ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.78/2021 ಕಲಂ. 143,144,147,323,324,327,420,504,506,34 ಐ.ಪಿ.ಸಿ :-

          ದಿನಾಂಕ:23-03-2021 ರಂದು ಸಂಜೆ 5-30 ಗಂಟೆಗೆ ನ್ಯಾಯಾಲಯದ ಪಿಸಿ-235 ರವರು ಹಾಜರುಪಡಿಸಿದ ಪಿಸಿಆರ್-18/2021 ಅನ್ನು ಠಾಣೆಯಲ್ಲಿ ಸ್ವೀಕರಿಸಿದ್ದರ ಸಾರಾಂಶವೇನೆಂದರೆ

The accussed are the owners of the property bearinge survey number 320 measuring 5-00 acres, situated at paragodu village, Kasaba hobli, Bagepalli Tq bounded on Easy by Jayaramappa,s  Land west By PWD Road, North by A.K. Nallaramapp,s property and south By Road, havinge been acquired the said land through a regeistred sale deed dated 28-04-1972. The said property is sold in the name of the complainant for valuable consideration of Rs, 1,45,00,000/- on 29-01-2015 by the accused and by receivinge a sum of Rs 50,00,000/- in advance and executed an agreenment ro sell in the name of the complanant on the same day jointly, and further agreed to execute the regular sale deed in his name by receivinge the balance consideration amount and produce the necessary original documents pertaining to the above said property before the Sub-Registar at Bagepalli. The complainant personally demanded to the accused several times to prepare the revinue sketch for registration. Therby the accused and the complainant along with the surverypr have visited the schedule property inte First Week of August 2017, in prder to prepare the sketch but he was shocked and surprise to know that the land an extent of 3 acres 8 guntas out of the total extent have been encroached upon by the forest department and the accused were disclosed the real matter at thet time, that the suit in Os No.39/2012 for declaration and possision and permanent in his name thereby they were cheated tha complainant. Therefore the accused have promised the complainant that they will execute the regular sale deed as soon as disposal of the said suit. Ultimately the said suit in Os No39/2012 was dedreed in favour of the accused on 05-01-2019 and immediately the accused made demand fot further advance sale consideratin of Rs,1,00,000/- for change of khatha from the deceased K Venkata Reddy in to the name of his legal heirs. The complainant agreed to pay further advance sale consideration of Rs 1,00,000/- out of balance sale consideration of Rs 95,00,000/- and accordingluy, the complainant had paid Rs 1,00,000/- through a cheque bearing No 363973 drawn in Indian Bank Ashoka Piller Jayanagar Branch, Bangalure, in the name of the accused by receiving  the said cheque. The accused further have executed a receijpt of by way of continuration of agreement of sale, dated 28-01-2019 in favour of complainant. Inspite of repeated request and demand made by the complainant. The accused were are not ready/willinge to perform their part of contract as the agreement to sell dated 2—9-01-2015. Therefore, the complainant have filed a suit in OS No 368/2020 on the file of senior civil judge at bagepalli for specific performance of the contract, against the accused and the suit in pendinge disposal. During the pencency of the suit, the accused persons colluded with each other without the notice and knowledge of the complainant Since, the above said property is the dry land. They were tryinge to change the nature of the property, by way of cleaninge the land for the purpose of construction of the factory on it. The complainant got be wildered to here it and immediately on 12-03-2021 at 8-00 AM visit the said land along with his neighbors. The accused are engage, the tractor, tipper bulldozers and jcb vehicles for cut and removi the standinge trees to remove the rocks stones to ripen the and to transgrees the land. Further they dumped the building materials in the said land for stariting the factory construction. The complainant questioned the illegal activities of the accused. But they totally neglected the words of the complainant and they are all assimbled with an dishonest intention, unlawfully assaulted the complainant and they are all assimbled with an dishonest inrention, unlawfully assaulted the complainant with deadly weapons, defamed with the filthy language and threatende, thereby the complainant hurt mentally and physically, The accused were instigare the drivers of the vehicles to run away upon complainant to killa him thereby harass him physically. Therefore the complainant ran away from the from the incident to save his lige and survived him from the hands of the accused persons. Immediately the complainant have aproached the Bagepalli Police  and lodge a complaint against the accused on 12-08-2021. The accused are the land mafia, and sand mafia leaders in the locality, having hue men and money power. They are the local rowdys having political power and they ingluenced persons. Ultimately the concerned police due to political pressure have not taken any actionagainst the accused. Instead of filling FIR against the accused persons, they simply issued NCR 73/2021 dated 15/03/2021 to the complainant. Henbce this complainant. The accused are therefore liable to punish Under Section 143, 144, 147, 323, 324, 327, 420, 504, 506 r/w 34 Ipc  Wherefore the complainant prays that this Hon,ble court may be pleased to register the complaint and reger the matter to the police sub-inspctor Bagepalli Police Station to enquire into the matter in accordance with law against the accused No 1 to 10 and punish them for the offences punishable U/s 143, 144, 147, 323, 324, 327, 420 504, 506 r/w 34 Ipc and grant any such other reliefis may deem fit to in the circumstances of this case in the inrerest of justice. ರಂತೆ ನೀಡಿದ ದೂರಾಗಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.123/2021 ಕಲಂ. 279,304(A) ಐ.ಪಿ.ಸಿ :-

