ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 108/2021 ಕಲಂ. 324,307 ರೆ/ವಿ 34 ಐಪಿಸಿ :-

     ದಿನಾಂಕ: 23/04/2021 ರಂದು ಬೆಳಿಗ್ಗೆ 11-20 ಗಂಟೆಗೆ ಹೆಚ್ ಸಿ-242 ರವರು ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಯಲ್ಲಿ ಮೆಮೋ ಸ್ವೀಕರಿಸಿ ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 13-45 ಗಂಟೆಗೆ ಠಾಣೆಗೆ ಹಾಜರಾಗಿ, ಹಾಜರುಪಡಿಸಿದ ಹೇಳಿಕೆಯ ಸಾರಾಂಶವೇನೆಂದರೆ ನರಸಿಂಹಮೂರ್ತಿ ಎನ್ ಬಿನ್ ಲೇಟ್ ನರಸಿಂಹಪ್ಪ, 40 ವರ್ಷ, ಗೊಲ್ಲರು, ತರಕಾರಿ ವ್ಯಾಪಾರ, ವಾಸ: ಯಗವ ಐವಾರ್ಲಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ಮೊ.ನಂ-9008792199. ಆದ ನಾನು ಬಾಗೇಪಲ್ಲಿ ಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡಿ ಕೊಂಡಿರುತ್ತೇನೆ. ದಿನಾಂಕ: 23/04/2021 ರಂದು ಬೆಳಗಿನ ಜಾವ ಬಾಗೇಪಲ್ಲಿಯಲ್ಲಿ  ತರಕಾರಿ ವ್ಯಾಪಾರಕ್ಕಾಗಿ ಎಪಿಎಂಸಿ ಮಾರುಕಟ್ಟೆಗೆ ನಾನು ಕೆಎ-04 ಹೆಚ್ ಎಲ್-6923 ಹೀರೋ ಸ್ಪ್ಲೆಂಡರ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದು, ನನ್ನ ಹಿಂಬದಿಯಲ್ಲಿಯೇ ನಮ್ಮ ಸಂಬಂಧಿ ನಮ್ಮ ಗ್ರಾಮದ ವಾಸಿ ಶಿವಪ್ಪ ಬಿನ್ ಆದಿನಾರಾಯಣಪ್ಪ ರವರು ಕೆಎ-67 ಹೆಚ್ 0408 ಪ್ಯಾಷನ್ ಪ್ರೋ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಬೆಳಗಿನ ಜಾವ ಸುಮಾರು 4-30 ಗಂಟೆಯಲ್ಲಿ ನಾವು ಬಾಗೇಪಲ್ಲಿ ತಾಲ್ಲೂಕು ಚಿನ್ನೇಪಲ್ಲಿ  ಕ್ರಾಸ್ ಬಿಟ್ಟು ಸ್ವಲ್ಪ ಮುಂದೆ ಬರುತ್ತಿದ್ದಂತೆ ಬಾಗೇಪಲ್ಲಿ ಗೂಳೂರು ರಸ್ತೆಯಲ್ಲಿ ನಮ್ಮ ಹಿಂಬದಿಯಿಂದ ಬಂದ ನನ್ನ ಹಿಂದೆ ಬರುತ್ತಿದ್ದ ಶಿವಪ್ಪ ರವರ ವಾಹನಕ್ಕೆ ಮತ್ತು ನನ್ನ ವಾಹನಕ್ಕೂ ಡಿಕ್ಕಿ ಹೊಡೆಸಿದನು. ನಾನು ಕೆಳಗೆ ಬಿದ್ದು ಹೋಗಿದ್ದು ಡಿಕ್ಕಿ ಹೊಡೆದ ಕಾರಿನ ಚಾಲಕನ ಎದುರು ನಡೆದುಕೊಂಡು ಬಂದೆನು. ಕಾರಿನ ಬಳಿ ಹೋಗಿ ನೊಡಲಾಗಿ ವಾಹನದ ಮುಂಬದಿ ಕೆಎ-08 ಪಿ-06 ಎಂದು ಇದು ಪಿ ನಂತರದ ಒಂದು ಸಂಖ್ಯೆ ಮತ್ತು 6 ನಂತರದ ಒಂದು ಸಂಖ್ಯೆಯನ್ನು ನೋಂದಣಿ ಫಲಕದಿಂದ ತೆಗೆದಿರುವಂತೆ ಮತ್ತು ಕೆ ಎ ನಂತರದ 0 ಪಕ್ಕದ 8 ಸಂಖ್ಯೆ ತಿದ್ದಿದಂತೆ ಇತ್ತು. ನಾನು ಟಾಟಾಸುಮೋ ವಾಹನದಲ್ಲಿಯೇ ಕುಳಿತಿದ್ದ ಚಾಲಕನ ಬಳಿ ಹೋಗಿ ರಸ್ತೆಯ ಸೈಡಿನಲ್ಲಿ ಬರುತ್ತಿದ್ದ ನಮಗೆ ಏಕೆ ಡಿಕ್ಕಿ ಹೊಡೆದೆ ಎಂದು ಕೇಳುತ್ತಿದ್ದಂತೆ ಗೂಳೂರು ಕಡೆಯಿಂದಲೇ ದ್ವಿಚಕ್ರ ವಾಹನಲ್ಲಿ ಬಂದ ಒಬ್ಬ ವ್ಯಕ್ತಿ ದ್ವಿಚಕ್ರ ವಾಹನವನ್ನು ಸೈಡಿನಲ್ಲಿ ನಿಲ್ಲಿಸಿ ನನ್ನ ಹಿಂಬದಿ ಬಂದು ಯಾವುದೋ ಕಬ್ಬಿಣದ ಆಯುಧದಿಂದ ನನ್ನ ತಲೆಗೆ ಹೊಡೆದನು. ನಾನು ಹೊಡೆಯಬೇಡ ಎಂದು ನನ್ನ ಎರಡೂ ಕೈಗಳನ್ನು ಅಡ್ಡ ಇಟ್ಟಾಗ ನನ್ನ ಎರಡೂ ಕೈಗೆ ರಕ್ತಗಾಯವಾಯಿತು. ಕಬ್ಬಿಣದ ಆಯುಧದಿಂದ ತಲೆಗೆ ಹೊಡೆದ ಪರಿಣಾಮ ರಕ್ತಗಾಯವಾಗಿ ನಾನು ಹಿಂದಕ್ಕೆ ತಿರುಗಿದಾಗ ಅದೇ ಆಯುಧದಿಂದ ನನ್ನ ಬಾಯಿಗೆ ಹೊಡೆದ ಪರಿಣಾಮ ನನ್ನ 5 ರಿಂದ 6 ಹಲ್ಲುಗಳು ಸ್ಥಳದಲ್ಲಿಯೇ ಬಿದ್ದು ಹೋದವು, ಬಾಯಿ ಮತ್ತು ಗಡ್ಡದ ಬಳಿ ರಕ್ತಗಾಯವಾಯಿತು. ನಾನು ತಪ್ಪಿಸಿಕೊಂಡು ಓಡಲು ಶುರು ಮಾಡುತ್ತಿದ್ದಂತೆ ಟಾಟಾಸುಮೋ ಚಾಲಕ ಟಾಟಾಸುಮೋವನ್ನು ವಾಗವಾಗಿ ಚಾಲನೆ ಮಾಡಿಕೊಂಡು ಬಂದು ನನ್ನ ಮೇಲೆ ಹತ್ತಿಸಿ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದನು. ನಾನು ಜೋರಾಗಿ ಯಾರದೋ ಮನೆಯ ಬಳಿ ಓಡಿ ಹೋಗಿ ನನ್ನ ತಮ್ಮ ನಂಜುಂಡನಿಗೆ ಪೋನ್ ಮಾಡಿ ವಿಚಾರ ತಿಳಿಸಿದೆನು. ಶಿವಪ್ಪ ರವರೂ ಸಹ ಸ್ಥಳದಿಂದ ಓಡಿಹೋಗಿರುತ್ತಾರೆ. ಈ ಹಿಂದೆಯೂ ಸುಮಾರು ಎರಡು ತಿಂಗಳ ಹಿಂದೆ ಮೇಲ್ಕಂಡ ಟಾಟಾಸುಮೋ ವಾಹನದ ಚಾಲಕ ಇದೇ ವಾಹನದಿಂದ ನನಗೆ ಡಿಕ್ಕಿ ಹೊಡೆಯಲು ಅದೇ ಸ್ಥಳದಲ್ಲಿಯೇ ಪ್ರಯತ್ನಿಸಿದ್ದು ಆಕಸ್ಮಿವಾಗಿ ಆಗಿರಬಹುದೆಂದು ನಾನು ಸುಮ್ಮನಿದ್ದೆನು. ನಂತರ ಗೂಳೂರು ರಸ್ತೆಯಲ್ಲಿ ನಾನು ಗಾಯಗೊಂಡಿದ್ದಾಗ ನಮ್ಮ ಗ್ರಾಮದ ಅಶ್ವತ್ಥನಾರಾಯಣ ನನ್ನ ತಮ್ಮ ನಂಜುಂಡ ಇತರರು ಬಂದು ಚಿಕಿತ್ಸೆಗಾಗಿ ಸರ್ಕಾರಿ ಆಂಬ್ಯೂಲೆನ್ಸ್ ನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ನನಗೆ ಕೊಲೆ ಮಾಡಲು ಪ್ರಯತ್ನಿಸಿ ಡಿಕ್ಕಿ ಹೊಡೆಸಿದ ವಾಹನದ ಅಸಲು ನೋಂದಣಿ ಸಂಖ್ಯೆ ಕೆಎ-03 ಪಿ-0066 ಎಂದು ವಾಹನದಲ್ಲಿದ್ದ ನಕಲು ದಾಖಲಾತಿಗಳನ್ನು ನೋಡಿದ ನಮ್ಮ ಗ್ರಾಮದವರು ನನಗೆ ತಿಳಿಸಿರುತ್ತಾರೆ. ನನಗೆ ಕೊಲೆ ಮಾಡಲು ಪ್ರಯತ್ನಿಸಿದ ಇಬ್ಬರು ವ್ಯಕ್ತಿಗಳು ಅಪರಿಚಿತವಾಗಿದ್ದು ಇದನ್ನು ಮಾಡಿಸಿರುವವರು ವೆಂಕಟರವಣ ಬಿನ್ ನಾರಾಯಣಸ್ವಾಮಿ, ಚನ್ನಹಳ್ಳಿ ಗ್ರಾಮ, ಹಾಲೀ ವಾಸ:ಶಾಂತಿನಗರ, ದೇವನಹಳ್ಳಿ ರವರು ಎಂದು ನನಗೆ ಅನುಮಾನ ಇರುತ್ತದೆ. ನನಗೆ ಕಬ್ಬಿಣದ ಆಯುಧದಿಂದ ಹೊಡೆದು, ಟಾಟಾಸುಮೋ ವಾಹನ ಹತ್ತಿಸಿ ನನ್ನನ್ನು ಕೊಲೆ ಮಾಡಲು ಯತ್ನಿಸಿದ ಮೇಲ್ಕಂಡವರನ್ನು ಪತ್ತೆಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

 2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 68/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ:-

     ದಿನಾಂಕ: 23/04/2021 ರಂದು ಮದ್ಯಾಹ್ನ 1-35 ಗಂಟೆ ಸಮಯದಲ್ಲಿ ಪಿ.ಎಸ್.ಐ ಸಾಹೇಬರವರು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ; 23-04-2021 ರಂದು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಫುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಮಂಚನಬಲೆ ಗ್ರಾಮದಲ್ಲಿ ರಾಮಪ್ಪ @ ಭಂಗಿರಾಮಪ್ಪ ಬಿನ್ ಲೇಟ್ ವೆಂಕಟರಾಯಪ್ಪ, 58 ವರ್ಷ, ಪರಿಶಿಷ್ಟ ಜಾತಿ, ಕೂಲಿಕೆಲಸ, ಹರಿಜನ ಕಾಲೋನಿ, ಮಂಚನಬಲೆ ಗ್ರಾಮ, ಕಸಬಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಎಂಬುವರು ತನ್ನ ಚಿಲ್ಲರೆ ಅಂಗಡಿಯ ಬಳಿ ಯಾವುದೇ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ ಈ ಬಗ್ಗೆ ಅಸಾಮಿಯ ವಿರುದ್ದ ಕಲಂ; 15(ಎ) 32(3) ಕೆ,ಇ,ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರ.ವ.ವರದಿ ದಾಖಲಿಸಿರುವುದಾಗಿರುತ್ತೆ.

