ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.50/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ: 24/02/2021 ರಂದು ಬೆಳಿಗ್ಗೆ 8-45 ಗಂಟೆಗೆ ಪಿಸಿ-237 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಬಾಬು ಎಸ್ ಎನ್  ಬಿನ್  ನರಸಿಂಹಪ್ಪ 24 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಸಕ್ಕನಪ್ಪಗಾರಿಪಲ್ಲಿ ಗ್ರಾಮ, ಪಾತಪಾಳ್ಯ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆ ಪಡೆದು ತಂದು ಠಾಣೆಯಲ್ಲಿ ಹಾಜರು ಪಡಿಸಿದ ಹೇಳಿಕೆಯ ಸಾರಾಂಶವೇನೆಂದರೆ, ನಮ್ಮ ತಂದೆ- ತಾಯಿಗೆ ಇಬ್ಬರು ಮಕ್ಕಳಿದ್ದು ಮೊದಲನೇ ನಾನು, ಎರಡನೇ ಸುನಿತಾ ರವರು ಆಗಿರುತ್ತಾರೆ. ನಾನು ಪ್ರತಿ ದಿನವೂ ನಮ್ಮ ಗ್ರಾಮದಿಂದ ಬಾಗೇಪಲ್ಲಿ ಪಟ್ಟಣಕ್ಕೆ ಕೂಲಿ ಕೆಲಸಕ್ಕೆ ಬರುತ್ತಿರುತ್ತೇನೆ. ಹೀಗಿರುವಾಗ ದಿನಾಂಕ; 23/02/2021 ರಂದು 3-00 ಗಂಟೆ ಸಮಯದಲ್ಲಿ ನಾನು , ನನ್ನ ಸ್ನೇಹಿತನಾದ ನರಸಿಂಹಪ್ಪರವರ ಜೊತೆ ಬಾಗೇಪಲ್ಲಿ ಪುರದ ಡಿ ವಿಜಿ ರಸ್ತೆಯ ಸೈಪೋ ಮೋಟರ್ಸ್ ಪಕ್ಕದ ಚಿಲ್ಲರೆ ಅಂಗಡಿಯಲ್ಲಿ ಕುಡಿಯುವ ನೀರನ್ನು ತೆಗೆದುಕೊಂಡು ಅಂಗಡಿಯ ಮುಂದೆ ನಿಂತುಕೊಂಡಿದ್ದಾಗ ಬಾಗೇಪಲ್ಲಿ ಪುರದ ಕಡೆಯಿಂದ ಟಿ,ಬಿ ಕ್ರಾಸ್ ನ ಕಡೆಗೆ ಹೋಗುವ ರಸ್ತೆಯಲ್ಲಿ ಎಪಿ-09-ಸಿಎಂ-6055 ಕಪ್ಪು ಬಣ್ಣದ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಂಗಡಿಯ ಬಳಿ ನಿಂತಿದ್ದ ನನಗೆ ಮತ್ತು ನನ್ನ ಸ್ನೇಹಿತ ನರಸಿಂಹಪ್ಪ ರವರಿಗೆ ಡಿಕ್ಕಿ ಹೊಡೆಸಿದ್ದು ,ಅದರ ಪರಿಣಾಮ ನಾವಿಬ್ಬರೂ ಸಹ ಅಲ್ಲಿಯೇ ಖಾಲಿ ಜಾಗದಲ್ಲಿ ಕೆಳಗೆ ಬಿದ್ದು ಹೋಗಿದ್ದು. ನನಗೆ ಎಡಕೈನ ಮಣಿಕಟ್ಟಿನ ಬಳಿ ತರಚಿದ ಗಾಯ, ಬೆನ್ನಿನ ಹಿಂಭಾಗದಲ್ಲಿ ತರಚಿದ ಗಾಯ, ಎಡ ಮೊಣಕಾಲಿನ ಬಳಿ ತರಚಿದ ಗಾಯಗಳಾಗಿರುತ್ತೆ. ನನ್ನ ಸ್ನೇಹಿತ ನರಸಿಂಹಪ್ಪ ರವರಿಗೆ ಎಡಗೈನ ಮಣಿಕಟ್ಟಿನ ಬಳಿ ತರಚಿದ ಗಾಯವಾಗಿದ್ದು, ಸದರಿ ಕಾರಿನ ಚಾಲಕನು ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಕಾರನ್ನು ಚಾಲನೆ ಮಾಡಿಕೊಂಡು ಹೊರಟು ಹೋಗಿದ್ದು. ಅಪಘಾತದ ಪರಿಣಾಮ ಗಾಯಗಳಾಗಿದ್ದ ನಮ್ಮನ್ನು ಮಂಜುನಾಥ ಬಿನ್ ವೆಂಕಟರಾಮಪ್ಪ ರವರು ಉಪಚರಿಸಿ ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಾನು ಚಿಕಿತ್ಸೆಯನ್ನು ಪಡೆಯುತ್ತಿರುತ್ತೇನೆ. ಆದ್ದರಿಂದ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ನಿಂತಿದ್ದ ನಮಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ  ಸ್ಥಳದಲ್ಲಿ ಕಾರನ್ನು ನಿಲ್ಲಿಸದೇ ಹೊರಟು ಹೋದ ಎಪಿ-09-ಸಿಎಂ-6055 ಕಾರಿನ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

2. ಚೇಳೂರು ಪೊಲೀಸ್ ಠಾಣೆ ಮೊ.ಸಂ.11/2021 ಕಲಂ. 323,448,504,506,34 ಐ.ಪಿ.ಸಿ:-

     ದಿನಾಂಕ:24/02/2021 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರಾದ ಲಕ್ಷ್ಮಮ್ಮರವರು ಠಾಣೆಎ ಹಾಜರಾಗಿ ನೀಡಿದ ಅರ್ಜಿಯ ಸಾರಾಂಶವೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ, ದಿನಾಂಕ: 21/02/2021 ರಂದು ಭಾನುವಾರ ಸಂಜೆ 7:00 ಗಂಟೆಯಲ್ಲಿ ನಾನೊಬ್ಬಳೆ ಮನೆಯಲ್ಲಿದ್ದಾಗ ಇದೇಗ್ರಾಮದ ವಾಸಿಯಾದ (1)  ವೆಂಕಟರೆಡ್ಡಿ ಬಿನ್ ಕೋನಪ್ಪ, (2) ರಾದಮ್ಮ ಕೋಂ ವೆಂಕಟರೆಡ್ಡಿ, (3) ಕಲ್ಪನ ಕೋಂ ಶ್ರೀ ರಾಮಪ್ಪ ಎಂಬುವವರು ಹಳೆಯ ವೈಷಮ್ಯಹಳನ್ನು ಮನಸ್ಸಿನಲ್ಲಿಟ್ಟುಕೊಂಡು ಏಕಾಏಕಿ ನ,ಮ್ಮ ಮನೆಗೆ ನುಗ್ಗಿ ಗ;ಲಾಟೆ ತೆಗೆದು ಅವಾಚ್ಯ ಶಬ್ದಗಳಿಂದ ನನ್ನನ್ನು ಬೈದು  ಮೂರು ಜನ ಸೇರಿಕೊಂಡು ನನಗೆ ಕೈಗಳಿಂದ ನನ್ನನ್ನು ಹೊಡೆದು ಕಾಲುಗಳಿಂದ ಒದ್ದು ಸಾಯಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ,ನಮ್ಮ ಊರಿನ ಹಿರಿಯ ಮುಖಂಡರು ನ್ಯಾಯ ಪಂಚಾಯಿತಿ ಮಾಡುತ್ತ|ವೆ ಎಂದು ಹೇಳಿದ್ದು ಆ ನ್ಯಾಯ ಪಂಚಾಯ್ತಿಯಲ್ಲಿ ನಮಗೆ ನ್ಯಾಯ ದೊರೆತಿರುವುದಿಲ್ಲ.