          ದಿನಾಂಕ: 24/03/2021 ರಂದು ಬೆಳಿಗ್ಗೆ 11.30 ಗಂಟೆಗೆ ಜಿ.ವಿ. ರವಿ ಬಿನ್ ವೆಂಕಟರವಣಪ್ಪ, 34 ವರ್ಷ, ವಕ್ಕಲಿಗರು, ಜಿರಾಯ್ತಿ, ಗುನ್ನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ; 24/03/2021 ರಂದು ಬೆಳಿಗ್ಗೆ 09.15 ಗಂಟೆ ಸಮಯದಲ್ಲಿ ತಮ್ಮ ದೊಡ್ಡಪ್ಪ ಮಗ ವೆಂಕಟರೆಡ್ಡಿ ರವರು ಅವರ ಹೆಂಡತಿ ಅಕ್ಕನ ಮಗಳ ಮದುವೆಯ ಲಗ್ನ ಪತ್ರಿಕೆಗಳನ್ನು ಹಂಚಲು ಕೆಎ-17 ಇಜೆ-4889 ಹೀರೋ ಸ್ಲೆಂಡರ್ ಪ್ರೋ ದ್ವಿಚಕ್ರ ವಾಹನದಲ್ಲಿ ಹೋದರು. ಇವರು ಹೋದ 20 ನಿಮಿಷಕ್ಕೆ ತಮ್ಮೂರಿನ ತಮ್ಮ ಮಾವ ರಮೇಶ ರವರು ಪೋನ್ ಮಾಡಿ ನಿಮ್ಮ ದೊಡ್ಡಪ್ಪನ ಮಗ ವೆಂಕಟರೆಡ್ಡಿರವರಿಗೆ ಕೈವಾರ ಕ್ರಾಸ್ ನ ಪೆಟ್ರೋಲ್ ಬಂಕ್ ಬಳಿ ಅವರ ದ್ವಿಚಕ್ರ ವಾಹನಕ್ಕೆ ಕಾರ್ ಅಪಘಾತ ಪಡಿಸಿದ ಪರಿಣಾಮ ವೆಂಕಟರೆಡ್ಡಿ ರವರು ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವ ವಿಷಯವನ್ನು ಕೈವಾರ ಗೇಟ್ ನಿಂದ ಶೀಗಹಳ್ಳಿ ನಾಗರಾಜ ಎಂಬುವರು ಪೋನ್ ಮಾಡಿ ಹೇಳಿದರು, ಬೇಗ ಹೋಗೋಣ ಬಾ ಎಂತ ತನ್ನನ್ನು ಕೈವಾರ ಕ್ರಾಸ್ ಗೆ ಕರೆದುಕೊಂಡು ಬಂದರು. ಕೈವಾರ ಕ್ರಾಸ್ ನಲ್ಲಿರುವ ಡಾಬಾ ನಾಗರಾಜ ರವರ ಹೆಚ್.ಪಿ ಪೆಟ್ರೋಲ್ ಬಂಕ್ ಮುಂಭಾಗ ತನ್ನ ದೊಡ್ಡಪ್ಪನ ಮಗ ವೆಂಕಟರೆಡ್ಡಿರವರಿಗೆ ತಲೆಗೆ ಎರಡೂ ಕಾಲುಗಳಿಗೆ ಮತ್ತು ಕೈಗಳಿಗೆ ರಕ್ತಗಾಯಗಳಾಗಿ ಕಿವಿಯಲ್ಲಿ ರಕ್ತ ಬಂದಿದ್ದು, ಮೃತಪಟ್ಟಿದ್ದನು, ಅಲ್ಲಿದ್ದ ಶೀಗಹಳ್ಳಿ ನಾಗರಾಜ ಮತ್ತು ಕೊಂಗನಹಳ್ಳಿ ಪ್ರಸನ್ನ ಎಂಬುವರನ್ನು ಅಪಘಾತದ ಬಗ್ಗೆ ವಿಚಾರ ಮಾಡಲಾಗಿ ತನ್ನ ದೊಡ್ಡಪ್ಪನ ಮಗ ವೆಂಕಟರೆಡ್ಡಿ ರವರು ಈ ದಿನ ದಿನಾಂಕ: 24/03/2021 ರಂದು ಬೆಳಿಗ್ಗೆ 09.33 ಗಂಟೆಯಲ್ಲಿ ಕೈವಾರ ಕ್ರಾಸ್ ಬಳಿ ಇದ್ದ ಹೆಚ್.ಪಿ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಕೈವಾರ ಕ್ರಾಸ್ ಕಡೆಯಿಂದ ಹೋಗಿ ಪೆಟ್ರೋಲ್ ಬಂಕ್ ಕಡೆಗೆ ರಸ್ತೆ ದಾಟುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಐ-20 ಕಾರ್ ಸಂಖ್ಯೆ ಕೆಎ-09 ಎಂಬಿ-0249 ರ ಕಾರಿನ ಚಾಲಕ ಕಾರ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ತನ್ನ ದೊಡ್ಡಪ್ಪನಮಗ ವೆಂಕಟರೆಡ್ಡಿ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ನಂತರ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ದ್ವಿಚಕ್ರ ವಾಹನ ಮತ್ತು ತಮ್ಮ ದೊಡ್ಡಪ್ಪ ಮಗ ವೆಂಕಟರೆಡ್ಡಿ ರಸ್ತೆಯಲ್ಲಿ ಬಿದ್ದು ಮೇಲ್ಕಂಡಂತೆ ಗಾಯಗಳಾಗಿ ಮೃತಪಟ್ಟಿರುವುದು ಗೊತ್ತಾಯಿತು. ನಂತರ ತಾವೆಲ್ಲರೂ ಹೆಣವನ್ನು ಯಾವುದೋ ಟಾಟಾ ಎ.ಸಿಇ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದೆವು. ಆದ್ದರಿಂದ ತನ್ನ ದೊಡ್ಡಪ್ಪ ಮಗ ವೆಂಕಟರೆಡ್ಡಿರವರ ಅಪಘಾತದ ಸಾವಿಗೆ ಕಾರಣರಾದ ಕೆಎ-09 ಎಂಬಿ-0249 ಕಾರ್ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆ ಕಾರರಣವಾಗಿದ್ದು, ಕಾರ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.39/2021 ಕಲಂ. 504 ಐ.ಪಿ.ಸಿ :-

          ದಿನಾಂಕ 23/03/2021 ರಂದು ಸಂಜೆ 18-50 ಗಂಟೆಗೆ ಘನ ನ್ಯಾಯಾಲಯ ಕರ್ತವ್ಯದ ಪಿಸಿ 367 ರವರು  ಠಾಣಾ ಎನ್ ಸಿ.ಆರ್ ನಂ 41/2021 ರ ಅಸಂಜ್ಞಾ ಅಪರಾಧವನ್ನು ಘನ ನ್ಯಾಯಾಲಯದ ಅದೇಶದಂತೆ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ:23/03/2021 ರಂದು  ಅನಿಲ್ ಕುಮಾರ್ ಬಿನ್ ನಾರಾಯಣಸ್ವಾಮಿ ಪೌರಕಾರ್ಮಿಕರ ಬಡಾವಣೆ, ಚಿಂತಾಮಣಿ ನಗರ ರವರು ಸಲ್ಲಿಸಿಕೊಂಡಿರುವ ದೂರಿನ ಸಾರಾಂಶವೇನೆಂದರೆ ದಿನಾಂಕ:19/03/2021 ರಂದು ಮಧ್ಯಾಹ್ನ 2.28 ಕ್ಕೆ ದೂರವಾಣಿ ಸಂಖ್ಯೆ 9066777782 ನನಗೆ ಕರೆ ಮಾಡಿ ವಿನಾ ಕಾರಣ ಮಾಳಪಲ್ಲಿ ಸ.ನಂ.63, 65 ರ ವಿಚಾರ ತೆಗೆದು ನೀನು ನನ್ನ ವಿರುದ್ದ ಹಲವಾರು ದೂರುಗಳನ್ನು ನೀಡುತ್ತಿರುವೆ, ನೀನು ಯಾರು ನನ್ನ ಬಗ್ಗೆ ಮಾತನಾಡುವುದಕ್ಕೆ, ನೀನು ಬಾರೋ ಯಾರನ್ನು ಕರೆದುಕೊಂಡು ಬರುತ್ತೀಯೋ, ನೀನು ಬಂದು ನನ್ನ ಚಾಟಾ ಕಿತ್ತುಕೋ, ನೀನು ಇಳಿಯುವುದಾದರೆ ಇಳಿದು ಬಿಡು ನೋಡಿಕೊಳ್ಳೋಣ ನೀನೋ-ನಾನೋ ನೋಡಿಯೇ ಬಿಡೋಣ, ನಿಮ್ಮ ತಂದೆಗೆ ನೀನು ಹುಟ್ಟಿದ್ದರೆ ನೋಡಿಕೊಳ್ಳೋಣ  ಬಾ ಎಂದು ನನ್ನನ್ನು ಏಕಾಏಕಿ ಜಾತಿ ನಿಂದನೆ ಮಾಡಿದಾಗ ಹಾಗೇಯೇ ಮಾತನಾಡುತ್ತಾ ‘ ನೀನು ರೆಕಾರ್ಡ್ ಮಾಡಿಕೋ, ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ, ನಿನ್ನ ಬಳಿ ಎಷ್ಟು ಜನ ಇದ್ದಾರೋ ಕರೆದುಕೊಂಡು ಬಾ, ಮೋರ್ ಪಕ್ಕದಲ್ಲಿರುವ ನನ್ನ ಕಛೇರಿಯಲ್ಲಿಯೇ ಇದ್ದೇನೆ. ಊಟ ಮಾಡದೇ ನಿನಗೋಸ್ಕರ ಕಾಯುತ್ತಿದ್ದೇನೆ, ಎಷ್ಟು ಜನ ಕರೆದುಕೊಂಡು ಬರುತ್ತೀಯೋ ಬಾ ನೋಡಿಯೇ ಬಿಡೋಣ’ ಎಂದು ಪ್ರಾಣ ಬೆದರಿಕೆ ಹಾಕಿ ‘ನೀನು ಬರದೇ ಇದ್ದಲ್ಲಿ ನಿನ್ನ ಬಂದು ಮುಗಿಸಿ ಬಿಡುತ್ತೇನೆ.  ಇದಕ್ಕೂ ಮುಂಚೆ ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿರುವುದರಿಂದ ಇವರ ವಿರುದ್ದ ಪೊಲೀಸ್ ಇಲಾಖೆಗೆ ಹಲವಾರು ದೂರುಗಳನ್ನು ನೀಡಿರುತ್ತೇನೆ. ಹಾಗಾಗಿ ಕಿಂಗ್ ಪಿನ್ ಕುಮಾರ್ ಬಿನ್ ಮುನಿನಾರಾಯಣಪ್ಪ ರವರು ಹಾಗೂ ಸಂಗಡಿಗರಿಂದ ನನಗೆ ಜೀವ ಭಯವಿರುವುದರಿಂದ ನನಗೆ ಸೂಕ್ತ ಬಂದೋಬಸ್ತ್ ಒದಗಿಸಿ ಅವರುಗಳ ವಿರುದ್ದ ಕಾನೂನು ರೀತ್ಯಾ ಶಿಸ್ತು ಕ್ರಮ ಕೈಗೊಳ್ಳಲು ತಮ್ಮಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆಂದು ದೂರಿನೊಂದಿಗೆ ಸಿ.ಡಿ ಮತ್ತು ಪೆನ್ ಡ್ರೈವ್ ದಾಖಲೆಯೊಂದಿಗೆ ನೀಡಿದ ದೂರಿನ ಮೇರೆಗೆ ಇದು ಆಸಂಜ್ಞೇಯ ಅಫರಾಧವಾಗಿರುವುದರಿಂದ ಎನ್.ಸಿ.ಆರ್ ನಂ: 41/2021 ರಂತೆ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಕಲಂ: 504 ಐಪಿಸಿ ರೀತ್ಯಾ ಪ್ರ. ವ. ವರದಿಯನ್ನು ದಾಖಲಿಸಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.40/2021 ಕಲಂ. 504 ಐ.ಪಿ.ಸಿ :-

