ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.74/2021 ಕಲಂ. 427,447 ಐ.ಪಿ.ಸಿ :-

     ದಿನಾಂಕ:22-03-2021 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರರಾದ ಟಿ ಎಂ ವೆಂಕಟೇಶ ಬಿನ್ ನಡಿಪಿ ಮದ್ದಯ್ಯ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಕಸಬಾ ಹೋಬಳಿ ಪರಗೋಡು ಗ್ರಾಮದ ಸ ನಂ-347 ರಲ್ಲಿ 3-00 ಎಕರೆ ಜಮೀನು ಹಾಲಿ ನನ್ನ ಸ್ವಂತ ಖಾತೆ ಸ್ವಾಧೀನಾನುಭವದಲ್ಲಿರುತ್ತದೆ. ಸದರಿ ಜಮೀನಿನನ ಪಕ್ಕ ಅಂದರೆ ಎನ್ ಹೆಚ್-7 ರ ರಸ್ತೆಗ ಸುಮಾರು 3 ವರ್ಷಗಳಾಗಿರುವ 17 ತೆಂಗಿನ ಮರಗಳಿದ್ದು ದಿನಾಂಕ:22-03-2021 ರಂದು ಬೆಳಿಗ್ಗೆ ಸುಮಾರು 2-00 ಗಂಟೆಯ ಸಮಯದಲ್ಲಿ ನಾನು ನಮ್ಮ ಆಲೂಗಡ್ಡೆ ಬೆಳೆಗೆ ಕಾವಲು ಇರುವಾಗ ಯಾರೋ ಅನಾಮಿಕ ವ್ಯಕ್ತಿಗಳು ನನ್ನ ಕಣ್ಣು ತಪ್ಪಿಸಿ ನಮ್ಮ ಜಮೀನಿನ ಒಳಗೆ ಅಕ್ರಮ ಪ್ರವೇಶ ಮಾಡಿ 17 ತೆಂಗಿನಮರಗಳ ಪೈಕಿ 15 ಮರಗಳ ಪಟ್ಟೆಗಳನ್ನು ಹಾಗೂ ಮರದ ತುದಿಗಳನ್ನು  ಕಡಿದು ಹಾಕಿ ಸಂಪೂರ್ಣವಾಗಿ ನಾಶ ಮಾಡಿರುತ್ತಾರೆ. ನಂತರ ಬೆಳಿಗ್ಗೆ 6-00 ಗಂಟೆಗೆ ಎದ್ದು ನಾನು ನೋಡಿದಾಗ ಎಲ್ಲಾ ಮರಗಳು ನಾಶವಾಗಿರುತ್ತವೆ. ಆದ್ದರಿಂದ ಸದರಿ ತೆಂಗಿನ ಮರಗಳನ್ನು ನಾಶಪಡಿಸಿದವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನಗೆ ಸೂಕ್ತ ನ್ಯಾಯ ಮಾಡಿಕೊಡಲು ಕೋರಿ ನೀಡಿದ ದೂರು.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.75/2021 ಕಲಂ. 506,504,420 ಐ.ಪಿ.ಸಿ :-

     ದಿನಾಂಕ: 22-03-2021 ರಂದು ಸಂಜೆ 6-45 ಗಂಟೆಗೆ ನ್ಯಾಯಾಲಯದ ಪಿ ಸಿ-235 ರವರು ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಪಿಸಿಆರ್ ನಂ- 12/2021 ರ ಸಾರಾಂಶವೇನೆಂದರೆ

 1. The addresses of the parties are stated in the cause title for issue of notices, warrants etc, form this hon’ble court. The complainant is also represented by Sri.S.P Babajan advocates Chikkaballapura.
 2. The complainant respectfullly submite that, 4 years befoe my elder daughter by SHABRIN TAJ. T E was studying her degree shantha collge peresandra village during her studies she was travelling from pathapallya via bagepalli during this time she was noticed by one Mr. imran s/o Chand Basha @ Chanu and Shanaaz Resident of ward no.18 Bagepalli taluk who was a Fruits merchant on foot path opposite to Baepalli KSRTC bus stand.
 3. He was used to follow her on the way continuously it has been informed to her parents by her and the complainant has been advised and warned to accused and his parents in spite of that he used to do the same and during her 2 nd year degree he blackmailed her stating if you don’t love me I will write a death nite stating you are the reason for my death nd meanwhile they both developed a relationship and he has made some video’s and Photogrsph’s of her and kept blackmailing her the matter has become so big I informed some relatives of mine regarding they have approached his parent’s in the matter and advised them to accomplish their marriage but his parents denied and refused the advices of my relatives stating that they are from the lower middle class family they cannot offer the dowry and other necessity of my son. Even the complaimnant has approached them 4 to 5 times but was not fruitful all went in vein. When questioned to the boy he has agreed to marry her in front of our relatives. After few days in this regard his mother diverted his mind saying that they are from lower middle class family how can they look after you or satisfy your requirements. But by this time he had created the false evidences that he is going to marry her. Finally we advised our daughter to forget everything and start a fresh life and we visited the boys house with our relatives and elders dictated them clearly that we are no more related to each other as personally or as a families. After that I accomplished my daughters marriage with one Mr.Nazeer s/o Munaaf resident of mittapalli village ODC Madalam, kadri taluk according to customs and traditions with spending Rs.25,00,000/- on dated 24-01-2021. The couples have just started their happay marital life.
 4. Even after her marriage he tried to spoil my daughter’s life when groom visited brides house in her parental village and went to mosque for prayer the imran approached hazrath named Hussainwali and asked to take Aadhar Card or phone number of the groom promising him to pay Rs 10.000/- Understanding his intentions Hussainwali brought the matter and informed to us. Understanding the situation immediately after 3 days I the complainant and Hussainwali went to imran’s house and explained the issue to his mother shahnaz and informed her to advise her son, but still it was not useful. He again went to their place i.e. Mittapalli Village and posted her previous combined photo’s of them in whatsapp group in which Mr. Nazeer and Munaaf were present. 
 5. After seeing those photo’s groom parents brought my daughter to billur Sri. Sidhiqe hazarat’s house who arranged the marriage in between them and us stating that they will be back after a month seeking Talaq. They have issued a notice to our mosque seeking Talaq.
 6. After so many times me and my relatives begged in front of Accused Imran and his mother Shahnaz and his father Chandbasha not to spoil my daughters they have not obiged. They have completely ruined my daughters marital Life. Hence I request to take actions to punish and compensate the losses of wealth, defamation of family and marital life of my daughter.

WHEREFORE, The complainant most humbly pray that this Hon’ble Court be pleased to Register the case against the accused and take ccognizance against the accused for the offence punishable under section 504, 506, 420. Sexual Harassment, of Indian penal code, and be pleased to punish them for the above offences in the interest of justices and equity. ನೀಡಿದ ದೂರಾಗಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.76/2021 ಕಲಂ. 379 ಐ.ಪಿ.ಸಿ :-

     ದಿನಾಂಕ 23/03/2021 ರಂದು ಬೆಳಿಗ್ಗೆ 10-30 ಗಂಟೆಗೆ ಫಿರ್ಯಾಧಿದಾರರಾದ ಕೃಷ್ಣಪ್ಪ ಬಿನ್ ಆದಿನಾರಾಯಣಪ್ಪ, 30 ವರ್ಷ, ಆದಿಕರ್ನಾಟಕ ಜನಾಂಗ, ವಾಸ ಹೊಸಹುಡ್ಯ ಗ್ರಾಮ, ಕಸಭಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಈ  ಹಿಂದೆ ಬೆಂಗಳೂರು ನಗರದ ಖಾಯಂ ವಾಸಿಯಾದ 5ನೇ ಕ್ರಾಸ್, 5ನೇ ಮುಖ್ಯ ರಸ್ತೆ, ಕಲ್ಯಾಣ ನಗರ, ಟಿ. ದಾಸರಹಳ್ಳಿ ಹತ್ತಿರ ಮಹದೇಶ್ವತ ದೇವಾಸ್ಥಾನದ ಹತ್ತಿರ ವಾಸವಾಗಿರುವ ನಾಗರಾಜ ಜಿ.ವಿ. ಬಿನ್ ಚಲಪತಿ, ಎಂಬುವವರಿಂದ ಖರಿಸಿದ್ದ ಈ ಕೆಳಕಂಡ ವಿವರವುಳ್ಳ ಹೀರೋ ಹೋಂಡಾ ಸ್ಪ್ಲೇಂಡರ್ ದ್ವಿ ಚಕ್ರ ವಾಹನವು ದಿನಾಂಕ 08/10/2019 ರಂದು ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ ಘಂಟವಾರಂಪಲ್ಲಿ ಗ್ರಾಮದಲ್ಲಿರುವ ಎ.ಪಿ.ಎಂ.ಸಿ. ಮಾರುಕಟ್ಟೆಯ ಗಣೇಶನ ದೇವಾಸ್ಥಾನದ ಮುಂಭಾಗದಲ್ಲಿ ಸಮಯ ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ನಿಲ್ಲಿಸಿ ನನ್ನ ಕೆಲಸಕ್ಕೆ  ಹೋಗಿ ಬಂದು ನೋಡಲಾಗಿ ಸದರಿ ವಾಹನವು ಕಳವು ಆಗಿರುತ್ತದೆ. ಸುಮಾರು ದಿನಗಳಿಂದ ಸದರಿ ವಾಹನವನ್ನು ಹುಡುಕಾಡಿದರೂ ಸಹ ಸುಳಿವು ಪತ್ತೆ ಆಗಿರುವುದಿಲ್ಲ. ವಾಹನದ ಬೆಲೆ 20, 000/- ರೂ ಗಳಾಗಿದ್ದು, ತಾವುಗಳು ಪತ್ತೆಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 

4. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.77/2021 ಕಲಂ. 379 ಐ.ಪಿ.ಸಿ :-

