ಅಭಿಪ್ರಾಯ / ಸಲಹೆಗಳು

 

1. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.79/2021 ಕಲಂ. 457,380 ಐ.ಪಿ.ಸಿ:-

     ದಿನಾಂಕ:21/08/2021 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:20/08/2021 ರಂದು ರಾತ್ರಿ 11-57 ರಲ್ಲಿ ವಸತಿ ನಿಲಯಕ್ಕೆ ನುಗ್ಗಿದ ಮೂರು ಜನ ಕಳ್ಳರು ನಿಲಯದ ಬೀಗ ಕಿತ್ತು ಹಾಕಿ,ಒಳನುಗ್ಗಿ ಬೀರುವು ಒಪನ್ ಮಾಡಿ ಅದರಲ್ಲಿದ್ದ 4 ಸಾವಿರ ಬೆಲೆ ಬಾಳುವ ಪುಸ್ತಕಗಳು,ಬ್ಯಾಗ್ ಗಳು, ಕಲಿಕೆ ಸಾಮಗ್ರಿಗಳು ಮತ್ತು ಚರ್ಚಗೆ ಬರುವ ಭಕ್ತರು ಹಾಕಿದ ಕಾಣಿಕೆ ಪೆಟ್ಟಿಗೆ ಯನ್ನು ಎತ್ತಿಕೊಂಡು ಹೋಗಿ ಆಚೆ ಹೊಡೆದು ,ಹಣ ದೊಚಿಕೊಂಡು ಹೋಗಿದ್ದಾರೆ.ಅಂದಾಜು 4 ರಿಂದ 5 ಸಾವಿರಯಿರುತ್ತೆ .ಆದ್ದರಿಂದ ಸ್ಥಳಕ್ಕೆ ಭೇಟಿ ನೀಡಿ  ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.366/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ: 21/08/2021 ರಂದು ಸಂಜೆ 6.30 ಗಂಟೆಗೆ ಪಿರ್ಯಾಧಿದಾರರಾದ ಮಂಜುನಾಥ ಬಿನ್ ಲೇಟ್ ರಾಮಪ್ಪ, 43 ವರ್ಷ, ಗಾರೆ ಕೆಲಸ, ವಕ್ಕಲಿಗರು, 4ನೇ ಕ್ರಾಸ್, ಬಿ.ಸಿ.ಎಂ ಹಾಸ್ಟಲ್ ಬಳಿ, ಚೌಡರೆಡ್ಡಿ ಪಾಳ್ಯ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಅಕ್ಕ ರಾಧಮ್ಮರವರು ಗಂಡ ಮಕ್ಕಳೊಂದಿಗೆ ಕುಟುಂಬ ಸಮೇತ ಚೌಡರೆಡ್ಡಿ ಪಾಳ್ಯದ ತಮ್ಮ ಮನೆಯ ಬಳಿಯೇ ವಾಸವಾಗಿರುತ್ತಾರೆ. ಹೀಗಿರುವಾಗ ತನ್ನ ಅಕ್ಕನ ಮಗನಾದ ನವೀನ್ ಬಿನ್ ನಾಗರಾಜ್, 28 ವರ್ಷ, ಗಾರೆ ಕೆಲಸ ರವರು ದಿನಾಂಕ 20/08/2021 ರಂದು ಸಂಜೆ 5.00 ಗಂಟೆ ಸಮಯದಲ್ಲಿ ತನಗೆ ಕುರುಟಹಳ್ಳಿ ಗ್ರಾಮದಲ್ಲಿ ಕೆಲಸವಿದೆ ಹೋಗಿ ಬರುತ್ತೇನೆ ಎಂದು ಕೆಎ-40 ಹೆಚ್-1137 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಸ್ಲ್ಪೆಂಡರ್ ದ್ವಿ ಚಕ್ರ ವಾಹನದಲ್ಲಿ ಮನೆಯಿಂದ ಹೋದನು. ನಂತರ ಸಂಜೆ ಸುಮಾರು 5.55 ಗಂಟೆ ಸಮಯದಲ್ಲಿ ಕುರುಟಹಳ್ಳಿ ಗ್ರಾಮದ ವಾಸಿ ಅಮರ್ ಬಿನ್ ನಾರೆಪ್ಪ ರವರು ತನಗೆ ಕರೆ ಮಾಡಿ ನವೀನ್ ರವರಿಗೆ ಕೋಲಾರ ರಸ್ತೆಯ ರೇಷ್ಮೇ ಬೀಜೋತ್ಪಾದನಾ ಕೇಂದ್ರದ ಮುಂದೆ ರಸ್ತೆಯಲ್ಲಿ ಅಪಘಾತವಾಗಿದ್ದು ತಾನು ಮತ್ತು ಇತರರು ಉಪಚರಿಸಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದನು. ಆ ಕೂಡಲೇ ತಾನು ಚಿಂತಾಮಣಿ ಸರ್ಕಾರಿ ಆಸ್ವತ್ರೆ ಬಳಿ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ನವೀನ್ ರವರಿಗೆ ತಲೆಗೆ, ಎಡ ಭುಜ ಮತ್ತು ಎಡ ಕಣ್ಣಿನ ಬಳಿ ರಕ್ತಗಾಯವಾಗಿರುತ್ತೆ. ನಂತರ ತನ್ನ ಬಾಮೈದ ನವೀನ್ ರವರನ್ನು ಕುರಿತು ಸದರಿ ಅಪಘಾತದ ಬಗ್ಗೆ ವಿಚಾರಿಸಲಾಗಿ ಆತನು ನಾನು ಕುರುಟಹಳ್ಳಿ ಗ್ರಾಮಕ್ಕೆ ಹೋಗುವ ಸಲುವಾಗಿ  ಈ ದಿನ ಸಂಜೆ 5.40 ಗಂಟೆ ಸಮಯದಲ್ಲಿ ಕೆಎ-40 ಹೆಚ್-1137 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಸ್ಲ್ಪೆಂಡರ್ ದ್ವಿ ಚಕ್ರ ವಾಹನದಲ್ಲಿ ಕೋಲಾರ ರಸ್ತೆಯ ರೇಷ್ಮೇ ಬೀಜೋತ್ಪಾದನಾ ಕೇಂದ್ರದ ಮುಂದೆ ರಸ್ತೆಯ ಎಡ ಬದಿಯಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ನನ್ನ ಎದರುಗಡೆಯಿಂದ ಅಂದರೆ ಕುರುಟಹಳ್ಳಿ ಕಡೆಯಿಂದ ಬಂದ ಎಪಿ-07 ಎಹೆಚ್-6890 ನೊಂದಣಿ ಸಂಖ್ಯೆಯ ಟಾಟಾ ಸುಮೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ದ್ವಿ ಚಕ್ರ ವಾಹನಕ್ಕೆ ಬಂದು ಡಿಕ್ಕಿ ಹೊಡೆಸಿದ್ದು ನಾನು ವಾಹನ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿರುತ್ತೇನೆ. ಸದರಿ ಅಪಘಾತದಲ್ಲಿ ನನ್ನ ಬಾಬತ್ತು ದ್ವಿಚಕ್ರ ವಾಹನ ಜಖಂ ಆಗಿದ್ದು, ನನ್ನ ದ್ವಿಚಕ್ರ ವಾಹನ ಮತ್ತು ನನಗೆ ಅಪಘಾತಪಡಿಸಿದ ಟಾಟಾ ಸುಮೋ ವಾಹನ ಅಪಘಾತದ ಸ್ಥಳದಲ್ಲಿಯೇ ಇರುವುದಾಗಿ ತಿಳಿಸಿದನು. ಹಾಲಿ ನವೀನ್ ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಾನು ಇದುವರೆಗೂ ಆಸ್ವತ್ರೆಯಲ್ಲಿ ನವೀನ್ ರವರ ಹಾರೈಕೆ ಮಾಡುತ್ತಿದ್ದು ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿರುತ್ತೇನೆ. ಆದ್ದರಿಂದ ನವೀನ್ ರವರಿಗೆ ಅಪಘಾತ ಪಡಿಸಿದ ಮೇಲ್ಕಂಡ ಎಪಿ-07 ಎಹೆಚ್-6890 ನೊಂದಣಿ ಸಂಖ್ಯೆಯ ಟಾಟಾ ಸುಮೋ ವಾಹನದ ಚಾಲಕನ ವಿರುದ್ದ ಕಾನೂನು ಕ್ರಮ  ಜರುಗಿಸಲು ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.151/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ: 21/08/2021 ರಂದು   ಸಂಜೆ 4:00 ಗಂಟೆಗೆ ಪಿರ್ಯಾದಿದಾರರಾದ ಕೆ ವಿ ಮಂಜುಳ ಕೋಂ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ಈಗ್ಗೆ 10 ವರ್ಷಗಳ ಹಿಂದೆ ವಿ.ಕುಮಾರ್ ಬಿನ್ ವಿಶ್ವನಾಥ್ ರಾವ್ ಚಿಂತಾಮಣಿ ನಗರ ರವರೊಂದಿಗೆ ಮದುವೆಯಾಗಿ  1 ನೇ 9 ವರ್ಷದ ಸುಕೃತ್ ,2 ನೇ 4 ವರ್ಷದ ಸುಪ್ರೀತ್ ಎಂಬ ಇಬ್ಬರು ಮಕ್ಕಳಿದ್ದು ನನ್ನ ಗಂಡ ಚಿಕ್ಕಬಳ್ಳಾಪುರದ ಭಾರತಿ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಹೀಗಿರುವಾಗ ನಿನ್ನೆ ದಿನ 20/08/2021 ರಂದು ಮದ್ಯಾಹ್ನ 12:00 ಕ್ಕೆ ಮನೆಗೆ ಹಬ್ಬಕ್ಕೆ ಬೇಕಾದ ಸರಕುಗಳನ್ನು ಮೋರ್ ಮಾರ್ಕೆಟ್ ನಲ್ಲಿ ತೆಗೆದುಕೊಂಡು ಬರುತ್ತೇನೆಂದು ಮನೆಯಿಂದ ನಮ್ಮ ಬಾಬತ್ತು ಕೆಎ 40 ವೈ 7463 ಆಕ್ಟಿವ್ ದ್ವಿ ಚಕ್ರ  ವಾಹನದಲ್ಲಿ ಹೋಗಿದ್ದು ಸರಕುಗಳನ್ನು ತೆಗೆದುಕೊಂಡು ಬರುವಾಗ ಮದ್ಯಾಹ್ನ ಸುಮಾರು 12:15 ಗಂಟೆಯಲ್ಲಿ ಮೋರ್ ಮಾರುಕಟ್ಟೆಯಿಂದ ಮನೆಗೆ ಬರಲು ವಾಹನವನ್ನು ತಿರುಗಿಸುತ್ತಿದ್ದಾಗ ಬೆಂಗಳೂರು (ಕನ್ನಂಪಲ್ಲಿ) ಕಡೆಯಿಂದ ದ್ವಿ ಚಕ್ರ ವಾಹನದ ಸವಾರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಗಂಡ ಚಾಲನೆ ಮಾಡುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ಗಂಡನಿಗೆ ರಕ್ತಗಾಯಗಳಾಗಿ ರಸ್ತೆಯ ಮೇಲೆ ಬಿದ್ದಿರುವುದಾಗಿ ತಿಳಿದ ಕೂಡಲೇ ಬಂದು ನೋಡಲಾಗಿ ವಿಷಯ ನಿಜವಾಗಿದ್ದು  ನನ್ನ ಗಂಡನಿಗೆ ಅಪಘಾತವುಂಟು ಮಾಡಿದ ವಾಹನದ ನೊಂದಣಿ ಸಂಖ್ಯೆ ಕೆಎ 40 ಕ್ಯೂ 2226 ಪ್ಯಾಷನ್ ಪ್ರೋ ಆಗಿದ್ದು ಅದರ ಚಾಲಕ ಮಹೇಂದ್ರರೆಡ್ಡಿ ಬಿನ್ ಭಾಸ್ಕರ್ ರೆಡ್ಡಿ , ಗುಂಡಪ್ಪ ಬಡಾವಣೆ, ಚಿಂತಾಮಣಿ ನಗರ ಎಂದು ತಿಳಿದುಬಂದಿದ್ದು ಇವರು ಕೆಎ 40 ಕ್ಯೂ 2226 ಪ್ಯಾಷನ್ ಪ್ರೋ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಗಂಡ ಚಾಲನೆ ಮಾಡುತ್ತಿದ್ದ ಕೆಎ 40 ವೈ 7463 ಆಕ್ಟಿವ್ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ವಾಹನ ಸಮೇತ ರಸ್ತೆಯ ಮೇಲೆ ಬಿದ್ದು ತಲೆಯ ಬಲಭಾಗಕ್ಕೆ ,ಬಲಭಾಗದ ಕಣ್ಣು, ಬಲಭಾಗದ ಹಿಮ್ಮಡಿ, ಎರಡು ಕೈಗಳ ಮುಂಗೈ ಬಲಭಾಗದ ಭುಜಕ್ಕೆ ರಕ್ತಗಾಯಗಳಾಗಿ ಮುಖದ ಮೇಲೆ ಹಾಗೂ ತಲೆಯ ಬಹುಭಾಗವು ತರಚಿದ ಗಾಯಗಳಾಗಿದ್ದು ಅಷ್ಟರಲ್ಲಿ ಅಲ್ಲಿಗೆ ಬಂದ ನಮ್ಮ ತಂದೆ ಕೆ ಆರ್ ವೆಂಕಟೇಶ್ ಮೂರ್ತಿ ಹಾಗೂ ನನಗೆ ಪರಿಚಯವಿರುವ ಜನಾರ್ಧನಮೂರ್ತಿ ಬಿನ್ ಮುನಿನಾರಾಯಣಪ್ಪ ರವರುಗಳು ಚಿಕಿತ್ಸೆಗಾಗಿ ಉಪಚರಿಸಿ ಚಿಂತಾಮಣಿ ಡೆಕ್ಕನ್ ಆಸ್ಪತ್ರೆಯಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗೀ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದು ಅದೇ ದಿನ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಐಸಿಯು ನಲ್ಲಿ ಕೊಡಿಸುತ್ತಿರುತ್ತೇವೆ, ನನ್ನ ಗಂಡನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ  ಈ ದಿನ ತಡವಾಗಿ ದೂರು ನೀಡುತ್ತಿದ್ದು, ಆದ್ದರಿಂದ ಕೆಎ  40 ಕ್ಯೂ 2226 ಪ್ಯಾಷನ್ ಪ್ರೋ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಗಂಡನಿಗೆ  ಮೇಲ್ಕಂಡಂತೆ ರಕ್ತಗಾಯಗಳಾಗಲು ಕಾರಣರಾದ ಮಹೇಂದ್ರ ರೆಡ್ಡಿ ಮತ್ತು ವಾಹನದ ವಿರುದ್ದ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.152/2021 ಕಲಂ. 379 ಐ.ಪಿ.ಸಿ:-

