ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.163/2021 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ: 23/06/2021 ರಂದು ನ್ಯಾಯಾಲಯದ ಪಿ.ಸಿ 235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ   ದಿನಾಂಕ:21/06/2021 ರಂದು ಸಂಜೆ 6-45 ಗಂಟೆಗೆ ಬಾಗೇಪಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಗೋಪಾಲರೆಡ್ಡಿ ರವರು ಮಾಲು, ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ: 21-06-2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಆರಕ್ಷಕ ವೃತ್ತ ನಿರೀಕಕ್ಷರಾದ ಶ್ರೀ ರಾಜು ಸಿಪಿಐ ಸಾಹೇಬರು ಕಛೇರಿಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಗೌನಿಪಲ್ಲಿ ಗ್ರಾಮದ ವಾಸಿ ಲತೀಪ್ ರವರ ಜಮೀನಿನಲ್ಲಿರುವ ಮಾವಿನ ತೋಟದ ಬಳಿ ಮಾವಿನ ಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವಾಗಿ ಇಟ್ಟು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ, ನಾನು & ಪ್ರೋ ಪಿ ಎಸ್ ಐ ಆಕಾಶ್ ಭ ಪತ್ತಾರ್ ಹಾಗೂ ಸಿಬ್ಬಂದಿಯಾದ ಸಿಹೆಚ್ ಸಿ-14 ಶ್ರೀಮುರಳಿ, ಸಿಹೆಚ್ ಸಿ-178 ಶ್ರೀಪತಿ, ಸಿಹೆಚ್ ಸಿ-242 ಸುಬ್ರಮಣ್ಯ ಜಿ ಎನ್, ಸಿಪಿಸಿ-76 ಸುರೇಶ್, ಸಿಪಿಸಿ-237 ವಿನಯ್ ಕುಮಾರ್ ಯಾದವ್  ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ಜೀಪಿನಲ್ಲಿ ಜೀಪ್ ಚಾಲಕರಾದ ಸಿಹೆಚ್ ಸಿ-14 ಶ್ರೀ ಮುರಳಿ ರವರು ಬಾಗೇಪಲ್ಲಿ ಬಸ್ ನಿಲ್ದಾಣದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಪಂಚರು ಒಪ್ಪಿಕೊಂಡಿದ್ದು ಅದರಂತೆ ನಾನು ಮತ್ತು ಪ್ರೋ ಪಿಎಸ್ ಐ ಶ್ರೀ ಆಕಾಶ್ ಭ ಪತ್ತಾರ್ ಸಿಬ್ಬಂದಿಯವರು ಹಾಗೂ ಪಂಚರು ಸರ್ಕಾರಿ ಜೀಪ್ ಸಂಖ್ಯೆ: ಕೆಎ 40 ಜಿ 537 ರಲ್ಲಿ ಕುಳಿತುಕೊಂಡು ಗೌನಿಪಲ್ಲಿ ಗ್ರಾಮದ ಲತೀಪ್ ರವರ ಮಾವಿನ ತೋಟದ ಬಳಿ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ, ಎಲ್ಲರೂ ಜೀಪಿನಿಂದ ಇಳಿದು ಕಾಲು ದಾರಿಯಲ್ಲಿ ಎಲ್ಲರೂ ನಡೆದುಕೊಂಡು ಸಂಜೆ 5-30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಮಾವಿನ ಮರದ ಕೆಳಗೆ ಕುಳಿತು ಹಣವನ್ನು ಪಣವಾಗಿ ಇಟ್ಟು, 100 ರೂ. ಅಂದರ್ 100 ರೂ. ಬಾಹರ್ ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಮಾಹಿತಿಯನ್ನು ಖಚಿತಪಡಿಸಿಕೊಂಡು, ಪಂಚರ ಸಮಕ್ಷಮ ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಸುತ್ತುವರೆದು ಓಡಿ ಹೋಗದಂತೆ ಸೂಚನೆ ನೀಡಿದರು ಸಹ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಕೆಲವರು ಓಡಿ ಹೋದರು. ಉಳಿದಂತೆ ಸ್ಥಳದಲ್ಲಿದ್ದ ಇಸ್ಪೀಟ್ ಜೂಜಾಟವಾಡುತ್ತಿದ್ದವರಿಗೆ ಓಡಿ ಹೋಗದಂತೆ ನಾವುಗಳು ಸೂಚನೆ ನೀಡಿ ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಅಬ್ದುಲ್ ಕದೀರ್ ಬಿನ್ ಲೇಟ್ ಸನಾಉಲ್ಲಾ, 28 ವರ್ಷ,  ಮುಸ್ಲೀಮರು, ಜಿರಾಯ್ತಿ, ವಾಸ ವಾರ್ಡ್-21 ನೇ ವಾರ್ಡ, ಅಶೋಕ್ ರೆಡ್ಡಿ ರವರ ಮನೆಯ ಪಕ್ಕ, ಬಾಗೇಪಲ್ಲಿ ಟೌನ್ 2) ಮುಸ್ತಕ್ ಬಿನ್ ಚಾಂದ್ ಭಾಷ, 26 ವರ್ಷ, ಮುಸ್ಲಿಂಮರು, ಚಾಲಕ, ವಾಸ: ಜಾಮೀಯ ಮಸೀದಿಯ ಬಳಿ, ಕುಂಬಾರ ಪೇಟೆ, ಬಾಗೇಪಲ್ಲಿ ಟೌನ್ 3) ಮಂಜುನಾಥ ಬಿನ್ ನಾಗರಾಜು, 21 ವರ್ಷ, ನಾಯಕರು, ಗಾರೆ ಕೆಲಸ, ವಾಸ: ಕುಂಬಾರಪೇಟೆ, ಬಾಗೇಫಲ್ಲಿ ಟೌನ್ 4) ಮಧು ಬಿನ್ ಚೆನ್ನಕೇಶವ, 34 ವರ್ಷ, ನೇಯ್ಗೆ ಜನಾಂಗ, ಕಾರ್ಪೆಂಟರ್ ಕೆಲಸ, ವಾಸ: 20 ನೇ ವಾರ್ಡ, ಬುಜ್ಜಿ ಕ್ಯಾಂಟಿನ್ ಹತ್ತಿರ, ಬಾಗೇಪಲ್ಲಿ ಟೌನ್, 5) ಮಸ್ರೂರ್ ಬಿನ್ ಶೇಖ್ ಹುಸೇನ್, 23 ವರ್ಷ, ಮುಸ್ಲಿಂ ಜನಾಂಗ, ವೈರಿಂಗ್ ಕೆಲಸ, ವಾಸ: ಆವಲಮಂದ ರಸ್ತೆ, 20 ನೇ ವಾರ್ಡ, ಬಾಗೇಪಲ್ಲಿ ಟೌನ್ 6) ಶಶಿ ಕುಮಾರ್ ಬಿನ್ ವೆಂಕಟೇಶಲು, 24 ವರ್ಷ, ಭೋವಿ ಜನಾಂಗ, ಮಂಜುನಾಥ ಢಾಬದಲ್ಲಿ ಸಪ್ಲೇಯರ್ ಕೆಲಸ, ವಾಸ: ಶಂಕರ ಮಠ ಪಕ್ಕ, ಬಾಗೇಪಲ್ಲಿ ಟೌನ್ ಎಂತ ತಿಳಿಸಿದ್ದು, ಕೆಲವು ಅಸಾಮಿಗಳು ಓಡಿ ಹೋಗಿದ್ದು, ಸಿಕ್ಕ ಅಸಾಮಿಗಳ ಬಳಿ ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 7) ಪ್ರದೀಪ್ @ ಪತ್ತು, ಕೆ ಇ ಬಿ ಯಲ್ಲಿ ಕೆಲಸ, 8) ಅಮರನಾರಾಯಣ, 21 ನೇ ವಾರ್ಡ, 9) ಸಲ್ಮಾನ್, 5 ನೇ ವಾರ್ಡ, 10) ಬಬ್ಲು, 5 ನೇ ವಾರ್ಡ, 11) ಅಬ್ಬಾಸ್, 21 ನೇ ವಾರ್ಡ್ ಎಂತ ತಿಳಿಸಿರುತ್ತಾರೆ. ಅಸಾಮಿಗಳಿಗೆ ಇಸ್ಪೀಟ್ ಜೂಜಾಟವಾಡಲು ಪರವಾನಗಿ ಇದೆಯಾ? ಎಂದು ಕೇಳಿದಾಗ ಇಲ್ಲವೆಂದು ತಿಳಿಸಿರುತ್ತಾರೆ. ಸ್ಥಳದಲ್ಲಿದ್ದ ಮೇಲ್ಕಂಡ 6 ಜನ ಆರೋಪಿಗಳನ್ನು ವಶಕ್ಕೆ ಪಡೆದು, ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಇಸ್ಪೀಟು ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು 5050/- ರೂ ಹಣವನ್ನು, ಸ್ಥಳದಲ್ಲಿ ಬಿದ್ದಿದ್ದ ಜೂಜಾಟವಾಡಲು ಬಳಸಿದ್ದ 52 ಇಸ್ಪೀಟ್ ಎಲೆಗಳನ್ನು ಅಮಾನತ್ತು ಪಡಿಸಿಕೊಂಡು, ಅಸಲು ಧಾಳಿ ಪಂಚನಾಮೆ, ಮಾಲು & ಆರೋಪಿತರನ್ನು ಠಾಣೆಯಲ್ಲಿ ಸಂಜೆ 6-45 ಗಂಟೆಗೆ ಹಾಜರುಪಡಿಸುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣೆಯಲ್ಲಿ ಎನ್ ಸಿಆರ್ 166/2021 ರಂತೆ  ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 23-06-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.164/2021 ಕಲಂ. 279,337 ಐ.ಪಿ.ಸಿ :-