 

3. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ. 64/2021 ಕಲಂ. 323,324,504,506 ರೆ/ವಿ 34 ಐಪಿಸಿ :-

     ಗಾಯಾಳುವಾದ ಶ್ರೀಮತಿ ಮುನಿಯಮ್ಮ ಕೋಂ ಲೇಟ್ ಚಿನ್ನಪ್ಪಯ್ಯ, 75 ವರ್ಷ, ಕೂಲಿ ಕೆಲಸ, ಆದಿ ದ್ರಾವಿಡ, ವಾಸ: ಶಾಂತಿ ನಗರ, ವಾರ್ಡ್ ನಂ: 27,  ಚಿಂತಾಮಣಿ ನಗರ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ನಾನು ನನ್ನ ಮಗಳಾದ ಕನಕವಲ್ಲಿ ರವರ ಮನೆಯಲ್ಲಿ ವಾಸವಾಗಿರುತ್ತೇನೆ ನನ್ನ ಮಗನಾದ ನಾಗರಾಜ್ ರವರ ಮಗನಾದ ವಿಘ್ನೇಶ್ ರವರಿಗೆ ಸುಮಾರು 05 ತಿಂಗಳ ಹಿಂದೆ ಕಾಲೇಜ್ ಪೀಸ್ ಕಟ್ಟಲು ನನ್ನ ಮಗಳಾದ ಕನಕವಲ್ಲಿ ಬಳಿ ಹಣ ತೆಗೆದುಕೊಂಡು ಬರುವಂತೆ ನಾಗರಾಜ್ ರವರು ಅವರ ಮಗನಾದ ವಿಘ್ನೇಶ್ ರವರನ್ನು ಕಳುಹಿಸಿದ್ದು ನಂತರ ಕನಕವಲ್ಲಿ ಹಣವಿಲ್ಲದ ಕಾರಣ 05 ಬಂಗಾರದ ಉಂಗುರ 02 ಹ್ಯಾಂಗಲೀಸ್ ನ್ನು ನೀಡಿರುತ್ತಾರೆ ಈ ಓಡವೆಯನ್ನು ವಾಪಸ್ಸು ನೀಡುವಂತೆ ರಾಣಿಯಮ್ಮ ರವರ ಮುಖಾಂತರ ಕೇಳಿದಾಗ ಮೊದಲು ಕೊಡುವುದಾಗಿ ಹೇಳಿ ನಂತರ ನಾವು ಅವರ ಬಳಿ ನಾವು ಯಾವುದೇ ಓಡವೆ ತೆಗೆದುಕೊಂಡಿಲ್ಲವೆಂದು ತಿಳಿಸಿರುತ್ತಾರೆಂದು ರಾಣೆಯಮ್ಮ ಮತ್ತು ಮಣಿ, ಪಿಚ್ಚ ಸುಬ್ರಮಣಿ ರವರು ತಿಳಿಸಿರುತ್ತಾರೆ ನಂತರ ಒಡವೆ ವಿಚಾರವನ್ನು ನಾನಾಗಲಿ ನನ್ನ ಮಗಳಾಗಲಿ ಅವರೊಂದಿಗೆ ಮಾತನಾಡಿರುವುದಿಲ್ಲ ನಂತರ ದಿನಾಂಕ:22/04/2021 ರಂದು ಬೆಳಿಗ್ಗೆ 9.00 ಗಂಟೆ ಸಮಯದಲ್ಲಿ ನಾನು ನನ್ನ ಮಗಳಾದ ಕನಕವಲ್ಲಿ ನನ್ನ ಅಳಿಯ ಸತ್ಯಮೂರ್ತಿ ರವರು ಕೆಲಸಕ್ಕೆಂದು ಹೋಗುತ್ತಿರುವಾಗ ಶಿವಗಾಮಿನಿ (ಸೊಸೆ) ರವರು ಏಕಾಏಕಿ ಏ ಬೇವರ್ಸಿ ಮುಂಡೆ ಲಂಜ ಮುಂಡೆಗಳೆಂದು ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ನಂತರ ನನ್ನ ಮಗಳು ನಾನು ಹೋಗಿ ಯಾಕೆ ಈ ರೀತಿ ಬೈಯುತ್ತಿದ್ದಿರಾ ಎಂದು ಕೇಳಿದಕ್ಕೆ ನನ್ನ ಮಗ ನಾಗರಾಜ್ ರವರು ಬಂದು ಕೈಗಳಿಂದ ನನ್ನ ತಲೆಗೆ ಮತ್ತು ಮುಖಕ್ಕೆ ಹೊಡೆದಿರುತ್ತಾರೆ ನಾನು ಇಷ್ಟುದಿನ ಸಂಪಾದನೆ ಮಾಡಿದ್ದೇಲ್ಲಾ ನನಗೆ ಕೊಡುಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೇಳಿರುತ್ತಾರೆ ಕನಕವಲ್ಲಿ ಅಡ್ಡ ಬಂದಿದ್ದಕ್ಕೆ ನಾಗರಾಜ್ ರವರು ಕೈಗಳಿಂದ ನನ್ನ ಮಗಳ ಬೆನ್ನಿಗೆ ಗುದ್ದಿ ಮೂಗೇಟುಗಳನ್ನುಂಟು ಮಾಡಿರುತ್ತಾರೆ ಅವರ ಮಗ ವಿಘ್ನೇಶ್ ರವರು ಸಹ ನನ್ನ ಮಗಳನ್ನು ಕೈಗಳಿಂದ ಗುದ್ದಿ ಮೂಗೇಟುಗಳನ್ನುಂಟು ಮಾಡಿರುತ್ತಾರೆ ನಂತರ ನಾಗರಾಜ್ ರವರ ಮಗ ವಿಜಯ್ ರವರು ಚಾಕು ಎತ್ತಿಕೊಂಡು ಬಂದು ನನ್ನನ್ನು ಹಾಗೂ ನನ್ನ ಮಗಳನ್ನು ಸಾಯಿಸುವುದಾಗಿ ಬೆದರಿಕೆ ಹಾಕಿರುತ್ತಾರೆ ನಂತರ ವಿಘ್ನೇಶ್ ರವರು ಕಬ್ಬಿಣದ ರಾಡ್ ತೆಗೆದುಕೊಂಡು ಬಂದು ಬೆನ್ನಿಗೆ ಹಾಕಿ ರಕ್ತಗಾಯ ವುಂಟು ಮಾಡಿರುತ್ತಾರೆ ನಂತರ ನಾಗರಾಜ್ ರವರು ವಿಘ್ನೇಶ್ ರವರ ಬಳಿ ರಾಡ್ ತೆಗೆದುಕೊಂಡು ಬಂದು ನನ್ನ ತಲೆಗೆ ಹೊಡೆದಿರುತ್ತಾರೆ ಈ ನೂಕು ನುಗ್ಗಲಲ್ಲಿ ನನ್ನ ಕಿವಿಗೆ ಇದ್ದ ಓಲೆ ಎಲ್ಲೋ ಬಿದ್ದು ಹೋಗಿರುತ್ತೆ ನಂತರ ಗಲಾಟೆಯನ್ನು ಆಗುತ್ತಿದ್ದನ್ನು ನೋಡಿ ಮಾಣಿಕ್ಯ ಶಾಂತಿನಗರ ಮತ್ತು ರಾಜೇಂದ್ರ ರವರು ಬಂದು ಗಲಾಟೆ ಬೀಡಿಸಿರುತ್ತಾರೆ ನಂತರ ಯಾವುದೋ ವಾಹನದಲ್ಲಿ ಚಿಕಿತ್ಸೆಗೆ ಚಿಂತಾಮಣಿ  ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತೇವೆ ಆದ್ದರಿಂದ ನಮ್ಮ ಮೇಲೆ ವಿನಾಕಾರಣ ಹಲ್ಲೆ  ಮಾಡಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ. 65/2021 ಕಲಂ. 143,323,341,504,506 ರೆ/ವಿ 149 ಐಪಿಸಿ :-

