ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.146/2021 ಕಲಂ. 506,504,324 ಐ.ಪಿ.ಸಿ:-

          ದಿನಾಂಕ: 22/05/2021 ರಂದು ಸಂಜೆ 4-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕೃಷ್ಣಮೂರ್ತಿ ಜಿ ಎನ್ ಬಿನ್ ಜಿ ಆರ್ ನರಸಿಂಹಪ್ಪ, 42 ವರ್ಷ, ನಾಯಕ ಜನಾಂಗ, ಜಿರಾಯ್ತಿ, ವಾಸ: ಜಿ ಚೆರ್ಲೋಪಲ್ಲಿ ಗ್ರಾಮ, ಗೂಳೂರು, ಬಾಗೇಪಲ್ಲಿ ತಾಲ್ಲೂಕು. ಮೊ ನಂ-9480746126. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:21/05/2021 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ನನ್ನ ಮಗನಾದ 11 ವರ್ಷದ ಶ್ರೀಧರನು ಸರ್ಕಾರಿ ಶಾಲೆಯ ಬಳಿ ಆಟವಾಡುತ್ತಿದ್ದಾಗ ನಮ್ಮ ಗ್ರಾಮದ ಸುಬ್ಬನ್ನಗಾರಿ ಕೃಷ್ಣಪ್ಪ ಬಿನ್ ಲೇಟ್ ಮುನಿಯಪ್ಪ ರವರು ಹೊಡೆದಿರುತ್ತಾನೆ. ಈ ವಿಚಾರವಾಗಿ ನನ್ನ ಹೆಂಡತಿಯಾದ ಗಂಗರತ್ನಮ್ಮ ರವರು ನಮ್ಮ ಗ್ರಾಮದ ಅಂಗನವಾಡಿ ಶಾಲೆಯ ಬಳಿ ಇದ್ದ ಕೃಷ್ಣಪ್ಪನನ್ನು ನನ್ನ ಮಗನಿಗೆ ಏಕೆ ಹೊಡೆದಿದ್ದು ಎಂದು ಕೇಳಿದ್ದಕ್ಕೆ ಏಕಾಏಕಿ ಜಗಳ ತೆಗೆದು ಕೆಟ್ಟ ಶಬ್ದಗಳಿಂದ ಬೈದು ದೊಣ್ಣೆಯಿಂದ ನನ್ನ ಹೆಂಡತಿಗೆ ಮೈ ಕೈ ಗೆ ಹೊಡೆದು, ಕೈಯನ್ನು ಹಿಡಿದು ಎಳೆದು ಜೋರಾಗಿ ತಳ್ಳಿದಾಗ ನನ್ನ ಹೆಂಡತಿ ರಸ್ತೆಯ ಪಕ್ಕದಲ್ಲಿರುವ ಚರಂಡಿಗೆ ಬಿದ್ದಾಗ ತಲೆಗೆ ಗಾಯವಾಗಿರುತ್ತದೆ. ಬಿಡಿಸಲು ಹೋದ ನನಗೂ ಸಹ ದೊಣ್ಣೆಯಿಂದ ಹೊಡೆದು ಇಷ್ಟಕ್ಕೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲಾ. ನಿಮ್ಮನ್ನು 15 ದಿನಗಳ ಒಳಗೆ ಸಾಯಿಸುತ್ತೇನೆ. ಎಂದು ಪ್ರಾಣ ಬೆದರಿಕೆ ಹಾಕಿರುತ್ತೇನೆ. ನಂತರ ನಮ್ಮ ಗ್ರಾಮದ ಸುಬ್ಬನ್ನಗಾರಿ ನರಸಿಂಹಪ್ಪ ಮತ್ತು ನರಸಿಂಹಮೂರ್ತಿ ರವರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ಯಾವುದೊ ಆಟೋದಲ್ಲಿ ನಾನು ರೆಡ್ಡಿವಾರಿ ರಾಮಲಕ್ಷ್ಮಮ್ಮ, ವರಲಕ್ಷ್ಮೀ, ರವರು ಸೇರಿ ಗಂಗರತ್ನಮ್ಮ ರವರನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿರುತ್ತೇನೆ. ಆದ್ದರಿಂದ ಸುಬ್ಬನ್ನಗಾರಿ ಕೃಷ್ಣಪ್ಪ ಬಿನ್ ಲೇಟ್ ಮುನಿಯಪ್ಪ, 35 ವರ್ಷ, ನಾಯಕರು, ಜಿ ಚೆರ್ಲೋಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು. ರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.79/2021 ಕಲಂ. 323,324,504,34 ಐ.ಪಿ.ಸಿ:-

