ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.204/2021 ಕಲಂ. 78(3) ಕೆ.ಪಿ  ಆಕ್ಟ್:-

    ದಿನಾಂಕ:22/07/2021 ರಂದು ನ್ಯಾಯಾಲಯದ ಪಿಸಿ-235 ರವರು ನ್ಯಾಯಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ: 21/07/2021 ರಂದು ಬೆಳಿಗ್ಗೆ 10-00 ಗಂಟೆಗೆ ಶ್ರೀನಾಥ ಹೆಚ್ ಸಿ-212. ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ , ದಿನಾಂಕ: 21/07/2021 ರಂದು  ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಗೂಳೂರು ಹೊರ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಗೂಳೂರು ಹೋಬಳಿ, ಚನ್ನರಾಯನಪಲ್ಲಿ ಗ್ರಾಮದ ಬಳಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿ ಪಿ ಸಿ-387 ಮೋಹನ್ ಕುಮಾರ್ ರವರೊಂದಿಗೆ  ದ್ವಿಚಕ್ರ ವಾಹನದಲ್ಲಿ ಹೊರಟು ಚನ್ನರಾಯನಪಲ್ಲಿ ಗ್ರಾಮದ ಬಳಿ ಇದ್ದ  ಪಂಚಾಯ್ತಿದಾರರನ್ನು ಕರೆದುಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ, ಪಂಚರೊಂದಿಗೆ ಬೆಳಿಗ್ಗೆ 8-30 ಗಂಟೆಗೆ ಹೋಗಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ನಾವು ಮತ್ತು ಪಂಚರು ನಡೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಬಳಿ ಯಾರೋ ಒಬ್ಬ ಆಸಾಮಿ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 3500/-ರೂ.ಹಣ ಇದ್ದು,  ಆಸಾಮಿಯ ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ  ನಾಗಾರ್ಜುನ ಬಿನ್ ಚಿನ್ನಪ್ಪಯ್ಯ, 28 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ವಾಸ:  ಚನ್ನರಾಯನಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು,  ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿರುತ್ತಾನೆ. ಆತನ ಬಳಿ ಇದ್ದ ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜನಿಕರಿಂದ ಜೂಜಾಟದ ಸಮಯದಲ್ಲಿ ವಸೂಲಿ ಮಾಡಿದ ಹಣವೆಂದು ತಿಳಿಸಿರುತ್ತಾನೆ. ಪಂಚಾಯ್ತಿದಾರರ ಸಮಕ್ಷಮ ಬೆಳಿಗ್ಗೆ 8-45 ಗಂಟೆಯಿಂದ 9-35 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ, ಅಸಲು ಪಂಚನಾಮೆ, ಮಾಲು ಮತ್ತು ಆಸಾಮಿಯನ್ನು ಬೆಳಿಗ್ಗೆ 10-00  ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸಿ ಮುಂದಿನ ಕ್ರಮಜರುಗಿಸಲುಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಎನ್ ಸಿಆರ್ ನಂ-195/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 22-07-2021 ರಂದು ನ್ಯಾಯಾಲಯದ ಪಿ.ಸಿ 235 ರವರು ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.205/2021 ಕಲಂ. 78(3) ಕೆ.ಪಿ ಆಕ್ಟ್:-

    ದಿನಾಂಕ:22/07/2021 ರಂದು ಮದ್ಯಾಹ್ನ 3-30 ಗಂಟೆಗೆ ನ್ಯಾಯಾಲಯದ ಪಿಸಿ-235 ರವರು ನ್ಯಾಯಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ: 21/07/2021 ರಂದು ಬೆಳಿಗ್ಗೆ 10-45 ಗಂಟೆಗೆ  ಗೋಪಾಲರೆಡ್ಡಿ ಜಿ ಆರ್  ಪಿ.ಎಸ್.ಐ ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ  ದಿ:21-07-2021 ರಂದು ಬೆಳಿಗ್ಗೆ 9.00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ ಗೂಳೂರು ರಸ್ತೆಯಲ್ಲಿ  ಯಾರೋ ಒಬ್ಬ ಆಸಾಮಿ ಮಟ್ಕಾ ಜೂಜಾಟವಾಡುತ್ತಿರುವುದಾಗಿ  ಬಂದ ಮಾಹಿತಿ ಮೇರೆಗೆ  ಸಿಬ್ಬಂದಿಗಳಾದ ಪಿ.ಸಿ-214 ಅಶೋಕ ಮತ್ತು ಜೀಪ್ ಚಾಲಕ ಎಹೆಚ್ ಸಿ -14 ರವರೊಂದಿಗೆ ಬಾಗೇಪಲ್ಲಿ  ಪುರದ ಡಿ.ವಿ.ಜಿ ರಸ್ತೆಯಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಸರ್ಕಾರಿ ಜೀಫ್ ಸಂಖ್ಯೆ ಕೆಎ-40 ಜಿ-537 ವಾಹನದಲ್ಲಿ  ಮೇಲ್ಕಂಡ ಸ್ಥಳಕ್ಕೆ  ಬೆಳಿಗ್ಗೆ 9.15  ಗಂಟೆಗೆ ಹೋಗಿ, ಸ್ವಲ್ಪ  ದೂರದಲ್ಲಿ  ಮರೆಯಲ್ಲಿ ಜೀಫ್ ನ್ನು ನಿಲ್ಲಿಸಿ ಸದರಿ ಸ್ಥಳಕ್ಕೆ  ಪಂಚರೊಂದಿಗೆ  ಮತ್ತು ಸಿಬ್ಬಂದಿಯೊಂದಿಗೆ ನಡೆದುಕೊಂಡು  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ,  ಯಾರೋ ಒಬ್ಬ ಆಸಾಮಿ  ರಸ್ತೆಯಲ್ಲಿ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ ಒಂದು ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 2080/-  ರೂ.ಹಣ ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣವೆಂದು ತಿಳಿಸಿದ್ದು,  ಆತನ  ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ ಶ್ರೀರಾಮಪ್ಪ ಬಿನ್ ಲೇಟ್ ಆದಿನಾರಾಯಣಪ್ಪ, 35 ವರ್ಷ, ನಾಯಕರು, ಹೋಟೆಲ್ ವ್ಯಾಪಾರ, ವಾಸ: 3 ನೇ ವಾರ್ಡ್, ಬಾಗೇಪಲ್ಲಿ ಪುರ. ಮೊ ಸಂ-9844666085   ಎಂತ ತಿಳಿಸಿದ್ದು  ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ.  ಪಂಚಾಯ್ತಿದಾರರ ಸಮಕ್ಷಮ ಬೆಳಿಗ್ಗೆ 9-30 ಗಂಟೆಯಿಂದ 10-20 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ, ಪಂಚನಾಮೆ,  ಮಾಲು ಮತ್ತು ಆಸಾಮಿಯನ್ನು ಬೆಳಿಗ್ಗೆ 10-45 ಗಂಟೆಗೆ ಠಾಣೆಯಲ್ಲಿ ತಮ್ಮ ವಶಕ್ಕೆ ನೀಡುತ್ತಿದ್ದು, ಆಸಾಮಿಯ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ ವರದಿಯನ್ನು ಪಡೆದು ಠಾಣಾ ಎನ್ ಸಿಆರ್ ನಂ-196/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ.  ದಿ: 22-07-2021 ರಂದು ನ್ಯಾಯಾಲಯದ ಪಿ.ಸಿ 235 ರವರು ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.112/2021 ಕಲಂ. 32,34 ಕೆ.ಇ  ಆಕ್ಟ್:-

