Feedback / Suggestions

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.32/2021 ಕಲಂ. 506,34,504,323,324  ಐ.ಪಿ.ಸಿ :-

          ದಿನಾಂಕ:22/03/2021 ರಂಧು ಬೆಳಿಗ್ಗೆ 08-30 ಗಂಟೆಗೆ ಎ.ಎಸ್.ಐ (ವಿ) ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಗಾಯಾಳು  ಪಿರ್ಯಾದಿ ನರಸಿಂಹ ಕೆ.ವಿ ಬಿನ್ ಲೇಟ್ ವೆಂಕಟರವಣಪ್ಪ, 28 ವರ್ಷ, ಆದಿ ಕರ್ನಾಟಕ ಜನಾಂಗ ಬಂಡೆ ಕೆಲಸ, ವಾಸ: ಕೊತ್ತಪಲ್ಲಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಠಾಣೆಯಲ್ಲಿ ತಂದು ಹಾಜರು ಪಡಿಸಿದ ಸಾರಾಂಶವೇನೆಂದರೆ. ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಬಂಡೆ ಕೆಲಸ ಮಾಡಿಕೊಂಢು ಜೀವನ ಮಾಡಿಕೊಂಡಿರುತ್ತೇನೆ. ನನಗೆ ಕಾನಗಮಾಕಲಹಳ್ಳಿ ಗ್ರಾಮದ ನೀರಗಂಟಿ ವೆಂಕಟಸ್ವಾಮಿ ರವರ ಮಗ ರವಿ, 35 ವರ್ಷ, ನಾಯಕರು, ವ್ಯವಸಾಯ ರವರು ಚಿಕ್ಕಂದಿನಿಂದಲೂ ಪರಿಚಯವಿದ್ದು ಸ್ನೇಹಿತರಾಗಿರುತ್ತೇವೆ. ನಾವಿಬ್ಬರು ವಾರಕ್ಕೊಮ್ಮೆ ಇಬ್ಬರು ಜೊತೆಯಲ್ಲಿ ಹೋಗಿ ಮದ್ಯಪಾನ ಸೇವನೆ ಮಾಡುತ್ತಿದ್ದೇವು ಹೀಗಿರುವಲ್ಲಿ ದಿನಾಂಕ: 21/03/2021 ರಂದು ಸಂಜೆ 4-00 ಗಂಠೆಯ ಸಮಯದಲ್ಲಿ ನಾನು ಸ್ವಂತ ಕೆಲಸದ ನಿಮಿತ್ತ ಕಾನಗಮಾಕಲಹಳ್ಳಿ ಗ್ರಾಮಕ್ಕೆ  ಹೋಗಿದ್ದಾಗ ರವಿರವರು ನನ್ನ ಬಳಿ ಮದ್ಯ ಕೊಡಿಸು ಎಂದು ಕೇಳಿದ್ದು ನಂತರ ನಾವಿಬ್ಬರು ಯಗವಕೋಟೆ ಹೋಗಿ ಅಲ್ಲಿ ಮದ್ಯ ಕುಡಿಯೋಣವೆಂದು ಹೇಳಿ ನನ್ನ ಬಾಬತ್ತು ಕೆಎ 40  5312 ಬಜಾಜ್ ಡಿಸ್ಕವರಿ ದ್ವಿ ಚಕ್ರ ವಾಹನದಲ್ಲಿ ನಾನು ಮತ್ತು ರವಿ ಮುರಗಮಲ್ಲ ಗ್ರಾಮಕ್ಕೆ ಹೋಗಿ ಅಲ್ಲಿ ಬಾರ್ ನಲ್ಲಿ ಮದ್ಯ ಸೇವನೆ ಮಾಡಿ ಸಂಜೆ 7-00 ಗಂಟೆಗೆ ಮುರಗಮಲ್ಲ ಬಿಟ್ಟು 7-30 ಗಂಟೆಗೆ ಗುಂಡ್ಲಹಳ್ಳಿ ಗ್ರಾಮದ ಗೇಟ್ ಬಳಿಗೆ ಬಂದು ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಗೇಟ್ ನಲ್ಲಿ ಕಲ್ಲು ಬಂಡೆ ಮೇಲೆ ಕುಳಿತು ಇಬ್ಬರು ಮಾತಾನಾಡುತ್ತಿದ್ದಾಗ ನಮ್ಮಿಬ್ಬರಿಗೆ ಮಾತಿಗೆ ಮಾತು ಬೆಳೆದಿದ್ದು ರವಿ ರವರು ಏಕಾ ಏಕಿ ನನ್ನ ಮೇಲೆ ಜಗಳ ತೆಗೆದು ಬೋಳಿ ಮಗನೇ ಲೋಪರ್ ನನ್ನ ಮಗನೇ ನಿನ್ನಮ್ಮನೆದೆಂಗ ಎಂದು ಅವಾಚ್ಯ ಶಬ್ದಗಳಿಂಧ ಬೈದು ಕಾಲಿನಿಂದ ದ್ದು ಕೆಳಗೆ ಬಿಳಿಸಿರುತ್ತಾನೆ ಅಲ್ಲಿಯೆ ಬಿದ್ದಿದ್ದ ಕಲ್ಲಿನಿಂದ ನನ್ನ ಮುಖದ ಮೇಲೆ ಮೂಗಿನ ಮೇಲೆ ಹಣೆಯ ಮೇಲೆ ಮುಖದ ಎಲ್ಲಾ ಕಡೆ ಹೊಡೆದು ಕಲ್ಲಿನಿಂದ ಜಜ್ಜಿ ರಕ್ತ ಗಾಯ ಪಡಿಸಿರುತ್ತಾನೆ. ಅಷ್ಟರಲ್ಲಿ ಸ್ಥಳಕ್ಕೆ ದ್ವಿ ಚಕ್ರ ವಾಹನದಲ್ಲಿ ರವಿಯ ಇಬ್ಬರು ಸ್ನೇಹಿತರು ಬಂದು ಅವರು ಸಹ ಕೈಗಳಿಂದ ನನ್ನ ಮೈಮೇಲೆ ಹೊಡೆದು ಕಾಲುಗಳಿಂದ ನನಗೆ ಒದ್ದು 2 ಕಲ್ಲುಗಳಿಂದ ಬ್ಬರು ಮುಖದ ಮೇಲೆ ಕಣ್ಣಿನ ಮೇಲೆ ಹೊಡೆದು ರಕ್ತ ಗಾಯ ಪಡಿಸಿ ನಿನ್ನನ್ನು ಸಾಯಿಸುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ 3 ಜನರು ನನ್ನನ್ನು ಕೈಗಳು ಮತ್ತು ಕಾಲುಗಳನ್ನು ಹಿಡಿದುಕೊಂಡು ಎತ್ತಿ ಬಿಸಾಡಿದ್ದು  ನನ್ನ ಬೆನ್ನಿಗೆ ಬಲ ಭುಜಕ್ಕೆ ಗಾಯಾಗಳಾಗಿರುತ್ತೆ. ನಾನು ಜೋರಾಗಿ ಕಿರುಚಿಕೊಂಡಾಗ ಮುರಗಮಲ್ಲದಿಂದ ರಸ್ತೆಯಲ್ಲಿ ಬರುತ್ತಿದ್ದ ನನ್ನ ಚಿಕ್ಕಪ್ಪ ನಾಗೇಶ್ ಮತ್ತು ಅವರ ಮಗ ಅರುಣ್ ಕುಮಾರ್ ಸ್ಥಳಕ್ಕೆ ಬಂದು ದ್ವಿ ಚಕ್ರ ವಾಹನ ನಿಲ್ಲಿಸುವಷ್ಟರಲ್ಲಿ ಮೇಲ್ಕಂಡ 3 ಜನ ದ್ವಿ ಚಕ್ರ ವಾಹನದಲ್ಲಿ ಪರಾರಿಯಾಗಿರುತ್ತಾರೆ ನಂತರ ಗಾಯಾಗೊಂಡಿದ್ದ ನನ್ನನ್ನು ನನ್ನ ಚಿಕ್ಕಪ್ಪ ನಾಗೇಶ್ ರವರು ಅಂಬುಲೆನ್ಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಢು ಬಂಧು ಚಿಕಿತ್ಸೆಗೆ ದಾಖಲಿಸಿರುತ್ತಾರೆ ಆದ್ದರಿಂಧ ಮೇಲ್ಕಂಡ 3 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

2. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.16/2021 ಕಲಂ. 279,336 ಐ.ಪಿ.ಸಿ :-

          ದಿನಾಂಕ:-22/03/2021 ರಂದು ಮಧ್ಯಾಹ್ನ 1-30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ. ಡಿ ಎನ್ ನಾಗರಾಜು ಬಿನ್ ಲೇಟ್ ದೊಡ್ಡ ನಾರಾಯಣರೆಡ್ಡಿ, 65 ವರ್ಷ, ವಕ್ಕಲಿಗರು, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ನಂ-013, ಶೋಭಾ ಕೋರಲ್ಲ, ಶೋಭಾ ಸಬರ್ಬಿಯಾ, ಜಕ್ಕೂರು, ಬೆಂಗಳೂರು-64 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:-22/03/2021 ರಂದು ತಾನು ಮತ್ತು ತನ್ನ ಸ್ನೇಹಿತರಾದ ಶ್ರೀ. ಹೈದರ್ ಅಲೀ ಖಾನ್ ಬಿನ್ ಹುಸೇನ್ ಸಾಬ್, 70 ವರ್ಷ, ಮುಸ್ಲಿಂ ಜನಾಂಗ, ನಿವೃತ್ತ ಆರೋಗ್ಯ ನಿರೀಕ್ಷಕರು, ಪರೇಸಂದ್ರ ಗ್ರಾಮ, ಮಂಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರೊಂದಿಗೆ ತನ್ನ ಬಾಬತ್ತು KA-50-Z-2767 ರ ಮಾರುತಿ ಡಿಸೈರ್ ಕಾರಿನಲ್ಲಿ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರ ನಗರಕ್ಕೆ ಬಂದು ವಾಪಸ್ಸು ಬೆಂಗಳೂರಿಗೆ ಹೋಗಲು ಬೆಳಿಗ್ಗೆ ಸುಮಾರು 11-30 ಗಂಟೆಯ ಸಮಯದಲ್ಲಿ ಬಾಗೇಪಲ್ಲಿ - ಬೆಂಗಳೂರು ಎನ್.ಹೆಚ್-44 ಬೈಪಾಸ್ ರಸ್ತೆಯ ವಾಪಸಂದ್ರ ಬ್ರಿಡ್ಜ್ ಬಳಿಯಲ್ಲಿ ಚಿಕ್ಕಬಳ್ಳಾಪುರ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ಹೈವೇ ರಸ್ತೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಬಾಗೇಪಲ್ಲಿ ಕಡೆಯಿಂದ ಬಂದ NL-01-AD-8948 ರ ಕಂಟೈನರ್ ಲಾರಿ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಲಾರಿ ಮುಂದೆ ಹೋಗುತ್ತಿದ್ದ ಇನ್ನೊಂದು ಲಾರಿಯನ್ನು ಓವರ್ ಟೇಕ್ ಮಾಡಿಕೊಂಡು ಬಂದು ಪಿರ್ಯಾಧಿ ರವರ ಕಾರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಯಾರಿಗೂ ಸಹಾ ಗಾಯಗಳಾಗದೇ ಇದ್ದು ಸದರಿ ತನ್ನ ಕಾರಿನ ಮುಂಭಾಗದ ಬಂಪರ್, ಬಾನೇಟ್, ರೇಡಿಯೇಟರ್, ಮುಂಭಾಗದ ಎರಡೂ ಹೆಡ್ ಲೈಟ್ ಗಳು, ಇಂಜಿನ್ ಜಕಂಗೊಂಡಿದ್ದು ಸದರಿ ಅಪಘಾತ ಪಡಿಸಿದ ಕಂಟೈನರ್ ಲಾರಿ ಚಾಲಕ ತನ್ನ ಕಾರಿಗೆ ಅಪಘಾತ ಪಡಿಸಿದ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗುತ್ತಿದ್ದು ನಂತರ ಸದರಿ ಕಂಟೈನರ್ ಲಾರಿಯನ್ನು ಅಲ್ಲಿನ ಸ್ಥಳಿಯರ ಯಾವುದೋ ದ್ವಿಚಕ್ರವಾಹನ ಸವಾರನ ಸಹಾಯದಿಂದ ಸದರಿ ಸ್ಥಳದಿಂದ ಹೊರಟು ಹೋಗುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿ ಕಂಟೈನರ್ ಚಾಲಕನ ಹೆಸರು ಮತ್ತು ವಿಳಾಸ ಕೇಳಲಾಗಿ ಮನೋಜ್ ಕುಮಾರ್ ಬಿನ್ ಸರ್ವೇಶ್ ಕುಮಾರ್ 22 ವರ್ಷ, ಪಾಲ್ ಜನಾಂಗ, ಮಧವಪುರ ಗ್ರಾಮ, ಚಿಯಾಸರ್ ಅಂಚೆ, ಚಿಂಬ್ರಾಮು ತಾಲ್ಲೂಕು, ಕಣ್ಣಾಜು ಜಿಲ್ಲೆ, ಉತ್ತರಪ್ರದೇಶ ಎಂತ ತಿಳಿಸಿದ್ದು, ಸದರಿ ಅಪಘಾತಕ್ಕೆ ಕಾರಣನಾದ NL-01-AD-8948 ರ ಕಂಟೈನರ್ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.38/2021 ಕಲಂ. 279,337,304A ಐ.ಪಿ.ಸಿ :-