ಆದ್ದರಿಂದ ತಡವಾಗಿ ಠಾಣೆಗೆ ಹಾಜರಾಗಿ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊ,ಸಂ 11/2021 ಕಲಂ 323,448,504,506 R/W 34 IPC ರೀತ್ಯಾ ಪ್ರಕರಣ ದಾಖಲಿಸಿರುತ್ತೆ,

 

3. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.25/2021 ಕಲಂ. 341,323,420,504,506 ಐ.ಪಿ.ಸಿ:-

     ದಿನಾಂಕ: 23/02/2021 ರಂದು ಸಂಜೆ 18:30 ಗಂಟೆಗೆ ಪಿರ್ಯಾದಿದಾರರಾದ ಹರೀಶ್ ವಿ ಬಿನ್ ವೆಂಕಟಾಚಾರಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು  ಸುಮಾರು 20 ವರ್ಷಗಳಿಂದ ಆಡಿಟಿಂಗ್ ಕೆಲಸ ಮಾಡುತ್ತಿದ್ದು ಚಿಂತಾಮಣಿ ನಗರದ ಎನ್.ಆರ್ ಬಡಾವಣೆಯ ವಾಸಿ ಪಿ.ಆರ್ ನಾಗನಂದ ಬಿನ್ ರಾಮಮೋಹನ್ ಪಿ.ಎಸ್ ರವರು ಆಡಿಟಿಂಗ್ ಸಲಹೆಗಾಗಿ ತನ್ನ ಕಛೇರಿಗೆ  ಆಗಾಗ ಬಂದು ಪರಿಚಯವಾಗಿ ನಂತರ ಕೆಲವು ವ್ಯವಹಾರಗಳಲ್ಲಿ ನೀವು ತನ್ನ ಜೊತೆ ಹಣ ತೊಡಗಿಸಿ ಒಳ್ಳೆಯ ಆದಾಯ ಬರುವಂತೆ ಮಾಡುತ್ತೇನೆಂದು 2018 ನೇ ಜನವರಿಯಲ್ಲಿ ಬೆಂಗಳೂರಿನ ಕೆ.ಅರ್ ಮಾರುಕಟ್ಟೆಯಲ್ಲಿ 20ಘಿ25 ಅಡಿಗಳ ಅಳತೆಯುಳ್ಳ ಅಂಗಡಿಯನ್ನು ಖರೀದಿಸುವುದಾಗಿ ಹೇಳಿ ಅದರ ಪೂರ ಬಾಬತ್ತು ಹಣ 55,00,000/- ರೂಗಳಿಗೆ ಖರೀದಿ ಮಾಡಿರುವುದಾಗಿ ತಿಳಿಸಿ ಹಾಗೂ ಇಬ್ಬರು ಹೆಸರಿನಲ್ಲಿ ಜಂಟಿಯಾಗಿ ಕ್ರಯ ಪತ್ರ ಮಾಡುವುದಗಿ ತಿಳಿಸಿ ಕ್ರಯದ ಕರಾರು ಬಾಬತ್ತು 27,50,000/- ರೂಗಳನ್ನು ತನ್ನಿಂದ ಪಡೆದುಕೊಂಡು  ತಮ್ಮ ಹೆಸರುಗಳಿಗೆ ಆಸ್ತಿ ನೋಂದಣಿ ಮಾಡಿಸಿಕೊಳ್ಳುವಂತೆ ಹಲವು ತಿಂಗಳುಗಳ ಕಾಲ ನಾಗನಂದ ರವರನ್ನು ಕೇಳಿದರೂ ಸಹ ಮಾಡಿಸಿಕೊಳ್ಳದೇ ತನಗೆ ಮೋಸ ಮಾಡುವ ಉದ್ದೇಶದಿಂದ ನನಗೆ ತಿಳಿಯದಂತೆ  ನಾಗನಂದ ರವರ ಹೆಸರಿಗೆ ಖಾತೆ ಮಾಡಿಸಿಕೊಂಡು ಬಾಡಿಗೆಗೆ ಅಂಗಡಿಯನ್ನು ಕೊಟ್ಟಿರುವುದಾಗಿ ನನಗೆ ತಿಳಿದು ದಿನಾಂಕ 28/02/2019 ರಂದು ಚಿಂತಾಮಣಿಯ ಎನ್.