     ಗಾಯಾಳುವಾದ ಶ್ರೀಮತಿ ಶವಗಾಮಿ ಕೋಂ ನಾಗರಾಜ್, 37 ವರ್ಷ, ಕೂಲಿ ಕೆಲಸ, ಆದಿ ದ್ರಾವಿಡ, ವಾಸ: ಶಾಂತಿ ನಗರ, ವಾರ್ಡ್ ನಂ: 27,  ಚಿಂತಾಮಣಿ ನಗರ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ಸುಮಾರು 02 ತಿಂಗಳಿನಿಂದ ನನಗೂ ಹಾಗೂ ನನ್ನ ಗಂಡನ ತಂಗಿಯಾದ ಕನಕವಲ್ಲಿ ಹಾಗೂ ನನ್ನ ಅತ್ತೆಯಾದ ಮುನಿಯಮ್ಮ ರವರಿಗೆ ಮನೆಯ ವಿಚಾರದಲ್ಲಿ ಗಲಾಟೆಗಳಿರುತ್ತದೆ ಅನೇಕ ಬಾರಿ ರಾಜಿ ಪಂಚಾಯ್ತಿ ಸಹ ಮಾಡಿರುತ್ತೇವೆ ನಂತರ ದಿನಾಂಕ: 22/04/2021 ರಂದು ಬೆಳಿಗ್ಗೆ 8:30 ಗಂಟೆಯಲ್ಲಿ ಕನಕವಲ್ಲಿ ಹಾಗೂ ಮುನಿಯಮ್ಮ ರವರು ಏಕಾಏಕಿ ಅಡ್ಡಗಟ್ಟಿ ನನ್ನನ್ನು ಏ ಲೋಪರ್ ಮುಂಡೆ ಬೇವರ್ಸಿ ಮುಂಡೆ ನಮ್ಮ ಮನೆ ತಂಟೆಗೆ ಬಂದರೆ ಸುಮ್ಮನೆ ಬೀಡುವುದಿಲ್ಲವೆಂದು ಬೈದಿರುತ್ತಾರೆ ನಂತರ ನಾನು ನನ್ನ ಮಗಳಾದ ನೇತ್ರಾ ರವರು ಯಾಕೆ ಈ ರೀತಿ ಬೈಯುತ್ತಿದ್ದಿರಾ ಎಂದು ಕೇಳಿದಕ್ಕೆ ಆ ಪೈಕಿ ಮುನಿಯಮ್ಮ ಮತ್ತು ಕನಕವಲ್ಲಿ ರವರು ನನ್ನನ್ನು ಕೈಗಳಿಂದ ನನ್ನ ಬೆನ್ನಿಗೆ ಹಾಗೂ ಹೊಟ್ಟೆಗೆ ಗುದ್ದಿರುತ್ತಾರೆ ನಂತರ ಸತ್ಯ ಧನಲಕ್ಷ್ಮೀ, ಅಂಬಿಕಾ ರವರೂ ಸಹ ಮನೆಯಿಂದ ಬಂದು ಏಕಾಏಕಿ ಅಲ್ಲೆ ಇದ್ದ ನನ್ನ ಮಗಳಿಗೆ ಕೈಗಳಿಂದ ಬೆನ್ನಿಗೆ ಗುದ್ದಿರುತ್ತಾರೆ ಅಪ್ಪು ಎಂಬುವವರು ಬಂದು ನೀವು ಇನ್ನೋಮ್ಮೆ ನಮ್ಮ ತಂಟೆ ತಕರಾರಿಗೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಬೀಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ ಆದ್ದರಿಂದ ನಮ್ಮ ಮೇಲೆ ವಿನಾಕಾರಣ ಕೈಗಳಿಂದ ಹಲ್ಲೆ ಮಾಡುತ್ತಿದ್ದಾಗ ರಾಣಿಯಮ್ಮ ಹಾಗೂ ಮಾಣಿಕ್ಯ ರವರು ಬಂದು ಗಲಾಟೆ ಬೀಡಿಸಿರುತ್ತಾರೆ ನಂತರ ಯಾವುದೋ ವಾಹನದಲ್ಲಿ ಚಿಕಿತ್ಸೆಗೆ ಚಿಂತಾಮಣಿ  ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತೇವೆ ಆದ್ದರಿಂದ ನಮ್ಮ ಮೇಲೆ ವಿನಾಕಾರಣ ಹಲ್ಲೆ  ಮಾಡಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