          ದಿನಾಂಕ:21/03/2021 ರಂದು ಮದ್ಯಾಹ್ನ 2-15 ಗಂಟೆಗೆ ಪಿರ್ಯಾದಿದಾರರಾದ ಹನುಮಂತಪ್ಪ ಬಿನ್ ಲೇಟ್ ಅಂಜಿನಪ್ಪ, 55 ವರ್ಷ, ನಾಯಕರು, ಕೂಲಿ ಕೆಲಸ ವಾಸ: ಮಿಣಕನಗುರ್ಕಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತನೆ. ತನಗೆ ಆಶೋಕ ಕುಮಾರ್ ಮತ್ತು ಆನಂದ ಎಂಬ ಇಬ್ಬರು ಮಕ್ಕಳಿದ್ದು, ತನ್ನ ಮೊದಲನೇ ಮಗ ಆಶೋಕ ಕುಮಾರ್ ರವರು ಸುಮಾರು 10 ವರ್ಷಗಳ ಹಿಂದೆ ಮೃತಪಟ್ಟಿರುತ್ತಾನೆ. ತನ್ನ ಎರಡನೇ ಮಗ ಆನಂದ ರವರಿಗೆ  ಸುಮಾರು 1 ವರ್ಷದ ಹಿಂದೆ ಪ್ರಿಯಾಂಕ ಎಂಬುವರೊಂದಿಗೆ ಮದುವೆ ಮಾಡಿದ್ದು  ದಿನಾಂಕ:21/03/2021 ರಂದು ಬೆಳಿಗ್ಗೆ ಸುಮಾರು 10-00 ಗಂಟೆಯಲ್ಲಿ ತನ್ನ ಮಗ ಮನೆಗೆ ತೊಗರಿ ಬೆಳೆಯನ್ನು ತರುವುದಾಗಿ ತಿಳಿಸಿ ತಮ್ಮ ಗ್ರಾಮದ ವಾಸಿಯಾದ ನರಸಿಂಹಮೂರ್ತಿ ಬಿನ್ ಲೆಟ್ ಬಾಲಪ್ಪ 30 ವರ್ಷ, ನಾಯಕರು, ಕೂಲಿ ಕೆಲಸ ರವರು ಜೊತೆಯಲ್ಲಿ ಕೆ.ಎ-04 ಇಜೆ-605 ನೊಂದಣಿ ಸಂಖ್ಯೆ ಟಿ.ವಿ.ಎಸ್. ವಿಕ್ಟರ್ ದ್ವಿ ಚಕ್ರ ವಾಹನದಲ್ಲಿ ಮೂರ್ತಿ ರವರು ಚಾಲನೆ ಮಾಡಿಕೊಂಡು ಗೌರಿಬಿದನೂರಿಗೆ ಹೋದರು ನಂತರ ಬೆಳಿಗ್ಗೆ ಸುಮಾರು 11-45 ಗಂಟೆಯಲ್ಲಿ ನನಗೆ ನರಸಿಂಹಮೂರ್ತಿ ಪೊನ್ ಮಾಡಿ ಆನಂದ ಕಲ್ಲೂಡಿ ಗ್ರಾಮದ ಬಳಿಯಿರುವ ಬಿ. ಆರ್.ಎಸ್ ರೈಸ್ ಮಿಲ್ನ ಪಕ್ಕದಲ್ಲಿರುವ ಬೆಳೆ ಮಿಲ್ ತಾವುಗಳು ಬೆಳೆಯನ್ನು ಖರಿದಿ ಮಾಡಿದ್ದು ಆನಂತರ ಆನಂದ ರವರು ಟೌನ್ನಲ್ಲಿ ಮೊಬೈಲ್ಗೆ ಕರೆನ್ಸಿಯನ್ನು ಹಾಕಿಸಿಕೊಂಡು ಬರುವುದಾಗಿ ತಿಳಿಸಿ ತನ್ನ ದ್ವಿ ಚಕ್ರವಾಹನವನ್ನು ತಾನು ಚಾಲನೆ ಮಾಡಿಕೊಂಡು ಒಬ್ಬನೇ ಗೌರಿಬಿದನೂರಿಗೆ ಬಂದು ಮತ್ತೆ ವಾಪಸ್ಸು ಬೆಳೆ ಮಿಲ್ ಹತ್ತಿರಕ್ಕೆ ಬರಲು ಕೆ.ಎ-04 ಇಜೆ-605 ನೊಂದಣಿ ಸಂಖ್ಯೆ ಟಿ.ವಿ.ಎಸ್. ವಿಕ್ಟರ್ ದ್ವಿ ಚಕ್ರ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗೌರಿಬಿದನೂರು ನಗರ ಗಂಗಾ ನಗರ ಬಳಿಯಿರುವ ರಾಜ್ಯ ಹೆದ್ದಾರಿಯಲ್ಲಿ ತನ್ನ ಮುಂದೆ ಹೋಗುತ್ತಿದ್ದ ಕೆ.