Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.307/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:20.09.2021 ರಂದು ಸಂಜೆ 5-30 ಗಂಟೆಗೆ ಪಿಐ ಸಾಹೇಬರು ಅಸಲು ಪಂಚನಾಮೆ, ಮಾಲು ಮತ್ತು ಆರೋಪಿಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೆನೆಂದರೆ ದಿನಾಂಕ: 20.09.2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಗೂಳೂರು ಹೋಬಳಿ, ಜಿ.ಚರ್ಲೋಪಲ್ಲಿ ಗ್ರಾಮದ ಬಳಿಯಿರುವ ಬೆಟ್ಟದ ತಪ್ಪಲಿನಲ್ಲಿನ ಹೊಂಗೆ ಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವಾಗಿ ಇಟ್ಟು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಸಿಹೆಚ್ ಸಿ-158 ಖಲಂಧರ್ ಷರೀಫ್, ಸಿಹೆಚ್ ಸಿ-212 ಶ್ರೀನಾಥ್,  ಸಿಪಿಸಿ-387 ಮೋಹನ್ ಕುಮಾರ್, ಸಿಪಿಸಿ-344  ಮಹಂತೇಶ್ ಮತ್ತು ಜೀಪ್ ಚಾಲಕ ಎ.ಹೆಚ್ ಸಿ-57 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ಜೀಪಿನಲ್ಲಿ ಬಾಗೇಪಲ್ಲಿಪುರದ ಗೂಳೂರು ವೃತ್ತದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಧಾಳಿ ಮಾಡಲು ತಮ್ಮೊಂದಿಗೆ ಸಹಕರಿಸಿ ಧಾಳಿ ಕಾಲದಲ್ಲಿ ಪಂಚರಾಗಿ  ಹಾಜರಿದ್ದು ದಾಳಿಯ ಪಂಚನಾಮೆಗೆ ಸಹಕರಿಸಲು  ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ ನಾವುಗಳು ಮತ್ತು ಪಂಚರು ಸರ್ಕಾರಿ ಜೀಪ್ ಸಂಖ್ಯೆ ಕೆಎ 40 ಜಿ 1444 ರಲ್ಲಿ ಗುಟ್ಟಪಾಳ್ಯ ಮತ್ತು ಜಿ.ಚರ್ಲೋಪಲ್ಲಿಯ ಅಡ್ಡರಸ್ತೆಯಲ್ಲಿ ಜೀಪ್ ಅನ್ನು ನಿಲ್ಲಿಸಿ, ಎಲ್ಲರೂ ಜೀಪಿನಿಂದ ಇಳಿದು ಬೆಟ್ಟದ ಬಳಿ ಮಣ್ಣಿನ ದಾರಿಯಲ್ಲಿ ನಡೆದುಕೊಂಡು ಹೋಗಿ ಬೆಟ್ಟದ ತಪ್ಪಲಿಗೆ ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 3.40 ಗಂಟೆಗೆ ಹೋಗಿ ನಾವುಗಳು & ಪಂಚರು ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಹೊಂಗೆಮರದ ಕೆಳಗೆ ಕುಳಿತು ಹಣವನ್ನು ಪಣವಾಗಿ ಇಟ್ಟು, 100 ರೂ. ಅಂದರ್ಗೆ 100 ರೂ. ಬಾಹರ್ಗೆ ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು ಮಾಹಿತಿಯನ್ನು ಖಚಿತಪಡಿಸಿಕೊಂಡು, ನಾನು ನೀಡಿದ ಸೂಚನೆಯ ಮೇರೆಗೆ ಪೊಲೀಸ್ ಸಿಬ್ಬಂದಿಯರೆಲ್ಲರೂ ಒಟ್ಟಾಗಿ ಪಂಚರ ಸಮಕ್ಷಮ ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಸುತ್ತುವರೆದಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದವರನ್ನು ಓಡಿ ಹೋಗದಂತೆ ನಾವು ಸೂಚನೆ ನೀಡಿ ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಈಶ್ವರರೆಡ್ಡಿ ಬಿನ್ ಲೇಟ್ ಚಿನ್ನ ಮದ್ದನ್ನ, 60 ರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಗುಜ್ಜೇಪಲ್ಲಿ ಗ್ರಾಮ, ಪಾತಪಾಳ್ಯ ಹೋಬಳಿ, ಬಾಗೇಪಲ್ಲಿ ತಾಲ್ಲೂಕು 2) ಟಿ.ವಿ. ವೇಣುಗೋಪಾಲ ಬಿನ್ ಲೇಟ್ ಬಿ.ಹೆಚ್. ವೆಂಕಟರಮಣಪ್ಪ, 52 ವರ್ಷ, ನಾಯಕರು, ಜಿರಾಯ್ತಿ,  ವಾಸ: ಕೋರ್ಲಪರ್ತಿ ಗ್ರಾಮ, ಚಿಲಕಲಪರ್ತಿ ಹೋಬಳಿ, ಚಿಂತಾಮಣಿ ತಾಲ್ಲೂಕು 3) ಚಂದ್ರಶೇಖರ್ @ ಚಂದ್ರ ಬಿನ್ ಶ್ರೀನಿವಾಸ, 50 ವರ್ಷ, ಕಮ್ಮ ಜನಾಂಗ, ಜಿರಾಯ್ತಿ, ವಾಸ: ಕೊತ್ತಪಲ್ಲಿ ರಸ್ತೆ, ಯಂಗ್ ಇಂಡಿಯಾ ಶಾಲೆಯ ಬಳಿ, 7ನೇ ವಾರ್ಡ, ಬಾಗೇಪಲ್ಲಿ ಪುರ ಎಂತ ತಿಳಿಸಿರುತ್ತಾರೆ, ಸ್ಥಳದಲ್ಲಿದ್ದ ಮೇಲ್ಕಂಡ 3 ಜನ ಆರೋಪಿಗಳನ್ನು ವಶಕ್ಕೆ ಪಡೆದು, ಪಂಚಾಯ್ತಿದಾರರ ಸಮಕ್ಷಮ ಪರಿಶೀಲಿಸಲಾಗಿ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು 10,170/- ರೂ ಹಣವನ್ನು, ಸ್ಥಳದಲ್ಲಿ ಬಿದ್ದಿದ್ದ ಜೂಜಾಟವಾಡಲು ಬಳಸಿದ್ದ 52 ಇಸ್ಪೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಪಂಚನಾಮೆಯ ಮೂಲಕ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು, ಅಸಲು ಧಾಳಿ ಪಂಚನಾಮೆ, ಮಾಲು & ಆರೋಪಿತರನ್ನು ಠಾಣೆಯಲ್ಲಿ ಸಂಜೆ 5-30 ಗಂಟೆಗೆ ಹಾಜರುಪಡಿಸುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ ವರಧಿಯನ್ನು ಪಡೆದುಕೊಂಡು ಠಾಣಾ ಎನ್ ಸಿ ಆರ್ ನಂ-277/2021 ರೀತ್ಯಾ ದಾಖಲಿಸಿರುತ್ತೆ.  ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:21-09-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.308/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ: 21/09/2021 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿದಾರರಾದ ಜಾವೀದ್ ಬಿನ್ ಲೇಟ್ ಉಸ್ಮಾನ್ ಸಾಬ್, 33 ವರ್ಷ, ಮುಸ್ಲಿಂ ಜನಾಂಗ, ಚಾಲಕ ಕೆಲಸ, ಕುಂದಲಗುರ್ಕಿ ಗ್ರಾಮ  ಮತ್ತು ಪೋಸ್ಟ್, ಶಿಡ್ಲಘಟ್ಟ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ ಉಸ್ಮಾನ್ ಸಾಬ್ ಮತ್ತು ತಾಯಿ ರಮೀಜಾ ಬೀ ರವರಿಗೆ 3 ಜನ ಮಕ್ಕಳು ಇದ್ದು, 1ನೇ ಮೌಲಾ, 2ನೇ ನಾನು, 3ನೇ ಜಬೀವುಲ್ಲಾ ಆಗಿರುತ್ತೇವೆ, ನನ್ನ ತಮ್ಮನಾದ ಜಬೀವುಲ್ಲಾ ರವರು ಚಾಲಕ ವೃತ್ತಿ ಮಾಡುತ್ತಿದ್ದರು, ಅವರಿಗೆ ಇನ್ನು ಮದುವೆಯಾಗಿರುವುದಿಲ್ಲ, ಉಳಿದ ನಮ್ಮಿಬ್ಬರಿಗೂ ಮದುವೆಯಾಗಿರುತ್ತೆ, ಈ ದಿನ ದಿನಾಂಕ:21/09/2021 ರಂದು ಮದ್ಯಾಹ್ನ ಸುಮಾರು 1:00 ಗಂಟೆ ಸಮಯದಲ್ಲಿ ನಮ್ಮ  ಗ್ರಾಮದ ಮಣಿಕಂಠ ಬಿನ್ ಲೇಟ್ ಬ್ರಹ್ಮಾಚಾರಿ ರವರ ಬಾಬತ್ತು ಕೆಎ 05 ಹೆಚ್ಎಸ್ 2000 ಬಜಾಜ್ ಡಿಸ್ಕವರಿ ದ್ವಿ ಚಕ್ರ  ವಾಹನದಲ್ಲಿ ನನ್ನ ತಮ್ಮ ಜಬೀವುಲ್ಲಾ ಮತ್ತು ಮಣಿಕಂಠ ರವರು ಬಾಗೇಪಲ್ಲಿನಲ್ಲಿರುವ ನಮ್ಮ ಸಂಬಂಧಿಕರಾದ ಇಮಾಮ್ ಸಾಬ್ ರವರ ಮನೆಗೆ ಕೆಲಸದ ಪ್ರಯುಕ್ತ ಬಂದಿರುತ್ತಾರೆ, ಸಂಜೆ ಸುಮಾರು 6:00 ಗಂಟೆಗೆ ನನ್ನ ತಮ್ಮನ ಪೋನಿನಿಂದ ಯಾರೂ ದೂರವಾಣಿ ಕರೆ ಮಾಡಿ, ಬಾಗೇಪಲ್ಲಿ ತಾಲ್ಲೂಕು, ಯಲ್ಲಂಪಲ್ಲಿ ಗ್ರಾಮದ ಬಳಿ ಅಪಘಾತವಾಗಿ ಜಬೀವುಲ್ಲಾ ರವರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಮತ್ತು ಮಣಿಕಂಠ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿರುವುದಾಗಿ ತಿಳಿಸಿದರು, ತಕ್ಷಣ ನಾನು ಮತ್ತು ನಮ್ಮ ಚಿಕ್ಕಪ್ಪನ ಮಗ ರಹಮತ್ತುಲ್ಲಾ ಮತ್ತು ಸೈಯದ್ ಇಮಾಮ್ಸಾಬ್ ರವರು ಬಂದು ನೋಡಲಾಗಿ ವಿಚಾರ ನಿಜವಾಗಿತ್ತು, ಅಪಘಾತದ ಬಗ್ಗೆ ವಿಚಾರ ತಿಳಿಯಲಾಗಿ ನನ್ನ ತಮ್ಮ ಜಭೀವುಲ್ಲಾ ಮತ್ತು ಮಣಿಕಂಠ ರವರು ಬಾಗೇಪಲ್ಲಿಯಲ್ಲಿ ಕೆಲಸ ಮುಗಿಸಿಕೊಂಡು ನಮ್ಮ ಗ್ರಾಮಕ್ಕೆ ವಾಪಸ್ಸು ಬರಲು ಅದೇ ದ್ವಿ ಚಕ್ರ ವಾಹನದಲ್ಲಿ ಜಬೀವುಲ್ಲಾ ರವರು ದ್ವಿ ಚಕ್ರ ವಾಹನವನ್ನು ಸವಾರ ಮಾಡಿಕೊಂಡು ಮಣಿಕಂಠ ರವರನ್ನು ದ್ವಿ ಚಕ್ರ ವಾಹನದ ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ಬಾಗೇಪಲ್ಲಿ - ಮಿಟ್ಟೇಮರಿ ರಸ್ತೆಯಲ್ಲಿ ಹೋಗುವಾಗ ಸಂಜೆ ಸುಮಾರು 5:30 ಗಂಟೆ ಸಮಯದಲ್ಲಿ ಬಾಗೇಪಲ್ಲಿ ತಾಲ್ಲೂಕು ಯಲ್ಲಂಪಲ್ಲಿ ಗ್ರಾಮದ ಬಳಿ ಹೋಗುತ್ತಿದ್ದಾಗ ಮಿಟ್ಟೇಮರಿ ಕಡೆಯಿಂದ ಕೆಎ 40-2338 ಸರಕು ಸಾಗಾಣಿಕೆ ಟೆಂಪೂವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎದುರಿಗೆ ನನ್ನ ತಮ್ಮ ಸವಾರ ಮಾಡಿಕೊಂಡು ಹೋಗುತ್ತಿದ್ದ ಕೆಎ 05 ಹೆಚ್ಎಸ್ 2000 ಬಜಾಜ್ ಡಿಸ್ಕವರಿ ದ್ವಿ ಚಕ್ರ  ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು ಅದರ ಪರಿಣಾಮ ದ್ವಿ ಚಕ್ರ ವಾಹನ ಜಖಂಗೊಂಡು ನನ್ನ ತಮ್ಮನಾದ ಜಭೀವುಲ್ಲಾ ರವರಿಗೆ ಎಡಕಾಲಿಗೆ, ಹಣೆಗೆ, ಮತ್ತು ಎರಡೂ ಕೈಗಳ ಮೇಲೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ, ಮಣಿಕಂಠ ರವರಿಗೆ ಎರಡೂ ಕಾಲುಗಳಿಗೆ, ಹೊಟ್ಟೆಗೆ ಮತ್ತು ಮೈಮೇಲೆ ತೀವ್ರ ತರಹದ ರಕ್ತಗಾಯಗಳಾಗಿರುವುದಾಗಿ ಮಣಿಕಂಠ ರವರನ್ನು ಚಿಕಿತ್ಸೆಯ ಸಲುವಾಗಿ ಬಾಗೇಪಲ್ಲಿ ಸಕರ್ಾರಿ ಅಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಬಗ್ಗೆ ದಾಖಲಿಸಿ ಚಿಕಿತ್ಸೆಪಡಿಸುತ್ತಿದ್ದಾಗ ರಾತ್ರಿ ಸುಮಾರು 8:10 ಗಂಟೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ತಿಳಿಯಿತು, ನನ್ನ ತಮ್ಮನ ಮೃತದೇಹವನ್ನು ಬಾಗೇಪಲ್ಲಿ ಸರ್ಕಾರಿ ಅಸ್ಪತ್ರೆಗೆ ಶವಗಾರಕ್ಕೆ ಸಾಗಿಸಿರುತ್ತೆ, ಈ ಅಪಘಾತಕ್ಕೆ ಕಾರಣವಾದ ಕೆಎ 40-2338 ಸರಕು ಸಾಗಾಣಿಕೆ ಟೆಂಪೂ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.131/2021 ಕಲಂ. 15(A),32(3) ಕೆ.ಇ ಆಕ್ಟ್:-

     ಈ ದಿನ ದಿನಾಂಕ 21/09/2021 ರಂದು  ಸಂಜೆ 05-00 ಗಂಟೆಗೆ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಹೆಚ್.ಸಿ 110 ಶ್ರೀ.ವೇಣು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತಮ್ಮ ಠಾಣೆಯ ಪಿ.ಐ ಶ್ರೀ.ರಾಜಣ್ಣ ರವರು ತನ್ನ ಹಾಗೂ ತಮ್ಮ ಠಾಣೆಯ ಸಿಹೆಚ್ ಸಿ 198 ಮಂಜುನಾಥ ರವರುಗಳಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಪತ್ತೆಯ ಕಾರ್ಯಕ್ಕೆ ನೇಮಿಸಿದ್ದು ಅದರಂತೆ ಈ ದಿನ ದಿನಾಂಕ 21/09/2021 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಬಟ್ಲಹಳ್ಳಿ ಗ್ರಾಮದಲ್ಲಿ ತಾವು ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಂದ ಬಂದಂತಹ ಖಚಿತ ಮಾಹಿತಿಯಂತೆ ಪಂಚಾಯ್ತಿದಾರರೊಂದಿಗೆ ಬಟ್ಲಹಳ್ಳಿ ಗ್ರಾಮದ ಜನತಾ ಕಾಲೋನಿ ವೆಂಕಟೇಶ್ ಬಿನ್ ಲೇಟ್ ವೆಂಕಟರೆಡ್ಡಿ ಎಂಬುವರು ತಮ್ಮ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು ತಾವುಗಳು ಮೇಲ್ಕಂಡ ಸ್ಥಳದಲ್ಲಿ ಪಂಚರೊಂದಿಗೆ ದಾಳಿಮಾಡಲಾಗಿ ಸ್ಥಳದಲ್ಲಿ ಇದ್ದವರು ಓಡಿ ಹೋಗಿದ್ದು ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಮಾಡಲು ಸ್ಥಳಾವಕಾಶಮಾಡಿಕೊಟ್ಟಿರುವ ಬಗ್ಗೆ ವಿಚಾರಿಸಲಾಗಿ ವೆಂಕಟೇಶ್ ಬಿನ್ ಲೇಟ್ ವೆಂಕಟರೆಡ್ಡಿ, 30ವರ್ಷ, ಒಕ್ಕಲಿಗರು, ಕೂಲಿ ಕೆಲಸ, ಜನತಾ ಕಾಲೋನಿ ಬಟ್ಲಹಳ್ಳಿ ಎಂದು ತಿಳಿಸಿದ್ದು ಸ್ಥಳದಲ್ಲಿ ಪರಿಶೀಲಿಸಲಾಗಿ ಹೈವಾರ್ಡಸ್ ಚೇರ್ಸ್ ವಿಸ್ಕಿಯ 90 ಎಂ.ಎಲ್ ನ ಮದ್ಯ ತುಂಬಿದ್ದ 10 ಟೆಟ್ರಾ ಪ್ಯಾಕೆಟ್ ಗಳು, ಡಬಲ್ ಕಿಕ್ ವಿಸ್ಕಿ 90 ಎಂ.ಎಲ್ ನ ಮದ್ಯ ತುಂಬಿದ್ದ 10 ಪ್ಲಾಸ್ಟಿಕ್ ಬಾಟಲಿಗಳು, 2 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, ಒಂದು ಲೀಟರ್ ನ ಒಂದು ಖಾಲಿ ವಾಟರ್ ಬಾಟಲಿ, ಹೈವಾರ್ಡ್ಸ್ ಚೇರ್ಸ್ ವಿಸ್ಕಿಯ 2 ಖಾಲಿ ಟೆಟ್ರಾ ಪ್ಯಾಕೆಟ್ ಗಳು ಇರುತ್ತೆ. ವಶಪಡಿಸಿಕೊಂಡ ಮದ್ಯವು ಒಟ್ಟು ಒಂದು ಲೀಟರ್ 800 ಎಂ.ಎಲ್ ಇದ್ದು ಇದರ ಬೆಲೆ ಒಟ್ಟು 624 ರೂಗಳಾಗಿರುತ್ತೆ. ಸ್ಥಳಾವಕಾಶಮಾಡಿಕೊಟ್ಟ ಯಾವುದೇ ಪರವಾನಿಗೆ ಪಡೆಯದೆ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಮಾಡಲು ಸ್ಥಳಾವಕಾಶಮಾಡಿಕೊಟ್ಟ ಆಸಾಮಿಯ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಆರೋಪಿ ಮತ್ತು ಅಮಾನತ್ತುಪಡಿಸಿಕೊಂಡ ಮಾಲು ಮತ್ತು ಪಂಚನಾಮೆಯೊಂದಿಗೆ ನೀಡಿರುವ ದೂರಾಗಿರುತ್ತೆ.

