ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.309/2021 ಕಲಂ. 379 ಐ.ಪಿ.ಸಿ:-

     ದಿನಾಂಕ:23/09/2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ ಶ್ರೀನಿವಾಸ ಎಂ ಎನ್ ಬಿನ್ ನಾರಾಯಣಸ್ವಾಮಿ 50ವರ್ಷ, ಬಲಜಿಗರು, ಶಿಕ್ಷಕರು, ವಾಸ: ಮಿಟ್ಟೇಮರಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 20/09/2021 ರಂದು ಬೆಳಿಗ್ಗೆ ನಮ್ಮ ಬಾಬತ್ತು ಆದ ಕೆಎ-03 ಇಆರ್ 1689 ನೋಂದಣಿ ಸಂಖ್ಯೆ ಹೀರೋಹೋಂಡ ಸ್ಪ್ಲೆಂಡರ್ ದ್ವಿಚಕ್ರವಾಹನದಲ್ಲಿ ಚಿನ್ನೋಬಯ್ಯಗಾರಿಪಲ್ಲಿ ಗ್ರಾಮದ ವೆಂಕಟರಮಣಸ್ವಾಮಿ ಬೆಟ್ಟದ ದೇವಸ್ಥಾನಕ್ಕೆ ಹೋಗಲು ನನ್ನ ದ್ವಿಚಕ್ರವಾಹನವನ್ನು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಬೆಟ್ಟದ ಕೆಳಗೆ ನಿಲ್ಲಿಸಿ ದೇವರ ದರ್ಶನಕ್ಕೆ ಹೋಗಿ ನಂತರ ಮದ್ಯಾಹ್ನ 12.15 ಗಂಟೆಗೆ ವಾಪಸ್ಸು ಬಂದು ನೋಡಲಾಗಿ ನನ್ನ ದ್ವಿಚಕ್ರವಾಹನವು ನಿಲ್ಲಿಸಿದ್ದ ಸ್ಥಳದಲ್ಲಿ ಇರುವುದಿಲ್ಲ. ನಂತರ ಅಕ್ಕಪಕ್ಕದಲ್ಲಿ ನೋಡಲಾಗಿ ಕಂಡು ಬಂದಿರುವುದಿಲ್ಲ ನನ್ನ ಬಾಬತ್ತು ಆದ ಸುಮಾರು 12,000 ರೂ ಬೆಲೆ ಬಾಳುವ ಕೆಎ-03 ಇಆರ್ 1689 ನೋಂದಣಿ ಸಂಖ್ಯೆ ಹೀರೋಹೋಂಡ ಸ್ಪ್ಲೆಂಡರ್ ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ನನ್ನ ದ್ವಿಚಕ್ರವಾಹನವನ್ನು ಹಾಗೂ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.310/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ: 23/09/2021 ರಂದು ಮದ್ಯಾಹ್ನ 12-30 ಗಂಟೆಗೆ  ಶ್ರೀ ನಾಗರಾಜ ಡಿ ಆರ್ ಪೊಲೀಸ್ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ:23-09-2021 ರಂದು ಬೆಳಗ್ಗೆ 11.00 ಗಂಟೆ ಸಮಯದಲ್ಲಿ ನಾನು  ನಾನು ಕಛೇರಿಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಕಾಶಾಪುರ ಗ್ರಾಮದ ಕೆರೆಯ ಬಳಿ  ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಸದರಿ ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ನಡೆಸುವ ಸಲುವಾಗಿ ನಾನು ಹಾಗೂ ಸಿಬ್ಬಂದಿಗಳಾದ ಪಿಸಿ-131 ರಾಜಪ್ಪ, ಪಿಸಿ-134 ಧನಂಜಯ, ಪಿಸಿ-280 ಮುರಳಿ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ರಲ್ಲಿ ಕುಳಿತುಕೊಂಡು ಟಿಬಿ ಕ್ರಾಸ್  ಬಳಿಯಿದ್ದ ಪಂಚರನ್ನು ಬರಮಾಡಿಕೊಂಡು ದಾಳಿ ವಿಚಾರವನ್ನು ತಿಳಿಸಿ ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಬೇಕಾಗಿರುವುದರಿಂದ ತಾವುಗಳು ಪಂಚರಾಗಿ ಹಾಜರಿದ್ದು ದಾಳಿಗೆ ಸಹಕರಿಸಲು ಕೋರಿದ್ದು ಅವರು ಒಪ್ಪಿಕೊಡು ನಂತರ ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಬೆಳಗ್ಗೆ 11.15 ಗಂಟೆಗೆ ಕಾಶಾಪುರ ಗ್ರಾಮದ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಗಿಡಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಆಸಾಮಿಗಳು ಗುಂಪಾಗಿ ಕುಳಿತು ಅಂದರ್ 100 ಬಾಹರ್ 100 ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು, ಜೂಜಾಟವಾಡುತ್ತಿದ್ದ ಗುಂಪಿನ ಮೇಲೆ ಧಾಳಿ ಮಾಡಿ ಜೂಜಾಟವಾಡುತ್ತಿದ್ದ ಆಸಾಮಿಗಳಿಗೆ ಓಡಿಹೋಗದಂತೆ ಎಚ್ಚರಿಕೆ ನೀಡಿ ಸಮವಸ್ತ್ರದಲ್ಲಿದ್ದ ನಾನು ಮತ್ತು ಸಿಬ್ಬಂದಿಗಳು ಸುತ್ತುವರೆದು ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ವೆಂಕಟಶಿವಪ್ಪ ಬಿನ್ ಗಂಗನಾರಾಯಣಪ್ಪ, 28ವರ್ಷ, ವಕ್ಕಲಿಗರು, ಲಾರಿ ಚಾಲಕ, ವಾಸ: ಮಾಚಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು. 