ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.105/2021 ಕಲಂ. 143,147,324,504,149 ಐ.ಪಿ.ಸಿ :-

     ದಿನಾಂಕ: 21/04/2021 ರಂದು ರಾತ್ರಿ 8-15 ಗಂಟೆಗೆ ಗಾಯಾಳು ಆದಿನಾರಾಯಣಪ್ಪ ಬಿನ್ ಮುತ್ತಪ್ಪ, 30 ವರ್ಷ, ಪ,ಜಾತಿ,ಜಿರಾಯ್ತಿ, ವಾಸ:ಮುದ್ದಲಪಲ್ಲಿ ಗ್ರಾಮ ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು  ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ನಮ್ಮ ತಾಯಿ ನರಸಮ್ಮ ರವರ ಹೆಸರಿಗೆ ದೇವರಗುಡಿಪಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ವಾಸದ ಮನೆ ಮಂಜೂರಾಗಿದ್ದು, ದಿನಾಂಕ:19/04/2021 ರಂದು ಬೆಳಿಗ್ಗೆ 11-00 ಗಂಟೆಗೆ ನಾನು ಗ್ರಾಮಪಂಚಾಯ್ತಿ ಕಛೇರಿಗೆ ಹೋಗಿ ಹಣ ಬಿಡುಗಡೆಗೋಸ್ಕರ ಪಿಡಿಓ ರವರಿಗೆ ಕೇಳಿದ್ದು ಅವರು ಮಂಜೂರಾತಿಗೆ ತಂಬ್ ನೀಡಿದ್ದು. ನಂತರ ನಾನು ಮನೆಗೆ ಹೊರಟು ಹೋಗಿದ್ದು ಅದೇ ದಿನ ಸಂಜೆ 7-00 ಗಂಟೆಗೆ ನಮ್ಮ ಗ್ರಾಮದಲ್ಲಿ ವೆಂಕಟೇಶಪ್ಪ ರವರ ಮನೆಯ ಮುಂಭಾಗದ ರಸ್ತೆಯಲ್ಲಿ ನಿಂತಿದ್ದ ಮುನಿಯಪ್ಪ ಬಿನ್ ನೆತ್ತಿ ಗಂಗಪ್ಪ ಮತ್ತು ಎಂ ಆರ್ ಈರಪ್ಪ ಬಿನ್ ರಾಮಪ್ಪ ರವರಿಗೆ ನಾನು ನಮ್ಮ ತಾಯಿ ಹೆಸರಿಗೆ 3 ವರ್ಷಗಳ ಹಿಂದೆ ಮನೆ ಮಂಜೂರಾಗಿದ್ದರೂ ನಮ್ಮ ಗ್ರಾಮದಲ್ಲಿ ಯಾರೋ ಪಂಚಾಯ್ತಿ ಹಣ ಬಿಡುಗಡೆ ಮಾಡದಂತೆ ತೊಂದರೆ ಪಡಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾಗ 1.ಆದಿನಾರಾಯಣಪ್ಪ ಬಿನ್ ಮುನಿಯಪ್ಪ, 2.ಗಂಗರಾಜು ಬಿನ್ ಮುನಿಯಪ್ಪ, 3.ಮುನಿಯಪ್ಪ ಬಿನ್ ಜುಟ್ಟು ಗಂಗಪ್ಪ, 4. ರಾಮಾಂಜಿನಪ್ಪ ಬಿನ್ ಉತ್ತಾಯಪ್ಪ, 5. ಆನಂದ ಬಿನ್ ಚಿನ್ನಾಯಪ್ಪ, 6. ಬಾವಪ್ಪ ಬಿನ್ ಪೆದ್ದನರಸಿಂಹಪ್ಪ ರವರು ಸದರಿ ಜಾಗಕ್ಕೆ ಬಂದು ಏನೋ ನೀನು ನಮ್ಮ ಮೇಲೆ ಮನೆ ಬಿಲ್ ಆಗದಿದ್ದಕ್ಕೆ ಆರೋಪ ಮಾಡುತ್ತಿರುವೆ ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಬಾವಪ್ಪ ರವರು ತನ್ನ ಕೈಯಲ್ಲಿದ್ದ ಕೋಲಿನಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ, ಗಂಗರಾಜ ಎಂಬುವವರು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಎಡಗೈ ಮೇಲೆ ಹೊಡೆದು ರಕ್ತಗಾಯ ಉಂಟುಮಾಡಿದ. ಆದಿನಾರಾಯಣಪ್ಪ ರವರು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಬಲ ರೆಟ್ಟೆಗೆ ಹೊಡೆದು ಮೂಗೇಟು ಉಂಟುಮಾಡಿದ ರಾಮಾಂಜಿರವರು ತನ್ನ ಕೈಯಲ್ಲಿದ್ದ ಕೋಲಿನಿಂದ ನನ್ನ ಬೆನ್ನಿನ ಮೇಲೆ ಹೊಡೆದು ಮೂಗೇಟು ಉಂಟುಮಾಡಿದ ನನ್ನನ್ನು ಬಿಡಿಸಲು ಬಂದ ನನ್ನ ತಾಯಿಯನ್ನು ಆನಂದ ರವರು ಪಕ್ಕಕ್ಕೆ ತಳ್ಳಿದ್ದರಿಂದ ನನ್ನ ತಾಯಿ ನರಸಮ್ಮ ರವರು ಆಯಾತಪ್ಪಿ ಕೆಳಗೆ ಬಿದ್ದ ಪರಿಣಾಮ ಅವರಿಗೆ ಮೈಕೈ ನೋವುಂಟಾಗಿರುತ್ತೆ. ನಂತರ ಇಲ್ಲಿಯೇ ಇದ್ದ  ಈರಪ್ಪ ಮತ್ತು ಗೋವಿಂದಪ್ಪ ರವರು ಜಗಳವನ್ನು ಬಿಡಿಸಿರುತ್ತಾರೆ. ನಂತರ ಈ ಬಗ್ಗೆ ನಾನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡಿಸಿಕೊಂಡಿರುತ್ತೇನೆ. ಈ ಬಗ್ಗೆ ಗ್ರಾಮದಲ್ಲಿ ಹಿರಿಯರು ಪಂಚಾಯ್ತಿ ಮಾಡುವುದಾಗಿ ಹೇಳಿದ್ದು ಇದುವರೆವಿಗೂ ಪಂಚಾಯ್ತಿ ಮಾಡದ ಕಾರಣ ಈ ದಿನ ದಿನಾಂಕ: 21/04/2021 ರಂದು ಠಾಣೆಗೆ ಹಾಜರಾಗಿ ಠಾಣೆಯಲ್ಲಿ ತಡವಾಗಿ ನನ್ನ ಹೇಳಿಕೆಯನ್ನು ನೀಡಿರುತ್ತೇನೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ತಮ್ಮಲ್ಲಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.106/2021 ಕಲಂ. 143,147,324,504,506,149 ಐ.ಪಿ.ಸಿ :-

     ದಿನಾಂಕ:21/04/2021 ರಂದು ರಾತ್ರಿ 9:00 ಗಂಟೆಗೆ ಪಿರ್ಯಾದಿ ರಾಮಾಂಜಿನಪ್ಪ ಬಿನ್ ಉತ್ತಾಯಪ್ಪ, 30 ವರ್ಷ, ಪರಿಶಿಷ್ಠ ಜಾತಿ, ಮುದ್ದಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:19/04/2021 ರಂದು ಸಾಯಂಕಾಲ ದಿನಾಂಕ:7:00 ಗಂಟೆಯಲ್ಲಿ ನಮ್ಮ ಗ್ರಾಮದ ವಾಸಿಗಳಾದ ಎಂ.ಎಂ ಆದಿನಾರಾಯಣಪ್ಪ ಬಿನ್ ಮುತ್ತಪ್ಪ, ಮುತ್ತಪ್ಪ ಬಿನ್ ವೆಂಕಟಪ್ಪ, ನರಸಮ್ಮ ಕೋಂ ಮುತ್ತಪ್ಪ, ರಾಧಮ್ಮ ಕೋಂ ಎಂ.ಎಂ ಆದಿನಾರಾಯಣಪ್ಪ, ಮೂಗಾಯಪ್ಪ ರುಫ್ ಈರಪ್ಪ ಬಿನ್ ವೆಂಕಟಪ್ಪ, ಗಂಗುಲಮ್ಮ ಕೋಂ ಮೂಗಾಯಪ್ಪ, ಬದ್ರಿ ಬಿನ್ ಮೂಗಾಯಪ್ಪ, ಎಂ.ಎಂ ಬಾವಪ್ಪ ಬಿನ್ ಮುತ್ತಪ್ಪ, ಪಾರ್ವತಮ್ಮ ಕೋಂ ಎಂ.ಎಂ ಬಾವಪ್ಪ ರವರುಗಳು ಅವರಿಗೆ ಮನೆಯ ಬಿಲ್ ನಾನು ಆಗದಂತೆ ಮಾಡಿರುತ್ತೇನೆ ಎಂಬುದಾಗಿ ನಮ್ಮ ಮನೆಯ ಹತ್ತಿರ ಬಂದು ಅಶ್ಲೀಲವಾದ ಮಾತುಗಳಿಂದ ಬೈಯ್ದು ದೌರ್ಜನ್ಯವಾಗಿ ದೊಣ್ಣೆಗಳು ಮತ್ತು ಕಲ್ಲುಗಳಿಂದ ಹೊಡೆದು ಹಿಂಸೆ ಮಾಡಿರುತ್ತಾರೆ ನಿನ್ನನ್ನು ಈ ಊರಿನಲ್ಲೆ ಇಲ್ಲದೆ ಮಾಡಿ ಸಾಯಿಸುತ್ತೇನೆ ಎಂಬುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ ಸದರಿಯವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ನೀಡಿದ ದೂರಾಗಿರುತ್ತೆ.