          ದಿನಾಂಕ:23/03/2021 ರಂದು ಘನ ನ್ಯಾಯಾಲಯದ ಪಿಸಿ ಚೇತನ್ ನಿಂಗಾರೆಡ್ಡಿ ಪಿಸಿ-367 ರವರು ಘನ ನ್ಯಾಯಾಲಯದಿಂದ ಎನ್.ಸಿಆರ್ ನಂ: 42/2021 ಪ್ರತಿಯನ್ನು ಆಧರಿಸಿ ಪ್ರ.ವ ವರದಿಯನ್ನು ದಾಖಲಿಸಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಹಾಜರುಪಡಿಸಿದ ದೂರಿನ ಸಾರಾಂಶವೆನೆಂದರೆದಿನಾಂಕ:23/03/2021 ರಂದು ಕುಮಾರ್ ಬಿನ್ ಮುನಿನಾರಾಯಣಪ್ಪ ಅಶ್ವಿನಿ ಬಡಾವಣೆ, ಚಿಂತಾಮಣಿ ನಗರ ರವರು ಸಲ್ಲಿಸಿಕೊಂಡಿರುವ ದೂರಿನ ಸಾರಾಂಶವೇನೆಂದರೆ, ಚಿಂತಾಮಣಿ ನಗರ ಕೋಲಾರ ರಸ್ತೆ ಪೌರಕಾರ್ಮಿಕರ ಬಡಾವಣೆಯ ಬಳಿ ವಾಸವಾಗಿರುವ ಕೆ.ಎನ್.ಅನಿಲ್ ಕುಮಾರ್ ಬಿನ್ ನಾರಾಯಣಸ್ವಾಮಿ ಸುಮಾರು 28ವರ್ಷ ವಯಸ್ಸುಳ್ಳ ರವರು ನಮ್ಮ ಕುಟುಂಬದವರ ಮೇಲೆ ಹೀನಾಯವಾಗಿ ಮೊಬೈಲ್ ಮುಖಾಂತರ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಭಿತ್ತಿ ಪತ್ರ (ಪೋಸ್ಟರ್ಸ್ ) ಗಳನ್ನು ಹಾಕಿ ನಾವು ಸಮಾಜದಲ್ಲಿ ಗೌರವವಾಗಿ ಜೀವನ ನಡೆಸುತ್ತಿದ್ದು, ದಿನನಿತ್ಯ ನನಗೆ ಹಾಗೂ ನನ್ನ ಕುಟುಂಬದವರ ವಿರುದ್ದ ಅವಹೇಳನಾಕಾರಿ  ಮಾತುಗಳನ್ನು ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ತನ್ನ ಮೊಬೈಲ್ ಮುಖಾಂತರ ಪೋಸ್ಟರ್ಸ್ ಗಳನ್ನು ದಿನ ನಿತ್ಯ ಹಾಕುತ್ತಿರುತ್ತಾರೆ. ನಾನು ಈ ವಿಚಾರವನ್ನು ಪ್ರಶ್ನಿಸಿ ಕೇಳಿದ್ದಕ್ಕೆ ದಿನಾಂಕ:19/03/2021 ರಂದು ಸುಮಾರು ಮಧ್ಯಾಹ್ನ 02-30 ಗಂಟೆಯ ಸಮಯದಲ್ಲಿ ‘ನನ್ನಇಷ್ಟ , ನಾನು ಏನು ಬೇಕಿದ್ದರೆ ಅವುಗಳನ್ನು ಹಾಕುತ್ತೇನೆ, ನೀನು ಯಾರು ಇವುಗಳನ್ನು ಪ್ರಶ್ನಿಸುವುದಕ್ಕೆ, ಈ ರೀತಿ ಪ್ರಶ್ನಿಸಿದರೆ ನಾನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ನಿನ್ನ ಮತ್ತು ನಿನ್ನ ಕುಟುಂಬದವರ ವಿರುದ್ದ ಜಾತಿ ನಿಂದನೆ ಕೇಸು ಬನಾವಟ್ಟು ಮಾಡಿ ನಿಮ್ಮನ್ನು ಚಿಂತಾಮಣಿ ಬಿಟ್ಟು ಓಡಿಸುವ ರೀತಿ ಮಾಡುತ್ತೇನೆ, ಹಾಗೂ ನನಗೆ ರಾಜಕೀಯ ಬೆಂಬಲವಿದೆ, ನೀವು ನನ್ನ ವಿರುದ್ದ ಏನೇ ವಿಚಾರಗಳು ಪ್ರಸ್ತಾಪ ಮಾಡಿದರೂ ನೀವು ಸುಮ್ಮನೆ ಮನೆಯಲ್ಲಿ ಕೂರಬೇಕು, ಇಲ್ಲದಿದ್ದರೆ ಇನ್ನೂ ನಿನ್ನ ಮತ್ತು ನಿಮ್ಮ ಕುಟುಂಬದವರ ವಿರುದ್ದ ಹೆಚ್ಚಿನ ಕೇಸುಗಳನ್ನು ಬನಾವಟ್ಟು ಮಾಡುತ್ತೇನೆಂದು ಧಮಕಿ ಹಾಕಿರುತ್ತಾನೆ. ಸದರಿ ಕೆ.ಎಸ್.ಅನಿಲ್ ಕುಮಾರ್ ರವರು ನಮ್ಮ ಕುಟುಂಬದವರ ರಾಜಕೀಯ ವಿರೋದಿಯಾಗಿದ್ದು, ಹಾಗೂ ನ್ನ ತಮ್ಮ ಹಾಲಿ ನಗರಸಭಾ ಸದಸ್ಯರಾಗಿರುವುದು ನಮ್ಮ ವಿರುದ್ದ ಸುಳ್ಳು ಆರೋಪಗಳು ಸಲ್ಲಿಸುವುದು ಅಲ್ಲದೇ ಬೇರೆಯವರ ಕಡೆಯಿಂದ ನನ್ನಿಂದ ರೋಲ್ ಕಾಲ್ ಕೊಡಿಸಿಕೊಂಡು ಬರುವುದಕ್ಕಾಗಿ ತಿಳಿಸಿರುತ್ತಾರೆ. ಸದರಿ ಅನಿಲ್ ಕುಮಾರ್ ರವರು ಹಾಲಿ ಶಾಸಕರ ಅನುಯಾಯಿ ಆಗಿದ್ದು ನನಗೂ ಮತ್ತು ನನ್ನ ಕುಟುಂಬಕ್ಕೆ ಯಾವ ಸಂದರ್ಭದಲ್ಲಿ ಏನು ಮಾಡುತ್ತಾರೋ ಎಂದು ಪ್ರಾಣ ಬೆದರಿಕೆ ಇರುತ್ತದೆ.    ಆದ್ದರಿಂದ ತಾವಂದಿರು ಮೇಲ್ಕಂಡವರ ವಿರುದ್ದ ತಾನು ಹಾಕಿರುವ ಎಲ್ಲಾ ಅವಹೇಳನಕಾರಿ ಪೋಸ್ಟರ್ಸ್ ಗಳನ್ನು ಪರಿಶೀಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನ ಮೇರೆಗೆ ಇದು ಆಸಂಜ್ಞೇಯ ಅಫರಾಧವಾಗಿರುವುದರಿಂದ ಎನ್.ಸಿ.ಆರ್ ನಂ: 42/2021 ರಂತೆ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಪ್ರ. ವ. ವರದಿಯನ್ನು ದಾಖಲಿಸಿರುತ್ತೆ.