          ದಿನಾಂಕ 23/06/2021 ರಂದು ಮದ್ಯಾಹ್ನ 01-15 ಗಂಟೆಗೆ  ಪಿರ್ಯಾದಿದಾರರಾದ ಎಂ.ಆರ್ ಸುಬ್ರಮಣ್ಯಂ ಬಿನ್ ಲೇಟ್ ಎಂ.ಎನ್ ರಾಮಚಂದ್ರರಾವ್ ,53 ವರ್ಷ, ಬ್ರಾಹ್ಮಣರು, ಸ್ಟಾಂಪ್ ವೆಂಟರ್, ನ್ಯೂಹಾರಿಜನ್ ಶಾಲೆಯ ಬಳಿ ,23 ನೇ ವಾರ್ಡ್, ಬಾಗೇಪಲ್ಲಿ ಟೌನ್  ರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ ನಮ್ಮ ಅಣ್ಣನಾದ ನರಸಿಂಗರಾವ್ ಬಿನ್ ಲೇಟ್ ಎಂ.ಎನ್ ರಾಮಚಂದ್ರರಾವ್, 66 ವರ್ಷ ರವರು ಪತ್ರಬರಹಗಾರರಾಗಿದ್ದು, ನ್ಯೂಹಾರಿಜನ್ ಶಾಲೆಯ ಬಳಿ, 23 ನೇ ವಾರ್ಡ್, ಬಾಗೇಪಲ್ಲಿ ಟೌನ್ ನಲ್ಲಿ ವಾಸವಾಗಿರುತ್ತಾರೆ. ದಿನಾಂಕ:23/06/2021 ರಂದು ಬೆಳಿಗ್ಗೆ ಸುಮಾರು 6:00 ಗಂಟೆಯಲ್ಲಿ ನನ್ನ ಅಣ್ಣ ನರಸಿಂಗರಾವ್ ರವರ ಸ್ನೇಹಿತರಾದ ಎಸ್.ವೇಣು ರವರು ನನಗೆ ಪೋನ್ ಮಾಡಿ ನಿಮ್ಮ ಅಣ್ಣನನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿ ತಿಳಿಸಿದರು. ಕೂಡಲೇ ನಾನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನಮ್ಮ ಅಣ್ಣನಿಗೆ ತಲೆಗೆ ಮತ್ತು ಎಡಭುಜಕ್ಕೆ ಊತಗಾಯಗಳಾಗಿದ್ದವು. ನಾನು ನನ್ನ ಅಣ್ಣನನ್ನು ವಿಚಾರ ಮಾಡಲಾಗಿ ತಾನು ಎಂದಿನಂತೆ ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದಾಗ, ಬೆಳಿಗ್ಗೆ ಸುಮಾರು 5:30 ಗಂಟೆಯಲ್ಲಿ ಬಾಗೇಪಲ್ಲಿ ಟೌನ್ ನ ನ್ಯಾಷನಲ್ ಕಾಲೇಜು ಮುಂಬಾಗದ ಡಿ.ವಿ.ಜಿ ರಸ್ತೆಯಲ್ಲಿ ಗಡಿದಂ ಕಡೆಯಿಂದ ಬಂದ ಕೆ.ಎ-03 ಇ.ಹೆಚ್-5361 ಪಲ್ಸರ್ ದ್ವಿಚಕ್ರ ವಾಹನದ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಂಪ್ಸ್ ಬಳಿ ತನಗೆ ಡಿಕ್ಕಿ ಹೊಡೆಸಿದ ಪರಿಣಾಮ  ತನ್ನ ತಲೆಗೆ ಮತ್ತು ಎಡಭುಜಕ್ಕೆ ಊತಗಾಯಗಳಾಗಿದ್ದು, ತನ್ನ ಜೊತೆ ವಾಕಿಂಗ್ ಬಂದಿದ್ದ ವೇಣು ರವರು ತನ್ನನ್ನು ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದರು. ನಾನು ವೈದ್ಯರ ಸಲಹೆಯಂತೆ ನನ್ನ ಅಣ್ಣನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟು ಈಗ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ನನ್ನ ಅಣ್ಣ ಎಂ.ಆರ್ ನರಸಿಂಗರಾವ್ ರವರಿಗೆ ಅಪಘಾತವನ್ನುಂಟು ಮಾಡಿರುವ ಕೆ.ಎ-03 ಇ.ಹೆಚ್-5361 ಪಲ್ಸರ್ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.88/2021 ಕಲಂ. 279,337,304(A) ಐ.ಪಿ.ಸಿ :-

          ದಿನಾಂಕ:22-06-2021 ರಂದು ಸಂಜೆ  ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಬಂದ ಪೊಲೀಸ್ ಮಾಹಿತಿಯ ಮೇರೆಗೆ  ಗಾಯಾಳು ಶ್ರೀ. ಅಂಜಾದ್ ಪಾಷ ಬಿನ್ ಮುನಾವರ್ ಪಾಷ, 26ವರ್ಷ, ಕೆ.ಪಿ.ಟಿ.ಸಿ.ಎಲ್  ನಲ್ಲಿ ಹೊರ ಗುತ್ತಿಗೆ ಕೆಲಸ  ವಾರ್ಡ್ ನಂಬರ್ 21 ಗಡಂವಾರಿಪಲ್ಲಿ ಕೆ.ಎಸ್.ಆರ್.ಟಿ.ಸಿ  ಡಿಪೋ ರಸ್ತೆ  ಬಾಗೇಪಲ್ಲಿ ನಗರ ಚಿಕ್ಕಬಳ್ಳಾಪುರ ಜಿಲ್ಲೆ ರವರ ಹೇಳಿಕೆಯನ್ನು ವೈದ್ಯಾಧಿಕಾರಿಗಳ ಸಮಕ್ಷಮ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ದಿನಾಂಕ:22-06-2021 ರಂದು ಬಾಗೇಪಲ್ಲಿಯಿಂದ ಚಿಕ್ಕಬಳ್ಳಾಪುರಕ್ಕೆ ಹೆರಿಗೆಯಾಗಿದ್ದು ತನ್ನ ಹೆಂಡತಿಯನ್ನು ನೋಡಲು ತಾನು ತನ್ನ ಅಣ್ಣ ನಾದ ಬಾಬಾಜಾನ್ ಬಿನ್ ಮುನಾವರ್ ಪಾಷ, ತನ್ನ ತಂದೆ ಮುನಾವರ್ ಪಾಷ ಬಿನ್ ಷೇಕ್ ಮಹಬೂಬ್ ಪಾಷ, ತಾಯಿ ಕುರ್ಷೀದ್ ಉನಿಸ್ಸಾ, ಆಯೀಷಾ ಬಾನು, ತನಜಿರ್ ಬಾನು ಮತ್ತು ಮಕ್ಕಳೊಂದಿಗೆ ನಮ್ಮ ಬಾಬತ್ತು ಮಾರುತಿ ಓಮನಿ KA-05-MG-0158 ರಲ್ಲಿ ಬೆಳಿಗ್ಗೆ ಸುಮಾರು 10-45 ಗಂಟೆಗೆ ಬಾಬಾಜಾನ್ ರವರು ವಾಹನವನ್ನು ಚಾಲನೆ ಮಾಡುತ್ತಿದ್ದು ಗಾಡಿಯಲ್ಲಿ ಕುಳಿತು ಎನ್ ಹೆಚ್-44 ರಸ್ತೆಯಲ್ಲಿ ಸುಮಾರು 11-45 ಗಂಟೆಯ ಸಮಯದಲ್ಲಿ ಬಾಬಾಜಾನ್ ರವರು ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ ಆಕ್ಮಸಿಕವಾಗಿ ಅಡ್ಡ ಬಂದ ಸುಮಾರು 55-60 ವರ್ಷ ವಯಸ್ಸಿನ  ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆಯಿಸಿದ್ದು ಅಪಘಾತದಿಮದ ವಾಹನವು ರಸ್ತೆಯ ಬದಿ ಉರುಳಿಕೊಂಡಿದ್ದು ಅಪಘಾತದಲ್ಲಿ ಅಪರಿಚಿತ ವ್ಯಕ್ತಿಗೆ ಎರಡು ಕಾಲುಗಳ ಎರಡು ಕೈಗಳಿಗೆ ಹಾಗೂ ಮುಖಕ್ಕೆ ಗಾಯಗಳಾಗಿ ಸ್ಥಳದಲ್ಲಿ ಸತ್ತು ಹೋದನ್ನು ಕಾರಿನಲ್ಲಿದ್ದ ನನ್ನ ಎಡಕಾಲಿಗೆ, ಬಾಬಾಜಾನ್ ರವರಿಗೆ ಎಡಕಾಲಿಗೆ,ಮುನಾವರ್ ಪಾಷರವರಿಗೆ ತಲೆಗೆ, ಕುರ್ಷೀದ್ ಉನಿಸ್ಸಾ ರವರಿಗೆ ಬೆನ್ನಿಗೆ ಮತ್ತು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಯಿತ್ತು.ಆ ಕೂಡಲೇ ಸ್ಥಳಕ್ಕೆ ಬಂದ ಸಾರ್ವಜನಿಕರು ನಮ್ಮನ್ನು ಉಪಚರಿಸಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು ಈ ಅಪಘಾತಕ್ಕೆ ಬಾಬಾಜಾನ್ ಬಿನ್ ಮುನಾವರ್ ಪಾಷ ರವರು ಅತೀವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಾಲನೆ ಮಾಡಿ ಡಿಕ್ಕಿ ಹೊಡೆದು ಸದರಿ ಅಪಘಾತಕ್ಕೆ ಕಾರಣವಾಗಿರುವ ಬಾಬಾಜಾನ್ ರವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿದೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.287/2021 ಕಲಂ. 454,457,380 ಐ.ಪಿ.ಸಿ :-