     ದಿನಾಂಕ 23/03/2021 ರಂದು ಬೆಳಿಗ್ಗೆ 11-45 ಗಂಟೆಗೆ ಫಿರ್ಯಾಧಿದಾರರಾದ ಸುಬ್ಬರಾಯಪ್ಪ ಬಿನ್ ಗಂಗಯ್ಯ, 56 ವರ್ಷ, ಆದಿಕರ್ನಾಟಕ ಜನಾಂಗ, ಕೆ.ಇ.ಬಿ. ವಸತಿ ಗೃಹಗಳು, ಬಾಗೇಪಲ್ಲಿ ಟವನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ನಾನು ಬೆಸ್ಕಾಂ ಲೈನ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ನಬಾನು ಕೆ.ಎ-40-ಎಸ್-8852 ನೊಂದಣಿ ಸಂಖ್ಯೆ ಹೀರೋ ಹೋಂಡಾ ಫ್ಯಾಷನ್ ಪ್ರೋ ದ್ವಿ ಚಕ್ರ ವಾಹನವನ್ನು ದಿನಾಂಕ 17/06/2020 ರಂದು ಬಾಗೆಪಲ್ಲಿ ಪಟ್ಟಣದ ಬೆಸ್ಕಾಂ ಆಫೀಸಿನ ಕಾಂಪೌಂಡ್ ನಲ್ಲಿ ಸಂಜೆ ಸುಮಾರು 7-00 ಗಂಟೆಯಲ್ಲಿ ನಿಲ್ಲಿಸಿ ನನ್ನ ಕೆಲಸಕಕ್ಎ ಹೋಗಿ ಬಂದು ನೋಡಲಾಗಿ ಸದರಿ ವಾಹನವು ಕಳವು ಆಗಿರುತ್ತದೆ. ಸುಮಾರು ದಿನಗಳಿಂದ ಸದರಿ ವಾಹನವನ್ನು ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ಸದರಿ ವಾಹನದ ಬೆಲೆ 20, 000/- ರೂಗಳಾಗಿರುತ್ತದೆ. ಸದರಿ ದ್ವಿ ಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕಾಗಿ  ಈ ದಿನ ತಡವಾಗಿ ಬಂದು ನೀಡಿದ ದೂರಾಗಿರುತ್ತದೆ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.41/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ:23.03.2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಚಿಕ್ಕಮುನಿರಾಜುರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ತನ್ನ ಮಗನಾದ ಅನೀಲ್ ಕುಮಾರ್ ಎಂ  22 ವರ್ಷ ರವರು ದಿನಾಂಕ:14.03.2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಕೆಎ 40 ಯು 5998 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ಗೊಲ್ಲಹಳ್ಳಿ ದಿನ್ನೆಯಿಂದ ಎಸ್ ಗೊಲ್ಲಹಳ್ಳಿಗೆ ಬರಲು ನಲ್ಲಗುಟ್ಟಪಾಳ್ಯ  ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಹತ್ತಿರ ರಸ್ತೆಯ ಎಡಗಡೆ ಬರುತ್ತಿದ್ದಾಗ ಎದುರುಗಡೆಯಿಂದ ಅಂದರೆ ಚಿಕ್ಕಬಳ್ಳಾಪುರ ಕಡೆಯಿಂದ ಬರುತ್ತಿದ್ದ ಕೆಎ 40 ಹೆಚ್ 4869 ನೊಂದಣಿ ಸಂಖ್ಯೆಯ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮಗ ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ತನ್ನ ಮಗ ಅನೀಲ್ ಕುಮಾರ್ ರವರು ಕೆಳಗೆ ಬಿದ್ದು ಹೋಗಿದ್ದು, ತನ್ನ ಮಗನಿಗೆ ಎಡಮೊಣಕೈಗೆ, ಎಡಕಣ್ಣಿನ ಉಬ್ಬಿನ ಬಳಿ ಮತ್ತು ಮೂಗಿನ ಬಳಿ ರಕ್ತ ಗಾಯಗಳಾಗಿದ್ದು, ಕೆಎ 40 ಹೆಚ್ 4869 ನೊಂದಣಿ ಸಂಖ್ಯೆಯ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನ ಸವಾರನಿಗೂ ಸಹ ಗಾಯಗಳಾಗಿರುತ್ತೆ. ತಕ್ಷಣ ಸ್ಥಳದಲ್ಲಿದ್ದ ಸುರೇಶ ಬಿನ್ ವೆಂಕಟರಾಯಪ್ಪ ನಲ್ಲಗುಟ್ಟಪಾಳ್ಯ , ಸತೀಶ ಬಿನ್ ದಾಸಪ್ಪ ನಲ್ಲಗುಟ್ಟಪಾಳ್ಯರವರುಗಳು ಯಾವುದೋ ಆಟೋದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ತನಗೆ ಫೋನ್ ಮಾಡಿ ತಿಳಿಸಿದ್ದು, ತಕ್ಷಣ ತಾನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿರುತ್ತೆಂದು ಈ ಅಪಘಾತಕ್ಕೆ ಕಾರಣನಾದ ಕೆಎ 40 ಹೆಚ್ 4869 ನೊಂದಣಿ ಸಂಖ್ಯೆಯ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನ ಸವಾರನ ಹೆಸರು ಮಂಜು ಬಿನ್ ರೆಡ್ಡಪ್ಪ ಜಂಗಮಾರಪ್ಪನಹಳ್ಳಿ ಗ್ರಾಮ ಎಂತ ತಿಳಿಯಿತೆಂದು ಈ ವಿಚಾರದಲ್ಲಿ ಗ್ರಾಮದಲ್ಲಿ ಹಿರಿಯರು ರಾಜಿ ಮಾಡುವುದಾಗಿ ತಿಳಿಸಿದ್ದು, ಯಾರೂ ಬಾರದೇ ಇದ್ದುದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ ಕೆಎ 40 ಹೆಚ್ 4869 ದ್ವಿ ಚಕ್ರ ವಾಹನ ಸವಾರ ಮಂಜುರವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 

6. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.42/2021 ಕಲಂ. ಮನುಷ್ಯ ಕಾಣೆ :-

     ದಿನಾಂಕ: 23/03/2021 ರಂದು ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಶ್ರೀಮತಿ ಗೀತ ಕೋಂ ಜಿ.ಎಲ್.ಪ್ರಭಾಕರ, 38 ವರ್ಷ, ಬಲಜಿಗರು, ಹೋಟೆಲ್ ಕೆಲಸ, ತಾಮ್ರ ಹೋಟೆಲ್, ಬಿ.ಬಿ.ರಸ್ತೆ, ವಾಸ: ಸಿ.ಎಂ.ಸಿ ಲೇಔಟ್, ಚಿಕ್ಕಬಳ್ಳಾಪುರ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಈಗ್ಗೆ 21 ವರ್ಷಗಳ ಹಿಂದೆ ಕೋಲಾರ ಟೌನ್ ಪಾಲಸಂದ್ರ ಲೇಔಟ್ ವಾಸಿ ಜಿ.ಎಲ್.ಪ್ರಭಾಕರರವರೊಂದಿಗೆ ನನ್ನ ಮದುವೆಯಾಗಿದ್ದು, ನಮಗೆ 1] ಚರಣ್ ತೇಜ್ ಮತ್ತು 2] ನೇ ಹಾಸಿನಿ ಎಂಬ ಇಬ್ಬರು ಮಕ್ಕಳಿರುತ್ತಾರೆ. ನಾವು ಈಗ್ಗೆ 5 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಟೌನ್ ಗೆ ಬಂದು ವಾಸವಾಗಿದ್ದು, ಚಿಕ್ಕಬಳ್ಳಾಪುರ ಟೌನ್ ಬಿ.ಬಿ.ರಸ್ತೆಯಲ್ಲಿ ಶನಿಮಹಾತ್ಮ ದೇವಸ್ಥಾನದ ಮುಂದೆ ತಾಮ್ರ ಹೋಟೆಲ್ ಎಂಬ ಹೆಸರಿನಲ್ಲಿ ಹೋಟೆಲ್ ನ್ನು ಇಟ್ಟುಕೊಂಡು ನಡೆಸುತ್ತಿದ್ದೆವು. ಇತ್ತೀಚೆಗೆ ಹೋಟೆಲ್ ಸರಿಯಾಗಿ ನಡೆಯದೇ ಹೋಟೆಲ್ ನಡೆಸಲು ಹಾಗೂ ಜೀವನ ಮಾಡಲು ಸಾಲ ಮಾಡಿಕೊಂಡಿದ್ದೆವು. ದಿನಾಂಕ: 21/03/2021 ರಂದು ಬೆಳಿಗ್ಗೆ 5-30 ಗಂಟೆ ಸಮಯದಲ್ಲಿ ಪ್ರತಿದಿನದಂತೆ ನನ್ನ ಗಂಡ ಪ್ರಭಾಕರ ರವರು ಹೋಟೆಲ್ ಗೆ ಹೋಗುವುದಾಗಿ ಮನೆಯಿಂದ ಹೊರಗೆ ಹೋದರು. ನಂತರ ನಾನು ಮನೆಕೆಲಸಗಳನ್ನು ಮುಗಿಸಿ ಹೋಟೆಲ್ ಗೆ ಹೋಗಲು ಪೋನ್ ಮಾಡಿದಾಗ ನನ್ನ ಗಂಡನ ಮೊಬೈಲ್ ಪೋನ್ ಮನೆಯಲ್ಲಿಯೇ ಇತ್ತು. ನಂತರ ನಾನು ನನ್ನ ಮಗನನ್ನು ಹೋಟೆಲ್ ಬಳಿ ಕಳುಹಿಸಿ ನೋಡಿದಾಗ ನನ್ನ ಗಂಡ ಹೋಟೆಲ್ ಗೆ ಹೋಗಿಲ್ಲವೆಂದು ತಿಳಿಯಿತು. ನಂತರ ನಾನು, ನನ್ನ ಮಗ ಮತ್ತು ನನ್ನ ತಮ್ಮ ವಿಜಯ್ ಕುಮಾರ್ ಸೇರಿಕೊಂಡು ಚಿಕ್ಕಬಳ್ಳಾಪುರ ಟೌನ್ ಹಾಗೂ ನಮ್ಮ ಸಂಬಂದಿಕರ ಮನೆಗಳಲ್ಲಿ ಎಲ್ಲಾ ಕಡೆ ಹುಡುಕಾಡಿದ್ದು, ಇದುವರೆವಿಗೂ ನನ್ನ ಗಂಡ ಪತ್ತೆಯಾಗಿರುವುದಿಲ್ಲ. ನನ್ನ ಗಂಡ ಹೋಟೆಲ್ ನಡೆಸಲು ಸಾಲ ಮಾಡಿಕೊಂಡಿದ್ದು, ಹೋಟೆಲ್ ಸರಿಯಾಗಿ ನಡೆಯದೇ ಇದ್ದುದರಿಂದ ಬೇಸರದಲ್ಲಿ ಮನೆಯಿಂದ ಹೊರಟು ಹೋಗಿರಬಹುದು. ಇದುವರೆವಿಗೂ ನನ್ನ ಗಂಡ ಪತ್ತೆಯಾಗದೇ ಇದ್ದುದರಿಂದ ಈ ದಿನ ನಾನು ತಡವಾಗಿ ಠಾಣೆಗೆ ಹಾಜರಾಗಿದ್ದು, ಕಾಣೆಯಾಗಿರುವ ನನ್ನ ಗಂಡ ಜಿ.ಎಲ್.ಪ್ರಭಾಕರ ರವರನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನನ್ವಯ ಪ್ರ.ವ.ವರದಿ,

