದಿನ ಬೆಳಿಗ್ಗೆ 09.00 ಗಂಟೆ ಸಮಯದಲ್ಲಿ ನಿನ್ನ ತಮ್ಮ ಮತ್ತು ನಾಧಿನಿ ಸರೋಜಮ್ಮ ರವರು ಕೆಎ-04 ಇಬಿ-0404 ನೊಂದಣಿ ಸಂಖ್ಯೆಯ ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿಯಿಂದ ಊರಿಗೆ ಬರುತ್ತಿದ್ದಾಗ, ಅದೇ ಸಮಯಕ್ಕೆ ಕೆಎ-40 ವೈ-2833 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ವಿಚಕ್ರ ವಾಹನದ ಸವಾರ ವಾಹನವನ್ನು ರಸ್ತೆಯ ವಿಭಜಕದ ಮದ್ಯೆ ಸ್ವಲ್ವ ಭಾಗ ಕಿತ್ತು ಹಾಕಿದ್ದು, ಇದರ ಮುಖಾಂತರ ಆತನು ದ್ವಿಚಕ್ರ ವಾಹನವನ್ನು ನಿರ್ಲಕ್ಷ್ಯತೆಯಿಂದ ಏಕಾಏಕಿ ರಸ್ತೆಗೆ ತಿರುಗಿಸಿ ವಾಹನವನ್ನು ನಿನ್ನ ತಮ್ಮನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿರುವುದಾಗಿ ತಿಳಿಸಿರುತ್ತಾನೆ. ಆದ್ದರಿಂದ ಮೇಲ್ಕಂಡ ದ್ವಿಚಕ್ರ ವಾಹನದ ಸವಾರನ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.84/2021 ಕಲಂ. 143,147,323,324,504,506,149 ಕೆ.ಇ ಆಕ್ಟ್:-

          ದಿನಾಂಕ:23/05/2021 ರಂದು ಬೆಳಿಗ್ಗೆ 8:45 ಗಂಟೆಗೆ ಪಿರ್ಯಾದಿದಾರರಾದ ಅರ್ಬಾಜ್ ಖಾನ್ ಬಿನ್ ಅಮ್ಜಾದ್ ಖಾನ್ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯನ್ನು ಪಡೆದು ಸಾರಾಂಶವೇನೆಂದರೆ ದಿನಾಂಕ: 22/05/2021 ರಂದು ರಾತ್ರಿ 7:45 ಗಂಟೆಯ ಸಮಯದಲ್ಲಿ ತನ್ನ ತಮ್ಮ ಸುಹೇಲ್ ಗಾಬರಿಯಿಂದ ಮನೆಗೆ ಬಂದು ಯಾಕೆ ಎಂದು ಕೇಳಿದ್ದಕ್ಕೆ ತಮ್ಮ ಏರಿಯಾದ ಚಾಂದ್ ಪಾಷ ರವರ ಮಗ ಪಯಾಜ್ ತನ್ನ ಮೇಲೆ ಆಟ ಆಡುವ ವಿಚಾರದಲ್ಲಿ ಗಲಾಟೆ ಮಾಡಿದ್ದ ಅದನ್ನು ಅವರ ತಂದೆಗೆ ಹೇಳಲು ಹೋದರೆ ಪಯಾಜ್ ರವರ ಅಣ್ಣಂದಿರು ನವಾಜ್ , ನಯಾಜ್ ಅವರ ತಂದೆ ಚಾಂದ್ ಪಾಷ ರವರು ತನ್ನನ್ನು ಹೊಡೆದು ಕಳಿಸಿರುತ್ತಾರೆ ಎಂದು ಹೇಳಿದ, ಆಗ ತಾನು ತಮ್ಮ ತಾಯಿ ಸಹೇರಾ ಭಾನು ರವರು ಅವರ ಮನೆಯ ಬಳಿ ರಾತ್ರಿ 8:00 ಗಂಟೆಗೆ ಏನಾಯ್ತು ಎಂದು ಕೇಳಲು ಹೋದೆವು, ತಾವು ಹೋಗುತ್ತಿದ್ದಂತೆ ಚಾಂದ್ ಪಾಷ, ನವಾಜ್ ರವರು ತನ್ನ ಮಗ ಸುಹೇಲ್ ನ ಗಲ್ಲಾಪಟ್ಟಿ ಹಿಡಿದು ಎಳೆದಾಡಿ ಕುತ್ತಿಗೆಗೆ ಕೈಯಾಕಿದಾಗ ತಾನು ಯಾಕೆ ನನ್ನ ಮಗನನ್ನು ಹೀಗೆ  ಹೊಡೆಯುತ್ತಿದ್ದೀರಿ ಎಂದು ಹೇಳುತ್ತಿದ್ದಂತೆ ನವಾಜ್ ಮತ್ತು ಚಾಂದ್ ಪಾಷ ರವರು ತನ್ನ ನೈಟಿಯನ್ನು ಹಿಡಿದು ಹರಿದು ಹಾಕಿದರು, ತಾನು ಜೋರಾಗಿ ಕೂಗಿಕೊಂಡಾಗ ತನ್ನ ತಮ್ಮ ಸುಹೇಲ್  ಅಡ್ಡ ಬಂದಿದ್ದಕ್ಕೆ ನವಾಜ್ ರವರು ರಾಡ್ ನಿಂದ ಹಣೆಗೆ, ಕೆನ್ನಗೆ ಗಾಯಮಾಡಿರುತ್ತಾರೆ.