    ದಿನಾಂಕ:22.07.2021 ರಂದು ರಾತ್ರಿ 7-10 ಗಂಟೆ ಸಮಯದಲ್ಲಿ  ಮಾನ್ಯ ಪಿ.ಎಸ್.ಐ ಸಾಹೇಬರು ನೀಡಿದ ದೂರಿನ ಸಾರಾಂಶವೆನೆಂದರೆ  ಚಿಕ್ಕಬಳ್ಳಾಪುರ  ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಿ.ಪಿ. ಮಂಜು ಆದ ತಾನು ಈ ದಿನ ದಿನಾಂಕ: 22.07.2021 ರಂದು ಸಂಜೆ  4-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಗುಂಡ್ಲಗುರ್ಕಿ ಗ್ರಾಮದಲ್ಲಿ ಸರ್ಕಾರಿ  ಜೀಪು ಸಂಖ್ಯೆ ಕೆ.ಎ 40 ಜಿ-567 ರ ವಾಹನದಲ್ಲಿ ತಾನು ಮತ್ತು ಚಾಲಕ  ಮಂಜುನಾಥ ಎ.ಹೆಚ್.ಸಿ. 23 ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 38 ಸುರೇಶ. ಪಿಸಿ. 264 ನರಸಿಂಹಮೂರ್ತಿ , ಪಿಸಿ 244 ಶಶಿಕುಮಾರ್  ರವರೊಂದಿಗೆ ಗಸ್ತಿನಲ್ಲಿದ್ದಾಗ ಚಿಕ್ಕಬಳ್ಳಾಪುರ ತಾಲ್ಲೂಕು ಗುಂಡ್ಲಗುರ್ಕಿ ಗ್ರಾಮದ ಕೃಷ್ಣಪ್ಪ @ ಭೋವಿ ಕೃಷ್ಣಪ್ಪ ಬಿನ್ ಲೇಟ್ ವೆಂಕಟರಾಯಪ್ಪ 70 ವರ್ಷ ಭೋವಿ ಜನಾಂಗ, ಕೂಲಿ ಕೆಲಸ  ರವರ ಮನೆಯಲ್ಲಿ ಅಕ್ರಮವಾಗಿ ಮದ್ಯವನ್ನು ಶೇಖರಿಸಿಕೊಂಡು, ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿರುವುದಾಗಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಗುಂಡ್ಲಗುರ್ಕಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿ ತಿಳಿಸಿ ದಾಳಿ ಸಮಯದಲ್ಲಿ ಪಂಚರಾಗಿ ಸಹಕರಿಸಲು ಕೋರಿದ್ದು ಅದಕ್ಕೆ ಅವರು ಒಪ್ಪಿಕೊಂಡಿದ್ದು, ಅಷ್ಟರಲ್ಲಿ ಸಿ.ಪಿ.ಐ ಸಾಹೇಬರಾದ ಶ್ರೀ ಎಂ ಎಂ ಪ್ರಶಾಂತ್ ರವರು ಸರ್ಕಾರಿ ಜೀಪ್ ಸಂಖ್ಯೆ ಕೆಎ 40 ಜಿ 6633 ರಲ್ಲಿ ಚಾಲಕ ರಮೇಶ್ ಎ.ಪಿ.ಸಿ 152 ರವರೊಂದಿಗೆ ಬಂದಿದ್ದು, ನಂತರ ತಾವು ಬಂದಿದ್ದ ವಾಹನಗಳಲ್ಲಿ ಪಂಚರನ್ನು  ಕರೆದುಕೊಂಡು ಕೃಷ್ಣಪ್ಪರವರ ಮನೆಯ ಬಳಿ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದಾಗ  ಮನೆಯ ಮುಂದೆ ಸಾರ್ವಜನಿಕರು ಗುಂಪು ಸೇರಿಕೊಂಡಿದ್ದು.  ಪೊಲೀಸರನ್ನು ನೋಡಿ ಜನರು ಓಡಿ ಹೋಗಿದ್ದು, ಮದ್ಯವನ್ನು ಮಾರಾಟ  ಮಾಡುತ್ತಿದ್ದ ಆಸಾಮಿ ಅಲ್ಲಿಯೇ ಇದ್ದು ಆಸಾಮಿಯನ್ನು ಮತ್ತು ಆತನ ವಶದಲ್ಲಿದ್ದ ಒಂದು ಬಿಳಿ ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ತೆರೆದು ನೋಡಿದಾಗ ಚೀಲದಲ್ಲಿ 1) ಹೈವಾರ್ಡ್ ಚಿಯರ್ಸ್ ವಿಸ್ಕಿಯ 90 ಎಂ.ಎಲ್.ನ 84 ಟೆಟ್ರಾ ಪಾಕೆಟ್ ಗಳಿದ್ದು, ಒಟ್ಟು ಮದ್ಯ 7 ಲೀಟರ್ 560 ಎಮ್.ಎಲ್ ಆಗಿದ್ದು ಇದರ ಒಟ್ಟು ಮೌಲ್ಯವು 2950.92/- ರೂಗಳಾಗಿದ್ದು,  ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  ಕೃಷ್ಣಪ್ಪ @ ಭೋವಿ ಕೃಷ್ಣಪ್ಪ ಬಿನ್ ಲೇಟ್ ವೆಂಕಟರಾಯಪ್ಪ 70 ವರ್ಷ ಭೋವಿ ಜನಾಂಗ, ಕೂಲಿ ಕೆಲಸ  ವಾಸ: ಗುಂಡ್ಲಗುರ್ಕಿ ಗ್ರಾಮ,  ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಇಷ್ಟು ಪ್ರಮಾಣದ ಮದ್ಯವನ್ನು ಸಾಗಾಣಿಕೆ ಮಾಡಲು ಮತ್ತು ಆತನ ಬಳಿ ಇಟ್ಟುಕೊಳ್ಳಲು  ಪರವಾನಿಗೆಯನ್ನು ಪಡೆದಿರುವ ಬಗ್ಗೆ ಕೇಳಲಾಗಿ  ಆಸಾಮಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂತ  ತಾನು ಸದರಿ ಮದ್ಯವನ್ನು  ಚಿಕ್ಕಬಳ್ಳಾಪುರ ನಗರದಲ್ಲಿ ಅಲ್ಲಲ್ಲಿ ಬಾರ್ ಗಳಲ್ಲಿ ತಂದಿರುವುದಾಗಿ ತಿಳಿಸಿದನು ಸದರಿ ಆಸಾಮಿಯು ಯಾವುದೇ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ ಮೇಲ್ಕಂಡ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದರಿಂದ ನಂತರ ಪಂಚರ ಸಮಕ್ಷಮ ಸ್ಥಳದಲ್ಲಿ ಮೇಲ್ಕಂಡ ಮದ್ಯದಲ್ಲಿ ಒಂದನ್ನು ಪ್ರತ್ಯೇಕವಾಗಿ ಬಿಳಿ ಬಟ್ಟೆ ಚೀಲದಲ್ಲಿ ಇಟ್ಟು ಅರಗು ಮಾಡಿ 'S' ಎಂಬ ಅಕ್ಷರದಿಂದ ಸೀಲ್ ಮಾಡಿ ಎಫ್.ಎಸ್.ಎಲ್.ಗೆ ಪರೀಕ್ಷೆಗೆ ಕಳುಹಿಸಿ ಕೊಡಲು ಶೇಖರಿಸಿರುತ್ತೆ. ಸದರಿ ಮಾಲನ್ನು ಸಂಜೆ  5-00 ಗಂಟೆಯಿಂದ 6-00 ಗಂಟೆಯವರೆಗೂ ಪಂಚರ ಸಮಕ್ಷಮ ಜರುಗಿಸಿದ ಪಂಚನಾಮೆ ಕಾಲದಲ್ಲಿ ಅಮಾನತ್ತು ಪಡಿಸಿಕೊಂಡು ಸದರಿ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ  6-30 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ರಾತ್ರಿ 7-00 ಗಂಟೆಗೆ ಸದರಿ ಆಸಾಮಿಯ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.320/2021 ಕಲಂ. 279,337 ಐ.ಪಿ.ಸಿ:-