  

5. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ. 67/2021 ಕಲಂ. 87 ಕೆ.ಪಿ. ಅಕ್ಟ್‌ :-

     ದಿನಾಂಕ;23/04/2021 ರಂದು ಮದ್ಯಾಹ್ನ 12-30 ಗಂಟೆಯಲ್ಲಿ ನ್ಯಾಯಾಲಯದ ಮಪಿಸಿ-364 ರವರು ಠಾಣಾ ಎನ್,ಸಿ,ಆರ್ ಸಂಖ್ಯೆ;87/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂಧರೆ ದಿನಾಂಕ:14/04/2021 ರಂದು ಮದ್ಯಾಹ್ನ 02-30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ನಾಗಿರೆಡ್ಡಿ ಬಡಾವಣೆ ಬೀಟ್ ಸಿಬ್ಬಂದಿಯಾದ  ಸಿಪಿಸಿ-282 ರಮೇಶ್ ಪೊನ್ ಮಾಡಿ ತಿಳಿಸಿದ್ದೇನೆಂದರೆ ವೀರಂಡಹಳ್ಳಿ  ಪಕ್ಕದಲ್ಲಿರುವ ಪಿನಾಕಿನಿ ಹಳ್ಳದಲ್ಲಿ ಹೊಂಗೆ ಮರದ ಕೆಳಗೆ ಯಾರೋ ಕೆಲವರು  ಅಕ್ರಮವಾಗಿ ಗುಂಪಾಗಿ ಕುಳಿತುಕೊಂಡು ಅಂದರ್ ಬಾಹರ್ ಇಸೀಟ್ ಜೂಜಾಟವನ್ನು ಆಡುತ್ತೀರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ಸರ್ಕಾರಿ ಜೀಪ್ ಕೆ.ಎ-40 ಜಿ-.1888 ರಲ್ಲಿ ಚಾಲಕ ಅಶ್ವತ್ಥ ರೆಡ್ಡಿ ಎಪಿಸಿ-105 ರವರೊಂದಿಗೆ ಠಾಣಾ ಸಿಬ್ಬಂದಿಯಾದ  ಸಿಹೆಚ್ ಸಿ-214 ಲೋಕೇಶ್,ಶ್ಸಿ ಹೆಚ್ ಸಿ-12 ಶಿವ ಶಂಕರ್ ಮತ್ತು ಸಿಪಿಸಿ- 507 ಹನುಮಂತರಾಯಪ್ಪ ರವರನ್ನು ಕರೆದುಕೊಂಡು ವೀರಂಡಹಳ್ಳಿ ಗ್ರಾಮ ಜಗುಲಿ ಕಟ್ಟೆಯ ಬಳಿ ಮದ್ಯಾಹ್ನ 2-45 ಗಂಟೆಗೆ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ಸರ್ಕಾರಿ ಜೀಪ್ ನಲ್ಲಿ ವೀರಂಡಹಳ್ಳಿ ಪಿನಾಕಿನಿ ಹಳ್ಳದ ಬಳಿ ಹೋಗಿ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಸ್ವಲ್ಪ ದೂರು ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಸಾಮಿಗಳು ಗುಂಪಾಗಿ ಕುಳಿತುಕೊಂಡು ಅಂದರ್ -300 ಬಾಹರ್-300 ಎಂದು ಕೂಗಾಡುತ್ತಾ ಇಸ್ಫೀಟ್ ಜೂಜಾಟವನ್ನು ಆಡುತ್ತೀರುವುದು ಕಂಡು ಬಂದಿದ್ದು ಪಂಚರ ಸಮಕ್ಷಮ ಆಡುತ್ತೀದ್ದವರ ಮೇಲೆ ದಾಳಿ ಮಾಡಿ ಸುತ್ತುವರೆದು ಹಿಡಿದುಕೊಂಡು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ರವಿ ಬಿನ್ ಕೃಷ್ಣಪ್ಪ, 42 ರ್ವ, ಶೆಟ್ಟಿ ಬಲಜಿಗರು,  ವಿಲೇ ವ್ಯಾಪಾರ, ವಾಸ: ರಜಾಕ್ ಸಾಬ್ ಗಲ್ಲಿ ಗೌರಿಬಿದನೂರು ಟೌನ್ 2) ಶ್ರೀನಿವಾಸ ಬಿನ್ ಅಶ್ವತ್ಥಪ್ಪ, 43 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ವೀರಂಡಹಳ್ಳಿ ಗೌರಿಬಿದನೂರು ಟೌನ್,  3) ವೆಂಕಟೇಶ್ ಬಿನ್ ಲೆಟ್ ಮುನಿಯಪ್ಪ, 42 ವರ್ಷ, ನಾಯಕರು, ಆದಿ ಕರ್ನಾಟಕ ಜನಂಗ, ಜಿರಾಯ್ತಿ, ವಾಸ: ಕರೇಕಲ್ಲಿಹಳ್ಳಿ ಗ್ರಾಮ, ಗೌರಿಬಿದನೂರು ಟೌನ್  ಎಂದು ತಿಳಿಸಿದ್ದು ಸದರಿಯವರನ್ನು ಇಸ್ಪೀಟ್ ಜೂಜಾಟವನ್ನು ಆಡಲು ಪರವಾನಿಗೆಯನ್ನು ಕೇಳಲಾಗಿ ಸದರಿಯವರು ತಮ್ಮ ಬಳಿ ಯಾವುದು ಇಲ್ಲವೆಂದು ತಿಳಿಸಿದ್ದು ಪಂಚರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ವಿವಿದ ಮುಖ ಬೆಲೆಯ ಒಟ್ಟು ರೂ 4150/-, 52 ಇಸ್ಪೀಟ್ ಎಲೆಗಳು ಮತ್ತು ಒಂದು ನ್ಯೂಸ್ ಪೇಪರ್ ಇದ್ದು ಇವುಗಳನ್ನು ಮುಂದಿನ ಕ್ರಮಕ್ಕಾಗಿ ಮದ್ಯಾಹ್ನ 3-00 ಗಂಟೆಯಿಂದ 3-45 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಮತ್ತೆ ಠಾಣೆಗೆ ವಾಪಸ್ಸು 4-00 ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 4-30 ಗಂಟೆಗೆ ವರದಿಯನ್ನು ಸಿದ್ದಪಡಿಸಿ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಎನ್,ಸಿ,ಆರ್ ಪ್ರಕರಣ ದಾಖಲಿಸಿರುತ್ತೆ ನಂತರ ಈ ದಿನ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

6. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ. 77/2021 ಕಲಂ. 324 ರೆ/ವಿ 34 ಐಪಿಸಿ :-

     ದಿನಾಂಕ: 23.04.2021 ರಂದು ಸಂಜೆ 4-00 ಗಂಟಗೆ ಠಾಣೆಗೆ ಹಾಜರಾಗಿ ಗಾಯಾಳು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಬಂದು ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದೆ, ಪಿರ್ಯಾದಿದಾರರಿಗೆ ಹಾಗು ಹೊಸಹಳ್ಳಿ ಗ್ರಾಮದ ಮಂಜುನಾಥ ಬಿನ್ ಲೇಟ್ ಅಮರನಾರಾಯಣ ರವರಿಗೆ ಈಗ್ಗೆ ಸುಮಾರು 6 ತಿಂಗಳಿನ ಹಿಂದ ಕ್ಷುಲಕ ಕಾರಣಕ್ಕೆ ಜಗಳವಾಗಿದ್ದು, ಗ್ರಾಮದ ಹಿರಿಯ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿಕೊಂಡಿರುತ್ತಾರೆ. ನಂತರ ದಿ:21.04.2021 ರಂದು ಶ್ರೀರಾಮ ನವಮಿ ಹಬ್ಬದ ದಿನ ಪಿರ್ಯಾದಿದಾರರ ಮೇಲೆ ಗಲಾಟೆ ಮಾಡಿರುತ್ತಾರೆ. ನಂತರ ದಿ:22.04.2021 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಊಟ ಮಾಡಿಕೊಂಡು ಮೂತ್ರ ವಿಸರ್ಜನೆಗಾಗಿ ಹೊರಗಡೆ ಹೋಗಿ ಬರುತಿದ್ದಾಗ ಹೊಸಹಳ್ಳಿ ಗ್ರಾಮದ ಗಂಗಮ್ಮ ದೇವಸ್ಥಾನದ ಹತ್ತಿರ ಯಾರೋ ಇಬ್ಬರು ಆಸಾಮಿಗಳು ಹಿಂದಿನಿಂದ ಬಂದು ಕೋಲಿನಿಂದ ಎಡಬುಜಕ್ಕೆ, ಬಲಬುಜಕ್ಕೆ ಬಲಕಣ್ಣಿನ ಹುಬ್ಬಿಗೆ ಹಾಗೂ ತಲೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದ್ದರಿಂದ ಪಿರ್ಯಾದಿದಾರರು ಕೆಳಗೆ ಬಿದ್ದು ಪ್ರಜ್ಞೆ ತಪ್ಪಿ ಹೋಗಿದ್ದು,  ಗ್ರಾಮಸ್ಥರು ಪ್ರಜ್ಞೆ ತಪ್ಪಿ ಹೋಗಿದ್ದ ಪಿರ್ಯಾದಿದಾರರನ್ನು 108 ಆಂಬುಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಶ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಪಿರ್ಯಾದಿದಾರರಿಗೂ ಹಾಗು ಹೊಸಹಳ್ಳಿ ಗ್ರಾಮದ ವಾಸಿಗಳಾದ ಮಂಜುನಾಥ ಬಿನ್ ಲೇಟ್ ಅಮರನಾರಾಯಣ ಹಾಗೂ ಕೃಷ್ಣಪ್ಪ ಬಿನ್ ಮುನಿರೆಡ್ಡಿಯವರಿಗೆ ಈಗ್ಗೆ ಸುಮಾರು 6 ತಿಂಗಳಿಂದ ಹಿಂದೆ ನಡೆದಿದ್ದ ಗಲಾಟೆ ವಿಚಾರದಲ್ಲಿ ಹಳೆಯ ದ್ವೇಶದಿಂದ ಮಂಜುನಾಥ ಮತ್ತು ಕೃಷ್ಣಪ್ಪನವರು ಸೇರಿ ಪಿರ್ಯಾದಿದಾರರಿಗೆ ಹೊಡೆದಿರುತ್ತಾರೆಂದು ಅನುಮಾನವಿರುವುದಾಗಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಪಿರ್ಯಾದಿದಾರರಾದ ಆಶ್ವತ್ಥಪ್ಪನವರು ನೀಡಿದ ಹೇಳಿಕೆಯ ಮೇರೆಗೆ ಪ್ರ.ವ.ವರದಿ.

