Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.46/2021 ಕಲಂ. 457,380  ಐ.ಪಿ.ಸಿ:-

     ದಿನಾಂಕ: 22-02-2021 ರಂದು ಪಿರ್ಯಾದಿದಾರರಾದ  ರೋಹಿತ್ ವರ್ಷ ಆಗ್ರಿ ಬಿಸಿನಸ್ ಸೆಂಟರ್ ಫಾರ್ ಡೆವಲಪ್ ಮೆಂಟ್ ಕೇಂದ್ರ ಮಿಟ್ಟೇಮರಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಬಾಗೇಪಲ್ಲಿ ತಾಲ್ಲೂಕು ಮಿಟ್ಟೇಮರಿಯಲ್ಲಿ ಸರ್ಕಾರದ ಕೃಷ್ಣಯಂತ್ರಧಾರೆ ಯೋಜನೆಯಲ್ಲಿ ಹೋಸದಾಗಿ ನಿರ್ಮಾಣವಾಗಿರುವಂತಹ ಕೇಂದ್ರದಲ್ಲಿ ದಿನಾಂಕ 21-02-2021 ರಂದು ಬೆಳ್ಳಿಗೆ 9 ಗಂಟೆಗೆ ನಾವು ಕೇಂದ್ರದಲ್ಲಿ ಬೇಟಿಯಾದಾಗ ನಮ್ಮ ಕೇಂದ್ರದಲ್ಲಿರುವಂತಹ HONDA ENGIN & MOUNTED REPORE  ಕಳವು ಆಗಿರುತ್ತದೆ. ಇದರ ಬೆಲೆ ಸುಮಾರು, 20,000/ರೂಗಳಿಗೆ ಹೆಚ್ಚು ಇದ್ದು, ನಿಖರವಾದ ಬೆಲೆಯನ್ನು ಮುಂದೆ ತಿಳಿಸಳಾಗುತ್ತದೆ. ಆದರಿಂದ ತಾವುಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಕಳುವಾಗಿರುವ ವ್ಯವಸಾಯ ಸಲಕರಣೆಗಳನ್ನು ಹುಡಿಕಿಕೋಡಬೇಕಾಗಿ  ನೀಡಿದ ದೂರಾಗಿರುತ್ತೆ.

 

 2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.47/2021 ಕಲಂ. 379  ಐ.ಪಿ.ಸಿ:-

     ದಿನಾಂಕ: 22/02/2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರಾಜೇಶ್ವರಮ್ಮ ಕೋಂ ಲೇಟ್ ಬಾಲಾಜಿ, 38 ವರ್ಷ, ಈಡಿಗ ಜನಾಂಗ, ವ್ಯಾಪಾರ, ಮಿಟ್ಟೇಮರಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ನಮ್ಮ ಗ್ರಾಮದಲ್ಲಿ ಚಿಕ್ಕ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದು. ನಮ್ಮ ಬಾಬತ್ತು ಕೆಎ-40-ಇಇ-8345 ರ ನೋಂದಣಿ ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ಹೊಂದಿದ್ದು. ದಿನಾಂಕ:21/02/2021 ರಂದು ನನ್ನ ಚಿಕ್ಕ ಮಗ ಪವನ್ ಕುಮಾರ್ ನಮ್ಮ ಅಂಗಡಿಯಲ್ಲಿ ಸಾಲ ಪಡೆದಿರುವವರ ಬಳಿ ಸಾಲವನ್ನು ವಸೂಲಿ ಮಾಡಲು ನಮ್ಮ ಗ್ರಾಮದ ಎಂ,ಎಸ್,ಐ,ಎಲ್ ಮಧ್ಯದ ಅಂಗಡಿಯ ಬಳಿ ನಿಲ್ಲಿಸಿದ್ದು ಸದರಿ ವಾಹನವನ್ನು ಯಾರೋ ಕಿಡಿಗೇಡಿಗಳು ಕಳವು ಮಾಡಿರುತ್ತಾರೆ. ನನ್ನ ದ್ವಿಚಕ್ರ ವಾಹನ ಸುಮಾರು 50 ಸಾವಿರ ಬೆಲೆ ಬಾಳತಕ್ಕದ್ದು, ಈ ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ, ಕಳೆದು ಹೋಗಿರುವ  ನನ್ನ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

 

 3. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.48/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:22/02/2021 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿದಾರರಾದ ಸ್ವರ್ಣ ಕೋಂ ಲೇಟ್ ಸುರೇಶ, 23 ವರ್ಷ, ನಾಯಕರು, ಕೂಲಿ ಕೆಲಸ, ಗೂಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಈಗ್ಗೆ ಸುಮಾರು 3 ವರ್ಷಗಳ ಹಿಂದೆ ಗೂಳೂರು ಗ್ರಾಮದ ಸುರೇಶ ಎಂಬುವವರೊಂದಿಗೆ  ನಮ್ಮ ಸಂಪ್ರದಾಯದಂತೆ ಹಿರಿಯರ ಸಮಕ್ಷಮ ನಮ್ಮ ಗ್ರಾಮವಾದ ಆಂದ್ರಪ್ರದೇಶದ ಜಂಬುಕಾನಪಲ್ಲಿ ಗ್ರಾಮದಲ್ಲಿ ವಿವಾಹವಾಗಿರುತ್ತೇನೆ. ನಮಗೆ ರಿಷಿಕಾಂತ ಎಂಬ ಎರಡು ವರ್ಷದ ಒಬ್ಬ ಮಗ ಇರುತ್ತಾನೆ. ನನ್ನ ಗಂಡ ಟೈಲ್ಸ್ ಕೆಲಸವನ್ನು ಮಾಡಿಕೊಂಡಿದ್ದು, ನಾನು ನನ್ನ ಗಂಡ,  ಮಗ ಮತ್ತು  ನಮ್ಮ ಅತ್ತೆ, ಮಾವ ರವರೊಂದಿಗೆ ವಾಸವಾಗಿರುತ್ತೇನೆ. ದಿನಾಂಕ:08/02/2021 ರಂದು ಬೆಳಿಗ್ಗೆ ಸುಮಾರು 6:00 ಗಂಟೆಯಲ್ಲಿ ಎಂದಿನಂತೆ ನನ್ನ ಗಂಡನಾದ  ಸುರೇಶ ರವರು ಟೈಲ್ಸ್ ಕೆಲಸಕ್ಕೆ ಬಾಗೇಪಲ್ಲಿಗೆ ಹೋದರು. ನಂತರ ಸಂಜೆ ಸುಮಾರು 6:00 ಗಂಟೆಯಲ್ಲಿ ಮಲಕಚೆರುವುಪಲ್ಲಿ ಗ್ರಾಮದ ಶ್ರೀನಿವಾಸ @ ಸೀನ ರವರು ನಮ್ಮ ಅತ್ತೆಗೆ ಪೋನ್ ಮಾಡಿ, ನಮ್ಮ ಗ್ರಾಮದಲ್ಲಿ  ಸುರೇಶ ದ್ವಿಚಕ್ರ ವಾಹನದಲ್ಲಿ ಬಿದ್ದು ಹೋಗಿದ್ದು, ಆಟೋದಲ್ಲಿ ಕಳುಹಿಸುತ್ತಿರುವುದಾಗಿ ಹೇಳಿದನು. ನಮ್ಮ ಅತ್ತೆ ಶಾಂತಮ್ಮ, ಮಾವ ರಾಮಪ್ಪ ಸುರೇಶನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಹೋದರು. ನಾನು ನನ್ನ ಮಗನನ್ನು ನೋಡಿಕೊಂಡು ಮನೆಯಲ್ಲಿಯೇ ಇದ್ದೆನು. ರಾತ್ರಿ  ಸುಮಾರು 9:30 ಗಂಟೆಗೆ ನನ್ನ ಗಂಡನ ಮೃತದೇಹವನ್ನು ಮನೆಗೆ ತೆಗೆದುಕೊಂಡು ಬಂದರು. ನಮ್ಮ ಅತ್ತೆ ಯನ್ನು ವಿಚಾರ ಮಾಡಲಾಗಿ  ತಲೆಗೆ, ಮುಖಕ್ಕೆ, ಎಡಕೈಗೆ, ಬಲಕೈಗೆ ರಕ್ತಗಾಯವಾಗಿ, ಬೆನ್ನಿಗೆ ಮತ್ತು ಎದೆಗೆ ಮೂಗೇಟಾಗಿದ್ದ ಸುರೇಶನನ್ನು  ಆಂಬುಲೆನ್ಸಿನಲ್ಲಿ   ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲುಪಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ, ಸುರೇಶ ಮೃತಪಟ್ಟಿರುವುದಾಗಿ ತಿಳಿಸಿದರು. ಸುರೇಶ ದ್ವಿಚಕ್ರ ವಾಹನದಿಂದ ಬಿದ್ದುದರಿಂದ ಮೃತಪಟ್ಟಿರಬಹುದೆಂದು ಭಾವಿಸಿದ ನಾವೆಲ್ಲರೂ, ದಿನಾಂಕ:09/02/2021 ರಂದು ಗೂಳೂರು ಗ್ರಾಮದ ಸರ್ವೇ ನಂಬರ್  483 ಸಬ್ 1 ರ ನಮ್ಮ ಜಮೀನಿನಲ್ಲಿ  ಹೆಣವನ್ನು ಹೂಳುವ ಮೂಲಕ ಅಂತ್ಯಸಂಸ್ಕಾರವನ್ನು ಮಾಡಿರುತ್ತೇವೆ. ಶವಸಂಸ್ಕಾರ ಮಾಡಿದ 5 ದಿನಗಳ ನಂತರ ಸೂರಿ @ ಗಾಂಡ್ಲ ಸೂರಿ ಬಿನ್ ಲೇಟ್ ತಿರುಪಾಲಪ್ಪ, ಸುಮಾರು 38 ವರ್ಷ, ಗಾಣಿಗರು, ನಲ್ಲಪರೆಡ್ಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಮತ್ತು ಶಾಮೀರ್ ಬಿನ್ ಪೀರುಸಾಬ್, ಸುಮಾರು 45 ವರ್ಷ,ಕೂಲಿ ಕೆಲಸ, ವಾಸ ಶಾಂತಿನಿಕೇತನ ಶಾಲೆಯ ಮುಂಬಾಗದ ರಸ್ತೆ, 3ನೇ ವಾರ್ಡ್, ಬಾಗೇಪಲ್ಲಿ ಟೌನ್ ರವರು  ದಿನಾಂಕ:08/02/2021 ರಂದು ನಾವು ಕಟ್ಟಿಗೆ ಕೂಲಿ ಕೆಲಸಕ್ಕಾಗಿ ಹೋಗಿದ್ದು, ನಾವುಗಳು ಕಟ್ಟಿಗೆಗಳನ್ನು ಕೆ.ಎ-40 ಟಿ.ಎ-8829 ಟ್ರಾಕ್ಟರ್ ನಲ್ಲಿ ತುಂಬಿಸಿಕೊಂಡು ಬಾಗೇಪಲ್ಲಿಗೆ ಹೋಗುತ್ತಿದ್ದಾಗ, ಬಾಗೇಪಲ್ಲಿ ತಾಲ್ಲೂಕು ಮಲಕಚೆರುವುಪಲ್ಲಿ  ಗ್ರಾಮದ ಬಳಿ ಟ್ರಾಕ್ಟರ್ ಚಾಲಕ ಟ್ರಾಕ್ಟರ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಎದುರಿಗೆ  ಕೆ.ಎ-53 ಎಸ್-7620 ಹೊಂಡಾ ಶೈನ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸುರೇಶನಿಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿ ಟ್ರಾಕ್ಟರ್ ಅನ್ನು ನಿಲ್ಲಿಸದೆ ಹೊರಟು ಹೋದ ಪರಿಣಾಮವಾಗಿ ಸುರೇಶನಿಗೆ ಗಾಯಗಳಾಗಿದ್ದುದಾಗಿ ತಿಳಿಸಿದನು.  ಈ ಅಪಘಾತದಿಂದಾದ ಗಾಯಗಳ ದೆಸೆಯಿಂದಲೇ ನನ್ನ ಗಂಡ ಸುರೇಶರವರು ಮೃತಪಟ್ಟಿರುತ್ತಾರೆ. ನಾನು ನಮ್ಮ ಸಂಬಂಧಿಕರಿಗೆ ವಿಚಾರವನ್ನು ತಿಳಿಸಿ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು,  ಅಂತ್ಯಸಂಸ್ಕಾರ ಮಾಡಿ ಹೂತಿರುವ ನನ್ನ ಗಂಡ ಸುರೇಶ ರವರ ಮೃತದೇಹವನ್ನು  ಹೊರತೆಗೆದು ಕ್ರಮ ಜರುಗಿಸಬೇಕಾಗಿ ಹಾಗೂ ಅಪಘಾತವನ್ನುಂಟು ಮಾಡಿದ ಕೆ.ಎ-40 ಟಿ.ಎ-8829 ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 