ಆರ್ ಬಡಾವಣೆಯಲ್ಲಿರುವ ನಾಗನಂದ ರವರ ಮನೆಗೆ ಹೋಗಿ ಕೇಳಲಾಗಿ ನಾಗನಂದ ರವರು ತನಗೆ ನೀನು ಸ್ವಲ್ಪ ದಿನಗಳ ಕಾಲವಾಕಾಶ ಕೊಟ್ಟರೆ 02 ಕಂತುಗಳಲ್ಲಿ ನೀಡಬೇಕಾದ ಬಾಡಿಗೆ ಹಾಗೂ ಲಾಭಾಂಶ ಸೇರಿ ಬಂದಿರುವ ನಿನ್ನ ಭಾಗದ ಒಟ್ಟು 35 ಲಕ್ಷ ರೂ ಗಳನ್ನು ನೀಡುವುದಾಗಿ ಹೇಳಿ ಕಳುಹಿಸಿರುತ್ತಾನೆ. ಇದುವರೆಗೂ ಸಹ ತನಗೆ ನಾಗನಂದ ರವರು ಹಣವನ್ನು ನೀಡದೇ ಮೋಸ ಮಾಡಿರುತ್ತಾನೆ.  ಹೀಗಿರುವಾಗ ದಿನಾಂಕ 21/02/2021 ರಂದು ಬೆಳಿಗ್ಗೆ 7-00 ಗಂಟೆಗೆ ನಾಗನಂದರವರು ಚಿಂತಾಮಣಿ ನಗರದ ಎನ್ ಆರ್ ಬಡಾವಣೆಯಲ್ಲಿರುವ ವಿ.ವಿ ಪಾಸ್ಟ್ ಪುಡ್ ಹೊಟೇಲ್ ಮುಂಭಾಗದಲ್ಲಿ ನಿಂತಿದ್ದಾಗ ತಾನು ಹೋಗಿ ತನಗೆ ಬರಬೇಕಾದ ಹಣವನ್ನು ಕೊಡುವಂತೆ ಕೇಳಿದಾಗ ಏ ಲೋಪರ್ ನನ್ನ ಮಗನೇ ನಾನು ನಿನಗೆ ಯಾವುದೇ ಹಣವನ್ನು ಕೊಡುವುದಿಲ್ಲವೆಂದು ನಿನ್ನ ಕೈಯಲ್ಲಿ ಏನಾಗುತ್ತೋ ಮಾಡಿಕೋ ಎಂದು ಅವಾಚ್ಯ ಶಬ್ದಗಳಿಂದ ಬೈದು ನನ್ನನ್ನು ಕಾಲಿನಿಂದ ಒದ್ದು ಕೆಳಕ್ಕೆ ತಳ್ಳಿರುತ್ತಾನೆ.  ನಂತರ ನಾನು ಮನೆಗೆ ಹೋಗುತ್ತಿರುವಾಗ ತನ್ನನ್ನು ಪುನಃ ಅಡ್ಡಗಟ್ಟಿ ಕೈಯಿಂದ ಕೆನ್ನೆಗೆ ಹೊಡೆದು ನೀನು ತನ್ನನ್ನು ಹಣ ಕೇಳಲು ಬಂದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ನರಸಿಂಹಪ್ಪ ವಿನೋಭಾ ಕಾಲೋನಿ ಹಾಗೂ ಶ್ರೀಕಾಂತ್ ಟ್ಯಾಂಕ್ ಬಂಡ್ ರಸ್ತೆ ರವರು ಜಗಳ ಬಿಡಿಸಿ ಕಳುಹಿಸಿರುತ್ತಾರೆ.  ಈ ವಿಚಾರದ ಬಗ್ಗೆ ತಮ್ಮ ಹಿರಿಯರು ರಾಜಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಪಂಚಾಯ್ತಿ ಮಾಡದೇ ಇದ್ದುದ್ದರಿಂದ ಈ ದಿನ ತಡವಾಗಿ ದೂರು ನೀಡಿದ್ದು.  ಆದ್ದರಿಂದ ತನ್ನ ಬಳಿ ಪಡೆದುಕೊಂಡಿರುವ 35 ಲಕ್ಷ ರೂ ಹಣವನ್ನು ಕೊಡದೇ ಹಾಗೂ ಆಸ್ತಿಯನ್ನು ತನ್ನ ಹೆಸರಿಗೂ ಕ್ರಯ ಮಾಡಿಸದೇ ಆತನ ಹೆಸರಿಗೆ ಖಾತೆ ಮಾಡಿಸಿಕೊಂಡು ಮೋಸ ಮಾಡಿ ತನ್ನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುವ ನಾಗನಂದರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.26/2021 ಕಲಂ. 380,454,457 ಐ.ಪಿ.ಸಿ:-