 

5. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.41/2021 ಕಲಂ. 323,324,504,506,34 ಐ.ಪಿ.ಸಿ :-

          ದಿನಾಂಕ:24.03.2021 ರಂದು ಚಿಂತಾಮಣಿ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ ಅಸ್ಮಾ ಸುಲ್ತಾನ ಕೋಂ ಸೈಯದ್ ಜಮೀರ್ ಪಾಷ, 42 ವರ್ಷ, ಹೆಲ್ಪ್ ಕೇರ್ ಪೌಂಡೇಷನ್ ಉಪಾಧ್ಯಕ್ಷರು, ಚೌಡರೆಡ್ಡಿ ಪಾಳ್ಯ, 04 ನೇ ಕ್ರಾಸ್, ಚಿಂತಾಮಣಿ ನಗರ ರವರು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ನಾನು ಹೇಲ್ಪ್ ಕೇರ್ ಪೌಂಡೇಷನ್ ನಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡಿತ್ತಿರುತ್ತೆನೆ ನಮ್ಮ ಪೌಂಡೇಷನ್ ಪ್ರೆಸಿಡೆಂಟ ರವರಾದ ನಗೀನಾ ಎ ರವರನ್ನು ಬಿಟ್ಟು ಬೇರೆ ಇನ್ನೋಬ್ಬರನ್ನು ಮದುವೆ ಮಾಡಿಕೊಂಡಿರುತ್ತಾರೆ ಈ ದಿನ ನಗೀನಾ ರವರ ಅತ್ತೆ ತಾಜುನ್ನಿಸ್ಸಾ ರವರ 20 ದಿನದ ವೈಕುಂಟಾ ಸಮಾರಾಧನೆ ಇದ್ದು ಈ ದಿನ ದಿನಾಂಕ: 23/03/2021 ರಂದು ರಾತ್ರಿ 7.00 ಗಂಟೆಯ ಸಮಯಕ್ಕೆ ನಗೀನಾ ರವರ ಸಂಸಾರದ ವಿಚಾರವನ್ನು ಮಾತನಾಡಲು ನಾನು ನಗೀನಾ, ನಗೀನಾ ರವರ ತಂದೆ ಅನ್ವರ್, ಅನ್ವರ್ ರವರ ಮೊಮ್ಮಗ ಮೆಹ್ತಾಬ್, ಸಾಸೀರ ನನ್ನ ಮಗ ಸೈಯದ್ ಅಪ್ರದ್ ರವರು ಇಡ್ಲಿಪಾಳ್ಯದ ಲೇಟ್ ಬಾಬು ರವರ ಮನೆಯ ಬಳಿ ಹೋಗಿರುತ್ತೆವೆ ಆಗ ಆಸೀಪ್ ರವರ ಕಡೆಯವರಾದ ನಾಸೀರ(ಪ್ರೆಸ್ ರೀಪೋರ್ಟ್ ರ್) ನಜೀರ್ ಹಾಗೂ ಅವರ ಕಡೆಯವರು ಕೆಲವರು ಅಲ್ಲಿ ಇದ್ದರು ನಾನು ನಗೀನಾ ರವರ ವಿಚಾರ ಪ್ರಸ್ತಾಪ ಮಾಡುತ್ತಿದ್ದಂತೆ ಪ್ರೇಸ್ ರೀಪೋರ್ಟ್ ರ್ ನಾಸೀರ್ ರವರು ನನ್ನ ಕುರಿತು ಸಾಕು ಮುಚ್ಚಮ್ಮ ಬಾಯಿ ನೀನು ರಾಜಿ ಸಂದಾನ ಮಾಡುವುದಕ್ಕೆ ಬಂದಿದ್ದಿಯಾ ಯಾರೆ ನೀನು ಎಂದು ಕೆಟ್ಟ ಮಾತುಗಳಿಂದ ಬೈದು ಅಲ್ಲೆ ಇದ್ದ ಕೋಲಿನಿಂದ ನನ್ನ ತಲೆಯ ಹಣೆಗೆ ಹಾಕಿ ಮೂಗೇಟನ್ನುಂಟು ಮಾಡಿರುತ್ತಾರೆ ನಜೀರ್ ರವರು ಅನ್ವರ್ ಮೆಹ್ತಾಬ್ ರವರನ್ನು ಕೆಳಗೆ ತಳ್ಳಿ ಕಾಲುಗಳಿಂದ ಒದ್ದಿರುತ್ತಾರೆ ನಂತರ ಆಸೀಪ್ ರವರು ನಾಸೀರ ಸೈಯದ್ ಅಪ್ರೀದ್ ರವರಿಗೆ ಕೆಟ್ಟ ಮಾತುಗಳಿಂದ ಬೈದು ಮೇಲ್ಕಂಡ ಮೂವರು ಕೈಗಳಿಂದ ಹೊಡೆದಿರುತ್ತಾರೆ ನೀವು ಇನ್ನೋಮ್ಮೆ ರಾಜಿ ಸಂದಾನಕ್ಕೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ ಪ್ರೆಸ್ ರೊಪೋಟರ್ ನಾಸೀರ್ ರವರು ನನ್ನ ಮೇಲೆ ಗಲಾಟೆ ಮಾಡುವಾಗ ತಲ್ಲಾಟದಲ್ಲಿ ನನ್ನ ಬಂಗಾರದ ಚೈನ್ ಕೆಳಗೆ ಬಿದ್ದು ಹೋಗಿರುತ್ತೆ ನಂತರ ಅಷ್ಟರಲ್ಲಿ ನಗೀನಾ ಅಡ್ಡ ಬಂದಾಗ ಮೇಲ್ಕಂಡ ಸಾಸೀರ್ ಆಸೀಪ್, ನಜೀರ್ ರವರು ಏನೇ ಬೇವರ್ಸಿ ಮುಂಡೆ ಇವರನ್ನೆಲ್ಲಾ ಸೆಟ್ಲಮೇಂಟ್ ಗೆ ಕರೆದುಕೊಂಡು ಬಂದಿದ್ದಿಯಾ ಎಂದು ಕೈಗಳಿಂದ ಆಕೆಗೆ ಮೈಮೇಲೆ ಹೊಡೆದಿರುತ್ತಾರೆ ಅಷ್ಟರಲ್ಲಿ ನಮ್ಮ ಪರಿಚಯಸ್ಥರಾದ  ರುಮಾನ್, ಜಬೀ ರವರು ಜಗಳ ಬೀಡಿಸಿರುತ್ತಾರೆ ನಂತರ ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುತ್ತೆವೆ ಆದ್ದರಿಂದ ಮುಂದಿನ ಕ್ರಮ ಜರುಗಿಸಬೇಕಾಗಿ ಕೋರಿರುತ್ತಾರೆ.