 

4. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.132/2021 ಕಲಂ. 87 ಕೆ.ಪಿ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರಿ.ಆರ್.ನಾರಾಯಣಸ್ವಾಮಿ ಆದ ನಾನು  ನಿವೇದಿಸಿಕೊಳ್ಳು ವುದೇನೆಂದರೆ, ಈ ದಿನ ದಿನಾಂಕ:21/09/2021 ರಂದು ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಠಾಣಾ ವ್ಯಾಪ್ತಿಯ ವೈ.ಗೊಲ್ಲಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಠಾಣೆಯಲ್ಲಿದ್ದ ಸಿಬ್ಬಂದಿಯವರಾದ  ಹೆಚ್ ಸಿ -36  ಶ್ರೀ.ವಿಜಯ್ ಕುಮಾರ್, ಹೆಚ್.ಸಿ 98 ವಿಶ್ವನಾಥ, ಪಿ.ಸಿ 291 ಗಂಗಾಧರ,ಪಿ.ಸಿ 415 ಪರಸಪ್ಪ ತ್ಯಾಗರ್ತಿ, ಪಿಸಿ 262 ಅಂಬರೀಶ್ ಹಾಗೂ ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಮತ್ತು ದ್ವಿಚಕ್ರ ವಾಹನಗಳಲ್ಲಿ ವೈ.ಗೊಲ್ಲಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ನಾನು ಮತ್ತು ಸಿಬ್ಬಂದಿಯವರು ವೈ.ಗೊಲ್ಲಹಳ್ಳಿ ಗ್ರಾಮದ ಕೆರೆಯ ಅಂಗಳಕ್ಕೆ ಸಂಜೆ 04-00 ಗಂಟೆಗೆ ಹೋಗಿ ದೂರದಲ್ಲಿ ಜೀಪ್ ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಜಾಲಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಕೆರೆಯ ಅಂಗಳದಲ್ಲಿ ಇರುವ ಜಾಲಿ ಮರದ ಕೆಳಗಡೆ ಗುಂಪಾಗಿ ವೃತ್ತಾಕಾರವಾಗಿ ಕುಳಿತು ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸದರಿಯವರನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಎಲ್ಲಿಯೂ ಹೋಗದಂತೆ ಸೂಚಿಸಿದಾಗ  ಅಲ್ಲಿದ್ದ ಆಸಾಮಿಗಳು ಓಡಿ ಹೋಗಲು ಯತ್ನಿಸಿದ್ದು ಸದರಿಯವರುಗಳನ್ನು ಸಿಬ್ಬಂದಿಯ ಸಹಾಯದಿಂದ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸಗಳನ್ನು ವಿಚಾರಿಸಲಾಗಿ 1) ಶ್ರೀ.ಗಣೇಶ್ ಬಿನ್ ವೆಂಕಟರವಣಪ್ಪ,28 ವರ್ಷ,ಆದಿಕರ್ನಾಟಕ ಜನಾಂಗ,ಕೂಲಿಕೆಲಸ,ವಾಸ ವೈ.ಗೊಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು 9535804282 2) ಶ್ರೀ.ರಾಜು ಬಿನ್ ಕೋನಪ್ಪ 29 ವರ್ಷ,ನಾಯಕ ಜನಾಂಗ,ಕೂಲಿಕೆಲಸ,ವಾಸ ವೈ.ಗೊಲ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ,ನಂ-7892494062 3) ನರಸಿಂಹ ಬಿನ್ ವೆಂಕಟರವಣಪ್ಪ 27 ವರ್ಷ,ಆದಿಕರ್ನಾಟಕ ಜನಾಂಗ,ಕೂಲಿಕೆಲಸ,ವಾಸ ವೈ,ಗೊಲ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ.ನಂ-9535837600 4) ವೆಂಕಟೇಶ್ ಬಿನ್ ಗಂಗುಲಪ್ಪ 31 ವರ್ಷ,ಆದಿಕರ್ನಾಟಕ ಜನಾಂಗ,ಕೂಲಿಕೆಲಸ,ವಾಸ ಆರಮಾಕಲಹಳ್ಳಿ ಗ್ರಾಮ ಶ್ರೀನಿವಾಸಪುರ ತಾಲ್ಲೂಕು ಮೊ.ನಂ 9108906553 5) ಸುಧಾಕರ ಬಿನ್ ನರಸಪ್ಪ 30 ವರ್ಷ,ನಾಯಕ ಜನಾಂಗ,ಚಾಲಕ ವೃತ್ತಿ ವಾಸ ವೈ.ಗೊಲ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು 6) ವೆಂಕಟರವಣಪ್ಪ ಬಿನ್ ಲೇಟ್ ಚಿನ್ನಪ್ಪ 45 ವರ್ಷ,ವಕ್ಕಲಿಗರು,ಜಿರಾಯ್ತಿ,ವಾಸ ವೈ.ಗೊಲ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು 7)  ಪ್ರಶಾಂತ ಬಿನ್ ಶ್ರೀನಿವಾಸರೆಡ್ಡಿ 28 ವರ್ಷ,ವಕ್ಕಲಿಗರು,ಚಾಲಕ ವೃತ್ತಿ,ವಾಸ ವೈ.ಗೊಲ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು 8) ಶ್ರೀಕುಮಾರ ಬಿನ್ ಶ್ರೀನಿವಾಸರೆಡ್ಡಿ 28 ವರ್ಷ ವಕ್ಕಲಿಗರು ಚಿಲ್ಲರೆ ಅಂಗಡಿ ವ್ಯಾಪಾರ ವಾಸ ವೈ.ಗೊಲ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಬಿಳಿ ಗೋಣಿಚೀಲವನ್ನು ನೆಲದಲ್ಲಿ ಹಾಸಿದ್ದು, ಸದರಿ ಗೋಣಿಚೀಲದ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆಗಳು ಇದ್ದು, ಅವುಗಳನ್ನು  ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 3500 ರೂಗಳಿದ್ದು ಇಸ್ಪೀಟ್ ಜೂಜಾಟ ಆಡುತ್ತಿದ್ದ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, ಅವರು ಇಸ್ಪೀಟ್ ಜೂಜಾಟಕ್ಕೆ ಪಣವಾಗಿಟ್ಟಿದ್ದ, 3500/- ರೂಗಳ ನಗದು ಹಣವನ್ನು, ಒಂದು ಗೋಣಿಚೀಲ ಹಾಗೂ 52 ಇಸ್ಟೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಸಂಜೆ 04-15 ಗಂಟೆಯಿಂದ ಸಂಜೆ 5-15 ಗಂಟೆಯವರೆಗೆ ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಸಂಜೆ 6-00 ಗಂಟೆಗೆ ಠಾಣೆಗೆ ವಾಪಸ್ ಬಂದು ಸ್ವತಃ ವರದಿಯ ಮೇರೆಗೆ ಠಾಣೆಯ ಎನ್ ಸಿ ಆರ್ ನಂ: 188/2021 ರಂತೆ ದಾಖಲಿಸಿಕೊಂಡಿರುತ್ತೆ. ಈ ಪ್ರಕರಣದ ಆರೋಪಿಗಳು ಮತ್ತು ಮಾಲಿನ ವಿರುದ್ದ ಕ್ರಿಮಿನಾಲ್ ಪ್ರಕರಣ ದಾಖಲು ಮಾಡಲು ಅನುಮತಿಯನ್ನು ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿ ಪಿ.ಸಿ 388 ಗದ್ದೆಪ್ಪ ಶಿವಪುರ ರವರ ಮೂಲಕ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡು ಮದ್ಯಾಹ್ನ 2:30 ಗಂಟೆಗೆ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.90/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:21/09/2021 ರಂದು  ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ಚೇಳೂರು ವೃತ್ತ ಕಛೇರಿಯ CHC-209 ರವರು  ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಪಂಚನಾಮೆ ಮಾಲು ಮತ್ತು ಆರೋಪಿಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:21-09-2021 ರಂದು ಬೆಳಗ್ಗೆ 10-00 ಗಂಟೆಯಲ್ಲಿ ಕರ್ತವ್ಯದಲ್ಲಿದ್ದಾಗ ಮಾನ್ಯ ಸಿ.ಪಿ.ಐ. ಚೇಳೂರು ವೃತ್ತ ರವರು ನನ್ನನ್ನು ಕರೆದು ಬಾಗೇಪಲ್ಲಿ ತಾಲ್ಲೂಕು ಪುಲಿಗಲ್  ಕ್ರಾಸ್ ಬಳಿ ಚೇಳೂರು ಗ್ರಾಮದ ಪದ್ಮನಾಭ ನಗರದ ವಾಸಿ ಮರಿಮಾಕಲ ನರಸಿಂಹಪ್ಪ ಬಿನ್ ವೆಂಕಟರಾಮಪ್ಪ ರವರು ಪುಲಿಗಲ್ ಕ್ರಾಸ್ ನಲ್ಲಿರುವ ತಂಗುದಾಣದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಮಗೆ ಮಾಹಿತಿ ಬಂದಿದ್ದು, ದಾಳಿ ಮಾಡಲು ನನ್ನನ್ನು ಮತ್ತು ಸಿಪಿಸಿ-281 ಶಂಕ್ರಪ್ಪ ಕಿರವಾಡಿ ರವರನ್ನು ಕಳುಹಿಸಿಕೊಟ್ಟಿದ್ದು, ಅದರಂತೆ ನಾವಿಬ್ಬರೂ ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ಮರಿಮಾಕಲ ನರಸಿಂಹಪ್ಪ ಬಿನ್ ವೆಂಕಟರಾಮಪ್ಪ ರವರು ತಂಗುದಾಣದಲ್ಲಿ  ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ನಾವುಗಳು ಅಲ್ಲಿಗೆ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಅಲ್ಲಿಂದ ಓಡಿ ಹೋಗಿದ್ದು, ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿದ್ದವನ ಹೆಸರು ಮತ್ತು ವಿಳಾಸ ಕೇಳಲಾಗಿ ಮರಿಮಾಕಲ ನರಸಿಂಹಪ್ಪ ಬಿನ್ ವೆಂಕಟರಾಮಪ್ಪ, 42 ವರ್ಷ, ನಾಯಕ ಜನಾಂಗ,  ವ್ಯಾಪಾರ, ವಾಸ:ಚೇಳೂರು ಗ್ರಾಮ, (ಪದ್ಮನಾಭ ನಗರ) ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್.ನ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ 15 ಟೆಟ್ರಾ ಪ್ಯಾಕೆಟ್ಗಳು ಇದ್ದು, (1 ಲೀಟರ್ 350 ಎಂ.ಎಲ್, ಅದರ ಬೆಲೆ 525/-ರೂಗಳು), ಒಂದು ಲೀಟರ್ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಇದ್ದು  ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಬೆಳಗ್ಗೆ 11-00 ಗಂಟೆಯಿಂದ 11-45 ಗಂಟೆಯವರೆಗ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ ಆರೋಪಿ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ   ಮರಿಮಾಕಲ ನರಸಿಂಹಪ್ಪ ಬಿನ್ ವೆಂಕಟರಾಮಪ್ಪ  ರವರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂ 97/2021 ರೀತ್ಯಾ ದಾಖಲಿಸಿಕೊಂಡಿದ್ದು  ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

 

6. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.164/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 21/09/2021 ರಂದು ಸಂಜೆ 4-10 ಗಂಟೆಯ ಸಮಯದಲ್ಲಿ ಶ್ರೀ. ಬಿ.ಪಿ.ಮಂಜು ಪಿ.ಎಸ್.ಐ. ಗ್ರಾಮಾಂತರ  ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಯಲ್ಲಿ ನೀಡಿದ  ದೂರಿನ  ಸಾರಾಂಶವೇನೆಂದರೆ  ದಿನಾಂಕ: 21/09/2021 ರಂದು  ಸಂಜೆ 4-00 ಗಂಟೆಯಲ್ಲಿ  ತಾನು ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದಿಗೆ ಸೇರಿದ  ಬಾದಗಾನಹಳ್ಳಿ  ಗ್ರಾಮದ  ವಾಸಿ ವೆಂಕಟೇಶ ಬಿನ್ ನಾರಾಯಣಪ್ಪ 46ವರ್ಷ ಬಲಿಜಿಗರು ಚಿಲ್ಲರೆ ರವರು ತನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿ ಕೊಟ್ಟಿರುವುದಾಗಿ  ಖಚಿತ ಮಾಹಿತಿ ಬಂದಿರುತ್ತದೆ.  ಸದರಿ ಆಸಾಮಿಯ ವಿರುದ್ದ  ಕಲಂ:15(ಎ). 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ  ದಾಖಲಿಸಲು ಸೂಚಿಸಿ ನೀಡಿದ ದೂರಿನ  ಮೇರೆಗೆ ಈ  ಪ್ರ ವ ವರದಿ.

 

7. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.71/2021 ಕಲಂ. 420,464,456,466,467,471,473,34 ಐ.ಪಿ.ಸಿ:-