    ದಿನಾಂಕ:22/07/2021 ರಂದು ಚಿಂತಾಮಣಿ ನಗರದ ರಾಧಕೃಷ್ಣ ಖಾಸಗಿ ಆಸ್ಪತ್ರೆಯಿಂದ ಗಾಯಾಳು ಅಪ್ಪಲ್ಲರೆಡ್ಡಿ ಬಿನ್ ಲೇಟ್ ಚೌಡಪ್ಪ ರವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಮದ್ಯಾಹ್ನ 3.00 ಗಂಟೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೆನೆಂದರೆ, ತಾನು ತಮ್ಮ ಗ್ರಾಮದಲ್ಲಿ ಟಮೋಟೊ ಬೆಳೆಯನ್ನು ಇಟ್ಟಿದ್ದು, ಸದರಿ ತೋಟಕ್ಕೆ ನೀರು ಹಾಯಿಸಲು ಆಗಾಗ ತೋಟದ ಬಳಿ ಹೋಗಿ ಬರುತ್ತಿದ್ದೆನು. ಅದರಂತೆ ದಿನಾಂಕ: 21/07/2021 ರಂದು ರಾತ್ರಿ ಸುಮಾರು 9.30 ಗಂಟೆ ಸಮಯದಲ್ಲಿ ತಾನು ತನ್ನ ಬಾಬತ್ತು ಕೆಎ-40 ಎಸ್-5066 ಟಿ.ವಿಎಸ್ ಸ್ಟಾರ್ ಸಿಟಿ ದ್ವಿ ಚಕ್ರ ವಾಹನದಲ್ಲಿ ತನ್ನ ಜಮೀನಿನಲ್ಲಿನ ಬೆಳೆಗೆ ನೀರು ಹಾಯಿಸಲು ಹೋಗುತ್ತಿದ್ದಾಗ ದೊಡ್ಡಗಂಜೂರು-ಸಿದ್ದಿಮಠ ಗ್ರಾಮಗಳ ಮದ್ಯೆ ಇರುವ ತನ್ನ ಜಮೀನಿನ ಕಡೆಗೆ ದ್ವಿಚಕ್ರ ವಾಹನವನ್ನು ತಿರುಗಿಸಿಕೊಳ್ಳಲು ನಿಂತಿದ್ದಾಗ ತನ್ನ ಎದುರಿಗೆ ಶ್ರೀನಿವಾಸಪುರ ರಸ್ತೆ ಕಡೆಯಿಂದ ಎರಡು ದ್ವಿ ಚಕ್ರವಾಹನಗಳನ್ನು ಅದರ ಸವಾರರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆ ಪೈಕಿ ಒಂದು ದ್ವಿಚಕ್ರ ವಾಹನದ ಸವಾರ ಆತನ ದ್ವಿಚಕ್ರ ವಾಹನವನ್ನು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆಸಿ ಅಪಘಾತವನ್ನುಂಟುಮಾಡಿದ್ದು, ಇದರ ಪರಿಣಾಮ ತಾನು ದ್ವಿಚಕ್ರ ವಾಹನ ಸಮೇತ ಕೆಳಕ್ಕೆ ಬಿದ್ದು ಹೋದೆನು. ಇದರಿಂದ ತನ್ನ ತಲೆ ಮತ್ತು ಎಡಮೊಣಕಾಲಿನಿಂದ ಪಾದದವರೆಗೆ ಊತದ ಹಾಗೂ ರಕ್ತಗಾಯಗಳಾಗಿರುತ್ತೆ. ತನಗೆ ಡಿಕ್ಕಿ ಹೊಡೆಸಿದ ದ್ವಿಚಕ್ರ ವಾಹನ ಹಾಗೂ ಅದರ ಸವಾರನು ಸಹ ಕೆಳಕ್ಕೆ ಬಿದ್ದು ಹೋಗಿದ್ದು ದ್ವಿಚಕ್ರ ವಾಹನವನ್ನು ನೋಡಲಾಗಿ ಅದರ ನೊಂದಣಿ ಸಂಖ್ಯೆ ಕೆಎ-03 ಇಡಿ-7523 ಆಗಿರುತ್ತೆ. ತನ್ನ ಹಾಗೂ ತನಗೆ ಡಿಕ್ಕಿಹೊಡೆಸಿದ ದ್ವಿಚಕ್ರ ವಾಹನಗಳು ಜಖಂಗೊಂಡಿರುತ್ತೆ. ಆ ಸಮಯಕ್ಕಾಗಲೇ ಸ್ಥಳಕ್ಕೆ ಬಂದಿದ್ದ ತಮ್ಮ ಗ್ರಾಮದ ರಾಜಣ್ಣನ ಮಗ ಚೇತನ್, ದೇವರೆಡ್ಡಿ ಮಗ ನಾಗೇಶ್ ರವರುಗಳು ಗಾಯಗೊಂಡಿದ್ದ ತನ್ನನ್ನು ಉಪಚರಿಸಿ ಯಾವುದೋ ಕಾರಿನಲ್ಲಿ ಇಲಾಜಿಗಾಗಿ ಚಿಂತಾಮಣಿ ನಗರದ ರಾಧಾಕೃಷ್ಣ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದರುತ್ತಾರೆ. ಈ ರೀತಿ ತನಗೆ ಡಿಕ್ಕಿಹೊಡೆಸಿ ಅಪಘಾತಪಡಿಸಿದ ಮೇಲ್ಕಂಡ ನೊಂದಣಿ ಸಂಖ್ಯೆ ಕೆಎ-03 ಇಡಿ-7523 ದ್ವಿ ಚಕ್ರವಾಹನದ ಸವಾರನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.321/2021 ಕಲಂ. 15(A) ಕೆ.ಇ ಆಕ್ಟ್:-