 4. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.49/2021 ಕಲಂ. 15(A),32(3)  ಕೆ.ಇ ಆಕ್ಟ್:-

     ದಿನಾಂಕ:22/01/2021 ರಂದು ರಾತ್ರಿ 9:10 ಗಂಟೆಗೆ ಶ್ರೀ.ಸುನೀಲ್ ಕುಮಾರ್ ಪಿ.ಎಸ್.ಐ ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಆಸಾಮಿ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ; 22-02-2021 ರಂದು  ರಾತ್ರಿ 8-05 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಟೌನ್ ನ ಗೂಳೂರು ರಸ್ತೆಯಲ್ಲಿ ಯಾರೋ ಆಸಾಮಿ  ಕಾನೂನು ಬಾಹಿರವಾಗಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ  ಪಿ.ಸಿ 214 ಅಶೋಕ  ಹಾಗೂ ಜೀಪ್ ಚಾಲಕ ಎ.ಹೆಚ್.ಸಿ-34 ಅಲ್ತಾಪ್ ಪಾಷಾ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-537 ವಾಹನದಲ್ಲಿ ಹೊರಟು ಡಿ.ವಿ.ಜಿ ರಸ್ತೆಯಲ್ಲಿ ಪಂಚರನ್ನು ಕರೆದುಕೊಂಡು ಅವರಿಗೆ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಜೀಪಿನಲ್ಲಿ ಗೂಳೂರು ರಸ್ತೆಯಲ್ಲಿ ಹೋಗುತ್ತಿದ್ದಾಗ, ಗೂಳೂರು ರಸ್ತೆಯಲ್ಲಿ ರಾಮಸ್ವಾಮಿಪಲ್ಲಿ ಕ್ರಾಸ್ ಬಳಿ ಸಮೀಪ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಲ್ಲಿ ನಿಂತು ನೋಡಲಾಗಿ, ಯಾರೋ ಒಬ್ಬ ಆಸಾಮಿಯು ರಾಮಸ್ವಾಮಿ ಪಲ್ಲಿ ಕ್ರಾಸ್ ಬಳಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಓಡಿಹೋಗಲು ಪ್ರಯತ್ನಿಸಿದವನ್ನು ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ರಾಜು ಜೆ.ಕೆ ಬಿನ್ ಕೃಷ್ಣಪ್ಪ, 30 ವರ್ಷ, ಗೊಲ್ಲರು, ಜಿರಾಯ್ತಿ, ಜಿಲಾಜಿರ್ಲಾ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ  ತಿಳಿಸಿರುತ್ತಾನೆ. ಸ್ಥಳದಲ್ಲಿ, ಪಂಚರ ಸಮಕ್ಷಮದಲ್ಲಿ ಚೀಲವನ್ನು ಪರಿಶೀಲಿಸಲಾಗಿ 90 ML ಸಾಮರ್ಥ್ಯದ  HAYWARDS CHEERS WHISKY ಯ 12   ಟೆಟ್ರಾ ಪಾಕೇಟ್ ಗಳಿದ್ದು, ಒಟ್ಟು 1 ಲೀಟರ್ 80 ಮಿಲಿ ಮದ್ಯವಿದ್ದು, ಇದರ ಬೆಲೆ ಸುಮಾರು 421.56/ ರೂ.ಗಳಾಗುತ್ತವೆ.  ಆಸಾಮಿಯ ಬಳಿ  ಮದ್ಯವನ್ನು ಮಾರಾಟ ಮಾಡಲು ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಇರುವುದಿಲ್ಲವೆಂದು ತಿಳಿಸಿರುತ್ತಾನೆ. ಮೇಲ್ಕಂಡ ಮದ್ಯವನ್ನು  ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯನ್ನು  ಮಾಲಿನೊಂದಿಗೆ ರಾತ್ರಿ 9:10 ಗಂಟೆಗೆ   ಠಾಣೆಯಲ್ಲಿ  ಹಾಜರುಪಡಿಸುತ್ತಿದ್ದು, ಆಸಾಮಿಯ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣವನ್ನು ದಾಖಲುಮಾಡಿರುವುದಾಗಿರುತ್ತೆ.

 

 5. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.18/2021 ಕಲಂ. 379 ಐ.ಪಿ.ಸಿ &   41(D),102 ಸಿ.ಆರ್.ಪಿ.ಸಿ:-