          ದಿನಾಂಕ: 22/05/2021 ರಂದು  ರಾತ್ರಿ  11-00 ಗಂಟೆಯಲ್ಲಿ   ಚಿಕ್ಕಬಳ್ಳಾಪುರ  ಜಿಲ್ಲಾ ಆಸ್ಪತ್ರೆಯಿಂದ  ಬಂದ ಮೆಮೊ ಮೇರೆಗೆ  ಆಸ್ಪತ್ರೆಗೆ ಬೇಟಿ ನೀಡಿ  ಗಾಯಾಳು ಮಂಜುನಾಥ ಬಿನ್  ತಮ್ಮಣ್ಣ ರವರ  ಹೇಳಿಕೆಯನ್ನು  ಪಡೆದುಕೊಂಡಿದ್ದರ   ಸಾರಾಂಶವೇನೆಂದರೆ, ದಿನಾಂಕ: 22/05/2021 ರಂದು  ತಮ್ಮ  ಜಮೀನಿನಲ್ಲಿದ್ದ ಕಳೆ  ಹುಲ್ಲುನ್ನು  ತಂದು  ತಮ್ಮ  ಜಮೀನಿನಲ್ಲಿರುವ ಬಂಡೆಯ ಮೇಲೆ ಹಾಕಿದ್ದ  ವಿಚಾರದಲ್ಲಿ   ರಾತ್ರಿ  8-30 ಗಂಟೆಯ ಸಮಯದಲ್ಲಿ  ತಮ್ಮ ಗ್ರಾಮದ  (1) ಕೆಂಪೆಗೌಡ ಬಿನ್  ರಾಮಕೃಷ್ಣಪ್ಪ (2)  ಶ್ರೀನಿವಾಸ ಬಿನ್  ರಾಮಕೃಷ್ಣಪ್ಪ (3) ರಾಮಚಂದ್ರಪ್ಪ ಬಿನ್  ಬಡಿಗಪ್ಪ ರವರು  ತಾವು ಕಳೆಹುಲ್ಲು ಹಾಕಿರುವ ಜಾಗ ತಮಗೆ ಸೇರುತ್ತೆಂದು   ವಿನಾಕಾರಣ ಜಗಳ ತೆಗೆದು  ಕೆಂಪೆಗೌಡ  ಮಚ್ಚಿನಿಂದ ತನ್ನ ಎಡ ಕೈಗೆ ಹೊಡೆದು ಗಾಯಪಡಿಸಿರುತ್ತಾನೆಂತ   ಬಿಡಿಸಲು ಬಂದ  ಮನು ಬಿನ್ ಮಂಜುನಾಥ ರವರಿಗೆ ಅದೇ ಮಚ್ಚಿನಿಂದ  ತಲೆಗೆ ಹೊಡೆದು ಗಾಯಪಡಿಸಿರುತ್ತಾನೆಂತ ಮತ್ತು ಪಾರ್ವತಮ್ಮ ರವರಿಗೆ  ಶ್ರೀನಿವಾಸ ಬಿನ್  ರಾಮಕೃಷ್ಣಪ್ಪ ಮತ್ತು  ರಾಮಚಂದ್ರಪ್ಪ  ಬಿನ್  ಬಡಿಗೆಪ್ಪ ರವರು  ಕೈಗಳಿಂದ ಹೊಡೆದು, ಕಾಲುಗಳಿಂದ ಹೊದ್ದು , ದೊಣ್ಣೆಗಳಿಂದ  ಸಹ ಹೊಡೆದಿರುತ್ತಾರೆಂತ ಸದರಿಯವರ ವಿರುದ್ದ  ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ  ನೀಡಿದ ಹೇಳಿಕೆಯ ಮೇರೆಗೆ ಈ ಪ್ರ.ವ.ವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.232/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 22/05/2021 ರಂದು ಮದ್ಯಾಹ್ನ 2.15 ಗಂಟೆಗೆ ಠಾಣೆಯ ಶ್ರೀ.ನರಸಿಂಹಮೂರ್ತಿ, ಸಿ.ಹೆಚ್.ಸಿ-124 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 22/05/2021 ರಂದು ಮದ್ಯಾಹ್ನ 1.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-544 ವೆಂಕಟರವಣ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಉಪ್ಪಾರಪೇಟೆ ಗ್ರಾಮದ ಸಿರಾಜ್ ಬಿನ್ ಸೈಯದ್ ಬಾಬಾ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಮದ್ಯಾಹ್ನ 1.15 ಗಂಟೆಗೆ ಉಪ್ಪಾರಪೇಟೆ ಗ್ರಾಮದ ಸಿರಾಜ್ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸಿರಾಜ್ ಬಿನ್ ಸೈಯದ್ ಬಾಬಾ, 34 ವರ್ಷ, ಮುಸ್ಲಿಂ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಉಪ್ಪಾರಪೇಟೆ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.233/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 22/05/2021 ರಂದು ಸಂಜೆ 4.15 ಗಂಟೆಗೆ ಠಾಣೆಯ ಶ್ರೀ.ನರಸಿಂಹಮೂರ್ತಿ, ಸಿ.ಹೆಚ್.ಸಿ-124 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 22/05/2021 ರಂದು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-544 ವೆಂಕಟರವಣ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಉಪ್ಪಾರಪೇಟೆ ಗ್ರಾಮದ ಸೈಯದ್ ಹನೀಸ್ ಬಿನ್ ಸೈಯದ್ ಮುನ್ನಾವರ್ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಮದ್ಯಾಹ್ನ 3.15 ಗಂಟೆಗೆ ಉಪ್ಪಾರಪೇಟೆ ಗ್ರಾಮದ ಸೈಯದ್ ಹನೀಸ್ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸೈಯದ್ ಹನೀಸ್ ಬಿನ್ ಸೈಯದ್ ಮುನ್ನಾವರ್, 40 ವರ್ಷ, ಮುಸ್ಲಿಂ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಉಪ್ಪಾರಪೇಟೆ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.235/2021 ಕಲಂ. 379 ಐ.ಪಿ.ಸಿ :-