     ದಿನಾಂಕ:-21/09/2021 ರಂದು ಪಿರ್ಯಾಧಿದಾರರಾದ ಶ್ರೀ ಗಣಪತಿ ಶಾಸ್ತ್ರೀ, ಮಾನ್ಯ ತಹಶೀಲ್ದಾರ್ ಚಿಕ್ಕಬಳ್ಳಾಪುರ ರವರು ತಮ್ಮ ಕಛೇರಿಯ ಟಪಾಲಿನ ಮೂಲಕ ನೀಡಿರುವ ದೂರಿನ ಸಾರಾಂಶವೇನೆಂದರೆ ಕಸಬಾ ಹೋಬಳಿ ಬೈಯಪ್ಪನಹಳ್ಳಿ ಗ್ರಾಮದ ಸ.ನಂ 29 ರ ಪೈಕಿ ಅರ್ಜುನಪ್ಪ ಬಿನ್ ರಾಮಪ್ಪ ರವರಿಗೆ ಎಮ್ ಅರ್ ನಂ 04/85-86 ರಂತೆ 3-10 ಗುಂಟೆ ನಟರಾಜು ಬಿನ್ ವೆಂಕಟರಾಯಪ್ಪ  ರವರಿಗೆ ಎಮ್ ಅರ್ ನಂ 05/85-86 ರಂತೆ 3-10 ಗುಂಟೆ, ನರಸಮ್ಮ ಕೋಂ ವೆಂಕಟರೆಡ್ಡಿ ರವರಿಗೆ ಎಮ್ ಅರ್ ನಂ 06/85-86 3-00 ಎಕರೆ, ಡಿವಿ ಸರೋಜಮ್ಮ ಕೋಂ ಲಕ್ಷ್ಮೀನಾರಾಯಣರೆಡ್ಡಿ ರವರಿಗೆ ಎಮ್ ಅರ್ ನಂ 05/85-86 3-20 ಗುಂಟೆ, ಲಕ್ಷ್ಮೀನಾರಾಯಣ ಬಿನ್ ಆಶ್ವತ್ಥಪ್ಪ ರವರಿಗೆ ಎಮ್ ಅರ್ ನಂ 05/85-86 ರಂತೆ 3-10 ಗುಂಟೆ ಜಮೀನು ದರಕಾಸ್ತು ಮೂಲಕ ಮಂಜೂರಾಗಿ ಮೇಲ್ಕಂಡ ಮ್ಯುಟೇಷನ್ ಗಳಂತೆ ಸಾಗುವಳಿ ಚೀಟಿಯಂತೆ ಖಾತೆ ಬದಲಾವಣೆಯಾಗಿ ಕೈ ಬರಹದ ಪಹಣಿಯಲ್ಲಿ ನಮೂದಿದ್ದು. ಗಣಕೀಕೃತ ಪಹಣಿಯಲ್ಲಿ ಕೈ ಬಿಟ್ಟರುತ್ತದೆ. ಅದ್ದರಿಂದ ಮ್ಯುಟೇಷನ್ ನಂತೆ ಪಹಣಿ ಇಂಡೀಕರಣ ಮಾಡಿಕೊಡುವಂತೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಮೂಲ ಮಂಜೂರಾತಿ ಕಡತವನ್ನು ಪರಿಶೀಲಿಸಲಾಗಿ ಪ್ರಸ್ತಾಪಿತ ಬೈಯಪ್ಪನಹಳ್ಳಿ ಗ್ರಾಮದ ಸ.ನಂ 29 ರಲ್ಲಿ ಒಟ್ಟು 41.00 ಎಕರೆ ಸರ್ಕಾರಿ ಗೋಮಾಳ ಜಮೀನಿಗೆ ಸಂಬಂಧಿಸಿದ ಮೂಲ ಮಂಜೂರಿ ಕಡತ ಸಂಖ್ಯೆ ಎಲ್ ಎನ್ ಡಿ ಟಿ ಟಿ /99/8-82 ರಂತೆ ಲಕ್ಷ್ಮೀನಾರಾಯಣ ಬಿನ್ ಅಶ್ವತ್ಥಪ್ಪ ರವರಿಗೆ 3-10 ಎಕರೆ ವಿಶ್ವನಾಥರೆಡ್ಡಿ ಬಿನ್ ಅಶ್ವತ್ಥನಾರಾಯಣರೆಡ್ಡಿ ರವರಿಗೆ 3-20 ಎಕರೆ, ಡಿ.ವಿ ಸರೋಜಮ್ಮ ಕೊಂ ಲಕ್ಷ್ಮೀನಾರಾಯಣರೆಡ್ಡಿ ರವರಿಗೆ 3-20  ಎಕರೆ, ನಟರಾಜ ಬಿನ್ ವೆಂಕಟರಾಯಪ್ಪ ರವರಿಗೆ 3-10 ಎಕರೆ , ನರಸಮ್ಮ ಕೋಂ ವೆಂಕಟರೆಡ್ಡಿ ರವರಿಗೆ 3-00 ಎಕರೆ ಜಮೀನು ಮಂಜೂರು ಮಾಡಿರುವುದಾಗಿ ಸಾಗುವಳಿ ಚೀಟಿ ನೀಡಿರುತ್ತಾರೆ. ಅದರಂತೆ ಖಾತೆ ಅಗಿರುವ ಬಗ್ಗೆ 1994-95 ನೇ ಸಾಲಿನ ಕೈ ಬರಹ ಪಹಣಿ ಪ್ರತಿಯಲ್ಲಿ ಕಂಡು ಬಂದಿರುತ್ತದೆ. ಬೈಯಪ್ಪನಹಳ್ಳಿ ಗ್ರಾಮ ಸ.ನಂ 29 ಕ್ಕೆ ಸಂಬಂದಿಸಿದಂತೆ ಕಛೇರಿಯಲ್ಲಿನ ದಾಖಲಾತಿಗಳನ್ನು ಪರಿಶೀಲಿಸಲಾಗಿ ಈ ಕೆಳಕಂಡ ನೂನ್ಯತೆಗಳು ಕಂಡು ಬಂದಿರುತ್ತದೆ. 1989-90 ನೇ ಸಾಲಿನಲ್ಲಿ 10 ಪಲಾನುಭವಿಗಳ ಹೆಸರು ಸ.ನಂ 29 ರಲ್ಲಿ ಇರುತ್ತದೆ. ಮತ್ತು ಸ.ನಂ 29 ರಲ್ಲಿ 41 ಎಕರೆ ಸರ್ಕಾರಿ ಗೋಮಾಳ ಎಂಬುದಾಗಿ ನಮೂದಾಗಿದೆ. ಅದರೆ 1989-90 ನೇ ಸಾಲಿನ ಪಹಣಿ ಬುಕ್ ನಲ್ಲಿ ಒಟ್ಟು 120 ಪುಟಗಳಿದ್ದು 29 ನೇ ಪುಟದಲ್ಲಿ ಗೋಮಾಳ ಜಮೀನು ಎಂದು ನಮೂದಿದ್ದು ಎಮ್ ಅರ್ ನಂ 07/91-92 ರಂತೆ 20 ಎಕರೆ ವಿಲೆಯಾಗಿರುತ್ತದೆ ಎಂದು ನಮೂದಿಸಿದ್ದು ನಂತರ ಅದೇ ಪಹಣಿಯ ಮೇಲ್ಗಾಗದಲ್ಲಿ ಸೀಪೇಜ್ ನಂ 114 ಎಂದು ನಮೂದಿರುತ್ತದೆ, ಪುಟ ಸಂಖ್ಯೆ 114 ನೇ ಪುಟದಲ್ಲಿ 10 ಜನ ಪಲಾನುಭವಿಗಳ ಹೆಸರು ನಮೂದಿರುತ್ತದೆ. ಪುಟ ಸಂಖ್ಯೆ 38 ರಲ್ಲಿ ಸರ್ಕಾರಿ ಗೋಮಾಳ ಖರಾಬು ಎಂದು ನಮೂದಿರುವ ಹಸ್ತಾಕ್ಷರಕ್ಕು ಪುಟ ಸಂಖ್ಯೆ 114 ರಲ್ಲಿ ಎಮ್ ಅರ್ ನಂ 02/89-90 ರಂತೆ 10 ಜನರಿಗೆ ಪಹಣಿ ಕಾಲಂ 9 ರಲ್ಲಿ 10 ಜನರ ಹೆಸರಿರುವ ಪುಟಸಂಖ್ಯೆ ಹಸ್ತಾಕ್ಷರಕ್ಕು ತಾಳೆ ಇರುವುದಿಲ್ಲ. 1989-90 ನೇ ಸಾಲಿನಲ್ಲಿ 10 ಜನರ ಹೆಸರು ಪಹಣಿಯಲ್ಲಿ ನಮೂದಿರುತ್ತದೆ. ಅದರೆ ಸದರಿ ರವರಿಗೆ ಮಂಜೂರಾಗಿರುವ ಬಗ್ಗೆ ಎಮ್ ಅರ್ ವಹಿಗಳಲ್ಲಿ ದರಖಾಸ್ತು ಅರ್ಜಿಗಳ ವಹಿಗಳಲ್ಲಿ ಹಾಗೂ ವಿತರಣಾ ವಹಿಯಲ್ಲಿಯೂ ಸಹಾ ನಮೂದಿರುವುದಿಲ್ಲ. ಹಾಗೂ ಸದರಿ ಸಾಲಿನ ಪಹಣಿ ಪುಸ್ತಕದಲ್ಲಿ ಕೈ ಬರಹ (Handwriting) ಷಾಹಿ ಬದಲಾವಣೆ (ink change) ಪುಟ ಸಂಖ್ಯೆ ಮುಂದುವರೆಯದಿರುವುದು ಈ ಎಲ್ಲಾ ನ್ಯೂನ್ಯತೆಗಳು ಕಂಡು ಬಂದಿರುತ್ತದೆ. 1994-95 ನೇ ಸಾಲಿನ ಪಹಣಿ ಬುಕ್ ನಲ್ಲಿ ಒಟ್ಟು 126 ಪುಟಗಳಿದ್ದು 39 ನೇ ಪುಟದಲ್ಲಿ ಸರ್ಕಾರಿ ಗೋಮಾಳ ಖರಾಬು ಸಿ ಮತ್ತು ಡಿ ವರ್ಗದ ಜಮೀನಿನನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವಹಿಸಿರುತ್ತೆ. ಹಾಗೂ ಎಮ್ ಅರ್ 01/96-97 ರಂತೆ 20 ಎಕರೆ ವಿಲೆಯಾಗಿರುತ್ತದೆ ಎಂದು ನಮೂದಿಸಿದ್ದು ನಂತರ ಅದೇ ಪಹಣಿಯ ಮೇಲ್ಬಾಗದಲ್ಲಿ ಸೀಪೇಜ್ ನಂ 117 ಎಂದು ನಮೂದಿರುತ್ತದೆ. ಪುಟ ಸಂಖ್ಯೆ 39 ರಲ್ಲಿ ಸರ್ಕಾರಿ ಗೋಮಾಳ ಖರಾಬು ಎಂದು ನಮೂದಿದ್ದು 117 ನೇ ಪುಟದಲ್ಲಿ 10 ಜನ ಪಲಾನುಭವಿಗಳ ಹೆಸರು ನಮೂದಿರುತ್ತೆ ಪುಟ ಸಂಖ್ಯೆ 39 ರಲ್ಲಿ ಸರ್ಕಾರಿ ಗೋಮಾಳ ಖರಾಬು ಎಂದು ನಮೂದಿರುವ ಹಸ್ತಾಕ್ಷರಕ್ಕು ಪುಟ ಸಂಖ್ಯೆ 117 ರಲ್ಲಿ ಎಮ್ ಅರ್ ನಂ 02/89-90 ರಂತೆ 10 ಜನ ರಿಗೆ ಪಹಣಿ ಕಾಲಂ 9 ರಲ್ಲಿ 10 ಜನರ ಹೆಸರಿರುವ ಪುಟಸಂಖ್ಯೆ ಹಸ್ತಾಕ್ಷರಕ್ಕು ತಾಳೆ ಇರುವುದಿಲ್ಲ. ಹಾಗೂ ಇದೇ ಹಾಗೂ ಇದೇ ಸಾಲಿನಲ್ಲಿ 100, 101, 346, 241, 245 ರಂತೆ 7 ಜನರಿಗೆ ಎಮ್.ಅರ್.ನಂ 3, 4, 5, 6/85-86 ರಂತೆ ದರಖಾಸ್ತು ಮೂಲಕ ಮಂಜೂರು ಎಂಬುದಾಗಿ ನಮೂದಿರುತ್ತದೆ. ಸದರಿ 7 ಜನರ ಹೆಸರು 1999-2000 ನೇ ಸಾಲಿನ ಪಹಣಿಯಲ್ಲಿಯು ಸಹಾ ಮುಂದುವರೆದಿರುತ್ತದೆ. ಹಾಗೂ ಸದರಿ ಸಾಲಿನ ಪಹಣಿ ಪುಸ್ತಕದಲ್ಲಿ  ಕೈ ಬರಹ (Hand writing) ಷಾಹಿ ಬದಲಾವಣೆ (ink change) ಪುಟ ಸಂಖ್ಯೆ ಮುದುವರೆಯದಿರುವುದು  ಈ ಎಲ್ಲಾ ನ್ಯೂನ್ಯತೆಗಳು ಕಂಡು ಬಂದಿರುತ್ತದೆ. ತದನಂತರ ಮುಂದಿನ ಅರ್.ಟಿ.ಸಿ ಪುಸ್ತಕದಲ್ಲಿ ಎಲ್ಲಾ ಹೆಸರುಗಳು ಹೇಗೆ ಕೈಬಿಟ್ಟವು ಎಂಬ ಬಗ್ಗೆ ದಾಖಲೆ ಇರುವುದಿಲ್ಲ. 1994-95 ನೇ ಸಾಲಿನಲ್ಲಿ 7 ಜನರ ಹೆಸರು ಪಹಣಿಯಲ್ಲಿ ನಮೂದಿದ್ದು ಇದಕ್ಕೆ ಸಂಬಂದಿಸಿದಂತೆ ದರಖಾಸ್ತು ಮಂಜೂರಿ ಕಡತವು ಸಹಾ ಲಬ್ಯವಿರುತ್ತದೆ. ಅದರೆ ಸದರಿ ರವರಿಗೆ ಮಂಜೂರಾಗಿರವ ಬಗ್ಗೆ ಎಮ್.ಆರ್.ವಹಿಗಳಲ್ಲಿ ದರಖಾಸ್ತು ಅರ್ಜಿಗಳ ವಹಿಯಲ್ಲಿ ಹಾಗೂ ವಿತರಣಾ ವಹಿಯಲ್ಲಿಯೂ ಸಹಾ ನಮೂದಿರುವುದಿಲ್ಲ ಮತ್ತು ಕ್ಯಾಟ್ ಲಾಗ್ ಇಂಡೇಕ್ಷಿಂಗ್ ತಂತ್ರಾಂಶದಲ್ಲಿಯೂ ಸಹಾ ಸದರಿ ಮಂಜೂರಿ ಕಡತದ ಬಗ್ಗೆ ನಮೂದಿರುವುದಿಲ್ಲ ಮಾನ್ಯ ಉಪವಿಭಾಗಾಧಿಕಾರಿಗಳ ಅದೇಶ ಸಂಖ್ಯೆ ಎಲ್ ಡಿ ಸಿ ಅರ್/94/96-97 ದಿನಾಂಕ 16-07-1996 ರಂತೆ  ಸಿ ಮತ್ತು ಡಿ ವರ್ಗದ ಜಮೀನನ್ನು ಅರಣ್ಯ ಇಲಾಖೆಗೆ ಎಮ್ ಅರ್ ನಂ 01/96-97 ರಂತೆ ವಹಿಸಲಾಗಿದ್ದು ಸದರಿ ಸಮಯದಲ್ಲಿ ಮೇಲ್ಕಂಡ ಮಂಜೂರಿ ದಾರರ ಬಗ್ಗೆ ಅಥವಾ ಸದರಿ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿರುವ ಬಗ್ಗೆ ಯಾವುದೇ ದಾಖಲೆ ಅಥವಾ ನಡವಳಿಗಳು ಇರುವುದಿಲ್ಲ. ಮೂಲ ಮಂಜೂರಿ ಕಡತ ಸಂಖ್ಯೆ ಎಲ್.ಎನ್.ಡಿ.ಟಿಟಿ/99/ಕೆ/81-82 ರ ನೈಜತೆಯ ಬಗ್ಗೆ ಪರಿಶೀಲಿಸಲಾಗಿ ದಿನಾಂಕ 16-07-1982 ರಿಂದ 15-01-1985 ರವರೆವಿಗೂ ತಹಸೀಲ್ದಾರರಾಗಿ ಕರ್ತವ್ಯ ನಿರ್ವಹಿಸಿದ ಶ್ರೀ ಎಸ್ ರಾಜಾರಾಂ ರವರು ಮತ್ತು ರಾಜಸ್ವ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ವೈ.ಸಿ ಸಿದ್ದಾರೆಡ್ಡಿ ರವರ ಸಹಿಯನ್ನು ದಾಖಲೆಯೊಂದಿಗೆ ತಾಳೆ ಮಾಡಲು ಅಭಿಲೇಖಾಲಯದಲ್ಲಿ ಹಲವು ದರಖಾಸ್ತು ಕಡತಗಳನ್ನು ಪರಿಶೀಲಿಸಿಲಾಗಿರುತ್ತದೆ ಅಂದಿನ ಅವಧಿಯಲ್ಲಿ ತಹಸೀಲ್ದಾರ್ ಅಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಎಸ್ ರಾಜರಾಂ ತಹಸಿಲ್ದಾರ್ ರವರ ಸಹಿಗೂ ಮತ್ತು ಎಲ್.ಎನ್.ಡಿ.ಸಿ.ಅರ್.109/83-84 ಎಲ್ ಎನ್ ಡಿ ಎಸ್ ಡಿ ಆರ್ 109/83-84 ರಂತೆ ಕೃಷ್ಣಪ್ಪ ಬಿನ್ ಗುರ್ರಪ್ಪ ರವರಿಗೆ ದಿನಾಂಕ 18/02/1984 ನೀಡಿರುವ ಸಾಗುವಳಿ ಚೀಟಿ ಮತ್ತು ವೆಂಕಟಮ್ಮ ಕೊಂ ಚಂಗಲರಾಯಪ್ಪ ರವರಿಗೆ ದಿನಾಂಕ 18-02-1984 ರಂದು ನೀಡಿರುವ ಸಾಗುವಳಿ ಚೀಟಿಗೆ ಸಹಿ ಮಾಡಿವುದನ್ನು ತಾಳೆ ಮಾಡಿದಾಗ ದಾಖಲೆಯಂತೆ ತಹಸೀಲ್ದಾರ್ ರವರ  ಸಹಿ ತಾಳೆಯಾಗಿರುವುದಿಲ್ಲ  ಹಾಗೂ ಮಾಡಿದಾಗ ಅವದಿಯಲ್ಲಿ ರಾಜಸ್ವ ನೀರಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ವೈ.ಸಿ.ಸಿದ್ದಾರೆಡ್ಡಿ ರವರ ಸಹಿಯನ್ನು 1985-86 ಮತ್ತು 1986-97 ರ ಮ್ಯುಟೇಷನ್ ವಹಿಯನ್ನು ಪರಿಶೀಲಿಸಲಾಗಿ ವೈ.ಸಿ.ಸಿದ್ದಾರೆಡ್ಡಿ ರಾಜಸ್ವ ನಿರೀಕ್ಷಕರ ರವರ ಸಹಿ ಮತ್ತು ಎಲ್ ಎನ್ ಡಿ ಟಿ ಟಿ /99/ಕೆ/81-82 ರ ಕಡತದಲ್ಲಿನ ಸಿದ್ದಾರೆಡ್ಡಿಗೂ ಸಹಿ ತಾಳೆ ಮಾಡಿದಾಗ ದಾಖಲೆಯಂತೆ  ಸಹಿ ತಾಳೆಯಾಗಿರುವುದಿಲ್ಲ.  ಆದ್ದರಿಂದ ಸದರಿ ಸ.ನಂ-29 ರಲ್ಲಿ ಮಂಜೂರಾತಿ ಕಡತ ಪಹಣಿ ಹಾಳೆಗಳು ಹಾಗೂ ಕಡತಗಳಲ್ಲಿನ ತರೆ ದಾಖಲಾತಿಗಳು ನಕಲಿ ಎನ್ನುವುದು ಮೇಲ್ನೋಟಕ್ಕೆ ದೃಡಪಟ್ಟಿರುತ್ತದೆ. ಈ ಬಗ್ಗೆ 10 ಜನರು ಮತ್ತು 7 ಜನರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ  ದೂರಿನ ಮೇರೆಗೆ ಈ ಪ್ರ.ವ.ವರದಿ.