          ದಿನಾಂಕ: 22/06/2021 ರಂದು ಮದ್ಯಾಹ್ನ 2.30 ಗಂಟೆಗೆ ದೇವರಾಜು ಬಿನ್ ಲೇಟ್ ನಾರಾಯಣಸ್ವಾಮಿ, 32 ವರ್ಷ, ಜಿರಾಯ್ತಿ, ವಕ್ಕಲಿಗರು, ಬೋಮ್ಮೆಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾವು ರೇಷ್ಮೇ ಬೆಳೆಯನ್ನು ಬೆಳೆಯುತ್ತಿರುತ್ತೇವೆ. ತಾವು ತೋಟಕ್ಕೆ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ ಸದರಿ ಬೀಗದ ಕೈ ಯನ್ನು ಮನೆಯ ಮುಂದೆ ಇರುವ ಸರ್ಜಾ ಮೇಲೆ ಇಡುತ್ತಿರುತ್ತೇವೆ. ದಿನಾಂಕ:20/06/2021 ರಂದು ಎಂದಿನಂತೆ ತಾನು ಬೆಳಿಗ್ಗೆ 10.00 ಗಂಟೆಗೆ ತೋಟದ ಕೆಲಸಕ್ಕೆ ಹಾಗೂ ತನ್ನ ಹೆಂಡತಿ ಹಾಗೂ ತಮ್ಮ ತಾಯಿ ಕುರಿಗಳನ್ನು ತೊಳೆಯಲು ಹೋದೆವು. ಮನೆಯಲ್ಲಿ ಯಾರೂ ಇರಲಿಲ್ಲ. ನಂತರ ತಾನು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಭರತ್ ಬಿನ್ ವೆಂಕಟೇಶಪ್ಪ ರವರು ತನಗೆ ಪೋನ್ ಮಾಡಿ ತಾವು ತೆಗೆದುಕೊಂಡಿದ್ದ ಹಿಪ್ಪುನೇರಳೆ ಸೊಪ್ಪಿನ ಹಣವನ್ನು ನರಸಪ್ಪ ರವರಿಗೆ ಕೋಡೋಣ ಬಾ ಎಂದು ಕರೆದಿದ್ದು ತಾನು ತೋಟದಿಂದ ಬೆಳಿಗ್ಗೆ ಸುಮಾರು 10.30 ಗಂಟೆಗೆ ಮನೆಗೆ ಬಂದು ನರಸಪ್ಪರವರಿಗೆ ಹಣವನ್ನು ಕೊಡುವ ಸಲುವಾಗಿ ತಮ್ಮ ಮನೆಯಲ್ಲಿ ಬೀರವನ್ನು ತೆಗೆದು ನೋಡಲಾಗಿ ದಿನಾಂಕ: 19/06/2021 ರಂದು ಸಂಜೆ 5.00 ಗಂಟೆ ಸಮಯದಲ್ಲಿ ರೇಷ್ಮೆ ಗೂಡನ್ನು ಮಾರಾಟ ಮಾಡಿಕೊಂಡು ಬಂದು ಇಟ್ಟಿದ್ದ 85.000/- ರೂ ನಗದು ಹಣ ಕಾಣಿಸಲಿಲ್ಲ. ನಂತರ ಗಾಬರಿಯಿಂದ ಬೀರುವಿನಲ್ಲಿ ನೋಡಲಾಗಿ ಬೀರುವನಲ್ಲಿದ್ದ ಸುಮಾರು 75.000/ ರೂ ಮೌಲ್ಯದ 17 ಗ್ರಾಂ ತೂಕದ ಒಂದು ಜೊತೆ ಬಂಗಾರದ ಜುಮಕಿ, ಸುಮಾರು 1.80.000/- ರೂ ಮೌಲ್ಯದ 40 ಗ್ರಾಂ ತೂಕದ ಬಂಗಾರದ ಕತ್ತಿನ ಲಾಂಗ್ ಚೈನ್, ಸುಮಾರು 90.000/- ರೂ ಮೌಲ್ಯದ 20 ಗ್ರಾಂ ತೂಕದ ಬಂಗಾರದ ಒಂದು ಕತ್ತಿನ ಚೈನು, ಸುಮಾರು 35.000/- ರೂ ಮೌಲ್ಯದ 7 ಗ್ರಾಂ ತೂಕದ ಬಂಗಾರದ ಒಂದು ಜೊತೆ ಮಾಟಿ ಮತ್ತು ಸುಮಾರು 2500/ ರೂ ಮೌಲ್ಯದ ಒಂದು ವಾಚ್ ಕಾಣಿಸಿಲಿಲ್ಲ. ಕಳುವಾಗಿರುವ ನಗದು ಹಣ ಮತ್ತು ವಡನೆಗಳ ಒಟ್ಟು ಮೌಲ್ಯ 4,67,500/- ರೂ ಆಗಿರುತ್ತದೆ. ಈ ಕೃತ್ಯ ದಿನಾಂಕ:19/06/2021 ರಂದು ಸಂಜೆ 5.00 ಗಂಟೆಯಿಂದ 20/06/2021 ರಂದು ಬೆಳಿಗ್ಗೆ 10.30 ಗಂಟೆಯ ನಡುವೆ ಯಾರೋ ಕಳ್ಳರು ತಮ್ಮ ಮನೆಯ ಸರ್ಜಾ ಮೇಲೆ ಇಟ್ಟಿದ್ದ ಬೀಗದ ಕೈ ಯಿಂದ ಮನೆಯ ಬೀಗವನ್ನು ತೆಗೆದು ಮನೆಯೊಳಗೆ ಪ್ರವೇಶ ಮಾಡಿ ಪ್ರಿಡ್ಜ್ ಮೇಲೆ ಇಟ್ಟಿದ್ದ ಬೀರುವಿನ ಬೀಗದ ಕೀ ಯನ್ನು ತೆಗೆದುಕೊಂಡು ರೂಮ್ ನಲ್ಲಿದ್ದ ಬೀರುವವನ್ನು ತೆಗೆದು ಅದರಲ್ಲಿದ್ದ ಹಣ ಮತ್ತು ವಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳ್ಳತನವನ್ನು ತಮ್ಮ ಅಕ್ಕ ಪಕ್ಕದ ಮನೆಯವರು ಮಾಡಿರಬಹುದೆಂದು ತಮಗೆ ಅನುಮಾನ ಇರುತ್ತೆ. ತನಗೆ ಕಾನೂನಿನ ಅರಿವು ಇಲ್ಲವಾದ್ದರಿಂದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ತಮ್ಮ ಮನೆಯಲ್ಲಿ ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.113/2021 ಕಲಂ. 143,147,148,323,427,448,504,506,149 ಐ.ಪಿ.ಸಿ :-