          ದಿನಾಂಕ: 23/05/2021 ರಂದು ಬೆಳಿಗ್ಗೆ 10.15 ಗಂಟಗೆ ಪಿರ್ಯಾಧಿದಾರರಾದ ತೊಟ್ಲಿ ಚೆನ್ನರಾಯಪ್ಪ ಬಿನ್ ಲೇಟ್ ಮುನಿಯಪ್ಪ, 70 ವರ್ಷ, ಜಿರಾಯ್ತಿ, ವಕ್ಕಲಿಗರು, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಜೀವನೋಪಾಯಕ್ಕಾಗಿ ಒಂದು ಎಮ್ಮೆಯನ್ನು ಸಾಕಿಕೊಂಡಿರುತ್ತೇನೆ. ಪ್ರತಿ ದಿನ ಸದರಿ ಎಮ್ಮೆಯನ್ನು ತಮ್ಮ ಮನೆಯ ಮುಂಭಾಗದ ವಠಾರದಲ್ಲಿ ಕಟ್ಟಿ ಹಾಕುತ್ತಿರುತ್ತೇನೆ. ಹೀಗಿರುವಾಗ ಎಂದಿನಂತೆ ದಿನಾಂಕ: 21/05/2021 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ಮೇಲ್ಕಂಡ ತಮ್ಮ ಎಮ್ಮೆಯನ್ನು ಮನೆಯ ಮುಂಭಾಗದ ವಠಾರದಲ್ಲಿ ಕಟ್ಟಿ ಹಾಕಿ ತಾವು ಮನೆಯಲ್ಲಿ ಮಲಗಿಕೊಂಡಿರುತ್ತೇವೆ. ನಂತರ ಮರು ದಿನ ಅಂದರೆ ದಿನಾಂಕ: 22/05/2021 ರಂದು ಬೆಳಿಗ್ಗೆ 06.00 ಗಂಟೆ ಸಮಯದಲ್ಲಿ ಮನೆಯ ಮುಂಭಾಗದ ವಠಾರದಲ್ಲಿ ಹೋಗಿ ನೋಡಲಾಗಿ ತಮ್ಮ ಎಮ್ಮೆ ಕಾಣಿಸಲಿಲ್ಲ. ನಂತರ ತಾವು ತಮ್ಮ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಹುಡುಕಾಡಲಾಗಿ ತಮ್ಮ ಎಮ್ಮೆ ಪತ್ತೆಯಾಗಿರುವುದಿಲ್ಲ. ತಮ್ಮ ಎಮ್ಮೆಯನ್ನು ಯಾರೋ ಕಳ್ಳರು ದಿನಾಂಕ: 21/05/2021 ರಂದು ರಾತ್ರಿ 9.00 ಗಂಟೆಯಿಂದ ದಿನಾಂಕ: 22/05/2021 ರಂದು ಬೆಳಿಗ್ಗೆ 06.00 ಗಂಟೆಯ ನಡುವೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ತಮ್ಮ ಎಮ್ಮೆಯ ಬೆಲೆ ಸುಮಾರು 60.000/- ರೂ ಆಗಿರುತ್ತೆ. ಇದುವರೆಗೂ ತಾವು ಕಳುವಾಗಿರುವ ತಮ್ಮ ಎಮ್ಮೆಯನ್ನು ಹುಡುಕಾಡಿಕೊಂಡಿದ್ದು ಪತ್ತೆಯಾಗದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಳುವಾಗಿರುವ ತಮ್ಮ ಎಮ್ಮೆ ಹಾಗೂ ಕಳುವು ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.236/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 23/05/2021 ರಂದು ಮದ್ಯಾಹ್ನ 12.15 ಗಂಟೆಗೆ ಠಾಣೆಯ ಶ್ರೀ ಅಮರೇಶ, ಸಿ.ಹೆಚ್.ಸಿ-09 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 23/05/2021 ರಂದು ಬೆಳಗ್ಗೆ 11.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-534 ನಂದೀಶ್ ಕುಮಾರ್ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ನಾಗದೇನಹಳ್ಳಿ ಗ್ರಾಮದ ನಾಗರಾಜ್ ಬಿನ್ ರಾಮಕೃಷ್ಣಪ್ಪ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಬೆಳಗ್ಗೆ 11.15 ಗಂಟೆಗೆ ನಾಗದೇನಹಳ್ಳಿ ಗ್ರಾಮದ ನಾಗರಾಜ್ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ನಾಗರಾಜ್ ಬಿನ್ ರಾಮಕೃಷ್ಣಪ್ಪ, 40 ವರ್ಷ, ವಕ್ಕಲಿಗ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ನಾಗದೇನಹಳ್ಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.237/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 23/05/2021 ರಂದು ಮದ್ಯಾಹ್ನ 12.45 ಗಂಟೆಗೆ ಠಾಣೆಯ ಶ್ರೀ ಜಗದೀಶ, ಸಿ.ಹೆಚ್.ಸಿ-41 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 23/05/2021 ರಂದು ಬೆಳಗ್ಗೆ 11.10 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-464 ಅರುಣ್ ಕುಮಾರ್ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಊಲವಾಡಿ ಗ್ರಾಮದ ರಮೇಶ್ ಬಿನ್ ಸುಬ್ಬನ್ನ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಬೆಳಗ್ಗೆ 11.30 ಗಂಟೆಗೆ ಊಲವಾಡಿ ಗ್ರಾಮದ ರಮೇಶ್ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ರಮೇಶ್ ಬಿನ್ ಸುಬ್ಬನ್ನ, 32 ವರ್ಷ, ಬಲಜಿಗ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಉಲವಾಡಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.238/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 23/05/2021 ರಂದು ಮದ್ಯಾಹ್ನ 1.10 ಗಂಟೆಗೆ ಠಾಣೆಯ ಶ್ರೀ ಸುರೇಶ, ಸಿ.ಹೆಚ್.ಸಿ-57 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 23/05/2021 ರಂದು ಬೆಳಗ್ಗೆ 11.30 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-504 ಸತೀಶ್ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಊಲವಾಡಿ ಗ್ರಾಮದ ವೆಂಕಟರವಣಪ್ಪ ಬಿನ್ ಲೇಟ್ ರಾಮಚಂದ್ರಪ್ಪ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಮದ್ಯಾಹ್ನ 12.00 ಗಂಟೆಗೆ ಊಲವಾಡಿ ಗ್ರಾಮದ ವೆಂಕಟರವಣಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ವೆಂಕಟರವಣಪ್ಪ ಬಿನ್ ಲೇಟ್ ರಾಮಚಂದ್ರಪ್ಪ, 55 ವರ್ಷ, ಬಲಜಿಗ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಉಲವಾಡಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.239/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 23/05/2021 ರಂದು ಮದ್ಯಾಹ್ನ 1.30 ಗಂಟೆಗೆ ಠಾಣೆಯ ಶ್ರೀ ವಿಜಯಕುಮಾರ್, ಸಿ.ಹೆಚ್.ಸಿ-167 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 23/05/2021 ರಂದು ಮದ್ಯಾಹ್ನ 12.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-534 ನಂದೀಶ್ ಕುಮಾರ್ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೈಲಾಂಡ್ಲಹಳ್ಳಿ ಗ್ರಾಮದ ಮುನಿಶಾಮಿರಾಜು ಬಿನ್ ತಿಪ್ಪರಾಜು ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಮದ್ಯಾಹ್ನ 12.15 ಗಂಟೆಗೆ ಮೈಲಾಂಡ್ಲಹಳ್ಳಿ ಗ್ರಾಮದ ಮುನಿಶಾಮಿರಾಜು ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮುನಿಶಾಮಿರಾಜು ಬಿನ್ ತಿಪ್ಪರಾಜು, 40 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಮೈಲಾಂಡ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

10. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.240/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 23/05/2021 ರಂದು ಮದ್ಯಾಹ್ನ 2.00 ಗಂಟೆಗೆ ಠಾಣೆಯ ಶ್ರೀ ಅಮರೇಶ, ಸಿ.ಹೆಚ್.ಸಿ-09 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 23/05/2021 ರಂದು ಮದ್ಯಾಹ್ನ 12.30 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-430 ನರಸಿಂಹಯ್ಯ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ನಲ್ಲಗುಟ್ಟಹಳ್ಳಿ ಗ್ರಾಮದ ವೆಂಕಟೇಶಪ್ಪ ಬಿನ್ ಲೇಟ್ ಮುನಿರಾಜು ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಮದ್ಯಾಹ್ನ 12.45 ಗಂಟೆ ಗಂಟೆಗೆ ನಲ್ಲಗುಟ್ಟಹಳ್ಳಿ ಗ್ರಾಮದ ವೆಂಕಟೇಶಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ವೆಂಕಟೇಶಪ್ಪ ಬಿನ್ ಲೇಟ್ ಮುನಿರಾಜು, 56 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ನಲ್ಲಗುಟ್ಟಹಳ್ಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

11. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.241/2021 ಕಲಂ. 279,337 ಐ.ಪಿ.ಸಿ :-

          ದಿನಾಂಕ: 23/05/2021 ರಂದು ಮದ್ಯಾಹ್ನ 2.30 ಗಂಟೆಗೆ  ಶ್ರೀನಿವಾಸಮೂರ್ತಿ ಬಿನ್ ಗೋವಿಂದರಾಮಶೆಟ್ಟಿ, 49 ವರ್ಷ, ಗಾಣಿಗರು, ಸಂಗೀತ ಶಿಕ್ಷಕರು, ಚೆನ್ನಯ್ಯ ಕಾಂಪೌಂಡ್, ಗಂಗಮ್ಮ ದೇವಸ್ಥಾನದ ರಸ್ತೆ, ಹೊಸಕೋಟೆ ನಗರ. ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 15/05/2021 ರಂದು ತನಗೆ ಚಿಂತಾಮಣಿಯಲ್ಲಿ ಕೆಲಸವಿದ್ದರಿಂದ ತಾನು ತನ್ನ ಬಾಬ್ತು ಕೆಎ-53 ಹೆಚ್-3366 ನೊಂದಣಿ ಸಂಖ್ಯೆಯ ಹೋಂಡಾ ಶೈನ್ ದ್ವಿಚಕ್ರ ವಾಹನದಲ್ಲಿ ಹೊಸಕೋಟೆ ಬಿಟ್ಟು ಅದೇ ದಿನ ಬೆಳಿಗ್ಗೆ 07.30 ಗಂಟೆ ಸಮಯದಲ್ಲಿ ಬೆಂಗಳೂರು-ಕಡಪ ರಾಜ್ಯ ಹೆದ್ದಾರಿಯ ಪೆರಮಾಚನಹಳ್ಳಿ ಗೇಟ್ ಬಳಿ ಬರುತ್ತಿದ್ದಾಗ, ಗೇಟ್ ನಿಂದ ಊರಿನ ಒಳಗೆ ಹೋಗುತ್ತಿದ್ದ ಕೆಎ-40 ಕೆ-67 ನೊಂದಣಿ ಸಂಖ್ಯೆಯ ಹೀರೋ ಹೋಂಡಾ ಪ್ಯಾಷನ್ ಪ್ರೋ ದ್ವಿಚಕ್ರ ವಾಹನವನ್ನು ಅದರ ಸವಾರ ಅಡ್ಡವಾಗಿ ಅತಿವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರಿಂದ ತಾನು ಮತ್ತು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ ವ್ಯಕ್ತಿ ಇಬ್ಬರೂ ದ್ವಿಚಕ್ರ ವಾಹನಗಳ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿದ್ದರಿಂದ ತನ್ನ ಎಡಭಾಗದ ಹಣೆಗೆ ರಕ್ತಗಾಯವಾಗಿ, ಎಡಭುಜ ಮತ್ತು ಪಕ್ಕೆಲಬುಗಳಿಗೆ ಒಳಗಾಯವಾಗಿರುತ್ತೆ. ನಂತರ ಗೇಟ್ ನಲ್ಲಿದ್ದ ಸಾರ್ವಜನಿಕರು ತನ್ನನ್ನು ಉಪಚರಿಸಿ ಆಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ. ವೈದ್ಯರು ತನಗೆ ಪ್ರಥಮ ಚಿಕಿತ್ಸೆ ನೀಡಿದ್ದು, ವಿಚಾರ ತಿಳಿದು ಆಸ್ಪತ್ರೆಗೆ ಬಂದ ತನ್ನ ಬಾಮೈದನಾದ ಮುರುಗಮಲ್ಲ ಗ್ರಾಮದ ವಾಸಿಯಾದ ರಾಘವೇಂದ್ರ ಬಿನ್ ಎ.ನಂಜುಂಡಯ್ಯ ರವರು ಬಂದು ತನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ನರೇಂದ್ರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ. ತನಗೆ ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರನ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲ. ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು, ತನಗೆ ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರನ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

12. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.83/2021 ಕಲಂ. 143,147,448,323,324,504,506,149 ಐ.ಪಿ.ಸಿ :-