 

7. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.17/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:-22/03/2021 ರಂದು ಸಂಜೆ 7-30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಕು. ಜಿ ಎನ್ ತುಳಸಿ ಸೊನೀಯಾ ಬಿನ್ ಜಿ ಎನ್ ನಾಗರಾಜ 21 ವರ್ಷ, ಬಲಜಿಗರು, ಚಿಕ್ಕಬಳ್ಲಾಪುರ ಹಳೇ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲ್ಯಾಬ್ ನಲ್ಲಿ ಕೆಲಸ, ವಾರ್ಡ್ ನಂ-31, ಸೆಂಟ್ ಜೊಸೆಫ್ ಕಾನ್ವೆಂಟ್ ಶಾಲೆಯ ಹಿಂಭಾಗ, ರಾಮಯ್ಯ ಕಾಲೋನಿ, ಚಿಕ್ಕಬಳ್ಳಾಪುರ ಟೌನ್ ಮತ್ತು ತಾಲ್ಲೂಕು ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ತಾನು ದಿನಾಂಕ:-22/03/2021 ರಂದು ಎಂದಿನಂತೆ ಕೆಲಸಕ್ಕೆ ಹೋಗಿ ವಾಪಸ್ಸು ಮನೆಗೆ ಹೋಗಲು ಸಂಜೆ ಸುಮಾರು 5-15 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ – ಬೆಂಗಳೂರು ಎನ್.ಹೆಚ್-44 ಬಿ.ಬಿ ರಸ್ತೆಯ ಬಾಗೇಪಲ್ಲಿ ವೃತ್ತದ ಬಳಿ ಇರುವ ಜಿಲ್ಲಾ ಗ್ರಂಥಾಲಯದ ಬಳಿ ಬೆಂಗಳೂರು ಹೋಗುವ ಏಕ ಮುಖ ರಸ್ತೆಯನ್ನು ದಾಟುತ್ತಿದ್ದಾಗ ಅದೇ ಸಮಯಕ್ಕೆ ಶಿಡ್ಲಘಟ್ಟ ವೃತ್ತದ ಕಡೆಯಿಂದ ವಿರುದ್ಧ ದಿಕ್ಕಿನಲ್ಲಿ ಬಂದ KA-40-EE-4691 ರ ದ್ವಿಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯನ್ನು ನಡೆದುಕೊಂಡು ದಾಟುತ್ತಿದ್ದ ಪಿರ್ಯಾಧಿ/ಗಾಯಾಳು ರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಠಾರ್ ರಸ್ತೆಯಲ್ಲಿ ಬಿದ್ದಾಗ ಹಣೆಗೆ, ಬಲಕಾಲಿಗೆ ಹಾಗೂ ತೊಡೆಗೆ ರಕ್ತ ಗಾಯಗಳಾಗಿದ್ದು, ಸದರಿ ಅಪಘಾತ ಪಡಿಸಿದ ದ್ವಿಚಕ್ರವಾಹನ ಸವಾರನು ಸಹಾ ರಸ್ತೆಯಲ್ಲಿ ಬಿದ್ದು ಅವನಿಗೂ ಕೂಡಾ ಗಾಯಗಳಾಗಿದ್ದು ತಕ್ಷಣ ಅಲ್ಲಿನ ಸ್ಥಳೀಯರು ತಮ್ಮಗಳನ್ನು ಉಪಚರಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವದೋ ಆಟೋದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಸದರಿ ಅಪಘಾತ ಪಡಿಸಿದ ದ್ವಿಚಕ್ರವಾಹನ ಸವಾರನ ಹೆಸರು ಮತ್ತು ವಿಳಾಸ ಕೇಳಲಾಗಿ ಗಿರೀಶ್ ಬಿನ್ ಚನ್ನರಾಯಪ್ಪ 30 ವರ್ಷ, ಗೊಳ್ಳು ಗ್ರಾಮ ಎಂತ ತಿಳಿಸಿದ್ದು ಸದರಿ ಅಪಘಾತಕ್ಕೆ ಕಾರಣನಾದ KA-40-EE-4691 ರ ದ್ವಿಚಕ್ರವಾಹನ ಸವಾರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

8. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.39/2021 ಕಲಂ. 379 ಐ.ಪಿ.ಸಿ:-

     ದಿನಾಂಕ 22/03/2021 ರಂದು ಮದ್ಯಾಹ್ನ 3:00 ಗಂಟೆಯಲ್ಲಿ ಪಿರ್ಯಾದಿ ಪ್ರಸಾದ್ ಬಿನ್ ಭೀಮಯ್ಯ, 43 ವರ್ಷ, ಲಂಬಾಣಿ ಜನಾಂಗ, ಬಡಗಿ ಕೆಲಸ, ಕೊಂಡಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 21/02/2021 ರಂದು ಬೆಳಿಗ್ಗೆ 11:30 ಗಂಟೆಯಲ್ಲಿ ತನ್ನ ಬಾಬತ್ತು ದ್ವಿಚಕ್ರ ವಾಹನ ಸಂಖ್ಯೆ KA-40-U-0903 Passin Pro ದ್ವಿಚಕ್ರ ವಾಹನದಲ್ಲಿ ಗೌರಿಬಿದನೂರು ನಗರದ ಅಪೂರ್ವ ಆಸ್ಪತ್ರೆ ಬಳಿ ಬಂದು ಆಸ್ಪತ್ರೆ ಮುಂಭಾಗದಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸುಮಾರು ಮದ್ಯಾಹ್ನ 12:30 ಗಂಟೆಯಲ್ಲಿ ಹೊರಗಡೆ ಬಂದು ನೋಡಲಾಗಿ ತಾನು ನಿಲ್ಲಿಸಿದ್ದ ಸ್ಥಳದಲ್ಲಿ ತನ್ನ ದ್ವಿಚಕ್ರ ವಾಹನವು ತಾನು ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ ನಂತರ ಗೌರಿಬಿದನೂರು ನಗರದ ವಿವಿಧ ಕಡೆಗಳಲ್ಲಿ ಹಾಗೂ ತನ್ನ ಸ್ನೇಹಿತರನ್ನು ವಿಚಾರಣೆ ಮಾಡಿ ಈ ದಿನ ತಡವಾಗಿ ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

 

9. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.40/2021 ಕಲಂ. 379 ಐ.ಪಿ.ಸಿ:-

     ದಿನಾಂಕ 22/03/2021 ರಂದು ಸಂಜೆ 4:00 ಗಂಟೆ ಸಮಯದಲ್ಲಿ ಪಿರ್ಯಾದಿ ಗೋಪಾಲ D ಬಿನ್ ದಾಳಪ್ಪ, 40 ವರ್ಷ, ನಾಯಕ ಜನಾಂಗ, ಚೆನ್ನಬೈರೇನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 19/01/2020 ರಂದು ಸಂಜೆ 6:30 ಗಂಟೆ ಸಮಯದಲ್ಲಿ ತನ್ನ KA 40 V 3212 ದ್ವಿಚಕ್ರ ವಾಹನವನ್ನು ಗೌರಿಬಿದನೂರು ನಗರದ ಅಂಚೆ ಕಛೇರಿ ಬಳಿ ನಿಲ್ಲಿಸಿ ಪಕ್ಕದಲ್ಲಿರುವ ರೈಲ್ವೇ ನಿಲ್ದಾಣದಲ್ಲಿ ಸ್ನೇಹಿತನನ್ನು ಮಾತನಾಡಿಸಿಕೊಂಡು ಬರಲು ಹೋಗಿ ಸಂಜೆ ಸುಮಾರು 7:00 ಗಂಟೆಯಲ್ಲಿ ಬಂದು ನೋಡಲಾಗಿ ತಾನು ನಿಲ್ಲಿಸಿದ್ದ ಸ್ಥಳದಲ್ಲಿ ದ್ವಿಚಕ್ರ ವಾಹನವು ಇರಲಿಲ್ಲ. ನಂತರ ಗೌರಿಬಿದನೂರು ನಗರದ ವಿವಿಧ ಕಡೆಗಳಲ್ಲಿ ಹುಡುಕಾಡಿ ಹಾಗೂ ಸ್ನೇಹಿತರನ್ನು ವಿಚಾರಣೆ ಮಾಡಿದ್ದು ದ್ವಿಚಕ್ರ ವಾಹನವು ಪತ್ತೆಯಾಗಲಿಲ್ಲ. ನಂತರ ಕುಟುಂಬದ ಸಮಸ್ಯೆಯಿಂದ ಠಾಣೆಗೆ ದೂರು ನೀಡಲು ಸಾದ್ಯವಾಗಿರಲಿಲ್ಲ. ನಂತರ ಸರ್ಕಾರವು ಲಾಕ್ ಡೌನ್ ಜಾರಿ ಮಾಡಿದ್ದು ಠಾಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ದಿನ ದಿನ ದಿನಾಂಕ 22/03/2021 ರಂದು ಠಾಣೆಗೆ ಹಾಜರಾಗಿ ದೂರು ನೀಡುತ್ತಿದ್ದು ಕಳೆದು ಹೋದ ತನ್ನ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೇನೆ.