 

6. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.42/2021 ಕಲಂ. 143,147,148,323,324,504,506,149 ಐ.ಪಿ.ಸಿ :-

          ದಿನಾಂಕ:24.03.2021 ರಂದು ಚಿಂತಾಮಣಿ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ ಶ್ರೀಮತಿ ಸಮೀನಾ ಸುಲ್ತಾನ ಕೋಂ ಖಾದರ್ ಬಾಷ@ ಬಾಬು, 40 ವರ್ಷ, ಇಡ್ಲಿಪಾಳ್ಯ, ಚಿಂತಾಮಣಿನಗರ ರವರು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ನಮ್ಮ ಅತ್ತೆ ತಾಜುನ್ನಿಸ್ಸಾ ರವರು ಈಗ್ಗೆ 20 ದಿನಗಳ ಹಿಂದೆ ದೈವಾಧೀನರಾಗಿದ್ದು ಈ ದಿನಅವರ 20 ದಿನಗಳ ಕಾರ್ಯವಿರುತ್ತೆ ಈ ದಿನ ದಿನಾಂಕ: 23/03/2021 ರಂದು ರಾತ್ರಿ 7.00 ಸಮಯದಲ್ಲಿ ನಮ್ಮ ಸಂಭಂದಿಕರೆಲ್ಲಾ ನಮ್ಮ ಮನೆಯ ಬಳಿ ಇದ್ದಾಗ ನಗೀನಾ ರವರ ಕಡೆಯವರಾದ ಅವರ ತಂದೆ ಅನ್ವರ್ ಅನ್ವರ್ ರವರ ಮೊಮ್ಮಕಳಾದ ಮೇಹ್ತಾಬ್, ನಾಸೀರ, ಆಸ್ಮಾ ಸುಲ್ತಾನ ಆಕೆಯ ಮಗ ಆಪ್ರೀದ್ ನಗೀನಾ ರವರ ತಾಯಿ ರಜೀಯಾ ದೊಡ್ಡಮ್ಮ ನೂರ್ ಜಾನ್ ಹಾಗೂ ಅಯ್ಯಾಬ್, ಷೋಯಬ್ ರವರುಗಳು ನಮ್ಮ ಮನೆಯ ಬಳಿ ಬಂದರು ನಂತರ ಆಸೀಪ್ ರವರನ್ನು ಆಸ್ಮಾ ಸುಲ್ತಾನ್ ರವರು ಏ ಯಾಕೋ ನಿನ್ನ ಹೆಂಡತಿಯನ್ನು ಬಿಟ್ಟಿದ್ದಿಯಾ ಎಂದು ಕೇಳಿದರು ಆಗ ನಾನು ಅಸ್ಮಾ ರವರೆ ಯಾಕೇ ಹೀಗೆ ಮಾತನಾಡುತ್ತಿರಾ ಎಂದು ಹೇಳುತ್ತಿದ್ದಂತೆ ಮೇಲ್ಕಂಡವರೆಲ್ಲರೂ ಬೇವರ್ಸಿ, ಲೋಪರ್ ಎಂದು ಕೆಟ್ಟ ಮಾತುಗಳಿಂದ ನನ್ನನ್ನು ನಿಂದಿಸಿದರು ಆಗ ನಮ್ಮ ಚಿಕ್ಕಮ್ಮನಾದ ಮೆಹರುನ್ನಿಸ್ಸಾ ಹಾಗೂ ನಮ್ಮ ಸಂಭಂಧಿಕರಾದ ಸಮ್ರಿನ್ , ನಾಯಿದ್ ರವರು ಅಡ್ಡ ಬಂದಿದ್ದಕ್ಕೆ ಆಸ್ಮಾ ಸುಲ್ತಾನ, ಮೆಹರುನ್ನಿಸ್ಸಾ ರವರಿಗೆ ಕೈಗಳಿಂದ ಮೈಮೇಲೆ ಹೊಡೆದು ಮೂಗೇಟುಂಟು ಮಾಡಿರುತ್ತಾರೆ ನಾಸೀರ ರವರು ಆಸೀಫ್ ರವರಿಗೆ ರಾಡಿ ನಿಂದ ಬೆನ್ನಿಗೆ ಹೊಡೆದು ಊತಗಾಯವನ್ನುಂಟು ಮಾಡಿರುತ್ತಾರೆ ಆಯ್ಯಾಬ್ ರವರು ನಾಸೀರ ಬಾಷ ರವರಿಗೆ  ಎಡಗೈ ಉಂಗುರ ಬೆರಳಿಗೆ ಕೋಲಿನಿಂದ ಹೋಡೆದು ಊತಗಾಯವನ್ನುಂಟು ಮಾಡಿರುತ್ತಾರೆ ಸೈಯದ್ ಆಪ್ರೀದ್ ರವರು ಮತ್ತು ಅನ್ವರ್ ರವರು ಆಸೀಪ್ ಗೆ ಎದೆಯ ಮೇಲೆ ಪರಚಿರುತ್ತಾರೆ ಮೆಹ್ತಾಬ್ ರವರು ನನ್ನ ಚಿಕ್ಕಪ್ಪ ನನ್ನಾ ಸಾಬೀ ರವರಿಗೆ ತಲೆಗೆ ಹಾಗೂ ಬಲ ಭುಜಕ್ಕೆ ಮುಷ್ಟಿಯಿಂದ ಗುದ್ದಿರುತ್ತಾರೆ ಷೋಯಬ್ ರವರು ನನ್ನ ಭಾವ ಚಾಂದ್ ಭಾಷ ರವರಿಗೆ ಸೊಂಟದ ಮೇಲೆ ಕಾಲಿನಿಂದ ಒದ್ದು ಮೂಗೇಟು ಉಂಟು ಮಾಡಿರುತ್ತಾರೆ ತಲ್ಲಾಟದಲ್ಲಿ ನನ್ನ ಕತ್ತಿನಲ್ಲಿದ್ದ ಬಂಗಾರದ ಚೈನ್ ಎಲ್ಲಿಯೋ ಬಿದ್ದು ಹೋಗಿರುತ್ತೆ ಮೇಲ್ಕಂಡ ವರೆಲ್ಲರೂ ಇನ್ನೂ ಮುಂದೆ ನಮ್ಮ ತಂಟೆಗೆ ನಗೀನಾ ರವರ ತಂಟೆಗೆ ಬಂದರೆ ನಿಮ್ಮೆಲ್ಲರನ್ನು ಜೀವ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಆಷ್ಟರಲ್ಲಿ ನಮ್ಮಸಂಭಂದಿಕರಾದ  ಚಾಂದ್ ಪಾಷ ಬಿನ್ ಫಕೃಸಾಬಿ, ಅಕ್ಬರ್ ಬಿನ್ ಹೆಚ್ ಎಸ್ ಅಬ್ರಾರ್ ರಷೀದ್ ರವರುಗಳು ಜಗಳ ಬಿಡಿಸಿರುತ್ತಾರೆ  ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುತ್ತೆವೆ ಆದ್ದರಿಂದ ಮುಂದಿನ ಕ್ರಮ ಜರುಗಿಸಬೇಕಾಗಿ ಕೋರಿರುತ್ತಾರೆ.