          ದಿನಾಂಕ: 23/05/2021 ರಂದು ಬೆಳಿಗ್ಗೆ 8:30 ಗಂಟೆಗೆ  ಪಿರ್ಯಾದಿದಾರರಾದ ನವಾಜ್ ಪಾಷ ಬಿನ್ ಚಾಂದ್ ಪಾಷ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಸಾರಾಂಶವೇನೆಂದರೆ ದಿನಾಂಕ: 22/05/2021 ರಂದು ಸಾಯಂಕಾಲ 6:30 ಗಂಟೆ ಸಮಯದಲ್ಲಿ ತಾನು ತನ್ನ ತಮ್ಮ ಪಯಾಜ್ ತಮ್ಮ ತಂದೆ ಚಾಂದ್ ಪಾಷ, ಅತ್ತೆ ಜಬೀನಾ ತಾಜ್ , ತಾಯಿ ಬಷೀರ್ ತಾಜ್ ಇನ್ನೊಬ್ಬ ತಮ್ಮ ನಯಾಜ್ ತನ್ನ ತಂಗಿಯಾದ ನಾಜಿಯಾ, ರೇಷ್ಮಾ, ಬಷೀರ್ ತಾಜ್ ರವರುಗಳು ಮನೆಯಲ್ಲಿದ್ದಾಗ ತನ್ನ ತಮ್ಮ ಪಯಾಜ್ ಪಬ್ಜಿ ಆಡುತ್ತಿದ್ದ ಆತ ಚಿಂತಾಮಣಿ ನಗರದ ಮೆಹಬೂಬ್ ನಗರದ ವಾಸಿಗಳಾದ ಅರ್ಬಾಜ್, ತೌಸೀಪ್, ಅಲ್ಪಾತ್ , ಸುಹೇಲ್ ಎಂಬುವವರು ತಮ್ಮ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ತಮ್ಮಗಳನ್ನು ಉದ್ದೇಶಿಸಿ ಏ ಬೋಳಿ ನನ್ನ ಮಕ್ಕಳೇ ಎಲ್ಲಿ ಅವನು ಪಯಾಜ್ ಎಂದು ಜೋರಾಗಿ ಕೂಗಿದರು, ತಾನು ಯಾಕಪ್ಪ ಜೋರಾಗಿ ಕೂಗುತ್ತಿದ್ದೀರಿ ಎಂದು ಕೇಳುತ್ತಿದ್ದಂತೆ ಅವರ ಜೊತೆ ಯಲ್ಲಿ ಬಂದು ಆಚೆ ನಿಂತಿದ್ದ ರೆಹಮಾನ್ ರವರು  ತನ್ನ ಕೆನ್ನೆಗೆ ಕೈಗಳಿಂದ ಹೊಡೆದಿರುತ್ತಾರೆ, ಅರ್ಬಾಜ್, ಅಲ್ಪಾತ್, ತೌಸೀಪ್ ರವರು ತಮ್ಮ ಅತ್ತೆಯ ನೈಟಿಯನ್ನು ಹರಿದು ಹಾಕಿರುತ್ತಾರೆ. ನಂತರ ಸುಹೇಲ್ ರವರು ತನ್ನ ತಮ್ಮ ಪಯಾಜ್ ರವರಿಗೆ ಮುಷ್ಠಿಯಿಂದ ಮೂತಿಗೆ ಗುದ್ದಿ ಊತಗಾಯ ಮಾಡಿರುತ್ತಾರೆ. ತನ್ನ ಇನ್ನೊಬ್ಬ ತಮ್ಮ ನಯಾಜ್ ರವರಿಗೆ ಸುಹೇಲ್ ರವರು ಚಾಕುವಿನಿಂದ  ಎಡಗೈ ಮೊಣಕೈ ಕೆಳಗೆ ಕೊಯ್ದು ರಕ್ತಗಾಯ ಮಾಡಿರುತ್ತಾನೆ. ತೌಸೀಪ್ ರಾಡ್ ನಿಂದ ತಲೆಯ ಎಡಭಾಗಕ್ಕೆ ಹೊಡೆದಿರುತ್ತಾನೆ, ತಮ್ಮ ತಂದೆ ಚಾಂದ್ ಪಾಷ ರವರು ಏ ಯಾಕೋ ಹೀಗೆ ಮಾಡುತ್ತಿದ್ದೀರ ಎಂದು ಕೇಳಿದಕ್ಕೆ ತೌಸೀಪ್ ರವರು ನಿನ್ನ ಮಗ ಪಯಾಜ್ ತಮ್ಮನ್ನು ಗುರಾಯಿಸಿಕೊಂಡು  ನೋಡುತ್ತಾನೆ, ಎಷ್ಟು ಧೈರ್ಯ ಇವನಿಗೆ ಎಂದು ಹೇಳಿ ತಮ್ಮ ತಂದೆಯ ಗಲ್ಲಾಪಟ್ಟಿ ಹಿಡಿದು ಎಳೆದಾಡಿ ಎದೆಯ ಮೇಲೆ ಗುದ್ದಿರುತ್ತಾನೆ, ರೆಹಮಾನ್ ರವರು ರಾಡ್ ನಿಂದ ತಮ್ಮ ತಂದೆಯ ಸೊಂಟಕ್ಕೆ ಹೊಡೆದು ಊತಗಾಯ ಮಾಡಿರುತ್ತಾನೆ, ಮೇಲ್ಕಂಡವರೆಲ್ಲರೂ ಹೋಗುವಾಗ  ಇನ್ನೊಮ್ಮೆ ತಮ್ಮ ತಂಟೆಗೆ ಬಂದರೆ ನಿಮ್ಮಲ್ಲರನ್ನು ಪ್ರಾಣಸಹಿತಿ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಮನೆಯ ಮುಂಭಾಗದ ಕಾಲಿನಿಂದ ಒದ್ದುಕೊಂಡು ಹೋಗಿರುತ್ತಾರೆ, ಇದರಿಂದ ಬಾಗಿಲು ಬೆಂಡ್ ಆಗಿರುತ್ತೆ, ಮನೆಯ ಮುಂದೆ ನಿಲ್ಲಿಸಿದ ತಮ್ಮ ದೊಡ್ಡಪ್ಪನ ಮಗ ಸಾಧಿಕ್ ರವರ ಡಿಯೋ ದ್ವಿಚಕ್ರ ವಾಹನವನ್ನು ಕೆಳಗೆ ತಳ್ಳಿ ಜಖಂ ಮಾಡಿರುತ್ತಾರೆ, ಅಷ್ಟರಲ್ಲಿ ತಮ್ಮ ಏರಿಯಾದ ಬಾಬಾ, ಗುಲಾಬ್, ತನ್ವೀರ್ ರವರು ಜಗಳ ಬಿಡಿರುತ್ತಾರೆ. ತಮಗೆ ಗಾಯಗಳಾಗಿದ್ದರಿಂದ ಯಾವುದೋ ಒಂದು ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತೇವೆ, ಆದ್ದರಿಂದ ಸದರಿ ಮೇಲ್ಕಂಡರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

13. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.84/2021 ಕಲಂ. 143,147,323,324,504,506,149 ಐ.ಪಿ.ಸಿ :-