     ದಿನಾಂಕ:21/08/2021 ರಂದು ಪಿರ್ಯಾದುದಾರರಾದ ಪ್ರಭಾಕರ್.ಎಸ್ ಬಿನ್ ಎಲ್ ಸುಂದರೇಶ್, 54 ವರ್ಷ, ಬ್ರಾಹ್ಮಣರು, ವಾಸ: ವೆಂಕಟಗಿರಿಕೋಟೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ನಮ್ಮ ಮನೆಯ ಪಕ್ಕದಲ್ಲಿ ಒಂದು ಶೆಡ್ ನ್ನು  ಹಾಕಿಕೊಂಡು ಅದರಲ್ಲಿ 2-3 ಕರುಗಳನ್ನು ಮತ್ತು 6 ಹಸುಗಳನ್ನು ಸಾಕುತ್ತಿರುತ್ತೇನೆ. ಹೀಗಿರುವಾಗ ದಿನಾಂಕ 19/08/2021 ರಂದು ಬೆಳಿಗ್ಗೆ ಎಂದಿನಂತೆ ಮನೆಯ ಹೊರಗಡೆ ಕಟ್ಟಿ ಹಾಕಿರುತ್ತೇನೆ.  ನಂತರ ಮದ್ಯಾಹ್ನ 3-00 ಗಂಟೆಗೆ ನೋಡಲಾಗಿ  ನನ್ನ ಬಾಬತ್ತು 06 ಹಸುಗಳ ಪೈಕಿ ಒಂದು ಹಸು ಇರಲಿಲ್ಲ.  ನಂತರ ನಾನು ಅಕ್ಕ ಪಕ್ಕದ  ಗ್ರಾಮಗಳ ಮನೆಗಳ ಬಳಿ  ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ.   ದಿನಾಂಕ 19/08/2021 ರಂದು ಬೆಳಿಗ್ಗೆ 10-00 ಗಂಟೆಯಿಂದ ಮದ್ಯಾಹ್ನ 3-00 ಗಂಟೆಯವರೆಗೆ ನನ್ನ ಬಾಬತ್ತು ಸುಮಾರು 35000/-ರೂ ಬೆಲೆ ಬಾಳುವ ಹಸುವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಕಳ್ಳರನ್ನು ಹಾಗೂ ಹಸುವನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

5. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.112/2021 ಕಲಂ. 87 ಕೆ.ಪಿ ಆಕ್ಟ್:-

