ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.107/2021 ಕಲಂ. 379 ಐ.ಪಿ.ಸಿ :-

     ದಿನಾಂಕ:23/04/2021 ರಂದು ಮದ್ಯಾಹ್ನ 12-10 ಗಂಟೆಗೆ ಪಿಸಿ-214 ರವರು ಆರೋಪಿ ಹಾಗೂ ಮರಳು ತುಂಬಿದ ಟ್ರಾಕ್ಟರ್ ನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಸಿ-214 ಅಶೋಕ ಆದ ನಾನು ನೀಡುತ್ತಿರುವ ವರದಿ ಏನೆಂದರೆ ದಿನಾಂಕ; 23.04.2021 ರಂದು ಠಾಣಾಧಿಕಾರಿಗಳು  ನನಗೆ ಮತ್ತು ಪಿಸಿ 131 ರಾಜಪ್ಪ ರವರಿಗೆ ಗ್ರಾಮ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ನಾವು ಗೂಳೂರು, ಆಚೇಪಲ್ಲಿ ಕಾರಕೂರು,  ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಬೆಳಿಗ್ಗೆ 11-30 ಗಂಟೆಯ ಸಮಯದಲ್ಲಿ ಕಾರಕೂರು ಕ್ರಾಸ್ ನಿಂದ ಬಾಗೇಪಲ್ಲಿಗೆ ಬರಲು  ಕೊಂಡಂವಾರಿಪಲ್ಲಿ  ಗ್ರಾಮದ ಬಳಿ ಬರುತ್ತಿರುವಾಗ  ಒಂದು ಟ್ರಾಕ್ಟರ್ ಬರುತ್ತಿದ್ದು, ಸದರಿ ಟ್ರಾಕ್ಟರ್ ಚಾಲಕ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಟ್ರಾಕ್ಟರ್ ನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಓಡಿ ಹೋಗಲು ಪ್ರಯತ್ನಿಸಿದ್ದು, ನಾವುಗಳು ಹಿಂಬಾಲಿಸಿ ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಬಾಲಾಜಿ ಬಿನ್ ರಮಣಪ್ಪ, 25 ವರ್ಷ, ಬೋವಿ ಜನಾಂಗ, ಟ್ರಾಕ್ಟರ್ ಚಾಲಕ, ವಾಸ ಕೊತ್ತಕೋಟೆ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು, ಟ್ರಾಕ್ಟರ್ ಬಳಿ ಹೋಗಿ ನೋಡಲಾಗಿ ನೊಂದಣಿ ಸಂಖ್ಯೆ ಇಲ್ಲದ ಟ್ರಾಕ್ಟರ್ ಆಗಿದ್ದು ,  ಸದರಿ ಟ್ರಾಕ್ಟರ್  ಚಾಸ್ಸಿ ನಂ ಮತ್ತು ಇಂಜಿನ್ ನಂ. ಸ್ಪಷ್ಟವಾಗಿ ಕಾಣುತ್ತಿಲ್ಲ, ಸದರಿ ಟ್ರಾಕ್ಟರ್ ಸ್ವರಾಜ್ ಮಜ್ದಾ ಕಂಪೆನಿಯ ನೀಲಿಬಣ್ಣದ ಎಂಜಿನ್ ಆಗಿದ್ದು ಮತ್ತು ಟ್ರಾಲಿ ಸಹ ನೀಲಿ ಬಣ್ಣದಿಂದ ಕೂಡಿರುತ್ತೆ.  ಸದರಿ ಟ್ರಾಕ್ಟರ್ ಟ್ರಾಲಿ ಬಾಡಿ ಮಟ್ಟಕ್ಕೆ ಮರಳನ್ನು ತುಂಬಿಸಿರುತ್ತಾರೆ.  ಸದರಿ ಟ್ರಾಕ್ಟರ್ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಯಾವುದಾದರೂ ಅಧಿಕೃತ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾನೆ. ನಂತರ ಸದರಿ ನೊಂದಣಿ ಸಂಖ್ಯೆ ಇಲ್ಲದ ಟ್ರಾಕ್ಟರ್ ಮತ್ತು ಟ್ರಾಲಿ ಹಾಗೂ ಟ್ರಾಕ್ಟರ್ ನ ಚಾಲಕನನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಯಾವುದೇ ಪರವಾನಗಿ ಇಲ್ಲದೆ ಸರ್ಕಾರಿ ಸ್ವತ್ತಾದ ಮರಳನ್ನು ಟ್ರಾಕ್ಟರ್ ಟ್ರಾಲಿಗೆ  ತುಂಬಿಸಿಕೊಂಡು ಸಾಗಾಣಿಕೆ ಮಾಡುತ್ತಿರುವ  ಮೇಲ್ಕಂಡ ಟ್ರಾಕ್ಟರ್ ಚಾಲಕ ಮತ್ತು ಮಾಲೀಕ ಮೇಲೆ  ಮುಂದಿನ ಕ್ರಮಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.58/2021 ಕಲಂ. 15(A),32(3) ಆಕ್ಟ್:-

     ದಿನಾಂಕ : 23/04/2021  ರಂದು ಬಟ್ಲಹಳ್ಳಿ ಪೊಲಿಸ್ ಠಾಣೆಯ ಪಿ ಎಸ್ ಐ  ಶ್ರೀ ಟಿ ಎನ್ ಪಾಪಣ್ಣ ಆದ ನಾನು ಚಿಂತಾಮಣಿ ನಗರದ ನ್ಯಾಯಾಲಯದಲ್ಲಿ ಸಾಕ್ಷತ್ವ ನುಡಿದು ನಂತರ ಮದ್ಯಾಹ್ನ 15-00 ಗಂಟೆಯ ಸಮಯದಲ್ಲಿ ಚಿಂತಾಮಣಿ ತಾಲ್ಲೂಕು ಬಟ್ಲಹಳ್ಳಿ ಪೊಲೀಸ್ ಠಾಣೆಯ ಸರಹದ್ದಿನ ಗುಡಾರ್ಲಹಳ್ಳಿ ಗ್ರಾಮದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ನನಗೆ ಬಾತ್ಮಿದಾರರಿಂದ ಗುಡಾರ್ಲಹಳ್ಳಿ ಗ್ರಾಮದ ವಾಸಿ ಕೃಷ್ಣಾರೆಡ್ಡಿ ಬಿನ್ ಲೆಟ್ ಮುನಿಯಪ್ಪ ರವರು ಆತನ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಗುಡಾರ್ಲಹಳ್ಳಿ ಗ್ರಾಮದಲ್ಲಿ  ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರಿಗೆ ಮಾಹಿತಿಯನ್ನು ತಿಳಿಸಿ ನಂತರ ಪಂಚರೊಂದಿಗೆ  ಮದ್ಯಾಹ್ನ 15-30 ಗಂಟೆಗೆ ಕೃಷ್ಣಾರೆಡ್ಡಿ ರವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ ಅಂಗಡಿಯ   ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೃಷ್ಣಾರೆಡ್ಡಿ ಬಿನ್ ಲೆಟ್ ಮುನಿಯಪ್ಪ 50 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಗುಡಮಾರ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ ನಂ:7026706188. ಎಂದು ತಿಳಿಸಿದ್ದು, ಈತನು  ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾನೇಯೇ ಎಂಬುದರ  ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾನೆ.  ನಂತರ ಪಂಚರ ಸಮಕ್ಷಮ ಮದ್ಯಾಹ್ನ 15-45 ಗಂಟೆಯಿಂದ 16-30 ಗಂಟೆಯ ವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 1800 ಎಂ.ಎಲ್ ನ 867.5/-  ರೂಗಳ ಬೆಲೆ ಬಾಳುವ ಓಲ್ಡ್ ಟವರೇನ್ ವಿಸ್ಕೀ   180 ಎಂ.ಎಲ್ ನ 10 ಟೆಟ್ರಾ ಪ್ಯಾಕೇಟ್ ಗಳು,( 1 ಪಾಕೆಟ್ ಬೆಲೆ 86.75 ರೂಗಳು) ಮತ್ತು 180 ಎಂ.ಎಲ್ ನ 2 ಖಾಲಿ ಓಲ್ಡ್ ಟವರೇನ್ ವಿಸ್ಕೀ   ಟೆಟ್ರಾ ಪಾಕೇಟ್ ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೋಂಡು ಠಾಣೆಗೆ  ಸಂಜೆ  17-00 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:58/2021 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

3. ಚೇಳೂರು ಪೊಲೀಸ್ ಠಾಣೆ ಮೊ.ಸಂ.31/2021 ಕಲಂ. 188 ಐ.ಪಿ.ಸಿ & 5 THE EPIDEMIC DISEASES (AMENDMENT) ORDINANCE, 2020:-

     ದಿನಾಂಕ:22/04/2021 ರಂದು ಮದ್ಯಾಹ್ನ 2:30 ಗಂಟೆಯಲ್ಲಿ ಚೇಳೂರು ಪೊಲೀಸ್ ಠಾಣೆಯ ಪಿಎಸ್ ಐ ರವರಾದ ಪ್ರತಾಪ್ ಕೆ ಆರ್ ರವರು  ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಸರ್ಕಾರಿ ಜೀಪ್ ಸಂಖ್ಯೆ: ಕೆಎ42 ಜಿ 61 ಜೀಪಿನಲ್ಲಿ ಜೀಪ್ ನಲ್ಲಿ  ಚಾಲಕನಾಗಿ ಎಪಿಸಿ 87 ಮೋಹನ್ ಕುಮಾರ್ ಜಿಎ, ಸಿಬ್ಬಂದಿಯವರಾದ ಹೆಚ್ ಸಿ 149 ಇನಾಯತ್ ರವರೊಂದಿಗೆ   ಚೇಳೂರು ಗ್ರಾಮದಲ್ಲಿ   ಗಸ್ತು ಮಾಡುತ್ತಾ  ಸದರಿ ಗ್ರಾಮದಲ್ಲಿ  ಸಾರ್ವಜನಿಕರಿಗೆ ಮತ್ತು ಹೋಟಲ್ / ಅಂಗಡಿ ಮಾಲೀಕರಿಗೆ ಕೋವಿಡ್ 19 ರೋಗವನ್ನು ತಡೆಗಟ್ಟುವ ಬಗ್ಗೆ ಅಧಿಸೂಚನೆಗಳ ಬಗ್ಗೆ ಹಾಗೂ  ಪ್ರತಿಯೊಬ್ಬರೂ  ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಜಾಗೃತಿ ಮೂಡಿಸುತ್ತಿದ್ದು. ಈ ಸಮಯದಲ್ಲಿ ಈ ದಿನ ದಿನಾಂಕ:22/04/2021 ರಂದು ಮದ್ಯಾಹ್ನ 2:00 ಗಂಟೆಯಲ್ಲಿ ಚೇಳೂರಿನ  ಚಿಂತಾಮಣಿ ಬಸ್ ನಿಲ್ದಾಣದ ಬಳಿಯಿರುವ  ವಿಷ್ಣು ಹೋಟಲ್ ಹೋಟಲ್ ಮುಂಭಾಗದಲ್ಲಿ  ಜನರು ಗುಂಪು ಗುಂಪಾಗಿ ಸೇರಿ ಯಾವುದೇ ಸಾಮಾಜಿಕ ಅಂತರ ಪಾಲಿಸದೇ ಟೀ ಕುಡಿಯುತ್ತಿದ್ದರು ಸ್ಥಳಕ್ಕೆ  ನಾನು ಹೋಗಲಾಗಿ ಸ್ಥಳದಲ್ಲಿ ಟೀ ಕುಡಿಯುತ್ತಿದ್ದ 04 ರಿಂದ 05 ಜನ ಸಾರ್ವಜನಿಕರು ಸ್ಥಳದಿಂದ ಓಡಿ ಹೋಗಿದ್ದು, ಸದರಿ ಹೋಟಲ್ ಮಾಲೀಕ ಕೋವಿಡ್-19 ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗಡೆದುಕೊಳ್ಳದೇ ನಿರ್ಲಕ್ಷತನದಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಜನರನ್ನು ಗುಂಪು ಗುಂಪಾಗಿ ಸೇರಿಸಿಕೊಂಡು  ಟೀ, ಕಾಫಿ ಯನ್ನು ಹಾಗೂ ಆಹಾರವನ್ನು  ವಿತರಣೆ ಮಾಡುತ್ತಿದ್ದನು. ಸದರಿ ಸ್ಥಳದಲ್ಲಿದ್ದ ಹೋಟಲ್ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ವಿಷ್ಣುಪ್ರಸಾದ್  ಬಿನ್ ರಾಮಲಿಂಗಪ್ಪ, 50 ವರ್ಷ, ಬ್ರಾಹ್ಮಣ ಜನಾಂಗ, ಹೋಟಲ್ ವ್ಯಾಪಾರ, ಚೇಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು.  ಪೋನ್ ನಂ- 97318088862 ಎಂತ ತಿಳಿಸಿದನು. ಸದರಿ ಆಸಾಮಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣ ಸಂಬಂದ ನೀಡಿರುವ ನಿಬಂಧನೆಗಳನ್ನು ಉಲ್ಲಂಘಿಸಿರುವುದರಿಂದ ಸದರಿಯಾತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿ ನೀಡಿದ ವರದಿಯ ಮೇರೆಗೆ ಠಾಣಾ ಮೊಸಂ:31/2021 ಕಲಂ 188 ಐಪಿಸಿ ರೆ/ವಿ 5 ಎಪಿಡೆಮಿಕ್ ಡಿಸಿಸಸ್ (ಅಮೆಂಡ್ ಮೆಂಟ್ ) ಆರ್ಡಿನೆನ್ಸ್ ಆಕ್ಟ್ – 2020 ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.