    ದಿನಾಂಕ: 22/07/2021 ರಂದು ಸಂಜೆ 5.00 ಗಂಟೆಗೆ ಠಾಣೆಯ ಶ್ರೀ ಸುಬ್ರಮಣಿ, ಎ.ಎಸ್.ಐ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 22/07/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು ಹಾಗೂ ಸಿ.ಪಿ.ಸಿ-516 ವಿಶ್ವನಾಥ ರವರು ಠಾಣಾ ಸರಹದ್ದಿನ ಬೂರಗಮಾಕಲಹಳ್ಳಿ, ಮಾಡಿಕರೆ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3.15 ಗಂಟೆಯ ಸಮಯದಲ್ಲಿ ಐಮರೆಡ್ಡಿಹಳ್ಳಿ ಗೇಟ್ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಮಂಜಮ್ಮ ಕೊಂ ಶಿವಣ್ಣ ರವರು ಅವರ ಬಾಲಾಜಿ ಡಾಬಾದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಐಮರೆಡ್ಡಿಹಳ್ಳಿ ಗೇಟ್ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಹೋಟೆಲ್ ಮುಂದೆ  ನೋಡಲಾಗಿ 1)90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 4 ಟೆಟ್ರಾ ಪಾಕೆಟ್ ಗಳು, 2)90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು, 3)ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4)ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಓಪನ್ ಆಗಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಮಂಜಮ್ಮ ಕೊಂ ಶಿವಣ್ಣ, 40 ವರ್ಷ, ಪಟ್ರ  ಜನಾಂಗ, ಡಾಬಾ ಮಾಲೀಕರು, ಐಮರೆಡ್ಡಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3.30 ರಿಂದ ಸಂಜೆ 4.30 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಮಂಜಮ್ಮ ಕೊಂ ಶಿವಣ್ಣ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

6. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.131/2021 ಕಲಂ. 457,380 ಐ.ಪಿ.ಸಿ:-

    ದಿನಾಂಕ: 22/07/2021 ರಂದು  ಮದ್ಯಾಹ್ನ 2:00 ಗಂಟೆಗೆ ಪಿರ್ಯಾದಿದಾರರಾದ ಮೌಲಾ ಸಾಬ್ ಬಿನ್ ಲೇಟ್ ಫಕೃದ್ದೀನ್ ಸಾಬ್ , 50 ವರ್ಷ, ಮುಸ್ಲಿಂ, ಇಡ್ಲಿಪಾಳ್ಯ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ನಾನು ಕುಟುಂಬ ಸಮೇತ ಚಿಂತಾಮಣಿ ನಗರದ  ಇಡ್ಲಿಪಾಳ್ಯದಲ್ಲಿ ವಾಸವಾಗಿರುತ್ತೇನೆ, ಹೀಗಿರುವಾಗ ದಿನಾಂಕ: 21/07/2021 ರಂದು ಬೆಳಿಗ್ಗೆ  ನಾವು ಮನೆಯನ್ನು ಬೀಗ ಹಾಕಿಕೊಂಡು ಬಕ್ರೀದ್ ಹಬ್ಬದ ಪ್ರಯುಕ್ತ ಕುಟುಂಬ ಸಮೇತ ಶ್ರೀನಿವಾಸಪುರ ತಾಲ್ಲೂಕು ಬೈಯ್ಯಪಲ್ಲಿ ಗ್ರಾಮಕ್ಕೆ ಹೋಗಿರುತ್ತೇವೆ, ನಂತರ ದಿನಾಂಕ: 22/07/2021  ರಂದು ಬೆಳಿಗ್ಗೆ 8:00  ಗಂಟೆ ಸಮಯದಲ್ಲಿ ನಾವು ವಾಪಸ್ಸು ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲು ತೆಗೆದಿದ್ದು ನಾವು ಗಾಬರಿಗೊಂಡು ಹೋಗಿ ನೋಡಲಾಗಿ ನಮ್ಮ ಮನೆಯ ಬಾಗಿಲುನ್ನು ಯಾವುದೋ ಆಯುಧದಿಂದ ಮಿಟಿ ತೆಗೆದಂತಿರುತ್ತೆ. ನಂತರ ಮನೆಯೊಳಗೆ ಹೋಗಿ ನೋಡಲಾಗಿ ರೂಂ ನಲ್ಲಿ ಇಟ್ಟಿದ್ದ ಬೀರುವಿನ ಬಾಗಿಲು ತೆಗೆದಿದ್ದು ನೋಡಲಾಗಿ ಬೀರುವಿನಲ್ಲಿ ಇಟ್ಟಿದ್ದ 1 ಲಕ್ಷ ರೂ ನಗದು ಹಣ ಮತ್ತು 30 ಗ್ರಾಂ ನ ಬಂಗಾರದ ಕಿವಿ ಓಲೆ, 8 ಗ್ರಾಂನ ಎರಡು ಉಂಗುರ, 12 ಗ್ರಾಂ ನ ಕತ್ತಿನ ಚೈನ್ ,04 ಗ್ರಾಂ ಬ್ರಾಸ್ ಲೈಟ್ ಬಂಗಾರದ ವಡವೆಗಳನ್ನು ಹಾಗೂ 20 ಗ್ರಾಂನ ಬೆಳ್ಳಿಯ ಕಾಲಿನ ಚೈನ್ ಗಳನ್ನು ಯಾರೋ ಕಳ್ಳರು ದಿನಾಂಕ: 21/07/2021 ರಂದು ರಾತ್ರಿ ಮನೆಯ ಬೀಗವನ್ನು ಯಾವುದೋ ಆಯುಧದಿಂದ ಮಿಟಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಬಂಗಾರದ ವಡವೆಗಳ ಒಟ್ಟು ಬೆಲೆ ಸುಮಾರು 1,35,000 ರೂ ಹಾಗೂ ಬೆಳ್ಳಿ ಚೈನ್ ಗಳ ಬೆಲೆ 1200/- ರೂ ಆಗಿರುತ್ತೆ. ಆದ್ದರಿಂದ ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.169/2021 ಕಲಂ. 78(I),78(3) ಕೆ.ಪಿ ಆಕ್ಟ್:-