ಚಾಂದ್ ಪಾಷ ರವರು ಮತ್ತು ನಯಾಜ್ ರವರು  ತನಗೆ ಬೆನ್ನಿನ ಮೇಲೆ  ಕೈಗಳಿಂದ ಗುದ್ದಿ ಊತಗಾಯ ಮಾಡಿರುತ್ತಾರೆ, ಚಾಂದ್ ಪಾಷ ರವರ ಹೆಂಡತಿ ಮತ್ತು ಆತನ ತಂಗಿ ಜಬೀನಾ ತಾಜ್ ಆತನ ಮಗಳ ಮೊಹಮದಿ ರವರು ಬೇವರ್ಸಿ  ಲೋಫರ್ ಮುಂಡೆ ಎಂದು ಕೆಟ್ಟ ಮಾತುಗಳಿಂದ ಬೈದು ತನ್ನ ತಾಯಿಗೆ ಬೈದು ಕೈಗಳಿಂದ ಹೊಡೆದಿರುತ್ತಾರೆ, ಅಷ್ಟರಲ್ಲಿ ತಮ್ಮ ಏರಿಯಾದ ಮೆಹಬೂಬ್ ಮತ್ತು ಕಲಂದರ್ ರವರು ಜಗಳ ಬಿಡಿಸಿದರು, ಆದರು ಮೇಲ್ಕಂಡರವರು ನಮ್ಮ ಮಗನ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿ ಹೊರಟುಹೋಗಿರುತ್ತಾರೆ. ತಾವು ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತೇವೆ, ಆದ್ದರಿಂದ ಸದರಿ ಮೇಲ್ಕಂಡರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿರುತ್ತಾರೆ.

 

5. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.85/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005 & 7,20(2) COTPA, Cigarettes and Other Tobacco Products,Act 2003 :-

          ದಿನಾಂಕ: 23/05/2021 ರಂದು ಮದ್ಯಾಹ್ನ 14:00 ಗಂಟೆಗೆ ಆರೋಪಿ ಮತ್ತು ಮಾಲುನೊಂದಿಗೆ ಠಾಣೆಗೆ ವಾಪಸ್ಸಾಗಿದ್ದು ಈ ದಿನ ತಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-81 ವಿಶ್ವನಾಥ, ಪಿ.ಸಿ-539 ರವೀಂದ್ರ ರವರು ಪಂಚರನ್ನು  ಬರಮಾಡಿಕೊಂಡು  ಈ ದಿನ ದಿನಾಂಕ:23/05/2021 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದಲ್ಲಿ ಕರೋನಾ ಖಾಯಿಲೆ ತಡೆಗಟ್ಟುವ ಹಿನ್ನೆಲೆ ಹಾಗು ಲಾಕ್ ಡೌನ್ ಪ್ರಯುಕ್ತ ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-3699  ರಲ್ಲಿ  ಜೀಪ್ ಚಾಲಕ ಆಂಜೀನಪ್ಪ ರವರೊಂದಿಗೆ ಎಂ.ಜಿ ರಸ್ತೆಯಲ್ಲಿ ಸಿಬ್ಬಂದಿಯವರೊಂದಿಗೆ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಡೈಮಂಡ್ ಟಾಕೀಸ್ ರಸ್ತೆಯಲ್ಲಿರುವ ಗೋವರ್ಧನ್ ಅಂಗಡಿ ಮಾಲೀಕರು ಅವರ ಚಿಲ್ಲರೆ ಅಂಗಡಿ ಮುಂದೆ ತಂಬಾಕು ಉತ್ಪನ್ನಗಳನ್ನು (ಜಾಹಿರಾತು ವ್ಯವಹಾರ ಹಾಗು ವಿತರಣೆ ಉತ್ಪದಾನೆ ನಿರ್ಭಂದ) ಕಾಯ್ದೆ-2003 ರ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ನೀಡಿ ಗೋವರ್ಧನ್ ಚಿಲ್ಲರೆ ಅಂಗಡಿ ಮುಂದೆ ದಾಳಿ ಮಾಡಲು ಪಂಚರನ್ನಾಗಿ ಸಹಕರಿಸಲು ಕೋರಿದ್ದರ ಮೇರೆಗೆ ತಾವುಗಳು ಒಪ್ಪಿಕೊಂಡೆವು. ನಂತರ ಪೊಲೀಸ್ ಇನ್ಸ್ ಪೆಕ್ಟರ್ ರವರು ತಮ್ಮಗಳನ್ನು ಅವರ ಸಿಬ್ಬಂದಿಯೊಂದಿಗೆ ಮೇಲ್ಕಂಡ ಡೈಮಂಡ್ ಟಾಕೀಸ್ ರಸ್ತೆಯಲ್ಲಿ  ಗೋವರ್ಧನ್ ಚಿಲ್ಲರೆ ಅಂಗಡಿ ಬಳಿ ಮದ್ಯಾಹ್ನ 12-45 ಗಂಟೆಗೆ ಕರೆದುಕೊಂಡು ಹೋದಾಗ ಅಂಗಡಿ ಮಾಲೀಕರು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಅಂಗಡಿ ಬಳಿ ಯಾರೋ 2-3 ಜನ ಅಸಾಮಿಗಳು ಇದ್ದು, ಸದರಿ ಅಸಾಮಿಗಳು ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಇದ್ದು, ಅಂಗಡಿ ಮಾಲೀಕನು ಸಹ ಯಾವುದೇ ರೀತಿಯ ಮಾಸ್ಕ ಧರಿಸದೇ ವ್ಯಾಪಾರ ಮಾಡುತ್ತಿದ್ದು, ಪೊಲೀಸ್ ವಾಹನವನ್ನು ಕಂಡ ಕೂಡಲೇ ಅಸಾಮಿಗಳು ಅಲ್ಲಿಂದ ಹೊರಟು ಹೋಗಿದ್ದು, ಅಂಗಡಿಯ ಮುಂದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಾಲೀಕನ ಹೆಸರು ವಿಳಾಸ ಕೇಳಲಾಗಿ ಜಿ.ಗೋವರ್ಧನ್ ಬಿನ್ ವೆಂಕಟೇಶ್, 28 ವರ್ಷ, ವೈಶ್ಯರು, ವಾಸ ಡೈಮಂಡ್ ಟಾಕೀಸ್ ರಸ್ತೆ, ಚಿಂತಾಮಣಿ ಟೌನ್ ಎಂದು ತಿಳಿಸಿದ್ದು, ಆತನ ಅಂಗಡಿ ಮುಂಭಾಗದಲ್ಲಿ  ಮೂರು ಚೀಲಗಳು ಇದ್ದು, ಪರಿಶೀಲಿಸಲಾಗಿ ಅವುಗಳಲ್ಲಿ ಬಾದಷಾ ಹನ್ಸ್ ಪಾಕೆಟ್ ಗಳು ಮತ್ತು ಸಿಗರೇಟ್ ಪ್ಯಾಕ್ ಗಳು ಇದ್ದು  1) ಒಂದು ಚೀಲದಲ್ಲಿ ಬರ್ಕಲಿ ಸಿಗರೇಟ್ 25 ಪ್ಯಾಕೇಟ್ ಗಳು ಇದ್ದು, ಒಂದು ಪ್ಯಾಕ್ ಬೆಲೆ 45 ಆಗಿದ್ದು ಒಟ್ಟು 900 ರೂಗಳಾಗಿದ್ದು,  2) ಮತ್ತೊಂದು ಚೀಲದಲ್ಲಿ ಗೋಲ್ಡ್ ಪ್ಲಾಕ್ ಸಿಗರೇಟ್ 25 ಪ್ಯಾಕೆಟ್ ಗಳು ಇದ್ದು ಒಂದು ಪ್ಯಾಕ್ ಬೆಲೆ 150 ಆಗಿದ್ದು, ಒಟ್ಟು 3750 ರೂಗಳಾಗುತ್ತೆ. 3) ಅದೇ ಚೀಲದಲ್ಲಿ ವಿಲ್ಸ್ ಸಿಗರೇಟ್ 10 ಪ್ಯಾಕ್ ಇದ್ದು ಒಂದು ಪ್ಯಾಕ್ ಬೆಲೆ 52 ಆಗಿದ್ದು, ಒಟ್ಟು 520  ರೂಗಳಾಗುತ್ತೆ. 4) ಮತ್ತೊಂದು ಚೀಲದಲ್ಲಿ ವಿಮಲ್ ಪಾನ್ ಮಸಲಾ 20 ಹನ್ಸ್ ಬಂಡಲ್ ಗಳು ಇದ್ದು, ಪ್ರತಿ ಬಂಡಲ್ ಬೆಲೆ 120 ಆಗಿದ್ದು, ಒಟ್ಟು 2,400 ರೂಗಳಾಗಿರುತ್ತೆ. 5) ಅದೇ ಚೀಲದಲ್ಲಿ ಬಾದಷಾ ಹನ್ಸ್ 10 ಬಂಡಲ್ ಇದ್ದು ಒಂದು ಬಂಡಲ್ ಬೆಲೆ 200 ರೂಗಾಳಗಿದ್ದು  ಒಟ್ಟು 2.000/ರೂಗಳಾಗಿರುತ್ತೆ.  ಮೇಲ್ಕಂಡ ಕ್ರಮ ಸಂಖ್ಯೆ 1 ರಿಂದ 5 ರ ಟ್ಟು ಬೆಲೆ 9.570/ರೂಗಳಾಗಿರುತ್ತೆ. ಸದರಿ ಅಂಗಡಿ ಮಾಲೀಕರಿಗೆ ತಂಬಾಕು ಉತ್ಪನ್ನಗಳನ್ನು  ಮಾರಾಟ ಮಾಡಲು ಪರವಾನಗಿ ಬಗ್ಗೆ ಕೇಳಲಾಗಿ ತನ್ನ ಬಳಿ ಯಾವುದೇ ಪರಾವನಿಗೆ ಇಲ್ಲವೆಂದು ತಿಳಿಸಿರುತ್ತಾರೆ. ಮೇಲ್ಕಂಡ ತಂಬಾಕು ಪ್ಯಾಕೇಟ್ ಗಳ ಮೇಲೆ ಕ್ಯಾನ್ಸರ್ ಇತರೆ ರೋಗ ಹರಡುವ ಬಗ್ಗೆ ನೀಡಿರುವ ಸೂಚನೆಗಳ ಬಗ್ಗೆ ಸರಿಯಾದ ಎಚ್ಚರಿಕೆ ಪೋಟೋಗಳನ್ನು ಸ್ಪಷ್ಟವಾಗಿ ಪ್ರಿಂಟ್ ಮಾಡಿರುವುದಿಲ್ಲ. ಹಾಗು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಗ್ರಾಹಕರಿಗೆ ಸಾಮಾಜಿಕ ಅಂತರವನ್ನು ಮರೆತು ಮಾಲೀಕರು ಮಾಸ್ಕ್ ಧರಿಸದೇ ಉಲ್ಲಂಘನೆ ಮಾಡಿದ್ದು, ಅಂಗಡಿ ಮಾಲೀಕ ಗೋವರ್ಧನ್ ರವರನ್ನು ವಶಕ್ಕೆ ಪಡೆದು ಮತ್ತು ಮೇಲ್ಕಂಡ ಎಲ್ಲಾ ಮಾಲುಗಳನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆಪಡೆದುಕೊಂಡು ಪ್ರಕರಣ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.101/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:23-05-2021 ರಂದು ರಾತ್ರಿ 7-00 ಗಂಟೆಗೆ ಪಿರ್ಯಾದಿದಾರರಾದ ಚಾಂದ್  ಬಿನ್ ಮದರಸಾಬ್  45 ವರ್ಷ ಮುಸ್ಲಿಂ ಜನಾಂಗ ಗಾರೆ ಕೆಲಸ  ಸಂಜಯ್ ಗಾಂಧಿ ನಗರ ಜೋಪಡ್ ಪಟ್ಟಿ ವಿಜಯಪುರ ರಸ್ತೆ ಇಂದಿರಾ ನಗರ ಸೊಲ್ಲಾಪುರ ಮಹಾರಾಷ್ಟ್ರ ರಾಜ್ಯ ಪೊ:9764977370 ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ: ತನ್ನ ಅಣ್ಣನಾದ ಮಲ್ಲಿಕ್ ಷೇಖ್ ಬಿನ್ ಮದರ ಸಾಬ್ 50 ವರ್ಷ ಚಾಲಕ ವೃತ್ತಿ ವಾಸ ಸಂಜಯ್ ಗಾಂಧಿ ನಗರ ಜೋಪಡ್ ಪಟ್ಟಿ ವಿಜಯಪುರ ರಸ್ತೆ ಇಂದಿರಾ ನಗರ ಸೊಲ್ಲಾಪುರ ಮಹಾರಾಷ್ಟ್ರ ರಾಜ್ಯ ರವರು ಈಗ್ಗೆ ಸುಮಾರು 10 ವರ್ಷದಿಂದ ಎಂ.ಹೆಚ್.13 ಎ.ಎಕ್ಸ್-4654 ನೊಂದಣಿ ಸಂಖ್ಯೆಯ ಈಚರ್ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದು ಈಗ್ಗೆ ಸುಮಾರು 9 ದಿನಗಳ ಹಿಂದೆ ತನ್ನ  ಅಣ್ಣನಾದ  ಮಲ್ಲಿಕ್ ಷೇಖ್ ರವರು ಮೇಲ್ಕಂಡ ವಾಹನಕ್ಕೆ ಚಾಲಕನ  ಕೆಲಸಕ್ಕೆ ಮನೆಯಿಂದ ಬಂದಿದ್ದು ನಂತರ ಈ ದಿನ ದಿನಾಂಕ:23-05-2021 ರಂದು ಬೆಳಗ್ಗೆ:8-00 ಗಂಟೆಗೆ ಎಂ.ಹೆಚ್.13 ಎ.ಎಕ್ಸ್-4654 ನೊಂದಣಿ ಸಂಖ್ಯೆಯ ಈಚರ್ ವಾಹನದ ಮಾಲೀಕರಾದ ಯಾಕೂಬ್ ಕೈಯುಂ ಮನ್ನೇರ  ರವರು ತಮ್ಮ  ಮನೆಯ ಬಳಿ ಬಂದು ತಮ್ಮ ಮನೆಯಲ್ಲಿ ತಿಳಿಸಿದ್ದನೆಂದರೆ ಯಾಕೂಬ್ ಕೈಯುಂ ಮನ್ನೇರ  ರವರ ಬಾಬ್ತು ಎಂ.ಹೆಚ್.13 ಎ.ಎಕ್ಸ್-4654 ನೊಂದಣಿ ಸಂಖ್ಯೆಯ ಈಚರ್ ವಾಹನ ಚಾಲಕರಾಗಿ ತನ್ನ  ಅಣ್ಣನಾದ ಮಲ್ಲಿಕ್ ಷೇಖ್ ರವರನ್ನು ಮತ್ತು ಸತೀಶ್ ಜಟ್ಟಿತೂರು ಬಿನ್ ಅಂಕುಶ 43 ವರ್ಷ ಮೆಹರ್ ಜನಾಂಗ  ಚಾಲಕ ವೃತ್ತಿ ವಾಸ ನಂ:521 ಹೊಸ ಬುದ್ದವಾರ್ ಪೇಟ್ ರಮಾಬಾಯಿ ಜೋಪರಪಟ್ಟಿ ಸೊಲ್ಲಾಪುರ ಮಹಾರಾಷ್ಟ್ರ ರಾಜ್ಯ ರವರನ್ನು ನೇಮಕ ಮಾಡಿ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಹತ್ತಿರ ದ್ರಾಕ್ಷಿ ಹಣ್ಣುಗಳನ್ನು ಲೋಡ್ ಮಾಡಿಕೊಂಡು ಓರಿಸ್ಸಾ ರಾಜ್ಯದ ಭವಾನಿ ಪಟ್ನ ಕ್ಕೆ ಆನ್ ಲೋಡ್ ಮಾಡಿ ಬರಲು ಎಂ.ಹೆಚ್.13 ಎ.ಎಕ್ಸ್-4654 ನೊಂದಣಿ ಸಂಖ್ಯೆಯ ಈಚರ್ ವಾಹನವನ್ನು ಕಳುಹಿಸಿಕೊಟ್ಟಿದ್ದು ನಂತರ ಈ ದಿನ ದಿನಾಂಕ:23-05-2021 ರಂದು ಬೆಳಗ್ಗೆ ಮೇಲ್ಕಂಡ ವಾಹನದ ಇನ್ನೂಬ್ಬ ಚಾಲಕನಾದ ಸತೀಶ್ ರವರು ಯಾಕೂಬ್ ಕೈಯುಂ ಮನ್ನೇರ ರವರಿಗೆ ಪೋನ್ ಮಾಡಿ ಸತೀಶ್ ಮತ್ತು ಮಲ್ಲಿಕ್ ಷೇಖ್ ರವರು ಕನರ್ಾಟಕ ರಾಜ್ಯದ ಚಿಕ್ಕಬಳ್ಳಾಪುರದ ಹತ್ತಿರ ದ್ರಾಕ್ಷಿ ಹಣ್ಣುಗಳನ್ನು ಎಂ.ಹೆಚ್-13 ಎ.ಎಕ್ಸ್-4654 ನೊಂದಣಿ ಸಂಖ್ಯೆಯ ಈಚರ್ ವಾಹನದಲ್ಲಿ ಲೋಡ್ ಮಾಡಿಕೊಂಡು ಓರಿಸ್ಸಾ ರಾಜ್ಯದ ಭವಾನಿ ಪಟ್ನ ದಲ್ಲಿ ಆನ್ ಲೋಡ್ ಮಾಡಿದ್ದು ನಂತರ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರದ ಹತ್ತಿರ ಇನ್ನೂಂದು ಲೋಡ್ ದ್ರಾಕ್ಷಿ ಹಣ್ಣುಗಳನ್ನು ಲೋಡ್ ಮಾಡಿಕೊಂಡು ಓರಿಸ್ಸಾ ರಾಜ್ಯದ ಭವಾನಿ ಪಟ್ನಕ್ಕೆ ಹೋಗಿ ಆನ್ ಲೋಡು ಮಾಡಿಕೊಂಡು ಬರಲು ಸತೀಶ್  ಮತ್ತು ಮಲ್ಲೀಕ್ ಷೇಖ್ ರವರು ದಿನಾಂಕ:19-05-2021 ರಂದು  ಓರಿಸ್ಸಾ ರಾಜ್ಯದ ಭವಾನಿ ಪಟ್ನ ದಿಂದ ಮೇಲ್ಕಂಡ ವಾಹನವನ್ನು ಚಾಲನೆ ಮಾಡಿಕೊಂಡು ಚಿಕ್ಕಬಳ್ಳಾಪುರ ಹತ್ತಿರ ದ್ರಾಕ್ಷಿ ಹಣ್ಣುಗಳನ್ನು ಲೋಡ್ ಮಾಡಿಕೊಂಡು ಬರಲು ವಾಪಸ್ಸು ದಿನಾಂಕ:21-05-2021 ರಂದು ರಾತ್ರಿ ಸುಮಾರು 10 ಗಂಟೆಗೆ  ಎನ್.ಹೆಚ್-44 ರಸ್ತೆಯಲ್ಲಿ ಕರ್ನಾಟಕ ರಾಜ್ಯದ ಬಾಗೇಪಲ್ಲಿ ಟೋಲ್ ಬಳಿ ಇರುವ ಡಾಬಾದ ಬಳಿ ವಿಶ್ರಾಂತಿಗಾಗಿ ನಿಲ್ಲಿಸಿಕೊಂಡಿರವುದಾಗಿ. ದಿನಾಂಕ:21-05-2021 ರಂದು ರಾತ್ರಿ ಸತೀಶ್ ಮತ್ತು ಮಲ್ಲಿಕ್ ಷೇಖ್ ರವರು  ಬಾಗೇಪಲ್ಲಿ ಟೋಲ್ ಬಳಿ ಇರುವ ಡಾಭಾದ ಬಳಿ ವಾಹನವನ್ನು ನಿಲ್ಲಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದಾಗ ಮಲ್ಲಿಕ್ ಷೇಖ್ ರವರು ಆಂದ್ರಪ್ರದೇಶದ ಗಡಿ ಭಾಗದಲ್ಲಿ ಮದ್ಯಪಾನ ಮಾಡಿಕೊಂಡು ಬಂದು ಸತೀಶ್  ಮೇಲೆ ಗಲಾಟೆ ಮಾಡಿ ಮೇಲ್ಕಂಡ ವಾಹನವನ್ನು ಚಾಲನೆ ಮಾಡಿಕೊಂಡು ಬಾಗೇಪಲ್ಲಿ ಟೋಲ್ ಬಳಿ ಸುತ್ತಾಡಿಸಿದ್ದು ನಂತರ ಸತೀಶ್  ಆತನನ್ನು ಸಮಾನದಾನ ಮಾಡಿದ ನಂತರ ಇಬ್ಬರೂ ಅ ದಿನ ರಾತ್ರಿ ಮೇಲ್ಕಂಡ ವಾಹನದಲ್ಲಿ ಮಲಗಿಕೊಂಡಿದ್ದು ದಿನಾಂಕ:22-05-2021 ರಂದು ಬೆಳಗಿನ ಜಾವ ಸುಮಾರು 6-00 ಗಂಟೆಯಲ್ಲಿ ಪುನಃ ಮಲ್ಲಿಕ್ ಷೇಖ್ ರವರು ಮದ್ಯಪಾನ ಮಾಡಿ ಎಂ.ಹೆಚ್-13 ಎ.ಎಕ್ಸ್-4654 ನೊಂದಣಿ ಸಂಖ್ಯೆಯ ಈಚರ್ ವಾಹನವನ್ನು ಆತನೇ ಚಾಲನೆ ಮಾಡಿಕೊಂಡು ಬಾಗೇಪಲ್ಲಿ ಕಡೆಯಿಂದ ಚಿಕ್ಕಬಳ್ಳಾಪುರ ಕಡೆ ಬಂದು ಚಿಕ್ಕಬಳ್ಳಾಪುರ ತಾಲ್ಲೂಕು ಅರೂರು ಕ್ರಾಸ್ ಬಳಿ ಇರುವ ಯು ಟರ್ನ ಬಳಿ ಮೇಲ್ಕಂಡ ವಾಹನವನ್ನು ಎದುರು ದಿಕ್ಕಿನಿಂದ ರಸ್ತೆಯಲ್ಲಿ ಅತಿವೇಗವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಸತೀಶ್  ಆತನನ್ನು ಸಮಾದಾನ ಮಾಡಿ ಬುದ್ದಿ ಹೇಳಿ ಸದರಿ ವಾಹನವನ್ನು ಸತೀಶ್  ಚಾಲನೆ ಮಾಡುತ್ತೇನೆಂದು ಹೇಳಿದಾಗ ಮದ್ಯಪಾನ ಮಾಡಿದ್ದ ಮಲ್ಲಿಕ್ ಷೇಖ್ ರವರು ಸತೀಶ್  ಮಾತು ಕೇಳದೆ ತಾನು ಹಾಕಿಕೊಂಡಿದ್ದ ಷರ್ಟನ್ನು ಬಿಚ್ಚಿ ವಾಹನದಲ್ಲಿ ಹಾಕಿ ತಾನು ತಮ್ಮ ಊರಿಗೆ ಹೊಗುತ್ತೇನೆಂದು ಹೇಳಿ ವಾಹನದಿಂದ ಇಳಿದು ರಸ್ತೆಯಲ್ಲಿ ನಡೆದುಕೊಂಡು ಹೋಗಿರವುದಾಗಿ   ಪುನಃ ಸತೀಶ್  ಮೇಲ್ಕಂಡ ವಾಹನವನ್ನು ಚಾಲನೆ ಮಾಡಿಕೊಂಡು ವಾಪಸ್ಸು ಬಾಗೇಪಲ್ಲಿ ಟೋಲ್ ಬಳಿ ಹೋಗಿದ್ದು ನಂತರ ಈ ದಿನ ದಿನಾಂಕ:23-05-2021 ರಂದು ಚಿಕ್ಕಬಳ್ಳಾಪುರ ತಾಲ್ಲೂಕು ಹತ್ತಿರ  ದ್ರಾಕ್ಷಿ ಹಣ್ಣುಗಳನ್ನು ಲೋಡ್ ಮಾಡಿಕೊಂಡು ಬರಲು ಮೇಲ್ಕಂಡ ವಾಹನವನ್ನು ಚಾಲನೆ ಮಾಡಿಕೊಂಡು ಹೋಗಿದ್ದಾಗ  ಕರ್ನಾಟಕ  ರಾಜ್ಯದ ಚಿಕ್ಕಬಳ್ಳಾಪುರ ತಾಲ್ಲೂಕು ಆವುಲನಾಗೇನಹಳ್ಳಿ ಗ್ರಾಮದ ಗೇಟ್ ಬಳಿ ಬೆಂಗಳೂರಿನಿಂದ ಹೈದರಾಬಾದ್ ಕಡೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ಮಲ್ಲಿಕ್ ಷೇಖ್ ರವರಿಗೆ ಅಪಘಾತವಾಗಿ ಮೃತಪಟ್ಟಿರವುದಾಗಿ ಮಾಹಿತಿಯನ್ನು ತಿಳಿದುಕೊಂಡು  ಸತೀಶ್ ರವರು  ಅಪಘಾತ ನಡೆದ ಸ್ಥಳಕ್ಕೆ ಹೋಗಿ  ನೋಡಲಾಗಿ ವಿಚಾರ ನಿಜವಾಗಿದ್ದು ಮಲ್ಲಿಕ್ ಷೇಖ್ ರವರು ದಿನಾಂಕ:22-05-2021 ರಂದು ರಾತ್ರಿ ಯಿಂದ ದಿನಾಂಕ:23-05-2021 ರಂದು ಬೆಳಗಿನ ಜಾವ ಸುಮಾರು 6-00 ಗಂಟೆಯ ಮದ್ಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಆವುಲನಾಗೇನಹಳ್ಳಿ ಗೇಟ್ ಬಳಿ ಬೆಂಗಳೂರು ಕಡೆಯಿಂದ ಹೈದರಾಬಾದ ಕಡೆ ಹೋಗುವ ಎನ್.ಹೆಚ್-44 ರಸ್ತೆಯನ್ನು ದಾಟುತ್ತಿದ್ದಾಗ  ಬೆಂಗಳೂರು ಕಡೆಯಿಂದ ಬಂದ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಮೇಲ್ಕಂಡ ರಸ್ತೆಯನ್ನು ದಾಟುತ್ತಿದ್ದ ಮಲ್ಲಿಕ್ ಷೇಖ್ ರವರಿಗೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿ ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೋರಟು ಹೋದ  ಪರಿಣಾಮ ಮಲ್ಲಿಕ್ ಷೇಖ್ ರವರಿಗೆ ಎಡ ಕೈಗೆ ಹರಿತದ  ರಕ್ತಗಾಯವಾಗಿ ಮತ್ತು ತಲೆಗೆ ರಕ್ತಗಾಯವಾಗಿ ಮೈ ಮೇಲೆ ಗಾಯಗಳಿಗೆ ತೀವ್ರವಾಗಿ ರಕ್ತಗಾಯಗೊಂಡಿದ್ದ  ಮಲ್ಲಿಕ್ ಷೇಖ್ ರವರು ಸ್ಥಳದಲ್ಲಿ ಮೃತಪಟ್ಟಿರವುದಾಗಿ ಮತ್ತು ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿರವುದಾಗಿ ತಿಳಿಸಿರವುದಾಗಿ ತಿಳಿಸಿದರು ನಂತರ ತಾನು  ತಮ್ಮ ಊರಿನಿಂದ ತಮ್ಮ  ಸಂಬಂದಿಕರೊಂದಿಗೆ ಕರ್ನಾಟಕದ  ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ಮೇಲ್ಕಂಡ ಅಪಘಾತಕ್ಕೆ ಕಾರಣವಾದ ವಾಹನವನ್ನು ಪತ್ತೆ ಮಾಡಿ ಅದರ ಚಾಲಕನ ವಿರುದ್ದ ಮುಂದಿನ ಕಾನೂನು ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

7. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.51/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ 24/05/2021 ರಂದು ಹೆಚ್ ಸಿ-200 ರವರು ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಗಾಯಾಳು ಮಂಜುನಾಥ ಬಿನ್ ಲೇಟ್ ರವಣಪ್ಪ, ಮರಬಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಬೆಳಿಗ್ಗೆ 10-00 ಗಂಟೆಗೆ ಬಂದು ಹಾಜರುಪಡಿಸಿದ್ದರ ಹೇಳಿಕೆಯ ಸಾರಾಂಶವೇನೆಂದರೆ: ದಿನಾಂಕ 20/05/2021 ರಂದು ಸಂಜೆ 5-30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ರಾಮಚಂದ್ರನಾಯಕ ಬಿನ್ ಶ್ರೀರಾಮಪ್ಪ ರವರ ಜೊತೆ ಅವರ ದ್ವಿಚಕ್ರವಾಹನ ಸಂಖ್ಯೆ ಕೆಎ-07-ಇಇ-0493 ನೋಂದಣಿ ಸಂಖ್ಯೆಯ ಪ್ಯಾಷನ್ ಪ್ರೋ ವಾಹನದಲ್ಲಿ ತಾನು ಹಿಂಬದಿಯಲ್ಲಿ ಕುಳಿತು ಬಟ್ಲಹಳ್ಳಿ ಗ್ರಾಮಕ್ಕೆ ಹೋಗಿ ಪ್ಲಾಸ್ಟಿಕ್ ಪೈಪ್ ಗಳಿಗೆ ಹಾಕುವ ಗಮ್ ತರಲು ಮರಬಹಳ್ಳಿ-ಏಟಿಗಡ್ಡಗೊಳ್ಳಹಳ್ಳಿ ಗ್ರಾಮಗಳ ನಡುವಿನ ಮಣ್ಣಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ತಮ್ಮ ಗ್ರಾಮದ ಎಂ.ಎಸ್.ಮೂರ್ತಿ ರವರ ಜಮೀನಿನ ಬಳಿ ವಾಹನವನ್ನು ಚಾಲನೆ ಮಾಡುತ್ತಿದ್ದ ರಾಮಚಂದ್ರನಾಯಕ ರವರು ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು  ಹೋಗಿ ಮಣ್ಣಿನ ರಸ್ತೆಯಲ್ಲಿ ಸ್ಕಿಡ್ ಆಗಿ ದ್ವಿಚಕ್ರವಾಹನವನ್ನು ರಸ್ತೆಯಲ್ಲಿ ಬೀಳಿಸಿ ಅಪಘಾತಪಡಿಸಿದ ಪರಿಣಾಮ ತಾನು ದ್ವಿಚಕ್ರವಾಹನದಿಂದ ಕೆಳಗೆ ಬಿದ್ದು, ತನಗೆ ಬಲಭಾಗದ ಬೆನ್ನಿಗೆ ಬಲಭಾಗದ ತಲೆಗೆ, ರಕ್ತಗಾಯವಾಗಿ ಬಲಭಾಗದ ಹೊಟ್ಟೆಗೆ ಒತ್ತಡದ ಮೂಗೇಟು ಆಗಿರುತ್ತದೆ. ಆದರೆ ದ್ವಿಚಕ್ರವಾಹನ ಸವಾರನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ. ಕೂಡಲೇ ಅಲ್ಲಿಯೇ ಕೆಲಸ ಮಾಡುತ್ತಿದ್ದ ಮೂರ್ತಿ ಮತ್ತು ದ್ವಿಚಕ್ರವಾಹನ ಸವಾರ ತನ್ನನ್ನು ಉಪಚರಿಸಿ ಅದೇ ವಾಹನದಲ್ಲಿ ಗ್ರಾಮಕ್ಕೆ ಬಂದು ಅಲ್ಲಿಂದ ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡಿಸುತ್ತಿರುತ್ತಾರೆ. ಅತಿವೇಗ ಮತ್ತು ಅಜಾಗರೂಕತೆಯಿಂದ ದ್ವಿಚಕ್ರವಾಹನವನ್ನು ಚಲಾಯಿಸಿ ಅಪಘಾತಪಡಿಸಿದ ದ್ವಿಚಕ್ರವಾಹನ ಸವಾರನಾದ ರಾಮಚಂದ್ರನಾಯಕ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಹೇಳಿಕೆ ದೂರಿನ ಸಾರಾಂಶವಾಗಿರುತ್ತದೆ.

 

8. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.52/2021 ಕಲಂ. 15(A),32(3)  ಕೆ.ಇ ಆಕ್ಟ್:-