 

4. ಚೇಳೂರು ಪೊಲೀಸ್ ಠಾಣೆ ಮೊ.ಸಂ.32/2021 ಕಲಂ. 143,511,149 ಐ.ಪಿ.ಸಿ & 51,53 THE DISASTER MANAGEMENT ACT, 2005:-

          ದಿನಾಂಕ:23/04/2021 ರಂದು ಬೆಳಗ್ಗೆ 6:00 ಗಂಟೆ ಸಮಯದಲ್ಲಿ  ಚೇಳೂರು ಪೊಲೀಸ್ ಠಾಣೆಯ ಪಿಎಸ್ ಐ ರವರಾದ ಪ್ರತಾಪ್ ಕೆಆರ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಮಾಲು & ಆರೋಪಿ ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಈ ದಿನ ದಿನಾಂಕ:22/04/2021 ರಂದು  ಸರ್ಕಾರಿ ಜೀಪ್ ಸಂಖ್ಯೆ: ಕೆಎ 42 ಜಿ 61 ಜೀಪಿನಲ್ಲಿ ಜೀಪ್ ಚಾಲಕನಾಗಿ ಎಪಿಸಿ 87 ಮೋಹನ್ ಕುಮಾರ್ ಜಿಎ, ಠಾಣಾ ಸಿಬ್ಬಂದಿಯವರಾದ ಹೆಚ್ ಸಿ 149 ಇನಾಯತ್, ಹೆಚ್ ಸಿ 47 ಪ್ರಭಾಕರ್  ರವರು ರಾತ್ರಿ ಗಸ್ತಿನಲ್ಲಿದ್ದಾಗ  ರಾತ್ರಿ ಸುಮಾರು 3:00 ಗಂಟೆ ಸಮಯದಲ್ಲಿ  ಬಾತ್ಮೀದಾರರಿಂದ ಬಂದ ಮಾಹಿತಿ ಏನೆಂದರೆ ಜಿಲಿಪಿಗಾರಪಲ್ಲಿಗೆ ಸೇರಿದ ಸರ್ಕಾರಿ ಬೆಟ್ಟದಲ್ಲಿರುವ ಈಶ್ವರ ನ ದೇವಸ್ಥಾನದ ಬಳಿ  ಯಾರೋ  ಕೆಲವು ಆಸಾಮಿಗಳು ನಿಧಿಯನ್ನು ತೆಗೆಯುವ ಉದ್ದೇಶದಿಂದ ಕಾರ್ ಮತ್ತು  ಜೆಸಿಬಿ ಯಲ್ಲಿ ಬಂದಿರುವುದಾಗಿ ಮಾಹಿತಿ ತಿಳಿದುಬಂದಿದ್ದು  ಅದರಂತೆ ನಾವುಗಳು ಜಿಲಿಪಿಗಾರಪಲ್ಲಿ ಗ್ರಾಮದ ಸರ್ಕಾರಿ ಬೆಟ್ಟದಲ್ಲಿರುವ ಈಶ್ವರ ದೇವಸ್ಥಾನದ  ಬಳಿಗೆ ಹೋಗಿ ನೋಡಲಾಗಿ  ಕಾನೂನು ಬಾಹಿರವಾಗಿ ಅಕ್ರಮವಾಗಿ ನಿಧಿಯನ್ನು ತೆಗೆಯುವ ಉದ್ದೇಶದಿಂದ ಜೆಸಿಬಿಯಿಂದ ಈಶ್ವರನ ದೇವಸ್ಥಾನದ ಹಿಂಭಾಗದಲ್ಲಿ ದೇವಸ್ಥಾನಕ್ಕೆ ಸೇರಿದ ಇಟ್ಟಿಗೆ , ಕಲ್ಲುಬಂಡೆಗಳನ್ನು ಸರಿಸಿ  ಮಣ್ಣನ್ನು ಅಗೆಯುತ್ತಿದವರ ಮೇಲೆ ದಾಳಿ ಮಾಡಿ ಸದರಿ ಕೃತ್ಯದಲ್ಲಿ ಭಾಗಿಯಾಗಿದ್ದ ಆಸಾಮಿಗಳನ್ನು ವಶಕ್ಕೆ ಪಡೆದು ಹೆಸರು ವಿಳಾಸವನ್ನು ತಿಳಿಯಲಾಗಿ 1) ಕೆವೈ ಶ್ರೀನಿವಾಸ ಬಿನ್ ಯರ್ರಪ್ಪ, 37 ವರ್ಷ, ವಕ್ಕಲಿಗರು, ಅಡುಗೆ ಭಟ್ಟರು, ಕ್ಯಾಸಗೆರೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. ಚಿಕ್ಕಬಳ್ಳಾಪುರ ಜಿಲ್ಲೆ, ಫೋ ನಂ:9845900932,  2) ನರೇಶ ಬಿನ್ ವೆಂಕಟಪ್ಪ, 30 ವರ್ಷ, ಭೋವಿ ಜನಾಂಗ, ಜೆಸಿಬಿ ಚಾಲಕ, ವಡ್ಡರಹಳ್ಳಿ, ಬಂಗಾರಪೇಟೆ ತಾಲ್ಲೂಕು, ಕೋಲಾರ ಜಿಲ್ಲೆ. ಫೋನಂ:7349279863, 3)  ರವಿ ಬಿನ್ ಬಚ್ಚಣ್ಣ, 35 ವರ್ಷ, ನಾಯಕ ಜನಾಂಗ, ಗಾರ್ಮೆಂಟ್ಸ್ ಕೆಲಸ, ಗೋಪಾಲದಾಸ ಗಾರ್ಮೆಂಟ್ಸ್ ,  ಹಾಲಿ ವಾಸ: ನೆಲಗದರನಹಳ್ಳಿ ಪೀಣ್ಯ, ಸ್ವಂತ ಸ್ಥಳ: ಉಡಿಗೆರೆ ತಾಂಡ್ಯ, ಕಡೂರು ತಾಲ್ಲೂಕು, ಚಿಕ್ಕಮಂಗಳೂರು ಜಿಲ್ಲೆ. 7353008692. 4)ಹನುಮಂತರಾಯಪ್ಪ ಬಿನ್ ಗಿಡ್ಡಯ್ಯ, 64 ವರ್ಷ,ವಕ್ಕಲಿಗರು, ವ್ಯವಸಾಯ, ನೆಲಗೆದರನಹಳ್ಳಿ, ಪೀಣ್ಯ ದಾಸರಹಳ್ಳಿ, ಬೆಂಗಳೂರು. ಫೋ ನಂ:9945060655. 5)ಅಶೋಕ ಕುಮಾರ್ ಬಿನ್ ಶ್ರೀನಿವಾಸ, 45 ವರ್ಷ, ವೈಶ್ಯರು, ವ್ಯವಸಾಯ, ನಲ್ಲಮಾಡ ಗ್ರಾಮ, ನಲ್ಲಮಾಡ ಮಂಡಲಂ, ಕದಿರಿ ತಾಲ್ಲೂಕು, ಅನಂತಪುರ ಜಿಲ್ಲೆ, 6) ಶಿವಣ್ಣ ಎಂ ಎಲ್ ಬಿನ್  ಲಕ್ಷ್ಮಣಪ್ಪ, 43 ವರ್ಷ, ಕುರುಬರು, ಬಿಎಂಟಿಸಿ ಚಾಲಕ, ಪೀಣ್ಯ ಡಿಪೋ(22) ನೆಲಗದರಹಳ್ಳಿ, ನಾಗಸಂದ್ರ ಪೋಸ್ಟ್, ಪೀಣ್ಯ 2ನೇ ಸ್ಟೇಜ್, ಬೆಂಗಳೂರು, ಸ್ವಂತ ಸ್ಥಳ:  ಮಲ್ಲಾಪುರ  ಕಡೂರು ತಾಲ್ಲೂಕು, ಚಿಕ್ಕಮಂಗಳೂರು ಜಿಲ್ಲೆ. ಫೋ ನಂ:9591220020 ಸದರಿ ಆಸಾಮಿಗಳ ಹೆಸರು & ವಿಳಾಸವನ್ನು ವಿಚಾರಿಸುತ್ತಿದ್ದ ಸಮಯದಲ್ಲಿ ಸದರಿ ಸ್ಥಳದಿಂದ ಮೂರು ಜನ ಆಸಾಮಿಗಳು ಓಡಿ ಹೋಗಿ ಕತ್ತಲಿನಲ್ಲಿ ಮರೆಯಾಗಿದ್ದು ಓಡಿ ಹೋದವರ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ 7) ದೇವರಾಜ, ಜಿಲಿಪಿಗಾರಪಲ್ಲಿ ತಾಂಡ ಹಾಲಿ ವಾಸ: ಹೆಬ್ಬಾಳ, ಬೆಂಗಳೂರು, 8) ಆಂಜಿ @ ಸ್ವಾಮಿ, ಜಿಲಿಪಿಗಾರಪಲ್ಲಿ ಗ್ರಾಮ, 9) ಮುನಿರಾಜು ಎಂದು ತಿಳಿದು ಬಂದಿದ್ದು, ದೇಶದಲ್ಲಿ ಕೊರೋನಾ (ಕೋವಿಡ್ 19) ವೈರಸ್ ಇರುವುದರಿಂದ  ಯಾವುದೇ  ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಮುಖಕ್ಕೆ ಮಾಸ್ಕ್ ಅನ್ನು ಧರಿಸದೇ, ಸ್ಯಾನಿಟೈಸರ್ ಅನ್ನು ಬಳಸದೇ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಸೂಚನೆಗಳನ್ನು ಪಾಲಿಸದೇ ಅಕ್ರಮವಾಗಿ ಗುಂಪು ಸೇರಿಕೊಂಡು  ನಿಧಿಯನ್ನು ತೆಗೆಯುವ ಉದ್ದೇಶದಿಂದ ಇಟ್ಟಿಗೆ , ಕಲ್ಲುಗಳನ್ನು ತೆಗೆದು ಮಣ್ಣನ್ನು   ಅಗೆಯುತ್ತಿದ್ದ  ಮೇಲ್ಕಂಡ ಆಸಾಮಿಗಳು ಮತ್ತು ಆರೋಪಿಗಳು ಬಳಸಿದ್ದ 14000 ರೂ ನಗದು, KA 02 ML 8644 ನೋಂದಣಿ ಸಂಖ್ಯೆಯ  ಮಾರುತಿ ಸುಝುಕಿ ಇಕೋ ವಾಹನ ಮತ್ತು ಜೆಸಿಬಿಯನ್ನು ವಶಕ್ಕೆ ಪಡೆದು ಕಾನೂನು ರೀತ್ಯ ಕ್ರಮವನ್ನು ಜರುಗಿಸಲು ನೀಡಿದ ವರದಿಯ ಮೇರೆಗೆ ಠಾಣಾ ಮೊಸಂ:32/2021 ಕಲಂ 143, 511 ರೆ/ವಿ 149 ಐಪಿಸಿ, ಕಲಂ 51, 53 ಡಿಸಾಸ್ಟರ್ ಮ್ಯಾನೆಜ್ ಮೆಂಟ್ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.67/2021 ಕಲಂ. 87 ಕೆ.ಪಿ ಆಕ್ಟ್:-

          ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ: 22/04/2021 ರಂದು ಮದ್ಯಾಹ್ನ 15-00 ಗಂಟೆಗೆ ಪಿ.ಎಸ್.ಐ ಸಾಹೇಬರಾದ ಶ್ರೀ ಬಿ.ಪಿ ಮಂಜುರವರು ನೀಡಿದ ಜ್ಞಾಪನದ ಸಾರಾಂಶವೇನೆಂದರೆ ಈ ದಿನ ದಿನಾಂಕ:22.04.2021 ರಂದು ಮದ್ಯಾಹ್ನ 13-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ತಾಲ್ಲೂಕು ಹುನೇಗಲ್ ಗ್ರಾಮದಿಂದ ಪಶ್ಚಿಮದ ಕಡೆ ಹೊರವಲಯದಲ್ಲಿರುವ ಸರ್ಕಾರಿ ಬಂಡೆಯ ಬಳಿ ಹೊಂಗೆ ಮರದ ಕೆಳಗಡೆ ಹಣವನ್ನು ಪಣವಾಗಿಟ್ಟುಕೊಂಡು ಯಾರೋ ಅಂದರ್ ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ತಾನು, ಹೆಚ್.ಸಿ-38 ಸುರೇಶ್, ಹೆಚ್.ಸಿ 197 ನರಸಿಂಹಯ್ಯ, ಹೆಚ್.ಸಿ 141 ರಮಣಾರೆಡ್ಡಿ , ಪಿಸಿ 446 ಕರಿಬಾಬು , ಪಿ.ಸಿ-264 ನರಸಿಂಹಮೂರ್ತಿ  ಪಿ.ಸಿ-292 ಸಲೀಂಖಾ ಮುಲ್ಲಾ, ಪಿಸಿ 203 ಮಂಜುನಾಯ್ಕ್ , ಪಿಸಿ 580 ಸುನೀಲ್ ಎಂ ಬಾಳಮ್ಮನವರ್ ರವರೊಂದಿಗೆ ಪೊಲೀಸ್ ಜೀಪು ಸಂಖ್ಯೆ ಕೆ.ಎ-40, ಜಿ-567 ರಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಹುನೇಗಲ್ ಗ್ರಾಮದಿಂದ  ಪಶ್ಚಿಮದ ಕಡೆ ಹೊರವಲಯದಲ್ಲಿರುವ ಸರ್ಕಾರಿ ಬಂಡೆಯ ಬಳಿ ಹೋಗಿ ಮರೆಯಲ್ಲಿ ಜೀಪು ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ತನಗೆ ಮಾಹಿತಿ ಬಂದ ಸ್ಥಳವಾದ ಹೊಂಗೆ ಮರದ ಬಳಿ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ 7 ಜನರು ಗುಂಪು ಸೇರಿದ್ದು, ಗುಂಪಿನಲ್ಲಿದ್ದವರು ಅಂದರ್ 200/- ರೂ. ಬಾಹರ್ 200/- ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ತಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಜೂಜಾಟವಾಡುತ್ತಿದ್ದವರನ್ನು ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1] ರವಿ ಬಿನ್ ಶ್ರೀನಿವಾಸ 33 ವರ್ಷ ವಕ್ಕಲಿಗ ಜಿರಾಯ್ತಿ ವಾಸ ತುಮಕಲಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, 2] ವಿನಯ್ ಬಿನ್ ಶ್ರೀರಾಮಪ್ಪ , 22 ವರ್ಷ, ವಕ್ಕಲಿಗರು ಜಿರಾಯ್ತಿ ಹುನೇಗಲ್ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, 3] ಆನಂದ ಕೆ ಬಿನ್ ಕೃಷ್ಣಪ್ಪ, 32 ವರ್ಷ, ವಕ್ಕಲಿಗರು, ಜಿರಾಯ್ತಿ, ಹುನೇಗಲ್ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 4] ಶ್ರೀಕಾಂತ್ ಬಿನ್ ಗುರ್ರಪ್ಪ, 24 ವರ್ಷ, ಪ.ಜಾತಿ , ಜಿರಾಯ್ತಿ ವಾಸ ಹುನೇಗಲ್ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 5] ಬೈರೇಗೌಡ ಬಿನ್ ಲೇಟ್ ಮುನಿಪಾಪಣ್ಣ 47 ವರ್ಷ ವಕ್ಕಲಿಗರು ಜಿರಾಯ್ತಿ ವಾಸ ಹುನೇಗಲ್ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು , 6] ಶ್ರೀನಾಥ ಬಿನ್ ರಾಮಪ್ಪ 30 ವರ್ಷ ಪ.ಜಾತಿ ಜಿರಾಯ್ತಿ ವಾಸ ಹುನೇಗಲ್ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು , 7] ಶ್ರೀನಿವಾಸಮೂರ್ತಿ ಬಿನ್ ರಾಮಪ್ಪ 30 ವರ್ಷ ಭೋವಿ ಜನಾಂಗ ಜಿರಾಯ್ತಿ ವಾಸ ಹುನೇಗಲ್ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, ಎಂದು ತಿಳಿಸಿದರು. ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು, ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣ ಎಣಿಸಲಾಗಿ 3300/ - ರೂ. ಗಳಿದ್ದು, ಮೇಲ್ಕಂಡ 7 ಜನ ಆಸಾಮಿಗಳು, 52 ಇಸ್ಪೀಟ್ ಎಲೆಗಳು, ಪಂದ್ಯಕ್ಕೆ ಪಣವಾಗಿಟ್ಟಿದ್ದ 3300/- ರೂ. ನಗದು ಹಣವನ್ನು ಮದ್ಯಾಹ್ನ 13-30 ಗಂಟೆಯಿಂದ 14-30 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡಿರುವುದಾಗಿ ಮೇಲ್ಕಂಡ ಆರೋಪಿಗಳ ವಿರುದ್ಧ ಕಲಂ:87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿ ನೀಡಿದ ಜ್ಞಾಪನವನ್ನು ಪಡೆದು ಕೊಂಡು ಈ ಕೃತ್ಯವು ಅಸಂಜ್ಞೇಯ ಪ್ರಕರಣವಾಗಿರುವುದರಿಂದ ಮೇಲ್ಕಂಡ ಆಸಾಮಿಗಳ ವಿರುದ್ಧ ಠಾಣಾ ಎನ್.ಸಿ.ಆರ್. ನಂ. 78/2021 ರೀತ್ಯಾ ಪ್ರಕರಣ ದಾಖಲಿಸಿಕೊಂಡು ನಂತರ ಮೇಲ್ಕಂಡ ಆಸಾಮಿಗಳ ವಿರುದ್ಧ ಕಲಂ: 87 ಕೆ.ಪಿ.ಆಕ್ಟ್ ರೀತ್ಯಾ  ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಘನ ನ್ಯಾಯಾಲಯದಲ್ಲಿ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 

6. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.28/2021 ಕಲಂ. 279,336 ಐ.ಪಿ.ಸಿ:-

          ದಿನಾಂಕ:-22/04/2021 ರಂದು ಸಂಜೆ 7-00 ಗಂಟೆಗೆ ಪಿರ್ಯಾಧಿದಾರರಾದ ಶ್ರೀ. ಅರುಣ್ ಕುಮಾರ್ ಬಿ ಎನ್ ಬಿನ್ ನಾರಾಯಣಸ್ವಾಮಿ 30 ವರ್ಷ, ವಕ್ಕಲಿಗರು, ಚಾಲಕ ವೃತ್ತಿ, ಕಣಜೇನಹಳ್ಳಿ ಗ್ರಾಮ, ಕಸಭಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಾನು ಶ್ರೀ. ಕೆ.ವಿ ನಾಗರಾಜ್ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಅಧ್ಯಕ್ಷರು ರವರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡಿರುವ KA-01-MM-1167 ರ ಇನೋವಾ ಕಾರಿನ ಚಾಲಕನು ಈ ದಿನ ದಿನಾಂಕ:-22/04/2021 ರಂದು ರಜೆಯಲ್ಲಿದ್ದುದ್ದರಿಂದ ಅವರ ಬದಲಾಗಿ ತಾನು ಸದರಿ ಇನೋವಾ ಕಾರನ್ನು ಚಾಲನೆ ಮಾಡುತ್ತಿದ್ದು ದಿನಾಂಕ:-22/04/2021 ರಂದು ಸದರಿ ಕಾರಿನಲ್ಲಿ ತಾನು ಹಾಗೂ ತಮ್ಮ ಯಜಮಾನರಾದ ಶ್ರೀ. ಕೆ.ವಿ ನಾಗರಾಜ್ ರವರು ಕಣಜೇನಹಳ್ಳಿ ಗ್ರಾಮದಿಂದ ಕೆಲಸದ ನಿಮಿತ್ತ ನಂದಿ ಕ್ರಾಸ್ ಗೆ ಹೋಗಲು ಸಂಜೆ ಸುಮಾರು 5-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ - ಬೆಂಗಳೂರು ಎನ್.ಹೆಚ್-44 ಬಿ.ಬಿ ರಸ್ತೆಯ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗದ ಠಾರ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಹಿಂದಿನಿಂದ ಚಿಕ್ಕಬಳ್ಳಾಪುರ ಕಡೆಯಿಂದ ಬಂದ KA-40-A-2260 ರ ಅಶೋಕಾ ಲೈಲ್ಯಾಂಡ್ ಮಿನಿ ಲಾರಿ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡುತ್ತಿದ್ದ ಇನೋವಾ ಕಾರನ್ನು ಓವರ್ ಟೇಕ್ ಮಾಡಲು ಹೋಗಿ ತಮ್ಮ ವಾಹನದ ಬಲಭಾಗಕ್ಕೆ ಡಿಕ್ಕಿ ಹೊಡೆಸಿ ನಂತರ ಬೆಂಗಳೂರು - ಚಿಕ್ಕಬಳ್ಳಾಪುರ ಕಡೆಗೆ ಬರುವ ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿದ್ದ KA-03-P-4376 ರ ಮಾರುತಿ 800 ರ ಕಾರಿನ ಬಲಭಾಗಕ್ಕೆ ಡಿಕ್ಕಿಹೊಡೆಸಿದ ಪರಿಣಾಮ ವಾಹನಗಳು ಜಕಂಗೊಂಡಿದ್ದು ಸದರಿ ಆಲ್ಟೋ ಕಾರಿನಲ್ಲಿದ್ದವರನ್ನು ನೋಡಲಾಗಿ ಇಂಡಿಯನ್ ಆರ್ಮಿ ನೌಕರರಾದ ಶ್ರೀಜಿತ್ ಬಿನ್ ನಾರಾಯಣನ್ ಕೊಟ್ಟೂರ್ನಹಳ್ಳಿ, ಮಂತೇರಿ ಗ್ರಾಮ, ಕಣ್ಣೂರು, ಕೇರಳ ಹಾಗೂ ಅವರ ಹೆಂಡತಿ ಶ್ರೀಮತಿ ರಜಿನಿ 30 ವರ್ಷ ರವರಿದ್ದು ಹಾಗೂ ಸದರಿ ಅಪಘಾತ ಪಡಿಸಿದ KA-40-A-2260 ರ ಅಶೋಕಾ ಲೈಲ್ಯಾಂಡ್ ಮಿನಿ ಲಾರಿ ಚಾಲಕನ ಹೆಸರು ಮತ್ತು ವಿಳಾಸ ಕೇಳಲಾಗಿ ಹರೀಶ್ ಬಿನ್ ಶ್ರೀರಾಮಪ್ಪ, 30 ವರ್ಷ, ಸುದ್ಧಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು ಯಾರಿಗೂ ಸಹಾ ಗಾಯಗಳಾಗಿರುವುದಿಲ್ಲ. ಸದರಿ ಅಪಘಾತಕ್ಕೆ ಕಾರಣನಾದ KA-40-A-2260 ರ ಅಶೋಕಾ ಲೈಲ್ಯಾಂಡ್ ಮಿನಿ ಲಾರಿ ಚಾಲಕ ಹರೀಶ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.160/2021 ಕಲಂ. 454,457,380 ಐ.ಪಿ.ಸಿ:-

          ದಿನಾಂಕ: 22/04/2021 ರಂದು ಮದ್ಯಾಹ್ನ 2.00 ಗಂಟೆಗೆ ಎ.ಸಿ ನಾರಾಯಣಸ್ವಾಮಿ ಬಿನ್ ಚಿನ್ನಪ್ಪ, 47 ವರ್ಷ, ಆದಿ ದ್ರಾವಿಡ ಜನಾಂಗ, ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಡ ಶಾಲೆ, ಕಾಗತಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ಶಾಲೆಯಲ್ಲಿ ಸುಮಾರು 5 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿರುತ್ತೇನೆ. ತಮ್ಮ ಶಾಲೆಯಲ್ಲಿ ಸುಮಾರು 7 ಜನ ಶಿಕ್ಷಕರು ಇರುತ್ತೇವೆ. ತಾವುಗಳು ಪ್ರತಿದಿನ ಬೆಳಿಗ್ಗೆ 9.30 ಗಂಟೆಗೆ ಶಾಲೆಗೆ ಹೋಗಿ ಸಂಜೆ 4.30 ಗಂಟೆಗೆ ವಾಪಸ್ಸು ಬರುತ್ತೇವೆ. ಹೀಗಿರುವಾಗ ದಿನಾಂಕ 22/04/2021 ರಂದು ಬೆಳಿಗ್ಗೆ 9.30 ಗಂಟೆಗೆ ತಾವುಗಳು ಶಾಲೆಗೆ ಹೋಗಿ ನೋಡಲಾಗಿ ಶಾಲೆಯಲ್ಲಿರುವ ಕಂಪ್ಯೂಟರ್ ರೂಂ ಮತ್ತು ತಮ್ಮ ಆಫೀಸ್ ರೂಂನ ಬಾಗಿಲು ಹೊಡೆದಿರವ ನಿಶಾನೆ ಕಂಡು ಬಂದಿದ್ದು ಬಾಗಿಲುಗಳು ತೆರೆದಿರುವುದು ಕಂಡು ಬಂದಿರುತ್ತೆ. ತಾವೆಲ್ಲರೂ ಒಳಗೆ ಹೋಗಿ ನೋಡಲಾಗಿ ಕಂಪ್ಯೂಟರ್ ರೂಂ ನಲ್ಲಿದ್ದ 16 ಬ್ಯಾಟರಿಗಳು ಕಳುವಾಗಿದ್ದು ಇವುಗಳ ಅಂದಾಜು ಮೌಲ್ಯ 1.10.000/- ರೂಗಳಾಗಿರುತ್ತೆ. ನಂತರ ಶಾಲೆಯ ಆಫಿಸ್ ರೂಂ ನಲ್ಲಿದ್ದ 1 ಟಿ.ಬಿ ಹಾರ್ಡ ಡಿಸ್ಕ್, ಬೆಲೆ 5300/- ರೂ, ಡಿ.ವಿ.ಆರ್ ಪೋರ್ ಚಾನಲ್, ಬೆಲೆ 5300/- ರೂಗಳಾಗಿದ್ದು ಸದರಿ ವಸ್ತುಗಳು ಕಳವಾಗಿದ್ದವು. ದಿನಾಂಕ 21/04/2021 ರಂದು ರಾತ್ರಿ ಯಾವುದೊ ವೇಳೆಯಲ್ಲಿ ಯಾರೋ ಕಳ್ಳರು ಶಾಲೆಯಲ್ಲಿರುವ ಎರಡು ರೂಂಗಳ ಬಾಗಿಲುಗಳನ್ನು ಮುರಿದು ಒಳ ಪ್ರವೇಶಿಸಿ ಸುಮಾರು 1,20,600 ರೂ ಗಳಷ್ಟು ಬೆಲೆ ಬಾಳುವ ಮೇಲ್ಕಂಡ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತಾನು ಇತರೆ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಯವರೊಂದಿಗೆ ವಿಚಾರಣೆ ಮಾಡಿರುತ್ತೇವೆ. ತಾವುಗಳು ಸ್ಥಳಕ್ಕೆ ಭೇಟಿ ನೀಡಿ ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.161/2021 ಕಲಂ. 323,324,504,506,34 ಐ.ಪಿ.ಸಿ:-

