ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.100/2021 ಕಲಂ. 87 ಕೆ.ಪಿ  ಆಕ್ಟ್:-

  ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರಿ.ಆರ್.ನಾರಾಯಣಸ್ವಾಮಿ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ:21/07/2021 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಬೋಡಂಪಲ್ಲಿ ಗ್ರಾಮದ ಕೆರೆಯ ಅಂಗಳದಲ್ಲಿ  ಯಾರೋ ಆಸಾಮಿಗಳು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಠಾಣೆಯಲ್ಲಿದ್ದ ಸಿಬ್ಬಂದಿಯವರಾದ  ಹೆಚ್ ಸಿ -36 ಶ್ರೀ.ವಿಜಯ್ ಕುಮಾರ್, ಹೆಚ್.ಸಿ 139 ಶ್ರೀ.ಶ್ರೀನಾಥ ಎಂ.ಪಿ, ಸಿಪಿಸಿ – 262 ಅಂಬರೀಶ್, ಪಿ.ಸಿ 561 ರಮೇಶ್ ತಳವಾರ, ಪಿ.ಸಿ 388 ಗದ್ದೆಪ್ಪ ಶಿವಪುರ, ಪಿ.ಸಿ 396 ರಮೇಶ್ ಕಂಪ್ಲಿ,ಪಿ.ಸಿ 415 ಪರಸಪ್ಪ ತ್ಯಾಗರ್ತಿ,ಪಿ.ಸಿ-416-ಸಚಿನ್ ಕುಮಾರ್, ಪಿ.ಸಿ-291 ಗಂಗಾಧರ ಹಾಗೂ ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಮತ್ತು ದ್ವಿಚಕ್ರ ವಾಹನಗಳಲ್ಲಿ ಬೋಡಂಪಲ್ಲಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ನಾನು ಮತ್ತು ಸಿಬ್ಬಂದಿಯವರು ಬೋಡಂಪಲ್ಲಿ ಗ್ರಾಮದ ಕೆರೆಯ ಅಂಗಳಕ್ಕೆ ಮಧ್ಯಾಹ್ನ 03-15 ಗಂಟೆಗೆ ಹೋಗಿ ದೂರದಲ್ಲಿ ಜೀಪ್ ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಜಾಲಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಕೆರೆಯ ಅಂಗಳದಲ್ಲಿ ಇರುವ ಜಾಲಿ ಮರದ ಕೆಳಗಡೆ ಗುಂಪಾಗಿ ವೃತ್ತಾಕಾರವಾಗಿ ಕುಳಿತು ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸದರಿಯವರನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಎಲ್ಲಿಯೂ ಹೋಗದಂತೆ ಸೂಚಿಸಿದಾಗ  ಅಲ್ಲಿದ್ದ ಆಸಾಮಿಗಳು ಓಡಿ ಹೋಗಲು ಯತ್ನಿಸಿದ್ದು ಸದರಿಯವರ ಪೈಕಿ 5 ಜನರನ್ನು ನಾನು ಮತ್ತು ಸಿಬ್ಬಂದಿಯವರು ಹಿಡಿದುಕೊಂಡಿದ್ದು 3 ಜನರು ನಮ್ಮಿಂದ ತಪ್ಪಿಸಿಕೊಂಡು ಓಡಿಹೋಗಿರುತ್ತಾರೆ. ನಾವು ಹಿಡಿದುಕೊಂಡವರ ಹೆಸರು ಮತ್ತು ವಿಳಾಸ ಕೇಳಲಾಗಿ 1) ಶ್ರೀ.ರವಿ ಬಿನ್ ನಾರಾಯಣಪ್ಪ 38 ವರ್ಷ,ಗೊಲ್ಲರು,ಜಿರಾಯ್ತಿ,ವಾಸ-ಬೋಡಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು  2) ಶ್ರೀ.ರಿಯಾಜ್ ಬಿನ್ ಮಸೀದ್ 29 ವರ್ಷ,ಮುಸ್ಲೀಂರು, ಕೆ.ಇ.ಬಿ ಯಲ್ಲಿ ಕೆಲಸ ವಾಸ-ಬೋಡಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು 9611904471 3) ಶ್ರೀ.ನರೇಶ್.ಬಿ.ವಿ ಬಿನ್ ವೆಂಕಟರವಣಪ್ಪ 30 ವರ್ಷ, , ಆದಿ ಕರ್ನಾಟಕ ಜನಾಂಗ, ಕೆ.ಇ,ಬಿ ಯಲ್ಲಿ ಕೆಲಸ,ವಾಸ-ಬೋಡಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು 9980824689 4) ಶ್ರೀ.ಶಂಕರ್ .ಬಿ.ಎಂ ಬಿನ್ ಲೇಟ್ ಮುನಿಸ್ವಾಮಿ,43 ವರ್ಷ,ಆದಿಕರ್ನಾಟಕ ಜನಾಂಗ,ಬಸ್ ಕಂಡಕ್ಟರ್ ಕೆಲಸ,ವಾಸ-ಬೋಡಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು, 9008771959 5) ಶ್ರೀ.ಶ್ರೀಧರ್ ಬಾಬು ಬಿ.ಎನ್ ಬಿನ್ ನಾರಾಯಣಸ್ವಾಮಿ 25 ವರ್ಷ ಆದಿಕರ್ನಾಟಕ ಜನಾಂಗ ಕೆ.ಇ.ಬಿ ಯಲ್ಲಿ ಕೆಲಸ ವಾಸ-ಬೋಡಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ನಂತರ ಸ್ಥಳದಿಂದ ಓಡಿ ಹೋದ ಆಸಾಮಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ 6) ರಾಘವ ಬಿನ್ ಶ್ರೀನಿವಾಸಪ್ಪ 25 ವರ್ಷ ಗೊಲ್ಲರು ಕೆ.ಇ.ಬಿ ಯಲ್ಲಿ ಕೆಲಸ ವಾಸ ಬೋಡಂಪಲ್ಲಿ ಗ್ರಾಮ ಚಿಂತಾಮಣಿ ತಾಲ್ಲೂಕು,7) ಶ್ರೀನಾಥ ಬಿನ್ ವೆಂಕಟರವಣಪ್ಪ 24 ವರ್ಷ ದೋಬಿ ಜನಾಂಗ ಜಿರಾಯ್ತಿ ವಾಸ-ಬೋಡಂಪಲ್ಲಿ ಗ್ರಾಮ ಚಿಂತಾಮಣಿ ತಾಲ್ಲೂಕು, 8) ವೆಂಕಟರವಣಪ್ಪ ವಾಸ-ಬೋಡಂಪಲ್ಲಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಬಿಳಿ ಗೋಣಿಚೀಲವನ್ನು ನೆಲದಲ್ಲಿ ಹಾಸಿದ್ದು, ಸದರಿ ಗೋಣಿಚೀಲದ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆಗಳು ಇದ್ದು, ಅವುಗಳನ್ನು  ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 3410/- ರೂಗಳಿದ್ದು ಇಸ್ಪೀಟ್ ಜೂಜಾಟ ಆಡುತ್ತಿದ್ದ 5 ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, ಅವರು ಇಸ್ಪೀಟ್ ಜೂಜಾಟಕ್ಕೆ ಪಣವಾಗಿಟ್ಟಿದ್ದ, 3410 /- ರೂಗಳ ನಗದು ಹಣವನ್ನು, ಒಂದು ಗೋಣಿಚೀಲ ಹಾಗೂ 52 ಇಸ್ಟೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಮಧ್ಯಾಹ್ನ 03-30 ಗಂಟೆಯಿಂದ ಸಂಜೆ 04-15 ಗಂಟೆಯವರೆಗೆ ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಠಾಣೆಗೆ ಸಂಜೆ 04-30 ಗಂಟೆಗೆ ಹಾಜರಾಗಿ ಸ್ವತಃ ಠಾಣೆಯ ಎನ್ ಸಿ ಆರ್ ನಂ: 129/2021 ರಂತೆ ದಾಖಲಿಸಿಕೊಂಡು ಆರೋಪಿಗಳ ಮತ್ತು ಮಾಲಿನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ವಾಟ್ಸ್ ಹ್ಯಾಪ್ ಮುಖಾಂತರ ರವಾನಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಕೊಂಡು  ಸಂಜೆ 6-00 ಗಂಟೆಗೆ ಅನುಮತಿಯನ್ನು ಪಡೆದು ಠಾಣೆಯ ಮೊ ಸಂಖ್ಯೆ: 100/2021 ಕಲಂ: 87 ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.101/2021 ಕಲಂ. 380 ಐ.ಪಿ.ಸಿ:-