          ದಿನಾಂಕ: 22/06/2021 ರಂದು ಪಿರ್ಯಾದಿದಾರರಾದ ಶಾಂತಮ್ಮ ಕೋಂ ಸಿ.ಎನ್ ಕೃಷ್ಣಪ್ಪ, ರಾಜೀವ್ ನಗರ, ವಾರ್ಡ್ ನಂ:8, ಚಿಂತಾಮಣಿ ನಗರ,ಚಿಕ್ಕಬಳ್ಳಾಪುರ ಜಿಲ್ಲೆ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಮ್ಮ ಮಗಳಾದ ಉಮಾದೇವಿ ಎಂಬುವವರ ಹೆಸರಿನಲ್ಲಿ ಖಾಲಿ ನಿವೇಶನವಿದ್ದು ಸದರಿ ನಿವೇಶನವು ಸಿ.ಎನ್ ಕೃಷ್ಣಪ್ಪ ನವರ ಹೆಸರಿಗೆ ನೊಂದಣಿಯಾಗಿದ್ದು ತದನಂತರ ನಮ್ಮ ಮಗಳಾದ ಉಮಾದೇವಿ ಅವರಿಗೆ ದಾನ ಪತ್ರದ ಮೂಲಕ ಅವರ ಹೆಸರಿಗೆ  ಮಾಡಿಕೊಟ್ಟಿದ್ದು ನಿವೇಶನವು ಮೂಲತಃ ಚಿಂತಾಮಣಿ ನಗರ ಮಾಳಪಲ್ಲಿ ಗ್ರಾಮದ ಸರ್ವೆ ನಂ: 63 ಕ್ಕೆ ಸೇರಿರುತ್ತದೆ ಸುಮಾರು 30 ವರ್ಷಗಳಿಂದ ಸದರಿ ಜಾಗವು ನಾವು ಮತ್ತು ನಮ್ಮ ಮಗಳ ಅನುಭವದಲ್ಲಿದ್ದು ಪಕ್ಕದಲ್ಲೆ ನಾವು ಮನೆಯನ್ನು ಕಟ್ಟಿಕೊಂಡು ಜೀವನವನ್ನು ಸಾಗಿಸಿರುತ್ತೇವೆ ದಿನಾಂಕ: 14/06/2021 ರಂದು ಬೆಳಿಗ್ಗೆ ಸುಮಾರು 11:00 ಗಂಟೆ ಸರಿಯಾಗಿ ಶಾಂತಮ್ಮ ಆದ ನಾನು ಒಬ್ಬಳೆ ಮನೆಯಲ್ಲಿ ಇದ್ದಾಗ ಚಿಂತಾಮಣಿ ನಗರ ಸಭೆಯ 19ನೇ ವಾರ್ಡ್ ನ ಸದಸ್ಯನಾದ ಎಂ.ಜಗದೀಶ್ ರವರು ಸುಮಾರು 25 ರಿಂದ 30 ಜನರ ಗುಂಪನ್ನು ಸೇರಿಸಿಕೊಂಡು ಏಕಾಏಕಿ ಕೈಗಳಲ್ಲಿ ಮಚ್ಚು, ಗಡಾರಿ, ಸುತ್ತಿಗೆಗಳನ್ನು ಹಿಡಿದು ನಮ್ಮ ಮನೆಯ ಮುಂದೆ ಗಲಾಟೆ ಮಾಡಿ ಮನೆಗೆ ನುಗ್ಗಲು ಯತ್ನಿಸಿದರು ಮತ್ತು ಕೆಟ್ಟ ಅವಾಚ್ಯ ಶಬ್ದಗಳಿಂದ ನಿಂದಿಸಿದರು ನಂತರ ನಮಗೆ ಸೇರಿದ ನಮ್ಮ ನಿವೇಶನದಲ್ಲಿ ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ಮತ್ತು ಶೆಡ್ ಗಳನ್ನು ನಿರ್ದಾಕ್ಷಿಣ್ಯವಾಗಿ ಹೊಡೆದುರಳಿಸಿದ್ದಾರೆ ನಂತರ ನಾನು ನಮ್ಮ ಜಾಗದಲ್ಲಿ ಕಾಂಪೌಂಡ್ ನ್ನು ದೌರ್ಜನ್ಯ ದಿಂದ ಏಕೆ ಹೊಡೆಯುತ್ತಿದ್ದಿರಿ ಎಂದು ಕೇಳಿ ಅಡ್ಡ ಹಾಕಲು ಹೋದಾಗ ನನ್ನ ಎಳೆದು ನನಗೆ ದೈಹಿಕವಾಗಿ ಹಲ್ಲೆ ಮಾಡಿರುತ್ತಾರೆ ಹಾಗೂ ಹೆಚ್ಚಾಗಿ ಮಾತನಾಡಿದರೆ ನಮಗೆ ಅಡ್ಡ ಬಂದರೆ ಸೀರೆಯನ್ನು ಬಿಚ್ಚಿ ಹೊಡೆತೀವಿ ಎಂದು ಕೆಟ್ಟ ಅವಾಚ್ಯ ಶಬ್ದಗಳಿಂದ ನನ್ನನ್ನು ಬೈದು, ನಿಂದಿಸಿ ನನ್ನನ್ನು ಎಳೆದಾಡಿ ನನ್ನ ಮೇಲೆ ಹಲ್ಲೆ ಮಾಡಿರುತ್ತಾರೆ. ನಂತರ ನನ್ನ ಗಂಡನಾದ ಸಿ.ಎನ್ ಕೃಷ್ಣಪ್ಪ ನವರು ಅದೇ ಸಮಯಕ್ಕೆ ಬಂದು ದೌರ್ಜನ್ಯವನ್ನು ತಡೆಯಲು ಮುಂದಾದಾಗ ಅವರ ಮೇಲೂ ಸಹ ದೈಹಿಕವಾಗಿ ಹಲ್ಲೆ ಮಾಡಿ ಕೆಟ್ಟ ಅವಾಚ್ಯ ಶಬ್ದಗಳಿಂದ ನಿಂದಿಸಿ ಎಳೆದಾಡಿ ಅವರ ಮೇಲೆ ಕೈ ಮಾಡಿರುತ್ತಾರೆ ಹಾಗೂ ನಿವೀಬ್ಬರು ಇಲ್ಲೆ ಇದ್ದರೆ ನಿಮ್ಮನ್ನು ಸಾಯಿಸಿಬಿಡುತ್ತೇವೆ ಎಂದು ಮಚ್ಚು ಮತ್ತು ಗಡಾರಿಯನ್ನು ಕೈಯಲ್ಲಿ ಹಿಡಿದು ಹೊಡೆಯಲು ಯತ್ನಿಸಿದರು ಮತ್ತು ಪ್ರಾಣ ಬೆದರಿಕೆ ಹಾಕಿ ನಿಮ್ಮನ್ನು ಇದೇ ಜಾಗದಲ್ಲಿ ಹೂತು ಹಾಕುವುದಾಗಿ ಎಂದು ಬೆದರಿಸಿ ನಮ್ಮನ್ನು ಆ ಜಾಗದಿಂದ ನಗರ ಸಭೆಯ ಸದಸ್ಯರಾದ ಎಂ.ಜಗದೀಶ್ ಮತ್ತು ಅವನ ಸಹಚರರು ಹೊಡೆದು ನಮ್ಮನ್ನು ಓಡಿಸಿರುತ್ತಾರೆ ನಾವು ವಯಸ್ಸಾದ ಹಿರಿಯ ನಾಗರೀಕರೆಂಬ ಕರುಣೆಯೂ ಇಲ್ಲದೆ ನಮ್ಮ ನಿರ್ದಾಕ್ಷೀಣ್ಯವಾಗಿ ಧ್ವಂಸ ಮಾಡಿ ಕೃತ್ಯವೆಸಗಿರುತ್ತಾರೆ.  ಎಂ. ಜಗದೀಶ್ ಮತ್ತು ಅವನ ಸಹಚರರು ನಮ್ಮ ಮಗಳಿಗೆ ಸಂಭಂಧಪಟ್ಟ ಖಾಲಿ ನಿವೇಶನದಲ್ಲಿ ಸುಮಾರು 30 ವರ್ಷಗಳಿಂದ ಬೆಳೆಸಿದ ಗಿಡ ಮರಗಳನ್ನು ಹಾಗೂ ಅದರಲ್ಲಿ ಕಟ್ಟಿದ್ದಂತಹ ಶೆಡ್ ನ್ನು ಮತ್ತು ಆ ನಿವೇಶನಕ್ಕೆ ಚೆಕ್ಕುಬಂದಿಯಾಗಿ ನಿರ್ಮಿಸಿದ ಕಲ್ಲು ಕೂಚಗಳನ್ನು ಮತ್ತು ಮುಳ್ಳುತಂತಿಯನ್ನು ಹೊಡೆದು ಬೀಳಿಸಿ ಕಿತ್ತು ಹಾಕಿರುತ್ತಾರೆ ಹಾಗೂ ತನ್ನ ರಾಜಕೀಯ ದರ್ಪದಿಂದ ನಾನು ಈ ನಗರದ ಪ್ರಭಾವಿ ಕೌನ್ಸಿಲರ್ ಆಗಿದ್ದು ನನ್ನ ಮಾತನ್ನು ನಗರ ಸಭಾ ಆಯುಕ್ತರಾಗಲಿ ಹಾಗೂ ನಗರ ಸಭಾ ಸಿಬ್ಬಂದಿಯಾಗಲಿ ನಿವೇಶನವು ನಿಮಗೆ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಹಂಕಾರದಿಂದ ದೌರ್ಜನ್ಯ ವೆಸಗಿರುತ್ತಾರೆ ಈ ಬಗ್ಗೆ ಜಿಲ್ಲಾ ಮೇಲಾಧಿಕಾರಿಗಳಿಗೂ ಸಹ ನಾವು ದೂರನ್ನು ನೀಡಿರುತ್ತೇವೆ.  ಆದ್ದರಿಂದ ನಮ್ಮ ಮೇಲೆ ದೌರ್ಜನ್ಯ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡಿ ನಮ್ಮ ಮಗಳ ನಿವೇಶನದಲ್ಲಿದ್ದಂತಹ ವಸ್ತುಗಳನ್ನು ಜೆಸಿಬಿ ಮೂಲಕ ಧ್ವಂಸ ಮಾಡಿ ಸುಮಾರು 25 ರಿಂದ 30 ಲಕ್ಷಗಳಷ್ಟು ವಸ್ತುಗಳನ್ನು ನಾಶ ಮಾಡಿರುತ್ತಾರೆ. ಆದ್ದರಿಂದ ಜಗದೀಶ್ ಹಾಗೂ ಇತರರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

6. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.114/2021 ಕಲಂ. 143,147,427,448,504,506,149 ಐ.ಪಿ.ಸಿ :-

          ದಿನಾಂಕ: 22/06/2021 ರಂದು ಪಿರ್ಯಾದಿದಾರರಾದ ಎನ್.ಪಿ ಮಧುಸೂದನ ಬಿನ್ ಲೇಟ್ ಎನ್.ಎಸ್ ಪ್ರಭಾಕರ್, ಅಂಜನಿ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ನನ್ನ ನಿವೇಶನದ ಖಾತೆ ನಂ: 2152/2030 ರ ಪಿ.ಐ.ಡಿ ನಂ: 8-2-554-12ಎ ರಲ್ಲಿ ಮತ್ತು ನನ್ನ ಅಣ್ಣನವರಾದ ಎನ್ ಪಿ ಸಂಜಯ್ ರವರ ನಿವೇಶನದ ಖಾತೆ ಸಂ: 2151/2029 ರ ಪಿಐಡಿ ನಂ: 8-2-554-10ಎ ರಲ್ಲಿ ದಿನಾಂಕ: 14/06/2021 ರಂದು ಬೆಳಿಗ್ಗೆ 11:00 ಗಂಟೆಗೆ ನಮ್ಮ ನಿವೇಶನಗಳನ್ನು ಕೂಲಿಯವರ ಕೈಯಲ್ಲಿ ಸ್ವಚ್ಚಗೊಳಿಸುತ್ತಿರುವಾಗ ಕೃಷ್ಣಪ್ಪ, ಶಾಂತಮ್ಮ , ಎನ್ ಕೆ ಉಮಾದೇವಿ, ಎನ್ ರಾಜಶೇಖರ, ಕೆ ರಾಮಸ್ವಾಮಿ ಮತ್ತು ವೆಂಕಟರವಣಪ್ಪ ಎಂಬುವವರು ಗುಂಪು ಕಟ್ಟಿಕೊಂಡು ಬಂದು ಅಕ್ರಮವಾಗಿ ನಮ್ಮ ನಿವೇಶನದ ಓಳಗಡೆ ಪ್ರವೇಶ ಮಾಡಿ ನಾವು ನೆಟ್ಟಿರುವ ಕೂಚಗಳನ್ನು ಹೊಡೆದು ಹಾಕಿ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಈ ಸೈಟುಗಳನ್ನು ನಮಗೆ ಸೇರಿದ್ದುಇದರಲ್ಲಿ ಬಂದರೆ ನಿನ್ನ ಮತ್ತು ನಿನ್ನ ಕುಟುಂಬದವರನ್ನು ಸಾಯಿಸಿ ಬಿಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಆದ್ದರಿಂದ ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

7. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.115/2021 ಕಲಂ. 323,448,504,506 ಐ.ಪಿ.ಸಿ :-

