ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.162/2021 ಕಲಂ. 279 ಐ.ಪಿ.ಸಿ :-

          ದಿನಾಂಕ: 22/06/2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಉಪೇಂದ್ರ ಬಿನ್ ಗುರುಮೂರ್ತಿ, 24ವರ್ಷ, ಬಲಜಿಗರು, ವ್ಯಾಪಾರ, ವಾಸ: ರಾಯಲಪಾಡು ಗ್ರಾಮ ಶ್ರೀನಿವಾಸಪುರ ತಾಲ್ಲೂಕು ಕೊಲಾರ ಜಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಾಯಿ ಪದ್ಮಾವತಿ ರವರ ಹೆಸರಿನಲ್ಲಿರುವ ನೋಂದಣಿ ಸಂಖ್ಯೆ ಇಲ್ಲದ ಹೊಸ ಮಹೇಂದ್ರ ಬೊಲೆರೋ ವಾಹನ (ಎಂಜಿನ್ ನಂ-TNM1C52926 ಚಾಸಿಸ್ ನಂ-MA1ZU2TNKM1C32437 ) ವನ್ನು ಅದರ ಚಾಲಕನಾದ ಶ್ರೀನಿವಾಸ ವೈ ಜೆ ಬಿನ್ ಜಯರಾಮಪ್ಪರವರು ದಿನಾಂಕ:21/06/2021 ರಂದು ಸಂಜೆ 5-00 ಗಂಟೆಗೆ ಬೆಂಗಳೂರು-ಹೈದ್ರಾಬಾದ್ ಎನ್ ಹೆಚ್-44 ರಸ್ತೆಯಲ್ಲಿ ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿಗೆ ಬರಲು ಕರ್ನಾಟಕ ಢಾಭಾದಿಂದ ಸ್ವಲ್ಪ ಮುಂದೆ ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಪರಿಣಾಮ ವಾಹನ ನಿಯಂತ್ರಣಕ್ಕೆ ಸಿಗದೇ ರಸ್ತೆಯಲ್ಲಿ ಉರುಳಿ ಬಿದ್ದು ಬೊಲೆರೋ ವಾಹನವು ಜಖಂಗೊಂಡಿರುತ್ತದೆ. ಚಾಲಕ ಶ್ರೀನಿವಾಸನಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಆದ್ದರಿಂದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.87/2021 ಕಲಂ. 279,304(A) ಐ.ಪಿ.ಸಿ :-

          ದಿನಾಂಕ:21.06.2021 ರಂದು ಮದ್ಯಾಹ್ನ 2:30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ತನ್ನ ತಂದೆ-ತಾಯಿಗೆ 3 ಜನ ಗಂಡು ಮಕ್ಕಳಿದ್ದು, 1 ನೇ ನವೀನ ಎನ್ ಆದ ತಾನು , 2 ನೇ ಪ್ರಕಾಶ ಎನ್ , 3 ನೇ ಸುಧಾಕರ ಎನ್ ಆಗಿದ್ದು, ತಮ್ಮಗ್ಯಾರಿಗೂ ಮದುವೆಗಳಾಗಿರುವುದಿಲ್ಲ. ದಿನಾಂಕ:19.06.2021 ರಂದು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ತನ್ನ ತಮ್ಮನಾದ ಪ್ರಕಾಶ ಎನ್ ಬಿನ್ ಲೇಟ್ ನಾರಾಯಣಸ್ವಾಮಿ 32 ವರ್ಷರವರು ತನ್ನ ಬಾಬತ್ತು ಕೆಎ 05 ಹೆಚ್.ಜಿ 7229 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ವಿ ಚಕ್ರ ವಾಹನದಲ್ಲಿ  ಮನೆಯಿಂದ ಹೊರಗೆ ಹೋದವನು ಪುನಃ ಮನೆಗೆ ವಾಪಸ್ಸು ಬಂದಿರುವುದಿಲ್ಲ. ದಿನಾಂಕ:20.06.2021 ರಂದು ಬೆಳಿಗ್ಗೆ 6-30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿ ಗಂಗಾಧರ ಬಿನ್ ಗಂಗಪ್ಪರವರು ತನ್ನ ಸ್ವಂತ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಸೂಲಿಕುಂಟೆ & ಎಸ್ ಗೊಲ್ಲಹಳ್ಳಿ ಮದ್ಯದಲ್ಲಿರುವ ಮೋರಿ ಬಳಿ ಮರದ ಹತ್ತಿರ ಬಿದ್ದು ಹೋಗಿದ್ದವನನ್ನು ನೋಡಿ ಉಪಚರಿಸಿ ತನ್ನ ಮನೆಗೆ ಕರೆದುಕೊಂಡು ಬಂದಿದ್ದು, ಆಗ ತಾನು ಮತ್ತು ತನ್ನ ತಾಯಿ ರುಕ್ಮಣಮ್ಮರವರು ವಿಚಾರಿಸಲಾಗಿ ದಿನಾಂಕ:19.06.2021 ರಂದು ತಾನು ಚಿಕ್ಕಬಳ್ಳಾಪುರಕ್ಕೆ ಬಂದು ದಿ:19/20.06.2021 ರಂದು ರಾತ್ರಿ 1-30 ಗಂಟೆ ಸಮಯದಲ್ಲಿ ಸೂಲಿಕುಂಟೆ & ಎಸ್ ಗೊಲ್ಲಹಳ್ಳಿ ಮದ್ಯದಲ್ಲಿರುವ ಮೋರಿ ಬಳಿ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ದ್ವಿ ಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದು, ತನಗೆ ಹೊಟ್ಟೆಯ ಬಲಗಡೆ , ಬಲಕಾಲಿಗೆ , ಬಲಗಣ್ಣಿನ ಬಳಿ ರಕ್ತ ಗಾಯಗಳಾಗಿರುವುದಾಗಿ ತಿಳಿಸಿದ್ದು. ತಕ್ಷಣ ಕಾರಿನಲ್ಲಿ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರು ಚಿಕಿತ್ಸೆ ನೀಡಿದ ನಂತರ ವಾಪಸ್ಸು ಮನೆಗೆ ಕರೆದುಕೊಂಡು ಹೋಗಿದ್ದು, ಪುನಃ ದಿ:20.06.2021 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ನೋವು ಜಾಸ್ತಿಯಾಗಿದ್ದರಿಂದ ಪುನಃ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅದರಂತೆ ಬೆಂಗಳೂರಿನ ಬ್ಯಾಟರಾಯನಪುರದ ಬಳಿ ಇರುವ ಪ್ರೋ ಲೈಫ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದು, ಈ ದಿನ ದಿನಾಂಕ:21.06.2021 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆಂದು ತಾನು ತನ್ನ ತಮ್ಮನೊಂದಿಗೆ ಆಸ್ಪತ್ರೆಯಲ್ಲಿದ್ದುದರಿಂದ ಈಗ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಈ ಬಗ್ಗೆ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿದರ ಮೇರೆಗೆ ಈ ಪ್ರ.ವ.ವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.283/2021 ಕಲಂ. 341,323,427,504,506 ಐ.ಪಿ.ಸಿ :-

