ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.116/2021 ಕಲಂ. 87 ಕೆ.ಪಿ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರಿ.ಆರ್.ನಾರಾಯಣಸ್ವಾಮಿ ಆದ ನಾನು  ನಿವೇದಿಸಿಕೊಳ್ಳು ವುದೇನೆಂದರೆ, ಈ ದಿನ ದಿನಾಂಕ:21/08/2021 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ವೇಗಲಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಠಾಣೆಯಲ್ಲಿದ್ದ ಸಿಬ್ಬಂದಿಯವರಾದ  ಹೆಚ್ ಸಿ -36  ಶ್ರೀ.ವಿಜಯ್ ಕುಮಾರ್, ಹೆಚ್.ಸಿ 139 ಶ್ರೀ.ಶ್ರೀನಾಥ ಎಂ.ಪಿ, ಪಿ.ಸಿ 416 ಸಚಿನ್ ಕುಮಾರ್, ಪಿ.ಸಿ 415 ಪರಸಪ್ಪತ್ಯಾಗರ್ಥಿ ಪಿಸಿ 262 ಅಂಬರೀಶ್ ಹಾಗೂ ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಮತ್ತು ದ್ವಿಚಕ್ರ ವಾಹನಗಳಲ್ಲಿ ವೇಗಲಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ನಾನು ಮತ್ತು ಸಿಬ್ಬಂದಿಯವರು ವೇಗಲಹಳ್ಳಿ ಗ್ರಾಮದ ಕೆರೆಯ ಅಂಗಳಕ್ಕೆ ಮಧ್ಯಾಹ್ನ 3-30 ಗಂಟೆಗೆ ಹೋಗಿ ದೂರದಲ್ಲಿ ಜೀಪ್ ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಜಾಲಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಕೆರೆಯ ಅಂಗಳದಲ್ಲಿ ಇರುವ ಜಾಲಿ ಮರದ ಕೆಳಗಡೆ ಗುಂಪಾಗಿ ವೃತ್ತಾಕಾರವಾಗಿ ಕುಳಿತು ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸದರಿಯವರನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಎಲ್ಲಿಯೂ ಹೋಗದಂತೆ ಸೂಚಿಸಿದಾಗ  ಅಲ್ಲಿದ್ದ ಆಸಾಮಿಗಳು ಓಡಿ ಹೋಗಲು ಯತ್ನಿಸಿದ್ದು ಸದರಿಯವರುಗಳನ್ನು ಸಿಬ್ಬಂದಿಯ ಸಹಾಯದಿಂದ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸಗಳನ್ನು ವಿಚಾರಿಸಲಾಗಿ 1) ಶ್ರೀ.ವೆಂಕಟೇಶ್ ಬಿನ್ ಲೇಟ್ ಗುರ್ರಪ್ಪ 40 ವರ್ಷ,ಬೋವಿ ಜನಾಂಗ,ಗಾರೆಕೆಲಸ,ವಾಸ ವೇಗಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು 9177616409 2) ಶ್ರೀ.ರಾಜಣ್ಣ ಬಿನ್ ಲೇಟ್ ಸುಬ್ಬನ್ನ,45 ವರ್ಷ,ಭೋವಿ ಜನಾಂಗ,ಕೂಲಿಕೆಲಸ,ವಾಸ ವೇಗಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ,ನಂ-8748948468 3) ರವಣಪ್ಪ ಬಿನ್ ಶ್ರೀನಿವಾಸ್ 29 ವರ್ಷ,ಬೋವಿ ಜನಾಂಗ,ಗಾರೆ ಮೇಸ್ಟ್ರೀ ಕೆಲಸ,ವಾಸ- ವೇಗಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ.ನಂ-9611908154 4) ರಾಜಣ್ಣ ಬಿನ್ ಲೇಟ್ ಪೆದ್ದನ್ನ 45 ವರ್ಷ,ಭೋವಿ ಜನಾಂಗ,ಗಾರೆಕೆಲಸ,ವಾಸ- ವೇಗಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲುಕು ಮೊ.ನಂ 9980537164 ಎಂದು ತಿಳಿಸಿದ್ದು ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಬಿಳಿ ಗೋಣಿಚೀಲವನ್ನು ನೆಲದಲ್ಲಿ ಹಾಸಿದ್ದು, ಸದರಿ ಗೋಣಿಚೀಲದ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆಗಳು ಇದ್ದು, ಅವುಗಳನ್ನು  ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 3250 ರೂಗಳಿದ್ದು ಇಸ್ಪೀಟ್ ಜೂಜಾಟ ಆಡುತ್ತಿದ್ದ ಇಬ್ಬರು ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, ಅವರು ಇಸ್ಪೀಟ್ ಜೂಜಾಟಕ್ಕೆ ಪಣವಾಗಿಟ್ಟಿದ್ದ, 3250/- ರೂಗಳ ನಗದು ಹಣವನ್ನು, ಒಂದು ಗೋಣಿಚೀಲ ಹಾಗೂ 52 ಇಸ್ಟೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಮಧ್ಯಾಹ್ನ 3-45 ಗಂಟೆಯಿಂದ ಸಂಜೆ 4-30 ಗಂಟೆಯವರೆಗೆ ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಠಾಣೆಗೆ ಸಂಜೆ 5-00 ಗಂಟೆಗೆ ಠಾಣೆಗೆ ವಾಪಸ್ ಬಂದು ಸ್ವತಃ ವರದಿಯ ಮೇರೆಗೆ ಠಾಣೆಯ ಎನ್ ಸಿ ಆರ್ ನಂ: 156/2021 ರಂತೆ ದಾಖಲಿಸಿಕೊಂಡು ನಂತರ ಆರೋಪಿಗಳು ಮತ್ತು ಮಾಲಿನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲುಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ರವಾನಿಸಿಕೊಂಡು ಈ ದಿನ ದಿನಾಂಕ 22/08/2021 ರಂದು ಮಧ್ಯಾಹ್ನ 12-30 ಗಂಟೆಗೆ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣಾ ಮೊ.ಸಂ 115/2021 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.117/2021 ಕಲಂ. 15(A),32(3) ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ.ವೆಂಕಟರವಣಪ್ಪ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:23/08/2021 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಠಾಣಾ ವ್ಯಾಪ್ತಿಯ ದಿಗವಕೋಟೆ ಗ್ರಾಮದ ವಾಸಿಯಾದ ನಾಗಮ್ಮ ಕೋಂ ನಾರಾಯಣಸ್ವಾಮಿ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಠಾಣೆಯ ಸಿಪಿಸಿ 101 ಶ್ರೀನಿವಾಸ ರವರೊಂದಿಗೆ ದಿಗವಕೋಟೆ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಬೆಳಿಗ್ಗೆ 11-00 ಗಂಟೆಗೆ ನಾವು ಪಂಚಾಯ್ತಿದಾರರೊಂದಿಗೆ ದಿಗವಕೋಟೆ ಗ್ರಾಮದ ವಾಸಿ ನಾಗಮ್ಮ ಕೋಂ ನಾರಾಯಣಸ್ವಾಮಿ ರವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಶ್ರೀ.ನಾಗಮ್ಮ ಕೋಂ ನಾರಾಯಣಸ್ವಾಮಿ 50 ವರ್ಷ ಆದಿಕರ್ನಾಟಕ ಜನಾಂಗ ಚಿಲ್ಲರೆ ಅಂಗಡಿ ವ್ಯಾಪಾರ ವಾಸ ದಿಗವಕೋಟೆ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ನಂತರ ಸದರಿ ಆಸಾಮಿಯ ಯಾವುದೇ ಪರವಾನಿಗೆಯನ್ನು ಹೊಂದಿರದೇ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಕಂಡು ಬಂದಿದ್ದು ಸದರಿ ಸ್ಥಳದಲ್ಲಿ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ನೋಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿದ್ದರಿಂದ  ಸದರಿಯವುಗಳನ್ನು ಪರಿಶೀಲಿಸಲಾಗಿ 90 ಎಂ.ಎಲ್ ಸಾಮರ್ಥ್ಯದ 10 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು ಅವುಗಳ ಒಟ್ಟು ಮೌಲ್ಯ 351.03 ರೂಗಳ 900 ಎಂ.ಎಲ್ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು, 2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಒಂದು ಲೀಟರ್ ಸಾಮರ್ಥ್ಯದ ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಬೆಳಿಗ್ಗೆ 11-15  ಗಂಟೆಯಿಂದ ಮಧ್ಯಾಹ್ನ 12-00 ಗಂಟೆಯವರೆಗೆ ಕೈಗೊಂಡ ಪಂಚನಾಮೆ ಮುಖಾಂತರ ಅಮಾನತ್ತುಪಡಿಸಿಕೊಂಡಿದ್ದು ನಂತರ ಅದೇ ಗ್ರಾಮದ ವಾಸಿಯಾದ ಪ್ರಸಾದ್ ಬಿನ್ ಲೇಟ್ ವೆಂಕಟಗಿರಿಯಪ್ಪ ರವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಮಾಹಿತಿಯ ಮೇರೆಗೆ ಸದರಿ ಸ್ಥಳದ ಮೇಲೆ ದಾಳಿ ಮಾಡಿ ಪಂಚನಾಮೆ ಕ್ರಮ ಕೈಗೊಂಡು  ನಂತರ ಮಧ್ಯಾಹ್ನ 02-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಸ್ವತಃ ವರದಿಯ ಮೇರೆಗೆ ಠಾಣಾ ಮೊ.ಸಂ 117/2021 ಕಲಂ 15(ಎ) 32(3) K.E ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.367/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ: 23/08/2021 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾಧಿದಾರರಾದ ಮುನಿರಾಜು ಬಿನ್ ಮುನಿಯಪ್ಪ, 48 ವರ್ಷ, ಜಿರಾಯ್ತಿ, ಬೋವಿ ಜನಾಂಗ, ಗಾಜಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಇಬ್ಬರು ಮಕ್ಕಳಿದ್ದು, ಮೊದಲನೆ ನವೀನ್ ಕುಮಾರ್, ಎರಡನೇ ನಾರಾಯಣಸ್ವಾಮಿ ರವರಾಗಿರುತ್ತಾರೆ. ತನ್ನ ಮಗನಾದ ನಾರಾಯಣಸ್ವಾಮಿ ರವರಿಗೆ 19 ವರ್ಷ ವಯಸ್ಸಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ. ತಮ್ಮ ಗ್ರಾಮದ ವಾಸಿ ಚೌಡಪ್ಪ ಬಿನ್ ಲೇಟ್ ಮುನಿವೆಂಕಟಪ್ಪ ರವರು ಕಲ್ಲು ಬಂಡೆ/ಚಪ್ಪಡಿಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದು ದಿನಾಂಕ 22/08/2021 ರಂದು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ಮೇಲ್ಕಂಡ ಚೌಡಪ್ಪ ರವರು ಅವರ ನೊಂದಣಿ ಸಂಖ್ಯೆ ಇಲ್ಲದ ಟ್ರಾಕ್ಟರ್ ನಲ್ಲಿ ಕಲ್ಲು ಚಪ್ಪಡಿಗಳನ್ನು ಕೈವಾರ ಗ್ರಾಮದಲ್ಲಿ ಅನ್ಲೋಡ್ ಮಾಡಿ ಬರೋಣವೆಂದು ತನ್ನ ಮಗನಾದ ನಾರಾಯಣಸ್ವಾಮಿ ರವರನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋದರು. ನಂತರ ಸಂಜೆ ಸುಮಾರು 7.45 ಗಂಟೆ ಸಮಯದಲ್ಲಿ ಮೇಲ್ಕಂಡ ಚೌಡಪ್ಪ ರವರು ತನಗೆ ಕರೆ ಮಾಡಿ ನಮ್ಮ ಟ್ರಾಕ್ಟರ್ ಗೆ ಬೆಂಗಳೂರು-ಕಡಪ ರಸ್ತೆಯ ಕೆಂದನಹಳ್ಳಿ ಗೇಟ್ ಬಳಿ ಅಪಘಾತವಾಗಿದ್ದು ನಿಮ್ಮ ಮಗನಿಗೆ ಗಾಯಗಳಾಗಿದ್ದು ಆತನನ್ನು ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿ ಹೇಳಿದರು. ತಾನು ಕೂಡಲೇ ಚಿಂತಾಮಣಿ ಸರ್ಕಾರಿ ಆಸ್ವತ್ರೆ ಬಳಿ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ತನ್ನ ಮಗ ನಾರಾಯಣಸ್ವಾಮಿ ರವರಿಗೆ ಎದೆಯ ಬಲ ಭಾಗದ ಮೇಲೆ ಊತ ಗಾಯವಾಗಿರುತ್ತೆ. ನಂತರ ತನ್ನ ಮಗ ನಾರಾಯಣಸ್ವಾಮಿ ರವರನ್ನು ಕುರಿತು ಸದರಿ ಅಪಘಾತದ ಬಗ್ಗೆ ವಿಚಾರಿಸಲಾಗಿ ಆತನು ಈ ದಿನ ಸಂಜೆ 7.30 ಗಂಟೆ ಸಮಯದಲ್ಲಿ ನಾನು, ನಮ್ಮ ಗ್ರಾಮದ ವಾಸಿಗಳಾದ ಆನಂದ, ರವಿ, ಸುರೇಶ ರವರು ನಮ್ಮ ಗ್ರಾಮದ ಚೌಡಪ್ಪ ರವರ ಜೊತೆ ಅವರ ಟ್ರಾಕ್ಟರ್ ನಲ್ಲಿ ಕಲ್ಲು ಬಂಡೆಗಳನ್ನು ಕೈವಾರ ಗ್ರಾಮದಲ್ಲಿ ಅನ್ಲೋಡ್ ಮಾಡಿ ವಾಪಸ್ಸು ನಮ್ಮ ಗ್ರಾಮಕ್ಕೆ ಬರುವ ಸಲುವಾಗಿ ಸುರೇಶ ರವರು ಟ್ರಾಕ್ಟರ್ ಅನ್ನು ಚಾಲನೆ ಮಾಡುತ್ತಿದ್ದು ಟ್ರಾಕ್ಟರ್ ನ ಟ್ರಾಲಿಯಲ್ಲಿ ನಾನು, ರವಿ, ಆನಂದ ಮತ್ತು ಚೌಡಪ್ಪ ರವರು ಕುಳಿತುಕೊಂಡು ಬೆಂಗಳೂರು- ಕಡಪ ರಸ್ತೆಯ ಕೆಂದನಹಳ್ಳಿ ಗೇಟ್ ಬಳಿ ಬರುತ್ತಿದ್ದಾಗ ನಮ್ಮ ಹಿಂಬದಿಯಿಂದ ಅಂದರೆ ಬೆಂಗಳೂರು ಕಡೆಯಿಂದ ಬಂದ ಕೆಎ-04 ಎಂಎಸ್-3547 ನೊಂದಣಿ ಸಂಖ್ಯೆಯ ಡಸ್ಟರ್ ಕಾರ್ ನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಟ್ರಾಕ್ಟರ್ ಟ್ರಾಲಿಯ ಹಿಂಬದಿಗೆ ಡಿಕ್ಕಿ ಹೊಡೆಸಿದ್ದು ಆಗ ನಾನು ಟ್ರಾಲಿಯ ಮುಂದಿನ ಡೋರ್ ಗೆ ಹೋಗಿ ಬಿದ್ದಿದ್ದು ನನ್ನ ಎದೆಯ ಬಲ ಬಾಗಕ್ಕೆ ಊತ ಗಾಯವಾಗಿರುತ್ತೆ. ಸದರಿ ಅಪಘಾತದಲ್ಲಿ ಟ್ರಾಕ್ಟರ್ ನ ಟ್ರಾಲಿ ಮತ್ತು ಕಾರು ಜಖಂ ಆಗಿರುವುದಾಗಿ ತಿಳಿಸಿದನು. ಹಾಲಿ ನಾರಾಯಣಸ್ವಾಮಿ ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಾನು ಇದುವರೆಗೂ ಆಸ್ವತ್ರೆಯಲ್ಲಿ ನಾರಾಯಣಸ್ವಾಮಿ ರವರ ಹಾರೈಕೆ ಮಾಡುತ್ತಿದ್ದು ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿರುತ್ತೇನೆ. ಆದ್ದರಿಂದ ನಾರಾಯಣಸ್ವಾಮಿ ರವರಿಗೆ ಅಪಘಾತ ಪಡಿಸಿದ ಮೇಲ್ಕಂಡ ಕೆಎ-04 ಎಂಎಸ್-3547 ನೊಂದಣಿ ಸಂಖ್ಯೆಯ ಡಸ್ಟರ್ ಕಾರ್ ನ ಚಾಲಕ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.114/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:22/08/2021 ರಂದು ಮಧ್ಯಾಹ್ನ 12-30 ಗಂಟೆಯ ಸಮಯದಲ್ಲಿ  ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಮಾಹಿತಿ ಏನೆಂದರೆ  ದಿಬ್ಬೂರಹಳ್ಳಿ ಪೊಲೀಸ್ ಠಾಣಾ ಸರಹದ್ದು ಪೂಸಗಾನದೊಡ್ಡಿ  ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿಯು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಆದರಂತೆ ಠಾಣೆಯ ಸಿಬ್ಬಂದಿಯಾದ ಸಿ.ಪಿ.ಸಿ 91 ಮಂಜುನಾಥ ರವರನ್ನು ಜೀಪ್ ಚಾಲಕರಾಗಿ ಹಾಗೂ  ಸಿ.ಹೆಚ್.ಸಿ 22 ಶ್ರೀಮತಿ ಲಕ್ಷ್ಮೀ ರವರನ್ನು ಕರೆದುಕೊಂಡು ಮಧ್ಯಾಹ್ನ 13-00 ಗಂಟೆಗೆ  ಪೂಸಗಾನದೊಡ್ಡಿ ಗ್ರಾಮದ ಬಳಿ ಹೋಗಿ ಮಾಹಿತಿದಾರರಿಂದ ಆಸಾಮಿಯ ಮತ್ತು ಸ್ಥಳದ ಬಗ್ಗೆ ಪುನಃ ಮಾಹಿತಿಯನ್ನು ಪಡೆದುಕೊಂಡು ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಸದರಿ ಆಸಾಮಿಯ ಮೇಲೆ ದಾಳಿ ಮಾಡುವ ವಿಚಾರವನ್ನು ತಿಳಿಸಿ ಪಂಚರಾಗಿರಲು ಕೋರಿದರ ಮೇರೆಗೆ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ಪಂಚರೊಂದಿಗೆ ಪೂಸಗಾನದೊಡ್ಡಿ ಗ್ರಾಮದ  ಸಾಲೆಮ್ಮ ಕೊಂ ಲೇಟ್ ವೆಂಕಟರವಣಪ್ಪ ರವರ ಅಂಗಡಿಯ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಸಾಲೆಮ್ಮ ಕೊಂ ಲೇಟ್ ವೆಂಕಟರವಣಪ್ಪ ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿದ್ದು ಸದರಿ ಆಸಾಮಿಯ ಮೇಲೆ ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ಅಷ್ಟರಲ್ಲಿ ಅಂಗಡಿಯ ಬಳಿಗೆ  ಗ್ರಾಮಸ್ಥರು ಸೇರಿದ್ದು ಗ್ರಾಮಸ್ಥರನ್ನು ವಿಚಾರಣೆ ಮಾಡುತ್ತಿದ್ದಾಗ ಜನರ ಮಧ್ಯದಲ್ಲಿದ್ದ ಅಂಗಡಿಯ ಮಾಲೀಕಳಾದ ಸಾಲೆಮ್ಮ ಕೊಂ ಲೇಟ್ ವೆಂಕಟರವಣಪ್ಪ ರವರು ಸಹ ಅಲ್ಲಿಂದ ಪರಾರಿಯಾಗಿರುತ್ತಾರೆ. ನಂತರ ಆಕೆಯ  ಹೆಸರು ಮತ್ತು ಪೂರ್ಣ ವಿಳಾಸವನ್ನು ತಿಳಿಯಲಾಗಿ ಸಾಲೆಮ್ಮ ಕೊಂ ಲೇಟ್ ವೆಂಕಟರವಣಪ್ಪ, 50 ವರ್ಷ, ಬೋವಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಪೂಸಗಾನದೊಡ್ಡಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಪೋನ್ ನಂಬರ್:7760653592 ಎಂತ ತಿಳಿದು ಬಂದಿರುತ್ತೆ. ನಂತರ ಪಂಚರ ಸಮಕ್ಷಮ ಅಂಗಡಿ ಮುಂಭಾಗದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ,ಎಲ್ ನ ORIGINAL CHOICE DELUX WHISKYಯ  15 ಮಧ್ಯ ತುಂಬಿದ ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು 1350 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 526.95 ರೂ ಆಗಿದ್ದು  ಸದರಿ ಮಧ್ಯ ತುಂಬಿದ ಪ್ಯಾಕೇಟ್ ಗಳನ್ನು ಮತ್ತು ಸ್ಥಳದಲ್ಲಿಯೇ ಬಿದಿದ್ದ  1 ಖಾಲಿ 90 ಎಂ,ಲ್, ನ  ORIGINAL CHOICE DELUX WHISKYಯ ಟೆಟ್ರಾ ಪ್ಯಾಕೇಟ್ ನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಮತ್ತು ಒಂದು ಲೀಟರ್ ನ ಖಾಲಿ ವಾಟರ್ ಬಾಟೆಲ್ ನ್ನು ಮಧ್ಯಾಹ್ನ 13-45  ಗಂಟೆಯಿಂದ ಮಧ್ಯಾಹ್ನ 14-15  ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಾಲು ಮತ್ತು ಪಂಚನಾಮೆ,ಆಸಾಮಿಯೊಂದಿಗೆ ಮಧ್ಯಾಹ್ನ 15-00  ಗಂಟೆಗೆ  ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಸ್ವತಃ ಮೊ.ಸಂಖ್ಯೆ:114/2021 ಕಲಂ:15(A),32(3) K,E ACT ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

5. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.194/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 19/08/2021 ರಂದು ಸಂಜೆ 6-30 ಗಂಟೆಗೆ ಪಿರ್ಯಾಧಿ ಶ್ರೀ ಮಂಜುನಾಥ ಡಿ. ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೆರೆಸಂದ್ರ ಪೊಲೀಸ್ ಠಾಣೆ ರವರು ಸಂಜೆ 6-30 ಗಂಟೆಗೆ ಠಾಣೆಗೆ ಹಾಜರಾಗಿ ಮಾಲಿನಿನೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:19/08/2021 ರಂದು ಸಂಜೆ 04-00 ಗಂಟೆಯ ಸಮಯದಲ್ಲಿ  ನಾನು ಪೆರೆಸಂದ್ರ ಪೊಲೀಸ್ ಠಾಣೆಯಲ್ಲಿರುವಾಗ ನನಗೆ ಠಾಣಾ ಹೆಚ್.ಸಿ. 253 ಶ್ರೀ ಬಾಬಾಜಾನ್ ರವರು ತಿಳಿಸಿದ್ದೇನೆಂದರೆ ಬಾತ್ಮೀದಾರರರಿಂದ ಚಿಕ್ಕಬಳ್ಳಾಪುರ ತಾಲ್ಲೂಕು ಚಿಕ್ಕ ಅರೂರು ಗ್ರಾಮದ ನಾರಾಯಣಪ್ಪ ಬಿನ್ ಲೇಟ್ ದೊಡ್ಡಮುನಿಯಪ್ಪ  ರವರು ಅವರ ಚಿಲ್ಲರೆ ಅಂಗಡಿಯ ಬಳಿ ಯಾವುದೇ ರೀತಿಯ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿರುತ್ತೆಂದು ತಿಳಿಸಿದ್ದರ ಮೇರೆಗೆ ನಾನು ಮತ್ತು ಹೆಚ್.ಸಿ 59 ಶ್ರೀನಿವಾಸ ಹಾಗೂ ಜೀಪ್ ಚಾಲಕ ಶ್ರೀ ಮಧುಕುಮಾರ್ ರವರೊಂದಿಗೆ ಕೆಎ40-ಜಿ-1777 ರ ಸಕರ್ಾರಿ ಪೊಲಿಸ್ ಜೀಪಿನಲ್ಲಿ ಚಿಕ್ಕರೂರು ಗ್ರಾಮದ ಆಟೋ ನಿಲ್ದಾಣದ ಬಳಿ ಸಂಜೆ 4-15 ಗಂಟೆಗೆ ಹೋಗಿ ಅಲ್ಲಿಯೇ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ನಾರಾಯಣಪ್ಪ ಬಿನ್ ಲೇಟ್ ದೊಡ್ಡಮುನಿಯಪ್ಪ  ರವರ ಚಿಲ್ಲರೆ ಅಂಗಡಿ ಬಳಿಯಿಂದ  ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ನಾರಾಯಣಪ್ಪ ಬಿನ್ ಲೇಟ್ ದೊಡ್ಡಮುನಿಯಪ್ಪ  ರವರ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುಮತಿ ನೀಡಿ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಕಂಡುಬಂದಿದ್ದು, ಸದರಿ ಸ್ಥಳಕ್ಕೆ ನಾವುಗಳು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಅಲ್ಲಿದ್ದ ಮದ್ಯ ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸಾರ್ವಜನಿಕರಿಗೆ  ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರವ ಸದರಿ ಚಿಲ್ಲರೆ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ನಾರಾಯಣಪ್ಪ ಬಿನ್ ಲೇಟ್ ದೊಡ್ಡಮುನಿಯಪ್ಪ  63 ವರ್ಷ, ಎಕೆ ಜನಾಂಗ ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಚಿಕ್ಕ ಅರೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು, ಮದ್ಯಪಾನ ಸೇವೆನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದಕ್ಕೆ ಅನುಮತಿ ಪಡೆದಿರುವ ಲೈಸನ್ಸ್ ತೋರಿಸುವಂತೆ ಕೇಳಲಾಗಿ ಸದರಿಯವರು ಯಾವುದೇ ರೀತಿಯ ಲೈಸನ್ಸ್ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ಸ್ಥಳದಲ್ಲಿ ಹೈವಾರ್ಡ್ಸ್ ಚೀಯರ್ಸ್ ವಿಸ್ಕಿಯ 90 ಎಂ.ಎಲ್ ನ 11 ಮದ್ಯದ ಟೆಟ್ರಾ ಪ್ಯಾಕೇಟ್ಗಳು ಇದ್ದವು. 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಬಿದ್ದಿದ್ದು, ಮದ್ಯವನ್ನು ಕುಡಿದು ಬಿಸಾಕಿದ್ದ 2 ಪ್ಲಾಸ್ಟಿಕ್ ಗ್ಲಾಸುಗಳು ಅಲ್ಲಿಯೇ ಪಕ್ಕದಲ್ಲಿಯೇ ಒಂದು ಲೀಟರ್ ನ ಪ್ಲಾಸ್ಟಿಕ್ ವಾಟರ್ ಬಾಟಲ್ ಇದ್ದು, ಅದರಲ್ಲಿದ್ದ ನೀರು ಕೆಳಗಡೆಗೆ ಚೆಲ್ಲಿತ್ತು, ಮದ್ಯವಿರು ಪ್ಯಾಕೇಟ್ ಗಳ ಒಟ್ಟು ಬೆಲೆ 35.13*11 = 386 ರೂಗಳು (990 ಎಂ.ಎಲ್) ಆಗಿರುತ್ತದೆ. ಸದರಿ ಮೇಲ್ಕಂಡ 11 ಮದ್ಯದ ಟೆಟ್ರಾ ಪ್ಯಾಕೇಟ್ಗಳನ್ನು, 2 ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು  ಹಾಗೂ 2 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಪ್ಲಾಸ್ಟಿಕ್ ವಾಟರ್ ಬಾಟಲ್ನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 4-30 ಗಂಟೆಯಿಂದ ಸಂಜೆ 5-30 ಘಂಟೆಯವರೆಗೆ ಪಂಚನಾಮೆ ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮೇಲ್ಕಂಡ ನಾರಾಯಣಪ್ಪ ಬಿನ್ ಲೇಟ್ ದೊಡ್ಡಮುನಿಯಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಸಂಜೆ 6-00 ಘಂಟೆಗೆ ಠಾಣೆಗೆ ಬಂದು ಸಂಜೆ 6-30 ಗಂಟೆಗೆ ವರಧಿಯನ್ನು ಸಿದ್ದಪಡಿಸಿ ಮೇಲ್ಕಂಡ ಆರೋಪಿ, ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ ದೂರಾಗಿರುತ್ತೆ.