2) ಗಂಗರಾಜು ಬಿನ್ ಲೇಟ್ ಯಲ್ಲಪ್ಪ, 28ವರ್ಷ, ಹಂದಿಜೋಗಿ ಜನಾಂಗ, ವ್ಯಾಪಾರ,  ವಾಸ:ತೀಮಾಕಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು. 3) ಶ್ರೀನಿವಾಸ ಬಿನ್ ಲೇಟ್ ಗೋವಿಂದಪ್ಪ, 50ವರ್ಷ, ಭೋವಿ ಜನಾಂಗ, ಕೂಲಿಕೆಲಸ, ವಾಸ:11ನೇ ವಾರ್ಡ್ ಬಾಗೇಪಲ್ಲಿ ಪುರ ಎಂದು ತಿಳಿಸಿದರು. ಸದರಿ ಆಸಾಮಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟವಾಡಲು ನಿಮ್ಮ ಬಳಿ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಇಲ್ಲವೆಂದು ತಿಳಿಸಿದರು.  ಸ್ಥಳದಲ್ಲಿ ಆಸಾಮಿಗಳು ಜೂಜಾಟವಾಡಲು ಬಳಸಿದ್ದ  ಒಟ್ಟು 52 ಇಸ್ಪೀಟ್ ಎಲೆಗಳು, ಪಣಕ್ಕಾಗಿ ಇಟ್ಟಿದ್ದ ಒಟ್ಟು 9,300/- ರೂ ಹಣವನ್ನು. ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು 3 ಜನ ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿಗಳ ಸಮೇತ ಬಾಗೇಪಲ್ಲಿ ಠಾಣೆಗೆ ಮದ್ಯಾಹ್ನ 12.30 ಗಂಟೆಗೆ ಹಾಜರಾಗಿ ಮಾಲು ಮತ್ತು 3 ಜನ ಆರೋಪಿಗಳ ಸಮೇತ ಅಸಲು ಧಾಳಿ ಪಂಚನಾಮೆ ಮತ್ತು ವರಧಿಯೊಂದಿಗೆ ಹಾಜರುಪಡಿಸುತ್ತಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು  ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-280/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:23-09-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.133/2021 ಕಲಂ. 15(A),32(3) ಕೆ.ಇ ಆಕ್ಟ್:-

     ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಿಹೆಚ್ ಸಿ 36 ವಿಜಯ್ ಕುಮಾರ್ ಬಿ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:22/09/2021 ರಂದು ಠಾಣಾಧಿಕಾರಿಗಳು ನನ್ನನ್ನು ಗುಪ್ತಮಾಹಿತಿ ಸಂಗ್ರಹಣೆ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಈ ದಿನ ಠಾಣಾ ವ್ಯಾಪ್ತಿಯ ಎಂ.ಗೊಲ್ಲಹಳ್ಳಿ, ವೆಂಕಟರಾಯನಕೋಟೆ, ಇರಗಂಪಲ್ಲಿ, ಯಗವಕೋಟೆ ನಿಮ್ಮಕಾಯಲಹಳ್ಳಿ ಕಡೆಗೆ ಗಸ್ತು ಕರ್ತವ್ಯದಲ್ಲಿದ್ದಾಗ ಠಾಣಾ ವ್ಯಾಪ್ತಿಯ ಮುದ್ದಲಹಳ್ಳಿ ಗ್ರಾಮದ ವಾಸಿಯಾದ ಶ್ರೀ.ಶ್ರೀಕಾಂತ ಬಿನ್ ಕದಿರಪ್ಪ ರವರು ಅವರ ಬಾಬತ್ತು ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರಿಂದ ನಾನು ಮುದ್ದಲಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ನಾನು ಈ ದಿನ ದಿನಾಂಕ 22/09/2021 ಮಧ್ಯಾಹ್ನ 1-30 ಗಂಟೆಗೆ ಮುದ್ದಲಹಳ್ಳಿ ಗ್ರಾಮದ ವಾಸಿಯಾದ ಶ್ರೀಕಾಂತ ಬಿನ್ ಕದಿರಪ್ಪ ರವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮದ್ಯ ನೀಡುತ್ತಿದ್ದ ಒಬ್ಬ ಆಸಾಮಿ ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಬಿದ್ದಿರುವುದು ಕಂಡು ಬಂದಿರುತ್ತೆ. ಚಿಲ್ಲರೆ ಅಂಗಡಿಯ ಬಳಿ ಮದ್ಯವನ್ನು ನೀಡುತ್ತಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಶ್ರೀಕಾಂತ ಬಿನ್ ಕದಿರಪ್ಪ, 40ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಮುದ್ದಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 90 ಎಂ.