     ಈ ದಿನ ದಿನಾಂಕ:21/08/2021 ರಂದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಆದ ನಾನು ಮತ್ತು ಸರ್ಕಾರಿ ಜೀಫ್ ಸಂಖ್ಯೆ ಕೆಎ40-ಜಿ-60ರಲ್ಲಿ ಜೀಪ್ ಚಾಲಕನಾಗಿ ಸಿ,ಪಿ,ಸಿ 91 ಮಂಜುನಾಥ ಹಾಗೂ ಸಿ.ಪಿ.ಸಿ 09 ನಾರಾಯಣಸ್ವಾಮಿ, ಸಿ,ಪಿ,ಸಿ451 ರಾಮಾಂಜಿನೇಯ, ಸಿ,ಪಿ,ಸಿ196 ದೇವರಾಜ ಬಡಿಗೇರರವರೊಂದಿಗೆ  ದಿಬ್ಬೂರಹಳ್ಳಿ ಠಾಣಾ ಸರಹದ್ದಿನಲ್ಲಿ ಸಂಜೆ 16-30 ಗಂಟೆಯ ಸಮಯದಲ್ಲಿ ಗಂಜಿಗುಂಟೆ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ನನಗೆ  ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯ ಗಂಗಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಹಿಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವು ಆಸಾಮಿಗಳು ಗುಂಪು ಕಟ್ಟಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಬಾತ್ಮಿ ಬಂದಿದ್ದು, ಸದರಿ ಆಸಾಮಿಗಳ ಮೇಲೆ ದಾಳಿ ಮಾಡಿ ಹಾಗೂ ಕಾನೂನು ಕ್ರಮ ಕೈಗೊಳ್ಳಲು  ಠಾಣೆಗೆ ಮಾಹಿತಿಯನ್ನು ತಿಳಿಸಿ ಠಾಣೆಯಯಿಂದ  ಈ ಮೇಲ್  ಸಂದೇಶದ ಮೂಲಕ ಘನ ನ್ಯಾಯಲಯಕ್ಕೆ ನಿವೇದಿಸಿಕೊಂಡು ಸದರಿ ಆಸಾಮಿಗಳ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಸಂಜೆ 17-30 ಗಂಟೆಗೆ  ಗಂಗಹಳ್ಳಿ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು  ಸದರಿ ಆಸಾಮಿಗಳ ಮೇಲೆ ದಾಳಿ ಮಾಡುವ ಮಾಹಿತಿಯನ್ನು ತಿಳಿಸಿ ಪಂಚರಾಗಿರಲು ಕೋರಿದರ ಮೇರೆಗೆ ಪಂಚರು ಒಪ್ಪಿರುತ್ತಾರೆ. ನಂತರ ಪಂಚರೊಂದಿಗೆ ನಾನು ಮತ್ತು ಸಿಬ್ಬಂದಿಯವರುಗಳು ನಡೆದುಕೊಂಡು ಗಂಗಹಳ್ಳಿ ಸರ್ಕಾರಿ ಶಾಲೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸರ್ಕಾರಿ ಶಾಲೆಯ ಹಿಂಭಾಗರಲ್ಲಿ ಯಾರೋ ಕೆಲವು ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ ವೃತ್ತಾಕಾರವಾಗಿ ಕುಳಿತುಕೊಂಡು ಒಬ್ಬ ಆಸಾಮಿಯು ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದು ಒಬ್ಬ ಆಸಾಮಿಯು ಅಂದರ್ 100 ರೂ ಎಂತಲೂ ಮತ್ತೊಬ್ಬ ಆಸಾಮಿಯ ಬಾಹರ್ 100 ರೂ ಎಂತಲೂ, ಇನ್ನುಳಿದ ಆಸಾಮಿಗಳು ಸಹ ಅಂದರ್-ಬಾಹರ್ ಎಂದು ಹಣವನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದು ಖಚಿತವಾದ ಮೇಲೆ ಸದರಿ ಆಸಾಮಿಗಳನ್ನು ಸುತ್ತುವರೆದು ಓಡಬಾರದೆಂದು ಎಚ್ಚರಿಸಿದರು ಸಹ ಕೆಲವು ಆಸಾಮಿಗಳು ಬ್ರಾಹ್ಮರಹಳ್ಳಿ ಕಡೆಗೆ ಓಡಿ ಹೋಗಿದ್ದು ಸದರಿಯವರುಗಳ ಪೈಕಿ ಒಬ್ಬ ಆಸಾಮಿಯನ್ನು ಸಿಬ್ಬಂದಿಯವರು  ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ 01) ಸುನೀಲ್ ಬಿನ್ ಮುನಿಸ್ವಾಮಿ,19 ವರ್ಷ, ನಾಯಕರು, ಚಿಂತಾಮಣಿ ನಗರದ ಭಾರತ್ ಪೆಟ್ರೋಲ್  ಬಂಕ್ ನಲ್ಲಿ ಕೆಲಸ,ವಾಸ: ಬ್ರಾಹ್ಮಣರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:9901604430 ಎಂತಲೂ ನಂತರ ಓಡಿ ಹೋದ ಆಸಾಮಿಗಳ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ (02) ಮೂರ್ತಿ ಬಿನ್ ಗಂಗಪ್ಪ,22 ವರ್ಷ, ನಾಯಕರು, ಕಾರು ಚಾಲಕ ವೃತ್ತಿ, ವಾಸ: ಬ್ರಾಹ್ಮಣರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು (03) ಮುರಳಿ ಬಿನ್ ಮುನಿಕೃಷ್ಣಪ್ಪ,19 ವರ್ಷ, ವಕ್ಕಲಿಗರು, ವ್ಯವಸಾಯ, ವಾಸ: ಗಂಗಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು (04) ಮುನಿ ಕೃಷ್ಣಪ್ಪ ಬಿನ್ ವೆಂಕಟರೆಡ್ಡಿ,25 ವರ್ಷ, ವಕ್ಕಲಿಗರು, ವಾಸ: ಗಂಗಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು (05)ಸಂಜೀವ ಬಿನ್ ಶ್ರೀನಿವಾಸ,19 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಗಂಗಹಳ್ಳಿ ಗ್ರಾಮ,ಶಿಡ್ಲಘಟ್ಟ ತಾಲ್ಲೂಕು (06)_ಚಂದ್ರಪ್ಪ ಬಿನ್ ಮುನಿರೆಡ್ಡಿ, 30 ವರ್ಷ, ಜಿರಾಯ್ತಿ,ವಾಸ: ಗಂಗಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು (07) ಮಂಜುನಾಥ ಬಿನ್  ರಾಮಚಂದ್ರ, 29 ವರ್ಷ,ನಾಯಕರು, ಡ್ರೈವರ್  ಕೆಲಸ, ವಾಸ: ಗಂಜಿಗುಂಟೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು (08) ಸುರೇಶ್ ಬಿನ್  ನರಸಿಂಹಪ್ಪ,23 ವರ್ಷ, ಆದಿ ಕರ್ನಾಟಕ ಜನಾಂಗ,ವಾಸ: ಗಂಗಹಳ್ಳಿಗ್ರಾಮ, ಶಿಡ್ಲಘಟ್ಟ ತಾಲ್ಲೂಕು (09) ತೇಜ ಬಿನ್ ವೆಂಕಟರೆಡ್ಡಿ,20 ವರ್ಷ, ವಕ್ಕಲಿಗರು, ವಾಸ: ಗಂಗಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರುಗಳು  ಗಂಗಹಳ್ಳಿ ಮತ್ತು ಬ್ರಾಹ್ಮರಹಳ್ಳಿ ಗ್ರಾಮಗಳ ಕಡೆಗೆ ಓಡಿ ಹೋದ ಆಸಾಮಿಗಳು ಎಂತ ತಿಳಿದು ಬಂದಿರುತ್ತೆ. ನಂತರ ವಶಕ್ಕೆ ಪಡೆದುಕೊಂಡ ಆಸಾಮಿಯನ್ನು ಕುರಿತು  ಇಸ್ಪೀಟ್ ಜೂಜಾಟವಾಡುವ ಬಗ್ಗೆ ನಿಮ್ಮ ಬಳಿ ಯಾವುದಾದರೂ ಪರವಾನಿಗೆ  ಇದಿಯೇ ಎಂದು ಕೇಳಲಾಗಿ ಸದರಿ ಆಸಾಮಿಯು ತಮ್ಮ ಬಳಿ  ಯಾವುದೇ ಪರವಾನಿಗೆ ಪಡೆದಿರುವುದಿಲ್ಲವೆಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲದ ಮೇಲೆ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ ಇಸ್ಪೀಟ್ ಎಲೆಗಳನ್ನು ಮತ್ತು ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಇಸ್ಪೀಟ್ ಎಲೆಗಳು 52 ಇದ್ದು, ಹಣವನ್ನು ಎಣಿಕೆ ಮಾಡಲಾಗಿ 2300-00 ರೂ ಇದ್ದು, ಸದರಿ  ನಗದು ಹಣವನ್ನು, 52 ಇಸ್ಪೀಟ್ ಎಲೆಗಳನ್ನು ಹಾಗು ಪ್ಲಾಸ್ಟಿಕ್ ಚೀಲವನ್ನು ಹಾಗೂ ಆಸಾಮಿಗಳು ಕೃತ್ಯಕ್ಕೆ ಬಳಸಿ ಸ್ಥಳದಲ್ಲಿ  ನಿಲ್ಲಿಸಿದ್ದ KA-40-W-9575 ದ್ವಿ ಚಕ್ರ ವಾಹನವನ್ನು ಸಂಜೆ 17-45 ಗಂಟೆಯಿಂದ ಸಂಜೆ 18-45 ಗಂಟೆಯವರೆಗೆ  ದಾಳಿ ಅಮಾನತ್ತು ಪಂಚನಾಮೆಯ ಮೂಲಕ ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು  ಆಸಾಮಿ, ಮಾಲುಗಳು, ಪಂಚನಾಮೆಯೊಂದಿಗೆ ಸಂಜೆ 19-00 ಗಂಟೆಗೆ ಠಾಣೆಗೆ ಹಾಜರಾಗಿ ಆಸಾಮಿಗಳ ವಿರುದ್ದ ಮುಂದಿನ ಕ್ರಮಕ್ಕಾಗಿ ಸ್ವತಃ ಠಾಣಾ ಮೊ.ಸಂಖ್ಯೆ:112/2021 ಕಲಂ:87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣದ ದಾಖಲಿಸಿರುತ್ತೇನೆ.