 

6. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.195/2021 ಕಲಂ. 324,341,504 ಐ.ಪಿ.ಸಿ:-

     ದಿನಾಂಕ 22/08/2021 ರಂದು ರಾತ್ರಿ 7-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರತ್ನಮ್ಮ ಕೊಂ ರಾಮಚಂದ್ರಪ್ಪ, 45 ವಷರ್, ಬೋವಿ, ಕೂಲಿ ಕೆಲಸ, ವಾಸ ರಾಮಸ್ವಾಮಿಪಲ್ಲಿ  ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ  ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಜೀರಾಯ್ತಿ , ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದು , ದಿನಾಂಕ 19/08/2021 ರಂದು  ಬೆಳಿಗ್ಗೆ ಸುಮಾರುಯ 8-30 ಗಂಟೆ ಸಮಯದಲ್ಲಿ ತನ್ನ ಮಗನಾದ ಗಜೆಂದ್ರ ಬಿನ್ ರಾಮಚಂದ್ರಪ್ಪ , 23 ವರ್ಷ, ರವರು ಹೂವಿನವಾರಹಳ್ಳಿ ಗ್ರಾಮದ ಮೂಲಕ ಪೆರೇಸಂದ್ರ ಗ್ರಾಮಕ್ಕೆ ಹೋಗಲು ಅಂಗನವಾಡಿ ಕೇಂದ್ರದ ಪಕ್ಕದಲ್ಲಿ ಇರುವ ತಿರುವಿನಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದಾಗ  ಯಾರಾದರೂ ಅಡ್ಡಬರಬಹುದೆಂದು ಹಾರ್ನ ಅನ್ನು  ಮಾಡಿದ್ದು, ಆ ತಿರುವಿನಲ್ಲಿ ಹೂವಿನವಾರಹಳ್ಳಿ ಗ್ರಾಮದ ವಾಸಿ ರಾಮಾಂಜಿ ಬಿನ್ ಗಂಗಪ್ಪ, 32 ವರ್ಷ, ಈತನು ತನ್ನ ಮಗನ ಬೈಕ್ ಅನ್ನು ಅಡ್ಡ ಹಾಕಿ ಹಾರ್ನ್  ಮಾಡುತ್ತೀಯಾ ನನ್ನ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆ ಕೋಲಿನಿಂದ ಹೊಡೆದು, ಇಟ್ಟಿಗೆ ಕಲ್ಲಿನಿಂದ ಹಾಕಿರುತ್ತಾನೆ. ಆಗ ಗ್ರಾಮಸ್ಥರು ನೋಡಿದ್ದು, ಸಾರ್ವಜನಿಕ ಸ್ಥಳದಲ್ಲಿ ತನ್ನ ಮಗನಿಗೆ ವಿನಾಕಾರಣ ಹೊಡೆದು ಅವಮಾನ ಮಾಡಿದ್ದರಿಂದ ತನ್ನ ಮಗ ಶುಕ್ತವಾರ ರಾತ್ರಿ ಸುಮಾರು 12-00 ಗಂಟೆ ಸಮಯದಲ್ಲಿ  ಅವಮಾನ ತಾಳಲಾರದೇ ವಿಷ ಸೇವನೆ ಮಾಡಿದ್ದು ತನ್ನ ಮಗನನ್ನು ಬೆಂಗಳೂರು ಆಸ್ಪತ್ರೆಯಲ್ಲಿ ಸೇರಿಸಿದ್ದು ಪ್ರಾಣಾಪಾಯದಲ್ಲಿ ಇರುತ್ತಾನೆ.  ಆದ್ದರಿಂದ ರಾಮಾಂಜಿ ಬಿನ್ ಗಂಗಪ್ಪ ರವರ  ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

7. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.144/2021 ಕಲಂ. 379 ಐ.ಪಿ.ಸಿ:-

     ದಿನಾಂಕ:24/08/2021 ರಂದು ಪಿರ್ಯಾದಿದಾರರಾದ ಶ್ರೀಮತಿ ಗಾಯಿತ್ರಿ ಕೋಂ ಎನ್. ಶೇಖರ್, 38 ವರ್ಷ, ಬಲಜಿಗರು, ಗೃಹಿಣಿ ವಾಸ:ಬ್ಯಾಟರಾಯನಪುರ ರಾಮನ ದೇವಸ್ಥಾನದ ಹಿಂಬದಿಯಲ್ಲಿ ಮನೆ, ಬೆಂಗಳೂರು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ನನ್ನ ಗಂಡ ಶೇಖರ್ ಹಾಗೂ ಮಗನಾದ ನಿತಿನ್ ರವರೊಂಧಿಗೆ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ತವರು ಮನೆ ಗೌರಿಬಿದನೂರು ತಾಲ್ಲೂಕು ಮುದುಗೆರೆ ಗ್ರಾಮವಾಗಿರುತ್ತದೆ.  ಆಗಾಗ ಬಂದು ಹೋಗುತ್ತಿದ್ದೆವು. ವರಲಕ್ಷ್ಮೀ ಹಬ್ಬವನ್ನು ತನ್ನ ತವರು ಮನೆಯಲ್ಲಿ ಆಚರಿಸೋಣವೆಂದು ನನ್ನ ತಂದೆ-ತಾಯಿಯವರಿಗೆ ಹೇಳಿ ನನ್ನ ಮಗನೊಂದಿಗೆ ಹಬ್ಬದ ಒಂದು ದಿನ ಮುಂಚಿತವಾಗಿ ತನ್ನ ಬಾಬತ್ತು ಬಂಗಾರದ ವಡವೆಗಳಾದ 1) ಬಂಗಾರದ 70 ಗ್ರಾಂ ತೂಕದ ಲಾಂಗ್ ಚೈನ್. 2) ಬಂಗಾರದ 60 ಗ್ರಾಂ ತೂಕದ ಚೈನಾ ಬೊಟ್ಟು, 3) ಬಂಗಾರದ 15 ಗ್ರಾಂ ಒಂದು ವಾಲೆ ವಡವೆಗಳನ್ನು ಒಟ್ಟಿಗೆ ಬಾಕ್ಸ್ ನಲ್ಲಿಟ್ಟು ಲಗೇಜ್ ಬ್ಯಾಗ್ ನೊಂದಿಗೆ ದಿನಾಂಕ:19.08.2021 ರಂದು ಸಂಜೆ 4.00 ಗಂಟೆಗೆ ಬೆಂಗಳೂರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ನನ್ನ ಮಗನಾದ ನಿತಿನ್ ನೊಂದಿಗೆ ಪ್ರಯಾಣ ಮಾಡಿಕೊಂಡು ಹೋಗಿದ್ದು ಇದೇ ದಿನ ತೊಂಡೇಬಾವಿಯ ಬಳಿ ಇಬ್ಬರು ಹೆಂಗಸರು ಚಿಕ್ಕ ಮಗುವಿನೊಂದಿಗೆ ಬಸ್ಸಿನಲ್ಲಿ ಹತ್ತಿಕೊಂಡು ನಾನಿದ್ದ ಬಳಿಗೆ ಬಂದಿದ್ದು ನಾನು ಬಸ್ಸಿನ ಸೀಟಿನಲ್ಲಿ ಕುಳಿತಿದ್ದವಳು ಮಗು ಅಳುತ್ತಿದ್ದರಿಂದ ಹೆಂಗಸಿಗೆ ನಾನು ಕುಳಿತಿದ್ದ ಬಸ್ಸಿನ ಸೀಟನ್ನು ಪೋತೇನಹಳ್ಳಿ ಬರುವಷ್ಠರಲ್ಲಿ ಆಕೆಗೆ ಬಿಟ್ಟುಕೊಟ್ಟೆನು. ನನ್ನ ಬಳಿ ಇದ್ದ ಬ್ಯಾಗನ್ನು ಸೀಟಿನ ಪಕ್ಕದಲ್ಲಿಟ್ಟುಕೊಂಡು ನಿಂತುಕೊಂಡು ಪ್ರಯಾಣ ಮಾಡಿಕೊಂಡು ಸಂಜೆ ಗೌರಿಬಿದನೂರು ಟೌನ್ ಬಸ್ಸು ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಮಾರುತಿ ಕೃಪಾ ಖಾಸಗಿ ಬಸ್ಸಿನಲ್ಲಿ ಹತ್ತಿಕೊಂಡು ನಮ್ಮೂರಿನ ಬಸ್ಸು ನಿಲ್ದಾಣಕ್ಕೆ ಹೋಗಿ ನನ್ನ ತಂದೆಯಾದ ಸಂಜೀವಪ್ಪ ರವರಿಗೆ ಕರೆ ಮಾಡಿ ನನ್ನ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ನನ್ನ ಮಗನೊಂದಿಗೆ ಮನೆಗೆ ಹೋದೆನು. ನಾನು ಬ್ಯಾಗಿನಲ್ಲಿ ವರಲಕ್ಷ್ಮೀ ಹಬ್ಬವನ್ನು ಆಚರಿಸಲು ತಂದಿದ್ದ ವಡವೆಗಳ ಬಾಕ್ಸ್ ನ್ನು ಬ್ಯಾಗಿನಲ್ಲಿ ತೆಗೆದು ನೋಡಿದಾಗ ಇರಲಿಲ್ಲ. ನಾನು ಪೋತೇನಹಳ್ಳಿಯ ಬಳಿ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ನನ್ನ ಬಳಿ ಚಿಕ್ಕಮಗುವಿನೊಂದಿಗೆ ಬಂದ ಇಬ್ಬರು ಹೆಂಗಸರು ವಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ಬಂಗಾರದ ವಡವೆಗಳು ಒಟ್ಟು 145 ಗ್ರಾಂ ತೂಕದ್ದಾಗಿದ್ದು ಇದರ ಬೆಲೆ ಸುಮಾರು ಐದು ಲಕ್ಷಗಳಾಗಿರುತ್ತವೆ. ನನ್ನ ಬಂಗಾರದ ವಡವೆಗಳನ್ನು ಗೌರಿಬಿದನೂರು ತಾಲ್ಲೂಕು ಪೋತೇನಹಳ್ಳಿ ಬಳಿ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಯಾರೋ ಇಬ್ಬರು ಅಪರಿಚಿತ ಹೆಂಗಸರು ಕಳ್ಳತನ ಮಾಡಿಕೊಂಡು ಹೋಗಿರುವವರನ್ನು ಪತ್ತೆ ಮಾಡಿ ಕೊಡಲು ಕೋರಿ ದೂರು. ಬಂಗಾರದ ವಡವೆಗಳು ಕಳ್ಳತನವಾಗಿದ್ದರಿಂದ ನನಗೆ ಬೇಜಾರಾಗಿ ಏನು ಮಾಡಬೇಕೆಂದು ತೋಚದೆ ವಾಪಸ್ಸು ತನ್ನ ಗಂಡನ ಮನೆಗೆ ಹೋಗಿ ಈ ದಿನ ತಡವಾಗಿ ದೂರನ್ನು ನೀಡಿರುವುದಾಗಿರುತ್ತೆ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.278/2021 ಕಲಂ. 427,504,506 ಐ.ಪಿ.ಸಿ:-

     ದಿನಾಂಕ:22.08.2021 ರಂದು ಸಂಜೆ 4.15 ಗಂಟೆಗೆ ಪಿರ್ಯಾದಿದಾರರಾದ ಸೊಣ್ಣಪ್ಪ ಬಿನ್ ಮಾರಪ್ಪ, 41 ವರ್ಷ, ವಕ್ಕಲಿಗರು, ಜಿರಾಯ್ತಿ, ಯಣ್ಣೂರು ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಾನು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ತಮ್ಮ ತಂದೆ ತಾಯಿಗೆ 1 ನೇ ನಾರಾಯಣಮ್ಮ, 2 ನೇ ಸುಬ್ರಮಣಿ, 3 ನೇ ಸೊಣ್ಣಪ್ಪ, 4 ನೇ ಚಂದ್ರಕಲ, 5 ನೇ ನಾಗರಾಜ ಎಂಬುವವರಾಗಿರುತ್ತೇವೆ. ಹೆಣ್ಣು ಮಕ್ಕಳಿಗೆಲ್ಲಾ ಮದುವೆಗಳಾಗಿ ಅವರ ಗಂಡನ ಮನೆಯಲ್ಲಿರುತ್ತಾರೆ. ನಾವುಗಳು ಜಮೀನುಗಳನ್ನು ವಿಭಾಗಗಳಾಗಿ ಮಾಡಿಕೊಂಡು ಜಮೀನಿನಲ್ಲಿ ಜಿರಾಯ್ತಿ ಮಾಡಿಕೊಂಡು ಇರುತ್ತೇವೆ ತನಗೂ ಹಾಗು ತನ್ನ ಅಣ್ಣನಾದ ಸುಬ್ರಮಣಿ ರವರಿಗೆ ಜಮೀನುಗಳ ಬಾಗದ ವಿಚಾರದಲ್ಲಿ ಮೊದಲಿನಿಂದಲೂ ದ್ವೇಷಗಳಿದ್ದು ತನ್ನ ಬಾಗಕ್ಕೆ ಯಣ್ಣೂರು ಗ್ರಾಮದ ಸರ್ವೆ ನಂ 8/ಪಿ11 ರಲ್ಲಿ 2 ಎಕರೆ ಜಮೀನು ಬಂದಿದ್ದು ಇನ್ನೂ ದಾಖಲೆಗಳನ್ನು ತನ್ನ ಹೆಸರಿಗೆ ಮಾಡಿಕೊಂಡಿರುವುದಿಲ್ಲ. ಸದರಿ 2 ಎಕರೆ ಜಮೀನಿನಲ್ಲಿ ಹಿಪ್ಪುನೇರೆಳೆ ಬೆಳೆಯನ್ನು ಬೆಳೆದಿದ್ದು ಹಿಪ್ಪು ನೇರಳೆ ಸೊಪ್ಪು ಕಟಾವಿಗೆ ಬಂದಿರುತ್ತೆ.      ಹೀಗಿರುವಲ್ಲಿ ದಿನಾಂಕ:18.08.2021 ರಂದು ಮದ್ಯಾಹ್ನ 1.00 ಗಂಟೆ ಸಮಯದಲ್ಲಿ ತಾನು ಮನೆಯಿಂದ ಹಿಪ್ಪು ನೇರಳೆ ಸೊಪ್ಪಿನ ತೋಟದ ಬಳಿ ಹೋದಾಗ ತೋಟದಲ್ಲಿ ತನ್ನ ಅಣ್ಣನಾದ ಸುಬ್ರಮಣಿ ಬಿನ್ ಮಾರಪ್ಪ ರವರು ತಾನು ಬೆಳೆದಿದ್ದು ಹಿಪ್ಪು ನೇರಳೆ ಸೊಪ್ಪಿಗೆ ಯಾವುದೋ ಕಳೆಯ ಔಷದಿಯನ್ನು ಹೊಡೆಯುತಿದ್ದು ತಾನು ಹೋಗಿ ಏಕೆ ತಾನು ಬೆಳೆದಿರುವ ಹಿಪ್ಪು ನೆರೆಳೆ ಸೊಪ್ಪಿಗೆ ಔಷದಿಯನ್ನು ಹೊಡೆಯುತಿದ್ದಿಯಾ ಎಂದು ಕೇಳಿದಕ್ಕೆ ಲೋಫರ್ ನನ್ನ ಮಗನೆ, ಬೋಳಿ ತನ್ನ ಮಗನೆ ಈ ಜಮೀನು ತನಗೆ ಸೇರಬೇಕು ನೀನು ಯಾರೋ ಹಿಪ್ಪು ನೇರೆಳೆ ಸೊಪ್ಪು ಬೆಳೆಯುದಕ್ಕೆ ಎಂದು ಕೆಟ್ಟ ಕೆಟ್ಟ ಮಾತುಗಳಿಂದ ಬೈದು ಕಳೆಗೆ ಹೊಡೆಯುವ ಔಷದಿಯನ್ನು ಹೊಡೆದು ತಮಗೆ ಸುಮಾರು 30000 ಸಾವಿರ ರೂ ನಷ್ಟವನ್ನುಂಟು ಮಾಡಿ ಇನ್ನೊಂದು ಸರಿ ತನ್ನ ತಂಟೆಗೆ ಬಂದರೆ ನಿನ್ನನ್ನು ಸಾಯಿಸಿ ಇದೇ ಜಮೀನಿನಲ್ಲಿ ಹೂತುಬಿಡುತ್ತೇನೆಂದು ಪ್ರಾಣಬೆದರಿಕೆ ಹಾಕಿ ಹೊರಟು ಹೋಗಿರುತ್ತಾನೆ. ನಂತರ ಅಲ್ಲಿಗೆ ಬಂದ ತಮ್ಮ ಗ್ರಾಮಸ್ಥರಾದ ಜಯಪ್ಪ ಬಿನ್ ಗವೀರಭದ್ರಪ್ಪ, ಧನಂಜಯ್ ಬಿನ್ ವೆಂಕಟೇಶಪ್ಪ ರವರುಗಳು ಬಂದು ನೋಡಿ ಗ್ರಾಮದಲ್ಲಿ ರಾಜಿ ಪಂಚನಾಯ್ತಿ ಮಾಡೋಣವೆಂದು ಹೇಳಿದ್ದು ಇಷ್ಟು ದಿನವಾದರೂ ರಾಜಿ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತಿದ್ದು ತಾನು ಬೆಳಿದಿದ್ದ ಹಿಪ್ಪುನೇರಳೆ ಸೊಪ್ಪಿಗೆ ಕಳೆಯ ಔಷದಿಯನ್ನು ಹೊಡೆದು ತನಗೆ ನಷ್ಟವನ್ನುಂಟು ಮಾಡಿರುವ ಸುಬ್ರಮಣಿ ಬಿನ್ ಮಾರಪ್ಪ ರವರ ಮೇಲೆ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.279/2021 ಕಲಂ. 506,341,34,504,323 ಐ.ಪಿ.ಸಿ:-

     ದಿನಾಂಕ:23.08.2021 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿದಾರರಾದ ಬಿ ಸಿ ಮುನಿಕೃಷ್ಣಪ್ಪ ಬಿನ್ ಲೇಟ್ ಚಿಕ್ಕಚನ್ನರಾಯಪ್ಪ, 86 ವರ್ಷ, ವಕ್ಕಲಿಗರು, ಜಿರಾಯ್ತಿ, ಭಕ್ತರಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತನಗೆ 1 ನೇ ಅಚ್ಚಮ್ಮ, 2 ನೇ ಕೆಂಪೇಗೌಡ, 3 ನೇ ಮೀನಾಕ್ಷಿ, 4 ನೇ ರಾಮಮೂರ್ತಿ, 5 ನೇ ಮುನೇಗೌಡ ಎಂಬ ಮಕ್ಕಳಿದ್ದು ಎಲ್ಲರಿಗೂ ಮದುವೆಗಳಾಗಿ ಬೇರೆ ಬೇರೆಯಾಗಿ ವಾಸವಾಗಿರುತ್ತಾರೆ. ತಾನು ತನ್ನ ಮೊದಲನೇ ಮಗನಾದ ಕೆಂಪೇಗೌಡ ರವರ ಮನೆಯಲ್ಲಿ ಮಗನೊಂದಿಗೆ ವಾಸವಾಗಿರುತ್ತೇನೆ. ನಾವುಗಳು ವಾಸವಾಗಿರುವ ಮನೆಯ ಪಕ್ಕದಲ್ಲಿ ಭಕ್ತರಹಳ್ಳಿ-ಬಸವಾಪಟ್ಟಣ ಕಡೆಗೆ ಹೋಗುವ ರಸ್ತೆಯಿಂದ ತಮ್ಮ ನಿವೇಶನಗಳಿಗೆ ಹೋಗುವ ಕಡೆಗೆ 15 ಅಡಿ ರಸ್ತೆಯಿದ್ದು ರಸ್ತೆಯ ಇನ್ನೊಂದು ಬದಿಯಲ್ಲಿ ತಮ್ಮ ಜನಾಂಗದವರೇ ಆದ ಚನ್ನಕೇಶವ ರವರ ಮನೆಯಿರುತ್ತೆ ಚನ್ನಕೇಶವ ರವರು ರಸ್ತೆಯ ಪಕ್ಕದಲ್ಲಿ ತಿಪ್ಪೆಯನ್ನು ಹಾಕಿ ಹಾಗು ಕಲ್ಲು ಕಡ್ಡಿಗಳನ್ನು ರಸ್ತೆಗೆ ಅಡ್ಡಲಾಗಿ ಹಾಕಿ ಒಡಾಡಲು ತೊಂದರೆಯನ್ನುಂಟು ಮಾಡುತ್ತಿರುತ್ತಾರೆ. ನಾವುಗಳು ಹಲವಾರು ಬಾರಿ ಹೇಳಿದರೂ ಸಹ ರಸ್ತೆಯಲ್ಲಿ ಹಸುಗಳನ್ನು ಕಟ್ಟಿಹಾಕಿ, ಕಲ್ಲು ಚಪ್ಪಡಿಗಳು, ಕಡ್ಡಿಗಳನ್ನು ಹಾಕಿ ತೊಂದರೆಯನ್ನುಂಟು ಮಾಡುತಿರುತ್ತಾರೆ. ಹೀಗಿರುವಲ್ಲಿ ದಿನಾಂಕ:20.08.2021 ರಂದು ಸಂಜೆ 5.00 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯಿಂದ ತಮ್ಮ ಗ್ರಾಮದ ಕಡೆಗೆ ಹೋಗಲು ಮನೆಯ ಪಕ್ಕದಲ್ಲಿನ ರಸ್ತೆಯಲ್ಲಿ ಹೋಗುತಿದ್ದಾಗ ಪಕ್ಕದ ಮನೆಯ ವಾಸಿಯಾದ ನಾಗವೇಣಿ ಕೋಂ ಚನ್ನಕೇಶ ರವರು ಹಸುಗಳನ್ನು ರಸ್ತೆಯಲ್ಲಿ ಕಟ್ಟಿದ್ದು ಓಡಾಡಲು ತೊಂದರೆಯಾಗುತಿದ್ದು ತಾನು ನಾಗವೇಣಿ ರವರನ್ನು ಹಸುಗಳನ್ನು ರಸ್ತೆಯಲ್ಲಿ ಕಟ್ಟುವ ಬದಲು ರಸ್ತೆಯ ಪಕ್ಕದಲ್ಲಿ ಕಟ್ಟಬಾರದಾ ಎಂದು ಹೇಳಿ ಮುಂದೆ ಹೋಗುವಷ್ಟರಲ್ಲಿ ಅಲ್ಲಿಗೆ ಬಂದ ನಾಗವೇಣಿ ಮತ್ತು ನಾಗವೇಣಿ ರವರ ಗಂಡನಾದ ಚನ್ನಕೇಶವ ಬಿನ್ ಲೇಟ್ ಚನ್ನೇಗೌಡ ರವರು ಬಂದು ರಸ್ತೆಯಲ್ಲಿ ಹೋಗುತಿದ್ದ ತನ್ನನ್ನು ಅಡ್ಡಗಟ್ಟಿ ಏನೋ ಲೋಪರ್ ತನ್ನ ಮಗನೇ, ಬೋಳಿ ತನ್ನ ಮಗನೇ ನಾವು ಎಲ್ಲಿಯಾದರು ಕಟ್ಟಿಕೊಳ್ಳುತ್ತೇವೆ ನೀನು ಯಾರೋ ಕೇಳುವುದಕ್ಕೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಜಗಳ ತೆಗೆದು ಆ ಪೈಕಿ ಚನ್ನಕೇಶವ ರವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೊವುಂಟು ಮಾಡಿ ಚನ್ನಕೇಶವ ಮತ್ತು ನಾಗವೇಣಿ ರವರು ತನ್ನನ್ನು ಕುರಿತು ನಾವುಗಳು ರಸ್ತೆಯಲ್ಲೇ ಕಟ್ಟಿಹಾಕುವುದು ಇನ್ನೊಂದು ಸಾರಿ ನೀನು ಈ ವಿಚಾರವನ್ನು ಕೇಳಿದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲವೆಂದು ಪ್ರಾಣ ಬದರಿಕೆ ಹಾಕಿ ಜಗಳ ಮಾಡುತಿದ್ದಾಗ ಅಲ್ಲಿಗೆ ಬಂದ ತಮ್ಮ ಗ್ರಾಮದ ವಾಸಿಗಳಾದ ಮುನಿಕೃಷ್ಣಪ್ಪ ಬಿನ್ ಶಂಕರಪ್ಪ, ಚನ್ನಕೇಶವ ಬಿನ್ ಮುನಿರೆಡ್ಡಿ ರವರುಗಳು ಅಡ್ಡ ಬಂದು ಜಗಳ ಬಿಡಿಸಿ ಸದರಿ ಗಲಾಟೆಗಳ ಬಗ್ಗೆ ಗ್ರಾಮದಲ್ಲಿ ನ್ಯಾಯಾ ಪಂಚಾಯ್ತಿ ಮಾಡೋಣವೆಂತ ತಿಳಿಸಿದ್ದು ಇಷ್ಟು ದಿನಗಳಾದರೂ ಮೇಲ್ಕಂಡವರುಗಳು ರಾಜಿ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತಿದ್ದು ಚನ್ನಕೇಶ ಮತ್ತು ಆತನ ಹೆಂಡತಿ ನಾಗವೇಣಿ ರವರುಗಳ ಮೇಲೆ ಕಾನೂನು ರೀತಿಯ ಕ್ರಮಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

10. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.104/2021 ಕಲಂ. 323,324,325,504,34 ಐ.ಪಿ.ಸಿ:-

     ದಿನಾಂಕ:23/08/2021 ರಂದು ಬೆಳಿಗ್ಗೆ 09-30 ಗಂಟೆಯಲ್ಲಿ ಪಿರ್ಯಾದಿ ಶಬ್ಬೀರ್ ಬಿನ್ ಎಂ ಮಹಬೂಬ್ ಸಾಬ್, ರಾಜೀವ್ ಗಾಂಧಿ ಲೇ ಔಟ್ ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ರೇಷ್ಮೇ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ:22/08/2021 ರಂದು ರಾತ್ರಿ ಸುಮಾರು 10-15 ಗಂಟೆಯಲ್ಲಿ ನಾನು ನಮ್ಮ ಮನೆಯಲ್ಲಿ ಊಟ ಮಾಡುತ್ತಿದ್ದಾಗ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಮ್ಮ ಮನೆಯ ಮುಂದೆ ಬೀದಿಯಲ್ಲಿ ಶಿವ ಮತ್ತು ನಾರಾಯಣಸ್ವಾಮಿ ರವರು ನಮ್ಮ ಮನೆಯ ಹತ್ತಿರ ಬಂದು ಏರು ದ್ವನಿಯಲ್ಲಿ  ಅವಾಚ್ಯ ಶಬ್ದಗಳಿಂದ ಯಾರನ್ನೋ ಬೈಯುತ್ತಿದ್ದರು. ಆಗ ನಾನು ಮನೆಯಿಂದ ಆಚೆ ಬಂದು ಯಾಕಪ್ಪಾ ಇಲ್ಲಿ ಗಲಾಟೆ ಮಾಡುತ್ತಿರುವುದು ಇಲ್ಲಿಂದ ಹೋಗಿ ಎಂದಿದಕ್ಕೆ ಇಬ್ಬರೂ ಏಕಾಏಕಿ ಜಗಳಕ್ಕೆ ಬಂದು ಶಿವ ರವರು ನನ್ನ ಮಗನೇ ನೀನು ಯಾರೋ ಇಲ್ಲಿಂದ ಹೋಗು ಎನ್ನುವುದಕ್ಕೆ ಎಂದು ಬೈದನು ಆಗ ನಾನು ರಸ್ತೆಯಲ್ಲಿ ಗಲಾಟೆ ಮಾಡಬೇಡಿ ಇಲ್ಲಿಂದ ಹೋಗಿ ಎಂದಿದಕ್ಕೆ ಶಿವ ಪಕ್ಕದಲ್ಲಿದ್ದ ದೊಣ್ಣೆ ಎತ್ತಿಕೊಂಡು ನನ್ನ ತಲೆಯ ಹಿಂಭಾಗ ಹೊಡೆದು ರಕ್ತ ಗಾಯ ಪಡಿಸಿದನು ನಾರಾಯಣಸ್ವಾಮಿ ಕೈ ಮುಷ್ಟಿಯಿಂದ ನನ್ನ ಮೂತಿಗೆ ಹೊಡೆದಿದ್ದರಿಂದ ನನ್ನ ಮೇಲ್ಭಾಗದ ಎರಡು ಹಲ್ಲುಗಳು ಮುರಿದು ಹೋಗಿರುತ್ತದೆ. ಆಗ ನಾನು ಕಿರುಚುಕೊಳ್ಳುತ್ತಿದ್ದಾಗ ಬೀದಿಯಲ್ಲಿರುವ ಅಶ್ವತ್ಥಮ್ಮ ಮತ್ತು ಆನಂದ ರವರು ಸ್ಥಳಕ್ಕೆ ಬಂದಾಗ ಮೇಲ್ಕಂಡವರು ನನ್ನನ್ನು ಬಿಟ್ಟು ಓಡಿ ಹೋಗಿರುತ್ತಾರೆ. ನಂತರ ಗಾಯಗೊಂಡಿದ್ದ ನನ್ನನ್ನು ಸ್ಥಳಕ್ಕೆ ಬಂದ ಅಸ್ಲಾಂ ರವರು ನನ್ನ ದ್ವಿ ಚಕ್ರ ವಾಹನದಲ್ಲಿ ನನ್ನನ್ನು ಶಿಡ್ಲಘಟ್ಟ ಸಕರ್ಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿರುತ್ತಾರೆ. ನಂತರ ನಾನು ಚಿಕಿತ್ಸೆ ಪಡೆದು ಮನೆಗೆ ಹೋಗಿರುತ್ತೇನೆ. ಆದ್ದರಿಂದ ನನ್ನ ಮೇಲೆ ವಿನಾಕಾರಣ ಗಲಾಟೆ ಮಾಡಿದ ಮೇಲ್ಕಂಡ ಶಿವ ಮತ್ತು ನಾರಾಯಣಸ್ವಾಮಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ

ಇತ್ತೀಚಿನ ನವೀಕರಣ​ : 23-08-2021 07:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080