ಎಲ್ ಸಾಮರ್ಥ್ಯದ 11 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು ಅವುಗಳ ಒಟ್ಟು ಮೌಲ್ಯ 386 ರೂಗಳ 990 ಎಂ.ಎಲ್ ಮದ್ಯ ಆಗಿರುತ್ತೆ, 2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಒಂದು ಲೀಟರ್ ಸಾಮರ್ಥ್ಯದ ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಮಧ್ಯಾಹ್ನ 01-45 ಗಂಟೆಯಿಂದ ಸಂಜೆ 2-30 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಅಮಾನತ್ತುಪಡಿಸಿಕೊಂಡು ಬಂದಿದ್ದು ಮೇಲ್ಕಂಡಂತೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದ ಆಸಾಮಿಯ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿ , ಅಮಾನತ್ತುಪಡಿಸಿಕೊಂಡ ಮಾಲು ಮತ್ತು ಅಮಾನತ್ತು ಪಂಚನಾಮೆಯನ್ನು ತಮ್ಮ ವಶಕ್ಕೆ ನೀಡಿದ್ದನ್ನು ಪಡೆದು ಠಾಣಾ ಮೊ.ಸಂ 133/2021 ಕಲಂ 15 (ಎ) ,32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

4. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.134/2021 ಕಲಂ. 15(A),32(3) ಕೆ.ಇ ಆಕ್ಟ್:-

     ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಿಹೆಚ್ ಸಿ 139 ಶ್ರೀನಾಥ.ಎಂ.ಪಿ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:22/09/2021 ರಂದು ಠಾಣಾಧಿಕಾರಿಗಳು ನನ್ನನ್ನು ಅಪರಾಧ ಪತ್ತೆ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಈ ದಿನ ಠಾಣಾ ವ್ಯಾಪ್ತಿಯ ಸೋಮುಕಲಹಳ್ಳಿ, ರಾಯಪಲ್ಲಿ, ದಿನ್ನಮಿಂದಹಳ್ಳಿ, ಮಾವುಕೆರೆ, ಕೃಷ್ಣಾಪುರ   ಮುಂತಾದ ಕಡೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಸುನಪಗುಟ್ಟ ಗ್ರಾಮದ ವಾಸಿಯಾದ ಚಿನ್ನಗೌರಪ್ಪ ಬಿನ್ ಲೇಟ್ ಕೋನಪ್ಪ ರವರು ಅವರ ಬಾಬತ್ತು ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರಿಂದ ನಾನು ಸುನಪಗುಟ್ಟ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ನಾನು ಈ ದಿನ ದಿನಾಂಕ 22/09/2021 ಮಧ್ಯಾಹ್ನ 2-30 ಗಂಟೆಗೆ ಸುನಪಗುಟ್ಟ ಗ್ರಾಮದ ವಾಸಿಯಾದ ಚಿನ್ನಗೌರಪ್ಪ ಬಿನ್ ಲೇಟ್ ಕೋನಪ್ಪ ರವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮದ್ಯ ನೀಡುತ್ತಿದ್ದ ಒಬ್ಬ ಆಸಾಮಿ ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಬಿದ್ದಿರುವುದು ಕಂಡು ಬಂದಿರುತ್ತೆ. ಚಿಲ್ಲರೆ ಅಂಗಡಿಯ ಬಳಿ ಮದ್ಯವನ್ನು ನೀಡುತ್ತಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಚಿನ್ನಗೌರಪ್ಪ ಬಿನ್ ಲೇಟ್ ಕೋನಪ್ಪ, 50ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಸುನಪಗುಟ್ಟ  ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 90 ಎಂ.ಎಲ್ ಸಾಮರ್ಥ್ಯದ 12 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು ಅವುಗಳ ಒಟ್ಟು ಮೌಲ್ಯ 421 ರೂಗಳ 1080 ಎಂ.