 

3. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.57/2021 ಕಲಂ. 188,269,271,332,353 ಐ.ಪಿ.ಸಿ & 5 (1) THE KARNATAKA EPIDEMIC DISEASES ACT, 2020:-

     ದಿನಾಂಕ:22/04/2021 ರಂದು ಮದ್ಯಾಹ್ನ 13-30 ಗಂಟೆಗೆ ಪಿರ್ಯಾದಿದಾರರಾದ ಹೆಚ್ ಸಿ 139 ಶ್ರೀನಾಥರವರು ಠಾಣೆಗೆ ಹಾಜರಾಗಿ ನಿಡಿದ ವರದಿಯ ದೂರನ ಸಾರಾಂಶವೇನೆಂದ, ನಾನು ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ  ಈಗ್ಗೆ 1 ವರ್ಷದಿಂದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ಮಾನ್ಯ ಜಿಲ್ಲಾಧಿಕಾರಿಗಳು ಚಿಕ್ಕಬಳ್ಳಾಪುರ ರವರ ಆದೇಶದಂತೆ  ಹಾಗೂ ಚಿಂತಾಮಣಿ ತಾಲ್ಲೂಕು ತಹಶೀಲ್ದಾರ್ ಸಾಹೇಬರವರ ಆದೇಶದಂತೆ ದಿನಾಂಕ: 22/04/2021 ರಂದು ಚಿಂತಾಮಣಿ ತಾಲ್ಲೂಕು ನಂದಿಗಾನಹಳ್ಳಿ ಗ್ರಾಮದಲ್ಲಿ ಕರೋನ ಸಾಂಕ್ರಾಮಿಕ ಖಾಯಿಲೆಯ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ತಿಳುವಳಿಕೆ ನೀಡಲು ನಂದಿಗಾನಹಳ್ಳಿ ಗ್ರಾಮ ಪಂಚಾಯ್ತಿಯ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು. ಮತ್ತು ಬಿಲ್ ಕಲೆಕ್ಟರ್ ಬೈರೆಡ್ಡಿ, ಹಾಗೂ ಇತರೆ ಪಂಚಾಯ್ತಿ ಸಿಬ್ಬಂದಿಯವರು ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಪೇಸ್ ಮಾಸ್ಕ್ ಧರಿಸುವಂತೆ ಸ್ಯಾನಿಟೈಸರ್ ಬಳಸುವಂತೆ ಹಾಗೂ ಸಾಮಾಜಿಕ ಅಂತರಗಳನ್ನು ಕಾಯ್ದುಕೊಳ್ಳುವಂತೆ ತಿಳುವಳಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸದರಿ ಕಾರ್ಯಕ್ರಮಕ್ಕೆ ಬಂದೋ ಬಸ್ಥ ಕರ್ತವ್ಯಕ್ಕೆ ದಿನಾಂಕ: 22/04/2021 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ ಠಾಣಾಧಿಕಾರಿಗಳು ಸಿ ಹೆಚ್ ಸಿ 139 ಶ್ರೀನಾಥ ಆದ ನನಗೆ ನೇಮಿಸಿದ್ದು, ಅದರಂತೆ ಈ ದಿನ ದಿನಾಂಕ: 22/04/2021 ರಂದು ಮದ್ಯಾಹ್ನ 12-30 ಗಂಟೆಯ ಸಮಯದಲ್ಲಿ ಪಂಚಾಯ್ತಿ ಸಿಬ್ಬಂದಿಯವರು  ನಂದಿಗಾನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಪೇಸ್ ಮಾಸ್ಕ್ ಧರಿಸುವಂತೆ ತಿಳುವಳಿಕೆ ಸೂಚನೆಗಳನ್ನು ನೀಡುತ್ತಿದ್ದು, ನಾನು ಅವರೊಂದಿಗೆ  ಸದರಿ ಕಾರ್ಯಕ್ರಮಕ್ಕೆ ಸಮವಸ್ತ್ರದಲ್ಲಿ ಬಂದೋಬಸ್ತ ಕರ್ತವ್ಯದಲ್ಲಿದ್ದಾಗ ಅದೆ ಸಮಯಕ್ಕೆ ನಿಮ್ಮಕಾಯಲಹಳ್ಳಿ ಗ್ರಾಮದ ಕಡೆಯಿಂದ ಒಂದು ದ್ವಿಚಕ್ರವಾಹನದಲ್ಲಿ ಇಬ್ಬರು ಆಸಾಮಿಗಳು ಬಂದಿದ್ದು, ಅವರು ಪೇಸ್ ಮಾಸ್ಕ್ ಧರಿಸದೇ ಬರುತ್ತಿದ್ದು ಅವರನ್ನು ನಿಲ್ಲಿಸಲು ಪಿ ಡಿ ಓ ರವರು ನನಗೆ ಸೂಚಿಸಿದರು ಅದರಂತೆ  ನಾನು ದ್ವಿಚಕ್ರವಾಹನವನ್ನು ನಿಲ್ಲಿಸುವಂತೆ ಅವರಿಗೆ ಸೂಚಿಸಿದಾಗ ಅವರು ವಾಹನವನ್ನು ನಿಲ್ಲಿಸಿದರು. ನಂತರ ಪಿ ಡಿ ಓ ರವರು ಅವರಿಗೆ ಪೇಸ್ ಮಾಸ್ಕ್ ಧರಿಸದೇ ಸಾಂಕ್ರಾಮಿಕ ಕರೋನ ಮಹಾಮಾರಿ ಖಾಯಿಲೆ ಹರಡುವಂತೆ ಸಂಚರಿಸುತ್ತಿರುವ ಬಗ್ಗೆ ತಿಳಿಸಿದಾಗ ಕೂಡಲೇ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಆಸಾಮಿಯು ನನ್ನ ಬಳಿ ಬಂದು ನನ್ನನ್ನೊಂದಿಗೆ ವಾಗ್ವಾದ ಮಾಡಿ ಏರು ಧ್ವನಿಯಲ್ಲಿ ಮಾತನಾಡಿ  ನನ್ನನ್ನು ಅಡ್ಡಗಟ್ಟಿ ನನ್ನನ್ನು ಕುರಿತು ನೀನ್ಯಾವನಲೇ ಬೋಳಿ ಮಗನೇ  ನನ್ನ ದ್ವಿಚಕ್ರವಾಹನ ನಿಲ್ಲಿಸುವುದಕ್ಕೆ ನಾನು ಪೇಸ್ ಮಾಸ್ಕ್ ಧರಿಸುತ್ತೇನೋ ಇಲ್ಲೋವೋ  ಅದು ನನ್ನ ಇಷ್ಟ ಅದನ್ನು ಕೆಳುವದಕ್ಕೆ ನೀವು ಯಾರೋ ಎಂದು ಏರು ಧ್ವನಿಯಲ್ಲಿ ಮಾತನಾಡಿ  ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ನನಗೆ  ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿ, ಕೈಗಳಿಂದ ನನ್ನ ಬೆನ್ನ ಮೇಲೆ ಹೊಡೆದು ನನ್ನ ಸಮವಸ್ತ್ರವನ್ನು ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಎಳೆದಾಡಿರುತ್ತಾನೆ. ಅಷ್ಟರಲ್ಲಿ ಪಿ ಡಿ ಓ ರವರು ಮತ್ತು ಬಿಲ್ ಕಲೆಕ್ಟರ್ ಹಾಗೂ ಅಲ್ಲಿದ್ದ ಸಾರ್ವಜನಿಕರು ಬಂದು ಆತನಿಂದ ನನ್ನನ್ನು ಬಿಡಿಸಿರುತ್ತಾರೆ. ನಂತರ ಆಸಾಮಿಯ ಹೆಸರು ಮತ್ತು ವಿಳಾಸ ತಿಳಿಯಲಾಗಿ ಎನ್ ಆನಂದ ಬಿನ್ ಮದ್ದೇರಿನರಸಿಂಹಯ್ಯ, 30 ವರ್ಷ, ನಾಯಕರು, ಮಂಡೂರು ಡಿಪೋ 47 ಬಿ ಎಂ ಟಿ ಸಿ ಬಸ್ ನಿರ್ವಾಹಕರು, ವಾಸ: ಕೋಟಗಲ್ ಗ್ರಾಮ, ಮತ್ತು ಪಂಚಾಯ್ತಿ, ಅಂಬಾಜಿ ದುರ್ಗಾ ಹೋಬಳಿ, ಚಿಂತಾಮಣಿ ತಾಲ್ಲೂಕು ಮೊ ನಂ: 9739335530 ಎಂದು ತಿಳಿದು ಬಂದಿರುತ್ತದೆ. ನಂತರ ಆಸಾಮಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಠಾಣೆಗೆ ಕರೆದುಕೊಂಡು ಬಂದು ಠಾಣಾಧಿಕಾರಿಗಳರವರ ಮುಂದೆ ಹಾಜರುಪಡಿಸಿರುತ್ತೇನೆ.  ಆದ್ದರಿಂದ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ  ನನಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿ ನನ್ನ ಮೇಲೆ ಹಲ್ಲೆ ಮಾಡಿರುವ  ಮೇಲ್ಕಂಡ  ಎನ್ ಆನಂದ ಬಿನ್ ಮದ್ದೇರಿನರಸಿಂಹಯ್ಯ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ  ಕೊಟ್ಟ ದೂರಿನ ಸಾರಾಂಶವಾಗಿರುತ್ತದೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.66/2021 ಕಲಂ. 78(III) ಕೆ.ಪಿ ಆಕ್ಟ್:-