          ದಿನಾಂಕ: 23/06/2021 ರಂದು ಮದ್ಯಾಹ್ನ 12;00 ಗಂಟೆಗೆ ಪಿರ್ಯಾದಿದಾರರಾದ ನರ್ಮದಾ ಕೋಂ ವಿನಾಯಕ , 35 ವರ್ಷ, ಗೊಲ್ಲರು, ಟಿಪ್ಪುನಗರ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಸ್ವಂತ ಗ್ರಾಮ ಇದೇ ಚಿಂತಾಮಣಿ ತಾಲ್ಲೂಕು ಕೋಡೆಗಂಡ್ಲು ಆಗಿರುತ್ತದೆ. ನಾನು ಮತ್ತು ನನ್ನ ಗಂಡ ಸುಮಾರು 6 ವರ್ಷಗಳ ಹಿಂದೆ ಸಂಸಾರ ಸಮೇತ ಚಿಂತಾಮಣಿ ನಗರಕ್ಕೆ ಬಂದು ಟಿಪ್ಪುನಗರಕ್ಕೆ ಬಂದು ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತೇವೆ. ನಮಗೆ ಇಬ್ಬರು ಮಕ್ಕಳಿದ್ದು 1 ನೇ ಮಗಳಾದ ದ್ರಾಕ್ಷಿಯಾಣಿ ವಯಸ್ಸು 13 ವರ್ಷ, 2 ನೇ ಮಗ ಹರೀಶ್ 10 ವರ್ಷ ವಯಸ್ಸು ಆಗಿರುತ್ತದೆ. ನನ್ನ ಮಗಳು ವಿದ್ಯಾಭ್ಯಾಸ ಮಾಡುತ್ತಿರುತ್ತಾಳೆ. ನನ್ನ ಗಂಡನ ತಂಗಿಯಾದ ಶಿವಮ್ಮ  ರವರನ್ನು ಅಪ್ಪಸ್ವಾಮಿ ರವರ ಮಗನಾದ ಮಂಜುನಾಥ  , ಪೋತಪೇಟೆ ಗ್ರಾಮ, ಪಿ ಟಿ ಎಂ ಮಂಡಲಂ, ಅನಂತಪುರ ಜಿಲ್ಲೆ ಆಂಧ್ರಪ್ರದೇಶ  ರವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ. ಇವರು ಸಂಸಾರ ಸಮೇತ ಅವರ ಗ್ರಾಮದಲ್ಲಿಯೇ ವಾಸವಿರುತ್ತಾರೆ. ಹೀಗಿರುವಾಗ ದಿನಾಂಕ: 22/06/2021 ರಂದು ರಾತ್ರಿ ಸುಮಾರು 11;00 ಗಂಟೆಯ ಸಮಯದಲ್ಲಿ ನಮ್ಮ ಗಂಡನ ತಂಗಿಯ ಗಂಡನಾದ ಮಂಜುನಾಥ ರವರು ಎಲ್ಲಿಗೋ ಹೋಗಿ ಚಿಂತಾಮಣಿ ನಗರದ ನಮ್ಮ ಮನೆಯ ಬಳಿ ಬಂದು ಏಕಾಏಕಿ ಮನೆಯೊಳಗೆ ನುಗ್ಗಿದಾಗ  ನಾನು ಆತನನ್ನು  ಯಾಕೆ ಅಣ್ಣ ಈ ವೇಳೆಯಲ್ಲಿ ಬಂದಿದ್ದೀಯಾ ಏನು ಸಮಾಚಾರ ಎಂತ ಕೇಳುತ್ತಿದ್ದಂತೆ ಮಂಜುನಾಥ ರವರು ಯಾವುದೋ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ನನ್ನ ಮತ್ತು ನನ್ನ ಗಂಡನನ್ನು ಕುರಿತು ಏ ಲೋಪರ್ ಮುಂಡೆಗಳ ನಿಮ್ಮಗಳದು ಜಾಸ್ತಿಯಾಯಿತು ಎಂದು ಜಗಳ ಮಾಡಿ ಕೈಗಳಿಂದ ನನ್ನ ಮತ್ತು ನನ್ನ ಗಂಡನ  ಮೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿ  ಕಾಲುಗಳಿಂದ ಒದ್ದು ನಿಮ್ಮ ಮತ್ತು ನಿಮ್ಮ ಮಕ್ಕಳಾದ ದ್ರಾಕ್ಷಿಯಾಣಿ ರವರನ್ನು ಒಂದು ಗತಿ ಮಾಡುವುದಾಗಿ ಪ್ರಾಣಬೆದರಿಕೆ ಹಾಕುತ್ತಿದ್ದಾಗ ನಮ್ಮ ಪಕ್ಕದ ಮನೆಯ ಮಾಲೀಕರು ಅಡ್ಡಬಂದು ಜಗಳ ಬಿಡಿಸಿ ಅವನಿಂದ ನಮ್ಮನ್ನು ರಕ್ಷಿಸಿರುತ್ತಾರೆ, ನಂತರ ಮಂಜುನಾಥ ರವರು ಅಲ್ಲಿಂದ ಹೊರಟು ಹೋಗಿರುತ್ತಾನೆ. ಆದ್ದರಿಂದ ನಮ್ಮಗಳ ಮೇಲೆ ಗಲಾಟೆ ಮಾಡಿ ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹಲ್ಲೆ ಮಾಡಿ ಪ್ರಾಣಬೆದರಿಕೆ ಹಾಕಿದ ಮೇಲ್ಕಂಡ ಮಂಜುನಾಥ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

8. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.72/2021 ಕಲಂ. 324,504,506 ಐ.ಪಿ.ಸಿ :-

          ದಿನಾಂಕ 23/06/2021 ರಂದು ಮದ್ಯಾಹ್ನ 13.30 ಗಂಟೆಗೆ ಠಾಣಾ ಸಿಬ್ಬಂಧಿ ಹೆಚ್.ಸಿ-53 ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಿಂದ ಗಾಯಾಳುವಿನ ಹೇಳಿಕೆಯನ್ನು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ, ಪಿರ್ಯಾದುದಾರರಿಗೆ ಒಂದು ಗಂಡು ಮಗು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬೂ ಹೆಣ್ಣು ಮಕ್ಕಳಿಗೆ ಗಂಜಿಗುಂಟೆ ಗ್ರಾಮದಲ್ಲಿಯೇ ಮದುವೆ ಮಾಡಿಕೊಟ್ಟಿದ್ದು, ಈಗ ತನ್ನ ಹಿರಿಯ ಮಗಳಾದ ಇಮಾಮ್ ಬೀ ಕೊಂ ದಾದಾಪೀರ್ ರವರ ಮನೆಯಲ್ಲಿ ವಾಸವಾಗಿದ್ದು, ದಿನಾಂಕ 22/06/2021 ರಂದುಬೆಳಗ್ಗೆ ಸುಮಾರು 11.30 ಗಂಟೆಯಲ್ಲಿ ತಾನು ತನ್ನ ಹಿರಿಯ ಮಗಳ ಮನೆಯಲ್ಲಿದ್ದಾಗ ತನ್ನ ಮೊಮ್ಮಗ ಖಾದರ್ ಪಾಷ ಬಿನ್ ಲೇಟ್ ಫಕೀರ್ ಸಾಬಿ ರವರು ಬಂದು ತನ್ನನ್ನು ಕುರಿತು ನಿನ್ನ ಹೆಸರಿನಲ್ಲಿರುವ ಜಮೀನು ಹೆಣ್ಣು ಮಕ್ಕಳಿಗೆ ಏಕೆ ವಿಲ್ ಮಾಡಿರುವುದು, ನನಗೆ ಏಕೆ ಬರೆದುಕೊಟ್ಟಿಲ್ಲಾ ಎಂದು ತನ್ನ ಮೇಲೆ ಗಲಾಟೆ ಮಾಡಿದ್ದು, ಆಗ ತಾನು ನಿನಗೂ ಸಹ ನಿಮ್ಮ ತಾತನ ಹೆಸರಿನಲ್ಲಿರುವ ಜಮೀನು ಮಾಡಿಕೊಟ್ಟಿರುತ್ತೇನೆ ಎಂದಾಗ, ಖಾದರ್ ಸಾಬಿರವರು ಎಲ್ಲಾ ಜಮೀನುಗಳು ನನಗೇ ಬೇಕು ಎಂದು ಮನೆಯ ಮುಂದೆ ಇದ್ದ ಒಂದು ಕೋಲಿನಿಂದ ತನ್ನ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತ ಗಾಯಪಡಿಸಿ ನಂತರ ಅದೇ ಕೋಲಿನಿಂದ ತನ್ನ ಬೆನ್ನಿನ ಮೇಲೆ ಹೊಡೆದು ಗಾಯಪಡಿಸಿ ತನ್ನನ್ನು ಅವಾಚ್ಚ ಶಬ್ದಗಳಿಂದ ಬೈದು, ನೀನು ನನಗೆ ಜಮೀನು ಬರೆದುಕೊಡದಿದ್ದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದ್ದು, ಆಗ ತಾನು ಕಿರುಚಿಕೊಳ್ಳಲಾಗಿ ತನ್ನ ಎದುರುಗಡೆ ಮನೆಯವರಾದ ವೀಣ ಕೊಂ ಮಂಜುನಾಥ ರವರು ಬರುತ್ತಿಇದ್ದಂತೆ ತನ್ನ ಮೊಮ್ಮಗ ಓಡಿಹೋಗಿದ್ದು, ನಂತರ ವೀಣ ರವರು ತನ್ನ ಅಳಿಯ ದಾದಾಪೀರ್ರವರಿಗೆ ವಿಚಾರ ತಿಳಿಸಲಾಗಿ, ದಾದಾಪೀರ್ ಮತ್ತು ಅವರ ಮಗ  ಇಸ್ಮಾಯಿಲ್ ರವರು ಮನೆಗೆ ಬಂದು ಗಾಯಗೊಂಡಿದ್ದ ತನ್ನನ್ನು ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ದಾಖಲು ಮಾಡಿದ್ದು, ಮೇಲ್ಕಂಡ ಖಾದರ್ ರವರ ಮೇಲೆ ಸೂಕ್ತ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

9. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.131/2021 ಕಲಂ. 279,337 ಐ.ಪಿ.ಸಿ :-