ಎಲ್ ಮದ್ಯ ಆಗಿರುತ್ತೆ, 2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಒಂದು ಲೀಟರ್ ಸಾಮರ್ಥ್ಯದ ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಮಧ್ಯಾಹ್ನ 02-45 ಗಂಟೆಯಿಂದ ಸಂಜೆ 3-30 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಅಮಾನತ್ತುಪಡಿಸಿಕೊಂಡು ಬಂದಿದ್ದು ಮೇಲ್ಕಂಡಂತೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದ ಆಸಾಮಿಯ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರುತ್ತೇನೆ. ಈ ವರದಿಯೊಂದಿಗೆ ಅಮಾನತ್ತುಪಡಿಸಿಕೊಂಡ ಮಾಲು ಮತ್ತು ಅಮಾನತ್ತು ಪಂಚನಾಮೆಯನ್ನು ತಮ್ಮ ವಶಕ್ಕೆ ನೀಡಿದ್ದನ್ನು ಪಡೆದು ಠಾಣಾ ಮೊ.ಸಂ 134/2021 ಕಲಂ 15 (ಎ) , 32(3) ಕೆ ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.418/2021 ಕಲಂ. 324,427,506 ಐ.ಪಿ.ಸಿ:-

     ದಿನಾಂಕ: 22/09/2021 ರಂದು ಮದ್ಯಾಹ್ನ 2.15 ಗಂಟೆಗೆ ಶ್ರೀಮತಿ ಮಂಜುಳ ಕೋಂ ವೆಂಕಟೇಶ್, 38 ವರ್ಷ, ಗಾಣಿಗ ಜನಾಂಗ, ಹೋಟೆಲ್ ಕೆಲಸ, ಕುರುಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮತ್ತು ತನ್ನ ಗಂಡ ವೆಂಕಟೇಶ್ ರವರು ತಮ್ಮ ಗ್ರಾಮದಲ್ಲಿ ತಮ್ಮ ಪಿತ್ರಾರ್ಜಿತ ಆಸ್ತಿಯ ಅಂಗಡಿಗಳಲ್ಲಿ ವರಲಕ್ಷ್ಮಿ ಟಿಫಿನ್ ಸೆಂಟರ್ ನಡೆಸಿಕೊಂಡು ಜೀವನ ಮಾಡಿಕೊಂಡಿರುತ್ತೇವೆ. ಹೀಗಿರುವಾಗ ಈ ದಿನ ದಿನಾಂಕ: 22/09/2021 ರಂದು ಬೆಳಿಗ್ಗೆ 08.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿ ನಾಗೇಶ ಬಿನ್ ನಂಜುಂಡಪ್ಪ ರವರು ತಮ್ಮ ಹೋಟೆಲ್ ಹತ್ತಿರ ಬಂದು ಯಾವುದೇ ಕಾರಣ ಇಲ್ಲದೆ ತನ್ನ ಮತ್ತು ತನ್ನ ಗಂಡನ ಮೇಲೆ ಹಲ್ಲೆ ಮಾಡಿ ರಾಡ್ ನಿಂದ ತನ್ನ ಕಾಲಿಗೆ ಹೊಡೆದು ಕಾಲಿನ ಮೂಳೆಯನ್ನು ಮುರಿದಿರುತ್ತಾನೆ. ತನ್ನ ರಕ್ಷಣೆಗೆ ಬಂದ ತನ್ನ ಗಂಡ ವೆಂಕಟೇಶ್ ರವರ ಮೇಲೂ ಸಹ ಹಲ್ಲೆ ಮಾಡಿರುತ್ತಾನೆ. ಕಬ್ಬಿಣದ ರಾಡ್ ನಿಂದ ತಮ್ಮ ಹೋಟೆಲ್ ನ ಬೆಂಕಿಯ ಪೈಪ್ ನ್ನು ಹೊಡೆದು, ಪ್ರಾಣಬೆದರಿಕೆ ಹಾಕಿ ನಿನ್ನನ್ನು ಮತ್ತು ನಿನ್ನ ಗಂಡನನ್ನು ಕೊಲೆ ಮಾಡುತ್ತೇನೆಂದು ಏರು ದ್ವನಿಯಲ್ಲಿ ಕೂಗಾಡಿ ಹೋಟೆಲ್ ನಲ್ಲಿದ್ದ ಪಾತ್ರೆ ಸಾಮಾನುಗಳನ್ನು ಬಿಸಾಕಿ, ದೌರ್ಜನ್ಯ ಏಸಗಿರುತ್ತಾನೆ. ಆದ್ದರಿಂದ ಮೇಲ್ಕಂಡ ನಾಗೇಶ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.419/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ:23/09/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮಂಜುನಾಥ ಬಿನ್ ಲೇಟ್ ಮುನಿವೆಂಕಟರಾಮಪ್ಪ, 41 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ದೊಡ್ಡಬೊಮ್ಮನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 11.