 

8. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.72/2021 ಕಲಂ. 420,464,456,466,467,471,473,34 ಐ.ಪಿ.ಸಿ:-

     ದಿನಾಂಕ:-22/09/2021 ರಂದು ಪಿರ್ಯಾಧಿದಾರರಾದ ಶ್ರೀ. ಗಣಪತಿ ಶಾಸ್ತ್ರೀ, ಮಾನ್ಯ ತಹಶೀಲ್ದಾರ್ ಚಿಕ್ಕಬಳ್ಳಾಪುರ ರವರು ತಮ್ಮ ಕಛೇರಿಯ ಟಪಾಲಿನ ಮೂಲಕ ನೀಡಿರುವ ದೂರಿನ ಸಾರಾಂಶವೇನೆಂದರೆ ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಹೋಬಳಿ, ಬಂಡಹಳ್ಳಿ ಗ್ರಾಮದ ಸರ್ವೆ ನಂ 29 ರ ಬಾಬ್ತು ಅರ್ ಯು ಓ ಎಸ್ ಅರ್ (ಎಂ) 645/91-92 ರಂತೆ ಸೀತಮ್ಮ ಕೊಂ ಬೈಯನ್ನ ರವರಿಗೆ ಮಂಜೂರಾಗಿರುವ ದಾಖಲೆಗಳನ್ನು ನೀಡಲು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ಮಾಹಿತಿ ನೀಡಲು ಕೋರಿದ್ದು ಅದರಂತೆ ದಾಖಲೆಗಳನ್ನು ನೀಡಿರುವುದಿಲ್ಲ ವೆಂದು ಕರ್ನಾಟಕ ಮಾಹಿತಿ ಅಯೋಗ ಬೆಂಗಳೂರು ರವರಲ್ಲಿ ಮೇಲ್ಮನವಿ ಸಲ್ಲಿಸಿಕೊಂಡಿರುತ್ತಾರೆ.  ಅದರಂತೆ ಕಛೇರಿಯಲ್ಲಿ ಲಭ್ಯವಿರುವ ಕಛೇರಿ ದಾಖಲೆಯನ್ನು ಪರಿಶೀಲಿಸಲಾಗಿ ಮಂಡಿಕಲ್ಲು ಹೋಬಳಿ ಬಂಡಹಳ್ಳಿ ಗ್ರಾಮದ ಸರ್ವೆ ನಂ 29 ರಲ್ಲಿ 4 ಎಕರೆ ಜಮೀನಿಗೆ ಸಂಬಂದಿಸಿದಂತೆ ಅರ್.ಯು.ಓ.ಎಸ್.ಅರ್(ಎಂ) 645/91-92 ರಂತೆ ದಿನಾಂಕ:-11-12-1996 ರಂತೆ ನಡೆದ ಭೂ ಸಕ್ರಮೀಕರಣ ಸಮೀತಿಯ ಸಭಾ ನಡಾವಳಿ ಪುಸ್ತಕದಲ್ಲಿ ಕ್ರ.ಸಂ 5/1 ರಲ್ಲಿ ಅರ್.ಯು.ಓ.ಎಸ್.ಅರ್ (ಎಂ)/  /91-92 ರಂತೆ ಶೀತಮ್ಮ ಕೋಂ ಬೈಯಣ್ಣ ರವರಿಗೆ 4 ಎಕರೆ ಜಮೀನು ಸಕ್ರಮಗೊಳಿಸಿ ತಿರ್ಮಾನಿಸಲಾಯಿತು ಎಂಬುದಾಗಿ ಹಾಗೂ ಸಾಗುವಳಿ ಚೀಟಿ ವಿತರಣಾ ವಹಿಯಲ್ಲಿ ಕ್ರ.ಸಂ 473 ರಲ್ಲಿ ಸದರಿಯವರ ಸೀತಮ್ಮ ಕೋಂ ಬೈಯಣ್ಣ ಎಂಬುದಾಗಿ ನಮೂದಾಗಿರುವುದು ಕಂಡು ಬಂದಿರುತ್ತದೆ. ಇದೇ ಬಂಡಹಳ್ಳಿ ಗ್ರಾಮದ ಸರ್ವೆ ನಂ 4-38 ಎಕರೆ /ಗುಂಟೆ ಜಮೀನಿಗೆ ಸಂಬಂದಿಸಿದಂತೆ ಅರ್.ಯು.ಓ.ಎಸ್.ಅರ್ (ಎಂ) 145/91-92 ರಂತೆ ದಿನಾಂಕ 11-08-1997 ರಂತೆ ನಡೆದ ಭೂ ಸಕ್ರಮೀಕರಣ ಸಮಿತಿ ಸಭಾ ನಡಾವಳಿ ಪುಸ್ತಕರದಲ್ಲಿ ಕ್ರ.ಸಂ 44ರಲ್ಲಿ ಅರ್.ಯು.ಓ.ಎಸ್.ಅರ್ (ಎಂ)/   /91-92 ರಂತೆ ಮುತ್ತಮ್ಮ ಕೊಂ ಶ್ರೀನಿವಾಸ್ ರವರಿಗೆ 4-30 ಎಕರೆ ಜಮೀನು ಸಕ್ರಮಗೊಳಿಸಿ ತಿರ್ಮಾನಿಸಲಾಯಿತು ಎಂಬುದಾಗಿ ಹಾಗೂ ಸಾಗುವಳಿ ಚೀಟಿಯ ವಿತರಣಾ ವಹಿಯಲ್ಲಿ ಕ್ರ.ಸಂ 471 ರಲ್ಲಿ ಸದರಿಯವರ ಮುತ್ತಮ್ಮ ಕೋಂ ಶ್ರೀನಿವಾಸ್ ಎಂಬುದಾಗಿ ನಮೂದಾಗಿರುವುದು ಕಂಡು ಬಂದಿರುತ್ತದೆ. ಮೂಲ ದಾಖಲೆಗಳನ್ನು ಪರಿಶೀಲಿಸಿದಾಗ  ಈ ಕೆಳಕಂಡ ನ್ಯೂನತೆಗಳು ಕಂಡು ಬಂದಿರುತ್ತದೆ. ನಮೂನೆ 50 ರ ವಹಿಯನ್ನು ಪರಿಶೀಲಿಸಿದಾಗ ಸಂಪುಟ-2 ವಹಿಯಲ್ಲಿರುವ ಕ್ರ.ಸಂ 645 ರಲ್ಲಿರುವ ಹೆಸರನ್ನು ತಿದ್ದಿ ಸದರಿ ಸೀತಮ್ಮ ಬೈಯಣ್ಣ ಬಂಡಹಳ್ಳಿ ಸ.ಸಂ 29 ರಲ್ಲಿ 4 ಎಕರೆ ಎಂಬುದಾಗಿ ಹಾಗೂ ಸಂಪುಟ 1 ರ ವಹಿಯಲ್ಲಿರುವ ಕ್ರ.ಸಂ 145 ರಲ್ಲಿರುವ ಹೆಸರನ್ನು ತಿದ್ದಿ ಸದರಿ ಮುತ್ತಮ್ಮ ಕೋಂ ಶ್ರೀನಿವಾಸ್ ಬಂಡಹಳ್ಳಿ ಸ.ನಂ 22 ರಲ್ಲಿ 4-38 ಎಕರೆ/ಗುಂಟೆ ಎಂಬುದಾಗಿ ಅನಧಿಕೃತವಾಗಿ ಸೆರ್ಪಡೆ ಮಾಡಿರುವುದು ಕಂಡು ಬಂದಿರುತ್ತದೆ. ( ಅನುಬಂಧ-1)  ದಿನಾಂಕ 11-12-1996 ರಂದು ನಡೆದ ಭೂ ಸಕ್ರಮೀಕರಣ ಸಮಿತಿಯ ಸಭಾ ನಡಾವಳಿಯ ವಹಿಯಲ್ಲಿ, ಕ್ರಮ ಸಂಖ್ಯೆ 1 ರಿಂದ 8 ರ ವರೆವಿಗೂ ದಾಖಲಾಗಿದ್ದು ಸದರಿ ಕ್ರಮ ಸಂಖ್ಯೆಯ ಮದ್ಯದಲ್ಲಿ ಅಂದರೆ ಕ್ರಮ ಸಂಖ್ಯೆ 5/1 ರಲ್ಲಿ ಅರ್ ಯು ಓ ಎಸ್ ಅರ್ (ಎಂ)   /91-92 ಬಂಡಹಳ್ಳಿ ಸ.ನಂ 29 ರಲ್ಲಿ ಶಿತಮ್ಮ ಕೋಂ ಬೈಯಣ್ಣ ರವರಿಗೆ 4-00 ಎಕರೆ ಜಮೀನು ಸಕ್ರಮಗೊಳಿಸಲು ತೀರ್ಮಾನಿಸಲಾಯಿತ್ತು ಎಂಬುದಾಗಿ ಸೇರ್ಪಡೆಯಾಗಿರುವುದು ಕಂಡು ಬಂದಿರುತ್ತದೆ. ಹಾಗೂ ದಿನಾಂಕ:-11-08-1997 ರಂದು ನಡೆದ ಭೂ ಸಕ್ರಮೀಕರಣ ಸಮಿತಿಯ ಸಭಾ ನಡಾವಳಿಯ ವಹಿಯಲ್ಲಿ ಕ್ರಮ ಸಂಖ್ಯೆ 1 ರಿಂದ 71 ರ ವರೆವಿಗೂ ದಾಖಲಾಗಿದ್ದು ಸದರಿ ಕ್ರಮ ಸಂಖ್ಯೆ 44 ನ್ನು ಸೇರಿಸಿ ಅರ್.ಯು ಅರ್ ಯು ಓ ಎಸ್ ಅರ್ (ಎಂ)   /91-92 ಬಂಡಹಳ್ಳಿ ಸ.ಸಂ 22 ರಲ್ಲಿ ಮುತ್ತಮ್ಮ ಕೋಂ ಶ್ರೀನಿವಾಸ್ ರವರಿಗೆ 4-30 ಎಕರೆ /ಗುಂಟೆ ಜಮೀನು ಸಕ್ರಮಗೊಳಿಸಲು ತೀರ್ಮಾನಿಸಲಾಯಿತ್ತು ಎಂಬುದಾಗಿ ಸೇರ್ಪಡೆಯಾಗಿರುವುದು ಕಂಡು ಬಂದಿರುತ್ತದೆ. ಅಲ್ಲದೇ ಕ್ರ.ಸಂ 44 ಅನ್ನು 44/1 ಎಂಬುದಾಗಿ ತಿದ್ದಿರುವುದು ಕಂಡು ಬಂದಿರುತ್ತದೆ. (ಅನುಬಂದ-2) ಸಾಗುವಳಿ ಚೀಟಿ ವಿತರಣಾ ವಹಿಯಲ್ಲಿ ಕ್ರಮ ಸಂಖ್ಯೆ 471 ರಿಂದ 474 ರ ಮದ್ಯದಲ್ಲಿ 472 ಮತ್ತು 473 ರಲ್ಲಿ ಅರ್ ಯು ಓ ಎಸ್ ಅರ್ (ಎಂ) 451/91-92 ಕಮ್ಮತನಹಳ್ಳಿ ಸ ನಂ 20 ಎಂಬುದಾಗಿ ಇಬ್ಬರೂ ಫಲಾನುಭವಿಗಳ ಹೆಸರು ನಮೂದಾಗಿದ್ದು ಮತ್ತೆ ಯಥಾವತ್ತು ಎಂಬುದಾಗಿ ಕ್ರಮ ಸಂಖ್ಯೆ 473 ರಲ್ಲಿ ಅರ್ ಯು ಓ ಎಸ್ ಅರ್ (ಎಂ) 451/91-92 ಸೀತಮ್ಮ ಕೋಂ ಬೈಯಣ್ಣ ಒಕ್ಕಲಿ ಬಂಡಹಳ್ಳಿ ಸ.ನಂ 29 ರಲ್ಲಿ 4-00 ಎಕರೆ ಎಂಬುದಾಗಿ ಹಾಗೂ ಕ್ರ.ಸಂ 471 ರಲ್ಲಿ ಅರ್ ಯು ಓ ಎಸ್ ಅರ್ (ಎಂ)   /91-92 ಮುತ್ತಮ್ಮ ಕೊಂ ಶ್ರೀನಿವಾಸ್ ವಕ್ಕಲಿಗ ಬಂಡಹಳ್ಳಿ ಸ.ನಂ 22 ರಲ್ಲಿ 4-38 ಎಕರೆ/ಗುಂಟೆ ಎಂಬುದಾಗಿ ಸೇರ್ಪಡಿಸಿರುವುದು ಹಾಗೂ ಸದರಿಯವರ ಹೆಸರು ಸೇರ್ಪಡೆ ಮಾಡುವಾಗ ಕೈಬರಹ  (Handwriting) ನೀಲಿ ಷಾಹಿ ಸಹ (Ink change) ಬದಲಾವಣೆಯಾಗಿರುವುದು ಸ್ವಷ್ಟವಾಗಿ ಕಂಡು ಬಂದಿರುತ್ತದೆ. ಅಲ್ಲದೆ ಸದರಿ ವಹಿಯಲ್ಲಿ ಈಲಾಗಾಯ್ತು ಹದಿನೈದು ವರ್ಷಗಳು ಸದರಿ ಹಾಕಲಾಗಿ ಸದರಿ ಮೊಹರಿಗೆ ಕಛೇರಿಯ ಮುಖ್ಯಸ್ಥರ ಸಹಿ ಇರುವುದಿಲ್ಲ (ಅನುಬಂಧ-3) 1964-65 ರಿಂದ 1970-71 ನೇ ಸಾಲಿನ (ಪುಟ ಸಂಖ್ಯೆ-38) ಹಾಗೂ 1971-72 ರಿಂದ 1974-75 ನೇ ಸಾಲಿನ (ಪುಟ ಸಂಖ್ಯೆ -38) ವರೆಗಿನ ಕೈಬರಹ ಪಹಣಿಯಲ್ಲಿ ಬಂಡಹಳ್ಳಿ ಗ್ರಾಮದ ಸ.ನಂ 29 ಒಟ್ಟು 281-32 ಎಕರೆ/ಗುಂಟೆ ಗೋಮಾಳ ಎಂಬುದಾಗಿ ನಮೂದಾಗಿದ್ದು ಅರಣ್ಯ ಎಂಬುದಾಗಿ ದಾಖಲಾಗಿರುತ್ತದೆ. ಹಾಗೂ 1964-65 ರಿಂದ 1970-71 ಸಾಲಿನ 1971-72 ರಿಂದ 1975-76 ನೇ ಸಾಲಿನ 1976-77 ರಿಂದ 1981-82 ನೇ, 1982-83 ರಿಂದ 1986-87 ಪುಟ ಸಂಖ್ಯೆ -31 ವರೆಗಿನ ಕೈಬರಹದ ಪಹಣಿಯಲ್ಲಿ ಬಂಡಹಳ್ಳಿ ಗ್ರಾಮದ ಸ. ನಂ 22 ರಲ್ಲಿ ಒಟ್ಟು 7-05 ಎಕರೆ/ಗುಂಟೆ ಪೈಕಿ 1-00 ಎಕರೆ “ಬ” ಖರಾಬ್ ಉಳಿಕೆ 6-05 ಎಕರೆ/ಗುಂಟೆ ಸರ್ಕಾರಿ ಖರಾಬ್ ಎಂಬುದಾಗಿ ನಮೂದಾಗಿದ್ದು ಈ ಪೈಕಿ ಹನುಮಂತರೆಡ್ಡಿ ಬಿನ್ ಬೈರಪ್ಪ ನವರಿಗೆ ಎಡಿಅರ್ 124/46-47 ರಂತೆ ಹರಾಜಿನಲ್ಲಿ 30/06/1947 ರಲ್ಲಿ ಮಂಜೂರಾಗಿರುತ್ತದೆ ಎಂಬುದಾಗಿ ದಾಖಲಾಗಿರುತ್ತದೆ. (ಅನುಬಂಧ-4) 2000-01 ರಿಂದ 2001-02 ರ ಕೃಬರಹದ ಪಹಣಿ ಪುಸ್ತಕರದಲ್ಲಿ (ಪುಟ ಸಂಖ್ಯೆ -39) ಬಂಡಹಳ್ಳಿ ಗ್ರಾಮದ ಸ.ನಂ 22 ರಲ್ಲಿ ಒಟ್ಟು 7-05 ಎಕರೆ/ಗುಂಟೆ ಪೈಕಿ 1-00 ಎಕರೆ “ಬ” ಖರಾಬ್ ಉಳಿಕೆ 6-05 ಎಕರೆ /ಗುಂಟೆ ಸರ್ಕಾರಿ ಖರಾಬ್ ಎಂಬುದಾಗಿ ನಮೂದಾಗಿದ್ದು. ಪಹಣಿ ಕಾಲಂ 9 ರಲ್ಲಿ ಮುತ್ತಮ್ಮ ಕೋಂ ಶ್ರೀನಿವಾಸ್ ಅರ್ ಯು ಓ ಎಸ್ ಅರ್ (ಎಂ) / 145/91-92 ಒಟ್ಟು 4-38 ಎಕರೆ/ಗುಂಟೆ ಎಂಬುದಾಗಿ ಹೆಸರು ಸೇರ್ಪಡೆ ಮಾಡಿರುವುದು ಕಂಡು ಬಂದಿರುತ್ತದೆ. (ಅನುಬಂಧ-5) 1976-77 ಮತ್ತು 1982-83 ರ ಕೈಬರಹ ಪಹಣಿ ಪುಸ್ತಕದಲ್ಲಿ (ಪುಟ ಸಂಖ್ಯೆ 38 ) ಬಂಡಹಳ್ಳಿ ಗ್ರಾಮ ಸ.ನಂ 29 ರಲ್ಲಿ ಒಟ್ಟು 272-22 ಎಕರೆ/ಗುಂಟೆ ಎಂಬುದಾಗಿ ದಾಖಲಾಗಿದ್ದು ಪಹಣಿ ಕಾಲಂ 12 ರಲ್ಲಿ ಕೆಂಪಯ್ಯ ಬಗರ್ ಹುಕ್ಕಂ ಸಾಗುವಳಿ ಒಟ್ಟು 3-00 ಎಕರೆ ಎಂಬುದಾಗಿ ಹೆಸರು ಸೇರ್ಪಡೆಮಾಡಿರುವುದು ಕಂಡು ಬಂದಿರುತ್ತದೆ. (ಅನುಬಂಧ-6) 1997 ರಿಂದ 2001 ರ ವರೆಗಿನ ಪಹಣಿ ಪುಸ್ತಕದ ಪುಟ ಸಂಖ್ಯೆ 44 ರಲ್ಲಿ ಸ. ನಂ 29 ಸರ್ಕಾರಿ ಬೀಡು, ಗೋಮಾಳ ಪಾರೆಸ್ಟ್ ಕೆರೆ ಅಂಗಳ ಅರಣ್ಯ ಇಲಾಖೆ ನೆಡುತೋಪು ಎಂಬುದಾಗಿ ದಾಖಲಾಗಿರುತ್ತದೆ. ನಂತರ ಅದೇ ಪಹಣಿ ಪುಸ್ತಕರ ಮೇಲ್ಬಾಗದಲ್ಲಿ ಮುಂದುವರೆದ ಪುಟ ಎಂದು ನಮೂದಿಸದೇ ಪುಟ ಸಂಖ್ಯೆ 170 ಎಂಬುದನ್ನು 171 ಎಂಬುದಾಗಿ ತಿದ್ದುಪಡಿ ಮಾಡಿ ಸ.ನಂ 29 ರ ಪೈಕಿ ಶಿತಮ್ಮ ಕೋಂ ಬೈಯಣ್ಣ ಅರ್ ಯು ಓ ಎಸ್ ಅರ್ (ಎಂ) 645/91-92 ಎಂಬುದಾಗಿ ಸೇರ್ಪಡೆ ಮಾಡಲಾಗಿರುತ್ತದೆ ಮತ್ತು ಮುಂದಿನ ಎಲ್ಲಾ ಪುಟಗಳ ಕ್ರಮ ಸಂಖ್ಯೆ  ಬದಲಾಗಿರುತ್ತದೆ. (ಅನುಬಂಧ-7) 1999-2001 ನೇ ಸಾಲಿನ ಮುಟೇಷನ್ ವಹಿಯಲ್ಲಿ ಕ್ರ. ಸಂ 8/200-01 ರಲ್ಲಿ ಶೀತಮ್ಮ ಕೋಂ ಬೈಯಣ್ಣ ರವರಿಗೆ ಅರ್ ಯು ಓ ಎಸ್ ಅರ್ (ಎಂ)645 /91-92 ರಂತೆ ಮಂಜೂರಿ ಹದಿನೈದು ವರ್ಷ ಪರಭಾರೆ ಮಾಡಬಾರದೆಂಬ ಷರತ್ತಿನ ಮೇರೆಗೆ ಬಂಡಹಳ್ಳಿ ಗ್ರಾಮದ ಸ.ನಂ 29 ಕ್ಕೆ 4-00 ಎಕರೆ ಎಂಬುದಾಗಿ ಹಾಗೂ ಇದೇ ಪುಟದಲ್ಲಿ ಕ್ರ.ಸಂ 9/2000-01 ರಲ್ಲಿ ಮುತ್ತಮ್ಮ ಕೋಂ ಶ್ರೀನಿವಾಸ್ ಅರ್ ಯು ಓ ಎಸ್ ಅರ್ (ಎಂ) 145/91-92 ರಂತೆ ಹದಿನೈದು ವರ್ಷ ಪರಭಾರೆ ಮಾಡಬಾರದು ಎಂಬ ಷರತ್ತಿನಮೇರೆಗೆ ಬಂಡಹಳ್ಳಿ ಗ್ರಾಮದ ಸರ್ವೆ ನಂ 22 ರಲ್ಲಿ 4-38 ಎಕರೆ/ಗುಂಟೆ ಎಂಬುದಾಗಿ ಹೊಸ ಪುಟವನ್ನು ಸೇರಿಸಿ ನಮೂದಿಸಿರುವುದು ಸ್ವಷ್ಟವಾಗಿ ಕಂಡು ಬಂದಿರುತ್ತದೆ. ಸದರಿಯವರ ಹೆಸರು ಸೇರ್ಪಡೆ ಮಾಡುವಾಗ ಕೈಬರಹ (Handwriting) ನೀಲಿ ಷಾಹಿ ಸಹ (Ink change) ಬದಲಾವಣೆಯಾಗಿರುವುದು ಸ್ವಷ್ಟವಾಗಿ ಕಂಡು ಬಂದಿರುತ್ತದೆ. ಗ್ರಾಮ ಲೆಕ್ಕಾಧಿಕಾರಿಗಳ ಮತ್ತು ರಾಜಸ್ವನಿರೀಕ್ಷಕರ ಸಹಿ ಸಹ ತಾಳೆ ಇರುವುದಿಲ್ಲ. ಈಗ ಇದು ಕೊನೆಯ ಪುಟ ಅಗಿರುತ್ತದೆ. (ಅನುಬಂಧ-8)  ಈ ಪ್ರಕರಣದಲ್ಲಿ ಅರ್ಜಿದಾರರು ನಕಲಿ ನಮೂದುಗಳನ್ನು ಮಾಡಿ ಭೂಮಿಯ ಮಂಜೂರು ದಾಖಲಾತಿ ಸೃಷ್ಟಿಸಲು ಪ್ರಯತ್ನಿಸಿರುವುದು ನಿಖರವಾಗಿ ಕಂಡು ಬಂದಿರುವುದರಿಂದ ಸದರಿ ಕಡತವನ್ನು ತಯಾರಾಗಿರುವ ಸಾದ್ಯತೆ ಇರುವುದರಿಂದ ಪಹಣಿ ಹಾಳೆಗಳ ಹಾಗೂ ಕಡತದಲ್ಲಿನ ಇತರೆ ದಾಖಲಾತಿಗಳು ನಕಲಿ ಎನ್ನುವುದು ಮೇಲ್ನೋಟಕ್ಕೆ ದೃಡಪಟ್ಟಿರುತ್ತದೆ. ಈ ಬಗ್ಗೆ ಸದರಿ ಇಬ್ಬರ ವಿರುದ್ದ 420,464,456,466,467,471,473,ಮತ್ತು 34 ಐಪಿಸಿ ರಂತೆ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.417/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ:22/09/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ನರಸಪ್ಪ ಬಿನ್ ಚಿಕ್ಕರಾಮರೆಡ್ಡಿ, 46 ವರ್ಷ, ಜಿರಾಯ್ತಿ, ವಕ್ಕಲಿಗರು, ಶೆಟ್ಟಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 11.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳಯವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ: 21/09/2021 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಕೆಲಸವಿದ್ದರಿಂದ ತಾನು ಕಛೇರಿ ಬಳಿ ಹೋಗಿದ್ದು, ಆ ಸಮಯದಲ್ಲಿ ತಮ್ಮ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯಾದ ಮೋಹನ್ ಮತ್ತು ತಮ್ಮ ಗ್ರಾಮದ ಸುಬ್ಬಾರೆಡ್ಡಿ ಬಿನ್ ಲೇಟ್ ವೆಂಕಟರೆಡ್ಡಿ, 68 ವರ್ಷ, ಜಿರಾಯ್ತಿ, ವಕ್ಕಲಿಗರು ಹಾಗೂ ಆತನ ಮಗ ವೆಂಕಟಶಿವಾರೆಡ್ಡಿ, 40 ವರ್ಷ, ಜಿರಾಯ್ತಿ ರವರು ದ್ವಿಚಕ್ರ ವಾಹನವನ್ನು ನಿಲ್ಲಿಸುವ ವಿಚಾರದಲ್ಲಿ ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದು, ತಾನು ಸುಬ್ಬಾರೆಡ್ಡಿ ಮತ್ತು ವೆಂಕಟಶಿವಾರೆಡ್ಡಿ ರವರನ್ನು ಕುರಿತು “ಏಕೆ ವಿನಾ ಕಾರಣ ಗಲಾಟೆ ಮಾಡಿ ನಮ್ಮ ಗ್ರಾಮದ ಮರ್ಯಾದೆ ತೆಗೆಯುತ್ತೀರಾ” ಎಂದು ಕೇಳಿದಾಗ ಸುಬ್ಬಾರೆಡ್ಡಿ ರವರು ತನ್ನನ್ನು ಕುರಿತು “ಏನೋ ಬೋಳಿ ನನ್ನ ಮಗನೇ, ನನಗೆ ಬುದ್ದಿ ಹೇಳಲು ಬರುತ್ತೀಯಾ” ಎಂದು ಅವಾಚ್ಯಶಬ್ದಗಳಿಂದ ಬೈದು, ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿದನು. ನಂತರ ವೆಂಕಟಶಿವಾರೆಡ್ಡಿ ರವರು ತನ್ನನ್ನು ಕುರಿತು “ನಿನಗೆ ಮಾಡೋಕ್ಕೆ ಬೇರೆ ಕೆಲಸ ಇಲ್ಲವಾ, ಸೋಳೆ ನನ್ನ ಮಗನೇ” ಎಂದು ಬೈದು, ಆತನ ಕೈಯಲ್ಲಿದ್ದ ಸ್ಕ್ರೂ ಡೈವರ್ ನಿಂದ ತನ್ನ ಎಡ ಕಣ್ಣಿಗೆ ಚುಚ್ಚಿ ರಕ್ತಗಾಯವನ್ನುಂಟು ಮಾಡಿರುತ್ತಾನೆ. ಅಷ್ಟರಲ್ಲಿ ಇಲ್ಲಿಯೇ ಇದ್ದ ಕೇತನಾಯಕನಹಳ್ಳಿ ಗ್ರಾಮದ ನರಸಿಂಹಪ್ಪ ಬಿನ್ ತಾಯಪ್ಪ ಮತ್ತು ಚೌಡದೇನಹಳ್ಳಿ ಗ್ರಾಮದ ಆನಂದ ಹಾಗೂ ಇತರರು ಮೇಲ್ಕಂಡವರಿಂದ ತನ್ನನ್ನು ಬಿಡಿಸಿರುತ್ತಾರೆ. ನಂತರ ಮೇಲ್ಕಂಡವರು ಅಲ್ಲಿಂದ ಹೋಗುವಾಗ ಈ ದಿನ ಉಳಿದುಕೊಂಡಿದ್ದೀಯಾ, ನಿನ್ನನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ನಿನ್ನೆ ದಿನ ತನಗೆ ಕಣ್ಣಿನ ನೋವು ಜಾಸ್ತಿ ಇದ್ದುದರಿಂದ ತನ್ನ ಹೇಳಿಕೆಯನ್ನು ನೀಡಲಾಗಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿ ತನ್ನ ಹೇಳಿಕೆಯನ್ನು ನೀಡುತ್ತಿದ್ದು, ಮೇಲ್ಕಂಡ ಸುಬ್ಬಾರೆಡ್ಡಿ ಮತ್ತು ಆತನ ಮಗ ವೆಂಕಟಶಿವಾರೆಡ್ಡಿ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

10. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.133/2021 ಕಲಂ. 15(A),32(2) ಕೆ.ಇ ಆಕ್ಟ್:-

     ದಿನಾಂಕ:21/09/2021 ರಂದು ಬೆಳಗ್ಗೆ 10-30 ಗಂಟೆಗೆ ನಾನು  ಸರ್ಕಾರಿ ಜೀಫ್ ಸಂಖ್ಯೆ:ಕೆಎ40-ಜಿ60 ರಲ್ಲಿ  ಜೀಪ್ ಚಾಲಕರಾಗಿ ಎ.ಪಿ.ಸಿ 94 ಬೈರಪ್ಪ ರವರನ್ನು ಹಾಗೂ ಠಾಣೆಯ ಸಿಬ್ಬಂದಿಯಾದಸಿ.ಹೆಚ್.ಸಿ 53 ಲೋಕೇಶ್, ಸಿ.ಹೆಚ್.ಸಿ  186 ನರಸಿಂಹಯ್ಯ ಹಾಗೂ  ಸಿ.ಪಿ.ಸಿ 451 ರಾಮಾಂಜಿನೇಯ ರವರೊಂದಿಗೆ ಠಾಣಾ ಮೊ.ಸಂಖ್ಯೆ:107/2021 ಕೇಸಿನಲ್ಲಿ ತನಿಖೆಯ ನಿಮಿತ್ತ ಸಾದಲಿ ಗ್ರಾಮದ ಅಂಚೆ ಕಛೇರಿಯಲ್ಲಿ ದಾಖಲೆಗಳನ್ನು ಪಡೆಯಲು ಹೋಗಿದ್ದು, ಅಲ್ಲಿಂದ ಶಿಡ್ಲಘಟ್ಟ ನಗರದ  ನ್ಯಾಯಾಲಯದಲ್ಲಿದ್ದ ಘನ ನ್ಯಾಯಾಧೀಶರ ಲೋಕ ಅದಾಲತ್  ಸಭೆಯನ್ನು ಮುಗಿಸಿಕೊಂಡು ಸಂಜೆ 16-00 ಗಂಟೆಗೆ ಶಿಡ್ಲಘಟ್ಟ ನಗರದಿಂದ ವಾಪಸ್ಸು ಬರುವಾಗ ದ್ಯಾವಪ್ಪನಗುಡಿ, ತರಬಹಳ್ಳಿ, ಪಲಿಚರ್ಲು ಮಾರ್ಗವಾಗಿ 11 ನೇ ಮೈಲಿಯ ಕಡೆಗೆ ಬರುತ್ತಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೇಂದರೆ, ದಿಬ್ಬೂರಹಳ್ಳಿ ಪೊಲೀಸ್ ಠಾಣಾ ಸರಹದ್ದು ಮುಮ್ಮನಹಳ್ಳಿ ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿಯು ತನ್ನ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ  ಸಾರ್ವಜನಿಕರಿಗೆ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಆದರಂತೆ ಸಂಜೆ 16-30 ಗಂಟೆಗೆ ಸರ್ಕಾರಿ ಜೀಫ್ ನಲ್ಲಿ  ಮುಮ್ಮನಹಳ್ಳಿ ಗ್ರಾಮಕ್ಕೆ ಹೋಗಿ ಮಾಹಿತಿದಾರರಿಂದ ಆಸಾಮಿಯ ಮತ್ತು ಸ್ಥಳದ ಬಗ್ಗೆ ಪುನಃ ಮಾಹಿತಿಯನ್ನು ಪಡೆದುಕೊಂಡು ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಸದರಿ ಸ್ಥಳದ ಮೇಲೆ ದಾಳಿ ಮಾಡುವ ವಿಚಾರವನ್ನು ತಿಳಿಸಿ ಪಂಚರಾಗಿರಲು ಕೋರಿದರ ಮೇರೆಗೆ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ಪಂಚರೊಂದಿಗೆ ಮುಮ್ಮನಹಳ್ಳಿ ಗ್ರಾಮದ  ವೆಂಕಟರೆಡ್ಡಿ ಬಿನ್ ಪಾಪಣ್ಣ ರವರ ಮನೆಯ ಬಳಿ ಸ್ವಲ್ಪ ದೂರದಲ್ಲಿ ಜೀಪ್ ನ್ನು ಮರೆಯಲ್ಲಿ ನಿಲ್ಲಿಸಿ ನೋಡಲಾಗಿ ವೆಂಕಟರೆಡ್ಡಿರವರು ತನ್ನ ಮನೆಯ ಮುಂಭಾಗದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿದ್ದು ಸದರಿ ಆಸಾಮಿಯ ಮೇಲೆ ಸಿಬ್ಬಂದಿಯವರು ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯವರನ್ನು ನೋಡಿ ಮಧ್ಯಫಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಸಾರ್ವಜನಿಕ ಸ್ಥಳದಲ್ಲಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದ ಆಸಾಮಿಗೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು ಹಾಗೂ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿಕೊಡಲು ನಿನ್ನ ಬಳಿ ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ಹೇಳಿದ್ದು ನಂತರ ಸದರಿ ಆಸಾಮಿಯ ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ ವೆಂಕಟರೆಡ್ಡಿ ಬಿನ್ ಪಾಪಣ್ಣ, 50 ವರ್ಷ, ಜಿರಾಯ್ತಿ, ವಕ್ಕಲಿಗರು, ವಾಸ: ಮುಮ್ಮನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಎಂದು ತಿಳಿಸಿದ್ದು ನಂತರ ಪಂಚರ ಸಮಕ್ಷಮ ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ,ಎಲ್ ನ ORIGINAL CHOICE DELUX WHISKYಯ  13 ಮಧ್ಯ ತುಂಬಿದ ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು 1,170 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 456.69 ರೂ ಆಗಿದ್ದು  ಸದರಿ ಮಧ್ಯ ತುಂಬಿದ ಪ್ಯಾಕೇಟ್ ಗಳನ್ನು ಮತ್ತು ಸ್ಥಳದಲ್ಲಿಯೇ ಬಿದಿದ್ದ1 ಖಾಲಿ 90 ಎಂ,ಲ್, ನ  ORIGINAL CHOICE DELUX WHISKYಯ ಟೆಟ್ರಾ ಪ್ಯಾಕೇಟ್ ನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಮತ್ತು ಒಂದು ಲೀಟರ್ ನ ಖಾಲಿ ವಾಟರ್ ಬಾಟೆಲ್ ನ್ನು 16-45 ಗಂಟೆಯಿಂದ ಸಂಜೆ 17-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಾಲು ಮತ್ತು ಪಂಚನಾಮೆ,ಆಸಾಮಿಯೊಂದಿಗೆ ಸಂಜೆ 18-15 ಗಂಟೆಗೆ  ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಸ್ವತಃ ಮೊ.ಸಂಖ್ಯೆ:133/2021 ಕಲಂ:15(A),32(3) K,E ACT ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.259/2021 ಕಲಂ. 15(A),32(2) ಕೆ.ಇ ಆಕ್ಟ್:-