     ಈ ಮೂಲಕ ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಟಿ.ಎನ್ ಪಾಪಣ್ಣ ಪಿ ಎಸ್ ಐ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ದಿನಾಂಕ: 23/02/2021 ರಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ನಾನು ಠಾಣೆಯ ಸಿಬ್ಬಂದಿಯವರಾದ ಸಿ ಹೆಚ್ ಸಿ - 36 ವಿಜಯ್ ಕುಮಾರ್, ಸಿ ಹೆಚ್ ಸಿ - 139 ಶ್ರೀನಾಥ, ಸಿ ಪಿ ಸಿ - 387 ಅನಿಲ್ ಕುಮಾರ್ ರವರುಗಳನ್ನು ಕರೆದುಕೊಂಡು ಠಾಣೆಯ ಸರಹದ್ದಿನಲ್ಲಿ ಬಟ್ಲಹಳ್ಳಿಯಿಂದ ಸೋಮಕಲಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಸೋಮಕಲಹಳ್ಳಿ ಕ್ರಾಸ್ನಲ್ಲಿ ಸಂಚರಿಸುವ ವಾಹನಗಳಿಗೆ  ಐ.ಎಂ.ವಿ ಕಾಯ್ದೆ ಅಡಿಯಲ್ಲಿ ಸ್ಥಳದಂಡಗಳನ್ನು ವಿಧಿಸುತ್ತಿದ್ದಾಗ, ಬೆಳಿಗ್ಗೆ 10-30 ಗಂಟೆಯ ಸಮಯದಲ್ಲಿ ಬಟ್ಲಹಳ್ಳಿ ಕಡೆಯಿಂದ ಯಾರೋ ಒಬ್ಬ ಆಸಾಮಿ ಒಂದು ದ್ವಿಚಕ್ರವಾಹನದಲ್ಲಿ ವೇಗವಾಗಿ ನಾವಿದ್ದ ಕಡೆಗೆ ಬರುತ್ತಿದ್ದವನು, ಸಮವಸ್ತ್ರದಲ್ಲಿದ್ದ ನಮ್ಮನ್ನು ಮತ್ತು ಪೋಲೀಸ್ ಜೀಪ್ನ್ನು ನೋಡಿ ಆತನ ಬರುತ್ತಿದ್ದ ದ್ವಿಚಕ್ರವಾಹನವನ್ನು ಪುನಃ ಬಟ್ಲಹಳ್ಳಿ ಕಡೆ ತಿರುಗಿಸಿಕೊಂಡು ಪರಾರಿಯಾಗಲು ಪ್ರಯತ್ನಿಸಿದನು. ಕೂಡಲೇ ನಾನು ನೋಡಿ ಸಿಬ್ಬಂದಿಯವರಿಗೆ ಮಾಹಿತಿ ನೀಡಿ ಕೂಡಲೇ ನಾವುಗಳು ಸದರಿ ಆಸಾಮಿಯನ್ನು ಹಿಂಬಾಲಿಸಿ ದ್ವಿಚಕ್ರವಾಹನದಲ್ಲಿ ಪರಾರಿಯಾಗುತ್ತಿದ್ದ ಆಸಾಮಿಯನ್ನು ತಡೆದು ನಿಲ್ಲಿಸಿ, ಆತನ ಹೆಸರು ಮತ್ತು ವಿಳಾಸ ಹಾಗೂ ದ್ವಿಚಕ್ರವಾಹನದ ಬಗ್ಗೆ ವಿಚಾರ ಮಾಡಲಾಗಿ ತನ್ನ ಹೆಸರು ಕೆ.ಶಿವಾನಂದ ಬಿನ್ ಲೇಟ್ ಚಿಕ್ಕವೆಂಕಟರವಣಪ್ಪ, 30 ವರ್ಷ, ಗೊಲ್ಲರು, ಎಲೆಕ್ಟ್ರಿಷಿಯನ್ ಕೆಲಸ, ವಾಸ: ಕೆ.ಹೊಸೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. ಮೊ ನಂ: 9611558999 ಎಂದು ತಿಳಿಸಿದ್ದು ಸದರಿ ಆಸಾಮಿಯ ಬಳಿಯಿದ್ದ ದ್ವಿಚಕ್ರವಾಹನ ಮತ್ತು ದ್ವಿಚಕ್ರವಾಹನದ ದಾಖಲೆಗಳ ಬಗ್ಗೆ ವಿಚಾರಿಸಲಾಗಿ ಸಮಂಜಸವಾದ ಉತ್ತರವನ್ನು ನೀಡಿರುವುದಿಲ್ಲ. ಆಸಾಮಿಯು ದ್ವಿಚಕ್ರವಾಹನವನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದಿರಬಹುದೆಂದು ಶಂಕಿಸಿ ಆಸಾಮಿಯನ್ನು ಮತ್ತು ಆತನ ಬಳಿಯಿದ್ದ ಎಪಿ-39 ಬಿಟಿ-1974 ನೊಂದಣಿ ಸಂಖ್ಯೆಯ ಚಾಸೀಸ್ ನಂಬರ್MD2A11CYXKCE00283  ಇಂಜಿನ್ ನಂಬರ್  DHYCKE59633 ಬಜಾಜ್ ಪಲ್ಸರ್ ಕಂಪನಿಯ ಕೆಂಪು ಮತ್ತು ಕಪ್ಪು ಬಣ್ಣದ ಸುಮಾರು 90.000/-ರೂಗಳ ಬೆಲೆ ಬಾಳುವ ದ್ವಿಚಕ್ರವಾಹನವನ್ನು ವಶಕ್ಕೆ ಪಡೆದು ಠಾಣೆಗೆ ಬೆಳಿಗ್ಗೆ  11-00 ಗಂಟೆಗೆ ವಾಪಸ್ಸಾಗಿ ಆಸಾಮಿ ಮತ್ತು ದ್ವಿಚಕ್ರವಾಹನದ ಮೇಲೆ ಠಾಣೆಯ ಮೊ.ಸಂಖ್ಯೆ:18/2021 ಕಲಂ: 41 ಕ್ಲಾಸ್ (ಡಿ)  102 ಸಿ ಆರ್ ಪಿಸಿ ರೆ/ವಿ 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ.

 

 6. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.12/2021 ಕಲಂ. 279,336 ಐ.ಪಿ.ಸಿ &   187 ಐ.ಎಂ.ವಿ ಆಕ್ಟ್:-

     ದಿನಾಂಕ:-22/02/2021 ರಂದು ಸಂಜೆ 6-00 ಗಂಟೆಗೆ ಪಿರ್ಯಾಧಿದಾರರಾದ ಶ್ರೀ. ಆರ್.ಪ್ರತಾಪ್ ಬಿನ್ ರಾಮಪ್ಪ 40 ವರ್ಷ, ಬಲಜಿಗರು, ಭಾರತೀಯ ಜನತಾ ಪಾರ್ಟಿ ತಾಲ್ಲೂಕು ಅಧ್ಯಕ್ಷಕರು, ವಾರ್ಡ್ ನಂ-02, ಗೂಳೂರು ವೃತ್ತ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:-21/02/2021 ರಂದು ತನ್ನ ಬಾಬತ್ತು KA-40-M-5099 ರ ಇಟಿಯಾಸ್ ಕಾರಿನಲ್ಲಿ ತಾನು ಮತ್ತು ತನ್ನ ಸ್ನೇಹಿತರಾದ ಶ್ರೀ. ಶ್ರೀನಿವಾಸ ಅಪ್ಪಯ್ಯ ಬಾಬು ಬಿನ್ ಆದಪ್ಪ 50 ವರ್ಷ, ಬಲಜಿಗರು, ವ್ಯಾಪಾರ, ವಾರ್ಡ್ ನಂ-09, ಗಣೇಶ ದೇವಸ್ಥಾನದ ಬಳಿ, ಬಾಗೇಪಲ್ಲಿ ಟೌನ್ ಹಾಗೂ ಕಾರಿನ ಚಾಲಕನಾಗಿ ಶ್ರೀ. ಬಾಬು ನಾಯಕ್ ಬಿನ್ ಮುನೇ ನಾಯಕ್ 32 ವರ್ಷ, ಪ.ಜಾತಿ, ಚಾಲಕ ವೃತ್ತಿ, ವಾರ್ಡ್ ನಂ-06, ಪೊಲೀಸ್ ವಸತಿ ಗೃಹಗಳ ಹಿಂಭಾಗ, ಬಾಗೇಪಲ್ಲಿ ಟೌನ್ ಮತ್ತು ತಾಲ್ಲೂಕು ರವರೊಂದಿಗೆ ಬಾಗೇಪಲ್ಲಿಯಿಂದ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರ ತಾಲ್ಲೂಕಿನ ಚದಲಪುರ ಗ್ರಾಮಕ್ಕೆ ಹೋಗಲು ಸಂಜೆ ಸುಮಾರು 7-00 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಬಾಗೇಪಲ್ಲಿ - ಬೆಂಗಳೂರು ಎನ್.ಎಚ್-44 ಬೈಪಾಸ್ ರಸ್ತೆಯ ಅಗಲಗುರ್ಕಿ ಫ್ಲೈ ಓವರ್ ಮೇಲಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಾಗೇಪಲ್ಲಿ ಕಡೆಯಿಂದ ಬಂದ AP-39-TQ-1543 ರ ಮಹೇಂದ್ರ ಬುಲೆರೋ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಾಬು ನಾಯಕ್ ರವರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ತನ್ನ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಕಾರಿನ ಹಿಂಭಾಗ ಬಂಪರ್, ಡಿಕ್ಕಿ, ಹಿಂಭಾಗದ ಗ್ಲಾಸ್, ಹಿಂಭಾಗದ ಹಾಗೂ ಮುಂಭಾಗದ ಡೋರ್ ಗಳು, ಮುಂಭಾಗದ ಬಂಪರ್, ಮುಂಭಾಗದ ಗ್ಲಾಸ್ ಜಕಂಗೊಂಡು ಯಾರಿಗೂ ಸಹಾ ಗಾಯಗಳಾಗಿರುವುದಿಲ್ಲ. ಸದರಿ ಅಪಘಾತ ಪಡಿಸಿದ ಮಹೇಂದ್ರ ಬುಲೆರೋ ವಾಹನ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸಿದ್ದು ನಾವುಗಳು ಕಾರನ್ನು ಇಳಿದು ಕಾರು ಜಕಂಗೊಂಡಿರುವುದನ್ನು ನೋಡುವಷ್ಟರಲ್ಲಿ ಸದರಿ ನಿಲ್ಲಿಸಿದ್ದ ಬುಲೇರೋ ವಾಹನದ ಚಾಲಕ ಅಲ್ಲಿಂದ ವಾಹನವನ್ನು ಚಾಲನೆ ಮಾಡಿಕೊಂಡು ಸ್ಥಳದಿಂದ ಹೊರಟು ಹೋಗಿರುತ್ತಾನೆ. ಸದರಿ ಅಪಘಾತಕ್ಕೆ ಕಾರಣನಾದ AP-39-TQ-1543 ರ ಮಹೇಂದ್ರ ಬುಲೆರೋ ವಾಹನದ ಚಾಲಕನ ಮೇಲೆ ತಮ್ಮ ಕಾರಿನ ಇನ್ಸೂರೆನ್ಸ್ ರವರನ್ನು ಭೇಟಿಮಾಡಿ ಮಾಹಿತಿಯನ್ನು ತಿಳಿಸಿ ಈ ದಿನ ತಡವಾಗಿ ದಿನಾಂಕ:-22/02/2021 ರಂದು ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

 7. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.76/2021 ಕಲಂ. 323,504,506,34 ಐ.ಪಿ.ಸಿ &   3(1)(r),3(1)(s) The SC & ST (Prevention of Atrocities) Amendment Act 2015:-