 

10. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.41/2021 ಕಲಂ. 379 ಐ.ಪಿ.ಸಿ:-

     ದಿನಾಂಕ 23/03/2021 ರಂದು ಬೆಳಿಗ್ಗೆ 11:00 ಗಂಟೆಯಲ್ಲಿ ಪಿರ್ಯಾದಿ ರಮೇಶ್ G ಬಿನ್ ಗಂಗಪ್ಪ, 30 ವರ್ಷ, ಆದಿ ಕರ್ನಾಟಕ ಜನಾಂಗ, ತಾಲ್ಲೂಕು ಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ, ಹಿರೇಬಿದನೂರು ಗೌರಿಬಿದನೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 27/01/2020 ರಂದು ಬೆಳಿಗ್ಗೆ 10:00 ಗಂಟೆಯಲ್ಲಿ ತನ್ನ ಬಾಬತ್ತು KA-40-EC-7579 ದ್ವಿಚಕ್ರ ವಾಹನದಲ್ಲಿ ಹಿರೇಬಿದನೂರಿನಿಂದ ಬಂದು ಹಳೇ ತಾಲ್ಲೂಕು ಕಛೇರಿಯ ಬಳಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಕೆಲಸ ಮುಗಿಸಿ ಮದ್ಯಾಹ್ನ 2:00 ಗಂಟೆಯಲ್ಲಿ ಊಟ ಮಾಡಲು ಮನೆಗೆ ಹೋಗಲು ಹೊರಗೆ ಬಂದು ನೋಡಿದಾಗ ತನ್ನ ದ್ವಿಚಕ್ರ ವಾಹನ ತಾನು ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ. ನಂತರ ಗೌರಿಬಿದನೂರು ನಗರದ ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ದ್ವಿಚಕ್ರ ವಾಹನವು ಪತ್ತೆಯಾಗಿರುವುದಿಲ್ಲ. ಕೆಲಸದ ಒತ್ತಡದಿಂದ ಪೊಲೀಸ್ ಠಾಣೆಗೆ ದೂರು ನೀಡಲು ಸಾದ್ಯವಾಗದೆ ಹಾಗೂ ಕೋವಿಡ್-19 ಸಮಯದಲ್ಲಿ ನಿಯಂತ್ರಣ ಕಾರ್ಯದಲ್ಲಿ ನೇಮಕ ಮಾಡಿದ್ದರಿಂದ ಪೊಲೀಸ್ ಠಾಣೆಗೆ ದೂರು ನೀಡಲು ಸಾದ್ಯವಾಗಿರುವುದಿಲ್ಲವೆಂದು ಈ ದಿನ ತಡವಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೇನೆ.

 

11.ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.43/2021 ಕಲಂ. 143,147,148,324,307,302,447,114,149 ಐ.ಪಿ.ಸಿ & 3(1)(r),3(1)(s),3(1)(w),3(2)(va) The SC & ST (Prevention of Atrocities) Amendment Act 2015 :-