          ದಿನಾಂಕ:23/05/2021 ರಂದು ಬೆಳಿಗ್ಗೆ 8:45 ಗಂಟೆಗೆ ಪಿರ್ಯಾದಿದಾರರಾದ ಅರ್ಬಾಜ್ ಖಾನ್ ಬಿನ್ ಅಮ್ಜಾದ್ ಖಾನ್ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯನ್ನು ಪಡೆದು ಸಾರಾಂಶವೇನೆಂದರೆ ದಿನಾಂಕ: 22/05/2021 ರಂದು ರಾತ್ರಿ 7:45 ಗಂಟೆಯ ಸಮಯದಲ್ಲಿ ತನ್ನ ತಮ್ಮ ಸುಹೇಲ್ ಗಾಬರಿಯಿಂದ ಮನೆಗೆ ಬಂದು ಯಾಕೆ ಎಂದು ಕೇಳಿದ್ದಕ್ಕೆ ತಮ್ಮ ಏರಿಯಾದ ಚಾಂದ್ ಪಾಷ ರವರ ಮಗ ಪಯಾಜ್ ತನ್ನ ಮೇಲೆ ಆಟ ಆಡುವ ವಿಚಾರದಲ್ಲಿ ಗಲಾಟೆ ಮಾಡಿದ್ದ ಅದನ್ನು ಅವರ ತಂದೆಗೆ ಹೇಳಲು ಹೋದರೆ ಪಯಾಜ್ ರವರ ಅಣ್ಣಂದಿರು ನವಾಜ್ , ನಯಾಜ್ ಅವರ ತಂದೆ ಚಾಂದ್ ಪಾಷ ರವರು ತನ್ನನ್ನು ಹೊಡೆದು ಕಳಿಸಿರುತ್ತಾರೆ ಎಂದು ಹೇಳಿದ, ಆಗ ತಾನು ತಮ್ಮ ತಾಯಿ ಸಹೇರಾ ಭಾನು ರವರು ಅವರ ಮನೆಯ ಬಳಿ ರಾತ್ರಿ 8:00 ಗಂಟೆಗೆ ಏನಾಯ್ತು ಎಂದು ಕೇಳಲು ಹೋದೆವು, ತಾವು ಹೋಗುತ್ತಿದ್ದಂತೆ ಚಾಂದ್ ಪಾಷ, ನವಾಜ್ ರವರು ತನ್ನ ಮಗ ಸುಹೇಲ್ ನ ಗಲ್ಲಾಪಟ್ಟಿ ಹಿಡಿದು ಎಳೆದಾಡಿ ಕುತ್ತಿಗೆಗೆ ಕೈಯಾಕಿದಾಗ ತಾನು ಯಾಕೆ ನನ್ನ ಮಗನನ್ನು ಹೀಗೆ  ಹೊಡೆಯುತ್ತಿದ್ದೀರಿ ಎಂದು ಹೇಳುತ್ತಿದ್ದಂತೆ ನವಾಜ್ ಮತ್ತು ಚಾಂದ್ ಪಾಷ ರವರು ತನ್ನ ನೈಟಿಯನ್ನು ಹಿಡಿದು ಹರಿದು ಹಾಕಿದರು, ತಾನು ಜೋರಾಗಿ ಕೂಗಿಕೊಂಡಾಗ ತನ್ನ ತಮ್ಮ ಸುಹೇಲ್  ಅಡ್ಡ ಬಂದಿದ್ದಕ್ಕೆ ನವಾಜ್ ರವರು ರಾಡ್ ನಿಂದ ಹಣೆಗೆ, ಕೆನ್ನಗೆ ಗಾಯಮಾಡಿರುತ್ತಾರೆ.ಚಾಂದ್ ಪಾಷ ರವರು ಮತ್ತು ನಯಾಜ್ ರವರು  ತನಗೆ ಬೆನ್ನಿನ ಮೇಲೆ  ಕೈಗಳಿಂದ ಗುದ್ದಿ ಊತಗಾಯ ಮಾಡಿರುತ್ತಾರೆ, ಚಾಂದ್ ಪಾಷ ರವರ ಹೆಂಡತಿ ಮತ್ತು ಆತನ ತಂಗಿ ಜಬೀನಾ ತಾಜ್ ಆತನ ಮಗಳ ಮೊಹಮದಿ ರವರು ಬೇವರ್ಸಿ  ಲೋಫರ್ ಮುಂಡೆ ಎಂದು ಕೆಟ್ಟ ಮಾತುಗಳಿಂದ ಬೈದು ತನ್ನ ತಾಯಿಗೆ ಬೈದು ಕೈಗಳಿಂದ ಹೊಡೆದಿರುತ್ತಾರೆ, ಅಷ್ಟರಲ್ಲಿ ತಮ್ಮ ಏರಿಯಾದ ಮೆಹಬೂಬ್ ಮತ್ತು ಕಲಂದರ್ ರವರು ಜಗಳ ಬಿಡಿಸಿದರು, ಆದರು ಮೇಲ್ಕಂಡರವರು ನಮ್ಮ ಮಗನ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿ ಹೊರಟುಹೋಗಿರುತ್ತಾರೆ. ತಾವು ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತೇವೆ, ಆದ್ದರಿಂದ ಸದರಿ ಮೇಲ್ಕಂಡರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿರುತ್ತಾರೆ.