     ದಿನಾಂಕ:22/02/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಅಮರೇಂದ್ರ @ ಪವನ್ ಕುಮಾರ್ ಬಿನ್ ನಾರಾಯಣಸ್ವಾಮಿ, 38 ವರ್ಷ, ಆದಿ ಕರ್ನಾಟಕ ಜನಾಂಗ, ಪೈಂಟಿಂಗ್ ಕೆಲಸ, ಕಾರ್ಗಿಲ್, ಚಿಂತಾಮಣಿ ನಗರ ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 6.15 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ಈಗ್ಗೆ ಸುಮಾರು ಒಂದು ವರ್ಷದ ಹಿಂದೆ ತನಗೆ ಚಿಂತಾಮಣಿ ನಗರದ ವಾಸಿ ವೈಶ್ಯ ಜನಾಂಗಕ್ಕೆ ಸೇರಿದ ನಾಗಾನಂದ ಬಿನ್ ರಾಮ್ಮೋಹನ್ ಎಂಬುವವನು ಪರಿಚಯವಾಗಿದ್ದು, ಅವನು ಹೊಸಕೋಟೆ ಟಿ.ವಿ.ಎಸ್ ಶೋರೂಂ ನಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ಆಗಾಗ್ಗೆ ತಾನು, ನಾಗಾನಂದ ರವರು ಚಿಂತಾಮಣಿ ನಗರದಲ್ಲಿ ಬೇಟಿಯಾಗುತ್ತಿದ್ದೆವು. ದಿನಾಂಕ: 21/02/2021 ರಂದು ರಾತ್ರಿ 9.30 ಗಂಟೆಗೆ ತಾನು, ತನ್ನ ಸ್ನೇಹಿತ ಎನ್.ಎನ್.ಟಿ ರಸ್ತೆಯ ಹೈದರ್@ಬಷಿ ಎಂಬುವವರು ಚಿನ್ನಸಂದ್ರಕ್ಕೆ ಟೀ ಕುಡಿಯಲು ಹೋಗಿದ್ದು, ಕೈವಾರ ಕಡೆಯಿಂದ ತನ್ನ ಸ್ನೇಹಿತ ನಾಗಾನಂದ ಮತ್ತಿಬ್ಬರು ವ್ಯೆಕ್ತಿಗಳು ಕಾರಿನಲ್ಲಿ ಚಿಂತಾಮಣಿಗೆ ಹೋಗುತ್ತಿದ್ದು, ಅವನು ತನ್ನನ್ನು ಕಂಡು ತಾನು ಇದ್ದ ಹೆಚ್.ಎಂ.ಎಸ್ ಟೀ ಸ್ಟಾಲ್ ಬಳಿ ಬಂದು ತನ್ನನ್ನು ಕುರಿತು ಕಾರಿನಲ್ಲಿ ಕುಳಿತುಕೋ, ನಿನ್ನ ಹತ್ತಿರ ಕೆಲಸವಿದೆ ಎಂದು ತನ್ನನ್ನು ಆತನ ಬಾಭತ್ತು VERNA ಕಾರಿನಲ್ಲಿ ಕೂರಿಸಿಕೊಂಡು ಚಿನ್ನಸಂದ್ರ ಕ್ರಾಸ್ ನಿಂದ ಸ್ವಲ್ಪ ದೂರದಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಾರನ್ನು ನಿಲ್ಲಿಸಿ ನಾಗಾನಂದ ಯಾರಿಗೂ ಪೂನ್ ಮಾಡಿ ಮಾತನಾಡಿ ನೀನು ಇವನನ್ನು ಕೆಟ್ಟ ಮಾತುಗಳಿಂದ ಬೈಯ್ಯುವಂತೆ ತಿಳಿಸಿದಾಗ ತಾನು ಆವನಿಗೆ ವಿನಾ ಕಾರಣ ಬೇರೆಯವನ್ನು ಏಕೆ ಬೈಯಲಿ ಎಂದಾಗ ನಾಗಾನಂದ ತನ್ನನ್ನು ಕುರಿತು “ಲೇ ಮಾದಿನ ನನ್ನ ಮಗನೇ ನಾನು ಹೇಳಿದಂತೆ ಕೇಳು” ಎಂದು ತನ್ನ ಜಾತಿಯ ಬಗ್ಗೆ ಬೈದು ಜಾತಿನಿಂದನೆ ಮಾಡಿ ಕೈಗಳಿಂದ ತನ್ನ ಕೆನ್ನೆ ಮತ್ತು ಮೈ ಕೈಗೆ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾನೆ. ಆತನ ಜೊತೆಯಲ್ಲಿದ್ದ ಮತ್ತಿಬ್ಬರು ಅಪರಿಚಿತರು ತನ್ನನ್ನು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ಕೆಳಕ್ಕೆ ತಳ್ಳಿ ಕಾಲುಗಳಿಂದ ತನ್ನ ಹೊಟ್ಟೆಯ ಮೇಲೆ ಒದ್ದಿರುತ್ತಾರೆ. ಸ್ಥಳದಲ್ಲಿದ್ದ ಕಾರಿನ ನಂಬರ್ ನೋಡಲಾಗಿ ಕೆಎ-53 ಎಂಬಿ-6868 ಆಗಿರುತ್ತೆ. ಆಗ ಹೈದರ್@ಬಷಿ ತನ್ನನ್ನು ಹುಡುಕಿಕೊಂಡು ಬಂದು ಅವರಿಂದ ಬಿಡಿಸಿ ತನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡಾಗ ನಾಗಾನಂದ ತನ್ನನ್ನು ಕುರಿತು ಈ ದಿನ ನೀನು ತಪ್ಪಿಸಿಕೊಂಡಿದ್ದೀಯಾ, ನಿನ್ನನ್ನು ಮುಗಿಸುವವರೆಗೆ ಬಿಡುವುದಿಲ್ಲ ಎಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾನೆ. ನಂತರ ಹೈದರ್@ಬಷಿ ರವರೊಂದಿಗೆ ತಮ್ಮ ಮನೆಗೆ ಬಂದಿರುತ್ತೇನೆ. ತನಗೆ ಮೈ ಕೈ ನೋವು ಜಾಸ್ತಿ ಆಗಿದ್ದರಿಂದ ಈ ದಿನ ದಿನಾಂಕ: 22/02/2021 ರಂದು ಮದ್ಯಾಹ್ನ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

 8. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.77/2021 ಕಲಂ. 447,307,504,34 ಐ.ಪಿ.ಸಿ:-

     ದಿನಾಂಕ: 22/02/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶಿವಾರೆಡ್ಡಿ ಬಿನ್ ಲೇಟ್ ಆವುಲರೆಡ್ಡಿ, 64 ವರ್ಷ, ವಕ್ಕಲಿಗರು, ಜಿರಾಯ್ತಿ, ದೊಡ್ಡಗಂಜೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 8.45 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಜಮೀನು ಹಾಗೂ ತನ್ನ ಬಾಮೈದ ಲಕ್ಷ್ಮಿನಾರಾಯಣರೆಡ್ಡಿ ಬಿನ್ ನಂಜರೆಡ್ಡಿ ರವರ ಜಮೀನುಗಳು ಅಕ್ಕ ಪಕ್ಕದಲ್ಲಿರುತ್ತೆ. ನಮ್ಮ ಜಮೀನುಗಳ ಮದ್ಯೆ ರಾಜಕಾಲುವೆ ಇರುತ್ತೆ. ಈ ದಿನ ದಿನಾಂಕ: 22/02/2021 ರಂದು ಸಂಜೆ 6.00 ಗಂಟೆ ಸಮಯದಲ್ಲಿ ತಾನು ತನ್ನ ಜಮೀನಿನ ಬದುವನ್ನು ಜೆಸಿಬಿ ಯಿಂದ ಸಮ ಮಾಡಿಸುತ್ತಿದ್ದಾಗ ತನ್ನ ಬಾಮೈದ ಲಕ್ಷ್ಮಿನಾರಾಯಣರೆಡ್ಡಿ ಮತ್ತು ಬಚ್ಚಯ್ಯಗಾರಿ ಸೀನ ಬಿನ್ ಚನ್ನಪ್ಪ ರವರು ತಮ್ಮ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ “ಬೋಳಿ ನನ್ನ ಮಗನೇ, ನಿಮ್ಮ ಬದುವಿನ ಪಕ್ಕದಲ್ಲಿ ರಾಜಕಾಲುವೆ ಇದೆ. ನೀನು ಏಕೆ ಕೆಲಸ ಮಾಡಿಸುತ್ತಿದ್ದೀಯಾ” ಎಂದು ತನ್ನನ್ನು ಕೆಟ್ಟ ಮಾತುಗಳಿಂದ ಬೈದು, ಆ ಪೈಕಿ ಲಕ್ಷ್ಮಿನಾರಾಯಣರೆಡ್ಡಿ ರವರು ತನ್ನ ಕೈಯಲ್ಲಿದ್ದ ಮಚ್ಚಿನಿಂದ ತನ್ನ ಎಡಕೈ ಕಿರು ಬೆರಳಿಗೆ ಹೊಡೆದಿದ್ದರಿಂದ ಬೆರಳು ಕಟ್ ಆಗಿರುತ್ತೆ. ನಂತರ ಆತನು ಅದೇ ಮಚ್ಚಿನಿಂದ ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ತಲೆಯ ಮೇಲೆ ಎರಡು ಸಲ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಬಚ್ಚಯ್ಯಗಾರಿ ಸೀನ ತನ್ನ ಕೈಯಲ್ಲಿದ್ದ ಮಚ್ಚಿನಿಂದ ತನ್ನ ತಲೆಯ ಮೇಲೆ ಎರಡು ಮೂರು ಸಲ ಹೊಡೆದು ತನ್ನನ್ನು ಸಾಯಿಸಲು ಪ್ರಯತ್ನಿಸಿರುತ್ತಾನೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