    ದಿನಾಂಕ: 20/07/2021 ರಂದು 17-30 ಗಂಟೆ ಸಮಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ.ವಿಜಯ್ ಕುಮಾರ್.ಕೆ.ಸಿ.ರವರು ಠಾಣಾಧಿಕಾರಿಗಳಾದ ತನಗೆ ಸೂಚಿಸಿದ್ದೇನೆಂದರೆ ಈ ದಿನಾಂಕ 20-07-2021 ರಂದು ಮದ್ಯಾನ್ಹ  3-30 ಗಂಟೆಯಲ್ಲಿ ನಾನು  ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಹೊಸೂರು ಗ್ರಾಮದಲ್ಲಿ ಬಸ್ ನಿಲ್ದಾಣದಿಂದ ಗ್ರಾಮದ ಕೆರೆ ಕಡೆಗೆ ಹೋಗುವ ರಸ್ತೆಯಲ್ಲಿ ಶ್ರೀ. ತ್ರಿಂಬಕೇಶ್ವರ ದೇವಾಲಯದ ಮುಂಭಾಗದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಯಾರೋ  ಒಬ್ಬ ಆಸಾಮಿ ಹಣವನ್ನು ಪಣವಾಗಿಟ್ಟು ಅಂಕಿ – ಸಂಖ್ಯೆಗಳಿಂದ  ಅಕ್ರಮ ಮಟ್ಕಾ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ  ಹೆಚ್.ಸಿ-10 ಶ್ರೀರಾಮಯ್ಯ, ಪಿಸಿ-512 ರಾಜಶೇಖರ, ಪಿಸಿ-520 ಶ್ರೀನಾಥ, ಜೀಪ್ ಚಾಲಕ ಎಪಿಸಿ-143 ಮಹೇಶರವರೊಂದಿಗೆ ಕೆಎ-40-ಜಿ-538  ಜೀಪಿನಲ್ಲಿ ಹೊಸೂರು ಗ್ರಾಮದ ಬಸ್ ನಿಲ್ದಾನದ ಬಳಿ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು,  ನಾನು, ಪಂಚರು ಮತ್ತು ಸಿಬ್ಬಂದಿಯಾದ ಹೆಚ್.ಸಿ-10 ಶ್ರೀರಾಮಯ್ಯ, ಪಿಸಿ-512 ರಾಜಶೇಖರ, ಪಿಸಿ-520 ಶ್ರೀನಾಥ, ಜೀಪ್ ಚಾಲಕ ಎಪಿಸಿ-143 ಮಹೇಶರವರೊಂದಿಗೆ ಹೊಸೂರು ಗ್ರಾಮದ ಶ್ರೀ.ತ್ರಿಂಬಕೇಶ್ವರ ದೇವಾಲಯದ ಮುಂಭಾಗದಲ್ಲಿ ಸಾರ್ವಜನಿಕ ರಸ್ತೆಯಲ್ಲಿ  ನಡೆದುಕೊಂಡು ಹೋಗಿ  ಸ್ವಲ್ಪ ದೂರದಲ್ಲಿ ನಿಲ್ಲಿಸಿ ಮರೆಯಲ್ಲಿ  ನಿಂತು  ನೋಡಲಾಗಿ  ಸದರಿ ದೇವಾಲಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ  ಯಾರೋ ಒಬ್ಬ ಆಸಾಮಿ ನಿಂತಿದ್ದು ಆತನು ತನ್ನ ಕೈಯಲ್ಲಿ ಒಂದು ಚೀಟಿಯಲ್ಲಿ  ಬರೆಯುತ್ತಾ, 1 ರೂ.ಗೆ 70 ರೂಪಾಯಿಗಳು ಕೊಡುವುದಾಗಿ,ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ, ನಮ್ಮ ಬಳಿ ಹಣವನ್ನು ಕಟ್ಟಿ ಅಂಕಿಗಳನ್ನು ಬರೆಯಿಸಿಕೊಂಡು ಹೋಗಿ, ಎಂದು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ  ಹಣದ  ಆಮಿಷವನ್ನು  ತೋರಿಸಿ, ಸದರಿ ಆಸಾಮಿಯು ಸಾರ್ವಜನಿಕರಿಂದ  ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳ ಮಟ್ಕಾ  ಚೀಟಿ ಬರೆದುಕೊಡುತ್ತಿರುವುದನ್ನು  ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ  ದಾಳಿ ಮಾಡಿ  ಆಸಾಮಿಯ ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಎ.ನಾರಾಯಣಪ್ಪ ಬಿನ್ ಲೇಟ್ ಆಂಜಿನಪ್ಪ, 49ವರ್ಷ,  ಗೊಲ್ಲರು,  ವಾಸ ಕೋಟಾಲದಿನ್ನೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಸದರಿಯವನು ಅಕ್ರಮವಾಗಿ ಮಟ್ಕಾ ಜೂಜಾಟ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದು, ಸದರಿ ಆಸಾಮಿಯ ಬಳಿ ಇದ್ದ  ಮಟ್ಕಾ ಅಂಕಿಗಳನ್ನು ಬರೆದಿರುವ ಒಂದು ಚೀಟಿ, ಒಂದು ಬಾಲ್ ಪೆನ್ನು, ಸಾರ್ವಜನಿಕರಿಂದ ಕಟ್ಟಿಸಿಕೊಂಡಿದ್ದ  ನಗದು ಹಣ 1960-00 ರೂಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಪಂಚನಾಮೆಯನ್ನು ಸಂಜೆ 4-00 ಗಂಟೆಯಿಂದ 5-00 ಗಂಟೆಯವರೆಗೆ ಜರುಗಿಸಿದ್ದು ಆಸಾಮಿ, ಮಾಲು ಮತ್ತು ಪಂಚನಾಮೆಯೊಂದಿಗೆ ಸಂಜೆ 5-30 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು ಆರೋಪಿ, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆಸಾಮಿಯ ವಿರುದ್ದ ಕಲಂ 78(1)(3) ಕೆ.ಪಿ.ಆಕ್ಟ್ ಕ್ರಮ ಕೈಗೊಳ್ಳಲು ಸೂಚಿಸಿದ್ದು ಈ ದೂರಿನಲ್ಲಿನ ಅಂಶಗಳು ಅಸಂಜ್ಞೇಯ ಅಂಶಗಳಾಗಿರುವುದರಿಂದ ಎನ್.ಸಿ.ಆರ್ ನಂ.325/2021 ರಂತೆ ದಾಖಲಿಸಿಕೊಂಡಿರುತ್ತೆ. ನಂತರ ಈಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು  ಘನ ನ್ಯಾಯಾಲಯದಿಂದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಈದಿನ ನೀಡಿದ ಅನುಮತಿಯ ಆದೇಶದಂತೆ ಪ್ರಕರಣವನ್ನು ದಾಖಲಿಸಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.170/2021 ಕಲಂ. 87 ಕೆ.ಪಿ  ಆಕ್ಟ್:-