ಎ-40 ಇಎ-2791 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನಕ್ಕೆ ಗುದ್ದಿಕೊಂಡು ಹೋಗಿ ಯು ಟರ್ನ್ ಬಳಿ ಡಿವೈಡರ್ಗೆ ಡಿಕ್ಕಿ ಹೊಡೆದು ದ್ವಿ ಚಕ್ರ ವಾಹನ ಸಮೇತ ಕೆಳಗೆ ಬಿದ್ದು ತಲೆಗೆ ತೀವ್ರ ಸ್ವರೂಪ ಗಾಯವಾಗಿದ್ದು ಮತ್ತು ಕೆ.ಎ-40 ಇಎ-2791 ನೊಂದಣಿ ಸಂಖ್ಯೆ ದ್ವಿ ಚಕ್ರದ ಸವಾರ ಗಂಗಾಧರಯ್ಯ ರವರಿಗೆ ರಕ್ತ ಗಾಯಗಳಾಗಿರುತ್ತೆ ರಂದು ತಿಳಿಸಿ ಆನಂದ ರವರನ್ನು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಆದರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ತಾನು ಆನಂದ ರವರನ್ನು ಅಂಬುಲೇನ್ಸ್ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೀರುವುದಾಗಿ ತಿಳಿಸಿರುತ್ತಾನೆ. ತಾನು ಕೂಡಲೇ ಯಾವುದೋ ವಾಹನದಲ್ಲಿ  ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಬಳಿ ಬಂದಿದ್ದು ನಂತರ ಮದ್ಯಾಹ್ನ 12-15 ಗಂಟೆಗೆ ಮೂರ್ತಿ ರವರು ಮತ್ತೆ ಪೊನ್ ಆನಂದ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೀದಾಗ ಮಾರ್ಗಮದ್ಯ ಆನಂದ ರವರು ಅಪಘಾತದಲ್ಲಿ ಆದ ಗಾಯಗಳ ದೆಸೆಯಿಂದ ಮೃತ ಪಟ್ಟಿರುವುದಾಗಿ ತಿಳಿಸಿ ಮೃತ ದೇಹವನ್ನು ವಾಪಸ್ಸು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಹಾಕಿಕೊಂಡು ಬರುತ್ತೀರುವುದಾಗಿ ತಿಳಿಸಿದನು.  ಮದ್ಯಾಹ್ನ 1-15 ಗಂಟೆಗೆ ತನ್ನ ಮಗ ಆನಂದ ರವರ ಮೃತ ದೇಹವನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಹಾಕಿಕೊಂಡು ಬಂದು ಶವಗಾರದಲ್ಲಿಟ್ಟುದ್ದು, ಆದ್ದರಿಂದ ತನ್ನ ಮಗ ಆನಂದ ರವರು ಕೆ.ಎ-04 ಇಜೆ-605 ನೊಂದಣಿ ಸಂಖ್ಯೆ ದ್ವಿ ಚಕ್ರ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿವೈಡರ್ಗೆ ಡಿಕ್ಕಿ ಹೊಡೆಸಿ ಕೆಳಗೆ ಬಿದ್ದು ರಕ್ತ ಗಾಯವಾಗಿ ಗಾಯಗಳ ದಸೆಯಿಂದ ಮೃತ ಪಟ್ಟಿರುತ್ತಾನೆ. ಆದ್ದರಿಂದ ಮುಂದಿನ ಕಾನೂನು ಕ್ರಮವನ್ನು ಜರುಗಿಸಬೇಕಾಗಿ ಕೋರಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 

4. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.54/2021 ಕಲಂ. 457,380 ಐ.ಪಿ.ಸಿ :-

          ದಿನಾಂಕ:21/03/2021 ರಂದು ಪಿರ್ಯಾದಿದಾರರಾದ ಶ್ರೀ ದೇವರಾಜು ಬಿನ್ ಲೇಟ್ ಸೂರಣ್ಣ, ಜೈನ ಕೋಡಿ ಬ್ರಹ್ಮದೇವರ ಕಾರ್ಯದರ್ಶಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಮಂಚೇನಹಳ್ಳಿ (ಬಂಡಿರಾಮನಹಳ್ಳಿ) ಗ್ರಾಮದ ಜೈನ ಕೋಡಿ ದೇವರ ದೇವಸ್ಥಾನದಲ್ಲಿ ಮಂಚೇನಹಳ್ಳಿ ಗ್ರಾಮದ ನಿವಾಸಿಯಾದ ಬಾಹುಬಲಿ ಬಿನ್ ಲೇಟ್ ಬ್ರಹ್ಮಸೂರಯ್ಯ ರವರು ಕೋಡಿ ಬ್ರಹ್ಮದೇವರ ದೇವಸ್ಥಾನದ ಅರ್ಚಕರಾಗಿದ್ದು, ಇವರು ಪ್ರತಿ ದಿನ ಬೆಳಿಗ್ಗೆ ಸಂಜೆ ಈ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿರುತ್ತಾರೆ. ಎಂದಿನಂತೆ ದಿನಾಂಕ:20/03/2021 ರಂದು ಸದರಿ ಬಾಹುಬಲಿ ರವರು ರಾತ್ರಿ 9-00 ಗಂಟೆಯವರೆಗೂ ದೇವಸ್ಥಾನದಲ್ಲಿದ್ದು, ಇವರು ಮನೆಗೆ ಬಂದಾಗ ದಿನಾಂಕ:21/03/2021 ರಂದು ರಾತ್ರಿ ವೇಳೆಯಲ್ಲಿ ದೇವಸ್ಥಾನದ ಹಿಂದೆ ಕಾಂಪೌಂಡ್ ನಿಂದ ದೇವಸ್ಥಾನದ ಒಳಗೆ ಇರುವ ರೂಂನಿಂದ ಬೀಗವನ್ನು ಹೊಡೆದು ಹಾಕಿ ಅಲ್ಲಿದ್ದ 3 ಪಂಚಲೋಹ ವಿಗ್ರಹ 20 ಕೆಜಿ, ಸೀತಲ್ ನಾಥಸ್ವಾಮಿ ಪಂಚಲೋಹ ವಿಗ್ರಹ 16 ಕೆಜಿ, ಸಾರ್ವಣೇಶಸ್ವಾಮಿ ವಿಗ್ರಹ 16 ಕೆ.ಜಿ, ಹಾಗೂ ಎರಡು ಸೋಲಾರ್ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಇದರ ಬೆಲೆ ಸುಮಾರು 60,000/- ರೂಗಳಾಗಿದ್ದು, ಬೆಳಿಗ್ಗೆ ಎಂದಿನಂತೆ ದಿನಾಂಕ:21/03/2021 ರಂದು ಬೆಳಿಗ್ಗೆ 09-30 ಗಂಟೆಗೆ ಬಾಹುಬಲಿಯವರು ಪೂಜೆಯನ್ನು ಮಾಡಲು ಬಂದಾಗ ಬಾಗಿಲಿನ ಚೀಲಕವನ್ನು ಹೊಡೆದು ಹಾಕಲಾಗಿತ್ತು ಮತ್ತು ಅಲ್ಲಿದ್ದಂತಹ ವಿಗ್ರಹಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ವಿಗ್ರಹಗಳನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಮತ್ತು ವಿಗ್ರಹಗಳನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

5. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.27/2021 ಕಲಂ. 353,307,34 ಐ.ಪಿ.ಸಿ :-