          ದಿನಾಂಕ 23/06/2021 ರಂದು ಬೆಳಿಗ್ಗೆ 11 -30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಗಂಗಾಧರಪ್ಪ .ಆರ್,  ಎ.ಎಸ್.ಐ  ಗುಡಿಬಂಡೆ ಪೊಲೀಸ್ ಠಾಣೆ ಗುಡಿಬಂಡೆ  ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ತಾನು ಈಗ್ಗೆ ಸುಮಾರು 10 ದಿನಗಳಿಂದ ಪೆರೇಸಂದ್ರ ಹೊರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿನಾಂಕ 23/06/25021 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ  ಪೆರೇಸಂದ್ರ ಹೊರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ  ಗುಡಿಬಂಡೆ ಪೊಲೀಸ್ ಠಾಣಾ ಸರಹದ್ದಿನ ಸಿಂಗಾನಹಳ್ಳಿ ಕ್ರಾಸ್ ಬಳಿ ಎನ್.ಹೆಚ್.-44 ರಸ್ತೆಯಲ್ಲಿ  ಅಪಘಾತವಾಗಿರುವ ಬಗ್ಗೆ ಮಾಹಿತಿ ಬಂದಿದ್ದು ತಾನು  ಮತ್ತು ಹೆಚ್.ಜಿ-445 ಜಿಕ್ರಿಯಾ ರವರೊಂದಿಗೆ  ಕೂಡಲೇ ಸ್ಥಳಕ್ಕೆ ಬೇಟಿ ನೀಡಿ ಅಲ್ಲಿ ಇದ್ದ ಸ್ಥಳೀಯರನ್ನು ವಿಚಾರಿಸಲಾಗಿ ಈ ದಿನ ಬೆಳಿಗ್ಗೆ ಸುಮಾರು  7-45 ಗಂಟೆಯಲ್ಲಿ  ಕೆ.ಎ-35 –ಎನ್-4691 ಮಾರುತಿ ಸಜುಕಿ ಸಿಯಾಜ್ ಕಾರು ಚಾಲಕ ಸಿಂಗಾನಹಳ್ಳಿ ಕ್ರಾಸ್ ಬಳಿ ಇರುವ ಎಸ್.ಆರ್ ಪೆಟ್ರೋಲ್ ಬಂಕಿನಲ್ಲಿ  ತೈಲವನ್ನು ಹಾಕಿಸಿಕೊಂಡು  ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ  ಕಡೆಗೆ ಬರುವ ರಸ್ತೆಯ ವಿರುದ್ದ ದಿಕ್ಕಿನಲ್ಲಿ  ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಚಿಕ್ಕಬಳ್ಳಾಪುರ ಕಡೆಯಿಂದ ಬಾಗೇಪಲ್ಲಿ ಕಡೆಗೆ ಹೋಗುವ ರಸ್ತೆಯಲ್ಲಿ ಕೆ.ಎ-02-ಎಂ.ಎಪ್.-3977 ಫೋರ್ಡ್ ಫಿಗೋ  ಕಾರು ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ಎರಡೂ ಕಾರುಗಳು ಪರಸ್ಪರ ಡಿಕ್ಕಿ ಹೊಡೆಯಿಸಿದ ಪರಿಣಾಮ ಎರಡೂ ಕಾರುಗಳು ಮುಂಬಾಗ ಜಖಂಗೊಂಡಿದ್ದು ಕೆ.ಎ-02-ಎಂ.ಎಪ್.-3977 ಕಾರು ಚಾಲಕ  ಆಂದ್ರದ ಅನಂಪುರಂ ವಾಸಿ  ರಾಜವರ್ಧನ್  ರೆಡ್ಡಿ  ರವರಿಗೆ  ಮುಖದ ಮೇಲೆ ಮತ್ತು ಎಡಕಾಲಿನ ಮೊಣಕಾಲಿಗೆ ರಕ್ತಗಾಯಗಳಾಗಿರುವುದಾಗಿ  ಕಾರಿನಲ್ಲಿದ್ದ ಹೆಂಗಸು ಯಮುನಾ ಎಂಬುವವರಿಗೆ ಎಡಕೈಗೆ ರಕ್ತಗಾಯವಾಗಿರುವುದಾಗಿ, ಕೆ.ಎ-35 –ಎನ್-4691  ಕಾರು ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲವೆಂದು ನಂತರ ಗಾಯಾಳಯಗಳನ್ನು ಅಂಬುಲೆನ್ಸ್ ನಲ್ಲಿ  ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ  ತಿಳಿಸಿರುತ್ತಾರೆಂದು   ಆದ್ದರಿಂದ ಕೆ.ಎ-35 –ಎನ್-4691  ಕಾರು ಚಾಲಕ ಮತ್ತು ಕೆ.ಎ-02-ಎಂ.ಎಪ್.-3977 ಕಾರು ಚಾಲಕರ  ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

10. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.132/2021 ಕಲಂ. 279,337 ಐ.ಪಿ.ಸಿ :-

          ದಿನಾಂಕ 23/06/2021 ರಂದು ಮದ್ಯಾಹ್ನ 2 -30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶ್ರೀರಾಮ ಬಿನ್ ವೆಂಕಟರಮಣಪ್ಪ 40 ವರ್ಷ,  ಭೋವಿ, ಜಿರಾಯ್ತಿ,  ವಾಸ ಮುದ್ದರೆಡ್ಡಿಹಳ್ಳಿ  ಗ್ರಾಮ, ಸೋಮೇನಹಳ್ಳಿ ಹೋಬಳಿ,  ಗುಡಿಬಂಡೆ  ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಮ್ಮ ದೂರದ ಸಂಬಂದಿ ಎ ಮಂಜುನಾಥ ಬಿನ್ ನಂಜುಂಡಪ್ಪ ರವರು ಸ್ವಂತ ಗ್ರಾಮ  ಪಲಗಲಪಲ್ಲಿ , ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು , ಅನಂತಪುರ ಜಿಲ್ಲೆ, ಆಂದ್ರ ಪ್ರದೇಶವಾಗಿದ್ದು ಇವರು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಅಂಗರೇಕನಹಳ್ಳಿ  ಗ್ರಾಮದಲ್ಲಿ ಮದುವೆಯಾಗಿದ್ದರು. ಹೀಗಿರುವಾಗ ದಿನಾಂಕ 19/06/2021 ರಂದು ಸಂಜೆ ಸುಮಾರು 4-50 ಗಂಟೆಗೆ ಮಂಜುನಾಥ ರವರ ತಾಯಿ  ಕೃಷ್ಣಮ್ಮ ರವರು ತನ್ನ ಮೊಬೈಲ್ ನಂಬರ್ ಗೆ ಕರೆ ಮಾಡಿ ತಾನು ಮತ್ತು ತನ್ನ ಮಗ ಮಂಜುನಾಥ ರವರು  ಮಂಜುನಾಥ ಮದುವೆಯಾಗಿರುವ ಅಂಗರೇಕನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದು   ಗುಡಿಬಂಡೆ ತಾಲ್ಲೂಕು ವರ್ಲಕೊಂಡ ಬ್ರಿಡ್ಜ್  ಮೇಲೆ  ಮಂಜುನಾಥ ರವರಿಗೆ ಸಂಜೆ ಸುಮಾರು 4-00 ಗಂಟೆ ಸಮಯದಲ್ಲಿ ಅಪಘಾತವಾಗಿರುವುದಾಗಿ  ತಿಳಿಸಿದ್ದು, ಕೂಡಲೇ ತಾನು ಅಪಘಾತವಾಗಿರುವ ಸ್ಥಳಕ್ಕೆ ಹೋಗಿ ನೋಡಲಾಗಿ ತಮ್ಮ ಸಂಬಂದಿ ಕೃಷ್ಣಮ್ಮ ಮತ್ತು ಮಂಜುನಾಥ ರವರಿಗೆ ಅಪಘಾತವಾಗಿರುತ್ತೆ. ಮಂಜುನಾಥ ರವರನ್ನು  ಸಾರ್ವಜನಿಕರು ಉಪಚರಿಸಿ ರಸ್ತೆಯ ಪಕ್ಕದಲ್ಲಿ ಮಲಗಿಸಿದ್ದು ವಿಚಾರಿಸಲಾಗಿ ತಮ್ಮ ಸಂಬಂದಿ ಮಂಜುನಾಥ ರವರು ಎ.ಪಿ.-02-ಪಿ-9418 ನೊಂದಣಿ ಸಂಖ್ಯೆಯ ಸ್ಲೆಂಡರ್ ಪ್ಲೆಸ್ ದ್ವಿಚಕ್ರ ವಾಹನದಲ್ಲಿ ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ಎನ್.ಹೆಚ್.-44 ರಸ್ತೆಯಲ್ಲಿ  ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಏಕಾಏಕಿ  ಒಂದು ನಾಯಿ ರಸ್ತೆಯಲ್ಲಿ ದ್ವಿಚಕ್ರ ವಾಹನಕ್ಕೆ ಅಡ್ಡವಾಗಿ ಬಂದಿದ್ದು ದ್ವಿಚಕ್ರ ವಾಹನದ ಸವಾರ ಮಂಜುನಾಥ ರವರು ತಕ್ಷಣ ಬ್ರೇಕ್ ಹಾಕಿದ್ದು ದ್ವಿಚಕ್ರವಾಹನ ನಿಯಂತ್ರಣ ತಪ್ಪಿ ನಾಯಿಗೆ ಗುದ್ದಿ ತನ್ನಷ್ಟಕ್ಕೆ ತಾನೇ ಕೆಳಗೆ ಬಿದ್ದು ಮಂಜುನಾಥ ರವರಿಗೆ ಹಣೆಯ ಮೇಲೆ, ಮೂಗಿನ ಮೇಲೆ, ಬಲಕಿವಿಯ ಬಳಿ, ಗಡ್ಡಕ್ಕೆ , ಬಾಯಿಗೆ , ಬಲಭುಜಕ್ಕೆ, ಬಲ ಕೈಗೆ, ಬಲಗಾಲಿಗೆ ರಕ್ತಗಾಯಗಳಾಗಿರುತ್ತೆ. ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಕೃಷ್ಣಮ್ಮ ರವರಿಗೆ ತಲೆಗೆ,  ಬಲಭುಜಕ್ಕೆ , ಬಲ ಕೆನ್ನೆಗೆ ರಕ್ತಗಾಯಗಳಾಗಿರುತ್ತೆ. ತಕ್ಷಣ ತಾನು ಗಾಯಾಳು ಮಂಜುನಾಥ ರವರನ್ನು  ಮತ್ತು ಕೃಷ್ಣಮ್ಮ ರವರನ್ನು ಅಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸಿರುತ್ತೇನೆ.  ನಂತರ ಅಲ್ಲಿನ ಆಸ್ಪತ್ರೆಯ  ವೈದ್ಯರ ಸಲಹೆ ಮೇರೆಗೆ ಗಾಯಾಳು  ಮಂಜುನಾಥ ರವರನ್ನು  ಯಲಹಂಕ ಕೆ.ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತೇನೆ.  ನಂತರ ಗಾಯಾಳು ಮಂಜುನಾಥ ರವರನ್ನು ಯಲಹಂಕ ಕೆ.ಕೆ ಆಸ್ಪತ್ರೆಯಲ್ಲಿ ಒಂದು ದಿನ  ಚಿಕಿತ್ಸೆ ಕೊಡೆಸಿ ಆಂದ್ರದ ತಿರುಪತಿಯ ರಮಾದೇವಿ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆಗಾಗಿ ದಾಖಲಿಸಿರುತ್ತೆ. ಆಸ್ಪತ್ರೆಯಲ್ಲಿ ದಾಖಲಿಸಿ ನೋಡಿಕೊಳ್ಳುತ್ತಿದ್ದರಿಂದ   ದೂರು ನೀಡಲು ತಡವಾಗಿರುತ್ತೆ. ಈ ಬಗ್ಗೆ ಮುಂದಿನ  ಕಾನೂನು ರೀತ್ಯಾ ಕ್ರಮ ಜರುಗಿಸಲು ದೂರು.