          ದಿನಾಂಕ: 21/06/2021 ರಂದು ಮದ್ಯಾಹ್ನ 2.30 ಗಂಟೆಗೆ ವೆಂಕಟರೆಡ್ಡಿ ಬಿನ್ ಲೇಟ್ ಅಶ್ವಥಪ್ಪ, 38 ವರ್ಷ, ವಕ್ಕಲಿಗರು, ಜಿರಾಯ್ತಿ, ದನಮಿಟ್ಟೇನಮಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ ಸುಮಾರು 20 ವರ್ಷಗಳ ಹಿಂದೆ ತಮ್ಮ ಜಮೀನು ಹಾಗೂ ತನ್ನ ಚಿಕ್ಕಪ್ಪನಾದ ಶಂಕರಪ್ಪ ಬಿನ್ ವೆಂಕಟರಾಯಪ್ಪ ರವರ ಜಮೀನುಗಳು ವಿಭಾಗಗಳಾಗಿರುತ್ತೆ. ತಮ್ಮ ಭಾಗಕ್ಕೆ ಬಂದಿರುವ ಜಮೀನಿನಲ್ಲಿ ಜಿರಾಯ್ತಿ ಮಾಡಿಕೊಂಡಿರುತ್ತೇವೆ. ತನ್ನ ಚಿಕ್ಕಪ್ಪನ ಜಮೀನಿನಲ್ಲಿ ಇರುವ ಕೊಳವೆಬಾವಿ ತಮ್ಮ ಭಾಗಕ್ಕೆ ಬಂದಿರುತ್ತೆ. ಈಗ್ಗೆ ಸುಮಾರು 15 ದಿನಗಳ ಹಿಂದೆ ತನ್ನ ಚಿಕ್ಕಪ್ಪನ ಮಗನಾದ ನವೀನ್ ಬಿನ್ ಶಂಕರಪ್ಪ ರವರು ತನ್ನನ್ನು ಕುರಿತು “ನೀನು ನಮ್ಮ ಜಮೀನಿನಲ್ಲಿರುವ ಕೊಳವೆಬಾವಿಯಲ್ಲಿ ನಿನಗೆ ಸಂಬಂದಿಸಿದ ಮೋಟರ್ ನ್ನು ಹೊರಗೆ ತೆಗೆದು ಹಾಕು ಆ ಜಮೀನು ನಮಗೆ ಸೇರುತ್ತೆ” ಎಂದು ತಿಳಿಸಿದ್ದರಿಂದ ತಾನು ಕೊಳವೆಬಾವಿಯಲ್ಲಿದ್ದ ಮೋಟರ್ ನ್ನು ಹೊರಕ್ಕೆ ತೆಗೆದಿರುತ್ತೇನೆ. ಈ ವಿಚಾರದಲ್ಲಿ ತನಗೂ ಆತನಿಗೂ ವೈಷಮ್ಯವಿರುತ್ತೆ. ದಿನಾಂಕ: 20/06/2021 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ತಾನು ತಮ್ಮ ಅಂಗಡಿಯ ಬಳಿ ನಡೆದುಕೊಂಡು ಬರುತ್ತಿದ್ದಾಗ ನವೀನ್ ತನ್ನನ್ನು ಅಡ್ಡಗಟ್ಟಿ “ಬೋಳಿ ನನ್ನ ಮಗನೇ ನೀನು ಊರಿನಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಹೇಳಿಕೊಂಡಿದ್ದೀಯಾ” ಎಂದು ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ತನ್ನ ಮೈ-ಕೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾನೆ. ತಾನು ಅವನಿಂದ ತಪ್ಪಿಸಿಕೊಂಡು ತಮ್ಮ ಚಿಲ್ಲರೆ ಅಂಗಡಿಗೆ ಹೋದಾಗ ಅವನು ತಮ್ಮ ಅಂಗಡಿಯ ಬಳಿ ಬಂದು ಅಂಗಡಿಯಲ್ಲಿದ್ದ ಗಾಜಿನ ಬಾಟಲುಗಳನ್ನು ಹೊಡೆದು ಹಾಕಿರುತ್ತಾನೆ. ಆಗ ತಮ್ಮ ಗ್ರಾಮದ ವಾಸಿಗಳಾದ ಚಿಕ್ಕಪ್ಪಯ್ಯ ಬಿನ್ ಲಕ್ಷ್ಮಣ್ಣ ಮತ್ತು ಸತೀಶ ಬಿನ್ ಮುನಿಯಪ್ಪ ರವರು ಬಂದು ಜಗಳ ಬಿಡಿಸಿರುತ್ತಾರೆ. ಈ ವಿಚಾರದಲ್ಲಿ ಗ್ರಾಮದ ಹಿರಿಯರು ನ್ಯಾಯಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಇದುವರೆಗೆ ನವೀನ್ ನ್ಯಾಯಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದು ಮೇಲ್ಕಂಡ ನವೀನ್ ಎಂಬುವನ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.284/2021 ಕಲಂ. 457,380  ಐ.ಪಿ.ಸಿ :-

          ದಿನಾಂಕ: 21/06/2021 ರಂದು ಮದ್ಯಾಹ್ನ 3.00 ಗಂಟೆಗೆ ಮೋಹನ್ ಕೆ.ಎ ಬಿನ್ ಆಶ್ವಥ ರೆಡ್ಡಿ, 32 ವರ್ಷ, ಬಟ್ಟೆ ಅಂಗಡಿ ವ್ಯಾಪಾರ ಕೆಲಸ, ವಕ್ಕಲಿಗ ಜನಾಂಗ, ಜೋಡಿ ಹೋಸಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಕೈವಾರ ಕ್ರಾಸ್ ನಲ್ಲಿ ಬಟ್ಟೆ ಅಂಗಡಿಯನ್ನು ಹಾಕಿಕೊಂಡು ಬಟ್ಟೆಯನ್ನು ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತಾನು ಸುಮಾರು ಒಂದು ತಿಂಗಳ ಹಿಂದೆ ಕೈವಾರ ಕ್ರಾಸ್ ನಲ್ಲಿ ಬಟ್ಟೆಯನ್ನು ಅಂಗಂಡಿಯನ್ನು ತೆರೆದಿರುತ್ತೇನೆ. ಕೋವಿಡ್-19 ಲಾಕ್ ಡೌನ್ ಇರುವುದರಿಂದ ಒಂದು ತಿಂಗಳಿಂದ ತಾನು ಅಂಗಡಿಯನ್ನು ತೆಗೆದಿರುವುದಿಲ್ಲ. ತಾನು ಯಾವಗಲೂ ಬೆಳಿಗ್ಗೆ 08.30 ಗಂಟೆಗೆ ಅಂಗಡಿಗೆ ಬಂದು ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ರಾತ್ರಿ 8.30 ಗಂಟೆ ಮನಗೆ ಹೋಗುತ್ತಿರುತ್ತೇನೆ. ಹೀಗಿರುವಾಗ ದಿನಾಂಕ: 01/06/2021 ರಂದು ಬೆಳಿಗ್ಗೆ 09.00 ಗಂಟೆಗೆ ತಾನು ಅಂಗಡಿಗೆ ಬಂದು ನೋಡಲಾಗಿ ಯಾರು ಕಳ್ಳರು ಯಾವುದೂ ಒಂದು ಅಯುಧದಿಂದ ಅಂಗಡಿಯ ಡೋರ್ ನ್ನು ಮೀಟಿ ಅಂಗಡಿಯ ಒಳಗೆ ಹೋಗಿ ಅಂಗಡಿಯಲ್ಲಿ ಇದ್ದ ಸುಮಾರು 5000/- ರೂ ಬೆಲೆ ಬಾಳುವ ಸುಮಾರು ಐದು ಜೊತೆ ಬಟ್ಟೆ, ಸುಮಾರು 1000/- ರೂ ಬೆಲೆ ಬಾಳುವ ಐದು ಬೇಲ್ಟ್ ಹಾಗೂ 700/- ರೂ ನಗದು ಹಣವನ್ನು ತೆಗೆದುಕೊಂಡು ಹೋಗಿರುತ್ತಾರೆ. ಸದರಿಯವರುಗಳ ಒಟ್ಟು ಮೌಲ್ಯ 6700/- ರೂ ಆಗಿರುತ್ತದೆ. ಈ ಕೃತ್ಯವು ಸಿ.ಸಿ ಕ್ಯಾಮೆರಾ ಪುಟೇಜ್ ನ್ನು ಚೆಕ್ ಮಾಡಲಾಗಿ ದಿನಾಂಕ: 01/06/2021 ಬೆಳಗಿನ ಜಾವ 02.30 ಗಂಟೆಗೆ ಆಗಿರುತ್ತದೆ. ತಾನು ಕಳುವಾಗಿರುವ ಮಾಲಿನ ಬಗ್ಗೆ ಹುಡುಕಾಟ ಮಾಡಲಾಗಿ ಯಾವುದೇ ಉಪಯುಕ್ತ ಮಾಹಿತಿ ದೊರೆಯದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.285/2021 ಕಲಂ. 457,380  ಐ.ಪಿ.ಸಿ :-