          ದಿನಾಂಕ.21.03.2021 ರಂದು ಬೆಳಿಗ್ಗೆ 9.30 ಗಂಟೆಗೆ ಹೆಚ್.ಸಿ.243 ರೆಡ್ಡಪ್ಪ ರವರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನಂದರೆ, ತಾನು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ.20.03.2021 ರಂದು ಬೆಳಿಗ್ಗೆ 7.30 ಗಂಟೆಗೆ ಠಾಣಾಧೀಕಾರಿಗಳು ಹಗಲು ಗಸ್ತಿನ ಚೀತಾ ವಾಹನಕ್ಕೆ ನೇಮಕ ಮಾಡಿದ್ದು, ಅದೇಶದಂತೆ ನಾನು ಬೆಳಿಗ್ಗೆ 8.00 ಗಂಟೆಗೆ ಠಾಣೆಯಿಂದ ಹೊರಟು ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆ ಯಿಂದ ಬಸ್ ನಿಲ್ದಾಣ, ಸಂತೇ ಬೀದಿ, ಅಶೋಕ ರಸ್ತೆ ಇನ್ನೂ ಮುಂತಾದ ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ 2.30 ಗಂಟೆಗೆ ಊಟ ಮಾಡಲು ಪೊಲೀಸ್ ಠಾಣೆಗೆ ಬಂದು ಠಾಣೆಯಲ್ಲಿ ಊಟ ಮಾಡುತ್ತಿದ್ದಾಗ ಠಾಣೆಯ ಮುಂಭಾಗದಲ್ಲಿ ಠಾಣೆಯ ಎ.ಎಸ್.ಐ ಪಿ.ವಿ.ಕೃಷ್ಣಪ್ಪ ಮತ್ತು ಹೆಚ್.ಸಿ.204 ಅಮರನಾಥ ರವರು ಮಾತನಾಡಿಕೊಂಡಿದ್ದರು, ಮದ್ಯಾಹ್ನ ಸುಮಾರು 2.40 ಗಂಟೆಯಲ್ಲಿ ಸರ್ಕಾರಿ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಗಲಾಟೆ ನಡೆಯುತ್ತಿದೆ ಎಂದು ಏ...ಏ...ಏ.. ಎಂದು ಕೂಗಿಕೊಂಡು ಓಡಿ ಹೋದರು. ಆಗ ನಾನು ಊಟ ಮಾಡುವುದನ್ನು ನಿಲ್ಲಿಸಿ ಕೈ ತೊಳೆದುಕೊಂಡು ಏನೆಂದು ನೋಡಲು ಠಾಣೆಯ ಮುಂಭಾಗದ ರಸ್ತೆಯಲ್ಲಿ ಹೋದೆ. ಅಷ್ಠರಲ್ಲಿ ಗಲಾಟೆ ನಡೆದ ಸ್ಥಳದಿಂದ ಎ.ಎಸ್.ಐ ಕೃಷ್ಣಪ್ಪ ಮತ್ತು ಅಮರನಾಥ ರವರನ್ನು ನೋಡಿ ಗಲಾಟೆ ಮಾಡುತ್ತಿದ್ದವರು ಓಮನಿ ವ್ಯಾನ್ ನಲ್ಲಿ ಕುಳಿತುಕೊಂಡು ಪರಾರಿಯಾಗಲು ದಿಬ್ಬೂರಹಳ್ಳಿ ರಸ್ತೆಯಲ್ಲಿ ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಆಗ ಸ್ವಲ್ಪ ಹತ್ತಿರದಲ್ಲಿದ್ದ ಹೆಚ್.ಸಿ.ಅಮರನಾಥ ರವರು ರಸ್ತೆ ಪಕ್ಕದಲ್ಲಿದ್ದ ಕಲ್ಲನ್ನು ತೆಗೆದುಕೊಂಡು 'ಏ ನಿಲ್ಲಿಸು ನಿಲ್ಲಿಸು ಎಂದು ಕೂಗಿಕೊಂಡು' ಓಮನಿ ವ್ಯಾನ್ ಗೆ ಎಸೆದನು. ಆದರೂ ಓಮನಿ ವ್ಯಾನ್ ಅನ್ನು ಅದರ ಚಾಲಕ ನಿಲ್ಲಿಸದೆ ಬರುತ್ತಿದ್ದು, ಕೂಡಲೇ ನಾನು ಸಹ ಓಮನಿ ವ್ಯಾನ್ ತಡೆಯಲು ರಸ್ತೆಯಲ್ಲಿ ನಿಂತುಕೊಂಡು ಏ ನಿಲ್ಲಿಸು ಎಂದು ಕೂಗಿಕೊಂಡು ಕೈಯಲ್ಲಿದ್ದ ಲಾಠಿಯನ್ನು ಅಡ್ಡ ಇಟ್ಟು ನಿಲ್ಲಿಸು ನಿಲ್ಲಿಸು