    ದಿನಾಂಕ:22/07/2021 ರಂದು ಸಂಜೆ 16-30ಗಂಟೆಗೆ ನ್ಯಾಯಾಲಯದ ಪಿ ಸಿ 129 ರಾಮಚಂದ್ರ ರವರು ಘನ ನ್ಯಾಯಾಲಯದ ಅನುಮತಿ ಪಡೆದು ತಂದು ಹಾಜರ್ಪಡಿಸಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ದಿನಾಂಕ:19/07/2021  ರಂದು ಸಂಜೆ 7-10 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುಡುಮಲಕುಂಟೆ  ಕೆರೆ ಅಂಗಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಹಾಗೂ ವಿಧುರಾಶ್ವತ್ಥ ಹೊರಠಾಣೆಯ ಹೆಚ್.ಸಿ-10 ಶ್ರೀರಾಮಯ್ಯ, ಪಿ.ಸಿ-179 ಶಿವಶೇಖರ, ಹಾಗೂ ಹೆಚ್.ಸಿ-20 ಶ್ರೀನಿವಾಸರೆಡ್ಡಿ, ಹೆಚ್.ಸಿ- 60 ರಿಜ್ವಾನುಲ್ಲಾ ರವರೊಂದಿಗೆ ಚಾಲಕ ಎ.ಪಿ.ಸಿ- 143 ಮಹೇಶ ಸರ್ಕಾರಿ ಜಿಫ್ ಸಂಖ್ಯೆ: ಕೆ.ಎ-40 ಜಿ-538 ರಲ್ಲಿ ಕುಡುಮಲಕುಂಟೆ ಗ್ರಾಮಕ್ಕೆ ಸಂಜೆ 7-30  ಗಂಟೆಗೆ ಹೋಗಿ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಸರ್ಕಾರಿ ಜಿಫ್ ಸಂಖ್ಯೆ: ಕೆ.ಎ-40 ಜಿ-538 ರಲ್ಲಿ ಹೊರಟು ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಕುಡುಮಲಕುಂಟೆ ಗ್ರಾಮದ ಕೆರೆ ಸಮೀಪ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಕುಡುಮಲಕುಂಟೆ ಗ್ರಾಮದ ಕೆರೆ ಅಂಗಳದಲ್ಲಿ ಟಾರ್ಚ್ ಬೆಳಕಿನಲ್ಲಿ ವೃತ್ತಾಕಾರವಾಗಿ ಕುಳಿತುಕೊಂಡು ಆ ಪೈಕಿ ಒಬ್ಬ ಅಂದರ್ ಗೆ 100/-ರೂ ಇನ್ನೋಬ್ಬ ಬಾಹರ್ ಗೆ 100/-ರೂ ಎಂದು ಜೋರಾಗಿ ಕೂಗುತ್ತಾ ಉಳಿದವರು ಹಣವನ್ನು ಕಟ್ಟಿಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಹಾಗೂ ಸಿಬ್ಬಂದಿಯವರು ಸದರಿಯವರನ್ನು ಸುತ್ತುವರೆದು  ಮೇಲೆ ಹೇಳದಂತೆ ಸೂಚಿಸಿದರು, ಕೆಲವರು ಸ್ಥಳದಿಂದ ಓಡಿಹೋದರು ಸ್ಥಳದಲ್ಲಿ ವಶಕ್ಕೆ ಪಡೆದವರ ಹೆಸರು ವಿಳಾಸವನ್ನು ಕೆಳಲಾಗಿ 1) ಮಲ್ಲಿಕಾರ್ಜುನ ರೆಡ್ಡಿ ಬಿನ್ ಎಂ. ಅಶ್ವತ್ಥರೆಡ್ಡಿ, 51 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ ಪೋಶನಪಲ್ಲಿ ಗ್ರಾಮ, ಹಿಂದೂಪುರ ಮಂಡಲಂ,  ಮತ್ತು ತಾಲ್ಲೂಕು, ಅನಂತಪುರಂ ಜಿಲ್ಲೆ,  ಆಂಧ್ರಪ್ರದೇಶ ರಾಜ್ಯ, 2) ಸುಬ್ರಮಣಿ @ ಮಣಿ, ಬಿನ್ ಯಲ್ಲಪ್ಪ, 48 ವರ್ಷ, ಕೂಲಿ ಕೆಲಸ ವಾಸ, ಕದಿರೇನಹಳ್ಳಿ ಗ್ರಾಮ, ಗೌರೀಬಿದನೂರು  ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಎಂದು ತಿಳಿಸಿದ್ದು, ಸ್ಥಳದಿಂದ ಓಡಿ ಹೋದವರ ಹೆಸರು ವಿಳಾಸ ಕೇಳಿ ತಿಳಿಯಲಾಗಿ 3) ನಾಗರೆಡ್ಡಿ ಬಿನ್ ರಾಮರೆಡ್ಡಿ, 50 ವರ್ಷ, ಒಕ್ಕಲಿಗರು, ಜಿರಾಯ್ತಿ ವಾಸ ಗುಂಡ್ಲಕೊತ್ತೂರು ಗ್ರಾಮ, ಗೌರೀಬಿದನೂರು ತಾಲ್ಲೂಕು , 4) ಲಿಂಗರಾಜು ಬಿನ್ ವೆಂಕಟರವಣಪ್ಪ, 36 ವರ್ಷ, ಕುರುಬರು, ಜಿರಾಯ್ತಿ ವಾಸ ಪೋಶನಪಲ್ಲಿ ಗ್ರಾಮ, ಹಿಂದೂಪುರ ಮಂಡಲಂ,  ಮತ್ತು ತಾಲ್ಲೂಕು, ಅನಂತಪುರಂ ಜಿಲ್ಲೆ,  ಆಂಧ್ರಪ್ರದೇಶ ರಾಜ್ಯ, 5) ಅಂಜಿನಮೂರ್ತಿ , ಚಿಟಾವಲಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದರು. ನಂತರ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು ಜೂಜಾಟಕ್ಕೆ ಪಣಕ್ಕಿಟ್ಟಿದ್ದ 14,450/- ರೂ ನಗದು ಹಣ ಮತ್ತು ಒಂದು ನ್ಯೂಸ್ ಪೇಪರ್ ಅನ್ನು ಪಂಚರ ಸಮಕ್ಷಮ ಸಂಜೆ 07-30  ಗಂಟೆಯಿಂದ 8-30  ಗಂಟೆಯವರೆಗೆ  ಟಾರ್ಚ್ ಬೆಳಕಿನಲ್ಲಿ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ರಾತ್ರಿ 9-10 ಗಂಟೆಗೆ ಠಾಣೆಗೆ ವಾಪಸ್ ಬಂದು ಮೇಲ್ಕಂಡ ಮಾಲು ಮತ್ತು ಆಸಾಮಿಗಳನ್ನು ವರದಿ ಮತ್ತು ಅಸಲು ಪಂಚನಾಮೆಯೊಂದಿಗೆ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂ.324/2021 ರಂತೆ ದಾಖಲಿಸಿಕೊಂಡಿರುತ್ತೆ. ಈ ದಿನ ಘನ ನ್ಯಾಯಾಲಯದ ಅನುಮತಿಯಂತೆ ಠಾಣಾ ಮೋ ಸಂ 170/2021 ಕಲಂ 87 ಕೆಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

9. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.61/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

    ದಿನಾಂಕ:23/07/2021 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ಫಿರ್ಯಾದುದಾರರಾದ ವೆಂಕಟಸ್ವಾಮಿ ಬಿನ್ ಲೇಟ್ ಚಿಕ್ಕನಾರಾಯಣಪ್ಪ, 65 ವರ್ಷ, ನಾಯಕ ಜನಾಂಗ, ಜಿರಾಯ್ತಿ, ವಾಸ ಬೋಡಿನಾರೆಪ್ಪನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ:.  ತನ್ನ ಮಗ ಗೋವಿಂದಪ್ಪ. 39 ವರ್ಷಗಳು, ರವರು ಗೌರಿಬಿದನೂರು ತಾಲ್ಲೂಕು ಬಿ. ಬೊಮ್ಮಸಂದ್ರ ಗ್ರಾಮ ಪಂಚಾಯ್ತಿಯಲ್ಲಿ  ಪಂಚಾಯ್ತಿ ಅಬಿವೃದ್ದಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು ಪ್ರತಿನಿತ್ಯ ತಮ್ಮ ಗ್ರಾಮದಿಂದ ಕೆಲಸಕ್ಕೆ ಹೋಗಿಬರುತ್ತಿದ್ದರು. ಹೀಗಿರುವಾಗ ದಿನಾಂಕ 18/07/2021 ರಂದು ಸಂಜೆ ಸುಮಾರು 6-00 ಗಂಟೆಯಲ್ಲಿ ಪೆರೇಸಂದ್ರಕ್ಕೆ ಕೆಲಸ ಇರುವುದಾಗಿ ಮನೆಯಲ್ಲಿ ಹೇಳಿ ಆತನ ಬಾಬತ್ತು ಕೆ.ಎ-40-ಇಎ- 1703 ನೊಂದಣಿ ಸಂಖ್ಯೆಯ  ದ್ವಿಚಕ್ರ ವಾಹನದಲ್ಲಿ ಹೋಗಿದ್ದು ನಂತರ ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿ ಶ್ರೀನಿವಾಸ ಬಿನ್ ಸತ್ಯಪ್ಪ ರವರು ತಮ್ಮ ಸಂಬಂದಿಯಾದ ವಿನೋಧ ಬಿನ್ ಹನುಮಂತಪ್ಪ ರವರಿಗೆ ಫೋನ್ ಮಾಡಿ ಹೀರೇನಾಗವಲ್ಲಿ ಮತ್ತು ಮಂಡಿಕಲ್ಲು ಕ್ರಾಸ್ ಮದ್ಯೆ ಗುಡಿಬಂಡೆ ಪೆರೇಸಂದ್ರ ರಸ್ತೆಯಲ್ಲಿ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು  ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ತನ್ನ ಮಗ ಗೋವಿಂದಪ್ಪ ಬಿ.ವಿ ರವರಿಗೆ ಅಪಘಾತ ಪಡಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ ಪರಿಣಾಮ ಈ ಅಪಘಾತದಲ್ಲಿ ತನ್ನ ಮಗ ಗೋವಿಂದಪ್ಪನಿಗೆ ತಲೆಗೆ ಗಾಯವಾಗಿ ಕಿವಿಯಲ್ಲಿ ರಕ್ತಬಂದು ಎರಡೂ ಮೊಣಕಾಲು ಬಳಿ ಮತ್ತು ಪಾದದ ಬಳಿ  ರಕ್ತಗಾಯವಾಗಿರುವುದಾಗಿ ವಿಚಾರ ತಿಳಿಸಿದ್ದು ಕೂಡಲೇ ತಾನು ಮತ್ತು ತಮ್ಮ ಸಂಬಂದಿಯಾದ ವಿನೋಧ ರವರು ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ಈ ಅಪಘಾತದಲ್ಲಿ ರಕ್ತಗಾಯಗೊಂಡಿದ್ದ ತನ್ನ ಮಗ ಗೋವಿಂದಪ್ಪ ನನ್ನು ಆಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆಯನ್ನು ನೀಡಿಸಿ, ನಂತರ ಅಲ್ಲಿನ ವೈದ್ಯಧಿಕಾರಿಗಳ ಸಲಹೆ ಮೇರೆಗೆ ಬೆಂಗಳೂರಿನ ನಿಮಾಃನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿಸಿ ನಂತರ ಅಲ್ಲಿಂದ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಸಿ ಚಿಕಿತ್ಸೆ ನೀಡಿಸುತ್ತಿದ್ದು ನನ್ನ ಮಗ ಗೋವಿಂದಪ್ಪ ರವರು ಮೇಲ್ಕಿಂಡ ಅಪಘಾತದಲ್ಲಿ ಗಾಯಗೊಂಡು ಬ್ಯಾಪ್ಟಿಸ್ಟ್ ಆಸ್ಪತ್ರೆಯ ಐ.ಸಿ.ಯು ನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುತ್ತಾರೆ. ಆದ್ದರಿಂದ ಮೇಲ್ಕಂಡ ಅಪಘಾತಕ್ಕೆ ಕಾರಣವಾದ ವಾಹನದ ಚಾಲಕನನ್ನು ಮತ್ತು ಅಪಘಾತಪಡಿಸಿದ ವಾಹನವನ್ನು ಪತ್ತೆ ಮಾಡಲು ಕೋರುತೇನೆ, ತನ್ನ ಮಗನಿಗೆ ಬೆಂಗಳೂರಿನಲ್ಲಿ ಚಿಕಿತ್ಸೆಯನ್ನು ನೀಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರು ನೀಡಿದ್ದು ಮುಂದಿನ ಕಾನೂನು ರೀತ್ಯಾ ಕ್ರನ ಜರುಗಿಸಲು ಕೋರಿ ದೂರು.