          ದಿನಾಂಕ:21.04.2021 ರಂದು ಸಂಜೆ 5-30 ಗಂಟೆಗೆ ಪಿ.ಎಸ್.ಐ ಸಾಹೇಬರು ಆರೋಪಿ , ಮಾಲು ಮತ್ತು ಪಂಚನಾಮೆಯೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ 21.04.2021 ರಂದು ಮದ್ಯಾಹ್ನ 3-30 ಗಂಟೆಯಲ್ಲಿ ತಾನು ಪೊಲೀಸ್ ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಸರಹದ್ದಿಗೆ ಸೇರಿದ ಚಿಕ್ಕಬಳ್ಳಾಪುರ ತಾಲ್ಲೂಕು ಚಂಬಹಳ್ಳಿ ಗ್ರಾಮದ  ಚೇತನ್ ಕುಮಾರ್ ಬಿನ್ ಕೆಂಪರೆಡ್ಡಿ ಎಂಬುವರ ಮನೆಯ ಮುಂದೆ ಐಪಿಎಲ್ ಸರಣಿಯ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಮಧ್ಯ ನಡೆಯುತ್ತಿರುವ ಕ್ರಿಕೆಟ್ ಪಂದ್ಯಕ್ಕೆ ಹಣವನ್ನು ಪಣವಾಗಿಟ್ಟುಕೊಂಡು ಬೆಟ್ಟಿಂಗ್ ಕಟ್ಟಿ ಹಾಗೂ  ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದಾರೆಂದು ಖಚಿತ ಮಾಹಿತಿ ಬಂದಿದ್ದು, ಈ ಬಗ್ಗೆ ಅಕ್ರಮ ಜೂಜಾಟದ ಮೇಲೆ ದಾಳಿ ನಡೆಸಲು ಚಿಕ್ಕಬಳ್ಳಾಪುರ 1ನೇ ಅಡಿಷಿನಲ್ ಸಿವಿಲ್ ಜಡ್ಜ್  ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಈ ಬಗ್ಗೆ ಪಂಚಾಯ್ತಿದಾರರಿಗೆ ಪೊಲೀಸ್ ನೋಟಿಸ್ ಜಾರಿ ಮಾಡಿ ನಂತರ ಮಾಹಿತಿಯಂತೆ ಪಂಚರು ಮತ್ತು ಪೊಲೀಸ್ ಸಿಬ್ಬಂದಿಯವರಾದ ಶ್ರೀ ನರಸಿಂಹಮೂರ್ತಿ ಸಿಪಿಸಿ-264, ಶ್ರೀ. ಸಲೀಂಖಾ ಮುಲ್ಲಾ ಪಿ.ಸಿ 292 ಹಾಗೂ ಜೀಪ್ ಚಾಲಕ ಮಂಜುನಾಥ ಎಹೆಚ್ ಸಿ-23 ರವರೊಂದಿಗೆ ಸರ್ಕಾರಿ ಜೀಪ್ ನಂ ಕೆಎ-40 ಜಿ-567 ನಲ್ಲಿ ಈ ದಿನ ಮದ್ಯಾಹ್ನ 3-45 ಗಂಟೆಗೆ ಠಾಣೆಯಿಂದ ಹೊರಟು ಚಂಬಹಳ್ಳಿ ಗ್ರಾಮದ ಹೊರವಲಯದಲ್ಲಿ ವಾಹನವನ್ನು ಮರೆಯಾಗಿ ನಿಲ್ಲಿಸಿ ಚಂಬಹಳ್ಳಿ ಗ್ರಾಮದ ಚೇತನ್ ಕುಮಾರ್ ಬಿನ್ ಕೆಂಪರೆಡ್ಡಿರವರ ಮನೆಯ ಬಳಿ ಹೋದಾಗ ಸದರಿ ಮನೆಯಲ್ಲಿನ ಟಿ.ವಿ ಯಲ್ಲಿ ಪ್ರಸಾರವಾಗುತ್ತಿದ್ದ ಐಪಿಎಲ್ ಪಂದ್ಯ ನೋಡಿಕೊಂಡು ಈ ದಿನ ಅಂದರೆ ದಿನಾಂಕ 21.04.2021 ರಂದು ನಡೆಯುತ್ತಿರುವ ಐಪಿಎಲ್ ಸರಣಿಯ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ  ಮಧ್ಯ ಪಂದ್ಯದ ಮೇಲೆ ಸಾರ್ವಜನಿಕ ಸ್ಥಳದಲ್ಲಿ 3 ಜನ ಆಸಾಮಿಗಳು ಹಣವನ್ನು ಪಣವಾಗಿಟ್ಟುಕೊಂಡು ಪಂಜಾಬ್ ಕಿಂಗ್ಸ್ ಗೆಲ್ಲುತ್ತೆಂದು ಒಬ್ಬರು, ಇಲ್ಲ ಸನ್ ರೈಸರ್ಸ್ ಗೆಲ್ಲುತ್ತೇಂದು ಒಬ್ಬರಿಗೊಬ್ಬರು ಕ್ರಿಕೆಟ್ ಪಂದ್ಯಕ್ಕೆ ಬೆಟ್ಟಿಂಗ್ ಕಟ್ಟಿ ಹಾಗೂ  ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ತಾನು  ಮತ್ತು ಸಿಬ್ಬಂದಿಯವರು ದಾಳಿ ಮಾಡಿ  ಆಸಾಮಿಗಳನ್ನು ಸುತ್ತುವರೆಯುವಷ್ಟರಲ್ಲಿ ಆಸಾಮಿಗಳು ಓಡಿಹೋಗಿದ್ದು ಪೊಲೀಸ್ ಸಿಬ್ಬಂದಿಯವರು ಆಸಾಮಿಗಳನ್ನು ಹಿಂಬಾಲಿಸಿದ್ದು ಆ ಪೈಕಿ ಒಬ್ಬರನ್ನು ಹಿಡಿದು ಪಿಎಸ್ಐ ರವರ ಮುಂದೆ ಹಾಜರು ಪಡಿಸಿದ್ದು ಆಸಾಮಿಯ ಹೆಸರು ವಿಳಾಸವನ್ನು ಕೇಳಲಾಗಿ 1) ಚೇತನ್ ಕುಮಾರ್ ಬಿನ್ ಕೆಂಪರೆಡ್ಡಿ 25 ವರ್ಷ, ವಕ್ಕಲಿಗರು ಜಿರಾಯ್ತಿ ವಾಸ ಚಂಬಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ ಆಸಾಮಿಯು ಓಡಿ ಹೋದವರು 2) ಜಗದೀಶ ಬಿನ್ ಮುನೇಗೌಡ , 21 ವರ್ಷ, ವಕ್ಕಲಿಗರು , ಜಿರಾಯ್ತಿ ವಾಸ ಮೊಗಳಕುಪ್ಪೆ ಗ್ರಾಮ , ಮೊ.ಸಂ9108021436 3) ಹರೀಶ್ ಬಿನ್  ಲೇಟ್ ಕೃಷ್ಣಪ್ಪ 28 ವರ್ಷ ವಕ್ಕಲಿಗ ಜಿರಾಯ್ತಿ ದೊಡ್ಡಪೈಯಲಗುರ್ಕಿ  ಗ್ರಾಮ ಮೊ.ಸಂ 8147816856 ಎಂದು ಹೇಳಿದನು. ನಂತರ ಆಸಾಮಿಯನ್ನು ಪಿಎಸ್ಐ ರವರು ವಿಚಾರಣೆ ಮಾಡಿದಾಗ ತಾನು  ಈ ದಿನ  ಮದ್ಯಾಹ್ನ ಐಪಿಎಲ್ ಸರಣಿಯ  ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಮಧ್ಯ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಕ್ಕೆ ಮೇಲ್ಕಂಡವರೊಂದಿಗೆ  ಬೆಟ್ಟಿಂಗ್ ಅನ್ನು ಕಟ್ಟಿಕೊಳ್ಳುತ್ತಿದ್ದಾಗಿ ತಿಳಿಸಿದ. ನಂತರ ಆಸಾಮಿಯನ್ನು ಪಂಚರ ಸಮಕ್ಷಮ ಪರಿಶೀಲಿಸಲಾಗಿ ಮಾಡಲಾಗಿ ಆಸಾಮಿಯ ಬಳಿ ಮೇಲ್ಕಂಡವರೊಂದಿಗೆ  ಬೆಟ್ಟಿಂಗ್ ಗೆಂದು ಪಡೆದುಕೊಂಡಿದ್ದ ಹಣ ಎಂದು ಹಾಜರುಪಡಿಸಿದ್ದು  ಪರಿಶೀಲಿಸಲಾಗಿ  ರೂ.500/ ಮುಖ ಬೆಲೆಯ 06 ನೋಟುಗಳಿದ್ದು ಒಟ್ಟು ರೂ. 3000/- ನಗದು ಹಣ ದೊರೆತಿದ್ದು, ಸದರಿ ನಗದು ಹಣವನ್ನು ಮುಂದಿನ ನಡವಳಿಕೆಯ ಬಗ್ಗೆ ಅಮಾನತ್ತು ಪಡಿಸಿಕೊಂಡು  ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮಹಜರನ್ನು ಸಂಜೆ 4-00 ರಿಂದ 5-00 ಗಂಟೆಯ ವರೆಗೆ ಕೈಗೊಂಡಿರುತ್ತೆಂದು ಈ ಜ್ಞಾಪನದೊಂದಿಗೆ ಆಸಾಮಿಯನ್ನು ಮತ್ತು ನಗದು ಹಣ 3000/- ರೂಗಳನ್ನು ನೀಡುತ್ತಿದ್ದು ಆರೋಪಿಗಳ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ ವ ವರಧಿ.