ಎಂದು ಕೂಗಿಕೊಂಡರೂ ವ್ಯಾನ್ ಚಾಲಕ ಸಮವಸ್ತ್ರದಲ್ಲಿದ್ದ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ನನ್ನನ್ನು ಸಹ ಸಾಯಿಸುವ ಉದ್ದೇಶದಿಂದ ನನ್ನ ಮೇಲೆ ಹತ್ತಿಸಲು ಬಂದಾಗ ನಾನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡು ನನ್ನ ಕೈಯಲ್ಲಿದ್ದ ಲಾಠಿಯಿಂದ ವ್ಯಾನ್ ಮುಂಭಾಗದ ಗ್ಲಾಸ್ ಗೆ ಹೊಡೆದೆ. ಅದರೂ ವ್ಯಾನ್ ಚಾಲಕ ನಿಲ್ಲಿಸದೆ ವೇಗವಾಗಿ ಚಾಲನೆ ಮಾಡಿಕೊಂಡು ಹೋದನು. ಓಮನಿ ವ್ಯಾನ್ ನಂಬರ್ ನೋಡಲಾಗಿ ಅದರ ನಂಬರ್ KA.40.M.1633 ಆಗಿತ್ತು. ಸದರಿ ವಾಹನದಲ್ಲಿ  ಯಾರೋ 4 ಜನರು ಇದ್ದರು. ನಂತರ ನಾನು ಮತ್ತು ಅಮರನಾಥ ರವರು ಠಾಣೆಯ ಆವರಣದಲ್ಲಿ ನಿಲ್ಲಿಸಿರುವ ಚೀತಾ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಓಮನಿ ವ್ಯಾನ್ ಹಿಡಿಯಲು ಹಿಂಬಾಲಿಸಿಕೊಂಡು ದಿಬ್ಬೂರಹಳ್ಳಿ ರಸ್ತೆ, ಹನುಮಂತಪುರ ಗೇಟ್ ಮಾರ್ಗವಾಗಿ ಅಬ್ಲೂಡು ಗ್ರಾಮದ ವರೆಗೂ ಹೋದರೂ ವಾಹನ ಕಂಡು ಬರಲಿಲ್ಲ. ನಂತರ ಠಾಣೆಗೆ ವಾಪಸ್ಸು ಬಂದಾಗ ಇದೇ ಶಿಡ್ಲಘಟ್ಟ ನಗರದ ಅಮ್ಜದ್ ನವಾಜ್ ರವರನ್ನು ಯಾರೋ ಯಾವುದೋ ದ್ವೇಷದಿಂದ ಕೊಲೆ ಮಾಡಿರುವುದಾಗಿ ತಿಳಿದು ಬಂದಿರುತ್ತೆ. ಆ ಸಮಯದಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರಿದ್ದು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಠಾಣಾಧೀಕಾರಿಗಳು ಕೂಡಲೇ ನನಗೆ ಮತ್ತು ಸಿಬ್ಬಂದಿಯವರಿಗೆ ಬಂದೋಬಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಆದೇಶದಂತೆ ನಾನು ನಿನ್ನೆ ದಿನ ಸಂಜೆ 4.00 ಗಂಟೆಯಿಂದ ಈ ದಿನ ಬೆಳಗಿನ ಜಾವ 6.00 ಗಂಟೆಯವರೆಗೆ ಬಂದೋ ಬಸ್ತು ಕರ್ತವ್ಯ ಮುಗಿಸಿಕೊಂಡು ಬಂದು ಈ ವಿಚಾರ ಮೇಲಾದಿಕಾರಿಗಳಿಗೆ ತಿಳಿಸಿರುತ್ತೇನೆ. ಆದ್ದರಿಂದ ಮೇಲ್ಕಂಡ ಓಮನಿ ಚಾಲಕ ಇತರರ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಲು ಈ ದಿನ ತಡವಾಗಿ ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

Last Updated: 22-03-2021 05:31 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080