          ದಿನಾಂಕ: 21/06/2021 ರಂದು ಸಂಜೆ 4.00 ಗಂಟೆಗೆ ನಾಗರಾಜು ಬಿನ್ ಲೇಟ್ ಮುನಿಯಪ್ಪ, 49 ವರ್ಷ, ವ್ಯಾಪಾರ, ಆದಿ ಕರ್ನಾಟಕ ಜನಾಂಗ, ಗುನ್ನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ಮೊಟ್ಟೆ ವ್ಯಾಪಾರವನ್ನು ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತಾನು ಈಗ್ಗೆ ಸುಮಾರು 10 ವರ್ಷಗಳಿಂದ ಕೈವಾರ ಕ್ರಾಸ ನಲ್ಲಿ ಸ್ವಂತ ಮೊಟ್ಟೆ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇನೆ. ತಾನು ಯಾವಾಗಲೂ ಬೆಳಿಗ್ಗೆ 06.00 ಗಂಟೆಗೆ ಅಂಗಡಿಗೆ ಬಂದು ರಾತ್ರಿ 8.00 ಗಂಟೆ ವರೆಗೆ ವ್ಯಾಪಾರವನ್ನು ಮಾಡಿಕೊಂಡು ಹೋಗುತ್ತಿರುತ್ತೇನೆ. ಹೀಗಿರುವಾಗ ದಿನಾಂಕ: 01/06/2021 ರಂದು ಬೆಳಿಗ್ಗೆ 06.00 ಗಂಟೆಗೆ ಅಂಗಡಿಗೆ ಹೋಗಿ ನೋಡಿದ್ದು ಯಾರೋ ಕಳ್ಳರು ತನ್ನ ಅಂಗಡಿಯ ಕಬ್ಬಿಣದ ಶೇಟರ್ ನ್ನು ಯಾವುದೋ ಒಂದು ಅಯುಧದಿಂದ ಮೀಟಿ ಅಂಗಡಿಯ ಒಳಗಡೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ 6500/- ರೂ ನಗದು ಹಣವನ್ನು ತೆಗೆದುಕೊಂಡು ಹೋಗಿತ್ತಾರೆ. ಈ ಕೃತ್ಯವು ದಿನಾಂಕ: 31/05/2021 ರಿಂದ 01/06/2021 ರಂದು ರಾತ್ರಿ ಸುಮಾರು 11.30 ಗಂಟೆಯಲ್ಲಿ ಆಗಿರುತ್ತದೆ. ತಾನು ಕಳುವಾಗಿರುವ ಮಾಲಿನ ಬಗ್ಗೆ ಹುಡುಕಾಟ ಮಾಡಲಾಗಿ ಯಾವುದೇ ಉಪಯುಕ್ತ ಮಾಹಿತಿ ದೊರೆಯದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ಕಳ್ಳರನ್ನು ಮತ್ತು ನನ್ನ ಬಾಬತ್ತು ಅಂಗಡಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವ 6500/- ರೂ ಹಣವನ್ನು ಪತ್ತೆ ಮಾಡಿ ಕೊಟ್ಟು ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.286/2021 ಕಲಂ. 457,380  ಐ.ಪಿ.ಸಿ :-

          ದಿನಾಂಕ: 21/06/2021 ರಂದು ಸಂಜೆ 5.00 ಗಂಟೆಗೆ ಬಿ.ಅನ್ವರ್ ಬಿನ್ ಲೇಟ್ ಬಾಬು ಸಾಬ್, 38 ವರ್ಷ, ಟೈಲರ್ ಕೆಲಸ, ಮುಸ್ಲಿಂ ಜನಾಂಗ, ತಳಗವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ಟೈಲರ್ ಕೆಲಸವನ್ನು ಮಾಡಿಕೊಂಡು ವಾಸವಾಗಿರುತ್ತೇನೆ. ತಾನು ಕೈವಾರ ಕ್ರಾಸ್ ನಲ್ಲಿ ಇರುವ ಹರ್ಷಿತ್ ರವರ ಅಂಗಡಿಯನ್ನು ಸುಮಾರು 6 ತಿಂಗಳ ಹಿಂದೆ ಬಾಡಿಗೆಗೆ ಪಡೆದುಕೊಂಡಿರುತ್ತೇನೆ. ತಾನು ಯಾವಾಗಲೂ ಬೆಳಿಗ್ಗೆ 09.00 ಗಂಟೆಗೆ ಅಂಗಡಿಗೆ ಬಂದು ರಾತ್ರಿ 8.00 ಗಂಟೆ ಬಟ್ಟೆಯನ್ನು ಹೊಲೆದುಕೊಂಡು ಮನೆಗೆ ಹೋಗುತ್ತಿರುತ್ತೇನೆ. ತಾನು ಕೋವಿಡ್-19 ಲಾಕ್ ಡೌನ್ ಇರುವುದರಿಂದ ಅಂಗಡಿಯನ್ನು ತಾನು ಒಂದು ತಿಂಗಳು ತೆಗೆದಿರುವುದಿಲ್ಲ. ಹೀಗಿರುವಾಗ ದಿನಾಂಕ: 01/06/2021 ರಂದು ತಮ್ಮ ಅಂಗಡಿಯ ಪಕ್ಕದಲ್ಲಿರುವ ಮೋಹನ್ ರವರು ತನಗೆ ಬೆಳಿಗ್ಗೆ 08.00 ಗಂಟೆಗೆ ನಿಮ್ಮ ಅಂಗಡಿಯಲ್ಲಿ ಕಳ್ಳತನವಾಗಿದೆ ಎಂದು ಹೇಳಿದ್ದು, ತಾನು ತಕ್ಷಣ ತಮ್ಮ ಗ್ರಾಮದಿಂದ ಬಂದು ತನ್ನ ಬಾಬತ್ತು ಅಂಗಡಿಯ ಬಳಿ ಬಂದು ನೋಡಿದ್ದು, ವಿಚಾರ ನಿಜವಾಗಿರುತ್ತೆ. ತಮ್ಮ ಅಂಗಂಡಿಯ ಕಬ್ಬಿಣದ ರೋಲಿಂಗ್ ಶೇಟರ್ ಅನ್ನು ಯಾರೋ ಕಳ್ಳರು ಯಾವುದೋ ಒಂದು ಅಯುಧಿಂದ ಮೀಟಿ ಅಂಗಡಿಯ ಒಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ 6200/ ರೂ ನಗದು ಹಣ ಮತ್ತು ಸುಮಾರು 3000/- ರೂ ಬೆಲೆ ಬಾಳುವ ಮೂರು ಜೊತೆ ಬಟ್ಟೆಯನ್ನು ತೆಗೆದುಕೊಂಡು ಹೋಗಿರುತ್ತಾರೆ. ಈ ಕೃತ್ಯವು ದಿನಾಂಕ: 31/05/2021 ರಿಂದ 01/06/2021 ರಂದು ರಾತ್ರಿ ಸುಮಾರು 10.30 ಗಂಟೆಯಲ್ಲಿ ಆಗಿರುತ್ತದೆ ತಾನು ಕಳುವಾಗಿರುವ ಮಾಲಿನ ಬಗ್ಗೆ ಹುಡುಕಾಟ ಮಾಡಲಾಗಿ ಯಾವುದೇ ಮಾಹಿತಿ ದೊರೆಯದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ಕಳ್ಳರನ್ನು ಮತ್ತು ತನ್ನ ಬಾಬತ್ತು ಅಂಗಿಡಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವ ನಗದು ಹಣವನ್ನು ಮತ್ತು ಮೂರು ಜೊತೆ ಬಟ್ಟೆಯನ್ನು ಪತ್ತೆ ಮಾಡಿ ಕೊಟ್ಟು ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

7. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.70/2021 ಕಲಂ. 143,144,147,148,324,341,504,506,149 ಐ.ಪಿ.ಸಿ :-

          ದಿನಾಂಕ 22/06/2021 ರಂದು ಬೆಳಗ್ಗೆ 11.30 ಗಂಟೆಗೆ ಠಾಣಾ ಸಿಬ್ಬಂಧಿ ಹೆಚ್,ಸಿ-119 ರವರು ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಯಲ್ಲಿ ದಾಖಲಾಗಿದ್ದ ಪಿರ್ಯಾದಿ ಶ್ರೀ ಶ್ರೀರಾಮಪ್ಪ ಬಿನ್ ನಾಗಪ್ಪರವರ ಹೇಳಿಕೆಯನ್ನು ಪಡೆದು ತಂದು ಹಾಜರುಪಡಿಸಿದರ  ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ತನಗೆ ಸರ್ಕಾರದಿಂದ 1978 ನೇ ಸಾಲಿನಲ್ಲಿ ತಮ್ಮ ಮನೆಯ ಪಕ್ಕದಲ್ಲಿ ಪೂರ್ವ-ಪಶ್ಚಿಮ 40 ಅಡಿಗಳು, ಉತ್ತರ-ದಕ್ಷಿಣ 18 ಅಡಿಗಳ ಖಾಲಿ ನಿವೇಶನ ಮಂಜೂರಾಗಿದ್ದು, ಸದರಿ ನಿವೇಶನದಲ್ಲಿ ಈಗ್ಗೆ ಸುಮಾರು 5 ವರ್ಷಗಳ ಹಿಂದೆ ತನ್ನ ತಮ್ಮನಾದ ನರಸಿಂಹಮೂರ್ತಿರವರು ಶೌಚಾಲಯವನ್ನು ನಿರ್ಮಿಸಿಕೊಂಡಿದ್ದು, ಅದನ್ನು ಈಗ ಹಾಲಿನ ಡೈರಿ ಮಾಡಿಕೊಂಡಿದ್ದು, ತಾನು ಮನೆ ಕಟ್ಟಿಕೊಳ್ಳಬೇಕಾಗಿದ್ದರಿಂದ ಸದರಿ ಹಾಲಿನ ಡೈರಿಯನ್ನು ತೆಗೆಯಲು ತನ್ನ ತಮ್ಮನಿಗೆ ತಿಳಿಸಲಾಗಿ ಆತ ತೆಗೆದಿರುವುದಿಲ್ಲ. ದಿನಾಂಕ 21/06/2021 ರಂದು ತಾನು ತನ್ನ ತಮ್ಮನಿಗೆ ಹಾಲಿನ ಡೈರಿಯನ್ನು ತೆಗೆಯಲು ತಿಳಿಸಲಾಗಿ ಆತ ತೆಗೆಯುತ್ತೇನೆ ಎಂದು ಹೇಳಿದ್ದು, ನಂತರ ಅದೇ ದಿನ ಸಂಜೆ ಸುಮಾರು   7.00 ಗಂಟೆಯಲ್ಲಿ ತಾನು ತಮ್ಮ ಮನೆಯ ಮುಂದೆ ಕುಳಿತುಕೊಂಡಿದ್ದಾಗ  ತನ್ನ ತಮ್ಮನಾದ ನರಸಿಂಹಮೂರ್ತಿ, ಅರುಣ ಕೊಂ ನರಸಿಂಹಮೂರ್ತಿ, ಕೋಲಾರದ ತನ್ನ ತಂಗಿಯಾದ ಮಮತ, ಆಕೆಯ ಗಂಡ ನಾಗೇಶ, ಕೊಡದವಾಡಿ ಗ್ರಾಮದ ತನ್ನ ಅತ್ತೆ ಸಾವಿತ್ರಿ, ತಮ್ಮ ಗ್ರಾಮದ ದೇವರಾಜ ಬಿನ್ ರಾಮಯ್ಯ ಮತ್ತು ಚಿಕ್ಕ ವೆಂಕಟರೆಡ್ಡಿ ಬಿನ್ ನಾರಾಯಣಪ್ಪ ರವರುಗಳು ಬಂದು ತನ್ನನ್ನು ಏಕಾ-ಏಕಿಯಾಗಿ ಹಿಡಿದುಕೊಂಡು ಕೆಟ್ಟ-ಕೆಟ್ಟದಾಗಿ ಬೈದು, ಆ ಪೈಕಿ ಅರುಣರವರು ರಾಡ್ ನಿಂದ ತನ್ನ ತಲೆಯ ಮುಂಭಾಗಕ್ಕೆ ಹೊಡೆದು ರಕ್ತ ಗಾಯಪಡಿಸಿದ್ದು, ನರಸಿಂಹಮೂರ್ತಿರವರು ಹಾಲಿನ ಕ್ಯಾನ್ ಮುಚ್ಚಳದಿಂದ ತನ್ನ ತಲೆಯ ಹಿಂಭಾಗಕ್ಕೆ ಹೊಡೆದು ನೋವುಂಟು ಮಾಡಿದ್ದು, ಉಳಿದವರು ತಾನು ಓಡಿ ಹೋಗದಂತೆ ಗಟ್ಟಿಯಾಗಿ ಕೈ-ಕಾಲುಗಳನ್ನು ಹಿಡಿದುಕೊಂಡು ಸೈಟಿನ ವಿಚಾರಕ್ಕೆ ಬಂದಲ್ಲಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದ್ದು, ಗಲಾಟೆಯನ್ನು ಕಂಡ ತಮ್ಮ ಗ್ರಾಮದ ಬೈರೆಡ್ಡಿ ಬಿನ್ ಚಿಕ್ಕ ಬೈರಪ್ಪ ಮತ್ತು ಕೃಷ್ಣಪ್ಪ ಬಿನ್ ನಂಜಪ್ಪರವರು ಅಡ್ಡ ಬಂದು ಗಲಾಟೆಯನ್ನು ಬಿಡಿಸಿದ್ದು, ಗಾಯಗೊಂಡಿದ್ದ ತಾನು ಶಿಡ್ಲಗಟ್ಟ ಸರ್ಕಾರಿ ಆಸ್ವತ್ರೆಗೆ ಹೋಗಿ ದಾಖಲಾಗಿದ್ದು, ಮೇಲ್ಕಂಡವರ ಮೇಲೆ ಸೂಕ್ತ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

8. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.130/2021 ಕಲಂ. 279,337 ಐ.ಪಿ.ಸಿ :-

          ದಿನಾಂಕ 22/06/2021 ರಂದು ಮದ್ಯಾಹ್ನ2-30 ಗಂಟೆಗೆ ಪಿರ್ಯಾದಿದಾರರಾದ   ಶ್ರೀ ಟಿ. ಸದ್ದಾಂ ಹುಸೇನ್ ಬಿನ್ ಟಿ. ಜೀಲಾನ್ ಸಾಬ್,  27 ವರ್ಷ,  ಮುಸ್ಲಿಂ, ಇಂಡಿಯನ್ ಆರ್ಮಿಯ 6 ನೇ ಪ್ಯಾರಾಬೆಟಾಲಿಯನ್ ನಲ್ಲಿ ಕೆಲಸ, ವಾಸ ಬಾಬಾ ಸಾಹೇಬಪಲ್ಲಿ ಗ್ರಾಮ, ಓ.ಡಿ. ಚೆರವು, ಮಂಡಲಂ,  ಕದರಿ  ತಾಲ್ಲೂಕು. ಅನಂತಪುರ ಜಿಲ್ಲೆ. ಎ.ಪಿ.ವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು  ಇಂಡಿಯನ್ ಆರ್ಮಿಯ 6 ನೇ ಪ್ಯಾರಾಬೆಟಾಲಿಯನ್ ನಲ್ಲಿ ಕೆಲಸ ಮಾಡುತ್ತಿದ್ದು  ಕೆಲಸಕ್ಕೆ ಹೋಗಲು ದೇವನಹಳ್ಳಿ  ಏರ್ ಫೋರ್ಟಿಗೆ ಹೋಗಲು ದಿನಾಂಕ 21/06/2021 ರಂದು ಎ.ಪಿ-02-ಸಿಸಿ-7944 ನೊಂದಣೀ ಸಂಖ್ಯೆಯ ಹೋಡಾ ಡಿಯೋ ದ್ವಿಚಕ್ರ ವಾಹನದಲ್ಲಿ ತಾನು ಮತ್ತು ತಮ್ಮ ಗ್ರಾಮದ ತನ್ನ ಸ್ನೇಹಿತರಾದ  ರವಿ ಬಿನ್ ವೆಂಕಟರಮಣ,22 ವರ್ಷ, ಭೋವಿ, ಜಿರಾಯ್ತಿ  ಹಾಗೂ ಅಂಜಿ ಬಿನ್ ಮುನಿ, 22 ವರ್ಷ, ನಾಯಕ, ಟೈಲರಿಂಗ್ ರವರು  ಗುಡಿಬಂಡೆ ತಾಲ್ಲೂಕು  ಬೀಚಗಾನಹಳ್ಳಿ  ಕ್ರಾಸ್ ಬಳಿ  ಬ್ರಿಡ್ಜ್  ಮೇಲೆ ಹೈದರಾಬಾದ್ ನಿಂದ ಬೆಂಗಳೂರು  ಕಡೆಗೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ಸಂಜೆ ಸುಮಾರು 54-30 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ ಎಡಭಾಗದ ರಸ್ತೆಯಲ್ಲಿ ಕೆ.ಎ-01-ಎಎಫ್-2464  ನೊಂದಣಿ ಸಂಖ್ಯೆಯ ಸಿಮೆಂಟ್ ಬಲ್ಕರ್ ಲಾರಿ ವಾಹನದ ಚಾಲಕ ತನ್ನ ವಾಹನವನ್ನು ಯಾವುದೇ  ಮುನ್ಸೂಚನೆಗಳನ್ನು ನೀಡದೇ  ಅಜಾಗರೂಕತೆಯಿಂದ ನಿಲ್ಲಿಸಿದ್ದು, ಎ.ಪಿ-02-ಸಿಸಿ-7944 ನೊಂದಣೀ ಸಂಖ್ಯೆಯ ಹೋಡಾ ಡಿಯೋ ದ್ವಿಚಕ್ರ ವಾಹನದ ಸವಾರ ರವಿ ಬಿನ್ ವೆಂಕಟರಮಣ ರವರು ತನ್ನ ದ್ವಿಚಕ್ರ ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಮೇಲ್ಕಂಡ  ನೊಂದಣಿ ಸಂಖ್ಯೆಯ ಲಾರಿಗೆ  ಹಿಂಬದಿಯಲ್ಲಿ ಡಿಕ್ಕಿ ಹೊಡೆಯಿಸಿದ ಪರಿಣಾಮ ತನಗೆ ಮೂಗಿನ ಮೇಲೆ, ಎಡಗಾಲಿನ ಪಾದದ ಬಳಿ ರಕ್ತಗಾಯವಾಗಿದ್ದು, ದ್ವಿಚಕ್ರ ಸವಾರ ರವಿ ರವರಿಗೆ ಹಣೆಯ ಮೇಲೆ, ಬಳಗಣ್ಣಿ ಬಳಿ ರಕ್ತಗಾಯವಾಗಿದ್ದು,  ಅಂಜಿ ರವರಿಗೆ ಬಲಗಣ್ಣಿನ ಬಳಿ ರಕ್ತಗಾಯವಾಗಿರುತ್ತೆ. ಕೂಡಲೇ ತಾವು  ಆಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುತ್ತೇವೆ. ನಂತರ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ  ವೈದ್ಯರ ಸಲಹೆ ಮೇರೆಗೆ ರವಿ  ರವರನ್ನು ಬೆಂಗಳೂರಿನ ನಿಮಾಃನ್ಸ್  ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು  ಅಜಾಗರೂಕತೆಯಿಂದ ರಸ್ತೆಯಲ್ಲಿ ನಿಲ್ಲಿಸಿದ್ದ ಕೆ.ಎ-01-ಎಎಫ್-2464  ನೊಂದಣಿ ಸಂಖ್ಯೆಯ ಸಿಮೆಂಟ್ ಬಲ್ಕರ್ ಲಾರಿ ವಾಹನದ  ಚಾಲಕನ ವಿರುದ್ದ ಮತ್ತು ಅತಿವೇಗವಾಗಿ ಚಾಲನೆ ಮಾಡಿದ ಎ.ಪಿ-02-ಸಿಸಿ-7944 ನೊಂದಣೀ ಸಂಖ್ಯೆಯ ಹೋಡಾ ಡಿಯೋ ದ್ವಿಚಕ್ರ ವಾಹನದ ಸವಾರನ  ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

9. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.61/2021 ಕಲಂ. 427,430 ಐ.ಪಿ.ಸಿ & 3 PREV. OF DAMAGE TO PUBLIC PROPERTY ACT, 1984 :-

          ದಿನಾಂಕ 22-06-2021 ರಂದು  ಮದ್ಯಾಹ್ನ 15-00 ಗಂಟೆಗೆ  ಕೊಂಡೇನಹಳ್ಳಿ  ಗ್ರಾಮ ಫಂಚಾಯ್ತಿ ಅಭಿವೃದ್ದಿ ಅಧಿಕಾರಿಯವರಾದ ಬಿ ಗಂಗಾಧರಯ್ಯ ರವರು ಪಂಚಾಯ್ತಿ ಉದ್ಯೋಗಿ  ನಾರಾಯಣಸ್ವಾಮಿ  ಮೂಲಕ ಕಳುಹಿಸಿದ ದೂರನ್ನು  ಪಡೆದು ಪರಿಶೀಲಿಸಲಾಗಿ  ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸಂಭಂದಿಸಿದ  ಕಡಶೀಗೇನಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿಗಾಗಿ  ಕಢಶೀಗೇನಹಳ್ಳಿ  ಮತ್ತು ಚಲುಮೇನಹಳ್ಳಿ  ಗ್ರಾಮಕ್ಕೆ ಹೊಗುವ ರಸ್ತೆಯ  ಬದಿಯಲ್ಲಿ 2015  ನೇ ಸಾಲಿನಲ್ಲಿ  ಕುಡಿಯುವ ನೀರಿಗಾಗಿ ಸರ್ಕಾರದಿಂದ 800 ಅಡಿಗಳ ಬೋರೆ ವೆಲ್ಲನ್ನು ಕೊರೆಯಿಸಿದ್ದು ಅದಕ್ಕೆ 20 ಹೆಚ್ ಪಿ ಮೋಟಾರ್, 40 ಸ್ಟೇಜ್ ಪಂಪು  ಹಾಗೂ 31 ಲೆಂತ್ ಕಬ್ಬಿಣದ ಪೈಪುಗಳನ್ನು  620 ಅಡಿಯಲ್ಲಿ ನೀರು ಹೊಡೆಯುತ್ತಿತ್ತು. ಬಿಟ್ಟಿದ್ದು ಸದರಿ ಬೋರ್ ವೆಲ್ಲಿನಲ್ಲಿ  ಜಲಗಾರನಾಗಿ ಗೋಪಾಲ್ ಎಂಬುವರನ್ನು ನೇಮಕ ಮಾಡಿರುತ್ತೆ, ದಿನಾಂಕ 21-06-2021 ರಂದು ರಾತ್ರಿ ಯಾರೋ ದುಷ್ಕರ್ಮಿಗಳು ಪಂಪು. ಮಫಟಾರ್ ಮತ್ತು ಕೇಬಲ್ ವೈರ್ ಹಾಗೂ ಪೈಪುಗಳನ್ನು ಕೊಳವೆ ಬಾವಿಯಲ್ಲಿ ಬಿಟ್ಟು ನಾಶಪಡಸಿದ್ದಾರೆ, ಈವಿಚಾರವನ್ನು ಜಲಗಾರನಾದ  ಗೋಪಾಲ್ ರವರು ಈ ದಿನ ಬೆಳಗ್ಗೆ  ನೋಡಿ ಪಂಚಾಯ್ತಿಗೆ ತಿಳಿಸಿದ್ದು ಸ್ಥಳಕ್ಕೆ ತಾನು ಹಾಗೂ ತನ್ನ ಸಿಬ್ಬಂದಿಯವರೊಡನೆ ಹೋಗಿ ಪರಿಶೀಲನೆ ಮಾಡಲಾಗಿ ವಿಚಾರ ನಿಜವಾಗಿದ್ದು ನೀರು ಹೊಡೆಯು ತ್ತಿರುವ ಮೋಟಾರನ್ನು ಬಿಚ್ಚಿ ಕೊಳವೆ ಬಾವಿಯೊಳಗೆ ಬಿಟ್ಟು ನಾಶಪಡಿಸಿರುವ  ದುಷ್ಕರ್ಮಿಗಳನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.205/2021 ಕಲಂ. 457,380 ಐ.ಪಿ.ಸಿ :-

          ದಿನಾಂಕ:-21/06/2021 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರರಾದ ವೆಂಕಟೇಶ್ ಬಿನ್ ನಾರಾಯಣಸ್ವಾಮಿ, 30 ವರ್ಷ, ಹಂದಿ ಜೋಗಿ ಜನಾಂಗ, ಮೊಬೈಲ್ ವ್ಯಾಪಾರಿ, ವಾಸ-ಹೆಚ್.ಕ್ರಾಸ್, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು 6 ವರ್ಷಗಳಿಂದ ಹೆಚ್ ಕ್ರಾಸ್ ಗ್ರಾಮದಲ್ಲಿ ಚಿಂತಾಮಣಿ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಶ್ರೀ ಸಾಯಿರಾಂ ಮೊಬೈಲ್ಸ್ & ಜೆರಾಕ್ಸ್ ಅಂಗಡಿಯನ್ನಿಟ್ಟುಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತಾನು ತನ್ನ ಅಂಗಡಿಗೆ ಚಿಕ್ಕಬಳ್ಳಾಪುರದ ಮಂಜುನಾಥ ಕಮ್ಯುನಿಕೇಷನ್ಸ್ ರವರಿಂದ ಓಪೋ ಮೊಬೈಲ್ ಗಳನ್ನು ಮತ್ತು ಕೋಲಾರ ತಾಲ್ಲೂಕು ಮುಳಬಾಗಿಲು ಟೌನ್ ನಲ್ಲಿರುವ ಶ್ರೀ ಸುಬ್ರಮಣ್ಣೇಶ್ವರ ಎಂಟರ್ ಪ್ರೈಸಸ್ ರವರಿಂದ ವಿಮೋ ಮೊಬೈಲ್ ಗಳನ್ನು ಖರೀದಿ ಮಾಡಿ ಮಾರಾಟ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ದಿನಾಂಕ 20/06/2021 ರಂದು ಬೆಳಿಗ್ಗೆ 7-30 ಗಂಟೆಗೆ ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿಕೊಂಡು ಅದೇ ದಿನ ಬೆಳಿಗ್ಗೆ 10-30 ಗಂಟೆಗೆ ಅಂಗಡಿಗೆ ಬೀಗವನ್ನು ಹಾಕಿಕೊಂಡು ಮನೆಗೆ ಹೋಗಿರುತ್ತೇನೆ. ಈ ದಿನ ದಿನಾಂಕ 21/06/2021 ರಂದು ಬೆಳಿಗ್ಗೆ ಸುಮಾರು 6-45 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಮೇಧರರ ಹುಡುಗನೊಬ್ಬ ತಮ್ಮ ಮನೆಯ ಬಳಿ ಬಂದು ಅಣ್ಣ ನಿಮ್ಮ ಮೊಬೈಲ್ ಅಂಗಡಿಯ ಬಾಗಿಲು ತೆಗೆದಿದೆ ಎಂದು ಹೇಳಿದಾಗ ತಾನು ಗಾಬರಿಗೊಂಡು ಕೂಡಲೇ ಅಲ್ಲಿಗೆ ಹೋಗಿ ನೋಡಲಾಗಿ ತನ್ನ ಅಂಗಡಿಯ ಅರ್ಧ ಭಾಗ ತೆಗೆದಿರುವುದು ಕಂಡು ಬಂದಿರುತ್ತದೆ. ನಂತರ ತಾನು ಅಂಗಡಿಯಲ್ಲಿದ್ದ ಮೊಬೈಲ್ ಗಳನ್ನು ಪರಿಶೀಲಿಸಲಾಗಿ 23 ವಿವೋ ಮತ್ತು ಓಪೋ ಕಂಪನಿಯ ಮೊಬೈಲ್ ಗಳು ಕಳ್ಳತನವಾಗಿರುವುದು ಕಂಡು ಬಂದಿದ್ದು, ನಿನ್ನೆ ದಿನ ದಿನಾಂಕ 20/06/2021 ರಂದು ರಾತ್ರಿ ಯಾರೋ ಕಳ್ಳರು ನಕಲಿ ಕೀಗಳನ್ನು ಬಳಸಿ ಅಂಗಡಿಯೊಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ ಸುಮಾರು 3.18.871-00 ರೂ ಬೆಲೆ ಬಾಳುವ ಮೊಬೈಲ್ ಗಳನ್ನು ಮತ್ತು ಅಂಗಡಿಯಲ್ಲಿದ್ದ ಸುಮಾರು 6.000-00 ರೂ ಬೆಲೆ ಬಾಳುವ ಡಿವಿಆರ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ ಕಾರಣ ತನ್ನ ಅಂಗಡಿಯಲ್ಲಿ ಕಳ್ಳತನ ಮಾಡಿರುವ ಕಳ್ಳರನ್ನು ಮತ್ತು ಮಾಲನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

11. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.69/2021 ಕಲಂ. 323,324,504,506,34 ಐ.ಪಿ.ಸಿ :-

          ದಿನಾಂಕ: 22/06/2021 ರಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ ಕೃಷ್ಣಪ್ಪ ರವರಿಂದ ಪಡೆದು ಬಂದ ಹೇಳಿಕೆ ಏನೆಂದರೆ, ನಮ್ಮ ಅಣ್ಣನಾದ ರಾಮಪ್ಪ ರವರ ಮೊಮ್ಮಗನಾದ ಮೋಹನ್ ಬಿನ್ ಜಯರಾಂ ಎಂಬುವನು ಪ್ರತಿ ದಿನ ಇದ್ಲೂಡು ಗ್ರಾಮದಿಂದ ನಲ್ಲಿಮರದಹಳ್ಳಿಯ ಹಾಲಿನ ಡೈರಿಗೆ ಹಾಲನ್ನು ತೆಗೆದುಕೊಂಡು ಬಂದು ಡೈರಿಗೆ ಹಾಕಿ ಹೋಗುತ್ತಿದ್ದನು, ಎಂದಿನಂತೆ ದಿನಾಂಕ: 22/06/2021 ರಂದು ಬೆಳಿಗ್ಗೆ ಸುಮಾರು 7-30 ಗಂಟೆಯಲ್ಲಿ ಮೋಹನ್ ಆತನ ದ್ವಿ ಚಕ್ರ ವಾಹನದಲ್ಲಿ ಡೈರಿಗೆ ಹಾಲು ತೆಗೆದುಕೊಂಡು ಬರುತ್ತಿದ್ದವನು ತಮ್ಮ ಮನೆಯ ಪಕ್ಕದ ರಸ್ತೆಯಲ್ಲಿ ಮಲಗಿದ್ದ ತಮ್ಮ ನಾಯಿಯನ್ನು ಆತನ ಕಾಲುನಿಂದ ಹೊದ್ದು ಹೋಗುತ್ತಿದ್ದ ಆಗ ಇದನ್ನು ನೋಡದ ನಾನು ವಾಪಸ್ಸು ಬರುವಾಗ ಬೆಳಿಗ್ಗೆ ಸುಮಾರು 7-45 ಗಮಟೆಯಲ್ಲಿ ಮೋಹನ್ ರವರನ್ನು ಕುರಿತು ಏಕೆ ಮಲಗಿದ್ದ ನಾಯಿಗೆ ಕಾಲಿನಿಂದ ಹೊದಿಯುತ್ತಿಯಾ ನಿನಗೆ ಏನಾದರೂ ಕಚ್ಚಿತಾ ಎಂದು ಪ್ರಶ್ನಿಸಿದ್ದಕ್ಕೆ, ಮೋಹನ್ ನನ್ನನ್ನು ಕುರಿತು ಏ ನನ್ನ ಮಗನೇ ಕೈ ಎತ್ತಿ ತೋರಿಸಬೇಡ ನೀನು ಯಾರು ಕೇಳುವುದಕ್ಕೆ ಎಂದು ಬೈದನು ಆಗ ನಾನು ಏನೂ ನೀನು ಚಿಕ್ಕ ಹುಡುಗ ನನಗೆ ಮಾರ್ಯದೇ ಇಲ್ಲದೇ ಮಾತನಾಡುತ್ತೀಯಾ ಇಲ್ಲಿಂದ ಹೋಗು ಎಂದು ಹೇಳಿದಾಗ ಆತನು ಅವರ ಸಂಬಂಧಿಕರಿಗೆ ಪೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡ ಆತನ ತಂದೆ ಜಯರಾಮ್ ಬಿನ್ ಅಂಜಿನಪ್ಪ ಇವರ ಮಗ ಶ್ರೀಧರ ಬಿನ್ ರಾಮಪ್ಪ ಮತ್ತು ಸ್ಥಳದಲ್ಲಿದ್ದ ಮೋಹನ್ ರವರು ನನ್ನ ಮೇಲೆ ಹಳೆಯ ದ್ವೇಷದಿಂದ ಜಗಳ ಮಾಡಿ ಆ ಪೈಕಿ ಜಯರಾಂ ಆತನ ಕೈಯಲ್ಲಿದ್ದ ದೊಣ್ಣೆಯಿಂದ ಏನೋ ನನ್ನ ಮಗನೇ, ನನ್ನ ಮಗನ ಮೇಲೆ ಗಲಾಟೆ ಮಾಡುತ್ತೀಯಾ ಈ ದಿನ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ ಎಂದು ಕೆಟ್ಟ ಮಾತುಗಳಿಂದ ಬೈದು ನನ್ನ ತಲೆಯ ಹಿಂಭಾಗ ಮುಂಭಾಗ ಹೊಡೆದು ರಕ್ತಗಾಯ ಪಡಿಸಿದ ಶ್ರೀಧರ ಮತ್ತೊಂದು ದೊಣ್ಣೆಯಿಂದ ತನ್ನ ಎಡಭುಜಕ್ಕೆ , ಬಲಕೈ ಬೆರಳುಗಳಿಗೆ ಬಲ ತೊಡೆಗೆ ಹೊಡೆದು ಗಾಯ ಪಡಿಸಿರುತ್ತಾನೆ. ತನ್ನ ಅಣ್ಣ ರಾಮಪ್ಪ ಕೈಯಿಂದ ಎಡಭಾಗದ ಬೆನ್ನಿಗೆ ಬಲ ಕೆನ್ನೆಗೆ ಗುದ್ದಿ ನೋವುಂಟು ಮಾಡಿರುತ್ತಾನೆ. ಮೋಹನ್ ಆತನ ಕಾಲಿನ ಚಪ್ಪಲಿಯಿಂದ ಹೊಡೆದು ನೋವುಂಟು ಮಾಡಿರುತ್ತಾನೆ. ಅಣ್ಣ ರಾಮಪ್ಪ ಮತ್ತು ಶ್ರೀಧರ ನಮ್ಮ ತಂಟೆಗೆ ಬಂದರೆ ನಿನ್ನನ್ನು ಇದೇ ರೀತಿ  ಹೊಡೆದು ಸಾಯಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ. ಆಗ ನಮ್ಮ ಅಕ್ಕನ ಮಕ್ಕಳಾದ ಗೋಪಾಲ ಬಿನ್ ವೆಂಕಟರಾಯಪ್ಪ, ಗೋವಿಂದ ಬಿನ್ ವೆಂಕಟರಾಯಪ್ಪರವರು ಬಂದು ಜಗಳ ಬಿಡಿಸಿ ಗಾಯಗೊಂಡಿದ್ದ ನನ್ನನ್ನು ಚಿಕಿತ್ಸೆ ಬಗ್ಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ, ಅದ್ದರಿಂದ ನನ್ನ ಮೇಲೆ ಹಳೆಯ ದ್ವೇಶದಿಂದ ಗಲಾಟೆ ಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

12. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.70/2021 ಕಲಂ. 324,504,506 ಐ.ಪಿ.ಸಿ :-

          ದಿನಾಂಕ-22.06.2021 ರಂದು ಬೆಳಿಗ್ಗೆ 11-00 ಗಂಟೆಗೆ ಶಿಡ್ಲಘಟ್ಟ  ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮೋಹನ್ ರವರ ಹೇಳಿಕೆಯನ್ನು ಪಡೆದಿದ್ದರ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಮ್ಮೂರಿನಿಂದ ಹಾಲನ್ನು ತೆಗೆದುಕೊಂಡು ನಲ್ಲಿಮರದಹಳ್ಳಿಯ ಹಾಲಿನ ಡೈರಿಯಲ್ಲಿ ಹಾಕಿ ಬರುತ್ತಿರುತ್ತೇನೆ. ಎಂದಿನಂತೆ ದಿನಾಂಕ-22.06.2021 ರಂದು ಬೆಳಿಗ್ಗೆ ಸುಮಾರು 6.30 ಗಂಟೆಯಲ್ಲಿ ನಾನು ನಮ್ಮೂರಿನಿಂದ ನಮ್ಮ ದ್ವಿಚಕ್ರವಾಹನದಲ್ಲಿ ಹಾಲನ್ನು ತೆಗೆದುಕೊಂಡು ನಲ್ಲಿಮರದಹಳ್ಳಿಯ ಹಾಲಿನ ಡೈರಿಗೆ ಚಾಲನೆ ಮಾಡಿಕೊಂಡು ಹೊಗುತ್ತಿದ್ದಾಗ ಮಾರ್ಗ ಮಧ್ಯೆ ನಲ್ಲಿಮರದಹಳ್ಳಿಯ ನಮ್ಮ ಚಿಕ್ಕ ತಾತನಾದ ಕೃಷ್ಣಪ್ಪ ಬಿನ್ ಅಂಜಿನಪ್ಪ ರವರ ಮನೆಯ ಪಕ್ಕದಲ್ಲಿ ರಸ್ತೆಯಲ್ಲಿದ್ದ ಅವರ ನಾಯಿ ನನ್ನನ್ನು ಕಚ್ಚಲು ಓಡಿಸಿಕೊಂಡು ಬಂದಾಗ ನಾನು ಆಯಾ ತಪ್ಪಿ ನನ್ನ ದ್ವಿಚಕ್ರವಾಹನ ಸಮೇತ ಬಿದ್ದು ಹೋಗಿ ನಾನು ತಪ್ಪಿಸಿಕೊಳ್ಳಲು ನಾಯಿಗೆ  ಕಲ್ಲನ್ನು ಬೀಸಿ ಓಡಿಸಿದೆ ನಂತರ ನಾನು ಹಾಲು ಹಾಕಿ ವಾಪಸ್ಸು ಬರುವಾಗ ಬೆಳಿಗ್ಗೆ ಸುಮಾರು 6.45 ಗಂಟೆಯಲ್ಲಿ ಮೇಲ್ಕಂಡ ಕೃಷ್ಣಪ್ಪ ಬಿನ್ ಅಂಜನಪ್ಪ ರವರು ನನ್ನನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಏಕೋ ನನ್ನ ಮಗನೇ ನಮ್ಮ ನಾಯಿಗೆ ಕಲ್ಲಿನಿಂದ ಹೊಡೆದಿದ್ದೀಯ ಎಂದು ಕೆಟ್ಟ ಮಾತುಗಳಿಂದ ಬೈದಾಗ ನಾನು ನಿಮ್ಮ ನಾಯಿ ನನ್ನನ್ನು ಕಚ್ಚಲು ಬಂದಿದೆ ಅದಕ್ಕೆ ನಾನು ತಪ್ಪಿಸಿಕೊಳ್ಳಲು ಹೊಡೆದಿರುತ್ತೇನೆಂದು ತಿಳಿದಿದೆ ಅದಕ್ಕೆ ನೀನು ಯಾರು ನಮ್ಮ ನಾಯಿಗೆ ಹೊಡೆಯುವುದಕ್ಕೆ ಎಂದು ಲೋಪರ್ ನನ್ನ ಮಗನೇ ಎಂದು ಕೆಟ್ಟ ಮಾತುಗಳಿಂದ ಬೈದು ಅಲ್ಲಿಯೇ ಇದ್ದ ಕಲ್ಲಿನಿಂದ ನನ್ನ ತಲೆಯ ಮುಂಭಾಗದ ಹಣೆಗೆ ಮತ್ತು ತಲೆಯ ಎಡಭಾಗ ಗುದ್ದಿ ರಕ್ತಗಾಯಪಡಿಸಿ ಮತ್ತೆ ನಮ್ಮ ನಾಯಿಗಳ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ. ಆಗ ತೋಟದ ಜಮೀನಿಗೆ ಬರುತ್ತಿದ್ದ ನಮ್ಮ ತಾತ ರಾಮಪ್ಪ ಬಿನ್ ಅಂಜಿನಪ್ಪ ಮತ್ತು ಅಜ್ಜಿ ಅಕ್ಕಯಮ್ಮ ಕೋಂ ರಾಮಪ್ಪ ರವರು ಜಗಳ ಬಿಡಿಸಿ ಗಾಯಗೊಂಡಿದ್ದ ನನ್ನನ್ನು ಚಿಕಿತ್ಸೆ ಬಗ್ಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆದ್ದರಿಂದ ನನ್ನ ಮೇಲೆ ನಾಯಿ ವಿಚಾರದಲ್ಲಿ ಗಲಾಟೆ ಮಾಡಿ ಹಲ್ಲೆ ಮಾಡಿರುವ ಮೇಲ್ಕಂಡ ಕೃಷ್ಣಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 22-06-2021 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080