 

5. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.62/2021 ಕಲಂ. 269,270 ಐ.ಪಿ.ಸಿ:-

          ದಿನಾಂಕ: 21/04/2021 ರಂದು ಸಂಜೆ 4:30 ಗಂಟೆಗೆ  ನಾರಾಯಣಸ್ವಾಮಿ ಪಿ.ಎಸ್.ಐ(ಕಾ&ಸು-1) ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಕೊರೊನಾ ಸಾಂಕ್ರಾಮಿಕ ರೋಗ (ಕೋವಿಡ್ 19) ಖಾಯಿಲೆಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರದ ಆದೇಶದಂತೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಹೋಟೆಲ್/ಅಂಗಡಿಗಳಲ್ಲಿ ಗ್ರಾಹಕರಿಗೆ ಸಾನಿಟೈಜರ್ ಬಳಸುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು ಕಡ್ಡಾಯವಾಗಿದ್ದು, ಅದರ ಸಲುವಾಗಿ ಈ ದಿನ ದಿನಾಂಕ:21/04/2021 ರಂದು ಸಂಜೆ 04-00 ಗಂಟೆಯ ಸಮಯದಲ್ಲಿ ನಾನು ಮತ್ತು ಠಾಣೆಯ ಶ್ರೀ.ಮುಕ್ತಿಯಾರ್ ಪಾಷ, ಎ.ಎಸ್.ಐ., ಶ್ರೀ.ವೇಣು ಸಿ.ಪಿ.ಸಿ-190 ರವರು ಠಾಣೆಗೆ ಒದಗಿಸಿರುವ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-138 ರಲ್ಲಿ ಚಿಂತಾಮಣಿ ನಗರದ ಆಜಾದ್ ಚೌಕ್ ಕಡೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಜಾದ್ ಚೌಕ್ ಬಳಿಯಿರುವ ವೀರಭದ್ರಸ್ವಾಮಿ ಟಿಫನ್ ಸೆಂಟರ್ ಹೆಸರಿನ ಹೋಟೆಲ್ ನ ಮಾಲೀಕರಾದ ರಾಜೇಶ್ ಬಿನ್ ಶಿವರುದ್ರಯ್ಯ, 34ವರ್ಷ, ಲಿಂಗಾಯಿತರು, ಹೋಟೆಲ್ ವ್ಯಾಪಾರ ರವರು ತನ್ನ ಹೋಟೆಲ್ ನ್ನು ತೆರೆದು ವ್ಯಾಪಾರ ಮಾಡುತ್ತಿದ್ದು ಆ ಸಮಯದಲ್ಲಿ ಹೋಟೆಲ್ ಒಳಭಾಗದಲ್ಲಿ ಗ್ರಾಹಕರ ಮಧ್ಯೆ ಸಾಮಾಜಿಕ ಅಂತರವನ್ನು ಕಾಪಾಡದೇ ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ತಿಂಡಿ ತಿನ್ನುತ್ತಿದ್ದು ಈ ಬಗ್ಗೆ ಪೋಟೋ ಸಹ ತೆಗೆದಿರುತ್ತೆ. ಆದ್ದರಿಂದ ಸದರಿಯವರು ಕೊರೊನಾ ಸಾಂಕ್ರಾಮಿಕ ಖಾಯಿಲೆ ಪ್ರಾಣಕ್ಕೆ ಅಪಾಯಕಾರಿಯಾದ ಕೋರೋನಾ ರೋಗದ ಸೋಂಕುನ್ನು ಹರಡುವ ಸಂಭವಿರುವುದಾಗಿ ತಿಳಿದಿದ್ದರೂ ಸಹ ಇವರು ತನ್ನ ಹೋಟೆಲ್ ನಲ್ಲಿ ಗ್ರಾಹಕರ ಮಧ್ಯೆ ಸಾಮಾಜಿಕ ಅಂತರದ ಪಾಲನೆ ಮಾಡದೇ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.45/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:21/04/2021 ರಂದು ಮಧ್ಯಾಹ್ನ 3-00 ಗಂಟೆಗೆ ಸಿ.ಹೆಚ್.ಸಿ159 ರವರು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಕದಿರಪ್ಪ ಬಿನ್ ವೆಂಕಟರಾಯಪ್ಪ, 56 ವರ್ಷ ರವರ ಹೇಳಿಕೆಯನ್ನು ಪಡೆದುಕೊಂಡು ಬಂದು  ಹಾಜರುಪಡಿಸಿದರ ಸಾರಾಂಶವೆನೆಂದರೆ, ತಾನು  ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಗೊರಮಿಲ್ಲಹಳ್ಳಿ ಗ್ರಾಮದಲ್ಲಿ ವಾಸವಾಗಿರುತ್ತೇನೆ. ನಾನು ಚಿಂತಾಮಣಿ ಗೆ ಕೂಲಿ ಕೆಲಸಕ್ಕಾಗಿ ಹೋಗಲು ಚಿಂತಾಮಣಿ ನಗರಕ್ಕೆ ಹತ್ತಿರವಾದ ಅಲಗುರ್ಕಿ ಗ್ರಾಮದಲ್ಲಿ ತನ್ನ ಅಣ್ಣಂದಿರ ಮನೆಯಲ್ಲಿ ವಾಸವಾಗಿರುತ್ತೇನೆ. ಹೀಗಿರುವಲ್ಲಿ ದಿನಾಂಕ:20/04/2021 ರಂದು ಸಂಜೆ ಸುಮಾರು 6-30 ಗಂಟೆಯಿಂದ 7-00 ಗಂಟೆಯ ಸಮಯಲದಲ್ಲಿ ನಾನು ಚಿಂತಾಮಣಿ ನಗರದಿಂದ ಕೂಲಿ ಕೆಲಸ ಮುಗಿಸಿಕೊಂಡು ಯಾವುದೋ ಸಿವಿಲ್ ಬಸ್ ನಲ್ಲಿ ಬಂದು ನನ್ನ ಗ್ರಾಮದ ಹತ್ತಿರವಿರುವ 11 ನೇ ಮೈಲಿ ಕ್ರಾಸ್ ನಲ್ಲಿ ಇಳಿದುಕೊಂಡು ನಡೆದು ಹೋಗುವಾಗ ಯಾವುದೋ ಒಂದು ದ್ವಿಚಕ್ರ ವಾಹನ ವೇಗವಾಗಿ ಅದರ ಚಾಲಕ ಚಾಲನೆ ಮಾಡಿಕೊಂಡು ಬಂದು ನನಗೆ ಡಿಕ್ಕಿ ಹೊಡೆದನು ಡಿಕ್ಕಿ ಹೊಡೆದ ರಭಸಕ್ಕೆ ನಾನು ಜೋರಾಗಿ ಕೆಳಗೆ ಬಿದ್ದು ಬಿಟ್ಟೆನು ಆಗ ನನಗೆ ಎಡಗಾಲು ಮತ್ತು ಬಲಗಾಲಿಗೆ ರಕ್ತಗಾಯಗಳಾಗಿರುತ್ತವೆ. ಎಡಗಾಲಿನ ಮೊಣಕನಿಂದ ಕೆಳಭಾಗಕ್ಕೆ ಮೂಳೆ ಮುರಿದ ಅನುಭವವಾಗಿರುತ್ತೆ. ಹಾಗೂ ಕೈಗಳು ಮತ್ತು ಮುಖದ ಮೇಲೆ ತರಚಿದ ಗಾಯಗಳಾಗಿರುತ್ತೆವೆ ಹಾಗೂ ಎಡಕಿವಿಯ ಮೇಲ್ಭಾಗದಲ್ಲಿ ರಕ್ತಗಾಯವಾಗಿರುತ್ತೆ. ದ್ವಿಚಕ್ರವಾಹನವನ್ನು ನನಗೆ ಡಿಕ್ಕಿ ಹೊಡೆಸಿ ಅಲ್ಲಿಂದ ಗಾಡಿ(ದ್ವಿಚಕ್ರ ) ಸಮೇತ ಓಡಿ ಹೋಗಿರುತ್ತಾನೆ. ಈ ವೇಳೆಗೆ ಹತ್ತಿರದಲ್ಲಿದ್ದ ಅಲಗುರ್ಕಿ ಗ್ರಾಮದ ವಾಸಿಗಳಾದ ಮುನಿಶಾಮಿರೆಡ್ಡಿ ಬಿನ್ ಚಿಕ್ಕ ವೆಂಕಟರೆಡ್ಡಿ,ನರಸಿಂಹರೆಡ್ಡಿ ಬಿನ್ ಚಿಕ್ಕನಾರಾಯಣಪ್ಪ ರವರು ನನ್ನ ಬಳಿಗೆ ಓಡಿ ಬಂದು ನನ್ನನ್ನು ಎತ್ತಿ ಕುಳ್ಳರಿಸಿ ನನಾಗಿದ್ದ ಗಾಯಗಳು ನೋಡಿ ನನ್ನ ಅಣ್ಣನಾದ ಚಿಕ್ಕವೆಂಕಟಪ್ಪ ರವರ ಮನೆಗೆ ಮಾಹಿತಿ ತಿಳಿಸಿರುತ್ತಾರೆ. ನಂತರ ನಾನು ದ್ವಿ ಚಕ್ರ ವಾಹನದ ಬಗ್ಗೆ ಮತ್ತು ಅದರ ಚಾಲಕನ ಬಗ್ಗೆ ವಿಚಾರ ಮಾಡಲಾಗಿ ದ್ವಿ ಚಕ್ರ ವಾಹನದ ಸಂಖ್ಯೆ:ಕೆಎ34-ಎಸ್-3569 ಆಗಿದ್ದು ಅದರ ಚಾಲಕ ಚೌಡರೆಡ್ಡಿ ಬಿನ್ ದೊಡ್ಡ ನಾರಾಯಣಪ್ಪ, ಎ,ನಕ್ಕಲಹಳ್ಳಿ ಗ್ರಾಮದ ವಾಸಿಯಾಗಿರುತ್ತಾರೆಂದು ತಿಳಿದು ಬಂದಿರುತ್ತೆ. ನಂತರ  ನನ್ನ ಅಣ್ಣನ ಮಗನಾದ ಕದಿರಪ್ಪ@ಕಿರಣ ಮತ್ತು ವೆಂಕಟೇಶ್ ಬಿನ್ ನಾರೆಪ್ಪ ಎಂಬುಬಬರು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಅಂಬುಲೆನ್ಸ್ ನ ಮುಖಾಂತರ ಕರೆತಂದು ಚಿಕಿತ್ಸೆಗಾಗಿ ದಾಖಲು ಮಾಡಿರುತ್ತಾರೆ. ನನಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ದ್ವಿಚಕ್ರವಾಹನ ನಡೆಸಿಕೊಂಡು ಬಂದು ಡಿಕ್ಕಿ ಮಾಡಿದ ವಾಹನ ಹಾಗೂ ಅದರ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂಖ್ಯೆ:45/2021 ಕಲಂ:279,337 ಐ.ಪಿ.ಸಿ ರೆ-ವಿ187 ಐ.ಎಂ.ವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

7. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.76/2021 ಕಲಂ. 188 ಐ.ಪಿ.ಸಿ & 5 THE EPIDEMIC DISEASES (AMENDMENT) ORDINANCE, 2020:-

          ದಿ:21.04.2021 ರಂದು ಮದ್ಯಾಹ್ನ 2-30 ಗಂಟಗೆ ಪಿರ್ಯಾದಿದಾರರಾದ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಸಿ. 73.  ಹನುಮಂತರಾಯಪ್ಪ ನವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ 1ನೇ ಗ್ರಾಮ ಗಸ್ತಿಗೆ ಠಾಣಾಧಿಕಾರಿಗಳು ನೇಮಕ ಮಾಡಿರುತ್ತಾರೆ. ಸದರಿ 1 ನೇ ಗ್ರಾಮಗಸ್ತಿಗೆ ಗುಡಿಬಂಡೆ ಪಟ್ಟಣ ಸಹ ಸೇರುತ್ತೆ. ನಾನು ಈ ಮೊದಲು ಸದರಿ ಗ್ರಾಮಸ್ತಿನಲ್ಲಿ ಸಾರ್ವಜನಿಕರಿಗೆ ಮತ್ತು ಅಂಗಡಿಗಳ ಮಾಲಿಕರಿಗೆ ಕೋವಿಡ್ -19 ರೋಗವನ್ನು ತಡೆಗಟ್ಟುವ ಬಗ್ಗೆ ಅಧಿಸೂಚನೆಗಳ  ಬಗ್ಗೆ ಪ್ರತಿಯೊಬ್ಬರು ಮಾಸ್ಕ್ಗಳನ್ನು ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸಿರುತ್ತೇನೆ. ಹೀಗಿರುವಲ್ಲಿ ಈ ದಿನ ದಿನಾಂಕ 21/04/2021 ರಂದು ಮೇಲಾಧಿಕಾರಿಗಳ ಆದೇಶದಂತೆ ಗುಡಿಬಂಡೆ ಟೌನ್ ಸಂಜೆ ಗಸ್ತು ಮಾಡುತ್ತಿದ್ದಾಗ ಮದ್ಯಾಹ್ನ ಸುಮಾರು 1-30 ಗಂಟೆಯ ಸಮಯದಲ್ಲಿ ಗುಡಿಬಂಡೆ ದೊಡ್ಡ ಮಸೀದಿ ಬಳಿ ಗಸ್ತು ಮಾಡುತ್ತಿದ್ದಾಗ  ದೊಡ್ಡಮಸೀದಿ ಬಳಿ ಇರುವ ಟೀ ಅಂಗಡಿ ಮುಂಭಾಗ ಜನರು ಗುಂಪಾಗಿ ಸೇರಿ ಟೀ ಕುಡಿಯುತ್ತಿದ್ದರು. ಸ್ಥಳಕ್ಕೆ ಹೋಗಿ ನೋಡಿದಾಗ ಟೀ ಅಂಗಡಿಯ ಮಾಲಿಕ ಕೋವಿಡ್ -19 ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯಾ ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷದಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಜನರನ್ನು  ಗುಂಪಾಗಿ ಸೇರಿಸಿಕೊಂಡು ಟೀಯನ್ನು ವಿತರಣೆ ಮಾಡುತ್ತಿದ್ದನು. ಸದರಿ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ  ಮಹಬೂಬ್ ಬಾಷ ಬಿನ್ ಲೇಟ್ ಪಕೃದ್ದೀನ್ಸಾಬ್. 38 ವರ್ಷ, ಮುಸ್ಲಿಂ ಜನಾಂಗ, ಟೀ ಅಂಗಡಿಯ ಮಾಲಿಕರು. ವಾಸ: ದೊಡಮಸೀದಿ ಮುಂಬಾಗ, ಗುಡಿಬಂಡೆ ಟೌನ್, ಎಂತ ತಿಳಿಸಿದನು.            ಸದರಿ ಆಸಾಮಿ ಕೋವಿಡ್ -9 ಸಂಕ್ರಾಮಿಕ ರೋಗ ನಿಯಂತ್ರಣ ಸಂಬಂಧ ನೀಡಿರುವ ನಿಬಂಧನೆಗಳನ್ನು ಉಲ್ಲಂಘಿಸಿರುವುದರಿಂದ ಈತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

8.  ನಂದಿಗಿರಿಧಾಮ  ಪೊಲೀಸ್ ಠಾಣೆ ಮೊ.ಸಂ.45/2021 ಕಲಂ. 51(b) THE DISASTER MANAGEMENT ACT, 2005 :-

          ದಿನಾಂಕ:20/04/2021 ರಂದು ಸಂಜೆ 5:20 ಗಂಟೆಗೆ ತಮ್ಮ ಠಾಣೆಯ ಹೆಚ್.ಸಿ-234 ಶೇಖರ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಕೋವಿಡ್-19 ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಮಾಸ್ಕ ಧರಿಸುವಂತೆ ಸರ್ಕಾರದ ಮಾರ್ಗಸೂಚಿಗಳಿರುತ್ತೆ. ದಿನಾಂಕ:20/04/2021 ರಂದು ಸಂಜೆ 5:00 ಗಂಟೆಯಲ್ಲಿ ನಂದಿ ಕ್ರಾಸಿನಲ್ಲಿ ಕೋಲಾರ ರಸ್ತೆಯ ಬದಿಯಲ್ಲಿರುವ ಅಂಗಡಿಗಳಲ್ಲಿ ಮಾಲಿಕರು ಹಾಗೂ ಗ್ರಾಹಕರಿಗೆ ಸಾಮಾಜಿಕ ಅಂತರ  ಕಾಯ್ದುಕೊಳ್ಳುವಿಕೆ ಹಾಗೂ ಮಾಸ್ಕ ಧರಿಸಿ ವ್ಯಾಪಾರ ವಹಿವಾಟು ನಡೆಸುವಂತೆ ಸುಕ್ತ ತಿಳುವಳಿಕೆ ನೀಡುತ್ತಿದ್ದು ಶ್ರೀ ಮಂಜುನಾಥಸ್ವಾಮಿ ಕಾಂಡಿಮೆಂಟ್ಸ್ ಅಂಗಡಿಯ ಮಾಲಿಕರಾದ ಚಂದ್ರಪ್ಪ ಬಿನ್ ಕೃಷ್ಣಪ್ಪ ರವರಿಗೆ ಜನರನ್ನು ಗುಂಪಾಗಿ ಸೇರಿಸಿಕೊಳ್ಳದಂತೆ ತಿಳುವಳಿಕೆ ನೀಡಿದ್ದರು ಸಹ ಅಂಗಡಿಯ ಮುಂಭಾಗ 4 ಜನರನ್ನು ಗುಂಪಾಗಿ ನಿಲ್ಲಿಸಿಕೊಂಡು ವ್ಯಾಪಾರವನ್ನು ಮಾಡುತ್ತಿರುತ್ತಾರೆ. ತಾನು ಸದರಿ ದೃಶ್ಯವನ್ನು ತನ್ನ ಮೋಬೈಲ್ನಲ್ಲಿ ಪೋಟೋ ತೆಗೆದು ನಂತರ ಅಂಗಡಿಯಲ್ಲಿದ್ದವನ್ನು ಹೆಸರು ವಿಳಾಸ ಕೇಳಲಾಗಿ 1) ಚಂದ್ರಪ್ಪ ಬಿನ್ ಕೃಷ್ಣಪ್ಪ, 47 ವರ್ಷ, ಒಕ್ಕಲಿಗರು, ಅಂಗಡಿ ವ್ಯಾಪಾರ, ವಾಸ: ದೊಡ್ಡಮರಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, ಎಂದು ತಿಳಿದ ನಂತರ ಅಂಗಡಿಯ ಮುಂಬಾಗದಲ್ಲಿ ನಿಂತಿದ್ದ ಗ್ರಾಹಕರ ಹೆಸರು ವಿಳಾಸ ಕೇಳಲಾಗಿ 2) ಪ್ರಮೋದ್ ಬಿನ್ ವೆಂಕಟೇಶ್, 28 ವರ್ಷ, ಪ.ಜಾತಿ, ಟೈಟಾನ್ ಕಂಪನಿಯಲ್ಲಿ ಕೆಲಸ, ವಾಸ: ಕುಪ್ಪಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 3) ಸಂತೋಷ್ ಬಿನ್ ಮೂರ್ತಿ, 22 ವರ್ಷ, ಕೂಲಿ ಕೆಲಸ, ಪ.ಜಾತಿ, ಕುಪ್ಪಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 4) ಶ್ರೀಧರ್ ಬಿನ್ ಲೇಟ್ ಕೃಷ್ಣಮೂರ್ತಿ, 31 ವರ್ಷ, ಪ.ಜಾತಿ, ವಾಸ: ಅರಸನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 5) ಶಿವಾನಂದ ಬಿನ್ ಮುನಿರಾಜು, 19 ವರ್ಷ, ಕೂಲಿ ಕೆಲಸ, ಪ.ಜಾತಿ, ಕುಪ್ಪಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದರು, ಶ್ರೀ ಮಂಜುನಾಥಸ್ವಾಮಿ ಕಾಂಡಿಮೇಂಟ್ಸ್ ಅಂಗಡಿಯ ಮಾಲಿಕರು ಅಂಗಡಿಯ ಮುಂದೆ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಗ್ರಾಹಕರನ್ನು ಗುಂಪಾಗಿ ನಿಲ್ಲಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದು ಹಾಗೂ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮತ್ತು ಮಾಸ್ಕ ಧರಿಸದೇ ಕರೋನಾ ವೈಸರ್ ಹರಡಲು ಹಾಗೂ ಸಕರ್ಾರ ನೀಡಿರುವ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕ್ರಮ ಜರುಗಿಸಲು ನೀಡಿದ ವರದಿಯ ಮೇರೆಗೆ ಕಲಂ: 200 ಸಿ.ಆರ್.ಪಿ.ಸಿ ಮೇಲ್ಕಂಡ ಆರೋಪಿಗಳು ಕಲಂ: 51(ಬಿ) ರಾಷ್ಟ್ರಿಯ ವಿಪತ್ತು ನಿರ್ವಹಣ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ದಿನಾಂಕ:22/04/2021 ರಂದು ಮದ್ಯಾಹ್ನ 2:30 ಗಂಟೆಗೆ ಪ್ರಕರಣ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