     ದಿನಾಂಕ:22-03-2021 ರಂದು ರಾತ್ರಿ:10-00 ಗಂಟೆಗೆ ಸಿ.ಪಿ.ಸಿ.198 ನಾಗೇಶ್ ರವರು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕತ್ಸೆಯನ್ನು ಪಡೆಯುತ್ತಿದ್ದ ಗಾಯಾಳು ಶ್ರೀಮತಿ ಮಂಜುಳಮ್ಮ ಕೋಂ ಎ.ಸಿ. ರಾಮಾಂಜನೇಯ ಸುಮಾರು 45 ವರ್ಷ ಬೋವಿ ಜನಾಂಗ ಮನೆ ಕೆಲಸ ವಾಸ ಆವುಲನಾಗೇನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ತಂದು ಠಾಣೆಯಲ್ಲಿ ಹಾಜರುಪಡಿಸಿದ್ದು ಗಾಯಾಳುವಿನ ಹೇಳಿಕೆಯ  ಸಾರಂಶವೇನೆಂದರೆ: ತಾನು ಮೇಲ್ಕಂಡ ವಿಳಾಸದಲ್ಲಿ ಗಂಡ ಮಕ್ಕಳೊಂದಿಗೆ ವಾಸವಾಗಿದ್ದು ತಮಗೆ 3 ಜನ ಮಕ್ಕಳಿದ್ದು 1ನೇ ಲೀಲಾವತಿ ಮದುವೆಯಾಗಿರುತ್ತೆ 2ನೇ ಮನಸ್ಸಿನಿ ಮತ್ತು 3ನೇ ಮಗ ವೇದ ಪ್ರಕಾಶ ಆಗಿರುತ್ತಾರೆ.   ತನ್ನ ಗಂಡ ರಾಮಾಂಜನೇಯಲು ರವರು ಕಾರ್ಯದರ್ಶಿ(ಸೆಕ್ರೇಟರಿ) ಆಗಿದ್ದು ಬೆಂಗಳೂರು ಉತ್ತರ ತಾಲ್ಲೂಕಿನ ಬಂಡಿಕೋಡಿಗೇನಹಳ್ಳಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ತನಗೆ ಈಗ್ಗೆ ಸುಮಾರು 5-6 ವರ್ಷಗಳ ಹಿಂದೆ ತಮ್ಮ ಗ್ರಾಮದ ಬಳಿ ಇರುವ ಸರ್ಕಾರಿ  ಗೋಮಾಳ ಜಮೀನು ಸರ್ವೆ  ನಂಬರ್ 280 ರಲ್ಲಿ 2 ಎಕರೆ 20 ಗುಂಟೆ ಮಂಜೂರಾಗಿದ್ದು ಅದರಲ್ಲಿ ಬೋರವೆಲ್ ಕೊರಸಿ ಬೆಳೆಗಳನ್ನು ಇಟ್ಟುಕೊಂಡಿರುತ್ತೇವೆ. ತಮ್ಮ ಜಮೀನಿನ ಪೂರ್ವ ದಿಕ್ಕಿನಲ್ಲಿ ಮೇಲ್ಕಂಡ ಸರ್ಕಾರಿ  ಗೋಮಾಳದಲ್ಲಿ 3 ಎಕರೆ ಜಮೀನನ್ನು ಸ್ಮಶಾನಕ್ಕಾಗಿ ಕಾಯ್ದೆರಿಸಿರುತ್ತಾರೆ. ಸದರಿ ಜಮೀನನ್ನು ಅರೂರು ಗ್ರಾಮದ ಅರವಿಂದ ಬಿನ್ ಚಂದ್ರಶೇಖರ್ ಎಂಬುವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಸ್ವಲ್ಪ ಭಾಗ ಮುಳ್ಳುತಂತಿ ಬೇಲಿಯನ್ನು ಹಾಕಿರುತ್ತಾರೆ  ಈ ವಿಚಾರದಲ್ಲಿ ತನ್ನ ಗಂಡ ಸದರಿ ಜಮೀನು ಸ್ಮಶಾನಕ್ಕಾಗಿ ಲೋಕಾಯುಕ್ತ ವತಿಯಿಂದ ಕಾಯ್ದಿರಿಸಿದ್ದು ಅದನ್ನು ಒತ್ತುವರಿ ಮಾಡಿ ಬೇಲಿ ಹಾಕಬಾರದೆಂದು ಕೇಳಿದ ವಿಚಾರದಲ್ಲಿ ಈಗಾಗಲೆ ತನ್ನ ಗಂಡನ ಮೇಲೆ ಗೆರಗಿ ವೆಂಕಟರೆಡ್ಡಿ ಮಕ್ಕಳು ಸೇರಿಕೊಂಡು ಗಲಾಟೆ ಮಾಡಿದ್ದಲ್ಲದೆ ತಮ್ಮ ಮೇಲೆ ದ್ವೇಷ ಸಾದಿಸುತ್ತಿದ್ದರು. ಹೀಗಿರುವಲ್ಲಿ ಗೆರಗಿವೆಂಕಟರೆಡ್ಡಿ ಮತ್ತು ಅವರ ಮಕ್ಕಳಾದ ದೊಡ್ಡಮಂಜುನಾಥ ,ಚಿಕ್ಕಮಂಜುನಾಥ ರವರು ಜಮೀನು ವಿಚಾರಗಳ ಹಿನ್ನೆಲೆಯಲ್ಲಿ ಓ,ಎಸ್,ನಂ:39/2009 ರಂತೆ ಸಿವಿಲ್ ಕೇಸನ್ನು ರಾಮಾಂಜೀನೇಯ ಆದ ತನ್ನ ಗಂಡನ ಮೇಲೆ ದಾಖಲಿಸಿರುತ್ತಾರೆ. ತನ್ನ ಗಂಡ  ಸಹ ಮೇಲ್ಕಂಡವರ ವಿರುದ್ದ ಓ,ಎಸ್ ನಂ:06/2011 ರಂತೆ ಸಿವಿಲ್ ಕೇಸನ್ನು ದಾಖಲಿಸಿದ್ದು ಪುನಃ ಆವರು  ಅಫೀಲ್ ಹೋಗಿದ್ದು ಅಲ್ಲಿಯೂ ತಮ್ಮ ಪರ ಆಗಿರುತ್ತದೆ. ಮೇಲ್ಕಂಡಂತೆ ಜಮೀನು ವಿಚಾರದ ವೈಶಮ್ಯಗಳ ಹಿನ್ನೆಲೆಯಲ್ಲಿ ಗೆರಿಗಿವೆಂಕಟರೆಡ್ಡಿ ರವರ ಮಕ್ಕಳು ಮತ್ತು ಅವರ ಸಂಬಂಧಿಕರೆಲ್ಲರೂ ತನ್ನ ಗಂಡನನ್ನು ಮುಗಿಸುತ್ತೇವೆಂದು ಬೆದರಿಕೆ ಹಾಕಿದ್ದರು. ಅದೇ ರೀತಿ ಹಿಂದೆ ಸಹ  ಅಮರನಾರಾಯಣಚಾರಿ ಮಕ್ಕಳಾದ ಪ್ರಸನ್ನ, ರಾಘವೇಂದ್ರ ಹಾಗೂ ಗೆರಗಿ ವೆಂಕಟರೆಡ್ಡಿ ಮಕ್ಕಳಾದ ದೊಡ್ಡ ಮಂಜುನಾಥ ಮತ್ತು ಚಿಕ್ಕ ಮಂಜುನಾಥ ರವರುಗಳು ತನ್ನ ಗಂಡನನ್ನು ಕೊಲೆ ಮಾಡಲು ಪ್ರಯತ್ನಪಟ್ಟಿದ್ದರು.  ಇದಾದ ನಂತರ ಈ ದಿನ ದಿನಾಂಕ:22/03/2021 ರಂದು ಗುಡಿಬಂಡೆ ನ್ಯಾಯಾಲಯದಲ್ಲಿ ತಾನು ಮತ್ತು ತನ್ನ ಗಂಡ ಕೇಸಿನ ವಿಚಾರದಲ್ಲಿ ಹಾಜರಾಗಲು ತನ್ನ ಗಂಡ ಕರ್ತವ್ಯಕ್ಕೆ ರಜೆ ಹಾಕಿದ್ದು ಇಬ್ಬರು ನ್ಯಾಯಾಲಯಕ್ಕೆ ಹೋಗಿ ಕಲಾಪ ಮುಗಿಸಿ ಸಂಜೆ ಸುಮಾರು 5-30 ಗಂಟೆಗೆ ಮನೆಗೆ ವಾಪಸ್ ಬಂದೆವು. ನಂತರ ತಾವಿಬ್ಬರು ತಮ್ಮ ತೋಟದ  ಜಮೀನಿನ ಬಳಿ ಹೋಗಿದ್ದಾಗ ಅಲ್ಲಿ ಜಮೀನಿನಲ್ಲಿ ಕೆಲಸ ಇದ್ದು ಮಾಡುತ್ತಿದ್ದೆವು. ಆಗ ಅರೂರು ಗ್ರಾಮದ  ಗೆರಿಗಿ ವೆಂಕಟರೆಡ್ಡಿ ಮಗ ಚಿಕ್ಕ ಮಂಜುನಾಥ, ದೊಡ್ಡ ಮಂಜುನಾಥ ಮತ್ತು ಚಂದ್ರಶೇಖರ್  ಮಗ ಅರವಿಂದರವರು ಗಳು ಏಕಾಏಕಿ ಜಮೀನಿನ ಒಳಗೆ ಬಂದು ತನ್ನ ಗಂಡನನ್ನು ಕೊಲೆ ಮಾಡುವ ಉದ್ದೇಶದಿಂದ ಮೂರು ಜನರು ತಂದಿದ್ದ ಮಚ್ಚುಗಳಿಂದ ಚಿಕ್ಕಮಂಜುನಾಥ ತನ್ನ ಗಂಡನ ತಲೆಯ ಎಡಭಾಗಕ್ಕೆ ಎರಡು ಏಟು ಹೊಡೆದ ದೊಡ್ಡ ಮಂಜುನಾಥ ಮಚ್ಚಿನಿಂದ ತಲೆಗೆ,  ಅರವಿಂದರವರು ಮಚ್ಚಿನಿಂದ ತಲೆಗೆ ಕುತ್ತಿಗೆಗೆ ಮನಬಂದಂತೆ ಕೊಚ್ಚಿದರು. ತಾನು ತನ್ನ ಗಂಡನನ್ನು ಬಿಡಿಸಲು ಹೋದಾಗ ರಾಘವೇಂದ್ರ ಮತ್ತು ಪ್ರಸನ್ನ ತನ್ನನ್ನು ಬಿಗಿಯಾಗಿ ಹಿಡಿದು ಭೂಮಿಗೆ ಅದುಮಿದರು. ಅಷ್ಟರಲ್ಲಿ ಗಿರೀಶ ಬಿನ್ ರಾಮಚಂದ್ರ ಮಚ್ಚಿನಿಂದ ಎಡ ಕೈ ಮತ್ತು ಎಡಕಾಲಿಗೆ ಹೊಡೆದ ತಾನು ಕಿರುಚುವಷ್ಟರಲ್ಲಿ ಅರವಿಂದ ಮಚ್ಚಿನಿಂದ ತನ್ನ ಬಲ ಕೈಗೆ 3-4 ಕಡೆ ಕತ್ತರಿಸಿದ ಮತ್ತೊಬ್ಬ ಮಂಜುನಾಥ ಬಿನ್ ಕೆಂಪರೆಡ್ಡಿ,  ನರಸಿಂಹಮೂರ್ತಿ  ಬಿನ್ ಸೊಣ್ಣಪ್ಪ, ಅಮರನಾರಾಯಣಚಾರಿ ಬಿನ್ ಪಾಪಾಚಾರಿ, ಶ್ರೀಧರ್ ಬಿನ್ ಚಂದ್ರಶೇಖರ್ ರವರುಗಳು ಈ ವಡ್ಡಿ ನಾ ಕೊಡುಕಿನ ಏಸೆಯಂಡರಾ ಎಂತ ಜಾತಿ ನಿಂದನೆ ಮಾಡಿ ಬೈಯುತ್ತಾ ಈ ನಾ ಕೊಡುಕು ಸಚ್ಚಿಪೋಯಾ ಇನ್ನೋಬ್ಬ ಲಾಯರ್ ಪ್ರಕಾಶ್ ಇದ್ದಾನೆ  ಅವನನ್ನು ಒಂದು ಗತಿ ಕಾಣಿಸೋಣ ಎಂದು ಬೆದರಿಕೆ ಹಾಕಿದರು. ನಂತರ ತನ್ನ ಗಂಡನ ಕೈಯಲ್ಲಿದ್ದ ಮೊಬೈಲ್ ಪೋನನ್ನು ಚಿಕ್ಕಮಂಜುನಾಥ ಕಿತ್ತುಕೊಂಡು ಅಲ್ಲಿಂದ  ಹೋಗುವ ಸಮಯದಲ್ಲಿ ಜೆ,ಪಿ. ಅಣ್ಣ ಮತ್ತು ಜಗದೀಶನ್ನ ಹೇಳಿದಂತೆ ಒಬ್ಬನನ್ನು ಮುಗಿಸಿದ್ದೇವೆ ಇನ್ನೋಬ್ಬ ಬಾಕಿ ಇದ್ದಾನೆಂದು ತಿಳಿಸಿ ಎಂತ ಕೆಕೆ ಹಾಕಿಕೊಂಡು ಹೊರಟು ಹೋದರು. ಸದರಿ ಘಟನಾ ಸಮಯದಲ್ಲಿ ತನ್ನ ಭಾವ ನಾರಾಯಣಪ್ಪ, ಹರೀಶ್ ಬಿನ್ ವೆಂಕಟಕೃಷ್ಣ, ತೂಮಕುಂಟೆ ಮಂಜುನಾಥ ರವರುಗಳು ಸ್ಥಳಕ್ಕೆ ಬಂದು ಬಿಡಿಸಲು ಪ್ರಯತ್ನಪಟ್ಟರು ಸಾದ್ಯವಾಗದೆ ಕೊಚ್ಚಿ ಕೊಲೆ ಮಾಡಿದರು. ಮೇಲ್ಕಂಡವರಿಗೆ ತಾವು ಭೋವಿ ಜನಾಂಗಕ್ಕೆ ಸೇರಿದ್ದವರೆಂದು ಗೊತ್ತಿದ್ದು ಹಿಂದಿನಿಂದಲ್ಲೂ ಜಮೀನು ವಿಚಾರದ ವೈಶಮ್ಯಗಳ ಹಿನ್ನೆಲೆಯಲ್ಲಿ ಜಾತಿಯ ಬಗ್ಗೆ ಬೈಯುತ್ತಾ ಉದ್ದೇಶ ಪೂರಕವಾಗಿ ತನ್ನ ಗಂಡ ರಾಮಾಂಜೀನೇಯರವರನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದಲೇ  ಮೇಲ್ಕಂಡಂತೆ  ಗುಂಪು ಕಟ್ಟಿಕೊಂಡು ಬಂದು ಮನಬಂದಂತೆ  ಕೊಚ್ಚಿಕೊಲೆ ಮಾಡಿರುತ್ತಾರೆ. ಸದರಿಯವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

12. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.31/2021 ಕಲಂ. 323,324,506,34 ಐ.ಪಿ.ಸಿ :-