     ಈ ದಿನ ದಿನಾಂಕ 22/07/2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರಿಮತಿ.ಲಲಿತಮ್ಮ ಕೋಂ ಶಿವಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ನನಗೆ ಮೂರು ಜನ ಮಕ್ಕಳಿದ್ದು ಮೊದಲನೇ ಅಶ್ವಿಣಿ ಎಂಬ ಮಗಳು, ಎರಡನೇ ಮಣಿಕಂಠ, ಮೂರನೇ ಹರೀಶ ಎಂಬ ಇಬ್ಬರು ಗಂಡು ಮಕ್ಕಳಿರುತ್ತಾರೆ. ನನ್ನ ಮಗನಾದ ಮಣಿಕಂಠ ರವರು ಬಿ.ಕಾಂ ವಿದ್ಯಾಭ್ಯಾಸಮಾಡಿದ್ದು ವಿಧ್ಯಾಭ್ಯಾಸ ಮುಗಿದ ನಂತರ ಮನೆಯಲ್ಲಿ ಏನೂ ಕೆಲಸ ಮಾಡದೆ ಸುಮ್ಮನೆ ಓಡಾಡಿಕೊಂಡು ಇದ್ದು ಆಗಾಗ ಆತನ ಖಚರ್ಿಗೆ ಹಣ ಕೊಡುವಂತೆ ನಮ್ಮನ್ನು ಒತ್ತಾಯಮಾಡುತ್ತಿದ್ದನು. ನಾನು ಮತ್ತು ನನ್ನ ಗಂಡ ಈ ಹಿಂದೆ ಬೆಂಗಳೂರಿನಲ್ಲಿದ್ದಾಗ 6 ವರ್ಷಗಳ ಹಿಂದೆ ನನ್ನ ಗಂಡ ನನಗೆ ಬಂಗಾರದ 25 ಗ್ರಾಂ ತೂಕದ ಒಂದು ನಕ್ಲೆಸ್ ಹಾಗೂ 45 ಗ್ರಾಂ ತೂಕದ ಒಂದು ಲಾಂಗ್ ಚೈನ್ನ್ನು ಮಾಡಿಸಿದ್ದನು ಸದರಿಯವುಗಳನ್ನು ನಾನು ಎಲ್ಲಿಗಾದರು ಕಾರ್ಯಕ್ರಮಗಳಿಗೆ ಹೋದಾಗ ಹಾಕಿಕೊಂಡು ಹೋಗುತ್ತಿದ್ದೆ ನಂತರ ತಂದು ಮನೆಯಲ್ಲಿ ಪೆಟ್ಟಿಗೆಯಲ್ಲಿ ಇಡುತ್ತಿದ್ದೆ. ಕಡೆಯದಾಗಿ ಒಂದು ವಾರದ ಹಿಂದೆ ನನ್ನ ತಮ್ಮನ ಮಗಳ ವಸಿಕೆ ಕಾರ್ಯಕ್ರಮ ಇದ್ದಾಗ ನಾನು ಸದರಿ ಒಡವೆಗಳನ್ನು ಹಾಕಿಕೊಂಡಿದ್ದು ನಂತರ ಮೂರು ದಿನಗಳ ಹಿಂದೆ ನಾನು ಒಡವೆಗಳನ್ನು ತೆಗೆದು ನಮ್ಮ ಮನೆಯ ಪೆಟ್ಟಿಗೆಯಲ್ಲಿ ಸೀರೆಗಳ ಮಧ್ಯದಲ್ಲಿ ಇಟ್ಟು ಪೆಟ್ಟಿಗೆಯ ಬೀಗವನ್ನು ಮನೆಯಲ್ಲಿಯೇ ಪೆಟ್ಟಿಗೆಯ ಕೆಳಭಾಗದಲ್ಲಿ ಇಟ್ಟಿದ್ದೆ. ಹೀಗಿರುವಲ್ಲಿ ನೆನ್ನೆ ದಿನ ದಿನಾಂಕ 21/07/2021 ರಂದು ಬೆಳಿಗ್ಗೆ ನನ್ನ ಗಂಡ ಕೆಲಸದ ನಿಮಿತ ಬೆಂಗಳೂರಿಗೆ ಹೋಗಿದ್ದು ನಾನು  ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ತೋಟಕ್ಕೆ ಕೆಲಸಕ್ಕೆ ಹೋದೆ ನನ್ನ ಮಗನಾದ ಮಣಿಕಂಠ ಮನೆಯಲ್ಲಿಯೇ ಇದ್ದನು ನಾನು ತೋಟದಲ್ಲಿ ಕೆಲಸ ಮುಗಿಸಿಕೊಂಡು ಸಂಜೆ 5 ಗಂಟೆ ಸಮಯದಲ್ಲಿ ಮನೆಗೆ ವಾಪಸ್ ಬಂದಾಗ ಮನೆಯ ಬಾಗಿಲು ತೆಗೆದಿದ್ದು ನಾನು ಮನೆಯಲ್ಲಿ ಪೆಟ್ಟಿಗೆಯಲ್ಲಿ ಇಟ್ಟಿದ್ದ ಬಟ್ಟೆಗಳು ಎಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಮನೆಯಲ್ಲಿದ್ದ ನನ್ನ ಮಗನು ಮನೆಯಲ್ಲಿ ಇಲ್ಲದೆ ಎಲ್ಲಿಯೋ ಹೊರಟು ಹೋಗಿದ್ದು ಅನುಮಾನ ಬಂದು ನಾನು ಪೆಟ್ಟಿಗೆಯಲ್ಲಿ ಇಟ್ಟಿದ್ದ ನನ್ನ ಬಾಬತ್ತು ಬಂಗಾರದ ಒಡವೆಗಳನ್ನು ನೋಡಲಾಗಿ ನನ್ನ ಬಾಬತ್ತು ಪೆಟ್ಟಿಗೆಯಲ್ಲಿಟ್ಟಿದ್ದ ಬಂಗಾರದ ನಕ್ಲೆಸ್ ಮತ್ತು ಲಾಂಗ್ ಚೈನ್ ಇಲ್ಲದೆ ಇದ್ದು ಯಾರೋ ಕಳ್ಳರು ನಾನು ಕೆಲಸಕ್ಕೆಂದು ತೋಟಕ್ಕೆ ಹೋಗಿದ್ದ ಸಮಯದಲ್ಲಿ ನಾನು ಪೆಟ್ಟಿಗೆಯ ಕೆಳಗೆ ಇಟ್ಟಿದ್ದ ಬೀಗದಿಂದ ಪೆಟ್ಟಿಗೆಗೆ ಹಾಕಿದ್ದ ಬೀಗವನ್ನು ತೆಗೆದು ಪೆಟ್ಟಿಗೆಯಲ್ಲಿಟ್ಟಿದ್ದ ಬಂಗಾರದ ನಕ್ಲೆಸ್ ಮತ್ತು ಚೈನ್ನ್ನು ಕಳವುಮಾಡಿಕೊಂಡು ಹೋದ್ದು ಕಳುವಾಗಿರುವ ನನ್ನ ಬಾಬತ್ತು ಒಡವೆಗಳ ಒಟ್ಟು ಮೌಲ್ಯ ಸುಮಾರು 1,75,000 