9. ಪಾತಪಾಳ್ಯ  ಪೊಲೀಸ್ ಠಾಣೆ ಮೊ.ಸಂ.27/2021 ಕಲಂ. 188  ಐ.ಪಿ.ಸಿ & 5 THE EPIDEMIC DISEASES (AMENDMENT) ORDINANCE, 2020:-

          ದಿನಾಂಕ:21/04/2021 ರಂದು ಸಂಜೆ 05-00 ಗಂಟೆಗೆ ಪಿರ್ಯಾದಿ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಸಿ-27 ನಾರಾಯಣಚಾರಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತನಗೆ ಪಿ.ಎಸ್.ಐ ಸಾಹೇಬರು 2 ನೇ ಗ್ರಾಮ ಗಸ್ತಿಗೆ ನೇಮಕ ಮಾಡಿದ್ದು, ಸದರಿ 2ನೇ ಗ್ರಾಮ ಗಸ್ತಿಗೆ ಪಾತಪಾಳ್ಯ ಗ್ರಾಮ ಸಹ ಸೇರಿದ್ದು, ತಾನು ಈ ಮೊದಲು ಸದರಿ ಗ್ರಾಮ ಗಸ್ತಿನಲ್ಲಿ ಸಾರ್ವಜನಿಕರಿಗೆ ಮತ್ತು ಅಂಗಡಿ ಮಾಲೀಕರಿಗೆ ಕೋವಿಡ್-19 ರೋಗವನ್ನು ತಡೆಗಟ್ಟುವ ಬಗ್ಗೆ ಅಧಿಸೂಚನೆಗಳ ಬಗ್ಗೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಜಾಗೃತಿ ಮೂಡಿಸಿರುವುದಾಗಿ, ಹೀಗಿರುವಲ್ಲಿ ಈ ದಿನ ದಿನಾಂಕ:21/04/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ಪಾತಪಾಳ್ಯ ಗ್ರಾಮದಲ್ಲಿ ಸಂಜೆ 04-30 ಗಂಟೆಯಲ್ಲಿ ಪಾತಪಾಳ್ಯ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಗಸ್ತು ಮಾಡುತ್ತಿರುವಾಗ ರಸ್ತೆಯ ಮುಂಭಾಗದಲ್ಲಿ ಅಂಗಡಿಯ ಮುಂಭಾಗ ಜನರು ಗುಂಪಾಗಿ ಸೇರಿ ಟೀ ಕುಡಿಯುತ್ತಿದ್ದು, ಸ್ಥಳಕ್ಕೆ ತಾನು ಹೋಗಲಾಗಿ ಸ್ಥಳದಲ್ಲಿ ಟೀ ಕುಡಿಯುತ್ತಿದ್ದ 4-5 ಜನ ಸಾರ್ವಜನಿಕರು ಸ್ಥಳದಿಂದ ಓಡಿ ಹೋಗಿರುವುದಾಗಿ, ಸದರಿ ಟೀ ಅಂಗಡಿ ಮಾಲೀಕ ಕೋವಿಡ್-19 ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗಡೆದುಕೊಳ್ಳದೇ ನಿರ್ಲಕ್ಷದಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಜನರನ್ನು ಗುಂಪು ಗುಂಪಾಗಿ ಸೇರಿಸಿಕೊಂಡು  ಟೀ ಯನ್ನು ವಿತರಣೆ ಮಾಡುತ್ತಿರುವುದಾಗಿ, ಸದರಿ ಆಸಾಮಿ ಹೆಸರು ವಿಳಾಸ ಕೇಳಲಾಗಿ ಫಕ್ರುದ್ದೀನ್ ಬಿನ್ ಜೂಲಪಾಳ್ಯ ಫಕ್ರುದ್ದೀನ್, 65 ವರ್ಷ, ಮುಸ್ಲಿಂ ಜನಾಂಗ, ಟೀ ವ್ಯಾಪಾರ, ತೋಳ್ಳಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಪೋನ್ ನಂ-7022501063 ಎಂತ ತಿಳಿಸಿದ್ದು, ಸದರಿ ಆಸಾಮಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣ ಸಂಬಂದ ನೀಡಿರುವ ನಿಭಂದನೆಗಳನ್ನು ಉಲ್ಲಂಘಿಸಿರುವುದರಿಂದ ಈತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ.

 

10. ಪಾತಪಾಳ್ಯ  ಪೊಲೀಸ್ ಠಾಣೆ ಮೊ.ಸಂ.28/2021 ಕಲಂ. 324,504 ಐ.ಪಿ.ಸಿ:-

          ದಿನಾಂಕ-21/04/2021 ರಂದು ರಾತ್ತಿ 8-45 ಗಂಟೆಗೆ ಪಿರ್ಯಾದಿದಾರರಾದ ಬಿ,ಜಿ ರವಿ ಬಿನ್ ಗಂಗುಲಪ್ಪ,26 ವರ್ಷ, ಆದಿದ್ರಾವಿಡ ಜನಾಂಗ, ಬಿಳ್ಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ದಿನಾಂಕ:20-04-2021 ರಂದು ರಾತ್ರಿ ಸುಮಾರು 9-00 ಗಂಟೆಯ ಸಮಯದಲ್ಲಿ ನಮ್ಮ ಬೋರ್ ಹತ್ತಿರ ಹೋಗಲು ಗಾಡಿಯಲ್ಲಿ ಹೋಗುತ್ತಿದ್ದರೆ  ಅಮಡಗೂರು ರಸ್ತೆಯಲ್ಲಿ ರೋಡ್ ಪಕ್ಕದಲ್ಲಿ ಸರ್ಕಾರಿ ಆಸ್ಪತ್ರೆಯ ಮುಂದೆ ಇದೆ ನಮ್ಮ ಕಾಲೋನಿಯವನಾದ ಎಸ್, ಎನ್ ಮೂರ್ತಿ ಬಿನ್ ಸೀಮನೂನಿ ನಾರಾಯಣಪ್ಪನ್ನು ನನ್ನನ್ನು ಕರೆದು ನಾನು ಅಲ್ಲಿಗೆ ಹೋದರೆ ಆತನು ನನಗೆ ಕುಡಿಯಕ್ಕೆ ಕಾಸು ಕೊಂಡುವಂತೆ ನನ್ನ ಹತ್ತಿರ ಕಾಸು ಇಲ್ಲ ಅಂದಿದ್ದಕ್ಕೆ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಖಾಲಿ ಬಿಯರ್ ಬಾಟಲಿಂದ ನನ್ನ ತಲೆಯ ಮೇಲೆ ಹಾಕಿ ತಲೆಯಲ್ಲಿ ಗಾಯವಾಗಿ ರಕ್ತ ಬಂದು ನಾನು ಕೆಲಕ್ಕೆ  ಕೂತುಕೊಂಡು ಕಿರುಚುತ್ತಾ ಆ ಸಮಯಕ್ಕೆ ನಮ್ಮ ಕಾಲೋನಿಯ ಪ್ರದೀಪ್ ಬಿನ್ ನಾಗರಾಜ  ಮತ್ತು ನರಸಿಂಹ ಬಿನ್ ವೆಂಕಟಕ್ಷ್ಮಮ್ಮ ರವರು ಬಂದು ಅವನಿಂ ಬಿಡಿಸಿದ ನನ್ನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಅಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ನಾನು ತಡವಾಗಿ ಪಿರ್ಯಾದಿಯನ್ನು ಕೊಡುತ್ತಿದ್ದೇನೆ ತಾವುಂದಿರವರು ದಯಪಾಲಿಸಿ ಮೇಲ್ಕಂಡ ಆಸಾಮಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕೆಂದು ದೂರಿನ ಮೇರೆಗೆ ಠಾಣಾ ಮೊ.ಸಂ-28/2021 ಕಲಂ 324-504 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

11. ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.115/2021 ಕಲಂ. 269,271 ಐ.ಪಿ.ಸಿ & 4,5,10 THE KARNATAKA EPIDEMIC DISEASES ACT, 2020:-