 

6. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.113/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:22/08/2021 ರಂದು ಬೆಳಗ್ಗೆ 9-00 ಗಂಟೆಯ ಸಮಯದಲ್ಲಿ  ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಮಾಹಿತಿ ಏನೆಂದರೆ  ದಿಬ್ಬೂರಹಳ್ಳಿ ಪೊಲೀಸ್ ಠಾಣಾ ಸರಹದ್ದು ಕೊಮ್ಮಸಂದ್ರ ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿಯು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಆದರಂತೆ ಠಾಣೆಯ ಸಿಬ್ಬಂದಿಯಾದ ಸಿ.ಪಿ.ಸಿ 91 ಮಂಜುನಾಥ ರವರನ್ನು ಜೀಪ್ ಚಾಲಕರಾಗಿ ಹಾಗೂ  ಸಿ.ಪಿ.ಸಿ 196 ದೇವರಾಜ್ ರವರನ್ನು ಕರೆದುಕೊಂಡು ಬೆಳಗ್ಗೆ 9-30 ಗಂಟೆಗೆ  ಕೊಮ್ಮಸಂದ್ರ ಗ್ರಾಮಕ್ಕೆ ಹೋಗಿ ಮಾಹಿತಿದಾರರಿಂದ ಆಸಾಮಿಯ ಮತ್ತು ಸ್ಥಳದ ಬಗ್ಗೆ ಪುನಃ ಮಾಹಿತಿಯನ್ನು ಪಡೆದುಕೊಂಡು ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಸದರಿ ಸ್ಥಳದ ಮೇಲೆ ದಾಳಿ ಮಾಡುವ ವಿಚಾರವನ್ನು ತಿಳಿಸಿ ಪಂಚರಾಗಿರಲು ಕೋರಿದರ ಮೇರೆಗೆ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ಪಂಚರೊಂದಿಗೆ ಕೊಮ್ಮಸಂದ್ರ ಗ್ರಾಮದ  ಚಿಕ್ಕವೆಂಕಟರವಣಪ್ಪ ಬಿನ್ ಲೇಟ್ ಚಿಕ್ಕವೆಂಕಟರಾಯಪ್ಪ ರವರ ಅಂಗಡಿಯ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಚಿಕ್ಕವೆಂಕಟರವಣಪ್ಪ ಬಿನ್ ಲೇಟ್ ಚಿಕ್ಕವೆಂಕಟರಾಯಪ್ಪ ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿದ್ದು ಸದರಿ ಆಸಾಮಿಯ ಮೇಲೆ ಸಿಬ್ಬಂದಿಯವರು ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯವರನ್ನು ನೋಡಿ ಮಧ್ಯಫಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಸಾರ್ವಜನಿಕ ಸ್ಥಳದಲ್ಲಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದ ಆಸಾಮಿಗೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು ಹಾಗೂ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿಕೊಡಲು ನಿನ್ನ ಬಳಿ ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ಹೇಳಿದ್ದು ನಂತರ ಸದರಿ ಆಸಾಮಿಯ ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ ಚಿಕ್ಕವೆಂಕಟರವಣಪ್ಪ ಬಿನ್ ಲೇಟ್ ಚಿಕ್ಕವೆಂಕಟರಾಯಪ್ಪ,60 ವರ್ಷ,ದೋಬಿ ಜನಾಂಗ,ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಕೊಮ್ಮಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಪೋನ್ ನಂಬರ್:7349471245 ಎಂದು ತಿಳಿಸಿದ್ದು ನಂತರ ಪಂಚರ ಸಮಕ್ಷಮ ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ,ಎಲ್ ನ ORIGINAL CHOICE DELUX WHISKYಯ  18 ಮಧ್ಯ ತುಂಬಿದ ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು 1620 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 632.34 ರೂ ಆಗಿದ್ದು  ಸದರಿ ಮಧ್ಯ ತುಂಬಿದ ಪ್ಯಾಕೇಟ್ ಗಳನ್ನು ಮತ್ತು ಸ್ಥಳದಲ್ಲಿಯೇ ಬಿದಿದ್ದ1 ಖಾಲಿ 90 ಎಂ,ಲ್, ನ  ORIGINAL CHOICE DELUX WHISKYಯ ಟೆಟ್ರಾ ಪ್ಯಾಕೇಟ್ ನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಮತ್ತು ಒಂದು ಲೀಟರ್ ನ ಖಾಲಿ ವಾಟರ್ ಬಾಟೆಲ್ ನ್ನು ಬೆಳಗ್ಗೆ 9-45 ಗಂಟೆಯಿಂದ ಬೆಳಗ್ಗೆ 10-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಾಲು ಮತ್ತು ಪಂಚನಾಮೆ,ಆಸಾಮಿಯೊಂದಿಗೆ ಬೆಳಗ್ಗೆ 11-30 ಗಂಟೆಗೆ  ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಸ್ವತಃ ಮೊ.ಸಂಖ್ಯೆ:113/2021 ಕಲಂ:15(A),32(3) K,E ACT ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.199/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:01/08/2021 ರಂದು ಸಂಜೆ 18-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮಾಲು, ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಮೆಮೋವಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:01/08/2021  ರಂದು  ಮದ್ಯಾಹ್ನ 3-45  ಗಂಟೆಯಲ್ಲಿ  ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಜೀಲಾಕುಂಟೆ ಗ್ರಾಮದ ಕೆರೆ ಅಂಗಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಸಿ.ಪಿ.ಸಿ-512 ರಾಜಶೇಖರ, ಸಿ.ಪಿ.ಸಿ- 582 ಮಂಜುನಾಥ ಕಾಲೇಳ, ಸಿ.ಪಿ.ಸಿ-281 ಗುರುಸ್ವಾಮಿ, ಸಿ.ಪಿ.ಸಿ-426 ಲೋಹಿತ್ , ಪಿ.ಸಿ-381 ಜಗದೀಶ ಎಂ.ಎನ್ ಹಾಗೂ ಚಾಲಕ ಎ.ಪಿ.ಸಿ- 143 ಮಹೇಶ್ ರವರೊಂದಿಗೆ ಸರ್ಕಾರಿ ಜಿಫ್ ಸಂಖ್ಯೆ: ಕೆ.ಎ-40 ಜಿ-538 ರಲ್ಲಿ ಜೀಲಾಗುಂಟೆ ಗ್ರಾಮಕ್ಕೆ ಸಾಯಂಕಾಲ 4-30  ಗಂಟೆಗೆ ಹೋಗಿ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಸರ್ಕಾರಿ ಜಿಫ್ ಸಂಖ್ಯೆ: ಕೆ.ಎ-40 ಜಿ-538 ರಲ್ಲಿ ಹೊರಟು ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಜೀಲಾಗುಂಟೆ ಗ್ರಾಮದ ಕೆರೆ ಸಮೀಪ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಜೀಲಾಗುಂಟೆ ಗ್ರಾಮದ ಕೆರೆ ಅಂಗಳದಲ್ಲಿ ವೃತ್ತಾಕಾರವಾಗಿ ಕುಳಿತುಕೊಂಡು ಆ ಪೈಕಿ ಒಬ್ಬ ಅಂದರ್ ಗೆ 100/-ರೂ ಇನ್ನೋಬ್ಬ ಬಾಹರ್ ಗೆ 100/-ರೂ ಎಂದು ಜೋರಾಗಿ ಕೂಗುತ್ತಾ ಉಳಿದವರು ಹಣವನ್ನು ಕಟ್ಟಿಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಹಾಗೂ ಸಿಬ್ಬಂದಿಯವರು ಸದರಿಯವರನ್ನು ಸುತ್ತುವರೆದು ಮೇಲೆ ಹೇಳದಂತೆ ಸೂಚಿಸಿ, ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸವನ್ನು ಕೆಳಲಾಗಿ 1) ಗಂಗಾಧರ ಬಿನ್ ಲೇಟ್ ನಾಗಪ್ಪ, 42 ವರ್ಷ, ಭೋವಿ ಜನಾಂಗ, ಜಿರಾಯ್ತಿ, ವಾಸ ಜೀಲಾಕುಂಟೆ ಗ್ರಾಮ, ನಗರಗೆರೆ ಹೋಬಳಿ, ಗೌರೀಬಿದನೂರು ತಾಲ್ಲೂಕು, 2) ಅಂಜಿನಪ್ಪ  ಬಿನ್ ಲೇಟ್ ಆದಪ್ಪ, 56 ವರ್ಷ, ಆದಿ ಕರ್ನಾಟಕ ಜನಾಂಗ, ದನಗಳ ವ್ಯಾಪಾರ, ಪುಲಿಮತಿ ಗ್ರಾಮ, ಲೇಪಾಕ್ಷಿ ಮಂಡಲಂ, ಹಿಂದೂಪರ ತಾಲ್ಲೂಕು, ಆಂದ್ರಪ್ರದೇಶ ರಾಜ್ಯ, 3) ಹನುಮಂತರಾಯಪ್ಪ ಬಿನ್ ಲೇಟ್ ನಾರಾಯಣಪ್ಪ, 66 ವರ್ಷ, ಸಾದರ ಜನಾಂಗ, ಜಿರಾಯ್ತಿ ವಾಸ ಮಾನಂಪಲ್ಲಿ ಗ್ರಾಮ, ಲೇಪಾಕ್ಷಿ ಮಂಡಲಂ, ಹಿಂದೂಪುರ ತಾಲ್ಲೂಕು ಆಂದ್ರಪ್ರದೇಶ ರಾಜ್ಯ, 4) ಲಕ್ಷ್ಮೀನಾರಾಯಣ ಬಿನ್ ಸಿದ್ದಪ್ಪ, 21 ವರ್ಷ, ಎ.ಕೆ ಜನಾಂಗ, ಎಲೆಕ್ಟ್ರೀಷಿಯನ್ ಕೆಲಸ,  ವಾಸ ಪುಲಮತಿ ಗ್ರಾಮ, ಸಡ್ಲಪಲ್ಲಿ ಪೋಸ್ಟ್, ಲೇಪಾಕ್ಷಿ ಮಂಡಲಂ, ಹಿಂದೂಪುರ ತಾಲ್ಲೂಕು ಆಂದ್ರಪ್ರದೇಶ ರಾಜ್ಯ, 5) ಸೀನ ಬಿನ್ ಲೇಟ್ ಲಕ್ಷ್ಮೀನಾರಾಯಣ, 39 ವರ್ಷ, ಆಚಾರ್ಯ ಜನಾಂಗ, ಕೂಲಿ ಕೆಲಸ ವಾಸ ಗೊಂಗಡಪಲ್ಲಿ ಗ್ರಾಮ, ಲೇಪಾಕ್ಷಿ ಮಂಡಲಂ, ಹಿಂದೂಪುರ ತಾಲ್ಲೂಕು ಆಂದ್ರಪ್ರದೇಶ ರಾಜ್ಯ, 6) ಸೀನಪ್ಪ ಬಿನ್ ಕೃಷ್ಣಪ್ಪ, 39 ವರ್ಷ, ಬಲಜಿಗರು, ವ್ಯವಸಾಯ, ವೆಂಕಟಾಪುರ ಗ್ರಾಮ, ಮಾನಂಪಲ್ಲಿ ಪೋಸ್ಟ್, ಲೇಪಾಕ್ಷಿ ಮಂಡಲಂ, ಹಿಂದೂಪುರ ತಾಲ್ಲೂಕು ಆಂದ್ರಪ್ರದೇಶ ರಾಜ್ಯ, 7) ರಾಜಪ್ಪ ಬಿನ್ ಯರ್ರಗಂಗಪ್ಪ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ವಾಸ ಜೀಲಾಗುಂಟೆ ಗ್ರಾಮ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು ಜೂಜಾಟಕ್ಕೆ ಪಣಕ್ಕಿಟ್ಟಿದ್ದ 14,600/- ರೂ ನಗದು ಹಣ ಮತ್ತು ಒಂದು ನ್ಯೂಸ್ ಪೇಪರ್ ಅನ್ನು ಪಂಚರ ಸಮಕ್ಷಮ ಸಾಯಂಕಾಲ 4-45 ಗಂಟೆಯಿಂದ 5-45 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಸಂಜೆ 6-30 ಠಾಣೆಗೆ ಠಾಣೆಗೆ ವಾಪಸ್ ಬಂದು ಈ ಮೆಮೋನೊಂದಿಗೆ ಮೇಲ್ಕಂಡ ಮಾಲು, ಆಸಾಮಿಗಳನ್ನು ಮತ್ತು ಅಸಲು ಪಂಚನಾಮೆಯನ್ನು ನೀಡುತ್ತಿದ್ದು  ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್. ನಂ.341/2021 ರಂತೆ ದಾಖಲಿಸಿರುತ್ತೆ. ನ್ಯಾಯಾಲಯದ ಸಿಬ್ಬಂದಿ ಪಿ ಸಿ 302 ರವರು ನೀಡಿದ ನ್ಯಾಯಾಲಯದ ಅನುಮತಿಯ ವರದಿಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 

8. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.116/2021 ಕಲಂ. 379 ಐ.ಪಿ.ಸಿ:-

     ದಿ:21/08/2021 ರಂದು  14-20 ಗಂಟೆಯ ಸಮಯದಲ್ಲಿ  ಪಿರ್ಯಾದಿದಾರರಾದ ಶ್ರೀ.ಲಕ್ಷ್ಮೀನರಸಮ್ಮ ಕೋಂ  ಲೇಟ್ ಅಶ್ವಥನಾರಾಯಣರೆಡ್ಡಿ, 51 ವರ್ಷ, ವಕ್ಕಲಿಗರು,  ಮನೆ ಕೆಲಸ, ಹಳೇಹಳ್ಳಿ ಗ್ರಾಮ,  ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ದಿ:18/08/2021 ರಂದು ಹಳೇಹಳ್ಳಿಯಿಂದ  ಚಿಲಮತ್ತೂರು ಗ್ರಾಮದಲ್ಲಿ ಚನ್ನಕೇಶವಸ್ವಾಮಿ ದೇವಾಲಯದಲ್ಲಿ  ಪ್ರತಿಷ್ಟಾಪನೆ ಇದ್ದ ಕಾರಣ ತಾನು ಮತ್ತು ತನ್ನ ಕುಟುಂಬದವರು ಗೌರಿಬಿದನೂರಿಗೆ ಬಂದು ಹಿಂದೂಪುರ ಸರ್ಕಲ್ ಬಸ್ ಸ್ಟಾಪ್ನಲ್ಲಿ  ಹಿಂದೂಪುರಕ್ಕೆ ಹೋಗಲು  ಕೆ.ಎಸ್.ಆರ್.ಟಿ.ಸಿ ಬಸ್ ಅನ್ನು  ಸುಮಾರು ಮದ್ಯಾಹ್ನ  2 ಗಂಟೆ ಸಮಯದಲ್ಲಿ  ಹತ್ತುವಾಗ  ತನ್ನ ಹ್ಯಾಂಡ್ ಬ್ಯಾಗಿನಲ್ಲಿದ್ದ  ಸುಮಾರು 43. 1/2 ಗ್ರಾಂ   ಬಂಗಾರದ ಒಡವೆಗಳಿದ್ದು, ಅದರಲ್ಲಿ  ಒಂದು ಬಂಗಾರದ ನಕ್ಲೇಸ್ 25 ಗ್ರಾಂಗಳಿದ್ದು, ಒಂದು ಬಂಗಾರದ ಚೈನ್ 17 ಗ್ರಾಂಗಳಿದ್ದು, ಒಂದು ಉಂಗುರ  1. 1/2  ಗ್ರಾಂಗಳಿದ್ದು ಇವುಗಳ ಬೆಲೆ ಸುಮಾರು 1,30,000/-ರೂ ವಡವೆಯನ್ನು  ಯಾರೋ ಕಳ್ಳರು ನನ್ನ ಹ್ಯಾಂಡ್ ಬ್ಯಾಗಿನಲ್ಲಿದ್ದ  ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾವು ಚಿಲಮತ್ತೂರು ಚನ್ನಕೇಶವಸ್ವಾಮಿ ದೇವಾಲಯ ಪ್ರತಿಷ್ಟಾಪನೆಯನ್ನು ಹಮ್ಮಿಕೊಂಡಿರುವುದರಿಂದ  ಆ ದಿನ ನಾವು  ದೂರನ್ನು ನೀಡಲು  ಸಾದ್ಯವಾಗಲಿಲ್ಲ. ಆಗೂ ನಾವು ಸಹ ಮನೆಯಲ್ಲಿ ಹುಡುಕಾಡಿದ್ದರು ಪತ್ತೆಯಾಗದೆ ಇದ್ದುದ್ದರಿಂದ  ಈದಿನ ದಿ:21/08/2021 ರಂದು ತಡವಾಗಿ ದೂರನ್ನು ನೀಡುತ್ತಿದ್ದೇವೆ. ಕಳ್ಳತನ ಮಾಡಿರುವ  ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ರೀತ್ಯಾ ಕ್ರಮಕೈಗೊಳ್ಳಬೇಕಾಗಿ ಕೋರಿದ್ದೇವೆ   ಅಂತ ದೂರನ್ನು ನೀಡಿದ್ದು, ಈ ದೂರನ್ನು  ಪಡೆದುಕೊಂಡು ಠಾಣೆಯಲ್ಲಿ ಮೊ.ಸಂ.116/2021 ಕಲಂ 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

9. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.191/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:21/08/2021 ರಂದು ಮದ್ಯಾಹ್ನ 2-15 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯ ಪಿಸಿ-430  ರವರು ಠಾಣಾ NCR NO-234/2021 ರಲ್ಲಿ ಕ್ರಿಮೀನಲ್ ಪ್ರಕರಣ ದಾಖಲಿಸಲು ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ ವರಧಿಯ ಸಾರಾಂಶವೇನೆಂದರೆ ಪಿರ್ಯಾಧಿದಾರರು ದಿನಾಂಕ:19/08/2021 ರಂದು ಮದ್ಯಾಹ್ನ 12-00 ಗಂಟೆಯ ಸಮಯದಲ್ಲಿ  ತಾನು ಮತ್ತು ಹೆಚ್.ಸಿ. 102 ಶ್ರೀ ಆನಂದ ಹಾಗೂ ಗುಪ್ತ ಮಾಹಿತಿ ಸಂಗ್ರಹಣೆ ಕರ್ತವ್ಯ ನಿರ್ವಹಿಸುತ್ತಿರುವ ಠಾಣಾ ಹೆಚ್.ಸಿ. 73 ಶ್ರೀ ಹನುಮಂತರಾಯಪ್ಪ ರವರು ಗುಡಿಬಂಡೆ ತಾಲ್ಲೂಕು ಹಂಪಸಂದ್ರ ಗ್ರಾಮದಲ್ಲಿ ಹಗಲು ಗಸ್ತು ಮಾಡುತ್ತಿದ್ದಾಗ ತನಗೆ ಹೆಚ್.ಸಿ. 73 ಶ್ರೀ ಹನುಮಂತರಾಯಪ್ಪ ರವರು ತಿಳಿಸಿದ್ದೇನೆಂದರೆ ಬಾತ್ಮೀದಾರರರಿಂದ ಗುಡಿಬಂಡೆ  ತಾಲ್ಲೂಕು ಹಂಪಸಂದ್ರ ಗ್ರಾಮದ ಬೋಂಡಾ ನರಸಮ್ಮ ಕೊಂ ಲೇಟ್ ನರಸಿಂಹಪ್ಪ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಯಾವುದೇ ರೀತಿಯ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿರುತ್ತೆಂದು ತಿಳಿಸಿದ್ದರ ಮೇರೆಗೆ ಅಲ್ಲಿಯೇ  ಹಂಪಸಂದ್ರ ಗ್ರಾಮದ ಬಸ್ಸು ನಿಲ್ದಾಣದ ಬಳಿ ಮದ್ಯಾಹ್ನ 12-15 ಗಂಟೆಗೆ ಹೋಗಿ ಅಲ್ಲಿಯೇ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ಬೋಂಡಾ ನರಸಮ್ಮ ಕೊಂ ಲೇಟ್ ನರಸಿಂಹಪ್ಪ ರವರ ಚಿಲ್ಲರೆ ಅಂಗಡಿ ಬಳಿಯಿಂದ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಬೋಂಡಾ ನರಸಮ್ಮ ಕೊಂ ಲೇಟ್ ನರಸಿಂಹಪ್ಪ ರವರ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುಮತಿ ನೀಡಿ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಕಂಡುಬಂದಿದ್ದು, ಸದರಿ ಸ್ಥಳಕ್ಕೆ ನಾವುಗಳು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಅಲ್ಲಿದ್ದ ಮದ್ಯ ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಮತ್ತು ಮದ್ಯ ಸರಬರಾಜು ಮಾಡುತ್ತಿದ್ದ ಹೆಂಗಸ್ಸು ಓಡಿ ಹೋಗಿದ್ದು, ಸಾರ್ವಜನಿಕರಿಗೆ  ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರವ ಓಡಿ ಹೋದ ಸದರಿ ಚಿಲ್ಲರೆ ಅಂಗಡಿ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಬೋಂಡಾ ನರಸಮ್ಮ ಕೊಂ ಲೇಟ್ ನರಸಿಂಹಪ್ಪ 62 ವರ್ಷ, ನಾಯಕ ಜನಾಂಗ ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಹಂಪಸಂದ್ರ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂತ ತಿಳಿಯಿತು, ಮದ್ಯಪಾನ ಸೇವೆನೆ ಮಾಡಲು ಸ್ಥಳಾವಕಾಶ ಮಾಡಿಕಟ್ಟಿದ್ದಕ್ಕೆ ಅನುಮತಿ ಪಡೆದಿರುವ ಲೈಸನ್ಸ್ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಸರಬರಾಜು ಮಾಡಿರುವುದು ಕಂಡು ಬಂತು. ಸದರಿ ಸ್ಥಳದಲ್ಲಿ ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್ ಸಾಮಥ್ರ್ಯದ 10 ಮದ್ಯದ ಟೆಟ್ರಾ ಪ್ಯಾಕೇಟ್ಗಳು ಇದ್ದವು, 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಬಿದ್ದಿದ್ದು, ಮದ್ಯವನ್ನು ಕುಡಿದು ಬಿಸಾಹಾಕಿದ್ದ 2 ಪ್ಲಾಸ್ಟಿಕ್ ಗ್ಲಾಸುಗಳು ಅಲ್ಲಿಯೇ ಪಕ್ಕದಲ್ಲಿಯೇ ಒಂದು ಲೀಟರ್ ಸಾಮಥ್ರ್ಯದ ಪ್ಲಾಸ್ಟಿಕ್ ವಾಟರ್ ಬಾಟಲ್ ಇದ್ದು, ಅದರಲ್ಲಿದ್ದ ನೀರು ಕೆಳಗಡೆಗೆ ಚೆಲ್ಲಿತ್ತು, ಮದ್ಯವಿರು ಪ್ಯಾಕೇಟ್ ಗಳ ಒಟ್ಟು ಬೆಲೆ 35.13*10 =351-10 ರೂಗಳು (900 ಎಂ.ಎಲ್) ಆಗಿರುತ್ತದೆ. ಸದರಿ ಮೇಲ್ಕಂಡ 10 ಮದ್ಯದ ಟೆಟ್ರಾ ಪ್ಯಾಕೇಟ್ಗಳನ್ನು, 2 ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು  ಹಾಗೂ 2 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಪ್ಲಾಸ್ಟಿಕ್ ವಾಟರ್ ಬಾಟಲ್ನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ  12-30 ಗಂಟೆಯಿಂದ ಮದ್ಯಾಹ್ನ 1-30 ಘಂಟೆಯವರೆಗೆ ಪಂಚನಾಮೆ ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮಾಲಿನೊಂದಿಗೆ ಮದ್ಯಾಹ್ನ 2-00 ಘಂಟೆಗೆ ಠಾಣೆಗೆ ಬಂದು 3-00 ಗಂಟೆಗೆ ವರಧಿಯನ್ನು ಸಿದ್ದಪಡಿಸಿ ಮೇಲ್ಕಂಡ ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಆರೋಪಿತಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

10. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.192/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:21/08/2021 ರಂದು ಮದ್ಯಾಹ್ನ 2-45 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯ ಪಿಸಿ-430  ರವರು ಠಾಣಾ NCR NO-237/2021 ರಲ್ಲಿ ಕ್ರಿಮೀನಲ್ ಪ್ರಕರಣ ದಾಖಲಿಸಲು ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ ವರಧಿಯ ಸಾರಾಂಶವೇನೆಂದರೆ ಪಿರ್ಯಾಧಿದಾರರು ದಿನಾಂಕ:20/08/2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಪೆರೇಸಂದ್ರ ಹೊರ ಠಾಣೆಯಲ್ಲಿದ್ದಾಗ ಹೊರ ಠಾಣಾ   ಸಿಬ್ಬಂದಿ ಮಂಜುನಾಥ ನಾಯಕ  ಸಿ.ಪಿ.ಸಿ-203  ರವರು  ನನಗೆ ಪೋನ್ ಮಾಡಿ ಚಿಕ್ಕಬಳ್ಳಾಪುರ   ತಾಲ್ಲೂಕು ಆದೆಗಾರಹಳ್ಳಿ    ಗ್ರಾಮದಲ್ಲಿ   ಗಸ್ತುನಲ್ಲಿರುವಾಗ ಆದೆಗಾರಹಳ್ಳಿ  ಗ್ರಾಮದ ಬಳಿ  ಸಾರ್ವಜನಿಕ ರಸ್ತೆಯಲ್ಲಿ ಮರದ ಕೆಳಗೆ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ.  ನಾನು ಮತ್ತು ಶ್ರೀನಿವಾಸ ಸಿ.ಪಿ.ಸಿ-272  ರವರು ದ್ವಿಚಕ್ರವಾಹನದಲ್ಲಿ ಬೆಳಿಗ್ಗೆ 10-30 ಗಂಟೆ ಸಮಯಕ್ಕೆ ಆದೆಗಾರಹಳ್ಳಿ    ಗ್ರಾಮಕ್ಕೆ ಹೋಗಿ ಸ್ಥಳದಲ್ಲಿದ್ದ ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ  ಗ್ರಾಮದ ಆಚೆ ರಸ್ತೆಯಲ್ಲಿ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮರದ ಕೆಳಗೆ  ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಬೆಳಿಗ್ಗೆ 10-45 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದು ಸದರಿ ಆಸಾಮಿಯ  ಹೆಸರು & ವಿಳಾಸ ತಿಳಿಯಲಾಗಿ ಮಂಜುನಾಥ ಬಿನ್ ನಾರಯಣಸ್ವಾಮಿ, 36 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಇಡ್ರಹಳ್ಳಿ  ಗ್ರಾಮ, ಗುಡಿಬಂಡೆ   ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 11 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 440 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*11=562.08/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 11-00 ಗಂಟೆಯಿಂದ 12-00   ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 12-00  ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ 12-30 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು  ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

11. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.193/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:21/08/2021 ರಂದು ಸಂಜೆ 7-00 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯ ಪಿಸಿ-430  ರವರು ಠಾಣಾ NCR NO-235/2021 ರಲ್ಲಿ ಕ್ರಿಮೀನಲ್ ಪ್ರಕರಣ ದಾಖಲಿಸಲು ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ ವರಧಿಯ ಸಾರಾಂಶವೇನೆಂದರೆ ಪಿರ್ಯಾಧಿದಾರರು ದಿನಾಂಕ:19/08/2021 ರಂದು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ  ನಾನು ಮತ್ತು ಹೆಚ್.ಸಿ. 102 ಶ್ರೀ ಆನಂದ ರವರು ಗುಡಿಬಂಡೆ ಟೌನ್ ನಲ್ಲಿ ಹಗಲು ಗಸ್ತು ಮಾಡುತ್ತಿದ್ದಾಗ ನನಗೆ ಗುಪ್ತ ಮಾಹಿತಿ ಸಂಗ್ರಹಣೆ ಕರ್ತವ್ಯ ನಿರ್ವಹಿಸುತ್ತಿರುವ ಠಾಣಾ ಪಿ.ಸಿ. 141 ಶ್ರೀ ಸಂತೋಷ್ ಕುಮಾರ್  ರವರು ತಿಳಿಸಿದ್ದೇನೆಂದರೆ ಬಾತ್ಮೀದಾರರರಿಂದ ಗುಡಿಬಂಡೆ ತಾಲ್ಲೂಕು ಬೀಚಗಾನಹಳ್ಳಿ ಗ್ರಾಮದ ವಸಂತ ಬಿನ್ ಆಂಜಿನಪ್ಪ  ರವರು ಅವರ ಚಿಲ್ಲರೆ ಅಂಗಡಿಯ ಬಳಿ ಯಾವುದೇ ರೀತಿಯ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿರುತ್ತೆಂದು ತಿಳಿಸಿದ್ದರ ಮೇರೆಗೆ ನಾನು ಮತ್ತು ಆನಂದ ರವರೊಂದಿಗೆ ದ್ವಿಚಕ್ರವಾಹನದಲ್ಲಿ ಬೀಚಗಾನಹಳ್ಳಿ ಗ್ರಾಮದ ಬಸ್ಸು ನಿಲ್ದಾಣದ ಬಳಿ ಮದ್ಯಾಹ್ನ 3-30 ಗಂಟೆಗೆ ಹೋಗಿ ಅಲ್ಲಿಯೇ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ವಸಂತ ಬಿನ್ ಆಂಜಿನಪ್ಪ  ರವರ ಚಿಲ್ಲರೆ ಅಂಗಡಿ ಬಳಿಯಿಂದ  ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ವಸಂತ ಬಿನ್ ಆಂಜಿನಪ್ಪ ರವರ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುಮತಿ ನೀಡಿ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಕಂಡುಬಂದಿದ್ದು, ಸದರಿ ಸ್ಥಳಕ್ಕೆ ನಾವುಗಳು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಅಲ್ಲಿದ್ದ ಮದ್ಯ ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಮತ್ತು ಮದ್ಯ ಸರಬರಾಜು ಮಾಡುತ್ತಿದ್ದ ಗಂಡಸ್ಸು ಓಡಿ ಹೋಗಿದ್ದು, ಸಾರ್ವಜನಿಕರಿಗೆ  ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರವ ಓಡಿ ಹೋದ ಸದರಿ ಚಿಲ್ಲರೆ ಅಂಗಡಿ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ವಸಂತ ಬಿನ್ ಆಂಜಿನಪ್ಪ 30 ವರ್ಷ, ಈಡಿಗ ಜನಾಂಗ ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಬೀಚಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂತ ತಿಳಿಯಿತು, ಮದ್ಯಪಾನ ಸೇವೆನೆ ಮಾಡಲು ಸ್ಥಳಾವಕಾಶ ಮಾಡಿಕಟ್ಟಿದ್ದಕ್ಕೆ ಅನುಮತಿ ಪಡೆದಿರುವ ಲೈಸನ್ಸ್ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಸರಬರಾಜು ಮಾಡಿರುವುದು ಕಂಡು ಬಂತು. ಸದರಿ ಸ್ಥಳದಲ್ಲಿ ಹೈವಾಡ್ಸರ್್ ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್ ಸಾಮಥ್ರ್ಯದ 11 ಮದ್ಯದ ಟೆಟ್ರಾ ಪ್ಯಾಕೇಟ್ಗಳು ಇದ್ದವು. 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಬಿದ್ದಿದ್ದು, ಮದ್ಯವನ್ನು ಕುಡಿದು ಬಿಸಾಹಾಕಿದ್ದ 2 ಪ್ಲಾಸ್ಟಿಕ್ ಗ್ಲಾಸುಗಳು ಅಲ್ಲಿಯೇ ಪಕ್ಕದಲ್ಲಿಯೇ ಒಂದು ಲೀಟರ್ ಸಾಮಥ್ರ್ಯದ ಪ್ಲಾಸ್ಟಿಕ್ ವಾಟರ್ ಬಾಟಲ್ ಇದ್ದು, ಅದರಲ್ಲಿದ್ದ ನೀರು ಕೆಳಗಡೆಗೆ ಚೆಲ್ಲಿತ್ತು, ಮದ್ಯವಿರು ಪ್ಯಾಕೇಟ್ ಗಳ ಒಟ್ಟು ಬೆಲೆ 35.13*11 = 386 ರೂಗಳು (990 ಎಂ.ಎಲ್) ಆಗಿರುತ್ತದೆ. ಸದರಿ ಮೇಲ್ಕಂಡ 11 ಮದ್ಯದ ಟೆಟ್ರಾ ಪ್ಯಾಕೇಟ್ಗಳನ್ನು, 2 ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು  ಹಾಗೂ 2 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಪ್ಲಾಸ್ಟಿಕ್ ವಾಟರ್ ಬಾಟಲ್ನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 3-45 ಗಂಟೆಯಿಂದ ಸಂಜೆ 04-45 ಘಂಟೆಯವರೆಗೆ ಪಂಚನಾಮೆ ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮಾಲನ್ನು ವಶಕ್ಕೆ ಪಡೆದುಕೊಂಡು ಸಂಜೆ 05-00 ಘಂಟೆಗೆ ಠಾಣೆಗೆ ಬಂದು 5-30 ಗಂಟೆಗೆ ವರಧಿಯನ್ನು ಸಿದ್ದಪಡಿಸಿ ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಆರೋಪಿತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

12. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.92/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:22/08/2021 ರಂದು ನಾನು ಠಾಣೆಯಲ್ಲಿರುವಾಗ ಬೆಳಿಗ್ಗೆ 10:50 ಗಂಟೆ ಸಮಯದಲ್ಲಿ ಎಲ್.ಜಿ ಬಡಾವಣೆಯಲ್ಲಿ ಅಕ್ರಮವಾಗಿ ಕೆಲವರು ಹಣವನ್ನು ಪಣಕಿಟ್ಟು ಅಂದರ್- ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವವರ ಬಗ್ಗೆ ಮಾಹಿತಿ ಬಂದ ಮೇರೆಗೆ ಠಾಣಾ ಎನ್,ಸಿ.ಆರ್ ನಂ:98/2021 ರಲ್ಲಿ ನಮೂದು ಮಾಡಿದ್ದು ನಂತರ ಪ್ರಥಮ ಪರ್ತಮಾನ ವರದಿಯನ್ನು ತಯಾರಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ತನಿಖೆ ಕೈಗೊಳ್ಳಲು ಅನುಮತಿ ನೀಡುವಂತೆ ಘನ ನ್ಯಾಯಾಲಯದಲ್ಲಿ ಕೋರಿ ಅನುಮತಿ ಪಡೆದುಕೊಂಡಿದ್ದು ಅಂದರ್-ಬಾಹರ್ ಇಸ್ಪೀಟ್ ಜೂಜಾಟದ ಮೇಲೆ ದಾಳಿ ಮಾಡಿ ಮುಂದಿನ ಕ್ರಮ ಜರುಗಿಸಲು ಈ ಪ್ರ.ವ.ವರದಿ.