          ದಿನಾಂಕ 24/05/2021 ರಂದು ಮಧ್ಯಾಹ್ನ 13-40 ಗಂಟೆ ಸಮಯದಲ್ಲಿ ಪಿಎಸ್ಐ ರವರು ಮಾಲು, ಮಹಜರ್, ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ: ದಿನಾಂಕ:24/05/2021 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ತಾನು ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಕೆಂಚಾರ್ಲಹಳ್ಳಿ ಗ್ರಾಮದ ನಂಜುಂಡಪ್ಪ ಬಿನ್ ಲೇಟ್ ಮುನಿಶಾಮಿ ರವರು ತಮ್ಮ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಸ್ಥಳದ ಮೇಲೆ  ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿಹೆಚ್ಸಿ-215 ಮಂಜುನಾಥರೆಡ್ಡಿ, ಸಿಪಿಸಿ-484 ವಿ.ಎಸ್.ಶಿವಣ್ಣ  ರವರೊಂದಿಗೆ ಕೆಂಚಾರ್ಲಹಳ್ಳಿ ಗ್ರಾಮದಲ್ಲಿದ್ದವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಗ್ರಾಮದೊಳಗೆ ನಡೆದುಕೊಂಡು ಕೆಂಚಾರ್ಲಹಳ್ಳಿ ಗ್ರಾಮದ ನಂಜುಂಡಪ್ಪ ಬಿನ್ ಲೇಟ್ ಮುನಿಶಾಮಿ ರವರ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಮಾಲೀಕನಾದ ನಂಜುಂಡಪ್ಪ ಬಿನ್ ಲೇಟ್ ಮುನಿಶಾಮಿ ರವರು ತಮ್ಮ ಮನೆಯ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿಹೋಗಿದ್ದು, ಮನೆಯ ಮಾಲೀಕನನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ನಂಜುಂಡಪ್ಪ ಬಿನ್ ಲೇಟ್ ಮುನಿಶಾಮಿ, 51 ವರ್ಷ, ಜಿರಾಯ್ತಿ, ಬುಡಗ ಜಂಗಮ ಜನಾಂಗ, ವಾಸ ಕೆಂಚಾರ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  90 ಎಂ.ಎಲ್ ನ HAYWARDS CHEERS WHISKEY ಮಧ್ಯದ 14 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 14 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 492/-ರೂ ಆಗಿರುತ್ತೆ. ಮದ್ಯ ಒಟ್ಟು 1260 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ಆಸಾಮಿಯನ್ನು ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾನೆ.  ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 12-30 ರಿಂದ 13-30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ಮಹಜರ್ ನ್ನು,  ನಿಮ್ಮ ಮುಂದೆ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ನಂಜುಂಡಪ್ಪ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ವರದಿ ದೂರು.

ಇತ್ತೀಚಿನ ನವೀಕರಣ​ : 24-05-2021 05:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080