     ದಿನಾಂಕ: 22/09/2021 ರಂದು ಬೆಳಿಗ್ಗೆ 10-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿಸಿ-582 ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ: 14/09/2021 ರಂದು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಕೆ.ಸಿ ವಿಜಯ್ ಕುಮಾರ್ ರವರು ನೀಡಿದ ದೂರಿನ ಸಾರಾಂಶವೇನೆಂಧರೆ: ದಿನಾಂಕ: 14/09/2021 ರಂದು  ಸಂಜೆ 4-00 ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ಹೋಬಳಿ ಜೀಲಾಕುಂಟೆ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಪಿ.ಸಿ.460 ಸನಾವುಲ್ಲಾ,ಪಿ.ಸಿ.33 ಕೃಷ್ಣಪ್ಪ  ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ:   ಕೆ.ಎ-40, ಜಿ-538  ರಲ್ಲಿ  ಜೀಲಾಕುಂಟೆ ಗ್ರಾಮದಲ್ಲಿ  ಹೋಗಿ , ಅಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಸಂಜೆ 4-30 ಗಂಟೆಗೆ ಹೋಗಿ   ಜೀಪ್ ಅನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ.  ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ರಾಜಪ್ಪ ಬಿನ್ ಲೇಟ್ ಯರ್ರಗಂಗಪ್ಪ, 46ವರ್ಷ, ಆದಿ ಕರ್ನಾಟಕ ಜನಾಂಗ, ಜೀಲಾಕುಂಟೆ ಗ್ರಾಮ, ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ತನ್ನ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು    ಪರಿಶೀಲಿಸಲಾಗಿ,  ಅದರಲ್ಲಿ   330 ಎಂ.ಎಲ್. ನ KINGFISHER STRONG PREMIUM BEER 4  ಟಿನ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 320 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 360/-  ರೂ.ಗಳಾಗಿರುತ್ತೆ. ಸದರಿ ವ್ಯಕ್ತಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಸಂಜೆ 4-45  ಗಂಟೆಯಿಂದ   ಸಂಜೆ  5-45  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  ಸ್ಥಳದಲ್ಲಿದ್ದ   330 ಎಂ.ಎಲ್. ನ KINGFISHER STRONG PREMIUM BEER 4  ಟಿನ್ ಗಳನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ಸಂಜೆ 6-30 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು  ಈ ಮೆಮೋನೊಂದಿಗೆ  ಮಾಲನ್ನು ಹಾಗೂ ಆರೋಪಿಯನ್ನು ಹಾಜರುಪಡಿಸಿ ಆರೋಪಿಯ  ವಿರುದ್ಧ  15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ದೂರಾಗಿರುತ್ತೆ.

 

12. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.230/2021 ಕಲಂ. 87 ಕೆ.ಪಿ ಆಕ್ಟ್:-

     ದಿ:19.09.2021 ರಂದು 17-30 ಗಂಟೆಗೆ ಎಎಸ್ ಐ ಇಂತಿಯಾಜ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂಧರೆ ದಿನಾಂಕ:19/09/2021 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ತನಗೆ ಠಾಣಾ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಹೆಚ್.ಸಿ.-73 ಶ್ರೀ ಹನುಮಂತರಾಯಪ್ಪ ರವರು ನನಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ, ಗುಡಿಬಂಡೆ ಟೌನಿನ ಬಾಪೂಜಿ ನಗರದ ನಮಾಜ್ ಬಂಡೆ ಮೇಲೆ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿರುತ್ತೆಂತ ತಿಳಿಸಿದರು ಅದರಂತೆ ನಾನು, ಠಾಣೆಯಲ್ಲಿದ್ದ ಸಿಬ್ಬಂದಿಗಳಾದ ಪಿಸಿ-141 ಸಂತೋಷ್ ಕುಮಾರ್ ಹೆಚ್.ಸಿ-102 ಶ್ರೀ ಆನಂದ ದ್ವಿಚಕ್ರವಾಹನಗಳಲ್ಲಿ  ಗುಡಿಬಂಡೆ ಟೌನಿನ ಬಾಪೂಜಿ ನಗರಕ್ಕೆ ಹೋಗಿ ಅಲ್ಲಿದ ಠಾಣಾ ಹೆಚ್.ಸಿ. 73 ಶ್ರೀ ಹನುಮಂತರಾಯಪ್ಪ ರವರನ್ನು ಹಾಗೂ ಅಲ್ಲಿಯೇ ಇದ್ದ  ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ಯಾರೋ ಕೆಲವರು ಸೇರಿಕೊಂಡು ನಮಾಜ್ ಬಂಡೆಯ ಮೇಲೆ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ  ಮಾಹಿತಿ ಬಂದಿದ್ದು,  ದಾಳಿ ಮಾಡಿ ಕ್ರಮ ಕೈಗೊಳ್ಳಬೇಕಾಗಿದ್ದರಿಂದ ಪಂಚರಾಗಿ ಬಂದು ಸಹಕರಿಸಬೇಕೆಂದು ಕೋರಿದಾಗ ಪಂಚರು ಒಪ್ಪಿಕೊಂಡಿದ್ದು, ನಂತರ ನಾವುಗಳು ಮತ್ತು ಪಂಚರು ಅಂದರ್-ಬಾಹರ್ ಜೂಜಾಟವಾಡುತ್ತಿದ್ದ ಬಂಡೆಯ ಬಳಿಗೆ ದ್ವಿಚಕ್ರ ವಾಹನಗಳಲ್ಲಿ ಹೋಗಿ  ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಗುಂಪಾಗಿ ಕುಳಿತು 100/-ರೂ ಅಂದರ್ ಎಂತಲೂ 100/- ರೂ ಬಾಹರ್ ಎಂತಲೂ ಹಣವನ್ನು, ಪಣವನ್ನಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಮದ್ಯಾಹ್ನ 3-45 ಗಂಟೆಗೆ  ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಸಹ ದಾಳಿ ಮಾಡಿದಾಗ ಕೆಲವಲು ಸ್ಥಳದಿಂದ ಹೋಡಿ ಹೋಗಿದ್ದು, ಸ್ಥಳದಲ್ಲಿದ್ದವರನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ, 1) ಬಾಷಾ ಬಿನ್ ಯಾಕೂಬ್ ಸಾಬ್, 68 ವರ್ಷ, ಬಾಪೂಜಿನಗರ. ಗುಡಿಬಂಢೆ ಟೌನ್, 2) ನ್ಯಾಮತ್ ಸಾಬ್ ಬಿನ್ ಲೇಟ್ ಹುಸೇನ್ ಸಾಬ್, 80 ವರ್ಷ, ಬಾಪೂಜಿನಗರ. ಗುಡಿಬಂಢೆ ಟೌನ್, ಎಂದು ತಿಳಿಸಿದ್ದು ಓಡಿಹೋದವರ ಹೆಸರು ಮತ್ತು ವಿಳಾಸಗಳನ್ನು ಕೇಳಲಾಗಿ 3) ಮಹಬೂಬ್ ಜಾನ್ ಬಿನ್ ಖಾದರ, 28 ವರ್ಷ, ಕೂಲಿ ಕೆಲಸ, 7 ನೇ ವಾರ್ಡ, ಗುಡಿಬಂಡೆ ಟೌನ್, 4) ಸಮೀವುಲ್ಲ @ ಪಾಯಿ ಬಿನ್ ಅನ್ಸರ್, 30 ವರ್ಷ, ಗುಜರಿ ವ್ಯಾಪಾರ, 7ನೇ ವಾರ್ಡ್, ಗುಡಿಬಂಢೆ ಟೌನ್,   5) ಘೋರ ಬಿನ್ ಅಬೀಬ್, 30 ವರ್ಷ, ವ್ಯಾಪಾರ, 7 ನೇ ವಾರ್ಡ್, ಖಾಜಿ ಪೇಟೆ, ಗುಡಿಬಂಢೆ ಟೌನ್, ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಪರಿಶೀಲಿಸಲಾಗಿ, ಸ್ಥಳದಲ್ಲಿ ಅಂದರ್ ಬಾಹರ್ ಜೂಜಾಟಕ್ಕೆ ಪಣವಾಗಿಟ್ಟಿದ್ದ 930/- (ಒಂಬೈನೂರ ಮುವತ್ತು) ರೂಪಾಯಿ ನಗದು ಹಣ ಹಾಗು ಅಂದರ್ ಬಾಹರ್ ಜೂಜಾಟವಾಡಲು ಬಳಿಸಿದ್ದ 52 ಇಸ್ಪೀಟ್ ಎಲೆಗಳು ಇದ್ದು, ಸದರಿ ಮಾಲುಗಳನ್ನು ಮದ್ಯಾಹ್ನ 3-45 ಗಂಟೆಯಿಂದ 4-45 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆಯ ಮೂಲಕ ಮಾಲುನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳು ಮತ್ತು  ಮಾಲು ಹಾಗೂ ಪಂಚನಾಮೆಯೊಂದಿಗೆ ಸಂಜೆ 5-00  ಗಂಟೆಗೆ ಠಾಣೆಗೆ ಬಂದು ವರಧಿಯನ್ನು ಸಿದ್ದಪಡಿಸಿ ಸಂಜೆ 5-30 ಗಂಟೆಗೆ ನೀಡುತ್ತಿದ್ದು ಮೇಲ್ಕಂಡ ಆರೋಪಿತರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ನೀಡಿದ ವರದಿ ಮೇರೆಗೆ ಎನ್ ಸಿ ಆರ್ ನಂಬರ್  291/2021  ರಂತ ದಾಖಲಿಸಿ ಇದು ಅಸಂಜ್ಞೆ ಪ್ರಕರಣವಾಗಿದ್ದರಿಂದ ಆರೋಪಿಗಳ ವಿರುದ್ದ ಕಲಂ: 87 ಕೆ.ಪಿ. ಆಕ್ಟ್ ರೀತ್ಯ ಪ್ರಕರವಣನ್ನು ದಾಖಲಿಸಿ ಕ್ರಮ ಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿದ್ದು,  ಘನ ನ್ಯಾಯಾಲಯದ ಪಿಸಿ.430 ಪ್ರದೀಪ್ ರವರು ಈ ದಿನ ಬೆಳಿಗ್ಗೆ ಘನ ನ್ಯಾಯಾಲಯದಿಂದ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಅನುಮತಿ ಪಡೆದು ಕೊಂಡು ಬಂದು ಹಾಜರು ಪಡಿಸಿದ ವರದಿಯನ್ನು ಪಡೆದು ಪ್ರಕರಣ ದಾಖಲಿರುತ್ತೆ.

 

13. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.172/2021 ಕಲಂ. 15(A),32(3)  ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ ಲಕ್ಷ್ಮೀನಾರಾಯಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:22/09/2021 ರಂದು ಬೆಳಿಗ್ಗೆ 08-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ ಬಂದ ಮಾಹಿತಿ ಏನೇಂದರೆ ಮರಿಮಾಕಲಹಳ್ಳಿ ಗ್ರಾಮದ  ಸುರೇಶ ಬಿನ್ ಕೆಂಪಯ್ಯ ರವರು ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಸಿಬ್ಬಂದಿಯವರಾದ ಪಿ.ಸಿ.483 ರಮೇಶ್ ಬಾಬು ಮತ್ತು ಪಿ.ಸಿ.283 ಅರವಿಂದ ಹಾಗೂ  ಜೀಪ್ ಚಾಲಕ ಎಪಿಸಿ.120 ನಟೇಶ್ ರವರೊಂದಿಗೆ ಹಾಗೂ ಪಂಚರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40, ಜಿ-395 ರಲ್ಲಿ ಬೆಳಿಗ್ಗೆ 08-30 ಗಂಟೆಯ ಸಮಯಕ್ಕೆ  ಮರಿಮಾಕಲಹಳ್ಳಿ ಗ್ರಾಮದ ಸುರೇಶ ಬಿನ್ ಕೆಂಪಯ್ಯ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಸುರೇಶ ಬಿನ್ ಕೆಂಪಯ್ಯ 45 ವರ್ಷ, ಗೊಲ್ಲರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಮರಿಮಾಕಲಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 12  ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು,  2 ಪ್ಲಾಸ್ಟಿಕ್  ಲೋಟಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು ಪಂಚನಾಮೆಯ ಮೂಲಕ  ಬೆಳಿಗ್ಗೆ 08-45 ಗಂಟೆಯಿಂದ 09-45 ಗಂಟೆಯವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 480/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಸುರೇಶ ಬಿನ್ ಕೆಂಪಯ್ಯ ರವರನ್ನು ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 10-15 ಗಂಟೆಗೆ ಠಾಣೆಗೆ ವಾಪಾಸ್ ಬಂದು 172/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತದೆ.

 

14. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.113/2021 ಕಲಂ. 420 ಐ.ಪಿ.ಸಿ & 3,6(A),7 ESSENTIAL COMMODITIES ACT, 1955:-

     ದಿನಾಂಕ:21-09-2021 ರಂದು ಸಂಜೆ 7:00 ಗಂಟೆಗೆ ಪಿರ್ಯಾದಿದಾರರಾದ ಗೌತಮ್ ಬಿ ಜಿ, ಆಹಾರ ಶಿರಸ್ತೆದಾರ್, ಚಿಕ್ಕಬಳ್ಲಾಪುರ ತಾಲ್ಲುಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 21.09.2021 ರಂದು ನಮ್ಮ ಮೇಲಾಧಿಕಾರಿಗಳಾದ ಉಪ ನಿದರ್ೇಶಕರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ರವರು ನನಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿರುವ ಎಲ್ಲಾ ಅಕ್ಕಿ ಗಿರಣಿಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ನೀಡಿದ ಮೌಖಿಕ ಆದೇಶದಂತೆ ನಾನು ಈ ದಿನ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂ.36. ಕಂದವಾರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ಶ್ರೀ. ಸಪ್ತಗಿರಿ ಅಕ್ಕಿ ಗಿರಣಿಗೆ 12:30 ಗಂಟೆಗೆ  ಹೋಗಿ ಪರಿಶೀಲಿಸಿದಾಗ ಅಕ್ಕಿ ಗಿರಣಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ವಿತರಿಸುವ ಅಕ್ಕಿಯನ್ನು ಪಾಲಿಶ್ ಹಾಗೂ ನುಚ್ಚಾಗಿ ಪರಿವರ್ತಿಸಿ ಅವುಗಳನ್ನು ಕಾಳಸಂತೆಯಲ್ಲಿ ರೀ ಬ್ಯಾಗ್ ಮಾಡಿ ಮಾರಾಟ ಮಾಡುತ್ತಿರುವುದು ಕಂಡುಬಂದಿರುವುದು, ಈ ಸಂಬಂಧ ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿದಾಗ ಅವರು ಜಪ್ತಿ ಮಾಡಿ ಎಂದು ತಿಳಿಸಿದರ ಮೇರೆಗೆ ನಂತರ ಪಂಚರನ್ನು ಬರಮಾಡಿಕೊಂಡು ಅವರ ಸಮಕ್ಷಮದಲ್ಲಿ ಅಕ್ಕಿ ಗಿರಣಿಯಲ್ಲಿ ಪಾಲಿಶ್ ಮಾಡಿದ ಅಕ್ಕಿ ಹಾಗೂ ನುಚ್ಚನ್ನು ವ್ಹೇ ಬ್ರಿಡ್ಜ್ನಲ್ಲಿ ತೂಕ ಮಾಡಿಸಿದಾಗ ಒಟ್ಟು 2775 ಕೆ.ಜಿ ಅಕ್ಕಿ ಹಾಗೂ 1525 ಕೆ.ಜಿ. ನುಚ್ಚು ಇರುವುದು ಕಂಡುಬಂದಿರುತ್ತದೆ. ಸದರಿ ಜಪ್ತಿ ಮಾಡಲಾದ ಸ್ಥಳದಲ್ಲಿ ತೂಕದ ಹಾಗೂ ಸ್ಟಿಚಿಂಗ್ ಯಂತ್ರವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಪಂಚರ ಸಮಕ್ಷಮ ಜಪ್ತಿ ಮಾಡಿರುತ್ತದೆ. ಅಕ್ಕಿ ಮತ್ತು ನುಚ್ಚಿನಲ್ಲಿ ಎರಡು ಕೆ.ಜಿ.ಯಂತೆ ಮಾದರಿಗಾಗಿ ಪ್ರತ್ಯೇಕ ಕವರುಗಳಲ್ಲಿ ಪಂಚರ ಸಮಕ್ಷಮ ಸಂಗ್ರಹಿಸಲಾಗಿರುತ್ತದೆ. ಅಕ್ಕಿ ಗಿರಣಿ ಮಾಲೀಕ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸರ್ಕಾರ ಬಿಡುಗಡೆ ಮಾಡಿರುವ ಅಕ್ಕಿಯನ್ನು ವಿವಿಧ ಮೂಲಗಳಿಂದ ಅಕ್ರಮವಾಗಿ ಖರೀದಿ ಮಾಡಿ ತಮ್ಮ ಅಕ್ಕಿ ಗಿರಣಿಯಲ್ಲಿ ಪಾಲಿಶ್ ಮಾಡಿ ವಿವಿಧ ಬ್ರಾಂಡ್ನಲ್ಲಿ ಅಕ್ಕಿ ಚೀಲವನ್ನು ತಯಾರಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸುತ್ತಿರುವುದು ಕಂಡು ಬಂದಿರುತ್ತದೆ. ಇದೊಂದು ಅಕ್ಕಿ ಗಿರಣಿಯಾಗಿದ್ದು ಭತ್ತದಿಂದ ಅಕ್ಕಿಯನ್ನು ಉತ್ಪಾದಿಸಿ, ಮಾರಾಟ ಮಾಡುವುದು ಇವರ ಜವಾಬ್ದಾರಿಯಾಗಿರುತ್ತದೆ. ಈ ಪ್ರಕರಣಕ್ಕೆ ವಿಡಿಯೋ ಚಿತ್ರೀಕರಣ ಹಾಗೂ ಛಾಯಾ ಚಿತ್ರಗಳನ್ನು ಮಾಡಿರುತ್ತೆ. ಜಪ್ತಿ ಮಾಡಿದ ಅಕ್ಕಿ ಮತ್ತು ನುಚ್ಚು ಚೀಲಗಳನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಕೆ.ಎಫ್.ಸಿ.ಎಸ್.ಸಿ. ಸಗಟು ಗೋದಾಮಿನಲ್ಲಿ ಸುರಕ್ಷತೆಯಲ್ಲಿ ಇಡಲಾಗಿರುತ್ತದೆ. ಜಪ್ತಿ ಮಾಡಲಾದ ಅಕ್ಕಿ ಮತ್ತು ನುಚ್ಚಿನ ಬೆಲೆ ಅಂದಾಜು 64,500 ರೂಗಳಾಗಿರುತ್ತದೆ. ಮಾದರಿಗಾಗಿ ಸಂಗ್ರಹಿಸಿದ ಅಕ್ಕಿಯನ್ನು ನಮ್ಮ ಇಲಾಖೆಯಿಂದ ಪರೀಕ್ಷೆ ಸಲುವಾಗಿ ಪರಿಶೀಲನೆಗಾಗಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿಕೊಡುವ ಸಲುವಾಗಿ ನಮ್ಮ ವಶದಲ್ಲಿರುತ್ತೆ.   ಈ ಹಿನ್ನಲೆಯಲ್ಲಿ ಶ್ರೀ ಸಪ್ತಗಿರಿ ಅಕ್ಕಿ ಗಿರಣಿ ಮಾಲೀಕ ಶ್ರೀ ವೇಣು ಗೋಪಾಲ ರವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ಡೆ 1955 ಸೆಕ್ಷನ್ 3 ಮತ್ತು 6ಎ, 7, ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿ ಮತ್ತು ಕಾಳಸಂತೆ ಕೋರರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಲು ಸಲ್ಲಿಸಿಕೊಂಡ ದೂರಿನ ಮೇರೆಗೆ ಈ ಪ್ರ.ವ.ವರದಿ.