 

13. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.93/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:22/08/2021 ರಂದು ನಾನು ಠಾಣೆಯಲ್ಲಿರುವಾಗ ಮದ್ಯಾಹ್ನ 3:20 ಗಂಟೆ ಸಮಯದಲ್ಲಿ ದೊಡ್ಡಮರಳಿ ಗ್ರಾಮದ ಸರ್ಕಾರಿ ಕೆರೆಯಲ್ಲಿ ಅಕ್ರಮವಾಗಿ ಕೆಲವರು ಹಣವನ್ನು ಪಣಕಿಟ್ಟು ಅಂದರ್- ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವವರ ಬಗ್ಗೆ ಮಾಹಿತಿ ಬಂದ ಮೇರೆಗೆ ಠಾಣಾ ಎನ್,ಸಿ.ಆರ್ ನಂ:99/2021 ರಲ್ಲಿ ನಮೂದು ಮಾಡಿದ್ದು ನಂತರ ಪ್ರಥಮ ಪರ್ತಮಾನ ವರದಿಯನ್ನು ತಯಾರಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ತನಿಖೆ ಕೈಗೊಳ್ಳಲು ಅನುಮತಿ ನೀಡುವಂತೆ ಘನ ನ್ಯಾಯಾಲಯದಲ್ಲಿ ಕೋರಿ ಅನುಮತಿ ಪಡೆದುಕೊಂಡಿದ್ದು ಅಂದರ್-ಬಾಹರ್ ಇಸ್ಪೀಟ್ ಜೂಜಾಟದ ಮೇಲೆ ದಾಳಿ ಮಾಡಿ ಮುಂದಿನ ಕ್ರಮ ಜರುಗಿಸಲು ಈ ಪ್ರ.ವ.ವರದಿ.

 

14. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.89/2021 ಕಲಂ. 454,380 ಐ.ಪಿ.ಸಿ:-

     ದಿನಾಂಕ:21-08-2021 ರಂದು ಸಂಜೆ 17-30 ಗಂಟೆಗೆ ಪಿರ್ಯಾದುದಾರರಾದ ಶ್ರೀ.ಬಾಬು ಬಿನ್ ಲೇಟ್ ನರಸಿಂಹಪ್ಪ, ರೇಚನಾಯ್ಕನಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾವು ಮನೆಯನ್ನು ಕಟ್ಟಿಕೊಳ್ಳಲು ಬೇರೆಯವರಿಂದ ಸಾಲಮಾಡಿ ಹಾಗೂ ಬೆಳೆಗಳನ್ನು ಮಾರಿ ಸಂಗ್ರಹಿಸಿಟ್ಟಿದ್ದ 2,80,000 ರೂಗಳನ್ನು ಮನೆಯಲ್ಲಿನ ಬೀರುವಿನಲ್ಲಟ್ಟು ಕೊಂಡಿದ್ದು, ದಿನಾಂಕ: 21/08/2021 ರಂದು ಬೆಳಗ್ಗೆ ಮನೆಗೆ ಬೀಗವನ್ನು ಹಾಕಿಕೊಂಡು ತಾನು ಮತ್ತು ತಮ್ಮ ತಾಯಿ ಹೊಲದ ಬಳಿಗೆ ಹೋಗಿರುವುದಾಗಿ, ಮದ್ಯಾಹ್ನ  ಸುಮಾರು 3-00 ಗಂಟೆಗೆ ಹತ್ತಿಗಿಡಕ್ಕೆ ಔಷದಿ ಸಿಂಪಡಿಸಲು ಮನೆಯಲ್ಲಿಟ್ಟಿದ್ದ ಔಷದಿಯನ್ನು ತೆಗೆದುಕೊಂಡು ಹೋಗಲು ತಾನು ಮನೆಯ ಬಳಿಗೆ ಬಂದು ನೋಡಲಾಗಿ ಮನೆಯ ಬಾಗಿಲು ತೆಗೆದಿದ್ದು, ಒಳಗೆ ಹೋಗಿ ನೋಡಲಾಗಿ ತಮ್ಮ ಮನೆಯ ಪಕ್ಕದ ಮನೆಯ ವಾಸಿ ನವೀನಕುಮಾರ್ ಎಂಬುವವರು  ಬೀರುವಿನ ಬೀಗವನ್ನು ತೆಗೆದು ಬೀರುವಿನಲ್ಲಿದ್ದ 280000/- ಹಣವನ್ನು ತೆಗೆದುಕೊಂಡಿದ್ದು, ತನ್ನನ್ನು ನೋಡಿ ಮನೆಯಲ್ಲಿ ಬಚ್ಚಟ್ಟುಕೊಂಡಿದ್ದು ತಾನು ತಕ್ಷಣ ಮನೆಯಿಂದ  ಹೊರಗಡೆ ಬಂದು ಮನೆಯ ಬಾಗಿಲು ಹಾಕಿಕೊಂಡು ತಮ್ಮ ತಾಯಿಯನ್ನು ಕರೆದುಕೊಂಡು ಬರಲು ಹೋದಾಗ  ಸದರಿ ನವೀನ ರವರ ತಂದೆ ಆದಿನಾರಾಯಣಪ್ಪ ಮತ್ತು ಅವರ ಚಿಕ್ಕ ಮಗ ಶ್ರೀಕಾಂತ ರವರು  ಬಂದು ಮನೆಯ ಬಾಗಿಲನ್ನು ತೆಗೆದು ನವೀನ ರವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದಿರುವುದಾಗಿ, ತಾನು & ತನ್ನ ತಾಯಿ ಮನೆಯ ೊಳಗೆ ಹೋಗಿ ನೋಡಲಾಗಿ ಮನೆಯಲ್ಲಿನ ಬೀರುವಿನಲ್ಲಿ ತಾವು ಇಟ್ಟಿದ್ದ 2,80,000/- ರೂಗಳು ನಗದು ಹಣ 15 ಗ್ರಾಂ ತೂಕದ 45,000/- ರೂ ಬೆಲೆಯ ನಕ್ಲೇಸ್, 15 ಗ್ರಾಂ ತೂಕದ 45,000/- ರೂ ಬೆಲೆಯ ಓಲೆ & ಹ್ಯಾಂಗಿಂಗ್ಸ್ ಗಳು ಇಲ್ಲದೇ ಇದ್ದು ನವೀನ್ ಕುಮಾರ್ ರವರು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಗೆ ನುಗ್ಗಿ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ.

 

15. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.276/2021 ಕಲಂ. 504,506 ಐ.ಪಿ.ಸಿ:-

     ದಿನಾಂಕ: 21.08.2021 ರಂದು ರಾತ್ರಿ ಈ ಕೇಸಿನ ಪಿರ್ಯಾದಿದಾರರಾದ ಶ್ರೀ ಮಂಜುನಾಥ ಬಿನ್ ಮುನಿಶಾಮಪ್ಪ, ಬಸವನಪರ್ತಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ , ದಿನಾಂಕ: 21.08.2021 ರಂದು ರಾತ್ರಿ 7.40 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿ ಮಂಜುನಾಥ ಬಿನ್ ಲೆಟ್ ಸುಬ್ಬರಾಯಪ್ಪ, ರವರು ತನಗೆ ಮೊಬೈಲ್ ಮೂಲಕ ಕರೆ ಮಾಡಿ ತನ್ನ ವಕೀಲ ವೃತ್ತಿ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದು “ನೀನು ಮನೆಗೆ ಬಾರೋ, ನಿನ್ನನ್ನು ಸುಮ್ಮನೇ ಬಿಡುವುದಿಲ್ಲ ನಿನ್ನನ್ನು ಸಾಯಿಸಿಬಿಡುತ್ತೇನೆ” ಎಂದು ಪ್ರಾಣಬೆದರಿಕೆ ಹಾಕಿರುತ್ತಾನೆ. ಆದ್ದರಿಂದ ತನಗೆ ಸೂಕ್ತ ರಕ್ಷಣೆ ನೀಡಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಎನ್.ಸಿ.ಆರ್ 451/2021 ರಂತೆ ದಾಖಲು ಮಾಡಿರುತ್ತೆ. ಇದು ಸಂಜ್ಞೇಯ ಪ್ರಕರಣವಾಗಿರುವುದರಿಂದ ಪ್ರ.ವ.ವರಧಿಯನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಲು ಕೋರಿ ದಿನಾಂಕ: 22/08/2021 ರಂದು ಘನ ಸಿ.ಜೆ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯಕ್ಕೆ ಶಿಡ್ಲಘಟ್ಟ ರವರ ಸನ್ನಿಧಾನದಲ್ಲಿ ಮನವಿ ಸಲ್ಲಿಸಿಕೊಂಡು  ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣಾ ಮೊ.ಸಂ 276/2021 ಕಲಂ 504, 506 ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 22-08-2021 05:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080