 

7. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.38/2021 ಕಲಂ. 15(A),32(3) ಕೆ.ಇ ಆಕ್ಟ್ :-

          ದಿನಾಂಕ:24/03/2021 ರಂದು ಠಾಣಾ ಸಿಬ್ಬಂಧಿ ಹೆಚ್.ಸಿ-32 ಮಂಜುನಾಥ ರವರು ಮಾಲು ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ, ದಿನಾಂಕ 24/03/2021 ರಂದು  ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ತನಗೆ ಈ ದಿನ ಹಗಲು ಗ್ರಾಮಗಳ ಗಸ್ತಿನ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ತಾನು  ಠಾಣಾ ಸರಹದ್ದಿನ ದಿಬ್ಬೂರಹಳ್ಳಿ, ಚಿಕ್ಕದಿಬ್ಬೂರಹಳ್ಳಿ, ಯಲಗಲಹಳ್ಳಿ, ಕೊಂಡಪ್ಪಗಾರಹಳ್ಳಿ ಕಡೆ ಗಸ್ತು ಮಾಡಿಕೊಂಡು ಮಧ್ಯಾಹ್ನ 1.30 ಗಂಟೆಗೆ ಇರಗಪ್ಪನಹಳ್ಳಿ ಗ್ರಾಮಕ್ಕೆ ಬೇಟಿ ಮಾಡಿದಾಗ ಬಾತ್ಮಿದಾರರಿಂದ ಇರಗಪ್ಪನಹಳ್ಳಿ ಗ್ರಾಮದ ವಾಸಿ ಫರೀಧ ಕೊಂ ಲೇಟ್ ಚಾಂದು @ ಚಾಂದ್ ಪಾಷ         ರವರು ತನ್ನ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ನೀಡಿದ್ದು, ತಾನು ಪಂಚರನ್ನು ಬರಮಾಡಿಕೊಂಡು ಫರೀಧ ಕೊಂ ಲೇಟ್ ಚಾಂದು ರವರ ಅಂಗಡಿಯ ಬಳಿಗೆ ಮಧ್ಯಾಹ್ನ 1.40 ಗಂಟೆಗೆ ಹೋಗಿ ನೋಡುವಷ್ಟರಲ್ಲಿ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಮಧ್ಯಪಾನ ಮಾಡುತ್ತಿದ್ದವರು ಹಾಗೂ ಅಂಗಡಿಯಲ್ಲಿದ್ದ ಆಸಾಮಿಯು ಸಮವಸ್ತ್ರದಲ್ಲಿದ್ದ ನನ್ನನ್ನು ಕಂಡು ಓಡಿ ಹೋಗಿದ್ದು, ನಂತರ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಖಾಲಿ ಪ್ಯಾಕೇಟ್ಗಳು, ನೀರಿನ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ಶ್ರೀಮತಿ ಫರೀಧ ಕೊಂ ಲೇಟ್ ಚಾಂದು, 45 ವರ್ಷ, ಮುಸ್ಲಿಂ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಇರಗಪ್ಪನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿದುಬಂದಿದ್ದು, ನಂತರ ಪಂಚರ ಸಮಕ್ಷಮ ಮಧ್ಯಾಹ್ನ 1.50 ಗಂಟೆಯಿಂದ  2.50  ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 1.350 ಎಂ.ಎಲ್  ಸಾಮರ್ಥ್ಯದ  526.95  ರೂಗಳ ಬೆಲೆ ಬಾಳುವ ಹೈವಾರ್ಡ್ಸ್ ವಿಸ್ಕಿ 90 ಎಂ.ಎಲ್ ನ 15 ಟೆಟ್ರಾ ಪ್ಯಾಕೇಟ್ಗಳು, ಹೈವಾರ್ಡ್ಸ್ ವಿಸ್ಕಿ 90 ಎಂ.ಎಲ್ ನ 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲನ್ನು ಅಮಾನತ್ತುಪಡಿಸಿಕೊಂಡಿದ್ದು, ಈ ಬಗ್ಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.69/2021 ಕಲಂ. 380,457 ಐ.ಪಿ.ಸಿ:-

          ದಿನಾಂಕ 23/02/2021 ರಂದು ಪಿರ್ಯಾಧಿದಾರರಾದ ಶ್ರೀ ವೆಂಕಟಮೋಹನ್ ಬಿನ್ ಕೃಷ್ಣಮೂರ್ತಿ , 43 ವರ್ಷ,ಹಿಂದೂಸಾದರು ಜನಾಂಗ, ಹುದುಗೂರು ಗ್ರಾಮ,ಗೌರಿಬಿದನೂರು ತಾಲ್ಲೂಕು, ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ-ಸರ್ಕಾರಿ ಪ್ರೌಢಶಾಲೆ ಹುದುಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕುರಲ್ಲಿ ದಿನಾಂಕ 23/02/2021 ರಮದು ನಾವು ಶಾಲಾ ಕರ್ತವ್ಯ ಮುಗಿಸಿ ಎಲ್ಲಾ ಕೊಠಡಿಗಳಿಗೂ ಬೀಗ ಹಾಕಿ ಹೋಗಿರುತ್ತೇವೆ ಪುನಃ ಬೆಳಿಗ್ಗೆ ದಿನಾಂಕ 24/02/2021 ರಂದು ಸಮಯ 9-30ಕ್ಕೆ ಸಿಬ್ಬಂದಿ ಹಾಜರಾದಾಗ ಕ್ರಿಡಾ ಕೊಠಡಿ ಕಂಪ್ಯೊಟರ್ ಹಾಗೂ ಲೈಬ್ರರಿ ಕೊಠಡಿ ಹಾಗೂ ಹಳೇ ಕಂಪ್ಯೊಟರ್ ಕೊಠಡಿಗಳ ಬೀಗ ಹೊಡೆದು ಹಾಗೂ ಕಿಟಕಿ ಸರಗಳನ್ನು ಕತ್ತರಿಸಿ ಒಳ ಪ್ರವೇಶಿಸಿ ಹಳೆಯ ಬ್ಯಾಟರಿ 12 ಹಾಗೂ ಚಾಲನೆಯಲ್ಲಿ ಇದ್ದ ಹೊಸ ಬ್ಯಾಟರಿ 01 ಆಂಪ್ಲಿಪೈಯರ್ 01 ಹೊಸ ಹೆಚ್ಚವರಿ ಹಾರ್ಡ್ ಡಿಸ್ಕ್ 01 , ಕತ್ತರಿಗಳು 04, ನೀಲಿ ಬಣ್ಣದ ಹೊಸ ಚೇರ್ ಗಳು (ಪ್ಲಾಸ್ಟಿಕ್ )06, ಮೈಕ್ 01, ಕಳುವಾಗಿರುತ್ತವೆ ಹಾಗೂ ಸಿ.ಸಿ.ಟಿ.ವಿ  ಕ್ಯಾಮರ ಮತ್ತು ಕಂಪ್ಯೊಟರ್ ಮೌಸ್ ಗಳನ್ನು ಹೊಡೆದು ಹಾಕಿರುತ್ತಾರೆ.ಆದ್ದರಿಂದ ಸದರಿ ಕಳುವಾದ ವಸ್ತುಗಳನ್ನು ಹುಡುಕಿಕೊಡಬೇಕೆಂದು ಕೋರಿ ದೂರು.