 

7. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ. 78/2021 ಕಲಂ. 279, 337 ಐಪಿಸಿ :-

     ದಿ:23.04.2021 ರಂದು ಸಾಯಂಕಾಲ 19 ಗಂಟೆಗೆ ಪಿರ್ಯಾದಿದಾರರಾದ ಮುನಿರಾಜು ಬಿನ್ ವೆಂಕಟರವಣಪ್ಪರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂಧರೆ ದಿ:22.04.2021 ರಂದು  ರಾತ್ರಿ ಸುಮಾರು 8-00 ಗಂಟೆ ವೇಳೆಯಲ್ಲಿ ನಾನು ಮತ್ತು ನಮ್ಮ ಮಾವನಾದ ನಾಗರಾಜ ಬಿನ್ ಪಾಪನ್ನ ಎಂಬುವರು ನಮ್ಮ ಗ್ರಾಮದ ಶ್ರೀನಿವಾಸ ಎಂಬುವರ ಅಂಗಡಿ ಬಳಿ ಇದ್ದೆವು. ನಮ್ಮ ಮಾವ ನಾಗರಾಜ್ ರವರು ಶ್ರೀನಿವಾಸ್ ರವರ ಅಂಗಡಿ ಕಡೆಯಿಂದ ನಮ್ಮ ಗ್ರಾಮದ ಕಡೆಗೆ ನಡೆದುಕೊಂಡು ಹೋಗಿ ಎನ್ ಹೆಚ್.7 ರಸ್ತೆಯನ್ನು ದಾಟುತ್ತಿದ್ದಾಗ ಬೆಂಗಳೂರಿನ ಕಡೆಯಿಂದ ಕೆ.ಎ.01. ಹೆಚ್.ಟಿ.6265 ನೊಂದಣಿ ಸಂಖ್ಯೆಯ ಯಮಹ ಆರ್ ಐ ಎಸ್ ದ್ವಿಚಕ್ರ ವಾಹನದ ಸವಾರ ಅತಿ ವೇಗವಾಗಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ನಾಗರಾಜ್ ರವರಿಗೆ ಡಿಕ್ಕಿ ಹೊಡೆಸಿ ರಸ್ತೆ ಅಪಘಾತವನ್ನುಂಟು ಮಾಡಿದ ಪರಿಣಾಮ ನಾಗರಾಜ್ ರವರು ಸ್ಥಳದಲ್ಲಿಯೇ ಬಿದ್ದು ಹೋಗಿದ್ದು ಅಲ್ಲಿಯೇ ಇದ್ದ ನಾನು ಕೂಡಲೇ ಓಡಿ ಹೋಗಿ ನೋಡಲಾಗಿ ನಮ್ಮ ಮಾವ ನಾಗರಾಜ್ ರವರಿಗೆ ಬಲಕಾಲು ಮೊಣಕಾಲಿನ ಕೆಳಗೆ ಮೂಳೆ ಮುರಿದಿದ್ದು, ತಲೆಯ ಹಿಂಬಾಗದಲ್ಲಿ ಪೆಟ್ಟಾಗಿ ಮುಂಬಾಗದ ಮುಖಕ್ಕೆ ರಕ್ತ ಗಾಯವಾಗಿರುತ್ತೆ, ತಕ್ಷಣ ನಾನು ನಮ್ಮ ಮಾವ ನಾಗರಾಜರವರನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೋಡಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟು, ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು, ಈ ಅಪಘಾತವನ್ನುಂಟು ಮಾಡಿರುವ ಕೆ.ಎ.01. ಹೆಚ್.ಟಿ. 6265 ನೊಂದಣಿ ಸಂಖ್ಯೆಯ ಯಮಹ ದ್ವಿಚಕ್ರ ವಾಹನದ ಸವಾರನು ದ್ವಿಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಹೊರಟು ಹೋಗಿರುತ್ತಾನೆ. ನಮ್ಮ ಮಾವ ನಾಗರಾಜರವರಿಗೆ ರಸ್ತೆ ಅಪಘಾತವನ್ನುಂಟು ಮಾಡಿರುವ ಕೆ.ಎ.01.ಹೆಚ್.ಟಿ.6265 ಯಮಹ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಈ ಮೂಲಕ ಕೋರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

8. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ. 79/2021 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:23/04/2021 ರಂದು  ಸಾಯಂಕಾಲ 7-15 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ  ಗುಡಿಬಂಡೆ ಪೊಲೀಸ್ ಠಾಣೆಯ ಎ.ಎಸ್.ಐ ಇಂತಿಯಾಜ್  ಆದ ತಾನು ಈ ದಿನ ದಿನಾಂಕ:23/04/2021 ರಂದು ಸಂಜೆ 5.00 ಗಂಟೆಯ ಸಮಯದಲ್ಲಿ ಗುಡಿಬಂಡೆ ಟೌನ್ ನಲ್ಲಿ ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ ಗುಡಿಬಂಡೆ ಟೌನ್  ಕೆ.ಎಸ್.ಆರ್.ಟಿ.ಸಿ ಬಸ್ಸ್ ನಿಲ್ದಾಣದ ಬಳಿ ಯಾರೋ ಒಬ್ಬ ಅಸಾಮಿ ಮದ್ಯದ ಪಾಕೇಟ್ಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ತುಂಬಿಕೊಂಡು ತಲೆಯ ಮೇಲೆ ಇಟ್ಟುಕೊಂಡು  ಸಂಪಂಗಿ ಸರ್ಕಲ್ ನಲ್ಲಿ ಬರುತ್ತಿರುವುದಾಗಿ ಬಾತ್ಮಿದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ  ತಾನು ಠಾಣಾ ಸಿಬ್ಬಂದಿಯಾದ ಹೆಚ್,ಸಿ,-73 ಹನುಮಂತರಾಯಪ್ಪ , ಹೆಚ್,ಸಿ,-102 ಆನಂದ ರವರೊಂದಿಗೆ ಜೀಪ್ ಚಾಲಕ ಎ,ಹೆಚ್,ಸಿ-43 ವೆಂಕಟಾಚಲ ರವರನ್ನು ಕರೆದುಕೊಂಡು ಗುಡಿಬಂಡೆ ಟೌನ್ ನಲ್ಲಿ ಪಂಚಾಯ್ತಿದಾರರನ್ನು ಬರ ಮಾಡಿಕೊಂಡು ಸಂಪಂಗಿ ಸರ್ಕಲ್  ಕಾಯುತ್ತಿದ್ದಾಗ 5-15ಗಂಟೆಯಲ್ಲಿ  ಒಬ್ಬ  ಅಸಾಮಿಯು ತಲೆಯ ಮೇಲೆ ಚೀಲವನ್ನು ಇಟ್ಟುಕೊಂಡು  ಅನುಮಾನಾಸ್ಪದವಾಗಿ ಬಂದಿದ್ದರಿಂದ ಸದರಿಯವರನ್ನು  ತಡೆದು ನಿಲ್ಲಿಸಿ  ಸದರಿ ಅಸಾಮಿಯ ಬಳಿ ಇದ್ದ ಒಂದು ಬಿಳಿ ಚೀಲವನ್ನು ಪರಿಶೀಲನೆ ಮಾಡಲಾಗಿ  3 ರೆಟ್ಟಿನ ಬಾಕ್ಸ್ ಗಳಲ್ಲಿ ಹೈವಾಡ್ಸ್  ಚೀರ್ಸ್ ವೀಸ್ಕಿ ಕಂಪನಿಯ 90 ಎಂ.ಎಲ್. ಸಾಮಥ್ರ್ಯದ  ಮದ್ಯವುಳ್ಳ  288 ಟೆಟ್ರಾ ಪಾಕೇಟ್ಗಳು ಇದ್ದು ಇದರ ಒಟ್ಟು ಮದ್ಯ 25 ಲೀಟರ್ 920 ಎಂ.ಎಲ್. ಆಗಿದ್ದು ಒಂದು ಟೆಟ್ರಾ ಪಾಕೇಟ್ ನ ಬೆಲೆ 35.13 ರೂಗಳಿದ್ದು ಇದರ ಒಟ್ಟು ಮೌಲ್ಯವು 10,117.44 ರೂಗಳಾಗಿರುತ್ತೆ. ಸದರಿ ಆಸಾಮಿ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮಹಮದ್ ರಫೀಕ್ ಬಿನ್ ಷೇಕ್ ಪ್ಯಾರು 50 ವರ್ಷ ಮುಸ್ಲಿಂ ಜನಾಂಗ  ಆಟೋ ಚಾಲಕ  6ನೇ ವಾರ್ಡ್ ಸಂತೆ ಮೈದಾನ  ಗುಡಿಬಂಡೆ ಟೌನ್ ಮೊ ನಂ:7676415875 ಎಂದು ತಿಳಿಸಿದ್ದು, ನಂತರ ಇಷ್ಟು ಪ್ರಮಾಣದ ಮದ್ಯವನ್ನು ಸಾಗಾಣಿಕೆ ಮಾಡಲು ಇರುವ ಪರವಾನಿಗೆಯನ್ನು ಹಾಜರ್ ಪಡಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲ ಎಂದು ತಿಳಿಸಿ ಇದನ್ನು ತನ್ನ  ಮನೆಯಲ್ಲಿಟ್ಟುಕೊಂಡು  ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗಿ ತಿಳಿಸಿದನು. ಸದರಿ ಅಸಾಮಿಯು ಯಾವುದೇ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ ಮೇಲ್ಕಂಡ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದರಿಂದ ನಂತರ ಪಂಚರ ಸಮಕ್ಷಮ ಸ್ಥಳದಲ್ಲಿ ಮೇಲ್ಕಂಡ ಐಟಂ ನಲ್ಲಿ ಮೂರು ಬಾಕ್ಸ್ ಗಳಿಂದ ಒಂದೊಂದು ಪಾಕೇಟನ್ನು ಪ್ರತ್ಯೇಕವಾಗಿ ಬಿಳಿ ಬಟ್ಟೆ ಚೀಲದಲ್ಲಿ ಇಟ್ಟು ಅರಗು ಮಾಡಿ 'ಪಿ' ಎಂಬ ಅಕ್ಷರದಿಂದ ಸೀಲ್ ಮಾಡಿ ಎಫ್.ಎಸ್.ಎಲ್. ಗೆ ಕಳುಹಿಸಿಕೊಡಲು ಶೇಖರಿಸಿರುತ್ತೆ. ಸದರಿ ಮಾಲನ್ನು  ಸಂಜೆ 5-30 ಗಂಟೆಯಿಂದ ಸಂಜೆ 6-30 ಗಂಟೆಯವರೆಗೂ ಪಂಚರ ಸಮಕ್ಷಮ ಜರುಗಿಸಿದ ಪಂಚನಾಮೆ ಕಾಲದಲ್ಲಿ ಅಮಾನತ್ತು ಪಡಿಸಿಕೊಂಡು ಸದರಿ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 6-45 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 7-15 ಗಂಟೆಗೆ ಸದರಿ ಆರೋಪಿತನನ್ನು ಮತ್ತು ಮಾಲನ್ನು ವಶಕ್ಕೆ ನೀಡುತ್ತಿದ್ದು,  ಸದರಿ ಆರೋಪಿತನ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು  ಕೋರಿ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿರುತ್ತೆ.

ಇತ್ತೀಚಿನ ನವೀಕರಣ​ : 24-04-2021 07:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080