          ದಿನಾಂಕ 21/04/2021 ರಂದು ಸಂಜೆ 5-30 ಗಂಟೆಗೆ ಪಿ.ಎಸ್.ಐ ಲಿಯಾಕತ್ ಉಲ್ಲಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೇನೆಂದರೆ, ದಿನಾಂಕ 21/04/2021 ರಂದು ಮದ್ಯಾಹ್ನ ನಾನು ಠಾಣೆಯ ಸಿಬ್ಬಂಧಿಯಾದ ಪಿಸಿ-14 ಗೋವಿಂದಪ್ಪ, ಪಿಸಿ-543 ಸುಧಾಕರ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-357 ರಲ್ಲಿ ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5-00 ಗಂಟೆ ಸಮಯದಲ್ಲಿ ಅಬ್ಲೂಡು ಗ್ರಾಮದ ಸರ್ಕಲ್ ನಲ್ಲಿ ಗಸ್ತಿನಲ್ಲಿದ್ದಾಗ ಅಬ್ಲೂಡು ಗ್ರಾಮದ ಸರ್ಕಲ್ ನಲ್ಲಿರುವ ಶ್ರೀ ರಸ್ತು ಮೆನ್ಸ್ ಹೇರ್ ಸ್ಟ್ರೈಲ್ ನ ಅಂಗಡಿಯ ಮುಂಭಾಗದಲ್ಲಿ ಯಾರೋ ಆಸಾಮಿಗಳು ಅಂಗಡಿಯ ಮುಂಭಾಗದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಕುಳಿತುಕೊಂಡಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಅಂಗಡಿಯ ಮುಂಭಾಗದಲ್ಲಿ ಮಾರ್ಕ್ ಸಹ ಮಾಡಿರುವುದಿಲ್ಲ ಹಾಗು ಮಾಸ್ಕ್ ಗಳನ್ನು ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ಕುಳಿತುಕೊಂಡು ಮಾತನಾಡಿಕೊಂಡಿದ್ದು, ಜೀಪ್ ಅನ್ನು ಅಂಗಡಿಯ ಸಮೀಪ ಚಾಲನೆ ಮಾಡಿಹೋಗಿ ನಿಲ್ಲಿಸಿದಾಗ ಅಲ್ಲಿ ಸಾಮಾಜಿಕ ಅಂತರವನ್ನು ಮರೆತು ಕುಳಿತಿದ್ದ ಆಸಾಮಿಗಳು ಹಾಗು ಅಂಗಡಿಯ ಮಾಲೀಕನೂ ಸಹ ಜೀಪ್ ನಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಓಡಿ ಹೋಗಿದ್ದು, ನಂತರ ಅಲ್ಲಿದ್ದ ಸಾರ್ವಜನಿಕರನ್ನು ಅಂಗಡಿಯ ಮಾಲೀಕನ ಹೆಸರು ವಿಳಾಸ ಕೇಳಲಾಗಿ ಮುರಳಿ ಬಿನ್ ಕೃಷ್ಣಪ್ಪ, 26 ವರ್ಷ, ಭಜಂತ್ರಿ ಜನಾಂಗ, ಕುಲಕಸುಬು, ವಾಸ-ಅಬ್ಲೂಡು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 1) ರವಿ ಬಿನ್ ವೆಂಕಟರಾಯಪ್ಪ, 35 ವರ್ಷ, ಕುರುಬರು, ಜಿರಾಯ್ತಿ, ವಾಸ-ಅಬ್ಲೂಡು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 2) ನಾರಾಯಣಸ್ವಾಮಿ ಬಿನ್ ನಾರೆಪ್ಪ, 31 ವರ್ಷ ನಾಯಕರು, ಜಿರಾಯ್ತಿ, ವಾಸ-ವಂಕಮರದಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 3) ಅನಿಲ್ ಕುಮಾರ್ ಬಿನ್ ಕೃಷ್ಣಪ್ಪ, 21 ವರ್ಷ, ಅಗಸರು, ಜಿರಾಯ್ತಿ, ವಾಸ-ಮಲ್ಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 4) ಲಿಖಿತ್ ಬಿನ್ ರುದ್ರಮೂರ್ತಿ, 22 ವರ್ಷ, ಲಿಂಗಾಯಿತರು, ಜಿರಾಯ್ತಿ, ವಾಸ-ಮಲ್ಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಎಂದು ತಿಳಿಸಿರುತ್ತಾರೆ. ಆದ ಕಾರಣ ಸಾಮಾಜಿಕ ಅಂತರವಿಲ್ಲದೆ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮೇಲ್ಕಂಡ 4 ಜನ ಆಸಾಮಿಗಳ ಮತ್ತು ಸಲೂನ್ ಶಾಪ್ ಮಾಲೀಕರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೊಟ್ಟ ದೂರು.

 

12. ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.116/2021 ಕಲಂ. 269,271 ಐ.ಪಿ.ಸಿ & 4,5,10 THE KARNATAKA EPIDEMIC DISEASES ACT, 2020:-

          ದಿನಾಂಕ:-21/04/2021 ರಂದು ರಾತ್ರಿ 10-00 ಗಂಟೆಗೆ ಸಿಪಿಸಿ-90 ರಾಜಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೇನೆಂದರೆ, ತನಗೆ ಮತ್ತು ಠಾಣೆಯ ಪಿಸಿ 178 ಸುನೀಲ್ ಕುಮಾರ್ ರವರಿಗೆ ಈ ದಿನ ದಿನಾಂಕ 21/04/2021 ರಂದು ರಾತ್ರಿ ಪಿ.ಎಸ್.ಐ ರವರು ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ತಾವು ಠಾಣಾ ಸರಹದ್ದಿನ ಹಿತ್ತಲಹಳ್ಳಿ ಬೆಳ್ಳುಟ್ಟಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ರಾತ್ರಿ 9-00 ಗಂಟೆ ಸಮಯದಲ್ಲಿ ಭಕ್ತರಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಭಕ್ತರಹಳ್ಳಿ ಗ್ರಾಮದ ಸರ್ಕಲ್ ನಲ್ಲಿ ನಾಗರಾಜ ಬಿನ್ ಗುಟ್ಟನಾರಾಯಣಪ್ಪ ರವರ ನೇತೃತ್ವದಲ್ಲಿ ನಾಟಕವನ್ನು ಏರ್ಪಡಿಸಿದ್ದು ನಾಟಕ ನೋಡಲು ಭಕ್ತರಹಳ್ಳಿ ಗ್ರಾಮಸ್ಥರು ಮತ್ತು ಇತರರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಕುಳಿತುಕೊಂಡಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ನಾಟಕ ಪ್ರದರ್ಶನ ಸ್ಥಳದ ಮುಂಭಾಗದಲ್ಲಿ ಮಾರ್ಕ್ ಸಹ ಮಾಡಿರುವುದಿಲ್ಲ ಹಾಗು ಮಾಸ್ಕ್ ಗಳನ್ನು ಧರಿಸದೇ ಸರ್ಕಾದ ಕೋವಿಡ್-19 ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ಕುಳಿತುಕೊಂಡು ನಾಟಕ ನೋಡುತಿದ್ದು ನಾವುಗಳು ಸ್ಥಳಕ್ಕೆ ಹೋಗಿ ದ್ವಿ ಚಕ್ರ ವಾಹವನ್ನು ನಿಲ್ಲಿಸಲಾಗಿ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ನಾಟಕ ನೋಡುತ್ತಿದ್ದ ಹಾಗೂ ನಾಟಕ ಪ್ರದರ್ಶನ ಮಾಡುತ್ತಿದ್ದು ಅಸಾಮಿಗಳು ಓಡಿ ಹೋಗಿದ್ದು ನಂತರ ಅಲ್ಲಿಗೆ ಬಂದ ಇತರೇ ಸಾರ್ವಜನಿಕರನ್ನು ನಾಟಕದ ಅಯೋಜಕರ ಹೆಸರು ವಿಳಾಸ ಕೇಳಲಾಗಿ 1) ನಾಗರಾಜ ಬಿನ್ ಗುಟ್ಟ ನಾರಾಯಣಪ್ಪ, 42 ವರ್ಷ, ವಕ್ಕಲಿಗರು, ಜಿರಾಯ್ತಿ, ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ನಾಟಕ ವೀಕ್ಷಣೆ ಮಾಡಲು ಬಂದಿದ್ದ ಇತರೇ ಗ್ರಾಮಸ್ಥರುಗಳ ಹೆಸರು ವಿಳಾಸ ತಿಳಿಯಲಾಗಿ 2) ಮುನಿರಾಜು ಬಿನ್ ಶಂಕರಪ್ಪ, 42 ವರ್ಷ, ದೋಬಿ ಜನಾಂಗ, ಕುಲಕಸಬು, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು 3) ಧನುಷ್ ಬಿನ್ ಭಗವಂತಪ್ಪ, 23 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 4) ಮಣಿಕಂಠ ಮೈಕ್ಸೇಟ ಕೆಲಸ ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 5) ಅಂಬರೀಶ್ ಬಿನ್ ವೆಂಕಟಮೂರ್ತಿ, 26 ವರ್ಷ, ಆದಿಕರ್ನಾಟಕ, ಕೂಲಿ ಕೆಲಸ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು 6) ವಿನಯ್ ಬಿನ್ ಮುನಿಯಪ್ಪ, 25 ವರ್ಷ, ಆದಿಕರ್ನಾಟಕ, ಕೂಲಿ ಕೆಲಸ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 7) ನಾರಾಯಣಸ್ವಾಮಿ ಬಿನ್ ದೊಡ್ಡ ಮುನಿಯಪ್ಪ, 51 ವರ್ಷ, ಆದಿಕರ್ನಾಟಕ, ಕೂಲಿ ಕೆಲಸ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 8) ಹರೀಶ್ ಬಿನ್ ಸೊಣ್ಣೇಗೌಡ, 30 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 9) ಶ್ರೀನಿವಾಸ ಬಿನ್ ನಾರಾಯಣಸ್ವಾಮಿ, 30 ವರ್ಷ, ಆದಿಕರ್ನಾಟಕ, ಕೂಲಿ ಕೆಲಸ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 10) ಸೊಣ್ಣೇಗೌಡ ಬಿನ್ ಆಂಜಿನಪ್ಪ, 43 ವರ್ಷ, ವಕ್ಕಲಿಗರು, ಜಿರಾಯ್ತಿ, ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 11) ನಾರಾಯಣಸ್ವಾಮಿ ಬಿನ್ ಕಾಳೇಗೌಡ, 55 ವರ್ಷ, ವಕ್ಕಲಿಗರು, ಕೂಲಿ ಕೆಲಸ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 12) ಮುನಿರಾಜು ಬಿನ್ ಗುಟ್ಟ ನಾರಾಯಣಪ್ಪ, ವಕ್ಕಲಿಗರು, ಕೂಲಿ ಕೆಲಸ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 13) ನಾರಾಯಣಸ್ವಾಮಿ ಬಿನ್ ಗುಟ್ಟ ನಾರಾಯಣಪ್ಪ, ವಕ್ಕಲಿಗರು, ಕೂಲಿ ಕೆಲಸ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 14) ಪವನ್ ಬಿನ್ ಗುಟ್ಟ ಚನ್ನೇಗೌಡ, ಜಿರಾಯ್ತಿ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 15) ಮುನಿಯಪ್ಪ ಬಿನ್ ಪೆದ್ದಪ್ಪಯ್ಯ, ಹೂಹಳ್ಳಿ ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ. 16) ಮಂಜಮ್ಮ ಕೋಂ ಕೃಷ್ಣಪ್ಪ, 36 ವರ್ಷ, ಆದಿಕರ್ನಾಟಕ, ಕೂಲಿ ಕೆಲಸ, ವಾಸ-ದಿಬ್ಬೂರಹಳ್ಳಿ ಕಾಲೋನಿ, ದಿಬ್ಬೂರಹಳ್ಳಿ, ಶಿಡ್ಲಘಟ್ಟ ತಾಲ್ಲೂಕು, 17) ಆನಂದ ಬಿನ್ ನಾರಾಯಣಸ್ವಾಮಿ, 32 ವರ್ಷ, ಆದಿಕರ್ನಾಟಕ, ಕೂಲಿ ಕೆಲಸ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 18) ಕೃಷ್ಣಪ್ಪ ಬಿನ್ ನಾರಾಯಣಸ್ವಾಮಿ, 42 ವರ್ಷ, ಅದಿಕರ್ನಾಟಕ, ಕೂಲಿ ಕೆಲಸ, ವಾಸ-ದಿಬ್ಬೂರಹಳ್ಳಿ ಕಾಲೋನಿ, ದಿಬ್ಬೂರಹಳ್ಳಿ, ಶಿಡ್ಲಘಟ್ಟ ತಾಲ್ಲೂಕು, 19) ಶ್ರೀನಿವಾಸ ಬಿನ್ ಕೃಷ್ಣಪ್ಪ, ಕೂಲಿ ಕೆಲಸ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 20) ಮಂಜುನಾಥ ಬಿನ್ ರಾಮಣ್ಣ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 21) ದೇವರಾಜ ಬಿನ್ ದೊಡ್ಡಪ್ಪಯ್ಯ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 22) ಕೇಶವ ಬಿನ್ ಚನ್ನೇಗೌಡ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 23) ಶೇಖರ್ ಬಿನ್ ಶ್ರೀನಿವಾಸ್, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 24) ಮಂಜುನಾಥ ಬಿನ್ ಹನುಮಪ್ಪ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 25) ಮಂಜುನಾಥ ಬಿನ್ ನಾರಾಯಣಪ್ಪ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 26) ವೆಂಕಟಮೂರ್ತಿ ಬಿನ್ ಸೊಣ್ಣೇಗೌಡ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 27) ಸೊಣ್ಣೇಗೌಡ ಬಿನ್ ಚಿಕ್ಕ ಮುನಿಶಾಮಪ್ಪ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 28) ದೇವರಾಜ ಬಿನ್ ಚಿಕ್ಕಮುನಿಶಾಮಪ್ಪ, ವಾಸ-ಭಕ್ತರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಹಾಗು ಇತರೇ 50 ಜನರು ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿ ನಾಟಕ ಪ್ರದರ್ಶನ ಮಾಡಲು ಬಳಸಿದ್ದ 2 ಮೈಕ್ ಸ್ಟಾಂಡ್ ಮತ್ತು ಆಂಲಿಪೇರ್ ಅನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ತಮ್ಮ ಮುಂದೆ ಹಾಜರು ಪಡಿಸುತ್ತಿದ್ದು, ಸದರಿಯವುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಸಾಮಾಜಿಕ ಅಂತರವಿಲ್ಲದೆ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮೇಲ್ಕಂಡ ಆಸಾಮಿಗಳ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ಕೊಟ್ಟ ದೂರು.