 

11. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.101/2021 ಕಲಂ. 323,324,307,34 ಐ.ಪಿ.ಸಿ :-

          ದಿನಾಂಕ:23/06/2021 ರಂದು ಬೆಳಗ್ಗೆ 9.00 ಗಂಟೆ ಸಮಯದಲ್ಲಿ ಠಾಣೆಗೆ ಹಾಜರಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಪಡೆದುಕೊಂಡಿರುವ ಗಾಯಾಳು ಶ್ರೀಮತಿ ಗಿರಿಜಮ್ಮ ಕೋಂ ಹೆಚ್.ಎನ್ ಲಕ್ಷ್ಮೀಪತಿ, 50 ವರ್ಷ, ನಾಯಕರು, ಮನೆಕೆಲಸ, ವಾಸ:ಚಿಕ್ಕಹನುಮೇನಹಳ್ಳಿ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ತಾನು ತನ್ನ ಗಂಡನೊಂದಿಗೆ ತಮ್ಮ ಗ್ರಾಮದಲ್ಲಿ  ವಾಸವಾಗಿರುತ್ತೇನೆ. ತನ್ನ ಗಂಡನಿಗೆ ಇಬ್ಬರು ಅಣ್ಣ ತಮ್ಮಂದಿರು ಇದ್ದು ಈ ಪೈಕಿ ಸಿದ್ದಪ್ಪ ಬಿನ್ ನರಸಿಂಹಪ್ಪ ರವರು ತಮ್ಮ ಗ್ರಾಮದಲ್ಲಿ ವಾಸವಾಗಿರುತ್ತಾರೆ. ತಮ್ಮ ಯಜಮಾನರಾದ ಲಕ್ಷ್ಮೀಪತಿ ರವರು ತಮ್ಮ ಗ್ರಾಮದ ಸರ್ವೆ ನಂ.66/2 ನಲ್ಲಿ 4 ಗುಂಟೆ ಜಮೀನನ್ನು ಶುದ್ದ ಕ್ರಯಕ್ಕೆ ತೆಗೆದುಕೊಂಡಿದ್ದು ಇದರಲ್ಲಿ ಮನೆಯನ್ನು ಕಟ್ಟಿಕೊಂಡಿರುತ್ತಾರೆ. ತಮ್ಮ ಮನೆಯ ಪಕ್ಕದಲ್ಲಿ ಖಾಲಿ ಜಾಗವಿದ್ದು ಇದರಲ್ಲಿ ಓಡಾಡಲು ದಾರಿ ಬಿಡುವಂತೆ ತನ್ನ ಗಂಡನ ತಮ್ಮನಾದ ಸಿದ್ದಪ್ಪ ರವರು ಗಲಾಟೆ ಮಾಡುತ್ತಿದ್ದು ದಿನಾಂಕ:22/06/2021 ರಂದು ಸುಮಾರು ರಾತ್ರಿ 7.30 ಗಂಟೆಯ ಸಮಯದಲ್ಲಿ ಸಿದ್ದಪ್ಪನ ಮಗನಾದ ಮಂಜುನಾಥ ರವರು ನಾವು ನಮ್ಮ ಜಾಗದಲ್ಲಿ ಹಾಕಿರುವ ಬೇಲಿಯನ್ನು ಕೀಳುತ್ತಿದ್ದು ನಾನು ಯಾಕೆ ನಾವು ಹಾಕಿರುವ ಬೇಲಿಯನ್ನು ಕೀಳುತ್ತೀಯ ಅಳತೆ ಮಾಡಿಸು ನಿಮಗೆ ಬಂದರೆ ನೀವು ತೆಗೆದುಕೊಳ್ಳಿ ಎಂತ  ಹೇಳುತ್ತಿದ್ದಂತೆ ಸಿದ್ದಪ್ಪ ನವರು ನಮ್ಮ ಜಾಗದಲ್ಲಿ ಕೋಯಿಸಿ ಇಟ್ಟಿರುವ ರಿಪೀಸ್ ಅನ್ನು ತೆಗೆದುಕೊಂಡು ಕೊಲೆ ಮಾಡುವ ಉದ್ದೇಶದಿಂದ ತನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ ನಂತರ ಮಂಜುನಾಥ್ ಸಹಾ ಕಟ್ಟಿಗೆಯಿಂದ ಮತ್ತು ಕೈಯಿಂದ ಹೊಡೆದು ಮೂಗೇಟನ್ನು ಉಂಟುಮಾಡಿದ್ದು ಸದರಿಯವರು ಸುಮಾರು ದಿನಗಳಿಂದಲೂ ರಸ್ತೆಯ ವಿಚಾರದಲ್ಲಿ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಗಾಯಪಡಿಸಿರುತ್ತಾರೆ. ಸದರಿ ಗಲಾಟೆಯನ್ನು ನಮ್ಮ ಗ್ರಾಮದ ಮಂಜುನಾಥ ಬಿನ್ ನರಸಪ್ಪ ಹಾಗೂ ಲೋಕೇಶ ಬಿನ್ ಗಂಗಾಧರಪ್ಪ ರವರು ಗಲಾಟೆಯನ್ನು ಬಿಡಿಸಿರುತ್ತಾರೆ ನಂತರ ತಮ್ಮ ಯಜಮಾನರು ಮಾರುತಿ ಓಮಿನಿ ಕಾರಿನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ಸದರಿ ಸಿದ್ದಪ್ಪ ಹಾಗೂ ಮಂಜುನಾಥ ರವರು ಕೊಲೆ ಮಾಡುವ ಉದ್ದೇದಿಂದ ಹೊಡೆದು ಗಾಯ ಪಡಿಸಿದ್ದು ಇವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆ ದೂರಿನನ್ವಯ ಪ್ರ.ವ.ವರದಿ ದಾಖಲಿಸಿರುತ್ತೆ.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.207/2021 ಕಲಂ. 457,380 ಐ.ಪಿ.ಸಿ :-