 

15. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.101/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:01-07-2021 ರಂದು ಸಂಜೆ 17-00 ಘಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು, ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು, ಸೋಮನಾಥಪುರ ಗ್ರಾಮದ ಸಮೀಪ ಬಾಗೇಪಲ್ಲಿ ಚೇಳೂರು ಮುಖ್ಯ ರಸ್ತೆಯಲ್ಲಿರುವ ಮುಂತ ವೆಂಕಟರೆಡ್ಡಿ ರವರ ಜಮೀನಿನ ಬಳಿ ಇರುವ ರಸ್ತೆಯಲ್ಲಿ  ಈ ದೋಷಾರೋಪಣಾ ಪತ್ರದ ಅಂಕಣ-12 ರಲ್ಲಿ ಕಂಡ ಆರೋಪಿಯು MASSEY FERGUSON -9500  PLANETARY PLUS ಕಂಪನಿಯ ಟ್ರ್ಯಾಕ್ಟ ರ್ ENG NO-TSJ327 A42837 CHASSIS NO-MEA9 D6C  3HJ1203421 ಟ್ರ್ಯಾಕ್ಟರ್ ಇಂಜಿನ್ ನ್ನು ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದರ ಪರಿಣಾಮ ಟ್ರ್ಯಾಕ್ಟ ರ್ ರಸ್ತೆಯಿಂದ ಉರುಳಿ ಬ್ರಿಡ್ಜ್ ಕೆಳಗೆ ಬೋರಲಾಗಿ ಬಿದ್ದ ಪರಿಣಾಮ ಈ ದೋಷಾರೋಪಣಾ ಪತ್ರದ ಅಂಕಣ-12 ರಲ್ಲಿ ಕಂಡ ಆರೋಪಿಗೆ ಎಡಾಭಗದ ದವಡೆಗೆ ತೀವ್ರ ಸ್ವರೂಪದ ಗಾಯಗಳಾಗಿರುವುದಾಗಿ ಆರೋಪಿ ಚಾಲಕನಿಗೆ ಟ್ರ್ಯಾಕ್ಟರ್  ಚಾಲನೆ ಮಾಡಲು ಚಾಲನಾ ಪರವಾನಿಗೆ ಇಲ್ಲದೇ ಇರುವುದಾಗಿ ಈ ಕೇಸಿನ ತನಿಖೆಯಿಂದ ದೃಡಪಟ್ಟಿರುತ್ತೆ. ಆದುದರಿಂದ  ಈ ದೋಷಾರೋಪಣಾ ಪತ್ರದ ಅಂಕಣ-12 ರಲ್ಲಿ ಕಂಡ ಆರೋಪಿಯ ವಿರುದ್ದ  ಕಲಂ:279, 338 ಐ.ಪಿ.ಸಿ ರೆ/ವಿ 181 ಐ.ಎಂ.ವಿ ಆಕ್ಟ್ ರೀತ್ಯಾ ಈ ದೋಷಾರೋಪಣಾ ಪತ್ರ.

 

16. ಪೆರೇಸಂದ್ರ ಪೊಲೀಸ್‌ ಠಾಣೆ ಮೊ.ಸಂ.01/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:21/09/2021 ರಂದು ಪಿರ್ಯಾದಿದಾರರಾದ ಶ್ರೀ ನಂಜಪ್ಪ ಬಿನ್ ಲೇಟ್ ದೊಡ್ಡ ನಂಜುಂಡಪ್ಪ,60 ವರ್ಷ ,ಕುಂಬಾರ ಜನಾಂಗ,ಜಿರಾಯ್ತಿ, ಸೋಮೇನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು, ಮೊ ನಂ-9448894261 ರವರು  ಸಂಜೆ 5.00 ಗಂಟೆಯ ಸಮಯದಲ್ಲಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ:17/09/2021 ರಂದು ತನ್ನ ಬಾಬತ್ತು KA 40 EE 1407 ದ್ವಿಚಕ್ರ ವಾಹನ ದಲ್ಲಿ ತಾನು ಮತ್ತು ತನ್ನ ಮಗಳಾದ  ವಾಣಿಶ್ರೀ ರವರರೊಂದಿಗೆ ಪೆರೇಸಂದ್ರ ಕ್ರಾಸ್ ಗೆ ಬಿಡಲು ಸದರಿ ತನ್ನ ವಾಹನದಲ್ಲಿ ಬಂದು ತನ್ನ ಮಗಳನ್ನು ಬಿಟ್ಟು ಪುನಃ ವಾಪಸ್ಸು ತಮ್ಮ ಗ್ರಾಮಕ್ಕೆ ಹೋಗುತ್ತಿರುವಾಗ ಬೆಳಗ್ಗೆ ಸುಮಾರು 9-45 ಗಂಟೆಯ ಸಮಯದಲ್ಲಿ NH 44 ರಸ್ತೆಯ ಸಾದಲಿ ಕ್ರಾಸ್  ಬಳಿ ಹೋಗುತ್ತಿರುವಾಗ ಬೆಂಗಳೂರು ಕಡೆಯಿಂದ ತನ್ನ ಹಿಂಬದಿಯಿಂದ ಬಂದ KA 41 C 5646 ನೋಂದಣಿ ಸಂಖ್ಯೆಯ ಬುಲೋರೊ ವಾಹನದ ಚಾಲಕ ಅತಿ ವೇಗ ಮತ್ತು ಅಜಾಗರುಕತೆಯಿಂದ   ವಾಹನವನ್ನು ಚಾಲನೆ ಮಾಡಿಕೊಂಡು  ಬಂದು ಮುಂದೆ ಹೋಗುತ್ತಿದ್ದ ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿರುತ್ತಾನೆ, ಅದರ ಪರಿಣಾಮ ತಾನು ಕೆಳಗೆ ಬಿದ್ದು ತನ್ನ ತಲೆಗೆ,ಮುಖಕ್ಕೆ,ಕೈ ಕಾಲುಗಳಿಗೆ ರಕ್ತ ಗಾಯವಾಗಿರುತ್ತದೆ ಮತ್ತು ತನ್ನ ಮುಂದಿನ ಎರಡು ಹಲ್ಲುಗಳಿಗೆ ಪೆಟ್ಟಾಗಿರುತ್ತದೆ, ನಂತರ ತನ್ನ ದ್ವಿಚಕ್ರ ವಾಹನವು ಜಖಂ ಗೊಂಡಿರುತ್ತದೆ ಅಲ್ಲಿಯೇ ಇರುವ ಸ್ಥಳಿಯರು ತನ್ನನ್ನು ಉಪಚರಿಸಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಗೆ ಯಾವುದೊ ವಾಹಣದಲ್ಲಿ ಕಳುಹಿಸಿಕೊಟ್ಟಿರುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಕಾರಣ ತಡವಾಗಿ ದೂರನ್ನು ನೀಡಿರುತ್ತೆನೆ, ತನಗೆ ಅಪಘಾತ ಪಡೆಸಿದ KA 41 C 5646 ಬುಲೋರೊ ವಾಹನದ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿದೆ.

 

17. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.297/2021 ಕಲಂ. 323,447,341,504,506,34 ಐ.ಪಿ.ಸಿ:-

          ದಿನಾಂಕ:21-09-2021 ರಂದು ಸಂಜೆ 5.30 ಗಂಟೆಗೆ ಪಿರ್ಯಾದಿದಾರರಾದ ಆರ್.ಶಂಕರಪ್ಪ ಬಿನ್ ಟಿ.ಕೆ.ರಾಮಕೃಷ್ಣಪ್ಪ,ಸುಮಾರು 40 ವರ್ಷ, ವಕ್ಕಲಿಗರು,ಜಿರಾಯ್ತಿ, ವಾಸ: ತುಮ್ಮನಹಳ್ಳಿ ಗ್ರಾಮ,ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತಮ್ಮ ಬಾಬತ್ತು ಸೊರಕಾಯಲಹಳ್ಳಿ ಗ್ರಾಮದ ಸರ್ವೆ ನಂ:28/2, 35/5, 35/1. 35/4, 35/3, 35/2, 34/1ಅ ಹಾಗೂ 34/5 ಜಮೀನುಗಳು ತಮ್ಮ ತಂದೆ ಟಿ.ಕೆ.ರಾಮಕೃಷ್ಣಪ್ಪ ರವರ ಹೆಸರಿನಲ್ಲಿರುತ್ತೆ, ತಾನು ಮತ್ತು ತನ್ನ ಅಣ್ಣನಾದ ಟಿ.ಆರ್.ವಿಶ್ವನಾಥ ರವರುಗಳು ಸ್ವಾಧೀನಾನುಭವದಲ್ಲಿದ್ದು ಈಗ್ಗೆ ಸುಮಾರು 10 ವರ್ಷಗಳ ಹಿಂದೆ ಸದರಿ ಜಮೀನುಗಳಲ್ಲಿ ದಾಕ್ಷಿ ಬೆಳೆಯನ್ನು ಹಾಕಿರುತ್ತೇವೆ, ಸದರಿ ಜಮೀನುಗಳ ವಿಚಾರದಲ್ಲಿ ತಮಗೂ ಮತ್ತು ಸೊರಕಾಯಲಹಳ್ಳಿ ಗ್ರಾಮದ ವಾಸಿಗಳಾದ ಮುನಿಶಾಮಪ್ಪ ಬಿನ್ ಗುಂಟಪ್ಪ, ಈರಮ್ಮ ಕೊಂ ಮುನಿಶಾಮಪ್ಪ, ಗಾಯಿತ್ರಿ ಕೋಂ ಜಯಚಂದ್ರ, ನರಸಿಂಹಮೂರ್ತಿ ಬಿನ್ ಮುನಿಶಾಮಪ್ಪ ರವರುಗಳ ಮದ್ಯೆ ವಿವಾದಗಳಿದ್ದು ಮೇಲ್ಕಂಡ ತಮ್ಮ ಜಮೀನು ಅವರಿಗೆ ಸೇರಬೇಕೆಂದು ಓ.ಎಸ್.ನಂ:145/2010 ರಂತೆ ಶಿಡ್ಲಘಟ್ಟ ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ಕೇಸು ದಾಖಲಿಸಿದ್ದು ಸದರಿ ಕೇಸು ವಿಚಾರಣೆ ನಡೆದು ಜಮೀನುಗಳಲ್ಲಿ ಗಾಯಿತ್ರಿ ಎಂಬುವವರಿಗೆ ಭಾಗ ಇದೆ ಎಂದು ತೀರ್ಪು ನೀಡಿದ್ದು ಸದರಿ ತೀರ್ಪಿನ ವಿರುದ್ದ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ನಾವು ಆರ್.ಎ .ನಂ:24/2021 ರಲ್ಲಿ ಅಪೀಲ್ ಸಲ್ಲಿಸಿದ್ದು ಸದರಿ ಅಪೀಲಿನಲ್ಲಿ  ಘನ ಹಿರಿಯ ಶ್ರೇಣಿ ನ್ಯಾಯಾಲಯವು ಕಿರಿಯ ಶ್ರೇಣಿ ನ್ಯಾಯಾಲಯದ ಆಧೇಶವನ್ನ ತಡೆಹಿಡಿದು ದಿನಾಂಕ:23-04-2021 ರಂದು ಆಧೇಶ ಮಾಡಿರುತ್ತದೆ.ಈಗಿರುವಲ್ಲಿ ದಿನಾಂಕ:17.09.2021 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ತಮ್ಮ ಬಾಬತ್ತು ಸೊರಕಾಯಲಹಳ್ಳಿ ಗ್ರಾಮದ ಸರ್ವೆ ನಂ:28/2, 35/5, 35/1. 35/4, 35/3, 35/2, 34/1ಅ ಹಾಗೂ 34/5 ಜಮೀನುಗಳಲ್ಲಿ ಬೆಳೆದಿದ್ದ ದಾಕ್ಷಿಯನ್ನು ಕಟಾವುಮಾಡುತ್ತಿದ್ದಾಗ ಸೊರಕಾಯಲಹಳ್ಳಿ ಗ್ರಾಮದ ವಾಸಿಗಳಾದ ಮುನಿಶಾಮಪ್ಪ ಬಿನ್ ಗುಂಟಪ್ಪ, ಈರಮ್ಮ ಕೊಂ ಮುನಿಶಾಮಪ್ಪ, ಗಾಯಿತ್ರಿ ಕೋಂ ಜಯಚಂದ್ರ, ನರಸಿಂಹಮೂರ್ತಿ ಬಿನ್ ಮುನಿಶಾಮಪ್ಪ ರವರುಗಳು ತಮ್ಮ ಜಮೀನಿಗೆ ಅಕ್ರಮ ಪ್ರವೆಶ ಮಾಡಿ ಈ ಜಮೀನು ತಮಗೆ ಸೇರಿದೆ ನೀವು ಇಲ್ಲಿ ದಾಕ್ಷಿ ಕಟಾವು ಮಾಡಬೇಡಿ ಎಂದು ಹೇಳಿ ತಾವು ಮಾಡುತ್ತಿದ್ದ ಕೆಲಸಕ್ಕೆ ಅಡ್ಡಿಪಡಿಸಿದ್ದು ಆಗ ತಾನು ಏಕೆ ಎಂದು ಕೇಳಿದಕ್ಕೆ  ಮೇಲ್ಕಂಡವರು ತನ್ನ ಮೇಲೆ ಗಲಾಟೆ ಮಾಡಿ ಕೈಗಳಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಸದರಿ ಜಮೀನುಗಳಲ್ಲಿನ ದಾಕ್ಷಿ ಕಟಾವು ಮಾಡಿದರೇ ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ, ಗಲಾಟೆಯನ್ನು ತಮ್ಮ ಗ್ರಾಮದ ನಾರಾಯಣಸ್ವಾಮಿ ಬಿನ್ ಪಿಳ್ಳಪ್ಪಯ್ಯ ಮತ್ತು ಮುನಿಕೃಷ್ಣಪ್ಪ ಬಿನ್ ಮುನಿಯಪ್ಪ ರವರುಗಳು ಗಲಾಟೆಯನ್ನು ಬಿಡಿಸಿರುತ್ತಾರೆ. ಈ ವಿಚಾರ ಗ್ರಾಮದಲ್ಲಿ ಹಿರಿಯರು ಮಾತನಾಡಿ ರಾಜಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಅದರೇ ಮೇಲ್ಕಂಡವರು ರಾಜಿ ಪಂಚಾಯ್ತಿಗೆ ಬಂದಿರುವುದಿಲ್ಲ ಅದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

18. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.298/2021 ಕಲಂ. 143,147,307,504,506,149 ಐ.ಪಿ.ಸಿ:-