 

13. ಶಿಡ್ಲಘಟ್ಟ ಪುರ  ಪೊಲೀಸ್ ಠಾಣೆ ಮೊ.ಸಂ.44/2021 ಕಲಂ. 271,188,353 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ:21-04-21 ರಂದು ರಾತ್ರಿ 10-15 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಸ್ವತ: ದೂರು ದಾಖಲಿಸಿದ್ದರ ಸಾರಾಂಶವೇನೆಂದರೆ, ತಾನು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಸುಮಾರು 07 ತಿಂಗಳಿನಿಂದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ. ಕೋವಿಡ್-19 ಹಿನ್ನಲೆಯಲ್ಲಿ ಸರ್ಕಾರದವರು ದಿನಾಂಕ:21-04-2021 ರಿಂದ 04-05-2021 ರ ವರೆಗೆ ರಾತ್ರಿ 9-00 ಗಂಟೆಯಿಂದ ಬೆಳಗಿನ ಜಾವ 06-00 ಗಂಟೆಯ ವರೆಗೆ ಜನರು ಗುಂಪು ಸೇರದಂತೆ ನೈಟ್ ಕರ್ಪ್ಯೂ ಜಾರಿಗೊಳಿಸಿದ್ದು, ಅದರಂತೆ ದಿನಾಂಕ: 21-04-2021 ರಂದು ರಾತ್ರಿ 8-30 ಗಂಟೆಗೆ ಠಾಣೆಯಿಂದ ಹೊರಟು ಗಸ್ತನ್ನು ಪ್ರಾರಂಬಿಸಿ ನಾನು ಮತ್ತು ಜೀಪ್ ಚಾಲಕ ಎ.ಪಿ.ಸಿ 144 ಮಂಜುನಾಥರವರು ಠಾಣೆಗೆ ಒದಗಿಸಿರುವ ಜೀಪ್ ಸಂ.ಕೆ.ಎ.40.ಜಿ.356 ರಲ್ಲಿ ಓ.ಟಿ ಸರ್ಕಲ್, ಕೋಟೆ ಸರ್ಕಲ್, ಅಶೋಕ ರಸ್ತೆ, ಕೆ.ಇ.ಬಿ ರಸ್ತೆ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು   ರಾತ್ರಿ ಸುಮಾರು 9-30 ಗಂಟೆಗೆ ಶಿಡ್ಲಘಟ್ಟದ ಬೈಪಾಸ್ ರಸ್ತೆಯ ಬಳಿ ಇರುವ ಖಬರೇಸ್ಥಾನ್ ರಸ್ತೆಯ ಬಳಿ ಬಂದಾಗ ಸುಮಾರು 30 ಜನರು ಗುಂಪಾಗಿ ಸೇರಿಕೊಂಡು ಪಟಾಕಿಗಳನ್ನು ಸಿಡಿಸಿಕೊಂಡು ಸಂಭ್ರಮಣೆಯನ್ನು  ಮಾಡಿಕೊಳ್ಳುತ್ತಿರುವುದನ್ನು ಕಂಡು ನಾನು ಜೀಪಿನಿಂದ ಇಳಿದು ನೋಡಲಾಗಿ  ರಮೇಶ ಬಿನ್ ಮುನಿಯಪ್ಪ, ಸಿದ್ದಾರ್ಥನಗರ, ಶಿಡ್ಲಘಟ್ಟ ಟೌನ್. ಸುನಿಲ್ @ ಆರ್.ಎಕ್ಸ್ ಸುನಿಲ್, ಮಂಜುನಾಥ ಮತ್ತು ಆತನ ಸಂಗಡಿಗರು ಇದ್ದರು.  ಇವರು ಸರ್ಕಾರ  ಸೂಚಿಸಿರುವ ಕೋವಿಡ್-19 ಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸದೇ ಮಾಸ್ಕ್ ಗಳನ್ನು ಧರಿಸದೇ ಇರುವುದು & ಸೂಕ್ತವಾದ ಸಾಮಾಜಿಕ ಅಂತರವನ್ನು  ಖಾಯ್ದುಕೊಳ್ಳದಿರುವುದು ಕಂಡುಬಂತು.  ಆಗ ನಾವು ಜೀಪಿನಿಂದ ಇಳಿದು ಸರ್ಕಾರದವರು ಕೋವಿಡ್-19 ಹಿನ್ನಲೆಯಲ್ಲಿ ರಾತ್ರಿ ಕರ್ಪ್ಯೂ ಜಾರಿಗೊಳಿಸಿದ್ದರು ಸಹ ನೀವು ನಿಯಮಗಳನ್ನು ಪಾಲನೆ ಮಾಡದೇ ಈ ರೀತಿ ವರ್ತಿಸುತ್ತಿರುವುದು ಸರಿಯಿಲ್ಲ ನೀವು ಜವಾಬ್ದಾರಿಯುತ ವ್ಯಕ್ತಿಯಾಗಿದ್ದು  ಸಾರ್ವಜನಿಕರನ್ನು ಗುಂಪುಸೇರಿಕೊಳ್ಳುವುದು ಬೇಡ ಇಲ್ಲಿಂದ ಹೊರಟು ಹೋಗಿ ಎಂದು ಹೇಳಿದಾಗ ರಮೇಶ ಮತ್ತು ಆತನ ಸಂಗಡಿಗರು  ಅನುಚಿತವಾಗಿ ವರ್ತನೆ ಮಾಡಿ  ನಮ್ಮ ಮನೆ ಇಲ್ಲೇ ಇದ್ದು ನಾವು ಇಲ್ಲಿಯೇ ಇರುತ್ತೇವೆ ಎಂದು ವಾದಿಸುತ್ತಾ ನಾವು ಇಲ್ಲಿಂದ ಹೋಗುವುದಿಲ್ಲ, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ರಮೇಶ, ಸುನಿಲ್ @ ಆರ್.ಎಕ್ಸ್ ಸುನಿಲ್, ಮಂಜುನಾಥ ರವರುಗಳು ಕೈಗಳಿಂದ ನೂಕಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಠಾಣಾ ಮೊ.ಸಂ.44/2021 ಕಲಂ: 271, 188, 353 ಐಪಿಸಿ ಮತ್ತು ಕಲಂ:51 (ಬಿ) ವಿಪತ್ತು ನಿರ್ವಹಣ ಕಾಯ್ದೆ-2005 ರೀತ್ಯಾ ಸ್ವಯಂ ಪ್ರಕರಣವನ್ನು ದಾಖಲಿಸಿದೆ.   

    

ಇತ್ತೀಚಿನ ನವೀಕರಣ​ : 22-04-2021 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080