          ದಿನಾಂಕ 23/06/2021 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಲಲಿತ ಕೋಂ ನಾರಾಯಣಸ್ವಾಮಿ, ವಾಸ-ಮೇಲೂರು ಗ್ರಾಮ, ಜಂಗಮಕೋಟೆ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ಹಿಂದೆ ದಿನಾಂಕ 10/05/2021 ರಂದು ತನ್ನನ್ನು ತನ್ನ ಮಕ್ಕಳನ್ನು ಸಾಯಿಸಿ ಹಾಕುವ ವಿಚಾರದಲ್ಲಿ ತನ್ನ ಗಂಡ ನಾರಾಯಣಸ್ವಾಮಿ ಹಾಗು ಇವರ ಸಂಬಂಧಿಕರ ಮೇಲೆ ನಿಮ್ಮ ಠಾಣೆಯಲ್ಲಿ ದೂರು ನೀಡಿದ್ದು, ಕೇಸ್ ನಂಬರ್ 155/2021 ಆಗಿರುತ್ತದೆ. ಅವತ್ತಿನಿಂದ ಇವತ್ತಿನವರೆಗೆ ತೊಂದರೆಗಳನ್ನು ಕೊಡುತ್ತಿರುತ್ತಾರೆ. ತಮ್ಮನ್ನು ಕೂಲಿ ಮಾಡಿಕೊಂಡು ಜೀವನ ಮಾಡಲು ನೆಮ್ಮದಿಯಾಗಿ ಬಿಡುತ್ತಿಲ್ಲ. ಅವತ್ತಿನಿಂದ ಇವತ್ತಿನವರೆವಿಗೂ ತಮ್ಮನ್ನು ಸಾಯಿಸುತ್ತಾರೆಂದು ಭಯಪಟ್ಟು ತಮ್ಮ ಅಣ್ಣನ ಮನೆಯಲ್ಲಿ ಮಲಗುತ್ತಿದ್ದೇನೆ. ದಿನಾಂಕ 15/06/2021 ರಂದು ರಾತ್ರಿ ತನ್ನ ಗಂಡ ನಾರಾಯಣಸ್ವಾಮಿ, ಇವರ ಮಕ್ಕಳೆಲ್ಲರೂ ಸೇರಿಕೊಂಡು ತಮ್ಮ ಮನೆಯ ಬೀಗವನ್ನು ಹೊಡೆದು ಹಾಕಿ ಬಟ್ಟೆ ಬೀರುವನ್ನು ಹೊಡೆದು ಹಾಕಿ ಲಾಕರ್ ಕಿತ್ತು ಅದರಲ್ಲಿದ್ದ 20 ಸಾವಿರ ಹಣ ಬೆಳ್ಳಿ ವಡವೆ ಸುಮಾರು 400 ಗ್ರಾಂ, ಬಂಗಾರದ ಹ್ಯಾಂಗೀಸ್ ಮತ್ತು ಎರಡೆಳೆ ಮಾಂಗಲ್ಯ ಸರ ಮತ್ತು ಮಾಟಿ, ನಕ್ಲೇಸ್ ವಡವೆ ಎಲ್ಲಾ ಸೇರಿ 300 ರಿಂದ 350 ಚಿನ್ನದ ವಡವೆ ಬೆಲೆ 6 ಲಕ್ಷ ಇತ್ತು, ರೇಷ್ಮೇ ಸೀರೆ 3, ತಮ್ಮಣ್ಣನ ಮನೆಯಿಂದ ತಾನು ತನ್ನ ಮಕ್ಕಳು ಮನೆಗೆ ಹೋದೆವು, ಬೆಳಗಿನ ಜಾವ ಸುಮಾರು 6 ಗಂಟೆ ಸಮಯದಲ್ಲಿ ದಿನಾಂಕ 16/06/2021 ರಂದು ಮನೆ ಹತ್ತಿರ ನೋಡಿದಾಗ ಮನೆಯ ಬೀಗ ಹೊಡೆದು ಹಾಕಿದ್ದರು, ನಂತರ ತಾನು ಮನೆಯ ಒಳಗೆ ಹೋದಾಗ ಬೀರುವಿನ ಬೀಗ ಸಹ ಹೊಡೆದು ಹಾಕಿದ್ದರು, ಅದರಲ್ಲಿದ್ದ ವಡವೆ ಬಟ್ಟೆ ಹಣ ಇವರನ್ನೆಲ್ಲಾ ಎತ್ತಿಕೊಂಡು ಹೋಗಿರುತ್ತಾರೆ ಈ ವಿಚಾರವನ್ನು ತಾನು 112 ಗೆ ಕರೆ ಮಾಡಿ ನಂತರ ಕಂಟ್ರೋಲ್ ಗೆ ಕರೆ ಮಾಡಿ ಅವರಿಗೂ ಕೂಡ ವಿಚಾರ ತಿಳಿಸಿರುತ್ತೇನೆ. ನಂತರ ಹೊಯ್ಸಳ ಪೊಲೀಸರು ಸ್ಥಳಕ್ಕೆ ಬಂದು ಘಟನೆಯ ಬಗ್ಗೆ ಪೋಟೋ ತೆಗೆದುಕೊಂಡು ನೀವು ಠಾಣೆಗೆ ಬಂದು ಕಂಪ್ಲೆಂಟ್ ಕೊಡಿ ಎಂದು ಹೇಳಿ ಹೋದರು. ತಾವು ಈಗ ಬಂದು ನಿಮಗೆ ದೂರು ಕೊಡುತ್ತಿದ್ದೇವೆ. ನಿಮ್ಮ ಠಾಣೆಯಲ್ಲಿ ತನಗೆ ನಷ್ಟವಾಗಿರುವುದನ್ನು ಇವರುಗಳನ್ನು ಠಾಣೆಗೆ ಕರೆಸಿ ತಮಗೆ ಕೊಡಿಸಿ ಕೊಟ್ಟು, ಪರಿಶೀಲನೆ ಮಾಡಿ ಇವರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಂಡು ತನಗೆ ನ್ಯಾಯ ಕೊಡಿಸಿ, ನಾರಾಯಣಸ್ವಾಮಿ ಇವರ ಸಂಬಂಧಿಕ ಹೆಸರು ದೇವರಾಜ ಹಳಿಯ ಏರ್ ಪೋರ್ಟ್ ನಲ್ಲಿ ಸೂಪರ್ ವೈಸರ್ ಕೆಲಸ ಮಾಡುತ್ತಿರುತ್ತಾರೆ. ಪುಷ್ಪಾ ಕೆಇಬಿಯಲ್ಲಿ ಪಿಓನ್ ಕೆಲಸ ಮಾಡುತ್ತಾಳೆ. ಸೌಮ್ಯ, ಪ್ರತಾಪ್ (ಚಿನ್ನಿ) ಬಿನ್ ಶ್ರೀನಿವಾಸ ರವರುಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳ ಬೇಕಾಗಿ ಕೊಟ್ಟ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

13. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.70/2021 ಕಲಂ. 324,504,506 ಐ.ಪಿ.ಸಿ :-

          ದಿನಾಂಕ-22.06.2021 ರಂದು ಬೆಳಿಗ್ಗೆ 11-00 ಗಂಟೆಗೆ ಶಿಡ್ಲಘಟ್ಟ  ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮೋಹನ್ ರವರ ಹೇಳಿಕೆಯನ್ನು ಪಡೆದಿದ್ದರ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಮ್ಮೂರಿನಿಂದ ಹಾಲನ್ನು ತೆಗೆದುಕೊಂಡು ನಲ್ಲಿಮರದಹಳ್ಳಿಯ ಹಾಲಿನ ಡೈರಿಯಲ್ಲಿ ಹಾಕಿ ಬರುತ್ತಿರುತ್ತೇನೆ. ಎಂದಿನಂತೆ ದಿನಾಂಕ-22.06.2021 ರಂದು ಬೆಳಿಗ್ಗೆ ಸುಮಾರು 6.30 ಗಂಟೆಯಲ್ಲಿ ನಾನು ನಮ್ಮೂರಿನಿಂದ ನಮ್ಮ ದ್ವಿಚಕ್ರವಾಹನದಲ್ಲಿ ಹಾಲನ್ನು ತೆಗೆದುಕೊಂಡು ನಲ್ಲಿಮರದಹಳ್ಳಿಯ ಹಾಲಿನ ಡೈರಿಗೆ ಚಾಲನೆ ಮಾಡಿಕೊಂಡು ಹೊಗುತ್ತಿದ್ದಾಗ ಮಾರ್ಗ ಮಧ್ಯೆ ನಲ್ಲಿಮರದಹಳ್ಳಿಯ ನಮ್ಮ ಚಿಕ್ಕ ತಾತನಾದ ಕೃಷ್ಣಪ್ಪ ಬಿನ್ ಅಂಜಿನಪ್ಪ ರವರ ಮನೆಯ ಪಕ್ಕದಲ್ಲಿ ರಸ್ತೆಯಲ್ಲಿದ್ದ ಅವರ ನಾಯಿ ನನ್ನನ್ನು ಕಚ್ಚಲು ಓಡಿಸಿಕೊಂಡು ಬಂದಾಗ ನಾನು ಆಯಾ ತಪ್ಪಿ ನನ್ನ ದ್ವಿಚಕ್ರವಾಹನ ಸಮೇತ ಬಿದ್ದು ಹೋಗಿ ನಾನು ತಪ್ಪಿಸಿಕೊಳ್ಳಲು ನಾಯಿಗೆ  ಕಲ್ಲನ್ನು ಬೀಸಿ ಓಡಿಸಿದೆ ನಂತರ ನಾನು ಹಾಲು ಹಾಕಿ ವಾಪಸ್ಸು ಬರುವಾಗ ಬೆಳಿಗ್ಗೆ ಸುಮಾರು 6.45 ಗಂಟೆಯಲ್ಲಿ ಮೇಲ್ಕಂಡ ಕೃಷ್ಣಪ್ಪ ಬಿನ್ ಅಂಜನಪ್ಪ ರವರು ನನ್ನನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಏಕೋ ನನ್ನ ಮಗನೇ ನಮ್ಮ ನಾಯಿಗೆ ಕಲ್ಲಿನಿಂದ ಹೊಡೆದಿದ್ದೀಯ ಎಂದು ಕೆಟ್ಟ ಮಾತುಗಳಿಂದ ಬೈದಾಗ ನಾನು ನಿಮ್ಮ ನಾಯಿ ನನ್ನನ್ನು ಕಚ್ಚಲು ಬಂದಿದೆ ಅದಕ್ಕೆ ನಾನು ತಪ್ಪಿಸಿಕೊಳ್ಳಲು ಹೊಡೆದಿರುತ್ತೇನೆಂದು ತಿಳಿದಿದೆ ಅದಕ್ಕೆ ನೀನು ಯಾರು ನಮ್ಮ ನಾಯಿಗೆ ಹೊಡೆಯುವುದಕ್ಕೆ ಎಂದು ಲೋಪರ್ ನನ್ನ ಮಗನೇ ಎಂದು ಕೆಟ್ಟ ಮಾತುಗಳಿಂದ ಬೈದು ಅಲ್ಲಿಯೇ ಇದ್ದ ಕಲ್ಲಿನಿಂದ ನನ್ನ ತಲೆಯ ಮುಂಭಾಗದ ಹಣೆಗೆ ಮತ್ತು ತಲೆಯ ಎಡಭಾಗ ಗುದ್ದಿ ರಕ್ತಗಾಯಪಡಿಸಿ ಮತ್ತೆ ನಮ್ಮ ನಾಯಿಗಳ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ. ಆಗ ತೋಟದ ಜಮೀನಿಗೆ ಬರುತ್ತಿದ್ದ ನಮ್ಮ ತಾತ ರಾಮಪ್ಪ ಬಿನ್ ಅಂಜಿನಪ್ಪ ಮತ್ತು ಅಜ್ಜಿ ಅಕ್ಕಯಮ್ಮ ಕೋಂ ರಾಮಪ್ಪ ರವರು ಜಗಳ ಬಿಡಿಸಿ ಗಾಯಗೊಂಡಿದ್ದ ನನ್ನನ್ನು ಚಿಕಿತ್ಸೆ ಬಗ್ಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆದ್ದರಿಂದ ನನ್ನ ಮೇಲೆ ನಾಯಿ ವಿಚಾರದಲ್ಲಿ ಗಲಾಟೆ ಮಾಡಿ ಹಲ್ಲೆ ಮಾಡಿರುವ ಮೇಲ್ಕಂಡ ಕೃಷ್ಣಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 23-06-2021 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080