ರೂಗಳಾಗಿದ್ದು ನನ್ನ ಬಾಬತ್ತು ಕಳುವಾಗಿರುವ ಒಡವೆ ಕಳುವಾಗಿರುವ ವಿಚಾರದಲ್ಲಿ ನನ್ನ ಮಗನಾದ ಮಣಿಕಂಠ ಎಂಬುವರ ಮೇಲೆ ಗುಮಾನಿ ಇದ್ದು  ಕಳುವಾಗಿರುವ ನನ್ನ ಬಾಬತ್ತು ಬಂಗಾರದ ನಕ್ಲೆಸ್ ಮತ್ತು ಲಾಂಗ್ ಚೈನ್ನ್ನು ಹಾಗೂ ಆರೋಪಿತರನ್ನು ಪತ್ತೆಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರುತ್ತೇನೆ. ಸದರಿ ವಿಚಾರವನ್ನು ನಾನು ನನ್ನ ಗಂಡನಿಗೆ ತಿಳಿಸಿ ನಂತರ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿರುವುದಾಗಿ ನೀಡಿದ ದೂರನ್ನು ಪಡೆದು ಕೇಸನ್ನು ದಾಖಲಿಸಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.319/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ 21-07-2021 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿ ವೇಣುಗೋಪಾಲ್ ಎನ್. ಬಿನ್ ಲೇಟ್ ನಾರಾಯಣಸ್ವಾಮಿ, 32 ವರ್ಷ, ಒಕ್ಕಲಿಗರು, ಇಂಜನಿಯರ್, ವಾಸ ನಂದಿಗಾನಹಳ್ಳಿ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ತಮ್ಮ ಅಣ್ಣನಾದ ಚಂದ್ರಾರೆಡ್ಡಿ ಬಿನ್ ಲೇಟ್ ಆಶ್ವತ್ಥನಾರಾಯಣರೆಡ್ಡಿ ರವರ ಹೆಸರಿನಲ್ಲಿ ಮಾರುತಿ ಸುಜುಕಿ ಕಂಪನಿಯ ಕೆಎ 07-ಎಂ-5309 ನಂಬರಿನ ಸ್ವಿಫ್ಟ್ ಡಿಸೈರ್ ಕಾರು ಇದ್ದು,  ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ಅವರ ಹೆಸರಿನಲ್ಲಿಯೆ ಇರುತ್ತವೆ. ಈಗಿರುವಲ್ಲಿ ದಿನಾಂಕ:-21-07-2021 ರಂದು ಸ್ವಂತ ಕೆಲಸದ ಮೇಲೆ ತಾನು, ತನ್ನ ಹೆಂಡತಿ ಅನುಷ, 28 ವರ್ಷ ಹಾಗೂ ಒಂದು ವರ್ಷ ವಯಸ್ಸಿನ ತನ್ನ ಮಗ ನಿರ್ಮಯ್ ರೆಡ್ಡಿ ರವರೊಂದಿಗೆ ತನ್ನ ಸ್ನೇಹಿತನಾದ ಎಸ್. ಮೋಹನರೆಡ್ಡಿ ಬಿನ್ ಸುಬ್ಬಾರೆಡ್ಡಿರವರನ್ನು ಚಾಲಕರಾಗಿ ಕರೆದುಕೊಂಡು ಚಿಂತಾಮಣಿಗೆ ತಮ್ಮ ಗ್ರಾಮದಿಂದ ಬರುತ್ತಿದ್ದಾಗ ಇದೇ ದಿನ ಸಂಜೆ 4-15 ಗಂಟೆಗೆ ಕಡಪ-ಬೆಂಗಳೂರು ಹೆದ್ದಾರಿಯ ಮುನಗನಹಳ್ಳಿ ಕ್ರಾಸ್ ಬಳಿ ಬರುತ್ತಿದ್ದಾಗ ಕಾರನ್ನು ಚಾಲಕನಾದ ಮೋಹನ್ ರೆಡ್ಡಿ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಕಲ್ಲಹಳ್ಳಿ ಕಡೆಯಿಂದ ಒಂದು ದ್ವಿ-ಚಕ್ರ ವಾಹನವನ್ನು ಅದರ ಸವಾರನು ಏಕಾಏಕಿ ರಸ್ತೆಗೆ ಚಲಾಯಿಸಿಕೊಂಡ ಬಂದ ಪರಿಣಾಮ ತಮ್ಮ ಕಾರಿನ ಚಾಲಕ ದ್ವಿ-ಚಕ್ರ ವಾಹನಕ್ಕೆ ಅಪಘಾತವಾಗುವುದನ್ನು ತಪ್ಪಿಸಲು ವಾಹನವನ್ನು ರಸ್ತೆಯ ಎಡಬದಿಗೆ ತಿರುಗಿಸಿದಾಗ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಮುಗುಚಿಕೊಂಡು ಬಿದ್ದ ಪರಿಣಾಮ ಕಾರಿನಲ್ಲಿದ್ದ ತನ್ನ ಮಗನಾದ ನಿರ್ಮಯ್ ರೆಡ್ಡಿ ರವರ ತಲೆಯ ಹಿಂಭಾಗದಲ್ಲಿ ತರಚಿದ ಗಾಯವಾಗಿರುತ್ತದೆ. ಉಳಿದಂತೆ ಯಾರಿಗೂ ಗಾಯಗಳು ಆಗಿರುವುದಿಲ್ಲ. ಕಾರನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಮೋಹನರೆಡ್ಡಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದೆ.