 9. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.78/2021 ಕಲಂ. 324,504,506,34 ಐ.ಪಿ.ಸಿ:-

     ದಿನಾಂಕ: 22/02/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಜಿ.ಎನ್.ಲಕ್ಷ್ಮಿನಾರಾಯಣರೆಡ್ಡಿ ಬಿನ್ ನಂಜಪ್ಪ, 52 ವರ್ಷ, ವಕ್ಕಲಿಗರು, ಜಿರಾಯ್ತಿ, ದೊಡ್ಡಗಂಜೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 9.15 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಜಮೀನು ಹಾಗೂ ತನ್ನ ಭಾವನಾದ ತಮ್ಮ ಗ್ರಾಮದ ಶಿವಾರೆಡ್ಡಿ ಬಿನ್ ಲೇಟ್ ಆವುಲರೆಡ್ಡಿ ರವರ ಜಮೀನುಗಳು ಅಕ್ಕ ಪಕ್ಕದಲ್ಲಿರುತ್ತೆ. ತಮ್ಮ ಜಮೀನುಗಳ ನಡುವೆ ರಾಜಕಾಲುವೆ ಇರುತ್ತೆ. ಈ ದಿನ ದಿನಾಂಕ: 22/02/2021 ರಂದು ಸಂಜೆ 6.00 ಗಂಟೆ ಸಮಯದಲ್ಲಿ ಶಿವಾರೆಡ್ಡಿ ರವರು ರಾಜಕಾಲುವೆಯ ಬಳಿ ಜೆಸಿಬಿ ಯಿಂದ ಕೆಲಸ ಮಾಡಿಸುತ್ತಿರುವ ವಿಚಾರ ತಿಳಿದು ತಾನು ಸ್ಥಳಕ್ಕೆ ಹೋಗಿ ತನ್ನ ಭಾವ ಶಿವಾರೆಡ್ಡಿರವರನ್ನು ಕುರಿತು “ನೀನು ಏಕೆ ರಾಜಕಾಲುವೆಯ ಹತ್ತಿರ ಕೆಲಸ ಮಾಡಿಸುತ್ತಿದ್ದೀಯಾ” ಎಂದು ಕೇಳಿದಾಗ ಆತನು “ಇದು ನನ್ನ ಜಮೀನು, ನಾನು ನನ್ನ ಜಮೀನಿನಲ್ಲಿ ಕೆಲಸ ಮಾಡಿಸುತ್ತಿದ್ದೇನೆ, ಇಲ್ಲಿಂದ ಹೋಗೋ ಬೋಳಿ ನನ್ನ ಮಗನೇ” ಎಂದು ತನ್ನನ್ನು ಕೆಟ್ಟ ಮಾತುಗಳಿಂದ ಬೈದು ತನ್ನ ಕೈಯಲ್ಲಿದ್ದ ಮಚ್ಚಿನಿಂದ ತನ್ನ ಎಡಕೈ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಆಗ ಸ್ಥಳಕ್ಕೆ ಬಂದ ಸರಸ್ವತಮ್ಮ ಕೋಂ ಶಿವಾರೆಡ್ಡಿ, ಕಿರಣ್ ಕುಮಾರ್ ಬಿನ್ ಶಿವಾರೆಡ್ಡಿ ಮತ್ತು ಜಿ.ವಿ.ಮುನಿರಾಜು ಬಿನ್ ಲೇಟ್ ವೆಂಕಟರವಣಪ್ಪ ರವರು ತನ್ನ ಮೇಲೆ ಜಗಳ ತೆಗೆದು ಸರಸ್ವತಮ್ಮ ದೊಣ್ಣೆಯಿಂದ ತನ್ನ ಎಡಕೈ ಮೇಲೆ ಹೊಡೆದು ಊತಗಾಯವನ್ನುಂಟು ಮಾಡಿರುತ್ತಾರೆ. ಕಿರಣ್ ಕುಮಾರ್ ಮತ್ತು ಮುನಿರಾಜು ರವರು ಕಲ್ಲಿನಿಂದ ತನ್ನ ಬಲಹೊಟ್ಟೆಯ ಮೇಲೆ ಮತ್ತು ಬೆನ್ನಿನ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾರೆ ಹಾಗೂ ಶಿವಾರೆಡ್ಡಿ ರವರು ತನ್ನನ್ನು ಕುರಿತು ಈ ದಿನ ತಪ್ಪಿಸಿಕೊಂಡಿದ್ದೀಯಾ, ನಿನ್ನನ್ನು ಮುಗಿಸಿಬಿಡುವವರೆಗೂ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಈ ಹಿಂದೆಯೂ ಸಹ ತನಗೂ ಹಾಗೂ ಶಿವಾರೆಡ್ಡಿ ರವರಿಗೆ ಗಲಾಟೆಗಳಾಗಿದ್ದು, ತಾನು ಠಾಣೆಯಲ್ಲಿ ದೂರು ನೀಡಿರುತ್ತೇನೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

 10. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.24/2021 ಕಲಂ. 448,417 ಐ.ಪಿ.ಸಿ:-

     ದಿನಾಂಕ 22/02/2021 ರಂದು ರಾತ್ರಿ 8:45 ಗಂಟೆಗೆ  ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿ: 20/02/2021 ರಂದು ಮಾನ್ಯ ಚಿಂತಾಮಣಿ ತಹಶೀಲ್ದಾರ್ ರವರು ಆನೂರು ಗ್ರಾಮ ವಾಸ್ತವ್ಯದ  ಸಭೆಯನ್ನು ಏರ್ಪಡಿಸಿದ್ದು, ಸದರಿ ಸಭೆಗೆ ಘಟಕ ವ್ಯವಸ್ಥಾಪಕರು ಹಾಜರಾಗುವಂತೆ ನೀಡಿರುವ  ಸಭೆಯ ಸೂಚನಾ ಪತ್ರದಂತೆ ತಾನು ಸುಮಾರು 10:30 ಗಂಟೆಗೆ ಸಭೆಗೆ ಹಾಜರಾಗುವ ಹಿನ್ನಲೆ ಆನೂರುಗೆ ತೆರಳಿರುತ್ತೇನೆ, ಆದರೆ ಬಸ್ ನಿಲ್ದಾಣದಲ್ಲಿ ರಾಮ್ ಎಂಬುವವರು ( ಮೊ.ಸಂ 7022189610) ಸಂಸ್ಥೆಯ ಕರ್ತವ್ಯ ನಿರತ ಕೆಲವು ಚಾಲನಾ ಸಿಬ್ಬಂದಿಯೊಂದಿಗೆ ಪ್ರಚೋದನಕಾರಿಯಾಗಿ ಮಾತನಾಡುತ್ತಿರುವುದು ಗಮನಿಸಿದ್ದು ತಾನು ಅತಿ ಜರೂರಾಗಿ ಗ್ರಾಮ ವಾಸ್ತವ್ಯ ಸಭೆಗೆ ತೆರಳಿರುತ್ತೇನೆ, ನಂತರ ರಾಮ್ ಎಂಬ  ವ್ಯಕ್ತಿಯು ಬೆಳಿಗ್ಗೆ 11:50 ಗಂಟೆಗೆ ಚಿಂತಾಮಣಿ ಕ.ರಾ.ರ.ಸಾ.ನಿ  ಘಟಕಕ್ಕೆ ಯಾವುದೇ ಮೇಲಾಧಿಕಾರಿಗಳ ಅಪ್ಪಣೆ ಇಲ್ಲದೇ ಒಳಗೆ ಪ್ರವೇಶಿಸಿದ್ದು, ನಾನು ಕರ್ನಾಟಕ ಸರ್ಕಾರದ ಮಾನ್ಯ ಸಾರಿಗೆ ಸಚಿವರ ಭದ್ರತಾ ಅಂಗ ರಕ್ಷಕ ಎಂದು ಪರಿಚಯಿಸಿಕೊಂಡು ಸಿಬ್ಬಂದಿಯನ್ನು ಗುಂಪು ಸೇರಿಸಿ ಮಾರ್ಗ ಬದಲಾವಣೆ ಮಾಡುವ ಬಗ್ಗೆ  ಡ್ಯೂಟಿ ರೋಟಾದ ಬ್ಗಗೆ ಮತ್ತು ಬಾರ್ ಅನುಸೂಚಿಗಳ ವಿಷಯದ ಬಗ್ಗೆ  ನಿಮಗೆ ಕಿರುಕುಳವಾಗಿದ್ದರೆ ಅದರ ಬಗ್ಗೆ ವಿಚಾರಿಸಿಕೊಂಡು ಬರಲು ತಿಳಿಸಿರುವುದಾಗಿ ಹೇಳಿರುತ್ತಾರೆ. ಹಾಗೂ ಕರ್ತವ್ಯ ನಿರತ ಘಟಕದ ವ್ಯವಸ್ಥಾಪಕರ ಕೊಠಡಿಯಲ್ಲಿ ಗುಂಪು ಸೇರಿಸಿ ಸಂಸ್ಥೆಯ ವಿರುದ್ದ ಪ್ರಚೋದನಕಾರಿ ಮಾತುಗಳನ್ನು ಹಾಡಿರುತ್ತಾರೆ ಇದರಿಂದ ರಾಮ್ ರವರು  1) ಕರ್ನಾಟಕ ಸರ್ಕಾರದ ಮಾನ್ಯ ಸಾರಿಗೆ ಸಚಿವರ ಹೆಸರನ್ನು ದುರ್ಬಳಿಕೆ ಮಾಡಿಕೊಂಡಿರುತ್ತಾರೆ .2) ಸಂಸ್ಥೆಯ ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಸದರಿ ವ್ಯಕ್ತಿ ಸುಳ್ಳು ಹೇಳಿ ಘಟಕದ ಒಳಗೆ ಪ್ರವೇಶಿರುತ್ತಾರೆ, 3) ಕರ್ತವ್ಯ ನಿತರ ಸಿಬ್ಬಂದಿಯನ್ನು ಸೇರಿಸಿ ಸಂಸ್ಥೆಯ ವಿರುದ್ದ ಪ್ರಚೋದನಾಕಾರಿ  ಮಾತುಗಳನ್ನು ಹಾಡಿರುತ್ತಾರೆ.4) ಇದರಿಂದ ಸಂಸ್ಥೆಯ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸಿರುವುದಲ್ಲದೆ, ಸಾರ್ವಜನಿಕರ ಸೌಲಭ್ಯಕ್ಕೆ ಆಡಚಣೆಯಾಗಿ , ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆಯನ್ನುಂಟು ಮಾಡಿರುತ್ತಾರೆ.ಆ ಸಮಯದಲ್ಲಿ ಕರ್ತವ್ಯ ನಿರತ ನಮ್ಮ ಭದ್ರತಾ ಸಿಬ್ಬಂದಿಯವರು ಮೊಬೈಲ್ ನಲ್ಲಿ ತೆಗದ ಕೆಲವು ಭಾವ ಚಿತ್ರಗಳು ಈ ಘಟನೆಯ ಬಗ್ಗೆ ವರದಿಯನ್ನು ನೀಡಿರುತ್ತಾರೆ. ಸದರಿ  ಭದ್ರತಾ  ರಕ್ಷಕರ ವರದಿ ಹಾಗೂ  ಭಾವ ಚಿತ್ರಗಳನ್ನು ಈ ಪತ್ರಕ್ಕೆ ಅಡಕ ಮಾಡಲಾಗಿದೆ,  ಆದ್ದರಿಂದ ತಾವು  ಈ ಮೇಲಿನ ವಿಷಯವನ್ನು ನಮ್ಮ ಸಂಸ್ಥೆಯ ಮೇಲಾಧಿಕಾರಿಗಳಿಗೆ ಹಾಗೂ ಕೇಂದ್ರ ಕಛೇರಿಯ ಅನುಮತಿಯನ್ನು ಪಡೆದುಕೊಂಡು ಈ ದಿನ ತಡವಾಗಿ ಬಂದು ದೂರುನ್ನು ನೀಡಿದ್ದು. ಆದ್ದರಿಂದ   ಘಟಕದ ಒಳಗೆ  ಪ್ರವೇಶಿಸಿ ಪ್ರಚೋದನಕಾರಿಯಾಗಿ ಮಾತನಾಡಿದ ಸಾರಿಗೆ ಸಚಿವರ ಹೆಸರನ್ನು ದುರ್ಬಳಿಕೆ ಮಾಡಿಕೊಂಡ ಸದರಿ ರಾಮ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

11. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.30/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:22/02/2021 ರಂದು 13-00 ಗಂಟೆಗೆ ಪಿರ್ಯಾದಿದಾರರಾದ ನರಸಿಂಹರಾಜು ಬಿನ್ ನರಸಿಂಹಮೂರ್ತಿ, 35 ವರ್ಷ, ಟೈಲರ್ ಕೆಲಸ, ವಾಸ: ಬೈಚಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾನೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ತಮ್ಮ ತಂದೆ ತಾಯಿಯೊಂದಿಗೆ ತಮ್ಮ ಗ್ರಾಮದಲ್ಲಿ ವಾಸವಾಗಿರುತ್ತೇನೆ. ದಿನಾಂಕ:13/02/2021 ರಂದು ಸಂಜೆ ತಾನು ಮನೆಯಲ್ಲಿರುವ ತಮ್ಮ ತಂದೆಯವರು ತನ್ನ ಸ್ನೇಹಿತನ ಮಗಳ ಮದುವೆಗೆಂದು ಗೌರಿಬಿದನೂರು ಟೌನ್ನ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಸಾಯಿಕೃಷ್ಣ ಕಲಾಣ್ಯ ಮಂಟಪದಲ್ಲಿ ಮದುವೆಯ ಅರತಕ್ಷೆಗೆಂದು ಹೋಗುತ್ತೇನೆಂದು ತಿಳಿಸಿ KA-40 EE-1153 ನೊಂದಣಿ ಸಂಖ್ಯೆ TVS XL Heavy Duty  ರನ್ನು ತಾನು ಚಾಲನೆ ಮಾಡಿಕೊಂಡು ಮನೆಯಿಂದ ಹೋದರು. ನಂತರ ರಾತ್ರಿ ಸುಮಾರು 10-30 ಗಂಟೆಯಲ್ಲಿ ತನಗೆ ಯಾರೋ ಸಾರ್ವಜನಿಕರು ಪೊನ್ ಮಾಡಿ ನಿಮ್ಮ ತಂದೆಯವರಿಗೆ ಕಲ್ಲಿನಾಥೇಶ್ವರ ಬೆಟ್ಟ ಬಳಿಯಿರುವ ಗ್ರೀನ್ ಸಿಟಿ ಮುಂಭಾಗದ ರಸ್ತೆಯಲ್ಲಿ ಅಪಘಾತವಾಗಿದ್ದು ಯಾವುದೋ ಅಟೋದಲ್ಲಿ ಗೌರಿಬಿದನೂರು ಸರ್ಕಾರಿ ಅಸ್ಪತ್ರೆಗೆ ಕರೆದುಕೋಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿರುವುದಾಗಿ ತಿಳಿಸಿದ್ದು,  ತಾನು ಯಾವುದೋ ವಾಹನದಲ್ಲಿ ಅಸ್ಪತ್ರೆಗೆ  ಬಂದು ನೋಡಲಾಗಿ ವಿಚಾರವು ನಿಜವಾಗಿದ್ದು, ತನ್ನ ತಂದೆಯವರನ್ನು ವಿಚಾರಿಸಿದಾಗ ತಾನು ಮದುವೆಯ ಅರತಕ್ಷತೆಯನ್ನು ಮುಗಿಸಿಕೊಂಡು ತನ್ನ ಗ್ರಾಮಕ್ಕೆ ಬರಲು ರಾತ್ರಿ ಸುಮಾರು 10-00 ಗಂಟೆಯಲ್ಲಿ ತನ್ನ ದ್ವಿ ಚಕ್ರ ವಾಹನವನ್ನು ತಾನು ಚಾಲನೆ ಮಾಡಿಕೊಂಡು ಕಲ್ಲಿನಾಥೇಶ್ವರ ಬೆಟ್ಟ ಬಳಿಯಿರುವ ಗ್ರೀನ್ ಸಿಟಿ ಮುಂಭಾಗದ ರಸ್ತೆಯಲ್ಲಿ ಬರುತ್ತೀರುವಾಗ ತನ್ನ ಎದುರುಗಡೆಯಿಂದ ಬಂದ KA-40 A-5198 ಮಾರುತಿ ಸುಜುಕಿ ಕಂಪನಿಯ ಸಿಪ್ಟ್ ಕಾರಿನ ಚಾಲಕ ತನ್ನ ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ತಾನು ದ್ವಿ ಚಕ್ರ ವಾಹನದ ಸಮೇತ ಕೆಳಗೆ ಬಿದ್ದು ತನಗೆ ಬಲಕಾಲಿನ ಮೊಣಕಾಲು ಮೂಳೆ ಮುರಿತವಾಗಿ ರಕ್ತ ಗಾಯವಾಗಿದ್ದು, ಸೊಂಟ, ಮುಖ, ಎರಡು ಕೈಗಳಿಗೆ ಮುಖ ಬಳಿ ರಕ್ತ ಗಾಯವಾಗಿರುವುದಾಗಿ ತಿಳಿಸಿದರು, ನಂತರ ಪ್ರಥಮ ಚಿಕಿತ್ಸೆಯನ್ನು ನೀಡಿದ ವೈದ್ಯಾಧಿಕಾರಿಗಳ ಹೆಚ್ಚಿನ ಚಿಕಿತ್ಸೆಗಾಗಿ ತಾನು ಬೆಂಗಳೂರಿಗೆ ಕರೆದುಕೋಂಡು ಹೋಗುವಂತೆ ತಿಳಿಸಿದ್ದು ಅದರಂತೆ ತಾನು ಅಂಬುಲೇನ್ಸ್ ನಲ್ಲಿ ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿತ್ತಿರುತ್ತೇನೆ.   ಆದ್ದರಿಂದ ತಮ್ಮ ತಂದೆ ನರಸಿಂಹಮೂರ್ತಿ ರವರಿಗೆ ರಸ್ತೆ ಅಪಘಾತ ಪಡಿಸಿ KA-40 A-5198 ಮಾರುತಿ ಸುಜುಕಿ ಕಂಪನಿಯ ಸಿಪ್ಟ್ ಕಾರಿನ ಚಾಲಕ ಮತ್ತು ವಾಹನದ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕಾಗಿ ಕೋರಿ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

 12. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.34/2021 ಕಲಂ. 286,304 ಐ.ಪಿ.ಸಿ & 6,3,5 EXPLOSIVE SUBSTANCES ACT, 1908 &  9B EXPLOSIVE ACT, 1884:-