     ದಿನಾಂಕ 21/09/2021 ರಂದು ರಾತ್ರಿ 8-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಕೆ.ಪಿ ಹರೀಶ್ ಬಿನ್ ಪಿಳ್ಳಾಂಜಿನಪ್ಪ, 27 ವರ್ಷ, ಕನ್ನಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 18/09/2021 ರಂದು ತಾನು ಮತ್ತು ಚಿಂತಾಮಣಿ ತಾಲ್ಲೂಕು ಮಸ್ತೇನಹಳ್ಳಿ ಗ್ರಾಮದ ಕೃಷ್ಣಮೂರ್ತಿ ರವರು ಸದರಿ ಕೃಷ್ಣಮೂರ್ತಿ ರವರಿಗೆ ಟ್ರಾಕ್ಟರ್ ಕಲ್ಟಿವೇಟರ್ ನಂ-5 ಕಾರು ನೇಗಿಲನ್ನು ಮಾಡಿಸಲು ಕೃಷ್ಣಮೂರ್ತಿ ರವರ ದ್ವಿ ಚಕ್ರ ವಾಹನದಲ್ಲಿ ಜಂಗಮಕೋಟೆ ಕ್ರಾಸ್ ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಇಂಜಿನಿಯರಿಂಗ್ ವರ್ಕ್ಸ್ ನ ಅಂಗಡಿ ಬಳಿಗೆ ಹೋಗಿ ಮದ್ಯಾಹ್ನ ಸುಮಾರು 2-30 ಗಂಟೆ ಸಮಯದಲ್ಲಿ ಅಂಗಡಿಯ ಬಳಿ ವಿಚಾರಿಸುತ್ತಿದ್ದಾಗ ಸದರಿ ಅಂಗಡಿಯ ಎದುರುಗಡೆ ಮೆಕಾನಿಲ್ ಅಂಗಡಿಯಲ್ಲಿ ತಮ್ಮ ಗ್ರಾಮದ ಅರವಿಂದ್ ಕುಮಾರ್ ಬಿನ್ ಕೃಷ್ಣಪ್ಪ ರವರು ಮೆಕಾನಿಕ್ ಕೆಲಸವನ್ನು ಮಾಡಿಸುತ್ತಿದ್ದನು. ಆಗ ಯಾರೋ 3 ಜನ ಅಪಚಿತರು ತನ್ನ ಬಳಿ ಬಂದು ನಿಮ್ಮ ಗ್ರಾಮದ ಅರವಿಂದ್ ಕುಮಾರ್ ರವರು ಕರೆಯುತ್ತಿದ್ದಾರೆ ಬಾರೋ ಎಂದು ತನ್ನನ್ನು ಕರೆದರು ತಾನು ಆಗ ನಾನು ಬರಲ್ಲ ನೀವು ಯಾರೋ ನನಗೆ ಗೊತ್ತಿಲ್ಲ ನನಗೆ ಇಲ್ಲಿ ಕೆಲಸ ಇದೇ, ನೀವು ಹೋಗಿ ಎಂದು ಹೇಳುತ್ತಿದ್ದಾಗ ತನ್ನ ಗ್ರಾಮದ ಅರವಿಂದ್ ಕುಮಾರ್ ಬಿನ್ ಕೃಷ್ಣಪ್ಪ ಎಂಬುವನು ತನ್ನ ಬಳಿ ಬಂದು ಏ ಬೋಳಿ ನನ್ನ ಮಗನೇ ನೀನೇ ನನ್ನ ಅಂಗಡಿಯನ್ನು ಸುಟ್ಟು ಹಾಕಿದ್ದೀಯಾ ನಿನ್ನನ್ನು ಬಿಡಲ್ಲ ನಿನ್ನ ತಾಯಿನೇ ಕ್ಯಾಯ ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ತನ್ನ ಪ್ಯಾಂಟ್ ಜೇಬಿನಿಂದ ಚಾಕು ತೆಗೆದು ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ತನ್ನ ಕುತ್ತಿಗೆಯ ಭಾಗಕ್ಕೆ ತಿವಿಯಲು ಬಂದಾಗ ಆಗ ತಾನು ತಪ್ಪಿಕೊಂಡಿದ್ದು, ಏ ನನ್ನ ಮಗನೇ ನಿನ್ನನ್ನು ಬಿಡಲ್ಲ ಈಗ ತಪ್ಪಿಸಿಕೊಂಡಿದ್ದೀಯಾ ನೀನು ಹೇಗೆ ಊರಿನೊಳಗೆ ಬರುತ್ತೀಯ ನೋಡುತ್ತೇನೆ ನಿನ್ನನ್ನು ಮುಗಿಸೋ ತನಕ ನಾನು ನಿದ್ದೆ ಹೋಗಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಅರವಿಂದ್ ಕುಮಾರ್ ನನ್ನು ಅಲ್ಲಿದ್ದವರು ತಳ್ಳಿಕೊಂಡು ಹೋಗಿದ್ದು, ಸದರಿ ದೃಶ್ಯಗಳು ನಾವು ನೇಗಿಲು ಮಾಡಿಸಲು ಹೋಗಿದ್ದಂತಹ ಶ್ರೀ ಲಕ್ಷ್ಮೀ ವೆಂಕಟೇಶ್ವರ ಇಂಜಿನಿಯರಿಂಗ್ ವರ್ಕ್ಸ್ ನ ಅಂಗಡಿಯ ಸಿಸಿ ಟಿವಿ ಕ್ಯಾಮರಾ ದಲ್ಲಿ ಸೆರೆಯಾಗಿರುತ್ತದೆ. ಅಲ್ಲಿದ್ದವರು ಕೃಷ್ಣಮೂರ್ತಿ ಮತ್ತು ಇತರರು ಅವರನನ್ನು ತಳ್ಳಿಕೊಂಡು ಹೋಗಿರುತ್ತಾರೆ. ತದ ನಂತರ ತಾನು ತಮ್ಮ ಗ್ರಾಮಕ್ಕೆ ಸಂಜೆ ಬಂದಿದ್ದು ಮನೆಯಲ್ಲಿದ್ದು, ದಿನಾಂಕ 19/09/2021 ರಂದು ಬೆಳಿಗ್ಗೆ ಸುಮಾರು 10-30 ಗಂಟೆ ಸಮಯದಲ್ಲಿ ತನ್ನ ಮನೆಯ ಬಳಿ ಬಳಿಗೆ ಅರವಿಂದ್ ಕುಮಾರ್ ಬಿನ್ ಕೃಷ್ಣಪ್ಪ, ಆನಂದ್ ಬಿನ್ ಕೃಷ್ಣಪ್ಪ, ರವರು ಬಂದು ದಮಕಿ ಹಾಕಿ, ಈ ಬೋಳಿ ನನ್ನ ಮಗನೇ ಬಾರೋ, ನಿನ್ನೆ ಜಂಗಮಕೋಟೆ ಕ್ರಾಸ್ ನಲ್ಲಿ ತಪ್ಪಿಸಿಕೊಂಡಿದ್ದೀಯಾ ಇವತ್ತು ನಿನ್ನನ್ನು ಬಿಡಲ್ಲ ಎಂದು ಕೈಗಳಲ್ಲಿ ಚಾಕು ಮತ್ತು ಇತರೇ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದಿದ್ದು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆಯನ್ನು ಹಾಕಿರುವುದಾಗಿ ಕೊಟ್ಟ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

19. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.299/2021 ಕಲಂ. 279,337,304(A) ಐ.ಪಿ.ಸಿ:-

     ದಿನಾಂಕ:22.09.2021 ರಂದು ಬೆಳಿಗ್ಗೆ 8.30 ಗಂಟೆಗೆ ಪಿರ್ಯಾದಿದಾರರಾದ ಎಸ್ ಜಮೀರ್ ಬಿನ್ ಸೈಯದ ಖಾಸಿಂ ಸಾಭಿ, 42 ವರ್ಷ, ಮುಸ್ಲಿಂ, ಸಂತೆಕಲ್ಲಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಾನು ಈರುಳ್ಳಿ ಬೆಳ್ಳುಳ್ಳಿ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತಮ್ಮ ತಂದೆ ತಾಯಿಗೆ ಮೂರು ಜನ ಗಂಡು ಮಕ್ಕಳು, 7 ಜನ ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಮದುವೆಗಳಾಗಿ ಬೇರೆ ಬೇರೆಯಾಗಿ ವಾಸವಾಗಿರುತ್ತೇವೆ. ತನ್ನ 5 ನೇ ಅಕ್ಕನಾದ ನಗೀನಾ ತಾಜ್ ರವರನ್ನು ಕೋಲಾರ ತಾಲ್ಲೂಕು ಚನ್ನಸಂದ್ರ ಗ್ರಾಮದ ವಾಸಿ ಅಬ್ದುಲ್ ಬಾಷೀದ್ ರವರಿಗೆ ಕೊಟ್ಟು ಮದುವೆ ಮಾಡಿದ್ದು ಅವರಿಗೆ 1 ನೇ ಸಾಧಿಕ್ ಪಾಷ, 2 ನೇ ಹಾರೀಪ್ ಪಾಷ್ ಎಂಬ ಇಬ್ಬರು ಗಂಡು ಮಕ್ಕಳಿದ್ದು ಹಾರೀಪ್ ಪಾಷ ರವರು ಹೆಚ್.ಕ್ರಾಸ್ ನಲ್ಲಿ ಕಾರ್ ಗ್ಯಾರೇಜ್ ಅಂಗಡಿಯನ್ನುಟ್ಟುಕೊಂಡು ಪ್ರತಿ ದಿನ ಹಾರೀಪ್ ಪಾಷ ರವರ ಬಾಬತ್ತು ಕೆಎ.07.ಇಎ.4624 ಸಿಡಿ 100 ದ್ವಿ ಚಕ್ರ ವಾಹನದಲ್ಲಿ ಚನ್ನಸಂದ್ರ ಗ್ರಾಮದಿಂದ ಹೆಚ್.ಕ್ರಾಸ್ ಗೆ ಹೋಗಿ ಗ್ಯಾರೇಜ್ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ವಾಪಸ್ಸು ಬರುತಿದ್ದನು. ಎಂದಿನಂತೆ ದಿನಾಂಕ:21.09.2021 ರಂದು ಬೆಳಿಗ್ಗೆ ಹಾರೀಪ್ ಪಾಷ ರವರು ಕೆಲಸದ ನಿಮ್ಮಿತ್ತ ಹಾರೀಪ್ ಪಾಷ ರವರ ಬಾಬತ್ತು ಕೆಎ.07.ಇಎ.4624 ಸಿಡಿ 100 ದ್ವಿ ಚಕ್ರ ವಾಹನದಲ್ಲಿ ಚನ್ನಸಂದ್ರ ಗ್ರಾಮದಿಂದ ಹೆಚ್.ಕ್ರಾಸ್ ಗೆ ಹೋಗಿರತ್ತಾರೆ. ತಾನು ಇದೇ ದಿನ ರಾತ್ರಿ 7.40 ಗಂಟೆಯಲ್ಲಿ ಹೆಚ್.ಕ್ರಾಸ್ ನ ವಿಜಯಪುರ ರಸ್ತೆಯಲ್ಲಿ ಈರುಳ್ಳಿ ಬೆಳ್ಳುಳ್ಳಿ ವ್ಯಾಪಾರ ಮಾಡುತಿದ್ದಾಗ 7.45 ಗಂಟೆ ಸಮಯದಲ್ಲಿ ತಾನು ವ್ಯಾಪಾರ ಮಾಡುತಿದ್ದ ಸ್ವಲ್ಪ ದೂರದಲ್ಲಿ ಅಂದರೆ ಕೋಲಾರ-ವಿಜಯಪುರ ರಸ್ತೆಯ ಪಕ್ಕದಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ಅಪಘಾತವವಾಗಿದ್ದು ತಾನು ಕೂಡಲೇ ಹೋಗಿ ನೋಡಿ ವಿಚಾರ ಮಾಡಲಾಗಿ ಹಾರೀಫ್ ಪಾಷ ರವರು ಗ್ಯಾರೇಜ್ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ವಾಪಸ್ಸು ಕೆಎ.07.ಇಎ.4624 ಸಿಡಿ 100 ದ್ವಿ ಚಕ್ರ ವಾಹನದಲ್ಲಿ ಬರಲು ಹಾರೀಪ್ ಪಾಷ ರವರು ಮಂಜುನಾಥ ರವರನ್ನು ದ್ವಿ ಚಕ್ರ ವಾಹನದ ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ದ್ವಿ ಚಕ್ರ ವಾಹನವನ್ನು ರಸ್ತೆಯ ಎಡಭಾಗದಲ್ಲಿ ಚಾಲನೆ ಮಾಡಿಕೊಂಡು ಹೋಗುತಿದ್ದಾಗ ಎದುರುಗಡೆಯಿಂದ ಕೋಲಾರ ಕಡೆಯಿಂದ ಬಂದ ಎಪಿ.03.ಟಿಡಿ.3196 ಬೊಲೆರೋ ಮ್ಯಾಕ್ಷಿ ಟ್ರಕ್ ಪ್ಲಸ್ ಗೂಡ್ಸ್ ವಾಹನದ ಚಾಲಕನು ತನ್ನ ವಾಹವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ತನ್ನ ಮುಂಭಾಗದಲ್ಲಿ ಹೋಗುತಿದ್ದ ಯಾವುದೋ ವಾಹವನ್ನು ಓವರ್ ಟೇಕ್ ಮಾಡಲು ಹೋಗಿ ಹಾರೀಪ್ ಪಾಷ ರವರು ಚಾಲನೆ ಮಾಡಿಕೊಂಡು ಹೋಗುತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ಹಾರೀಪ್ ಪಾಷ ಮತ್ತು ದ್ವಿ ಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಮಂಜುನಾಥ ರವರು ದ್ವಿ ಚಕ್ರ ವಾಹನ ಸಮೇತ ರಸ್ತೆಯಲ್ಲಿ ಬಿದ್ದು ಹೋಗಿ ದ್ವಿ ಚಕ್ರ ವಾಹನ ಜಖಂಗೊಂಡು, ಹಾರೀಪ್ ಪಾಷ ರವರಿಗೆ ತಲೆಗೆ ತೀವ್ರತರವಾದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮಂಜುನಾಥ ರವರ ತಲೆಗೆ, ಮೈ ಮೇಲೆ ಗಾಯಗಳಾಗಿದ್ದು ಮಂಜುನಾಥ ರವರನ್ನು ಯಾವುದೋ ವಾಹನದಲ್ಲಿ ಚಿಕಿತ್ಸೆಗೆ ಹೊಸಕೋಟೆ ಅಸ್ಪತ್ರೆಗೆ ಕಳುಹಿಸಿಕೊಟ್ಟು, ಹಾರೀಪ್ ಪಾಷ ರವರ ಮೃತ ದೇಹವನ್ನು ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯ ಶವಗಾರಕ್ಕೆ ಸಾಗಿಸಿರುತ್ತೆ. ತಾನು ಅಪಘಾತವಾದ ಬಗ್ಗೆ ತಮ್ಮ ಮನೆಯಲ್ಲಿ ತಿಳಿಸಿ ಈ ದಿನ ಠಾಣೆಗೆ ಬಂದು ದೂರು ನೀಡುತಿದ್ದು ಹಾರೀಪ್ ಪಾಷ ರವರ ಮೃತ ದೇಹವಿರುವ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ವಾಹನದ ಮುಂಭಾಗದಲ್ಲಿ ಹೋಗುತಿದ್ದ ಯಾವುದೋ ವಾಹವನ್ನು ಓವರ್ ಟೆಕ್ ಮಾಡಲು ಹೋಗಿ ಕೆಎ.07.ಇಎ.4624 ಸಿಡಿ 100 ದ್ವಿ ಚಕ್ರ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತವನ್ನುಂಟು ಮಾಡಿದ ಎಪಿ.03.ಟಿಡಿ.3196 ಬೊಲೆರೋ ಮ್ಯಾಕ್ಷಿ ಟ್ರಕ್ ಪ್ಲಸ್ ಗೂಡ್ಸ್ ವಾಹನದ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 

20. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.119/2021 ಕಲಂ. 32(3),15(A) ಕೆ.ಇ ಆಕ್ಟ್:-

     ದಿನಾಂಕ:22/09/2021 ರಂದು ಮದ್ಯಾಹ್ನ 1-15 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:22-09-2021 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಸಿಬ್ಬಂದಿಯವರಾದ   ಪಿ.ಸಿ. 556 ಧರಣೇಶ್, ಹೆಚ್.ಸಿ 61 ಶ್ರೀನಿವಾಸ ಮತ್ತು ಜೀಪು ಚಾಲಕ ಅಂಬರೀಶ ರವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ನಗರದ ಕಾಂಗ್ರೇಸ್ ಭವನದ ಮುಂಭಾಗ ಖಾಲಿ ಜಾಗದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ಪಂಚಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 12-15 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ಇಬ್ಬರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವ ಆಸಾಮಿಯನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸ ಕೇಳಲಾಗಿ ವೆಂಕಟಮ್ಮ ಕೊಂ ಲೇಟ್ ಮುನಿಯಪ್ಪ 55 ವರ್ಷ, ನಾಯಕರು, ಕೂಲಿ ಕೆಲಸ ವಾಸ:ಡಬರಗಾನಹಳ್ಳಿ ಗ್ರಾಮ, ಆನೂರು ಪಂಚಾಯ್ತಿ ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಇವರು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು ಬ್ಯಾಗ್ನಲ್ಲಿ ಪರಿಶೀಲಿಸಲಾಗಿ HAYWARDS CHEERS WHISKY 90 ML  ನ 18 ಮದ್ಯದ ಪಾಕೆಟ್ ಗಳಿದ್ದು ಒಂದರ ಬೆಲೆ 35.13 ರೂಗಳಾಗಿದ್ದು, 18 ರ ಬೆಲೆ ಒಟ್ಟು 632/- ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ HAYWARDS CHEERS WHISKY ನ 03 ಖಾಲಿ ಮದ್ಯದ ಪಾಕೇಟ್ಗಳಿರುತ್ತೆ. ಹಾಗೂ 02 ಪ್ಲಾಸ್ಟಿಕ್ ಗ್ಲಾಸ್ಗಳಿರುತ್ತೆ. ಇವುಗಳನ್ನು ಮುಂದಿನ ತನಿಖೆ ಬಗ್ಗೆ ಪಂಚರ ಸಮಕ್ಷಮ ಮದ್ಯಾಹ್ನ 12-30 ಗಂಟೆಂಯಿಂದ ಮದ್ಯಾಹ್ನ 1-00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಮೇಲ್ಕಂಡ ಆಸಾಮಿಯನ್ನು ವಶಕ್ಕೆ ಪಡೆದು ಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ  ಮೇರೆಗೆ   ಠಾಣಾ ಮೊ.ಸಂ.119/2021 ಕಲಂ.32(3), 15(ಎ) ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

Last Updated: 22-09-2021 06:33 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080