 

4. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.94/2021 ಕಲಂ. 324,504,506 ಐ.ಪಿ.ಸಿ:-

     ದಿನಾಂಕ:21/07/2021 ರಂದು ಮಧ್ಯಾಹ್ನ 12-00 ಗಂಟೆಗೆ ಠಾಣೆಯ ಸಿಬ್ಬಂದಿಯಾದ ಸಿ,ಹೆಚ್,ಸಿ 154 ಅಶ್ವಥಯ್ಯ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ನಾರಾಯಣಪ್ಪ ಬಿನ್ ಲೇಟ್ ಆದೆಪ್ಪ,55 ವರ್ಷ, ಆದಿ ಕರ್ನಾಟಕ ಜನಾಂಗ ಕೂಲಿ ಕೆಲಸ, ಯಲಗಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ ಹೇಳಿಕೆಯ ಸಾರಾಂಶವೆನೇಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸ ಮಾಡಿಕೊಂಡು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಾನು ಕೂಲಿ ಕೆಲಸಕ್ಕಾಗಿ ಹಾಗೂ ಟೈಲ್ಸ್  ಕೆಲಸಕ್ಕೆ ಶಿಡ್ಲಘಟ್ಟ, ದೇವನಹಳ್ಳಿ, ಚಿಕ್ಕಬಳ್ಳಾಪುರ ಹಾಗೂ ಕೆಲಸ ಇರುವ ಕಡೆಗಳಲ್ಲಿ ಹೋಗುತ್ತಿದ್ದು ನನ್ನ ಜೊತೆಯಲ್ಲಿ ನಮ್ಮ ಗ್ರಾಮದ ವಾಸಿಗಳಾದ ಹಾಗೂ ನಮ್ಮ ಜನಾಂಗದವರೇ ಆದ ಕೃಷ್ಣಪ್ಪ, ಮೂರ್ತಿ ಹಾಗೂ ಲಕ್ಷ್ಮಯ್ಯ ಬಿನ್ ಸಾದುವು ವೆಂಕಟರಾಯಪ್ಪ ರವರು ಮಕ್ಕಳಾದ ಶಿವಾ ಮತ್ತು ಸೀನಪ್ಪ ರವರುಗಳು ಸಹ ಬರುತ್ತಿದ್ದರು. ಈ ವಿಚಾರವಾಗಿ ನಮ್ಮ ಗ್ರಾಮದ  ವಾಸಿ ಲಕ್ಷ್ಮಯ್ಯ ಬಿನ್ ಸಾದುವು ವೆಂಕಟರಾಯಪ್ಪ ರವರು ಬಂದು ವಾರದ ಹಿಂದೆ ನಾನು ನಮ್ಮ ಗ್ರಾಮದಲ್ಲಿ ಇದ್ದಾಗ ನನ್ನನ್ನು ಕುರಿತು ನೀನು ಕೂಲಿ ಕೆಲಸಕ್ಕೆ ಹೋಗುವ ಸಮಯದಲ್ಲಿ ನನ್ನ ಮಕ್ಕಳಾದ ಶಿವಾ ಮತ್ತು ಸೀನಪ್ಪ ರವರುಗಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಬಾರದು ಎಂತ ವಿನಾ ಕಾರಣ ನನ್ನ ಮೇಲೆ  ಗಲಾಟೆ ಮಾಡಿರುತ್ತಾರೆ. ಹಾಗೂ ನಾನು ಸಹ ಇನ್ನು ಮುಂದೆ ನಿನ್ನ ಮಕ್ಕಳನ್ನು ನನ್ನ ಜೊತೆಯಲ್ಲಿ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವುದಿಲ್ಲವೆಂತ ತಿಳಿಸಿರುತ್ತೇನೆ. ಈಗಿರುವಲ್ಲಿದಿನಾಂಕ:18/07/2021 ರಂದು ರಾತ್ರಿ ಸುಮಾರು 10-00 ಗಂಟೆಯ ಸಮಯದಲ್ಲಿ  ನಾನು ನಮ್ಮ ಗ್ರಾಮದಿಂದ ದಿಬ್ಬೂರಹಳ್ಳಿ ಗ್ರಾಮಕ್ಕೆ ಹೋಗಲು ಚಿಕ್ಕದಿಬ್ಬೂರಹಳ್ಳಿ ಕ್ರಾಸ್ ನಲ್ಲಿ ಹೋಗುತ್ತಿದ್ದಾಗ ನಮ್ಮ ಗ್ರಾಮದ ವಾಸಿಯಾದ ಲಕ್ಷ್ಮಯ್ಯ ಬಿನ್ ಸಾದುವು ವೆಂಕಟರಾಯಪ್ಪ ರವರು ಬಂದು ಹಳೆ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಏನೋ ಲೋಪರ್ ನನ್ನ ಮಗನೆ ನನ್ನ ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತೀಯಾ ಎಂತ ಅವಾಚ್ಯ ಶಬ್ದಗಳಿಂದ ಬೈದು ತನ್ನ ಕೈಯಲ್ಲಿದ್ದ ಚೂಪಾದ ಕಲ್ಲಿನಿಂದ ನನ್ನ ಬಲಭಾಗದ ಕಣ್ಣಿನ ಉಬ್ಬಿನ ಮೇಲ್ಭಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿ ಇನ್ನೂ ಮುಂದೆ ನನ್ನ  ಮಕ್ಕಳನ್ನು ನಿನ್ನ ಜೊತೆಯಲ್ಲಿ ಕರೆದುಕೊಂಡು ಹೋದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂತ ಹೇಳಿ ಹೊರೆಟು ಹೋಗಿರುತ್ತಾರೆ. ನಂತರ ನಾನು ಅಲ್ಲಿಂದ ನಡೆದುಕೊಂಡು ಬಂದು ನಮ್ಮ ಗ್ರಾಮದ ಬಳಿ ಇರುವ ಮರಗಳ ಕೆಂಚಮ್ಮ ದೇವಾಲಯದ ಬಳಿ ಸುಸ್ತು ಆಗಿ ಕುಳಿತುಕೊಂಡಿದ್ದಾಗ ನಮ್ಮ ಗ್ರಾಮದ ವಾಸಿಯಾದ  ಮುನಿರಾಜು ಬಿನ್ ಮುನಿಶಾಮಪ್ಪ ರವರು ನನ್ನನ್ನು ನೋಡಿ ನಮ್ಮ ಮನೆಯಲ್ಲಿ ತಿಳಿಸಿದ್ದು ಆಗ ನಮ್ಮ ಸಂಬಂಧಿಕರಾದ ಶಿವಾನಂದ ಬಿನ್ ವೆಂಕಟೇಶ ಹಾಗೂ ನಾರಾಯಣಸ್ವಾಮಿ ಬಿನ್ ನಾಗಪ್ಪ ರವರು ಬಂದು ನನ್ನನ್ನು ಉಪಚರಿಸಿ 108 ಅಂಬ್ಯುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ  ಕರೆದುಕೊಂಡು ಬಂದು  ದಾಖಲು ಮಾಡಿರುತ್ತಾರೆ. ವಿನಾ ಕಾರಣ ನನ್ನ  ಮೇಲೆ ಜಗಳ ತೆಗೆದು ನನ್ನನ್ನು ಹೊಡೆದಿರುವ ಲಕ್ಷ್ಮಯ್ಯ ಬಿನ್ ಸಾದುವು ವೆಂಕಟರಾಯಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂಖ್ಯೆ:94/2021 ಕಲಂ:324,504,506  ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

5. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.101/2021 ಕಲಂ. 403,409,420 ಐ.ಪಿ.ಸಿ:-

    ದಿ:21/07/2021 ರಂದು  ಸಂಜೆ 6-30 ಗಂಟೆಗೆ  ಪಿರ್ಯಾದಿದಾರರಾದ ಶ್ರೀ.ಮನಮೋಹನ್, ಮ್ಯಾನೇಜರ್, GHAI CONSTRUCTION LIMITED,  ಗೌರಿಬಿದನೂರು ರವರು     ನೀಡಿದ ದೂರಿನ ಸಾರಾಂಶವೇನೆಂದರೆ   ಶ್ರೀ.ಮನಮೋಹನ್, ಮ್ಯಾನೇಜರ್, GHAI CONSTRUCTION LIMITED, ಗೌರಿಬಿದನೂರು ಆದ ನಾನು  ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ನಮ್ಮ GHAI CONSTRUCTION  ಕಂಪನಿಯವರು ದಿ:02/03/2021 ರಂದು  Galaxy Cargo Transport Contractor. C-232, Street Chamber Near Telephone Ex, Street Market, Kalamboli, Navi Mumbai-410218  ( GST NO.-27AASFG3396H1ZT   ಕಂಪನಿಯವರಿಗೆ  ದೂರವಾಣಿ  ಮೂಲಕ ಕರೆ ಮಾಡಿ  ಅಜಯ್  ಶರ್ಮಾ , ಮೊಬೈಲ್ ನಂ.9022717215 ರವರ ಸಂಖ್ಯೆಗೆ ಕರೆ ಮಾಡಿ ಲಾರಿ ಟ್ರೈಲರ್ ವಾಹನಗಳನ್ನು   ಬುಕ್ ಮಾಡಿರುತ್ತೇವೆ. ಗೌರಿಬಿದನೂರಿನಿಂದ ಮಹಾರಾಷ್ಟ್ರದ, ಪುಣೆಯ, ದಟವಾಡಿ-412203 ಗೆ ವಾಹನಗಳು ಬೇಕೆಂದು   ಪೋನ್  ಮೂಲಕ Fabricater Steel Structure(GIRDER)    ವಸ್ತುಗಳನ್ನು  ವರ್ಗಾವಣೆ ಮಾಡಲು ವಾಹನಗಳನ್ನು  ಬುಕ್ ಮಾಡಿರುತ್ತೇವೆ. ಶಿಪ್ಟ್ ಮಾಡಲು ಅವರಿಗೆ ದಿ:03/03/2021 ರಂದು 03,60,000 ರೂಗಳನ್ನು ಅವರ ಬ್ಯಾಂಕ್ ಖಾತೆ ಸಂಖ್ಯೆ. 277905000575-IFSC-ICIC0002779-Kalamboli Branch-Cargo Movers, Navi Mumbai-410218  ರವರಿಗೆ  RTGS   ಮೂಲಕ  ಹಣವನ್ನು ವರ್ಗಾವಣೆ ಮಾಡಿರುತ್ತೇವೆ. ದಿ:11/03/2021 ರಂದು  Galaxy Cargo Movers  ರವರು  04 ಲಾರಿ ಟ್ರೈಲರ್ ವಾಹನಗಳನ್ನು ಕಳುಹಿಸಿಕೊಟ್ಟಿರುತ್ತಾರೆ. ವಾಹನಗಳ ವಿವರ  ಈ ಕೆಳಕಂಡಂತಿವೆ. 1] Consighnment No.1652,  Date: 11/03/2021, S.L.No-01, Vehicle No. MH14/HG/0234, Tax Invioce- GLC/2020-21/025, EWAY Bill No.181311904752- Amount-1326320/-RS.  2] Consighnment No.1655, Date: 12/03/2021, S.L.No-02, Vehicle No. MH14/GU1541, Tax Invioce- GLC/2020-21/029, EWAY Bill No.101312191573- Amount-1267360/-RS.  3] Consighnment No.1653, Date: 11/03/2021, S.L.No-03, Vehicle No. MH43/Y3297 , Tax Invioce- GLC/2020-21/026, EWAY Bill No.101311911691- Amount-1529280/-RS. 4] Consighnment No.1654, Date: 11/03/2021, S.L.No-04, Vehicle No. MH/14/EM2349 , Tax Invioce- GLC/2020-21/027, EWAY Bill No.111311917928- Amount-1477360/-RS.  TOTAL AMOUNT 56,00,320/- RS. ಈ ಮೇಲ್ಕಂಡ  04 ವಾಹನಗಳಲ್ಲಿ ಹೋದಂತಹ ವಸ್ತುಗಳು ಇವತ್ತಿನ ಸದರಿ ದಿನಾಂಕ:21/07/2021 ರವರೆವಿಗೂ ವಸ್ತುಗಳನ್ನು  ಲೋಡ್ ಮಾಡಿಕೊಂಡು GHAI CONSTRUCTION LIMITED, CHAUFULLA KHEDGAON,  DEULGAON GADA, DATTAWADI, CHAUFULLA, PUNE, MAHARASHTRA-412203   ಈ ವಿಳಸಕ್ಕೆ ತಲುಪಿರುವುದಿಲ್ಲ. ಸದರಿ ತಮ್ಮಲ್ಲಿ ವಿನಂತಿಸುವುದೇನೆಂದರೆ ನಮ್ಮ ವಸ್ತುಗಳನ್ನು ನಮಗೆ ಹುಡುಕಿಕೊಡಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆಂತ ನೀಡಿದ ದೂರಾಗಿದ್ದು ಈ ದೂರಿನ ಸಂಬಂಧ ಠಾಣೆಯಲ್ಲಿ ಪ್ರಕರಣವನ್ನು   ದಾಖಲಿಸಿಕೊಂಡಿರುತ್ತೆ.