     ದಿನಾಂಕ:23/02/2021 ರಂದು ಬೆಳಗಿನ ಜಾವ  03-15 ಗಂಟೆಗೆ ಠಾಣಾ ಸಿಬ್ಬಂದಿ ಪಿ,ಸಿ 408 ರವರ ಮುಖಾಂತರ ಫಿ,ಐ  ಸಾಹೇಬರು ಕಳುಹಿಸಿಕೊಟ್ಟ ದೂರಿನ ಸಾರಾಂಶವೇನೆಂದರೆ.  ಗುಡಿಬಂಡೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ ಎಂ.ಎನ್ ರವರು ದಿನಾಂಕ:23/02/2021 ರಂದು ಬೆಳಗಿನ ಜಾವ ಸುಮಾರು 12:45 ಗಂಟೆಗೆ ನಾನು ಪೇರೆಸಂದ್ರದಲ್ಲಿರುವಾಗ, ಸಾರ್ವಜನಿಕರು ನನಗೆ ಪೋನ್ ಮಾಡಿ  ಹೀರೆನಾಗವಲ್ಲಿ ಗ್ರಾಮದ ಭ್ರಮರ ವಾಹಿನಿ ಕ್ರಷರ್ ಕಡೆಯಿಂದ ಸ್ಪೋಟಕಗಳು ಸಿಡಿದಂತೆ ಬಾರಿಗಾತ್ರದ ಶಬ್ದ ಬಂದಿದ್ದಾಗಿ, ಯಾವುದೋ ದೊಡ್ಡ ಪ್ರಮಾಣದಲ್ಲಿ ಅನಾಹುತ ಸಂಭವಿಸಿರುವುದಾಗಿ ತಿಳಿಸಿದರು. ನಾನು ತಕ್ಷಣ ಠಾಣಾ ಸಿಬ್ಬಂದಿಯವರಾದ  ಪಿ.ಸಿ 408, ಪಿ.ಸಿ 92 ರವರಿಗೆ ಬರುವಂತೆ ಸೂಚಿಸಿ ನಾನೂ ಸಹಾಸುಮಾರು 1:00 ಗಂಟೆಗೆ ಭ್ರಮರವಾಹಿನಿ ಕ್ರಷರ್ ಕಛೇರಿಯ ಬಳಿ ತಲುಪಿದಾಗ, ಒಂದು ಟಾಟಾ ಏಸ್ ವಾಹನದಲ್ಲಿ ಒಬ್ಬ ವ್ಯಕ್ತಿ ಒಳಗೆ ಕುಳಿತಿದ್ದು, ನೋವಿನಿಂದ ಕಿರುಚಾಡುತಿದ್ದು, ಅವನೊಂದಿಗೆ ಇಬ್ಬರು ವ್ಯಕ್ತಿಗಳು ಸಮಾದಾನಪಡಿಸುತ್ತಿದ್ದವರನ್ನು ನೋಡಿ,  ನಾನು ಅವನ ಬಳಿ ಹೋಗಿ  ನೋಡಲಾಗಿ ಅವನು ಚಾಲಕನ ಸೀಟ್ ನಲ್ಲಿ ಕುಳಿತಿದ್ದು, ಆತನನ್ನು ವಿಚಾರ ಮಾಡಲಾಗಿ ಆತನ ಹೆಸರು ರಿಯಾಜ್ ಭ್ರಮರ ವಾಹಿಸಿ ಕ್ರಷರ್ ಕಾರ್ಮಿಕ ಎಂದು ತಿಳಿಸಿದನು. ನಾನು ಆತನನ್ನು ಏನಾಯಿತೆಂದು ಕೇಳಲಾಗಿ ರಿಯಾಜ್ ತಿಳಿಸಿದ್ದೇನೆಂದರೆ, ದಿನಾಂಕ:22/02/2021 ರಂದು ಮದ್ಯರಾತ್ರಿ ಸುಮಾರು 12:00 ಗಂಟೆ ಸಮಯದಲ್ಲಿ ಭ್ರಮರವಾಹಿಸಿ ಕ್ರಷರ್ ನ ಶಿರಡಿ ಸಾಯಿ ಅಗ್ರಿಗೇಡ್ ಕಲ್ಲು ಕ್ವಾರಿಯ ಮೇನೆಜರ್ ಉಮಾಮಹೇಶ್ ರವರು, ಪೊಲೀಸರು ಎಲ್ಲಾ ಕಡೆ ಸ್ಪೋಟಕ ವಸ್ತುಗಳ ಶೋಧನೆ ಮಾಡುತ್ತಿರುವುದಾಗಿ ಮಾಲೀಕರಾದ  ನಾಗರಾಜು, , ರಾಘವೇಂದ್ರರೆಡ್ಡಿ,  ಲಕ್ಷ್ಮೀಪತಿ , ಶಿವಾರೆಡ್ಡಿ, ಆನಂದ  ಮತ್ತು ಪ್ರವೀಣ್  ಎಂಬುವವರು. ನಮ್ಮ ಬಳಿ ಇರುವ ಸ್ಪೋಟಕಗಳನ್ನು ನಾಶಪಡಿಸಲು ತಿಳಿಸಿರುವುದರಿಂದ ಟಾಟಾ ಏಸ್ ವಾಹನವನ್ನು ತರಲು ನನಗೆ ತಿಳಿಸಿದ್ದು, ಅದರಂತೆ ನಾನು ಟಾಟಾ ಏಸ್ ವಾಹನವನ್ನು ಚಾಲನೆ ಮಾಡಿಕೊಂಡು ಮೇನೇಜರ್ ಉಮಾಮಹೇಶ್ ರವರ ಸೂಚನೆಯಂತೆ ಕ್ರಷರ್ ನಲ್ಲಿ ಕೆಲಸ ಮಾಡುವ ಅಭಿನಾಯಕ್,  ನೇಪಾಳಿ ಮಹೇಶ್ ಸಿಂಗ್ ಭೋರ, ಗಂಗಾಧರ್  ರವರನ್ನು ವಾಹನದ ಹಿಂಬದಿಯಲ್ಲಿ ಹತ್ತಿಸಿಕೊಂಡು  ಎಲ್ಲರೂ ವಾಹನದೊಂದಿಗೆ  ಹೊರಟಿರುತ್ತೇವೆ. ಮುರಳಿಕೃಷ್ಣ ದ್ವಿ ಚಕ್ರ ವಾಹನದಲ್ಲಿ ನಮ್ಮ ಹಿಂದೆ ಬಂದನು. ಕ್ರಷರ್ ನಿಂದ ಸುಮಾರು 200ಮೀಟರ್ ಹತ್ತಿರದಲ್ಲಿ ಬಂದಾಗ, ಒಂದು ಅಕ್ಕಿಚೀಲದಲ್ಲಿ ಸ್ಪೋಟಕಗಳನ್ನು ಮ್ಯಾನೇಜರ್ ಉಮಾಮಹೇಶ್ ಮತ್ತು ಸೂಪರ್ ವೈಸರ್ ರಾಮು ರವರು ವಾಹನದಲ್ಲಿ ಇಟ್ಟು ಹೀರೆನಾಗವಲ್ಲಿಯಿಂದ ಜೊನ್ನಾಲುಕುಂಟೆ ಪಾರೆಸ್ಟ್ ಕಡೆ ಹೋಗುವಂತೆ ತಿಳಿಸಿದರು. ಅದರಂತೆ ನಾನು ಅರ್ಧ ಕಿಲೋಮೀಟರ್ ದೂರ ಹೋದಾಗ, ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದರ ಮೇರೆಗೆ ವಾಹನ ನಿಲ್ಲಿಸಿದಾಗ, ಹಿಂಬದಿಯಲ್ಲಿದ್ದ ಅಭಿನಾಯಕ್,  ನೇಪಾಳಿ ಮಹೇಶ್ ಸಿಂಗ್ ಬೋರ, ಗಂಗಾಧರ, ಮ್ಯಾನೇಜರ್ ಉಮಾ ಮಹೇಶ್ ಮತ್ತು ಸೂಪರ್ ವೈಸರ್ ರಾಮು ರವರು ಅಕ್ಕಿ ಚೀಲದಲ್ಲಿದ್ದ ಸ್ಪೋಟಕಗಳನ್ನು ಗಾಡಿಯಿಂದ ತೆಗೆದುಕೊಂಡು ನಾಶಪಡಿಸಲು ಸುಮಾರು 200 ಅಡಿಗಳ ಅಂತರದಲ್ಲಿ ಹೋಗಿದ್ದು, ಅದೇ ಸಮಯಕ್ಕೆ ಮುರಳಿಕೃಷ್ಣ ಸಹ ಅವರ ಹಿಂದೆ ದ್ವಿ ಚಕ್ರ ವಾಹನದಲ್ಲಿ ಹೋಗಿದ್ದು,  ಇದ್ದಕ್ಕಿದ್ದಂತೆ  ತೀವ್ರವಾದ ಸ್ಪೋಟಕವಾಗಿ, 6 ಜನರ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ದೂರದಲ್ಲಿ ಬಿದ್ದವು. ನಾನು ಬಲಕಾಲನ್ನು ಆಚೆ ಇಟ್ಟಿದ್ದರಿಂದ ಸ್ಪೋಟಕ ವಸ್ತು ಬಲಕಾಲಿಗೆ ತಗುಲಿ ರಕ್ತಗಾಯವಾಯಿತು. ಮುಂದುವರಿದು ನಾನು ರಿಯಾಜ್ ಗೆ ಸ್ಪೋಟಕ ವಸ್ತುಗಳನ್ನು ವಾಹನದಲ್ಲಿ ಇಟ್ಟುಕೊಳ್ಳಲು ಮತ್ತು ಸಾಗಿಸಲು ರಹದಾರಿ ಇದೆಯೇ ಎಂದು ಕೇಳಲಾಗಿ ರಿಯಾಜ್ ನು ಇರುವುದಿಲ್ಲವೆಂದು ಹಾಗೂ  ಸದರಿ ಚೀಲದಲ್ಲಿ ಜಿಲೆಟಿನ್ ಟ್ಯೂಬ್ ಗಳು ಮತ್ತು ಇ.ಡಿ ವೈರ್  ಇದ್ದುದನ್ನು ನಾನು ನೋಡಿದ್ದೆ ಎಂದು ತಿಳಿಸಿದನು.  ದಿನಾಂಕ 07/02/2021 ರಂದು ಮೇಲ್ಕಂಡ ಕ್ರಷರ್ ಮಾಲೀಕರುಗಳ ವಿರುದ್ದ ಪ್ರಕರಣ ದಾಖಲಾಗಿದ್ದು ಇದೇ ಕೇಸಿಗೆ ಸಂಬಂದಪಟ್ಟಂತೆ  ದಿನಾಂಕ 22/02/2021 ರಂದು ಕಂಪ್ರೈಸರ್ ಅನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ. ಆದ್ದರಿಂದ ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡಿದ್ದ  ಅಪಾಯಕಾರಿಯಾದ ಸ್ಪೋಟಕ ವಸ್ತುಗಳನ್ನು ಪೊಲೀಸರಿಂದ ಮರೆಮಾಚಲು ಯಾವುದೇ ರಹದಾರಿ ಇಲ್ಲದೆ ಕಾನೂನು ಬಾಹಿರವಾಗಿ ಪ್ರಾಣಹಾನಿ ಸಂಭವಿಸುತ್ತದೆಯೆಂದು ತಿಳಿದಿದ್ದರೂ ಸಹಾ, ಭ್ರಮರವಾಹಿನಿ  ಕ್ರಷರ್ ನ ಹಾಗೂ ಶಿರಡಿಸಾಯಿ ಅಗ್ರಿಗೇಡ್ ಕಲ್ಲು ಕ್ವಾರಿ  ಮಾಲೀಕರುಗಳ ಸೂಚನೆಯಂತೆ ಅಭಿನಾಯಕ್,  ನೇಪಾಳಿ ಮಹೇಶ್ ಸಿಂಗ್ ಬೋರ, ಗಂಗಾಧರ,ಮುರಳಿಕೃಷ್ಣ,, ಮ್ಯಾನೇಜರ್ ಉಮಾ ಮಹೇಶ್ ಮತ್ತು ಸೂಪರ್ ವೈಸರ್ ರಾಮು ರವರುಗಳು ಸ್ಪೋಟಕ ವಸ್ತುಗಳನ್ನು ನಾಶಪಡಿಸಲು ಹೋದಾಗ ಸ್ಪೋಟಕ ವಸ್ತುಗಳು ಸ್ಪೋಟವಾಗಿ ಆರೂ ಜನರೂ ಮೃತಪಟ್ಟಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಹಾಗೂ ಸ್ಫೂಟಕಗಳನ್ನು ಸರಬರಾಜು ಮಾಡಿದವರ  ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಸದರಿ ದೂರನ್ನು ಭ್ರಮರ ವಾಹಿನಿ ಕ್ರಷರ್ ನ ಕಛೇರಿಯ ವಿದ್ಯುತ್ ದೀಪದ ಬೆಳಕಿನಲ್ಲಿ ಬರೆದು ಪಿ.ಸಿ 408 ರಮೇಶ ರವರ ಮುಖಾಂತರ ಬೆಳಗಿನ ಜಾವ 2-45 ಗಂಟೆಗೆ  ಠಾಣೆಗೆ ಕಳುಹಿಸಿಕೊಟ್ಟ ದೂರಾಗಿರುತ್ತೆ.