          ದಿನಾಂಕ:22/04/2021 ರಂದು ಚಿಂತಾಮಣಿ ಸರ್ಕಾರಿ ಅಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಪುಷ್ಪಲತ.ಕೆ.ವಿ ಕೋಂ ವೆಂಕಟರೆಡ್ಡಿ, 38 ವರ್ಷ, ವಕ್ಕಲಿಗರು, ಗೃಹಣಿ, ಕೋನಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 5.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತನ್ನ ತವರು ಮನೆ ಕೋನಪಲ್ಲಿ ಗ್ರಾಮದವಾಗಿದ್ದು, ಈಗ್ಗೆ ಸುಮಾರು 14 ವರ್ಷಗಳ ಹಿಂದೆ ತನಗೆ ಬುಕ್ಕನಹಳ್ಳಿ ಗ್ರಾಮದ ವೆಂಕಟರೆಡ್ಡಿ ರವರೊಂದಿಗೆ ಮದುವೆಯಾಗಿದ್ದು, ಕಾರಣಾಂತರಗಳಿಂದ ಸುಮಾರು 10 ವರ್ಷಗಳಿಂದ ತಾನು, ತನ್ನ ಗಂಡ ತನ್ನ ತವರು ಮನೆಯಾದ ಕೋನಪಲ್ಲಿ ಗ್ರಾಮದಲ್ಲಿಯೇ ವಾಸವಾಗಿರುತ್ತೇವೆ. ತನ್ನ ತಾತನ ಆಸ್ತಿಯಲ್ಲಿ ಭಾಗ ಬರಬೇಕೆಂದು ತಾನು ಚಿಂತಾಮಣಿ ಸಿವಿಲ್ ನ್ಯಾಯಾಲಯದಲ್ಲಿ ತನ್ನ ಅಣ್ಣಂದಿರಾದ ಅಶೋಕರೆಡ್ಡಿ, ಶ್ರೀನಿವಾಸರೆಡ್ಡಿ ಮತ್ತಿತರ ವಿರುದ್ದ ದಾವೆಯನ್ನು ಹೂಡಿರುತ್ತೇನೆ. ಸದರಿ ದಾವೆಯು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತೆ. ಈ ಬಗ್ಗೆ ತನ್ನ ಅಣ್ಣಂದಿರು ತನ್ನ ಮೇಲೆ ದ್ವೇಷದಿಂದಿರುತ್ತಾರೆ. ಹೀಗಿರುವಾಗ ದಿನಾಂಕ: 21/04/2021 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಗಂಡ ವೆಂಕಟರೆಡ್ಡಿ ರವರು ತಮ್ಮ ಮನೆಯ ಬಳಿ ಇದ್ದಾಗ ಅಶೋಕರೆಡ್ಡಿ ಬಿನ್ ಅಶ್ವಥನಾರಾಯಣರೆಡ್ಡಿ, ಶ್ರೀನಿವಾಸರೆಡ್ಡಿ ಬಿನ್ ಅಶ್ವಥನಾರಾಯಣರೆಡ್ಡಿ ರವರು ಬಂದು ತನ್ನನ್ನು ಕುರಿತು ಏನೇ ಬೇವರ್ಸಿ ಮುಂದೆ ನಿನಗೆ ಆಸ್ತಿಯಲ್ಲಿ ಭಾಗ ಕೊಡುವುದಿಲ್ಲ. ನಿನ್ನ ಕೈಯಲ್ಲಿ ಏನಾಗುತ್ತೋ ಮಾಡಿಕೋ ಎಂದು ಕೆಟ್ಟ ಮಾತುಗಳಿಂದ ಬೈದು, ಆ ಪೈಕಿ ಅಶೋಕರೆಡ್ಡಿ ಕಲ್ಲಿನಿಂದ ತನ್ನ ಬೆನ್ನು ಮತ್ತು ಕತ್ತಿನ ಮೇಲೆ ಹೊಡೆದು ಗಾಯಪಡಿಸಿರುತ್ತಾನೆ. ಶ್ರೀನಿವಾಸರೆಡ್ಡಿ ಕೈಗಳಿಂದ ತನ್ನ ಮೈ ಕೈ ಮೇಲೆ ಹೊಡೆದು, ಕೈ ಉಗುರುಗಳಿಂದ ತನ್ನ ಕತ್ತಿನ ಬಳಿ ಪರಚಿರುತ್ತಾನೆ. ನಂತರ ಇಬ್ಬರೂ ಸೇರಿಕೊಂಡು ತನ್ನನ್ನು ಕುರಿತು ಇನ್ನೊಂದು ಸಲ ನೀನು ಜಮೀನಿನ ತಂಟೆಗೆ ಬಂದರೆ ನಿನ್ನನ್ನು ಸಾಯಿಸಿ ಬಿಡುವುದಾಗಿ ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆಗ ಜಗಳ ಬಿಡಿಸಲು ಅಡ್ಡ ಬಂದ ತನ್ನ ಗಂಡನನ್ನು ಮೇಲ್ಕಂಡವರು ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಈ ವಿಚಾರದಲ್ಲಿ ಗ್ರಾಮದಲ್ಲಿ ನ್ಯಾಯ ಪಂಚಾಯ್ತಿ ಮಾಡೋಣವೆಂದು ಹಿರಿಯರು ತಿಳಿಸಿದ್ದು ಇದುವರೆಗೂ ಅವರು ನ್ಯಾಯ ಪಂಚಾಯ್ತಿಗೆ ಬಾರದೆ ಇರುವುದರಿಂದ ಈ ದಿನ ತಡವಾಗಿ ತನ್ನ ಹೇಳಿಕೆಯನ್ನು ನೀಡುತ್ತಿದ್ದು, ಮೇಲ್ಕಂಡ ಅಶೋಕರೆಡ್ಡಿ ಹಾಗೂ ಶ್ರೀನಿವಾಸರೆಡ್ಡಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳೀಕೆಯ ದೂರಾಗಿರುತ್ತೆ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.162/2021 ಕಲಂ. 341,323,506,34 ಐ.ಪಿ.ಸಿ:-

          ದಿನಾಂಕ: 22/04/2021 ರಂದು ಸಂಜೆ 7.45 ಗಂಟೆಗೆ ವೆಂಕಟರಾಮರೆಡ್ಡಿ ಬಿನ್ ಲೇಟ್ ಶಿವರಾಮರೆಡ್ಡಿ, 69 ವರ್ಷ, ವಕ್ಕಲಿಗರು, ಜಿರಾಯ್ತಿ, ಕೋನಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಒಂದನೇ ಮಗಳಾದ ಪುಷ್ಪತತಾ ರವರನ್ನು ಇದೇ ಚಿಂತಾಮಣಿ ತಾಲ್ಲೂಕು, ಬುಕ್ಕನಹಳ್ಳಿ ಗ್ರಾಮದ ವಾಸಿಯಾದ ವೆಂಕಟರೆಡ್ಡಿ ಬಿನ್ ವೆಂಕಟೇಶಪ್ಪ ರವರನ್ನು ಸುಮಾರು 15 ವರ್ಷಗಳ ಹಿಂದೆ ವಿವಾಹ ಮಾಡಿ ಕೊಟ್ಟಿದ್ದು ಸರಿಯಷ್ಠೆ. ಆದರೆ ತನ್ನ ಮಗಳ ಗಂಡನಾದ ವೆಂಕಟರೆಡ್ಡಿ ರವರಿಗೆ ಜೂಜಾಟ ಮತ್ತು ಕುಡಿತದ ಚಟ ಇರುವುದರಿಂದ ಬುಕ್ಕನಹಳ್ಳಿ ಗ್ರಾಮದಲ್ಲಿ ತನ್ನ ಪಾಲಿಗೆ ಬಂದಿದ್ದಂತಹ ಆಸ್ತಿಯನ್ನು ಮಾರಾಟ ಮಾಡಿ ಜೂಜಾಟದಲ್ಲಿ ಕಳೆದಿರುತ್ತಾನೆ. ಜೀವನ ಮಾಡಲು ಆಗದಂತಹ ಪರಿಸ್ಥಿತಿಯಲ್ಲಿ ಕೆಲವು ವರ್ಷಗಳ ಹಿಂದೆ ತಮ್ಮ ಗ್ರಾಮದ ವೆಂಕಟಮ್ಮ ರವರ ತೋಟದ ಮನೆಯ ಒಂದು ಕೋಣೆಯಲ್ಲಿ ವಾಸವಾಗಿದ್ದರು. ಆದರೆ ಈಗ್ಗೆ ಕೆಲವು ದಿನಗಳಿಂದ ತನ್ನ ಅಳಿಯ ಮತ್ತು ತನ್ನ ಮಗಳು ತನ್ನ ಆಸ್ತಿಯನ್ನು ತನ್ನ ಮಗಳಾದ ಪುಷ್ಪಲತಾ ಹೆಸರಿಗೆ ಮಾಡಿಕೊಡುವಂತೆ ಗಲಾಟೆ ಮಾಡುತ್ತಿದ್ದರು. ಆದರೆ ತನ್ನ ಅಳಿಯನಾದ ವೆಂಕಟರೆಡ್ಡಿ ರವರಿಗೆ ಕುಡಿತದ ಮತ್ತು ಜೂಜಾಟದಂತಹ ಕೆಟ್ಟ ಚಟಗಳಿರುವುದರಿಂದ ಆಸ್ತಿಯನ್ನು ಆಳು ಮಾಡಬಹುದೆಂದು ತನ್ನ ಮಗಳ ಹೆಸರಿಗೆ ಬರೆದು ಕೊಡಲು ಹಿಂಜರೆದಿರುತ್ತೇನೆ. ಆದರೆ ದಿನಾಂಕ: 21/04/2021 ರಂದು ಸಂಜೆ 6.45 ಗುಂಟೆ ಸಮಯದಲ್ಲಿ ತಾನು ತಮ್ಮ ಗ್ರಾಮದಿಂದ ತನ್ನ ತೋಟದ ಮನೆಗೆ ಹೋಗಲು ಶಿಡ್ಲಘಟ್ಟ ಮತ್ತು ಚಿಂತಾಮಣಿ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ತನ್ನ ಅಳಿಯ ವೆಂಕಟರೆಡ್ಡಿ ಹಾಗೂ ತನ್ನ ಮಗಳಾದ ಪುಷ್ಪಲತಾ ರವರು ತನ್ನನ್ನು ಅಡ್ಡಗಟ್ಟಿ ತನ್ನ ಹೆಸರಿನಲ್ಲಿರುವ ಆಸ್ತಿಯನ್ನು ತನ್ನ ಮಗಳ ಹೆಸರಿಗೆ ಬರೆದುಕೊಡುವಂತೆ ತನ್ನ ಮೇಲೆ ಕೈಗಳಿಂದ ಗುದ್ದಿ, ಕಾಲುಗಳಲ್ಲಿ ಒದ್ದು ಆಸ್ತಿಯನ್ನು ಬರೆದುಕೊಡದ ಪಕ್ಷದಲ್ಲಿ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿರುತ್ತಾರೆ. ತನ್ನ ಮೇಲೆ ಹಲ್ಲೆ ಮಾಡುವ ಸಮಯದಲ್ಲಿ ತಾನು ಕಿರುಚಾಡಲಾಗಿ ಕೋನಪಲ್ಲಿ ಗ್ರಾಮದ ರಮೇಶ್ ಬಿನ್ ಕೃಷ್ಣಾರೆಡ್ಡಿ ಮತ್ತು ಮಂಜುನಾಥರೆಡ್ಡಿ ಬಿನ್ ಲೇಟ್ ನಾರಾಯಣಪ್ಪ ರವರು ಚಿಂತಾಮಣಿಯಿಂದ ಕೋನಪಲ್ಲಿ ಗ್ರಾಮಕ್ಕೆ ತೆರಳುತ್ತಿದ್ದವರು ಬಂದು ತನ್ನನ್ನು ಕಾಪಾಡಿ ಮನೆಗೆ ಬಿಟ್ಟಿರುತ್ತಾರೆ. ಸದರಿ ವಿಚಾರವಾಗಿ ಗ್ರಾಮದ ಹಿರಿಯರು ಮೇಲ್ಕಂಡವರನ್ನು ಕರೆಸಿ ಬುದ್ದಿವಾದ ಹೇಳುವುದಾಗಿ ತಿಳಿಸಿದ್ದು, ಸದರಿಯವರು ಗ್ರಾಮದ ಹಿರಿಯರ ಮಾತಿಗೂ ಸಹ ಮರ್ಯಾದೆ ನೀಡಿರುವುದಿಲ್ಲವಾದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಮೇಲ್ಕಂಡ ಪುಷ್ಪಲತಾ ಹಾಗೂ ವೆಂಕಟರೆಡ್ಡಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

10. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.63/2021 ಕಲಂ. 188,269,270 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 22/04/2021 ರಂದು ಸಂಜೆ 5:15 ಗಂಟೆಗೆ  ಪೊಲೀಸ್ ಇನ್ಸ್ ಪೆಕ್ಟರ್ ರವರು ನೀಡಿದ ಜ್ಞಾಪನದ  ವರದಿಯೇನೆಂದರೆ, ಈ ದಿನಾಂಕ: 22/04/2021 ರಂದು ಸಂಜೆ ತಾನು ಠಾಣೆಯ ಸಿಬ್ಬಂದಿಯಾದ  ಸರ್ವೇಶ, ಸಿಪಿಸಿ-426 ಜೀಪ್ ಚಾಲಕ ಆಂಜೀನಪ್ಪ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-3699  ರಲ್ಲಿ ನಗರ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ಇದೇ ದಿನ  ಸಂಜೆ 05-00  ಗಂಟೆ ಸಮಯದಲ್ಲಿ ಎಂ.ಜಿ.ರಸ್ತೆಯ ಕಡೆ ಗಸ್ತು ಮಾಡುತ್ತಿದ್ದಾಗ ಎಂ.ಜಿ ರಸ್ತೆಯಲ್ಲಿರುವ ತೃಪ್ತಿ ಮ್ಯಾಚಿಂಗ್ಸ್  ಬಟ್ಟೆಯ ಅಂಗಡಿಯ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು  ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು ಸದರಿ ಅಂಗಡಿ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ಅಶ್ವಥ್ಥ ನಾರಾಯಣಗುಪ್ತ ಬಿನ್ ಲೇಟ್ ಲಕ್ಷ್ಮೀ ನರಸಿಂಹಯ್ಯ ಶೆಟ್ಟಿ, 65ವರ್ಷ, ವೈಶ್ಯರು, ತೃಪ್ತಿ ಮ್ಯಾಂಚಿಂಗ್ಸ್ ಸೆಂಟರ್ ಮಾಲೀಕರು, ವಾಸ ಎನ್.ಆರ್.ಬಡಾವಣೆ ಚಿಂತಾಮಣಿ ನಗರ ಎಂದು ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರೀಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಬಟ್ಟೆ ಅಂಗಡಿ ಮಾಲೀಕರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 

11. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.61/2021 ಕಲಂ. 78(III) ಕೆ.ಪಿ ಆಕ್ಟ್:-

          ದಿನಾಂಕ;22/04/2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಘನ ನ್ಯಾಯಾಲಯದ ಮಪಿಸಿ 364 ರವರು ಠಾಣಾ ಎನ್,ಸಿ ಆರ್ ಸಂಖ್ಯೆ 70/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂಧರೆ ದಿನಾಂಕ:25/03/2021 ರಂದು ಮಧ್ಯಾಹ್ನ 3:00 ಗಂಟೆಯಲ್ಲಿ ಲೋಕೇಶ್ ಹೆಚ್.ಸಿ-214 ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 25-03-2021 ರಂದು ಮಧ್ಯಾಹ್ನ 1:30 ಗಂಟೆಯಲ್ಲಿ ನಗರದ ಉಪ್ಪಾರ ಕಾಲೋನಿಯಲ್ಲಿ ಯಾರೋ ಒಬ್ಬ ಆಸಾಮಿಯು ತಾನು  ವಾಸವಿರುವ ಮನೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಟ್ಕಾ ಅಂಕಿಗಳನ್ನು ಬರೆದುಕೊಡುತ್ತಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ತಾನು ಪಿ.ಎಸ್.ಐ ರವರಿಗೆ ಮಾಹಿತಿ ನೀಡಿ ಅನುಮತಿಯನ್ನು ಪಡೆದು ಹೆಚ್.ಸಿ -244 ಗೋಪಾಲ್ ರವರ ಜೊತೆ ಪಂಚರನ್ನು ಕರೆದುಕೊಂಡು ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿ ಉಪ್ಪಾರ ಕಾಲೋನಿಯಲ್ಲಿ ತಾನು ವಾಸವಿರುವ ಮನೆಯಲ್ಲಿ ಸಾರ್ವಜನಿಕರು ಸ್ಥಳದಲ್ಲಿ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಕೂಗಾಡುತ್ತಿರುವುದು ಕಂಡುಬಂದಿತು. ತಾನು ಮತ್ತು ಹೆಚ್.ಸಿ -244 ಗೋಪಾಲ್ ರವರು ಪಂಚರ ಸಮ್ಮುಖದಲ್ಲಿ ಅವನನ್ನು ಸುತ್ತುವರಿದು ಹಿಡಿದುಕೊಂಡು, ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1)ನಾಗಪ್ಪ @ ಪೊಟ್ಟುನಾಗಪ್ಪ, ಬಿನ್ ಲೇಟ್ ಮುದ್ದಣ್ಣ, 65ವರ್ಷ, ಉಪ್ಪಾರ ಜನಾಂಗ,ಆಟೋ ಚಾಲಕ ವೃತ್ತಿ,ವಾಸ: ಉಪ್ಪಾರ ಕಾಲೋನಿ, ಗೌರಿಬಿದನೂರು ನಗರ,  ಎಂದು ತಿಳಿಸಿದ್ದು, ಅವನಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೆ ಪರವಾನಗಿ ಇಲ್ಲವೆಂದು ತಿಳಿಸಿದನು ಈ ಸಮಯದಲ್ಲಿ ಆ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಒಂದು ಮಟ್ಕಾಚೀಟಿ ಬರೆಯುವ ಪುಸ್ತಕ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 980/- ರೂಪಾಯಿಗಳು ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣವನ್ನು ಶ್ರೀಕಾಂತ್ @ ಗುಂಡಾ ಬಿನ್ ಗೋವಿಂದಪ್ಪ, ಸುಮಾರು 32ವರ್ಷ, ಬಲಜಿಗರು, ವಾಸ:ವಿವಿಪುರಂ ಗೌರಿಬಿದನೂರು,9880044438,7899648556 ರವರಿಗೆ ನೀಡುತ್ತಿದ್ದುದಾಗಿ ಎಂದು ತಿಳಿಸಿದನು ನಂತರ ಆರೋಪಿಯನ್ನು ವಶಕ್ಕೆ ಪಡೆದು ಪಂಚನಾಮೆ ಜರುಗಿಸಿ ಆರೋಪಿ ಹಾಗೂ ಮಾಲಿನೊಂದಿಗೆ ಮಧ್ಯಾಹ್ನ3:00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಕ್ರಮ ಕೈಗೊಳ್ಳುವುದಕ್ಕಾಗಿ ನೀಡಿದ ವರದಿಯನ್ನು ಪಡೆದು  ಎನ್,ಸಿ ಆರ್ ಪ್ರಕರಣ ದಾಖಲಿಸಿ ಈ ದಿನ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ .

 

12. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.62/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ;22/04/2021 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ನ್ಯಾಯಾಲಯದ ಪಿಸಿ-368 ರವರು ಠಾಣಾ ಎನ್,ಸಿ,ಆರ್, ಸಂಖ್ಯೆ 82/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂಧರೆ ದಿನಾಂಕ: 14/04/2021 ರಂದು ಸಂಜೆ 6-30 ಗಂಟೆಯಲ್ಲಿ ಮಾನ್ಯ ಪಿ ಎಸ್ ಐ ಸಾಹೇಬರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:14/04/2021 ರಂದು ಸಂಜೆ 5-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಸಿಬ್ಬಂದಿಯಾದ  ಸಿಪಿಸಿ-318 ದೇವರಾಜು ರವರು ಪೋನ್ ಮಾಡಿ  ತಿಳಿಸಿದ್ದೇನೆಂದರೆ ಹನುಮಂತ ನಗರ ರಾಜ ಕಾಲುವೆಯಲ್ಲಿ. ಯಾರೋ ಕೆಲವರು  ಅಕ್ರಮವಾಗಿ ಗುಂಪಾಗಿ ಕುಳಿತುಕೊಂಡು ಅಂದರ್ ಬಾಹರ್ ಇಸೀಟ್ ಜೂಜಾಟವನ್ನು ಆಡುತ್ತೀರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ಸಕರ್ಾರಿ ಜೀಪ್ ಕೆ.ಎ-40 ಜಿ-.1888 ರಲ್ಲಿ ಚಾಲಕ ಅಶ್ವತ್ಥ ರೆಡ್ಡಿ ಎಪಿಸಿ-105 ರವರೊಂದಿಗೆ ಠಾಣಾ ಸಿಬ್ಬಂದಿಯಾದ  ಸಿಹೆಚ್ ಸಿ-244 ಗೋಪಾಲ ಹೆಚ್ ಸಿ-12 ಶಿವ ಶಂಕರ್ ಮತ್ತು ಸಿಪಿಸಿ- 507 ಹನುಮಂತರಾಯಪ್ಪ ರವರನ್ನು ಕರೆದುಕೊಂಡು ಹನುಮಂತ ನಗರ  ಬಳಿ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ಸರ್ಕಾರಿ ಜೀಪ್ ನಲ್ಲಿ ಹನುಮಂತ ನಗರ ರಾಜ ಕಾಲುವೆಯ ಹೋಗಿ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಸ್ವಲ್ಪ ದೂರು ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಸಾಮಿಗಳು ಗುಂಪಾಗಿ ಕುಳಿತುಕೊಂಡು ಅಂದರ್ -300 ಬಾಹರ್-300 ಎಂದು ಕೂಗಾಡುತ್ತಾ ಇಸ್ಫೀಟ್ ಜೂಜಾಟವನ್ನು ಆಡುತ್ತೀರುವುದು ಕಂಡು ಬಂದಿದ್ದು ಪಂಚರ ಸಮಕ್ಷಮ ಆಡುತ್ತೀದ್ದವರ ಮೇಲೆ ದಾಳಿ ಮಾಡಿ ಸುತ್ತುವರೆದು ಹಿಡಿದುಕೊಂಡು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ರಮೇಶ್ ಬಿನ್ ನರಸಿಂಹಪ್ಪ .45 ವರ್ಷ,ನಾಯಕರು,ಹನುಮಂತ ನಗರ ಗೌರಿಬಿದನೂರು ಟೌನ್ ಪೋನ್ 2) ಜೆಬಿ ಬಿನ್ ಇನಾಯತ್ 36 ವರ್ಷ,ಮುಸ್ಲಿಂ ಜನಾಂಗ,ಹನುಂತ ನಗರ ಗೌರಿಬಿದನೂರು ಟೌನ್ ,  ಎಂದು ತಿಳಿಸಿದ್ದು ಸದರಿಯವರನ್ನು ಇಸ್ಪೀಟ್ ಜೂಜಾಟವನ್ನು ಆಡಲು ಪರವಾನಿಗೆಯನ್ನು ಕೇಳಲಾಗಿ ಸದರಿಯವರು ತಮ್ಮ ಬಳಿ ಯಾವುದು ಇಲ್ಲವೆಂದು ತಿಳಿಸಿದ್ದು ಪಂಚರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ವಿವಿದ ಮುಖ ಬೆಲೆಯ ಒಟ್ಟು ರೂ 5200, 52 ಇಸ್ಪೀಟ್ ಎಲೆಗಳು ಮತ್ತು ಒಂದು ನ್ಯೂಸ್ ಪೇಪರ್ ಇದ್ದು ಇವುಗಳನ್ನು ಮುಂದಿನ ಕ್ರಮಕ್ಕಾಗಿ ಸಂಜೆ 5-30 ಗಂಟೆಯಿಂದ 06-15  ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಮತ್ತೆ ಠಾಣೆಗೆ ವಾಪಸ್ಸು 6-30 ಗಂಟೆಗೆ  ಮುಂದಿನ ಕ್ರಮ ಜರುಗಿಸಲು ನೀಡಿದ ವರಧಿಯನ್ನು ಪಡೆದು ಎನ್,ಸಿ,ಆರ್, ಪ್ರಕರಣ ದಾಖಲಿಸಿ ಈ ದಿನ ಘನನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

13. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.63/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ;22/04/2021 ರಂದು ಮದ್ಯಾಹ್ನ 12-00 ಗಂಟೆಗೆ ಠಾಣಾ ನ್ಯಾಯಾಲಯದ ಮಪಿಸಿ-368 ರವರು ಠಾಣಾ ಎನ್,ಸಿ,ಆರ್ ಸಂಖ್ಯೆ 83/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೇಂಧರೆ ದಿನಾಂಕ:14/04/2021 ರಂದು ಸಂಜೆ 7-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಸಿಬ್ಬಂದಿಯಾದ  ಸಿಪಿಸಿ-507 ಹನುಮಂತರಾಯಪ್ಪ  ರವರು  ಪೋನ್ ಮಾಡಿ  ತಿಳಿಸಿದ್ದೇನೆಂದರೆ ಗೊಟಗನಾಪುರ ಗ್ರಾಮದ ಆಂಜನೇಯಸ್ವಾಮಿ ದೇವಾಸ್ಥಾನದ ಬಳಿ  ಯಾರೋ ಕೆಲವರು  ಅಕ್ರಮವಾಗಿ ಗುಂಪಾಗಿ ಕುಳಿತುಕೊಂಡು ಅಂದರ್ ಬಾಹರ್ ಇಸೀಟ್ ಜೂಜಾಟವನ್ನು ಆಡುತ್ತೀರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ಸಕರ್ಾರಿ ಜೀಪ್ ಕೆ.ಎ-40 ಜಿ-.1888 ರಲ್ಲಿ ಚಾಲಕ ಅಶ್ವತ್ಥ ರೆಡ್ಡಿ ಎಪಿಸಿ-105 ರವರೊಂದಿಗೆ ಠಾಣಾ ಸಿಬ್ಬಂದಿಯಾದ  ಸಿಹೆಚ್ ಸಿ-244 ಗೋಪಾಲ  ಹೆಚ್ ಸಿ-12 ಶಿವ ಶಂಕರ್ ಮತ್ತು ಸಿಪಿಸಿ- 282 ರಮೇಶ್ ರವರನ್ನು ಕರೆದುಕೊಂಡು ಗ್ರಾಮದ ಆಂಜನೇಯಸ್ವಾಮಿ ದೇವಾಸ್ಥಾನದ ಬಳಿ  ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ಸರ್ಕಾರಿಜೀಪ್ ನಲ್ಲಿ ಆಂಜನೇಯಸ್ವಾಮಿ ದೇವಾಸ್ಥಾನದ ಬಳಿ  ಹೋಗಿ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಸ್ವಲ್ಪ ದೂರು ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಸಾಮಿಗಳು ಗುಂಪಾಗಿ ಕುಳಿತುಕೊಂಡು ಅಂದರ್ -300 ಬಾಹರ್-300 ಎಂದು ಕೂಗಾಡುತ್ತಾ ಇಸ್ಫೀಟ್ ಜೂಜಾಟವನ್ನು ಆಡುತ್ತೀರುವುದು ಕಂಡು ಬಂದಿದ್ದು ಪಂಚರ ಸಮಕ್ಷಮ ಆಡುತ್ತೀದ್ದವರ ಮೇಲೆ ದಾಳಿ ಮಾಡಿ ಸುತ್ತುವರೆದು ಹಿಡಿದುಕೊಂಡು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಕೂರ್ಲಪ್ಪ ಬಿನ್ ಲೇಟ್ ಚಿಕ್ಕನರಸಪ್ಪ.65 ವರ್ಷ,ಪರಿಶಿಷ್ಟ ಜಾತಿ ಕೂಲಿ ಕೆಲಸ ಗೊಟಗನಾಪುರ ಗ್ರಾಮ ಗೌರಿಬಿದನೂರು ತಾಲ್ಲೂಕು 2) ನರಸಿಂಹಮೂರ್ತಿ ಲೇಟ್ ಮಹೇಶ್ವರಪ್ಪ. 41 ವರ್ಷ ಪರಿಶಿಷ್ಟ ಜಾತಿ ಕೂಲಿ ಕೆಲಸ ,ಗೊಟಗನಾಪುರ ಗೌರಿಬಿದನೂರು ತಾಲ್ಲೂಕು 3) ನರಸಿಂಹಯ್ಯ ಬಿನ್ ಲೇಟ್ ಚಿಕ್ಕನರಸಪ್ಪ 60ವರ್ಷ.ಪರಿಶಿಷ್ಟ ಜಾತಿ ಕೂಲಿ ಕೆಲಸ,ಗೊಟಗಾನಪುರ ಗ್ರಾಮ,ಗೌರಿಬಿದಸನೂರು ತಾಲ್ಲೂಕು  ಎಂದು ತಿಳಿಸಿದ್ದು ಸದರಿಯವರನ್ನು ಇಸ್ಪೀಟ್ ಜೂಜಾಟವನ್ನು ಆಡಲು ಪರವಾನಿಗೆಯನ್ನು ಕೇಳಲಾಗಿ ಸದರಿಯವರು ತಮ್ಮ ಬಳಿ ಯಾವುದು ಇಲ್ಲವೆಂದು ತಿಳಿಸಿದ್ದು ಪಂಚರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ವಿವಿದ ಮುಖ ಬೆಲೆಯ ಒಟ್ಟು ರೂ 350  52 ಇಸ್ಪೀಟ್ ಎಲೆಗಳು ಮತ್ತು ಒಂದು ನ್ಯೂಸ್ ಪೇಪರ್ ಇದ್ದು ಇವುಗಳನ್ನು ಮುಂದಿನ ಕ್ರಮಕ್ಕಾಗಿ ಸಂಜೆ 7-15 ಗಂಟೆಯಿಂದ 08-00  ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಮತ್ತೆ ಠಾಣೆಗೆ ವಾಪಸ್ಸು 08-15 ಗಂಟೆಗೆ  ಮುಂದಿನ ಕ್ರಮ ಜರುಗಿಸಲು ನೀಡಿದ ವರಧಿಯನ್ನು ಪಡೆದು ಎನ್,ಸಿ,ಆರ್, ಪ್ರಕರಣ ದಾಖಲಿಸಿ ಈ ದಿನ ಘನನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

14. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.64/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ’22/04/2021  ರಂದು ಮಧ್ಯಾಹ್ನ 12-30 ಗಂಟೆಯಲ್ಲಿ ನ್ಯಾಯಾಲಯದ ಮಪಿಸಿ-368 ರವರು ಠಾಣಾ ಎನ್,ಸಿ,ಆರ್, ಸಂಖ್ಯೆ;84/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ ಸಾರಾಂಶವೇನೆಂಧರೆ ದಿನಾಂಕ:14/04/2021 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಹಿರೇಬಿದನೂರು ಬೀಟ್ ಸಿಬ್ಬಂದಿಯಾದ  ಸಿಪಿಸಿ- 201 ಸುರೇಶ್,  ಪೊನ್ ಮಾಡಿ ತಿಳಿಸಿದ್ದೇನೆಂದರೆ ಹಿರೇಬಿದನೂರು ಗ್ರಾಮದ ಪಕ್ಕದಲ್ಲಿರುವ ಕೆರೆಯಲ್ಲಿ ಜಾಲಿ ಮರದ ಕೆಳಗೆ ಯಾರೋ ಕೆಲವರು  ಅಕ್ರಮವಾಗಿ ಗುಂಪಾಗಿ ಕುಳಿತುಕೊಂಡು ಅಂದರ್ ಬಾಹರ್ ಇಸೀಟ್ ಜೂಜಾಟವನ್ನು ಆಡುತ್ತೀರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ಸರ್ಕಾರಿ ಜೀಪ್ ಕೆ.ಎ-40 ಜಿ-.1888 ರಲ್ಲಿ ಚಾಲಕ ಅಶ್ವತ್ಥ ರೆಡ್ಡಿ ಎಪಿಸಿ-105 ರವರೊಂದಿಗೆ ಠಾಣಾ ಸಿಬ್ಬಂದಿಯಾದ  ಸಿಹೆಚ್ ಸಿ- 214 ಲೋಕೇಶ್, ಸಿಹೆಚ್ ಸಿ-244 ಗೋಪಾಲ, ಸಿಪಿಸಿ-282 ರಮೇಶ್ ಮತ್ತು ಸಿಪಿಸಿ- 507 ಹನುಮಂತರಾಯಪ್ಪ ರವರನ್ನು ಕರೆದುಕೊಂಡು ಹಿರೆಬಿದನೂರು ಗ್ರಾಮದ ಬಸ್ಸ್ ನಿಲ್ದಾಣದ ಬಳಿ ಬೆಳಿಗ್ಗೆ 10-45 ಗಂಟೆಗೆ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ಸರ್ಕಾರಿ ಜೀಪ್ ನಲ್ಲಿ ಹಿರೇಬಿದನೂರು ಕೆರೆಯ ಅಂಗಳದಲ್ಲಿ ಹೋಗಿ ಮರದ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ  ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಸಾಮಿಗಳು ಗುಂಪಾಗಿ ಕುಳಿತುಕೊಂಡು ಅಂದರ್ -200 ಬಾಹರ್-200 ಎಂದು ಕೂಗಾಡತ್ತಾ ಇಸ್ಫೀಟ್ ಜೂಜಾಟವನ್ನು ಆಡುತ್ತೀರುವುದು ಕಂಡು ಬಂದಿದ್ದು  ಆಡುತ್ತೀದ್ದವರ ಮೇಲೆ ದಾಳಿ ಮಾಡಿ ಸುತ್ತುವರೆದು ಹಿಡಿದುಕೊಂಡು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ರವಿ ಬಿನ್ ವೆಂಕಟಚಲಪತಿ, 38 ವರ್ಷ, ಸಾದರು ಜನಾಂಗ, ವ್ಯಾಪಾರ, ವಾಸ: ಹಿರೇಬಿದನೂರು ಗೌರಿಬಿದನೂರು ಟೌನ್ 2) ಕೃಷ್ಣ ಬಿನ್ ವೆಂಕಟರವಣಪ್ಪ, 34 ವರ್ಷ, ಸಾದರು ಜನಾಂಗ, ಜಿರಾಯ್ತಿ, ವಾಸ: ಹಿರೇಬಿದನೂರು ಗೌರಿಬಿದನೂರು ಟೌನ್, 3) ಶಾಂತರಾಜು ಬಿನ್ ಲೇ ಹೆಚ್.ಎನ್.  ನಾರಾಯಣಪ್ಪ, 50 ವರ್ಷ, ಸಾದರು ಜನಾಂಗ, ಜಿರಾಯ್ತಿ, ವಾಸ: ಹಿರೇಬಿದನೂರು ಗೌರಿಬಿದನೂರು ಟೌನ್, 4) ವೆಂಕಟೇಶ್ ಬಿನ್ ಲೆಟ್ ನೇರಳಪ್ಪ, 34 ವರ್ಷ, ಸಾದರು ಜನಾಂಗ, ಜಿರಾಯ್ತಿ, ವಾಸ: ಹಿರೇಬಿದನೂರು ಗೌರಿಬಿದನೂರು ಟೌನ್, 5) ಚಂದ್ರ ಬಿನ್ ಕಾಂತಪ್ಪ, 29 ವರ್ಷ, ಸಾದರು ಜನಾಂಗ, ಜಿರಾಯ್ತಿ, ವಾಸ: ಹಿರೇಬಿದನೂರು ಗೌರಿಬಿದನೂರು ಟೌನ್, 6) ಲೋಕೇಶ್ ಬಿನ್ ಅಶ್ವತ್ಥಪ್ಪ, 37 ವರ್ಷ, ಸಾದರು ಜನಾಂಗ, ಜಿರಾಯ್ತಿ, ವಾಸ: ಹಿರೇಬಿದನೂರು ಗೌರಿಬಿದನೂರು ಟೌನ್, ಎಂದು ತಿಳಿಸಿದ್ದು ಸದರಿಯವರನ್ನು ಇಸ್ಪೀಟ್ ಜೂಜಾಟವನ್ನು ಆಡಲು ಪರವಾನಿಗೆಯನ್ನು ಕೇಳಲಾಗಿ ಸದರಿಯವರು ತಮ್ಮ ಬಳಿ ಯಾವುದು ಇಲ್ಲವೆಂದು ತಿಳಿಸಿದ್ದು ಪಂಚರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ವಿವಿದ ಮುಖ ಬೆಲೆಯ ಒಟ್ಟು ರೂ 6250/-, 52 ಇಸ್ಪೀಟ್ ಎಲೆಗಳು ಮತ್ತು ಒಂದು ನ್ಯೂಸ್ ಪೇಪರ್ ಇದ್ದು ಇವುಗಳನ್ನು ಮುಂದಿನ ಕ್ರಮಕ್ಕಾಗಿ ಬೆಳಿಗ್ಗೆ 11-00 ಗಂಟೆಯಿಂದ 11-45 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಮತ್ತೆ ಠಾಣೆಗೆ ವಾಪಸ್ಸು 12-00 ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ 12-30 ಗಂಟೆಗೆ ವರದಿಯನ್ನು ಸಿದ್ದಪಡಿಸಿ ಮುಂದಿನ ಕ್ರಮ ಜರುಗಿಸಲು ನೀಡಿದ ವರಧಿಯನ್ನು ಪಡೆದು ಎನ್,ಸಿ,ಆರ್, ಪ್ರಕರಣ ದಾಖಲಿಸಿ ಈ ದಿನ ಘನನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

15. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.65/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ;23/04/2021 ರಂದು ಬೆಳಿಗ್ಗೆ 10-30 ಗಂಟೆಗೆ ಠಾಣಾ ಎನ್,ಸಿ.ಆರ್. ಸಂಖ್ಯೆ 85/2021 ರಲ್ಲಿ ನ್ಯಾಯಾಲಯದ ಮಪಿಸಿ-364 ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ದಿನಾಂಕ:14/04/2021 ರಂದು ಸಂಜೆ 8-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಸಿಬ್ಬಂದಿಯಾದ  ಸಿಪಿಸಿ-507 ಹನುಮಂತರಾಯಪ್ಪ  ರವರು ಪೋನ್ ಮಾಡಿ  ತಿಳಿಸಿದ್ದೇನೆಂದರೆ ಗೊಟಗನಾಪುರ ಕೆರೆಯಲ್ಲಿ ಹೊಂಗೆ ಮರದ ಕೆಳಗೆ ಯಾರೋ ಕೆಲವರು  ಅಕ್ರಮವಾಗಿ ಗುಂಪಾಗಿ ಕುಳಿತುಕೊಂಡು ಅಂದರ್ ಬಾಹರ್ ಇಸೀಟ್ ಜೂಜಾಟವನ್ನು ಆಡುತ್ತೀರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ಸರ್ಕಾರಿ ಜೀಪ್ ಕೆ.ಎ-40 ಜಿ-.1888 ರಲ್ಲಿ ಚಾಲಕ ಅಶ್ವತ್ಥ ರೆಡ್ಡಿ ಎಪಿಸಿ-105 ರವರೊಂದಿಗೆ ಠಾಣಾ ಸಿಬ್ಬಂದಿಯಾದ  ಸಿಹೆಚ್ ಸಿ-214 ಲೋಕೇಶ್, ಮತ್ತು ಸಿಪಿಸಿ-318 ದೇವರಾಜು ರವರನ್ನು ಕರೆದುಕೊಂಡು, ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ಸರ್ಕಾರಿ ಜೀಪ್ ನಲ್ಲಿ ಗೊಟಗನಾಪುರ ಕೆರೆಯಲ್ಲಿ ಹೋಗಿ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಸ್ವಲ್ಪ ದೂರು ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಸಾಮಿಗಳು ಗುಂಪಾಗಿ ಕುಳಿತುಕೊಂಡು ಅಂದರ್-300 ಬಾಹರ್-300 ಎಂದು ಕೂಗಾಡುತ್ತಾ ಇಸ್ಫೀಟ್ ಜೂಜಾಟವನ್ನು ಆಡುತ್ತೀರುವುದು ಕಂಡು ಬಂದಿದ್ದು ಪಂಚರ ಸಮಕ್ಷಮ ಆಡುತ್ತೀದ್ದವರ ಮೇಲೆ ದಾಳಿ ಮಾಡಿ ಸುತ್ತುವರೆದು ಹಿಡಿದುಕೊಂಡು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಶ್ರೀ ನರಸಿಂಹಯ್ಯ ಬಿನ್ ಲೇಟ್ ರಂಗಪ್ಪ 55 ವರ್ಷ.ಪರಿಶಿಷ್ಟ ಜಾತಿ ಕಾಪರ್ೆಂಟರ್ ಕೆಲಸ ಗೊಟಗಾನಪುರ ಗೌರಿಬಿದನೂರು ತಾಳ್ಲೂಖು 9008198558 2) ಜಿ. ಕೃಷ್ಣಮೂರ್ತಿ ಬಿನ್ ಗಂಗಪ್ಪ 43 ವರ್ಷ ಪರಿಶಿಷ್ಟ. ಜಾತಿ.ಪೈಂಟರ್ ಕೆಲಸ,ಗೊಟಗನಾಪುರ ಗೌರಿಬಿದನೂರು ತಾಲ್ಲೂಕು 3) ಆನಂದ್ ಬಿನ್ ಅಕ್ಕುಲಪ್ಪ 33 ವರ್ಷ.ಪರಿಶಿಷ್ಟ ಜಾತಿ ಗಾರೆ ಕೆಲಸ,ಗೊಟಗಾನಪುರ ಗ್ರಾಮ ಗೌರಿಬಿದನೂರು ತಾಲ್ಲೂಕು 4) ನಾಗರಾಜು ಬಿನ್ ಗಂಗಪ್ಪ 35 ವರ್ಷ ಪರಿಶಿಷ್ಟ ಜಿರಾಯ್ತಿ ಗೊಟಗಾನಪುರ ಗ್ರಾಮ ಗೌರಿಬಿದನೂರು ತಾಲ್ಲೂಕು 9844015260 50 ಜಿ ನರಸಿಂಹ ಬಿನ್ ಗಂಗಪ್ಪ 41 ವರ್ಷ ಪರಿಶಿಷ್ಟ ಜಾತಿ ಡ್ರೈವರ್ ಗೊಟಗನಾಪುರ ಗ್ರಾಂ ಗೌರಿಬಿದನೂರು ತಾಲ್ಲೂಕು 5) ಜಿ. ನರಸಿಂಹಪ್ಪ ಬಿನ್ ಗಂಗಪ್ಪ.41 ವರ್ಷ,ಪರಿಶಿಷ್ಟ ಜಾತಿ ಡ್ರೈವರ್ ಗೊಟಗಾಪುರ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಸದರಿಯವರನ್ನು ಇಸ್ಪೀಟ್ ಜೂಜಾಟವನ್ನು ಆಡಲು ಪರವಾನಿಗೆಯನ್ನು ಕೇಳಲಾಗಿ ಸದರಿಯವರು ತಮ್ಮ ಬಳಿ ಯಾವುದು ಇಲ್ಲವೆಂದು ತಿಳಿಸಿದ್ದು ಪಂಚರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ವಿವಿದ ಮುಖ ಬೆಲೆಯ ಒಟ್ಟು ರೂ 450 . 52 ಇಸ್ಪೀಟ್ ಎಲೆಗಳು ಮತ್ತು ಒಂದು ನ್ಯೂಸ್ ಪೇಪರ್ ಇದ್ದು ಇವುಗಳನ್ನು ಮುಂದಿನ ಕ್ರಮಕ್ಕಾಗಿ ರಾತ್ರಿ 8-15 ಗಂಟೆಯಿಂದ 09-00   ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಮತ್ತೆ ಠಾಣೆಗೆ ವಾಪಸ್ಸು ರಾತಿ 9-15   ಗಂಟೆಗೆ  ಮುಂದಿನ ಕ್ರಮ ಜರುಗಿಸಲು  ನೀಡಿದ ವರಧಿಯನ್ನು ಪಡೆದು ಎನ್,ಸಿ,ಆರ್ ಪ್ರಕರಣ ದಾಖಲಿಸಿರುತ್ತೆ .ನಂತರ  ದಿನ ನ್ಯಾಯಾಲಯದ ಅನುತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ .

 

16. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.66/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ;14/04/2021 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ನ್ಯಾಯಾಲಯದ ಮಪಿಸಿ-364 ರವರು ಠಾಣಾ ಎನ್,ಸಿ,ಆರ್ ಸಂಖ್ಯೆ 86/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಕಲಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ದಿನಾಂಕ:14/04/2021 ರಂದು ಮದ್ಯಾಹ್ನ 12-30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ನಾಗಿರೆಡ್ಡಿ ಬಡಾವಣೆ ಬೀಟ್ ಸಿಬ್ಬಂದಿಯಾದ  ಸಿಹೆಚ್ ಸಿ- 214 ಲೋಕೇಶ್ ಪೊನ್ ಮಾಡಿ ತಿಳಿಸಿದ್ದೇನೆಂದರೆ ನಾಗಿರೆಡ್ಡಿ ಬಡಾವಣೆ ಪಕ್ಕದಲ್ಲಿರುವ ಪಿನಾಕಿನಿ ಹಳ್ಳದಲ್ಲಿ ಹೊಂಗೆ ಮರದ ಕೆಳಗೆ ಯಾರೋ ಕೆಲವರು  ಅಕ್ರಮವಾಗಿ ಗುಂಪಾಗಿ ಕುಳಿತುಕೊಂಡು ಅಂದರ್ ಬಾಹರ್ ಇಸೀಟ್ ಜೂಜಾಟವನ್ನು ಆಡುತ್ತೀರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ಸಕರ್ಾರಿ ಜೀಪ್ ಕೆ.ಎ-40 ಜಿ-.1888 ರಲ್ಲಿ ಚಾಲಕ ಅಶ್ವತ್ಥ ರೆಡ್ಡಿ ಎಪಿಸಿ-105 ರವರೊಂದಿಗೆ ಠಾಣಾ ಸಿಬ್ಬಂದಿಯಾದ  ಸಿಹೆಚ್ ಸಿ-244 ಗೋಪಾಲ, ಸಿಪಿಸಿ-282 ರಮೇಶ್ ಮತ್ತು ಸಿಪಿಸಿ- 34 ಮಂಜುನಾಥ ರವರನ್ನು ಕರೆದುಕೊಂಡು ಕರೇಕಲ್ಲಹಳ್ಳಿ ಬಸ್ಸ್ ನಿಲ್ದಾಣದ ಬಳಿ ಮದ್ಯಾಹ್ನ 12-45 ಗಂಟೆಗೆ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ಸಕರ್ಾರಿ ಜೀಪ್ ನಲ್ಲಿ ನಾಗಿರೆಡ್ಡಿ ಬಡಾವಣೆ ಪಿನಾಕಿನಿ ಹಳ್ಳದ ಬಳಿ ಹೋಗಿ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಸ್ವಲ್ಪ ದೂರು ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಸಾಮಿಗಳು ಗುಂಪಾಗಿ ಕುಳಿತುಕೊಂಡು ಅಂದರ್ -500 ಬಾಹರ್-500 ಎಂದು ಕೂಗಾಡುತ್ತಾ ಇಸ್ಫೀಟ್ ಜೂಜಾಟವನ್ನು ಆಡುತ್ತೀರುವುದು ಕಂಡು ಬಂದಿದ್ದು ಪಂಚರ ಸಮಕ್ಷಮ ಆಡುತ್ತೀದ್ದವರ ಮೇಲೆ ದಾಳಿ ಮಾಡಿ ಸುತ್ತುವರೆದು ಹಿಡಿದುಕೊಂಡು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಮಹಮದ್ ರಫೀಕ್ ಬಿನ್ ರಷೀದ್, 25 ವರ್ಷ, ಮುಸ್ಲಿಂ ಜನಾಂಗ, ಕೂಲಿ ಕೆಲಸ, ವಾಸ: ನಾಗಿರೆಡ್ಡಿ ಬಡಾವಣೆ ಗೌರಿಬಿದನೂರು ಟೌನ್ 2) ಕುಮಾರ್ ಬಿನ್ ಗೋವಿಂದರಾಜು, 21 ವರ್ಷ, ವೈಷ್ಣವ ಜನಾಂಗ, ಪೈಂಟಿಂಗ್ ಕೆಲಸ ವಾಸ: ನಾಗಿರೆಡ್ಡಿ ಬಡಾವಣೆ ಗೌರಿಬಿದನೂರು ಟೌನ್, 3) ಹರಿಕೃಷ್ಣ ಬಿನ್ ನಾರಾಯಣಪ್ಪ, 33 ವರ್ಷ, ಉಪ್ಪಾರು ಜನಾಂಗ, ಪೂಜಾರಿ ವಾಸ: ನಾಗಿರೆಡ್ಡಿ ಬಡಾವಣೆ ಗೌರಿಬಿದನೂರು ಟೌನ್, 4) ಶ್ರೀನಿವಾಸಮೂರ್ತಿ ಬಿನ್ ವೆಂಕಟರಮಣಪ್ಪ, 52 ವರ್ಷ, ಬೋವಿ ಜನಾಂಗ,  ವಾಸ: ನಾಗಿರೆಡ್ಡಿ ಬಡಾವಣೆ ಗೌರಿಬಿದನೂರು ಟೌನ್, 5) ಶಿವ ಬಿನ್ ವೆಂಕಟೇಶ್, 26 ವರ್ಷ, ಬೋವಿ ಜನಾಂಗ,  ವಾಸ: ನಾಗಿರೆಡ್ಡಿ ಬಡಾವಣೆ ಗೌರಿಬಿದನೂರು ಟೌನ್, 6) ಮಹಮದ್ ಬಿನ್ ಮಹಮದ್ ಷಫಿವುಲ್ಲಾ, 25 ಮುಸ್ಲಿಂ ಜನಾಂಗ, ಹಣ್ಣಿನ ವ್ಯಾಪಾರ,  ವಾಸ: ನಾಗಿರೆಡ್ಡಿ ಬಡಾವಣೆ ಗೌರಿಬಿದನೂರು ಟೌನ್ ಮತ್ತು 7) ಮುರುಳಿದರ ಬಿನ್ ವೆಂಕಟದಾಸಪ್ಪ, 56 ವರ್ಷ, ವಾಸ: ನಾಗಿರೆಡ್ಡಿ ಬಡಾವಣೆ ಗೌರಿಬಿದನೂರು ಟೌನ್, ಎಂದು ತಿಳಿಸಿದ್ದು ಸದರಿಯವರನ್ನು ಇಸ್ಪೀಟ್ ಜೂಜಾಟವನ್ನು ಆಡಲು ಪರವಾನಿಗೆಯನ್ನು ಕೇಳಲಾಗಿ ಸದರಿಯವರು ತಮ್ಮ ಬಳಿ ಯಾವುದು ಇಲ್ಲವೆಂದು ತಿಳಿಸಿದ್ದು ಪಂಚರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ವಿವಿದ ಮುಖ ಬೆಲೆಯ ಒಟ್ಟು ರೂ 6300/-, 52 ಇಸ್ಪೀಟ್ ಎಲೆಗಳು ಮತ್ತು ಒಂದು ನ್ಯೂಸ್ ಪೇಪರ್ ಇದ್ದು ಇವುಗಳನ್ನು ಮುಂದಿನ ಕ್ರಮಕ್ಕಾಗಿ ಮದ್ಯಾಹ್ನ 1-00 ಗಂಟೆಯಿಂದ 1-45 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಮತ್ತೆ ಠಾಣೆಗೆ ವಾಪಸ್ಸು 2-00 ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ 2-30 ಗಂಟೆಗೆ ವರದಿಯನ್ನು ಸಿದ್ದಪಡಿಸಿ ಮುಂದಿನ ಕ್ರಮ ಜರುಗಿಸಲು ನೀಡಿದ ವರಧಿಯನ್ನು ಪಡೆದು ಎನ್,ಸಿ,ಆರ್ ಪ್ರಕರಣ ದಾಖಲಿಸಿರುತ್ತೆ ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ ಪ್ರಕರಣ ದಾಖಲಿಸಿರುತ್ತೆ .