 

6. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.77/2021 ಕಲಂ. 279 ಐ.ಪಿ.ಸಿ:-

    ದಿನಾಂಕ: 21-07-2021 ರಂದು ಪಿರ್ಯಾದಿದಾರರಾದ ಶ್ರೀ ದೀಪಕ್ ಬಿನ್ ಪೃತ್ವಿರಾಜ್ , 24 ವರ್ಷ, ಚಾರಟೇಡ್ ಅಕೌಂಟ್ ಕೆಲಸ , ಜೈನ ಜನಾಂಗ, #507, 5ನೇ ಪ್ಲೋರ್ ಭಾಮೇಲ್ ಲೇಔಟ್, ಆರ್ ಆರ್ ನಗರ ಬೆಂಗಳೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ಈ ದಿನ ದಿನಾಂಕ: 21-07-2021 ರಂದು ನಂದಿ ಬೆಟ್ಟ ವಿಕ್ಷಣೆಗಾಗಿ ಪಿರ್ಯಾದಿ ದಾರರು ಹಾಗೂ ಅವರ ಗೆಳತಿಯಾದ ಕಾವ್ಯ ರವರು ಮಧ್ಯಾಹ್ನ 1-59 ಗಂಟೆಗೆ ಕೆಎ09-ಪಿ-6386 ಕಾರಿನಲ್ಲಿ ಬೆಂಗಳೂರನ್ನು ಬಿಟ್ಟು ನಂದಿ ಬೆಟ್ಟಕ್ಕೆ ಹೋಗಲು ಮದ್ಯಾಹ್ನ3-56 ಗಂಟೆಗೆ 34ನೇ ಮತ್ತು 35ನೇ ತಿರುವಿನ ಮಧ್ಯ ಬಳಿ ಹೋಗುತ್ತಿದ್ದಾಗ, ಮೇಲ್ಭಾಗದಿಂದ ಕಾರ್ ನಂ: ಕೆಎ43-ಎಂ-8873 ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ತಾನು ಚಾಲನೆ ಮಾಡುತ್ತಿದ್ದ ಕಾರಿನ ಬಲಭಾಗದ ಮುಂಭಾಗಕ್ಕೆ ಡಿಕ್ಕಿ ಹೊಡಿಸಿದ ಪರಿಣಾಮ ಕಾರಿನ ಮುಂಭಾಗ ಜಕ್ಕಂ ಗೊಂಡು ತಮಗೆ ಅಪಘಾತ ಪಡಿಸಿದ್ದ ಕೆಎ-43-ಎಮ್-8873 ಕಾರಿನ ಮುಂಭಾಗ ಸಹ ಪೂರ್ತಿ ಜಕ್ಕಂಗೊಂಡಿರುತ್ತೆ. ತಮಗೆ ಅಪಘಾತ ಗೊಳಿಸಿದ್ದ ಕೆಎ-43-ಎಮ್-8873 ಕಾರಿನ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಬೇಕಾಗಿರುತ್ತದೆ.ಎರಡು ಕಾರಿನಲ್ಲಿದ್ದ ನಮ್ಮಗಳಿಗೆ ಯಾರಿಗೂ ಗಾಯಗಳು ಆಗಿರುವುದಿಲ್ಲ. ತಮಗೆ ಅಪಘಾತ ಪಡಿಸಿದ ಕಾರಿನಲ್ಲಿ 3 ಜನರು ಇರುತ್ತಾರೆ. ಅವರಿಗಳಿಗೂ ಸಹಾ ಯಾವುದೇ ಗಾಯಗಳಾಗಿರುವುದಿಲ್ಲ , ಆದ್ದರಿಂದ ತಮ್ಮ ಕಾರಿಗೆ ಅಪಘಾತ ಪಡಿಸಿದ ಚಾಲಕ ಮತ್ತು ಕೆಎ-43-ಎಮ್-8873 ಕಾರಿನ ಮತ್ತು ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮಕೈಗೋಳ್ಳಲು ಕೋರಿರುತ್ತಾರೆ.