     ದಿನಾಂಕ 22-03-2021 ರಂದು ಸಂಜೆ 07.00 ಗಂಟೆಗೆ ಹೆಚ್.ಸಿ-110 ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಬೀಬೀಜಾನ್ ಕೋಂ ಪಯಾಜ್ ಅಹಮದ್, 65 ವರ್ಷ, ಮುಸ್ಲಿಂ ಜನಾಂಗ, ಮನೆ ಕೆಲಸ, ವಾಸ ಮುರುಗಮಲ್ಲಾ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಠಾಣೆಗೆ ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ 22-03-2021 ರಂದು ಬೆಳಗ್ಗೆ 09.30 ಗಂಟೆ ಸಮಯದಲ್ಲಿ ತಾನು ತನ್ನ ಮೊಮ್ಮಗಳಾದ ಸಾಧಿಕಾ ರವರ ಮನೆಯಲ್ಲಿದ್ದಾಗ ತಮ್ಮ ಗ್ರಾಮದ ಷಾಹೀನಾ, ಶಬ್ಬು, ಅಣ್ಣು@ ಬೀಭೀಜಾನ್ ಮತ್ತು ಆಯಿಷಾತಾಜ್ ರವರು ತಮ್ಮ ಮನೆ ಬಳಿ ಬಂದು ನೀನು ತಮ್ಮ ಮೇಲೆ ಪೊಲೀಸ್ ದೂರು ನೀಡಿರುವುದು ಏಕೆ ಎಂದು ನಿನ್ನ ಕೈಯಲ್ಲಿ ಏನಾಗುತ್ತೆ ನಿನ್ನನ್ನು ಮುಗಿಸಿ ಬೀಡುತ್ತೇವೆ ಎಂದು ಏಕಾಏಕಿ ಕೈಗಳಿಂದ, ಕಾಲುಗಳಿಂದ ತನ್ನನ್ನು ಹೊಡೆಯುತ್ತಿದ್ದಾಗ ಆಗ  ತಾನು ಕೂಗಿಕೊಂಡಾಗ ತನ್ನ ಮಗಳು ಅಡ್ಡ ಬಂದು ಜಗಳ ಬಿಡಿಸುತ್ತಿದ್ದಾಗ ಅಣ್ಣು @ ಬೀಬೀಜಾನ್ ಎಂಬುವವರು ತನ್ನ ಕೈಯಲ್ಲಿದ್ದ ಕೋಲಿನಿಂದ ತನ್ನ ತಲೆಗೆ ಹೊಡೆದು ರಕ್ತ ಗಾಯಪಡಿಸಿದಳು, ಶಬ್ಬು ಎಂಬುವವಳು ಕೋಲಿನಿಂದ ತನ್ನ ಕೈ ಮತ್ತು ಕಾಲುಗಳಿಗೆ ಹೊಡೆದು ಮೂಗೇಟು ಉಂಟು ಮಾಡಿದರು, ಆಗ ತಮ್ಮ ಗ್ರಾಮದ ಅಡ್ಡು, ನಯಾಜ್ ರವರು ಬಂದು ಜಗಳ ಬಿಡಿಸಿದ್ದು, ನಂತರ ತನ್ನ ಮಗಳು ಯಾವುದೋ ಆಟೋವಿನಲ್ಲಿ ಚಿಕಿತ್ಸೆಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಾಗಿದ್ದು, ತನ್ನ ಮೇಲೆ ಹಲ್ಲೆ ಮಾಡಿದ  ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೇಳಿಕೆಯ ಸಾರಾಂಶವಾಗಿರುತ್ತೆ.

 

13. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.55/2021 ಕಲಂ. 304(A),34 ಐ.ಪಿ.ಸಿ :-

     ದಿನಾಂಕ:23/03/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಮಕ್ಬುಲ್ ಕೊಂ ಅಮೀರ್ ಸಾಬ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಗಂಡನಾದ ಅಮೀರ್ ಸಾಬ್ ಬಿನ್ ಮಾಬುಸಾಬ್ 43 ವರ್ಷ ರವರು ಗೌರಿಬಿದನೂರಿನ ವಿದ್ಯೂತ್ ಗುತ್ತಿಗೆದಾರರಾದ ಹೊನ್ನೆಗೌಡ ರವರ ಬಳಿ ಸುಮಾರು 6 ತಿಂಗಳುಗಳಿಂದ ಗುತ್ತಿಗೆ ಆಧಾರದ ಮೇಲೆ ದಿನಕೂಲಿ ಕೆಲಸಕ್ಕೆ ಹೋಗುತ್ತಿದ್ದರು ದಿನಾಂಕ:19/03/2021 ರಂದು ಮದ್ಯಾಹ್ನ 12-15 ಗಂಟೆಗೆ ಗಿಡಗಾನಹಳ್ಳಿ ಗ್ರಾಮದಲ್ಲಿ ವಿದ್ಯೂತ್ ತಂತಿಯನ್ನು ಎಳೆಯಬೇಕಾದರೆ ಗುತ್ತಿಗೆದಾರರು ಮತ್ತು ಬೆಸ್ಕಾಂ ರವರ ಬೇಜವಬ್ದಾರಿಯಿಂದ F8 ಲೈನ್ ನಲ್ಲಿ ಕೆಲಸ ಮಾಡುತ್ತಿದ್ದಾಗ F8 ಅನ್ನು ವಿದ್ಯೂತ್ ಕಡಿತ ಮಾಡಿರುವುದಾಗಿ ಹೇಳಿ ನನ್ನ ಗಂಡನನ್ನು ಕಂಬವನ್ನು ಹತ್ತಿಸಿದ್ದು, ಆಗ ಕರೆಂಟ್ ಶಾಕ್ ಆಗಿ ಕೆಳಗೆ ಬಿದ್ದು ಶರೀರ ಅರ್ಧ ಭಾಗದಷ್ಟು ಸುಟ್ಟು ಹೋಗಿದ್ದು, ಆಗ ಗೌರಿಬಿದನೂರಿನ ಗಂಗಾಧರಪ್ಪ ರವರು ಬೆಸ್ಕಾಂ ವಾಹನದಲ್ಲಿ ನನ್ನ ಗಂಡ ಅಮೀರ್ ಸಾಬ್ ರವರನ್ನು ಗೌರಿಬಿದನೂರಿನ ಆಸ್ಪತ್ರೆಗೆ ಸೇರಿಸಿ ತನಗೆ ತಿಳಿಸಿದಾಗ ನಾವು ಅಪೂರ್ವ ಆಸ್ಪತ್ರೆಗೆ ಹೋದಾಗ ಅವರು ಚಿಕಿತ್ಸೆಯನ್ನು ಕೊಡಲು ನಿರಾಕರಿಸಿದ್ದು, ನಾವು ನಮ್ಮ ಯಜಮಾನರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದ ಕಾರಣ ದಿನಾಂಕ:21/03/2021 ರಂದು ಯಲಹಂಕಾದಲ್ಲಿ ಇರುವ APEX HEALTH CARE C/O CHAITANYA MEDICAL CENTER ಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾಗ ತಮ್ಮ ಯಜಮಾನರಾದ ಅಮೀರ್ ಸಾಬ್ ರವರು ದಿನಾಂಕ:23/03/2021 ರಂದು ಬೆಳಿಗ್ಗೆ 04-01 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದು, ನನ್ನ ಗಂಡನ ಸಾವಿಗೆ ವಿದ್ಯೂತ್ ಗುತ್ತಿಗೆ ದಾರ ಹೊನ್ನೆಗೌಡ, ಸಹಾಯಕ ವಿದ್ಯೂತ್ ಇಂಜಿನಿಯರ್ AEE ಮಂಚೇನಹಳ್ಳಿ ರವರು ಹಾಗೂ ಗಿಡಗಾನಹಳ್ಳಿ ಲೈನ್ ಮೆನ್ ರವರ ನಿರ್ಲಕ್ಷತನವೇ  ಕಾರಣರಾಗಿದ್ದು, ಸದರಿಯವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೊರಿ ಕೊಟ್ಟ ದೂರು.

 

14. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.31/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ:23/03/2021 ರಂದು ಬೆಳಿಗ್ಗೆ 09:00 ಗಂಟೆಗೆ ಚಿಕ್ಕಬಳ್ಳಾಪುರದ ಸುರಕ್ಷಾ ಆಸ್ಪತ್ರೆಗೆ ಬೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ವೆಂಕಟಶಿವ ರವರ ಹೇಳಿಕೆಯನ್ನು ವೈದ್ಯರ ಸಮಕ್ಷಮ ಪಡೆದು ಠಾಣೆಗೆ 10:30 ಗಂಟೆಗೆ ವಾಪಸ್ಸು ಬಂದು ದಾಖಲಿಸಿಕೊಂಡ ಪ್ರಕರಣದ ಸಾರಾಂಶವೇನೆಂದರೆ ತಾನು ನಂದಿ ಗಿರಿಧಾಮ ಪೊಲೀಸ್ ಠಾಣೆಯಲ್ಲಿ ಸುಮಾರು 2 ವರ್ಷಗಳಿಂದ ಪೊಲೀಸ್ ಕಾನ್ಸಟೆಬಲ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ. ದಿನಾಂಕ:20/03/2021 ರಂದು ತಾನು ಹಗಲ ಕರ್ತವ್ಯದಲ್ಲಿದ್ದಾಗ ಸಂಜೆ 15:00 ಗಂಟೆಯಲ್ಲಿ ಠಾಣಾಧಿಕಾರಿ ರವರು ಐ.ಎಂ.ವಿ ಪ್ರಕರಣಗಳನ್ನು ದಾಖಲಿಸಲು ಠಾಣೆಯಲ್ಲಿದ್ದ ಸಿಬ್ಬಂದಿಯಾದ ಎ.ಎಸ್.ಐ ರಾಮಚಾರಿ, ಎ.ಎಸ್.ಐ ಶಿವಣ್ಣ, ಹೆಚ್.ಸಿ-118 ಪೆಂಚಲಪ್ಪ, ಹೆಚ್.ಸಿ-157 ಶಿವಪ್ಪ ಬ್ಯಾಕೋಡ, ಪಿಸಿ-560 ಪ್ರಮೋದ್ ರೆಡ್ಡಿ ರವರನ್ನು ಕರೆದುಕೊಂಡು ಸರ್ಕಾರಿ ಜೀಪಿನಲ್ಲಿ ಚದಲಪುರ ಕ್ರಾಸ್ಗೆ ಹೋಗಿ ಅಲ್ಲಿ ಐ.ಎಂ.ವಿ ಪ್ರಕರಣಗಳನ್ನು ದಾಖಲಿಸುವ ಸಮಯದಲ್ಲಿ ಚಿಕ್ಕಬಳ್ಳಾಪುರದ ಕಡೆಯಿಂದ ಕೆ.ಎ-40 ಎಲ್-605 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನ ಬಂದಿದ್ದು ವಾಹನದ ಚಾಲಕ ಹೆಲ್ಮೇಟ್ ಧರಿಸದೆ ಬಂದ ಕಾರಣ ವಾಹನವನ್ನು ನಿಲ್ಲಿಸಿ ದಾಖಲೆಗಳನ್ನು ಕೇಳಲಾಗಿ ಆತನ ಬಳಿ ಚಾಲನಾ ಪರವಾನಗಿ ಇಲ್ಲದ ಕಾರಣ ಸದರಿ ದ್ವಿಚಕ್ರ ವಾಹನವನ್ನು ಜೊತೆಯಲ್ಲಿದ್ದ ಅಧಿಕಾರಿಯು ಪೊಲೀಸ್ ದಾಖಲಿಸಿದ ನಂತರ ವಶಕ್ಕೆ ಪಡೆದಿದ್ದ ಕೆ.ಎ-40 ಎಲ್-605 ವಾಹನವನ್ನು ಠಾಣೆಯ ಬಳಿ ನಿಲ್ಲಿಸುವಂತೆ ತನಗೆ ಮತ್ತು ಪ್ರಮೋದ್ ರೆಡ್ಡಿ ರವರಿಗೆ ತಿಳಿಸಿ ಅಧಿಕಾರಿಯು ಠಾಣೆಯ ಬಳಿಗೆ ಹೋದರು. ತಾನು ಸದರಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಠಾಣೆಗೆ ಬರುವಾಗ ಸಂಜೆ 5:45 ಗಂಟೆಯಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಕಛೇರಿಯ ಮುಂದೆ ಬರುತ್ತಿದ್ದಾಗ ಚಿಕ್ಕಬಳ್ಳಾಪುರದ ಕಡೆಯಿಂದ ಕೆ.ಎ-40 ಎನ್-1386 ನೋಂದಣಿ ಸಂಖ್ಯೆಯ ಎಇಇಕ ಕಂಪನಿಯ ವಾಹನದ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಭದಿಯಿಂದ ಡಿಕ್ಕಿ ಹೊಡೆಸಿದ ಪರಿಣಾಮ ತಾನು ರಸ್ತೆಯ ಮೇಲೆ ಬಿದ್ದು ಹೋಗಿ ಎರಡು ಕೈಗಳಿಗೆ, ಎಡ& ಬಲ ಬುಜಗಳ ಬಳಿ, ಎಡ ತೊಡೆಯ ಭಾಗಕ್ಕೆ, ಎಡ ಮೊಣಕಾಲಿನ ಕೆಳಗೆ ತರಚಿದ ಗಾಯಗಳಾಗಿರುತ್ತೆ. ತಲೆಯ ಮೇಲೆ ರಕ್ತಗಾಯ ಹಾಗೂ ಬಲಬುಜಕ್ಕೆ  ತರಚಿದ ರಕ್ತಗಾಯವಾಗಿರುತ್ತೆ. ತನಗೆ ಅಪಘಾತ ಪಡಿಸಿದ ಜೀಪ್ ಚಾಲಕ ವಾಹನವನ್ನು ಡಿವೈಡರ್ ಮೇಲೆ ಹತ್ತಿಸಿ ಬೆಂಗಳೂರು ಕಡೆಯಿಂದ ಬರುವ ಸರ್ವಿಸ್ ರಸ್ತೆಗೆ ಬಂದು ಉರುಳಿ ಬಿದ್ದಿತು. ದ್ವಿಚಕ್ರ ವಾಹನವು ಸಹ ಜಖಂಗೊಂಡಿರುತ್ತೆ. ಸ್ಥಳದಲ್ಲಿ ತನ್ನ ಹಿಂದೆ ಬರುತ್ತಿದ್ದ ಪ್ರಮೋದ್ ರೆಡ್ಡಿ ಹಾಗೂ ಠಾಣೆಯ ಕಡೆಯಿಂದ ಬಂದ ಸಿಬ್ಬಂದಿಯವರು ತನ್ನನ್ನು ಉಪಚರಿಸಿ ಆಂಬ್ಯೂಲೇನ್ಸ್ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನ್ ಮಾಡಿಸಿಕೊಂಡು ಚಿಕ್ಕಬಳ್ಳಾಪುರದ ಸುರಕ್ಷಾ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿರುತ್ತೇನೆ. ತನಗೆ ಅಪಘಾತ ಪಡಿಸಿದ ಕೆ.ಎ-40 ಎನ್-1386 ನೋಂದಣಿ ಜೀಪ್ ಕಂಪನಿಯ ವಾಹನದ ಚಾಲಕನ ಹೆಸರು ವಿಳಾಸ ತಿಳಿದಿರುವುದಿಲ್ಲ. ತನಗೆ ಅಪಘಾತ ಪಡಿಸಿದ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

 

15. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.17/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ:22-03-2021 ರಂದು ಸಂಜೆ 18-15 ಗಂಟೆಗೆ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯವರಾದ ಸಿಪಿಸಿ-174 ರವರು ಠಾಣಾ ಎನ್.ಸಿ.ಆರ್-34/2021 ರಲ್ಲಿ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದ ಆದೇಶ ಪತ್ರವನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದು, ಪರಿಶೀಲಿಸಿ ದಾಖಲಿಸಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:22-03-2021 ರಂದು ಮಧ್ಯಾಹ್ನ 1-30 ಗಂಟೆಯಲ್ಲಿ ನಾನು ಗಸ್ತಿನಲ್ಲಿದ್ದಾಗ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಬುಕ್ಕನಪಲ್ಲಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಸರ್ಕಾರಿ ಜಾಗದಲ್ಲಿರುವ ಹೊಂಗೆಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವನ್ನಾಗಿಟ್ಟುಕೊಂಡು ಆಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರಾದ ಸಿಪಿಸಿ-148 ದನಂಜಯ, ಪಿಸಿ-234 ಸುರೇಶ ಕೊಂಡಗೂಳಿ, ಸಿಪಿಸಿ-281 ಶಂಕರಪ್ಪ ಕಿರವಾಡಿ, ಸಿಪಿಸಿ-584 ಅಬ್ಬಾಸಲೀ ನಂದಳ್ಳಿ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-59 ವಾಹನದಲ್ಲಿ ಚಾಲಕ AHC-21 ಸತ್ಯಾನಾಯ್ಕ್ ರವರೊಂದಿಗೆ ಮೇಲ್ಕಂಡ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು 100 ರೂ ಅಂದರ್, 100 ರೂ ಬಾಹರ್ ಎಂದು ಕೂಗಿಕೊಂಡು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ನಾವು ದಾಳಿ ಮಾಡಲು ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ಎಲ್ಲಿಯೂ ಕದಲಬೇಡಿ ಎಂದು ಎಚ್ಚರಿಕೆ ನೀಡಿದರೂ ಸಹಾ ಕೆಲವರು ಓಡಿ ಹೋಗಿದ್ದು, ಓಡಿಹೋದ ಆಸಾಮಿಗಳನ್ನು ನಾವು ಬೆನ್ನಟ್ಟಿಹಿಡಿಯಲು ಪ್ರಯತ್ನಿಸಿದರೂ ಸಿಕ್ಕಿರುವುದಿಲ್ಲಾ. ಸಿಕ್ಕಿಬಿದ್ದ ಮೂರು ಜನರನ್ನು ಹೆಸರು ಮತ್ತು ವಿಳಾಸ ಕೇಳಲಾಗಿ 1)ಸೋಮಶೇಖರ ಬಿನ್ ನಾಗರಾಜ, 21 ವರ್ಷ, ಗಾರುಡಿಗ ಜನಾಂಗ, ಜಿರಾಯ್ತಿ, ಬುಕ್ಕನಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 2)ಅಂಜಿನಪ್ಪ @ ಬುಜ್ಜಿ ಬಿನ್ ವೆಂಕಟರಾಮಪ್ಪ, 24 ವರ್ಷ, ಭೋವಿ ಜನಾಂಗ, ಜಿರಾಯ್ತಿ, ಬುಕ್ಕನಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು  3) ಗೋವಿಂದಪ್ಪ ಬಿನ್ ವೆಂಕಟರಾಯಪ್ಪ, 36 ವರ್ಷ, ನಾಯಕರು, ಜಿರಾಯ್ತಿ, ಬುಕ್ಕನಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು  ಎಂದು ತಿಳಿಸಿದ್ದು, ಸದರಿಯವರನ್ನು ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 4)ಮಲ್ಲಿಕಾರ್ಜುನ ಬಿನ್ ನಾಗರಾಜ, 26 ವರ್ಷ, ಗಾರುಡಿಗ ಜನಾಂಗ, ಜಿರಾಯ್ತಿ, ಬುಕ್ಕನಪಲ್ಲಿ  ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 5)ವೆಂಕಟೇಶ ಬಿನ್ ಗಜ್ಜಿವೆಂಕಟರಾಮಪ್ಪ, 35 ವರ್ಷ, ಗಾರುಡಿಗ ಜನಾಂಗ, ಜಿರಾಯ್ತಿ, ಬುಕ್ಕನಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಮತ್ತು 6)ಅಪ್ಪಯ್ಯ ಬಿನ್ ಕಾವುಲೋಳ್ಳ ವೆಂಕಟರಾಯಪ್ಪ, 35 ವರ್ಷ, ನಾಯಕರು, ಜಿರಾಯ್ತಿ, ಬುಕ್ಕನಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದ ಮೂರು ಜನರನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ  550/- ರೂ ನಗದು ಹಣ, ಒಂದು ಹಳೆಯ ಪ್ಲಾಸ್ಟಿಕ್ ಚೀಲ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಮಧ್ಯಾಹ್ನ 2-00 ರಿಂದ 3-00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳು, ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ 34/2021 ರೀತ್ಯಾ ದಾಖಲಿಸಿ ನಂತರ ಘನ ನ್ಯಾಯಾಲಯದ ಅನುಮತಿ ಪಡೆದು ಠಾಣಾ ಮೊ.ಸಂ.17/2021 ಕಲಂ; 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

16. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.18/2021 ಕಲಂ. 143,147,323,324,504,506,149 ಐ.ಪಿ.ಸಿ:-