 

17. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.78/2021 ಕಲಂ. 279,304(A) ಐ.ಪಿ.ಸಿ:-

          ದಿನಾಂಕ:23/04/2021 ರಂದು ಬೆಳಗ್ಗೆ 9.30 ಗಂಟೆಗೆ ಪಿರ್ಯಾದಿದಾರರಾದ ಗಂಗಪ್ಪ  ಬಿನ್ ನರಸಿಂಹಪ್ಪ, 60 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ವಾಸ:ತೊಂಡೆಕುಂಟೆ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮಗೆ ಇಬ್ಬರು ಮಕ್ಕಳಿದ್ದು ಗಂಡು ಮಗನಾದ ನರಸಿಂಹಮೂರ್ತಿ, 38 ವರ್ಷ ರವರು ಕೂಲಿ ಕೆಲಸ ಮಾಡಿಕೊಂಡಿದ್ದು ಗೌರಿಬಿದನೂರು ತಾಲ್ಲೂಕು ವೆಂಕಟಾಪುರ ಗ್ರಾಮದಲ್ಲಿ ಮದುವೆ ಆಗಿದ್ದು ಅವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇರುತ್ತಾರೆ. ಹೀಗಿರುವಾಗ ನನ್ನ ಮಗನಾದ ನರಸಿಂಹಮೂರ್ತಿ ರವರು ದಿನಾಂಕ:22/04/2021 ರಂದು ಡಿ ಪಾಳ್ಯ ಹೋಬಳಿ ವೆಂಕಟಾಪುರ ಗ್ರಾಮಕ್ಕೆ ಹಬ್ಬದ ನಿಮಿತ್ತ ಹೋಗಿದ್ದು ಅದರಂತೆ ಸಂಜೆ 4.00 ಗಂಟೆಗೆ ನಮ್ಮ ಗ್ರಾಮಕ್ಕೆ ವಾಪಸ್ಸು ಬರಲು ತನ್ನ ಬಾಬತ್ತು ಕೆಎ-40-ಇಇ-4698 ಹೀರೋ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಚೀಲಂನಹಳ್ಳಿ ಬಳಿ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಪಕ್ಕದಲ್ಲಿರುವ ಚರಂಡಿಯಲ್ಲಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮೃತ ದೇಹವನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದು ಈ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

18. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.119/2021 ಕಲಂ. 279,304(A) ಐ.ಪಿ.ಸಿ:-

          ದಿನಾಂಕ: 23.04.2021 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಂಜುನಾಥ ಕೆ.ಎಂ ಬಿನ್ ಲೇಟ್ ಮುನಿಆಂಜಿನಪ್ಪ, 34 ವರ್ಷ, ನಾಯಕ, ಜಿರಾಯ್ತಿ, ಕನ್ನಮಂಗಲ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತಂದೆ-ತಾಯಿಗೆ 1 ನೇ ತಾನು , 2 ನೇ ಕೃಷ್ಣ, 3 ನೇ ಸುಧಾರಾಣಿ, 4 ನೇ ಶ್ವೇತಾ ಎಂಬ 4 ಜನ ಮಕ್ಕಳಿರುತ್ತೇವೆ. ಎಲ್ಲರಿಗೂ ಮದುವೆಗಳಾಗಿ ಬೇರೆ-ಬೇರೆಯಾಗಿ ವಾಸವಾಗಿರುತ್ತೇವೆ. ತನ್ನ ತಮ್ಮನಾದ ಕೃಷ್ಣ (30 ವರ್ಷ) ರವರು ಕೂಲಿ ಕೆಲಸ ಮಾಡಿಕೊಂಡು ಇರುತ್ತಾನೆ. ಕೃಷ್ಣ ರವರು ತಮ್ಮ ಗ್ರಾಮ ಮತ್ತು ಸುತ್ತ-ಮುತ್ತ ಗ್ರಾಮಗಳಲ್ಲಿ ತೋಟದ ಕೂಲಿ ಕೆಲಸಕ್ಕೆ ಹೋಗಿ ಬರುತ್ತಿರುತ್ತಾನೆ. ಹೀಗಿರುವಲ್ಲಿ ದಿನಾಂಕ:21.04.2021 ರಂದು ಚೀಮಂಗಲ ಗ್ರಾಮದ ಬಳಿ ತೋಟದ ಕೂಲಿ ಇರುವುದಾಗಿ ಹೇಳಿ ಬೆಳಿಗ್ಗೆ ಮನೆಯಿಂದ ತನ್ನ ತಮ್ಮ ಕೃಷ್ಣ ರವರ ಬಾಬತ್ತು ಕೆಎ-67-ಇ-2776 ನೊಂದಣಿ ಸಂಖ್ಯೆಯ ಬಜಾಜ್ ಸಿಟಿ 100 ದ್ವಿ ಚಕ್ರ ವಾಹನದಲ್ಲಿ ಕೂಲಿ ಕೆಲಸಕ್ಕೆ ಹೋಗಿ ಕೂಲಿ ಕೆಲಸ ಮುಗಿಸಿಕೊಂಡು ವಾಪಸ್ಸು ಮನೆಗೆ ಬರಲು ಮದ್ಯಾಹ್ನ 2.30 ಗಂಟೆ ಸಮಯದಲ್ಲಿ ಚೀಮಂಗಲ ಕಡೆಯಿಂದ ತಮ್ಮ ಗ್ರಾಮಕ್ಕೆ ಬರಲು ಚೀಮಂಗಲ ಗ್ರಾಮದ ಮುನಿಚನ್ನೇಗೌಡ ರವರ ದ್ರಾಕ್ಷಿ ತೋಟದ ಬಳಿ ತನ್ನ ದ್ವಿ ಚಕ್ರ ವಾಹವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಯ ತಪ್ಪಿ ದ್ವಿ ಚಕ್ರ ವಾಹನ ಸಮೇತ ಕೆಳಗಡೆ ಬಿದ್ದು ಹೋಗಿ ದ್ವಿ ಚಕ್ರ ವಾಹನ ಜಖಂಗೊಂಡು ತನ್ನ ತಮ್ಮ ಕೃಷ್ಣ ರವರ ತಲೆಗೆ ಮತ್ತು ಬಲಕೈ, ಮುಖಕ್ಕೆ ರಕ್ತಗಾಯಗಳಾಗಿರುವುದಾಗಿ ತನಗೆ ವಿಷಯ ತಿಳಿದಿದ್ದು ನಂತರ ತಾನು ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ನಂತರ ತಾನು ತನ್ನ ತಮ್ಮ ಕೃಷ್ಣ ರವರನ್ನು ಉಪಚರಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಕಾರಿನಲ್ಲಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿದ್ದು ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಹೋಗಿ ನಂತರ ಅಲ್ಲಿಂದ ಕೋಲಾರದ ಆರ್.ಎಲ್ ಜಾಲಪ್ಪ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:22.04.2021 ರಂದು ರಾತ್ರಿ 8.40 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾನೆ. ತನ್ನ ತಮ್ಮ ಕೃಷ್ಣರವರು ಕೆಎ-67-ಇ-2776 ನೊಂದಣಿ ಸಂಖ್ಯೆಯ ಬಜಾಜ್ ಸಿಟಿ 100 ದ್ವಿ ಚಕ್ರ ವಾಹನವನ್ನು ತನ್ನಷ್ಟಕ್ಕೇ ತಾನೇ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಆಯತಪ್ಪಿ ದ್ವಿ ಚಕ್ರ ವಾಹನ ಸಮೇತ ಕೆಳಗಡೆ ಬಿದ್ದು ಹೋಗಿ ಗಾಯಗೊಂಡು ಚಿಕಿತ್ಸೆ ಪಲಕಾರಿಯಾಗದೇ ಮೃತ ಪಟ್ಟಿದ್ದು ಮೃತನ ಶವವು ಕೋಲಾರದ ಆರ್.ಎಲ್ ಜಾಲಪ್ಪ ಅಸ್ಪತ್ರೆಯ ಶವಗಾರದಲ್ಲಿದ್ದು ತಾವುಗಳು ಕೋಲಾರದ ಆರ್.ಎಲ್ ಜಾಲಪ್ಪ ಅಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿ ಕಾನೂನು ಕ್ರಮಕೈಗೊಳ್ಳಲು ಕೊಟ್ಟ ದೂರು.

 

19. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.119/2021 ಕಲಂ. 271 ಐ.ಪಿ.ಸಿ & 4,5,10 THE KARNATAKA EPIDEMIC DISEASES ACT, 2020:-

          ದಿನಾಂಕ.22-04-2021 ರಂದು ಮಧ್ಯಾಹ್ನ 12.30 ಗಂಟೆಗೆ ಕೆ.ಸತೀಶ್, ಪಿ.ಎಸ್.ಐ ರವರು ಠಾಣೆಗಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ಈ ದಿನ ದಿನಾಂಕ:-22-04-2021 ರಂದು ಬೆಳಿಗ್ಗೆ 11-00 ಗಂಟೆಗೆ ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಯ್ಡಕೊಳ್ಳುವಂತೆ ಹಾಗೂ ಸರ್ಕಾಕರದ ಅಧಿಸೂಚನೆಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಮಾನ್ಯ ಪೊಲೀಸ್ ಉಪಾಧೀಕ್ಷಕರು, ಚಿಂತಾಮಣಿ ಉಪವಿಭಾಗ, ಚಿಂತಾಮಣಿ ರವರ ನೇತೃತ್ವದಲ್ಲಿ ಶಿಡ್ಲಘಟ್ಟ ನಗರದಲ್ಲಿ ಜಾಗೃತಿ ಜಾಥವನ್ನು ಹಮ್ಮಿಕೊಂಡಿರುತ್ತೇವೆ. ಸದರಿ ಜಾಥ ಕಾರ್ಯಕ್ರಮದಲ್ಲಿ ಶ್ರೀ ರಾಜೀವ್, ಮಾನ್ಯ ತಹಸೀಲ್ದಾರರು, ಶ್ರೀ ವೆಂಕಟೇಶ್ ಮೂರ್ತಿ, ತಾಲ್ಲೂಕು ಆರೋಧಿಕಾರಿಗಳು (ಟಿಹೆಚ್ಓ), ಶ್ರೀ ಶ್ರೀನಿವಾಸ್, ಕಮಿಷನರ್, ಶಿಡ್ಲಘಟ್ಟ ನಗರಸಭೆ, ಶ್ರೀ ಸುರೇಶ್, ವೃತ್ತ ನಿರೀಕ್ಷಕರು, ಶ್ರೀ ಲಿಯಾಕತ್ ಉಲ್ಲಾ, ಪಿಎಸ್ಐ, ಶಿಡ್ಲಘಟ್ಟ ಗ್ರಾಮಾಂತರ ಠಾಣೆ, ಪಿಎಸ್ಐ, ಶಿಡ್ಲಘಟ್ಟ ನಗರ ಠಾಣೆ ಆದ ನಾನು ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತೇವೆ, ನಾವುಗಳು ಶಿಡ್ಲಘಟ್ಟ ನಗರ ಠಾಣೆಯಿಂದ ಹೊರಟು ಸರ್ಕಾರಿ ಜೀಪ್ ಸಂ-ಕೆ.ಎ.40.ಜಿ.356 ರಲ್ಲಿನ ಧ್ವನಿವರ್ಧಕದಲ್ಲಿ ಸಾರ್ವಜನಿಕರಿಗೆ ಕೋವಿಡ್-19 ಸಾಂಕ್ರಾಮಿಕ ರೋಗ ತಟ್ಟೆಗಟ್ಟಲು ಸರ್ಕಾರ ಹೊರಡಿಸಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಹಾಗೂ ಸಾಮಾಜಿಕ ಅಂತರ ಮತ್ತು ಮಾಸ್ಕ್ ನ್ನು ಧರಿಸುವಂತೆ ಜಾಗೃತಿಯನ್ನು ಮೂಡಿಸುತ್ತಾ ದಿಬ್ಬೂರಹಳ್ಳಿ ರಸ್ತೆ, ಅಮೀರ್ ಬಾಬಾ ದರ್ಗಾ, ಓ.ಟಿ ಸರ್ಕಲ್, ಕೋಟೆ ಸರ್ಕಲ್, ಬಸ್ ನಿಲ್ದಾಣ, ಕೋಟೆ ವೃತ್ತ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳಿಗ್ಗೆ 12-00 ಗಂಟೆಗೆ ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆಯ ಬಳಿ ಬಂದಾಗ ಶ್ರೀ ಗುರು ಭವನ ಹೋಟೆಲ್ ನಲ್ಲಿ ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ಮಾತನಾಡಿಕೊಂಡು ಕುಳಿತುಕೊಂಡು ಊಟ ಮಾಡುತ್ತಿದ್ದು, ಅಲ್ಲಿ ಸಾಮಾಜಿಕ ಅಂತರವನ್ನು ಮರೆತು ಕುಳಿತಿದ್ದ ಆಸಾಮಿಗಳು ಹಾಗೂ ಮಾಲೀಕನೂ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಓಡಿ ಹೋಗಿದ್ದು, ನಂತರ ಅಲ್ಲಿದ್ದ ಸಾರ್ವಜನಿಕರನ್ನು ಹೋಟೆಲ್ ನ ಮಾಲೀಕನ ಹೆಸರು ವಿಳಾಸ ಕೇಳಲಾಗಿ ಸರವಣ್ ಬಿನ್ ನಟರಾಜನ್, 29 ವರ್ಷ, ಕುಂಬಾರರು, ಹೋಟೆಲ್ ವ್ಯಾಪಾರ, ವಾಸ-ಹೊಸಮನೆಗಳ ಬೀದಿ, ಕುರುಬರ ಪೇಟೆ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು, ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 1) ಅಪ್ರೋಜ್ ಬಿನ್ ಪೈರೋಜ್, 34 ವರ್ಷ, ಮುಸ್ಲಿಂರು, ರೇಷ್ಮೆ ವ್ಯಾಪಾರ, ವಾಸ- ಮಹಬೂಬ್ ನಗರ, ಶಿಡ್ಲಘಟ್ಟ ಟೌನ್, 2) ರಫೀಕ್ ಬಿನ್ ಶಫಿವುಲ್ಲಾ, 28 ವರ್ಷ, ಮುಸ್ಲೀಂರು, ಕೂಲಿಕೆಲಸ, ತೈಬಾ ನಗರ, ಶಿಡ್ಲಘಟ್ಟ ಟೌನ್ ಎಂದು ಓಡಿ ಹೋದ ಇನ್ನೂ ಮೂರು ಜನರ ಹೆಸರು ವಿಳಾಸ ತಿಳಿದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಆದ ಕಾರಣ ಸಾಮಾಜಿಕ ಅಂತರವಿಲ್ಲದೆ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮೇಲ್ಕಂಡ ಐದು ಜನ ಆಸಾಮಿಗಳ ಮತ್ತು ಹೋಟೆಲ್ ಮಾಲೀಕರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.  

ಇತ್ತೀಚಿನ ನವೀಕರಣ​ : 23-04-2021 06:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080