 

7. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.83/2021 ಕಲಂ. 87 ಕೆ.ಪಿ ಆಕ್ಟ್:-

    ದಿನಾಂಕ.21.07.2021 ರಂದು ಮದ್ಯಾಹ್ನ 03.15 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ:-21-07-2021 ರಂದು ಬೆಳಿಗ್ಗೆ 01.30 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಕೆ.ಸತೀಶ್ ಆದ ನಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ತೈಬಾ ನಗರದ ಅಮೀರ್ ಹೋಟೆಲ್ ಬಳಿ  ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡಿರುತ್ತೆ. ನಂತರ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ 97, ಸುಬ್ರಮಣಿ, ಪಿಸಿ-278 ನಾರಾಯಣ, ಪಿ.ಸಿ-126 ವೆಂಕಟೇಶ್,ಪಿ,ಸಿ-554 ಪ್ರವೀಣ್ ಕುಮಾರ್, ಪಿ,ಸಿ-555 ಅಶ್ವಥ್ ರೆಡ್ಡಿ, ಪಿ,ಸಿ 280-ಶಶಿಕುಮಾರ್, ಜೀಪ್ ಚಾಲಕ ಮಂಜುನಾಥ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 2.20 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಸಿಬ್ಬಂದಿಯವರು ಹಿಂಬಾಲಿಸಿ ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1]  ಫಕೃದ್ದೀನ್ ಬಿನ್ ಲೇಟ್ ಬಾಷಾಸಾಬಿ, 48 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ತೈಬಾ ನಗರ, ಶಿಡ್ಲಘಟ್ಟ ನಗರ, 2] ಕುತ್ ಬುದ್ದೀನ್ ಬಿನ್ ಲೇಟ್ ಪ್ಯಾರೇಜಾನ್,  53 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ತೈಬಾ ನಗರ, ಶಿಡ್ಲಘಟ್ಟ ನಗರ, 3] ನವೀದ್ ಪಾಷಾ@ ನವೀದ್  ಬಿನ್ ಸಾಬ್ ಜಾನ್ ಸಾಬ್,  35 ವರ್ಷ,  ಮುಸ್ಲಿಮರು,  ರೇಷ್ಮೆ ಕೆಲಸ, ತೈಬಾ ನಗರ, ಶಿಡ್ಲಘಟ್ಟ ಟೌನ್ 4] ರಫೀಕ್ ಬಿನ್ ಲೇಟ್ ಮದರ್ ಸಾಬಿ, 40 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ದಿಬ್ಬೂರಹಳ್ಳಿ ಚರ್ಚ ಬಳಿ ಆಜಾದ್  ನಗರ, ಶಿಡ್ಲಘಟ್ಟ ನಗರ, 5] ಇನಾಯತ್ ಬಿನ್ ಖಾದರ್  ಪಾಷಾ, 25 ವರ್ಷ, ಮುಸ್ಲಿಮರು, ರೇಷ್ಮೆ ಕೆಲಸ, ಇಲಾಹಿ ನಗರ,  ಶಿಡ್ಲಘಟ್ಟ ಟೌನ್, 6 ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 1550/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಮದ್ಯಾಹ್ನ 2.30 ಗಂಟೆಯಿಂದ 3.00 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 06 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 

8.  ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.84/2021 ಕಲಂ. 87 ಕೆ.ಪಿ ಆಕ್ಟ್:-

    ದಿನಾಂಕ.21.07.2021 ರಂದು ಸಂಜೆ 4.30 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ:-21-07-2021 ರಂದು ಮದ್ಯಾಹ್ನ 01.45 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಕೆ.ಸತೀಶ್ ಆದ ನಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ಸಂತೋಷ್ ನಗರದ ಚರ್ಚ ಹಿಂಭಾಗದ ಖಾಲಿಜಾಗದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡಿರುತ್ತೆ. ನಂತರ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ 97, ಸುಬ್ರಮಣಿ, ಪಿಸಿ-278 ನಾರಾಯಣ, ಪಿ.ಸಿ-126 ವೆಂಕಟೇಶ್,ಪಿ,ಸಿ-554 ಪ್ರವೀಣ್ ಕುಮಾರ್, ಪಿ,ಸಿ-555 ಅಶ್ವಥ್ ರೆಡ್ಡಿ, ಪಿ,ಸಿ 280-ಶಶಿಕುಮಾರ್, ಜೀಪ್ ಚಾಲಕ ಮಂಜುನಾಥ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 3.30 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಸಿಬ್ಬಂದಿಯವರು ಹಿಂಬಾಲಿಸಿ ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1]  ಚಾಂದ್ ಪಾಷಾ ಬಿನ್  ಲೇಟ್ ಬಾಷಾ, 30 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಮಹಬೂಬ್ ನಗರ, ಶಿಡ್ಲಘಟ್ಟ ನಗರ, 2] ಗೋಪಾಲ ಹೆಚ್ ಎನ್ ಬಿನ್ ಲೇಟ್ ನಾಗಪ್ಪ,  25 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಮಹಬೂಬ್ ನಗರ, ಶಿಡ್ಲಘಟ್ಟ ನಗರ, 3] ಶ್ರೀನಿವಾಸ ಬಿನ್ ಲೇಟ್ ವೆಂಕಟರಾಯಪ್ಪ,  45 ವರ್ಷ, ಗೊಲ್ಲರು, ರೇಷ್ಮೆ ಕೆಲಸ, ಕುರುಬರ ಪೇಟೆ, ಶಿಡ್ಲಘಟ್ಟ ಟೌನ್ 4] ಪೈರೋಜ್ ಬಿನ್ ಚಾಂದ್ ಪಾಷಾ, 30 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಮಹಬೂಬ್ ನಗರ, ಶಿಡ್ಲಘಟ್ಟ ನಗರ, 5] ಚಾಂದ್ ಬಿನ್ ಫೀರ್ ಪಾಷಾ, 25 ವರ್ಷ, ಮುಸ್ಲಿಮರು, ರೇಷ್ಮೆ ಕೆಲಸ, ಮಹಬೂಬ್ ನಗರ,  ಶಿಡ್ಲಘಟ್ಟ ಟೌನ್, 6] ಆರೀಫ್ ಬಿನ್ ಅಕ್ರಮ್ ಪಾಷಾ, 19 ವರ್ಷ, ಮುಸ್ಲಿಮರು, ರೇಷ್ಮೆ ಕೆಲಸ, ಮಹಬೂಬ್ ನಗರ,  ಶಿಡ್ಲಘಟ್ಟ ಟೌನ್.ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 3390/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಮದ್ಯಾಹ್ನ 3.35 ಗಂಟೆಯಿಂದ 4.10 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 06 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ  ಪ್ರಕರಣ ದಾಖಲಿಸಿರುತ್ತೆ.