 

9. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.32/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 24/03/2021 ರಂದು ಬೆಳಿಗ್ಗೆ 11-45 ಗಂಟೆ ಸಮಯದಲ್ಲಿ ಪಿಎಸ್ಐ ರವರು ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ: ದಿನಾಂಕ:24/03/2021 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ತಾನು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ವೆಂಕಟರೆಡ್ಡಿಪಾಳ್ಯ ಗ್ರಾಮದ ನಾರಾಯಣಪ್ಪ ಬಿನ್ ನಂಜುಂಡಪ್ಪ ರವರ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಗಸ್ತಿನ ಸಿಬ್ಬಂದಿಯಾದ ಮಪಿಸಿ-496 ಶ್ರೀಮತಿ ಶಿಲ್ಪಾ ರವರಿಂದ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಚಿಲ್ಲರೆ ಅಂಗಡಿ ಬಳಿ ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿಪಿಸಿ-484 ವಿ.ಎಸ್.ಶಿವಣ್ಣ, ಮಪಿಸಿ-496 ಶ್ರೀಮತಿ ಶಿಲ್ಪಾ ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ವೆಂಕಟರೆಡ್ಡಿಪಾಳ್ಯ ಗ್ರಾಮದ ಬಳಿ ಹೋಗಿ ಅಲ್ಲಿನವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರು ರೊಂದಿಗೆ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ನಡೆದುಕೊಂಡು ಗ್ರಾಮದ ನಾರಾಯಣಪ್ಪ ಬಿನ್ ನಂಜುಂಡಪ್ಪ ರವರ ಚಿಲ್ಲರೆ ಅಂಗಡಿ ಬಳಿ ಹೋಗಿ ನೋಡಲಾಗಿ ಅಂಗಡಿಯಲ್ಲಿರುವ ಆಸಾಮಿ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟ  ಚಿಲ್ಲರೆ ಅಂಗಡಿ ಮಾಲೀಕ ಸಹ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿಹೋಗಿದ್ದು, ಆತನನ್ನು ಹಿಂಬಾಲಿಸಿದರೂ ಸಿಕ್ಕಿರುವುದಿಲ್ಲ. ಆತನ   ಹೆಸರು ಮತ್ತು ವಿಳಾಸ ಕೇಳಗಾಗಿ  ನಾರಾಯಣಪ್ಪ ಬಿನ್ ನಂಜುಂಡಪ್ಪ, 55 ವರ್ಷ, ಭೋವಿ ಜನಾಂಗ, ಟೈಲರ್ ಕೆಲಸ, ವಾಸ ವೆಂಕಟರೆಡ್ಡಿಪಾಳ್ಯ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿದುಬಂದಿರುತ್ತದೆ. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKEY  90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  ಮದ್ಯದ 6 ಟೆಟ್ರಾ ಪ್ಯಾಕೆಟ್ ಗಳು ಇದ್ದು ಪರಿಶೀಲಿಸಲಾಗಿ 90 ಎಂ.ಎಲ್ ನ HAYWARDS CHEERS WHISKEY ಮಧ್ಯದ 6 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆೆ 35.13/- ರೂ  ಆಗಿದ್ದು, 6 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 210/-ರೂ ಆಗಿರುತ್ತೆ. ಮದ್ಯ ಒಟ್ಟು 540 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಇರುವುದರಿಂದ ಚಿಲ್ಲರೆ ಅಂಗಡಿ ಮಾಲೀಕರಾದ ನಾರಾಯಣಪ್ಪ ಓಡಿಹೋಗಿರುತ್ತಾನೆ.  ಮೇಲ್ಕಂಡ ಎಲ್ಲಾ ಮಾಲುಗಳನ್ನು ಬೆಳಿಗ್ಗೆ 10-30 ರಿಂದ 11-15 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ನಿಮ್ಮ ಮುಂದೆ ಈ ನನ್ನ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ನಾರಾಯಣಪ್ಪ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ವರದಿ ದೂರು.

 

10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.79/2021 ಕಲಂ. 279,337,429 ಐ.ಪಿ.ಸಿ & 11,8,9,4 KARNTAKA PREVENTION OF COW SLANGHTER & CATTLE PREVENTION ACT-1964, 11 PREVENTION OF CRUELTY TO ANIMALS ACT, 1960, 192,177 INDIAN MOTOR VEHICLES ACT, 1988 & 125(E) The Central Motor Vehicle Rules 2015:-