     ದಿನಾಂಕ: 24.02.2021 ರಂದು ಪಿರ್ಯಾದಿದಾರರಾದ ಎನ್.ಎಸ್ ಆದಿನಾರಾಯಣಶೆ್ಟ್ಟಿ ಬಿನ್ ಲೇಟ್ ಸಂಪಂಗಿರಾಯಮಯ್ಯ ಶೆಟ್ಟಿ, 65 ವರ್ಷ, ವೈಶ್ಯರು, ವ್ಯಾಪಾರ, ವಾರ್ಡ್ ನಂ: 25, ಎನ್.ಎನ್.ಟಿ ಹಿಂಭಾಗ, ಕೆ,ಜಿ,ಎನ್ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೆನೆಂದರೆ ನಾನು ಚಿಲ್ಲರೆ ಅಂಗಡಿ ವ್ಯಾಪಾರದಿಂದ ಜೀವನ ಮಾಡಿಕೊಂಡಿರುತ್ತೇನೆ. ನಾವು ಕುಟುಂಬ ಸಮೇತ ದಿನಾಂಕ:21/02/2021 ರಂದು ಬೆಳಗ್ಗೆ 7.00 ಗಂಟೆಗೆ ನಮ್ಮ ಸಂಬಂದಿಕರ ಮದುವೆ ಹೋಗಲು ಮನೆಯನ್ನು ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದು ನಂತರ ಮದುವೆಯನ್ನು ಮುಗಿಸಿಕೊಂಡು ದಿನಾಂಕ:23/02/2021 ರಂದು ರಾತ್ರಿ ಸುಮಾರು 8.00 ಗಂಟೆ ಸಮಯದಲ್ಲಿ ನಾವು ಚಿಂತಾಮಣಿಗೆ ಬಂದು ಮನೆಯ ಬೀಗವನ್ನು ತೆಗೆಯಲು ಹೋದಾಗ ಮನೆಯ ಮುಂಭಾಗ ಬೀಗ ಹೊಡೆದ ರೀತಿಯಲ್ಲಿ ಕಂಡು ಬಂದಿದ್ದು ಮತ್ತೆ ಬಾಲಗಿನ್ನು ನೋಡಲಾಗಿ ಡೋರ್ ಲಾಕ್ ಕೆಳಗೆ ಬಿದ್ದಿದ್ದು. ನಾವುಗಳು ಒಳಗೆ ಹೋಗಿ ನೋಡಲಾಗಿ ನಮ್ಮ ರೂಂ ನ ಬೀರುವನ್ನು ತೆಗೆದು ಅದರಲ್ಲಿದ್ದ  ಬಂಗಾರದ ಮಾಂಗಲ್ಯ ಸರ 60 ಗ್ರಾಂ. 20 ಗ್ರಾಂ ಬಂಗಾರದ ಕತ್ತಿನ ಚೈನು ಮತ್ತು ಡಾಲರ್, ಬಂಗಾರದ 4 ಜೊತೆ ಕಿವಿ ಓಲೆ (20 ಗ್ರಾಂ) ಹಾಗೂ 100 ಗ್ರಾಂ ಎರಡು ಮುತ್ತಿನ ಸರಗಳನ್ನು ಕಳ್ಳತನವಾಗಿರುತ್ತೆ.   ಯಾರೋ ಕಳ್ಳರು ದಿನಾಂಕ;21/02/2021 ರಿಂದ ದಿನಾಂಕ;23/02/2021 ರ ಮದ್ಯೆ ಯಾವುದೋ ಸಮಯದಲ್ಲಿ ನಮ್ಮ ಮನೆಯ ಬೀಗವನ್ನು ಯಾವುದೋ ಆಯುಧದಿಂದ ಹೊಡೆದು ಮನೆಯೊಳಗೆ ಪ್ರವೇಶ ಮಾಡಿ ಮನೆಯ ಬೀರುವಿನಲ್ಲಿದ್ದ ಮೇಲ್ಕಂಡ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾವು ಮದುವೆಗೆ ಹೋಗುವಾಗ ನಮ್ಮ ಸಂಬಂದಿಕರನ್ನು ಮನೆಯಲ್ಲಿ ಮಲಗುವಂತೆ ಹೇಳಿರುತ್ತೇವೆ. ಅವರು ಬಂದು ನಮ್ಮ ಮನೆಯಲ್ಲಿ ಮಲಗಿರುವುದಿಲ್ಲ. ಯಾರೋ ಕಳ್ಳರು ನಮ್ಮ ಮನೆಯಲ್ಲಿ ಕಳ್ಳತನ ಮಾಡಿರುವ ಬಂಗಾರದ ಒಡವೆಗಳು ಹಳೆ ಕಾಲದ ಒಡವೆಗಳಾಗಿರುತ್ತೆ. ನಮ್ಮ ಮನೆಯಲ್ಲಿ ಕಳ್ಳರು ಕಳ್ಳತನ ಮಾಡಿರುವ 100 ಗ್ರಾಂ ಬಂಗಾರದ ಒಡವೆಗಳ ಬೆಲೆ ಸುಮಾರು 2,20,000/ ಆಗಿರುತ್ತೆ. ಹಾಗೂ ಕಳುವಾಗಿರುವ ಮುತ್ತಿನ ಸರಗಳ ಬೆಲೆಯನ್ನು ತಿಳಿಯಬೇಕಾಗಿರುತ್ತೆ. ನಮ್ಮ ಮನೆಯಲ್ಲಿ ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

5. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.25/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ: 23/02/2021 ರಂದು ಮಧ್ಯಾಹ್ನ 02:45 ಗಂಟೆಗೆ ಪಿರ್ಯಾದಿಯಾದ ಶ್ರೀಮತಿ ನಾರಾಯಾಣಮ್ಮ ಕೋಂ ಸುಬ್ರಮಣಿ 45 ವರ್ಷ ,ಭಜಂತ್ರಿ ಜನಾಂಗ ,ಗೃಹಿಣಿ ,ಬೀಚಗಾನಹಳ್ಳಿ ಕ್ರಾಸ್ ,ಗುಡಿಬಂಡೆ ತಾಲ್ಲೂಕು ,ಚಿಕ್ಕಬಳ್ಳಾಪುರ  ಜಿಲ್ಲೆ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತನಗೆ ನವೀನ್ ಕುಮಾರ್. ಎಸ್ ಎಂಬ ಸುಮಾರು 25 ವರ್ಷದ ಗಂಡು ಮಗು ಇದ್ದು. ಈತನು ಹಾಲಿ ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿಕೊಂಡು ಇರುತ್ತಾನೆ . ದಿನಾಂಕ: 23/02/2021 ರಂದು ಬೆಳ್ಳಿಗ್ಗೆ 09:00 ಗಂಟೆಗೆ ಕಾಲೇಜಿಗೆ ಕೆಲಸಕ್ಕಾಗಿ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿರುತ್ತಾನೆ. ಇದೆ ದಿನ  ಸುಮಾರು ಮಧ್ಯಾಹ್ನ 01:00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ನಿವಾಸಿಯಾದ ರಮೇಶ ಬಿನ್ ಗೋಪಾಲಪ್ಪ ರವರು ದೂರವಾಣಿ ಮೂಲಕ ಕರೆ ಮಾಡಿ ನಿಮ್ಮ ಮಗನಾದ ನವೀನ್ ಕುಮಾರ್ ರವರಿಗೆ ಅಪಘಾತವಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ವತ್ರೆಯ ಬಳಿ ತೆಗೆದುಕೊಂಡು ಬಂದಿರುತ್ತಾರೆ  ತಿಳಿಸಿದ ಕೊಡಲೇ ತಾನು ಮತ್ತು ಸಂಬಂದಿಕರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ವತ್ರೆಯ ಬಳಿ ಬಂದು ನೋಡಲಾಗಿ ತಮ್ಮ ಮಗನಿಗೆ ಅಪಘಾತದಲ್ಲಿ ಗಾಯಗಳಾಗಿ ಮೃತಪಟ್ಟಿರುತ್ತಾನೆ. ಅಲ್ಲಿದ್ದ ತಮ್ಮ ಗ್ರಾಮದ ರಮೇಶ ಮತ್ತು ತನ್ನ ಮಗನ ಜೊತೆ ಕೆಲಸ ಮಾಡುವ ಅಶೋಕ ಕುಮಾರ್ ಬಿನ್ ವೆಂಕಟೇಶ ರವರನ್ನು ವಿಚಾರ ಮಾಡಲಾಗಿ ತನ್ನ ಮಗನಾದ ನವೀನ್ ಕುಮಾರ್ ದಿನಾಂಕ: 23/02/2021 ರಂದು ಬೆಳ್ಳಿಗ್ಗೆ 11 : 40 ಗಂಟೆ ಸಮಯದಲ್ಲಿ ಕಾಲೇಜಿನ ಕೆಲಸದ ನೀಮಿತ್ತ ಕೋಲಾರದ  ಟಮಕದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಹೋಗಲು ಸಾದಲಿ ಗ್ರಾಮದ ಕೆರೆ ಕಟ್ಟೆ ಮೇಲೆ ತನ್ನ ಮಗನ ಬೈಕ್ KA- 05KG- 6368 ಪಲ್ಸರ್ ವಾಹನದಲ್ಲಿ ಹೋಗುತ್ತಿದ್ದಾಗ ಚಿಂತಾಮಣಿ ಕಡೆಯಿಂದ ಬಂದ KA- 67 M-0321  ಕಾರಿನ ಚಾಲಕ  ಕಾರನ್ನು ಅತಿ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಮಗನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ್ದಿದ್ದು ಇದರಿಂದ ತನ್ನ ಮಗನ ಹೊಟ್ಟೆ ಎದೆ ಹಾಗೂ ಕಾಲುಗಳ ಮೇಲೆ ಗಾಯಾಗಳಾಗಿ ಪ್ರಜ್ಞೆ ತಪ್ಪಿದ್ದು ಅಂಬುಲೆನ್ಸ್ ವಾಹನದಲ್ಲಿನದಲ್ಲಿ  ಚಿಕ್ಕಬಳ್ಳಾಪುರ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಬರುವಾಗ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ ತನ್ನ ಮಗನ ಮೃತ ದೇಹವು ಸರ್ಕಾರಿ ಆಸ್ವತ್ರೆಯ  ಶವಗಾರದಲ್ಲಿದ್ದು, ತನ್ನ ಮಗನಿಗೆ ಅಪಘಾತ ಪಡಿಸಿದ KA- 67 M- 0321   ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.45/2021 ಕಲಂ. 324,504,34 ಐ.ಪಿ.ಸಿ:-