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಾನು ತಮ್ಮ ಗ್ರಾಮದ ತಮ್ಮ ಜನಾಂಗದ ಅಂಬರೀಶ ಬಿನ್ ಲೇಟ್ ಆಂಜಪ್ಪ ರವರಿಗೆ ಈಗ್ಗೆ ಎರಡು ತಿಂಗಳ ಹಿಂದೆ ತಮ್ಮ ಗ್ರಾಮದ ನಾಗೇಶ ಎಂಬುವವರ ಬಳಿ 20 ಸಾವಿರ ರೂ ಕೈ ಸಾಲ ಕೊಡಿಸಿದ್ದು, ಅಂಬರೀಶ್ ರವರು 17 ಸಾವಿರ ರೂ ವಾಪಸ್ ಕೊಟ್ಟಿದ್ದು, ಇನ್ನೂ 3 ಸಾವಿರ ರೂ ಬಾಕಿ ಇರುತ್ತೆ. ಹೀಗಿರುವಾಗ ದಿನಾಂಕ: 19/09/2021 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ಮೇಲ್ಕಂಡ ಅಂಬರೀಶ ರವರು ತಮ್ಮ ಗ್ರಾಮದ ದೇವಾಯಲಯದ ಬಳಿ ಇರುವ ಅರಳಿ ಕಟ್ಟೆಯ ಬಳಿ ಇದ್ದು, ತಾನು ಅಲ್ಲಿಗೆ ಹೋಗಿ ಅಂಬರೀಶರವರನ್ನು ಕುರಿತು ಬಾಕಿ ಇರುವ 3 ಸಾವಿರ ರೂ ಹಣವನ್ನು ಕೊಡುವಂತೆ ಕೇಳಿದ್ದು, ಆಗ ಅಂಬರೀಶ ರವರು ತನ್ನನ್ನು ಕುರಿತು “ನಾನು ನಿನಗೆ ಯಾವುದೇ ಹಣ ಬಾಕಿ ಇರುವುದಿಲ್ಲ ಹೋಗೋ ಲೋಫರ್ ನನ್ನ ಮಗನೇ” ಎಂದು ಅವಾಚ್ಯಶಬ್ದಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ತನ್ನ ತಲೆಯ ಹಿಂದೆ ಹೊಡೆದು ರಕ್ತಗಾಯಪಡಿಸಿದನು. ಅಷ್ಟರಲ್ಲಿ ತಮ್ಮ ಗ್ರಾಮದ ತಮ್ಮ ಜನಾಂಗದ ಪ್ರಸಾದ್ ಬಿನ್ ಮುನಿಯಪ್ಪ ಮತ್ತು ಮುರಳಿ ಬಿನ್ ಮುನಿಯಪ್ಪ ರವರು ಅಲ್ಲಿಗೆ ಬಂದು ಅವರೂ ಸಹ ತನ್ನ ಮೇಲೆ ಗಲಾಟೆ ಮಾಡಿ ಕೈಗಳಿಂದ ಮೈ ಮೇಲೆ ಹೊಡೆದರು. ಎಲ್ಲರೂ ಸೇರಿ ತನ್ನನ್ನು ಕುರಿತು “ಈ ನನ್ನ ಮಗನನ್ನು ಈ ದಿನ ಬಿಡಬಾರದು ಸಾಯಿಸಿ ಬಿಡೋಣ” ಎಂದು ಪ್ರಾಣಬೆದರಿಕೆ ಹಾಕಿದರು. ನಂತರ ಗಾಯಗೊಂಡಿದ್ದ ತನ್ನನ್ನು ತಮ್ಮ ಗ್ರಾಮದ ರವಿ ರವರು ಚಿಂತಾಮಣಿ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು, ಇಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್.ಎನ್.ಆರ್ ಅಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ತಾನು ಇದುವರೆಗೂ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ನಂತರ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ತಡವಾಗಿ ತನ್ನ ಹೇಳೀಕೆಯನ್ನು ನೀಡುತ್ತಿದ್ದು, ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

7. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.134/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 22/09/2021 ರಂದು ಪಿ.ಎಸ್.ಐ ರವರು ಆರೋಪಿ ಮತ್ತು ಮಾಲು ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಸ್ವತಃ ದಾಖಲಿಸಿಕೊಂಡ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ:22/09/2021 ರಂದು ಮದ್ಯಾಹ್ನ 15.30 ಗಂಟೆಯಲ್ಲಿ ತಾನು ಠಾಣಾ ಸರಹದ್ದಿನ ಗಸ್ತಿಗಾಗಿ  ಠಾಣಾ ಸಿಬ್ಬಂಧಿ ಹೆಚ್.ಸಿ-53 ಲೋಕೇಶ್ ರವರೊಂದಿಗೆ ಠಾಣಾ ಜೀಪ್ ಸಂಖ್ಯೆ ಕೆ.ಎ-40 ಜಿ-60 ರ ವಾಹನದಲ್ಲಿ ದಿಬ್ಬೂರಹಳ್ಳಿ, ಬೈಯಪ್ಪನಹಳ್ಳಿ, ಶೀತಹಳ್ಳಿ, ರಾಮಲಿಂಗಾಪುರ ಗ್ರಾಮಗಳಿಗೆ ಬೇಟಿ ಮಾಡಿ ಮದ್ಯಾಹ್ನ 16.00 ಗಂಟೆಗೆ ಅಮ್ಮಗಾರಹಳ್ಳಿ ಗ್ರಾಮಕ್ಕೆ ಬೇಟಿ ಮಾಡಿದಾಗ ಯಾರೋ ಬಾತ್ಮಿದಾರರು ಅಮ್ಮಗಾರಹಳ್ಳಿ ಗ್ರಾಮದ ಶ್ರೀನಿವಾಸಪ್ಪ ಬಿನ್ ಲೇಟ್ ಚಿನ್ನಪ್ಪ ರವರು ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ನೀಡಿದ್ದು, ಸದರಿ ಸ್ಥಳದಲ್ಲಿ ದಾಳಿ ಮಾಡಲು ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ, ಪಂಚರಾಗಿ ಸಹಕರಿಸಲು ಕೋರಿದ್ದು, ಅವರು ಒಪ್ಪಿ ನಮ್ಮೊಂದಿಗೆ ಅಮ್ಮಗಾರಹಳ್ಳಿ ಗ್ರಾಮದ ಶ್ರೀನಿವಾಸಪ್ಪ ಬಿನ್ ಲೇಟ್ ಚಿನ್ನಪ್ಪ ರವರು ಚಿಲ್ಲರೆ ಅಂಗಡಿಯ ಬಳಿ ಸಂಜೆ 16.15 ಗಂಟೆಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಖಾಲಿ ಪ್ಯಾಕೇಟ್ಗಳು, ನೀರಿನ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ನಂತರ ಸದರಿ ಅಂಗಡಿಯಲ್ಲಿದ್ದ  ಆಸಾಮಿಯನ್ನು ಕರೆದು ಅವರ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ಶ್ರೀನಿವಾಸಪ್ಪ ಬಿನ್ ಲೇಟ್ ಚಿನ್ನಪ್ಪ,  58 ವರ್ಷ, ಬೋವಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಅಮ್ಮಗಾರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂ 9901295078 ಎಂದು ತಿಳಿಸಿದ್ದು, ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಿಗೆ ಇದಿಯೇ ಎಂಬ ಬಗ್ಗೆ ಕೇಳಲಾಗಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು, ಸದರಿ ಸ್ಥಳದಲ್ಲಿ  ಪಂಚನಾಮೆ ಕ್ರಮ ಕೈಗೊಂಡು, ಪಂಚನಾಮೆಯ ಕಾಲದಲ್ಲಿ ಒಟ್ಟು 1 ಲೀಟರ್ 620 ಎಂ.ಎಲ್ ಸಾಮರ್ಥ್ಯದ,  632.34/- ರೂಗಳ ಬೆಲೆ ಬಾಳುವ ಮಧ್ಯ ತುಂಬಿದ ಹೈವಾರ್ಡ್ಸ್ ಚೀರ್ಸ್ ವಿಸ್ಕಿ 90 ಎಂ.ಎಲ್ ನ 18 ಟೆಟ್ರಾ ಪ್ಯಾಕೇಟ್ಗಳು ಇದ್ದು, ಇವುಗಳ ಒಂದರ ಬೆಲೆ 35.13/-ರೂಗಳಾಗಿರುತ್ತೆ. ಇವುಗಳನ್ನು ಹಾಗೂ ಹೈವಾರ್ಡ್ಸ್ ಚೀರ್ಸ್ ವಿಸ್ಕಿ 90 ಎಂ.ಎಲ್ ನ 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಮತ್ತು 1 ಖಾಲಿ ವಾಟರ್ ಬಾಟೆಲನ್ನು ಸಂಜೆ 16.15 ಗಂಟೆಯಿಂದ ಸಂಜೆ 17.00 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು, ಸಂಜೆ  17.30 ಗಂಟೆಗೆ ಆರೋಪಿ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಠಾಣಾ ಮೊ.ಸಂ 134/2021, ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ನಾನೇ ಸ್ವತಃ ಮುಂದಿನ ಕ್ರಮಕ್ಕಾಗಿ ಪ್ರಕರಣ ದಾಖಲಿಸಿಕೊಂಡಿರುವುದಾಗಿರುತ್ತೆ.

 

8. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.151/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ;22/09/2021 ರಂದು ಬೆಳಿಗ್ಗೆ 11-30 ಗಂಟೆಗೆ ನ್ಯಾಯಾಲಯದ ಪಿಸಿ-318 ರವರು ಠಾಣಾ ಎನ್,ಸಿ,ಆರ್ 218/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಹಾಜರುಪಡಿಸಿದರ ಸಾರಾಂಶವೇನೆಂಧರೆ,  ದಿನಾಂಕ:08/09/2021 ರಂದು ಮದ್ಯಾಹ್ನ 12-00  ಗಂಟೆಯಲ್ಲಿ ಪಿ.ಎಸ್.ಐ ಶ್ರೀ. ಪ್ರಸನ್ನ ಕುಮಾರ್ ರವರು ನಗರ ಗಸ್ತಿನಲ್ಲಿದ್ದಾಗ ಬಂದ ಖಚಿತ ಮಾಹಿತಿಯ ಮೇರೆಗೆ ಹಿರೇಬಿದನೂರು ಬೈಪಾಸ್ ವೃತ್ತದ ಬಳಿ ಯಾರೋ ಆಸಾಮಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು, ಕೂಡಲೇ ತಮ್ಮ ಠಾಣೆಯ ಸಿಬ್ಬಂದಿಯಾದ ಹೆಚ್ ಸಿ-244 ಗೋಪಾಲ್, ರವರೊಂದಿಗೆ  ಸರ್ಕಾರಿ  ಜೀಪ್ ಸಂಖ್ಯೆ ಕೆ.ಎ-40 ಜಿ-281 ರಲ್ಲಿ ಎ.ಪಿಸಿ-76 ಹರೀಶ್ ರವರು ಚಾಲನೆ ಮಾಡಿಕೊಂಡು ಹಿರೇಬಿದನೂರು ದರ್ಗಾ  ಬಳಿ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ  ಮಾಹಿತಿಯಂತೆ ನದಿಗಡ್ಡೆ  ಹಿರೇಬಿದನೂರು ಬೈಪಾಸ್ ವೃತ್ತದ ಬಳಿ ಹೋಗಿ ಮರೆಯಲ್ಲಿ ಜೀಪು ಅನ್ನು ನಿಲ್ಲಿಸಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ  ಮದ್ಯ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ಕಂಡು ಮದ್ಯ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯ ಸರಬರಾಜು ಮಾಡುತ್ತಿದ್ದ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ  ಪ್ರಕಾಶ್ ಬಿನ್ ಲೇಟ್ ನಂಜುಡಪ್ಪ.52 ವರ್ಷ,ಬಲಜಿಗರು.