 

10. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.78/2021 ಕಲಂ. 279,337 ಐ.ಪಿ.ಸಿ :-

    ದಿನಾಂಕ: 22-07-2021 ರಂದು ರಾತ್ರಿ 9-30 ಗಂಟೆಗೆ ಪುರುಷೋತ್ತಮ್ ಹೆಚ್ ಸಿ-133 ರವರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಶಿವರಾಮ್ ಬಿನ್ ಲೇಟ್ ಮುನಿಶ್ಯಾಮಪ್ಪ , 35 ವರ್ಷ, ವಕ್ಕಲಿಗರು ,ಜಿರಾಯ್ತಿ , ಮುತ್ತೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು , ಚಿಕ್ಕಬಳ್ಳಾಪುರ ಜಿಲ್ಲೆ ರವರ ಹೇಳಿಕೆಯ ಸಾರಾಂಶವೇನಂದರೆ, ದಿನಾಂಕ: 22-07-2021 ರಂದು ಸಂಜೆ 6-40 ಗಂಟಯಲ್ಲಿ ಗಾಯಾಳಿವಿನ ಭಾಮೈದನಾದ ಆದರ್ಶ್ ಬಿನ್ ಗೋವಿಂದರೆಡ್ಡಿ ಇಬ್ಬರು ಭೋಗ ನಂದಿ ದೇವಸ್ಥಾನದ ಉತ್ತರ ಭಾಗಲು ಕಡೆಯಿಂದ ಪೂರ್ವ ಭಾಗಲು ಕಡೆ ಹೋಗುತ್ತಿದ್ದಾಗ ಕರ್ವಿಂಗನಲ್ಲಿ HR55-Y-3201 ಕಂಟೈನರ್ ಚಾಲಕ ಅತಿವೇಗ ಮತ್ತು ಅಜಾರೂಕತೆಯಿಂದ ಬಂದು ಡಿಕ್ಕಿ ಹೊಡೆದಾಗ ಕಂಟೈನರ್ ನ ಬಂಪರ್ ಮುಂಭಾಗ ತಗಲಿ ಬಲಕಾಲಿನ ಮೊಣಕಾಲು ಕೆಳಗೆ ಬಿದ್ದಾಗ ಗಾಯಾಳು ಪ್ರಯಾಣಿಸುತ್ತಿದ್ದ ವಾಹನ KA40K3040 ಹೀರೋ ಹೊಂಡ ದ್ವಿಚಕ್ರವನ್ನು ಚಾಲನೆ ಮಾಡುತ್ತಿದ್ದ ಆದರ್ಶ್ ಗಾಯಾಳುವನ್ನು ಉಪಚರಿಸಿ ಅಲ್ಲೆ ಇದ್ದ ನಂದಿ ಗ್ರಾಮದ ಮಂಜು ಹಾಗೂ ಪುನಿತ್ ರವರು ಗಾಯಾಳುವನ್ನು ಆಂಬುಲೇನ್ಸ್ ಮುಖಾಂತರ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿ ಚಿಕಿತ್ಸೆ ಕೊಡಿಸಿರುತ್ತಾರೆ. ಮೇಲ್ಕಂಡ HR55-Y-3201 ಕಂಟೈನರ್ ಚಾಲಕ ಹೆಸರು ವಿಳಾಸ ಗೊತ್ತಿರುವುದಿಲ್ಲ ಆದ್ದರಿಂದ ಮೇಲ್ಕಂಡ ವಾಹನದ ಚಾಲಕನ  ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತಾರೆ.

 

11. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.87/2021 ಕಲಂ. 87 ಕೆ.ಪಿ ಆಕ್ಟ್ :-

    ದಿನಾಂಕ.22.07.2021 ರಂದು ಸಂಜೆ 05.00 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ:-22-07-2021 ರಂದು ಮದ್ಯಾಹ್ನ 03.15 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಕೆ.ಸತೀಶ್ ಆದ ನಾನು ನಗರದಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ಆಜಾದ್ ನಗರದ ಅಣ್ಣು ರವರ ಮನೆಯ ಖಾಲಿಜಾಗದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡಿರುತ್ತೆ. ನಂತರ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ 97, ಸುಬ್ರಮಣಿ, ಪಿಸಿ-278 ನಾರಾಯಣ, ಪಿ.ಸಿ-126 ವೆಂಕಟೇಶ್,ಪಿ,ಸಿ-308 ಚಂದಪ್ಪ ಯಲಿಗಾರ್, ಪಿ,ಸಿ-327 ಮುರಳಿ ಕೃಷ್ಣೇಗೌಡ,   ಜೀಪ್ ಚಾಲಕ ಮಂಜುನಾಥ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 04.20 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಸಿಬ್ಬಂದಿಯವರು ಹಿಂಬಾಲಿಸಿ ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1]  ಖಾದರ್ ಬಿನ್ ನಿಸ್ಸಾರ್ ಅಹಮ್ಮದ್, 30 ವರ್ಷ, ಮುಸ್ಲಿಂ ಜನಾಂಗ, ಹಣ್ಣಿನ ವ್ಯಾಪಾರ, 02 ನೇ ಕಾರ್ಮಿಕ ನಗರ, ಶಿಡ್ಲಘಟ್ಟ ನಗರ, 2] ಮಹಬೂಬ್ ಪಾಷಾ ಬಿನ್ ಮುಕ್ಬುಲ್ ಸಾಬ್,  27 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಅನ್ಸಾರಿಯಾ ಮೊಹಲ್ಲಾ, ಶಿಡ್ಲಘಟ್ಟ ನಗರ, 3] ನವಾಜ್ ಪಾಷಾ ಬಿನ್ ಚಾಂದ್ ಪಾಷಾ,  22 ವರ್ಷ, ಮುಸ್ಲಿಮರು, ರೇಷ್ಮೆ ಕೆಲಸ, ಸಂತೋಷ್ ನಗರ, ಶಿಡ್ಲಘಟ್ಟ ನಗರ. 4] ಜಾಕೀರ್ ಬಿನ್ ಆಜಾದ್, 38 ವರ್ಷ, ಮುಸ್ಲಿಂ ಜನಾಂಗ, ಚಾಲಕ ವೃತ್ತಿ, ಆಜಾದ್ ನಗರ, ಶಿಡ್ಲಘಟ್ಟ ನಗರ,    ಶಿಡ್ಲಘಟ್ಟ ನಗರ. ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 1220/-ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಸಂಜೆ 04.30 ಗಂಟೆಯಿಂದ 05.00 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 04 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 23-07-2021 05:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080