 

 13. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.43/2021 ಕಲಂ. 78(1)(A)(iv)(vi) ಕೆ.ಇ ಆಕ್ಟ್:-       

     ದಿನಾಂಕ:23.02.2021 ರಂದು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಎಸ್.ಐ. ಪ್ರಭಾಕರ್.ಎಂ.ಆದ ನಾನು  ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಸ್ವತಃ ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ  ಈ ದಿನ ದಿನಾಂಕ: 23/02/2021 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ನಾನು ಮತ್ತು  ಸಿಬ್ಬಂದಿಯವರಾದ ಹೆಚ್.ಸಿ.219 ಶ್ರೀನಿವಾಸಮೂರ್ತಿ ಮತ್ತು ಪಿ.ಸಿ.537 ಆನಂದ್ ಕುಮಾರ್ ರವರೊಂದಿಗೆ ಠಾಣಾ ಸರಹದ್ದಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾಗ ನನಗೆ ಗೌರೀಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ  ಅಲಕಾಪುರ ಗ್ರಾಮದ ಚೆನ್ನಸೋಮೇಶ್ವರ ದೇವಸ್ಥಾನದ ಬಳಿ ಯಾರೋ ಇಬ್ಬರು ಆಸಾಮಿಗಳು ಸಾರ್ವಜನಿಕವಾಗಿ  ಒಂದು ರೂಪಾಯಿಗೆ 70/-ರೂಪಾಯಿಗಳು ಕೊಡುತ್ತಿರುವುದಾಗಿ ಆಮೀಷ ತೋರಿಸಿ ಮಟ್ಕ ಚೀಟಿ ಬರೆದು ಕೊಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಈ ಬಗ್ಗೆ ಠಾಣೆಗೆ ವಾಪಾಸ್ ಬಂದು ಠಾಣಾ ಎನ್.ಸಿ.ಆರ್ ನಂ.49/2021 ರಂತೆ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು  ಸದರಿ ಅಕ್ರಮ ಮಟ್ಕಾ ಜೂಜಾಟದ ಮೇಲೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯನ್ನು ಕರೆದುಕೊಂಡು ದ್ವಿಚಕ್ರ ವಾಹನಗಳಲ್ಲಿ ಹೋಗಿ ಅಲಕಾಪುರ ಕ್ರಾಸ್ನಲ್ಲಿದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಹೋಗಿ ದ್ವಿಚಕ್ರ ವಾಹನಗಳನ್ನು ಸದರಿ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಸೂಕ್ಷ್ಮವಾಗಿ ಗಮನಿಸಲಾಗಿ ಯಾರೋ ಇಬ್ಬರು ಅಸಾಮಿಗಳು ಸಾರ್ವಜನಿಕವಾಗಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 70/-ರೂಪಾಯಿಗಳು ಕೊಡುವುದಾಗಿ ಹಣದ ಆಮೀಷ ತೋರಿಸುತ್ತಾ ಮಟ್ಕ ಚೀಟಿ ಬರೆದುಕೊಟ್ಟು, ಮಟ್ಕಾ ಜೂಜಾಟ ವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ನಾವು ಪಂಚರೊಂದಿಗೆ ಸದರಿ ಅಸಾಮಿಗಳ ಮೇಲೆ ದಾಳಿ ಮಾಡಿ ಸದರಿ ಆಸಾಮಿಗಳನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ 1) ದಸ್ತಗಿರ್ ಬಿನ್ ಷೇಕ್ ಅಹಮದ್, 36 ವರ್ಷ, ಮುಸ್ಲಿಂ, ಆಟೋ ಚಾಲಕ ವಾಸ ಅಲಕಾಪುರ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು. 2) ಸುರೇಶ್ ಬಿನ್ ನಾರಾಯಣಪ್ಪ, 48 ವರ್ಷ, ನಾಯಕರು, ಹೋಟೆಲ್ ವ್ಯಾಪಾರ, ವಾಸ ತೋಸಮಾಕಲಹಳ್ಳಿ ಗ್ರಾಮ ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು, ಎಂದು ತಿಳಿಸಿದ್ದು, ಸದರಿ ಆಸಾಮಿಗಳನ್ನು  ವಿಚಾರಣೆ ಮಾಡಲಾಗಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ ನಂಬರ್ ಹೊಡೆದರೆ 70 ರೂಪಾಯಿಗಳು ಕೊಡುವುದಾಗಿ ಆಮೀಷ ತೋರಿಸಿ ಮಟ್ಕಾ ಚೀಟಿ ಬರೆದುಕೊಟ್ಟು ಹಣವನ್ನು ಪಡೆದುಕೊಳ್ಳುತ್ತಿದ್ದೆವು ಎಂದು ತಿಳಿಸಿದ್ದು, ನಂತರ ಸದರಿಯವರನ್ನು ಪಂಚಾಯ್ತಿದಾರರ ಸಮಕ್ಷಮ ಚೆಕ್ ಮಾಡಲಾಗಿ ದಸ್ತಗಿರ್ ರವರ ಬಳಿ ಒಂದು ಮಟ್ಕಾ ಚೀಟಿ, ಮಟ್ಕಾ ಚೀಟಿ ಬರೆದುಕೊಟ್ಟು ಬಂದಂತಹ ನಗದು ಹಣ ರೂ. 1300/- ರೂ ನೀಲಿ ಬಣ್ಣದ ಒಂದು ಬಾಲ್ ಪೆನ್ನು ಹಾಗೂ ಸುರೇಶ ರವರ ಬಳಿ  ಒಂದು ಮಟ್ಕಾ ಚೀಟಿ, ಮಟ್ಕಾ ಚೀಟಿ ಬರೆದುಕೊಟ್ಟು ಬಂದಂತಹ ನಗದು ಹಣ ರೂ. 1200/- ರೂ ನೀಲಿ ಬಣ್ಣದ ಒಂದು ಬಾಲ್ ಪೆನ್ನು ಇದ್ದು, ಒಟ್ಟು 2500- ರೂ ನಗದು ಹಣ ಎರಡು ಮಟ್ಕಾ ಚೀಟಿಗಳು ಹಾಗೂ ಎರಡು ಬಾಲ್ ಪಾಯಿಂಟ್ ಪೆನ್ನು ಇವುಗಳನ್ನು ಮದ್ಯಾಹ್ನ 12-30 ಗಂಟೆಯಿಂದ 13-30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಮಾಲನ್ನು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ 14-15 ಗಂಟೆಗೆ ವಾಪಾಸ್ ಬಂದು ಆರೋಪಿತರ ವಿರುದ್ದ ಠಾಣಾ ಮೊ.ಸಂ.43/2021 ಕಲಂ 78(1)(A)(iv)(vi) KP ACT ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತದೆ.

Last Updated: 23-02-2021 06:22 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080