 

9. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.85/2021 ಕಲಂ. 87 ಕೆ.ಪಿ ಆಕ್ಟ್:-

    ದಿನಾಂಕ.22.07.2021 ರಂದು ಮದ್ಯಾಹ್ನ 12.30 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ:-22-07-2021 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಕೆ.ಸತೀಶ್ ಆದ ನಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ನಿಸ್ಸಾರ್ ಪಾಳ್ಯದ ಕ್ಯೂಬಾ ಮಸೀದಿಯ ಹಿಂಭಾಗದ ಖಾಲಿಜಾಗದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡಿರುತ್ತೆ. ನಂತರ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ 97, ಸುಬ್ರಮಣಿ, ಪಿಸಿ-278 ನಾರಾಯಣ, ಪಿ.ಸಿ-126 ವೆಂಕಟೇಶ್,ಪಿ,ಸಿ-308 ಚಂದಪ್ಪ ಯಲಿಗಾರ್, ಪಿ,ಸಿ-327 ಮುರಳಿ ಕೃಷ್ಣೇಗೌಡ, ಪಿ,ಸಿ 280-ಶಶಿಕುಮಾರ್, ಜೀಪ್ ಚಾಲಕ ಮಂಜುನಾಥ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 11.30 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಸಿಬ್ಬಂದಿಯವರು ಹಿಂಬಾಲಿಸಿ ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1]  ಸುಹೇಲ್ ಬಿನ್ ಚಾಂದ್ ಪಾಷಾ, 22 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಮಹಬೂಬ್ ನಗರ, ಶಿಡ್ಲಘಟ್ಟ ನಗರ, 2] ಸೈಯದ್ ಅಲ್ಲಾಭಕಾಶ್ @ ಅಲ್ಲಾಭಕಾಶ್ ಬಿನ್ ಸೈಯದ್ ನೂರುಲ್ಲಾ,  30 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಮಹಬೂಬ್ ನಗರ, ಶಿಡ್ಲಘಟ್ಟ ನಗರ, 3] ಇಸಾಕ್ ಪಾಷಾ ಬಿನ್ ಲೇಟ್ ಪ್ಯಾರೇಜಾನ್,  27 ವರ್ಷ, ಮುಸ್ಲಿಮರು, ರೇಷ್ಮೆ ಕೆಲಸ, ಮಹಬೂಬ್ ನಗರ, ಶಿಡ್ಲಘಟ್ಟ ನಗರ. 4] ಯಾಸೀನ್ ಪಾಷಾ ಬಿನ್ ಮೌಲಾಸಾಬ್, 30 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಮಹಬೂಬ್ ನಗರ, ಶಿಡ್ಲಘಟ್ಟ ನಗರ, 5] ಅಯಾಜ್ ಬಿನ್ ಸಹೀದ್ ಬೇಗ್, 30 ವರ್ಷ, ಮುಸ್ಲಿಮರು, ರೇಷ್ಮೆ ಕೆಲಸ, ಆಜಾದ್ ನಗರ,  ಶಿಡ್ಲಘಟ್ಟ ಟೌನ್, 6] ವಹೀದ್ ಬಿನ್ ಅಬ್ದುಲ್ ವಾಜೀದ್, 30 ವರ್ಷ, ಮುಸ್ಲಿಮರು, ರೇಷ್ಮೆ ಕೆಲಸ, ಸಂತೋಷ್  ನಗರ,  ಶಿಡ್ಲಘಟ್ಟ ನಗರ.ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 1530/-ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಬೆಳಿಗ್ಗೆ 11.35 ಗಂಟೆಯಿಂದ 12.100 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 06 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 

10. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.86/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ.22.07.2021 ರಂದು ಮದ್ಯಾಹ್ನ 01.45 ಗಂಟೆಗೆ ಸಿ,ಪಿ,ಐ ಶಿಢ್ಲಘಟ್ಟ ವೃತ್ತ ರವರು ಆರೋಪಿಗಳು ಮತ್ತು ಮಾಲನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ:-22-07-2021 ರಂದು ಬೆಳಿಗ್ಗೆ 11.30 ಗಂಟೆಯಲ್ಲಿ ಶಿಡ್ಲಘಟ್ಟ ವೃತ್ತ ನಿರೀಕ್ಷಕ, ಶಿಢ್ಲಘಟ್ಟ ವೃತ್ತ ಧರ್ಮೇಗೌಡ ಆದ ನಾನು ಕಛೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ಫಿಲೇಚರ್ ಕ್ವಾಟ್ರಸ್ ನ ಗಿಡ್ಡು ಮೈದ್ದೀನ್ ರವರ ವಾಸದ ಮನೆಯ ಹಿಂಭಾಗದ ಖಾಲಿಜಾಗದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡಿರುತ್ತೆ. ನಂತರ ದಾಳಿ ಮಾಡಲು ಶಿಢ್ಲಘಟ್ಟ ನಗರ ಠಾಣೆಯ ಪಿ.ಎಸ್.ಐ ಸತೀಶ್,ಕೆ. ಮತ್ತು ಸಿಬ್ಬಂದಿಯವರಾದ ಹೆಚ್.ಸಿ 97, ಸುಬ್ರಮಣಿ, ಹೆಚ್.ಸಿ-140 ನಾಗೆಂದ್ರ ಪ್ರಸಾದ್, ಪಿಸಿ-278 ನಾರಾಯಣ, ಪಿ.ಸಿ-126 ವೆಂಕಟೇಶ್, ಪಿ,ಸಿ-308 ಚಂದಪ್ಪಯಲಿಗಾರ್, ಪಿ,ಸಿ-327 ಮುರಳಿಕೃಷ್ಣೇ ಗೌಡ,  ಜೀಪ್ ಚಾಲಕ ಮಂಜುನಾಥ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 11.30 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಸಿಬ್ಬಂದಿಯವರು ಹಿಂಬಾಲಿಸಿ ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1]  ತಜ್ಮುಲ್ ಬಿನ್ ಕಲಿಂಪಾಷಾ, 23 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಮಹಬೂಬ್ ನಗರ, ಶಿಡ್ಲಘಟ್ಟ ನಗರ, 2] ಇಮ್ರಾನ್ ಪಾಷಾ ಬಿನ್ ಅಮೀರ್ ಜಾನ್,  25 ವರ್ಷ, ಮುಸ್ಲಿಂ ಜನಾಂಗ, ವ್ಯಾಪಾರ, ಫಿಲೇಚರ್ ಕ್ವಾಟ್ರಸ್, ಶಿಡ್ಲಘಟ್ಟ ನಗರ, 3] ಅಸ್ಲಾಂ ಬಿನ್ ಕಲೀಮುಲ್ಲಾ,  24 ವರ್ಷ, ಮುಸ್ಲಿಮರು, ರೇಷ್ಮೆ ಕೆಲಸ, ಮಹಬೂಬ್ ನಗರ, ಶಿಡ್ಲಘಟ್ಟ ನಗರ. 4] ಇಮ್ರಾನ್ ಪಾಷಾ ಬಿನ್ ಅಸ್ಮಾಂ ಪಾಷಾ, 25 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ನಿಸ್ಸಾರ್ ಪಾಳ್ಯ, ಶಿಡ್ಲಘಟ್ಟ ನಗರ, ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 3100/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಬೆಳಿಗ್ಗೆ 12.40 ಗಂಟೆಯಿಂದ 01.15 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 04 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ  ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 22-07-2021 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080