 

14. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.125/2021 ಕಲಂ. 379 ಐ.ಪಿ.ಸಿ :-

          ದಿನಾಂಕ:22/05/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ಮನೋಹರ ಬಿನ್ ಖಾದ್ರಿ ನರಸಿಂಹಲು , 35 ವರ್ಷ, ಲಿಂಗಾಯುತರು, ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ ಹಾಲಗಾನಹಳ್ಳಿ ಗ್ರಾಮ ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ಬೆಂಗಳೂರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಲಾಕ್ ಡೌನ್ ಇರುವುದರಿಂದ ಪಿರ್ಯಾದಿ ತಮ್ಮ ಸ್ವಗ್ರಾಮ ಹಾಲಗಾನಹಳ್ಳಿಯಲ್ಲಿ ವಾಸವಿದ್ದು, ಮನೆಯಲ್ಲಿಯೇ ವರ್ಕ್ ಪ್ರಂ ಹೋಂ ಅಡಿಯಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ:21/05/2021 ರಂದು ಪಿರ್ಯಾದಿದಾರರು ತನ್ನ ದ್ವಿ ಚಕ್ರವಾಹನ ಯಮಹಾ ಎಫ್.ಜೆಡ್ -250 ಸಿ.ಸಿ ಸಂಖ್ಯೆ. KA-01, J.A-1145 ಅನ್ನು ತಮ್ಮ ಮನೆಯ ಬಳಿ ನಿಲ್ಲಿಸಿ ರಾತ್ರಿ 10-00 ಗಂಟೆಯಲ್ಲಿ ದ್ವಿ ಚಕ್ರವಾಹನವನ್ನು ನೋಡಿ ಮಲಗಿ ನಂತರ ಬೆಳಿಗ್ಗೆ 05-00 ಗಂಟೆಯ ಸಮಯದಲ್ಲಿ ಎದ್ದು ನೋಡಲಾಗಿ ಸದರಿ ದ್ವಿ ಚಕ್ರ ವಾಹನ ಇರುವುದಿಲ್ಲವೆಂದು ದ್ವಿ ಚಕ್ರವಾಹನವನ್ನು ರಾತ್ರಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಪತ್ತೆ ಮಾಡಿಕೊಡಲು ಕೋರಿ ದೂರು.

 

15. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.55/2021 ಕಲಂ. 279,337  ಐ.ಪಿ.ಸಿ :-

          ದಿನಾಂಕ:23-05-2021 ರಂದು ಮದ್ಯಾಹ್ನ 13:05 ಗಂಟೆಗೆ ಪಿರ್ಯಾದಿ ಕಾರ್ತಿಕ್ ರೆಡ್ಡಿ ಬಿನ್ ಸೀತಾರಾಮರೆಡ್ಡಿ, 21 ವರ್ಷ, ಒಕ್ಕಲಿಗರು, ಚಾಲಕ, ವಾಸ: ಗುಂಡಂಗೆರೆ ಗ್ರಾಮ, ದೊಡ್ಡಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಸುಮಾರು 5 ತಿಂಗಳುಗಳಿಂದ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಟಪೈ ಕಂಪನಿಯಲ್ಲಿ ನೌಕರರನ್ನು ಚಿಕ್ಕಬಳ್ಳಾಪುರದಿಂದ ಸಾಗಿಸುವ KA-02 D-8702 ಟಿಟಿ ವಾಹನದಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ. ಪ್ರತಿ ದಿನ ತಾನು ಚಿಕ್ಕಬಳ್ಳಾಪುರದಿಂದ ನೌಕರರನ್ನು ಬಾಶೆಟ್ಟಿಹಳ್ಳಿಗೆ ಕರೆತಂದು ಕೆಲಸ ಮುಗಿಸಿದ ನಂತರ ಅವರನ್ನು ಚಿಕ್ಕಬಳ್ಳಾಪುರಕ್ಕೆ ಬಿಟ್ಟು ಬರುತ್ತಿದ್ದೆ. ದಿನಾಂಕ:22-05-2021 ರಂದು ಎಂದಿನಂತೆ ಕೆಲಸಗಾರರನ್ನು ಕರೆದುಕೊಂಡು ರಾತ್ರಿ 11:00 ಗಂಟೆಗೆ ಬಾಶೆಟ್ಟಿಹಳ್ಳಿ ಬಿಟ್ಟು ರಾತ್ರಿ 12:00 ಗಂಟೆ ಸಮಯದಲ್ಲಿ ಚದಲಪುರ ಕ್ರಾಸ್ ಬಳಿ ಹೋಗುತ್ತಿದ್ದು ರಸ್ತೆಯ ತಡೆ ಇದ್ದ ಕಾರಣ ತಾನು ವಾಹನವನ್ನು ನಿಧಾನ ಮಾಡಿದಾಗ ತನ್ನ ವಾಹನದ ಹಿಂದೆ ಬರುತ್ತಿದ್ದ TN-28 AE-1166 LORRY ಲಾರಿಯನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ವಾಹನಕ್ಕೆ ಹಿಂದುಗಡೆಯಿಂದ ಗುದ್ದಿದ ಆಗ ತನ್ನ ವಾಹನ ನಿಯಂತ್ರಣಕ್ಕೆ ಸಿಕ್ಕದೆ ಜೋರಾಗಿ ಮುಂದೆ ಹೋಗಿ ಮುಂದೆ ಇದ್ದ ಪೊಲೀಸ್ ಬ್ಯಾರಿಕೇಡ್ಗಳಿಗೆ ಹೊಡೆದು ರಸ್ತೆಯ ಎಡ ಪಕ್ಕದಲ್ಲಿದ್ದ ಕಂಬಕ್ಕೆ ತನ್ನ ವಾಹನ ಗುದ್ದಿತು. ಆಗ ಇಳಿದು ನೋಡಲಾಗಿ ವಾಹನದ ಹಿಂದೆ, ಮುಂಭಾಗ, ಎಡ ಭಾಗ, ಬಲ ಭಾಗ, ಮುಂಭಾಗದ ಟೈರ್ ಹೊಡೆದಿರುತ್ತೆ, ಮುಂದಿನ, ಹಿಂದಿನ ಗ್ಲಾಸುಗಳು ಜಖಂ ಆಗಿರುತ್ತೆ. ವಾಹನದಲ್ಲಿದ್ದ ಮಹೇಶ ಕುಮಾರ ಎಂಬುವರಿಗೆ ಕಾಲಿ ಬಳಿ, ಕೈಗಳಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿರುತ್ತೆ. ಶಾಯಿದ್ ಅಹ್ಮದ್ ರವರಿಗೆ ಹಾಗೂ ತನಗೆ ಯಾವುದೇ ಗಾಯಗಳಾಗಿರುವುದಿಲ್ಲ. ತನ್ನ ಟಿಟಿ ವಾಹನಕ್ಕೆ ಅಪಘಾತ ಉಂಟು ಮಾಡಿದ TN-28 AE-1166 LORRY ಲಾರಿಯ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

 

16. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.167/2021 ಕಲಂ. 143,147,148,341,323,324,504,506,149  ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act 2015 :-

          ದಿನಾಂಕ 22/05/2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಸಾಮ್ಯುಯಲ್ ಬಿನ್ ವೆಂಕಟೇಶಪ್ಪ, 22 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ವಾಸ-ದೊಡ್ಡದಾಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 19/05/2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ತನ್ನ ಮಾವನಾದ ಗಂಗಪ್ಪ ರವರ ತೋಟದ ಬಳಿ ತಾನು ತನ್ನ ಸ್ವಂತ ಹೊಸ ದ್ವಿ ಚಕ್ರ ವಾಹನವಾದ ಪಲ್ಸರ್ ಎನ್.ಎಸ್ ಗಾಡಿಯಲ್ಲಿ ಹೋಗಿ ಬರುತ್ತಿರುವಾಗ ಸದರಿ ಗ್ರಾಮದ ವಾಸಿಯಾದ ವಿನಯ್ ಬಿನ್ ದೇವರಾಜ್, 24 ವರ್ಷ ವಕ್ಕಲಿಗ ಜಾತಿಗೆ ಸೇರಿರುತ್ತಾನೆ ಮತ್ತು ಹರೀಶ್ ಬಿನ್ ವೀರಭದ್ರಪ್ಪ 26 ವರ್ಷ ಬ್ರಾಹ್ಮಣ ಜಾತಿಗೆ ಸೇರಿದ ಈ ಆಸಾಮಿಗಳು ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದ ತನ್ನನ್ನು ವಿನಾ ಕಾರಣ ಅಡ್ಡಗಟ್ಟಿ ತನ್ನ ಮೇಲೆ ಏಕಾಏಕಿ ಹಲ್ಲೆ ಮಾಡಿ ವಿನಯ್ ಎಂಬುವರು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ತನ್ನ ಬಲಕೈನ ಅಂಗೈಗೆ ಬಲವಾಗಿ ಹೊಡೆದು ಮೂಳುಯನ್ನು ಸಹ ಮುರಿದು ಹಾಕಿರುತ್ತಾನೆ. ಹಾಗು ಈ ಇಬ್ಬರು ಆಸಾಮಿಗಳು ಸೇರಿ ತನ್ನ ಮೇಲೆ ದೈಹಿಕ ಹಲ್ಲೆ ಮಾಡಿ ಕೈಗಳಿಂದ ಕಾಲುಗಳಿಂದ ಹೊಡೆದಿರುತ್ತಾರೆ. ಸದರಿ ಆಸಾಮಿಗಳು ಇಬ್ಬರು ಕಲ್ಲುಗಳಿಂದ ತನ್ನ ಕತ್ತಿನ ಮೇಲೆ ಪರಚಿ ರಕ್ತಗಾಯವನ್ನುಂಟು ಮಾಡಿರುತ್ತಾರೆ ಹಾಗು ನನ್ನ ಮಗನೇ ನನ್ನ ಮುಂದೆ ಬೈಕ್ ಸವಾರಿ ಮಾಡುತ್ತೀಯಾ, ಎಷ್ಟೋ ಧೈರ್ಯ ನಿನಗೆ ಕೂಲಿ ಮಾಡಿಕೊಂಡು ಜೀವನ ಮಾಡುವ ನಿನಗೆ ಗಾಡಿ ಬೇಕೇನೋ ಕೀಳು ಜಾತಿ ನನ್ನ ಮಗನೇ ನಮ್ಮ ಮುಂದೆ ತಲೆ ಎತ್ತಿಕೊಂಡು ಗಾಡಿಯಲ್ಲಿ ಬರುತ್ತೀಯೆನೋ ಎಂದನು. ಅಷ್ಟರಲ್ಲಿ ಮೇಲ್ಕಂಡ ಆಸಾಮಿ ವಿನಯ್ ರವರ ಅಣ್ಣನಾದ ರವಿ ಬಿನ್ ಸೊಣ್ಣೇಗೌಡ, 34 ವರ್ಷ, ವಕ್ಕಲಿಗ ಜಾತಿ, ವಿಜಿ ಕುಮಾರ್ ಬಿನ್ ಹನಮಂತಗೌಡ, 31 ವರ್ಷ ಹಾಗು ಮಲೇಗೌಡ ರವರ ಶ್ರೀನಿವಾಸ್ ಬಿನ್ ವೆಂಕಟರಾಯಪ್ಪ ಇವರು ಒಟ್ಟು 6 ಜನ ಆಸಾಮಿಗಳು ಸೇರಿ ತನ್ನನ್ನು ಕೀಳು ಜಾತಿ ನನ್ನ ಮಗನೇ, ಮಾದಿಗ ನನ್ನ ಮಗನೇ, ನಿನ್ನನ್ನು ಹಾಗು ನಿನ್ನ ಕುಟುಂಬದ ಎಲ್ಲರನ್ನು ಜೀವಂತವಾಗಿ ಸುಟ್ಟು ಹಾಕುತ್ತೇವೆ ಎಂದು ಹೇಳಿ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಅಷ್ಟರಲ್ಲಿ ಗಲಾಟೆ ಗಮನಿಸಿ ಬುದ್ದಿವಾದ ಹೇಳಿ ಬಿಡಿಸಲು ಬಂದ ತನ್ನ ಮಾವನಾದ ಮುನಿಕೃಷ್ಣಪ್ಪ ಬಿನ್ ಚೆನ್ನಪ್ಪ ಇವರನ್ನು ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿ ತಳ್ಳಿರುತ್ತಾರೆ. ಪ್ರಸ್ತುತ ಕರೋನಾ ರೋಗವು ತೀವ್ರವಾಗಿ ಹರಡುತ್ತಿರುವುದರಿಂದ ಮತ್ತು ಗ್ರಾಮದ ಹಿರಿಯರು ಈ ಬಗ್ಗೆ ಮಾತನಾಡಿ ಪರಿಹರಿಸುವುದಾಗಿ ಹೇಳಿದ ಕಾರಣ ದೂರನ್ನು ನೀಡುತ್ತಿದ್ದು ಮೇಲ್ಕಂಡ ಆಸಾಮಿಗಳು ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 23-05-2021 05:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080