ವ್ಯವಸಾಯ.ವಾಸ; ಆಜಾದ್ ನಗರ ಗೌರಿಬಿದನೂರು ಟೌನ್ ಪೋನ್ ;9972624339 ಎಂದು ತಿಳಿಸಿದನು. ಆಸಾಮಿಗೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿಯ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ 1) 90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 16 ಟೆಟ್ರಾ ಪಾಕೆಟ್ ಗಳು 2)  90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 04 ಖಾಲಿ ಟೆಟ್ರಾ ಪಾಕೆಟ್ ಗಳು 3) 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 4) ಎರಡು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ. ಮದ್ಯವಿರುವ ಪಾಕೆಟ್ಗಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 35.13 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 562 ರೂ ಗಳಾಗಿರುತ್ತೆ. ಮತ್ತು ಇದರ ಒಟ್ಟು ಮದ್ಯೆ ಪ್ರಮಾಣ ಒಂದು ಲೀಟರ್ ನಾಲ್ಕೂನೂರ  ನಲವತ್ತು  ಎಮ್ ಎಲ್ ಇರುತ್ತೆ ಆಸಾಮಿ ಮತ್ತು ಮಾಲುಗಳನ್ನು ಮಧ್ಯಹ್ನ 12-15 ಗಂಟೆಯಿಂದ 1-00 ಗಂಟೆಯವರೆಗೆ  ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ  ನೀಡಿದ  ವರಧಿಯನ್ನು ಪಡೆದು ಎನ್,ಸಿ,ಆರ್ ದಾಖಲಿಸಿಕೊಂಡು ಈ ದಿನ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಕ್ರಿಮಿನಲ್ ಪ್ರಕರಣ ದಾಖಲಿಸಿರುತ್ತೆ.

 

9. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.100/2021 ಕಲಂ. 143,323,504,149 ಐ.ಪಿ.ಸಿ:-

     ದಿನಾಂಕ 22/09/2021 ರಂದು ಸಂಜೆ 5.30 ಗಂಟೆಗೆ ಘನ ನ್ಯಾಯಾಯದ ಸಿಬ್ಬಂದಿ ಹೆಚ್.ಸಿ 216 ರವರು ಘನ ನ್ಯಾಯಾಲಯದಲ್ಲಿಅನುಮತಿ ಪಡೆದು ಠಾಣೆಯಲ್ಲಿಹಾಜರುಪಡೆಸಿದ ಮನವಿ ದೂರಿನ ಸಾರಾಂಶವೇನೆಂದರೆ ದಿನಾಂಕ 15/09/2021 ರಂದು ಹೆಚ್.ಸಿ 200 ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಜಿ.ವಿ ಸ್ವಪ್ನ ಕೋಂ ಆನಂದ, 23 ವರ್ಷ, ಜಿರಾಯ್ತಿ, ನಾಯಕ ಜನಾಂಗ, ಬಿ.ಭತ್ತಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ವೈದ್ಯರ ಸಮಕ್ಷಮ ನೀಡಿದ ಹೇಳಿಕೆ ಪಡೆದು ಠಾಣೆಯಲ್ಲಿಹಾಜರುಪಡಿಸಿದ್ದು, ಹೇಳಿಕೆ ದೂರಿನ ಸಾರಾಂಶವೇನೆಂದರೆ ದಿನಾಂಕ 12/09/2021 ರಂದು ಸಂಜೆ 5.00 ಗಂಟೆಯಲ್ಲಿ ತಮ್ಮ ಮನೆಯ ಮುಂದೆ ತಾನು ಕಸ ಗುಡಿಸುತ್ತಿದ್ದಾಗ ಹಳೇ ದ್ವೇಷದ ಹಿನ್ನಲೆಯಲ್ಲಿ ತಮ್ಮ ಗ್ರಾಮದ ಪಾರ್ವತಮ್ಮ, ಶಂಕರಮ್ಮ, ರವಣಮ್ಮ, ಲಾವಣ್ಯ ರವರು ಬಂದು ತನ್ನನ್ನು ಬೈಯುತ್ತಿದ್ದಾಗ ತಾನು ಕೇಳಿದ್ದಕ್ಕೆ ಶಂಕರಮ್ಮ ತನ್ನ ಜುಟ್ಟು ಹಿಡಿದು ಕೆಳಕ್ಕೆ ತಳ್ಳಿದಾಗ ರವಣಮ್ಮ, ಪಾರ್ವತಮ್ಮ, ಹಿಡಿದುಕೊಂಡಾಗ ಲಾವಣ್ಯ ರವರು ತನಗೆ ಹೊಡೆದಿದ್ದು, ರವಿಕುಮಾರ್, ಅರುಣ್ ಕುಮಾರ್, ರಾಜ್ ಕುಮಾರ್ ರವರು ಸಹ ತನಗೆ ಬೈದು ಹೊಡೆಯಲು ಬಂದಾಗ ತನ್ನ ಗಂಡ ಆನಂದ, ತಮ್ಮ ಗ್ರಾಮದ ವಾಸಿಗಳಾದ ಅರುಣಮ್ಮ, ವೆಂಕಟೇಶ್ ಎಂಬುವರು ಬಂದು ಜಗಳ ಬಿಡಿಸಿದರು ತನಗೆ ಮೈಕೈ ನೋವು ಜಾಸ್ತಿ ಆಗಿದ್ದರಿಂದ ತನ್ನ ಚಿಕ್ಕಪ್ಪನ ಮಗನಾದ ವೆಂಕಟೇಶ ರವರೊಂದಿಗೆ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದು, ಅಲ್ಲಿನ ವೈದ್ಯರು  ಚಿಂತಾಮಣಿ  ಸರ್ಕಾರಿ ಆಸ್ಪತ್ರೆಗೆ ಹೋಗಲು ತಿಳಿಸಿದ್ದು, ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಬಂದು ಚಿಕಿತ್ಸೆಗಾಗಿ ದಾಖಲಾಗಿರುತ್ತೇವೆ. ಆದ್ದರಿಂದ ತನ್ನ ಮೇಲೆ ಗಲಾಟೆಗೆ ಬಂದ ಮೇಲ್ಕಂಡವರನ್ನು ಠಾಣೆಗೆ ಕರೆಯಿಸಿ ತಮ್ಮ ತಂಟೆಗೆ ಬಾರದಂತೆ ಸೂಕ್ತ ಬಂದೋಬಸ್ತ್ ಪಡಿಸಲು ಕೋರಿದ್ದರ ಮೇರೆಗೆ ಸದರಿ ಅರ್ಜಿಯಲ್ಲಿ ಅಸಂಜ್ಞೇಯ ಅಂಶಗಳು ಇರುವುದರಿಂದ ಠಾಣಾ ಎನ್.ಸಿ.ಆರ್ ಸಂಖ್ಯೆ 106/2021 ರಂತೆ ದಾಖಲು ಮಾಡಿರುತ್ತೆ. ಆದ್ದರಿಂದ ಘನ ನ್ಯಾಯಾಲಯವು ಎನ್.ಸಿ.ಆರ್. ಸಂಖ್ಯೆ 106/2021 ಪ್ರಕರಣದಲ್ಲಿ ಪ್ರತಿವಾದಿಗಳ ವಿರುದ್ದ ಸಂಜ್ಷೇಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡಿದ್ದು ಅದರಂತೆ ಠಾಣಾ ಮೊ.ಸಂ 100/2021 ಕಲಂ 143,323,504 ರೆ/ವಿ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುವುದಾಗಿರುತ್ತೆ.

 

10. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.120/2021 ಕಲಂ. 32(3),15(A) ಕೆ.ಇ ಆಕ್ಟ್:-

     ದಿನಾಂಕ:22-09-2021 ರಂದು ಮದ್ಯಾಹ್ನ 1-30 ಗಂಟೆಯಲ್ಲಿ ಸಿಬ್ಬಂದಿಯವರಾದ   ಪಿ.ಸಿ. 556 ಧರಣೇಶ್, ಹೆಚ್.ಸಿ 61 ಶ್ರೀನಿವಾಸ ಮತ್ತು ಜೀಪು ಚಾಲಕ ಅಂಬರೀಶ ರವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ನಗರದ ರೇಷ್ಮೇ ಇಲಾಖೆ ಕಚೇರಿಯ ಮುಂಭಾಗ ಖಾಲಿ ಜಾಗದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ಪಂಚಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 1-45 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ಇಬ್ಬರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವ ಆಸಾಮಿಯನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸ ಕೇಳಲಾಗಿ  ಪಿಳ್ಳ ಮುನಿಯಮ್ಮ ಕೊಂ ಲೇಟ್ ಕೃಷ್ಣಪ್ಪ 65 ವರ್ಷ, ನಾಯಕರು, ಕೂಲಿ ಕೆಲಸ ವಾಸ:ಡಬರಗಾನಹಳ್ಳಿ ಗ್ರಾಮ, ಆನೂರು ಪಂಚಾಯ್ತಿ ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಇವರು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು ಬ್ಯಾಗ್ನಲ್ಲಿ ಪರಿಶೀಲಿಸಲಾಗಿ ಖಂಎಂ ಘಊಖಏಙ 90 ಒಐ ನ 17 ಮದ್ಯದ ಪಾಕೆಟ್ ಗಳಿದ್ದು ಒಂದರ ಬೆಲೆ 35.13 ರೂಗಳಾಗಿದ್ದು, 17 ರ ಬೆಲೆ ಒಟ್ಟು 597/- ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ ಖಂಎಂ ಘಊಖಏಙ ನ 02 ಖಾಲಿ ಮದ್ಯದ ಪಾಕೇಟ್ಗಳಿರುತ್ತೆ. ಹಾಗೂ 02 ಪ್ಲಾಸ್ಟಿಕ್ ಗ್ಲಾಸ್ಗಳಿರುತ್ತೆ. ಇವುಗಳನ್ನು ಮುಂದಿನ ತನಿಖೆ ಬಗ್ಗೆ ಪಂಚರ ಸಮಕ್ಷಮ ಮದ್ಯಾಹ್ನ 1-50 ಗಂಟೆಂಯಿಂದ ಮದ್ಯಾಹ್ನ 2-20 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಮೇಲ್ಕಂಡ ಆಸಾಮಿಯನ್ನು ವಶಕ್ಕೆ ಪಡೆದು ಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ: 120/2021 ಕಲಂ: 32(3), 15(ಎ) ಕೆ.ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 23-09-2021 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080