     ದಿನಾಂಕ:22-03-2021 ರಂದು HC-250 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಹೇಳಿಕೆ ಪಡೆದು ಸಂಜೆ 18-30 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸಿದ ಹೇಳಿಕೆ ದೂರನ್ನು ಪಡೆದು ಪರಿಶೀಲಿಸಿ ದಾಖಲಿಸಿದ ದೂರಿನ ಸಾರಾಂಶವೇನೆಂದರೆ, ತಮಗೂ ಮತ್ತು ತಮ್ಮ ಮೈದುನ ನಾರಾಯಣಸ್ವಾಮಿ  ರವರಿಗೆ ಆಸ್ತಿ ವಿಭಾಗಗಳ ವಿಚಾರದಲ್ಲಿ ತಕರಾರುಗಳು ಇದ್ದು, ಹೀಗಿರುವಾಗ ದಿನಾಂಕ:21-03-2021 ರಂದು ರಾತ್ರಿ ಸುಮಾರು 6-30 ಗಂಟೆಯಲ್ಲಿ ತನ್ನ ಮೈದುನ ನಾರಾಯಣಸ್ವಾಮಿ, ಶ್ರೀಕೃಷ್ಣ, ರವರು ವಿನಾಕಾರಣ ತಮ್ಮ ಮೇಲೆ ಜಗಳ ತೆಗೆದು ಕಟ್ಟಿಗೆಗಳಿಂದ ತನಗೆ ತನ್ನ ಗಂಡನಿಗೆ ಮತ್ತು ತನ್ನ ಮಗ ದರ್ಶನ್ ರವರಿಗೆ ಮೈಮೇಲೆ ಹೊಡೆದು ಗಲಾಟೆ ಮಾಡಿರುವುದಾಗಿ ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗ್ರಾಮಕ್ಕೆ ಹೋದಾಗ ಬೆಳಿಗ್ಗೆ 11-30 ಗಂಟೆಗೆ 1)ನಾರಾಯಣಸ್ವಾಮಿ 2)ಶ್ರೀಕೃಷ್ಣ 3)ದೀಪಿಕಾ 4)ಭಾಗ್ಯಮ್ಮ 5)ಬೈಯ್ಯಮ್ಮ 6)ಚಿಕ್ಕವೆಂಖಟರವಣಪ್ಪ ರವರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ತಮ್ಮನ್ನು ಹೊಡೆಯುವ ಉದ್ದೇಶದಿಂದ ವಿನಾಕಾರಣ ಜಗಳ ತೆಗೆದು ಅಲ್ಲಿಯೇ ಬಿದ್ದಿದ್ದ ಕಲ್ಲು, ಕಟ್ಟಿಗೆಗಳನ್ನು ತೆಗೆದುಕೊಂಡು ತನ್ನ ಬೆನ್ನಿನ ಮೇಲೆ ಹೊಡೆದು ಗಾಯವುಂಟು ಮಾಡಿ ಅಡ್ಡ ಬಂದ ತನ್ನ ಗಂಡ ಮತ್ತು ತನ್ನ ಮಗನನ್ನು ಕೈಗಳಿಂದ ಹೊಡೆದು ಕೆಟ್ಟ ಕೆಟ್ಟ ಮಾತುಗಳಿಂದ ಬೈಯ್ದು ನಿಮ್ಮನ್ನು ಮುಗಿಸಿಬಿಡುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದು.

 

17. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.19/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ:22-03-2021 ರಂದು HC-183 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಹೇಳಿಕೆ ಪಡೆದು ಸಂಜೆ 19-15 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸಿದ ಹೇಳಿಕೆ ದೂರನ್ನು ಪಡೆದು ಪರಿಶೀಲಿಸಿ ದಾಖಲಿಸಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:21-03-2021 ರಂದು ರಾತ್ರಿ ಸುಮಾರು 7-30 ಗಂಟೆಯಲ್ಲಿ ತಮ್ಮ ದೊಡ್ಡಪ್ಪ ನಾಗರಾಜ, ದೊಡ್ಡಮ್ಮ ನಾಗಮಣಿ ಅವರ ಮಕ್ಕಳಾದ ದರ್ಶನ್ ರೆಡ್ಡಿ, ಗಗನ್ ರೆಡ್ಡಿ ರವರುಗಳು ವಿನಾಕಾರಣ ತಮ್ಮ ಮೇಲೆ ಜಗಳ ತೆಗೆದು ಕೈಗಳಿಂದ ಕಲ್ಲುಗಳಿಂದ ತನಗೆ ಹೊಡೆದು ಗಾಯಗಳನ್ನುಂಟು ಮಾಡಿ ಅಡ್ಡ ಬಂದ ತನ್ನ ತಂದೆಯವರಿಗೂ ಸಹ ಹೊಡೆದಿರುವುದಾಗಿ, ಈ ವಿಚಾರದಲ್ಲಿ ಪಂಚಾಯ್ತಿ ಮಾಡೋಣವೆಂದು ಇದ್ದಾಗ  ದಿನ ದಿನಾಂಕ:22-03-2021 ರಂದು ಬೆಳಿಗ್ಗೆ 11-40 ಗಂಟೆಯಲ್ಲಿ ನಾಗರಾಜ, ನಾಗಮಣಿ, ದರ್ಶನ್ ರೆಡ್ಡಿ ರವರು ಬಂದು ತನ್ನ ಮೇಲೆ ದರ್ಶನ್ ರೆಡ್ಡಿ ರವರು ಕಬ್ಬಿಣದ ರಾಡ್ ನಿಂದ ತನ್ನ ಬಲಗಾಲಿಗೆ ಹೊಡೆದು ಗಾಯವನ್ನುಂಟು ಮಾಡಿರುವುದಾಗಿ, ನಾಗರಾಜ ಮತ್ತು ನಾಗಮಣಿ ರವರು ಕೈಗಳಿಂದ ಹೊಡೆದಿರುವುದಾಗಿ ತಮ್ಮನ್ನು ಕುರಿತು ಕೆಟ್ಟ ಕೆಟ್ಟ ಮಾತುಗಳಿಂದ ಬೈಯ್ದು ನಿಮ್ಮನ್ನು ಮುಗಿಸಿ ಬಿಡುತ್ತೇವೆಂದು ಬೆದರಿಕೆ ಹಾಕಿರುವುದಾಗಿ 1)ನಾಗರಾಜ, 2) ನಾಗಮಣಿ 3) ದರ್ಶನ್ ರೆಡ್ಡಿ, 4) ಗಗನ್ ರೆಡ್ಡಿ ರವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದು.

 

18. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.28/2021 ಕಲಂ. 457,380 ಐ.ಪಿ.ಸಿ:-

     ದಿನಾಂಕ:21-03-2021 ರಂದು ಮದ್ಯಾಹ್ನ   3-00    ಗಂಟೆಗೆ ಪಿರ್ಯಾದಿದಾರರು  ಠಾಣೆಗೆ ಹಾಜರಾಗಿ ನೀಡಿದ    ಲಿಖಿತ ದೂರಿನ ಸಾರಾಂಶವೇನೆಂದರೆ,   ತಾನು ಆಡಿಟರ್ ಕೆಲಸ ಮಾಡಿಕೊಂಡಿದ್ದು ದಿನಾಂಕ:21-03-2021 ರಂದು ಬೆಂಗಳೂರಿನಲ್ಲಿ ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ಕೆ ಹೋಗಲು ಮನೆಗೆ ಬೀಗ ಹಾಕಿಕೊಂಡು ತಾನು ತನ್ನ ಹೆಂಡತಿ ಯಾಸ್ಮಿನ್ ತಾಜ್ ರವರು ಬೆಂಗಳೂರಿಗೆ ಹೋಗಿ ಮದುವೆ ಕಾರ್ಯ ಮುಗಿಸಿಕೊಂಡು ದಿನಾಂಕ:22-03-2021 ರಂದು ಬೆಳಿಗ್ಗೆ ಸುಮಾರು 11-00 ಗಂಟೆಗೆ ಮನೆಗೆ ವಾಪಸ್ಸು ಬಂದಾಗ ನಮ್ಮ ಮನೆಯ ಮಹಡಿ ಬೀರುವಿನ ಬಾಗಿಲನ್ನು ತೆಗೆದು ಬೀರುವಿನಲ್ಲಿದ್ದ ನಗದು ಮತ್ತು ಬೆಳ್ಳಿ ಮತ್ತು ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡುಬಂದಿರುತ್ತೆ. ಪರಿಶೀಲಿಸಿದಾಗ ಬೀರುವಿನಲ್ಲಿದ್ದ ಬಂಗಾರದ ಕತ್ತಿನ ಚೈನ್ ಸುಮಾರು 20 ಗ್ರಾಂ, ಬ್ರಾಸ್ ಲೈಟ್ ಸುಮಾರು 10 ಗ್ರಾಂ, ಒಂದು ಜೊತೆ ಓಲೆಗಳು ಸುಮಾರು 15 ಗ್ರಾಂ  ಹಾಗೂ 10 ಗ್ರಾಂ ತೂಕದ ನಾಲ್ಕು ಉಂಗುರಗಳು ಮತ್ತು ಸುಮಾರು 250 ಗ್ರಾಂ ತೂಕದ ಬೆಳ್ಳಿ ಕೈ ಚೈನ್ ಮತ್ತು ಮಕ್ಕಳ ಚೈನ್ ಗಳು ಕಳ್ಳತನ ಆಗಿರುತ್ತೆ. ಯಾರೋ ಕಳ್ಳರು ದಿನಾಂಕ:21-03-2021 ರಂದು ರಾತ್ರಿ ಸಮಯದಲ್ಲಿ ನಮ್ಮ ಮನೆ ಮುಂಭಾಗದ ಗೋಡೆ ಮೇಲೆ ಹತ್ತಿ ಮಹಡಿ ಮನೆಯ ಗ್ರಿಲ್ ಬಾಗಿಲನ್ನು ತೆಗೆದು ಒಳ ಪ್ರವೇಶ ಮಾಡಿ ಕಳ್ಳತನ ಮಾಡಿರುವ ನಿಶಾನೆಗಳು ಇರುತ್ತೆ. ಕಳುವಾದ ಬೆಳ್ಳಿ ಮತ್ತು ಬಂಗಾರದ ಒಡವೆಗಳ ಬೆಲೆಯನ್ನು ತಿಳಿಯಬೇಕಾಗಿರುತ್ತೆ. ಆದ್ದರಿಂದ ತಾವು ಸ್ಥಳಕ್ಕೆ ಭೇಟಿ ನೀಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಮೊ.ಸಂ.28/2021 ಕಲಂ:457,380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

    

ಇತ್ತೀಚಿನ ನವೀಕರಣ​ : 23-03-2021 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080