          ದಿನಾಂಕ 24/03/2021 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಸಿಪಿಸಿ-90 ರಾಜಕುಮಾರ್ ರವರು ಅಪಘಾತದಲ್ಲಿ ಭಾಗಿಯಾದ ವಾಹನಗಳು, ಎಮ್ಮೆಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೇನೆಂದರೆ, ತನಗೆ ಠಾಣೆಯ 3 ನೇ ಗ್ರಾಮ ಗಸ್ತಿನ ಸಿಬ್ಬಂಧಿಯಾಗಿ ನೇಮಕ ಮಾಡಿದ್ದು, ಈ ದಿನ ದಿನಾಂಕ 24/03/2021 ರಂದು ಬೆಳಿಗ್ಗೆ ಭಕ್ತರಹಳ್ಳಿ ಪ್ರತೀಶ್ ರವರು ತಾಲ್ಲೂಕು ದಂಡಾಧಿಕಾರಿಗಳ ಕಚೇರಿಗೆ ಮಳಮಾಚನಹಳ್ಳಿ ಗ್ರಾಮದ ಗೇಟ್ ನಲ್ಲಿ ಎಮ್ಮೆಗಳನ್ನು ತುಂಬಿದ ಅಶೋಕ್ ಲೇ ಲ್ಯಾಂಡ್ ದೋಸ್ತ್ ಮಿನಿ ಟೆಂಪೋ ಹಾಗು ದ್ವಿ ಚಕ್ರ ವಾಹನದ ನಡುವೆ ಅಪಘಾತವಾಗಿದ್ದು, ದ್ವಿ ಚಕ್ರ ವಾಹನದಲ್ಲಿದ್ದ ಇಬ್ಬರು ಸವಾರರಿಗೆ ಗಾಯಗಳಾಗಿದ್ದು, ಅವರನ್ನು ಆಂಬುಲನ್ಸ್ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಸಾಗಿಸಿರುವುದಾಗಿ ಮಾಹಿತಿಯನ್ನು ನೀಡಿದ್ದು, ತಾಲ್ಲೂಕು ದಂಡಾಧಿಕಾರಿಗಳ ಕಚೇರಿಯಿಂದ ಸದರಿ ಮಾಹಿತಿಯು ಠಾಣೆಗೆ ಬಂದಿದ್ದು, ಸದರಿ ಗ್ರಾಮ ಗಸ್ತಿನ ಸಿಬ್ಬಂಧಿಯಾದ ತಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಸ್ಥಳದಲ್ಲಿ ಅಪಘಾತದಲ್ಲಿ ಭಾಗಿಯಾದ ವಾಹನಗಳಿದ್ದು, ದ್ವಿ ಚಕ್ರ ವಾಹನವನ್ನು ಪರಿಶೀಲಿಸಲಾಗಿ ಕೆಎ-53-ವೈ-5718 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವಾಗಿದ್ದು, ಅಪಘಾತವನ್ನುಂಟು ಮಾಡಿದ ವಾಹನವು ಎಪಿ-39-ಟಿಎಸ್-3151 ನೊಂದಣಿ ಸಂಖ್ಯೆಯ ಅಶೋಕ್ ಲೇ ಲ್ಯಾಂಡ್ ದೋಸ್ತ್ ಮಿನಿ ಟೆಂಪೋವಾಗಿದ್ದು, ಸದರಿ ಟೆಂಪೋ ವಾಹನದ ಹಿಂಭಾಗದಲ್ಲಿ ಕೆಳಭಾಗದಲ್ಲಿ ದೊಡ್ಡ ಗಾತ್ರದ 3, ಮದ್ಯಮ ಗಾತ್ರದ 3 ಎಮ್ಮೆಗಳಿದ್ದು, ಅವುಗಳ ಮೇಲ್ಭಾಗ ಅರ್ಧಕ್ಕೆ ಹಲಗೆಗಳನ್ನು ಜೋಡಿಸಿ ಅದರ ಮೇಲೆ 8 ಮದ್ಯದ ಗಾತ್ರದ ಎಮ್ಮೆಗಳನ್ನು ತುಂಬಿರುವುದು ಕಂಡು ಬಂದಿದ್ದು, ಸದರಿ ಟೆಂಪೋ ವಾಹನದ ಚಾಲಕ, ಮಾಲೀಕ ಮತ್ತು ಇತರರು ಪ್ರಾಣಿಗಳನ್ನು ಸಾಗಾಣಿಕೆ ಮಾಡಲು ಪಶು ಸಂಗೋಪನೆ ಇಲಾಖೆಯಿಂದ ಯಾವುದೇ ಲೈಸೆನ್ಸ್ ಪಡೆಯದೇ, ಸದರಿ ಪ್ರಾಣಿಗಳನ್ನು ಅವುಗಳ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದಾಗಿ ಕಂಡು ಬಂದಿದ್ದು, ನಂತರ ಅಲ್ಲಿದ್ದ ಸಾರ್ವಜನಿಕರನ್ನು ವಿಚಾರ ಮಾಡಲಾಗಿ ದ್ವಿ ಚಕ್ರ ವಾಹನದ ಸವಾರರು ಇದೇ ದಿನ ಬೆಳಿಗ್ಗೆ ಸುಮಾರು 8-30 ಗಂಟೆ ಸಮಯದಲ್ಲಿ ಭಕ್ತರಹಳ್ಳಿ ಗ್ರಾಮದ ಕಡೆಯಿಂದ ತಮ್ಮ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಮಳಮಾಚನಹಳ್ಳಿ ಗ್ರಾಮದ ಕಡೆಗೆ ಹೋಗಲು ಶಿಡ್ಲಘಟ್ಟ-ಜಂಗಮಕೋಟೆ ಮುಖ್ಯ ರಸ್ತೆಯನ್ನು ದಾಟುತ್ತಿದ್ದಾಗ ಶಿಡ್ಲಘಟ್ಟ ಕಡೆಯಿಂದ ಬಂದ ಎಮ್ಮೆಗಳನ್ನು ತುಂಬಿದ ಮೇಲ್ಕಂಡ ಎಪಿ-39-ಟಿಎಸ್-3151 ನೊಂದಣಿ ಸಂಖ್ಯೆಯ ಅಶೋಕ್ ಲೇ ಲ್ಯಾಂಡ್ ದೋಸ್ತ್ ಮಿನಿ ಟೆಂಪೋವನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಪಡೆಸಿ ತನ್ನ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುವುದಾಗಿ ತಿಳಿದು ಬಂದಿರುತ್ತದೆ. ನಂತರ ತಾನು ಗಾಯಾಳುಗಳ ಹೆಸರು ವಿಳಾಸ ತಿಳಿಯಲಾಗಿ ಇವರುಗಳು ಹೊರರಾಜ್ಯದವರಾಗಿದ್ದು, ಇವರುಗಳ ಹೆಸರು ರಣಧೀರ್ ಮತ್ತು ಮನೋಜ್ ಕುಮಾರ್ ರವರಾಗಿದ್ದು, ಇವರು ಶಿಡ್ಲಘಟ್ಟ ತಾಲ್ಲೂಕು ಹಲಸೂರು ದಿನ್ನೆ ಗ್ರಾಮದ ಬಳಿ ಇರುವ ಮಿರಾಕಲ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ರಣಧೀರ್ ರವರಿಗೆ ಸದರಿ ಅಪಘಾತದಲ್ಲಿ ಎಡಮೊಣಕಾಲಿಗೆ, ಸೊಂಟದ ಬಳಿ, ಬಲ ಕಣ್ಣಿನ ಉಬ್ಬಿನ ಬಳಿ, ಮನೋಜ್ ಕುಮಾರ್ ರವರ ಬಲ ಕಾಲಿಗೆ ರಕ್ತಗಾಯಗಳಾಗಿರುವುದಾಗಿ ತಿಳಿದು ಬಂದಿರುತ್ತದೆ. ಸದರಿ ವಾಹನಗಳನ್ನು ಮತ್ತು ಅದರಲ್ಲಿದ್ದ ಎಮ್ಮೆಗಳನ್ನು ಬೇರೆ ಚಾಲಕರ ಸಹಾಯದಿಂದ ಸಾಗಿಸಿಕೊಂಡು ಬಂದು ಠಾಣೆಯ ಆವರಣಕ್ಕೆ ಸ್ಥಳಾಂತರಿಸಿದ್ದು, ಸದರಿ ವಾಹನಗಳನ್ನು ಮತ್ತು ಎಮ್ಮೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಮಿನಿ ಟೆಂಪೋ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಾಲನೆ ಮಾಡಿ ಅಪಘಾತವನ್ನುಂಟು ಮಾಡಿರುವ ಚಾಲಕನ ವಿರುದ್ದ ಹಾಗು ಸದರಿ ಪ್ರಾಣಿಗಳನ್ನು ಅವುಗಳ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ಆಂದ್ರಪ್ರದೇಶದ ಯಾವುದೋ ಕಡೆಯಿಂದ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ಟೆಂಪೋ ಚಾಲಕ, ಅದರ ಮಾಲೀಕ ಹಾಗು ಸಂಬಂಧ ಇಟ್ಟ ಇತರರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 24-03-2021 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080