     ದಿನಾಂಕ:23/02/2021 ರಂದು ಸಂಜೆ 18-15 ಗಂಟೆ ಸಮಯದಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಲಾವಣ್ಯ ಕೋಂ ಮಹೇಶ್ 29 ವರ್ಷ, ಮಡಿವಾಳ ಜನಾಂಗ, ಜಿರಾಯ್ತಿ, ಕೋಟಾಲದಿನ್ನೆ ಗ್ರಾಮ ಗೌರೀಬಿದನೂರು ತಾಲ್ಲೂಕು ರವರು ನೀಡಿರುವ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ:23/02/2021 ರಂದು ಪಿರ್ಯಾದಿದಾರರು ಅವರ ಬಾಬತ್ತು ಜಮೀನಿನಲ್ಲಿ ಸೊಪ್ಪು ಬಿಡಲು ನೀರು ಕಟ್ಟುತ್ತಿದ್ದಾಗ ಸಂಜೆ ಸುಮಾರು 4-00 ಗಂಟೆ ಸಮಯದಲ್ಲಿ ಅದೇ ಗ್ರಾಮದ ಮೆಹಬಾಷಾ ಬಿನ್ ಪ್ರಕೃದ್ದೀನ್, ಅನ್ಸರ್ ಬಿನ್ ಫಕೃದ್ದೀನ್ ಸದರಿ ಜಾಗ ನಮಗೆ ಸೇರುತ್ತದೆ ಎಂದು ಪಿರ್ಯಾದಿದಾರರ ಮೆಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ಪಿರ್ಯಾದಿದಾರರು ಸದರಿ ಜಮೀನು ನಮ್ಮ ಪಿತ್ರಾರ್ಜಿತ ಸ್ವತ್ತು ಎಂದು ತಿಳಿಸಿದಾಗ ಅನ್ಸರ್ ಅಲ್ಲಿಯೇ ಅವರ ಬಾಬತ್ತು ಗುಜರಿ ಸಮಾನಿನಲ್ಲಿದ್ದ ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರ ಎಡಗೈ ಮುಂಗೈ ಮೇಲೆ ಹೊಡೆದಾಗ ಪಿರ್ಯಾದಿದಾರರು ಕೂಗಿಕೊಂಡಾಗ ಅಲ್ಲಿಯೇ ಇದ್ದ ಪಿರ್ಯಾದಿದಾರರ ಗಂಡ ಮಹೇಶ ಬಿಡಿಸಲು ಬಂದಾಗ ಮಹೇಶ ರವರಿಗೆ ಮಹಬಾಷಾ ತಲೆಗೆ ಹೊಡೆದು ರಕ್ತಗಾಯಪಡಿಸಿದ ಗಲಾಟೆ ಮಾಡಿಕೊಳ್ಳುತ್ತಿದ್ದಾಗ ಪಿರ್ಯಾದಿದಾರರ ಅಕ್ಕ ಪದ್ಮಾವತಿ ರವರು ಬಂದಾಗ ಅವರ ಬಲ ಭುಜಕ್ಕೆ ಹೊಡೆದು ಮೂಗೇಟು ಮಾಡಿರುತ್ತಾನೆ. ಪಿರ್ಯಾದಿದಾರರ ಮಾವ ಶ್ರೀರಾಮಪ್ಪ ರವರಿಗೂ ಸಹ ಹೊಟ್ಟೆಗೆ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರಿಗೆ ಕೈ ಊತಬಂದಿರುವುದರಿಂದ ಮೈದ ನಾಗೆಂದ್ರ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು, ಪಿರ್ಯಾದಿದಾರರಿಗೆ ಹಲ್ಲೇ ಮಾಡಿರುವ ಮೆಹಬಾಷಾ ಮತ್ತು ಅನ್ಸರ್ ರವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

ಇತ್ತೀಚಿನ ನವೀಕರಣ​ : 24-02-2021 05:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080